04.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಪಾರಲೌಕಿಕ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ, ಆದ್ದರಿಂದ ತಮ್ಮದೆಲ್ಲವನ್ನು ವಿನಿಮಯ (ಎಕ್ಸ್ ಚೇಂಜ್) ಮಾಡಿಬಿಡಿ, ಇದು ಬಹಳ ದೊಡ್ಡ ವ್ಯಾಪಾರವಾಗಿದೆ"

ಪ್ರಶ್ನೆ:
ನಾಟಕದ ಜ್ಞಾನವು ಯಾವ ಮಾತಿನಲ್ಲಿ ನೀವು ಮಕ್ಕಳಿಗೆ ಬಹಳ ಸಹಯೋಗ ನೀಡುತ್ತದೆ?

ಉತ್ತರ:
ಶರೀರಕ್ಕೆ ಯಾವುದೇ ಖಾಯಿಲೆ ಬಂದಾಗ ನಾಟಕದ ಜ್ಞಾನವು ಬಹಳ ಸಹಯೋಗ ನೀಡುತ್ತದೆ ಏಕೆಂದರೆ, ನಿಮಗೆ ಗೊತ್ತಿದೆ - ಈ ನಾಟಕವು ಚಾಚೂ ತಪ್ಪದೆ ಪುನರಾವರ್ತನೆ ಆಗುತ್ತದೆ. ಇದರಲ್ಲಿ ಅಳುವ, ಕೂಗಾಡುವ ಯಾವುದೇ ಮಾತಿಲ್ಲ. ಕರ್ಮಗಳ ಲೆಕ್ಕಾಚಾರವು ಸಮಾಪ್ತಿ ಆಗಬೇಕಾಗಿದೆ. 21 ಜನ್ಮಗಳ ಸುಖದ ಹೋಲಿಕೆಯಲ್ಲಿ ಈ ದುಃಖವು ಏನೂ ಅನ್ನಿಸುವುದಿಲ್ಲ. ಪೂರ್ಣ ಜ್ಞಾನ ಇಲ್ಲದಿದ್ದರೆ ಚಡಪಡಿಸುತ್ತಾರೆ.

ಓಂ ಶಾಂತಿ.
ಭಗವಾನುವಾಚ - ಯಾರಿಗೆ ತಮ್ಮದೇ ಆದಂತಹ ಶರೀರವಿಲ್ಲವೋ ಅವರಿಗೆ ಭಗವಂತನೆಂದು ಹೇಳಲಾಗುವುದು ಹಾಗಾದರೆ, ಭಗವಂತನಿಗೆ ನಾಮ, ರೂಪ, ದೇಶ, ಕಾಲವಿಲ್ಲವೆಂದಲ್ಲ. ಭಗವಂತನಿಗೆ ಶರೀರವಿಲ್ಲ. ಉಳಿದೆಲ್ಲಾ ಆತ್ಮಗಳಿಗೆ ತಮ್ಮ-ತಮ್ಮ ಶರೀರವಿದೆ. ಈಗ ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿದು ಕುಳಿತುಕೊಳ್ಳಿ. ವಾಸ್ತವದಲ್ಲಿ ಆತ್ಮವೇ ಕೇಳುತ್ತದೆ, ಪಾತ್ರವನ್ನು ಅಭಿನಯಿಸುತ್ತದೆ, ಶರೀರದ ಮೂಲಕ ಕರ್ಮ ಮಾಡುತ್ತದೆ. ಆತ್ಮವೇ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ಒಳ್ಳೆಯ-ಕೆಟ್ಟ ಕರ್ಮಗಳ ಫಲವನ್ನು ಆತ್ಮವೇ ಶರೀರದ ಜೊತೆ ಅನುಭವಿಸುತ್ತದೆ. ಶರೀರವಿಲ್ಲದೆ ಯಾವುದೇ ಲೆಕ್ಕಾಚಾರವನ್ನು ಭೋಗಿಸಲು ಸಾಧ್ಯವಿಲ್ಲ, ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮ ಎಂದು ತಿಳಿದು ಕುಳಿತುಕೊಳ್ಳಿ. ತಂದೆಯು ನಮಗೆ ತಿಳಿಸುತ್ತಾರೆ - ನಾವು ಆತ್ಮಗಳು ಈ ಶರೀರದ ಮೂಲಕ ಕೇಳುತ್ತಿದ್ದೇವೆ. ಭಗವಾನುವಾಚ - ಮನ್ಮನಾಭವ. ದೇಹ ಸಹಿತ ದೇಹದ ಎಲ್ಲಾ ಧರ್ಮಗಳನ್ನು ತ್ಯಾಗ ಮಾಡಿ ತಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದನ್ನು ತಂದೆ ಒಬ್ಬರೇ ತಿಳಿಸುತ್ತಾರೆ, ಅವರೇ ಗೀತೆಯ ಭಗವಂತನಾಗಿದ್ದಾರೆ. ಭಗವಂತ ಅಂದರೇನೆ ಜನನ-ಮರಣ ರಹಿತ. ತಂದೆಯು ತಿಳಿಸುತ್ತಾರೆ - ನನ್ನ ಜನ್ಮವು ಅಲೌಕಿಕವಾಗಿದೆ. ನಾನು ಹೇಗೆ ಇವರಲ್ಲಿ ಪ್ರವೇಶ ಮಾಡುತ್ತೇನೆಯೋ ಹಾಗೆಯೇ ಮತ್ತ್ಯಾರೂ ಜನ್ಮ ಪಡೆಯುವುದಿಲ್ಲ. ಇದನ್ನು ಬಹಳ ಚೆನ್ನಾಗಿ ನೆನಪು ಮಾಡಬೇಕು. ಎಲ್ಲವನ್ನು ಭಗವಂತನೇ ಮಾಡುತ್ತಾರೆ, ಪೂಜ್ಯ-ಪೂಜಾರಿ, ಕಲ್ಲು-ಮುಳ್ಳು ಎಲ್ಲವೂ ಪರಮಾತ್ಮನಾಗಿದ್ದಾರೆ ಎಂದಲ್ಲ. 24 ಅವತಾರ, ಮೀನು-ಮೊಸಳೆ ಅವತಾರ, ಪರುಶುರಾಮನ ಅವತಾರವೆಂದು ತೋರಿಸುತ್ತಾರೆ. ಈಗ ಅರ್ಥವಾಗುತ್ತದೆ - ಭಗವಂತನು ಕುಳಿತು ಪರುಶರಾಮನ ಅವತಾರವನ್ನು ತೆಗೆದುಕೊಳ್ಳುತ್ತಾರೆಯೇ ಮತ್ತು ಕೊಡಲಿಯನ್ನು ತೆಗೆದುಕೊಂಡು ಹಿಂಸೆ ಮಾಡುತ್ತಾರೆಯೇ? ಇದು ತಪ್ಪಾಗಿದೆ. ಹೇಗೆ ಪರಮಾತ್ಮನನ್ನು ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆಯೋ ಹಾಗೆಯೇ, ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ. ಇದಕ್ಕೆ ಘೋರ ಅಂಧಕಾರ ಅರ್ಥಾತ್ ಜ್ಞಾನವಿಲ್ಲ ಎಂದು ಹೇಳಲಾಗುತ್ತದೆ. ಜ್ಞಾನದಿಂದ ಬೆಳಕಾಗುತ್ತದೆ, ಈಗ ಅಜ್ಞಾನ, ಘೋರ ಅಂಧಕಾರವಾಗಿದೆ. ಈಗ ನೀವು ಮಕ್ಕಳು ಘೋರ ಬೆಳಕಿನಲ್ಲಿ ಇದ್ದೀರಿ. ನೀವು ಎಲ್ಲರನ್ನು ಚೆನ್ನಾಗಿ ಅರಿತುಕೊಂಡಿದ್ದೀರಿ. ಯಾರು ಅರಿತುಕೊಂಡಿಲ್ಲವೋ ಪೂಜೆ, ಇತ್ಯಾದಿಗಳನ್ನು ಮಾಡುತ್ತಿರುತ್ತಾರೆ. ನೀವು ಎಲ್ಲವನ್ನೂ ಅರಿತಿರುವುದರಿಂದ ಪೂಜೆ ಮಾಡುವ ಅವಶ್ಯಕತೆ ಇಲ್ಲ. ನೀವು ಈಗ ಪೂಜಾರಿತನದಿಂದ ಮುಕ್ತರಾಗಿದ್ದೀರಿ. ಪೂಜ್ಯ ದೇವೀ-ದೇವತೆಗಳಾಗಲು ನೀವು ಪುರುಷಾರ್ಥ ಮಾಡುತ್ತಿದ್ದೀರಿ. ನೀವೇ ಪೂಜ್ಯ ದೇವೀ ದೇವತೆಗಳಾಗಿದ್ದಿರಿ ನಂತರ ಪೂಜಾರಿ ಮನುಷ್ಯರಾದಿರಿ. ಮನುಷ್ಯರಲ್ಲಿ ಆಸುರೀ ಗುಣಗಳಿವೆ ಆದ್ದರಿಂದ, ಮನುಷ್ಯರನ್ನು ದೇವತೆಗಳನ್ನಾಗಿ ಮಾಡಿದ್ದಾರೆ ಎಂದು ಗಾಯನವಿದೆ. ಒಂದು ಸೆಕೆಂಡಿನಲ್ಲಿ ತಂದೆಯು ದೇವತೆಗಳನ್ನಾಗಿ ಮಾಡುತ್ತಾರೆ. ತಂದೆಯನ್ನು ತಿಳಿದ ನಂತರ ಶಿವಬಾಬಾ ಎಂದು ಹೇಳತೊಡುಗುತ್ತಾರೆ. ತಂದೆ ಎಂದು ಹೇಳುವುದರಿಂದ ನಾವು ಸ್ವರ್ಗಕ್ಕೆ ಮಾಲೀಕರಾಗುತ್ತೇವೆ ಎಂದು ಹೃದಯದಲ್ಲಿ ಬರುತ್ತದೆ. ಇವರು ಬೇಹದ್ದಿನ ತಂದೆಯಾಗಿದ್ದಾರೆ, ಈಗ ನೀವು ಬಂದು ತಕ್ಷಣ ಪಾರಲೌಕಿಕ ತಂದೆಯ ಮಕ್ಕಳಾಗಿದ್ದೀರಿ, ಮತ್ತೆ ತಂದೆಯೇ ಹೇಳುತ್ತಾರೆ - ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಈಗ ಪಾರಲೌಕಿಕ ತಂದೆಯಿಂದ ಆಸ್ತಿಯನ್ನು ಪಡೆಯಿರಿ. ಲೌಕಿಕ ಆಸ್ತಿಯನ್ನಂತೂ ನೀವು ಪಡೆಯುತ್ತಾ ಬಂದಿದ್ದೀರಿ, ಈಗ ಲೌಕಿಕ ಆಸ್ತಿಯನ್ನು ಪಾರಲೌಕಿಕ ಆಸ್ತಿಯ ಜೊತೆಗೆ ವಿನಿಮಯ ಮಾಡಿ. ಎಷ್ಟು ಒಳ್ಳೆಯ ವ್ಯಾಪಾರವಾಗಿದೆ! ಲೌಕಿಕ ಆಸ್ತಿಯಲ್ಲಿ ಏನಿರುತ್ತದೆ? ಇದು ಬೇಹದ್ದಿನ ಆಸ್ತಿಯಾಗಿದೆ. ಅದರಲ್ಲಿಯೂ ಬಡವರೇ ಆಸ್ತಿಯನ್ನು ಬೇಗನೇ ಪಡೆಯುತ್ತಾರೆ. ತಂದೆಯು ಬಡವರನ್ನು ದತ್ತು ಮಾಡಿಕೊಳ್ಳುತ್ತಾರೆ, ತಂದೆಯು ಬಡವರ ಬಂಧು ಆಗಿದ್ದಾರೆ. ನಾನು ಬಡವರ ಬಂಧು ಆಗಿದ್ದೇನೆ ಎಂಬ ಗಾಯನವಿದೆ. ಭಾರತವೇ ಎಲ್ಲದಕ್ಕಿಂತ ಬಡ ದೇಶವಾಗಿದೆ, ಅಂದಾಗ ನಾನು ಭಾರತದಲ್ಲಿಯೇ ಬರುತ್ತೇನೆ, ಬಂದು ನಾನು ಇದನ್ನು ಸಾಹುಕಾರ ದೇಶವನ್ನಾಗಿ ಮಾಡುತ್ತೇನೆ. ಭಾರತದ ಮಹಿಮೆಯು ಬಹಳ ಇದೆ, ಇದು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ ಆದರೆ, ಕಲ್ಪದ ಆಯಸ್ಸು ಹೆಚ್ಚು ಮಾಡಿರುವ ಕಾರಣ ಎಲ್ಲವನ್ನು ಮರೆತು ಹೋಗಿದ್ದಾರೆ. ಭಾರತವು ಬಹಳ ಸಾಹುಕಾರ ಆಗಿತ್ತು, ಈಗ ಬಡ ರಾಷ್ಟ್ರವಾಗಿದೆ. ಮೊದಲು ಆಹಾರ-ಧಾನ್ಯ ಎಲ್ಲವೂ ಇಲ್ಲಿಂದ ವಿದೇಶಕ್ಕೆ ಹೋಗುತ್ತಿತ್ತು. ಈಗ ಭಾರತವು ಬಹಳ ಬಡ ದೇಶವಾಗಿದೆ, ಆದ್ದರಿಂದ ಸಹಯೋಗ ನೀಡುತ್ತೇವೆ ಎಂದು ತಿಳಿಯುತ್ತಾರೆ ಯಾರಾದರೂ ದೊಡ್ಡ ಮನುಷ್ಯ ಫೇಲಾದರೆ, ಪರಸ್ಪರ ತೀರ್ಮಾನಿಸಿ ಸಹಾಯ ನೀಡುತ್ತಾರೆ. ಈ ಭಾರತವು ಎಲ್ಲದಕ್ಕಿಂತ ಪ್ರಾಚೀನವಾಗಿದೆ. ಭಾರತವೇ ಸ್ವರ್ಗವಾಗಿತ್ತು. ಮೊಟ್ಟಮೊದಲು ಆದಿ ಸನಾತನ ದೇವೀ-ದೇವತಾ ಧರ್ಮವಿತ್ತು, ಕೇವಲ ಸಮಯವನ್ನು ಹೆಚ್ಚು ಮಾಡಿರುವ ಕಾರಣ ತಬ್ಬಿಬ್ಬಾಗಿದ್ದಾರೆ. ಭಾರತಕ್ಕೆ ಎಷ್ಟೊಂದು ಸಹಯೋಗ ಕೊಡುತ್ತಾರೆ. ತಂದೆಯೂ ಸಹ ಭಾರತದಲ್ಲಿಯೇ ಬರಬೇಕಾಗಿದೆ. ಮಕ್ಕಳಿಗೆ ಗೊತ್ತಿದೆ - ನಾವು ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಲೌಕಿಕ ತಂದೆಯ ಆಸ್ತಿಯನ್ನು ಪಾರಲೌಕಿಕ ತಂದೆಯೊಂದಿಗೆ ವಿನಿಮಯ ಮಾಡುತ್ತೇವೆ. ಹೇಗೆ ಈ ಬ್ರಹ್ಮಾರವರು ಮಾಡಿದರು. ತಂದೆಯಿಂದ ಕಿರೀಟ, ಸಿಂಹಾಸನವು ಸಿಗುತ್ತದೆ ಎಂಬುದನ್ನು ನೋಡಿದರು. ಆ ರಾಜ್ಯಭಾಗ್ಯದಲ್ಲಿ ಈ ಗುಲಾಮಿತನವೆಲ್ಲಿ! ಎನಿಸಿತು. ಫಾಲೋ ಫಾದರ್ ಎಂದು ಹೇಳಲಾಗುತ್ತದೆ. ಹಸಿವಿನಿಂದ ಸಾಯುವ ಮಾತೇ ಇಲ್ಲ. ತಂದೆಯು ತಿಳಿಸುತ್ತಾರೆ - ನಿಮಿತ್ತರಾಗಿ ಸಂಭಾಲನೆ ಮಾಡಿ. ತಂದೆಯು ಬಂದು ಸಹಜ ಮಾರ್ಗವನ್ನು ತಿಳಿಸುತ್ತಾರೆ. ಮಕ್ಕಳು ಬಹಳ ಕಷ್ಟವನ್ನು ನೋಡಿದ್ದಾರೆ. ಆದ್ದರಿಂದಲೇ ಹೇ! ಪರಮಪಿತ ಪರಮಾತ್ಮ ದಯೆ ತೋರಿಸು ಎಂದು ಕರೆಯುತ್ತಾರೆ. ಸುಖದಲ್ಲಿ ಯಾರೂ ಸಹ ತಂದೆಯನ್ನು ನೆನಪು ಮಾಡುವುದಿಲ್ಲ. ದುಃಖದಲ್ಲಿ ಎಲ್ಲರೂ ನೆನಪು ಮಾಡುತ್ತಾರೆ. ಹೇಗೆ ಸ್ಮರಣೆ ಮಾಡುವುದು ಎಂದು ಈಗ ತಂದೆಯು ತಿಳಿಸುತ್ತಾರೆ. ನಿಮಗಂತೂ ಸ್ಮರಣೆ ಮಾಡುವುದು ಬರುವುದಿಲ್ಲ. ನಾನೇ ಬಂದು ತಿಳಿಸುತ್ತೇನೆ. ಮಕ್ಕಳೇ, ತಮ್ಮನ್ನು ಆತ್ಮ ಎಂದು ತಿಳಿಯಿರಿ ಮತ್ತು ಪಾರಲೌಕಿಕ ತಂದೆಯನ್ನು ನೆನಪು ಮಾಡಿ ಆಗ ನಿಮ್ಮ ಪಾಪಗಳು ತುಂಡಾಗುತ್ತವೆ. ಸ್ಮರಣೆ ಮಾಡಿ-ಮಾಡಿ ಸುಖ ಪಡೆಯಿರಿ. ಆಗ ಶರೀರದ ಕಲಹ-ಕ್ಲೇಶಗಳು ಕಳೆಯುತ್ತವೆ. ಯಾವುದೆಲ್ಲಾ ಶರೀರದ ದುಃಖವಿದೆಯೋ ಎಲ್ಲವೂ ಕಳೆಯುತ್ತದೆ. ನಿಮ್ಮ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿಬಿಡುತ್ತವೆ. ನೀವು ಇಂತಹ ಕಂಚನವಾಗಿದ್ದೀರಿ, ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಆತ್ಮನಲ್ಲಿ ತುಕ್ಕು ಏರಿಬಿಟ್ಟಿದೆ. ನಂತರ ಶರೀರವು ಹಳೆಯದೇ ಸಿಗುತ್ತದೆ. ಹೇಗೆ ಚಿನ್ನದಲ್ಲಿ ಬೇರೆಕೆ ಮಾಡಲಾಗುತ್ತದೆ. ಶುದ್ಧ ಚಿನ್ನವಾಗಿದ್ದರೆ ಆಭರಣಗಳು ಶುದ್ಧವಾಗಿರುತ್ತದೆ, ಅದರಲ್ಲಿ ಹೊಳಪು ಇರುತ್ತದೆ. ಬೆರೆಕೆ ಆಗಿರುವ ಆಭರಣಗಳು ಕಪ್ಪಾಗಿಬಿಡುತ್ತವೆ. ತಂದೆಯು ತಿಳಿಸುತ್ತಾರೆ - ನಿಮ್ಮಲ್ಲಿಯೂ ತುಕ್ಕು ಹಿಡಿದಿದೆ, ಹೇಗೆ ಬಿಡುತ್ತದೆ? ತಂದೆಯೊಂದಿಗೆ ಯೋಗವನ್ನು ಇಡಿ. ಓದಿಸುವವರ ಜೊತೆ ಬುದ್ಧಿಯೋಗವನ್ನು ಇಡಲಾಗುತ್ತದೆಯಲ್ಲವೇ. ಇವರಂತೂ ತಂದೆ, ಗುರು, ಶಿಕ್ಷಕ ಎಲ್ಲವೂ ಆಗಿದ್ದಾರೆ. ಅವರನ್ನು ನೆನಪು ಮಾಡಿದರೆ ,ನಿಮ್ಮ ವಿಕರ್ಮಗಳು ವಿನಾಶ ಆಗುತ್ತವೆ ಮತ್ತು ಅವರೇ ನಿಮಗೆ ಓದಿಸುತ್ತಾರೆ. ಪತಿತಪಾವನ, ಸರ್ವಶಕ್ತಿವಂತ ಎಂದು ನೀವು ನನಗೇ ಹೇಳುತ್ತೀರಿ. ಕಲ್ಪ-ಕಲ್ಪವು ತಂದೆಯು ಹೀಗೆ ತಿಳಿಸುತ್ತಾರೆ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳೇ, 5000 ವರ್ಷಗಳ ನಂತರ ಬಂದು ಸೇರಿದಿರಿ. ಆದ್ದರಿಂದ, ನಿಮಗೆ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಎಂದು ಹೇಳಲಾಗುತ್ತದೆ. ಈಗ ಈ ದೇಹದ ಅಹಂಕಾರವನ್ನು ಬಿಟ್ಟು ಆತ್ಮಾಭಿಮಾನಿಗಳಾಗಿ. ಆತ್ಮದ ಜ್ಞಾನವನ್ನು ಕೊಡಲಾಗಿದೆ, ಇದನ್ನು ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಆತ್ಮದ ಜ್ಞಾನವಿರುವಂತಹ ಮನುಷ್ಯರು ಯಾರೂ ಇಲ್ಲ. ಸನ್ಯಾಸಿ, ಉದಾಸಿ, ಗುರು-ಗೋಸಾಯಿ ಯಾರೂ ತಿಳಿದುಕೊಂಡಿಲ್ಲ. ಈಗ ಆ ಶಕ್ತಿಯೇ ಇಲ್ಲ. ಎಲ್ಲರ ಶಕ್ತಿಯು ಕಡಿಮೆ ಆಗಿಬಿಟ್ಟಿದೆ. ಇಡೀ ವೃಕ್ಷವೇ ಜಡಜಡೀಭೂತದ ಸ್ಥಿತಿಯನ್ನು ಪಡೆದಿದೆ. ಈಗ ಮತ್ತೆ ಹೊಸದು ಸ್ಥಾಪನೆ ಆಗುತ್ತದೆ. ತಂದೆಯೇ ಬಂದು ವಿಭಿನ್ನ ವೃಕ್ಷದ ರಹಸ್ಯವನ್ನು ತಿಳಿಸುತ್ತಾರೆ. ಮೊದಲು ನೀವು ರಾಮರಾಜ್ಯದಲ್ಲಿ ಇದ್ದೀರಿ ಮತ್ತೆ ನೀವು ವಾಮಮಾರ್ಗದಲ್ಲಿ ಹೋಗುತ್ತೀರೆಂದರೆ ಆಗ ರಾವಣರಾಜ್ಯವು ಪ್ರಾರಂಭವಾಗುತ್ತದೆ. ನಂತರ, ಅನ್ಯ ಧರ್ಮಗಳು ಬರುತ್ತವೆ. ಭಕ್ತಿ ಮಾರ್ಗವು ಆರಂಭವಾಗುತ್ತದೆ. ಮೊದಲು ನಿಮಗೆ ತಿಳಿದಿರಲಿಲ್ಲ. ನೀವು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಾ ಎಂದು ಯಾರನ್ನೇ ಕೇಳಿದರೆ ಯಾರೂ ತಿಳಿಸುವುದಿಲ್ಲ. ತಂದೆಯು ಭಕ್ತರಿಗೆ ಹೇಳುತ್ತಾರೆ - ಈಗ ನೀವು ನಿರ್ಣಯ ಮಾಡಿ. ಬೋರ್ಡಿನ ಮೇಲೂ ಬರೆಯಿರಿ - ಪಾತ್ರಧಾರಿ ಆಗಿಯೂ ನಾಟಕದ ನಿರ್ದೇಶಕ, ರಚಯಿತ, ಮುಖ್ಯ ಪಾತ್ರಧಾರಿಗಳನ್ನು ಅರಿತಿಲ್ಲವೆಂದರೆ ಇಂತಹ ಪಾತ್ರಧಾರಿಗಳಿಗೆ ಏನೆಂದು ಹೇಳಲಾಗುವುದು? ನಾವು ಆತ್ಮಗಳು ಇಲ್ಲಿ ಭಿನ್ನ-ಭಿನ್ನ ಶರೀರವನ್ನು ತೆಗೆದುಕೊಂಡು ಪಾತ್ರವನ್ನು ಅಭಿನಯಿಸಲು ಬರುತ್ತೇವೆ ಅಂದಮೇಲೆ ಅವಶ್ಯವಾಗಿ ಇದು ನಾಟಕವಾಗಿದೆಯಲ್ಲವೇ.

ಗೀತೆಯು ತಾಯಿಯಾಗಿದೆ, ಶಿವನು ತಂದೆಯಾಗಿದ್ದಾರೆ, ಉಳಿದೆಲ್ಲವೂ ರಚನೆಯಾಗಿದೆ. ಗೀತೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತದೆ. ಹೊಸ ಪ್ರಪಂಚವನ್ನು ಹೇಗೆ ಸ್ಥಾಪನೆ ಮಾಡುತ್ತಾರೆ ಎಂದು ಯಾರೂ ತಿಳಿದಿಲ್ಲ. ಹೊಸಪ್ರಪಂಚದಲ್ಲಿ ಮೊದಲು ನೀವೇ ಇದ್ದಿರಿ. ಈಗ ಪುರುಷೋತ್ತಮ ಸಂಗಮಯುಗಿ ಪ್ರಪಂಚವಾಗಿದೆ. ಇದು ಹಳೆಯ ಪ್ರಪಂಚವೂ ಅಲ್ಲ. ಇದು ಹೊಸ ಪ್ರಪಂಚವೂ ಅಲ್ಲ. ಇದು ಸಂಗಮವಾಗಿದೆ. ಬ್ರಾಹ್ಮಣರದ್ದು ಶಿಖೆಯಾಗಿದೆ. ವಿರಾಟ ರೂಪದಲ್ಲಿಯೂ ಶಿವತಂದೆಯನ್ನು ತೋರಿಸುವುದಿಲ್ಲ. ಬ್ರಾಹ್ಮಣರ ಶಿಖೆಯನ್ನು ತೋರಿಸುವುದಿಲ್ಲ. ನೀವಂತೂ ಮೇಲೆ ಶಿಖೆಯನ್ನು ತೋರಿಸಿದ್ದೀರಿ. ನೀವು ಬ್ರಾಹ್ಮಣರು ಕುಳಿತಿದ್ದೀರಿ. ದೇವತೆಗಳ ನಂತರ ಕ್ಷತ್ರಿಯರಿದ್ದಾರೆ, ದ್ವಾಪರದಲ್ಲಿ ಹೊಟ್ಟೆಯ ಪೂಜಾರಿಗಳು, ನಂತರ ಶೂದ್ರರಾಗುತ್ತಾರೆ. ಇದು ಬಾಜೋಲಿ ಆಟ ಆಗಿದೆ. ನೀವು ಕೇವಲ ಬಾಜೋಲಿ ಆಟವನ್ನು ನೆನಪು ಮಾಡಿಕೊಳ್ಳಿ. ಇದೇ ನಿಮಗಾಗಿ 84 ಜನ್ಮಗಳ ಆಟವಾಗಿದೆ, ಸೆಕೆಂಡಿನಲ್ಲಿ ಎಲ್ಲವೂ ನೆನಪಿಗೆ ಬರುತ್ತದೆ. ಚಕ್ರವನ್ನು ಸುತ್ತುತ್ತೇವೆ, ಈ ಚಿತ್ರವೂ ಸರಿಯಾಗಿದೆ, ಈ ಚಿತ್ರವು ತಪ್ಪಾಗಿದೆ. ತಂದೆಯ ವಿನಃ ಬೇರೆ ಯಾರೂ ಚಿತ್ರವನ್ನು ಸರಿಯಾಗಿ ಬರೆಸಲು ಸಾಧ್ಯವಿಲ್ಲ. ತಂದೆಯು ಇವರ ಮೂಲಕ ತಿಳಿಸುತ್ತಾರೆ - ನೀವು ಹೀಗೆ ಬಾಜೋಲಿ ಆಟವನ್ನು ಆಡುತ್ತೀರಿ, ಸೆಕೆಂಡಿನಲ್ಲಿ ನಿಮ್ಮ ಯಾತ್ರೆ ಆಗುತ್ತದೆ, ಯಾವುದೇ ಕಷ್ಟದ ಮಾತಿಲ್ಲ. ನಮಗೆ ತಂದೆಯೇ ಓದಿಸುತ್ತಾರೆ ಎಂದು ಆತ್ಮಿಕ ಮಕ್ಕಳು ತಿಳಿಯುತ್ತೀರಿ. ಇದು ತಂದೆಯ ಜೊತೆ ಸತ್ಸಂಗವಾಗಿದೆ. ಅದೆಲ್ಲವೂ ಅಸತ್ಯ ಸಂಗಗಳಾಗಿವೆ. ತಂದೆಯು ಸತ್ಯಖಂಡ ಸ್ಥಾಪನೆ ಮಾಡುತ್ತಾರೆ, ಮನುಷ್ಯರಿಗೆ ಶಕ್ತಿ ಇಲ್ಲ. ಇದನ್ನು ಭಗವಂತನೇ ಮಾಡಲು ಸಾಧ್ಯ. ಭಗವಂತನನ್ನು ಜ್ಞಾನಸಾಗರ ಎಂದು ಹೇಳಲಾಗುತ್ತದೆ. ಇದು ಪರಮಾತ್ಮನ ಮಹಿಮೆ ಆಗಿದೆ ಎಂದು ಸಾಧು-ಸನ್ಯಾಸಿಗಳಿಗೂ ಸಹ ತಿಳಿಸಿಕೊಡಿ. ಆ ಶಾಂತಿಸಾಗರ ತಂದೆಯು ನಿಮಗೆ ಶಾಂತಿಯನ್ನು ಕೊಡುತ್ತಾರೆ. ಮುಂಜಾನೆಯ ಸಮಯದಲ್ಲಿಯೂ ನೀವು ಡ್ರಿಲ್ ಮಾಡುತ್ತೀರಿ. ನೀವು ಶರೀರದಿಂದ ಭಿನ್ನರಾಗಿ ತಂದೆಯ ನೆನಪಿನಲ್ಲಿ ಇರುತ್ತೀರಿ. ನೀವು ಇಲ್ಲಿ ಜೀವಿಸಿದ್ದಂತೆಯೇ ಸಾಯಲು ಬಂದಿದ್ದೀರಿ. ತಂದೆಗೆ ಬಲಿಹಾರಿ ಆಗಿದ್ದೀರಿ. ಇದಂತೂ ಹಳೆಯ ಪ್ರಪಂಚ, ಹಳೆಯ ವಸ್ತ್ರವಾಗಿದೆ. ಇದನ್ನು ಬಿಟ್ಟು ಬಿಡಬೇಕು ಎಂದು ತಿರಸ್ಕಾರವು ಬರುತ್ತದೆ. ಏನೂ ನೆನಪಿಗೆ ಬರಬಾರದು. ಎಲ್ಲವೂ ಮರೆತುಹೋಗಬೇಕು. ಭಗವಂತನು ಎಲ್ಲವನ್ನು ಕೊಟ್ಟಿದ್ದಾರೆ ಎಂದಮೇಲೆ ಈಗ ಅವರಿಗೆ ಕೊಟ್ಟುಬಿಡಿ, ಭಗವಂತನಿಗೆ ನೀವೇ ನಿಮಿತ್ತರಾಗಿ ಸಂಭಾಲನೆ ಮಾಡಿ ಎಂದು ನೀವು ಹೇಳುತ್ತೀರಿ. ಭಗವಂತನು ನಿಮಿತ್ತ ಆಗುವುದಿಲ್ಲ, ನೀವೇ ನಿಮಿತ್ತರಾಗುತ್ತೀರಿ. ನಂತರ ಪಾಪವನ್ನಂತೂ ಮಾಡುವುದಿಲ್ಲ. ಮೊದಲು ಪಾಪಾತ್ಮರೊಂದಿಗೆ ಪಾಪಾತ್ಮರ ವ್ಯವಹಾರವು ನಡೆಯುತ್ತಾ ಬಂದಿದೆ. ಈಗ ಸಂಗಮಯುಗದಲ್ಲಿ ಪಾಪಾತ್ಮರೊಂದಿಗೆ ನಿಮ್ಮ ವ್ಯವಹಾರವಿಲ್ಲ. ಪಾಪಾತ್ಮರಿಗೆ ದಾನ ಮಾಡಿದರೆ ತಲೆಯ ಮೇಲೆ ಪಾಪವೇರುತ್ತದೆ. ಈಶ್ವರಾರ್ಥವಾಗಿ ಮಾಡುತ್ತೀರಿ ಮತ್ತು ಪಾಪಾತ್ಮರಿಗೆ ಕೊಡುತ್ತೀರಿ. ತಂದೆಯಂತೂ ಏನನ್ನೂ ತೆಗೆದುಕೊಳ್ಳುವುದಿಲ್ಲ. ಹೋಗಿ ಸೇವಾಕೇಂದ್ರಗಳನ್ನು ತೆರೆಯಿರಿ, ಆಗ ಅನೇಕರ ಕಲ್ಯಾಣವಾಗುತ್ತದೆ ಎಂದು ತಂದೆಯು ಹೇಳುತ್ತಾರೆ.

ಏನೆಲ್ಲವೂ ಆಗುತ್ತದೆಯೋ ಚಾಚು ತಪ್ಪದೆ ನಾಟಕದನುಸಾರ ಪುನರಾವರ್ತನೆ ಆಗುತ್ತಿರುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಅಂದಮೇಲೆ ಇವರು ಅಳುವ, ದುಃಖ ಪಡುವ ಮಾತೇ ಇಲ್ಲ. ಕರ್ಮದ ಲೆಕ್ಕಾಚಾರವು ಸಮಾಪ್ತಿ ಆಗುವುದು ಒಳ್ಳೆಯದೇ ಆಗಿದೆ. ವೈದ್ಯರು ಹೇಳುತ್ತಾರೆ -ಖಾಯಿಲೆ ಎಲ್ಲವೂ ಹೊರ ಬರುತ್ತದೆ. ಹಾಗೆಯೇ ತಂದೆಯೇ ಹೇಳುತ್ತಾರೆ - ಉಳಿದಿರುವ ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕಾಗಿದೆ. ಯೋಗದಿಂದ, ಇಲ್ಲವೆಂದರೆ ಶಿಕ್ಷೆಗಳಿಂದ ಸಮಾಪ್ತಿ ಮಾಡಬೇಕಾಗಿದೆ. ಶಿಕ್ಷೆಗಳಂತೂ ಬಹಳ ಕಠಿಣವಾಗಿದೆ. ಅದಕ್ಕಿಂತ ಖಾಯಿಲೆ ಮೊದಲಾದವುಗಳಲ್ಲಿ ಸಮಾಪ್ತಿ ಆಗುವುದು ಬಹಳ ಒಳ್ಳೆಯದು. ನಾವು 21 ಜನ್ಮಗಳ ಸುಖದ ಹೋಲಿಕೆಯಲ್ಲಿ ಏನೇನೂ ಅಲ್ಲ. ಏಕೆಂದರೆ ಸುಖವು ಬಹಳ ಇದೆ, ಪೂರ್ಣ ಜ್ಞಾನ ಇಲ್ಲದಿದ್ದರೆ ಖಾಯಿಲೆಯಲ್ಲಿ ಚಡಪಡಿಸುತ್ತಾರೆ. ಭಗವಂತನನ್ನು ಬಹಳ ನೆನಪು ಮಾಡುತ್ತಾರೆ, ಅದೂ ಒಳ್ಳೆಯದು. ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಅವರು ತಿಳಿಸುತ್ತಿರುತ್ತಾರೆ. ಅವರು ಗುರುಗಳನ್ನು ನೆನಪು ಮಾಡುತ್ತಾರೆ, ಅನೇಕ ಗುರುಗಳಿದ್ದಾರೆ. ಒಬ್ಬ ಸದ್ಗುರುವನ್ನು ನೀವೇ ಅರಿತುಕೊಂಡಿದ್ದೀರಿ. ಅವರು ಸರ್ವಶಕ್ತಿವಂತನಾಗಿದ್ದಾರೆ. ನಾನು ಈ ವೇದ, ಗ್ರಂಥ ಮೊದಲಾದವುಗಳನ್ನು ಅರಿತಿದ್ದೇನೆ ಎಂದು ತಂದೆಯು ತಿಳಿಸುತ್ತಾರೆ. ಇವು ಭಕ್ತಿಯ ಸಾಮಾಗ್ರಿ ಆಗಿವೆ. ಇದರಿಂದ ಯಾರೂ ನನ್ನನ್ನು ಪ್ರಾಪ್ತಿ ಮಾಡಿಕೊಳ್ಳುವುದಿಲ್ಲ. ತಂದೆಯು ಬರುವುದೇ ಪಾಪಾತ್ಮರ ಪ್ರಪಂಚದಲ್ಲಿ. ಇಲ್ಲಿ ಪುಣ್ಯಾತ್ಮರು ಎಲ್ಲಿಂದ ಬಂದರು! ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರ ಶರೀರದಲ್ಲಿಯೇ ಬರುತ್ತೇನೆ. ಎಲ್ಲರಿಗಿಂತ ಮೊದಲು ಈ ಬ್ರಹ್ಮಾ ಕೇಳಿಸಿಕೊಳ್ಳುತ್ತಾರೆ. ಇಲ್ಲಿ ನಿಮ್ಮ ನೆನಪಿನ ಯಾತ್ರೆಯು ಬಹಳ ಚೆನ್ನಾಗಿರುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಇಲ್ಲಿ ಭಲೆ ಬಿರುಗಾಳಿಗಳು ಬರುತ್ತವೆ ಆದರೆ ತಮ್ಮನ್ನು ಆತ್ಮ ಎಂದು ತಿಳಿಯಿರಿ ಎಂಬುದು ತಂದೆಯು ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡಿ. ಕಲ್ಪದ ಹಿಂದೆಯು ಹೀಗೆಯೇ ಜ್ಞಾನವನ್ನು ಕೇಳಿದ್ದೀರಿ. ದಿನ ಪ್ರತಿದಿನ ನೀವು ಕೇಳುತ್ತಿರುತ್ತೀರಿ. ರಾಜಧಾನಿಯೂ ಸ್ಥಾಪನೆ ಆಗುತ್ತಿರುತ್ತದೆ. ಹಳೆಯ ಪ್ರಪಂಚವು ವಿನಾಶ ಆಗಲೇಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬೆಳಗ್ಗೆ-ಬೆಳಗ್ಗೆ ಎದ್ದು ಶರೀರದಿಂದ ಭಿನ್ನರಾಗುವ ಡ್ರಿಲ್ ಮಾಡಬೇಕಾಗಿದೆ. ಹಳೆಯ ಪ್ರಪಂಚ, ಹಳೆಯ ಶರೀರವನ್ನು ಸ್ವಲ್ಪವೂ ನೆನಪು ಮಾಡಬಾರದು. ಎಲ್ಲವನ್ನು ಮರೆಯಿರಿ.

2. ಸಂಗಮ ಯುಗದಲ್ಲಿ ಪಾಪಾತ್ಮರೊಂದಿಗೆ ವ್ಯವಹಾರ ಮಾಡಬಾರದಾಗಿದೆ. ಕರ್ಮಗಳ ಲೆಕ್ಕಾಚಾರವನ್ನು ಖುಷಿ-ಖುಷಿಯಿಂದ ಸಮಾಪ್ತಿ ಮಾಡಬೇಕಾಗಿದೆ. ಅಳುವುದು, ಕೂಗಾಡುವುದು ಮಾಡಬಾರದು ಎಲ್ಲವನ್ನು ತಂದೆಗೆ ಅರ್ಪಣೆ ಮಾಡಿ ನಂತರ ನಿಮಿತ್ತರಾಗಿ ಸಂಭಾಲನೆ ಮಾಡಬೇಕಾಗಿದೆ.

ವರದಾನ:
ಅನುಭೂತಿಯ ಶಕ್ತಿಯ ಮೂಲಕ ಸ್ವಪರಿವರ್ತನೆ ಮಾಡುವಂತಹ ತೀವ್ರಪುರುಷಾರ್ಥಿ ಭವ.

ಯಾವುದೇ ಪರಿವರ್ತನೆಗೆ ಸಹಜ ಆಧಾರವು ಅನುಭೂತಿಯ ಶಕ್ತಿಯಾಗಿದೆ. ಎಲ್ಲಿಯವರೆಗೆ ಅನುಭೂತಿಯ ಶಕ್ತಿಯು ಬರುವುದಿಲ್ಲ, ಅಲ್ಲಿಯವರೆಗೆ ಅನುಭೂತಿಯಾಗುವುದಿಲ್ಲ ಮತ್ತು ಎಲ್ಲಿಯವರೆಗೆ ಅನುಭೂತಿಯಾಗುವುದಿಲ್ಲ ಅಲ್ಲಿಯವರೆಗೆ ಬ್ರಾಹ್ಮಣ ಜೀವನದ ವಿಶೇಷತೆಯ ಬುನಾದಿಯು ಶಕ್ತಿಶಾಲಿಯಾಗುವುದಿಲ್ಲ. ಉಮ್ಮಂಗ-ಉತ್ಸಾಹದ ಚಲನೆಯಿರುವುದಿಲ್ಲ. ಯಾವಾಗ ಅನುಭೂತಿಯ ಶಕ್ತಿಯ ಅನುಭವಿಯಾಗಿ ಪ್ರತೀಮಾತಿನಲ್ಲಿ ಇರುತ್ತೀರಿ ಆಗಲೇ ತೀವ್ರಪುರುಷಾರ್ಥಿ ಆಗಿಬಿಡುತ್ತೀರಿ. ಅನುಭೂತಿಯ ಶಕ್ತಿಯು ಸದಾಕಾಲಕ್ಕಾಗಿ ಸಹಜಪರಿವರ್ತನೆ ಮಾಡಿಸಿಬಿಡುತ್ತದೆ.

ಸ್ಲೋಗನ್:
ಸ್ನೇಹದ ಸ್ವರೂಪವನ್ನು ಸಾಕಾರದಲ್ಲಿ ಇಮರ್ಜ್ ಮಾಡಿಕೊಂಡು ಬ್ರಹ್ಮಾತಂದೆಯ ಸಮಾನರಾಗಿರಿ.