09.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಈಗ ಎಲ್ಲಾ ಕಡೆಯಿಂದ ನಿಮ್ಮ ಮೋಹದ ದಾರಗಳು ಕತ್ತರಿಸಬೇಕು ಏಕೆಂದರೆ ಮನೆಗೆ ಹೋಗಬೇಕಾಗಿದೆ, ಬ್ರಾಹ್ಮಣಕುಲದ ಹೆಸರನ್ನು ಕೆಡಿಸುವಂತಹ ಯಾವುದೇ ವಿಕರ್ಮವಾಗಬಾರದು"

ಪ್ರಶ್ನೆ:
ತಂದೆಯು ಎಂಥಹ ಮಕ್ಕಳನ್ನು ನೋಡಿ-ನೋಡಿ ಬಹಳ ಹರ್ಷಿತರಾಗುತ್ತಾರೆ? ಯಾವ ಮಕ್ಕಳು ತಂದೆಯ ಕಣ್ಣುಗಳಲ್ಲಿ ಸಮಾವೇಶವಾಗಿರುತ್ತಾರೆ?

ಉತ್ತರ:
ಯಾವ ಮಕ್ಕಳು ಅನೇಕರನ್ನು ಸುಖದಾಯಿಗಳನ್ನಾಗಿ ಮಾಡುತ್ತಾರೆ, ಸೇವಾಧಾರಿಗಳಾಗಿದ್ದಾರೆ ಅಂತಹವರನ್ನು ನೋಡಿ-ನೋಡಿ ತಂದೆಯೂ ಹರ್ಷಿತರಾಗುತ್ತಾರೆ. ಒಬ್ಬ ತಂದೆಯೊಂದಿಗೆ ಮಾತನಾಡುತ್ತೇನೆ, ಒಬ್ಬ ತಂದೆಯೊಂದಿಗೇ ಕೇಳುತ್ತೇನೆ.... ಎಂದು ಯಾವ ಮಕ್ಕಳ ಬುದ್ಧಿಯಲ್ಲಿ ಇರುತ್ತದೆಯೋ ಅವರು ತಂದೆಯ ನಯನಗಳಲ್ಲಿ ಸಮಾವೇಷವಾಗಿರುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನ ಸರ್ವೀಸ್ ಮಾಡುವ ಮಕ್ಕಳೇ ನನಗೆ ಅತೀ ಪ್ರಿಯರು. ಅಂತಹ ಮಕ್ಕಳನ್ನು ನಾನು ನೆನಪು ಮಾಡುತ್ತೇನೆ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ಇದು ತಿಳಿದಿದೆ - ನಾವು ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ, ಆ ತಂದೆಯು ಶಿಕ್ಷಕನ ರೂಪದಲ್ಲಿ ಓದಿಸುವವರೂ ಆಗಿದ್ದಾರೆ. ಅದೇ ತಂದೆ ಪತಿತಪಾವನ, ಸದ್ಗತಿದಾತನೂ ಸಹ ಆಗಿದ್ದಾರೆ. ಜೊತೆಯಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ ಮತ್ತು ಬಹಳ ಸಹಜವಾದ ಮಾರ್ಗವನ್ನು ತಿಳಿಸುತ್ತಾರೆ. ಪತಿತರಿಂದ ಪಾವನರಾಗಲು ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಎಲ್ಲಿಗಾದರೂ ಹೋಗಿ ನಡೆಯುತ್ತಾ-ತಿರುಗಾಡುತ್ತಾ ವಿದೇಶಕ್ಕೆ ಹೋಗುತ್ತಿರುವಾಗಲೂ ಕೇವಲ ತಮ್ಮನ್ನು ಆತ್ಮ ಎಂದು ತಿಳಿಯಿರಿ. ಆ ರೀತಿಯಂತೂ ತಿಳಿಯುತ್ತಾರೆ ಆದರೂ ಸಹ ತಮ್ಮನ್ನು ಆತ್ಮ ಎಂದು ನಿಶ್ಚಯ ಮಾಡಿಕೊಳ್ಳಿ ಎಂದು ತಂದೆಯು ತಿಳಿಸುತ್ತಾರೆ. ದೇಹದ ಅಭಿಮಾನವನ್ನು ಬಿಟ್ಟು ಆತ್ಮಾಭಿಮಾನಿ ಆಗಿ. ನಾವು ಆತ್ಮಗಳು ಪಾತ್ರವನ್ನು ಅಭಿನಯಿಸಲು ಶರೀರವನ್ನು ತೆಗೆದುಕೊಳ್ಳುತ್ತೇವೆ. ಒಂದು ಶರೀರದಿಂದ ಪಾತ್ರವನ್ನು ಅಭಿನಯಿಸಿ ನಂತರ ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತೇವೆ. ಇದರಲ್ಲಿ ಕೆಲವರ ಪಾತ್ರ 100ವರ್ಷ, ಕೆಲವರದು 80ವರ್ಷ, ಕೆಲವರದು 2ವರ್ಷ ಇನ್ನೂ ಕೆಲವರದು 6 ತಿಂಗಳ ಪಾತ್ರವಿದೆ. ಕೆಲವರಂತೂ ಜನಿಸುತ್ತಿದ್ದಂತೆಯೇ ಸಮಾಪ್ತಿ ಆಗಿಬಿಡುತ್ತಾರೆ. ಕೆಲವರು ಜನ್ಮ ಪಡೆಯುವುದಕ್ಕೆ ಮೊದಲೇ ಗರ್ಭದಲ್ಲಿಯೇ ಸಮಾಪ್ತಿಯಾಗುತ್ತಾರೆ. ಇಲ್ಲಿನ ಪುನರ್ಜನ್ಮ ಮತ್ತು ಸತ್ಯಯುಗದ ಪುನರ್ಜನ್ಮದಲ್ಲಿ ರಾತ್ರಿ-ಹಗಲಿನ ಅಂತರವಿದೆ. ಇಲ್ಲಿ ಗರ್ಭದಿಂದ ಜನ್ಮ ಪಡೆಯುತ್ತಾರೆ ಅಂದಾಗ ಇದಕ್ಕೆ ಗರ್ಭಜೈಲು ಎಂದು ಕರೆಯಲಾಗುತ್ತದೆ. ಸತ್ಯಯುಗದಲ್ಲಿ ಗರ್ಭಜೈಲು ಇರುವುದಿಲ್ಲ, ಅಲ್ಲಿ ವಿಕರ್ಮಗಳಾಗುವುದೇ ಇಲ್ಲ, ರಾವಣರಾಜ್ಯವೇ ಇರುವುದಿಲ್ಲ. ತಂದೆಯು ಈ ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಬೇಹದ್ದಿನ ತಂದೆಯು ಕುಳಿತು ಈ ಶರೀರದ ಮೂಲಕ ತಿಳಿಸುತ್ತಾರೆ. ಈ ಶರೀರದ ಆತ್ಮವು ಕೇಳುತ್ತದೆ, ತಿಳಿಸುವವರು ಜ್ಞಾನಸಾಗರ ತಂದೆ ಆಗಿದ್ದಾರೆ, ಅವರಿಗೆ ತಮ್ಮ ಶರೀರವಿಲ್ಲ, ಅವರು ಸದಾ ಶಿವ ಎಂದೇ ಕರೆಸಿಕೊಳ್ಳುತ್ತಾರೆ. ಹೇಗೆ ಅವರು ಪುನರ್ಜನ್ಮ ರಹಿತನಾಗಿದ್ದಾರೆಯೋ ಹಾಗೆಯೇ ನಾಮ-ರೂಪ ತೆಗೆದುಕೊಳ್ಳುವುದರಿಂದಲೂ ರಹಿತನಾಗಿದ್ದಾರೆ. ಅವರಿಗೆ ಸದಾ ಶಿವ ಎಂದು ಹೇಳಲಾಗುತ್ತದೆ. ಸದಾ ಕಾಲಕ್ಕಾಗಿ ಶಿವನೇ ಆಗಿದ್ದಾರೆ (ಕಲ್ಯಾಣಕಾರಿ). ಶರೀರದ ಯಾವುದೇ ಹೆಸರು ಬರುವುದಿಲ್ಲ ಇವರಲ್ಲಿ ಪ್ರವೇಶ ಮಾಡಿದಾಗಲೂ, ಇವರ ಶರೀರದ ಹೆಸರೂ ಅವರಿಗೆ ಬರುವುದಿಲ್ಲ. ನಿಮ್ಮದು ಇದು ಬೇಹದ್ದಿನ ಸನ್ಯಾಸವಾಗಿದೆ, ಅವರು ಹದ್ದಿನ ಸನ್ಯಾಸಿಗಳಾಗಿರುತ್ತಾರೆ, ಅವರ ಹೆಸರೂ ಬದಲಾಗುತ್ತದೆ. ನಿಮಗೂ ಸಹ ತಂದೆಯು ಎಷ್ಟು ಒಳ್ಳೊಳ್ಳೆಯ ಹೆಸರುಗಳನ್ನು ಇಟ್ಟಿದ್ದರು, ನಾಟಕದನುಸಾರ ಯಾರಿಗೆ ಹೆಸರಿಟ್ಟರೋ ಅವರು ಬಿಟ್ಟುಹೋದರು. ನನ್ನವರಾಗಿದ್ದಾರೆಂದಮೇಲೆ ಅವಶ್ಯವಾಗಿ ಸ್ಥಿರವಾಗಿರುತ್ತಾರೆ, ವಿಚ್ಛೇದನವನ್ನು ಕೊಡುವುದಿಲ್ಲ ಎಂದು ತಂದೆಯೂ ತಿಳಿದುಕೊಂಡರು. ಆದರೆ ವಿಚ್ಛೇದನ ಕೊಟ್ಟುಬಿಟ್ಟರು. ಅಂದಮೇಲೆ ಹೆಸರನ್ನು ಇಡುವುದರಿಂದ ಲಾಭವೇನು! ಸನ್ಯಾಸಿಗಳೂ ಹಿಂತಿರುಗಿ ಮನೆಗೆ ಬರುತ್ತಾರೆಂದರೆ ಮತ್ತೆ ಹಳೆಯ ಹೆಸರೇ ನಡೆಯುತ್ತದೆ. ಮನೆಗೆ ಹಿಂತಿರುಗುತ್ತಾರಲ್ಲವೇ. ಸನ್ಯಾಸ ಮಾಡುತ್ತಾರೆಂದರೆ ಅವರಿಗೆ ಮಿತ್ರ-ಸಂಬಂಧಿಗಳ ನೆನಪು ಇರುವುದಿಲ್ಲವೆಂದಲ್ಲ. ಕೆಲವರಿಗಂತೂ ಎಲ್ಲಾ ಮಿತ್ರಸಂಬಂಧಿಗಳು ನೆನಪು ಬರುತಿರುತ್ತಾರೆ, ಮೋಹದಲ್ಲಿ ಸಿಲುಕಿ ಸಾಯುತ್ತಿರುತ್ತಾರೆ ಮೋಹದ ಎಳೆಗಳಿರುತ್ತವೆ. ಕೆಲವರಿಗಂತೂ ಬಹುಬೇಗನೆ ಸಂಬಂಧ ಕತ್ತರಿಸಲ್ಪಡುತ್ತವೆ. ಬಿಡುವುದಂತೂ ಬಿಡಲೇಬೇಕು. ತಂದೆಯು ತಿಳಿಸಿದ್ದಾರೆ - ಈಗ ಹಿಂತಿರುಗಿ ಹೋಗಬೇಕಾಗಿದೆ. ಸ್ವಯಂ ತಂದೆಯೇ ಕುಳಿತು ತಿಳಿಸುತ್ತಾರೆ, ಮುಂಜಾನೆಯೂ ಸಹ ಬಾಬಾರವರು ತಿಳಿಸುತ್ತಿದ್ದರಲ್ಲವೇ. ನೋಡಿ-ನೋಡಿ ಮನಸ್ಸಿನಲ್ಲಿ ಸುಖದ ಅನುಭವವಾಗುತ್ತದೆ, ಏಕೆ? ಕಣ್ಣುಗಳಲ್ಲಿ ಮಕ್ಕಳೇ ಸಮಾವೇಶವಾಗಿದ್ದಾರೆ. ಆತ್ಮಗಳು ಕಣ್ಮಣಿಗಳಾಗಿದ್ದಾರಲ್ಲವೇ. ತಂದೆಯೂ ಸಹ ಮಕ್ಕಳನ್ನು ನೋಡಿ-ನೋಡಿ ಖುಷಿ ಪಡುತ್ತಾರೆ. ಕೆಲವರಂತೂ ಬಹಳ ಒಳ್ಳೆಯ ಮಕ್ಕಳಿದ್ದಾರೆ, ಸೇವಾಕೇಂದ್ರವನ್ನು ಸಂಭಾಲನೆ ಮಾಡುತ್ತಾರೆ ಮತ್ತು ಇನ್ನೂ ಕೆಲವರು ಬ್ರಾಹ್ಮಣರಾಗಿ ಪುನಃ ವಿಕಾರದಲ್ಲಿ ಹೊರಟುಹೋಗುತ್ತಾರೆಂದರೆ ಅವರು ಅವಿಧೇಯರಾಗುತ್ತಾರೆ. ಆದ್ದರಿಂದ ತಂದೆಯೂ ಸಹ ಸೇವಾಧಾರಿ ಮಕ್ಕಳನ್ನು ನೋಡಿ-ನೋಡಿ ಹರ್ಷಿತರಾಗುತ್ತಾರೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ಇವರಂತೂ ಕುಲಕಳಂಕಿತರಾದರು. ಬ್ರಾಹ್ಮಣಕುಲದ ಹೆಸರನ್ನೇ ಕೆಡಿಸುತ್ತಾರೆ. ಆದ್ದರಿಂದಲೇ ಮಕ್ಕಳಿಗೆ ತಿಳಿಸುತ್ತಿರುತ್ತಾರೆ - ಯಾರದೇ ನಾಮ ರೂಪದಲ್ಲಿ ಸಿಲುಕಬೇಡಿ, ಅಂತಹವರಿಗೂ ಸಹ ಸೆಮಿ ಕುಲಕಳಂಕಿತರು ಎಂದು ಹೇಳಲಾಗುತ್ತದೆ. ಸೆಮಿ ಕುಲಕಳಂಕಿತರಿಂದ ಮತ್ತೆ ಪೂರ್ಣ ಆಗಿಬಿಡುತ್ತಾರೆ. ನಂತರ ಬರೆಯುತ್ತಾರೆ - ಬಾಬಾ, ನಾವು ಬಿದ್ದುಹೋದೆವು, ಮುಖವನ್ನು ಕಪ್ಪು ಮಾಡಿಕೊಂಡೆವು, ಮಾಯೆಯು ಮೋಸ ಮಾಡಿತು. ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕಾಮವಿಕಾರವನ್ನು ನಡೆಸುವುದೂ ಸಹ ಪರಸ್ಪರ ದುಃಖ ಕೊಟ್ಟಂತೆ. ಆದ್ದರಿಂದ ಪ್ರತಿಜ್ಞೆ ಮಾಡಿಸುತ್ತಾರೆ - ರಕ್ತದಿಂದಲೂ ಸಹ ದೊಡ್ಡ ಪತ್ರವನ್ನು ಬರೆದುಕೊಡುತ್ತಾರೆ. ಆದರೆ ಬರೆದುಕೊಟ್ಟವರು ಈ ದಿನ ಇಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ - ಅಹೋ ಮಾಯೆ! ನೀನು ಎಷ್ಟು ಬಲಶಾಲಿಯಾಗಿದ್ದೀರಿ, ಯಾರು ರಕ್ತದಿಂದ ಬರೆದುಕೊಟ್ಟರೋ ಅಂತಹವರನ್ನೂ ಸಹ ನೀನು ತಿಂದು ಬಿಡುತ್ತೀರಿ. ಹೇಗೆ ತಂದೆಯು ಸಮರ್ಥವಾಗಿದ್ದಾರೆಯೋ ಹಾಗೆಯೇ ಮಾಯೆಯೂ ಸಹ ಸಮರ್ಥವಾಗಿದೆ. ಅರ್ಧಕಲ್ಪ ತಂದೆಯ ಸಮರ್ಥ ಆಸ್ತಿ ಸಿಗುತ್ತದೆ, ಇನ್ನರ್ಧ ಕಲ್ಪದ ನಂತರ ಮಾಯೆ ಆ ಸಮರ್ಥತೆಯನ್ನು ಕಳೆದುಬಿಡುತ್ತದೆ. ಇದು ಭಾರತದ ಮಾತಾಗಿದೆ. ದೇವೀ-ದೇವತಾ ಧರ್ಮದವರು ಸಾಹುಕಾರರಿಂದ ದೀವಾಳಿಯಾಗುತ್ತಾರೆ. ಈಗ ನೀವು ಲಕ್ಷ್ಮೀ-ನಾರಾಯಣರ ಮಂದಿರಕ್ಕೆ ಹೋದರೆ ನಿಮಗೆ ಆಶ್ಚರ್ಯವೆನಿಸುತ್ತದೆ. ನಾವೇ ಈ ಮನೆತನದವರಾಗಿದ್ದೆವು ಈಗ ನಾವೇ ಓದುತ್ತಿದ್ದೇವೆ. ಇವರ ಆತ್ಮವೂ ಸಹ ತಂದೆಯಿಂದ ಓದುತ್ತದೆ. ಮೊದಲಂತೂ ಎಲ್ಲಿ ಹೋದರೆ ಅಲ್ಲಿ ನೀವೂ ಸಹ ತಲೆ ಬಾಗುತ್ತಿದ್ದಿರಿ. ಈಗ ಜ್ಞಾನವಿದೆ, ಪ್ರತಿಯೊಬ್ಬರ ಪೂರ್ಣ 84 ಜನ್ಮಗಳ ಕಥೆಯನ್ನು ನೀವು ತಿಳಿದುಕೊಂಡಿದ್ದೀರಿ. ಪ್ರತಿಯೊಬ್ಬರು ತಮ್ಮ ಪಾತ್ರವನ್ನು ಅಭಿನಯಿಸುತ್ತಾರೆ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸದಾ ಹರ್ಷಿತರಾಗಿರಿ. ಇಲ್ಲಿನ ಹರ್ಷಿತತನದ ಸಂಸ್ಕಾರವನ್ನು ಜೊತೆ ತೆಗೆದುಕೊಂಡು ಹೋಗುತ್ತೀರಿ. ನಾವು ಏನಾಗುತ್ತೇವೆ ಎಂದು ತಮಗೆ ಗೊತ್ತಿದೆ. ಬೇಹದ್ದಿನ ತಂದೆಯು ನಮಗೆ ಈ ಆಸ್ತಿಯನ್ನು ಕೊಡುತ್ತಿದ್ದಾರೆ, ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಈ ಲಕ್ಷ್ಮೀ-ನಾರಾಯಣರು ಎಲ್ಲಿ ಹೋದರು ಎಂದು ತಿಳಿದಿರುವಂತಹ ಮನುಷ್ಯರು ಒಬ್ಬರೂ ಇಲ್ಲ. ಎಲ್ಲಿಂದ ಬಂದಿದ್ದಾರೋ ಅಲ್ಲಿಗೆ ಹೊರಟುಹೋಗುತ್ತಾರೆಂದು ತಿಳಿಯುತ್ತಾರೆ ಆದ್ದರಿಂದ ತಂದೆಯು ಈಗ ತಿಳಿಸುತ್ತಾರೆ - ಮಕ್ಕಳೇ, ಬುದ್ಧಿಯಿಂದ ನಿರ್ಣಯ ತೆಗೆದುಕೊಳ್ಳಿ. ಭಕ್ತಿಮಾರ್ಗದಲ್ಲಿಯೂ ಸಹ ನೀವು ವೇದ-ಶಾಸ್ತ್ರಗಳನ್ನು ಓದುತ್ತೀರಿ. ಈಗ ನಾನು ನಿಮಗೆ ಜ್ಞಾನವನ್ನು ತಿಳಿಸುತ್ತೇನೆ. ಭಕ್ತಿ ಸರಿಯೋ ಅಥವಾ ನಾವು ಸರಿಯಾಗಿದ್ದೇವೆಯೋ? ನೀವು ನಿರ್ಣಯ ಮಾಡಿ. ತಂದೆಯು (ರಾಮ) ಸತ್ಯವಾಗಿದ್ದಾರೆ, ರಾವಣನು ಅಸತ್ಯವಾಗಿದ್ದಾನೆ. ಪ್ರತಿ ಮಾತಿನಲ್ಲಿ ಅಸತ್ಯವನ್ನು ಹೇಳುತ್ತಾರೆ. ನೀವು ತಿಳಿಯುತ್ತೀರಿ - ಮೊದಲು ನಾವೆಲ್ಲರೂ ಅಸತ್ಯವನ್ನೇ ಹೇಳುತ್ತಿದ್ದೆವು, ದಾನ-ಪುಣ್ಯ ಇತ್ಯಾದಿಗಳನ್ನು ಮಾಡುತ್ತಿದ್ದರೂ ಸಹ ಏಣಿಯನ್ನು ಕೆಳಗೆ ಇಳಿಯುತ್ತಾರೆ. ನೀವು ಆತ್ಮಗಳಿಗೆ ದಾನ-ಪುಣ್ಯವನ್ನು ನೀಡುತ್ತೀರಿ. ಪಾಪಾತ್ಮರು ಪಾಪಾತ್ಮರಿಗೇ ಕೊಡುತ್ತಾರೆ ಅಂದಮೇಲೆ ಪುಣ್ಯಾತ್ಮರು ಹೇಗಾಗುತ್ತಾರೆ? ಸತ್ಯಯುಗದಲ್ಲಿ ಆತ್ಮಗಳ ಲೇವಾದೇವಿ ಇರುವುದೇ ಇಲ್ಲ. ಇಲ್ಲಂತೂ ಲಕ್ಷಾಂತರ ರೂಪಾಯಿಗಳ ಸಾಲವನ್ನು ತೆಗೆದುಕೊಳ್ಳುತ್ತಿರುತ್ತಾರೆ. ಈ ರಾವಣರಾಜ್ಯದಲ್ಲಿ ಹೆಜ್ಜೆ-ಹೆಜ್ಜೆಯಲ್ಲಿ ಮನುಷ್ಯರಿಗೆ ದುಃಖವಿದೆ. ಈಗ ನೀವು ಸಂಗಮಯುಗದಲ್ಲಿದ್ದೀರಿ. ನಿಮ್ಮ ಹೆಜ್ಜೆ-ಹೆಜ್ಜೆಯಲ್ಲಿ ಪದಮದಷ್ಟು ಸಂಪಾದನೆ ಇದೆ. ದೇವತೆಗಳು ಪದಮಾಪತಿಗಳಾದರು ಹೇಗೆ? ಇದು ಯಾರಿಗೂ ಗೊತ್ತಿಲ್ಲ. ಸ್ವರ್ಗವಂತೂ ಅವಶ್ಯವಾಗಿತ್ತು, ಅದರ ಚಿನ್ಹೆಗಳಿವೆ. ಬಾಕಿ ಅವರಿಗೆ ನಾವು ಹಿಂದಿನ ಜನ್ಮದಲ್ಲಿ ಯಾವ ಕರ್ಮ ಮಾಡಿದ ಕಾರಣ ಈ ರಾಜ್ಯ ಸಿಕ್ಕಿತು ಎಂದು ತಿಳಿದೇ ಇರುವುದಿಲ್ಲ. ಅದಂತೂ ಹೊಸ ಸೃಷ್ಟಿಯಾಗಿದೆ. ಅಲ್ಲಿ ವ್ಯರ್ಥ ವಿಚಾರಗಳೇ ಬರುವುದಿಲ್ಲ ಆದ್ದರಿಂದ ಅದಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ಇದು 5000 ವರ್ಷಗಳ ಮಾತಾಗಿದೆ. ನೀವು ಈಗ ಸುಖಕ್ಕಾಗಿ ಪಾವನರಾಗಲು ಓದುತ್ತೀರಿ. ತಂದೆಯು ಬಹಳಷ್ಟು ಯುಕ್ತಿಗಳನ್ನು ತಿಳಿಸುತ್ತಾರೆ ಮತ್ತು ಬಹಳ ಚೆನ್ನಾಗಿ ತಿಳಿಸುತ್ತಾರೆ. ಶಾಂತಿಧಾಮವು ಆತ್ಮಗಳಿರುವ ಸ್ಥಾನವಾಗಿದೆ, ಅದನ್ನು ಮಧುರ ಮನೆ ಎಂದು ಹೇಳಲಾಗುತ್ತದೆ. ಹೇಗೆ ವಿದೇಶದಿಂದ ಬರುವಾಗ ನಾವೀಗ ಮಧುರ ಮನೆಗೆ ಹೋಗುತ್ತೇವೆ ಎಂದು ತಿಳಿಯುತ್ತಾರೆ ಅದೇ ರೀತಿ ನಿಮ್ಮ ಮನೆ ಶಾಂತಿಧಾಮವಾಗಿದೆ. ತಂದೆಯೂ ಸಹ ಶಾಂತಿಯ ಸಾಗರರಾಗಿದ್ದಾರಲ್ಲವೇ. ಯಾರ ಪಾತ್ರ ಅಂತ್ಯದಲ್ಲಿ ಇರುತ್ತದೆಯೋ ಅವರು ಎಷ್ಟೊಂದು ಶಾಂತಿಯಲ್ಲಿ ಇರಬಹುದು! ತಂದೆಯದು ಬಹಳ ಚಿಕ್ಕ ಪಾತ್ರವೆಂದು ಹೇಳಬಹುದು. ಈ ನಾಟಕದಲ್ಲಿ ನಿಮ್ಮದು ನಾಯಕ-ನಾಯಕಿಯ ಪಾತ್ರವಾಗಿದೆ, ನೀವು ವಿಶ್ವದ ಮಾಲೀಕರಾಗುತ್ತೀರಿ. ಈ ನಶೆಯೂ ಎಂದೂ ಯಾರಲ್ಲಿಯೂ ಇರಲು ಸಾಧ್ಯವಿಲ್ಲ ಮತ್ತ್ಯಾರ ಅದೃಷ್ಟದಲ್ಲಿಯೂ ಸ್ವರ್ಗದ ಸುಖವಿಲ್ಲ. ಇದು ತಾವು ಮಕ್ಕಳಿಗೇ ಸಿಗುತ್ತದೆ. ಯಾವ ಮಕ್ಕಳನ್ನು ತಂದೆಯು ನೋಡುತ್ತಾರೆ, ಬಾಬಾ ನಿಮ್ಮೊಂದಿಗೇ ಮಾತನಾಡುತ್ತೇನೆ, ನಿಮ್ಮೊಂದಿಗೇ ಹೇಳುತ್ತೇನೆ......ಎಂದು ಹೇಳುತ್ತಾರೆಯೋ ಅಂತಹ ಮಕ್ಕಳನ್ನು ನೋಡಿ, ನಾನು ನೀವು ಮಕ್ಕಳನ್ನು ನೋಡಿ-ನೋಡಿ ಬಹಳ ಹರ್ಷಿತನಾಗುತ್ತೇನೆ ಎಂದು ತಂದೆಯು ಹೇಳುತ್ತಾರೆ. ನಾನು 5000 ವರ್ಷಗಳ ನಂತರ ಬಂದಿದ್ದೇನೆ. ನಾನು ಮಕ್ಕಳನ್ನು ದುಃಖಧಾಮದಿಂದ ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ ಏಕೆಂದರೆ ಕಾಮಚಿತೆಯನ್ನು ಏರುತ್ತಾ-ಏರುತ್ತಾ ಸುಟ್ಟು ಭಸ್ಮವಾಗಿಬಿಟ್ಟಿದ್ದಾರೆ. ಈಗ ಹೋಗಿ ಅಂತಹವರನ್ನು ಸ್ಮಶಾನದಿಂದ ಹೊರತೆಗೆಯಬೇಕಾಗಿದೆ. ಎಲ್ಲಾ ಆತ್ಮಗಳು ಹಾಜರಿದ್ದಾರೆ ಅಲ್ಲವೇ. ಅವರನ್ನು ಪಾವನರನ್ನಾಗಿ ಮಾಡಬೇಕಾಗಿದೆ.

ತಂದೆಯು ಹೇಳುತ್ತಾರೆ - ಮಕ್ಕಳೇ, ವಿದ್ಯೆಯಿಂದ ಒಬ್ಬ ಸದ್ಗುರುವನ್ನು ನೆನಪು ಮಾಡಿ ಮತ್ತೆಲ್ಲರನ್ನೂ ಮರೆಯಿರಿ. ಒಬ್ಬರೊಂದಿಗೇ ಸಂಬಂಧವನ್ನು ಇಡಬೇಕು. ನಿಮ್ಮ ಹೇಳಿಕೆಯೂ ಇದೇ ಆಗಿತ್ತು - ತಾವು ಬಂದರೆ ತಮ್ಮ ವಿನಃ ನಮಗೆ ಮತ್ತ್ಯಾರೂ ಇಲ್ಲ, ಮತದಂತೆಯೇ ನಡೆಯುತ್ತೇವೆ, ಶ್ರೇಷ್ಠರಾಗುತ್ತೇವೆ. ಸರ್ವಶ್ರೇಷ್ಠ ಭಗವಂತನೆಂಬ ಗಾಯನವಿದೆ, ಅವರ ಮತವೂ ಸರ್ವಶ್ರೇಷ್ಠವಾಗಿದೆ. ಸ್ವಯಂ ತಂದೆಯೇ ಹೇಳುತ್ತಾರೆ - ಈಗ ನಿಮಗೆ ಯಾವ ಜ್ಞಾನವನ್ನು ಕೊಡುತ್ತೇನೆ ಅದು ಮತ್ತೆ ಪ್ರಾಯಃಲೋಪವಾಗಿಬಿಡುತ್ತದೆ. ಭಕ್ತಿಮಾರ್ಗದ ಶಾಸ್ತ್ರಗಳು ಪರಂಪರೆಯಿಂದ ನಡೆದುಬರುತ್ತದೆ. ರಾವಣನೂ ಸಹ ಪರಂಪರೆಯಿಂದ ನಡೆದು ಬಂದನು ಎಂದು ಹೇಳುತ್ತಾರೆ ಅಂದಾಗ ರಾವಣನು ಯಾವಾಗಿನಿಂದ ಸುಡುತ್ತೀರಿ, ಏಕೆ ಸುಡುತ್ತೀರಿ? ಏನೂ ಗೊತ್ತಿಲ್ಲ, ಅರ್ಥವನ್ನು ತಿಳಿಯದ ಕಾರಣ ಎಷ್ಟೊಂದು ಖರ್ಚು ಮಾಡುತ್ತಾರೆ. ಅನೇಕ ಸಂದರ್ಶಕರನ್ನು ಕರೆಸುತ್ತಾರೆ. ರಾವಣನನ್ನು ಸುಡುವ ಮಹೋತ್ಸವವನ್ನು ಆಚರಿಸುತ್ತಾರೆ. ರಾವಣನನ್ನು ಯಾವಾಗಿನಿಂದ ಸುಡುತ್ತಾ ಬರುತ್ತಾರೆಂದು ನೀವು ತಿಳಿದುಕೊಳ್ಳಲು ಸಾಧ್ಯವಿಲ್ಲ. ದಿನ-ಪ್ರತಿದಿನ ದೊಡ್ಡದನ್ನಾಗಿ ಮಾಡುತ್ತಾ ಹೋಗುತ್ತಾರೆ. ಇದು ಪರಂಪರೆಯಿಂದ ಬಂದಿದೆ ಎಂದು ಹೇಳುತ್ತಾರೆ ಆದರೆ ಈ ರೀತಿ ಆಗಲು ಸಾಧ್ಯವಿಲ್ಲ. ಕೊನೆಗೂ ರಾವಣನನ್ನು ಎಲ್ಲಿಯವರೆಗೆ ಸುಡುತ್ತಾ ಇರುತ್ತಾರೆ? ನೀವಂತೂ ತಿಳಿದುಕೊಂಡಿದ್ದೀರಿ - ಇನ್ನೂ ಸ್ವಲ್ಪ ಸಮಯ ಮಾತ್ರ ಇದೆ ನಂತರ ರಾವಣನ ರಾಜ್ಯವಿರುವುದೇ ಇಲ್ಲ. ಈ ರಾವಣನು ಎಲ್ಲರಿಗಿಂತ ದೊಡ್ಡ ಶತ್ರುವಾಗಿದ್ದಾನೆ. ಈ ರಾವಣನ ಮೇಲೆ ವಿಜಯಗಳಿಸಬೇಕಾಗಿದೆ. ಮನುಷ್ಯರ ಬುದ್ಧಿಯಲ್ಲಿ ಬಹಳ ಮಾತುಗಳಿವೆ. ನಿಮಗೆ ಗೊತ್ತಿದೆ, ಈ ನಾಟಕದಲ್ಲಿ ಕ್ಷಣ-ಪ್ರತಿಕ್ಷಣ ಏನೆಲ್ಲಾ ನಡೆಯುತ್ತಾ ಬಂದಿದೆಯೋ ಎಲ್ಲವೂ ನಿಗಧಿಯಾಗಿದೆ. ಎಷ್ಟು ಗಂಟೆ, ಎಷ್ಟು ಸಮಯ, ಎಷ್ಟು ತಿಂಗಳು ನಮ್ಮ ಪಾತ್ರನಡೆಯುತ್ತದೆ ಎಂದು ತಿಥಿ-ತಾರೀಖು ಎಲ್ಲಾ ಲೆಕ್ಕವನ್ನು ನೀವು ಹೇಳಬಹುದು. ಈ ಜ್ಞಾನವೆಲ್ಲಾ ಬುದ್ಧಿಯಲ್ಲಿ ಇರಬೇಕು. ಇದನ್ನು ನಮಗೆ ತಂದೆಯು ತಿಳಿಸುತ್ತಾರೆ. ನಾನು ಪತಿತಪಾವನನಾಗಿದ್ದೇನೆ, ಪತಿತಪಾವನನೇ ಬಂದು ಪಾವನ ಮಾಡು ಎಂದು ನನ್ನನು ಕರೆಯುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ಪಾವನ ಪ್ರಪಂಚ ಶಾಂತಿಧಾಮ, ಸುಖಧಾಮವಾಗಿರುತ್ತದೆ. ಈಗಂತೂ ಎಲ್ಲರೂ ಪತಿತರಾಗಿದ್ದಾರೆ. ಸದಾ ಬಾಬಾ, ಬಾಬಾ ಎನ್ನುತ್ತಾ ಇರಿ, ಇದನ್ನು ಮರೆಯಬಾರದು ಆಗ ಸದಾ ಶಿವತಂದೆಯ ನೆನಪಿರುತ್ತದೆ. ಇವರು ನಮ್ಮ ತಂದೆ ಆಗಿದ್ದಾರೆ. ಮೊಟ್ಟಮೊದಲು ಇವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಬಾಬಾ ಎಂದು ಹೇಳುವುದರಿಂದಲೇ ಆಸ್ತಿಯ ಖುಷಿಯಲ್ಲಿ ಬರುತ್ತಾರೆ. ಕೇವಲ ಭಗವಂತ ಅಥವಾ ಈಶ್ವರ ಎಂದು ಹೇಳುವುದರಿಂದ ಎಂದೂ ಆಸ್ತಿಯ ವಿಚಾರಗಳು ಬರುವುದಿಲ್ಲ. ಬೇಹದ್ದಿನ ತಂದೆಯು ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ ಎಂದು ಎಲ್ಲರಿಗೆ ತಿಳಿಸಿ. ಇವರು ಭಗವಂತನ ರಥವಾಗಿದ್ದಾರೆ ಇವರ ಮೂಲಕ ನಾನು ನೀವು ಮಕ್ಕಳನ್ನು ಈ ರೀತಿ ಮಾಡುತ್ತೇನೆ ಎಂದು ತಿಳಿಸುತ್ತಾರೆ. ಈ ಬ್ಯಾಡ್ಜಿನಲ್ಲಿ ಪೂರ್ಣ ಜ್ಞಾನವು ತುಂಬಿದೆ. ಅಂತಿಮದಲ್ಲಿ ನಿಮಗೆ ಶಾಂತಿಧಾಮ-ಸುಖಧಾಮವೇ ನೆನಪು ಇರುತ್ತದೆ. ದುಃಖಧಾಮವನ್ನಂತೂ ಮರೆಯುತ್ತಾ ಹೋಗುತ್ತೀರಿ. ನಂಬರ್ವಾರಾಗಿ ಎಲ್ಲರೂ ತಮ್ಮ-ತಮ್ಮ ಸಮಯದಲ್ಲಿ ಬರುತ್ತಾರೆ ಎಂದೂ ಸಹ ತಿಳಿದಿದೆ. ಇಸ್ಲಾಮಿ, ಬೌದ್ಧಿ, ಕ್ರಿಶ್ಚಯನ್ ಅನೇಕರಿದ್ದಾರೆ. ಅನೇಕ ಭಾಷೆಗಳಾಗಿವೆ, ಮೊದಲು ಒಂದು ಧರ್ಮವಿತ್ತು ಮತ್ತೆ ಅದರ ನಂತರ ಎಷ್ಟೊಂದು ಧರ್ಮಗಳು ಸ್ಥಾಪನೆ ಆಗಿವೆ. ಎಷ್ಟು ಯುದ್ಧಗಳಾಗಿವೆ. ಎಲ್ಲರೂ ಹೊಡೆದಾಡುತ್ತಾರೆ ಏಕೆಂದರೆ ನಿರ್ಧನಿಕರಾಗಿಬಿಡುತ್ತಾರಲ್ಲವೇ. ನಾನು ನಿಮಗೆ ಯಾವ ರಾಜ್ಯವನ್ನು ಕೊಡುತ್ತೇನೋ ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ತಂದೆ ಸ್ವರ್ಗದ ಆಸ್ತಿ ಕೊಡುತ್ತಾರೆ, ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಇದರಲ್ಲಿ ಅಖಂಡ, ಅಟಲ, ಅಡೋಲರಾಗಿರಬೇಕಾಗಿದೆ. ಮಾ0iÉುಯ ಬಿರುಗಾಳಿಗಳಂತೂ ಅವಶ್ಯವಾಗಿ ಬರಲಿದೆ. ಮೊದಲು ಯಾರು ಮುಂದಿರುತ್ತಾರೆಯೋ ಅವರು ಎಲ್ಲವನ್ನೂ ಅನುಭವ ಮಾಡುತ್ತಾರಲ್ಲವೇ! ಖಾಯಿಲೆ ಇತ್ಯಾದಿಗಳೆಲ್ಲವೂ ಸದಾಕಾಲಕ್ಕಾಗಿ ಸಮಾಪ್ತಿ ಆಗಲಿವೆ. ಆದ್ದರಿಂದ ಕರ್ಮಗಳ ಲೆಕ್ಕಾಚಾರ, ಖಾಯಿಲೆಗಳು ಮೊದಲಾದವು ಹೆಚ್ಚಾಗಿ ಬಂದರೆ ಅದಕ್ಕೆ ಹೆದರಬಾರದು. ಇವೆಲ್ಲವೂ ಅಂತಿಮದ್ದಾಗಿದೆ ಮತ್ತೆ ಇವು ಇರುವುದಿಲ್ಲ. ಇವೆಲ್ಲವೂ ಈಗ ಹೆಚ್ಚಾಗಿ ಬರುತ್ತವೆ. ವೃದ್ಧರನ್ನೂ ಸಹ ಮಾಯೆ ಯುವಕರನ್ನಾಗಿ ಮಾಡಿಬಿಡುತ್ತದೆ. ಮನುಷ್ಯರು ವಾನಪ್ರಸ್ಥವನ್ನು ತೆಗೆದುಕೊಳ್ಳುತ್ತಾರೆಂದರೆ ಅಲ್ಲಿ ಸ್ತ್ರೀ ಇರುವುದಿಲ್ಲ. ಸನ್ಯಾಸಿಗಳು ಕಾಡಿಗೆ ಹೊರಟುಹೋಗುತ್ತಾರೆ. ಅಲ್ಲಿಯೂ ಸ್ತ್ರೀಯರಿರುವುದಿಲ್ಲ, ಯಾರ ಕಡೆಯೂ ನೋಡುವುದಿಲ್ಲ. ಭಿಕ್ಷೆಯನ್ನು ಪಡೆದು ಹೊರಟುಹೋಗುತ್ತಾರೆ. ಮೊದಲೆಲ್ಲಾ ಸ್ತ್ರೀಯರ ಕಡೆ ನೋಡುತ್ತಲೂ ಇರಲಿಲ್ಲ. ನೋಡಿದರೆ ಅವಶ್ಯವಾಗಿ ಬುದ್ಧಿಯು ಹೋಗುವುದೆಂದು ತಿಳಿಯುತ್ತಾರೆ. ಸಹೋದರ-ಸಹೋದರಿಯ ಸಂಬಂಧದಲ್ಲಿಯೂ ಬುದ್ಧಿ ಹೋಗುತ್ತದೆ ಆದ್ದರಿಂದ ತಂದೆ ಹೇಳುತ್ತಾರೆ ಸಹೋದರ-ಸಹೋದರ ಎಂದು ನೋಡಿ. ಶರೀರದ ಹೆಸರೂ ಇಲ್ಲ, ಇದು ಅತಿ ಉನ್ನತ ಗುರಿಯಾಗಿದೆ. ಒಮ್ಮೆಗೆ ಶಿಖರದ ಮೇಲೆ ಹೋಗಬೇಕಾಗಿದೆ. ರಾಜಧಾನಿಯು ಸ್ಥಾಪನೆ ಆಗುತ್ತಿದೆ, ಇದರಲ್ಲಿ ಬಹಳ ಶ್ರಮವಿದೆ. ನಾವಂತೂ ಲಕ್ಷ್ಮೀ-ನಾರಾಯಣರಾಗುತ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ ಆಗಿರಿ, ಶ್ರೀಮತದಂತೆ ನಡೆಯಿರಿ. ಮಾಯೆಯ ಬಿರುಗಾಳಿಗಳಂತೂ ಬರುತ್ತವೆ ಆದರೆ ಕರ್ಮೇಂದ್ರಿಯಗಳಿಂದ ಏನೂ ತಪ್ಪು ಮಾಡಬಾರದು. ದಿವಾಳಿಯಂತೂ ಆಗಿಯೇ ಆಗುತ್ತಾರೆ, ಜ್ಞಾನದಲ್ಲಿ ಬಂದಿರುವುದರಿಂದ ದಿವಾಳಿಯಾದರು ಎಂದಲ್ಲ. ಇದಂತೂ ನಡೆಯುತ್ತದೆ, ತಂದೆ ಹೇಳುತ್ತಾರೆ ನಾನು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುವುದಕ್ಕಾಗಿಯೇ ಬಂದಿದ್ದೇನೆ. ಮಕ್ಕಳು ಕೆಲವೊಮ್ಮೆ ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತಾರೆ ಅನ್ಯರಿಗೂ ತಿಳಿಸುತ್ತಾರೆ ಮತ್ತೆ ದಿವಾಳಿಯಾಗುತ್ತಾರೆ.... ಮಾಯೆಯು ಬಹಳ ಶಕ್ತಿಶಾಲಿಯಾಗಿದೆ ಇದರಲ್ಲಿ ಒಳ್ಳೊಳ್ಳೆಯ ಮಕ್ಕಳೂ ಬಿದ್ದು ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನ ಸರ್ವೀಸ್ ಮಾಡುವಂತಹ ಮಕ್ಕಳೇ ನನಗೆ ಬಹಳ ಪ್ರಿಯರಾಗಿದ್ದಾರೆ. ಯಾರು ಅನೇಕರನ್ನು ಸುಖದಾಯಿಯನ್ನಾಗಿ ಮಾಡುತ್ತಾರೆಯೋ ಅಂತಹ ಮಕ್ಕಳನ್ನು ನೆನಪು ಮಾಡುತ್ತಿರುತ್ತೇನೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾರದೇ ನಾಮ-ರೂಪದಲ್ಲಿ ಸಿಲುಕಿ ಕುಲಕಳಂಕಿತರಾಗಬಾರದು. ಮಾಯೆಯ ಮೋಸದಲ್ಲಿ ಬಂದು ಪರಸ್ಪರ ದುಃಖವನ್ನು ಕೊಡಬಾರದಾಗಿದೆ. ತಂದೆಯಿಂದ ಸಮರ್ಥತೆಯ ಆಸ್ತಿಯನ್ನು ಪಡೆಯಬೇಕು.

2. ಸದಾ ಹರ್ಷಿತರಾಗಿರುವ ಸಂಸ್ಕಾರವನ್ನು ಇಲ್ಲಿಂದಲೇ ತುಂಬಿಸಿಕೊಳ್ಳಬೇಕಾಗಿದೆ. ಈಗ ಪಾಪಾತ್ಮರೊಂದಿಗೆ ಕೊಡುವುದು-ತೆಗೆದುಕೊಳ್ಳುವುದು ಮಾಡಬಾರದು, ಖಾಯಿಲೆಗಳಿಗೆ ಹೆದರಬಾರದು ಎಲ್ಲಾ ಲೆಕ್ಕಾಚಾರವನ್ನು ಈಗಲೇ ಸಮಾಪ್ತಿ ಮಾಡಿಕೊಳ್ಳಬೇಕು.

ವರದಾನ:
ವಿಲ್ ಪವರ್ ಮೂಲಕ ಸೆಕೆಂಡ್ ನಲ್ಲಿ ವ್ಯರ್ಥಕ್ಕೆ ಫುಲ್ ಸ್ಟಾಪ್ ಹಾಕುವಂತಹ ಅಶರೀರಿ ಭವ

ಸೆಕೆಂಡ್ನಲ್ಲಿ ಅಶರೀರಿ ಆಗಲು ಅಡಿಪಾಯ-ಇದು ಬೇಹದ್ದಿನ ವೈರಾಗ್ಯ ವೃತ್ತಿಯಾಗಿದೆ. ಈ ವೈರಾಗ್ಯ ಇಂತಹ ಯೋಗ್ಯ ಧರಣಿಯಾಗಿದೆ ಅದರಲ್ಲಿ ಏನೆ ಹಾಕಿದರೂ ಫಲ ತಕ್ಷಣ ಬರುವುದು. ಆದ್ದರಿಂದ ಈಗ ಇಂತಹ ವಿಲ್ ಪವರ್ ಇರಲಿ ಯಾವುದು ಸಂಕಲ್ಪ ಮಾಡಿದೊಡನೆ-ವ್ಯರ್ಥ ಸಮಾಪ್ತಿ, ಆಗ ಸೆಕೆಂಡ್ ನಲ್ಲಿ ಸಮಾಪ್ತಿಯಾಗಿಬಿಡಬೇಕು, ಯಾವಾಗ ಬೇಕೊ, ಎಲ್ಲಿ ಬೇಕೊ, ಯಾವ ಸ್ಥಿತಿಯಲ್ಲಿ ಬೇಕೊ ಸೆಕೆಂಡ್ ನಲ್ಲಿ ಸೆಟ್ ಮಾಡಿ, ಸೇವೆ ಸೆಳೆಯಬಾರದು, ಸೆಕೆಂಡ್ ನಲ್ಲಿ ಫುಲ್ ಸ್ಟಾಪ್ ಹಾಕಬೇಕು ಆಗ ಸಹಜವಾಗಿ ಅಶರೀರಿಗಳಾಗಿಬಿಡುವಿರಿ.

ಸ್ಲೋಗನ್:
ತಂದೆ ಸಮಾನ ಆಗ ಬೇಕಾದರೆ ಕೆಟ್ಟಿರುವುದನ್ನು ಸರಿಪಡಿಸುವಂತಹವರಾಗಿ.