05.05.24    Avyakt Bapdada     Kannada Murli    15.11.99     Om Shanti     Madhuban


ತಂದೆಯ ಸಮಾನರಾಗಲು ಸಹಜ ಪುರುಷಾರ್ಥವಾಗಿದೆ – “ಆಜ್ಞಾಕಾರಿಯಾಗುವುದು”


ಇಂದು ಬಾಪ್ದಾದಾರವರು ತಮ್ಮ ಹೋಲಿ ಹಂಸಗಳ ಗುಂಪನ್ನು ನೋಡುತ್ತಿದ್ದಾರೆ. ಪ್ರತಿ ಮಗು ಪವಿತ್ರ ಹಂಸವಾಗಿದೆ. ಸದಾ ಮನಸ್ಸಿನಲ್ಲಿ ಜ್ಞಾನ ರತ್ನಗಳ ಮನನ ಮಾಡುತ್ತಿರುತ್ತಾರೆ. ವ್ಯರ್ಥ ಕಲ್ಲುಗಳನ್ನು ಬಿಟ್ಟು ಜ್ಞಾನ ರತ್ನಗಳ ಮಂಥನ ಮಾಡುವುದೇ ಪವಿತ್ರ ಹಂಸಗಳ ಕೆಲಸವಾಗಿದೆ. ಪ್ರತಿಯೊಂದು ರತ್ನ ಎಷ್ಟು ಅಮೂಲ್ಯ! ಪ್ರತಿಯೊಂದು ಮಗುವು ಜ್ಞಾನದ ರತ್ನಗಳ ಗಣಿಯಾಗಿ ಮಾರ್ಪಟ್ಟಿದೆ. ಜ್ಞಾನದ ರತ್ನಗಳ ನಿಧಿಯಿಂದ ಸಂಪನ್ನರಾಗಿರುತ್ತಾರೆ.

ಇಂದು ಬಾಪ್ದಾದಾ ಮಕ್ಕಳಲ್ಲಿನ ಒಂದು ವಿಶೇಷ ಮಾತಿನ ಚೆಕಿಂಗ್ ಮಾಡುತ್ತಿದ್ದರು. ಅದು ಏನಾಗಿತ್ತು? ಜ್ಞಾನ ಮತ್ತು ಯೋಗದ ಸಹಜ ಧಾರಣೆಗಾಗಿ ಸಹಜವಾದ ಸಾಧನವಾಗಿದೆ. ತಂದೆ ಹಾಗೂ ದಾದಾ ಅವರಿಗೆ ವಿಧೇಯರಾಗಿ (ಆಜ್ಞಾಕಾರಿಯಾಗಿ) ನಡೆಯುವುದು. ತಂದೆಯ ರೂಪದಲ್ಲಿಯೂ ವಿಧೇಯರಾಗಿರುವುದು, ಶಿಕ್ಷಕನ ರೂಪದಲ್ಲಿಯೂ ಹಾಗೂ ಸದ್ಗುರುವಿನ ರೂಪದಲ್ಲಿಯೂ. ಮೂರು ರೂಪಗಳಲ್ಲಿ ವಿಧೇಯರಾಗಿರುವುದು ಅಂದರೆ ಸಹಜ ಪುರುಷಾರ್ಥಿಗಳಾಗಿರುವುದು. ಏಕೆಂದರೆ ಮೂರು ರೂಪಗಳಲ್ಲಿ ಮಕ್ಕಳಿಗೆ ಆಜ್ಞೆ ಸಿಕ್ಕಿದೆ. ಅಮೃತ ವೇಳೆಯಿಂದ ಹಿಡಿದು ರಾತ್ರಿಯವರೆಗೆ ಪ್ರತಿ ಸಮಯ ಪ್ರತಿ ಕರ್ತವ್ಯದ ಆಜ್ಞೆ ಸಿಕ್ಕಿದೆ. ಆಜ್ಞೆಯ ಪ್ರಮಾಣ ನಡೆಯುತ್ತಿರೆಂದರೆ ಯಾವುದೇ ಪ್ರಕಾರದ ಪರಿಶ್ರಮ ಅಥವಾ ಕಷ್ಟದ ಅನುಭವ ಆಗುವುದಿಲ್ಲ. ಪ್ರತಿ ಸಮಯದ ಮನಸ್ಸಿನ ಸಂಕಲ್ಪ, ಮಾತು ಹಾಗೂ ಕರ್ಮ ಮೂರು ಪ್ರಕಾರದ ಆಜ್ಞೆ ಸ್ಪಷ್ಟವಾಗಿ ಸಿಕ್ಕಿದೆ. ಹೀಗೆ ಮಾಡುವುದೇ ಅಥವಾ ಹಾಗೆ ಮಾಡುವುದೇ ಎಂದು ಯೋಚಿಸುವ ಅವಶ್ಯಕತೆಯೂ ಇಲ್ಲ. ಇದು ಸರಿಯೇ ಅಥವಾ ತಪ್ಪಾ ಎಂದು ಯೋಚಿಸುವ ಪರಿಶ್ರಮವೂ ಇಲ್ಲ. ಪರಮಾತ್ಮನ ಆಜ್ಞೆ ಸರ್ವಶ್ರೇಷ್ಠವಾಗಿದೆ. ಹಾಗಾಗಿ ಯಾರೆಲ್ಲಾ ಕುಮಾರರು ಬಂದಿದ್ದಾರೆಯೋ, ಬಹಳ ಒಳ್ಳೆಯ ಸಂಘಟನೆಯಾಗಿದೆ. ಹಾಗಾಗಿ ಪ್ರತಿಯೊಬ್ಬರೂ ತಂದೆಯವನಾದ ಮೇಲೆ ತಂದೆಗೆ ಮಾತನ್ನು ನೀಡಿದ್ದೀರಾ? ತಂದೆಯವನಾದ ಮೇಲೆ ಎಲ್ಲದಕ್ಕಿಂತ ಮೊದಲು ಯಾವ ಮಾತನ್ನು (ಪ್ರಾಮೀಸ್) ಮಾಡಿದ್ದೀರಿ? ಬಾಬಾ, ತನು ಮನ ಧನ ಏನೆಲ್ಲ ಇದೆಯೋ, ಕುಮಾರರ ಹತ್ತಿರ ಧನ ಜಾಸ್ತಿ ಇರೋದಿಲ್ಲ ಆದರೂ ಕೂಡ, ಎಷ್ಟು ಇದೆಯೋ ಅದೆಲ್ಲವೂ ತಮ್ಮದು. ಈ ವಚನ ಕೊಟ್ಟಿದ್ದೀರಲ್ಲವೇ? ತನುವು, ಮನವು, ಧನವು ಮತ್ತು ಸಂಬಂಧವು ಎಲ್ಲವೂ ನಿಮ್ಮೊಂದಿಗೆ - ಈ ವಚನವನ್ನು ಖಚಿತವಾಗಿ ಕೊಟ್ಟಿದ್ದೀರಲ್ಲವೇ? ತನು ಮನ ಧನ ಸಂಬಂಧ ಎಲ್ಲವೂ ನಿಮ್ಮದಾಗಿದೆ ಹಾಗಾಗಿ ನನ್ನದೇನಿದೆ! ಆದರೂ ಸ್ವಲ್ಪ ನನ್ನತನ ವಿದೆಯೇ? ಇರುವುದಾದರೂ ಏನು? ತನ್ನ ಮನ ಧನ ಜನ... ಎಲ್ಲವನ್ನು ಪರಮಾತ್ಮನಿಗೆ ಒಪ್ಪಿಸಿದೆ. ಪ್ರವೃತ್ತಿಯ ಜನರು ಹೀಗೆ ಮಾಡಿದ್ದಾರೆಯೇ? ಮಧುಬನದವರು ಮಾಡಿದ್ದಾರೆಯೇ? ಖಚಿತವಲ್ಲವೇ! ಮನಸ್ಸು ತಂದೆಯನಾದ ಮೇಲೆ, ನನ್ನ ಮನಸ್ಸು ಅಲ್ಲ ಅಲ್ಲವೇ? ಅಥವಾ ಮನಸ್ಸು ನನ್ನದಾಗಿದೆಯೋ? ನನ್ನದು ಎಂದು ಬಳಸಲು ಬಯಸುವಿರಾ? ಮನಸ್ಸನ್ನು ತಂದೆಗೆ ಕೊಟ್ಟ ಮೇಲೆ ನಿಮ್ಮ ಮನಸ್ಸು ನಿಮ್ಮ ಹತ್ತಿರ ಬಾಬಾನ ಉಡುಗೊರೆಯಾಗಿದೆ ಹಾಗಾದರೆ ಯುದ್ಧವನ್ನು ಯಾವುದರಲ್ಲಿ ಮಾಡುತ್ತೀರಿ? ನನ್ನ ಮನಸ್ಸು ರೋಸಿ ಹೋಗಿದೆ, ನನ್ನ ಮನಸ್ಸಿನಲ್ಲಿ ವ್ಯರ್ಥ ಸಂಕಲ್ಪಗಳು ಬರುತ್ತವೆ, ನನ್ನ ಮನಸ್ಸು ಅಧೀರ ಆಗಿದೆ..... ಯಾವಾಗ ನನ್ನ ಮನಸ್ಸು ನನ್ನದಾಗಿಲ್ಲ ಪರಮಾತ್ಮನ ಉಡುಗೊರೆಯಾಗಿದೆ ಅಂದಮೇಲೆ ಉಡುಗೊರೆಯನ್ನು ನನ್ನದು ಎಂದುಕೊಂಡು ಉಪಯೋಗಿಸುವುದು ಇದು ಕೊಟ್ಟ ಉಡುಗೊರೆಯನ್ನು ಹಿಂತಿರುಗಿ ಪಡೆದಂತೆ ಅಲ್ಲವೇ? ನಾನು ಮತ್ತು ನನ್ನದು - ಇವು ಮಾಯೆಯ ಬಾಗಿಲುಗಳಾಗಿವೆ. ಶರೀರ ನನ್ನದಲ್ಲ ಎಂದ ಮೇಲೆ ದೇಹ ಅಭಿಮಾನದ "ನಾನು" ಎಲ್ಲಿಂದ ಬಂತು! ಮನಸ್ಸು ತಮ್ಮದಲ್ಲ ಅಂದಮೇಲೆ "ನನ್ನದು, ನನ್ನದು" ಎಲ್ಲಿಂದ ಬಂತು? ಪರಮಾತ್ಮನದ್ದಾಗಿದೆಯೋ ಅಥವಾ ನನ್ನದಾಗಿದೆಯೋ? ಮನಸ್ಸನ್ನು ಪರಮಾತ್ಮನಿಗೆ ಕೊಟ್ಟಿದ್ದೀರೋ ಅಥವಾ ಮಾತ್ರ ಹೇಳುವುದೇನೋ, ಅದರಂತೆ ನಡೆಯುವುದಿಲ್ಲವೇ? ಮನಸ್ಸು ತಂದೆಯದೆಂದು ಹೇಳುವುದು ಮತ್ತು ನನ್ನದೇ ಅಂದುಕೊಳ್ಳುವುದೇ! ಮೊದಲನೆಯ ಮಾತನ್ನು ನೆನಪು ಮಾಡಿಕೊಳ್ಳಿ ದೇಹ ಅಭಿಮಾನದ "ನಾನು ನನ್ನದು" ಇಲ್ಲವೇ ಇಲ್ಲ. ಹಾಗಾಗಿ ತಂದೆಯ ಆಜ್ಞೆ ಏನಾಗಿದೆ, ಶರೀರವನ್ನು ಪರಮಾತ್ಮನ ಉಡುಗೊರೆ ಎಂದುಕೊಳ್ಳಬೇಕು. ಮನಸ್ಸನ್ನು ಪರಮಾತ್ಮನ ಉಡುಗೊರೆ ಎಂದು ಅರ್ಥ ಮಾಡಿಕೊಳ್ಳಿ. ಅಂದಮೇಲೆ ಪರಿಶ್ರಮದ ಅವಶ್ಯಕತೆ ಇದೆಯೇ? ಯಾವುದಾದರೂ ಬಲಹೀನತೆ ಬರುತ್ತದೆ ಎಂದರೆ ಈ ಎರಡು ಶಬ್ದಗಳಿಂದ ಬರುತ್ತದೆ - "ನಾನು ಮತ್ತು ನನ್ನದು". ಹಾಗಾಗಿ ಶರೀರವು ತಮ್ಮದಲ್ಲ, ದೇಹ ಅಭಿಮಾನದ "ನಾನು" ತಮ್ಮದಲ್ಲ. ವಿಧೇಯನಾಗಿದ್ದರೆ, ಮನಸ್ಸಿನಲ್ಲಿ ನಡೆಯುವ ಸಂಕಲ್ಪಗಳಿಗೆಲ್ಲ, ತಂದೆ ಆಜ್ಞೆ ಏನಾಗಿದೆ? ಧನಾತ್ಮಕವಾಗಿ ಆಲೋಚಿಸಿ, ಶುಭ ಭಾವನೆಯ ಸಂಕಲ್ಪಗಳನ್ನು ಮಾಡಿ. ಬಂದರೆ - ಇದು ತಂದೆಯ ಆಜ್ಞೆ ಆಗಿದೆಯೇ ಎಂದು ಕೇಳಿಕೊಳ್ಳಿ. ಇಲ್ಲ. ಹಾಗಾದರೆ ಮನಸ್ಸು ತಮ್ಮದಲ್ಲ ಆದರೂ ಕೂಡ ವ್ಯರ್ಥ ಸಂಕಲ್ಪಗಳನ್ನು ಮಾಡುತ್ತೀರಿ ಎಂದರೆ ತಂದೆಯ ಆಜ್ಞೆಯನ್ನು ಪ್ರಾಕ್ಟಿಕಲ್ನಲ್ಲಿ ತರಲಿಲ್ಲ ಅಲ್ಲವೇ! ಆದ್ದರಿಂದ ಒಂದು ಶಬ್ದವನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಿ - "ನಾನು ಪರಮಾತ್ಮನ ವಿಧೇಯ ಮಗುವಾಗಿದ್ದೇನೆ". ತಂದೆಯ ಆಜ್ಞೆ ಇದಾಗಿದೆಯೇ ಅಥವಾ ಇಲ್ಲವೇ ಎಂದು ಯೋಚಿಸಿ. ವಿಧೇಯ ಮಕ್ಕಳನ್ನು ತಂದೆ ಸ್ವತಹ ನೆನಪು ಮಾಡಿಕೊಳ್ಳುತ್ತಾರೆ. ಅಂಥವರು ಸ್ವತಃ ತಂದೆಯ ಪ್ರೀತಿಗೆ ಪಾತ್ರರಾಗಿರುತ್ತಾರೆ. ಸ್ವತಹ ತಂದೆಯ ಸಮೀಪ ಇರುತ್ತಾರೆ. ಹಾಗಾಗಿ ಚೆಕ್ ಮಾಡಿಕೊಳ್ಳಿ ನಾನು ತಂದೆಯ ಸಮೀಪ ತಂದೆಯ ಅಜ್ಞಾಕಾರಿ ಆಗಿದ್ದೇನೆಯೇ? ಒಂದು ಶಬ್ದವನ್ನಂತೂ ಅಮೃತವೇಳೆಯಲ್ಲಿ ನೆನಪು ಮಾಡಿಕೊಳ್ಳಬಹುದು - "ನಾನು ಯಾರು?' ಆಜ್ಞಾಕಾರಿಯಾಗಿದ್ದೇನೆ ಅಥವಾ ಒಮ್ಮೊಮ್ಮೆ ಆಜ್ಞಾಕಾರಿ ಒಮ್ಮೊಮ್ಮೆ ಆಜ್ಞೆಯನ್ನು ಉಲ್ಲಂಘಿಸುವವನಾಗಿದ್ದೇನೆಯೋ?

ಯಾವುದಾದರೂ ರೂಪದಲ್ಲಿ ಒಬ್ಬ ತಂದೆಯ ಸಂಬಂಧವೇ ನೆನಪಿದ್ದರೆ, ಹೃದಯದಿಂದ - ಬಾಬಾ ಎಂದರೆ ಆಗ ತಂದೆಯೊಡನೆ ಸಮೀಪದ ಅನುಭವ ಮಾಡುವಿರಿ ಎಂದು ಬಾಪ್ದಾದಾ ಸದಾ ಹೇಳುತ್ತಾರೆ. ಮಂತ್ರದಂತೆ ಉಚ್ಛರಿಸಬೇಡಿ, ಅವರು ರಾಮ ರಾಮ ಎಂದು ಹೇಳುತ್ತಾರೆ ನೀವು ಬಾಬಾ, ಬಾಬಾ ಎಂದು ಹೇಳುತ್ತೀರಿ. ಹಾಗಲ್ಲ ಆದರೆ ಹೃದಯದಿಂದ ಬರಬೇಕು - "ಬಾಬಾ"! ಪ್ರತಿಯೊಂದು ಕರ್ಮ ಮಾಡುವ ಮೊದಲು ಚೆಕ್ ಮಾಡಿಕೊಳ್ಳಿ ತನು, ಮನ, ಧನಕ್ಕಾಗಿ ಬಾಬಾ ಅವರ ಆಜ್ಞೆ ಏನಾಗಿದೆ? ಕುಮಾರರ ಹತ್ತಿರ ಎಷ್ಟೇ ಕಡಿಮೆ ಹಣವಿದ್ದರೂ, ತಂದೆಯ ಆದೇಶದಂತೆ ಆ ಹಣದ ಚಾರ್ಟ ಇಟ್ಟಿದ್ದೀರಾ? ಅಥವಾ ಬೇಕಾದ ಹಾಗೆ ನಡೆಸುತ್ತಿದ್ದೀರಾ? ಪ್ರತಿಯೊಬ್ಬ ಕುಮಾರನು ಧನದ ಚಾರ್ಟ ಇಡಬೇಕು. ಧನವನ್ನು ಎಲ್ಲಿ ಮತ್ತು ಹೇಗೆ ಬಳಸಬೇಕು ಹಾಗೂ ಮನಸ್ಸನ್ನು ಕೂಡ ಎಲ್ಲಿ ಹಾಗೂ ಹೇಗೆ ಬಳಸಬೇಕು. ತನುವನ್ನು ಕೂಡ ಎಲ್ಲಿ ಉಪಯೋಗಿಸಬೇಕು ಇವೆಲ್ಲವುಗಳನ್ನು ಬಗ್ಗೆ ಗಮನ ಇಡಬೇಕು. ದಾದಿಯರು ಯಾವುದಾದರೂ ಧಾರಣೆಯ ಕ್ಲಾಸುಗಳನ್ನು ನಡೆಸುವಾಗ ಧನವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು, ಹೇಗೆ ಗಮನ ಇಡಬೇಕು ಎನ್ನುವುದನ್ನು ತಿಳಿಸುತ್ತಾರಲ್ಲವೇ! ಕುಮಾರರಿಗೆ ಗೊತ್ತಿದೆಯೇ ಖರ್ಚು ವೆಚ್ಚವನ್ನು ಹೇಗೆ ಬರೆದಿಡಬೇಕು ಎಲ್ಲಿ ಧನವನ್ನು ಬಳಸಬೇಕು ಇದು ಗೊತ್ತಿದೆಯೇ? ಕೆಲವರು ಕೈ ಎತ್ತುತ್ತಿದ್ದಾರೆ, ಹೊಸಬರಿಗೆ ಗೊತ್ತಿಲ್ಲ. ಇವರಿಗೆ ಏನೇನು ಮಾಡಬೇಕು ಎಂದು ಅವಶ್ಯಕವಾಗಿ ತಿಳಿಸಿ. ನಿಶ್ಚಿಂತರಾಗುತ್ತಾರೆ ಭಾರವಾಗುವುದಿಲ್ಲ, ಏಕೆಂದರೆ ತಮ್ಮೆಲ್ಲರ ಲಕ್ಷ್ಯವಿದೆ. ಕುಮಾರ ಅಂದರೆ "ಲೈಟ್, ಡಬಲ್ ಲೈಟ್" ಕುಮಾರರಿಗೆ ನಂಬರ್ ವನ್ ಬರುವ ಲಕ್ಷ್ಯವಿದೆಯಲ್ಲವೇ? ಹಾಗಾದರೆ ಲಕ್ಷದ ಜೊತೆಗೆ ಲಕ್ಷಣವೂ ಬೇಕು ತುಂಬಾ ಎತ್ತರವಾದ ಲಕ್ಷ್ಯವಿದೆ ಮತ್ತು ಲಕ್ಷಣ ಇಲ್ಲ ಅಂದರೆ ಲಕ್ಷ್ಯವನ್ನು ತಲುಪುವುದು ಕಷ್ಟವಾಗುತ್ತದೆ. ಆದ್ದರಿಂದ ತಂದೆಯ ಆಜ್ಞೆಯನ್ನು ಬುದ್ಧಿಯಲ್ಲಿಟ್ಟುಕೊಂಡು ಕಾರ್ಯವನ್ನು ಮಾಡಬೇಕು.

ಬ್ರಾಹ್ಮಣ ಜೀವನದ ಮುಖ್ಯವಾದ ಸಂಪತ್ತು ಸಂಕಲ್ಪ, ಸಮಯ ಹಾಗೂ ಶ್ವಾಸ ಎಂದು ಮೊದಲೇ ತಿಳಿಸಿಕೊಟ್ಟಿದ್ದಾರೆ. ನಿಮ್ಮನ್ನು ಶ್ವಾಸವು ತುಂಬಾ ಅಮೂಲ್ಯವಾಗಿದೆ. ಒಂದು ಶ್ವಾಸವು ಸಾಧಾರಣ ಅಥವಾ ವ್ಯರ್ಥವಾಗಿರಬಾರದು. ಶ್ವಾಸೋ ಶ್ವಾಸ ತಮ್ಮ ಇಷ್ಟ ದೇವನನ್ನು ನೆನಪು ಮಾಡಿಕೊಳ್ಳಿ ಎಂದು ಭಕ್ತಿಯಲ್ಲಿ ಹೇಳುತ್ತಾರೆ. ಹಾಗೆಯೇ ಒಂದು ಶ್ವಾಸವು ವ್ಯರ್ಥವಾಗಬಾರದು. ಜ್ಞಾನದ ಸಂಪತ್ತು, ಶಕ್ತಿಯ ಸಂಪತ್ತು.... ಇವೆಲ್ಲವೂ ಇದ್ದೇ ಇವೆ. ಆದರೆ ಮುಖ್ಯವಾಗಿ ಸಂಕಲ್ಪ, ಸಮಯ ಮತ್ತು ಶ್ವಾಸ ಈ ಮೂರು ಸಂಪತ್ತುಗಳು ಪರಮಾತ್ಮನ ಆಜ್ಞೆಯ ಪ್ರಮಾಣ ಸಫಲವಾಗುತ್ತಿವೆಯೇ? ವ್ಯರ್ಥವಂತು ಆಗುತ್ತಿಲ್ಲ ಅಲ್ಲವೇ? ಯಾಕೆಂದರೆ ವ್ಯರ್ಥವಾದರೆ ಜಮಾ ಆಗುವುದಿಲ್ಲ. ಮತ್ತು ಸಂಪತ್ತುಗಳ ಸಂಗ್ರಹದ ಖಾತೆಯನ್ನು ಸಂಗಮದಲ್ಲಿಯೇ ಸಂಗ್ರಹ ಮಾಡಬೇಕು. ಸತ್ಯ, ತ್ರೆತಾಯುಗಗಳಲ್ಲಿ ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕೆಂದರೆ, ದ್ವಾಪರ, ಕಲಿಯುಗದಲ್ಲಿ ಪೂಜ್ಯ ಪದವಿಯನ್ನು ಪಡೆಯಬೇಕೆಂದರೆ, ಇವೆರಡಕ್ಕೂ ಈ ಸಂಗಮದಲ್ಲಿಯೇ ಜಮಾ ಮಾಡಿಕೊಳ್ಳಬೇಕು. ಈ ಲೆಕ್ಕದಲ್ಲಿ ಯೋಚಿಸಿ ಸಂಗಮ ಸಮಯದ ಜೀವನದಲ್ಲಿ ಈ ಸಣ್ಣ ಜನ್ಮದ ಸಂಕಲ್ಪ, ಸಮಯ, ಶ್ವಾಸ ಎಷ್ಟು ಅಮೂಲ್ಯವಾಗಿವೆ ಇದರಲ್ಲಿ ಅಜಾಗರೂಕರಾಗಬೇಡಿ. ಹೇಗೋ ವ್ಯರ್ಥವಾಗಿ ದಿನ ಕಳೆದು ಹೋಯಿತು ಅಂದರೆ ಒಂದು ದಿನ ಅಲ್ಲ ಆದರೆ ಒಂದು ದಿನದಲ್ಲಿ ಬಹಳಷ್ಟು ನಷ್ಟವಾಯಿತು. ಎಂದಾದರೂ ವ್ಯರ್ಥ ಸಂಕಲ್ಪ, ವ್ಯರ್ಥ ಸಮಯ ಹೋಗುತ್ತದೆ ಎಂದರೆ ಹೀಗೆ ಯೋಚಿಸಬೇಡಿ - ಸರಿ ಐದು ನಿಮಿಷ ಹೋಯಿತು ತಾನೇ. ಅಲ್ಲ ಅದನ್ನು ಉಳಿಸಿ. ಸಮಯ ಪ್ರಮಾಣ ನೋಡಿ ಪ್ರಕೃತಿ ತನ್ನ ಕಾರ್ಯದಲ್ಲಿ ಎಷ್ಟು ತೀವ್ರ ಗತಿಯಲ್ಲಿದೆ! ಪ್ರಕೃತಿ ಒಂದಿಲ್ಲೊಂದು ಆಟವನ್ನು ತೋರಿಸುತ್ತಲೇ ಇರುತ್ತದೆ, ಎಲ್ಲಿಯಾದರೂ ಆಟವನ್ನು ಆಡುತ್ತಲೇ ಇರುತ್ತದೆ ಆದರೆ ಪ್ರಕೃತಿ ಪತಿ, ಬ್ರಾಹ್ಮಣ ಮಕ್ಕಳಿಗೆ ಒಂದೇ ಆಟವಿದೆ - ಅದು ಹಾರುವ ಕಲೆಯ ಆಟ. ಪ್ರಕೃತಿ ಅಂತೂ ತನ್ನ ಆಟವನ್ನು ತೋರಿಸುತ್ತದೆ ಆದರೆ ಬ್ರಾಹ್ಮಣರು ತಮ್ಮ ಹಾರುವ ಕಲೆಯ ಆಟವನ್ನು ತೋರಿಸುತ್ತಿದ್ದಾರೆಯೇ?

ಕೆಲವು ಮಕ್ಕಳು ಒರಿಸ್ಸಾದ ಚಂಡಮಾರುತದ ಫಲಿತಾಂಶವನ್ನು ಬಾಪ್ದಾದಾ ಅವರಿಗೆ ಬರೆದು ತಿಳಿಸಿದರು - ಹೀಗೆ ಆಯ್ತು, ಇದು ಸಂಭವಿಸಿತು.... ಹಾಗಾದರೆ ಆ ಪ್ರಕೃತಿಯ ಆಟವನ್ನಂತು ನೋಡಿದಿರಿ. ಆದರೆ ಬಾಪ್ದಾದಾ ಕೇಳುತ್ತಾರೆ ತಾವೆಲ್ಲರೂ ಮಾತ್ರ ಪ್ರಕೃತಿಯ ಆಟವನ್ನು ನೋಡಿದಿರೋ ಅಥವಾ ತಮ್ಮ ಹಾರುವ ಕಲೆಯ ಆಟದಲ್ಲಿ ಬಿಜಿಯಾಗಿ ಇದ್ದಿರೋ? ಅಥವಾ ಮಾತ್ರ ಸಮಾಚಾರ ಕೇಳುತ್ತಾ ಇದ್ದಿರೋ? ಸಮಾಚಾರವೆಂತು ಎಲ್ಲರೂ ಕೇಳಲೇಬೇಕಾಗುತ್ತದೆ, ಆದರೆ ಸಮಾಚಾರ ಕೇಳುವಾಗ ಎಷ್ಟು ರುಚಿ ಇರುತ್ತದೆಯೋ ಅಷ್ಟೇ ಹಾರುವ ಕಲೆಯ ಬಾಜಿಯಲ್ಲಿ ರುಚಿ ಇರುತ್ತದೆಯೇ? ಕೆಲವು ಮಕ್ಕಳು ಗುಪ್ತಯೋಗಿಗಳಾಗಿದ್ದಾರೆ, ಅಂತಹ ಗುಪ್ತ ಯೋಗಿ ಮಕ್ಕಳಿಗೆ ಬಾಪ್ದಾದಾರವರ ಸಹಾಯವು ಬಹಳ ಸಿಗುತ್ತದೆ ಮತ್ತು ಅಂತಹ ಮಕ್ಕಳು ಸ್ವಯಂ ಅಚಲ ಹಾಗೂ ಸಾಕ್ಷಿಯಾಗಿದ್ದು ವಾಯುಮಂಡಲದಲ್ಲಿಯೂ ಸಮಯ ಪ್ರಮಾಣ ಸಹಯೋಗ ಕೊಟ್ಟಿದಾರೆ. ಹೇಗೆ ಸ್ತೂಲವಾಗಿ ಸಹಯೋಗ ಕೊಡುವವರು, ಅದು ಸರ್ಕಾರವಾಗಿರಬಹುದು, ಅಕ್ಕಪಕ್ಕದ ಜನ ಸಹ ಸಹಯೋಗ ಕೊಡಲು ತಯಾರಾಗಿರಬಹುದು. ಹಾಗೆಯೇ ಬ್ರಾಹ್ಮಣ ಆತ್ಮಗಳು ಸಹ ತಮ್ಮ ಸಹಯೋಗ, ಶಕ್ತಿ ಶಾಂತಿ ಸುಖ ಕೊಡುವ ಈಶ್ವರೀಯ ಶ್ರೇಷ್ಠ ಕಾರ್ಯವನ್ನು ಮಾಡಿದಿರಾ? ಹೇಗೆ ಈ ಸರ್ಕಾರದವರು, ಇದನ್ನು ಮಾಡಿದರು, ಇಂತಹ ದೇಶ ಆ ಸೇವೆಯನ್ನು ಮಾಡಿತು… ಹೀಗೆ ತಕ್ಷಣ ಅನೌನ್ಸ್ಮೆಂಟ್ ಮಾಡಲು ಪ್ರಾರಂಭಿಸುತ್ತಾರೆ, ಆದ್ದರಿಂದ ಬಾಪ್ದಾದಾರವರು ಕೇಳುತ್ತಾರೆ - ತಾವು ಬ್ರಾಹ್ಮಣರೂ ತಮ್ಮ ಈ ಕಾರ್ಯವನ್ನು ಮಾಡಿದಿರಾ? ತಾವು ಕೂಡ ಅಲರ್ಟ್ ಆಗಿರಬೇಕು. ಸ್ಥೂಲ ಸಹಯೋಗ ಕೊಡುವುದು ಕೂಡ ಅವಶ್ಯಕವಾಗಿರುತ್ತದೆ ಇದನ್ನು ಬಾಪ್ದಾದಾರವರು ಒಪ್ಪುತ್ತಾರೆ. ಆದರೆ ಬ್ರಾಹ್ಮಣ ಆತ್ಮಗಳ ವಿಶೇಷ ಕಾರ್ಯವೇನಾಗಿದೆ, ಯಾವ ಸಹಯೋಗವನ್ನು ಬೇರೆ ಯಾರಿಂದಲೂ ಕೊಡಲು ಸಾಧ್ಯವಾಗುವುದಿಲ್ಲ, ಅಂತಹ ಸಹಯೋಗವನ್ನು ಅಲರ್ಟ್ ಆಗಿ ತಾವು ಕೊಟ್ಟಿದೀರಾ? ಕೊಡಬೇಕು ತಾನೆ! ಅಥವಾ ಅವರಿಗೆ ವಸ್ತ್ರ, ಆಹಾರ ಮಾತ್ರ ಬೇಕಾ? ಇಲ್ಲ ಮೊದಲು ಅವರಿಗೆ ಮನಸ್ಸಿನಲ್ಲಿ ಶಾಂತಿ ಬೇಕು, ಪರಿಸ್ಥಿತಿಗಳನ್ನು ಎದುರಿಸಲು ಶಕ್ತಿ ಬೇಕು. ಹಾಗಾಗಿ ಹೊರಗಿನ ಅವಶ್ಯಕತೆಗಳ ಜೊತೆಗೆ ಸೂಕ್ಷ್ಮ ಸಹಯೋಗ ಬ್ರಾಹ್ಮಣರೇ ಕೊಡಲು ಸಾಧ್ಯ. ಮತ್ತೆ ಯಾರಿಂದಲೂ ಕೊಡಲು ಸಾಧ್ಯವಾಗುವುದಿಲ್ಲ. ಇದಂತೂ ಏನು ಅಲ್ಲ, ಇದಂತೂ ರಿಹರ್ಸಲಾಗಿದೆ. ನಿಜವಾದ ಪರಿಸ್ಥಿತಿ ಬರುವುದಿದೆ. ಅದರ ರಿಹರ್ಸಲನ್ನು ತಮಗೂ ಕೂಡ ತಂದೆ ಅಥವಾ ಸಮಯ ಮಾಡಿಸುತ್ತದೆ ಹಾಗಾಗಿ ಯಾವೆಲ್ಲ ಶಕ್ತಿಗಳು, ಸಂಪತ್ತುಗಳು ತಮ್ಮ ಹತ್ತಿರ ಇವೆಯೋ ಅವನ್ನು ಸಮಯ ಪ್ರಮಾಣ ಬಳಸಿಕೊಳ್ಳಲು ಬರುತ್ತದೆಯೇ?

ಕುಮಾರರು ಏನು ಮಾಡುತ್ತಾರೆ? ಶಕ್ತಿಗಳು ಜಮಾ ಇವೆಯೇ? ಶಾಂತಿಯ ಶಕ್ತಿ ಸಂಗ್ರಹವಾಗಿದೆಯೇ? ಅದನ್ನು ಉಪಯೋಗಿಸಲು ಬರುತ್ತದೆಯೇ? ಕೈಯನಂತೂ ಬಹಳ ಚೆನ್ನಾಗಿ ಎತ್ತುತ್ತಾರೆ, ಈಗ ಪ್ರಾಕ್ಟಿಕಲ್ನಲ್ಲಿ ತೋರಿಸಿ. ಸಾಕ್ಷಿಯಾಗಿ ನೋಡಲೂ ಬೇಕು, ಕೇಳಲೂ ಬೇಕು ಮತ್ತು ಸಹಯೋಗ ಕೊಡಲೂ ಬೇಕು. ಕೊನೆಯಲ್ಲಿ ನಿಜವಾಗಲೂ ಸಂಭವಿಸಿದಾಗ ಅದರಲ್ಲಿ ಸಾಕ್ಷಿಯಾಗಿ ಮತ್ತು ನಿರ್ಭಯರಾಗಿ ನೋಡಲೂ ಬೇಕು ಮತ್ತು ನಿರ್ವಹಿಸಲೂ ಬೇಕು. ಯಾವ ಪಾತ್ರವನ್ನು ನಿರ್ವಹಿಸಬೇಕು? ದಾತ (ಪರಮಾತ್ಮ)ನ ಮಕ್ಕಳು, ದಾನಿಗಳಾಗಿ ಆ ಆತ್ಮಗಳಿಗೆ ಏನೆಲ್ಲಾ ಬೇಕು ಅದನ್ನು ಕೊಡುತ್ತಾ ಇರಬೇಕು, ಹಾಗಾಗಿ ತಾವು ಮಾಸ್ಟರ್ ದಾತ ಅಲ್ಲವೇ? ಹಾಗಾಗಿ ಶಕ್ತಿಗಳ ಸ್ಟಾಕ್ ಜಮಾ ಮಾಡಿಕೊಳ್ಳಿ. ಎಷ್ಟು ಸ್ಟಾಕ್ ತಮ್ಮ ಬಳಿ ಇರುತ್ತದೆಯೋ ಅಷ್ಟು ದಾನಿಗಳಾಗುತ್ತಿರಿ ಕೊನೆಯವರೆಗೆ ಸ್ವಯಂಗಾಗಿಯೇ ಜಮಾ ಮಾಡಿಕೊಳ್ಳುತ್ತಿದ್ದರೆ ದಾನಿಗಳಾಗಲು ಸಾಧ್ಯವಿಲ್ಲ. ಅನೇಕ ಜನ್ಮಗಳವರೆಗೆ ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಒಂದು - ತಮ್ಮ ಹತ್ತಿರ ಶಕ್ತಿಗಳ ಸ್ಟಾಕ್ ಜಮಾ ಮಾಡಿಕೊಳ್ಳಿ. ಶುಭ ಭಾವನೆ, ಶ್ರೇಷ್ಠ ಕಾಮನೆಯ ಭಂಡಾರ ಸದಾ ತುಂಬಿ ತುಳುಕುತ್ತಿರಲಿ. ಎರಡನೆಯದಾಗಿ -ಯಾವೆಲ್ಲ ವಿಶೇಷ ಶಕ್ತಿಗಳಿವೆ ಆ ಶಕ್ತಿಗಳು ಬೇಕಾದ ಸಮಯದಲ್ಲಿ ಯಾರಿಗೆ ಏನು ಬೇಕು ಅದನ್ನು ಕೊಡಲು ಸಾಧ್ಯವಾಗಬೇಕು. ಈಗ ಸಮಯ ಪ್ರಮಾಣ ತಮ್ಮ ಪುರುಷಾರ್ಥದಲ್ಲಿ ಸಂಕಲ್ಪ ಮತ್ತು ಸಮಯವನ್ನು ಕೊಡುವುದರ ಜೊತೆಗೆ ದಾತ ಆಗಿ ವಿಶ್ವಕ್ಕೂ ಸಹಯೋಗ ಕೊಡಬೇಕು. ತಮ್ಮ ಪುರುಷಾರ್ಥವನ್ನಂತೂ ಹೇಳಿದ್ದೇನೆ - ಅಮೃತ ವೇಳೆಯಲ್ಲಿಯೇ ಹೀಗೆ ಯೋಚಿಸಬೇಕು - "ನಾನು ವಿಧೇಯ ಮಗುವಾಗಿದ್ದೇನೆ" ಪ್ರತಿಯೊಂದು ಕರ್ಮಕ್ಕೂ ಆದೇಶ ಸಿಕ್ಕಿದೆ ಕುಳಿತುಕೊಳ್ಳಲು, ಮಲಗಲು, ಆಹಾರ ಸೇವಿಸಲು, ಕರ್ಮಯೋಗಿಗಳಾಗಲು. ಮಾತ್ರ ಶ್ರೀಮತದಂತೆಯೇ ನಡೆಯಬೇಕು, ಮನಮತದಂತೆ ಅಲ್ಲ, ಪರಮತದಂತೆ ಅಲ್ಲ. ಏನನ್ನು ಸೇರಿಸಬಾರದು ಕೆಲವೊಮ್ಮೆ ಮನ ಮತದಂತೆ, ಕೆಲವೊಮ್ಮೆ ಪರಮತದಂತೆ ನಡೆದರೆ ಪರಿಶ್ರಮ ಪಡಬೇಕಾಗುತ್ತದೆ. ಸಹಜವಾಗುವುದಿಲ್ಲ. ಏಕೆಂದರೆ ಮನಮತ ಪರಮತ ಹಾರಲು ಬಿಡುವುದಿಲ್ಲ ಮನಮತ, ಪರಮತ ಭಾರವಾಗಿರುತ್ತದೆ ಮತ್ತು ಭಾರ ಹಾರಲು ಬಿಡುವುದಿಲ್ಲ. ಶ್ರೀಮತ ನಮ್ಮನ್ನು ಡಬಲ್ ಲೈಟ್ ಮಾಡುತ್ತದೆ. ಶ್ರೀಮತದಂತೆ ನಡೆಯುವುದು ಎಂದರೆ ತಂದೆಯ ಸಮಾನರಾಗುವುದು. ಶ್ರೀಮತದಂತೆ ನಡೆಯುವವರನ್ನು ಯಾವುದೇ ಪರಿಸ್ಥಿತಿ ಕೆಳಗೆ ಎಳೆಯಲು ಸಾಧ್ಯವಿಲ್ಲ, ಹಾಗಾಗಿ ಶ್ರೀಮತದಂತೆ ನಡೆಯಲು ಬರುತ್ತದೆಯೇ?

ಒಳ್ಳೆಯದು - ಹಾಗಾಗಿ ಕುಮಾರರು ಈಗ ಏನು ಮಾಡುತ್ತಾರೆ ಆಹ್ವಾನ ಬಂದಿತೆ. ವಿಶೇಷ ಉಪಚಾರ ಆಯಿತೆ. ನೋಡಿ, ಎಷ್ಟು ಪ್ರೀತಿಯ ಮಕ್ಕಳಾಗಿದ್ದೀರಿ. ಹಾಗಾದರೆ ಈಗ ಮುಂದೆ ಏನು ಮಾಡುತ್ತೀರಿ? ರೆಸ್ಪಾನ್ಸ್ ಕೊಡುತ್ತೀರೋ ಅಥವಾ ಹೊರಗೆ ಹೋದರೆ ಅಲ್ಲಿಯವರು, ಇಲ್ಲಿಗೆ ಬಂದರೆ ಇಲ್ಲಿಯವರು, ಹೀಗಾಗುವುದಿಲ್ಲ ಅಲ್ಲವೇ? ಇಲ್ಲಂತೂ ತುಂಬಾ ಮೋಜಿನಲ್ಲಿ ಇದ್ದೀರಿ. ಮಾಯ ಆಕ್ರಮಣದಿಂದ ತಪ್ಪಿಸಿಕೊಂಡಿದ್ದೀರಿ, ಯಾರಿಗಾದರೂ ಮಧುಬನದಲ್ಲಿಯೂ ಮಾಯ ಬರುತ್ತದೆಯೇ? ಯಾರಾದರೂ ಮಧುಬನದಲ್ಲಿಯೂ ಪರಿಶ್ರಮ ಪಡುತ್ತೀರಾ? ಸೇಫ್ ಆಗಿದ್ದೀರಿ, ಒಳ್ಳೆಯದು. ಬಾಪ್ದಾದಾ ಸಂತಸ ಪಡುತ್ತಿದ್ದಾರೆ. ಯೂಥ್ ಗ್ರೂಪ್ ಮೇಲೆ ಗವರ್ನಮೆಂಟ್ ಅಟೆಂಶನ್ ಕೊಡುವಂತಹ ಸಮಯ ಬರುತ್ತದೆ, ಆದರೆ ಮೊದಲು ತಾವು ವಿಘ್ನ ವಿನಾಶಕರಾಗಬೇಕು. “ವಿಘ್ನ - ವಿನಾಶಕ' ಯಾರ ಹೆಸರಾಗಿದೆ? ತಮ್ಮೆಲ್ಲರ ಹೆಸರಾಗಿದೆ ತಾನೇ! ಕುಮಾರರನ್ನು ಎದುರಿಸಲು, ವಿಘ್ನಗಳಿಗೆ ಧೈರ್ಯವೇ ಬರಬಾರದು. ಆಗ ವಿಘ್ನ ವಿನಾಶಕ ಎಂದು ಹೇಳಲಾಗುತ್ತದೆ. ವಿಘ್ನದ ಸೋಲು ಆಗಲಿ, ಆದರೆ ಅದು ಅತಿಕ್ರಮಣ ಮಾಡಬಾರದು. ವಿಘ್ನ ವಿನಾಶಕನಾಗುವ ಧೈರ್ಯವಿದೆಯೇ? ಅಥವಾ ಹೊರಗೆ ಹೋಗಿ ಪತ್ರ ಬರೆಯುವಿರೆ - ದಾದಿ, ಬಹಳ ಚೆನ್ನಾಗಿತ್ತು ಆದರೆ ಏನಾಯಿತು ಗೊತ್ತಿಲ್ಲ... ಹೀಗಂತೂ ಬರೆಯುವುದಿಲ್ಲ ಅಲ್ಲವೇ? ಇದೇ ಶುಭ ಸಮಾಚಾರ ಬರೆಯಬೇಕು - ಓಕೆ, ವೆರಿಗುಡ್, ವಿಘ್ನ ವಿನಾಶಕನಾಗಿದ್ದೀನಿ. ಕೇವಲ ಒಂದು ಅಕ್ಷರ ಬರೆಯಿರಿ. ಬಹಳ ದೊಡ್ಡ ಪತ್ರ ಬೇಡ. ಓ.ಕೆ. ಒಳ್ಳೆಯದು.

ಮಧುಬನದ ವಿಶೇಷತೆಯು ಬಾಪ್ದಾದಾರವರ ಹತ್ತಿರ ತಲುಪಿದೆ. ಮಧುಬನದವರು ತಮ್ಮ ಚಾರ್ಟನ್ನು ಕಳಿಸಿದ್ದಾರೆ ಬಾಪ್ದಾದಾರವರ ಅವರ ಹತ್ತಿರ ತಲುಪಿದೆ. ಬಾಪ್ದಾದಾರವರು ಎಲ್ಲ ಮಕ್ಕಳನ್ನು, ವಿಧೇಯ ಮಕ್ಕಳೆಂಬ ದೃಷ್ಟಿಯಿಂದ ನೋಡುತ್ತಾರೆ. ವಿಶೇಷ ಕಾರ್ಯ ಸಿಕ್ಕಿತು ಹಾಗೂ ಎವರ್ ರೆಡಿಯಾಗಿ ಮಾಡಿದರು. ಇದರ ವಿಶೇಷ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಒಳ್ಳೆಯದು ಪ್ರತಿಯೊಬ್ಬರೂ ತಮ್ಮ ಬಗ್ಗೆ ಸ್ಪಷ್ಟವಾಗಿ ಬರೆದಿದ್ದಾರೆ (ದಾದಿಯೊಂದಿಗೆ) ತಾವು ಕೂಡ ರಿಸಲ್ಟ್ ನೋಡಿ ಕ್ಲಾಸ್ ಮಾಡಿರಿ. ತಮ್ಮ ಸ್ಥಿತಿಯ ಚಾರ್ಟ್ ಚೆನ್ನಾಗಿ ಬರೆದಿದ್ದಾರೆ. ಬಾಪ್ದಾದಾ ಅಂತೂ ಅಭಿನಂದನೆಗಳನ್ನು ಕೊಡುತ್ತಲೇ ಇದ್ದಾರೆ, ಸತ್ಯ ಹೃದಯದ ಮೇಲೆ ಸತ್ಯ ಪರಮಾತ್ಮನು ಸಂತುಷ್ಟನಾಗಿರುತ್ತಾನೆ. ಒಳ್ಳೆಯದು.

ನಾಲ್ಕಾರು ಕಡೆಯ ಬಾಪ್ದಾದಾರವರ ವಿಧೇಯ ಮಕ್ಕಳಿಗೆ, ಸದಾ ವಿಘ್ನ ವಿನಾಶಕ ಮಕ್ಕಳಿಗೆ, ಸದಾ ಶ್ರೀಮತದ ಅನುಸಾರ ನಡೆಯುವವರಿಗೆ, ಪರಿಶ್ರಮದಿಂದ ಮುಕ್ತರಾಗಿರುವಂತಹವರಿಗೆ, ಸದಾ ಮೋಜಿನಲ್ಲಿ ಹಾರುವ ಮತ್ತು ಹಾರಿಸುವವರಿಗೆ, ಸರ್ವ ಸಂಪತ್ತುಗಳ ಭಂಡಾರದಿಂದ ತುಂಬಿರುವಂತಹ ತಂದೆಯ ಸಮೀಪ ಮತ್ತು ಸಮಾನ ಇರುವಂತಹ ಮಕ್ಕಳಿಗೆ ಬಹಳ ಬಹಳ ನೆನಪು ಪ್ರೀತಿ ಮತ್ತು ನಮಸ್ತೆ. ಕುಮಾರರಿಗೂ ವಿಶೇಷ ಅಥಕ ಮತ್ತು ಎವರ್ ರೆಡಿ ಇರುವಂತಹವರಿಗೆ, ಸದಾ ಹಾರುವ ಕಲೆಯಲ್ಲಿ ಹಾರುವಂಥವರಿಗೆ ಬಾಪ್ದಾದಾರವರ ವಿಶೇಷ ನೆನಪು ಪ್ರೀತಿ.

ವರದಾನ:
ಸದಾ ಆತ್ಮಿಕ ಸ್ಥಿತಿಯಲ್ಲಿದ್ದು ಅನ್ಯರಲ್ಲಿಯೂ ಆತ್ಮವನ್ನು ನೋಡುವಂತ ಆತ್ಮಿಕ ರುಹೆ ಗುಲಾಬ್ ಭವ.

ರುಹೆ ಗುಲಾಬ್ ಅರ್ಥಾತ್ ಯಾರಲ್ಲಿ ಸದಾ ಆತ್ಮಿಕ ಸುಗಂಧವಿರುತ್ತದೆ. ಆತ್ಮಿಕ ಸುಗಂಧವಿರುವವರು ಎಲ್ಲಿಯೇ ನೋಡುತ್ತಾರೆ, ಯಾರನ್ನೇ ನೋಡುತ್ತಾರೆಂದರೆ ಆತ್ಮವನ್ನು ನೋಡುತ್ತಾರೆ, ಶರೀರವನ್ನಲ್ಲ. ಅಂದಮೇಲೆ ಸ್ವಯಂ ಸಹ ಸದಾ ಆತ್ಮಿಕ ಸ್ಥಿತಿಯಲ್ಲಿರಿ ಮತ್ತು ಅನ್ಯರಲ್ಲಿಯೂ ಆತ್ಮವನ್ನೇ ನೋಡಿರಿ. ತಂದೆಯು ಹೇಗೆ ಸರ್ವ ಶ್ರೇಷ್ಠನಿದ್ದಾರೆ, ಹಾಗೆಯೇ ಅವರ ಉದ್ಯಾನವನವೂ ಸಹ ಸರ್ವ ಶ್ರೇಷ್ಠವಾಗಿದೆ, ಆ ಉದ್ಯಾನವನದ ವಿಶೇಷ ಶೃಂಗಾರವು ಆತ್ಮಿಕ ಗುಲಾಬಿ ತಾವು ಮಕ್ಕಳಾಗಿದ್ದೀರಿ. ತಮ್ಮ ಆತ್ಮಿಕ ಸುಗಂಧವು ಅನೇಕ ಆತ್ಮರ ಕಲ್ಯಾಣ ಮಾಡುವಂತದ್ದಾಗಿದೆ.

ಸ್ಲೋಗನ್:
ಮರ್ಯಾದೆಯನ್ನು ಉಲ್ಲಂಘಿಸಿ ಯಾರಿಗೇ ಸುಖವನ್ನು ಕೊಡುತ್ತೀರೆಂದರೆ, ಅದೂ ಸಹ ದುಃಖದ ಖಾತೆಯಲ್ಲಿ ಜಮಾ ಆಗಿ ಬಿಡುತ್ತದೆ.