04.05.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ಏನನ್ನು ತಿಳಿಸುತ್ತಾರೆಯೋ ಅದು ನಿಮ್ಮ ಹೃದಯದಲ್ಲಿ ಮುದ್ರಿತವಾಗಿ ಬಿಡಬೇಕು, ಸೂರ್ಯವಂಶಿ ಮನೆತನದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ತಾವಿಲ್ಲಿ ಬಂದಿದ್ದೀರಿ, ಆದ್ದರಿಂದ ಧಾರಣೆಯನ್ನೂ ಮಾಡಬೇಕು”

ಪ್ರಶ್ನೆ:
ಸದಾ ರಿಫ್ರೆಷ್ ಆಗಿರುವ ಸಾಧನವೇನಾಗಿದೆ?

ಉತ್ತರ:
ಹೇಗೆ ತಾಪವಿದ್ದಾಗ ಪಂಕ (ಫ್ಯಾನ್) ವನ್ನು ಹಾಕುತ್ತಾರೆ, ಅದು ರಿಫ್ರೆಷ್ ಮಾಡಿ ಬಿಡುತ್ತದೆ. ಹಾಗೆಯೇ ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ಇದ್ದಾಗ ರಿಫ್ರೆಷ್ ಆಗುತ್ತೀರಿ. ಸ್ವದರ್ಶನ ಚಕ್ರಧಾರಿಯಾಗುವುದರಲ್ಲಿ ಎಷ್ಟು ಸಮಯ ಹಿಡಿಸುತ್ತದೆ ಎಂದು ಮಕ್ಕಳು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಒಂದು ಕ್ಷಣ ಸಾಕು. ತಾವು ಮಕ್ಕಳು ಅವಶ್ಯವಾಗಿ ಸ್ವದರ್ಶನ ಚಕ್ರಧಾರಿಗಳಾಗಬೇಕು. ಏಕೆಂದರೆ ಇದರಿಂದಲೇ ನೀವು ಚಕ್ರವರ್ತಿ ರಾಜರಾಗುತ್ತೀರಿ. ಸ್ವದರ್ಶನ ಚಕ್ರವನ್ನು ತಿರುಗಿಸುವವರು ಸೂರ್ಯವಂಶಿಯರಾಗುತ್ತಾರೆ.

ಓಂ ಶಾಂತಿ.
ಪಂಕವು (ಫ್ಯಾನ್) ತಿರುಗಿದಾಗ ಎಲ್ಲರನ್ನೂ ರಿಫ್ರೆಷ್ ಮಾಡುತ್ತದೆ. ಹಾಗೆಯೇ ನೀವೂ ಸಹ ಸ್ವದರ್ಶನ ಚಕ್ರಧಾರಿಗಳಾಗಿ ಕುಳಿತುಕೊಳ್ಳುತ್ತೀರೆಂದರೆ ಬಹಳ ರಿಫ್ರೆಷ್ ಆಗುತ್ತೀರಿ. ಸ್ವದರ್ಶನ ಚಕ್ರಧಾರಿಯ ಅರ್ಥವನ್ನೂ ಸಹ ಯಾರೂ ತಿಳಿದುಕೊಂಡಿಲ್ಲ, ಆದ್ದರಿಂದ ಅವರಿಗೆ ತಿಳಿಸಬೇಕು. ತಿಳಿದುಕೊಳ್ಳದಿದ್ದರೆ ಚಕ್ರವರ್ತಿ ರಾಜರಾಗುವುದಿಲ್ಲ. ಸ್ವದರ್ಶನ ಚಕ್ರಧಾರಿಗಳಿಗೆ ನಿಶ್ಚಯವಿರುತ್ತದೆ - ನಾವು ಚಕ್ರವರ್ತಿ ರಾಜರಾಗಲು ಸ್ವದರ್ಶನ ಚಕ್ರಧಾರಿಗಳಾಗಿದ್ದೇವೆ. ಕೃಷ್ಣನಿಗೂ ಚಕ್ರವನ್ನು ತೋರಿಸುತ್ತಾರೆ, ಲಕ್ಷ್ಮಿ-ನಾರಾಯಣ ಕಂಬೈಂಡ್ ರೂಪಕ್ಕೂ ತೋರಿಸುತ್ತಾರೆ, ಒಬ್ಬರಿಗೂ ತೋರಿಸುತ್ತಾರೆ. ಸ್ವದರ್ಶನ ಚಕ್ರವನ್ನು ತಿಳಿಯಬೇಕು ಆಗಲೇ ಚಕ್ರವರ್ತಿ ರಾಜರಾಗುವಿರಿ. ಮಾತು ಬಹಳ ಸಹಜವಾಗಿದೆ. ಮಕ್ಕಳು ಹೇಳುತ್ತಾರೆ - ಬಾಬಾ ಸ್ವದರ್ಶನ ಚಕ್ರಧಾರಿಗಳಾಗುವುದರಲ್ಲಿ ಎಷ್ಟು ಸಮಯ ಹಿಡಿಸುತ್ತದೆ? ಮಕ್ಕಳೇ, ಒಂದು ಸೆಕೆಂಡ್ ಮತ್ತೆ ನೀವು ವಿಷ್ಣುವಂಶಿಯಾಗುತ್ತೀರಿ. ದೇವತೆಗಳಿಗೆ ವಿಷ್ಣುವಂಶಿಯರೆಂದೇ ಹೇಳುತ್ತಾರೆ. ವಿಷ್ಣುವಂಶಿಯರಾಗಲು ಮೊದಲು ಶಿವವಂಶಿಯರಾಗಬೇಕು. ಆಗ ತಂದೆಯು ಕುಳಿತು ಸೂರ್ಯವಂಶಿಯರನ್ನಾಗಿ ಮಾಡುತ್ತಾರೆ. ಶಬ್ಧವು ಬಹಳ ಸಹಜವಾಗಿದೆ. ನಾವು ಹೊಸ ಪ್ರಪಂಚದಲ್ಲಿ ಸೂರ್ಯವಂಶಿಯರಾಗುತ್ತೇವೆ, ನಾವು ಹೊಸ ಪ್ರಪಂಚದ ಮಾಲೀಕ ಚಕ್ರವರ್ತಿಗಳಾಗುತ್ತೇವೆ. ಸ್ವದರ್ಶನ ಚಕ್ರಧಾರಿಗಳಿಂದ ವಿಷ್ಣುವಂಶಿಯರಾಗುವುದರಲ್ಲಿ ಒಂದು ಕ್ಷಣ ಹಿಡಿಸುತ್ತದೆ. ಮಾಡುವವರು ಶಿವ ತಂದೆಯಾಗಿದ್ದಾರೆ. ತಂದೆಯು ವಿಷ್ಣುವಂಶಿಯರನ್ನಾಗಿ ಮಾಡುತ್ತಾರೆ ಮತ್ತ್ಯಾರೂ ಮಾಡುವುದಿಲ್ಲ. ಇದಂತೂ ಮಕ್ಕಳಿಗೇ ಗೊತ್ತಿದೆ - ವಿಷ್ಣುವಂಶಿಯರು ಸತ್ಯಯುಗದಲ್ಲಿರುತ್ತಾರೆ ಇಲ್ಲಿಲ್ಲ. ಇದು ವಿಷ್ಣುವಂಶಿಯರಾಗುವ ಯುಗವಾಗಿದೆ, ತಾವಿಲ್ಲಿ ವಿಷ್ಣುವಂಶದಲ್ಲಿ ಬರುವುದಕ್ಕಾಗಿಯೇ ಇಲ್ಲಿಗೆ ಬರುತ್ತೀರಿ, ಅವರಿಗೆ ಸೂರ್ಯವಂಶಿಯರೆಂದು ಹೇಳುತ್ತೀರಿ. ಜ್ಞಾನ ಸೂರ್ಯವಂಶಿ ಅಕ್ಷರ ಬಹಳ ಚೆನ್ನಾಗಿದೆ. ವಿಷ್ಣು ಸತ್ಯಯುಗದ ಮಾಲೀಕನಾಗಿದ್ದನು, ಅವರಲ್ಲಿ ಇಬ್ಬರೂ ಇದ್ದಾರೆ. ಮಕ್ಕಳು ಲಕ್ಷ್ಮಿ ನಾರಾಯಣ ಅಥವಾ ವಿಷ್ಣುವಂಶಿಯಾಗಲು ಬಂದಿದ್ದೀರಿ. ಇದರಲ್ಲಿ ಬಹಳ ಖುಷಿಯೂ ಆಗುತ್ತದೆ, ಹೊಸ ಪ್ರಪಂಚ, ಹೊಸ ವಿಶ್ವದಲ್ಲಿ, ಸ್ವರ್ಣೀಮ ಯುಗದ ವಿಶ್ವದಲ್ಲಿ ನಾವು ವಿಷ್ಣುವಂಶಿಯರಾಗಬೇಕಾಗಿದೆ. ಇದಕ್ಕಿಂತ ಶ್ರೇಷ್ಠ ಪದವಿ ಮತ್ತ್ಯಾವುದೂ ಇಲ್ಲ. ಇದರಲ್ಲಿ ಬಹಳ ಖುಷಿಯಾಗಬೇಕು.

ಪ್ರದರ್ಶನಿಯಲ್ಲಿ ನೀವು ತಿಳಿಸುತ್ತೀರಿ - ನಿಮ್ಮ ಗುರಿ-ಧ್ಯೇಯವೇ ಇದಾಗಿದೆ. ತಿಳಿಸಿ, ಇದು ಬಹಳ ದೊಡ್ಡ ವಿಶ್ವ ವಿದ್ಯಾಲಯವಾಗಿದೆ. ಇದಕ್ಕೆ ಆಧ್ಯಾತ್ಮಿಕ ವಿಶ್ವ ವಿದ್ಯಾಲಯವೆಂದು ಹೇಳಲಾಗುತ್ತದೆ. ಗುರಿ-ಧ್ಯೇಯವು ಈ ಚಿತ್ರದಲ್ಲಿದೆ ಮಕ್ಕಳು ಇದನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕು. ಮಕ್ಕಳಿಗೆ ತಿಳಿಸುವುದರಲ್ಲಿ ಒಂದು ಸೆಕೆಂಡ್ ಹಿಡಿಸುವಂತೆ ಹೇಗೆ ಬರೆಯುವುದು! ನೀವೇ ತಿಳಿಸಬಲ್ಲಿರಿ. ಅದರಲ್ಲಿಯೂ ಬರೆಯಲಾಗಿದೆ. ನಾವು ವಿಷ್ಣುವಂಶಿ ದೇವಿ-ದೇವತೆಗಳಾಗಿದ್ದೆವು ಅರ್ಥಾತ್ ದೇವಿ-ದೇವತಾ ಕುಲದವರಾಗಿದ್ದೆವು, ಸ್ವರ್ಗದ ಮಾಲೀಕರಾಗಿದ್ದೆವು. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ ಭಾರತದಲ್ಲಿ ನೀವು ಇಂದಿಗೆ 5000 ವರ್ಷಗಳ ಹಿಂದೆ ಸೂರ್ಯವಂಶಿ ದೇವಿ-ದೇವತೆಗಳಾಗಿದ್ದಿರಿ. ಮಕ್ಕಳಿಗೆ ಈಗ ಬುದ್ಧಿಯಲ್ಲಿ ಬಂದಿದೆ. ಶಿವ ತಂದೆಯು ಸೂರ್ಯವಂಶಿ ಮನೆತನವನ್ನು ಸ್ಥಾಪನೆ ಮಾಡಲು ಬಂದಿದ್ದರು, ಅವಶ್ಯವಾಗಿ ಭಾರತವು ಸ್ವರ್ಗವಾಗಿತ್ತು, ಇವರೇ ಪೂಜ್ಯರಾಗಿದ್ದರು ಯಾರೂ ಪೂಜಾರಿಗಳಿರಲಿಲ್ಲ. ಯಾವುದೇ ಪೂಜಾ ಸಾಮಾಗ್ರಿಗಳಿರಲಿಲ್ಲ. ಈ ಶಾಸ್ತ್ರಗಳಲ್ಲೇ ಪೂಜೆಯ ಸಂಪ್ರದಾಯ ಪದ್ದತಿ ಮೊದಲಾದವುಗಳು ಬರೆಯಲ್ಪಟ್ಟಿದೆ, ಇದು ಸಾಮಗ್ರಿಯಾಗಿದೆ. ಈ ಬೇಹದ್ದಿನ ತಂದೆ ಕುಳಿತು ತಿಳಿಸುತ್ತಾರೆ. ಅವರು ಜ್ಞಾನ ಸಾಗರ, ಮನುಷ್ಯ ಸೃಷ್ಟಿಯ ಬೀಜರೂಪರಾಗಿದ್ದಾರೆ, ಅವರಿಗೆ ವೃಕ್ಷಪತಿ ಅಥವಾ ಬೃಹಸ್ಪತಿಯೆಂದು ಹೇಳುತ್ತಾರೆ. ಬೃಹಸ್ಪತಿಯ ದೆಶೆಯು ಶ್ರೇಷ್ಠಾತಿ ಶ್ರೇಷ್ಠ ಆಗಿರುತ್ತದೆ. ವೃಕ್ಷಪತಿಯು ನಿಮಗೆ ತಿಳಿಸುತ್ತಿದ್ದಾರೆ, ನೀವು ಪೂಜ್ಯ ದೇವಿ-ದೇವತೆಗಳಾಗಿದ್ದಿರಿ ನಂತರ ಪೂಜಾರಿಗಳಾಗಿದ್ದೀರಿ. ಯಾವ ದೇವಿ-ದೇವತೆಗಳು ನಿರ್ವಿಕಾರಿಗಳಾಗಿದ್ದರೂ ಮತ್ತೆ ಅವರು ಎಲ್ಲಿ ಹೋದರು? ಅವಶ್ಯವಾಗಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತಾರೆ ಅಂದಾಗ ಒಂದೊಂದು ಅಕ್ಷರವನ್ನೂ ನೋಟ್ ಮಾಡಿಕೊಳ್ಳಬೇಕು. ಹೃದಯದ ಮೇಲೋ ಅಥವಾ ಕಾಗದದ ಮೇಲೋ? ಇದನ್ನು ಯಾರು ತಿಳಿಸುತ್ತಾರೆ? ಶಿವ ತಂದೆ, ಅವರೇ ಸ್ವರ್ಗವನ್ನು ರಚಿಸುತ್ತಾರೆ. ಶಿವ ತಂದೆಯೇ ಮಕ್ಕಳಿಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಲೌಕಿಕ ತಂದೆಯಂತೂ ದೇಹಧಾರಿಯಾಗಿದ್ದಾರೆ. ನೀವು ನಿಮ್ಮನ್ನು ಆತ್ಮನೆಂದು ತಿಳಿದು ಪಾರಲೌಕಿಕ ತಂದೆಯನ್ನು ನೆನಪು ಮಾಡುತ್ತೀರಿ - ಬಾಬಾ ಎಂದು. ಆಗ ಹೇ ಮಕ್ಕಳೇ ಎಂದು ತಂದೆಯೂ ಪ್ರತ್ಯುತ್ತರ ನೀಡುತ್ತಾರೆ. ಅಂದಮೇಲೆ ಬೇಹದ್ದಿನ ತಂದೆಯಾದರಲ್ಲವೆ. ಮಕ್ಕಳೇ, ನೀವು ಸೂರ್ಯವಂಶಿ ದೇವಿ-ದೇವತೆಗಳು ಪೂಜ್ಯರಾಗಿದ್ದೀರಿ ನಂತರ ಪೂಜಾರಿಯಾದಿರಿ. ಇದು ರಾವಣನ ರಾಜ್ಯವಾಗಿದೆ. ಪ್ರತಿವರ್ಷವೂ ರಾವಣನನ್ನು ಸುಡುತ್ತಾರೆ ಆದರೂ ಸಾಯುವುದಿಲ್ಲ. 12 ತಿಂಗಳಿನ ನಂತರ ಮತ್ತೆ ರಾವಣನನ್ನು ಸುಡುತ್ತಾರೆ ಅಂದರೆ ಸಿದ್ಧ ಮಾಡಿ ತೋರಿಸುತ್ತಾರೆ - ನಾವು ರಾವಣನ ಸಂಪ್ರದಾಯದವರಾಗಿದ್ದೇವೆ. ರಾವಣ ಎಂದರೆ ಪಂಚ ವಿಕಾರಗಳ ರಾಜ್ಯವು ಖಚಿತವಾಗಿದೆ. ಸತ್ಯಯುಗದಲ್ಲಿ ಎಲ್ಲರೂ ಶ್ರೇಷ್ಠಾಚಾರಿಗಳಾಗಿದ್ದರು ಈಗ ಕಲಿಯುಗ ಹಳೆಯ ಭ್ರಷ್ಠಾಚಾರಿ ಪ್ರಪಂಚವಾಗಿದೆ, ಈ ಚಕ್ರವು ಸುತ್ತುತ್ತಿರುತ್ತದೆ. ಈಗ ನೀವು ಪ್ರಜಾಪಿತ ಬ್ರಹ್ಮಾವಂಶಿ ಸಂಗಮಯುಗದಲ್ಲಿ ಕುಳಿತಿದ್ದೀರಿ. ನಿಮ್ಮ ಬುದ್ಧಿಯಲ್ಲಿದೆ - ನಾವು ಬ್ರಾಹ್ಮಣರಾಗಿದ್ದೇವೆ, ಈಗ ಶೂದ್ರ ಕುಲದವರಲ್ಲ. ಈ ಸಮಯವೇ ಅಸುರೀ ರಾಜ್ಯವಾಗಿದೆ. ತಂದೆಗೆ ಹೇಳುತ್ತಾರೆ - ಹೇ ದುಃಖಹರ್ತ-ಸುಖಕರ್ತ.... ಅಂದಮೇಲೆ ಈಗ ಸುಖವೆಲ್ಲಿದೆ? ಸತ್ಯಯುಗದಲ್ಲಿ. ದುಃಖವೆಲ್ಲಿದೆ? ದುಃಖವಂತೂ ಕಲಿಯುಗದಲ್ಲಿದೆ. ದುಃಖಹರ್ತ-ಸುಖಕರ್ತ ಶಿವ ತಂದೆಯಾಗಿದ್ದಾರೆ. ಅವರು ಸುಖದ ಆಸ್ತಿಯನ್ನೇ ಕೊಡುತ್ತಾರೆ. ಸತ್ಯಯುಗಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ, ಅಲ್ಲಿ ದುಃಖದ ಹೆಸರೇ ಇರುವುದಿಲ್ಲ. ನಿಮ್ಮ ಆಯಸ್ಸೂ ಸಹ ದೀರ್ಘವಾಗಿರುತ್ತದೆ ಅಳುವ ಅವಶ್ಯಕತೆಯಿರುವುದಿಲ್ಲ. ಸಮಯದಂತೆ ಹಳೆಯ ಶರೀರ ಬಿಟ್ಟು ಹೊಸದನ್ನು ಪಡೆದುಕೊಳ್ಳುತ್ತಾರೆ. ಶರೀರ ವೃದ್ಧವಾಗಿದೆಯೆಂದು ಮೊದಲು ಮಗು ಸತೋಗುಣಿಯಾಗಿರುತ್ತದೆ. ಆದ್ದರಿಂದ ಮಕ್ಕಳನ್ನು ಬ್ರಹ್ಮ ಜ್ಞಾನಿಗಳಿಗಿಂತಲೂ ಶ್ರೇಷ್ಠರೆಂದು ತಿಳಿಯುತ್ತಾರೆ. ಏಕೆಂದರೆ ಆ ಸನ್ಯಾಸಿಗಳಂತೂ ವಿಕಾರೀ ಗೃಹಸ್ಥಿಗಳಿಂದ ಸನ್ಯಾಸಿಗಳಾಗುತ್ತಾರೆ. ಆದ್ದರಿಂದ ಅವರಿಗೆ ಎಲ್ಲಾ ವಿಕಾರಗಳ ಬಗ್ಗೆ ಗೊತ್ತಿರುತ್ತದೆ. ಚಿಕ್ಕ ಮಕ್ಕಳಿಗೆ ಇದು ತಿಳಿದಿರುವುದೇ ಇಲ್ಲ. ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ರಾವಣ ರಾಜ್ಯವಿದೆ, ಭ್ರಷ್ಟಾಚಾರಿ ರಾಜ್ಯವಿದೆ. ಶ್ರೇಷ್ಠಾಚಾರಿ ದೇವಿ-ದೇವತೆಗಳ ರಾಜ್ಯವು ಸತ್ಯಯುಗದಲ್ಲಿತ್ತು ಈಗಿಲ್ಲ. ಮತ್ತೆ ಚರಿತ್ರೆಯು ಪುನರಾವರ್ತನೆಯಾಗುವುದು. ಶ್ರೇಷ್ಠಾಚಾರಿಗಳನ್ನಾಗಿ ಯಾರು ಮಾಡುವರು? ಇಲ್ಲಂತೂ ಒಬ್ಬರೂ ಶ್ರೇಷ್ಠಾಚಾರಿಗಳಿಲ್ಲ. ಇದಕ್ಕೆ ಬಹಳ ಬುದ್ಧಿ ಬೇಕು. ಇದು ಪಾರಸ ಬುದ್ಧಿಯವರಾಗುವ ಯುಗವಾಗಿದೆ. ತಂದೆಯು ಬಂದು ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ.

ಸತ್ಸಂಗವು ಮೇಲೆತ್ತುತ್ತದೆ, ಕೆಟ್ಟ ಸಂಗವು ಕೆಳಗೆ ಬೀಳಿಸುತ್ತದೆ ಎಂದು ಹೇಳಲಾಗುತ್ತದೆ. ಸತ್ಯ ತಂದೆಯ ವಿನಃ ಪ್ರಪಂಚದಲ್ಲಿ ಉಳಿದೆಲ್ಲವೂ ಕುಸಂಗಗಳಾಗಿವೆ. ತಂದೆಯು ತಿಳಿಸುತ್ತಾರೆ - ನಾನು ಸಂಪೂರ್ಣ ನಿರ್ವಿಕಾರಿಗಳನ್ನಾಗಿ ಮಾಡಿ ಹೋಗುತ್ತೇನೆ. ಮತ್ತೆ ಸಂಪೂರ್ಣ ವಿಕಾರಿಗಳನ್ನಾಗಿ ಯಾರು ಮಾಡುತ್ತಾರೆ? ನಮಗೇನು ಗೊತ್ತು! ಎಂದು ಹೇಳುತ್ತಾರೆ. ಅರೆ! ನಿರ್ವಿಕಾರಿಗಳನ್ನಾಗಿ ಯಾರು ಮಾಡುತ್ತಾರೆ? ಅವಶ್ಯವಾಗಿ ತಂದೆಯೇ ಮಾಡುತ್ತಾರೆ ಮತ್ತೆ ವಿಕಾರಿಗಳನ್ನಾಗಿ ಯಾರು ಮಾಡುತ್ತಾರೆ? ಇದು ಯಾರಿಗೂ ಗೊತ್ತಿಲ್ಲ. ತಂದೆಯು ತಿಳಿಸುತ್ತಾರೆ- ಮನುಷ್ಯರಂತೂ ಏನನ್ನೂ ತಿಳಿದಿಲ್ಲ. ರಾವಣ ರಾಜ್ಯವಾಗಿದೆಯಲ್ಲವೆ. ಯಾರ ತಂದೆಯಾದರೂ ಸಾವನ್ನಪ್ಪಿದರೆ ಕೇಳಿ- ಎಲ್ಲಿಗೆ ಹೋದರು? ಸ್ವರ್ಗವಾಸಿಯಾದರೆಂದು ಹೇಳುತ್ತಾರೆ. ಒಳ್ಳೆಯದು ಇದರ ಅರ್ಥ ಅವರು ನರಕದಲ್ಲಿದ್ದರಲ್ಲವೆ! ಅಂದಮೇಲೆ ನೀವೂ ಸಹ ನರಕವಾಸಿಯಾಗಿದ್ದೀರಲ್ಲವೆ! ತಿಳಿಸಲು ಎಷ್ಟು ಸಹಜವಾಗಿದೆ. ತಮ್ಮನ್ನು ಯಾರೂ ನರಕವಾಸಿಗಳೆಂದು ತಿಳಿಯುವುದಿಲ್ಲ. ನರಕಕ್ಕೆ ವೇಶ್ಯಾಲಯ, ಸ್ವರ್ಗಕ್ಕೆ ಶಿವಾಲಯವೆಂದು ಹೇಳಲಾಗುತ್ತದೆ. ಇಂದಿಗೆ 5 ಸಾವಿರ ವರ್ಷಗಳ ಮೊದಲು ಈ ದೇವಿ-ದೇವತೆಗಳ ರಾಜ್ಯವಿತ್ತು, ನೀವು ವಿಶ್ವದ ಮಹಾರಾಜ-ಮಹಾರಾಣಿಯರಾಗಿದ್ದಿರಿ ಮತ್ತೆ ಪುನರ್ಜನ್ಮ ತೆಗೆದುಕೊಳ್ಳಬೇಕಾಯಿತು. ನೀವೇ ಎಲ್ಲರಿಗಿಂತ ಹೆಚ್ಚಾಗಿ ಪುನರ್ಜನ್ಮವನ್ನು ಪಡೆದಿದ್ದೀರಿ. ಇದಕ್ಕಾಗಿಯೇ ಗಾಯನವಿದೆ - ಆತ್ಮಗಳು ಪರಮಾತ್ಮನಿಂದ ಬಹಳ ಕಾಲ ಅಗಲಿ ಹೋಗಿದ್ದರು. ನಿಮಗೆ ನೆನಪಿದೆ – ಮೊಟ್ಟ ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮದವರೇ ಬಂದು ಮತ್ತೆ 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದೀರಿ ಈಗ ಮತ್ತೆ ಪಾವನರಾಗಬೇಕಾಗಿದೆ. ಪತಿತ-ಪಾವನ ತಂದೆಯೇ ಬನ್ನಿ ಎಂದು ಕರೆಯುತ್ತಾರೆ. ಅಂದಮೇಲೆ ಒಬ್ಬ ಸದ್ಗುರು, ಶಿಕ್ಷಕನೇ ಬಂದು ಪಾವನರನ್ನಾಗಿ ಮಾಡುತ್ತಾರೆಂದು ಸರ್ಟಿಫಿಕೇಟನ್ನು ಕೊಡುತ್ತಾರೆ. ಈಗ ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಇವರಲ್ಲಿಯೇ ಕುಳಿತು ಪಾವನರನ್ನಾಗಿ ಮಾಡುತ್ತೇನೆ. ಆದರೆ 84 ಲಕ್ಷ ಜನ್ಮಗಳ ಮಾತಿಲ್ಲ, ಕೇವಲ 84 ಜನ್ಮಗಳಿವೆ. ಈ ಲಕ್ಷ್ಮೀ-ನಾರಾಯಣರು ಸತ್ಯಯುಗದಲ್ಲಿದ್ದರು, ಈಗಿಲ್ಲ. ಅಂದಾಗ ಅವರು ಎಲ್ಲಿಗೆ ಹೋದರು? ಅವರೂ ಸಹ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾರು ಒಂದನೇ ಜನ್ಮದಲ್ಲಿ ಬರುತ್ತಾರೆಯೋ ಅವರೇ ಪೂರ್ಣ 84 ಜನ್ಮಗಳಲ್ಲಿ ಬರುತ್ತಾರೆ, ಮತ್ತೆ ಅವರೇ ಮೊದಲು ಹೋಗಬೇಕು. ದೇವಿ-ದೇವತೆಗಳ ವಿಶ್ವದ ಇತಿಹಾಸವು ಪುನರಾವರ್ತನೆಯಾಗುತ್ತದೆ. ಸೂರ್ಯವಂಶಿ, ಚಂದ್ರವಂಶಿ ರಾಜ್ಯವು ಮತ್ತೆ ಪುನರಾವರ್ತನೆಯಾಗುತ್ತದೆ. ತಂದೆಯು ನಿಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ನಾವು ಈ ಪಾಠಶಾಲೆ ಅಥವಾ ಯುನಿವರ್ಸಿಟಿಯಲ್ಲಿ ಬಂದಿದ್ದೇವೆ. ಇಲ್ಲಿ ನಾವು ನರನಿಂದ ನಾರಾಯಣರಾಗುತ್ತೇವೆಂದು ನೀವು ಹೇಳುತ್ತೀರಿ. ನಮ್ಮ ಗುರಿ-ಉದ್ದೇಶವೇ ಇದಾಗಿದೆ - ಯಾರು ಚೆನ್ನಾಗಿ ಪುರುಷಾರ್ಥ ಮಾಡುತ್ತಾರೆ ಅವರೇ ತೇರ್ಗಡೆಯಾಗುತ್ತಾರೆ. ಯಾರು ಪುರುಷಾರ್ಥ ಮಾಡುವುದಿಲ್ಲವೋ ಅವರು ಪ್ರಜೆಗಳಲ್ಲಿ ಕೆಲವರು ಸಾಹುಕಾರರಾಗುತ್ತಾರೆ, ಕೆಲವರು ಕಡಿಮೆ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ನಿಮಗೆ ಗೊತ್ತಿದೆ - ನಾವು ಶ್ರೀಮತದಂತೆ ಶ್ರೇಷ್ಠರಾಗುತ್ತಿದ್ದೇವೆ. ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯ ಮತದಂತೆ ಶ್ರೀ ಲಕ್ಷ್ಮಿ-ನಾರಾಯಣ ಅಥವಾ ದೇವಿ-ದೇವತೆಗಳಾಗುತ್ತೇವೆ. ಶ್ರೀ ಎಂದರೆ ಶ್ರೇಷ್ಠರು. ಈಗ ಯಾರಿಗೂ ಶ್ರೀ ಎಂದು ಹೇಳಲು ಸಾಧ್ಯವಿಲ್ಲ ಆದರೆ ಇಲ್ಲಂತು ಯಾರೇ ಬರಲಿ ಎಲ್ಲರಿಗೂ ಶ್ರೀ ಎಂದು ಹೇಳಿ ಬಿಡುತ್ತಾರೆ. ಶ್ರೀ ಇಂತಹವರು.... ಎಂದು ಬರೆಯುತ್ತಾರೆ, ಈಗ ದೇವಿ-ದೇವತೆಗಳ ವಿನಃ ಯಾರೂ ಶ್ರೇಷ್ಠರಿರಲು ಸಾಧ್ಯವಿಲ್ಲ. ಭಾರತವು ಸರ್ವ ಶ್ರೇಷ್ಠವಾಗಿತ್ತು, ರಾವಣ ರಾಜ್ಯದಲ್ಲಿ ಭಾರತದ ಮಹಿಮೆಯನ್ನೇ ಸಮಾಪ್ತಿ ಮಾಡಿ ಬಿಟ್ಟಿದ್ದಾರೆ. ಭಾರತದ ಮಹಿಮೆಯೂ ಸಹ ಬಹಳ ಇದೆ, ಬಹಳ ನಿಂದನೆಯೂ ಇದೆ. ಭಾರತವು ಸಂಪೂರ್ಣ ಧನವಂತವಾಗಿತ್ತು, ಈಗ ಸಂಪೂರ್ಣ ಕಂಗಾಲಾಗಿದೆ. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ದೇವತೆಗಳ ಮುಂದೆ ಹೋಗಿ ತಾವು ಗುಣವಂತರೆಂದು ಮಹಿಮೆ ಮಾಡುತ್ತಾರೆ. ದೇವತೆಗಳಿಗೆ ಹೇಳುತ್ತಾರೆ. ಆದರೆ ದಯಾಹೃದಯಿಗಳಾಗಿದ್ದರೇನು?. ಒಬ್ಬರಿಗೆ ದಯಾಹೃದಯಿಯೆಂದು ಹೇಳಲಾಗುತ್ತದೆ. ಅವರೇ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ಈಗ ಅವರು ನಿಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕರೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಗ್ಯಾರಂಟಿ ಕೊಡುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ಜನ್ಮ-ಜನ್ಮಾಂತರ ಪಾಪಗಳು ಭಸ್ಮವಾಗುತ್ತವೆ ಮತ್ತು ಜೊತೆ ಕರೆದುಕೊಂಡು ಹೋಗುತ್ತೇನೆ ನಂತರ ನೀವು ಹೊಸ ಪ್ರಪಂಚದಲ್ಲಿ ಹೋಗಬೇಕಾಗುತ್ತದೆ. ಇದು 5000 ವರ್ಷಗಳ ಚಕ್ರವಾಗಿದೆ, ಹೊಸ ಪ್ರಪಂಚವಿತ್ತು ಮತ್ತೆ ಅವಶ್ಯವಾಗಿ ಆಗುತ್ತದೆ. ಪ್ರಪಂಚವು ಪತಿತವಾಗುತ್ತದೆ, ಮತ್ತೆ ತಂದೆಯು ಬಂದು ಪಾವನವನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ರಾವಣನು ಬಂದು ಪತಿತರನ್ನಾಗಿ ಮಾಡುತ್ತಾನೆ, ನಾನು ಬಂದು ಪಾವನ ಮಾಡುತ್ತೇನೆ. ಇಲ್ಲಂತೂ ಹೇಗೆ ಗೊಂಬೆ ಪೂಜೆಯನ್ನು ಮಾಡುತ್ತಿರುತ್ತಾರೆ. ರಾವಣನಿಗೆ ಏಕೆ 10 ತಲೆಗಳನ್ನು ಕೊಟ್ಟಿದ್ದಾರೆಂದು ತಿಳಿದೇ ಇಲ್ಲ. ವಿಷ್ಣುವಿಗೂ 4 ಭುಜಗಳನ್ನು ಕೊಡುತ್ತಾರೆ ಆದರೆ ಈ ರೀತಿಯಾದಂತಹ ಮನುಷ್ಯರು ಎಂದಾದರೂ ಇರುತ್ತಾರೆಯೇ ಒಂದುವೇಳೆ 4 ಭುಜಗಳುಳ್ಳ ಮನುಷ್ಯರಿದ್ದರೆ ಅವರಿಂದ ಜನಿಸುವ ಮಕ್ಕಳೂ ಸಹ ಈ ರೀತಿಯೇ ಇರಬೇಕು. ಇಲ್ಲಂತೂ ಎಲ್ಲರಿಗೆ 2 ಭುಜಗಳಿವೆ, ಆದರೆ ಮನುಷ್ಯರು ತಿಳಿದುಕೊಂಡಿಲ್ಲ. ಆದ್ದರಿಂದ ಭಕ್ತಿಮಾರ್ಗದ ಶಾಸ್ತ್ರಗಳನ್ನು ಕಂಠಪಾಠ ಮಾಡುತ್ತಾರೆ. ಅವರಿಗೂ ಅನೇಕರು ಅನುಯಾಯಿಗಳಾಗಿ ಬಿಡುತ್ತಾರೆ. ಇದು ಕಮಾಲ್ ಆಗಿದೆ! ತಂದೆಯಂತೂ ಜ್ಞಾನದ ಅಥಾರಿಟಿಯಾಗಿದ್ದಾರೆ. ಯಾವುದೇ ಮನುಷ್ಯರು ಜ್ಞಾನದ ಅಥಾರಿಟಿಯಾಗಲು ಸಾಧ್ಯವಿಲ್ಲ. ಜ್ಞಾನ ಸಾಗರನಾದ ನನಗೆ ನೀವು ಆಲ್ಮೈಟಿ ಅಥಾರಿಟಿ.... ಎಂದು ಹೇಳುತ್ತೀರಿ. ಇದು ತಂದೆಯ ಮಹಿಮೆಯಾಗಿದೆ. ನೀವು ತಂದೆಯನ್ನು ನೆನಪು ಮಾಡುತ್ತೀರೆಂದರೆ ತಂದೆಯಿಂದ ಶಕ್ತಿಯನ್ನು ಪಡೆಯುತ್ತೀರಿ. ಇದರಿಂದ ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ನೀವು ತಿಳಿಯುತ್ತೀರಿ - ನಮ್ಮಲ್ಲಿ ಬಹಳ ಶಕ್ತಿಯಿತ್ತು, ನಾವು ನಿರ್ವಿಕಾರಿಗಳಾಗಿದ್ದೆವು ಇಡೀ ವಿಶ್ವದಲ್ಲಿ ರಾಜ್ಯ ಮಾಡುತ್ತಿದ್ದೆವು ಅಂದಮೇಲೆ ಆಲ್ಮೈಟಿ ಎಂದು ಹೇಳುತ್ತಾರಲ್ಲವೆ. ಈ ಲಕ್ಷ್ಮೀ-ನಾರಾಯಣರು ಇಡೀ ವಿಶ್ವದ ಮಾಲೀಕರಾಗಿದ್ದರು ಇಂತಹ ಶಕ್ತಿಯು ಅವರಿಗೆ ಎಲ್ಲಿಂದ ಸಿಕ್ಕಿತು? ತಂದೆಯಿಂದ. ಭಗವಂತ ಸರ್ವ ಶ್ರೇಷ್ಠರಾಗಿದ್ದಾರಲ್ಲವೆ. ಎಷ್ಟು ಸಹಜವಾಗಿ ತಿಳಿಸುತ್ತಾರೆ, ಈ 84 ಜನ್ಮಗಳ ಚಕ್ರವನ್ನು ತಿಳಿಯುವುದು ಬಹಳ ಸಹಜವಾಗಿದೆಯಲ್ಲವೆ. ಇದರಿಂದಲೇ ನಿಮಗೆ ರಾಜ್ಯಭಾಗ್ಯವು ಸಿಗುತ್ತದೆ. ಪ್ರತಿಯೊಬ್ಬರಿಗೂ ರಾಜ್ಯಭಾಗ್ಯವು ಸಿಗಲು ಸಾಧ್ಯವಿಲ್ಲ. ಪತಿತರು ಅವರ ಮುಂದೆ ಹೋಗಿ ತಲೆ ಬಾಗುತ್ತಾರೆ. ನಾವು ಭಕ್ತರಾಗಿದ್ದೇವೆಂದು ತಿಳಿಯುತ್ತಾರೆ, ಪಾವನರ ಮುಂದೆ ಹೋಗಿ ತಲೆ ಬಾಗುತ್ತಾರೆ. ಭಕ್ತಿಮಾರ್ಗವೂ ಅರ್ಧಕಲ್ಪ ನಡೆಯುತ್ತದೆ. ಈಗ ನಿಮಗೆ ಭಗವಂತನು ಸಿಕ್ಕಿದ್ದಾರೆ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ, ಭಕ್ತಿಯ ಫಲವನ್ನು ಕೊಡಲು ಬಂದಿದ್ದೇನೆ. ಭಗವಂತನು ಯಾವುದಾದರೊಂದು ರೂಪದಲ್ಲಿ ಬಂದು ಬಿಡುವರೆಂದು ಹಾಡುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ನಾನು ಯಾವುದಾದರೂ ಎತ್ತಿನ ಗಾಡಿಯಲ್ಲಿ ಬರುತ್ತೇನೆಯೇ! ಯಾರು ಶ್ರೇಷ್ಠಾತಿ ಶ್ರೇಷ್ಠನಾಗಿದ್ದರು, ಯಾರು 84 ಜನ್ಮಗಳನ್ನು ಪೂರ್ಣ ಮಾಡಿದ್ದಾರೋ ಅವರಲ್ಲಿಯೇ ಬರುತ್ತೇನೆ. ಉತ್ತಮ ಪುರುಷರು ಸತ್ಯಯುಗದಲ್ಲಿರುತ್ತಾರೆ, ಕಲಿಯುಗದಲ್ಲಿ ಕನಿಷ್ಠರು-ತಮೋಪ್ರಧಾನರಿದ್ದಾರೆ. ಈಗ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ತಂದೆಯು ಬಂದು ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುತ್ತಾರೆ, ಇದು ಆಟವಾಗಿದೆ. ಒಂದುವೇಳೆ ಇದನ್ನು ತಿಳಿಯದಿದ್ದರೆ ಸ್ವರ್ಗದಲ್ಲೆಂದೂ ಬರುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯ ಸಂಗದಿಂದ ಸ್ವಯಂನ್ನು ಪಾರಸಬುದ್ಧಿಯವರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಸಂಪೂರ್ಣ ನಿರ್ವಿಕಾರಿಗಳಾಗಿರಬೇಕಾಗಿದೆ, ಕೆಟ್ಟ ಸಂಗದಿಂದ ದೂರವಿರಬೇಕಾಗಿದೆ.

2. ಸದಾ ಇದೇ ಖುಷಿಯಲ್ಲಿರಬೇಕಾಗಿದೆ - ನಾವು ಸ್ವದರ್ಶನ ಚಕ್ರಧಾರಿಗಳಿಂದ ಹೊಸ ಪ್ರಪಂಚದ ಮಾಲೀಕ ಚಕ್ರವರ್ತಿಗಳಾಗುತ್ತೇವೆ. ನಮ್ಮನ್ನು ಜ್ಞಾನಸೂರ್ಯವಂಶಿಗಳನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ನಮ್ಮ ಲಕ್ಷ್ಯವೇ ಇದಾಗಿದೆ.

ವರದಾನ:
ವಿಘ್ನಗಳನ್ನು ಮನೋರಂಜನೆಯ ಆಟ ಎಂದು ತಿಳಿದು ಪಾರು ಮಾಡುವಂತಹ ನಿರ್ವಿಘ್ನ, ವಿಜಯೀ ಭವ.

ವಿಘ್ನ ಬರುವುದು ಒಳ್ಳೆಯದು, ಆದರೆ ವಿಘ್ನಗಳು ನಮ್ಮನ್ನು ಸೋಲಿಸಬಾರದು. ವಿಘ್ನಗಳು ಬರುವುದೇ ನಮ್ಮನ್ನು ಬಲಶಾಲಿಗಳನ್ನಾಗಿ ಮಾಡಲು, ಆದ್ದರಿಂದ ವಿಘ್ನಗಳಿಗೆ ಗಾಬರಿಯಾಗುವ ಬದಲು ಅವುಗಳನ್ನು ಮನೋರಂಜನೆಯ ಆಟವೆಂದು ತಿಳಿದು ಅದನ್ನು ಪಾರು ಮಾಡಿ ಆಗ ಹೇಳಲಾಗುವುದು ನಿರ್ವಿಘ್ನ ವಿಜಯಿ. ಎಲ್ಲಿ ಸರ್ವ ಶಕ್ತಿವಂತ ತಂದೆಯ ಜೊತೆಯಿದೆ ಅಲ್ಲಿ ಗಾಬರಿಯಾಗುವ ಅವಶ್ಯಕತೆಯಿಲ್ಲ. ಕೇವಲ ತಂದೆಯ ನೆನಪು ಮತ್ತು ಸೇವೆಯಲ್ಲಿ ಬಿಜಿಯಾಗಿರಿ ಆಗ ನಿರ್ವಿಘ್ನರಾಗಿರುವಿರಿ. ಯಾವಾಗ ಬುದ್ಧಿ ಫ್ರೀಯಾಗುವುದು ಆಗ ವಿಘ್ನ ಅಥವಾ ಮಾಯೆ ಬರುವುದು, ಬಿಜಿಯಾಗಿದ್ದಾಗ ಮಾಯೆ ಅಥವಾ ವಿಘ್ನ ದೂರ ಸರಿದು ಬಿಡುವುದು.

ಸ್ಲೋಗನ್:

ಸುಖದ ಖಾತೆಯನ್ನು ಜಮಾ ಮಾಡಬೇಕಾದರೆ ಮರ್ಯಾದಾ ಪೂರ್ವಕವಾಗಿ ಹೃದಯದಿಂದ ಎಲ್ಲರಿಗೂ ಸುಖವನ್ನೆ ನೀಡಿ.