04.02.24    Avyakt Bapdada     Kannada Murli    31.01.98     Om Shanti     Madhuban


ಪಾಸ್ ವಿತ್ ಹಾನರ್ ಆಗಲು ಪ್ರತಿಯೊಂದು ಖಜಾನೆಯ ಅಕೌಂಟ್(ಖಾತೆ) ಚೆಕ್ ಮಾಡಿ ಜಮಾ ಮಾಡಿ


ಇಂದು ಬಾಪ್ದಾದಾರವರು ಪ್ರತಿಯೊಂದು ಚಿಕ್ಕಪುಟ್ಟ ನಾಲ್ಕಾರು ಕಡೆಯ ಹಾಗೂ ದೇಶ ವಿದೇಶದ ಮಕ್ಕಳ ಭಾಗ್ಯವನ್ನು ನೋಡಿ ಹರ್ಷಿತರಾಗುತ್ತಿದ್ದರು. ಇಂತಹ ಭಾಗ್ಯ ಇಡಿ ಕಲ್ಪದಲ್ಲಿ ಬ್ರಾಹ್ಮಣ ಆತ್ಮರ ಹೊರತು ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ. ದೇವತೆಗಳು ಸಹ ಬ್ರಾಹ್ಮಣ ಜೀವನವನ್ನು ಶ್ರೇಷ್ಠ ಎಂದು ತಿಳಿಯುತ್ತಾರೆ. ಪ್ರತಿಯೊಬ್ಬರು ತಮ್ಮ ಜೀವನದ ಆದಿಯಿಂದ ನೋಡಿಕೊಳ್ಳಿ- ನಮ್ಮ ಭಾಗ್ಯ ಜನ್ಮವಾದಾಗಿನಿಂದ ಎಷ್ಟು ಶ್ರೇಷ್ಠವಾಗಿದೆ ಎಂದು. ಜೀವನದಲ್ಲಿ ಜನ್ಮವಾಗುತ್ತಿದ್ದಂತೆ ತಂದೆ ತಾಯಿಯ ಪಾಲನೆಯ ಭಾಗ್ಯ ಸಿಕ್ಕಿತು. ಅದರ ನಂತರ ವಿದ್ಯೆಯ ಭಾಗ್ಯ ಸಿಕ್ಕಿತು. ಅದರ ನಂತರ ಗುರುವಿನ ಮೂಲಕ ಮತ ಹಾಗೂ ವರದಾನ ಸಿಕ್ಕಿತು. ನೀವು ಮಕ್ಕಳಿಗೆ ಪಾಲನೆ, ವಿದ್ಯೆ ಹಾಗೂ ಶ್ರೀಮತ, ವರದಾನವನ್ನು ಕೊಡುವವರು ಯಾರು? ಪರಮಾತ್ಮನ ಮುಖಾಂತರ ಈ ಮೂರು ಸಹ ಪ್ರಾಪ್ತಿಯಾಗಿದೆ. ಪಾಲನೆಯನ್ನು ನೋಡಿ- ಪರಮಾತ್ಮನ ಪಾಲನೆ ಎಷ್ಟು ಸ್ವಲ್ಪ ಜನರಿಗೆ ಕೋಟಿಯಲ್ಲಿ ಕೆಲವರಿಗೆ ಸಿಗುತ್ತದೆ. ಪರಮಾತ್ಮ ಶಿಕ್ಷಕನ ಶಿಕ್ಷಣ ನಿಮ್ಮ ಹೊರೆತು ಬೇರೆ ಯಾರಿಗೂ ಸಿಗುವುದಿಲ್ಲ. ಸದ್ಗುರುವಿನ ಮುಖಾಂತರ ಶ್ರೀಮತ, ವರದಾನ ನಿಮಗೆ ಪ್ರಾಪ್ತಿಯಾಗುತ್ತದೆ. ಎಂದ ಮೇಲೆ ನಿಮ್ಮ ಭಾಗ್ಯವನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಾ? ಭಾಗ್ಯವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾ ಉಯ್ಯಾಲೆಯಲ್ಲಿ ತೂಗುತ್ತಾ ಇರುತ್ತೀರಾ, ಗೀತೆ ಹಾಡುತ್ತಾ ಇರುತ್ತೀರಾ- ವಾಹ್ ನನ್ನ ಭಾಗ್ಯ!

ಅಮೃತ ವೇಳೆಯಿಂದ ಹಿಡಿದು ಯಾವಾಗ ಎದ್ದೇಳುತ್ತೀರಿ ಎಂದರೆ ಪರಮಾತ್ಮನ ಪ್ರೀತಿಯಲ್ಲಿ ಲವಲೀನರಾಗಿ ಎದ್ದೇಳುತ್ತೀರಿ. ಪರಮಾತ್ಮನ ಪ್ರೀತಿ ಎಳಿಸುತ್ತದೆ. , ದಿನಚರಿಯ ಆದಿ ಪರಮಾತ್ಮ ಪ್ರೀತಿ ಯಿಂದ ಆಗುತ್ತದೆ. ಪ್ರೀತಿ ಇಲ್ಲದಿದ್ದರೆ ಎದ್ದೇಳಲು ಸಾಧ್ಯವಿಲ್ಲ. ಪ್ರೀತಿಯೇ ನಿಮ್ಮ ಸಮಯದ ಗಂಟೆಯಾಗಿದೆ. ಪ್ರೀತಿಯ ಗಂಟೆ ನಿಮ್ಮನ್ನು ಎದ್ದೇಳಿಸುತ್ತದೆ. , ಇಡೀ ದಿನದಲ್ಲಿ ಪರಮಾತ್ಮನ ಜೊತೆ ಪ್ರತಿ ಕಾರ್ಯವನ್ನು ಮಾಡಿಸುತ್ತದೆ. ಎಷ್ಟು ಶ್ರೇಷ್ಠಭಾಗ್ಯವಾಗಿದೆ- ಸ್ವಯಂ ತಂದೆ ತನ್ನ ಪರಮಧಾಮವನ್ನು ಬಿಟ್ಟು ನಿಮಗೆ ಶಿಕ್ಷಣ ಕೊಡುವುದಕ್ಕಾಗಿ ಬರುತ್ತಾರೆ. ಈ ರೀತಿ ಎಂದಾದರೂ ಕೇಳಿದ್ದೀರಾ- ಭಗವಂತ ಪ್ರತಿದಿನ ತಮ್ಮ ಧಾಮವನ್ನು ಬಿಟ್ಟು ಓದಿಸುವುದಕ್ಕಾಗಿ ಬರುತ್ತಾರೆ! ಆತ್ಮಗಳು ಬಲೆ ಎಷ್ಟೇ ದೂರ ದೂರದಿಂದ ಬರುತ್ತಾರೆ, ಪರಮಧಾಮಕ್ಕಿಂತ ದೂರ ಬೇರೆ ಯಾವ ದೇಶವು ಇಲ್ಲ. ಯಾವುದಾದರೂ ದೇಶ ಇದೆಯೇ? ಅಮೆರಿಕ, ಆಫ್ರಿಕಾ ದೂರ ಇದೆಯೇ? ಪರಮಧಾಮ ಶ್ರೇಷ್ಠಾತಿ ಶ್ರೇಷ್ಠ ಧಾಮವಾಗಿದೆ. ಶ್ರೇಷ್ಠಾತಿ ಶ್ರೇಷ್ಠ ಧಾಮದಿಂದ ಶ್ರೇಷ್ಠಾತಿ ಶ್ರೇಷ್ಠ ಭಗವಂತ, ಶ್ರೇಷ್ಠಾತಿ ಶ್ರೇಷ್ಠ ಮಕ್ಕಳನ್ನು ಓದಿಸಲು ಬರುತ್ತಾರೆ. ಇಂತಹ ತಮ್ಮ ಭಾಗ್ಯವನ್ನು ಅನುಭವ ಮಾಡುತ್ತೀರಾ? ಸದ್ಗುರುವಿನ ರೂಪದಲ್ಲಿ ಪ್ರತಿ ಕಾರ್ಯದಲ್ಲಿ ಶ್ರೀಮತವನ್ನು ಕೊಡುತ್ತಾರೆ ಹಾಗೂ ಜೊತೆಯನ್ನು ಕೊಡುತ್ತಾರೆ. ಕೇವಲ ಮತವನ್ನು ಕೊಡುವುದಿಲ್ಲ, ಜೊತೆಯನ್ನು ಸಹ ಕೊಡುತ್ತಾರೆ. ನೀವು ಯಾವ ಗೀತೆಯನ್ನು ಹಾಡುತ್ತೀರಿ? ನನ್ನ ಜೊತೆಯಲ್ಲಿ ಇದ್ದಾರೆ ಎಂದು ಹೇಳುತ್ತೀರಾ ಅಥವಾ ದೂರ ಇದ್ದಾರೆ ಎಂದು ಹೇಳುತ್ತೀರಾ? ಜೊತೆಯಲಿದ್ದಾರೆ ಅಲ್ಲವೇ? ಒಂದು ವೇಳೆ ಕೇಳುತ್ತೀರಿ ಎಂದರೆ ಪರಮಾತ್ಮ ಶಿಕ್ಷಕನಿಂದ, ತಿನ್ನುತ್ತೀರಿ ಎಂದರು ಸಹ ಬಾಪ್ದಾದಾರವರ ಜೊತೆಯಲ್ಲಿ ತಿನ್ನುತ್ತೀರಿ. ಒಬ್ಬರೇ ತಿನ್ನುತ್ತೀರಿ ಎಂದರೆ ಅದು ನಿಮ್ಮ ತಪ್ಪಾಗಿದೆ. ತಂದೆಯಂತು ಹೇಳುತ್ತಾರೆ ನನ್ನ ಜೊತೆ ತಿನ್ನಿರಿ ಎಂದು. ನೀವು ಮಕ್ಕಳ ಪ್ರತಿಜ್ಞೆಯೂ ಆಗಿದೆ- ಜೊತೆಯಲ್ಲಿ ಇರುತ್ತೇವೆ, ಜೊತೆಯಲ್ಲಿ ತಿನ್ನುತ್ತೇವೆ, ಜೊತೆಯಲ್ಲಿ ಕುಡಿಯುತ್ತೇವೆ, ಜೊತೆಯಲ್ಲಿ ಮಲಗುತ್ತೇವೆ ಹಾಗೂ ಜೊತೆಯಲ್ಲಿ ನಡೆಯುತ್ತೇವೆ.... ಮಲಗುವುದು ಸಹ ಒಬ್ಬರೇ ಅಲ್ಲ. ಒಬ್ಬರೇ ಮಲಗುತ್ತಿರಿ ಎಂದರೆ ಕೆಟ್ಟ ಸ್ವಪ್ನ ಹಾಗೂ ಕೆಟ್ಟ ಸಂಕಲ್ಪಗಳು ಸ್ವಪ್ನದಲ್ಲಿಯೂ ಬರುತ್ತದೆ. ಆದರೆ ತಂದೆಯದ್ದು ಇಷ್ಟು ಪ್ರೀತಿ ಇದೆ- ಸದಾ ಹೇಳುತ್ತಾರೆ ನನ್ನ ಜೊತೆ ಮಲಗಿರಿ, ಒಬ್ಬರೇ ಮಲಗಬೇಡಿ. ಎಂದ ಮೇಲೆ ಏಳುತ್ತೀರಿ ಎಂದರು ಜೊತೆಯಲ್ಲಿ, ಮಲಗಿದರೂ ಜೊತೆಯಲ್ಲಿ, ತಿನ್ನುತ್ತೀರಿ ಎಂದರು ಜೊತೆಯಲ್ಲಿ, ನಡೆಯುತ್ತಿರಿ ಎಂದರು ಜೊತೆಯಲ್ಲಿ. ಒಂದು ವೇಳೆ ಕಚೇರಿಗೆ ಹೋಗುತ್ತೀರಿ, ಬಿಸಿನೆಸ್ (ವ್ಯಾಪಾರ) ಮಾಡುತ್ತೀರಿ ಎಂದರೆ ವ್ಯಾಪಾರದಲ್ಲಿ ನೀವು ಟ್ರಸ್ಟಿ ಆಗಿದ್ದೀರಿ ಆದರೆ ಮಾಲಿಕ ತಂದೆಯಾಗಿದ್ದಾರೆ. ಕಚೇರಿಗೆ ಹೋಗುತ್ತೀರಿ ಎಂದರೆ ನೀವು ತಿಳಿದಿದ್ದೀರಿ- ನಮ್ಮ ಡೈರೆಕ್ಟರ್( ನಿರ್ದೇಶಕ), ಬಾಸ್(ಮಾಲಿಕ) ಬಾಪ್ದಾದಾ ಆಗಿದ್ದಾರೆ, ಇದು ನಿಮಿತ್ತ ಮಾತ್ರವಾಗಿದೆ, ಅವರ ನಿರ್ದೇಶನದಂತೆ ಕೆಲಸ ಮಾಡುತ್ತೀರಿ. ಎಂದಾದರೂ ಉದಾಸರಾಗುತ್ತಿರಿ ಎಂದರೆ ತಂದೆ ಗೆಳೆಯನಾಗಿ ವಿನೋದಪಡಿಸುತ್ತಾರೆ (ನಗಿಸುತ್ತಾರೆ). ಗೆಳೆಯನು ಆಗುತ್ತಾರೆ. ಎಂದಾದರೂ ಪ್ರೀತಿಯಲ್ಲಿ ಅಳುತ್ತೀರಿ, ಕಣ್ಣೀರು ಬರುತ್ತದೆ ಎಂದರೆ ತಂದೆ ಕಣ್ಣೀರು ವರಿಸಲು ಸಹ ಬರುತ್ತಾರೆ ಹಾಗೂ ನಿಮ್ಮ ಕಣ್ಣೀರನ್ನು ಹೃದಯದ ಡಬ್ಬದಲ್ಲಿ ಮುತ್ತಿನ ಸಮಾನ ಸಮಾವೇಶ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಕೆಲವೊಮ್ಮೆ ತುಂಟತನ ಮಾಡುತ್ತಿರಿ ಎಂದರೆ ಮುನಿಸಿಕೊಳ್ಳುತ್ತೀರಿ, ಕೋಪವೂ ಮಾಡಿಕೊಳ್ಳುತ್ತಿರಿ, ಬಹಳ ಮಧುರ ಮಧುರವಾಗಿ. ಆದರೆ ತಂದೆ ಮುನಿಸಿಕೊಂಡವರನ್ನು ಸಹ ಒಪ್ಪಿಸುತ್ತ ಬರುತ್ತಾರೆ , ಮಗು ಆದದ್ದು ಆಗಿ ಹೋಯಿತು, ಮುಂದುವರೆಯುತ್ತಾ ಹೋಗು. ಏನೆಲ್ಲಾ ಆಯಿತು ಅದು ಕಳೆದು ಹೋಯಿತು, ಮರೆತು ಹೋಗು. ಕಳೆದು ಹೋದದ್ದನ್ನು ಬಿಟ್ಟು ಬಿಡು, ಈ ರೀತಿ ಒಪ್ಪಿಸಲು ಬರುತ್ತಾರೆ . ಎಂದ ಮೇಲೆ ಪ್ರತಿಯೊಂದು ದಿನಚಯರಿ ಯಾರ ಜೊತೆಯಾಯಿತು?ಬಾಪ್ದಾದಾರವರ ಜೊತೆ. ಬಾಪ್ದಾದಾರವರಿಗೆ ಕೆಲಒಮ್ಮೆ ಮಕ್ಕಳ ಮಾತುಗಳಲ್ಲಿ ನಗು ಬರುತ್ತದೆ. ಯಾವಾಗ ಮಕ್ಕಳು ಹೇಳುತ್ತಾರೆ ನಿಮ್ಮನ್ನು ಮರೆತು ಹೋಗುತ್ತೇವೆ, ಒಂದುಕಡೆ ಹೇಳುತ್ತಾರೆ ಕಂಬೈಂಡ್ ಆಗಿದ್ದೇವೆ, ಕಂಬೈಂಡ್ ಆಗಿರುವವರು ಎಂದಾದರು ಮರೆಯೆಲು ಸಾಧ್ಯವೇ? ಯಾರು ಜೊತೆ-ಜೊತೆಯಲ್ಲಿರುತ್ತಾರೆ ಅವರನ್ನು ಮರೆಯಲು ಸಾದ್ಯವೇ? ಎಂದಮೇಲೆ ಬಾಬಾರವರು ಹೇಳುತ್ತಾರೆ ಶಾಬಾಸ್- ಮಕ್ಕಳಲ್ಲಿ ಇಷ್ಟು ಶಕ್ತಿ ಇದೆ, ಯಾರು ಕಂಬೈಂಡ್ ಆಗಿರುವವರನ್ನೂ ಸಹ ಬೇರೆ ಮಾಡಿಬಿಡುತ್ತೀರಿ! ಕಂಬೈಂಡ್ ಆಗಿದ್ದಿರಿ ಹಾಗು ಸ್ವಲ್ಪ ಮಾಯೆ ಬಂದು ಬಿಡುತ್ತೆದೆ ಎಂದರೆ ಕಂಬೈಂಡ್ ಇರುವವರನ್ನೂ ಸಹ ಬೇರೆ ಮಾಡಿಬಿಡುತ್ತದೆ.

ಬಾಪ್ದಾದಾರವರು ಮಕ್ಕಳ ಆಟವನ್ನು ನೋಡೀ ಇದನ್ನೇ ಹೇಳುತ್ತಾರೆ ಮಕ್ಕಳೆ, ತಮ್ಮ ಭಾಗ್ಯವನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳಿ. ಏನಗುತ್ತದೆ ಎಂದರೆ- ಯೋಚಿಸುತ್ತೀರಿ ಹೌದು ನನ್ನ ಭಾಗ್ಯ ಬಹಳ ಶ್ರೇಷ್ಟವಾಗಿದೆ ಎಂದು ಆದರೆ ಯೋಚಿಸುವ ಸ್ವರೂಪರಾಗುತ್ತೀರಿ, ಸ್ಮೃತಿ ಸ್ವರೂಪರಾಗಿವುದಿಲ್ಲ. ಬಹಳ ಚೆನ್ನಾಗಿ ಯೋಚಿಸುತ್ತೀರಿ - ನಾನಂತು ಇದಾಗಿದ್ದೇನೆ, ನಾನಂತು ಇದಾಗಿದ್ದೇನೆ, ನಾನಂತು ಇದಾಗಿದ್ದೇನೆ... ಬಹಳ ಚೆನ್ನಾಗಿ ಹೇಳುತ್ತೀರಿ. ಆದರೆ ಏನನ್ನು ಯೋಚಿಸುತ್ತೀರಿ ಏನನ್ನು ಹೇಳುತ್ತೀರಿ ಅದರ ಸ್ವರೂಪರಾಗಿಬಿಡಿ. ಸ್ವರೂಪರಾಗುವುದರಲ್ಲಿ ಬಲಹೀನತೆ ಬಂದು ಬಿಡುತ್ತದೆ. ಪ್ರತಿ ಮಾತಿನಲ್ಲಿ ಸ್ವರೂಪರಾಗಿಬಿಡಿ. ಯಾವುದನ್ನು ಯೋಚಿಸುತ್ತೀರಿ ಅದನ್ನು ಸ್ವರೂಪದಲ್ಲಿಯೂ ಅನುಭವ ಮಾಡಿ. ಎಲ್ಲದಕ್ಕಿಂತ ದೊಡ್ಡದು ಅನುಭವೀ ಮೂರ್ತರಾಗುವುದಾಗುದೆ. ಅನಾದಿ ಕಾಲದಲ್ಲಿ ಯಾವಾಗ ಪರಮಧಾಮದಲ್ಲಿ ಇರುತ್ತಿದ್ದಿರಿ ಆಗ ಯೋಚಿಸುವ ಸ್ವರೂಪರಾಗಿರುವುದಿಲ್ಲ, ಸ್ಮೃತಿ ಸ್ವರೂಪರಾಗಿರುತ್ತೀರಿ. ನಾನು ಆತ್ಮನಾಗಿದ್ದೇನೆ , ನಾನು ಆತ್ಮನಾಗಿದ್ದೇನೆ ಇದನ್ನೂ ಸಹ ಯೋಚಿಸುವುದಿಲ್ಲ, ಸ್ವರೂಪರೇ ಆಗಿರಿತ್ತೀರಿ. ಆದಿ ಕಾಲದಲ್ಲಿಯೂ ಸಹ ಈ ಸಮಯದ ಪುರುಷಾರ್ಥದ ಪ್ರಾಲಬ್ಧ ಸ್ವರೂಪರಾಗಿರುವಿರಿ. ಯೋಚಿಸಬೇಕಾಗಿಲ್ಲ - ನಾನು ದೇವತೆ, ನಾನು ದೇವತೆ ಆಗಿದ್ದೇನೆ... ಸ್ವರೂಪವೇ ಅಗಿದ್ದೀರಿ.ಎಂದಮೇಲೆ ಅನಾದಿಕಾಲ, ಆದಿಕಾಲದಲ್ಲಿ ಸ್ವರೂಪರಾಗಿದ್ದೀರಿ ಎಂದಮೇಲೆ ಈಗಲೂ ಸಹ ಸ್ವರೂಪರಾಗಿರಿ. ಸ್ವರೂಪರಾಗುವುದರಿಂದ ನಿಮ್ಮ ಗುಣ, ಶಕ್ತಿಗಳು ಸ್ವತಃವಾಗಿಯೇ ಇಮರ್ಜ್ ಆಗುವುದು. ಹೇಗೆ ಯಾವುದೇ ಉದ್ಯೋಗದವರು ಯಾವಾಗ ತಮ್ಮ ಸೀಟಿನ ಮೇಲೆ ಸೆಟ್ ಆಗುತ್ತಾರೆ ಆಗ ಆ ಉದ್ಯೋಗದ ಗುಣಗಳು ಹಾಗು ಕರ್ತವ್ಯ ಸ್ವತಃವಾಗಿಯೇ ಇಮರ್ಜ್ ಆಗುತ್ತದೆ. ಅದೇ ರೀತಿ ನೀವು ತಮ್ಮ ಸ್ವರೂಪದ ಸೀಟಿನಲ್ಲಿ ಸೆಟ್ ಆಗಿರಿ ಆಗ ಪ್ರತೀ ಗುಣ, ಪ್ರತೀ ಶಕ್ತಿ, ಪ್ರತಿಯೊಂದು ಪ್ರಕಾರದ ನಶೆ ಸ್ವತಃವಾಗಿ ಇಮರ್ಜ್ ಆಗುವುದು.ಪರಿಶ್ರಮ ಪಡಬೇಕಾಗಿಲ್ಲ. ಇದಕ್ಕೆ ಹೇಳಲಾಗುತ್ತದೆ ಬ್ರಾಹ್ಮಣತನದ ನೆಚುರಲ್ ನೇಚರ್(ನೈಸರ್ಗಿಕ ಸ್ವಭಾವ), ಯಾವುದರಲ್ಲಿ ಬೇರೆ ಎಲ್ಲಾ ಜನ್ಮಗಳ ಸ್ವಭಾವಗಳು ಸಮಾಪ್ತಿಯಾಗಿಹೋಗುತ್ತದೆ. ಬ್ರಾಹ್ಮಣ ಜೀವನದ ನೆಚುರಲ್ ನೇಚರ್ ಆಗಿದೆ ಗುಣ ಸ್ವರೂಪ, ಸರ್ವ ಶಕ್ತಿ ಸ್ವರೂಪ ಹಾಗು ಉಳಿದ ಹಳೆಯ ನೇಚರ್ ಎನೆಲ್ಲಾ ಇವೆಯೋ ಅದು ಬ್ರಾಹ್ಮಣ ಜೀವನದ ನೇಚರ್ ಆಗಿಲ್ಲ. ಹೀಗೆ ಹೇಳುತ್ತೀರಿ- ನನ್ನ ನೇಚರ್ ಹೀಗಿದೆ ಆದರೆ, ನನ್ನ ನೇಚರ್ ಎಂದು ಯಾರು ಹೇಳುತ್ತಾರೆ? ಬ್ರಾಹ್ಮಣರೇ ಅಥವಾ ಕ್ಷತ್ರಿಯರೇ?ಅಥವಾ ಹಿಂದಿನ ಜನ್ಮದ ಸ್ಮೃತಿ ಸ್ವರೂಪ ಆತ್ಮ ಹೇಳುತ್ತದೆಯೇ?ಬ್ರಾಹ್ಮಣರ ನೇಚರ್- ಯಾವುದು? ಬ್ರಹ್ಮಾ ತಂದೆಯ ನೇಚರ್ ಅದೇ ಬ್ರಾಹ್ಮಣರ ನೇಚರ್. ಅಂದಮೇಲೆ ಯೋಚಿಸಿ ಯಾವ ಸಮಯ ನನ್ನ ನೇಚರ್, ನನ್ನ ಸ್ವಭಾವ ಎಂದು ಹೇಳುತ್ತೀರಿ, ಬ್ರಾಹ್ಮಣ ಜೀವನದಲ್ಲಿ ಇಂತಹ ಶಬ್ದ- ನನ್ನ ನೇಚರ್, ನನ್ನ ಸ್ವಭಾವ... ಇರಲು ಸಾಧ್ಯವೇ? ಒಂದು ವೇಳೆ ಇದುವರೆಗೂ ಅಳಿಸುತ್ತಿದ್ದೀರಿ, ಹಾಗೂ ಹಿಂದಿನ ನೇಚರ್ ಇಮರ್ಜ್ ಆಗಿಬಿಡುತ್ತದೆ ಎಂದರೆ ತಿಳಿಯಬೇಕು ಈ ಸಮಯದಲ್ಲಿ ನಾನು ಬ್ರಾಹ್ಮಣ ಅಲ್ಲ ಕ್ಷತ್ರಿಯ ಆಗಿದ್ದೇನೆ, . ಹಳೆಯ ಸಂಸ್ಕಾರವನ್ನು ಅಳಿಸಲು ಯುದ್ಧ ಮಾಡುತ್ತಿದ್ದೇನೆ, ಎಂದ ಮೇಲೆ ಕೆಲವೊಮ್ಮೆ ಬ್ರಾಹ್ಮಣ, ಕೆಲವೊಮ್ಮೆ ಕ್ಷತ್ರಿಯರಾಗಿ ಬಿಡುತ್ತೀರಾ? ಏನೆಂದು ಕರೆಸಿಕೊಳ್ಳುತ್ತೀರಿ? ಕ್ಷತ್ರಿಯ ಕುಮಾರ ಅಥವಾ ಬ್ರಹ್ಮಾಕುಮಾರಿ? ಯಾರಾಗಿದ್ದೀರಿ? ಕ್ಷತ್ರಿಯ ಕುಮಾರ ಆಗಿದ್ದೀರಾ? ಬ್ರಹ್ಮಾಕುಮಾರ, ಬ್ರಹ್ಮಾಕುಮಾರಿಯರು. ಬೇರೆ ಹೆಸರಂತೂ ಇಲ್ಲವೇ ಇಲ್ಲ. ಯಾರನ್ನಾದರೂ ಈ ರೀತಿ ಕರೆಯುತ್ತೀರಾ- ಕ್ಷತ್ರಿಯ ಕುಮಾರ ಬನ್ನಿ ಎಂದು? ಈ ರೀತಿ ಹೇಳುತ್ತೀರೇ ಅಥವಾ ತಮ್ಮನ್ನು ತಾವು ಬ್ರಹ್ಮಾಕುಮಾರ ಅಲ್ಲ, ನಾನು ಕ್ಷತ್ರಿಯ ಕುಮಾರ ಆಗಿದ್ದೇನೆ ಎಂದು ಹೇಳುತ್ತೀರಾ? ಎಂದ ಮೇಲೆ ಬ್ರಾಹ್ಮಣ ಅರ್ಥ ಯಾರು ಬ್ರಹ್ಮಾ ತಂದೆಯ ನೇಚರ್ (ಸ್ವಭಾವ) ಅದು ಬ್ರಾಹ್ಮಣರ ನೇಚರ್. ಈ ಶಬ್ದವನ್ನು ಎಂದು ಸಹ ಹೇಳಬಾರದು, ತಪ್ಪಾಗಿಯೂ ಸಹ, ಯೋಚಿಸಲು ಬಾರದು- ಏನು ಮಾಡಲಿ ನನ್ನ ನೇಚರ್ ಆಗಿದೆ! ಇದು ನೆಪದ ಆಟವಾಗಿದೆ. ಈ ರೀತಿ ಹೇಳುವುದು ಸಹ ತಮ್ಮನ್ನು ತಾವು ತಪ್ಪಿಸಿಕೊಳ್ಳುವ ನೆಪವಾಗಿದೆ. ಹೊಸ ಜನ್ಮ ಆಯಿತು, ಹೊಸ ಜನ್ಮದಲ್ಲಿ ಹಳೆಯ ಸ್ವಭಾವ, ಹಳೆಯ ನೇಚರ್ ಎಲ್ಲಿಂದ ಎಮರ್ಜ್ ಆಗುತ್ತದೆ? ಹಾಗಾದರೆ ಸಂಪೂರ್ಣವಾಗಿ ಸತ್ತಿಲ್ಲ, ಸ್ವಲ್ಪ ಬದುಕಿದ್ದೀರಿ, ಸ್ವಲ್ಪ ಸತ್ತಿದ್ದೀರಿ? ಬ್ರಾಹ್ಮಣ ಜೀವನ ಎಂದರೆ ಬ್ರಹ್ಮಾ ತಂದೆಯ ಪ್ರತಿಯೊಂದು ಹೆಜ್ಜೆ ಬ್ರಾಹ್ಮಣರ ಹೆಜ್ಜೆಯಾಗಿರಬೇಕು.

ಅಂದಮೇಲೆ ಬಾಪ್ದಾದಾರವರು ಭಾಗ್ಯವನ್ನು ನೋಡುತ್ತಿದ್ದಾರೆ ಹಾಗೂ ಇಷ್ಟು ಶ್ರೇಷ್ಠ ಭಾಗ್ಯ, ಈ ಭಾಗ್ಯದ ಎದುರು ಈ ಮಾತು ಚೆನ್ನಾಗಿರುವುದಿಲ್ಲ. ಈ ಬಾರಿ ಮುಕ್ತಿ ವರ್ಷವನ್ನು ಆಚರಿಸುತ್ತಿದ್ದೀರಿ ಅಲ್ಲವೇ- ಏನೆಂದು ಕ್ಲಾಸ್ ಮಾಡಿಸುತ್ತೀರಿ? ಮುಕ್ತಿ ವರ್ಷವಾಗಿದೆ. ಹಾಗಾದರೆ ಮುಕ್ತಿ ವರ್ಷ ಆಗಿದೆಯೋ ಅಥವಾ 99 ನಲ್ಲಿ ಬರುವುದಿದೆಯೇ? 98 ನ ವರ್ಷ ಮುಕ್ತಿ ವರ್ಷ ಆಗಿದೆಯೇ? ಯಾರು ತಿಳಿಯುತ್ತೀರಿ ಈ ವರ್ಷವೇ ಮುಕ್ತಿ ವರ್ಷವಾಗಿದೆ, ಅವರು ಕೈ ಅಲುಗಾಡಿಸಿ. ನೋಡಿ ಕೈ ಅಲುಗಾಡಿಸುವುದು ಬಹಳ ಸಹಜವಾಗಿದೆ. ಏನಾಗುತ್ತದೆ ಎಂದರೆ- ವಾಯುಮಂಡಲದಲ್ಲಿ ಕುಳಿತಿದ್ದೀರಿ ಅಲ್ಲವೇ, ಖುಷಿಯಲ್ಲಿ ತೂಗುತ್ತಿದ್ದಿರಿ, ಅಂದಮೇಲೆ ಕೈ ಅಲುಗಾಡಿಸುತ್ತೀರಿ, ಆದರೆ ಹೃದಯದಿಂದ ಕೈ ಅಲುಗಾಡಿಸಿ, ಪ್ರತಿಜ್ಞೆ ಮಾಡಿ ಏನೇ ಹೊರಟು ಹೋಗಲಿ ಆದರೆ ಮುಕ್ತಿವರ್ಷದ ಪ್ರತಿಜ್ಞೆ ಹೋಗದಿರಲಿ. ಇಂತಹ ಪಕ್ಕಾ ಪ್ರತಿಜ್ಞೆ ಇದೆಯೇ? ನೋಡಿ ಸಂಭಾಲನೆ ಮಾಡಿ ಕೈ ಎತ್ತಿ. ಈ ಟಿವಿಯಲ್ಲಿ ಬರಲಿ ಅಥವಾ ಬರದಿರಲಿ, ಬಾಪ್ದಾದಾ ಅವರ ಬಳಿಯಂತೂ ನಿಮ್ಮ ಚಿತ್ರ ಬರುತ್ತಿದೆ. ಎಂದ ಮೇಲೆ ಇಂತಹ ಬಲಹೀನ ಮಾತುಗಳಿಂದ ಸಹ ಮುಕ್ತರಾಗಿ. ಇಂತಹ ಮಧುರ ಮಾತಾಗಿರಲಿ, ತಂದೆಯ ಸಮಾನ ಇರಲಿ, ಸದಾ ಪ್ರತಿಯೊಂದು ಆತ್ಮದ ಪ್ರತಿ ಶುಭ ಭಾವನೆಯ ಮಾತುಗಳಾಗಿರಲಿ, ಇದಕ್ಕೆ ಹೇಳಲಾಗುತ್ತದೆ ಯುಕ್ತಿಯುಕ್ತ ಮಾತು. ಸಾಧಾರಣ ಮಾತುಗಳು ಸಹ ನಡೆಯುತ್ತಾ ಓಡಾಡುತ್ತಾ ಇರಬಾರದು. ಯಾರೇ ಇದ್ದಕ್ಕಿದ್ದಂತೆ ಬಂದರೂ ಸಹ ಅನುಭವ ಮಾಡಲಿ ಇದು ಮಾತಾಗಿದೆಯೇ ಅಥವಾ ಮುತ್ತುಗಳಾಗಿವೆಯೇ ಎಂದು. ಶುಭ ಭಾವನೆಯ ಮಾತುಗಳು ವಜ್ರ, ಮುತ್ತುಗಳ ಸಮಾನವಾಗಿದೆ ಏಕೆಂದರೆ ಬಾಪ್ದಾದರವರು ಹಲವಾರು ಬಾರಿ ಈ ಸೂಚನೆಯನ್ನು ಕೊಟ್ಟುಬಿಟ್ಟಿದ್ದಾರೆ- ಸಮಯ ಪ್ರಮಾಣ ಸರ್ವ ಖಜಾನೆಗಳನ್ನು ಜಮಾ ಮಾಡಲು ಸ್ವಲ್ಪವೇ ಸಮಯವಿದೆ. ಒಂದು ವೇಳೆ ಈ ಸಮಯದಲ್ಲಿ - ಸಮಯದ ಖಜನೆಯನ್ನು, ಸಂಕಲ್ಪದ ಖಜಾನೆಯನ್ನು, ಮಾತಿನ ಖಜಾನೆಯನ್ನು, ಜ್ಞಾನ ಧನದ ಖಜಾನೆಯನ್ನು, ಯೋಗದ ಶಕ್ತಿಗಳ ಖಜಾನೆಯನ್ನು, ದಿವ್ಯ ಜೀವನದ ಸರ್ವ ಗುಣಗಳ ಖಜಾನೆಯನ್ನು ಜಮಾ ಮಾಡಿಕೊಳ್ಳದಿದ್ದರೆ ಮತ್ತೆ ಇಂತಹ ಜಮಾ ಮಾಡಿಕೊಳ್ಳುವ ಸಮಯ ಸಿಗುವುದು ಸಹಜವಾಗಿರುವುದಿಲ್ಲ. ಇಡೀ ದಿನದಲ್ಲಿ ತಮ್ಮ ಈ ಒಂದೊಂದು ಖಜಾನೆಯ ಅಕೌಂಟ್ (ಖಾತೆ) ಚೆಕ್ ಮಾಡಿ. ಹೇಗೆ ಸ್ಥೂಲ ಧನದ ಅಕೌಂಟ್ ಚೆಕ್ ಮಾಡಿಕೊಳ್ಳುತ್ತೀರಿ ಅಲ್ಲವೇ. ಇಷ್ಟು ಜಮಾ ಆಗಿದೆ.. ಇದೇ ರೀತಿ ಪ್ರತಿಯೊಂದು ಖಜಾನೆಯ ಅಕೌಂಟ್ ಜಮಾ ಮಾಡಿ. ಚೆಕ್ ಮಾಡಿ. ಸರ್ವ ಖಜಾನೆಯೂ ಬೇಕಾಗಿದೆ. ಒಂದುವೇಳೆ ಪಾಸ್ ವಿತ್ ಹಾನರ್ ಆಗಬೇಕೆಂದು ಬಯಸುತ್ತೀರಿ ಎಂದರೆ ಪ್ರತಿ ಖಜಾನೆಯ ಜಮಾದ ಖಾತೆ ಇಷ್ಟು ಸಂಪನ್ನ ಆಗಿರಬೇಕು ಯಾವುದು 21 ಜನ್ಮ ಜಮಾ ಆಗಿರುವ ಖಾತೆಯಿಂದ ಪ್ರಾರಬ್ಧ ವನ್ನು ಅನುಭವಿಸಲು ಸಾಧ್ಯವಾಗಬೇಕು. ಇನ್ನು ಸಮಯದ ಟೂ ಲೇಟ್ನ (ತುಂಬಾ ತಡ) ಗಂಟೆ ಬಾರಿಸಿಲ್ಲ ಆದರೆ ಬಾರಿಸಲಿದೆ. ದಿನ ಹಾಗೂ ದಿನಾಂಕವನ್ನು ಹೇಳುವುದಿಲ್ಲ. ಇದ್ದಕ್ಕಿದ್ದಂತೆ ಹೊರ ಬೀಳುವುದು- ಟೂ ಲೇಟ್. ಆಗ ಏನು ಮಾಡುವಿರಿ? ಆ ಸಮಯ ಜಮಾ ಮಾಡುವಿರೆ? ಎಷ್ಟು ಬಯಸಿದರು ಸಹ ಸಮಯ ಸಿಗುವುದಿಲ್ಲ. ಆದ್ದರಿಂದ ಬಾಪ್ದಾದಾರವರು ಹಲವು ಬಾರಿ ಸೂಚನೆಯನ್ನು ಕೊಡುತ್ತಿದ್ದಾರೆ- ಜಮಾ ಮಾಡಿಕೊಳ್ಳಿ- ಜಮಾ ಮಾಡಿಕೊಳ್ಳಿ- ಜಮಾ ಮಾಡಿಕೊಳ್ಳಿ. ಏಕೆಂದರೆ ಈಗಲೂ ಸಹ ನಿಮ್ಮ ಟೈಟಲ್ ಆಗಿದೆ- ಸರ್ವಶಕ್ತಿವಂತ, ಶಕ್ತಿವಂತ ಅಲ್ಲ, ಸರ್ವ- ಶಕ್ತಿವಂತ. ಭವಿಷ್ಯದಲ್ಲಿಯೂ ಸಹ ಸರ್ವ ಗುಣ ಸಂಪನ್ನ ಆಗಿರುವಿರಿ, ಕೇವಲ ಗುಣ ಸಂಪನ್ನರಲ್ಲ. ಈ ಎಲ್ಲಾ ಖಜಾನೆಗಳನ್ನು ಜಮಾ ಮಾಡಿಕೊಳ್ಳುವುದು ಎಂದರೆ ಗುಣ ಹಾಗೂ ಶಕ್ತಿಗಳು ಜಮಾ ಆಗುತ್ತಿವೆ ಎಂದು. ಒಂದೊಂದು ಖಜಾನೆಯದ್ದು ಗುಣ ಹಾಗೂ ಶಕ್ತಿಯ ಜೊತೆ ಸಂಬಂಧವಿದೆ. ಸಾಧಾರಣ ಮಾತು ಇಲ್ಲದಿದ್ದರೆ ಮಧುರ ಭಾಷೆ, ಇದು ಗುಣವಾಗಿದೆ. ಈ ರೀತಿ ಪ್ರತಿಯೊಂದು ಖಜಾನೆಯ ಕನೆಕ್ಷನ್( ಸಂಬಂಧ) ಇದೆ.

ಬಾಪ್ದಾದಾ ಅವರಿಗೆ ಮಕ್ಕಳೊಂದಿಗೆ ಪ್ರೀತಿ ಇದೆ ಆದ್ದರಿಂದ ಮತ್ತೆ-ಮತ್ತೆ ಸೂಚನೆಯನ್ನು ಕೊಡುತ್ತಿದ್ದಾರೆ ಏಕೆಂದರೆ ಇಂದಿನ ಸಭೆಯಲ್ಲಿ ಎಲ್ಲಾ ವರೈಟಿ(ವಿವಿಧತೆ) ಇದೆ. ಚಿಕ್ಕ ಮಕ್ಕಳು ಇದ್ದಾರೆ, ಶಿಕ್ಷಕಿಯರು ಇದ್ದಾರೆ ಏಕೆಂದರೆ ಶಿಕ್ಷಕಿಯರೇ ಸಂಪೂರ್ಣರಾಗಿದ್ದಾರೆ. ಕುಮಾರಿಯರು ಇದ್ದಾರೆ, ಪ್ರವೃತ್ತಿಯವರು ಇದ್ದಾರೆ. ಎಲ್ಲಾ ವರೈಟಿಯವರು ಇದ್ದಾರೆ. ಒಳ್ಳೆಯದು. ಎಲ್ಲರಿಗೂ ಚಾನ್ಸ್ ಕೊಟ್ಟಿದ್ದಾರೆ, ಇದು ಬಹಳ ಒಳ್ಳೆಯದಾಗಿದೆ. ಮಕ್ಕಳದ್ದು ಬಹಳ ಸಮಯದ ಅರ್ಜಿಯಾಗಿದೆ. ಆಗಿತ್ತು ಅಲ್ಲವೇ ಮಕ್ಕಳೇ? ನಮಗೆ ಮಿಲನ ಮಾಡುವ ಅವಕಾಶ ಯಾವಾಗ ಸಿಗುವುದು? ಎಂದ ಮೇಲೆ ಒಳ್ಳೆಯದಾಯಿತು- ಎಲ್ಲಾ ವೆರೈಟಿಯ ಹೂಗುಚ್ಚ ತಂದೆಯ ಸಮ್ಮುಖದಲ್ಲಿದೆ.

ಒಳ್ಳೆಯದು ಬಾಪ್ದಾದಾ ಅವರಿಗೆ ಇಡೀ ವಿಶ್ವದ ನಿಮಿತ್ತ ಶಿಕ್ಷಕಿಯರ ಪ್ರತಿ ಒಂದು ಶುಭ ಭಾವನೆ ಇದೆ- ಈ ವರ್ಷ ಯಾರಿಂದಲೂ ಯಾವುದೇ ದೂರು ಬರದಿರಲಿ ಎಂದು, ದೂರುಗಳ ಫೈಲ್ ಸಮಾಪ್ತಿ ಆಗಬೇಕು. ಬಾಪ್ದಾದಾ ಅವರ ಬಳಿ ಇಲ್ಲಿಯವರೆಗೂ ಬಹಳ ಫೈಲುಗಳು ಇದೆ. ಎಂದ ಮೇಲೆ ಈ ವರ್ಷ ದೂರುಗಳ ಫೈಲ್ ಸಮಾಪ್ತಿಯಾಗಬೇಕು. ಎಲ್ಲರೂ ಫೈನ್( ಚೆನ್ನಾಗಿ) ಆಗಿರಬೇಕು. ಫೈನ್ ಗಿಂತ ರಿಫೈನ್ ಆಗಿರಬೇಕು(ಉತ್ತೀರ್ಣ). ಈ ರೀತಿ ಆಗಲು ಇಚ್ಛೆ ಇದೆಯೇ? ಯಾರೇ ಹೇಗೆ ಇರಲಿ, ಅವರೊಂದಿಗೆ ನಡೆಯುವ ವಿಧಿಯನ್ನು ಕಲಿಯಿರಿ, . ಯಾರೇ ಏನೇ ಮಾಡಲಿ, ಮತ್ತೆ ಮತ್ತೆ ವಿಘ್ನರೂಪರಾಗಿ ಸಮ್ಮುಖದಲ್ಲಿ ಬರುವಂತಹವರೇ ಆಗಿರಲಿ ಆದರೆ ಈ ವಿಘ್ನಗಳಲ್ಲಿ ಸಮಯವನ್ನು ತೊಡಗಿಸುವುದು, ಇದು ಎಲ್ಲಿಯವರೆಗೂ ನಡೆಯುವುದು? ಇದರ ಸಮಾಪ್ತಿ ಸಮಾರೋಹವಂತು ಆಗಬೇಕಲ್ಲವೇ? ಹಾಗಾದರೆ ಅನ್ಯರನ್ನು ನೋಡಬೇಡಿ. ಇವರು ಹೀಗೆ ಮಾಡುತ್ತಾರೆ, ನಾನು ಏನು ಮಾಡಲಿ? ಒಂದು ವೇಳೆ ಅವರು ಬೆಟ್ಟದಂತೆ ಇದ್ದರೆ ನಾನು ಬದಿಗೆ ಸರಿಯಬೇಕು, ಬೆಟ್ಟವನ್ನು ಸರಿಸಲು ಪ್ರಯತ್ನ ಪಡಬಾರದು. ಇವರು ಬದಲಾದರೆ ನಾನು ಬದಲಾಗುತ್ತೇನೆ- ಇದಾಗಿದೆ ಬೆಟ್ಟ ಬದಿಗೆ ಸೆರೆದರೆ ನಾನು ಮುಂದೆ ಹೋಗುತ್ತೇನೆ ಎನ್ನುವುದು. ಬೆಟ್ಟವು ಸರಿಯುವುದಿಲ್ಲ, ನೀವು ಕೂಡ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಒಂದು ವೇಳೆ ಆ ಆತ್ಮದ ಪ್ರತಿ ಶುಭ ಭಾವನೆ ಇದ್ದರೆ, ಸೂಚನೆಯನ್ನು ಕೊಡಬೇಕು ಹಾಗೂ ಮನಸ್ಸು ಬುದ್ಧಿಯಿಂದ ಖಾಲಿಯಾಗಿರಬೇಕು. ಸ್ವಯಂ ಅನ್ನು ಆ ವಿಘ್ನಗಳ ಸ್ವರೂಪ ಆಗುವಂತಹ ಯೋಚನೆಯಲ್ಲಿ ತಂದುಕೊಳ್ಳಬಾರದು. ಯಾವಾಗ ನಂಬವಾರ್ ಆಗಿದ್ದೀರಿ ಎಂದ ಮೇಲೆ ಸ್ಟೇಜ್ ಸಹ ನಂಬವಾರ್ ಆಗಿರುತ್ತದೆ ಆದರೆ ನಾವು ನಂಬರ್ ಒನ್ ಆಗಬೇಕು. ಇಂತಹ ವಿಘ್ನ ಹಾಗೂ ವ್ಯರ್ಥ ಸಂಕಲ್ಪ ನಡೆಸುವಂತಹ ಆತ್ಮಗಳ ಪ್ರತಿ ಸ್ವಯಂ ಪರಿವರ್ತನೆಯಾಗಿ ಅವರ ಪ್ರತಿ ಶುಭ ಭಾವನೆ ಇಡುತ್ತಾ ಹೋಗಿ. ಕಡಿಮೆ ಸಮಯ ಹಿಡಿಸುತ್ತದೆ, ಕಡಿಮೆ ಪರಿಶ್ರಮ ಹಿಡಿಸುತ್ತದೆ ಆದರೆ ಕೊನೆಯಲ್ಲಿ ಯಾರು ಸ್ವ ಪರಿವರ್ತನೆ ಮಾಡುತ್ತಾರೆ, ವಿಜಯದ ಮಾಲೆ ಅವರ ಕೊರಳಿಗೆ ಏರುತ್ತದೆ. ಶುಭ ಭಾವನೆಯಿಂದ ಒಂದು ವೇಳೆ ಅವರ ಪರಿವರ್ತನೆ ಮಾಡಲು ಆದರೆ ಮಾಡಿ, ಇಲ್ಲವಾದರೆ ಸೂಚನೆಗಳನ್ನು ಕೊಡಿ, . ತಮ್ಮ ಜವಾಬ್ದಾರಿಯನ್ನು ಮಾಡಿ ಮುಗಿಸಿ ಹಾಗೂ ಸ್ವ ಪರಿವರ್ತನೆ ಮಾಡಿಕೊಂಡು ಹಾರುತ್ತಾ ಹೋಗಿ. ಈ ವಿಘ್ನ ರೂಪವೂ ಸಹ ಚಿನ್ನದ ಸೆಳೆತದ ದಾರವಾಗಿದೆ. ಇದು ಸಹ ಹಾರಲು ಬಿಡುವುದಿಲ್ಲ. ಇದು ಬಹಳ ಸೂಕ್ಷ್ಮ ಹಾಗೂ ಬಹಳ ಸತ್ಯತೆಯ ಪರದೆಯ ದಾರವಾಗಿದೆ. ಎಲ್ಲರೂ ಯೋಚಿಸುತ್ತಾರೆ ಇದಂತೂ ಸತ್ಯ ಮಾತಾಗಿದೆ ಅಲ್ಲವೇ. ಹೀಗೆ ಆಗುತ್ತದೆ ಅಲ್ಲವೇ. ಹೀಗೆ ಆಗಬಾರದಿತ್ತು ಅಲ್ಲವೇ. ಆದರೆ ಎಲ್ಲಿಯವರೆಗೂ ನೋಡುತ್ತಾ ಇರುವಿರಿ, ಎಲ್ಲಿಯವರೆಗೂ ಕಾಯುತ್ತಾ ಇರುವಿರಿ? ಈಗ ಸ್ವಯಂ ಅನ್ನು ಸೂಕ್ಷ್ಮ ದಾರಗಳಿಂದ ಸಹ ಮುಕ್ತರನ್ನಾಗಿ ಮಾಡಿ. ಮುಕ್ತಿ ವರ್ಷವನ್ನು ಆಚರಿಸಿ ಆದ್ದರಿಂದ ಬಾಪ್ದಾದಾರವರು ಮಕ್ಕಳ ಯಾವ ಆಸೆಗಳಿವೆ, ಉಮಂಗವಿದೆ, ಉತ್ಸಾಹವಿದೆ, ಇವುಗಳಿಂದ ಎಲ್ಲ ಫಂಕ್ಷನ್(ಕಾರ್ಯಕ್ರಮ) ಆಚರಿಸಿ ಪೂರ್ಣಗೊಳಿಸುತ್ತಿದ್ದಾರೆ. ಆದರೆ ಈ ವರ್ಷದ ಅಂತಿಮ ಕಾರ್ಯಕ್ರಮ ಮುಕ್ತಿ ವರ್ಷದ ಕಾರ್ಯಕ್ರಮವಾಗಿರಲಿ. ಫಂಕ್ಷನ್ ಗಳಲ್ಲಿ ದಾದಿಯರಿಗೆ ಉಡುಗೊರೆಯನ್ನು ಸಹ ಕೊಡುತ್ತೀರಿ. ಹಾಗಾದರೆ ಬಾಪ್ದಾದರವರಿಗೆ ಈ ಮುಕ್ತಿ ವರ್ಷದ ಕಾರ್ಯಕ್ರಮದಲ್ಲಿ ಸ್ವಯಂನ ಸಂಪೂರ್ಣತೆಯ ಉಡುಗೊರೆಯನ್ನು ಕೊಡಿ. ಒಳ್ಳೆಯದು.

ನಾಲ್ಕಾರು ಕಡೆಯ ಪರಮಾತ್ಮ ಪಾಲನೆ, ವಿದ್ಯೆ ಹಾಗೂ ಶ್ರೀಮತದ ಭಾಗ್ಯದ ಅಧಿಕಾರಿ ವಿಶೇಷ ಆತ್ಮಗಳಿಗೆ, ಸದಾ ಯೋಚಿಸುವುದು ಹಾಗೂ ಸ್ವರೂಪವಾಗುವುದು ಎರಡು ಸಮಾನ ಮಾಡುವಂತಹ ತಂದೆಯ ಸಮಾನ ಆತ್ಮಗಳಿಗೆ, ಸದಾ ಪರಮಾತ್ಮ ವಿಲ್ ಪವರ್ ನ ಮುಖಾಂತರ ಸ್ವಯಂನಲ್ಲಿ ಹಾಗೂ ಸೇವೆಯಲ್ಲಿ ಸಹಜ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ನಿಮಿತ್ತ ಸೇವಾಧಾರಿ ಮಕ್ಕಳಿಗೆ, ಸದಾ ತಂದೆಯನ್ನು ಕಂಬೈನ್ಡ್ ರೂಪದಲ್ಲಿ ಅನುಭವ ಮಾಡುವಂತಹ, ಸದಾ ಜೊತೆಯನ್ನು ನಿಭಾಯಿಸುವಂತಹ ಎಲ್ಲಾ ಮಕ್ಕಳಿಗೂ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ,

ವರದಾನ:
ಸಂಬಂಧ-ಸಂಪರ್ಕದಲ್ಲಿ ಸಂತುಷ್ಠತೆಯ ವಿಶೇಷತೆಯ ಮೂಲಕ ಮಾಲೆಯ ಮಣಿಯಾಗುವಂತಹ ಸಂತುಷ್ಠಮಣಿ ಭವ.

ಸಂಗಮಯುಗ ಸಂತುಷ್ಠತೆಯ ಯುಗವಾಗಿದೆ. ಯಾರು ಸ್ವಯಂ ಸಹ ಸಂತುಷ್ಠರಾಗಿದ್ದಾರೆ ಮತ್ತು ಸಂಬಂಧ-ಸಂಪರ್ಕದಲ್ಲಿಯೂ ಸಹ ಸಂತುಷ್ಠರಾಗಿರುತ್ತಾರೆ ಹಾಗೂ ಸಂತುಷ್ಠರನ್ನಾಗಿ ಮಾಡುತ್ತಾರೆ ಅವರೇ ಮಾಲೆಯ ಮಣಿಯಾಗುತ್ತಾರೆ ಏಕೆಂದರೆ ಮಾಲೆ ಸಂಬಂಧದಿಂದ ಆಗುವುದು. ಒಂದುವೇಳೆ ಮಣಿಯು ಮಣಿಯ ಜೊತೆ ಸಂಪರ್ಕ ಆಗದೇ ಹೋದಾಗ ಮಾಲೆ ಆಗುವುದಿಲ್ಲ. ಆದ್ದರಿಂದ ಸಂತುಷ್ಠಮಣಿಯಾಗಿ ಸದಾ ಸಂತುಷ್ಠರಾಗಿರಿ ಮತ್ತು ಸರ್ವರನ್ನು ಸಂತುಷ್ಠ ಮಾಡಿ. ಯಾವುದೇ ಪ್ರಕಾರದ ಕಿಟ್-ಪಿಟ್ ಇರಬಾರದು.

ಸ್ಲೋಗನ್:
ವಿಘ್ನಗಳ ಕೆಲಸವಾಗಿದೆ ಬರುವುದು ಮತ್ತು ನಿಮ್ಮ ಕೆಲಸವಾಗಿದೆ ವಿಘ್ನ-ವಿನಾಶಕರಾಗುವುದು.