08.04.24         Morning Kannada Murli       Om Shanti           BapDada Madhuban


"ಮಧರ ಮಕ್ಕಳೇ - ಈ ಕಣ್ಣುಗಳಿಂದ ಏನೆಲ್ಲವನ್ನು ನೋಡುತ್ತೀರೋ ಅದೆಲ್ಲವು ಸಮಾಪ್ತಿಯಾಗಲಿದೆ ಆದ್ದರಿಂದ ಇದರೊಂದಿಗೆ ಬೇಹದ್ದಿನ ವೈರಾಗ್ಯವಿರಲಿ, ತಂದೆಯು ನಿಮಗಾಗಿ ಹೊಸ ಪ್ರಪಂಚವನ್ನು ಸ್ಥಾಪಿಸುತ್ತಿದ್ದಾರೆ"

ಪ್ರಶ್ನೆ:
ನೀವು ಮಕ್ಕಳ ಶಾಂತಿಯಲ್ಲಿ ಯಾವ ರಹಸ್ಯವು ಸಮಾವೇಶವಾಗಿದೆ?

ಉತ್ತರ:
ಯಾವಾಗ ನೀವು ಶಾಂತಿಯಲ್ಲಿ ಕುಳಿತುಕೊಳ್ಳುತ್ತೀರೋ ಆಗ ಶಾಂತಿಧಾಮವನ್ನು ನೆನಪು ಮಾಡುತ್ತೀರಿ- ನಿಮಗೆ ತಿಳಿದಿದೆ, ಶಾಂತಿ ಎಂದರೆ ಜೀವಿಸಿದ್ದಂತೆ ಸಾಯುವುದು. ಇಲ್ಲಿ ತಂದೆಯು ನಿಮಗೆ ಸದ್ಗುರುವಿನ ರೂಪದಲ್ಲಿ ಶಾಂತಿಯಲ್ಲಿರುವುದನ್ನು ಕಲಿಸುತ್ತಾರೆ. ನೀವು ಶಾಂತಿಯಲ್ಲಿದ್ದು ತಮ್ಮ ವಿಕರ್ಮಗಳನ್ನು ಭಸ್ಮಮಾಡಿಕೊಳ್ಳುತ್ತೀರಿ. ನಿಮಗೆ ಜ್ಞಾನವಿದೆ -ಈಗ ಮನೆಗೆ ಹೋಗಬೇಕಾಗಿದೆ, ಅನ್ಯಸತ್ಸಂಗಗಳಲ್ಲಿ ಶಾಂತಿಯಲ್ಲಿ ಕುಳಿತುಕೊಳ್ಳುತ್ತಾರೆ ಆದರೆ ಅವರಿಗೆ ಶಾಂತಿಧಾಮದ ಜ್ಞಾನವಿಲ್ಲ.

ಓಂ ಶಾಂತಿ.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಆತ್ಮಿಕ ಮಕ್ಕಳ ಪ್ರತಿ ಶಿವತಂದೆ ತಿಳಿಸುತ್ತಾರೆ. ಗೀತೆಯಲ್ಲಿ ಕೃಷ್ಣನು ತಿಳಿಸಿದನೆಂದು ಇದೆ ಆದರೆ ತಿಳಿಸಿದ್ದು ಶಿವತಂದೆ. ಕೃಷ್ಣನಿಗೆ ತಂದೆಯೆಂದು ಹೇಳಲು ಸಾಧ್ಯವಿಲ್ಲ. ಭಾರತವಾಸಿಗಳಿಗೆ ತಿಳಿದಿದೆ ತಂದೆಯರು ಇಬ್ಬರಿರುತ್ತಾರೆ ಲೌಕಿಕ ಮತ್ತು ಪಾರಲೌಕಿಕ. ಪಾರಲೌಕಿಕ ತಂದೆಗೆ ಪರಮಪಿತನೆಂದು ಹೇಳಲಾಗುತ್ತದೆ, ಲೌಕಿಕ ತಂದೆಗೆ ಪರಮಪಿತ ಎಂದು ಹೇಳಲಾಗುವುದಿಲ್ಲ. ನಿಮಗೆ ಲೌಕಿಕ ತಂದೆ ತಿಳಿಸುತ್ತಿಲ್ಲ ಪಾರಲೌಕಿಕ ತಂದೆಯು ಪಾರಲೌಕಿಕ ಮಕ್ಕಳಿಗೆ ತಿಳಿಸುತ್ತಾರೆ. ಮೊದಲು ನೀವು ಶಾಂತಿಧಾಮಕ್ಕೆ ಹೋಗುತ್ತೀರಿ, ಅದನ್ನು ಮುಕ್ತಿಧಾಮ, ನಿರ್ವಾಣಧಾಮ ಅಥವಾ ವಾನಪ್ರಸ್ಥವೆಂದು ಹೇಳುತ್ತೀರಿ. ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಈಗ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ಕೇವಲ ಅದನ್ನೇ ಶಾಂತಿಯ ಶಿಖರವೆಂದು ಹೇಳಲಾಗುತ್ತದೆ. ಇಲ್ಲಿ ಕುಳಿತ್ತಿದ್ದರು ಮೊದಲು ಶಾಂತಿಯಲ್ಲಿ ಕುಳಿತುಕೊಳ್ಳಬೇಕು. ಯಾವುದೇ ಸತ್ಸಂಗದಲ್ಲಿ ಮೊದಲು ಶಾಂತಿಯಲ್ಲಿ ಕುಳಿತುಕೊಳ್ಳುತ್ತಾರೆ ಅಂದರೆ ಅವರಿಗೆ ಶಾಂತಿಧಾಮದ ಜ್ಞಾನವಿಲ್ಲ. ಮಕ್ಕಳಿಗೆ ಗೊತ್ತಿದೆ- ನಾವು ಆತ್ಮಗಳು ಈ ಹಳೆಯ ಶರೀರವನ್ನು ಬಿಟ್ಟು ಮನೆಗೆ ಹೋಗಬೇಕಾಗಿದೆ. ಯಾವುದೇ ಸಮಯದಲ್ಲಿ ಶರೀರವನ್ನು ಬಿಡಬಹುದು ಆದ್ದರಿಂದ ಈಗ ತಂದೆಯು ಏನನ್ನೂ ಓದಿಸುತ್ತಾರೆಯೋ ಅದನ್ನು ಚೆನ್ನಾಗಿ ಓದಬೇಕು.ಅವರು ಸುಪ್ರೀಂ ಶಿಕ್ಷಕನಾಗಿದ್ದಾರೆ, ಸದ್ಗತಿದಾತ ಗುರು ಆಗಿದ್ದಾರೆ. ಅವರೊಂದಿಗೆ ಯೋಗವನ್ನಿಡಬೇಕಾಗಿದೆ. ಇವರೊಬ್ಬರೇ ಮೂರು ಸೇವೆಯನ್ನು ಮಾಡುತ್ತಾರೆ, ಈ ರೀತಿ ಯಾರೂ ಸಹ ಮೂರು ಸೇವೆಯನ್ನು ಮಾಡಲು ಸಾಧ್ಯವಿಲ್ಲ. ಈ ಒಬ್ಬ ತಂದೆಯು ಶಾಂತಿಯನ್ನು ಕಲಿಸುತ್ತಾರೆ, ಜೀವಿಸಿದ್ದಂತೆಯೇ ಸಾಯುವುದನ್ನು ಶಾಂತಿ ಅಥವಾ ಸೈಲೆನ್ಸ್ ಎಂದು ಹೇಳಲಾಗುತ್ತದೆ. ನಿಮಗೆ ಗೊತ್ತಿದೆ - ನಾವೀಗ ಶಾಂತಿಧಾಮ ಮನೆಗೆ ಹೋಗಬೇಕಾಗಿದೆ. ಎಲ್ಲಿಯವರೆಗೆ ಪವಿತ್ರ ಆತ್ಮಗಳು ಆಗುವುದಿಲ್ಲವೋ ಅಲ್ಲಿಯವರೆಗೆ ಯಾರು ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಎಲ್ಲರು ಹೋಗಬೇಕು ಆದ್ದರಿಂದ ಅಂತ್ಯದಲ್ಲಿ ಪಾಪಕರ್ಮಗಳಿಗೆ ಶಿಕ್ಷೆಗಳು ಸಿಗುತ್ತದೆ. ಮತ್ತೆ ಪದವಿಯು ಭ್ರಷ್ಟವಾಗಿಬಿಡುತ್ತದೆ. ಪೆಟ್ಟನ್ನು ತಿಂದಮೇಲೆ ಅಲ್ಪಸ್ವಲ್ಪ ರೊಟ್ಟಿಯನ್ನು ತಿನ್ನಬೇಕಾಗಿದೆ. ಏಕೆಂದರೆ ಮಾ0iÉುಗೆ ಸೋಲುತ್ತಾರೆ. ತಂದೆಯು ಬರುವುದೇ ಮಾಯೆಯ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಸಲು ಆದರೆ ಹುಡುಗಾಟಿಕೆಯಿಂದ ತಂದೆಯನ್ನು ನೆನಪು ಮಾಡುವುದಿಲ್ಲ. ಇಲ್ಲಂತೂ ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಭಕ್ತಿಮಾರ್ಗದಲ್ಲಿಯೂ ಸಹ ಬಹಳ ಅಲೆಯುತ್ತಾರೆ. ಯಾರಿಗೆ ತಲೆಬಾಗಿಸುತ್ತಾರೆಯೋ ಅವರನ್ನೇ ಅರಿತುಕೊಂಡಿಲ್ಲ. ತಂದೆಯು ಬಂದು ಅಲೆದಾಡುವುದರಿಂದ ಬಿಡಿಸುತ್ತಾರೆ. ಜ್ಞಾನದಿಂದ ದಿನ ಅರ್ಥಾತ್ ಸತ್ಯಯುಗ, ತ್ರೇತಾ, ಭಕ್ತಿ ಎಂದರೆ ರಾತ್ರಿ ದ್ವಾಪರ-ಕಲಿಯುಗ. ಇದು ಇಡೀ ನಾಟಕದ ಅವಧಿಯಾಗಿದೆ- ಅರ್ಧ ಸಮಯ ದಿನ, ಅರ್ಧ ಸಮಯ ರಾತ್ರಿ. ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರ ದಿನ ಮತ್ತು ರಾತ್ರಿಯಾಗಿದೆ. ಇದು ಬೇಹದ್ದಿನ ಮಾತಾಗಿದೆ. ಬೇಹದ್ದಿನ ತಂದೆಯು ಸಂಗಮದಲ್ಲಿ ಬರುತ್ತಾರೆ ಆದ್ದರಿಂದ ಶಿವರಾತ್ರಿ0iÉುಂದು ಹೇಳಲಾಗುತ್ತದೆ. ಯಾವುದಕ್ಕೆ ಶಿವರಾತ್ರಿ ಎಂದು ಹೇಳಲಾಗುತ್ತದೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ನಿಮ್ಮ ವಿನಃ ಯಾರೊಬ್ಬರು ಸಹ ಶಿವರಾತ್ರಿಯ ಮಹಿಮೆಯನ್ನು ಅರಿತುಕೊಂಡಿಲ್ಲ ಏಕೆಂದರೆ ಇದು ನಡುವಿನ ಸಮಯವಾಗಿದೆ. ರಾತ್ರಿಯೂ ಮುಕ್ತಾಯವಾಗಿ ದಿನ ಪ್ರಾರಂಭವಾಗುತ್ತದೆ. ಇದಕ್ಕೆ ಪುರುಷೋತ್ತಮ ಸಂಗಮಯುಗ ಎಂದು ಹೇಳಾಲಾಗುತ್ತದೆ. ಇದು ಹಳೆಯ ಪ್ರಪಂಚ ಮತ್ತು ಹೊಸ ಪ್ರಪಂಚದ ನಡುವಿನ ಸಮಯವಾಗಿದೆ. ತಂದೆಯು ಪುರುಷೋತ್ತಮ ಸಂಗಮ ಯುಗ-ಯುಗ ಬರುತ್ತಾರೆ ಯುಗ-ಯುಗದಲ್ಲಿ ಬರುವುದಿಲ್ಲ. ಸತ್ಯಯುಗ-ತ್ರೇತಾದ ಸಂಗಮವನ್ನು ಸಹ ಸಂಗಮಯುಗವೆಂದು ಹೇಳಿಬಿಡುತ್ತಾರೆ ಆದರೆ ಇದು ತಪ್ಪಾಗಿದೆ ಎಂದು ತಂದೆಯು ಹೇಳುತ್ತಾರೆ.

ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ಪಾಪಗಳು ವಿನಾಶವಾಗುತ್ತದೆ ಇದಕ್ಕೆ ಯೋಗ ಅಗ್ನಿಯೆಂದು ಹೇಳಲಾಗುತ್ತದೆ. ತಾವೆಲ್ಲರೂ ಬ್ರಾಹ್ಮಣರಾಗಿದ್ದೀರಿ ಪವಿತ್ರರಾಗಲು ಯೋಗವನ್ನು ಕಲಿಸುತ್ತೀರಿ. ಆ ಬ್ರಾಹ್ಮಣರು ಕಾಮಚಿತೆಯಮೇಲೆ ಏರಿಸುತ್ತಾರೆ. ಆ ಬ್ರಾಹ್ಮಣರು ಮತ್ತು ತಾವು ಬ್ರಾಹ್ಮಣರಲ್ಲಿ ರಾತ್ರಿ-ಹಗಲಿನ ವ್ಯತ್ಯಾಸವಿದೆ. ಅವರು ಕುಖವಂಶಾವಳಿ, ನೀವು ಮುಖವಂಶಾವಳಿಯಾಗಿದ್ದೀರಿ. ಪ್ರತಿಯೊಂದು ಮಾತು ಬಹಳ ಚೆನ್ನಾಗಿ ತಿಳಿದುಕೊಳ್ಳುವಂತಹವರಾಗಿದ್ದೀರಿ. ಹಾಗೇ ನೋಡಿದರೆ ಯಾರೆ ಬರಲಿ ಅವರಿಗೆ ತಿಳಿಸಲಾಗುತ್ತದೆ- ಬೇಹದ್ದಿನ ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಬೇಹದ್ದಿನ ತಂದೆಯ ಆಸ್ತಿಯೂ ಸಿಗುತ್ತದೆ. ಮತ್ತೆ ಎಷ್ಟೆಷ್ಟು ದೈವೀಗುಣಗಳನ್ನು ಧಾರಣೆ ಮಾಡುತ್ತೀರೋ ಮತ್ತು ಮಾಡಿಸುತ್ತೀರೋ ಅಷ್ಟು ಶ್ರೇಷ್ಟ ಪದವಿಯನ್ನು ಪಡೆಯುತ್ತೀರಿ. ತಂದೆಯು ಬರುವುದೆ ಪತಿತರನ್ನು ಪಾವನಮಾಡಲು. ಅಂದಮೇಲೆ ನೀವೂ ಸಹ ಈ ಸೇವೆ ಮಾಡಬೇಕಾಗಿದೆ ಎಲ್ಲರು ಪತಿತರಾಗಿದ್ದಾರೆ. ಗುರುಗಳು ಯಾರನ್ನೂ ಪಾವನ ಮಾಡಲು ಸಾಧ್ಯವಿಲ್ಲ. ಪತಿತ-ಪಾವನರೆಂಬ ಹೆಸರು ಶಿವತಂದೆಯದಾಗಿದೆ. ಅವರು ಇಲ್ಲಿಯೇ ಬರುತ್ತಾರೆ, ಯಾವಾಗ ನಾಟಕದ ಅನುಸಾರ ಎಲ್ಲರೂ ಪೂರ್ಣ ಪತಿತರಾಗಿಬಿಡುತ್ತಾರೆಯೋ ಆಗ ತಂದೆಯು ಬರುತ್ತಾರೆ. ಮೊಟ್ಟಮೊದಲು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪುಮಾಡಿ, ಪತಿತ-ಪಾವನರೆಂದು ನೀವು ಹೇಳುತ್ತೀರಲ್ಲವೇ. ಆತ್ಮಿಕ ತಂದೆಗೆ ಪತಿತ-ಪಾವನರೆಂದು ಹೇಳಲಾಗುತ್ತದೆ. ಹೇ ಭಗವಂತನೇ ಅಥವಾ ಹೇ ತಂದೆಯೇ ಎಂದು ಹೇಳುತ್ತಾರೆ ಆದರೆ ಯಾರಿಗೂ ಪರಿಚಯವಿಲ್ಲ. ಈಗ ನೀವು ಸಂಗಮವಾಸಿಗಳಾಗಿದ್ದೀರಿ ಪರಿಚಯ ಸಿಕ್ಕಿದೆ. ಅವರು ನರಕವಾಸಿಗಳು, ನೀವಲ್ಲಾ. ಹಾ! ಒಂದುವೇಳೆ ಯಾರಾದರು ಸೋಲನ್ನು ಅನುಭುವಿಸಿದರೆ ಒಮ್ಮೆಗೆ ಬಿದ್ದುಹೋಗುತ್ತಾರೆ. ಮಾಡಿಕೊಂಡಿರುವ ಸಂಪಾದನೆ ನಷ್ಟವಾಗುತ್ತದೆ. ಮೂಲ ಮಾತು ಪತಿತರಿಂದ ಪಾವನರಾಗುವುದಾಗಿದೆ. ಇದು ವಿಕಾರಿ ಪ್ರಪಂಚವಾಗಿದೆ. ಅದು ನಿರ್ವಿಕಾರಿ, ಹೊಸ ಪ್ರಪಂಚವಾಗಿದೆ, ಅಲ್ಲಿ ದೇವತೆಗಳು ರಾಜ್ಯಮಾಡುತ್ತಾರೆ.. ಈಗ ನೀವು ಮಕ್ಕಳಿಗೆ ತಿಳಿದಿದೆ. ಮೊಟ್ಟಮೊದಲು ದೇವತೆಗಳೇ ಎಲ್ಲದಕ್ಕಿಂತ ಹೆಚ್ಚಿನ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಅದರಲ್ಲಿಯೂ ಯಾರು ಮೊಟ್ಟಮೊದಲು ಸೂರ್ಯವಂಶಿಯವರೋ ಅವರು ಮೊದಲು ಬರುತ್ತಾರೆ. 21 ಪೀಳಿಗೆಗಳ ಆಸ್ತಿಯನ್ನು ಪಡೆಯುತ್ತಾರೆ. ಪವಿತ್ರತೆ -ಸುಖ-ಶಾಂತಿಯೂ ಎಷ್ಟು ದೊಡ್ಡ ಆಸ್ತಿಯಾಗಿದೆ. ಸತ್ಯಯುಗಕ್ಕೆ ಪೂರ್ಣ ಸುಖಧಾಮವೆಂದು ಹೇಳಲಾಗುತ್ತದೆ. ತ್ರೇತಾಯುಗವು ಸೆಮಿ-ಸುಖಧಾಮವಾಗಿದೆ ಏಕೆಂದರೆ ಎರಡು ಕಲೆಗಳು ಕಡಿಮೆಯಾಗಿಬಿಡುತ್ತವೆ. ಕಲೆಗಳು ಕಡಿಮೆ ಆಗುವುದರಿಂದ ಪ್ರಕಾಶತೆಯು ಕಡಿಮೆ ಆಗುತ್ತಾ ಹೋಗುತ್ತದೆ. ಚಂದ್ರಮನಿಗೂ ಸಹ ಕಲೆಗಳು ಕಡಿಮೆ ಆದಾಗ ಬೆಳಕು ಕಡಿಮೆ ಆಗಿಬಿಡುತ್ತದೆ. ಕೊನೆಗೆ ಒಂದು ಗೆರೆಯಷ್ಟೇ ಉಳಿಯುತ್ತದೆ. ಪೂರ್ಣ ಅಳಿದುಹೋಗುವುದಿಲ್ಲ. ಹಾಗೆಯೇ ನಿಮ್ಮದೂ ಸಹ ಪೂರ್ಣ ಅಳಿದುಹೋಗುವುದಿಲ್ಲ. ಇದಕ್ಕೆ ಹಿಟ್ಟಿನಲ್ಲಿ ಉಪ್ಪಿನಷ್ಟು ಎಂದು ಹೇಳಲಾಗುತ್ತದೆ.

ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ - ಇದು ಆತ್ಮಗಳ ಮತ್ತು ಪರಮಾತ್ಮನ ಮೇಳವಾಗಿದೆ. ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಪರಮಾತ್ಮನು ಯಾವಾಗ ಬರುತ್ತಾರೆ? ಯಾವಾಗ ಅನೇಕ ಆತ್ಮಗಳು, ಮನುಷ್ಯರ ಸಂಖ್ಯೆಯು ಹೆಚ್ಚುವುದು ಆಗ ಪರಮಾತ್ಮನು ಮೇಳದಲ್ಲಿ ಬರುತ್ತಾರೆ. ಆತ್ಮಗಳು ಮತ್ತು ಪರಮಾತ್ಮನ ಮೇಳವು ಏಕೆ ಆಗುತ್ತದೆ? ಆ ಮೇಳಗಳಂತೂ ಮೈಲಿಗೆ ಆಗುವುದಕ್ಕಾಗಿ. ಈ ಸಮಯದಲ್ಲಿ ನೀವು ಹೂದೋಟದ ಮಾಲೀಕನ ಮೂಲಕ ಮುಳ್ಳುಗಳಿಂದ ಹೂಗಳಾಗುತ್ತೀರಿ. ಹೇಗಾಗುತ್ತೀರಿ? ನೆನಪಿನ ಬಲದಿಂದ. ತಂದೆಗೆ ಸರ್ವಶಕ್ತಿವಂತ ಎಂದು ಹೇಳಲಾಗುತ್ತದೆ. ಹೇಗೆ ತಂದೆಯು ಸರ್ವಶಕ್ತಿವಂತನಾಗಿದ್ದಾರೆಯೋ ಹಾಗೆಯೇ ರಾವಣನೂ ಸಹ ಕಡಿಮೆ ಶಕ್ತಿವಂತನಲ್ಲ. ಮಾಯೆಯು ಬಹಳ ಶಕ್ತಿಶಾಲಿ, ಅಪಾಯಕಾರಿ ಆಗಿದೆ ಎಂದು ಸ್ವಯಂ ತಂದೆಯು ಹೇಳುತ್ತಾರೆ. ಬಾಬಾ ನಾವು ತಮ್ಮನ್ನು ನೆನಪು ಮಾಡುತ್ತೇವೆ, ಮಾಯೆಯು ನಮ್ಮ ನೆನಪನ್ನು ಮರೆಸಿಬಿಡುತ್ತದೆ ಎಂದು ಹೇಳುತ್ತಾರೆ. ಅಂದಾಗ ಪರಸ್ಪರ ಶತ್ರು ಆಗಿದೆಯಲ್ಲವೇ. ತಂದೆಯು ಬಂದು ಮಾಯೆಯ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಸಿಬಿಡುತ್ತಾರೆ. ದೇವತೆಗಳು ಮತ್ತು ಅಸುರರ ಯುದ್ಧವನ್ನು ತೋರಿಸುತ್ತಾರೆ ಅಂದರೆ ಈ ರೀತಿ ಅಲ್ಲ. ಯುದ್ಧವಂತೂ ಇದಾಗಿದೆ, ನೀವು ತಂದೆಯನ್ನು ನೆನಪು ಮಾಡುವುದರಿಂದ ದೇವತೆಗಳು ಆಗುತ್ತೀರಿ. ಮಾಯೆಯು ನೆನಪಿನಲ್ಲಿ ವಿಘ್ನಗಳನ್ನು ಹಾಕುತ್ತದೆ, ವಿದ್ಯಾಭ್ಯಾಸದಲ್ಲಿ ವಿಘ್ನಗಳನ್ನು ಹಾಕುವುದಿಲ್ಲ. ನೆನಪಿನಲ್ಲಿಯೇ ವಿಘ್ನಗಳನ್ನು ಹಾಕುತ್ತದೆ. ಪದೇ-ಪದೇ ಮಾಯೆಯು ಮರೆಸುತ್ತದೆ. ದೇಹಾಭಿಮಾನಿ ಆಗುವುದರಿಂದ ಮಾಯೆಯ ಏಟು ಬೀಳುತ್ತದೆ. ಯಾರು ಕಾಮಿ ಆಗಿರುತ್ತಾರೆಯೋ ಅವರಿಗಾಗಿ ಬಹಳ ಕಠಿಣ ಶಬ್ದಗಳನ್ನು ಹೇಳಲಾಗುತ್ತದೆ - ಇದು ರಾವಣರಾಜ್ಯವಾಗಿದೆ, ಇಲ್ಲಿಯೂ ಪಾವನರಾಗಿ ಎಂದು ತಿಳಿಸಲಾಗಿದೆ, ಆದರೆ ಆಗುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ ವಿಕಾರಗಳಲ್ಲಿ ಹೋಗಬೇಡಿ, ಮುಖ ಕಪ್ಪು ಮಾಡಿಕೊಳ್ಳಬೇಡಿ, ಆದರೂ ಸಹ ಬಾಬಾ ಮಾಯೆಯು ಸೋಲಿಸಿ ಬಿಟ್ಟಿತು ಅರ್ಥಾತ್ ಮುಖ ಕಪ್ಪು ಮಾಡಿಕೊಂಡೆವು ಎಂದು ಬರೆಯುತ್ತಾರೆ. ಶ್ಯಾಮ ಮತ್ತು ಸುಂದರ ಅಲ್ಲವೇ. ವಿಕಾರಗಳು ಕಪ್ಪಾಗಿಯೂ ಮತ್ತು ನಿರ್ವಿಕಾರಿಗಳು ಸುಂದರವಾಗಿರುತ್ತಾರೆ. ಶ್ಯಾಮಸುಂದರದ ಅರ್ಥವನ್ನು ನಿಮ್ಮ ವಿನಃ ಪ್ರಪಂಚದಲ್ಲಿ ಯಾರೂ ತಿಳಿದಿಲ್ಲ. ಕೃಷ್ಣನಿಗೂ ಶ್ಯಾಮ ಸುಂದರನೆಂದು ಕರೆಯುತ್ತಾರೆ. ತಂದೆಯು ಅವರದೇ ಹೆಸರಿನ ಅರ್ಥವನ್ನು ತಿಳಿಸುತ್ತಾರೆ - ಕೃಷ್ಣನು ಸ್ವರ್ಗದ ಮೊದಲನೇ ರಾಜಕುಮಾರನಾಗಿದ್ದನು, ಸೌಂದರ್ಯದಲ್ಲಿ ನಂಬರ್ವನ್ ಕೃಷ್ಣನೇ ಪಾಸ್ ಆಗುತ್ತಾನೆ ನಂತರ ಪುನರ್ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ, ಇಳಿಯುತ್ತಾ-ಇಳಿಯುತ್ತಾ ಕಪ್ಪಾಗಿಬಿಡುತ್ತಾನೆ ಆದ್ದರಿಂದಲೇ ಶ್ಯಾಮಸುಂದರನೆಂದು ಹೆಸರು ಇಡಲಾಗಿದೆ. ಇದರ ಅರ್ಥವನ್ನೂ ಸಹ ತಂದೆಯು ತಿಳಿಸುತ್ತಾರೆ - ಶಿವತಂದೆಯು ಸದಾ ಸುಂದರರಾಗಿದ್ದಾರೆ. ಅವರು ಬಂದು ನೀವು ಮಕ್ಕಳನ್ನು ಸುಂದರರನ್ನಾಗಿ ಮಾಡುತ್ತಾರೆ. ಪತಿತರು ಕಪ್ಪು, ಪಾವನರು ಸುಂದರರಾಗಿರುತ್ತಾರೆ, ಸ್ವಾಭಾವಿಕ ಸೌಂದರ್ಯವಿರುತ್ತದೆ. ನೀವು ಮಕ್ಕಳು ಸ್ವರ್ಗದ ಮಾಲೀಕರಾಗಲು ಬಂದಿದ್ದೀರಿ, ಆದ್ದರಿಂದ ಗಾಯನವು ಇದೆ - ಶಿವಭಗವಾನುವಾಚ - ಮಾತೆಯರು ಸ್ವರ್ಗದ ಬಾಗಿಲನ್ನು ತೆಗೆಯುತ್ತಾರೆ ಆದ್ದರಿಂದ ವಂದೇಮಾತರಂ ಎಂದು ಹಾಡುತ್ತಾರೆ. ವಂದೇಮಾತರಂ ಎಂದು ಹೇಳುತ್ತಾರೆಂದರೆ ಪಿತನೂ ಸಹ ಇದ್ದಾರೆ ಎಂದರ್ಥ. ತಂದೆಯು ಮಾತೆಯರ ಮಹಿಮೆಯನ್ನು ಹೆಚ್ಚಿಸುತ್ತಾರೆ. ಮೊದಲು ಲಕ್ಷ್ಮಿ ನಂತರ ನಾರಾಯಣ. ಆದರೆ ಇಲ್ಲಿ ಮೊದಲು ಮಿಸ್ಟರ್ ನಂತರ ಮಿಸ್. ನಾಟಕದ ರಹಸ್ಯವೇ ಈ ರೀತಿ ಮಾಡಲ್ಪಟ್ಟಿದೆ. ರಚಯಿತ ತಂದೆಯು ಮೊದಲು ತಮ್ಮ ಪರಿಚಯವನ್ನು ಕೊಡುತ್ತಾರೆ. ಒಬ್ಬರು ಹದ್ದಿನ ಲೌಕಿಕ ತಂದೆ ಆಗಿದ್ದಾರೆ. ಇನ್ನೊಬ್ಬರು ಬೇಹದ್ದಿನ ಪಾರಲೌಕಿಕ ತಂದೆ ಆಗಿದ್ದಾರೆ. ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತಾರೆ ಏಕೆಂದರೆ ಅವರಿಂದ ಅಪರಿಮಿತವಾದ ಸುಖ ಸಿಗುತ್ತದೆ. ಲೌಕಿಕ ಆಸ್ತಿ ಸಿಗುತ್ತಿದ್ದರೂ ಸಹ ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತಾರೆ - ಓ ತಂದೆಯೇ! ತಾವು ಬಂದರೆ ಮತ್ತೆಲ್ಲಾ ಸಂಗಗಳನ್ನು ಬಿಟ್ಟು ತಮ್ಮ ಒಬ್ಬರ ಸಂಗವನ್ನೇ ಸೇರುತ್ತೇವೆ. ಇದನ್ನು ಯಾರು ಹೇಳಿದರು? ಆತ್ಮ. ಆತ್ಮವೇ ಈ ಕರ್ಮೇಂದ್ರಿಯಗಳ ಮೂಲಕ ಪಾತ್ರವನ್ನು ಅಭಿನಯಿಸುತ್ತದೆ, ಪ್ರತಿಯೊಂದು ಆತ್ಮವು ಎಂತೆಂತಹ ಕರ್ಮವನ್ನು ಮಾಡುವುದೋ ಅಂತಂತಹ ಜನ್ಮವನ್ನು ಪಡೆಯುವುದು ಸಾಹುಕಾರರು, ಬಡವರು ಆಗುತ್ತಾರೆ. ಅಂತಹ ವಿಕರ್ಮವಿದೆಯಲ್ಲವೇ. ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರು. ಇವರು ಏನನ್ನು ಮಾಡಿದರು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ ಮತ್ತು ನೀವೇ ತಿಳಿಸಬಲ್ಲಿರಿ.

ಮಕ್ಕಳೇ, ಈ ಕಣ್ಣುಗಳಿಂದ ಏನೆಲ್ಲಾ ನೋಡುತ್ತಿದ್ದೀರೋ ಅದರೊಂದಿಗೆ ವೈರಾಗ್ಯವಿರಲಿ ಇದೆಲ್ಲವೂ ಸಮಾಪ್ತಿ ಆಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಹೇಗೆ ಹೊಸ ಮನೆಯು ನಿರ್ಮಾಣ ಮಾಡುತ್ತಾರೆ ಎಂದರೆ ಹಳೆಯದರೊಂದಿಗೆ ವೈರಾಗ್ಯ ಆಗಿಬಿಡುತ್ತದೆ, ಹಾಗೆಯೇ ಮಕ್ಕಳು ತಂದೆಯು ಹೊಸ ಮನೆಯನ್ನು ತಯಾರು ಮಾಡುತ್ತಾರೆ, ನಾವು ಅದರಲ್ಲಿ ಹೋಗುತ್ತೇವೆ ಎಂದು ಹೇಳುತ್ತಾರೆ. ಈ ಹಳೆಯ ಮನೆಯಂತೂ ಬಿದ್ದುಹೋಗುವುದು. ಇದು ಬೇಹದ್ದಿನ ಮಾತಾಗಿದೆ. ಮಕ್ಕಳಿಗೂ ಗೊತ್ತಿದೆ - ತಂದೆಯು ಸ್ವರ್ಗದ ಸ್ಥಾಪನೆಯನ್ನು ಮಾಡಲು ಬಂದಿದ್ದಾರೆ. ಇದು ಹಳೆಯ ಛೀ-ಛೀ ಪ್ರಪಂಚವಾಗಿದೆ.

ಮಕ್ಕಳು ಈಗ ತ್ರಿಮೂರ್ತಿ ಶಿವನ ಮುಂದೆ ಕುಳಿತಿದ್ದೀರಿ, ನೀವು ವಿಜಯವನ್ನು ಪಡೆಯುತ್ತೀರಿ. ವಾಸ್ತವದಲ್ಲಿ ನಿಮ್ಮ ಈ ತ್ರಿಮೂರ್ತಿ ಚಿತ್ರವು ಖವಚವಾಗಿದೆ. ನೀವು ಬ್ರಾಹ್ಮಣರ ಈ ಕುಲವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ, ಶಿಖೆಯಾಗಿದೆ. ರಾಜಧಾನಿಯು ಸ್ಥಾಪನೆ ಆಗುತ್ತಿದೆ. ಈ ಖವಚವನ್ನು ನೀವು ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ. ಶಿವತಂದೆಯು ನಮಗೆ ದೇವೀ-ದೇವತೆಗಳನ್ನಾಗಿ ಮಾಡಲು ಬ್ರಹ್ಮಾರವರ ಮೂಲಕ ಓದಿಸುತ್ತಾರೆ. ವಿನಾಶವಂತೂ ಅವಶ್ಯವಾಗಿ ಆಗಲಿದೆ. ಪ್ರಪಂಚವು ತಮೋಪ್ರಧಾನ ಅಗುವ ಕಾರಣ ಪ್ರಾಕೃತಿಕ ವಿಕೋಪಗಳೂ ಸಹ ಸಹಯೋಗ ಕೊಡುತ್ತವೆ. ಬುದ್ಧಿಯಿಂದ ಎಷ್ಟೊಂದು ಸಂಶೋಧನೆ ಮಾಡುತ್ತಿರುತ್ತಾರೆ. ವಾಸ್ತವದಲ್ಲಿ ಹೊಟ್ಟೆಯಿಂದಂತೂ ಓನಕೆ (ಅಣ್ವಸ್ತ್ರ) ಹೊರಬರಲಿಲ್ಲ. ಬಂದಿದ್ದು ಈ ವಿಜ್ಞಾನದ ಪ್ರಗತಿಯಿಂದ. ಇಡೀ ಕುಲವನ್ನೇ ಸಮಾಪ್ತಿ ಮಾಡುತ್ತಾರೆ. ಮಕ್ಕಳಿಗೆ ತಿಳಿಸಲಾಗಿದೆ - ಸರ್ವಶ್ರೇಷ್ಠ ಶಿವತಂದೆಯಾಗಿದ್ದಾರೆ. ಪೂಜೆಯೂ ಸಹ ಒಬ್ಬ ಶಿವತಂದೆ ಮತ್ತು ದೇವತೆಗಳನ್ನೇ ಮಾಡಬೇಕು. ಬ್ರಾಹ್ಮಣರ ಪೂಜೆಯಾಗಲು ಸಾಧ್ಯವಿಲ್ಲ ಏಕೆಂದರೆ ನಿಮ್ಮ ಆತ್ಮವು ಭಲೆ ಪವಿತ್ರವಾಗಿದೆ ಆದರೆ ಶರೀರವು ಪವಿತ್ರವಾಗಿಲ್ಲ, ಆದ್ದರಿಂದ ಪೂಜೆಗೆ ಯೋಗ್ಯರಾಗಲು ಸಾಧ್ಯವಿಲ್ಲ, ಮಹಿಮಾಯೋಗ್ಯರಾಗಿದ್ದೀರಿ ಮತ್ತೆ ನೀವು ದೇವತೆಗಳಾಗುತ್ತೀರೆಂದರೆ ಆತ್ಮವು ಪವಿತ್ರ, ಶರೀರವೂ ಸಹ ಪವಿತ್ರ, ಹೊಸದು ಸಿಗುತ್ತದೆ. ಈ ಸಮಯದಲ್ಲಿ ನೀವು ಮಹಿಮಾಯೋಗ್ಯರಾಗಿದ್ದೀರಿ. ವಂದೇಮಾತರಂ ಎಂದು ಗಾಯನ ಮಾಡಲಾಗುತ್ತದೆ ಎಂದಮೇಲೆ ಮಾತೆಯರ ಸೈನ್ಯವು ಏನು ಮಾಡಿತು? ಮಾತೆಯರೇ ಶ್ರೀಮತದನುಸಾರ ಜ್ಞಾನವನ್ನು ಕೊಟ್ಟಿದ್ದಾರೆ. ಮಾತೆಯರು ಎಲ್ಲರಿಗೆ ಶ್ರೀಮತದನುಸಾರ ಜ್ಞಾನವನ್ನು ಕೊಡುತ್ತಾರೆ. ಎಲ್ಲರಿಗೆ ಜ್ಞಾನಾಮೃತವನ್ನು ಕುಡಿಸುತ್ತಾರೆ. ಯಥಾರ್ಥ ರೀತಿಯಲ್ಲಿ ನೀವೇ ಅರಿತಿದ್ದೀರಿ. ಶಾಸ್ತ್ರಗಳಲ್ಲಂತೂ ಬಹಳ ಕಥೆಗಳು ಬರೆಯಲ್ಪಟ್ಟಿವೆ, ಕುಳಿತು ಆ ಕಥೆಗಳನ್ನು ತಿಳಿಸುತ್ತಾರೆ. ನೀವು ಸತ್ಯ-ಸತ್ಯ ಎಂದು ಹೇಳುತ್ತಿರುತ್ತೀರಿ. ನೀವು ಕುಳಿತು ಇದನ್ನು ತಿಳಿಸಿದಾಗ ಸತ್ಯ- ಸತ್ಯವೆಂದು ಹೇಳುತ್ತಾರೆ. ಈಗಂತೂ ನೀವು ಆ ಕಥೆಗಳನ್ನು ಸತ್ಯವೆಂದು ಹೇಳುವುದಿಲ್ಲ. ಮನುಷ್ಯರು ಇಂತಹ ಕಲ್ಲುಬುದ್ಧಿಯವರಾಗಿದ್ದಾರೆ ಅದನ್ನೇ ಸತ್ಯ-ಸತ್ಯ ಎಂದು ಹೇಳುತ್ತಿರುತ್ತಾರೆ. ಕಲ್ಲುಬುದ್ಧಿ ಮತ್ತು ಪಾರಸಬುದ್ಧಿಯ ಗಾಯನವೂ ಇದೆ. ಪಾರಸಬುದ್ಧಿ ಎಂದರೆ ಪಾರಸನಾಥ, ಪಾರಸನಾಥನ ಚಿತ್ರವಿದೆ ಎಂದು ನೇಪಾಳದಲ್ಲಿ ಹೇಳುತ್ತಾರೆ. ಪಾರಸಪುರಿಯನಾಥ ಅರ್ಥಾತ್ ಒಡೆಯರು ಈ ಲಕ್ಷ್ಮಿ-ನಾರಾಯಣರಾಗಿದ್ದಾರೆ. ಅವರ ರಾಜವಂಶವಿದೆ. ಈಗ ಮೂಲಮಾತು ರಚಯಿತ ಮತ್ತು ರಚನೆಯ ರಹಸ್ಯವನ್ನು ತಿಳಿಯುವುದಾಗಿದೆ. ಇದಕ್ಕಾಗಿಯೇ ಋಷಿ-ಮುನಿಗಳೂ ಸಹ ನೇತಿ-ನೇತಿ (ಗೊತ್ತಿಲ್ಲ-ಗೊತ್ತಿಲ್ಲ) ಎಂದು ಹೇಳುತ್ತಾ ಹೋದರು. ಈಗ ನೀವು ತಂದೆಯ ಮೂಲಕ ಎಲ್ಲವನ್ನು ತಿಳಿದುಕೊಂಡಿದ್ದೀರಿ ಅರ್ಥಾತ್ ಆಸ್ತಿಕರಾಗಿದ್ದೀರಿ. ಮಾಯಾರಾವಣನು ನಾಸ್ತಿಕರನ್ನಾಗಿ ಮಾಡುತ್ತಾನೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಾವು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರಾಗಿದ್ದೇವೆ, ನಮ್ಮದು ಎಲ್ಲದಕ್ಕಿಂತ ಶ್ರೇಷ್ಠ ಕುಲವಾಗಿದೆ ಎಂದು ಸದಾ ಸ್ಮೃತಿ ಇರಲಿ. ನಾವು ಪವಿತ್ರರಾಗಬೇಕು ಮತ್ತು ಅನ್ಯರನ್ನು ಪವಿತ್ರರನ್ನಾಗಿ ಮಾಡಬೇಕು. ಪತಿತಪಾವನ ತಂದೆಗೆ ಸಹಯೋಗಿಗಳಾಗಬೇಕು.

2. ನೆನಪಿನಲ್ಲಿ ಎಂದೂ ಹುಡುಗಾಟಿಕೆ ಮಾಡಬಾರದು. ದೇಹಾಭಿಮಾನದ ಕಾರಣವೇ ಮಾಯೆಯು ನೆನಪಿನಲ್ಲಿ ವಿಘ್ನಗಳನ್ನು ಹಾಕುತ್ತದೆ. ಆದ್ದರಿಂದ ಮೊದಲು ದೇಹಾಭಿಮಾನವನ್ನು ಬಿಡಬೇಕಾಗಿದೆ. ಯೋಗಾಗ್ನಿಯ ಮೂಲಕ ಪಾಪನಾಶ ಮಾಡಿಕೊಳ್ಳಬೇಕಾಗಿದೆ.

ವರದಾನ:
ಸಾಧನಗಳ ಪ್ರವೃತ್ತಿಯಲ್ಲಿರುತ್ತಾ ಕಮಲದ ಹೂವಿನ ಸಮಾನ ನ್ಯಾರೆ ಮತ್ತು ಪ್ಯಾರೆಯಾಗಿರುವಂತಹ ಬೇಹದ್ದಿನ ವೈರಾಗಿ ಭವ

ಸಾಧನ ಸಿಕ್ಕಿದರೆ ಅದನ್ನು ತುಂಬುಹೃದಯದಿಂದ ಉಪಯೋಗಿಸಿ, ಈ ಸಾದನಗಳಿರುವುದೇ ನಿಮಗಾಗಿ, ಆದರೆ ಸಾಧನೆಯನ್ನು ಮರ್ಜ್ ಮಾಡಬೇಡಿ ಪೂರ್ತಿ ಬ್ಯಾಲೆನ್ಸ್ ಇರಲಿ. ಸಾಧನಗಳು ಕೆಟ್ಟದ್ದಲ್ಲ, ಸಾಧನಗಳಂತೂ ನಮ್ಮ ಕರ್ಮದ, ಯೋಗದ ಫಲವಾಗಿದೆ. ಆದರೆ ಸಾಧನದ ಪ್ರವೃತ್ತಿಯಲ್ಲಿರುತ್ತಾ ಕಮಲ ಪುಷ್ಪಸಮಾನ ನ್ಯಾರಾ ಮತ್ತು ತಂದೆಗೆ ಪ್ಯಾರೆ ಆಗಿ. ಉಪಯೋಗಿಸುತ್ತಾ ಅವುಗಳ ಫ್ರಭಾವದಲ್ಲಿ ಬರಬೇಡಿ. ಸಾಧನಗಳಲ್ಲಿ ಬೇಹದ್ದಿನ ವೈರಾಗ್ಯ ವೃತ್ತಿ ಮರ್ಜ್ ಆಗಬಾರದು. ಮೊದಲು ಸ್ವಯಂ ನಲ್ಲಿ ಇದನ್ನು ಇಮರ್ಜ್ ಮಾಡಿ ನಂತರ ವಿಶ್ವದಲ್ಲಿ ವಾಯುಮಂಡಲವನ್ನು ಹರಡಿ.

ಸ್ಲೋಗನ್:
ಪೇಚಾಟವನ್ನು ನಿಮ್ಮ ಘನತೆಯಲ್ಲಿ ಸ್ಥಿತಮಾಡುವುದೇ ಎಲ್ಲಕ್ಕಿಂತಲೂ ಒಳ್ಳೆಯ ಸೇವೆಯಾಗಿದೆ.