11.02.24    Avyakt Bapdada     Kannada Murli    24.02.98     Om Shanti     Madhuban


ತಂದೆಯೊಂದಿಗೆ, ಸೇವೆಯೊಂದಿಗೆ ಮತ್ತು ಪರಿವಾರದೊಂದಿಗೆ ಪ್ರೀತಿಯನ್ನು ಇಟ್ಟುಕೊಳ್ಳಿರಿ ಆಗ ಪರಿಶ್ರಮದಿಂದ ಮುಕ್ತರಾಗುವಿರಿ.


ಇಂದು ನಾಲ್ಕಾರು ಕಡೆಯ ಮಕ್ಕಳು ತಮ್ಮ ತಂದೆಯ ಜಯಂತಿಯನ್ನು ಆಚರಿಸಲು ಬಂದಿದ್ದಾರೆ. ಭಲೇ ಸನ್ಮುಖದಲ್ಲಿ ಕುಳತಿರಲಿ, ಭಲೇ ಆಕಾರಿ ರೂಪದಲ್ಲಿ ತಂದೆಯ ಮುಂದೆಯಿದ್ದಾರೆ. ತಂದೆಯು ಎಲ್ಲಾ ಮಕ್ಕಳನ್ನು ನೋಡುತ್ತಿದ್ದಾರೆ ಒಂದು ಕಡೆ ಮಿಲನ ಆಚರಿಸುವ ಖುಷಿಯಿದೆ ಇನ್ನೊಂದು ಕಡೆ ಬೇಗ-ಬೇಗ ಬಾಪ್ದಾದಾರವರನ್ನು ಪ್ರತ್ಯಕ್ಷ ಮಾಡುವ ಸೇವೆಯ ಉಮ್ಮಂಗ-ಉತ್ಸಾಹವಿದೆ. ಬಾಪ್ದಾದಾರವರು ನಾಲ್ಕಾರು ಕಡೆಯ ಮಕ್ಕಳನ್ನು ನೋಡುತ್ತ-ನೋಡುತ್ತ ಪದಮ-ಪದಮದಷ್ಟು ಶುಭಾಷಯಗಳನ್ನು ಕೊಡುತ್ತಿದ್ದಾರೆ. ಹೇಗೆ ಮಕ್ಕಳು ತಂದೆಯ ಜಯಂತಿಯನ್ನು ಆಚರಿಸಲು ಕೋಣೆ- ಕೋಣೆಯಿಂದ, ದೂರ-ದೂರದಿಂದ ಬಂದಿದ್ದಾರೆ, ಬಾಪ್ದಾದಾರವರು ಸಹ ಮಕ್ಕಳ ಜನ್ಮ ದಿನವನ್ನು ಆಚರಿಸಲು ಬಂದಿದ್ದಾರೆ. ಎಲ್ಲದಕ್ಕಿಂತ ದೂರ ದೇಶದವರು ಯಾರಾಗಿದ್ದಾರೆ? ತಂದೆಯೇ ಅಥವಾ ನೀವೇ? ನೀವು ಹೇಳುವಿರಿ - ನಾವು ಬಹಳ ದೂರದಿಂದ ಬಂದಿದ್ದೇವೆ ಆದರೆ ತಂದೆಯು ಹೇಳುತ್ತಾರೆ ನಾನು ನಿಮಗಿಂತಲೂ ದೂರದೇಶದಿಂದ ಬಂದಿದ್ದೇನೆ. ಆದರೆ ನಿಮಗೆ ಸಮಯ ಬೇಕಾಗುತ್ತದೆ, ತಂದೆಗೆ ಸಮಯ ಬೇಕಾಗುವುದಿಲ್ಲ. ನಿಮ್ಮೆಲ್ಲರಿಗೂ ಪ್ಲೇನ್ (ವಿಮಾನ) ಅಥವಾ ರೈಲು ತೆಗೆದುಕೊಳ್ಳಬೇಕಾಗುತ್ತದೆ, ತಂದೆ ಕೇವಲ ರಥವನ್ನು ತೆಗೆದುಕೊಳ್ಳುತ್ತಾರೆ. ಈ ರೀತಿಯಲ್ಲ ಕೇವಲ ನೀವು ತಂದೆಯದ್ದನ್ನು ಆಚರಿಸಲು ಬಂದಿದ್ದೀರಿ ಆದರೆ ತಂದೆಯು ಆದಿಯ ಜೊತೆಗಾರ ಬ್ರಾಹ್ಮಣ ಆತ್ಮರ ಜನ್ಮದ ಜೊತೆ ಮಕ್ಕಳ ಜನ್ಮದಿನವನ್ನು ಆಚರಿಸಲು ಬಂದಿದ್ದಾರೆ ಏಕೆಂದರೆ ತಂದೆ ಒಬ್ಬರೇ ಅವತರಿತರಾಗುವುದಿಲ್ಲ ಆದರೆ ಬ್ರಹ್ಮಾ ಬ್ರಾಹ್ಮಣ ಮಕ್ಕಳ ಜೊತೆಯಲ್ಲಿ ದಿವ್ಯ ಜನ್ಮವನ್ನು ತೆಗೆದುಕೊಳ್ಳುತ್ತಾರೆ ಅರ್ಥಾತ್ ಅವತರಿತರಾಗುತ್ತಾರೆ. ಬ್ರಾಹ್ಮಣರಿಲ್ಲದೇ ಯಜ್ಞದ ರಚನೆ ತಂದೆಯು ಒಬ್ಬರೇ ಮಾಡಲು ಸಾಧ್ಯವಿಲ್ಲ. ಅಂದಾಗ ಯಜ್ಞವನ್ನು ರಚಿಸಿದರು, ಆಗ ನೀವೆಲ್ಲರು ಹುಟ್ಟಿದ್ದೀರಿ. ಎರಡು ವರ್ಷದವರಾಗಿರಬಹುದು, ಎರಡು ತಿಂಗಳಿನವರಾಗಿರಬಹುದು ಆದರೆ ನೀಮ್ಮೆಲ್ಲರಿಗೂ ಸಹ ದಿವ್ಯ ಬ್ರಾಹ್ಮಣ ಜನ್ಮದ ಶುಭಾಷಯಗಳು. ಈ ದಿವ್ಯ ಜನ್ಮ ಎಷ್ಟು ಶ್ರೇಷ್ಠವಾಗಿದೆ. ತಂದೆಯು ಸಹ ಪ್ರತಿಯೊಬ್ಬ ದಿವ್ಯ ಜನ್ಮಧಾರಿ ಬ್ರಾಹ್ಮಣ ಆತ್ಮರ ಭಾಗ್ಯದ ನಕ್ಷತ್ರವನ್ನು ಹೊಳೆಯುತ್ತಿರುವುದನ್ನು ನೋಡಿ ಹರ್ಷಿತರಾಗುತ್ತಾರೆ. ಮತ್ತು ಸದಾ ಇದೇ ಗೀತೆಯನ್ನು ಹಾಡುತ್ತೀರುತ್ತಾರೆ ವಾಹ್! ವಜ್ರ ಸಮಾನ ಜೀವನದ ಬ್ರಾಹ್ಮಣ ಮಕ್ಕಳೇ ವಾಹ್! ವಾಹ್ ವಾಹ್ ಇದೆಯಲ್ಲವೇ? ತಂದೆಯು ವಾಹ್ ವಾಹ್ ಮಕ್ಕಳನ್ನಾಗಿ ಮಾಡಿದರು. ಈ ಅಲೌಕಿಕ ಜನ್ಮ ತಂದೆಯದು ಭಿನ್ನವಾಗಿದ್ದರೆ ನೀವು ಮಕ್ಕಳದು ಸಹ ಭಿನ್ನ ಮತ್ತು ಪ್ರಿಯವಾಗಿದೆ. ಇವರೊಬ್ಬರೇ ಇಂತಹ ತಂದೆಯಾಗಿದ್ದಾರೆ ಯಾರ ಜನ್ಮ ಅಥವಾ ಜಯಂತಿ ಮತ್ತೆ ಯಾರದ್ದೂ ಈ ರೀತಿಯಾಗಿಲ್ಲ, ಆಗುವುದಿಲ್ಲ. ನಿರಾಕಾರ ಮತ್ತು ದಿವ್ಯ ಜನ್ಮ; ಬೇರೆಲ್ಲಾ ಆತ್ಮರದ್ದು ಜನ್ಮ ತಮ್ಮ-ತಮ್ಮ ಸಾಕಾರ ಶರೀರದಲ್ಲಿ ಆಗುತ್ತದೆ ಆದರೆ ನಿರಾಕಾರ ತಂದೆಯ ಜನ್ಮ ಪರಕಾಯ ಪ್ರವೇಶದಿಂದ ಆಗುತ್ತದೆ. ಇಡೀ ಕಲ್ಪದಲ್ಲಿ ಹೀಗೆ ಈ ವಿಧಿಯಿಂದ ಯಾರದಾದರೂ ಜನ್ಮವಾಗಿದೆಯೇ? ಒಬ್ಬ ತಂದೆಯದ್ದೇ ಇಂತಹ ಭಿನ್ನ ಜನ್ಮವಾಗುತ್ತದೆ ಯಾವುದನ್ನು ಶಿವಜಯಂತಿ ರೂಪದಲ್ಲಿ ಭಕ್ತರು ಆಚರಿಸಲು ಬಂದಿದ್ದಾರೆ ಅದಕ್ಕಾಗಿ ಈ ದಿವ್ಯ ಜನ್ಮದ ಮಹತ್ವವನ್ನು ನೀವು ತಿಳಿದುಕೊಂಡಿದ್ದೀರಿ, ಭಕ್ತರು ತಿಳಿದುಕೊಂಡಿಲ್ಲ ಆದರೆ ಏನು ಕೇಳಿದ್ದಾರೆ ಅದರ ಪ್ರಮಾಣ ಶ್ರೇಷ್ಠಾತಿ ಶ್ರೇಷ್ಠವೆಂದು ತಿಳಿದು ಆಚರಿಸುತ್ತಾ ಬಂದಿದ್ದಾರೆ. ನೀವು ಮಕ್ಕಳು ಕೇವಲ ಆಚರಿಸುವುದಿಲ್ಲ ಆದರೆ ಆಚರಿಸುವುದರ ಜೊತೆಯಲ್ಲಿ ಸ್ವಯಂನ್ನು ತಂದೆಯ ಸಮಾನ ಮಾಡಿಕೊಳ್ಳುತ್ತೀರಿ. ಅಲೌಕಿಕ ದಿವ್ಯ ಜನ್ಮದ ಮಹತ್ವವನ್ನು ತಿಳಿದುಕೊಂಡಿದ್ದೀರಿ. ಬೇರೆ ಯಾರದ್ದೂ ತಂದೆಯ ಜೊತೆ ಮಕ್ಕಳದ್ದು ಜೊತೆ-ಜೊತೆಯಲ್ಲಿ ಜನ್ಮವಾಗುವುದಿಲ್ಲ ಆದರೆ ಶಿವ ಜಯಂತಿ ಅರ್ಥಾತ್ ತಂದೆಯ ದಿವ್ಯ ಜನ್ಮದ ಜೊತೆಯಲ್ಲಿ ಮಕ್ಕಳದ್ದು ಜನ್ಮವಿದೆ, ಅದಕ್ಕಾಗಿಯೇ ಡೈಮಂಡ್ ಜೂಬಲಿಯನ್ನು ಆಚರಿಸಿದ್ದೀರಲ್ಲವೇ. ಅಂದಾಗ ತಂದೆಯ ಜೊತೆಯಲ್ಲಿ ಮಕ್ಕಳದ್ದು ದಿವ್ಯ ಜನ್ಮವಾಗಿದೆ. ಕೇವಲ ಈ ಜಯಂತಿಯನ್ನು ವಜ್ರ ಸಮಾನ ಜಯಂತಿ ಎಂದು ಹೇಳುತ್ತೀರಿ ಆದರೆ ವಜ್ರ ಸಮಾನ ಜಯಂತಿಯನ್ನು ಆಚರಿಸಲು ಸ್ವಯಂ ವಜ್ರ ಸಮಾನ ಜೀವನದಲ್ಲಿ ಬಂದು ಬಿಡುತ್ತೀರಿ. ಈ ರಹಸ್ಯವನ್ನು ಎಲ್ಲಾ ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ ಮತ್ತು ಬೇರೆಯವರಿಗೂ ತಿಳಿಸುತ್ತೀರುತ್ತೀರಿ. ಬಾಪ್ದಾದಾರವರು ಸಮಾಚಾರವನ್ನು ಕೇಳುತ್ತಿರುತ್ತಾರೆ, ನೋಡುತ್ತಲೂ ಇರುತ್ತಾರೆ ಮಕ್ಕಳು ತಂದೆಯ ದಿವ್ಯ ಜನ್ಮದ ಮಹತ್ವವನ್ನು ಎಷ್ಟು ಉಮಂಗ ಉತ್ಸಾಹದಿಂದ ಆಚರಿಸುತ್ತಿರುತ್ತಾರೆ. ಬಾಪ್ದಾದಾರವರು ನಾಲ್ಕಾರು ಕಡೆಯ ಸೇವಧಾರಿ ಮಕ್ಕಳಿಗೆ ಸಾಹಸದ ರಿಟರ್ನ್ನಲ್ಲಿ ಸಹಾಯ ಮಾಡುತ್ತಿರುತ್ತಾರೆ. ಮಕ್ಕಳ ಸಾಹಸ ಮತ್ತು ತಂದೆಯ ಸಹಯೋಗವಿದೆ.

ಇತ್ತೀಚೆಗೆ ಬಾಪ್ದಾದಾರವರ ಬಳಿ ಎಲ್ಲಾ ಮಕ್ಕಳದ್ದು ಒಂದೇ ಸ್ನೇಹದ ಸಂಕಲ್ಪ ಪದೇ-ಪದೇ ಬರುತ್ತದೆ ಈಗ ತಂದೆಯ ಸಮಾನ ಬೇಗ ಬೇಗ ಆಗಲೇಬೇಕು. ತಂದೆಯು ಸಹ ಹೇಳುತ್ತಾರೆ - ಮಧುರ ಮಕ್ಕಳೇ, ಆಗಲೇಬೇಕು. ಪ್ರತಿಯೊಬ್ಬರಿಗೂ ದೃಢ ನಿಶ್ಚಯವಿದೆ ಮತ್ತು ಅಂಡರ್ಲೈನ್ ಮಾಡಿಕ್ಕೊಳ್ಳಿರಿ ನಾವು ಆಗಿಲ್ಲವೆಂದರೆ ಮತ್ತ್ಯಾರು ಆಗುವರು. ನಾವೇ ಆಗಿದ್ದೇವು, ನಾವೇ ಆಗಿದ್ದೇವೆ ಮತ್ತು ನಾವೇ ಪ್ರತಿ ಕಲ್ಪದಲ್ಲಿ ಆಗುತ್ತಿರುತ್ತೇವೆ. ಇದು ಪಕ್ಕಾ ನಿಶ್ಚಯವಿದೆಯಲ್ಲವೇ? ಡಬಲ್ ವಿದೇಶಿಯರು ಸಹ ಶಿವ ಜಯಂತಿ ಆಚರಿಸಲು ಬಂದಿದ್ದಾರೆ? ಒಳ್ಳೆಯದು, ಡಬಲ್ ವಿದೇಶಿಯರು ಕೈ ಎತ್ತಿರಿ. ಬಾಪ್ದಾದಾರವರು ನೋಡುತ್ತಿದ್ದಾರೆ ಡಬಲ್ ವಿದೇಶಿಯರಿಗೆ ಎಲ್ಲದಕ್ಕಿಂತ ಹೆಚ್ಚು ಇದೇ ಉಮಂಗ ಉತ್ಸಾಹವಿದೆ ವಿಶ್ವದ ಯಾವುದೇ ಮೂಲೆ ಉಳಿಯಬಾರದು. ಭಾರತಕ್ಕೆ ಸೇವೆಗಾಗಿ ಸಾಕಷ್ಟು ಸಮಯ ಸಿಕ್ಕಿದೆ ಮತ್ತು ಭಾರತದವರು ಹಳ್ಳಿ-ಹಳ್ಳಿಯಲ್ಲಿ ಸಂದೇಶವನ್ನು ಕೊಟ್ಟಿದ್ದಾರೆ. ಆದರೆ ಡಬಲ್ ವಿದೇಶಿಯರಿಗೆ ಸೇವೆಗೆ ಭಾರತಕ್ಕಿಂತ ಕಡಿಮೆ ಸಮಯ ಸಿಕ್ಕಿದೆ. ಆದರೂ ಸಹ ಉಮಂಗ-ಉತ್ಸಾಹದ ಕಾರಣ ಬಾಪ್ದಾದಾರವರ ಮುಂದೆ ಸೇವೆಯ ಪುರಾವೆ ಚೆನ್ನಾಗಿ ತಂದಿದ್ದೀರಿ ಮತ್ತು ತರುತ್ತೀರಿ. ಭಾರತದಲ್ಲಿ ವರ್ತಮಾನ ಸಮಯ ವರ್ಗೀಕರಣದ ಸೇವೆಗಳು ಆರಂಭವಾಗಿವೆ, ಅವುಗಳ ಕಾರಣವೂ ಎಲ್ಲಾ ವರ್ಗದವರಿಗೆ ಸಂದೇಶ ಸಿಗುವುದು ಸಹಜವಾಗಿ ಬಿಟ್ಟಿದೆ ಏಕೆಂದರೆ ಪ್ರತಿಯೊಂದು ವರ್ಗವು ತಮ್ಮ ವರ್ಗವೂ ಮುಂದುವರೆಯಲು ಬಯಸುತ್ತಾರೆಂದರೆ ಈ ವರ್ಗೀಕರಣದ ಆವಿಶ್ಕಾರ ಚೆನ್ನಾಗಿದೆ. ಇದರಿಂದ ಭಾರತದ ಸೇವೆಯಲ್ಲಿ ವಿಶೇಷ ಆತ್ಮರು ಬರುವುದು ಒಳ್ಳೆಯ ಪ್ರಭಾವ ಬೀರುತ್ತದೆ. ಚೆನ್ನಾಗೆನಿಸುತ್ತದೆಯಲ್ಲವೇ. ವರ್ಗೀಕರಣದ ಸೇವೆ ಚೆನ್ನಾಗಿದೆಯೇ? ವಿದೇಶದವರೂ ತಮ್ಮ ಒಳ್ಳೊಳ್ಳೆಯ ಗ್ರೂಪ್ ತೆಗೆದುಕೊಂಡು ಬರುತ್ತಾರೆ, ರಿಟ್ರೀಟ್ ಮಾಡಿಸಿಸುತ್ತಾರೆ, ವಿಧಿ ಚೆನ್ನಾಗಿದೆ. ಹೇಗೆ ಭಾರತದಲ್ಲಿ ವರ್ಗೀಕರಣದಿಂದ ಸೇವೆಯಲ್ಲಿ ಅವಕಾಶವು ಸಿಗುತ್ತದೆ, ಹಾಗೆಯೇ ಇವರದೂ ಈ ವಿಧಿ ಬಹಳ ಚೆನ್ನಾಗಿದೆ. ಬಾಪ್ದಾದಾರವರಿಗೆ ಎರಡು ಕಡೆಯ ಸೇವೆ ಇಷ್ಟವಿದೆ, ಚೆನ್ನಾಗಿದೆ. ಜಗದೀಶ ಮಗುವು ಈ ಆವಿಷ್ಕಾರ ಚೆನ್ನಾಗಿ ಮಾಡಿದ್ದಾರೆ ಮತ್ತು ವಿದೇಶದಲ್ಲಿ ಈ ರಿಟ್ರೀಟ್, ಭಾಷಣಗಳು ಯಾರು ಆರಂಭಿಸಿದರು? (ಎಲ್ಲರು ಸೇರಿಕೊಂಡು ಮಾಡಿದರು) ಭಾರತದಲ್ಲಿಯೂ ಸೇರಿಕೊಂಡು ಮಾಡಿದರು ಆದರೂ ನಿಮಿತ್ತರಾದರು. ಒಳ್ಳೆಯದು ಪ್ರತಿಯೊಬ್ಬರಿಗೆ ತಮ್ಮ ಜೊತೆಗಾರರ ಸಂಘಟನೆಯಲ್ಲಿ ಚೆನ್ನಾಗೆನಿಸುತ್ತದೆ. ಎರಡು ಕಡೆಯ ಸೇವೆಯಲ್ಲಿ ಅನೇಕ ಆತ್ಮರನ್ನು ಸಮೀಪ ತರುವ ಅವಕಾಶ ಸಿಕ್ಕಿದೆ. ಫಲಿತಾಂಶ ಇಷ್ಟವಾಗುತ್ತದೆಯಲ್ಲವೇ? ರಿಟ್ರೀಟ್ನ ಫಲಿತಾಂಶ ಚೆನ್ನಾಗಿದೆಯೇ? ಮತ್ತು ವರ್ಗೀಕರಣದ ಪರಿಣಾಮವೂ ಚೆನ್ನಾಗಿದೆ, ದೇಶ-ವಿದೇಶದವರು ಯಾವುದಾದರೂ ಹೊಸ ಆವಿಷ್ಕಾರವನ್ನು ಮಾಡುತ್ತಿದ್ದಾರೆ ಮತ್ತು ಮಾಡುತ್ತಿರುತ್ತಾರೆ. ಭಾರತದಲ್ಲಿರಬಹುದು ಅಥವಾ ವಿದೇಶದಲ್ಲಿ ಸೆವೆಯ ಉಮಂಗ ಚೆನ್ನಾಗಿದೆ. ಯಾರು ಸತ್ಯ ಹೃದಯದಿಂದ ನಿಸ್ವಾರ್ಥ ಸೇವೆಯಲ್ಲಿ ಮುಂದುವರೆಯುತ್ತಾ ಹೋಗುತ್ತಾರೆ, ಅವರ ಖಾತೆಯಲ್ಲಿ ಪುಣ್ಯದ ಖಾತೆ ಹೆಚ್ಚು ಜಮಾ ಆಗುತ್ತಾ ಹೋಗುವುದು ಬಾಪ್ದಾದಾರವರು ನೋಡುತ್ತಾರೆ. ಕೆಲ ಮಕ್ಕಳದು ಒಂದಾಗಿದೆ ತಮ್ಮ ಪುರುಷಾರ್ಥದ ಪ್ರಾಲಬ್ಧದ ಖಾತೆ, ಎರಡನೇಯದು ಸಂತುಷ್ಟರಾಗಿ ಸಂತುಷ್ಟರನ್ನಾಗಿ ಮಾಡುವುದರಿಂದ ಆಷೀರ್ವಾದದ ಖಾತೆ ಮತ್ತು ಮೂರನೇಯದಾಗಿದೆ ಯರ್ಥಾಥ ಯೋಗಯುಕ್ತ, ಯುಕ್ತಿಯುಕ್ತ ಸೇವೆಯ ರಿಟರ್ನ್ನಲ್ಲಿ ಪುಣ್ಯದ ಖಾತೆ ಜಮಾ ಆಗುವುದು. ಈ ಮೂರು ಖಾತೆಗಳು ಬಾಪ್ದಾದಾರವರು ಪ್ರತಿಯೊಬ್ಬರದ್ದೂ ನೋಡುತ್ತಿರುತ್ತಾರೆ. ಒಂದುವೇಳೆ ಯಾರದಾದರೂ ಮೂರು ಖಾತೆಗಳಲ್ಲಿ ಜಮಾ ಆಗುತ್ತದೆಯೆಂದರೆ ಅದರ ಲಕ್ಷಣಗಳಾಗಿವೆ - ಅವರು ಸದಾ ಸಹಜ ಪುರುಷಾರ್ಥಿ ತಮ್ಮನ್ನು ಸಹ ಅನುಭವ ಮಾಡುತ್ತಾರೆ ಮತ್ತು ಬೇರೆಯವರಿಗೂ ಸಹ ಆತ್ಮನಿಂದ ಸಹಜ ಪುರುಷಾರ್ಥದ ಸ್ವತಃವಾಗಿ ಪ್ರೇರಣೆ ಸಿಗುತ್ತದೆ. ಅದು ಸಹಜ ಪುರುಷಾರ್ಥದ ಚಿಹ್ನೆಯಾಗಿದೆ. ಪರಿಶ್ರಮ ಪಡಬೇಕಾಗಿಲ್ಲ, ತಂದೆಯೊಂದಿಗೆ, ಸೇವೆಯೊಂದಿಗೆ ಮತ್ತು ಸರ್ವ ಪರಿವಾರದೊಂದಿಗೆ ಪ್ರೀತಿಯಿದೆಯೆಂದರೆ ಈ ಮೂರು ಪ್ರಕಾರದ ಪ್ರೀತಿ ಪರಿಶ್ರಮದಿಂದ ಮುಕ್ತ ಮಾಡಿಬಿಡುತ್ತದೆ.

ಬಾಪ್ದಾದಾರವರು ಎಲ್ಲಾ ಮಕ್ಕಳೊಂದಿಗೆ ಇದೇ ಶ್ರೇಷ್ಠ ಆಸೆಯನ್ನು ಇಟ್ಟುಕೊಳ್ಳುತ್ತಾರೆ ಎಲ್ಲಾ ಮಕ್ಕಳು ಸಹಜ ಪುರುಷಾರ್ಥಿಯಾಗಿರಲಿ. 63 ಜನ್ಮ ಭಕ್ತಿಯಲ್ಲಿ, ಗೊಂದಲದಲ್ಲಿ ಅಲೆದಾಡುವ ಪರಿಶ್ರಮ ಪಟ್ಟಿದ್ದೀರಿ, ಈಗ ಪರಿಶ್ರಮದಿಂದ ಮುಕ್ತರಾಗಲು ಇದು ಒಂದೇ ಜನ್ಮವಾಗಿದೆ. ಒಂದುವೇಳೆ ಬಹಳಕಾಲದಿಂದ ಪರಿಶ್ರಮ ಪಡುತ್ತೀದ್ದೀರೆಂದರೆ ಈ ಸಂಗಮಯುಗದ ವರದಾನ - ಪ್ರೀತಿಯಿಂದ ಸಹಜ ಪರುಷಾರ್ಥಿ ಯಾವಾಗ ಆಗುವಿರಿ? ಯುಗ ಸಮಾಪ್ತಿ, ವರದಾನವೂ ಸಮಾಪ್ತಿ. ಅಂದಾಗ ಸದಾ ಈ ವರದಾನವನ್ನು ಬಹಳ ಬೇಗನೆ ತೆಗೆದುಕೊಳ್ಳುವಿರಿ. ಯಾವುದೇ ದೊಡ್ಡಕ್ಕಿಂತ ದೊಡ್ಡ ಕಾರ್ಯವಿರಲಿ, ಯಾವುದೇ ದೊಡ್ಡಕ್ಕಿಂತ ದೊಡ್ಡ ಸಮಸ್ಯೆಯಿರಲಿ. ಆದರೆ ಪ್ರತಿಯೊಂದು ಕಾರ್ಯ, ಪ್ರತಿಯೊಂದು ಸಮಸ್ಯೆ ಈ ರೀತಿ ಪಾರಾಗಲಿ ಹೇಗೆ ನೀವು ಹೇಳುತ್ತೀರಲ್ಲವೇ ಬೆಣ್ಣೆಯಿಂದ ಕೂದಲು ತೆಗೆಯುವುದು. ಕೆಲವು ಮಕ್ಕಳ ಸ್ವಲ್ಪ-ಸ್ವಲ್ಪ ಬಾಪ್ದಾದಾರವರು ಆಟವನ್ನು ನೋಡುತ್ತಾರೆ, ಹರ್ಷಿತರೂ ಆಗುತ್ತಾರೆ ಮತ್ತು ಮಕ್ಕಳನ್ನು ನೋಡಿ ದಯೆಯೂ ಬರುತ್ತದೆ. ಯಾವಾಗ ಯಾವುದೇ ಸಮಸ್ಯೆ ಅಥವಾ ಯಾವುದೇ ದೊಡ್ಡ ಕಾರ್ಯವು ಮಂದೆ ಬರುತ್ತದೆ ಆಗಾ ಕೆಲವೊಮ್ಮೆ ಮಕ್ಕಳ ಮುಖದಲ್ಲಿ ಸ್ವಲ್ಪ ಸಮಸ್ಯೆ ಅಥವಾ ಕಾರ್ಯದ ಅಲೆಗಳು ಕಾಣಿಸುತ್ತವೆ. ಸ್ವಲ್ಪ ಮುಖವೂ ಬದಲಾಗುತ್ತದೆ. ಒಂದುವೇಳೆ ಯಾರಾದರೂ ಏನಾಯಿತು ಎಂದು ಕೇಳಿದರೆ, ಹೇಳುತ್ತಾರೆ ಕೆಲಸವೇ ಬಹಳಷ್ಟಿದೆಯಲ್ಲವೇ! ವಿಘ್ನ-ವಿನಾಶಕನ ಮುಂದೆ ವಿಘ್ನ ಬರಲಿಲ್ಲವೆಂದರೆ ವಿಘ್ನ-ವಿನಾಶಕನ ಟೈಟಲ್ ಹೇಗೆ ಹಾಡಲಾಗುವುದು? ಸ್ವಲ್ಪ ಮುಖದ ಮೇಲೆ ಸುಸ್ತು ಅಥವಾ ಮೂಡ್ ಬದಲಾಗುವ ಚಿಹ್ನೆ ಬರಬಾರದು. ಏಕೆ? ನಿಮ್ಮ ಜಡ ಚಿತ್ರ ಯಾವುದು ಅರ್ಧಕಲ್ಪ ಪೂಜಿಸಲಾಗುವುದು ಅದರಲ್ಲಿ ಎಂದಾದರೂ ಸ್ವಲ್ಪವೂ ಸುಸ್ತು ಅಥವಾ ಮೂಡ್ ಬದಲಾಗುವ ಚಿಹ್ನೆ ಕಾಣಿಸುತ್ತದೆಯೇ? ಯಾವಗ ನಿಮ್ಮ ಜಡ ಚಿತ್ರ ಸದಾ ಮುಗುಳ್ನಗುತ್ತಿರುತ್ತದೆ ಅದು ಯಾರ ಚಿತ್ರವಾಗಿದೆ? ಮಿಮ್ಮದೇ ಆಗಿದೆಯಲ್ಲವೇ? ಚೈತನ್ಯ ನೆನಪಾರ್ಥ ಚಿತ್ರವಾಗಿದೆ ಅದಕ್ಕಾಗಿ ಸ್ವಲ್ಪವೂ ಸುಸ್ತು ಅಥವಾ ಯಾವುಕ್ಕೆ ಸಿಡುಕುತನ ಎಂದು ಹೇಳುತ್ತೀರಿ, ಅದು ಬರಬಾರದು. ಸದಾ ಮುಗುಳ್ನಗುತ್ತಿರುವ ಮುಖ ಬಾಪ್ದಾದಾರವರಿಗೆ ಮತ್ತು ಎಲ್ಲರಿಗೂ ಇಷ್ಟವಾಗುತ್ತದೆ. ಒಂದುವೇಳೆ ಯಾರಾದರೂ ಸಿಡುಕಾಗಿದ್ದರೆ ಅವರ ಮುಂದೆ ಹೋಗುತ್ತಾರೆಯೇ? ಯೋಚಿಸುವರು ಈಗಲೇ ಹೇಳುವುದೋ ಅಥವಾ ಇಲ್ಲವೇ. ನಿಮ್ಮ ಜಡ ಚಿತ್ರಗಳ ಹತ್ತಿರ ಭಕ್ತರು ಬಹಳ ಉಮಂಗದಿಂದ ಬರುತ್ತಾರೆ ಮತ್ತು ಚೈತನ್ಯದಲ್ಲಿ ಯಾರಾದರೂ ಭಾರಿ(ಹೊರೆ) ಆದರೆ ಚೆನ್ನಾಗಿ ಅನಿಸುವುದೇ? ಈಗ ಬಾಪ್ದಾದಾರವರು ಎಲ್ಲಾ ಮಕ್ಕಳ ಮುಖದಲ್ಲಿ ಸದಾ ಫರಿಸ್ತಾ ರೂಪ, ವರದಾನಿ ರೂಪ, ದಾತಾ ರೂಪ, ದಯಾ ಹೃದಯಿ, ದಣಿವಿಲ್ಲದ, ಸಹಜಯೋಗಿ ಅಥವಾ ಸಹಜ ಪುರುಷಾರ್ಥಿಯ ರೂಪ ನೋಡಲು ಬಯಸುತ್ತಾರೆ. ಈ ರೀತಿ ಹೇಳ ಬೇಡಿರಿ ಮಾತೇ ಹೀಗಿತ್ತಲ್ಲವೇ. ಎಂತಹದ್ದೇ ಮಾತಿರಲಿ ಆದರೆ ರೂಪವು ಮುಗುಳ್ನಗುತ್ತಿರುವ, ಶೀತಲ, ಗಂಭೀರ ಮತ್ತು ರಮಣೀಕತೆ ಎರಡರ ಬ್ಯಾಲೆನ್ಸ್ ಆಗಿರಲಿ. ಯಾರದರೂ ಇದ್ದಕ್ಕಿದ್ದಂತೆ ಬಂದರು ಮತ್ತು ನೀವು ಸಮಸ್ಯೆಯ ಕಾರಣ ಅಥವಾ ಕಾರ್ಯದ ಕಾರಣ ಸಹಜ ಪುರುಷಾರ್ಥಿಯ ರೂಪದಲ್ಲಿ ಇಲ್ಲವೆಂದರೆ ಅವರು ಏನು ನೋಡುವರು? ನಿಮ್ಮ ಚಿತ್ರವಂತು ಅವರೇ ತೆಗೆದುಕೊಂಡು ಹೋಗುವರು. ಯಾವುದೇ ಸಮಯದಲ್ಲಿ, ಯಾರಿಗಾದರೂ ಯಾರದಾದರೂ ಒಂದು ತಿಂಗಳಿನ, ಎರಡು ತಿಂಗಳಿನ, ಇದ್ದಕ್ಕಿದ್ದಂತೆ ನಿಮ್ಮ ಮುಖದ ಚಿತ್ರವನ್ನು ತೆಗೆದರೆ, ಅದು ಮೇಲೆ ತಿಳಿಸಿದ ಚಿತ್ರದ ಹಾಗೆಯೇ ಇರಲಿ. ದಾತಾ ಆಗಿರಿ, ತೆಗೆದುಕೊಳ್ಳುವವರಾಗಬೇಡಿ, ದಾತಾ. ಯಾರಾದರೂ ಏನಾದರೂ ಕೊಡಲಿ, ಒಳ್ಳೆಯದನ್ನೇ ಕೊಡಲಿ ಅಥವಾ ಕೆಟ್ಟದ್ದನ್ನು ಕೊಡಲಿ ಆದರೆ ನೀವು ದೊಡ್ಡಕ್ಕಿಂತ ದೊಡ್ಡ ತಂದೆಯ ಮಕ್ಕಳು ದೊಡ್ಡ ಹೃದಯದವರಾಗಿದ್ದೀರಿ ಒಂದುವೇಳೆ ಕೆಟ್ಟದ್ದನ್ನು ಕೊಟ್ಟುಬಿಟ್ಟರೆ, ದೊಡ್ಡ ಹೃದಯದಿಂದ ಕೆಟ್ಟದನ್ನು ತಮ್ಮಲ್ಲಿ ಸ್ವೀಕಾರ ಮಾಡದೇ ದಾತಾ ಆಗಿ, ನೀವು ಅವರಿಗೆ ಸಹಯೋಗ ಕೊಡಿ, ಸ್ನೇಹ ಕೊಡಿ, ಶಕ್ತಿಯನ್ನು ಕೊಡಿ. ಯಾವುದಾದರೂ ಗುಣವನ್ನು ತಮ್ಮ ಸ್ಥಿತಿಯಿಂದ ಉಡುಗೊರೆಯಾಗಿ ಕೊಟ್ಟುಬಿಡಿ. ಇಷ್ಟು ದೊಡ್ಡ ಹೃದಯದವರು ದೊಡ್ಡಕ್ಕಿಂತ ದೊಡ್ಡ ತಂದೆಯ ಮಕ್ಕಳಾಗಿದ್ದೀರಿ. ದಯೆ ತೋರಿಸಿ. ಹೃದಯದಲ್ಲಿ ಆ ಆತ್ಮನ ಪ್ರತಿ ಇನ್ನೂ ಹೆಚ್ಚು ಸ್ನೇಹ ಇಮರ್ಜ್ ಮಾಡಿಕೊಳ್ಳಿರಿ. ಯಾವ ಸ್ನೇಹದ ಶಕ್ತಿಯಿಂದ ಅವರು ಸ್ವಯಂ ಪರಿವರ್ತಿತನೆಯಾಗಿ ಬಿಡಲಿ. ಇಂತಹ ದೊಡ್ಡ ಹೃದಯದವರಾಗಿದ್ದೀರಾ ಅಥವಾ ಚಿಕ್ಕ ಹೃದಯದವರಾ? ಅಳವಡಿಸಿಕೊಳ್ಳುವ ಶಕ್ತಿಯಿದೆಯೇ? ಅಳವಡಿಸಿಕೊಳ್ಳಿರಿ. ಸಾಗರದಲ್ಲಿ ಎಷ್ಟು ಕೆಸರು ಹಾಕುತ್ತಾರೆ, ಹಾಕುವವರಿಗೆ, ಅದು ಕೆಸರಿನ ಬದಲಾಗಿ ಕೆಸರು ಕೊಡುವುದಿಲ್ಲ. ನೀವಂತು ಜ್ಞಾನ ಸಾಗರ, ಶಕ್ತಿಗಳ ಸಾಗರನ ಮಕ್ಕಳಾಗಿದ್ದೀರಿ, ಮಾಸ್ಟರ್ ಆಗಿದ್ದೀರಿ.

ಬಾಪ್ದಾದಾರವರು ಏನು ನೋಡಲು ಬಯಸುತ್ತಾರೆಂದು ಕೇಳಿದ್ದೀರಾ? ಅಧಿಕ ಮಕ್ಕಳು ಈ ವರ್ಷದಲ್ಲಿ ಪರಿವರ್ತನೆ ಆಗಬೇಕೆಂಬ ಲಕ್ಷ್ಯವನ್ನು ಇಟ್ಟಿದ್ದಾರೆ. ಮಾಡುವೆವು, ಯೋಚಿಸುವೆವು ಇಲ್ಲ, ಮಾಡಲೇ ಬೇಕು. ಮಾಡಲೇ ಬೇಕೆ ಅಥವಾ ಅಲ್ಲಿ ಹೋಗಿ ಯೋಚಿಸುತ್ತೀರಾ? ಯಾರು ಮಾಡಲೇಬೇಕೆಂದು ತಿಳಿಯುತ್ತೀರಿ ಅವರು ಒಂದು ಕೈಯಿನ ಚಪ್ಪಾಳೆ ತಟ್ಟಿರಿ. (ಎಲ್ಲರು ಕೈ ಅಲುಗಾಡಿಸಿದರು) ಬಹಳ ಒಳ್ಳೆಯದು. ಕೇವಲ ಈ ಕೈ ಎತ್ತ ಬೇಡಿರಿ, ಮನಸ್ಸಿನಿಂದ ದೃಡ ಸಂಕಲ್ಪದ ಕೈ ಎತ್ತಿರಿ. ಈ ಕೈ ಅಂತು ಸಹಜವಾಗಿದೆಯಲ್ಲವೇ. ಮನಸ್ಸಿನ ದೃಡ ಸಂಕಲ್ಪದ ಕೈ ಸದಾ ಸಫಲತಾ ಸ್ವರೂಪರನ್ನಾಗಿ ಮಾಡುತ್ತದೆ. ಏನು ಯೋಚಿಸುವಿರಿ ಅದು ಆಗಲೇ ಬೇಕು. ಸಕರಾತ್ಮಕತೆಯನ್ನೇ ಯೋಚಿಸುವಿರಲ್ಲವೇ! ನಕರಾತ್ಮಕತೆಯನ್ನು ಯೋಚಿಸಬಾರದು. ನಕರಾತ್ಮಕತೆಯನ್ನು ಯೋಚಿಸುವ ದಾರಿ ಸದಾಕಾಲಕ್ಕಾಗಿ ಮುಚ್ಚಿಬಿಡಿ. ಮುಚ್ಚಲು ಬರುತ್ತದೆಯೇ ಅಥವಾ ತೆರೆದು ಬಿಡುತ್ತದೆಯೇ? ಹೇಗೆ ಈಗ ಬಿರುಗಾಳಿ ಬಂತಲ್ಲವೇ, ಬಾಗಿಲುಗಳು ತಾವೇ ತೆರೆದುಬಿಟ್ಟವು, ಹೀಗಾಗುವುದಿಲ್ಲವೇ? ನೀವು ತಿಳಿದುಕೊಳ್ಳುತ್ತೀರಿ ಮುಚ್ಚಿ ಬಂದ್ದಿದ್ದೇವೆ, ಆದರೆ ಬಿರುಗಾಳಿ ತೆರೆದುಬಿಡುವುದು, ಹೀಗೆ ಸಡಿಲಾಗಿ ಮುಚ್ಚಬೇಡಿರಿ. ಒಳ್ಳೆಯದು.

ಡಬಲ್ ವಿದೇಶಿಯರ ಉತ್ಸವ ಚೆನ್ನಾಗಾಯಿತಲ್ಲವೇ! (10 ವರ್ಷಕ್ಕಿಂತ ಹೆಚ್ಚು ಸಮಯದಿಂದ ಜ್ಞಾನದಲ್ಲಿ ನಡೆಯುವವರ 400 ಸಮೀಪ ಡಬಲ್ ವಿದೇಶಿ ಸಹೋದರ-ಸಹೋದರಿಯರ ಸನ್ಮಾನ ಸಮಾರೋಹ ಆಚರಿಸಲಾಯಿತು) ಇಷ್ಟವಾಯಿತೇ? ಯಾರು ಆಚರಿಸಿದರು ಮತ್ತು ಇಷ್ಟವಾಯಿತು ಅವರು ಕೈ ಎತ್ತಿರಿ. ಪಾಂಡವರು ಇದ್ದಾರೆ. ಇದರ ಮಹತ್ವ ಏನಾಗಿದೆ? ಆಚರಿಸುವುದರ ಮಹತ್ವ ಏನಾಗಿದೆ? ಆಚರಿಸುವುದು ಅರ್ಥಾತ್ ಆಗುವುದು. ಸದಾ ಇಂತಹ ಕಿರೀಟಧಾರಿ, ಸ್ವ ಪುರುಷಾರ್ಥ ಮತ್ತು ಸೇವೆಯ ಜವಾಬ್ದಾರಿ ಏನೆಂದು ಹೇಳುವುದು, ಮೋಜು ಎಂದೇ ಹೇಳುವುದು, ಸೇವೆಯ ಮೋಜನ್ನು ಆಚರಿಸುವ ಕಿರೀಟ ಸದಾ ಇರಲಿ. ಮತ್ತು ಸ್ವರ್ಣಿಮ ಬಣ್ಣದ ದುಪ್ಪಟ್ಟಾ ಎಲ್ಲರೂ ಧರಿಸಿದ್ದೀರಲ್ಲವೇ! ಸ್ವರ್ಣಿಮ ಬಣ್ಣದ ದುಪ್ಪಟ್ಟಾ ಏಕೆ ಧರಿಸಿದ್ದೀರಿ? ಸದಾ ಸ್ವರ್ಣಿಮ (ಗೋಲ್ಡನ್) ಯುಗದ ಸ್ಥಿತಿ, ಸಿಲ್ವರ್ ಅಲ್ಲ, ಗೋಲ್ಡನ್. ಮತ್ತು ಎರಡೆರಡು ಮಾಲೆಯನ್ನು ಧರಿಸುತ್ತಿದ್ದರು. ಎರಡು ಮಾಲೆಗಳು ಯಾವುದನ್ನು ಧರಿಸುವಿರಿ? ಒಂದು ಸದಾ ತಂದೆಯ ಕೊರಳಿನ ಮಾಲೆ. ಸದಾ, ಎಂದೂ ಕೊರಳಿನಿಂದ ತೆಗೆಯಬೇಡಿರಿ, ಕೊರಳಿನಲ್ಲಿಯೇ ಸುತ್ತಿರಲಿ ಮತ್ತು ಇನ್ನೊಂದು ಸದಾ ಸೇವೆಯ ಮೂಲಕ ಬೇರೆಯವರನ್ನೂ ತೆಂದೆಯ ಕೊರಳಿನ ಮಾಲೆಯನ್ನಾಗಿ ಮಾಡುವುದು. ಇದು ಡಬಲ್ ಮಾಲೆಯಾಗಿದೆ. ಆಚರಿಸುವವರಿಗೂ ಮತ್ತು ನೋಡುವವರಿಗೂ ಚೆನ್ನಾಗಿ ಅನಿಸುತು. ಈ ಉತ್ಸವ ಆಚರಿಸುವುದರ, ಸದಾ ಉತ್ಸವದ ರಹಸ್ಯವನ್ನು ತಿಳಿಸಿರಿ. ಮತ್ತು ಜೊತೆ-ಜೊತೆಯಲ್ಲಿ ಇದನ್ನು ಆಚರಿಸುವುದು ಅರ್ಥಾತ್ ಉಮಂಗ ಉತ್ಸಾಹವನ್ನು ಹೆಚ್ಚಿಸುವುದು. ಎಲ್ಲರ ಅನುಭವವನ್ನು ಬಾಪ್ದಾದಾರವರು ನೋಡಿದರು. ಒಳ್ಳೆಯ ಅನುಭವಗಳಿದ್ದವು. ಖುಷಿ ಮತ್ತು ನಶೆ ಎಲ್ಲರ ಮುಖದಲ್ಲಿ ಕಾಣಿಸುತ್ತಿತ್ತು. ಇಂತಹ ತಮ್ಮ ಶಕ್ತಿಶಾಲಿ, ಮುಗುಳ್ನಗುತ್ತಿರುವ ರಮಣೀಕ ಮತ್ತು ಗಂಭೀರ ಸ್ವರೂಪ ಸದಾ ಇಮರ್ಜ್ ಇಟ್ಟುಕೊಂಡು ನಡೆಯುತ್ತೀರಿ ಏಕೆಂದರೆ ಇತ್ತೀಚೆಗಿನ ಸಮಯದ ಪರಿಸ್ಥಿತಿಗಳ ಪ್ರಮಾಣ ಹೆಚ್ಚು ಕೇಳುವಂತಹವರು, ತಿಳಿದುಕೊಳ್ಳುವಂತಹವರು ಕಡಿಮೆಯಿದ್ದಾರೆ, ನೋಡಿ ಅನುಭವ ಮಾಡುವರು ಹೆಚ್ಚಾಗಿದ್ದಾರೆ. ನಿಮ್ಮ ಮುಖದಲ್ಲಿ ತಂದೆಯ ಪರಿಚಯ, ಕೇಳುವುದರ ಬದಲಾಗಿ ಕಾಣಿಸಲಿ. ಒಳ್ಳೆಯದನ್ನು ಮಾಡಿದಿರಿ. ಬಾಪ್ದಾದಾರವರು ನೋಡಿ-ನೋಡಿ ಹರ್ಷಿತರಾಗುತ್ತಿದ್ದಾರೆ. ಈ ವರ್ಷವನ್ನು ಅಥವಾ ಈ ಸೀಜನ್ ಅನ್ನು ವಿಶೇಷ ಉತ್ಸವದ ಸೀಜನ ಎಂದು ಆಚರಿಸಿದ್ದಾರೆ. ಪ್ರತಿ ಸಮಯ ಒಂದೇ ತರಹ ಇರುವುದಿಲ್ಲ.

(ಡ್ರಿಲ್) ಎಲ್ಲರಲ್ಲಿ ಆಡಳಿತ ಶಕ್ತಿಯಿದೆಯೇ? ಕರ್ಮೇಂದ್ರಿಯಗಳ ಮೇಲೆ ಯಾವಾಗ ಬೇಕೋ ಆಗ ಆಡಳಿತ ಮಾಡಬಹುದೇ? ಸ್ವ-ರಾಜ್ಯ ಅಧಿಕಾರಿಯಾಗಿದ್ದೀರಲ್ಲವೇ? ಯಾರು ಸ್ವ-ರಾಜ್ಯ ಅಧಿಕಾರಿಯಾಗಿದ್ದಾರೆ ಅವರೇ ವಿಶ್ವದ ರಾಜ್ಯ ಅಧಿಕಾರಿಗಳಾಗುವರು. ಯಾವಾಗ ಬೇಕೋ, ಎಂತಹದೇ ವಾತಾವರಣವಿರಲಿ ಆದರೆ ಮನಸ್ಸು-ಬುದ್ಧಿಗೆ ಆದೇಶ ಕೊಡಿ ನಿಲ್ಲು, ಆಗುವುದೋ ಅಥವಾ ಸಮಯ ಹಿಡಿಸುವುದೋ? ಈ ಅಭ್ಯಾಸ ಪ್ರತಿಯೊಬ್ಬರು ಇಡೀ ದಿನದಲ್ಲಿ ಮಧ್ಯ-ಮಧ್ಯದಲ್ಲಿ ಮಾಡುವುದು ಅವಶ್ಯಕವಾಗಿದೆ. ಮತ್ತು ಯಾವ ಸಮಯದಲ್ಲಿ ಮನಸ್ಸು-ಬುದ್ಧಿ ಬಹಳ ವ್ಯಸ್ಥವಾಗಿರುತ್ತದೆ, ಇಂತಹ ಸಮಯದಲ್ಲಿಯೂ ಒಂದುವೇಳೆ ಸೆಕೆಂಡಿನಲ್ಲಿ ನಿಲ್ಲಿಸಲು ಬಯಸಿದರೆ ಆಗುವುದೇ? ಪ್ರಯತ್ನ ಪಡಿ. ಯೋಚಿಸಿ ನಿಲ್ಲು ಮತ್ತು ನಿಲ್ಲಲು 3 ನಿಮಿಷ, 5 ನಿಮಿಷ ಹಿಡಿಸುತ್ತದೆ, ಈ ಅಭ್ಯಾಸ ಅಂತಿಮದಲ್ಲಿ ಬಹಳ ಕೆಲಸ ಬರುತ್ತದೆ. ಇದೇ ಆಧಾರದಿಂದ ಪಾಸ್ ವಿತ್ ಆನರ್ (ಗೌರವಾನ್ವಿತ ತೇರ್ಗಡೆ) ಆಗಬಹುದು. ಒಳ್ಳೆಯದು.

ಸದಾ ಹೃದಯದ ಉಮಂಗ-ಉತ್ಸಾಹದ ಉತ್ಸವವನ್ನು ಆಚರಿಸುವಂತಹ ಸ್ನೇಹಿ ಆತ್ಮರು, ಸದಾ ವಜ್ರ ಸಮಾನ ಜೀವನ ಅನುಭವ ಮಾಡುವಂತಹ, ಅನುಭವದ ಅಥಾರಿಟಿಯುಳ್ಳ ವಿಶೇಷ ಆತ್ಮರು, ಸದಾ ತಮ್ಮ ಮುಖದಿಂದ ತಂದೆಯ ಪರಿಚಯ ಕೊಡುವಂತಹ ತಂದೆಯನ್ನು ಪ್ರತ್ಯಕ್ಷ ಮಾಡುವಂತಹ ಸೇವಾಧಾರಿ ಆತ್ಮರು, ಸದಾ ಗಂಭೀರ ಮತ್ತು ರಮಣೀಕ ಎರಡನ್ನು ಜೊತೆಯಲ್ಲಿ ಬ್ಯಾಲೆನ್ಸ್ ಇಟ್ಟುಕೊಳ್ಳುವಂತಹ ಎಲ್ಲರ ಆಶೀರ್ವಾದಕ್ಕೆ ಅಧಿಕಾರಿ ಆತ್ಮರು, ಇಂತಹ ನಾಲ್ಕಾರು ಕಡೆಯ ದೇಶ-ವಿದೇಶದ ಮಕ್ಕಳಿಗೆ ಶಿವರಾತ್ರಿಯ ಶುಭಾಷಯಗಳು, ಶುಭಾಷಯಗಳು. ಜೊತೆ-ಜೊತೆಯಲ್ಲಿ ಬಾಪ್ದಾದಾರವರ ಹೃದಯರಾಮನ ಹೃದಯದ ಪ್ರೀತಿಯಿಂದ ನೆನಪು, ಪ್ರೀತಿ ಮತ್ತು ನಮಸ್ತೆ.

ವರದಾನ:
ತಮ್ಮ ರಾಜ್ಯ ಅಧಿಕಾರಿ ಹಾಗೂ ಪೂಜ್ಯ ಸ್ವರೂಪದ ಸ್ಮೃತಿಯಿಂದ ದಾತಾ ಆಗಿ ಕೊಡುವಂತಹ ಸರ್ವ ಖಜಾನೆಗಳಿಂದ ಸಂಪನ್ನ ಭವ.

ಸದಾ ಇದೇ ಸ್ಮೃತಿಯಲ್ಲಿರಿ ನಾನು ಪೂಜ್ಯ ಆತ್ಮ ಬೇರೆಯವರಿಗೆ ಕೊಡುವಂತಹ ದಾತಾ ಆಗಿದ್ದೇನೆ, ತೆಗೆದುಕೊಳ್ಳುವಂತಹವನಲ್ಲ, ದೇವತೆಯಾಗಿದ್ದೇನೆ. ಹೇಗೆ ತಂದೆ ನಿಮ್ಮೆಲ್ಲರಿಗೂ ತಾನಾಗೆ ಕೊಟ್ಟಿದ್ದಾರೆ ಅದೇ ರೀತಿ ನೀವೂ ಸಹ ಮಾಸ್ಟರ್ ದಾತಾ ಆಗಿ ಕೊಡುತ್ತಾ ಹೋಗಿ, ಬೇಡುವುದು ಬೇಡ. ತಮ್ಮ ರಾಜ್ಯ ಅಧಿಕಾರಿ ಹಾಗೂ ಪೂಜ್ಯ ಸ್ವರೂಪದ ಸ್ಮೃತಿಯಲ್ಲಿರಿ. ಇಂದಿನವರೆಗೆ ನಿಮ್ಮ ಜಡ ಚಿತ್ರಗಳ ಬಳಿ ಹೋಗಿ ಬೇಡುವರು, ಹೇಳುತ್ತಾರೆ ನಮ್ಮನ್ನು ರಕ್ಷಿಸಿ. ಅಂದಾಗ ನೀವು ರಕ್ಷಿಸುವವರು, ರಕ್ಷಿಸಿ-ರಕ್ಷಿಸಿ ಎಂದು ಹೇಳುವವರಲ್ಲ. ಆದರೆ ದಾತಾ ಆಗುವುದಕ್ಕೊಸ್ಕರ ನೆನಪಿನಿಂದ, ಸೇವೆಯಿಂದ, ಶುಭ ಭಾವನೆ, ಶುಭ ಕಾಮನೆಯಿಂದ ಸರ್ವ ಖಜಾನೆಗಳಿಂದ ಸಂಪನ್ನರಾಗಿ.

ಸ್ಲೋಗನ್:
ಚಲನೆ ಮತ್ತು ಚೆಹರೆಯ ಪ್ರಸನ್ನತೆಯೇ ಆತ್ಮೀಯ ವ್ಯಕ್ತಿತ್ವದ ಗುರುತಾಗಿದೆ.