05.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿ ಆಗ ನೀವು ಸಂತುಷ್ಠ ಆಗಿ ಬಿಡುತ್ತೀರಿ, ದೃಷ್ಟಿಯಿಂದ ಸಂತುಷ್ಠ ಆಗುವುದೆಂದರೆ ವಿಶ್ವದ ಮಾಲೀಕರಾಗುವುದು"

ಪ್ರಶ್ನೆ:
ದೃಷ್ಟಿಯಿಂದ ಸಂತುಷ್ಠರನ್ನಾಗಿ ಮಾಡಿದರು ಸ್ವಾಮಿ ಸದ್ಗುರು... ಇದರ ವಾಸ್ತವಿಕ ಅರ್ಥವೇನು?

ಉತ್ತರ:
ಆತ್ಮಕ್ಕೆ ಯಾವಾಗ ತಂದೆಯ ಮೂಲಕ ಮೂರನೆಯ ಕಣ್ಣು ಪ್ರಾಪ್ತಿ ಆಗುತ್ತದೆ ಮತ್ತು ಆ ನೇತ್ರದಿಂದ ತಂದೆಯನ್ನು ಗುರುತಿಸುತ್ತದೆ ಆಗ ಸಂತುಷ್ಟರಾಗುತ್ತಾರೆ ಅರ್ಥಾತ್ ಸದ್ಗತಿ ಸಿಗುತ್ತದೆ. ತಂದೆ ಹೇಳುತ್ತಾರೆ ಮಕ್ಕಳೇ, ಆತ್ಮಾಭಿಮಾನಿಗಳಾಗಿ. ನೀವು ನನ್ನೊಂದಿಗೆ ದೃಷ್ಟಿಯನ್ನು ಇಡಿ ಅಂದರೆ ನನ್ನನ್ನು ನೆನಪು ಮಾಡಿ, ಅನ್ಯ ಎಲ್ಲಾ ಸಂಗಗಳನ್ನು ಬಿಟ್ಟು ನನ್ನೊಬ್ಬನ ಸಂಗವನ್ನೇ ಮಾಡಿ, ಆಗ ಕಂಗಾಲರಿಂದ ಸಂತುಷ್ಠರು ಅಂದರೆ ಸಾಹುಕಾರರಾಗುತ್ತೀರಿ.

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಯಾರ ಬಳಿ ಬಂದಿದ್ದೀರಿ? ಆತ್ಮೀಯ ತಂದೆಯ ಬಳಿ. ನಾವು ಶಿವ ತಂದೆಯ ಬಳಿ ಬಂದಿದ್ದೇವೆ ಎಂದು ತಿಳಿದುಕೊಳ್ಳುತ್ತೀರಿ. ಶಿವ ತಂದೆಯು ಎಲ್ಲಾ ಆತ್ಮಗಳ ತಂದೆ ಆಗಿದ್ದಾರೆ ಎಂದು ತಿಳಿದಿದ್ದೀರಿ. ತಂದೆಯು ಸುಪ್ರೀಂ ಶಿಕ್ಷಕರಾಗಿದ್ದಾರೆ ಅಂದಾಗ ಪರಮ ಸದ್ಗುರು ಆಗಿದ್ದಾರೆ ಎಂದು ಇದೂ ಸಹ ಮಕ್ಕಳಿಗೆ ನಿಶ್ಚಯ ಇರಬೇಕಾಗಿದೆ. ಸುಪ್ರೀಂ ಎಂದರೆ ಪರಂ ಎಂದು ಹೇಳಲಾಗುತ್ತದೆ, ಅವರನ್ನೇ ನೆನಪು ಮಾಡಬೇಕಾಗುತ್ತದೆ. ದೃಷ್ಟಿಯೊಂದಿಗೆ ದೃಷ್ಟಿಯನ್ನು ಜೋಡಿಸಬೇಕಾಗಿದೆ. ಗಾಯನವಿದೆ - ದೃಷ್ಟಿಯಿಂದ ಸಂತುಷ್ಟರಾಗುವುದು, ಕೀಂದಾ ಸ್ವಾಮಿ ಸದ್ಗುರು... ಅದರ ಅರ್ಥ ಬೇಕಾಗಿದೆ. ದೃಷ್ಟಿಯಿಂದ ಸಂತುಷ್ಟತೆ ಯಾರಿಗೆ ಬೇಕು? ಅವಶ್ಯವಾಗಿ ಇಡೀ ಪ್ರಪಂಚಕ್ಕೆ ಎಂದು ಹೇಳುವವರು ಏಕೆಂದರೆ, ಸರ್ವರ ಸದ್ಗತಿದಾತ ಆಗಿದ್ದಾರೆ. ಸರ್ವರನ್ನು ಈ ಪ್ರಪಂಚದಿಂದ ಕರೆದೊಯ್ಯುವವರಾಗಿದ್ದಾರೆ. ಈಗ ದೃಷ್ಟಿ ಯಾರದಾಗಿದೆ? ಈ ಕಣ್ಣಿನಿಂದ ಆಗುತ್ತದೆಯೇ? ಇಲ್ಲ. ಜ್ಞಾನದ ಮೂರನೆಯ ನೇತ್ರ ಸಿಗುವುದು. ಇವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ ಎಂದು ಆತ್ಮಕ್ಕೆ ತಿಳಿಯುತ್ತದೆ. ನನ್ನನ್ನು ನೆನಪು ಮಾಡಿ ಎಂದು ಆತ್ಮಗಳಿಗೆ ಸಲಹೆ ನೀಡುತ್ತಾರೆ. ಆತ್ಮಗಳೇ ಪತಿತ, ತಮೋಪ್ರಧಾನರಾಗಿದ್ದಾರೆ, ಇದು 84ನೇ ಜನ್ಮವಾಗಿದೆ, ಈಗ ನಾಟಕವು ಅವಶ್ಯವಾಗಿ ಪೂರ್ಣ ಆಗಲು ಬೇಕು ಎಂದು ಈಗ ತಂದೆಯು ಆತ್ಮಗಳಿಗೆ ತಿಳಿಸುತ್ತಿರುವರು. ಪ್ರತಿ ಕಲ್ಪ ಹಳೆಯದರಿಂದ ಹೊಸದು ಆಗಲೇಬೇಕು, ಹೊಸದರಿಂದ ಹಳೆಯದಾಗಲೇಬೇಕು. ಹೆಸರು ಸಹ ಭಿನ್ನವಾಗಿದೆ, ಹೊಸ ಪ್ರಪಂಚದ ಹೆಸರಾಗಿದೆ - ಸತ್ಯಯುಗ. ಮೊದಲು ನೀವು ಸತ್ಯಯುಗದಲ್ಲಿ ಇದ್ದಿರಿ, ಪುನಃ ಪುನರ್ಜನ್ಮವನ್ನು ಪಡೆಯುತ್ತಾ-ಪಡೆಯುತ್ತಾ 84 ಜನ್ಮಗಳನ್ನು ಪಡೆಯುತ್ತೀರಿ, ಈಗ ನಿಮ್ಮ ಆತ್ಮ ತಮೋಪ್ರಧಾನವಾಗಿದೆ, ತಂದೆಯನ್ನು ನೆನಪು ಮಾಡುತ್ತಿದ್ದರೆ ಸಂತೃಪ್ತರಾಗುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ನನ್ನನ್ನು ನೆನಪು ಮಾಡಿ ಎಂದು ತಂದೆಯು ಸನ್ಮುಖದಲ್ಲಿ ತಿಳಿಸುತ್ತಾರೆ. ನಾನು ಯಾರು? ಪರಮಪಿತ ಪರಮಾತ್ಮನಾಗಿದ್ದೇನೆ. ಮಕ್ಕಳೇ ಆತ್ಮಾಭಿಮಾನಿಗಳಾಗಿ ಮತ್ತೆ ದೇಹದ ಅಭಿಮಾನದಲ್ಲಿ ಬರಬೇಡಿ ಎಂದು ತಂದೆಯು ತಿಳಿಸುತ್ತಾರೆ. ಆತ್ಮಾಭಿಮಾನಿಗಳಾಗಿ ನೀವು ನನ್ನೊಂದಿಗೆ ದೃಷ್ಟಿಯನ್ನು ಜೋಡಿಸಿ ಆಗ ಸಂತುಷ್ಟರಾಗುತ್ತೀರಿ. ತಂದೆಯನ್ನು ನೆನಪು ಮಾಡುತ್ತಾ ಇರಿ. ಇದರಲ್ಲಿ ಯಾವುದೇ ಕಷ್ಟವಿಲ್ಲ. ಆತ್ಮವೇ ಓದುತ್ತಿದೆ, ಪಾತ್ರವನ್ನು ಅಭಿನಯಿಸುತ್ತಿದೆ. ಎಷ್ಟು ಚಿಕ್ಕದಾಗಿದೆ. ಇಲ್ಲಿಗೆ ಬಂದ ನಂತರ 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತದೆ ನಂತರ ಅದೇ ಪಾತ್ರವನ್ನು ಪುನರಾವರ್ತಿಸಬೇಕಾಗುತ್ತದೆ. 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತಾ ಆತ್ಮವು ಪತಿತವಾಗಿಬಿಟ್ಟಿದೆ, ಈಗ ಆತ್ಮನಲ್ಲಿ ಏನೂ ಶಕ್ತಿ ಇಲ್ಲ, ಸಂತುಷ್ಟತೆ ಇಲ್ಲ, ಕಂಗಾಲ್ರಾಗಿದೆ ಅಂದಾಗ ಪುನಃ ಸಂತುಷ್ಟ ಹೇಗೆ ಮಾಡುವುದು? ಈ ಅಕ್ಷರ ಭಕ್ತಿ ಮಾರ್ಗದ್ದಾಗಿದೆ. ಯಾವುದರ ಬಗ್ಗೆ ತಂದೆಯು ತಿಳಿಸುತ್ತಾರೆ. ವೇದ, ಶಾಸ್ತ್ರ, ಚಿತ್ರ ಮುಂತಾದವುಗಳ ಬಗ್ಗೆಯೂ ತಿಳಿಸುತ್ತಾರೆ. ನೀವು ಈ ಚಿತ್ರಗಳನ್ನು ಶ್ರೀಮತದನುಸಾರವಾಗಿ ಮಾಡುತ್ತೀರಿ. ಆಸುರೀ ಮತದಂತೆ ಅನೇಕಾನೇಕ ಚಿತಗಳನ್ನು ಮಾಡಿದ್ದಾರೆ, ಅದು ಮಣ್ಣಿನದು, ಕಲ್ಲಿನದ್ದಾಗಿದೆ. ಅದಕ್ಕೆ ಯಾವುದೇ ವೃತ್ತಾಂತವಿಲ್ಲ. ಇಲ್ಲಂತೂ ತಂದೆಯು ಬಂದು ಮಕ್ಕಳಿಗೆ ಓದಿಸುತ್ತಾರೆ. ಭಗವಾನುವಾಚವಿದೆ ಎಂದರೆ ಅವರ ಜ್ಞಾನವಾಯಿತು. ವಿದ್ಯಾರ್ಥಿಗಳಿಗೆ ಇವರು ಇಂತಹ ಶಿಕ್ಷಕರು ಎಂದು ತಿಳಿದಿರುತ್ತದೆ. ಇಲ್ಲಿ ನೀವು ಮಕ್ಕಳಿಗೆ ತಿಳಿದಿದೆ - ಬೇಹದ್ದಿನ ತಂದೆಯು ಒಂದೇ ಬಾರಿ ಬಂದು ಇಂತಹ ವಿಚಿತ್ರವಾದ ವಿದ್ಯೆಯನ್ನು ಓದಿಸುತ್ತಾರೆ. ಈ ವಿದ್ಯೆ ಮತ್ತು ಆ ವಿದ್ಯೆಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ಆ ವಿದ್ಯೆಯನ್ನು ಓದುತ್ತಾ-ಓದುತ್ತಾ ರಾತ್ರಿಯಾಗಿ ಬಿಡುತ್ತದೆ. ಈ ವಿದ್ಯಾಭ್ಯಾಸದಿಂದ ದಿನದಲ್ಲಿ ಹೋಗುತ್ತೀರಿ. ಲೌಕಿಕ ವಿದ್ಯೆಯನ್ನಂತೂ ಜನ್ಮ-ಜನ್ಮಾಂತರದಿಂದಲೂ ಓದುತ್ತಾ ಬಂದಿರಿ. ಈ ವಿದ್ಯೆಯಲ್ಲಂತೂ ಯಾವಾಗ ಆತ್ಮವು ಪವಿತ್ರ ಆಗುತ್ತದೋ, ಆಗ ಧಾರಣೆ ಆಗುತ್ತದೆ ಎಂದು ತಂದೆಯೂ ಸ್ಪಷ್ಟವಾಗಿ ತಿಳಿಸುತ್ತಾರೆ. ಸಿಂಹಿಣಿಯ ಹಾಲು ಚಿನ್ನದ ಪಾತ್ರೆಯಲ್ಲಿಯೇ ನಿಲ್ಲುತ್ತದೆ ಎಂದು ಹೇಳುತ್ತಾರೆ. ನಾವು ಈಗ ಚಿನ್ನದ ಪಾತ್ರೆಯಾಗುತ್ತಿದ್ದೇವೆ ಎಂದು ನೀವು ಮಕ್ಕಳು ತಿಳಿಯುತ್ತೀರಿ. ಆಗುವುದು ಮನುಷ್ಯರೇ ಆದರೆ, ಆತ್ಮವು ಸಂಪೂರ್ಣ ಪವಿತ್ರ ಆಗಬೇಕಾಗಿದೆ. 24 ಕ್ಯಾರೆಟ್ ಇದ್ದದ್ದು ಈಗ 9 ಕ್ಯಾರೆಟ್ ಆಗಿಬಿಟ್ಟಿದೆ. ಆತ್ಮದ ಜ್ಯೋತಿಯು ಜಾಗೃತವಾಗಿತ್ತು, ಈಗ ನಂದಿ ಹೋಗಿದೆ. ಜ್ಯೋತಿಯು ಜಾಗೃತರಾಗಿರುವವರಲ್ಲಿ ಮತ್ತು ನಂದಿಹೋಗುವವರಲ್ಲಿಯೂ ಅಂತರವಿದೆ. ಜ್ಯೋತಿಯು ಹೇಗೆ ಜಾಗೃತವಾಯಿತು ಮತ್ತೆ ಪದವಿಯನ್ನು ಹೇಗೆ ಪಡೆದರು ಎಂದು ತಂದೆಯು ತಿಳಿಸುತ್ತಾರೆ. ಮಕ್ಕಳೇ ನನ್ನನ್ನು ನೆನಪು ಮಾಡಿ, ಯಾರು ನನ್ನನ್ನು ಬಹಳ ಚೆನ್ನಾಗಿ ನೆನಪು ಮಾಡುತ್ತಾರೋ ಅವರನ್ನು ನಾನೂ ಸಹ ಚೆನ್ನಾಗಿ ನೆನಪು ಮಾಡುತ್ತೇನೆ. ಇದೂ ಸಹ ಮಕ್ಕಳಿಗೆ ಗೊತ್ತಿದೆ - ದೃಷ್ಟಿಯಿಂದ ಸಂತುಷ್ಠ ಮಾಡುವಂತಹ ಒಬ್ಬ ತಂದೆಯೇ ಸ್ವಾಮಿ ಆಗಿದ್ದಾರೆ. ಇವರ (ಬ್ರಹ್ಮಾ) ಆತ್ಮವು ಸಂತೃಪ್ತ ಆಗುತ್ತದೆ. ನೀವೆಲ್ಲರೂ ಪತಂಗಗಳಾಗಿದ್ದೀರಿ, ತಂದೆಗೆ ಜ್ಯೋತಿ ಎಂದು ಹೇಳಲಾಗುತ್ತದೆ, ಕೆಲವು ಪತಂಗಗಳು ಜ್ಯೋತಿಯ ಬಳಿ ಸುತ್ತಾಡಲು ಬರುತ್ತಾರೆ. ಇನ್ನೂ ಕೆಲವು ಪತಂಗಗಳು ಚೆನ್ನಾಗಿ ಅರಿತುಕೊಳ್ಳುತ್ತಾರೆ, ಜೀವಿಸಿದ್ದಂತೆಯೇ ಸಾಯುತ್ತಾರೆ. ಕೆಲವರು ಕೇವಲ ತಿಳಿದುಕೊಂಡು ಹೊರಟು ಹೋಗುತ್ತಾರೆ ಮತ್ತೆ ಕೆಲಕೆಲವೊಮ್ಮೆ ಬರುತ್ತಾರೆ ಮತ್ತೆ ಹೊರಟು ಹೋಗುತ್ತಾರೆ. ಈ ಸಂಗಮಯುಗದ್ದೇ ಪೂರ್ಣ ಗಾಯನವಿದೆ. ಈ ಸಮಯದಲ್ಲಿ ಏನೆಲ್ಲವೂ ನಡೆಯುತ್ತದೆಯೋ ಅದರದ್ದೇ ಶಾಸ್ತ್ರಗಳಾಗುತ್ತವೆ. ತಂದೆಯು ಒಂದೇ ಬಾರಿ ಬಂದು ಆಸ್ತಿಯನ್ನು ಕೊಟ್ಟು ಹೊರಟು ಹೋಗುತ್ತಾರೆ. ಬೇಹದ್ದಿನ ತಂದೆಯು ಅವಶ್ಯವಾಗಿ ಬೇಹದ್ದಿನ ಅಸ್ತಿಯನ್ನೇ ಕೊಡುತ್ತಾರೆ. 21 ಪೀಳಿಗೆಗಳೆಂದೂ ಗಾಯನವಿದೆ. ಸತ್ಯಯುಗದಲ್ಲಿ ಆಸ್ತಿಯನ್ನು ಯಾರು ಕೊಡುತ್ತಾರೆ? ರಚಯಿತನಾದ ಭಗವಂತನೇ ರಚನೆಗೆ ಅರ್ಧಕಲ್ಪಕ್ಕಾಗಿ ಆಸ್ತಿಯನ್ನು ಕೊಡುತ್ತಾರೆ. ಎಲ್ಲರೂ ಅವರ ನೆನಪನ್ನೇ ಮಾಡುತ್ತಾರೆ. ಅವರು ತಂದೆಯು ಆಗಿದ್ದಾರೆ, ಶಿಕ್ಷಕರೂ ಆಗಿದ್ದಾರೆ, ಸ್ವಾಮಿ, ಸದ್ಗುರುವೂ ಆಗಿದ್ದಾರೆ. ಭಲೆ ನೀವು ಮತ್ತ್ಯಾರನ್ನೇ ಸ್ವಾಮಿ, ಸದ್ಗುರು ಎಂದು ಹೇಳಬಹುದು ಆದರೆ, ಸತ್ಯ ಒಬ್ಬರೇ ತಂದೆ ಆಗಿದ್ದಾರೆ. ಸದಾ ತಂದೆಗೆ ಸತ್ಯ ಎಂದು ಹೇಳಲಾಗುತ್ತದೆ. ಆ ಸತ್ಯ ತಂದೆಯೇ ಬಂದು ಏನು ಮಾಡುತ್ತಾರೆ? ಅವರೇ ಹಳೆಯ ಪ್ರಪಂಚವನ್ನು ಸತ್ಯ ಖಂಡವನ್ನಾಗಿ ಮಾಡಿ ಬಿಡುತ್ತಾರೆ. ಸತ್ಯ ಖಂಡಕ್ಕಾಗಿ ನಾವು ಪುರುಷಾರ್ಥ ಮಾಡುತ್ತಿದ್ದೇವೆ. ಸತ್ಯ ಖಂಡ ಇದ್ದಾಗ ಮತ್ತೆಲ್ಲಾ ಖಂಡಗಳು ಇರಲಿಲ್ಲ. ಇವೆಲ್ಲವೂ ಕೊನೆಯಲ್ಲಿ ಬರುತ್ತವೆ. ಸತ್ಯ ಖಂಡದ ಬಗ್ಗೆ ಯಾರಿಗೂ ತಿಳಿದೇ ಇಲ್ಲ. ಬಾಕಿ ಈಗ ಯಾವ ಖಂಡಗಳು ಇದೆಯೋ ಅದರ ಬಗ್ಗೆ ಎಲ್ಲರಿಗೂ ತಿಳಿದಿದೆ. ತಮ್ಮ-ತಮ್ಮ ಧರ್ಮ ಸ್ಥಾಪಕರನ್ನೂ ತಿಳಿದುಕೊಂಡಿದ್ದಾರೆ. ಆದರೆ ಸೂರ್ಯವಂಶಿ, ಚಂದ್ರವಂಶಿ ಮತ್ತೆ ಈ ಸಂಗಮಯುಗೀ ಬ್ರಾಹ್ಮಣ ಕುಲವನ್ನು ಯಾರೂ ತಿಳಿದುಕೊಂಡಿಲ್ಲ. ಪ್ರಜಾಪಿತ ಬ್ರಹ್ಮಾರವರನ್ನು ಒಪ್ಪುತ್ತಾರೆ. ನಾವು ಬ್ರಾಹ್ಮಣರು ಬ್ರಹ್ಮಾರವರ ಸಂತಾನರಾಗಿದ್ದೇವೆ ಎಂದು ಹೇಳುತ್ತಾರೆ. ಆದರೆ, ಅವರು ಕುಖವಂಶಾವಳಿ ಆಗಿದ್ದಾರೆ. ನೀವು ಮುಖವಂಶಾವಳಿ ಆಗಿದ್ದೀರಿ. ಅವರು ಅಪವಿತ್ರರಾಗಿದ್ದಾರೆ, ನೀವು ಮುಖವಂಶಾವಳಿಗಳು ಪವಿತ್ರರಾಗಿದ್ದೀರಿ, ನೀವು ಮುಖವಂಶಾವಳಿ ಆಗಿ ಈ ಛೀ-ಛೀ ಪ್ರಪಂಚ, ರಾವಣ ರಾಜ್ಯದಿಂದ ಹೊರಟು ಹೋಗುತ್ತೀರಿ. ಸತ್ಯಯುಗದಲ್ಲಿ ರಾವಣರಾಜ್ಯವು ಇರುವುದೇ ಇಲ್ಲ. ಈಗ ನೀವು ಹೊಸ ಪ್ರಪಂಚದಲ್ಲಿ ಹೋಗುತ್ತೀರಿ ಅದಕ್ಕೆ, ನಿರ್ವಿಕಾರಿ ಪ್ರಪಂಚವೆಂದು ಹೇಳುತ್ತಾರೆ. ಪ್ರಪಂಚವೇ ಹೊಸದು ಮತ್ತು ಹಳೆಯದಾಗುತ್ತದೆ. ಹೇಗಾಗುತ್ತದೆ ಎಂಬುದನ್ನೂ ಸಹ ನೀವು ಅರಿತು ಕೊಂಡಿದ್ದೀರಿ. ಅನ್ಯ ಯಾರ ಬುದ್ಧಿಯಲ್ಲಿಯೂ ಇಲ್ಲ. ಲಕ್ಷಾಂತರ ವರ್ಷಗಳ ಮಾತಂತೂ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದಂತೂ ಸ್ವಲ್ಪ ಸಮಯದ ಮಾತಾಗಿದೆ, ಇದನ್ನು ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ.

ಯಾವಾಗ ವಿಶೇಷವಾಗಿ ಭಾರತದಲ್ಲಿ ಧರ್ಮದ ನಿಂದನೆ ಆಗುವುದೋ ಆಗಲೇ ನಾನು ಬರುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಅನ್ಯ ಜಾಗಗಳಲ್ಲಿ ನಿರಾಕಾರ ಪರಮಾತ್ಮನು ಯಾರಾಗಿದ್ದಾರೆ ಎಂದು ಯಾರಿಗೂ ಗೊತ್ತೇ ಇಲ್ಲ. ದೊಡ್ಡ-ದೊಡ್ಡ ಲಿಂಗಗಳನ್ನು ಮಾಡಿಟ್ಟಿದ್ದಾರೆ. ಆತ್ಮದ ಗಾತ್ರವೂ ಸಹ ಚಿಕ್ಕದು-ದೊಡ್ಡದಾಗಿರುವುದಿಲ್ಲ ಎಂದು ಮಕ್ಕಳಿಗೆ ತಿಳಿಸಲಾಗಿದೆ. ಹೇಗೆ ಆತ್ಮವು ಅವಿನಾಶಿ ಆಗಿದೆ, ಹಾಗೆಯೇ ತಂದೆಯೂ ಸಹ ಅವಿನಾಶಿ ಆಗಿದ್ದಾರೆ. ಅವರು ಪರಮಾತ್ಮನಾಗಿದ್ದಾರೆ. ಪರಮ ಅರ್ಥಾತ್ ಸದಾ ಪವಿತ್ರ, ನಿರ್ವಿಕಾರಿಗಳು. ನೀವು ಆತ್ಮಗಳೂ ಸಹ ನಿರ್ವಿಕಾರಿಗಳಾಗಿದ್ದೀರಿ, ಪ್ರಪಂಚವೂ ನಿರ್ವಿಕಾರಿ ಆಗಿತ್ತು. ಅದಕ್ಕೆ ಸಂಪೂರ್ಣ ನಿರ್ವಿಕಾರಿ ಎಂದೇ ಹೇಳಲಾಗುತ್ತದೆ, ಹೊಸ ಪ್ರಪಂಚವು ಪುನಃ ಅವಶ್ಯವಾಗಿ ಹಳೆಯದಾಗುತ್ತದೆ. ಕಲೆಗಳು ಕಡಿಮೆ ಆಗುತ್ತಾ ಹೋಗುತ್ತವೆ. 2 ಕಲೆ ಕಡಿಮೆ ಚಂದ್ರವಂಶ ರಾಜ್ಯವಿತ್ತು ನಂತರ ಪ್ರಪಂಚವು ಹಳೆಯದಾಗುತ್ತಾ ಹೋಯಿತು. ಕೊನೆಗೆ ಮತ್ತೆಲ್ಲಾ ಖಂಡಗಳು ಬರುತ್ತಾ ಹೋಗುತ್ತವೆ. ಅದನ್ನು ಬೈಪ್ಲಾಟ್ ಎಂದು ಹೇಳುತ್ತಾರೆ ಆದರೆ ಮಿಕ್ಸ್ಆಪ್ (ಸೇರ್ಪಡೆ) ಆಗಿಬಿಟ್ಟಿದೆ. ಡ್ರಾಮಾದನುಸಾರ ಏನಾಗಬೇಕೋ ಅದೇ ಪುನಃ ಪುನರಾವರ್ತನೆ ಆಗುತ್ತದೆ. ಹೇಗೆ ಬೌದ್ಧಿಯರ ಹಿರಿಯರು ಬಂದರು ಅನೇಕರನ್ನು ಬೌದ್ಧ ಧರ್ಮದಲ್ಲಿ ತೆಗೆದುಕೊಂಡು ಹೋದರು. ಧರ್ಮವನ್ನು ಬದಲಾಯಿಸಿದರು. ಹಿಂದೂಗಳು ತಮ್ಮ ಧರ್ಮವನ್ನು ತಾವೇ ಬದಲಾಯಿಸಿಕೊಂಡಿದ್ದಾರೆ ಏಕೆಂದರೆ, ಕರ್ಮ ಭ್ರಷ್ಟರಾಗಿರುವುದರಿಂದ ಧರ್ಮಭ್ರಷ್ಟರೂ ಆಗಿದ್ದಾರೆ, ವಾಮ ಮಾರ್ಗದಲ್ಲಿ ಹೊರಟು ಹೋಗಿದ್ದಾರೆ. ಜಗನ್ನಾಥನ ಮಂದಿರದಲ್ಲಿಯೂ ಭಲೆ ಹೋಗಿರಬಹುದು ಆದರೆ, ಯಾರಿಗೂ ಏನೂ ವಿಚಾರವು ನಡೆಯುವುದಿಲ್ಲ. ತಾವು ವಿಕಾರಿಗಳಾಗುವುದರಿಂದ ಅವರನ್ನೂ ವಿಕಾರಿಗಳನ್ನಾಗಿ ಮಾಡಿ ತೋರಿಸಿ ಬಿಟ್ಟಿದ್ದಾರೆ. ದೇವತೆಗಳು ಯಾವಾಗ ವಾಮ ಮಾರ್ಗದಲ್ಲಿ ಹೋಗುವುದರಿಂದಲೇ ಈ ರೀತಿ ಆಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಈ ಚಿತ್ರಗಳೂ ಸಹ ಆ ಸಮಯದ್ದೇ ಆಗಿದೆ. ದೇವತಾ ಹೆಸರಂತೂ ಬಹಳ ಚೆನ್ನಾಗಿದೆ. ಹಿಂದೂ ಎಂಬುದು ಹಿಂದೂಸ್ಥಾನದ ಹೆಸರಾಗಿದೆ ಆದರೆ, ತಮ್ಮನ್ನೇ ಹಿಂದೂಗಳು ಎಂದು ಹೇಳಿಬಿಟ್ಟಿದ್ದಾರೆ, ಎಷ್ಟು ತಪ್ಪಾಗಿದೆ! ಆದ್ದರಿಂದ, ತಂದೆಯು ತಿಳಿಸುತ್ತಾರೆ ಯದಾಃಯದಾಹಿಃ ಧರ್ಮಸ್ಯಃ ಗ್ಲಾನಿರ್ಭವತಿ ಭಾರತಃ.... ತಂದೆಯು ಭಾರತದಲ್ಲಿಯೇ ಬರುತ್ತಾರೆ. ನಾನು ಹಿಂದೂಸ್ಥಾನದಲ್ಲಿ ಬರುತ್ತೇನೆ ಎಂದು ಹೇಳುವುದಿಲ್ಲ. ಇದು ಭಾರತವಾಗಿದೆ, ಹಿಂದೂಸ್ಥಾನ ಅಥವಾ ಹಿಂದೂ ಧರ್ಮವಿಲ್ಲ, ಮುಸಲ್ಮಾನರು ಹಿಂದೂಸ್ಥಾನವೆಂಬ ಹೆಸರನ್ನು ಇಟ್ಟಿದ್ದಾರೆ. ಇದು ಸಹ ನಾಟಕದಲ್ಲಿ ನಿಗಧಿಯಾಗಿದೆ, ಇದನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕು. ಇದು ಜ್ಞಾನವಾಗಿದೆ. ಪುನರ್ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ವಾಮ ಮಾರ್ಗದಲ್ಲಿ ಬರುತ್ತಾ-ಬರುತ್ತಾ ಭ್ರಷ್ಟಾಚಾರಿಗಳಾಗಿ ಬಿಡುತ್ತಾರೆ. ನಂತರ ದೇವತೆಗಳ ಮುಂದೆ ಹೋಗಿ ತಾವು ಸಂಪೂರ್ಣ ನಿರ್ವಿಕಾರಿಗಳಾಗಿದ್ದೀರಿ, ನಾವು ವಿಕಾರಿ ಪಾಪಿಗಳಾಗಿದ್ದೇವೆ ಎಂದು ಹೇಳುತ್ತೇವೆ. ಮತ್ತ್ಯಾವುದೇ ಖಂಡದವರು ನಾವು ನೀಚರು ಅಥವಾ ನಮ್ಮಲ್ಲಿ ಯಾವುದೇ ಗುಣವಿಲ್ಲ ಎಂದು ಹೇಳುವುದಿಲ್ಲ. ಈ ರೀತಿ ಹೇಳುವುದನ್ನೂ ಸಹ ಎಂದೂ ಕೇಳಿರುವುದಿಲ್ಲ. ಸಿಖ್ ಧರ್ಮದವರೂ ಸಹ ಗ್ರಂಥದ ಮುಂದೆ ಕುಳಿತು ಕೊಳ್ಳುತ್ತಾರೆ ಆದರೆ, ತಾವು ನಿರ್ವಿಕಾರಿಗಳು ನಾವು ವಿಕಾರಿಗಳು ಎಂದು ಎಂದಿಗೂ ಹೇಳುವುದಿಲ್ಲ. ನಾನಕ್ ಪಂಥದವರು ಕಂಕಣವನ್ನು ಕಟ್ಟಿಕೊಳ್ಳುತ್ತಾರೆ. ಅದು ನಿರ್ವಿಕಾರಿತನದ ಚಿಹ್ನೆಯಾಗಿದೆ ಆದರೆ, ವಿಕಾರದ ವಿನಃ ಇರಲು ಅವರಿಂದ ಆಗುವುದಿಲ್ಲ. ಸುಳ್ಳು ಚಿಹ್ನೆಗಳನ್ನು ಇಟ್ಟು ಬಿಟ್ಟಿದ್ದಾರೆ, ಹೇಗೆ ಹಿಂದೂಗಳು ಜನಿವಾರವನ್ನು ಧರಿಸುತ್ತಾರೆ. ಇದು ಪವಿತ್ರತೆಯ ಸಂಕೇತವಾಗಿದೆ. ಇಂದಿನ ದಿನಗಳಲ್ಲಂತೂ ಧರ್ಮವನ್ನೂ ಒಪ್ಪುವುದಿಲ್ಲ. ಈ ಸಮಯದಲ್ಲಿ ಭಕ್ತಿಮಾರ್ಗವು ನಡೆಯುತ್ತದೆ, ಇದಕ್ಕೆ ಭಕ್ತಿಖಾಂಡವೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಜ್ಞಾನ ಕಾಂಡವಿರುತ್ತದೆ, ಅಲ್ಲಿ ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗುತ್ತಾರೆ. ಕಲಿಯುಗದಲ್ಲಿ ಯಾರೂ ಸಂಪೂರ್ಣ ನಿರ್ವಿಕಾರಿಗಳಾಗಿರಲು ಸಾಧ್ಯವಿಲ್ಲ. ಪ್ರವೃತ್ತಿ ಮಾರ್ಗದವರ ಸ್ಥಾಪನೆಯನ್ನು ತಂದೆಯು ಮಾಡುತ್ತಾರೆ. ಉಳಿದೆಲ್ಲಾ ಗುರುಗಳು ನಿವೃತ್ತಿ ಮಾರ್ಗದವರಾಗಿರುತ್ತಾರೆ. ತಂದೆಯು ತಿಳಿಸುತ್ತಾರೆ - ಇದೇನೆಲ್ಲವನ್ನೂ ಓದುತ್ತೀರೋ ಅದರಿಂದ ನಾನು ಸಿಗುವುದಿಲ್ಲ. ಯಾವಾಗ ನಾನು ಬರುತ್ತೇನೆಯೋ ಆಗ ಎಲ್ಲರನ್ನು ದೃಷ್ಟಿಯಿಂದ ಸಂತುಷ್ಠ ಮಾಡಿ ಬಿಡುತ್ತೇನೆ. ದೃಷ್ಟಿಯಿಂದ ಸಂತುಷ್ಠ ಮಾಡುವ ಸದ್ಗುರು ಎಂದು ಗಾಯನವಿದೆ. ಇಲ್ಲಿ ನೀವು ಏಕೆ ಬಂದಿದ್ದೀರಿ? ಸಂತುಷ್ಠ ಆಗಲು, ವಿಶ್ವದ ಮಾಲೀಕರಾಗಲು. ತಂದೆಯನ್ನು ನೆನಪು ಮಾಡುವುದರಿಂದ ಸಂತುಷ್ಠ ಆಗಿ ಬಿಡುತ್ತೀರಿ. ಈ ರೀತಿ ಮಾಡಿದರೆ, ನೀವು ಈ ರೀತಿ ಆಗುತ್ತೀರಿ ಎಂದು ಯಾರೂ ಹೇಳುವುದಿಲ್ಲ. ನೀವು ಈ ರೀತಿ ಆಗಬೇಕು ಎಂದು ತಂದೆಯೇ ಹೇಳುತ್ತಾರೆ. ಈ ಲಕ್ಷ್ಮೀ-ನಾರಾಯಣರು ಹೇಗಾದರು? ಯಾರಿಗೂ ಗೊತ್ತಿಲ್ಲ. ನೀವು ಮಕ್ಕಳಿಗೆ ತಂದೆಯು ಎಲ್ಲವನ್ನು ತಿಳಿಸುತ್ತಾರೆ - ಇವರೇ 84 ಜನ್ಮಗಳನ್ನು ತೆಗೆದುಕೊಂಡು ಪತಿತರಾದರು ಪುನಃ ಪಾವನರನ್ನಾಗಿ ಮಾಡಲು ಬಂದಿದ್ದೇನೆ.

ತಂದೆಯು ತಮ್ಮ ಪರಿಚಯವನ್ನು ಕೊಡುತ್ತಾರೆ. ದೃಷ್ಟಿಯಿಂದ ಸಂತುಷ್ಠತೆಯನ್ನೂ ಮಾಡುತ್ತಾರೆ. ಇದನ್ನು ಯಾರಿಗಾಗಿ ಹೇಳುತ್ತಾರೆ? ಒಬ್ಬ ಸದ್ಗುರುವಿಗಾಗಿ. ಆ ಗುರುಗಳಂತು ಅನೇಕರಿದ್ದಾರೆ, ಮಾತೆಯರು ಮತ್ತು ಅಬಲೆಯರು ಮುಗ್ದರಾಗಿದ್ದಾರೆ (ಭೋಲಾ), ತಾವೆಲ್ಲರೂ ಸಹ ಭೋಲಾನಾಥನ ಮಕ್ಕಳಾಗಿದ್ದೀರಿ. ಹೇಗೆ ಶಂಕರನು ಕಣ್ಣು ತೆರೆದಾಗ ವಿನಾಶವಾಯಿತು ಎಂದು ಶಂಕರನ ಕುರಿತು ಹೇಳಿದ್ದಾರೆ. ಇದೂ ಸಹ ಪಾಪವಾಗಿ ಬಿಡುತ್ತದೆ. ತಂದೆಯು ಎಂದೂ ಇಂತಹ ಕೆಲಸಕ್ಕಾಗಿ ಆದೇಶ ನೀಡುವುದಿಲ್ಲ. ವಿನಾಶವಂತು ಅನ್ಯ ಯಾವುದೇ ವಸ್ತುಗಳಿಂದ ಆಗಬಹುದೆಲ್ಲವೇ! ತಂದೆಯು ಇಂತಹ ಸಲಹೆಯನ್ನು ಕೊಡುವುದಿಲ್ಲ. ಇದೆಲ್ಲವನ್ನೂ ವಿಜ್ಞಾನದವರು ತಯಾರಿಸುತ್ತಾರೆ. ನಾವೇ ನಮ್ಮ ಕುಲದ ವಿನಾಶ ಮಾಡಿಕೊಳ್ಳುತ್ತೇವೆ ಎಂದು ತಿಳಿಯುತ್ತಾರೆ. ಅವರೂ ಬಂಧಿತರಾಗಿದ್ದಾರೆ. ಅದನ್ನು ಮಾಡದೆ ಇರಲು ಅವರಿಂದ ಆಗುವುದಿಲ್ಲ. ಎಷ್ಟೊಂದು ಹೆಸರು ಬರುತ್ತದೆ, ಚಂದ್ರಗ್ರಹದ ಬಳಿಯೂ ಹೋಗುತ್ತಾರೆ ಆದರೆ ಪ್ರಯೋಜನವೇನೂ ಇಲ್ಲ.

ಮಧುರಾತಿ ಮಧುರ ಮಕ್ಕಳೇ, ನೀವು ತಂದೆಯೊಂದಿಗೆ ದೃಷ್ಟಿಯನ್ನು ಇಡಿ ಅಥವಾ ಹೇ ಆತ್ಮಗಳೇ, ನಮ್ಮ ತಂದೆಯನ್ನು ನೆನಪು ಮಾಡಿದರೆ ಸಂತುಷ್ಠ ಆಗಿಬಿಡುತ್ತೀರಿ. ಯಾರು ನನ್ನನ್ನು ನೆನಪು ಮಾಡುತ್ತಾರೋ ಅವರನ್ನು ನಾನೂ ಸಹ ನೆನಪು ಮಾಡುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಯಾರು ನನಗಾಗಿ ಸೇವೆ ಮಾಡುತ್ತಾರೋ ನಾನು ಅವರನ್ನು ನೆನಪು ಮಾಡುತ್ತೇನೆ. ಆದ್ದರಿಂದ ಅವರಿಗೆ ಬಲ ಸಿಗುತ್ತದೆ. ನೀವೆಲ್ಲರೂ ಇಲ್ಲಿ ಕುಳಿತಿದ್ದೀರಿ, ಯಾರು ಸಂತುಷ್ಠ ಆಗುತ್ತೀರೋ ಅವರೇ ರಾಜರಾಗುತ್ತಾರೆ. ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬರ ಸಂಗವನ್ನು ಸೇರುತ್ತೇವೆ ಎಂಬ ಗಾಯನವಿದೆ. ಆ ಒಬ್ಬರು ನಿರಾಕಾರನಾಗಿದ್ದಾರೆ. ಆತ್ಮವು ನಿರಾಕಾರನಾಗಿದೆ. ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಹೇ ಪತಿತಪಾವನ ಎಂದು ನೀವೂ ಸಹ ಹೇಳಿದ್ದೀರಿ ಅಂದಮೇಲೆ ಇದನ್ನು ಯಾರಿಗೆ ಹೇಳಿದ್ದೀರಿ? ಬ್ರಹ್ಮನಿಗೋ, ವಿಷ್ಣುವಿಗೋ ಅಥವಾ ಶಂಕರನಿಗೋ? ಅಲ್ಲ. ಪತಿತಪಾವನ ಒಬ್ಬ ತಂದೆಯಾಗಿದ್ದಾರೆ. ಅವರು ಸದಾ ಪಾವನರೇ ಆಗಿದ್ದಾರೆ. ಅವರಿಗೆ ಸರ್ವಶಕ್ತಿವಂತನೆಂದು ಹೇಳಲಾಗುತ್ತದೆ. ತಂದೆಯೇ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ ಮತ್ತು ಎಲ್ಲಾ ಶಾಸ್ತ್ರಗಳನ್ನು ಅರಿತಿದ್ದಾರೆ. ಆ ಸನ್ಯಾಸಿಗಳು ಶಾಸ್ತ್ರಗಳನ್ನು ಓದಿ ಬಿರುದುಗಳನ್ನು ಪಡೆಯುತ್ತಾರೆ. ತಂದೆಗಂತು ಮೊದಲೇ ಬಿರುದು ಸಿಕ್ಕಿದೆ, ಅವರು ಓದಿ ಪಡೆಯಬೇಕಾಗಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಜ್ಯೋತಿಯ ಮೇಲೆ (ತಂದೆಗೆ) ಜೀವಿಸಿದ್ದಂತೆಯೇ ಸಾಯುವ ಪತಂಗಗಳಾಗಬೇಕಾಗಿದೆ. ಕೇವಲ ಪ್ರದಕ್ಷಿಣೆ ಹಾಕಿ ಹೊರಟು ಹೋಗುವವರಲ್ಲ. ಈಶ್ವರೀಯ ವಿದ್ಯೆಯನ್ನು ಧಾರಣೆ ಮಾಡಲು ಬುದ್ಧಿಯನ್ನು ಸಂಪೂರ್ಣ ಪಾವನ ಮಾಡಿಕೊಳ್ಳಬೇಕಾಗಿದೆ.

2. ಮತ್ತೆಲ್ಲಾ ಸಂಗಗಳನ್ನು ಬಿಟ್ಟು ತಂದೆಯ ಸಂಗದಲ್ಲಿ ಇರಬೇಕಾಗಿದೆ. ಒಬ್ಬ ತಂದೆಯ ನೆನಪಿನಿಂದ ಸ್ವಯಂ ತನ್ನನ್ನು ಸಂತುಷ್ಠ ಮಾಡಿಕೊಳ್ಳಬೇಕಾಗಿದೆ.

ವರದಾನ:
ಹೃದಯದ ಪರಿಶೀಲನೆಯಿಂದ ದಿಲಾರಾಮನ ಆಶೀರ್ವಾದ ಪ್ರಾಪ್ತಿ ಮಾಡಿಕೊಳ್ಳುವಂತಹ ಸ್ವ ಪರಿವರ್ತಕ ಭವ

ಸ್ವಯಂ ಅನ್ನು ಪರಿವರ್ತನೆ ಮಾಡಿಕೊಳ್ಳ ಬೇಕಾದರೆ ಎರಡು ಮಾತಿನ ಸತ್ಯ ಹೃದಯದ ಪರಿಶೀಲನಾ ಶಕ್ತಿಯ ಅವಶ್ಯಕತೆಯಿದೆ 1- ತನ್ನ ಬಲಹೀನತೆಯ ಪರಿಶೀಲನೆ, 2- ಏನು ಪರಿಸ್ಥಿತಿ ಅಥವಾ ವ್ಯಕ್ತಿ ನಿಮಿತ್ತರಾಗುತ್ತಾರೆ ಅವರ ಇಚ್ಛೆ ಮತ್ತು ಅವರ ಮನಸ್ಸಿನ ಭಾವನೆಯ ಪರಿಶೀಲನೆ. ಪರಿಸ್ಥಿತಿಯ ಪೇಪರ್ ನ ಕಾರಣವನ್ನು ತಿಳಿದು ಸ್ವಯಂನಲ್ಲಿ ಪಾಸ್ ಆಗುವ ಶ್ರೇಷ್ಠ ಸ್ವರೂಪದ ಪರಿಶೀಲನೆ ಇದ್ದಲಿ ಸ್ವ-ಸ್ಥಿತಿ ಶ್ರೇಷ್ಠವಾಗಿದೆ, ಪರಿಸ್ಥಿತಿ ಪೇಪರ್ ಆಗಿದೆ- ಈ ಪರಿಶೀಲನೆ ಸಹಜವಾಗಿ ಪರಿವರ್ತನೆ ಮಾಡಿಸುವುದು ಮತ್ತು ಸತ್ಯ ಹೃದಯದ ಪರಿಶೀಲನೆ ಮಾಡಿದಾಗ ದಿಲಾರಾಮನ ಆಶೀರ್ವಾದ ಪ್ರಾಪ್ತಿಯಾಗುವುದು.

ಸ್ಲೋಗನ್:
ವಾರಿಸ್ ಇವರೇ ಆಗಿದ್ದಾರೆ ಯಾರು ಎವರೆಡಿಯಾಗಿ ಎಲ್ಲಾ ಕಾರ್ಯದಲ್ಲಿಯೂ ಜೀ ಹಝೂರ್ ಹಾಜಿರ್ ಎನ್ನುತ್ತಾರೆ ಅವರು.