06.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಶ್ರೀಮತದಂತೆ ಒಳ್ಳೆಯ ಸರ್ವೀಸ್ ಮಾಡುವವರಿಗೆ ರಾಜ್ಯ ಭಾಗ್ಯದ ಬಹುಮಾನವು ಸಿಗುತ್ತದೆ, ಈಗ ನೀವು ಮಕ್ಕಳು ಸಹಯೋಗಿಗಳಾಗಿದ್ದೀರಿ ಆದ್ದರಿಂದ, ನಿಮಗೆ ಬಹಳ ದೊಡ್ಡ ಬಹುಮಾನವು ಸಿಗುತ್ತದೆ"

ಪ್ರಶ್ನೆ:
ತಂದೆಯ ಜ್ಞಾನದ ನೃತ್ಯವು ಎಂತಹ ಮಕ್ಕಳ ಸನ್ಮುಖದಲ್ಲಿ ಬಹಳ ಚೆನ್ನಾಗಿ ಆಗುತ್ತದೆ?

ಉತ್ತರ:
ಯಾರು ಜ್ಞಾನದ ಆಸಕಿಯುಳ್ಳವರಾಗಿದ್ದಾರೆಯೋ, ಯಾರಿಗೆ ಯೋಗದ ನಶೆ ಇದೆಯೋ ಅವರ ಮುಂದೆ ತಂದೆಯ ಜ್ಞಾನ ನೃತ್ಯವು ಬಹಳ ಚೆನ್ನಾಗಿ ನಡೆಯುತ್ತದೆ. ನಂಬರ್ವಾರ್ ವಿದ್ಯಾರ್ಥಿಗಳಿದ್ದಾರೆ. ಇದು ವಿಚಿತ್ರವಾದ ಶಾಲೆಯಾಗಿದೆ. ಕೆಲವರಲ್ಲಿ ಸ್ವಲ್ಪವೂ ಜ್ಞಾನವಿಲ್ಲ. ಕೇವಲ ಭಾವನೆ ಕುಳಿತಿದೆ. ಆ ಭಾವನೆಯ ಆಧಾರದ ಮೇಲೂ ಸಹ ಆಸ್ತಿಗೆ ಅಧಿಕಾರಿ ಆಗುತ್ತಾರೆ.

ಓಂ ಶಾಂತಿ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸುತ್ತಾರೆ, ಇದಕ್ಕೆ ಆತ್ಮಿಕ ಜ್ಞಾನ ಅಥವಾ ಆಧ್ಯಾತ್ಮಿಕ ಜ್ಞಾನ ಎಂದು ಹೇಳಲಾಗುತ್ತದೆ. ಆಧ್ಯಾತ್ಮಿಕ ಜ್ಞಾನ ಕೇವಲ ಒಬ್ಬ ತಂದೆಯಲ್ಲಿಯೇ ಇರುತ್ತದೆ ಮತ್ತ್ಯಾವುದೇ ಮನುಷ್ಯರಲ್ಲಿ ಆಧ್ಯಾತ್ಮಿಕ ಜ್ಞಾನ ಇರುವುದಿಲ್ಲ. ಈ ಆತ್ಮಿಕ ಜ್ಞಾನವನ್ನು ಕೊಡುವವರು ಒಬ್ಬ ತಂದೆಯೇ ಆಗಿದ್ದಾರೆ. ಯಾರನ್ನು ಜ್ಞಾನ ಸಾಗರನೆಂದು ಹೇಳಲಾಗುತ್ತದೆ ಪ್ರತಿಯೊಬ್ಬ ಮನುಷ್ಯನಲ್ಲಿ ತಮ್ಮ-ತಮ್ಮ ವಿಶೇಷತೆ ಇರುತ್ತದೆಯಲ್ಲವೇ. ಬ್ಯಾರಿಸ್ಟರ್, ಬ್ಯಾರಿಸ್ಟರ್ ಆಗಿರುತ್ತಾರೆ, ವೈದ್ಯರಿಗೆ ವೈದ್ಯಕೀಯ ವಿಶೇಷತೆ ಇರುತ್ತದೆ. ಪ್ರತಿಯೊಬ್ಬರ ಕರ್ತವ್ಯವು, ಪಾತ್ರವು ಬೇರೆ-ಬೇರೆ ಆಗಿದೆ. ಪ್ರತಿಯೊಂದು ಆತ್ಮನಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ ಮತ್ತು ಅವಿನಾಶಿ ಪಾತ್ರವಾಗಿದೆ. ಎಷ್ಟು ಸೂಕ್ಷ್ಮ ಆತ್ಮವಾಗಿದೆ, ವಿಚಿತ್ರವಾಗಿದೆಯಲ್ಲವೇ! ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರವೆಂದು ಹೇಳುತ್ತಾರೆ. ನಿರಾಕಾರ ಆತ್ಮಕ್ಕೆ ಈ ಶರೀರವು ಸಿಂಹಾಸನವಾಗಿದೆ ಎಂದು ಗಾಯನ ಮಾಡುತ್ತಾರೆ. ಇದು ಬಹಳ ಸೂಕ್ಷ್ಮ ಬಿಂದುವಾಗಿದೆ ಮತ್ತು ಎಲ್ಲಾ ಆತ್ಮಗಳು ಪಾತ್ರಧಾರಿಗಳಾಗಿದ್ದಾರೆ. ಒಂದು ಜನ್ಮದ ಮುಖ-ಲಕ್ಷಣಗಳು ಇನ್ನೊಂದು ಜನ್ಮಕ್ಕೆ ಹೋಲುವುದಿಲ್ಲ. ನಾವು ಹಿಂದೆ ಏನಾಗಿದ್ದೆವು ಮತ್ತೆ ಮುಂದೆ ಏನಾಗುತ್ತೇವೆ ಎಂದು ಯಾರಿಗೂ ತಿಳಿದಿಲ್ಲ. ಇದನ್ನು ತಂದೆಯೇ ಸಂಗಮದಲ್ಲಿ ತಿಳಿಸುತ್ತಾರೆ. ಮುಂಜಾನೆ ನೀವು ಮಕ್ಕಳು ನೆನಪಿನ ಯಾತ್ರೆಯಲ್ಲಿ ಕುಳಿತುಕೊಳ್ಳುತ್ತೀರಿ ಎಂದರೆ ನಂದಿಹೋಗಿರುವ ಆತ್ಮ ಪ್ರಜ್ವಲಿತವಾಗುತ್ತಾ ಇರುತ್ತದೆ. ಏಕೆಂದರೆ, ಆತ್ಮದಲ್ಲಿ ಬಹಳ ತುಕ್ಕು ಹಿಡಿದಿದೆ. ತಂದೆಯು ಅಕ್ಕಸಾಲಿಗನ ಕೆಲಸವನ್ನು ಮಾಡುತ್ತಾರೆ, ಪತಿತ ಆತ್ಮರಲ್ಲಿ ತುಕ್ಕು ಬೀಳುತ್ತದೆ. ಅವರನ್ನು ಮತ್ತೆ ಪವಿತ್ರರನ್ನಾಗಿ ಮಾಡುತ್ತಾರೆ, ತುಕ್ಕಂತು ಹಿಡಿಯುತ್ತದೆಯಲ್ಲವೇ. ಚಿನ್ನ, ತಾಮ್ರ, ಕಬ್ಬಿಣ ಮುಂತಾದ ಹೆಸರುಗಳು ಈ ರೀತಿ ಇವೆ - ಗೋಲ್ಡೆನ್ ಏಜ್, ಸಿಲ್ವರ್ ಏಜ್.... ಸತೋಪ್ರಧಾನ, ಸತೋ, ರಜೋ, ತಮೋ..... ಈ ಮಾತುಗಳನ್ನು ಮತ್ತ್ಯಾವುದೇ ಮನುಷ್ಯರು, ಗುರುಗಳು ತಿಳಿಸುವುದಿಲ್ಲ, ಒಬ್ಬ ಸದ್ಗುರುವೇ ತಿಳಿಸುತ್ತಾರೆ. ಸದ್ಗುರುವಿನ ಅಕಾಲ ಸಿಂಹಾಸನವೆಂದು ಹೇಳುತ್ತಾರಲ್ಲವೇ. ಆ ಸದ್ಗುರುವಿಗು ಸಿಂಹಾಸನ ಬೇಕಲ್ಲವೇ. ಹೇಗೆ ನೀವಾತ್ಮರಿಗೆ ತಮ್ಮ-ತಮ್ಮ ಸಿಂಹಾಸನವಿದೆ (ಭೃಕುಟಿ) ಅವರಿಗು ಸಿಂಹಾಸನವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾನು ಯಾವ ಸಿಂಹಾಸನವನ್ನು ತೆಗೆದುಕೊಳ್ಳುತ್ತೇನೆ ಎಂದು ಯಾರಿಗೂ ಗೊತ್ತಿಲ್ಲವೆಂದು ತಂದೆಯು ಹೇಳುತ್ತಾರೆ. ಪ್ರಪಂಚದಲ್ಲಿ ಆ ಸನ್ಯಾಸಿಗಳಂತು ನೇತಿ-ನೇತಿ (ಗೊತ್ತಿಲ್ಲ-ಗೊತ್ತಿಲ್ಲ) ನಮಗೆ ಗೊತ್ತಿಲ್ಲವೆಂದು ಹೇಳುತ್ತಾ ಬಂದಿದ್ದಾರೆ. ಮೊದಲು ನಾವು ಸಹ ಏನನ್ನೂ ತಿಳಿದಿರಲಿಲ್ಲವೆಂದು ನೀವು ಮಕ್ಕಳು ಸಹ ತಿಳಿಯುತ್ತೀರಿ. ಯಾರು ಏನನ್ನೂ ತಿಳಿದಿಲ್ಲವೋ ಅವರಿಗೆ ಮಂದ ಬುದ್ಧಿಯವರು ಎಂದು ಹೇಳುತ್ತಾರೆ. ನಾವು ಬಹಳ ಬುದ್ಧಿವಂತರಾಗಿದ್ದೆವು ಎಂದು ಭಾರತವಾಸಿಗಳು ತಿಳಿಯುತ್ತಾರೆ. ವಿಶ್ವದ ರಾಜ್ಯಭಾಗ್ಯವು ನಮ್ಮದಾಗಿತ್ತು. ಈಗ ಬುದ್ಧಿ ಹೀನರಾಗಿಬಿಟ್ಟಿದ್ದಾರೆ. ಭಲೆ ನೀವು ಶಾಸ್ತ್ರ ಮೊದಲಾದ ಏನೆಲ್ಲವನ್ನೂ ಓದಿದ್ದೀರೋ, ಇದೆಲ್ಲವನ್ನೂ ಈಗ ಮರೆತುಬಿಡಿ ಕೇವಲ ಒಬ್ಬ ತಂದೆಯನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಭಲೆ ಗೃಹಸ್ಥ ವ್ಯವಹಾರದಲ್ಲಿಯೂ ಇರಿ. ಈಗ ಸನ್ಯಾಸಿಗಳ ಅನುಯಾಯಿಗಳು ಸಹ ತಮ್ಮ-ತಮ್ಮ ಮನೆಯಲ್ಲಿಯೇ ಇರುತ್ತಾರೆ. ಕೆಲ-ಕೆಲವರು ಸತ್ಯವಾದ ಅನುಯಾಯಿಗಳು ಇರುತ್ತಾರೆ ಅವರು, ಅವರ ಜೊತೆ ಇರುತ್ತಾರೆ. ಉಳಿದವರು ಕೆಲ-ಕೆಲವರು ಒಂದೆಡೆ, ಕೆಲ-ಕೆಲವರು ಕೆಲವೊಂದೆಡೆ ಇರುತ್ತಾರೆ, ಅಂದಾಗ ಇವೆಲ್ಲಾ ಮಾತುಗಳನ್ನು ತಂದೆಯೇ ಕುಳಿತು ತಿಳಿಸುತ್ತಾರೆ, ಇದಕ್ಕೆ ಜ್ಞಾನದ ನರ್ತನವೆಂದು ಹೇಳಲಾಗುತ್ತದೆ. ಯೋಗವಂತು ಶಾಂತಿಯದ್ದಾಗಿದೆ, ನರ್ತತನವು ಜ್ಞಾನದ್ದಾಗುತ್ತದೆ. ಯೋಗದಲ್ಲಿ ಸಂಪೂರ್ಣ ಶಾಂತವಾಗಿ ಇರಬೇಕಾಗುತ್ತದೆ. ಆಳವಾದ ಶಾಂತಿ (ಡೆಡ್ ಸೈಲೆನ್ಸ್) ಎಂದು ಹೇಳುತ್ತಾರಲ್ಲವೆ. ಮೂರು ನಿಮಿಷ ಡೆಡ್ ಸೈಲೆನ್ಸ್ ಆದರೆ, ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಸನ್ಯಾಸಿಗಳು ಸಹ ಶಾಂತಿಗಾಗಿ ಕಾಡಿಗೆ ಹೋಗುತ್ತಾರೆ ಆದರೆ, ಅಲ್ಲಿ ಶಾಂತಿ ಸಿಗಲು ಸಾಧ್ಯವೇ. ರಾಣಿಯ ಹಾರವು ಕೊರಳಿನಲ್ಲಿಯೇ ಇತ್ತು ಆದರೆ, ಊರೆಲ್ಲಾ ಹುಡುಕಿದರು... ಎಂದು ಕಥೆಯು ಇದೆ. ಈ ಉದಾಹರಣೆಯು ಶಾಂತಿಯನ್ನು ಕುರಿತು ಹೇಳಲಾಗಿದೆ. ತಂದೆಯು ಈ ಸಮಯದಲ್ಲಿ ಯಾವ ಮಾತುಗಳನ್ನು ತಿಳಿಸುತ್ತಾರೆಯೋ ಆ ದೃಷ್ಟಾಂತವು ಮತ್ತೆ ಭಕ್ತಿಮಾರ್ಗದಲ್ಲಿ ನಡೆಯುತ್ತಾ ಬರುತ್ತದೆ. ಈ ಸಮಯದಲ್ಲಿ ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಿ ಹೊಸ ಪ್ರಪಂಚವನ್ನಾಗಿ ಮಾಡುತ್ತಾರೆ. ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುತ್ತಾರೆ. ಇದನ್ನಂತು ನೀವು ತಿಳಿದುಕೊಳುತ್ತೀರಿ. ಉಳಿದಂತೆ ಈ ಪ್ರಪಂಚವೇ ತಮೋಪ್ರಧಾನ, ಪತಿತವಾಗಿದೆ ಏಕೆಂದರೆ, ಎಲ್ಲರೂ ವಿಕಾರಗಳಿಂದ ಜನಿಸುತ್ತಾರೆ. ದೇವತೆಗಳು ವಿಕಾರದಿಂದ ಜನ್ಮ ಪಡೆಯುವುದಿಲ್ಲ, ಅದಕ್ಕೆ ಸಂಪೂರ್ಣ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ನಿರ್ವಿಕಾರಿ ಪ್ರಪಂಚವೆಂಬ ಶಬ್ದವನ್ನು ಹೇಳುತ್ತಾರೆ ಆದರೆ, ಅದರ ಅರ್ಥವನ್ನು ತಿಳಿದಿಲ್ಲ. ನೀವೇ ಪೂಜ್ಯರಿಂದ ಪೂಜಾರಿ ಆಗಿದ್ದೀರಿ ಆದರೆ, ತಂದೆಗೆ ಎಂದೂ ಈ ರೀತಿ ಹೇಳಲಾಗುವುದಿಲ್ಲ. ತಂದೆ ಎಂದೂ ಪೂಜಾರಿ ಆಗುವುದಿಲ್ಲ. ಕಣ-ಕಣದಲ್ಲಿ ಪರಮಾತ್ಮ ಇದ್ದಾರೆ ಎಂದು ಹೇಳಿಬಿಡುತ್ತಾರೆ. ಆದ್ದರಿಂದ, ಭಾರತದಲ್ಲಿ ಯಾವಾಗ ಇಂತಹ ಧರ್ಮದ ನಿಂದನೆ ಆಗುವುದೋ ಆಗ ನಾನು ಬರುತ್ತೇನೆ... ಎಂದು ತಂದೆಯು ತಿಳಿಸುತ್ತಾರೆ. ಅವರು ಹಾಗೆಯೇ ಶ್ಲೋಕಗಳನ್ನು ಓದಿ ಬಿಡುತ್ತಾರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಶರೀರವೇ ಪತಿತವಾಗುತ್ತದೆ, ಆತ್ಮ ಆಗುವುದಿಲ್ಲ ಎಂದು ಅವರು ತಿಳಿಯುತ್ತಾರೆ.

ಮೊದಲು ಆತ್ಮವು ಪತಿತವಾಗಿದೆ ಆದ್ದರಿಂದ, ಶರೀರವು ಪತಿತವಾಗಿದೆ, ಚಿನ್ನದಲ್ಲಿಯೇ ಲೋಹವು ಬೆರೆಕೆ ಆಗುತ್ತಿದೆ ಎಂದರೆ ಅದರಿಂದ ಆಭರಣಗಳು ಆ ರೀತಿಯೇ ಆಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಆದರೆ, ಅದೆಲ್ಲವೂ ಭಕ್ತಿಮಾರ್ಗದಲ್ಲಿ ಇದೆ. ಪ್ರತಿಯೊಬ್ಬರಲ್ಲಿ ಆತ್ಮವು ವಿರಾಜಮಾನವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಜೀವಾತ್ಮ ಎಂದು ಹೇಳಲಾಗುತ್ತದೆ, ಜೀವ ಪರಮಾತ್ಮನೆಂದು ಹೇಳುವುದಿಲ್ಲ ಮಹಾನ್ ಆತ್ಮ ಎಂದು ಹೇಳಲಾಗುತ್ತದೆ, ಮಹಾನ್ ಪರಮಾತ್ಮ ಎಂದು ಹೇಳುವುದಿಲ್ಲ. ಆತ್ಮವೇ ಭಿನ್ನ-ಭಿನ್ನ ಶರೀರವನ್ನು ತೆಗೆದುಕೊಳ್ಳುತ್ತದೆ, ಪಾತ್ರವನ್ನು ಅಭಿನಯಿಸುತ್ತದೆ ಎಂದಾಗ ಯೋಗವು ಸಂಪೂರ್ಣ ಶಾಂತಿ ಆಗಿದೆ, ಮತ್ತೆ ಜ್ಞಾನವು ನರ್ತನ ಆಗಿದೆ. ಯಾರು ಆಸಕ್ತಿಯುಳ್ಳವರಿದ್ದಾರೋ ಅವರ ಮುಂದೆ ತಂದೆಯ ಜ್ಞಾನದ ನರ್ತನ ಆಗುವುದು. ತಂದೆಗೆ ಗೊತ್ತಿದೆ ಯಾರಲ್ಲಿ ಎಷ್ಟು ಜ್ಞಾನವಿದೆ, ಎಷ್ಟು ಅವರಲ್ಲಿ ಯೋಗದ ನಶೆ ಇದೆ. ಶಿಕ್ಷಕರಿಗಂತು ತಿಳಿದಿರುತ್ತದೆಯಲ್ಲವೇ. ಯಾರು-ಯಾರು ಒಳ್ಳೆಯ ಗುಣವಂತ ಮಕ್ಕಳಿದ್ದಾರೆ ಎಂದು ತಂದೆಗೆ ಗೊತ್ತಿದೆ. ಒಳ್ಳೊಳ್ಳೆಯ ಮಕ್ಕಳಿಗೆ ಎಲ್ಲೆಂದರಲ್ಲಿ ಆಮಂತ್ರಣ ಸಿಗುತ್ತದೆ, ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ. ಪ್ರಜೆಗಳೂ ನಂಬರ್ವಾರ್ ಪುರುಷಾರ್ಥದನುಸಾರ ಆಗುತ್ತಾರೆ. ಇಂತಹವರು ಬುದ್ಧಿವಂತರಾಗಿದ್ದಾರೆ, ಇವರು ಮಧ್ಯಮವಾಗಿದ್ದಾರೆ ಎಂದು ತಿಳಿದುಕೊಳ್ಳಬಹುದು. ಇಲ್ಲಂತೂ ಇದು ಬೇಹದ್ದಿನ ಶಾಲೆಯಾಗಿದೆ, ಇದರಲ್ಲಿ ಯಾರನ್ನೂ ನಂಬರ್ವಾರ್ ಆಗಿ ಕುಳ್ಳರಿಸಲು ಸಾಧ್ಯವಿಲ್ಲ. ನನ್ನ ಮುಂದೆ ಯಾರು ಕುಳಿತಿದ್ದಾರೆಯೋ ಇವರಲ್ಲಿ ಏನೂ ಜ್ಞಾನವಿಲ್ಲ ಎಂದು ತಂದೆಗೆ ಗೊತ್ತಿದೆ. ಕೇವಲ ಭಾವನೆ ಇದೆ ಬಾಕಿ ಜ್ಞಾನವೂ ಇಲ್ಲ, ಯೋಗವೂ ಇಲ್ಲ. ಇವರು ತಂದೆಯಾಗಿದ್ದಾರೆ, ಇವರಿಂದ ನಾವು ಆಸ್ತಿಯನ್ನು ತೆಗೆದುಕೊಳ್ಳಬೇಕೆಂಬ ನಿಶ್ಚಯವಿದೆ ಅಷ್ಟೇ. ಆಸ್ತಿಯು ಎಲ್ಲರಿಗೂ ಸಿಗಬೇಕಾಗಿದೆ ಆದರೆ, ರಾಜ್ಯ ಪದವಿಯಲ್ಲಿ ನಂಬರ್ವಾರ್ ಪದವಿಗಳು ಇದೆ, ಯಾರು ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತಾರೆಯೋ ಅವರಿಗೆ ಬಹಳ ಒಳ್ಳೆಯ ಬಹುಮಾನ ಸಿಗುತ್ತದೆ. ಇಲ್ಲಂತು ಎಲ್ಲರಿಗೂ ಬಹುಮಾನ ಕೊಡುತ್ತಿರುತ್ತಾರೆ. ಯಾರು ಸಲಹೆ ನೀಡುತ್ತಾರೆ, ತಲೆ ಕೆಡಿಸಿಕೊಳ್ಳುತ್ತಾರೆಯೋ ಅವರಿಗೂ ಬಹುಮಾನ ಸಿಕ್ಕಿಬಿಡುತ್ತದೆ. ವಿಶ್ವದಲ್ಲಿ ಸತ್ಯ ಶಾಂತಿಯು ಹೇಗೆ ಸ್ಥಾಪನೆ ಆಗುವುದು ಎಂದು ಈಗ ನೀವು ಮಕ್ಕಳಿಗೆ ತಿಳಿದಿದೆ. ವಿಶ್ವದಲ್ಲಿ ಶಾಂತಿ ಯಾವಾಗ ಇತ್ತು? ಅದನ್ನು ಎಂದಾದರು ಕೇಳಿದ್ದೀರಾ ಅಥವಾ ನೋಡಿದ್ದೀರಾ? ಯಾವ ಪ್ರಕಾರದ ಶಾಂತಿಯನ್ನು ಬಯಸುತ್ತೀರಿ? ನೀವು ಈ ಪ್ರಶ್ನೆಗಳನ್ನು ಕೇಳಬಹುದು ಎಂದು ತಂದೆಯು ತಿಳಿಸಿದ್ದಾರೆ. ಏಕೆಂದರೆ, ನಿಮಗೆ ತಿಳಿದಿದೆ - ಯಾರು ಪ್ರಶ್ನೆಗಳನ್ನು ಕೇಳುತ್ತಾರೋ ಅವರೇ ತಿಳಿದುಕೊಂಡಿಲ್ಲವೆಂದರೆ ಬೇರೆಯವರಿಗೆ ಏನು ಹೇಳುತ್ತಾರೆ? ನೀವು ಪತ್ರಿಕೆಗಳ ಮೂಲಕ ಕೇಳಿ - ಯಾವ ಪ್ರಕಾರದ ಶಾಂತಿಯನ್ನು ಬಯಸುತ್ತೀರಿ? ಶಾಂತಿಧಾಮವಂತು ಇದೆ, ಅಲ್ಲಿ ನಾವೆಲ್ಲಾ ಆತ್ಮಗಳು ಇರುತ್ತೇವೆ. ತಂದೆಯು ಹೇಳುತ್ತಾರೆ - ಒಂದನೆಯದಂತು ಶಾಂತಿಧಾಮವನ್ನು ನೆನಪು ಮಾಡಿ, ಎರಡನೆಯದಂತು ಸುಖಧಾಮವನ್ನು ನೆನಪು ಮಾಡಿ. ಸೃಷ್ಟಿ ಚಕ್ರದ ಪೂರ್ಣ ಜ್ಞಾನ ಇಲ್ಲದಿರುವ ಕಾರಣ ಅಸತ್ಯವನ್ನು ಹೇಳಿಬಿಟ್ಟಿದ್ದಾರೆ. ನಾವು ಡಬಲ್ ಕಿರೀಟಧಾರಿಗಳಾಗಿದ್ದೆವು ಎಂದು ಮಕ್ಕಳು ತಿಳಿದುಕೊಂಡಿದ್ದೀರಿ. ನಾವು ದೇವತೆಗಳಾಗಿದ್ದೆವು, ಈಗ ಮತ್ತೆ ಮನುಷ್ಯರಾಗಿದ್ದೇವೆ. ದೇವತೆಗಳಿಗೆ ದೇವತೆಗಳು ಎಂದು ಹೇಳಲಾಗುತ್ತದೆ, ಮನುಷ್ಯರು ಎಂದಲ್ಲ. ಏಕೆಂದರೆ, ದೈವೀಗುಣವುಳ್ಳವರಾಗಿದ್ದಾರಲ್ಲವೇ. ಯಾರಲ್ಲಿ ಅವಗುಣವಿದೆಯೋ ಅವರು ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹೇಳುತ್ತಾರೆ. ಶಾಸ್ತ್ರಗಳಲ್ಲಿ ಯಾವ ಮಾತುಗಳನ್ನು ಕೇಳಿದ್ದಾರೆಯೋ ಅದನ್ನು ಕೇವಲ ಹಾಡುತ್ತಿರುತ್ತಾರೆ, ಅಚ್ಯುತಂ, ಕೇಶವಂ.... ಹೇಗೆ ಗಿಳಿಗೆ ಕಲಿಸಲಾಗುತ್ತದೆ. ಬಾಬಾ ಬಂದು ನಮ್ಮೆಲ್ಲರನ್ನು ಪಾವನ ಮಾಡಿ ಎಂದು ಹೇಳುತ್ತಾರೆ. ಬ್ರಹ್ಮ್ ಲೋಕಕ್ಕೆ ವಾಸ್ತವದಲ್ಲಿ ಪ್ರಪಂಚವೆಂದು ಹೇಳಲಾಗುವುದಿಲ್ಲ. ಅಲ್ಲಿ ನೀವು ಆತ್ಮಗಳಿರುತ್ತೀರಿ. ವಾಸ್ತವದಲ್ಲಿ ಪಾತ್ರವನ್ನು ಅಭಿನಯಿಸುವ ಪ್ರಪಂಚವು ಇದೇ ಆಗಿದೆ. ಅದು ಶಾಂತಿಧಾಮವಾಗಿದೆ. ನಾನು ಕುಳಿತು ನೀವು ಮಕ್ಕಳಿಗೆ ನನ್ನ ಪರಿಚಯವನ್ನು ಕೊಡುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಯಾರು ತಮ್ಮ ಜನ್ಮಗಳ ಬಗ್ಗೆ ಅರಿತುಕೊಂಡಿಲ್ಲವೋ ಅವರ ಶರೀರದಲ್ಲಿಯೇ ನಾನು ಬರುತ್ತೇನೆ. ಈಗ ಈ ಬ್ರಹ್ಮಾರವರು ಕೇಳುತ್ತಾರೆ. ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ. ಹಳೆಯ ಪತಿತ ಪ್ರಪಂಚ ರಾವಣನ ಪ್ರಪಂಚವಾಗಿದೆ. ಯಾರು ನಂಬರ್ವನ್ ಪಾವನರಾಗಿದ್ದರೋ, ಅವರೇ ನಂತರ ಕೊನೆಯ ನಂಬರಿನಲ್ಲಿ ಪತಿತರಾಗಿದ್ದಾರೆ. ಅವರನ್ನು ನನ್ನ ರಥವನ್ನಾಗಿ ಮಾಡಿಕೊಳ್ಳುತ್ತೇನೆ. ಫಾಸ್ಟ್ ಸೋ ಲಾಸ್ಟ್ನಲ್ಲಿ ಬಂದಿದ್ದಾರೆ ಮತ್ತೆ ಫಸ್ಟ್ ನಲ್ಲಿ ಹೋಗಬೇಕಾಗಿದೆ. ಬ್ರಹ್ಮಾರವರ ಮೂಲಕ ಆದಿ ಸನಾತನ ದೇವೀ ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ ಆದರೆ, ದೇವೀ-ದೇವತಾ ಧರ್ಮದಲ್ಲಿ ಬರುತ್ತೇನೆ ಎಂದು ಹೇಳುವುದಿಲ್ಲ. ಯಾರ ಶರೀರದಲ್ಲಿ ಬಂದು ಕುಳಿತುಕೊಳ್ಳುವರೋ ಅವರೇ ಮತ್ತೆ ಹೋಗಿ ನಾರಾಯಣನಾಗುತ್ತಾರೆ. ವಿಷ್ಣುವೆಂದರೆ ಮತ್ತ್ಯಾರೋ ಅಲ್ಲ. ಲಕ್ಷ್ಮೀ-ನಾರಾಯಣರು ಅಥವಾ ರಾಧಾ-ಕೃಷ್ಣರ ಜೋಡಿ ಎಂದಾದರೂ ಹೇಳಿ. ವಿಷ್ಣು ಯಾರು ಎಂಬುವುದನ್ನು ಯಾರೂ ತಿಳಿದುಕೊಂಡಿಲ್ಲ. ನಾನು ನಿಮಗೆ ವೇದ, ಶಾಸ್ತ್ರಗಳ, ಎಲ್ಲಾ ಚಿತ್ರಗಳ ರಹಸ್ಯವನ್ನು ತಿಳಿಸುತ್ತೇನೆ. ನಾನು ಯಾರಲ್ಲಿ ಪ್ರವೇಶ ಮಾಡುತ್ತೇನೆಯೋ ಅವರು ಮತ್ತೆ ಈ ರೀತಿ ಆಗುತ್ತಾರೆ, ಪ್ರವೃತ್ತಿ ಮಾರ್ಗವಾಗಿದೆಯಲ್ಲವೇ. ಈ ಬ್ರಹ್ಮಾ-ಸರಸ್ವತಿಯು, ಆ ಲಕ್ಷ್ಮೀ-ನಾರಾಯಣರಾಗುತ್ತಾರೆ. ಈ ಬ್ರಹ್ಮಾರವರಲ್ಲಿ ಪ್ರವೇಶ ಮಾಡಿ ಬ್ರಾಹ್ಮಣರಿಗೆ ಜ್ಞಾನವನ್ನು ಕೊಡುತ್ತೇನೆ ಅಂದಾಗ, ಈ ಬ್ರಹ್ಮನು ಕೇಳಿಸಿ ಕೊಳ್ಳುತ್ತಾರೆ. ಮೊಟ್ಟ ಮೊದಲು ಇವರೇ ಕೇಳುತ್ತಾರೆ. ಇದು ದೊಡ್ಡ ಬ್ರಹ್ಮಪುತ್ರ ನದಿಯಾಗಿದೆ. ಮೇಳವೂ ಸಹ ಸಾಗರ ಮತ್ತು ಬ್ರಹ್ಮಪುತ್ರ ನದಿಯ ಬಳಿ ಸೇರುತ್ತದೆ. ದೊಡ್ಡ ಮೇಳವಾಗುತ್ತದೆ, ಅಲ್ಲಿ ಸಾಗರ ಮತ್ತು ನದಿಯ ಸಂಗಮವಾಗುತ್ತದೆ. ನಾನೂ ಇವರಲ್ಲಿ ಪ್ರವೇಶ ಮಾಡುತ್ತೇನೆ. ಇವರೇ ನಾರಾಯಣರಾಗುತ್ತಾರೆ. ಇವರಿಗೆ ಆ ರೀತಿ ಆಗುವುದರಲ್ಲಿ (ಬ್ರಹ್ಮನಿಂದ ವಿಷ್ಣು) ಒಂದು ಸೆಕೆಂಡ್ ಹಿಡಿಸುತ್ತದೆ. ಕೇವಲ ಸಾಕ್ಷಾತ್ಕಾರವಾಗಿಬಿಡುತ್ತದೆ. ಮತ್ತೆ ನಾನು ಈ ರೀತಿ ಆಗುವವನಿದ್ದೇನೆ, ವಿಶ್ವದ ಮಾಲೀಕನಾಗುವೆನು ಎಂದು ತಕ್ಷಣ ನಿಶ್ಚಯ ಆಗಿಬಿಡುತ್ತದೆ ಅಂದಾಗ, ಈ ಗುಲಾಮಿತನವು ಏನು ಮಾಡುವುದು? ಎಲ್ಲವನ್ನು ಬಿಟ್ಟು ಬಿಟ್ಟರು. ತಂದೆಯು ಬಂದಿದ್ದಾರೆ, ಈ ಪ್ರಪಂಚವು ಸಮಾಪ್ತಿ ಆಗುವುದಿದೆ ಎಂದು ನಿಮಗೂ ಸಹ ಮೊದಲು ತಿಳಿಯಿತು ಎಂದಾಗ ತಕ್ಷಣ ಓಡಿ ಬಂದಿರಿ. ಬಾಬಾರವರು ನಿಮ್ಮನ್ನು ಓಡಿಸಿಕೊಂಡು ಬರಲಿಲ್ಲ. ಹಾ! ಭಟ್ಟಿಯಾಗುವುದಿತ್ತು. ಕೃಷ್ಣನು ಓಡಿಸಿದನು ಎಂದು ಹೇಳುತ್ತಾರೆ. ಒಳ್ಳೆಯದು. ಕೃಷ್ಣನು ಓಡಿಸಿದನು ಎಂದರೆ ಪಟ್ಟದ ರಾಣಿಯರನ್ನಾಗಿ ಮಾಡಿದರಲ್ಲವೇ. ಅಂದಾಗ ಈ ಜ್ಞಾನದಿಂದ ವಿಶ್ವದ ಮಹಾರಾಜಾ-ಮಹಾರಾಣಿಯರಗುತ್ತೀರಿ. ಇದಂತೂ ಒಳ್ಳೆಯದೇ ಆಗಿದೆ, ಇದರಲ್ಲಿ ನಿಂದನೆಯನ್ನು ಪಡೆಯುವ ಅವಶ್ಯಕತೆ ಇಲ್ಲ. ಮತ್ತೆ ಹೇಳುತ್ತಾರೆ - ಯಾರಿಗೆ ಕಳಂಕ ಹಾಕುವವರೋ ಆಗಲೇ ಕಳಂಗೀಧರರಾಗುತ್ತಾರೆ. ಶಿವ ತಂದೆಯ ಮೇಲೆ ಕಳಂಕ ಹಾಕುತ್ತಾರೆ, ಎಷ್ಟೊಂದು ನಿಂದನೆ ಮಾಡುತ್ತಾರೆ, ನಾವು ಆತ್ಮಗಳೇ ಪರಮಾತ್ಮ, ಪರಮಾತ್ಮನೇ ನಾವು ಆತ್ಮಗಳು ಎಂದು ಹೇಳುತ್ತಾರೆ. ಈಗ ಈ ರೀತಿ ಅಲ್ಲ ಎಂದು ತಂದೆಯು ತಿಳಿಸುತ್ತಾರೆ. ಈಗ ನೀವು ಆತ್ಮರು ಬ್ರಾಹ್ಮಣರಾಗಿದ್ದೀರಿ, ಬ್ರಾಹ್ಮಣ ಕುಲವು ಎಲ್ಲದಕ್ಕಿಂತ ಶ್ರೇಷ್ಠ ಕುಲವಾಗಿದೆ. ಇದಕ್ಕೆ ರಾಜವಂಶ ಎಂದು ಹೇಳುವುದಿಲ್ಲ. ರಾಜವಂಶ ಎಂದರೆ ಅದರಲ್ಲಿ ರಾಜ್ಯಭಾರವು ನಡೆಯುತ್ತದೆ. ಇದು ನಿಮ್ಮ ಕುಲವಾಗಿದೆ, ಬಹಳ ಸಹಜವಾಗಿದೆ. ನಾವು ಬ್ರಾಹ್ಮಣರೇ ದೇವತೆಗಳಾಗುವವರಾಗಿದ್ದೇವೆ ಆದ್ದರಿಂದ, ದೈವೀಗುಣಗಳನ್ನು ಅವಶ್ಯವಾಗಿ ಧಾರಣೆ ಮಾಡಬೇಕಾಗಿದೆ. ಸಿಗರೇಟ್, ಬೀಡಿ, ತಂಬಾಕು ಮೊದಲಾದವುಗಳನ್ನು ದೇವತೆಗಳಿಗೆ ಭೋಗವನ್ನು ಇಡುತ್ತೀರೇನು? ಶ್ರೀನಾಥ ದ್ವಾರದಲ್ಲಿ ಬಹಳ ತುಪ್ಪದ ಪದಾರ್ಥಗಳು ತಯಾರಾಗುತ್ತವೆ, ಇಷ್ಟೊಂದು ಭೋಗವನ್ನು ಇಡುತ್ತಾರೆ, ನಂತರ ಅಂಗಡಿಯೇ ಆಗಿಬಿಡುತ್ತದೆ. ಯಾತ್ರಿಕರು ಹೋಗಿ ತೆಗೆದುಕೊಳ್ಳುತ್ತಾರೆ. ಮನುಷ್ಯರಿಗೆ ಬಹಳ ಭಾವನೆ ಇರುತ್ತದೆ. ಸತ್ಯಯುಗದಲ್ಲಿ ಇಂತಹ ಮಾತುಗಳು ಇರುವುದಿಲ್ಲ. ಯಾವುದೇ ಪದಾರ್ಥವನ್ನು ಹಾಳು ಮಾಡುವ ಇಂತಹ ನೊಣಗಳು ಮೊದಲಾದವುಗಳು ಇರುವುದಿಲ್ಲ. ಇಂತಹ ಖಾಯಿಲೆ ಮೊದಲಾದವುಗಳು ಸಹ ಅಲ್ಲಿ ಇರುವುದಿಲ್ಲ. ಹಿರಿಯ ವ್ಯಕ್ತಿಗಳ ಬಳಿ ಬಹಳ ಸ್ವಚ್ಛತೆ ಇರುತ್ತದೆ. ಸತ್ಯಯುಗದಲ್ಲಂತು ಇಂತಹ ಮಾತುಗಳೇ ಇರುವುದಿಲ್ಲ. ರೋಗ ಇತ್ಯಾದಿಗಳೇ ಇರುವುದಿಲ್ಲ. ಇವೆಲ್ಲಾ ರೋಗಗಳು ದ್ವಾಪರದಿಂದ ಪ್ರಾರಂಭವಾಗುತ್ತದೆ. ತಂದೆಯು ಬಂದು ನಿಮ್ಮನ್ನು ಸದಾ ಆರೋಗ್ಯವಂತರನ್ನಾಗಿ ಮಾಡುತ್ತಾರೆ. ನೀವು ಸದಾ ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡುತ್ತೀರಿ ಆದ್ದರಿಂದ, ನೀವು ಸದಾ ಆರೋಗ್ಯವಂತರಾಗಿರುತ್ತೀರಿ, ಆಯಸ್ಸು ವೃದ್ಧಿ ಆಗುತ್ತದೆ. ನೆನ್ನೆಯ ಮಾತಾಗಿದೆ, 150 ವರ್ಷ ಆಯಸ್ಸು ಇತ್ತಲ್ಲವೇ. ಈಗಂತೂ 40-45 ವರ್ಷ ಇರುತ್ತದೆ ಏಕೆಂದರೆ ಅವರು ಯೋಗಿಗಳಾಗಿದ್ದರು, ಇವರು ಭೋಗಿಗಳಾಗಿದ್ದಾರೆ.

ನೀವು ರಾಜಯೋಗಿ, ರಾಜಋಷಿಗಳಾಗಿದ್ದೀರಿ ಆದ್ದರಿಂದ ನೀವು ಪವಿತ್ರರಾಗಿದ್ದೀರಿ ಆದರೆ, ಇದು ಪುರುಷೋತ್ತಮ ಸಂಗಮಯುಗವಾಗಿದೆ, ಮಾಸ ಅಥವಾ ವರ್ಷವಲ್ಲ. ತಂದೆಯು ಹೇಳುತ್ತಾರೆ - ನಾನು ಕಲ್ಪ-ಕಲ್ಪದಲ್ಲಿಯೂ ಪುರುಷೋತ್ತಮ ಸಂಗಮಯುಗದಲ್ಲಿ ಬರುತ್ತೇನೆ. ತಂದೆಯು ಪ್ರತಿನಿತ್ಯವು ತಿಳಿಸುತ್ತಿರುತ್ತಾರೆ ಆದರೂ ಸಹ ಒಂದು ಮಾತನ್ನು ಎಂದೂ ಮರೆಯಬಾರದು ಎಂದು ಹೇಳುತ್ತಾರೆ. ಪಾವನರಾಗಬೇಕೆಂದರೆ ನನ್ನನ್ನು ನೆನಪು ಮಾಡಿ. ತಮ್ಮನ್ನು ಆತ್ಮ ಎಂದು ತಿಳಿಯಿರಿ. ದೇಹದ ಎಲ್ಲಾ ಧರ್ಮಗಳನ್ನು ತ್ಯಾಗ ಮಾಡಿ. ಈಗ ನೀವು ಹಿಂತಿರುಗಿ ಹೋಗಬೇಕಾಗಿದೆ. ನಾನು ನಿಮ್ಮ ಆತ್ಮವನ್ನು ಸ್ವಚ್ಛ ಮಾಡಲು ಬಂದಿದ್ದೇನೆ, ಇದರಿಂದ ಮತ್ತೆ ಶರೀರವು ಪವಿತ್ರವಾದದ್ದೇ ಸಿಗುತ್ತದೆ. ಇಲ್ಲಂತು ವಿಕಾರದಿಂದ ಜನಿಸುತ್ತಾರೆ. ಆತ್ಮವು ಸಂಪೂರ್ಣ ಪವಿತ್ರವಾದಾಗ, ನೀವು ಹಳೆಯ ಪಾದರಕ್ಷೆಯನ್ನು (ಶರೀರ) ಬಿಡುತ್ತೀರಿ ಮತ್ತೆ ಹೊಸದು ಸಿಗುತ್ತದೆ. ವಂದೇ ಮಾತರಂ ಎಂದು ನಿಮ್ಮ ಗಾಯನವಿದೆ, ನೀವು ಧರಣಿಯನ್ನು ಪವಿತ್ರವನ್ನಾಗಿ ಮಾಡುತ್ತೀರಿ. ನೀವು ಮಾತೆಯರು ಸ್ವರ್ಗದ ಬಾಗಿಲನ್ನು ತೆರೆಯುತ್ತೀರಿ ಆದರೆ, ಇದು ಯಾರಿಗೂ ಗೊತ್ತಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಆತ್ಮ ರೂಪಿ ಜ್ಯೋತಿಯನ್ನು ಪ್ರಜ್ವಲಿತ ಮಾಡಲು ಬೆಳಗ್ಗೆ-ಬೆಳಗ್ಗೆ ನೆನಪಿನ ಯಾತ್ರೆಯಲ್ಲಿ ಕುಳಿತುಕೊಳ್ಳಬೇಕು. ನೆನಪಿನಿಂದಲೇ ತುಕ್ಕು ಬಿಡುವುದು. ಆತ್ಮದಲ್ಲಿ ಯಾವ ತುಕ್ಕು ಹಿಡಿದಿದೆಯೋ ಅದನ್ನು ನೆನಪಿನಿಂದ ತೆಗೆದುಹಾಕಿ ಸತ್ಯಚಿನ್ನ ಆಗಬೇಕಾಗಿದೆ.

2. ತಂದೆಯಿಂದ ಶ್ರೇಷ್ಠ ಪದವಿಯ ಬಹುಮಾನವನ್ನು ಪಡೆಯಲು ಭಾವನೆಯ ಜೊತೆ-ಜೊತೆಗೆ ಜ್ಞಾನವಂತರು ಮತ್ತು ಗುಣವಂತರು ಆಗಬೇಕಾಗಿದೆ. ಸರ್ವೀಸ್ ಮಾಡಿ ತೋರಿಸಬೇಕಾಗಿದೆ.

ವರದಾನ:
ಚಲನೆ ಮತ್ತು ಚೆಹರೆಯಿಂದ ಪವಿತ್ರತೆಯ ಶೃಂಗಾರದ ಹೊಳಪನ್ನು ತೋರಿಸುವಂತಹ ಶೃಂಗಾರಿ ಮೂರ್ತಿ ಭವ

ಪವಿತ್ರತೆ ಬ್ರಾಹ್ಮಣ ಜೀವನದ ಶೃಂಗಾರವಾಗಿದೆ. ಪ್ರತಿ ಸಮಯ ಪವಿತ್ರತೆಯ ಶೃಂಗಾರ ದ ಅನುಭೂತಿ ಚೆಹರೆ ಅಥವಾ ಚಲನೆಯಿಂದ ಅನ್ಯರಿಗೆ ಆಗಬೇಕು. ದೃಷ್ಠಿಯಲ್ಲಿ, ಮುಖದಲ್ಲಿ, ಕೈಯಲ್ಲಿ, ಕಾಲಿನಲ್ಲಿ ಸದಾ ಪವಿತ್ರತೆಯ ಶೃಂಗಾರ ಪ್ರತ್ಯಕ್ಷವಾಗಬೇಕು. ಪ್ರತಿಯೊಬ್ಬರು ವರ್ಣನೆ ಮಾಡಬೇಕು ಇವರ ಮುಖಲಕ್ಷಣದಲ್ಲಿ ಪವಿತ್ರತೆ ಕಂಡುಬರುವುದು. ಕಣ್ಣಿನಲ್ಲಿ ಪವಿತ್ರತೆಯ ಹೊಳಪು ಇರುವುದು, ಮುಖದಲ್ಲಿ ಪವಿತ್ರತೆಯ ಮುಗುಳ್ನಗೆ ಇರುವುದು. ಬೇರೆ ಯಾವುದೇ ಮಾತು ಅವರಿಗೆ ಕಂಡುಬರಬಾರದು- ಇದಕ್ಕೆ ಹೇಳಲಾಗುವುದು- ಪವಿತ್ರತೆಯ ಶೃಂಗಾರದಿಂದ ಶೃಂಗರಿತವಾದ ಮೂರ್ತಿ.

ಸ್ಲೋಗನ್:
ವ್ಯರ್ಥ ಸಂಬಂಧ-ಸಂಪರ್ಕ ಸಹ ಖಾತೆಯನ್ನು ಖಾಲಿ ಮಾಡಿ ಬಿಡುವುದು ಆದ್ದರಿಂದ ವ್ಯರ್ಥವನ್ನು ಸಮಾಪ್ತಿ ಮಾಡಿ.