07.04.24    Avyakt Bapdada     Kannada Murli    01.03.99     Om Shanti     Madhuban


"ಸಂಪೂರ್ಣ ಪವಿತ್ರರಾಗಿ ಸಂಸ್ಕಾರ ಮಿಲನವನ್ನು ಆಚರಿಸಿ ಇದೇ ಸತ್ಯ ಹೋಳಿಯಾಗಿದೆ"


ಇಂದು ಬಾಪ್ದಾದಾರವರು ನಾಲ್ಕಾರು ಕಡೆಯ ತಮ್ಮ ಹೋಲಿಯಸ್ಟ್ ಹಾಗೂ ಹೈಯೆಸ್ಟ್ ಮಕ್ಕಳನ್ನು ನೋಡುತ್ತಿದ್ದರು. ವಿಶ್ವದಲ್ಲಿ ಎಲ್ಲರಿಗಿಂತ ಹೈಯೆಸ್ಟ್ ಶ್ರೇಷ್ಠಾತಿ ಶ್ರೇಷ್ಠ ತಾವು ಮಕ್ಕಳ ಹೊರೆತು ಬೇರೆ ಯಾರಾದರೂ ಇದ್ದಾರೆಯೇ? ಏಕೆಂದರೆ ತಾವೆಲ್ಲರೂ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಕ್ಕಳಾಗಿದ್ದೀರಿ. ಇಡೀ ಕಲ್ಪದಲ್ಲಿ ಚಕ್ರ ಹಾಕಿ ನೋಡಿದರೆ ಎಲ್ಲರಿಗಿಂತ ಶ್ರೇಷ್ಠ ಪದವಿಯವರು ಬೇರೆ ಯಾರಾದರೂ ಕಾಣಿಸುತ್ತಾರೆಯೇ? ರಾಜ್ಯ ಅಧಿಕಾರಿ ಸ್ವರೂಪದಲ್ಲಿಯೂ ಸಹ ಬೇರೆ ಯಾರಾದರೂ ನಿಮಗಿಂತ ಶ್ರೇಷ್ಠ ರಾಜ ಅಧಿಕಾರಿಗಳು ಆಗಿದ್ದಾರೆಯೇ? ನಂತರ ಪೂಜೆ ಹಾಗೂ ಗಾಯನದಲ್ಲಿ ನೋಡಿ ಎಷ್ಟು ವಿಧಿಪೂರ್ವಕವಾಗಿ ನೀವು ಆತ್ಮಗಳ ಪೂಜೆಯಾಗುತ್ತದೆ ಅದಕ್ಕಿಂತ ಹೆಚ್ಚಾಗಿ ಬೇರೆ ಯಾರ ಪೂಜೆಯಾದರೂ ಆಗುತ್ತದೆಯೇ? ಎಷ್ಟು ಶ್ರೇಷ್ಠ ಡ್ರಾಮದ ಅದ್ಭುತ ರಹಸ್ಯ ವಾಗಿದೆ- ನೀವು ಸ್ವಯಂ ಚೈತನ್ಯ ಸ್ವರೂಪದಲ್ಲಿ ಈ ಸಮಯ ತಮ್ಮ ಪೂಜ್ಯ ಸ್ವರೂಪವನ್ನು, ಜ್ಞಾನದ ಮೂಲಕ ತಿಳಿದುಕೊಂಡಿದ್ದೀರಿ ಹಾಗೂ ನೋಡುತ್ತಾ ಇದ್ದೀರಿ. ಒಂದು ಕಡೆ ತಾವು ಚೈತನ್ಯ ಆತ್ಮಗಳಿರುವಿರಿ ಹಾಗೂ ಇನ್ನೊಂದು ಕಡೆ ನಿಮ್ಮ ಜಡ ಚಿತ್ರ ಪೂಜ್ಯ ರೂಪದಲ್ಲಿದೆ. ತಮ್ಮ ಪೂಜ್ಯ ಸ್ವರೂಪವನ್ನು ನೋಡುತ್ತಿರುವಿರಾ? ಜಡ ರೂಪದಲ್ಲಿಯೂ ಇದ್ದೀರಿ ಹಾಗೂ ಚೈತನ್ಯ ರೂಪದಲ್ಲಿಯೂ ಇದ್ದೀರಿ. ಎಂದ ಮೇಲೆ ಅದ್ಭುತವಾದ ಆಟ ಆಗಿದೆ ಅಲ್ಲವೇ! ಹಾಗೂ ರಾಜ್ಯದ ಲೆಕ್ಕದಲ್ಲಿಯೂ ಸಹ ಇಡೀ ಕಲ್ಪದಲ್ಲಿ ನಿರ್ವಿಘ್ನ, ಅಖಂಡ- ಅಟಲ ರಾಜ್ಯ ನೀವು ಆತ್ಮರದಷ್ಟೇ ನಡೆಯುತ್ತದೆ. ರಾಜರಂತು ಬಹಳಷ್ಟು ಜನರು ಆಗುತ್ತಾರೆ ಆದರೆ ನೀವು ವಿಶ್ವ ರಾಜನ್ ಅಥವಾ ವಿಶ್ವ ರಾಜನ ರಾಯಲ್ ಫ್ಯಾಮಿಲಿಯಲ್ಲಿ ಎಲ್ಲರಿಗಿಂತ ಶ್ರೇಷ್ಠರಾಗಿರುವಿರಿ. ಹಾಗಾದರೆ ರಾಜ್ಯದಲ್ಲಿಯೂ ಹೈಯೆಸ್ಟ್, ಪೂಜ್ಯ ರೂಪದಲ್ಲಿಯೂ ಹೈಯೆಸ್ಟ್ ಹಾಗೂ ಈಗ ಸಂಗಮದಲ್ಲಿಯೂ ಸಹ ಪರಮಾತ್ಮ ಆಸ್ತಿಯ ಅಧಿಕಾರಿ, ಪರಮಾತ್ಮ ಮಿಲನದ ಅಧಿಕಾರಿ ಪರಮಾತ್ಮನ ಪ್ರೀತಿಯ ಅಧಿಕಾರಿ ಪರಮಾತ್ಮನ ಪರಿವಾರದ ಆತ್ಮಗಳಾಗಿದ್ದೀರಿ, ಈ ರೀತಿ ಬೇರೆ ಯಾರಾದರೂ ಆಗುತ್ತಾರೆಯೇ? ನೀವೇ ಆಗಿದ್ದೀರಲ್ಲವೇ? ಆಗಿ ಹೋಗಿದ್ದಿರಾ ಅಥವಾ ಇನ್ನೂ ಆಗುತ್ತಿದ್ದೀರಾ? ಆಗಿ ಹೋಗಿದ್ದೀರಿ ಹಾಗೂ ಈಗಂತೂ ಆಸ್ತಿಯನ್ನು ತೆಗೆದುಕೊಂಡು ಸಂಪನ್ನರಾಗಿ ತಂದೆಯ ಜೊತೆ ಜೊತೆ ತನ್ನ ಮನೆಗೂ ಸಹ ಹೋಗುವವರಾಗಿದ್ದೀರಿ. ಸಂಗಮದ ಸುಖ, ಸಂಗಮ ಯುಗದ ಪ್ರಾಪ್ತಿಗಳು, ಸಂಗಮದ ಸಮಯ ಸುಂದರ ಎನಿಸುತ್ತದೆ ಅಲ್ಲವೇ! ತುಂಬಾ ಪ್ರಿಯ ಎನಿಸುತ್ತದೆ. ರಾಜ್ಯದ ಸಮಯಕ್ಕಿಂತ ಈ ಸಂಗಮದ ಸಮಯ ಪ್ರಿಯ ಎನಿಸುತ್ತದೆ ಅಲ್ಲವೇ? ಪ್ರೀತಿ ಇದೆಯೇ ಅಥವಾ ಬೇಗ ಹೋಗಲು ಬಯಸುತ್ತೀರಾ? ಹಾಗಾದರೆ ಏಕೆ ಕೇಳುತ್ತೀರಿ- ಬಾಬಾ ವಿನಾಶ ಯಾವಾಗ ಆಗುತ್ತದೆ? ಯೋಚಿಸುತ್ತಿರಿ ಅಲ್ಲವೇ- ಯಾವಾಗ ವಿನಾಶ ಆಗುತ್ತದೆಯೋ ಗೊತ್ತಿಲ್ಲ? ಏನಾಗುವುದು? ನಾವೆಲ್ಲಿ ಇರುತ್ತೇವೆ? ಬಾಪ್ದಾದಾರವರು ಹೇಳುತ್ತಾರೆ- ಎಲ್ಲಿಯೇ ಇದ್ದರೂ ನೆನಪಿನಲ್ಲಿ ಇರುವಿರಿ, ತಂದೆಯ ಜೊತೆ ಇರುವಿರಿ. ಸಾಕಾರದಲ್ಲಿ ಅಥವಾ ಆಕಾರದಲ್ಲಿ ಜೊತೆಯಲ್ಲಿದ್ದರೆ ಏನು ಆಗುವುದಿಲ್ಲ. ಸಾಕಾರದಲ್ಲಿ ಕಥೆಯನ್ನು ಕೇಳಿದಿರಲ್ಲವೇ. ಬೆಕ್ಕಿನ ಮರಿಗಳು ಬೆಂಕಿಯ ಮಧ್ಯದಲ್ಲಿ ಇದ್ದರೂ ಸಹ ಸುರಕ್ಷಿತವಾಗಿದ್ದರಲ್ಲವೇ? ಅಥವಾ ಸುಟ್ಟುಹೋದರಾ? ಎಲ್ಲರೂ ಸುರಕ್ಷಿತವಾಗಿದ್ದರು. ಎಂದ ಮೇಲೆ ನೀವು ಪರಮಾತ್ಮನ ಮಕ್ಕಳು ಯಾರು ಜೊತೆಯಲ್ಲಿ ಇರುತ್ತಾರೆ ಅವರು ಸುರಕ್ಷಿತವಾಗಿರುತ್ತಾರೆ. ಒಂದು ವೇಳೆ ಬೇರೆ ಎಲ್ಲಾದರೂ ಬುದ್ಧಿ ಹೋದರೆ ಯಾವುದಾದರೂ ಕಿಡಿ ಸಾಗುವುದು, ಏನಾದರೂ ಪ್ರಭಾವವಾಗುವುದು. ಜೊತೆಯಲ್ಲಿ ಕಂಬೈನ್ಡ್ ಆಗಿದ್ದರೆ, ಒಂದು ಸೆಕೆಂಡ್ ಸಹ ಒಬ್ಬಂಟಿಯಾಗಿ ಇಲ್ಲದೆ ಇದ್ದರೆ ಸುರಕ್ಷಿತವಾಗಿರುವಿರಿ. ಕೆಲವೊಮ್ಮೆ ಕೆಲಸ ಕಾರ್ಯದಲ್ಲಿ ಅಥವಾ ಸೇವೆಯಲ್ಲಿ ಒಬ್ಬಂಟಿ ಎಂದು ಅನುಭವ ಮಾಡುತ್ತೀರಾ? ಏನು ಮಾಡುವುದು ಒಬ್ಬರೇ ಇದ್ದೇವೆ, ಬಹಳ ಕೆಲಸವಿದೆ! ನಂತರ ದಣಿದು ಹೋಗುತ್ತೀರಿ. ಹಾಗಾದರೆ ಬಾಬಾರವರನ್ನು ಏಕೆ ಜೊತೆಗಾರರನ್ನಾಗಿ ಮಾಡಿಕೊಳ್ಳುವುದಿಲ್ಲ! ಎರಡು ಭುಜಗಳಿರುವವರನ್ನು ಜೊತೆಗಾರರನ್ನಾಗಿ ಮಾಡಿಕೊಳ್ಳುತ್ತೀರಿ, ಸಾವಿರ ಭುಜಗಳಿರುವವರನ್ನು ಏಕೆ ಜೊತೆಗಾರರನ್ನಾಗಿ ಮಾಡಿಕೊಳ್ಳುವುದಿಲ್ಲ. ಯಾರು ಬಹಳ ಸಹಯೋಗ ಕೊಡಲು ಸಾಧ್ಯ? ಸಾವಿರ ಭುಜದವರೇ ಅಥವಾ ಎರಡು ಭುಜದವರೇ?

ಸಂಗಮ ಯುಗದಲ್ಲಿ ಬ್ರಹ್ಮಾಕುಮಾರ ಅಥವಾ ಬ್ರಹ್ಮಾಕುಮಾರಿ ಒಬ್ಬಂಟಿಯಾಗಿ ಇರಲು ಸಾಧ್ಯವಿಲ್ಲ. ಕೇವಲ ಯಾವಾಗ ಸೇವೆಯಲ್ಲಿ, ಕರ್ಮ ಯೋಗದಲ್ಲಿ ಬಹಳ ವ್ಯಸ್ತರಾಗಿಬಿಡುತ್ತೀರಿ ಆಗ ಜೊತೆಯನ್ನು ಮರೆತು ಹೋಗುತ್ತೀರಿ ಹಾಗೂ ದಣಿದು ಹೋಗುತ್ತೀರಿ. ನಂತರ ಹೇಳುತ್ತೀರಿ ದಣಿದು ಹೋದೆವು, ಈಗ ಏನು ಮಾಡುವುದು! ದಣಿದಿಲ್ಲ ಯಾವಾಗ ಬಾಪ್ದಾದಾರವರು ನಿಮಗೆ ಸದಾ ಜೊತೆಯಾಗಿ ಇರಲು ಬಂದಿದ್ದಾರೆ, ಪರಮಧಾಮವನ್ನು ಬಿಟ್ಟು ಏಕೆ ಬಂದಿದ್ದಾರೆ? ಮಲಗುತ್ತಾ, ಏಳುತ್ತಾ, ಕರ್ಮ ಮಾಡುತ್ತಾ, ಸೇವೆ ಮಾಡುತ್ತಾ ಜೊತೆಯನ್ನು ಕೊಡುವುದಕ್ಕಾಗಿಯೇ ಬಂದಿದ್ದಾರೆ. ಬ್ರಹ್ಮಾ ತಂದೆಯು ಸಹ ನಿಮ್ಮೆಲ್ಲರಿಗೂ ಸಹಯೋಗವನ್ನು ಕೊಡುವುದಕ್ಕಾಗಿ ಅವ್ಯಕ್ತರಾಗಿದ್ದಾರೆ. ವ್ಯಕ್ತ ರೂಪಕ್ಕಿಂತ ಅವ್ಯಕ್ತ ರೂಪದಲ್ಲಿ ಸಹಯೋಗ ಕೊಡುವ ಗತಿ ತೀವ್ರವಾಗಿದೆ. ಆದ್ದರಿಂದ ಬ್ರಹ್ಮಾ ತಂದೆಯು ತನ್ನ ವತನವನ್ನು ಬದಲಾಯಿಸಿಕೊಂಡರು. ಹಾಗಾದರೆ ಶಿವ ತಂದೆ ಹಾಗೂ ಬ್ರಹ್ಮಾ ತಂದೆ ಇಬ್ಬರು ಪ್ರತಿ ಸಮಯ ನಿಮ್ಮೆಲ್ಲರ ಸಹಯೋಗ ಕೊಡುವುದಕ್ಕಾಗಿ ಸದಾ ಹಾಜರಾಗಿದ್ದಾರೆ. ನೀವು ಯೋಚಿಸಿ-`ಬಾಬಾ’ ಹಾಗೂ ಸಹಯೋಗವನ್ನು ಅನುಭವ ಮಾಡುವಿರಿ. ಒಂದು ವೇಳೆ ಸೇವೆ ಸೇವೆ ಕೇವಲ ಇದೇ ನೆನಪಿದ್ದರೆ ತಂದೆಯನ್ನು ಬದಿಯಲ್ಲಿ ಕುಳಿತುಕೊಂಡು ನೋಡುವುದಕ್ಕಾಗಿ ಬೇರೆ ಮಾಡಿಬಿಡುತ್ತೀರಿ, ತಂದೆಯು ಸಹ ಸಾಕ್ಷಿಯಾಗಿ ನೋಡುತ್ತಾರೆ, ನೋಡೋಣ ಎಲ್ಲಿಯವರೆಗೂ ಒಬ್ಬರೇ ಮಾಡುತ್ತಾರೆ ಎಂದು. ಆದರೂ ಇಲ್ಲಿಯೇ ಬರಬೇಕು. ಎಂದ ಮೇಲೆ ಜೊತೆಯನ್ನು ಬಿಡಬೇಡಿ. ತಮ್ಮ ಅಧಿಕಾರ ಹಾಗೂ ಪ್ರೇಮದ ಸೂಕ್ಷ್ಮ ಹಗ್ಗಗಳಿಂದ ಕಟ್ಟಿಕೊಂಡು ಇಟ್ಟುಕೊಳ್ಳಿ. ಸಡಿಲವಾಗಿ ಬಿಟ್ಟು ಬಿಡುತ್ತೀರಿ. ಸ್ನೇಹವನ್ನು ಸಡಿಲ ಮಾಡಿಬಿಡುತ್ತೀರಿ, ಅಧಿಕಾರವನ್ನು ಸ್ವಲ್ಪ ಸ್ಮೃತಿಯಿಂದ ಬದಿಗೆ ಸರಿಸಿ ಬಿಡುತ್ತಿರಿ. ಈ ರೀತಿ ಮಾಡಬೇಡಿ. ಯಾವಾಗ ಸರ್ವ ಶಕ್ತಿವಂತ ಜೊತೆಯಲ್ಲಿರುವ ಆಫರ್ ಮಾಡುತ್ತಿದ್ದಾರೆ ಎಂದ ಮೇಲೆ ಇಂತಹ ಆಫರ್ ಇಡೀ ಕಲ್ಪದಲ್ಲಿ ಸಿಗುತ್ತದೆಯೇ? ಸಿಗುವುದಿಲ್ಲ ಅಲ್ಲವೇ? ಎಂದ ಮೇಲೆ ಬಾಪ್ದಾದಾರವರು ಸಹ ಸಾಕ್ಷಿಯಾಗಿ ನೋಡುತ್ತಾರೆ, ನೋಡೋಣ ಎಲ್ಲಿಯವರೆಗೂ ಒಬ್ಬರೇ ಮಾಡುತ್ತಾರೆ ಎಂದು!

ಸಂಗಮ ಯುಗದ ಸುಖ ಹಾಗೂ ಉತ್ಸವಗಳನ್ನು ಇಮರ್ಜ್ ಮಾಡಿ ಇಟ್ಟುಕೊಳ್ಳಿ, ಬುದ್ಧಿ ವ್ಯಸ್ತವಾಗಿರುತ್ತದೆ ಅಲ್ಲವೇ ವ್ಯಸ್ತವಾಗಿರುವ ಕಾರಣ ಮರ್ಜ್ ಆಗಿ ಹೋಗುತ್ತದೆ. ನೀವು ಯೋಚಿಸಿ ಇಡೀ ದಿನದಲ್ಲಿ ಯಾರನ್ನಾದರೂ ಕೇಳಿ- ತಂದೆಯ ನೆನಪು ಇರುತ್ತದೆ ಅಥವಾ ತಂದೆಯ ನೆನಪು ಮರೆತು ಹೋಗುತ್ತದೆಯೇ? ಆಗ ಏನು ಹೇಳುತ್ತಾರೆ? ಇಲ್ಲ. ನೆನಪು ಇರುತ್ತದೆ ಆದರೆ ಇಮರ್ಜ್ ರೂಪದಲ್ಲಿ ಇರುತ್ತದೆಯೇ ರೂಪದಲ್ಲಿ ಇರುತ್ತದೆಯೇ? ಸ್ಥಿತಿ ಹೇಗಿರುತ್ತದೆ? ಇಮರ್ಜ್ ರೂಪದ ಸ್ಥಿತಿಯೇ ಅಥವಾ ಮರ್ಜ್ ರೂಪದ ಸ್ಥಿತಿಯೇ, ಇದರಲ್ಲಿ ಯಾವ ಅಂತರವಿದೆ? ಇಮರ್ಜ್ ರೂಪದಲ್ಲಿ ನೆನಪು ಏಕೆ ಇರುವುದಿಲ್ಲ? ಇಮರ್ಜ್ ರೂಪದ ನಶೆ ಶಕ್ತಿ, ಸಹಯೋಗ ಬಹಳ ದೊಡ್ಡದಾಗಿದೆ. ನೆನಪಂತೂ ಮರೆಯಲು ಸಾಧ್ಯವಿಲ್ಲ ಏಕೆಂದರೆ ಒಂದು ಜನ್ಮದ ಸಂಬಂಧವಲ್ಲ, ಬಲೆ ಶಿವ ತಂದೆ ಸತ್ಯಯುಗದಲ್ಲಿ ಜೊತೆಯಲ್ಲಿ ಇರುವುದಿಲ್ಲ ಆದರೆ ಇದೇ ಸಂಬಂಧವಿರುತ್ತದೆ ಅಲ್ಲವೇ! ಮರೆಯಲು ಸಾಧ್ಯವಿಲ್ಲ, ಇದು ಸರಿಯಾಗಿದೆ. ಹೌದು ಯಾವುದಾದರು ವಿಘ್ನದ ವಶ ಆಗಿ ಬಿಡುತ್ತೀರಿ ಎಂದರೆ ಮರೆತು ಹೋಗುತ್ತೀರಿ ಆದರೆ ಯಾವಾಗ ನ್ಯಾಚುರಲ್ ರೂಪದಲ್ಲಿ ಇರುತ್ತೀರಿ ಎಂದಾಗ ಮರೆಯುವುದಿಲ್ಲ ಆದರೆ ಮರ್ಜ್ ಆಗಿ ಇರುತ್ತದೆ ಆದ್ದರಿಂದ ಬಾಪ್ದಾದಾರವರು ಹೇಳುತ್ತಾರೆ- ಮತ್ತೆ ಮತ್ತೆ ಪರಿಶೀಲಿಸಿಕೊಳ್ಳಿ ಜೊತೆಯ ಅನುಭವ ಮರ್ಜ್ ರೂಪದಲ್ಲಿ ಇದೆಯೇ ಅಥವಾ ಇಮರ್ಜ್ ರೂಪದಲ್ಲಿ ಇದೆಯೇ? ಪ್ರೀತಿ ಅಂತೂ ಇದ್ದೇ ಇದೆ. ಪ್ರೀತಿ ಮುರಿಯಲು ಸಾಧ್ಯವೇ? ಮುರಿಯಲು ಸಾಧ್ಯವಿಲ್ಲ ಅಲ್ಲವೇ? ಯಾವಾಗ ಪ್ರೀತಿ ಮುರಿಯಲು ಸಾಧ್ಯವಿಲ್ಲ ಅಂದಮೇಲೆ ಪ್ರೀತಿಯ ಲಾಭವಂತು ಪಡೆದುಕೊಳ್ಳಿ. ಲಾಭವನ್ನು ಪಡೆದುಕೊಳ್ಳುವ ವಿಧಿಯನ್ನು ಕಲಿತುಕೊಳ್ಳಿ.

ಬಾಪ್ದಾದಾರವರು ನೋಡುತ್ತಾರೆ ಪ್ರೀತಿಯೇ ತಂದೆಯವರನ್ನಾಗಿ ಮಾಡಿತು. , ಪ್ರೀತಿಯೇ ಮಧುಬನ ನಿವಾಸಿಯನ್ನಾಗಿ ಮಾಡಿತು. ಬಲೆ ನಿಮ್ಮ ಸ್ಥಾನದಲ್ಲಿ ಹೇಗೆ ಇರಿ, ಎಷ್ಟೇ ಪರಿಶ್ರಮ ಪಡಿ ಆದರೂ ಸಹ ಮಧುಬನಕ್ಕೆ ತಲುಪಿ ಬಿಡುತ್ತೀರಿ. ಬಾಪ್ದಾದಾರವರು ತಿಳಿದಿದ್ದಾರೆ, ನೋಡುತ್ತಾರೆ, ಕೆಲವು ಮಕ್ಕಳಿಗೆ ಕಲಿಯುಗದ ಪರಿಸ್ಥಿತಿಗಳು ಇರುವ ಕಾರಣ ಟಿಕೆಟ್ ತೆಗೆದುಕೊಳ್ಳುವುದು ಸಹ ಪರಿಶ್ರಮವಾಗುತ್ತದೆ ಆದರೂ ಪ್ರೀತಿ ತಲುಪಿಸಿ ಬಿಡುತ್ತದೆ. ಈ ರೀತಿ ಇದೆ ಅಲ್ಲವೇ? ಪ್ರೀತಿಯಲ್ಲಿ ತಲುಪೆ ಬಿಡುತ್ತೀರಿ ಆದರೆ ಪರಿಸ್ಥಿತಿಗಳಂತೂ ದಿನ ಪ್ರತಿದಿನ ಹೆಚ್ಚಾಗುತ್ತಾ ಹೋಗುತ್ತದೆ. ಸತ್ಯ ಹೃದಯದ ಮೇಲೆ ಸಾಹೇಬ ಒಪ್ಪಿಕೊಳ್ಳುತ್ತಾರೆ. ಆದರೂ ಸ್ಥೂಲ ಸಹಯೋಗವು ಸಹ ಹೇಗಾದರೂ ಎಲ್ಲಾದರೂ ಸಿಕ್ಕಿಹೋಗುತ್ತದೆ. ಡಬಲ್ ಫಾರಿನರ್ಸ್ ಆಗಿರಲಿ, ಭಾರತ ವಾಸಿಗಳಾಗಿರಲಿ ಎಲ್ಲರಿಗೂ ಈ ತಂದೆಯ ಪ್ರೀತಿ ಪರಿಸ್ಥಿತಿಗಳ ಗೋಡೆಯನ್ನು ಪಾರು ಮಾಡಿಸಿ ಕರೆತರುತ್ತದೆ. ಈ ರೀತಿ ಇದೆ ಅಲ್ಲವೇ? ತಮ್ಮ ತಮ್ಮ ಸೇವಾ ಕೇಂದ್ರಗಳಲ್ಲಿ ನೋಡಿದರೆ ಇಂತಹ ಮಕ್ಕಳು ಇದ್ದಾರೆ ಯಾರು ಇಲ್ಲಿಂದ ಹೋಗುತ್ತಾರೆ ಎಂದರೆ, ಯೋಚಿಸುತ್ತಾರೆ- ಮುಂದಿನ ವರ್ಷ ಹೋಗಲು ಸಾಧ್ಯವಾಗುವುದೆ ಇಲ್ಲವೇ ಗೊತ್ತಿಲ್ಲ, ಆದರೂ ಸಹ ತಲುಪಿ ಬಿಡುತ್ತಾರೆ. ಇದಾಗಿದೆ ಪ್ರೀತಿಯ ಪ್ರಮಾಣ. ಒಳ್ಳೆಯದು .

ಇಂದು ಹೋಳಿಯನ್ನು ಆಚರಿಸಿದಿರಾ? ಹೋಳಿಯನ್ನು ಆಚರಿಸಿದಿರಾ? ಬಾಪ್ದಾದಾರವರಂತೂ ಹೋಳಿಯನ್ನು ಆಚರಿಸುವಂತಹ ಹೋಲಿ ಹಂಸರನ್ನು ನೋಡುತ್ತಿದ್ದಾರೆ. ಎಲ್ಲಾ ಮಕ್ಕಳಿಗೆ ಒಂದೇ ಟೈಟಲ್ ಆಗಿದೆ ಹೋಲಿಎಸ್ಟ್. ದ್ವಾಪರದಿಂದ ಹಿಡಿದು ಯಾವುದೇ ಧರ್ಮಾತ್ಮ ಅಥವಾ ಮಹಾತ್ಮ ಸರ್ವರನ್ನು ಸಹ ಹೋಲಿಯೆಸ್ಟನ್ನಾಗಿ ಮಾಡಿಲ್ಲ. ಸ್ವಯಂ ಆಗುತ್ತಾರೆ ಆದರೆ ತನ್ನ ಅನುಯಾಯಿಗಳನ್ನು, ಜೊತೆಗಾರರನ್ನು ಹೋಲಿಯಸ್ಟ್ ಪವಿತ್ರರನ್ನಾಗಿ ಮಾಡುವುದಿಲ್ಲ ಹಾಗೂ ಇಲ್ಲಿ ಪವಿತ್ರತೆ, ಬ್ರಾಹ್ಮಣ ಜೀವನದ ಮುಖ್ಯ ಅಧಿಕಾರ ವಾಗಿದೆ. ವಿದ್ಯೆಯೂ ಸಹ ಏನಾಗಿದೆ? ನಿಮ್ಮ ಸ್ಲೋಗನ್ ಆಗಿದೆ-" ಪವಿತ್ರರಾಗಿ- ಯೋಗಿ ಆಗಿ". ಸ್ಲೋಗನಾಗಿದೆ ಅಲ್ಲವೇ? ಪವಿತ್ರತೆಯೇ ಮಹಾನತೆಯಾಗಿದೆ. ಪವಿತ್ರತೆಯೇ ಯೋಗಿ ಜೀವನದ ಆಧಾರವಾಗಿದೆ. ಕೆಲವೊಮ್ಮೆ ಮಕ್ಕಳು ಅನುಭವ ಮಾಡುತ್ತಾರೆ- ಒಂದುವೇಳೆ ನಡೆಯುತ್ತಾ ನಡೆಯುತ್ತಾ ಮನಸದಲ್ಲೂ ಸಹ ಅಪವಿತ್ರತೆ ಅರ್ಥಾತ್ ವ್ಯರ್ಥ ಅಥವಾ ನಕಾರಾತ್ಮಕ, ಪರ ಚಿಂತನೆಯ ಸಂಕಲ್ಪ ನಡೆಯುತ್ತದೆ ಎಂದರೆ ಯೋಗ ಎಷ್ಟು ಶಕ್ತಿಶಾಲಿಯಾಗಿ ಬಯಸುತ್ತಾರೆ, ಆದರೆ ಆಗುವುದಿಲ್ಲ ಏಕೆಂದರೆ ಸ್ವಲ್ಪ ಅಂಶ ಮಾತ್ರವೂ ಸಂಕಲ್ಪದಲ್ಲಿಯೂ ಯಾವುದೇ ಪ್ರಕಾರದ ಅಪವಿತ್ರತೆ ಇದೆ ಎಂದರೆ ಎಲ್ಲಿ ಅಪವಿತ್ರತೆಯ ಅಂಶವಿದೆ ಅಲ್ಲಿ ಪವಿತ್ರ ತಂದೆಯ ನೆನಪು, ಹೇಗೆ ಇರಬೇಕಾಗಿದೆಯೋ ಹಾಗೆ ಇರುವುದಿಲ್ಲ. ಹೇಗೆ ರಾತ್ರಿ ಮತ್ತು ಹಗಲು ಒಟ್ಟಿಗೆ ಇರಲು ಸಾಧ್ಯವಿಲ್ಲ, ಆದ್ದರಿಂದ ವರ್ತಮಾನ ಸಮಯ ಬಾಪ್ದಾದಾರವರು ಪವಿತ್ರತೆಯ ಮೇಲೆ ಮತ್ತೆ ಮತ್ತೆ ಗಮನವನ್ನು ತರಿಸುತ್ತಿದ್ದಾರೆ. ಕೆಲವು ಸಮಯದ ಹಿಂದೆ ಬಾಪ್ದಾದಾರವರು ಕೇವಲ ಕರ್ಮದಲ್ಲಿ ಅಪವಿತ್ರತೆಗಾಗಿ ಸೂಚನೆಯನ್ನು ಕೊಡುತ್ತಿದ್ದರು ಆದರೆ ಈಗ ಸಮಯ ಸಂಪೂರ್ಣತೆಯ ಸಮೀಪ ಬರುತಿದೆ ಆದ್ದರಿಂದ ಮನಸ್ಸಿನಲ್ಲೂ ಸಹ ಅಪವಿತ್ರತೆಯ ಅಂಶ ಮೋಸ ಮಾಡುವುದು. ಎಂದ ಮೇಲೆ ಮನಸಾ, ವಾಚ, ಕರ್ಮಣ, ಸಂಬಂಧ ಸಂಪರ್ಕ ಸಂಬಂಧದಲ್ಲಿ ಪವಿತ್ರತೆ ಅತಿ ಅವಶ್ಯಕವಾಗಿದೆ. ಮನಸಾನಲ್ಲಿ ಪವಿತ್ರತೆಯನ್ನು ಹಗುರ ಮಾಡಬೇಡಿ ಏಕೆಂದರೆ ಮನಸ್ಸು ಹೊರಗಡೆ ಕಾಣಿಸುವುದಿಲ್ಲ ಆದರೆ ಮಾನಸ್ಸು ಬಹಳ ಮೋಸ ಮಾಡುತ್ತದೆ. ಬ್ರಾಹ್ಮಣ ಜೀವನದ ಯಾವ ಆಂತರಿಕ ಆಸ್ತಿ ಸದಾ ಸುಖ ಸ್ವರೂಪ, ಶಾಂತ ಸ್ವರೂಪ, ಮನಸ್ಸಿನ ಸಂತುಷ್ಟತೆ ಇದೆ, ಅದರ ಅನುಭವ ಮಾಡುವುದಕ್ಕಾಗಿ ಮನಸ್ಸಿನ ಪವಿತ್ರತೆ ಬೇಕಾಗಿದೆ. ಹೊರಗಿನ ಸಾಧನಗಳ ಮುಖಾಂತರ ಅಥವಾ ಸೇವೆಯ ಮುಖಾಂತರ ತಮ್ಮನ್ನು ತಾವು ಖುಷಿಯಾಗಿ ಇಡುವುದು- ಇದು ಸಹ ತಮ್ಮನ್ನು ತಾವು ಮೋಸ ಮಾಡಿಕೊಳ್ಳುವುದಾಗಿದೆ.

ಬಾಪ್ದಾದಾರವರು ನೋಡುತ್ತಾರೆ. ಕೆಲವೊಮ್ಮೆ ಮಕ್ಕಳು ಇದೆ ಆಧಾರಗಳ ಮೇಲೆ ತಮ್ಮನ್ನು ತಾವು ಚೆನ್ನಾಗಿದ್ದೇವೆ ಎಂದುಕೊಳ್ಳುತ್ತಾರೆ, ಖುಷಿಯಾಗಿದ್ದೇವೆ ಎಂದುಕೊಂಡು ಮೋಸ ಹೋಗುತ್ತಾರೆ, ಮೋಸ ಹೋಗುತ್ತಿದ್ದಾರೆ. ಮೋಸ ಹೋಗುತ್ತಾರೆ ಹಾಗೂ ಮೋಸ ಹೋಗುತ್ತಿದ್ದಾರೆ. ಇದು ಸಹ ಒಂದು ಗುಹ್ಯ ರಹಸ್ಯವಾಗಿದೆ. ಏನಾಗುತ್ತದೆ ಎಂದರೆ, ತಂದೆ ದಾತ ಆಗಿದ್ದಾರೆ, ದಾತನ ಮಕ್ಕಳು ಆಗಿದ್ದೀರಿ, ಸೇವೆ ಯುಕ್ತಿ ಯುಕ್ತವಾಗಿ ಇಲ್ಲದೆ ಇದ್ದರೂ ಕಲಬೆರಿಕೆ ಇದೆ, ಸ್ವಲ್ಪ ನೆನಪು ಹಾಗೂ ಸ್ವಲ್ಪ ಹೊರಗಿನ ಸಾಧನಗಳ ಖುಷಿಯ ಆಧಾರದ ಮೇಲೆ, ಹೃದಯದ ಆಧಾರದ ಮೇಲೆ ಅಲ್ಲ ಆದರೆ ಬುದ್ಧಿಯ ಆಧಾರದ ಮೇಲೆ ಸೇವೆ ಮಾಡುತ್ತೀರಿ ಎಂದರೆ ಸೇವೆಯ ಪ್ರತ್ಯಕ್ಷ ಫಲ ಅವರಿಗೂ ಸಹ ಸಿಗುತ್ತದೆ; ಏಕೆಂದರೆ ತಂದೆ ದಾತ ಆಗಿದ್ದಾರೆ ಹಾಗೂ ಅವರು ಅದರಲ್ಲಿಯೇ ಖುಷಿಯಾಗಿ ಬಿಡುತ್ತಾರೆ- ವಾಹ್! ನಮಗಂತೂ ಪ್ರತಿಫಲ ಸಿಕ್ಕಿಬಿಟ್ಟಿತ್ತು, ನಮ್ಮ ಸೇವೆ ಚೆನ್ನಾಗಿ ಆಯಿತು. ಆದರೆ ಆ ಮನಸ್ಸಿನ ಸಂತುಷ್ಟತೆ ಸದಾ ಕಾಲ ಇರುವುದಿಲ್ಲ ಶಕ್ತಿಶಾಲಿ ನೆನಪಿನ ಅನುಭವ ಮಾಡಲು ಸಾಧ್ಯವಿಲ್ಲ, ಇದರಲ್ಲಿ ವಂಚಿತವಾಗಿ ಉಳಿದುಕೊಂಡು ಬಿಡುತ್ತದೆ. ಬಾಕಿ ಏನು ಸಿಗುವುದಿಲ್ಲ, ಎಂದಲ್ಲ. ಏನಾದರೂ ಸ್ವಲ್ಪ ಸಿಗುತ್ತದೆ ಆದರೆ ಜಮಾ ಆಗುವುದಿಲ್ಲ. ಸಂಪಾದಿಸಿದರು, ತಿಂದರು ಹಾಗೂ ಖಾಲಿಯಾಯಿತು. ಆದ್ದರಿಂದ ಇದರ ಮೇಲು ಸಹ ಗಮನ ಹರಿಸಬೇಕು. ಸೇವೆ ಬಹಳ ಚೆನ್ನಾಗಿ ಮಾಡುತ್ತಿದ್ದೀರಿ, ಫಲವು ಸಹ ಚೆನ್ನಾಗಿ ಸಿಕ್ಕಿತು, ನಂತರ ತಿಂದು ಖಾಲಿ ಮಾಡಿಬಿಟ್ಟಿರಿ. ಜಮಾ ಆಯಿತೇ? ಒಳ್ಳೆಯ ಸೇವೆ ಮಾಡಿದಿರಿ. ಒಳ್ಳೆಯ ಫಲಿತಾಂಶ ಬಂದಿತು, ಆದರೆ ಆ ಸೇವೆಯ ಫಲ ಸಿಕ್ಕಿತು, ಆದರೆ ಜಮಾ ಆಗುವುದಿಲ್ಲ, ಆದ್ದರಿಂದ ಜಮಾ ಮಾಡಿಕೊಳ್ಳುವ ವಿಧಿಯಾಗಿದೆ- ಮನಸಾ ವಾಚ ಕರ್ಮಣ ಪವಿತ್ರತೆ. ತಳಪಾಯ ಪವಿತ್ರತೆಯಾಗಿದೆ. ಸೇವೆಯಲ್ಲಿಯೂ ಸಹ ತಳಪಾಯ ಪವಿತ್ರತೆಯದ್ದಾಗಿದೆ. ಸ್ವಚ್ಛವಾಗಿ ಇರಿ, ಶುದ್ಧವಾಗಿರಿ. ಮತ್ತು ಬೇರೆ ಯಾವುದೇ ಭಾವ ಮಿಕ್ಸ್ ಆಗದೇ ಇರಲಿ. ಭಾವದಲ್ಲು ಪವಿತ್ರತೆ, ಭಾವನೆಯನ್ನು ಪವಿತ್ರತೆ. , ಹೋಲಿಯ ಅರ್ಥವೇ ಆಗಿದೆ ಪವಿತ್ರತೆ. ಅಪವಿತ್ರತೆಯನ್ನು ಸುಟ್ಟು ಹಾಕಬೇಕು, ಆದ್ದರಿಂದ ಮೊದಲು ಸುಟ್ಟು ಹಾಕುತ್ತಾರೆ ನಂತರ ಆಚರಿಸುತ್ತಾರೆ ಹಾಗೂ ನಂತರ ಪವಿತ್ರರಾಗಿ ಸಂಸ್ಕಾರದ ಮಿಲನ ಮಾಡುತ್ತಾರೆ. ಎಂದ ಮೇಲೆ ಹೋಳಿಯ ಅರ್ಥವೇ ಆಗಿದೆ- ಸುಡುವುದು, ಆಚರಿಸುವುದು. ಹೊರಗಿನವರಂತೂ ಅಪ್ಪಿಕೊಳ್ಳುತ್ತಾರೆ ಆದರೆ ಇಲ್ಲಿ ಸಂಸ್ಕಾರ ಮಿಲನ, ಇದೆ ಮಂಗಲ ಮಿಲನವಾಗಿದೆ. ಹಾಗಾದರೆ ಇಂತಹ ಹೋಳಿಯನ್ನು ಆಚರಿಸಿದಿರಾ ಅಥವಾ ಕೇವಲ ಡಾನ್ಸ್ ಮಾಡಿದಿರಾ? ಗುಲಾಬಿ ಜಲವನ್ನು ಹಾಕಿಕೊಂಡಿರಾ? ಅದು ಕೂಡ ಒಳ್ಳೆಯದು, ಚೆನ್ನಾಗಿ ಆಚರಿಸಿ. ಬಾಪ್ದಾದಾರವರು ಖುಷಿಯಾಗುತ್ತಾರೆ ಭಲೇ ಗುಲಾಬಿ ಜಲವನ್ನು ಹಾಕಿ, ಭಲೇ ನೃತ್ಯ ಮಾಡಿ ಆದರೆ ಸದಾ ನೃತ್ಯ ಮಾಡಿ. ಕೇವಲ ಐದು ಹತ್ತು ನಿಮಿಷದ ನೃತ್ಯವಲ್ಲ. ಒಬ್ಬರು ಇನ್ನೊಬ್ಬರಲ್ಲಿ ಗುಣಗಳ ಪ್ರಕಂಪನಗಳನ್ನು ಹರಡಿಸುವುದು- ಇದು ಗುಲಾಬಿ ಜಲವನ್ನು ಹಾಕುವುದಾಗಿದೆ. ಹಾಗೂ ಸುಡುವುದನ್ನಂತೂ ನೀವು ತಿಳಿದುಕೊಂಡಿದ್ದೀರಿ, ಏನನ್ನು ಸುಡಬೇಕು! ಇನ್ನೂ ವರೆಗೂ ಸುಡುತ್ತಾ ಇರುತ್ತೀರಾ. ಪ್ರತಿ ವರ್ಷ ಕೈ ಎತ್ತಿ ಹೋಗುತ್ತೀರಿ, ದೃಢ ಸಂಕಲ್ಪ ಮಾಡಿಬಿಟ್ಟಿದ್ದೇವೆ ಎಂದು. ಬಾಪ್ದಾದಾರವರು ಖುಷಿಯಾಗುತ್ತಾರೆ, ಸಾಹಸವನ್ನಂತು ಇಟ್ಟುಕೊಳ್ಳುತ್ತಿರಿ. ಎಂದ ಮೇಲೆ ಸಾಹಸದವರ ಮೇಲೆ ಬಾಪ್ದಾದಾರವರು ಶುಭಾಶಯವನ್ನು ಸಹ ಕೊಡುತ್ತಾರೆ. ಸಾಹಸ ಇಡುವುದು ಸಹ ಮೊದಲ ಹೆಜ್ಜೆಯಾಗಿದೆ. ಆದರೆ ಬಾಪ್ದಾದಾರವರ ಶುಭ ಆಸೆ ಏನಾಗಿದೆ? ಸಮಯದ ದಿನಾಂಕವನ್ನು ನೋಡಬೇಡಿ. ಎರಡು ಸಾವಿರದಲ್ಲಿ ಆಗುವುದು, 2001ರಲ್ಲಿ ಆಗುವುದು, 2005ರಲ್ಲಿ ಆಗುವುದು, ಇದನ್ನು ಯೋಚಿಸಬೇಡಿ. ಹೋಗಲಿ ಎವೆರಡಿ ಆಗದೆ ಇದ್ದರೂ ಸರಿ, ಬಾಪ್ದಾದಾರವರು ಇದನ್ನು ಸಹ ಬಿಟ್ಟುಬಿಡುತ್ತಾರೆ ಆದರೆ ಬಹಳ ಕಾಲದ ಸಂಸ್ಕಾರವಂತೂ ಬೇಕಲ್ಲವೇ! ನೀವೇ ಹೇಳುತ್ತೀರಿ- ಬಹಳ ಕಾಲದ ಪುರುಷಾರ್ಥ ಬಹಳ ಕಾಲದ ರಾಜ್ಯ ಅಧಿಕಾರಿ ಯನ್ನಾಗಿ ಮಾಡಿಸುತ್ತದೆ. ಒಂದು ವೇಳೆ ಸಮಯ ಬಂದಾಗ ದೃಢಸಂಕಲ್ಪ ಮಾಡಿದಿರಿ ಎಂದರೆ ಅದು ಬಹುಕಾಲವಾಯಿತೆ ಅಥವಾ ಅಲ್ಪಕಾಲವಾಯಿತೆ? ಯಾವುದರಲ್ಲಿ ಎಣಿಸಲಾಗುವುದು? ಅಲ್ಪಕಾಲದಲ್ಲಿ ಬರುತ್ತದೆ ಅಲ್ಲವೇ! ಎಂದ ಮೇಲೆ ಅವಿನಾಶಿ ತಂದೆಯಿಂದ ಯಾವ ಆಸ್ತಿಯನ್ನು ಪಡೆದುಕೊಂಡಿರಿ? ಅಲ್ಪ ಕಾಲದ ಆಸ್ತಿ. ಇದು ಇಷ್ಟವಾಗುತ್ತದೆಯೇ? ಇಷ್ಟವಾಗುವುದಿಲ್ಲ ಅಲ್ಲವೇ! ಬಹುಕಾಲದ ಅಭ್ಯಾಸ ಬೇಕಾಗಿದೆ, ಎಷ್ಟು ಕಾಲವಿದೆ ಅದನ್ನು ಯೋಚಿಸಬೇಡಿ, ಎಷ್ಟು ಬಹುಕಾಲದ ಅಭ್ಯಾಸವಿರುತ್ತದೆ, ಅಷ್ಟು ಅಂತ್ಯದಲ್ಲಿಯೂ ಸಹ ಮೋಸ ಹೋಗುವುದಿಲ್ಲ. ಬಹಳ ಕಾಲದ ಅಭ್ಯಾಸವಿಲ್ಲದಿದ್ದರೆ ಈಗಿನ ಬಹುಕಾಲದ ಸುಖ, ಬಹುಕಾಲದ ಶ್ರೇಷ್ಠ ಸ್ಥಿತಿಯ ಅನುಭವದಿಂದಲೂ ಸಹ ವಂಚಿತರಾಗಿಬಿಡುತ್ತೀರಿ. ಆದ್ದರಿಂದ ಏನು ಮಾಡಬೇಕು? ಬಹುಕಾಲ ಮಾಡಬೇಕೆ? ಒಂದು ವೇಳೆ ಬುದ್ದಿಯಲ್ಲಿ ಯಾವುದೇ ದಿನಾಂಕದ ಪ್ರತಿಕ್ಷೆ ಇದ್ದರೆ, ಪ್ರತಿಕ್ಷೆ ಮಾಡಬೇಡಿ, ತಯಾರಿ ಮಾಡಿ. ಬಹಳ ಕಾಲದ ತಯಾರಿ ಮಾಡಿ. ದಿನಾಂಕವನ್ನು ಸಹ ನೀವೇ ತರಬೇಕು ಸಮಯವಂತು ಈಗಲೂ ಸಹ ಎವರ್ ರೆಡಿ( ಸದಾ ಸಿದ್ಧ) ಇದೆ. ನಾಳೆಯೂ ಸಹ ಆಗಬಹುದು, ಆದರೆ ಸಮಯ ನಿಮಗಾಗಿ ನಿಂತಿದೆ. ನೀವು ಸಂಪನ್ನರಾದರೆ ಅವಶ್ಯವಾಗಿ ಸಮಯದ ಪರದೆ ಸೆರೆಯಲೇಬೇಕು. ನೀವು ನಿಲ್ಲಿಸಿರುವುದರಿಂದ ಅದು ಸಹ ನಿಂತಿದೆ. ರಾಜ್ಯ ಅಧಿಕಾರಿಯಂತೂ ತಯಾರಾಗಿದ್ದೀರಲ್ಲವೇ? ಸಿಂಹಾಸನವೊಂದು ಕಾಲಿ ಉಳಿಯಬಾರದಲ್ಲವೇ! ಒಬ್ಬರೇ ವಿಶ್ವರಾಜ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆ! ಇದರಲ್ಲಿ ಶೋಭೆ ಇರುತ್ತದೆಯೇ? ರಾಯಲ್ ಪರಿವಾರ ಬೇಕು, ಪ್ರಜೆಗಳು ಬೇಕು, ಎಲ್ಲರೂ ಬೇಕು ಕೇವಲ ವಿಶ್ವ ಮಹಾರಾಜ ಸಿಂಹಾಸನದ ಮೇಲೆ ಕುಳಿತುಕೊಂಡು, ನನ್ನ ರಾಯಲ್ ಫ್ಯಾಮಿಲಿ ಎಲ್ಲಿ ಹೋಯಿತು ಎಂದು ನೋಡುತ್ತಾ ಕುಳಿತುಕೊಳ್ಳಬೇಕೆ, ಆದ್ದರಿಂದ ಬಾಪ್ದಾದಾರವರ ಒಂದೇ ಶುಭ ಆಸೆಯಾಗಿದೆ- ಎಲ್ಲಾ ಮಕ್ಕಳು ಹೊಸಬರಾಗಿರಲಿ, ಹಳೆಯವರಾಗಿರಲಿ, ಯಾರೆಲ್ಲ ತಮ್ಮನ್ನು ಬ್ರಹ್ಮಾಕುಮಾರ ಬ್ರಹ್ಮಾಕುಮಾರಿ ಎಂದು ಕರೆಸಿಕೊಳ್ಳುತ್ತಾರೆ, ಮಧುಬನ ನಿವಾಸಿಯಾಗಿರಲಿ, ವಿದೇಶ ನಿವಾಸಿ ಯಾಗಿರಲಿ, ಭಾರತ ನಿವಾಸಿಯಾಗಿರಲಿ- ಪ್ರತಿಯೊಬ್ಬ ಮಗು ಬಹಳ ಕಾಲದ ಅಭ್ಯಾಸ ಮಾಡಿ ಬಹಳ ಕಾಲದ ಅಧಿಕಾರಿ ಆಗಬೇಕು. ಇಷ್ಟವಿದೆಯೇ? ಒಂದು ಕೈಯಿಂದ ಚಪ್ಪಾಳೆ ಹೊಡೆಯಿರಿ, ಹಿಂದೆ ಕುಳಿತುಕೊಂಡಿರುವವರು ಬುದ್ಧಿವಂತರಾಗಿದ್ದಾರೆ, ಗಮನವಿಟ್ಟು, ಬಾಪ್ದಾದಾರವರು ಹಿಂದೆ ಕುಳಿತವರನ್ನು ತಮ್ಮ ಸಮ್ಮುಖದಲ್ಲಿ ನೋಡುತ್ತಿದ್ದಾರೆ. ಮುಂದೆ ಕುಳಿತವರಂತೂ ಸಮ್ಮುಖದಲ್ಲೇ ಇದ್ದಾರೆ. (ಮೆಡಿಟೇಶನ್ ಹಾಲಿನಲ್ಲಿ ಕುಳಿತುಕೊಂಡು ಮುರುಳಿ ಕೇಳುತಿದ್ದಾರೆ) ಕೆಳಗೆ ಕುಳಿತಿರುವವರು ಬಾಪ್ದಾದಾರವರ ಶಿರದ ಕಿರೀಟವಾಗಿ ಕುಳಿತಿದ್ದಾರೆ. ಅವರು ಸಹ ಚಪ್ಪಾಳೆ ಹೊಡೆಯುತ್ತಿದ್ದಾರೆ. ಕೆಳಗೆ ಕುಳಿತಿರುವವರಿಗೆ ತ್ಯಾಗದ ಭಾಗ್ಯವಂತು ಸಿಗಲೇಬೇಕು. ನಿಮಗೆ ಸಮ್ಮುಖದಲ್ಲಿ ಕುಳಿತುಕೊಳ್ಳುವ ಭಾಗ್ಯವಿದೆ ಹಾಗೂ ಅವರಿಗೆ ತ್ಯಾಗದ ಭಾಗ್ಯ ಜಮಾ ಆಗುತ್ತಿದೆ. ಒಳ್ಳೆಯದು ಬಾಪ್ದಾದಾರವರು ಒಂದು ಆಸೆಯನ್ನು ಕೇಳಿಸಿಕೊಂಡಿರಿ! ಇಷ್ಟವಿದೆ ಅಲ್ಲವೇ! ಈಗ ಮುಂದಿನ ವರ್ಷ ಏನನ್ನು ನೋಡುವಿರಿ? ಇದೇ ರೀತಿ ಮತ್ತೆ ಕೈ ಎತ್ತುತ್ತಿರಿ! ಕೈಯನ್ನು ಬಲೆ ಎತ್ತಿರಿ, ಎರಡು ಕೈಯನ್ನು ಎತ್ತಿರಿ. ಆದರೆ ಮನಸ್ಸಿನ ಕೈಯನ್ನು ಸಹ ಎತ್ತಿರಿ. ದೃಢ ಸಂಕಲ್ಪದ ಕೈಯನ್ನು ಸದಾ ಕಾಲಕ್ಕಾಗಿ ಎತ್ತಿರಿ.

ಬಾಪ್ದಾದಾರವರು ಒಂದೊಂದು ಮಗುವಿನ ಮಸ್ತಕದಲ್ಲಿ ಸಂಪೂರ್ಣ ಪವಿತ್ರತೆಯ ಹೊಳೆಯುತ್ತಿರುವ ಮಣಿಯನ್ನು ನೋಡಲು ಬಯಸುತ್ತಾರೆ. ನಯನಗಳಲ್ಲಿ ಪವಿತ್ರತೆಯ ಹೊಳಪು, ಪವಿತ್ರತೆಯ ಎರಡು ನಯನಗಳ ನಕ್ಷತ್ರಗಳು, ಆತ್ಮಿಕತೆಯಿಂದ ಹೊಳೆಯುತ್ತಿರುವುದನ್ನು ನೋಡಲು ಬಯಸುತ್ತಾರೆ. ಮಾತಿನಲ್ಲಿ ಮಧುರತೆ, ವಿಶೇಷತೆ, ಅಮೂಲ್ಯ ಮಾತುಗಳನ್ನು ಕೇಳಲು ಬಯಸುತ್ತಾರೆ . ಕರ್ಮದಲ್ಲಿ ಸಂತುಷ್ಟತೆ, ನಿರ್ಮಾಣತೆ ಸದಾ ನೋಡಲು ಬಯಸುತ್ತಾರೆ. ಭಾವನೆಯಲ್ಲಿ ಸದಾ ಶುಭ ಭಾವನೆ ಹಾಗೂ ಭಾವದಲ್ಲಿ ಸದಾ ಆತ್ಮಿಕ ಭಾವ, ಸಹೋದರ ಸಹೋದರನ ಭಾವ. ಸದಾ ನಿಮ್ಮ ಮಸ್ತಕದಿಂದ ಪ್ರಕಾಶದ, ಫರಿಶ್ತಾತನದ ಕಿರೀಟ ಕಾಣಿಸಲಿ. ಕಾಣಿಸುವ ಅರ್ಥವಾಗಿದೆ ಅನುಭವವಾಗಲಿ. ಈ ರೀತಿ ಶೃಂಗರಿತ ಮೂರ್ತಿಯನ್ನು ನೋಡಲು ಬಯಸುತ್ತಾರೆ. ಇಂತಹ ಮೂರ್ತಿಯೇ ಶ್ರೇಷ್ಠ ಪೂಜನೀಯರಾಗುವರು. ಅವರಂತೂ ನಿಮ್ಮ ಜಡ ಚಿತ್ರವನ್ನು ಮಾಡುತ್ತಾರೆ ಆದರೆ ತಂದೆ ಚೈತನ್ಯ ಚಿತ್ರವನ್ನು ನೋಡಲು ಬಯಸುತ್ತಾರೆ. ಒಳ್ಳೆಯದು.

ನಾಲ್ಕಾರು ಕಡೆಯ ಸದಾ ಬಾಪ್ದಾದಾರವರ ಜೊತೆ ಇರುವಂತಹ. ಸಮೀಪದ ಸದಾ ಜೊತೆಗಾರ, ಸದಾ ಬಹುಕಾಲದ ಪುರುಷಾರ್ಥದ ಮೂಲಕ ಬಹುಕಾಲದ ಸಂಗಮ ಯುಗಿ ಅಧಿಕಾರ ಹಾಗೂ ಭವಿಷ್ಯ ರಾಜ್ಯ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಅತೀ ಬುದ್ಧಿವಂತ ಆತ್ಮಗಳಿಗೆ, ಸದಾ ತಮ್ಮನ್ನು ಶಕ್ತಿಗಳು, ಗುಣಗಳಿಂದ ಶೃಂಗರಿತರನ್ನಾಗಿ ಇಟ್ಟುಕೊಳ್ಳುವ, ತಂದೆಯ ಆಸೆಗಳ ದೀಪಕ ಆತ್ಮಗಳಿಗೆ, ಸದಾ ಸ್ವಯಂ ಅನ್ನು ಹೋಲಿಯಸ್ಟ್ ಹಾಗೂ ಹೈಯೆಸ್ಟ್ ಸ್ಥಿತಿಯಲ್ಲಿ ಸ್ಥಿತ ಮಾಡುವಂತಹ ತಂದೆಯ ಸಮಾನ ಅತಿ ಸ್ನೇಹಿ ಆತ್ಮರಿಗೆ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಸರ್ವ ವಿದೇಶ ಹಾಗೂ ದೇಶದಲ್ಲಿ ದೂರ ಕುಳಿತುಕೊಂಡರು ಸಹ ಸಮ್ಮುಖದಲ್ಲಿ ಅನುಭವ ಮಾಡುವಂತಹವರಿಗೆ ಬಾಪ್ದಾದಾರವರ ಬಹಳ ಬಹಳ ಬಹಳ ನೆನಪು ಪ್ರೀತಿ.

ವರದಾನ:
ವರದಾನ: ಸಮಯವನ್ನು ಶಿಕ್ಷಕನನ್ನಾಗಿ ಮಾಡುವ ಬದಲು ತಂದೆಯನ್ನು ಶಿಕ್ಷಕನನ್ನಾಗಿ ಮಾಡಿಕೊಳ್ಳುವಂತಹ ಮಾಸ್ಟರ್ ರಚೈತ ಭವ

ಎಷ್ಟೋ ಮಕ್ಕಳಿಗೆ ಸೇವೆಯಲ್ಲಿ ಉಮಂಗವಿದೆ ಆದರೆ ವೈರಾಗ್ಯ ವೃತ್ತಿಯ ಮೇಲೆ ಗಮನಯಿಲ್ಲ, ಇದರಲ್ಲಿ ಹುಡುಗಾಟಿಕೆಯಿದೆ. ನಡೆಯುತ್ತೆ...., ಆಗುತ್ತೆ....., ಆಗಿಬಿಡುತ್ತೆ....., ಸಮಯ ಬಂದಾಗ ಸರಿಯಾಗಿಬಿಡುತ್ತೆ..... ಈ ರಿತಿ ಯೋಚನೆ ಮಾಡುವುದು ಅರ್ಥಾತ್ ಸಮಯವನ್ನು ತಮ್ಮ ಶಿಕ್ಷಕನನ್ನಾಗಿ ಮಾಡಿಕೊಳ್ಳುವುದು. ಮಕ್ಕಳು ತಂದೆಗೆ ಸಹ ಆಶ್ವಾಸನೆ ಕೊಡುತ್ತಾರೆ-ಚಿಂತೆಮಾಡಬೇಡಿ, ಸಮಯ ಬಂದಾಗ ಸರಿಯಾಗಿಬಿಡುವುದು, ಮಾಡೋಣ. ಮುಂದುವರೆದು ಬಿಡುತ್ತೇನೆ. ಆದರೆ ನೀವು ಮಾಸ್ಟರ್ ರಚೈತ ಆಗಿರುವಿರಿ, ಸಮಯ ನಿಮ್ಮ ರಚನೆಯಾಗಿದೆ ರಚನೆ ಮಾಸ್ಟರ್ ರಚೈತನ ಶಿಕ್ಷಕ ಆಗುವುದು ಎಂದರೆ ಇದು ಶೋಭಿಸುವುದಿಲ್ಲ.

ಸ್ಲೋಗನ್:
ತಂದೆಯ ಪಾಲನೆಯ ರಿಟರ್ನ್ ಆಗಿದೆ- ಸ್ವಯಂಗೆ ಮತ್ತು ಸರ್ವರನ್ನು ಪರಿವರ್ತನೆ ಮಾಡುವಲ್ಲಿ ಸಹಯೋಗಿಯಾಗುವುದು.