02.02.24         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ದೇಹೀ-ಅಭಿಮಾನಿಯಾಗಿರಿ ಆಗ ವಿಕಲ್ಪಗಳು ಸಮಾಪ್ತಿಯಾಗಿಬಿಡುತ್ತವೆ, ಯಾವುದೇ ಮಾತಿನಿಂದ ಭಯವಾಗುವುದಿಲ್ಲ, ನೀವು ಚಿಂತೆಯಿಂದ ನಿಶ್ಚಿಂತರಾಗಿಬಿಡುತ್ತೀರಿ

ಪ್ರಶ್ನೆ:
ಹೊಸ ವೃಕ್ಷದ ವೃದ್ಧಿಯು ಯಾವ ರೀತಿಯಾಗುತ್ತದೆ ಮತ್ತು ಏಕೆ?

ಉತ್ತರ:
ಹೊಸ ವೃಕ್ಷದ ವೃದ್ಧಿಯು ಬಹಳ ನಿಧಾನವಾಗಿ ಮತ್ತು ಹೇನಿನ ರೀತಿ ನಡೆಯುತ್ತಾ ಹೋಗುತ್ತದೆ. ಹೇಗೆ ನಾಟಕವು ಹೇನಿನ ರೀತಿ ನಿಧಾನವಾಗಿ ನಡೆಯುತ್ತದೆ, ಇದೇ ರೀತಿ ನಾಟಕದನುಸಾರ ಈ ವೃಕ್ಷವೂ ಸಹ ನಿಧಾನ ನಿಧಾನವಾಗಿ ವೃದ್ಧಿ ಹೊಂದುತ್ತದೆ ಏಕೆಂದರೆ ಇದರಲ್ಲಿ ಮಾಯೆಯ ವಿರೋಧವೂ ಸಹ ಬಹಳ ಎದುರಿಸಬೇಕಾಗುತ್ತದೆ. ಮಕ್ಕಳಿಗೆ ದೇಹೀ-ಅಭಿಮಾನಿಯಾಗುವುದರಲ್ಲಿ ಪರಿಶ್ರಮವಾಗುತ್ತದೆ. ದೇಹೀ- ಅಭಿಮಾನಿಯಾದಾಗ ಬಹಳ ಖುಷಿಯಿರುತ್ತದೆ. ಸರ್ವೀಸಿನಲ್ಲಿಯೂ ಸಹ ವೃದ್ಧಿ ಹೊಂದುತ್ತೀರಿ. ತಂದೆ ಮತ್ತು ಆಸ್ತಿಯ ನೆನಪಿದೆ ಅಂದಾಗ ಬಂಧನವು ದೂರವಾಗುತ್ತದೆ.

ಓಂ ಶಾಂತಿ.
ಆತ್ಮೀಯ ತಂದೆಯು ಕುಳಿತು ಆತ್ಮೀಯ ಮಕ್ಕಳಿಗೆ ತಿಳಿಸುತ್ತಾರೆ- ಆತ್ಮೀಯ ತಂದೆಯು ಅಕಾಲಮೂರ್ತಿಯಾಗಿದ್ದಾರೆ. ಪರಮಪಿತ ಪರಮಾತ್ಮನಿಗೆ ಆತ್ಮೀಯ ತಂದೆಯೆಂದು ಹೇಳಲಾಗುತ್ತದೆ. ತಾವು ಮಕ್ಕಳೂ ಅಕಾಲಮೂರ್ತಿಯಾಗಿದ್ದೀರಿ. ತಾವು ಸಿಖ್ಖ್ ಜನಾಂಗದವರಿಗೂ ಸಹ ಚೆನ್ನಾಗಿ ತಿಳಿಸಬಹುದು. ಇದನ್ನು ಯಾವುದೇ ಧರ್ಮದವರಿಗಾಗಲಿ ಬಹಳ ಚೆನ್ನಾಗಿ ತಿಳಿಸಬಹುದು. ಈ ವೃಕ್ಷವು ನಿಧಾನವಾಗಿ ವೃದ್ಧಿಹೊಂದುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಹೇಗೆ ಡ್ರಾಮಾ ಹೇನಿನ ರೀತಿ ನಡೆಯುತ್ತದೆಯೋ ಹಾಗೆಯೇ ವೃಕ್ಷವೂ ಸಹ ನಿಧಾನವಾಗಿ ವೃದ್ಧಿಯಾಗುತ್ತದೆ. ವೃದ್ಧಿಯಾಗುವುದರಲ್ಲಿ ಇಡೀ ಕಲ್ಪವೇ ಹಿಡಿಸುತ್ತದೆ. ಈಗ ನಿಮ್ಮದು ಹೊಸವೃಕ್ಷವಾಗಿದೆ. ತಾವು ಮಕ್ಕಳಿಗೂ ಸಹ ಆಯಸ್ಸು ಆಗಿಬಿಡುತ್ತದೆ. 5000 ವರ್ಷಗಳಿಂದ ತಾವು ಸುತ್ತುಹಾಕಿದ್ದೀರಿ. ಹೇನಿನ ರೀತಿಯಲ್ಲಿ ಈ ಚಕ್ರವು ನಡೆಯುತ್ತದೆ. ಮೊಟ್ಟಮೊದಲು ಆತ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಇದು ಕಷ್ಟದ ಮಾತಾಗಿದೆ. ತಂದೆಯು ತಿಳಿದುಕೊಂಡಿದ್ದಾರೆ- ನಾಟಕದ ಅನುಸಾರವಾಗಿ ನಿಧಾನ-ನಿಧಾನವಾಗಿ ವೃಕ್ಷವು ವೃದ್ಧಿಯಾಗುತ್ತದೆ ಏಕೆಂದರೆ ಮಾಯೆಯು ವಿರೋಧವಿದೆ, ಈ ಸಮಯದಲ್ಲಿ ಅದರ ರಾಜ್ಯವಿದೆ ಮತ್ತೆ ರಾವಣನೇ ಇರುವುದಿಲ್ಲ. ತಾವು ಮಕ್ಕಳು ಮೊದಲು ಆತ್ಮಾಭಿಮಾನಿಗಳಾಗಿರಬೇಕು. ಆತ್ಮಾಭಿಮಾನಿ ಮಕ್ಕಳು ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತಾರೆ ಹಾಗೂ ಬಹಳ ಖುಷಿಯಲ್ಲಿಯೂ ಇರುತ್ತಾರೆ. ಬುದ್ಧಿಯಲ್ಲಿ ವ್ಯರ್ಥವಿಕಲ್ಪಗಳು ಬರುವುದಿಲ್ಲ ಅಂದರೆ ತಾವು ಮಾಯೆಯ ಮೇಲೆ ವಿಜಯ ಗಳಿಸಿದಾಗ ಮತ್ತೆ ನಿಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಅಂಗಧನ ಉದಾಹರಣೆಯಿದೆಯಲ್ಲವೆ ಆದ್ದರಿಂದ ನಿಮಗೆ ಮಹಾವೀರ ಎಂದು ಹೆಸರನ್ನಿಡಲಾಗಿದೆ. ಈಗಂತೂ ಒಬ್ಬರೂ ಮಹಾವೀರರಿಲ್ಲ. ಮಹಾವೀರರು ಅಂತಿಮದಲ್ಲಾಗುತ್ತಾರೆ ಅದೂ ಸಹ ನಂಬರ್ವಾರ್. ಯಾರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆಯೋ ಅವರನ್ನು ಮಹಾವೀರರ ಸಾಲಿನಲ್ಲಿಡುತ್ತಾರೆ. ಈಗ ವೀರರಾಗಿದ್ದಾರೆ ಅಂತಿಮದಲ್ಲಿ ಮಹಾವೀರರಾಗುತ್ತಾರೆ. ಸ್ವಲ್ಪವೂ ಸಂಶಯ ಬರಬಾರದು. ಕೆಲವರಂತೂ ಬಹಳ ಅಹಂಕಾರದಲ್ಲಿ ಬರುತ್ತಾರೆ, ಯಾರನ್ನೂ ಲೆಕ್ಕಿಸುವುದಿಲ್ಲ. ಇದರಲ್ಲಂತೂ ಯಾರಿಗಾದರೂ ಬಹಳ ನಿರ್ಮಾಣತೆಯಿಂದ ತಿಳಿಸಬೇಕು. ಅಮೃತಸರದಲ್ಲಿ ಸಿಖ್ಖರಿಗೂ ಸಹ ತಾವು ಸರ್ವೀಸ್ ಮಾಡಬಹುದು. ಸಂದೇಶವನ್ನಂತೂ ಎಲ್ಲರಿಗೂ ತಿಳಿಸಲೇಬೇಕಾಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ಆತ್ಮದ ತುಕ್ಕು ಬಿಡುತ್ತದೆ.ಆ ಜನಗಳು ಹೇಳುತ್ತಾರೆ ಸಾಹೇಬನನ್ನು ಜಪಿಸಿ.... ಸಾಹೇಬನ ಮಹಿಮೆಯು ಇದೆ ಏಕ್ ಓಂಕಾರ್ ಸತ್ನಾಮ್ ಅಕಾಲಮೂರ್ತಿ. ಈಗ ಅಕಾಲಮೂರ್ತಿ ಯಾರು? ಹೇಳುತ್ತಾರೆ ಸದ್ಗುರು ಅಕಾಲಮೂರ್ತಿಯಾಗಿದ್ದಾರೆ. ಅಕಾಲಮೂರ್ತಿಯಂತೂ ಆತ್ಮವಾಗಿದೆಯಲ್ಲವೆ. ಅದನ್ನೆಂದಿಗೂ ಸಹ ಮೃತ್ಯುವು ಕಬಳಿಸಲು ಸಾಧ್ಯವಿಲ್ಲ. ಆತ್ಮಕ್ಕೆ ಪಾತ್ರವು ಸಿಕ್ಕಿದೆ ಅಂದಾಗ ಅದು ಪಾತ್ರವನ್ನಭಿನಯಿಸಲೇಬೇಕು. ಅದನ್ನು ಮೃತ್ಯುವು ಹೇಗೆ ಕಬಳಿಸುತ್ತದೆ, ಶರೀರವನ್ನು ಕಬಳಿಸಬಹುದು. ಆತ್ಮವಂತೂ ಅಕಾಲಮೂರ್ತಿಯಾಗಿದೆ. ತಾವು ಸಿಖ್ಖರ ಬಳಿ ಹೋಗಿ ಭಾಷಣ ಮಾಡಬಹುದು. ಹೇಗೆ ಗೀತೆಯವರೂ ಸಹ ಭಾಷಣ ಮಾಡುತ್ತಾರೆ. ತಾವು ಮಕ್ಕಳಿಗೆ ಗೊತ್ತಿದೆ, ಭಕ್ತಿಮಾರ್ಗದ ಅನೇಕ ಸಾಮಗ್ರಿಗಳಿವೆ. ಜ್ಞಾನವಂತೂ ಸ್ವಲ್ಪವೂ ಇಲ್ಲ. ಜ್ಞಾನಸಾಗರ ಒಬ್ಬ ತಂದೆಯಾಗಿದ್ದಾರೆ. ಮನುಷ್ಯರಿಗೆ ಜ್ಞಾನವಂತರು ಎಂದು ಹೇಳುವುದಿಲ್ಲ. ದೇವತೆಗಳೂ ಸಹ ಮನುಷ್ಯರಲ್ಲವೆ ಆದರೆ ದೈವೀಗುಣವಿದೆ ಆದ್ದರಿಂದ ದೇವತೆ ಎನ್ನಲಾಗುತ್ತದೆ. ಅವರಿಗೂ ಸಹ ತಂದೆಯಿಂದಲೇ ಆಸ್ತಿಯು ಸಿಕ್ಕಿತ್ತು. ತಾವೂ ಸಹ ಈ ರಾಜಯೋಗದಿಂದ ವಿಶ್ವದ ಮಾಲೀಕರಾಗುತ್ತಿದ್ದೀರಿ. ಸದ್ಗುರು ಅಕಾಲ ಎಂದು ಹೇಳಲಾಗುತ್ತದೆಯಲ್ಲವೆ. ಸತ್ಯವಂತೂ ಒಬ್ಬ ತಂದೆಯೇ ಆಗಿದ್ದಾರೆ ಅವರೇ ಪತಿತ-ಪಾವನನಾಗಿದ್ದಾರೆ, ಇಬ್ಬರು ತಂದೆಯರದೂ ಪರಿಚಯ ಕೊಡಬೇಕು. ತಮಗೆ ಭಾಷಣ ಮಾಡಲು 2 ನಿಮಿಷ ಸಿಕ್ಕಿದರೂ ಸಹ ಬಹಳಷ್ಟಾಯಿತು. ಒಂದು ನಿಮಿಷ ಒಂದು ಸೆಕೆಂಡ್ ಸಿಕ್ಕಿದರೂ ಬಹಳಷ್ಟಾಯಿತು. ಯಾರಿಗೆ ಕಲ್ಪದ ಮೊದಲು ಬಾಣವು ನಾಟಿತ್ತೋ ಅವರಿಗೇ ನಾಟುತ್ತದೆ. ಯಾವುದೇ ದೊಡ್ಡ ವಿಚಾರವಲ್ಲ. ಕೇವಲ ಸಂದೇಶವನ್ನು ಕೊಡಬೇಕು. ತಂದೆಯು ತಿಳಿಸುತ್ತಾರೆ- ಗುರುನಾನಕರು ಬರುತ್ತಾರೆ ಎಂದು ತಿಳಿಯಿರಿ, ಅವರು ತಾವು ಮನೆಗೆ ವಾಪಸ್ಸು ಹೋಗಬೇಕು ಅದಕ್ಕಾಗಿ ಪವಿತ್ರರಾಗಬೇಕೆಂದು ಸಂದೇಶವನ್ನೇನೂ ಕೊಡುವುದಿಲ್ಲ. ಪವಿತ್ರ ಆತ್ಮರು ಮೇಲಿಂದಬರುತ್ತಾರೆ, ಅವರ ಧರ್ಮದ ವೃದ್ಧಿಯಾಗುತ್ತದೆ. ಬರುತ್ತಲೇ ಇರುತ್ತಾರೆ. ವಾಸ್ತವದಲ್ಲಿ ಸದ್ಗತಿದಾತನಂತೂ ಯಾವುದೇ ಮನುಷ್ಯರಾಗಲು ಸಾಧ್ಯವಿಲ್ಲ. ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ, ಮನುಷ್ಯರು ಮನುಷ್ಯರೇ ನಂತರ ಇಂತಹ ಧರ್ಮದವರೆಂದು ತಿಳಿಸಲಾಗುತ್ತದೆ. ತಂದೆ ತಿಳಿಸಿದ್ದಾರೆ ತಾವು ತಮ್ಮನ್ನು ಆತ್ಮನೆಂದು ತಿಳಿಯಿರಿ, ಪವಿತ್ರರಾಗಿ, ಗುರುನಾನಕರೂ ತಿಳಿಸಿದ್ದಾರೆ, ಕೊಳಕಾದ ಬಟ್ಟೆಯನ್ನು ಪರಮಾತ್ಮನೇ ಸ್ವಚ್ಛ ಮಾಡಲು ಸಾಧ್ಯ..... ಇದೂ ಸಹ ಶಾಸ್ತ್ರವನ್ನು ಮಾಡುವವರು ನಂತರ ಬರೆದಿದ್ದಾರೆ. ಮೊದಲಂತೂ ಬಹಳ ಕಡಿಮೆಯಿರುತ್ತಾರೆ. ಈ ಜ್ಞಾನವನ್ನೂ ಸಹ ತಂದೆಯು ನಿಮಗೆ ಈಗ ಕೊಡುತ್ತಾರೆ. ನಂತರ ಶಾಸ್ತ್ರವಂತೂ ಕೊನೆಯಲ್ಲಿ ಆಗುತ್ತದೆ. ಸತ್ಯಯುಗದಲ್ಲಿ ಶಾಸ್ತ್ರವಿರುವುದಿಲ್ಲ. ತಂದೆಯನ್ನು ನೆನಪು ಮಾಡಿದಾಗ ವಿಕರ್ಮಗಳು ವಿನಾಶವಾಗುತ್ತವೆ, ವಿನಾಶವಾಗಲೇಬೇಕು ಎನ್ನುವುದನ್ನು ಮೊದಲು ತಿಳಿಸಿ. ಅವರನ್ನು ಕೇಳಬೇಕು- ಸರ್ವವ್ಯಾಪಿ ಎಂದು ಯಾರಿಗೆ ಹೇಳುತ್ತೀರಿ, ಏಕ್ ಓಂಕಾರ್ ಎಂದು ಅವರಿಗೆ ಮಹಿಮೆ ಹಾಡುತ್ತೀರಲ್ಲವೆ ಅಂದಾಗ ಅವರು ತಂದೆಯಾದರಲ್ಲವೆ. ಅವರು ಮಕ್ಕಳು ನಾವೂ ಸಹ ಅಕಾಲಮೂರ್ತಿಗಳಾಗಿದ್ದೇವೆ, ಇದು ನಮ್ಮ ಸಿಂಹಾಸನವಾಗಿದೆ. ನಾವು ಒಂದು ಸಿಂಹಾಸನವನ್ನು ಬಿಟ್ಟು ಇನ್ನೊಂದರಲ್ಲಿ ಕುಳಿತಿದ್ದೇವೆ. 84 ಸಿಂಹಾಸನಗಳ ಮೇಲೆ ಕುಳಿತುಕೊಳ್ಳುತ್ತೇವೆ. ಈಗ ಇದು ಹಳೆಯ ಜಗತ್ತು, ಎಷ್ಟೊಂದು ಗಲಾಟೆಯಿದೆ. ಸತ್ಯಯುಗದಲ್ಲಿ ಈ ಮಾತುಗಳು ಇರುವುದಿಲ್ಲ. ಅಲ್ಲಂತೂ ಒಂದೇ ಧರ್ಮವಿರುತ್ತದೆ. ತಂದೆಯು ತಮಗೆ ವಿಶ್ವದ ಚಕ್ರಾಧಿಪತ್ಯವನ್ನು ಕೊಡುತ್ತಾರೆ. ನಿಮ್ಮ ಮೇಲೆ ದಾಳಿ ಮಾಡಲು ಯಾರಿಗೂ ಸಾಧ್ಯವಿಲ. ದ್ವಾಪರದಿಂದ ಧರ್ಮಸ್ಥಾಪಕರು ತಮ್ಮ-ತಮ್ಮ ಧರ್ಮವನ್ನು ಸ್ಥಾಪನೆ ಮಾಡಲು ಬರುತ್ತಾರೆ. ಅವರ ಧರ್ಮವು ಯಾವಾಗ ವೃದ್ಧಿಯಾಗುತ್ತದೆ, ಶಕ್ತಿಶಾಲಿಯಾಗುತ್ತದೆ ಆಗ ಯುದ್ಧದ ಮಾತು ಬರುತ್ತದೆ. ಇಸ್ಲಾಮಿಯವರೂ ಸಹ ಮೊದಲು ಎಷ್ಟು ಕಡಿಮೆಯಿರುತ್ತಾರೆ. ನಿಮ್ಮ ಧರ್ಮವಂತೂ ಇಲ್ಲಿ ಸ್ಥಾಪನೆಯಾಗುತ್ತದೆ. ಅವರು ದ್ವಾಪರದಲ್ಲಿ ಬರುತ್ತಾರೆ, ಆ ಸಮಯದಲ್ಲಿಯೇ ಧರ್ಮ ಸ್ಥಾಪನೆಯಾಗುತ್ತದೆ. ನಂತರ ಒಬ್ಬರ ಹಿಂದೆ ಒಬ್ಬರು ಬರುತ್ತಾರೆ. ಇದು ಬಹಳ ತಿಳಿದುಕೊಳ್ಳುವ ವಿಚಾರಗಳಾಗಿವೆ. ಕೆಲವರು ಡ್ರಾಮಾನುಸಾರವಾಗಿ ಏನನ್ನೂ ಧಾರಣೆ ಮಾಡುವುದಿಲ್ಲ. ತಂದೆಯು ಹೇಳುತ್ತಾರೆ- ಅವಶ್ಯವಾಗಿ ಅವರ ಪದವಿಯು ಕಡಿಮೆಯಿರಬಹುದು. ಇದು ಯಾವುದೇ ಶಾಪವಿಲ್ಲ. ಮಹಾವೀರರದೇ ಮಾಲೆಯಾಗುತ್ತದೆ. ಡ್ರಾಮಾನುಸಾರ ಎಲ್ಲರೂ ಒಂದೇರೀತಿ ಪುರುಷಾರ್ಥ ಮಾಡಲು ಸಾಧ್ಯವಿಲ್ಲ. ಮೊದಲೂ ಮಾಡಿರಲಿಲ್ಲ ಮತ್ತೆ ನಮ್ಮ ದೋಷವೇನಿದೆ ಎಂದು ಕೇಳುತ್ತಾರೆ. ತಂದೆಯು ಹೇಳುತ್ತಾರೆ- ನಿಮ್ಮದು ಯಾವುದೇ ದೋಷವಿಲ್ಲ, ಅದೃಷ್ಟದಲ್ಲಿಲ್ಲವೆಂದರೆ ತಂದೆಯು ತಾನೇ ಏನು ಮಾಡುತ್ತಾರೆ! ಯಾರ್ಯಾರು ಯಾವ-ಯಾವ ಪದವಿಗೆ ಯೋಗ್ಯರೆಂದು ತಿಳಿದುಕೊಳ್ಳಬಹುದು. ಸಿಖ್ಖರಿಗೂ ಸಹ ತಿಳಿಸಬಹುದು- ಸಾಹೇಬನನ್ನು ಸ್ಮರಿಸಿದರೆ ಸುಖ-ಶಾಂತಿ ಸಿಗುವುದು. ಯಾವಾಗ ಅವರ ಧರ್ಮದ ಸ್ಥಾಪನೆಯಾಗುತ್ತದೆಯೋ ಆಗ ಅವರಿಗೆ ಸುಖ ಸಿಗುತ್ತದೆ. ಈಗಂತೂ ಎಲ್ಲರೂ ಕೆಳಗಡೆ ಬಂದಿದ್ದಾರೆ. ತಮಗೆ ಗೊತ್ತಿದೆ, ಸದ್ಗುರು ಅಕಾಲ್..... ಮತ್ತೆ ಗುರುವೆಂದು ಯಾರಿಗೆ ಹೇಳುತ್ತೀರಿ? ಸದ್ಗತಿ ಕೊಡುವ ಗುರು ಒಬ್ಬರೇ ಆಗಿದ್ದಾರೆ. ಭಕ್ತಿ ಕಲಿಸುವವರು ಅನೇಕ ಗುರುಗಳು ಬೇಕು. ಜ್ಞಾನ ಕಲಿಸುವಂತಹವರು ಒಬ್ಬತಂದೆಯಾಗಿದ್ದಾರೆ. ತಾವು ಬಳೆಯನ್ನು ಹಾಕಿಕೊಳ್ಳುತ್ತೀರೋ ಅದೂ ಸಹ ಪವಿತ್ರತೆಯ ಚಿಹ್ನೆಯಾಗಿದೆ ಎಂಬುದನ್ನು ನೀವು ಮಾತೆಯರು ಅವರಿಗೆ ತಿಳಿಸಿ. ನೀವು ಹೇಳುವುದನ್ನು ಅವರು ಒಪ್ಪಿಕೊಳ್ಳುತ್ತಾರೆ ಏಕೆಂದರೆ ತಾವು ಮಾತೆಯರೇ ಸ್ವರ್ಗದ ಬಾಗಿಲನ್ನು ತೆರೆಯುತ್ತೀರಿ. ತಾವು ಮಾತೆಯರಿಗೆ ಈಗ ಜ್ಞಾನದ ಕಳಸ ಸಿಕ್ಕಿದೆ, ಇದರಿಂದ ಎಲ್ಲರ ಸದ್ಗತಿಯಾಗುತ್ತದೆ.

ತಾವು ಮಕ್ಕಳೀಗ ತಮ್ಮನ್ನು ಮಹಾವೀರರೆಂದು ಹೇಳಿಕೊಳ್ಳುತ್ತೀರಿ. ನಾವು ಗೃಹಸ್ಥ ವ್ಯವಹಾರದಲ್ಲಿರುತ್ತಾ ಸ್ವರ್ಗದ ಸ್ಥಾಪನೆಯನ್ನು ಮಾಡುತ್ತಿದ್ದೇವೆಂದು ನೀವು ಹೇಳಬಹುದು. ಹಗಲು-ರಾತ್ರಿಯ ವ್ಯತ್ಯಾಸವಿದೆ. ಈ ಜಟೆಯೂ ಸಹ ಪವಿತ್ರತೆಯ ಗುರುತಾಗಿದೆ. ಅಕಾಲಮೂರ್ತಿ, ಪತಿತ-ಪಾವನ ತಂದೆಯ ಮಹಿಮೆಯನ್ನು ಪೂರ್ಣ ಮಾಡಬೇಕು. ಸಾಧು-ಸನ್ಯಾಸಿಗಳು ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಮತ್ತೆ ಸರ್ವವ್ಯಾಪಿ ಎಂದು ಹೇಳುತ್ತಾರೆ. ಇದು ತಪ್ಪಾಗಿದೆ. ತಾವು ತಂದೆಯ ಮಹಿಮೆಯನ್ನು ಚೆನ್ನಾಗಿ ಮಾಡಿ ಹೇಗೆ ರಾಮ-ರಾಮ ಎಂದು ಹೇಳುವುದರಿಂದ ತಾವು ಪಾರಾಗುತ್ತೀರಿ ಎಂಬ ಕಥೆಯಿದೆ ಹಾಗೆಯೇ ತಂದೆಯ ಮಹಿಮೆಯಿಂದ ತಾವು ಶೀತಲರಾಗಿಬಿಡುತ್ತೀರಿ. ತಂದೆಯೂ ಸಹ ಹೇಳುತ್ತಾರೆ- ತಂದೆಯನ್ನು ನೆನಪು ಮಾಡುವುದರಿಂದ ವಿಷಯ ಸಾಗರದಿಂದ ಪಾರಾಗುತ್ತೀರಿ. ತಾವೆಲ್ಲರೂ ಮುಕ್ತಿಗೆ ಹೋಗಲೇಬೇಕು. ತಾವು ಅಮೃತಸರದಲ್ಲಿ ಭಾಷಣ ಮಾಡಿ- ತಾವು ಸದ್ಗುರು, ಅಕಾಲಮೂರ್ತಿ ಎಂದು ಹೇಳುತ್ತೀರಿ ಆದರೆ ಈಗ ಅವರು ಹೇಳುತ್ತಾರೆ- ದೇಹ ಸಹಿತ ದೇಹದ ಸರ್ವ ಸಂಬಂಧಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ. ತಂದೆಯನ್ನು ನೆನಪು ಮಾಡುವುದರಿಂದ ಪಾಪವು ಭಸ್ಮವಾಗುತ್ತದೆ, ಅಂತ್ಯಮತಿ ಸೋ ಗತಿಯಾಗುತ್ತದೆ. ಶಿವತಂದೆ ಅಕಾಲಮೂರ್ತ, ನಿರಾಕಾರನಾಗಿದ್ದಾರೆ, ತಾವಾತ್ಮಗಳೂ ನಿರಾಕಾರಿಯಾಗಿದ್ದೀರಿ. ತಂದೆಯು ಹೇಳುತ್ತಾರೆ- ನನ್ನ ಶರೀರವಂತೂ ಇಲ್ಲ ನಾನು ಬಾಡಿಗೆ ತೆಗೆದುಕೊಳ್ಳುತ್ತೇನೆ. ನಾನು ಬರುವುದೇ ಪತಿತ ಜಗತ್ತಿನಲ್ಲಿ, ರಾವಣನ ಮೇಲೆ ವಿಜಯಿಗಳನ್ನಾಗಿ ಮಾಡಲು ಇಲ್ಲಿಯೇ ಆದೇಶ ಕೊಡುತ್ತೇನೆ ಏಕೆಂದರೆ ಪತಿತಪ್ರಪಂಚದಲ್ಲಿಯೇ ಪತಿತರಾಗುತ್ತೀರಿ, ಹೊಸಪ್ರಪಂಚದಲ್ಲಿ ಒಂದೇ ದೇವಿ-ದೇವತಾಧರ್ಮವಿರುತ್ತದೆ. ಆ ಸಮಯದಲ್ಲಿ ಉಳಿದವರೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ನಂತರ ನಂಬರ್ವಾರ್ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಯಾರಿಗೆ ಬಹಳ ಸುಖವು ಸಿಗುತ್ತದೆಯೋ ಅವರಿಗೆ ಬಹಳ ದುಃಖವೂ ಸಿಗುತ್ತದೆ.

ತಾವು ಎಲ್ಲರಿಗೂ ತಂದೆಯ ಸಂದೇಶವನ್ನು ಕೊಡಿ- ತಂದೆಯನ್ನು ನೆನಪು ಮಾಡಿದರೆ ಮನೆಗೆ ತಲುಪುತ್ತೀರಿ. ಯಾವಾಗ ವೃಕ್ಷ ಪೂರ್ಣವಾಗುತ್ತದೆಯೋ ಆಗ ಎಲ್ಲರ ಸದ್ಗತಿಯಾಗುತ್ತದೆ, ಎಲ್ಲರೂ ಬಂದುಬಿಡುತ್ತಾರೆ. ಈ ರೀತಿ ತಾವೂ ಸಹ ಬಹಳ ಪ್ರೀತಿ ಹಾಗೂ ಧೈರ್ಯದಿಂದ ತಿಳಿಸಿ. ತಾವು ಚಿತ್ರವನ್ನು ತೆಗೆದುಕೊಂಡು ಹೋಗುವ ಅವಶ್ಯಕತೆಯಿಲ್ಲ. ವಾಸ್ತವದಲ್ಲಿ ಚಿತ್ರಗಳು ಹೊಸಬರಿಗಾಗಿ ಇರುವುದು. ತಾವು ಯಾವುದೇ ಧರ್ಮದವರಿಗಾದರೂ ತಿಳಿಸಬಹುದು ಆದರೆ ಮಕ್ಕಳಲ್ಲಿ ಬಾಣ ನಾಟುವಷ್ಟು ಯೋಗವಿಲ್ಲ. ಹೇಳುತ್ತಾರೆ- ಬಾಬಾ, ನಾವು ಸೋತುಹೋಗುತ್ತೇವೆ ಎಂದು. ಮಾಯೆಯು ಒಂದೇಬಾರಿ ಮುಖವನ್ನು ಕಪ್ಪು ಮಾಡಿಬಿಡುತ್ತದೆ, ನಾವು ದೇವತೆಗಳಾಗಿದ್ದೇವೆಂಬುದು ಅವರಿಗೆ ಗೊತ್ತೇ ಆಗುವುದಿಲ್ಲ. ಈ ಸಮಯದಲ್ಲಿ ಅಸುರರಾಗಿದ್ದೇವೆ.

ಈಗ ತಂದೆಯು ತಿಳಿಸುತ್ತಾರೆ- ಸ್ವಯಂನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ತಂದೆಯ ಸಂದೇಶವನ್ನು ಎಲ್ಲರಿಗೂ ಕೊಡುತ್ತಿರಿ. ಚಲನಚಿತ್ರದ ಸ್ಲೈಡ್ಸ್ನಲ್ಲಿಯೂ ಬರೆಯಿರಿ- ತ್ರಿಮೂರ್ತಿ ಪರಮಪಿತ ಪರಮಾತ್ಮ ಶಿವ ಹೇಳುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮ ವಿನಾಶವಾಗುತ್ತದೆ ಅಥವಾ ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯುತ್ತೀರಿ. ಸಂದೇಶವಂತೂ ಎಲ್ಲರಿಗೂ ಕೊಡಬೇಕಲ್ಲವೆ ಸ್ಲೈಡ್ಸ್ ಸಹಾ ಸಿದ್ದವಾಗಬೇಕಿದೆ. ಮನ್ಮನಾಭವದ ಒಂದು ವಶೀಕರಣ ಮಂತ್ರವನ್ನು ಎಲ್ಲರಿಗೂ ಕೊಡಿ. ಈ ವಿದ್ಯೆಯಲ್ಲಿ ತಡವಾಗುವುದಿಲ್ಲ. ಮುಂದೆಹೋದಂತೆ ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆ. ಯಾವುದೇ ಚಿಂತೆಯ ಮಾತಿಲ್ಲ. ನಿಶ್ಚಿಂತರಂತೂ ಆಗಲೇಬೇಕಾಗಿದೆ. ಮನುಷ್ಯರನ್ನು ನೋಡಿ, ಮೃತ್ಯುವಿಗೆ ಎಷ್ಟೊಂದು ಭಯಪಡುತ್ತಾರೆ ಆದರೆ ಇಲ್ಲಿ ಭಯಪಡುವ ಮಾತೇ ಇಲ್ಲ. ತಾವು ಹೇಳುತ್ತೀರಿ- ಈಗ ಮೃತ್ಯು ಬರಬಾರದು, ಈಗ ನಾವು ಪರೀಕ್ಷೆಯನ್ನು ಎಲ್ಲಿ ಪೂರ್ಣ ಮಾಡಿದ್ದೇವೆ. ಈಗ ಯಾತ್ರೆಯನ್ನು ಪೂರ್ಣ ಮಾಡಿಲ್ಲವೆಂದರೆ ಏಕೆ ಶರೀರವನ್ನು ಬಿಡಬೇಕು. ಇಂತಹ ಮಧುರಮಾತುಗಳನ್ನು ತಂದೆಯ ಜೊತೆ ಮಾತನಾಡಬೇಕು. ಬಹಳ ಒಳ್ಳೆಯ ಅಭ್ಯಾಸವಾಗಿಬಿಡುತ್ತದೆ. ಇಲ್ಲಿ ಚಿತ್ರದ ಮುಂದೆ ಬಂದು ಕುಳಿತುಕೊಳ್ಳಿ. ತಮಗೆ ಗೊತ್ತಿದೆ, ನಮಗೆ ತಂದೆಯಿಂದ ವಿಶ್ವದ ರಾಜ್ಯಭಾಗ್ಯ ಸಿಗುತ್ತದೆ ಅಂದಮೇಲೆ ಅಂತಹ ತಂದೆಯನ್ನು ಬಹಳ ನೆನಪು ಮಾಡಬೇಕಲ್ಲವೆ. ನೆನಪು ಮಾಡದಿದ್ದರೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ತಂದೆಗಂತೂ ನಾವು ಇಂತಹವರಾಗುತ್ತೇವೆಂದು ನೆನಪಾಗಿಬಿಟ್ಟಿತು. ಅಂದಮೇಲೆ ನಾವು ಇಂತಹವರಾಗುತ್ತೇವೆಂದು ಬಹಳ ಖುಷಿಯಾಗುತ್ತದೆ. ನೋಡುತ್ತಿದ್ದಂತೆಯೇ ನಶೆಯೇರುತ್ತದೆ. ನೀವೂ ಸಹ ಈ ರೀತಿ ಆಗಬೇಕಾಗಿದೆ. ತಂದೆಯೇ ನಾವು ನಿಮ್ಮನ್ನು ನೆನಪು ಮಾಡಿ ಈ ರೀತಿ ಖಂಡಿತ ಆಗುತ್ತೇವೆ. ಬೇರೆ ಇನ್ನೇನೂ ಕೆಲಸವಿಲ್ಲ ಎಂದರೆ ಚಿತ್ರಗಳ ಮುಂದೆ ಬಂದು ಕುಳಿತುಬಿಡಿ. ತಂದೆಯ ಮೂಲಕ ನಮಗೆ ಈ ಆಸ್ತಿಯು ಸಿಗುತ್ತದೆ ಎಂಬುದನ್ನು ಪಕ್ಕಾ ಮಾಡಿಕೊಳ್ಳಬೇಕು. ಈ ಯುಕ್ತಿಯೇನು ಕಡಿಮೆಯಿಲ್ಲ ಆದರೆ ಅದೃಷ್ಟದಲ್ಲಿಲ್ಲವೆಂದರೆ ನೆನಪು ಮಾಡುವುದಿಲ್ಲ. ತಂದೆಯು ಹೇಳುತ್ತಾರೆ- ಇಲ್ಲಿಗೆ ಬಂದಮೇಲೆ ಬಹಳ ಅಭ್ಯಾಸ ಮಾಡಿ. ಯಾವುದೆಲ್ಲಾ ಗ್ರಹಚಾರಗಳಿದೆಯೋ ಅದೆಲ್ಲವೂ ಇಳಿದುಹೋಗುತ್ತದೆ. ಏಣಿಚಿತ್ರದ ಬಗ್ಗೆಯೂ ಈ ವಿಚಾರ ಮಾಡಿ ಆದರೆ ಅದೃಷ್ಠದಲ್ಲಿ ಇಲ್ಲವೆಂದರೆ ಶ್ರೀಮತದಂತೆ ನಡೆಯುವುದಿಲ್ಲ. ಈ ತಂದೆ ದಾರಿ ತೋರಿಸುತ್ತಾರೆ ಮಾಯೆಯು ತುಂಡರಿಸುತ್ತದೆ. ತಂದೆಯು ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಿರಿ, ಅತೀಂದ್ರಿಯ ಸುಖವನ್ನು ಗೋಪ-ಗೋಪಿಯರಿಂದ ಕೇಳಿ ಎಂದು ಹೇಳುತ್ತಾರೆ, ಯಾರಿಗೆ ನಿಶ್ಚಯವಿದೆಯೋ ಅವರು ತಂದೆಯಿಂದ ಖಂಡಿತ ಆಸ್ತಿಯನ್ನು ಪಡೆಯುತ್ತಾರೆ. ತಂದೆಯು ಸ್ವರ್ಗದ ಸ್ಥಾಪನೆ ಮಾಡಿ ನಮ್ಮನ್ನು ಅದಕ್ಕೆ ಮಾಲೀಕರನ್ನಾಗಿ ಮಾಡುತ್ತಾರೆ. ಚಿತ್ರಗಳೂ ಸಹ ಅದೇರೀತಿ ಮಾಡಿಸಲಾಗಿದೆ. ಬ್ರಹ್ಮಾ-ವಿಷ್ಣುವಿನ ಸಂಬಂಧವೇನಾಗಿದೆ ಎಂದು ತಾವು ಸಿದ್ಧ ಮಾಡಿ ಹೇಳುತ್ತೀರಿ, ಬೇರೆ ಯಾರಿಗೂ ಗೊತ್ತಿಲ್ಲ. ಬ್ರಹ್ಮನ ಚಿತ್ರವನ್ನು ನೋಡಿ ತಬ್ಬಿಬ್ಬಾಗುತ್ತಾರೆ. ಸ್ಥಾಪನಾಕಾರ್ಯದಲ್ಲಿ ಸಮಯ ಹಿಡಿಸುತ್ತದೆ, ಕರ್ಮಾತೀತರಾಗಲೂ ಸಮಯ ಹಿಡಿಸುತ್ತದೆ. ಪದೇ-ಪದೇ ಮರೆತುಹೋಗುತ್ತದೆ. ಈ ಅಭ್ಯಾಸ ಮಾಡಿಕೊಳ್ಳಬೇಕು. ನೌಧಾಭಕ್ತಿಮಾಡುವವರೂ ಸಹ ನಮಗೆ ಸಾಕ್ಷಾತ್ಕಾರವಾಗಬೇಕೆಂದು ಚಿತ್ರದ ಮುಂದೆ ಕುಳಿತುಬಿಡುತ್ತಾರೆ. ತಾವಂತೂ ಈ ರೀತಿ ಆಗುತ್ತೀರಿ ಅಂದಾಗ ನೀವು ನೆನಪು ಮಾಡಬೇಕು. ಬ್ಯಾಡ್ಜ್ ಸಹ ತಮ್ಮ ಬಳಿಯಿದೆ. ತಂದೆಯು ತಮ್ಮ ಭಕ್ತಿಮಾರ್ಗದ ಉದಾಹರಣೆ ಹೇಳುತ್ತಾರೆ- ನಾರಾಯಣನ ಮೂರ್ತಿಯ ಜೊತೆ ನನಗೆ ಬಹಳ ಪ್ರೀತಿಯಿತ್ತು, ಅದೆಲ್ಲವೂ ಭಕ್ತಿಮಾರ್ಗವಾಗಿತ್ತು. ಈಗ ತಂದೆಯು ಹೇಳುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ ಬೇರೆನೂ ಮಾಡಬಾರದು. ತಂದೆಯು ಹೇಳುತ್ತಾರೆ- ನಾನು ವಿಧೇಯ ಸೇವಕನಾಗಿದ್ದೇನೆ. ನನಗೇಕೆ ತಲೆಬಾಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಿರ್ಮಾಣತೆಯ ಗುಣವನ್ನು ಧಾರಣೆ ಮಾಡಬೇಕಾಗಿದೆ. ಸ್ವಲ್ಪವೂ ಅಹಂಕಾರದಲ್ಲಿ ಬರಬಾರದು. ಮಾಯೆಯು ಅಲುಗಾಡಿಸಲು ಆಗದಿರುವಂತೆ ಮಹಾವೀರರಾಗಬೇಕಾಗಿದೆ.

2. ಮನ್ಮಾನಭವದ ವಶೀಕರಣ ಮಂತ್ರವನ್ನು ಹೇಳಬೇಕಾಗಿದೆ. ಎಲ್ಲರಿಗೂ ಬಹಳ ಪ್ರೀತಿ ಹಾಗೂ ಧೈರ್ಯದಿಂದ ಎಲ್ಲರಿಗೂ ಜ್ಞಾನದ ಮಾತುಗಳನ್ನು ಹೇಳಬೇಕಾಗಿದೆ. ತಂದೆಯ ಸಂದೇಶವನ್ನು ಎಲ್ಲಾ ಧರ್ಮದವರಿಗೂ ಕೊಡಬೇಕಾಗಿದೆ.

ವರದಾನ:
ಕರ್ಮ ಮತ್ತು ಸಂಬಂಧ ಎರಡರಲ್ಲಿ ಸ್ವಾರ್ಥಬಾವದಿಂದ ಮುಕ್ತರಾಗಿರುವಂತಹ ತಂದೆ ಸಮಾನ ಕರ್ಮಾತೀತ ಭವ

ತಾವು ಮಕ್ಕಳ ಸೇವೆಯಾಗಿದೆ ಎಲ್ಲರನ್ನೂ ಮುಕ್ತರನ್ನಾಗಿ ಮಾಡುವುದು. ಆದ್ದರಿಂದ ಬೇರೆಯವರನ್ನು ಮುಕ್ತ ಮಾಡುತ್ತಾ ಸ್ವಯಂ ಅನ್ನು ಬಂಧನದಲ್ಲಿ ಬಂದಿಸಲ್ಪಡಬೇಡಿ. ಯಾವಾಗ ಹದ್ದಿನ ನನ್ನದು-ನನ್ನದರಿಂದ ಮುಕ್ತರಾಗುವಿರಿ ಆಗ ಅವ್ಯಕ್ತ ಸ್ಥಿತಿಯ ಅನುಭವ ಮಾಡಲು ಸಾಧ್ಯ. ಯಾವ ಮಕ್ಕಳು ಲೌಕಿಕ ಮತ್ತು ಅಲೌಕಿಕ,ಕರ್ಮ ಮತ್ತು ಸಂಬಂಧ ಎರಡರಲ್ಲಿಯೂ ಸ್ವಾರ್ಥ ಭಾವದಿಂದ ಮುಕ್ತರಾಗಿದ್ದಾರೆ ಅವರೇ ತಂದೆ ಸಮಾನ ಕರ್ಮಾತೀತ ಸ್ಥಿತಿಯ ಅನುಭವವನ್ನು ಮಾಡಲು ಸಾಧ್ಯ. ಆದ್ದರಿಂದ ಚೆಕ್ ಮಾಡಿಕೊಳ್ಳಿ ಎಲ್ಲಿಯವರೆಗೆ ಕರ್ಮಗಳ ಬಂಧನದಿಂದ ನ್ಯಾರಾ ಆಗಿರುವೆನು? ವ್ಯರ್ಥ ಸ್ವಭಾವ-ಸಂಸ್ಕಾರದ ವಶ ಆಗುವುದರಿಂದ ಮುಕ್ತ ಆಗಿರುವೆನಾ? ಎಂದಾದರೂ ಯಾವುದಾದರೂ ಹಳೆಯ ಸಂಸ್ಕಾರ-ಸ್ವಭಾವಕ್ಕೆ ವಶೀಭೂತ ಅಂತೂ ಆಗುತ್ತಿಲ್ಲ ತಾನೆ?

ಸ್ಲೋಗನ್:
ಸಮಾನ ಮತ್ತು ಸಂಪೂರ್ಣರಾಗಬೇಕಾದರೆ ಸ್ನೇಹ ಸಾಗರನಲ್ಲಿ ಸಮಾವೇಶ ಆಗಿಬಿಡಿ.

ಅವ್ಯಕ್ತ ಸೈಲೆನ್ಸ್ನ ಮೂಲಕ ಡಬಲ್ ಲೈಟ್ ಫರಿಶ್ತಾ ಸ್ಥಿತಿಯ ಅನುಭವ ಮಾಡಿ

ಈಗ ತೀವ್ರ ಪುರುಷಾರ್ಥದ ಇದೇ ಲಕ್ಷ್ಯವಿಟ್ಟುಕೊಳ್ಳಿ - ನಾನು ಡಬಲ್ ಲೈಟ್ ಫರಿಶ್ತಾ ಆಗಿದ್ದೇನೆ, ನಡೆಯುತ್ತಾ - ತಿರುಗಾಡುತ್ತಾ ಫರಿಸ್ತಾ ಸ್ವರೂಪದ ಅನುಭೂತಿಯನ್ನು ಹೆಚ್ಚಿಸಿರಿ. ಆಳವಾದ ಶಾಂತಿಯ ಮೂಲಕ ಅಶರೀರಿತನದ ಅಭ್ಯಾಸ ಮಾಡಿ. ಸೆಕೆಂಡಿನಲ್ಲಿ ಯಾವುದೇ ಸಂಕಲ್ಪಗಳನ್ನು ಸಮಾಪ್ತಿ ಮಾಡುವುದರಲ್ಲಿ, ಸಂಸ್ಕಾರ - ಸ್ವಭಾವದಲ್ಲಿ ಡಬಲ್ ಲೈಟ್ ಆಗಿರಿ.