11.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಈ ನಾಟಕದಿಂದ ಒಂದು ಆತ್ಮವೂ ಬಿಡುಗಡೆ ಆಗಲು ಸಾಧ್ಯವಿಲ್ಲ, ಯಾರಿಗೂ ಮೋಕ್ಷವು ಸಿಗಲು ಸಾಧ್ಯವಿಲ್ಲ"

ಪ್ರಶ್ನೆ:
ಶ್ರೇಷ್ಠಾತಿ ಶ್ರೇಷ್ಠ ಪತಿತಪಾವನ ತಂದೆಯು ಭೋಲಾನಾಥನಾಗಿದ್ದಾರೆ - ಹೇಗೆ?

ಉತ್ತರ:
ನೀವು ಮಕ್ಕಳು ತಂದೆಗೆ ಒಂದು ಹಿಡಿ ಅವಲಕ್ಕಿಯನ್ನು ಕೊಟ್ಟು ಮಹಲ್ನ್ನು ಪಡೆಯುತ್ತೀರಿ ಆದ್ದರಿಂದಲೇ ತಂದೆಗೆ ಭೋಲಾನಾಥ ಎಂದು ಹೇಳಲಾಗುತ್ತದೆ. ಶಿವತಂದೆಯು ನಮ್ಮ ಮಗನಾಗಿದ್ದಾರೆ ಎಂದು ನೀವು ಹೇಳುತ್ತೀರಿ. ಅವರು ಇಂತಹ ಮಗನಾಗಿದ್ದಾರೆ, ಎಂದೂ ಏನನ್ನೂ ತೆಗೆದುಕೊಳ್ಳುವುದಿಲ್ಲ. ಸದಾ ಕೊಡುತ್ತಾರೆ. ಯಾರು ಎಂತಹ ಕರ್ಮವನ್ನು ಮಾಡುತ್ತಾರೆಯೋ ಅಂತಹ ಫಲವನ್ನು ಪಡೆಯುತ್ತಾರೆ ಎಂದು ಭಕ್ತಿಯಲ್ಲಿ ಹೇಳುತ್ತಾರೆ ಆದರೆ ಭಕ್ತಿಯಲ್ಲಂತೂ ಅಲ್ಪಕಾಲದ ಫಲವು ಸಿಗುತ್ತದೆ ಆದರೆ ಜ್ಞಾನದಲ್ಲಿ ತಿಳುವಳಿಕೆಯಿಂದ ಮಾಡುವ ಕಾರಣ ಸದಾಕಾಲಕ್ಕೆ ಫಲ ಸಿಗುತ್ತದೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳೊಂದಿಗೆ ಆತ್ಮಿಕ ವಾರ್ತಾಲಾಪವನ್ನು ಮಾಡುತ್ತಿದ್ದಾರೆ ಅಥವಾ ಈ ರೀತಿ ಹೇಳಬಹುದು - ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ನೀವು ಬೇಹದ್ದಿನ ತಂದೆಯಿಂದ ರಾಜಯೋಗವನ್ನು ಕಲಿಯಲು ಬಂದಿದ್ದೀರಿ, ಆದ್ದರಿಂದ ಬುದ್ಧಿಯು ತಂದೆಯಕಡೆ ಹೋಗಬೇಕು. ಇದು ಆತ್ಮಗಳ ಪ್ರತಿ ಪರಮಾತ್ಮನ ಜ್ಞಾನವಾಗಿದೆ. ಸಾಲಿಗ್ರಾಮಗಳ ಪ್ರತಿ ಭಗವಾನುವಾಚ. ಆತ್ಮಗಳೇ ಕೇಳಬೇಕಾಗಿದೆ ಆದ್ದರಿಂದ ಆತ್ಮಾಭಿಮಾನಿ ಆಗಬೇಕಾಗಿದೆ. ಮೊದಲು ನೀವು ದೇಹಾಭಿಮಾನಿಗಳಾಗಿದ್ದಿರಿ. ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ತಂದೆಯು ಬಂದು ನೀವು ಮಕ್ಕಳನ್ನು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ. ಆತ್ಮಾಭಿಮಾನಿ ಮತ್ತು ದೇಹಾಭಿಮಾನಿಯ ವ್ಯತ್ಯಾಸವನ್ನು ನೀವು ತಿಳಿದುಕೊಂಡಿದ್ದೀರಿ. ಆತ್ಮವೇ ಶರೀರದಿಂದ ಪಾತ್ರವನ್ನು ಅಭಿನಯಿಸುತ್ತದೆ, ಆತ್ಮವೇ ಓದುತ್ತದೆ ಆದರೆ ಶರೀರವಲ್ಲ ಎಂದು ತಂದೆಯು ತಿಳಿಸುತ್ತಾರೆ. ಆದರೆ ದೇಹಾಭಿಮಾನ ಇರುವ ಕಾರಣ ಇಂತಹವರು ಓದಿಸುತ್ತಾರೆ ಎಂದು ತಿಳಿಯುತ್ತಾರೆ. ತಾವು ಮಕ್ಕಳಿಗೆ ಓದಿಸುವವರು ನಿರಾಕಾರನಾಗಿದ್ದಾರೆ ಅವರ ಹೆಸರಾಗಿದೆ ಶಿವ. ಶಿವತಂದೆಗೆ ತಮ್ಮ ಶರೀರವಿರುವುದಿಲ್ಲ. ಮತ್ತೆಲ್ಲರೂ ನನ್ನ ಶರೀರ ಎಂದು ಹೇಳುತ್ತಾರೆ. ಇದು ನನ್ನ ಶರೀರ ಆಗಿದೆ ಎಂದು ಯಾರು ಹೇಳಿದರು? ಆತ್ಮ ಹೇಳುತ್ತದೆ. ಉಳಿದೆಲ್ಲವೂ ದೈಹಿಕ ವಿದ್ಯೆಗಳಾಗಿವೆ, ಅದರಲ್ಲಿ ಅನೇಕ ಪ್ರಕಾರದ ವಿಷಯಗಳು (ಸಬ್ಜೆಕ್ಟ್) ಇರುತ್ತವೆ, ಬಿ.ಎ, ಮುಂತಾದುವು ಎಷ್ಟೊಂದು ಹೆಸರುಗಳಿವೆ ಆದರೆ ಈ ವಿದ್ಯೆಯಲ್ಲಿ ಒಂದೇ ಹೆಸರಿದೆ. ಇದನ್ನು ಓದಿಸುವವರೂ ಒಬ್ಬರೇ ಅಂದಮೇಲೆ ಆ ತಂದೆಯನ್ನೇ ನೆನಪು ಮಾಡಬೇಕು. ನಮಗೆ ಬೇಹದ್ದಿನ ತಂದೆಯು ಓದಿಸುತ್ತಾರೆ, ಅವರ ಹೆಸರೇನು? ಅವರ ಹೆಸರಾಗಿದೆ ಶಿವ. ಅವರು ನಾಮ-ರೂಪದಿಂದ ಭಿನ್ನರಾಗಿದ್ದಾರೆಂದಲ್ಲ. ಮನುಷ್ಯರ ಶರೀರಕ್ಕೆ ಹೆಸರು ಬರುತ್ತದೆ. ಈ ಶರೀರವು ಇಂತಹವರದಾಗಿದೆ ಎಂದು ಹೇಳುತ್ತಾರೆ ಆದರೆ ಶಿವತಂದೆಗೆ ಹೆಸರಿಲ್ಲ. ಮನುಷ್ಯರ ಶರೀರಕ್ಕೆ ಹೆಸರನ್ನು ಇಡುತ್ತಾರೆ. ನಿರಾಕಾರ ತಂದೆಯೊಬ್ಬರೇ ಆಗಿದ್ದಾರೆ. ಅವರಿಗೆ ಶರೀರದ ಹೆಸರಿಲ್ಲ. ಅವರ ಹೆಸರೇ ಆಗಿದೆ - ಶಿವ. ಓದಿಸಲು ಬರುತ್ತಾರೆಂದರೂ ಸಹ ಅವರ ಹೆಸರು ಶಿವ ಎಂದೇ ಇರುತ್ತದೆ. ಈ (ಬ್ರಹ್ಮಾ) ಶರೀರವಂತೂ ಅವರದಲ್ಲ. ಭಗವಂತನಂತೂ ಒಬ್ಬರೇ ಇರುತ್ತಾರೆ, 10-12 ಜನ ಅಲ್ಲ. ಅವರು ಒಬ್ಬರೇ ಇದ್ದಾರೆ, ಅವರಿಗೆ ಮನುಷ್ಯರು 24 ಅವತಾರಗಳೆಂದು ಹೇಳುತ್ತಾರೆ ಆದ್ದರಿಂದ ನನ್ನನ್ನು ಬಹಳ ಅಲೆಸಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಪರಮಾತ್ಮನನ್ನು ಕಲ್ಲು, ಮುಳ್ಳು, ಎಲ್ಲದರಲ್ಲಿಯೂ ಇದ್ದಾರೆಂದು ಹೇಳಿಬಿಡುತ್ತಾರೆ. ಹೇಗೆ ಭಕ್ತಿಮಾರ್ಗದಲ್ಲಿ ಬಹಳ ಅಲೆದಿದ್ದೀರಿ ಆ ಕಾರಣ ನನ್ನನ್ನೂ ಅಲೆಸಿದ್ದೀರಿ, ನಾಟಕದನುಸಾರಾವಾಗಿ. ಮಾತನಾಡುವ ಶೈಲಿಯು ಎಷ್ಟು ಶೀತಲವಾಗಿದೆ. ಎಲ್ಲರೂ ನನಗೆ ಎಷ್ಟೊಂದು ಅಪಕಾರ ಮಾಡಿದಿರಿ, ಎಷ್ಟು ನನ್ನ ನಿಂದನೆ ಮಾಡಿದ್ದೀರಿ ಎಂದು ತಂದೆ ತಿಳಿಸುತ್ತಾರೆ. ನಾನು ನಿಷ್ಕಾಮ ಸೇವೆಯನ್ನು ಮಾಡುತ್ತೇನೆ ಎಂದು ತಂದೆಯು ಹೇಳುತ್ತಾರೆ. ನನ್ನ ವಿನಃ ಮತ್ತ್ಯಾರೂ ನಿಷ್ಕಾಮ ಸೇವೆ ಮಾಡಲು ಸಾಧ್ಯವಿಲ್ಲ ಎಂದು ತಂದೆಯು ಹೇಳುತ್ತಾರೆ. ಯಾರು ಮಾಡುತ್ತಾರೋ ಅವರಿಗೆ ಅವಶ್ಯವಾಗಿ ಫಲವು ಸಿಗುತ್ತದೆ. ಈಗ ನಿಮಗೆ ಫಲ ಸಿಗುತ್ತಿದೆ. ಭಗವಂತನು ಭಕ್ತಿಯ ಫಲ ಕೊಡುತ್ತಾರೆಂದು ಗಾಯನವಿದೆ ಏಕೆಂದರೆ ಭಗವಂತನು ಜ್ಞಾನಸಾಗರನಾಗಿದ್ದಾರೆ. ಭಕ್ತಿಯಲ್ಲಿ ಅರ್ಧಕ್ಕಲ್ಪ ನೀವು ಕರ್ಮಕಾಂಡ ಮಾಡುತ್ತಾ ಬಂದಿದ್ದೀರಿ. ಈ ಜ್ಞಾನವು ವಿದ್ಯೆಯಾಗಿದೆ. ಈ ವಿದ್ಯೆಯು ಒಂದೇ ಬಾರಿ ಮತ್ತು ಒಬ್ಬ ತಂದೆಯಿಂದ ಸಿಗುತ್ತದೆ. ತಂದೆಯು ಪುರುಷೋತ್ತಮ ಸಂಗಮಯುಗದಲ್ಲಿ ಒಂದೇ ಬಾರಿ ನಿಮ್ಮನ್ನು ಪುರುಷೋತ್ತಮರನ್ನಾಗಿ ಮಾಡಿ ಹೋಗುತ್ತಾರೆ. ಇದು ಜ್ಞಾನವಾಗಿದೆ. ಅದು ಭಕ್ತಿಯಾಗಿದೆ. ಅರ್ಧಕಲ್ಪ ನೀವು ಭಕ್ತಿ ಮಾಡುತ್ತಿದ್ದಿರಿ, ಈಗ ಯಾರು ಭಕ್ತಿ ಮಾಡುತ್ತಿಲ್ಲವೋ, ಅವರಿಗೆ ಏನಾಗುತ್ತದೆಯೋ ಗೊತ್ತಿಲ್ಲ ಭಕ್ತಿ ಮಾಡಲಿಲ್ಲ ಆದ್ದರಿಂದಲೇ ಇಂತಹವರು ಶರೀರ ಬಿಟ್ಟರು, ರೋಗಿಯಾಗಿಬಿಟ್ಟರು ಎಂಬ ಸಂಶಯ ಬರುತ್ತದೆ. ಆದರೆ ಈ ರೀತಿ ಆಗುವುದೇ ಇಲ್ಲ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ತಾವು ಬಂದು ಪತಿತರನ್ನು ಪಾವನ ಮಾಡಿ, ಎಲ್ಲರ ಸದ್ಗತಿ ಮಾಡಿ ಎಂದು ಕರೆಯುತ್ತಾ ಬಂದಿರಿ, ಈಗ ನಾನು ಬಂದಿದ್ದೇನೆ. ಭಕ್ತಿ ಬೇರೆಯಾಗಿದೆ, ಜ್ಞಾನ ಬೇರೆಯಾಗಿದೆ. ಭಕ್ತಿ ಅರ್ಧಕಲ್ಪ ರಾತ್ರಿ ಆಗುತ್ತದೆ, ಜ್ಞಾನದಿಂದ ಅರ್ಧಕಲ್ಪಕ್ಕಾಗಿ ದಿನವಾಗುತ್ತದೆ. ರಾಮರಾಜ್ಯ ಮತ್ತು ರಾವಣರಾಜ್ಯ ಎರಡೂ ಬೇಹದ್ದಿನದಾಗಿದೆ. ಎರಡರ ಕಾಲಾವಧಿಯು ಸರಿಸಮವಾಗಿದೆ. ಈ ಸಮಯದಲ್ಲಿ ಭೋಗಿಗಳಾಗಿರುವ ಕಾರಣ ಪ್ರಪಂಚದ ವೃದ್ಧಿಯೂ ಹೆಚ್ಚಿನದಾಗಿ ಆಗುತ್ತದೆ, ಆಯಸ್ಸು ಕಡಿಮೆ ಆಗುತ್ತದೆ. ಹೆಚ್ಚಿಗೆ ವೃದ್ಧಿ ಆಗದಿರಲಿ ಎಂದು ಪ್ರಬಂಧವನ್ನು ರಚಿಸುತ್ತಾರೆ. ಇಷ್ಟು ದೊಡ್ಡ ಜನಸಂಖ್ಯೆಯನ್ನು ಕಡಿಮೆ ಮಾಡುವುದು ತಂದೆಯ ಕರ್ತವ್ಯವೇ ಆಗಿದೆ ಎಂದು ನೀವು ಮಕ್ಕಳಿಗೆ ಗೊತ್ತಿದೆ. ತಂದೆಯು ಕಡಿಮೆ ಮಾಡುವುದಕ್ಕಾಗಿಯೇ ಬರುತ್ತಾರೆ. ಬಾಬಾ, ಅಧರ್ಮದ ವಿನಾಶ ಮಾಡಿ ಅರ್ಥಾತ್ ಸೃಷ್ಟಿಯನ್ನು ಕಡಿಮೆ ಮಾಡಿ ಎಂದು ಕರೆಯುತ್ತಾರೆ ಆದರೆ ತಂದೆಯು ಎಷ್ಟು ಕಡಿಮೆ ಮಾಡಿಬಿಡುತ್ತಾರೆ ಎಂದು ಪ್ರಪಂಚದವರಿಗೆ ಗೊತ್ತಿಲ್ಲ. ಸ್ವಲ್ಪ ಮನುಷ್ಯರು ಮಾತ್ರ ಉಳಿದುಕೊಳ್ಳುತ್ತಾರೆ. ಉಳಿದೆಲ್ಲಾ ಆತ್ಮಗಳು ತಮ್ಮ ಮನೆಗೆ ಹೊರಟುಹೋಗುತ್ತಾರೆ ನಂತರ ನಂಬರ್ವಾರಾಗಿ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ನಾಟಕದಲ್ಲಿ ಪಾತ್ರವು ಎಷ್ಟು ತಡವಾಗಿರುತ್ತದೆಯೋ ಅವರು ಮನೆಯಿಂದ ಅಷ್ಟು ತಡವಾಗಿ ಬರುತ್ತಾರೆ. ತಮ್ಮ ವ್ಯವಹಾರವನ್ನು ಪೂರ್ಣ ಮಾಡಿ ನಂತರ ಬರುತ್ತಾರೆ. ನಾಟಕದವರೂ ಸಹ ತಮ್ಮ ವ್ಯಾಪಾರ-ವ್ಯವಹಾರ ಮಾಡುತ್ತಾರೆ ನಂತರ ಸಮಯದಲ್ಲಿ ಪಾತ್ರವನ್ನು ಅಭಿನಯಿಸಲು ನಾಟಕದಲ್ಲಿ ಬರುತ್ತಾರೆ. ನಿಮ್ಮದೂ ಹಾಗೆಯೇ ಅಂತಿಮದಲ್ಲಿ ಯಾರ ಪಾತ್ರವಿದೆಯೋ ಅವರು ಕೊನೆಯಲ್ಲಿ ಬರುತ್ತಾರೆ. ಯಾರು ಮೊಟ್ಟಮೊದಲು ಪಾತ್ರಧಾರಿಗಳಾಗಿದ್ದಾರೆಯೋ ಅವರು ಸತ್ಯಯುಗದ ಆದಿಯಲ್ಲಿ ಬರುತ್ತಾರೆ. ಕೊನೆಯವರು ನೋಡಿ, ಈಗ ಬರುತ್ತಲೇ ಇರುತ್ತಾರೆ. ಹೇಗೆ ರೆಂಬೆ-ಕೊಂಬೆಗಳು ಕೊನೆಯವರೆಗೂ ಬರುತ್ತಿರುತ್ತವೆ.

ಈ ಸಮಯದಲ್ಲಿ ನೀವು ಮಕ್ಕಳಿಗೆ ಜ್ಞಾನದ ಮಾತುಗಳನ್ನು ತಿಳಿಸಲಾಗುತ್ತದೆ ಮತ್ತು ಮುಂಜಾನೆ ನೆನಪಿನಲ್ಲಿ ಕುಳಿತುಕೊಳ್ಳುತ್ತೀರಿ, ಅದಾಗಿದೆ ಡ್ರಿಲ್, ಆತ್ಮವು ತನ್ನ ತಂದೆಯನ್ನು ನೆನಪು ಮಾಡಬೇಕಾಗಿದೆ. ಯೋಗ ಎನ್ನುವ ಶಬ್ದವನ್ನು ಬಿಟ್ಟುಬಿಡಿ. ಯೋಗ ಎಂದು ಹೇಳುವುದರಿಂದ ತಬ್ಬಿಬ್ಬಾಗುತ್ತಾರೆ. ನನಗೆ ಯೋಗ ಮಾಡಲು ಆಗುತ್ತಿಲ್ಲ ಎಂದು ಹೇಳುತ್ತಾರೆ. ಅರೇ, ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲವೇನು! ಇದು ಒಳ್ಳೆಯ ಮಾತೇನು! ಎಂದು ತಂದೆ ಕೇಳುತ್ತಾರೆ. ನೆನಪು ಮಾಡಲಿಲ್ಲವೆಂದರೆ ಹೇಗೆ ಪಾವನರಾಗುತ್ತೀರಿ? ತಂದೆಯು ಪತಿತಪಾವನ ಆಗಿದ್ದರೆ, ಅವರು ಬಂದು ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಇದು ವಿಭಿನ್ನ ಧರ್ಮ ಹಾಗೂ ವಿಭಿನ್ನ ಮನುಷ್ಯರ ವೃಕ್ಷವಾಗಿದೆ, ಇಡೀ ಸೃಷ್ಠಿಯಲ್ಲಿ ಯಾರೆಲ್ಲಾ ಮನುಷ್ಯರಿದ್ದಾರೋ ಎಲ್ಲರೂ ಸಹ ಪಾತ್ರಧಾರಿಗಳಾಗಿದ್ದಾರೆ. ಅನೇಕ ಮನುಷ್ಯರಿದ್ದಾರೆ, ಒಂದು ವರ್ಷದಲ್ಲಿ ಇಷ್ಟು ಕೋಟಿ ಮನುಷ್ಯರು ಜನಿಸಿದರೆಂದು ಲೆಕ್ಕವನ್ನು ತೆಗೆಯುತ್ತಾರೆ ಅಂದಾಗ ಇಷ್ಟೊಂದು ಸ್ಥಳವಾದರೂ ಎಲ್ಲಿದೆ? ಆದ್ದರಿಂದ ನಾನು ಜನಸಂಖ್ಯೆಯನ್ನು ಕಡಿಮೆ ಮಾಡಲು ಬರುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಆತ್ಮಗಳೆಲ್ಲಾ ಮೇಲಿಂದ ಬಂದಾಗ ನಮ್ಮ ಮನೆಯು ಖಾಲಿ ಆಗಿಬಿಡುತ್ತದ್ದೆ. ಉಳಿದವರೆಲ್ಲಾ ಬಂದುಬಿಡುತ್ತಾರೆ. ವೃಕ್ಷವೆಂದೂ ಒಣಗುವುದಿಲ್ಲ ನಡೆಯುತ್ತಾ ಬರುತ್ತದೆ. ಅಂತಿಮದಲ್ಲಿ ಪರಮಧಾಮದಲ್ಲಿ ಯಾರೂ ಉಳಿಯುವುದಿಲ್ಲವೋ ಆಗ ಎಲ್ಲರೂ ಹೋಗುತ್ತಾರೆ. ಹೊಸಪ್ರಪಂಚದಲ್ಲಿ ಕೆಲವರೇ ಇದ್ದರು. ಈಗ ಎಷ್ಟೊಂದು ಜನಸಂಖ್ಯೆ ಇದೆ, ಎಲ್ಲರ ಶರೀರಗಳು ಬದಲಾಗುತ್ತಾ ಹೋಗುತ್ತದೆ. ಅದೂ ಸಹ ಕಲ್ಪ-ಕಲ್ಪವೂ ಅವರು ಅದೇ ಜನ್ಮ ಪಡೆಯುತ್ತಾರೆ. ಈ ನಾಟಕವು ಹೇಗೆ ನಡೆಯುತ್ತದೆ ಎಂಬುದನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮಕ್ಕಳಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಳ್ಳುತ್ತಾರೆ. ಬೇಹದ್ದಿನ ನಾಟಕವು ಎಷ್ಟೊಂದು ದೊಡ್ಡದಾಗಿದೆ. ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಬೇಹದ್ದಿನ ತಂದೆಯಂತೂ ಜ್ಞಾನಸಾಗರರಾಗಿದ್ದಾರೆ. ಉಳಿದವರೆಲ್ಲರೂ ಹದ್ದಿನವರಾಗಿದ್ದಾರೆ. ವೇದ-ಶಾಸ್ತ್ರ ಮೊದಲಾದವುಗಳನ್ನು ರಚಿಸುತ್ತಾರೆ. ಅದಕ್ಕಿಂತ ಹೆಚ್ಚಿನದಾಗಿ ಇನ್ನೇನು ರಚಿಸಲ್ಪಡುವುದಿಲ್ಲ. ಪ್ರಾರಂಭದಿಂದ ಹಿಡಿದು ನೀವು ಬರೆಯುತ್ತಾ ಹೋಗಿ ಎಷ್ಟೊಂದು ವಿಸ್ತಾರವಾದ ಗೀತೆಯಾಗಿಬಿಡುತ್ತದೆ. ಎಲ್ಲವನ್ನು ಮುದ್ರಿಸುತ್ತಾ ಹೋದರೆ ಒಂದು ಮನೆಗಿಂತಲೂ ದೊಡ್ಡ ಗೀತೆಯಾಗಿಬಿಡುತ್ತದೆ ಆದ್ದರಿಂದಲೇ ಸಾಗರವನ್ನು ಶಾಹಿಯನ್ನಾಗಿ ಮಾಡಿಕೊಂಡು ಆಕಾಶವನ್ನು.....ಎಂದು ಮಹಿಮೆ ಮಾಡಿದ್ದಾರೆ. ಮತ್ತೆ ಪಕ್ಷಿಗಳು ಸಾಗರವನ್ನೇ ನುಂಗಿಬಿಟ್ಟವು ಎಂದು ಹೇಳಿಬಿಡುತ್ತಾರೆ. ನೀವು ಪಕ್ಷಿಗಳಾಗಿದ್ದೀರಿ. ಜ್ಞಾನಸಾಗರನನ್ನು ನುಂಗುತ್ತಿದ್ದೀರಿ. ನೀವು ಈಗ ಬ್ರಾಹ್ಮಣರಾಗಿದ್ದೀರಿ, ನಿಮಗೆ ಈಗ ಜ್ಞಾನವು ಸಿಕ್ಕಿದೆ. ಜ್ಞಾನದಿಂದ ನೀವು ಎಲ್ಲವನ್ನು ಅರಿತಿದ್ದೀರಿ. ಕಲ್ಪ-ಕಲ್ಪವು ನೀವು ಇಲ್ಲಿ ಓದುತ್ತೀರಿ, ಅದರಲ್ಲಿ ಸ್ವಲ್ಪವೂ ಹೆಚ್ಚು-ಕಡಿಮೆ ಆಗುವುದಿಲ್ಲ. ಯಾರೆಷ್ಟು ಪುರುಷಾರ್ಥ ಮಾಡುತ್ತಾರೆ ಅಷ್ಟು ಪ್ರಾಲಬ್ದವು ಸಿಗುತ್ತದೆ. ನಾವು ಎಷ್ಟು ಪುರುಷಾರ್ಥ ಮಾಡಿ ಯಾವ ಪದವಿಗೆ ಯೋಗ್ಯರಾಗುತ್ತಿದ್ದೇವೆ ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದು. ಶಾಲೆಯಲ್ಲಿಯೂ ಪರೀಕ್ಷೆಯನ್ನು ನಂಬರ್ವಾರಾಗಿ ತೇರ್ಗಡೆಯಾಗುತ್ತಾರೆ. ಸೂರ್ಯವಂಶಿಯರು, ಚಂದ್ರವಂಶಿಯರು - 2 ವಂಶಗಳು ತಯಾರಾಗುತ್ತವೆ. ಯಾರು ಫೇಲ್ ಆಗುತ್ತಾರೋ ಅವರು ಚಂದ್ರವಂಶಿಯರಾಗುತ್ತಾರೆ. ರಾಮನಿಗೆ ಬಾಣವನ್ನು ಏಕೆ ತೋರಿಸುತ್ತಾರೆ ಎಂದು ಯಾರೂ ತಿಳಿದುಕೊಂಡಿಲ್ಲ. ಹೊಡೆದಾಟದ ಇತಿಹಾಸವನ್ನು ಮಾಡಿಬಿಟ್ಟಿದ್ದಾರೆ. ಈ ಸಮಯದಲ್ಲಿ ಹೊಡೆದಾಟವಿದೆ. ಯಾರು ಎಂತಹ ಕರ್ಮವನ್ನು ಮಾಡುತ್ತಾರೋ ಅವರಿಗೆ ಅಂತಹ ಪದವಿ0iÉುೀ ಸಿಗುತ್ತದೆ ಎಂದು ನಿಮಗೆ ಗೊತ್ತಿದೆ. ಹೇಗೆ ಯಾರಾದರೂ ಆಸ್ಪತ್ರೆಯನ್ನು ಕಟ್ಟಿಸುತ್ತಾರೆಂದರೆ ಅವರು ಇನ್ನೊಂದು ಜನ್ಮದಲ್ಲಿ ದೀರ್ಘಾಯಸ್ಸುಳ್ಳವರು ಮತ್ತು ಆರೋಗ್ಯವಂತರಾಗುತ್ತಾರೆ. ಧರ್ಮಶಾಲೆ, ಶಾಲೆಯನ್ನು ಕಟ್ಟಿಸಿದರೆ ಅವರಿಗೆ ಅಲ್ಪಕಾಲದ ಸುಖವು ಸಿಗುತ್ತದೆ. ಇಲ್ಲಿಗೆ ಮಕ್ಕಳು ಬಂದಾಗ ನಿಮಗೆ ಎಷ್ಟು ಮಕ್ಕಳಿದ್ದಾರೆ? ಎಂದು ತಂದೆಯು ಕೇಳುತ್ತಾರೆ. ಆಗ 3 ಜನ ಲೌಕಿಕ ಮಕ್ಕಳು ಮತ್ತೊಬ್ಬರು ಶಿವತಂದೆ ಆಗಿದ್ದಾರೆ ಎಂದು ಹೇಳುತ್ತಾರೆ ಏಕೆಂದರೆ ಅವರು ಆಸ್ತಿಯನ್ನು ಕೊಡುತ್ತಾರೆ ಮತ್ತು ತೆಗೆದುಕೊಳ್ಳುತ್ತಾರೆ. ಲೆಕ್ಕವಿದೆ ಅವರಿಗೆ ಏನನ್ನೂ ತೆಗೆದುಕೊಳ್ಳಬೇಕಾಗಿಲ್ಲ. ಅವರು ಸದಾ ದಾತನಾಗಿದ್ದಾರೆ. ನೀವು ಅವರಿಗೆ ಹಿಡಿ ಅವಲಕ್ಕಿಯನ್ನು ಕೊಟ್ಟು ಮಹಲನ್ನು ಪಡೆಯುತ್ತೀರಿ. ಆದ್ದರಿಂದ ಅವರು ಭೋಲಾನಾಥನಾಗಿದ್ದಾರೆ. ಪತಿತಪಾವನ ಜ್ಞಾನಸಾಗರನಾಗಿದ್ದಾರೆ. ಈ ಭಕ್ತಿಯ ಶಾಸ್ತ್ರಗಳು ಏನೆಲ್ಲಾ ಇವೆಯೋ ಅದೆಲ್ಲದರ ಸಾರವನ್ನು ತಿಳಿಸುತ್ತೇನೆ ಎಂದು ಈಗ ತಂದೆ ಹೇಳುತ್ತಾರೆ. ಅರ್ಧಕಲ್ಪ ಭಕ್ತಿಯ ಫಲವಿರುತ್ತದೆ, ಈ ಸುಖವು ಕಾಗವಿಷ್ಟ ಸಮಾನ ಎಂದು ಸನ್ಯಾಸಿಗಳು ಹೇಳುತ್ತಾರೆ. ಆದ್ದರಿಂದ ಮನೆ-ಮಠವನ್ನು ಬಿಟ್ಟು ಕಾಡಿಗೆ ಹೊರಟುಹೋಗುತ್ತಾರೆ. ತಮಗೆ ಸ್ವರ್ಗದ ಸುಖವು ಬೇಕಾಗಿಲ್ಲ. ಅದರಿಂದ ಮತ್ತೆ ನರಕದಲ್ಲಿ ಬರಬೇಕಾಗುತ್ತದೆ. ಆದ್ದರಿಂದ ನಮಗೆ ಮೋಕ್ಷವು ಬೇಕು ಎಂದು ಹೇಳುತ್ತಾರೆ. ಆದರೆ ಇದು ಬೇಹದ್ದಿನ ನಾಟಕವಾಗಿದೆ ಎಂದು ನೆನಪಿಟ್ಟುಕೊಳ್ಳಿ. ಈ ನಾಟಕದಿಂದ ಒಂದು ಆತ್ಮವೂ ಬಿಡುಗಡೆ ಆಗಲು ಸಾಧ್ಯವಿಲ್ಲ, ಮಾಡಿಮಾಡಲ್ಪಟ್ಟಿದೆ. ಆದ್ದರಿಂದಲೇ ಮಾಡಿಮಾಡಲ್ಪಟ್ಟ, ಮಾಡಲ್ಪಟ್ಟಿರುವ ಎಂದು ಹೇಳುತ್ತಾರೆ. ಆದರೆ ಭಕ್ತಿಮಾರ್ಗದಲ್ಲಿ ಚಿಂತೆ ಮಾಡಬೇಕಾಗುತ್ತದೆ. ಏನೆಲ್ಲಾ ಕಳೆದಿದೆಯೋ ಅದು ಪುನಃ ಆಗುತ್ತದೆ. ನೀವು 84 ಜನ್ಮಗ್ಳ ಚಕ್ರವನ್ನು ಸುತ್ತುತ್ತೀರಿ. ಇದಂತೂ ನಿಂತುಹೋಗುವುದಿಲ್ಲ. ಮಾಡಿ-ಮಾಡಲ್ಪಟ್ಟಿದೆ. ಇದರಲ್ಲಿ ನೀವು ತಮ್ಮ ಪುರುಷಾರ್ಥವನ್ನು ಮಾಡದಿರಲು ಹೇಗೆ ಸಾಧ್ಯ! ನಿಮ್ಮ ಹೇಳಿಕೆಯಿಂದ ನೀವು ಬಿಡುಗಡೆ ಆಗಲು ಸಾಧ್ಯವಿಲ್ಲ, ಮೋಕ್ಷವನ್ನು ಪಡೆಯುವುದು, ಜ್ಯೋತಿ-ಜ್ಯೋತಿಯಲ್ಲಿ ಸಮಾವೇಶ ಆಗುವುದು, ಬ್ರಹ್ಮತತ್ವದಲ್ಲಿ ಲೀನವಾಗುವುದೂ ಒಂದೇ ಆಗಿದೆ. ಅನೇಕ ಧರ್ಮಗಳು, ಅನೇಕ ಮತಗಳಿವೆ ಆದ್ದರಿಂದಲೇ ನಿಮ್ಮ ಗತಿ-ಮತ ನಿಮಗೇ ಗೊತ್ತು, ನಿಮ್ಮ ಶ್ರೀಮತದಿಂದ ಸದ್ಗತಿ ಸಿಗುತ್ತದೆ ಅದು ನಿಮಗೇ ಗೊತ್ತಿದೆ ಎಂದು ಹೇಳಿಬಿಡುತ್ತಾರೆ. ತಾವು ಯಾವಾಗ ಬರುತ್ತೀರೋ ಆಗ ನಾವೂ ತಿಳಿದುಕೊಳುತ್ತೇವೆ ಮತ್ತು ಪಾವನರಾಗುತ್ತೇವೆ. ವಿದ್ಯೆಯನ್ನು ಓದಿದಾಗ ನಮ್ಮ ಸದ್ಗತಿ ಆಗುತ್ತದೆ. ಸದ್ಗತಿ ಆದ ನಂತರ ಯಾರೂ ಕರೆಯುವುದಿಲ್ಲ. ಈ ಸಮಯದಲ್ಲಿ ಎಲ್ಲರ ಮೇಲೆ ದುಃಖಗಳ ಬೆಟ್ಟಗಳು ಬೀಳುವುದಿದೆ. ರಕ್ತದ ನದಿಗಳನ್ನು ತೋರಿಸುತ್ತಾರೆ ಮತ್ತು ಗೋವರ್ಧನ ಪರ್ವತವನ್ನು ತೋರಿಸುತ್ತಾರೆ. ಒಂದೊಂದು ಬೆರಳಿನಿಂದ ಪರ್ವತವನ್ನು ಎತ್ತಿದರು ಎಂದುಹೇಳುತ್ತಾರೆ. ನೀವು ಇದರ ಅರ್ಥವನ್ನು ತಿಳಿದುಕೊಂಡಿದ್ದೀರಿ. ನೀವು ಕೆಲವೇ ಮಕ್ಕಳು ಈ ದುಃಖದ ಪರ್ವತವನ್ನು ದೂರ ಮಾಡುತ್ತೀರಿ. ದುಃಖವನ್ನು ಸಹನೆ ಮಾಡುತ್ತೀರಿ.

ನೀವು ವಶೀಕರಣ ಮಂತ್ರವನ್ನು ಎಲ್ಲರಿಗೆ ಕೊಡಬೇಕಾಗುತ್ತದೆ. ತುಳಸೀದಾಸರು ಚಂದನವನ್ನು ಅರೆದರು ಎಂದು ಹೇಳುತ್ತಾರೆ. ರಾಜ್ಯಭಾಗ್ಯದ ತಿಲಕವು ತಮ್ಮ-ತಮ್ಮ ಪರಿಶ್ರಮದಿಂದ ತಮಗೆ ಸಿಗುತ್ತದೆ. ನೀವು ರಾಜ್ಯಭಾಗ್ಯಕ್ಕಾಗಿ ಓದುತ್ತಿದ್ದೀರಿ, ರಾಜಯೋಗ, ಯಾವುದರಿಂದ ರಾಜ್ಯಭಾಗ್ಯವು ಸಿಗುತ್ತದೆಯೋ ಅದನ್ನು ಓದಿಸುವವರು ತಂದೆಯೊಬ್ಬರೇ ಆಗಿದ್ದಾರೆ. ಈಗ ನೀವು ಮನೆಯಲ್ಲಿ ಕುಳಿತಿದ್ದೀರಿ. ಇದು ದರ್ಬಾರ್ ಅಲ್ಲ. ಎಲ್ಲಿ ರಾಜ-ಮಹಾರಾಜರು ಮಿಲನ ಮಾಡುತ್ತಾರೋ ಅದಕ್ಕೆ ದರ್ಬಾರ್ ಎಂದು ಹೇಳುತ್ತಾರೆ. ಇದು ಪಾಠಶಾಲೆಯಾಗಿದೆ. ತಿಳಿಸುತ್ತಾರೆ - ಯಾವುದೇ ಬ್ರಾಹ್ಮಣಿ ವಿಕಾರಿಗಳನ್ನು ಕರೆದುಕೊಂಡು ಬರಬಾರದು, ಪತಿತರು ವಾಯುಮಂಡಲವನ್ನು ಹಾಳು ಮಾಡುತ್ತಾರೆ ಆದ್ದರಿಂದ ಅನುಮತಿ ಕೊಡುವುದಿಲ್ಲ. ಯಾವಾಗ ಪವಿತ್ರರಾಗುತ್ತಾರೋ ಆಗ ಅನುಮತಿ ನೀಡಲಾಗುತ್ತದೆ. ಈಗ ಕೆಲ-ಕೆಲವರಿಗೆ ಅನುಮತಿ ನೀಡಬೇಕಾಗುತ್ತದೆ. ಒಂದುವೇಳೆ ಇಲ್ಲಿಂದ ಹೋಗಿ ಪತಿತರಾದರೆ ಧಾರಣೆ ಆಗುವುದಿಲ್ಲ. ಇದು ತಮಗೆ ತಾವೇ ಶ್ರಾಪಿತರನ್ನಾಗಿ ಮಾಡಿಕೊಳ್ಳುವುದಾಗಿದೆ. ವಿಕಾರವೇ ರಾವಣನ ಮತವಾಗಿದೆ. ರಾಮನ ಮತವನ್ನು ಬಿಟ್ಟು ರಾವಣನ ಮತದಿಂದ ವಿಕಾರಿಗಳಾಗಿ ಕಲ್ಲಾಗಿಬಿಡುತ್ತಾರೆ. ಹೀಗೆ ಗರುಡಪುರಾಣಗಳಲ್ಲಿ ಬಹಳ ರೋಮಾಂಚಕ ಮಾತುಗಳನ್ನು ಬರೆದುಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ಮನುಷ್ಯರು ಮನುಷ್ಯರೇ ಆಗುತ್ತಾರೆ. ಪ್ರಾಣಿ ಇತ್ಯಾದಿಗಳಾಗುವುದಿಲ್ಲ. ವಿದ್ಯೆಯಲ್ಲಿ ಯಾವುದೇ ಅಂಧಶ್ರದ್ಧೆಯ ಮಾತು ಇರುವುದಿಲ್ಲ. ನಿಮ್ಮದು ಇದು ವಿದ್ಯೆಯಾಗಿದೆ, ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ, ಸಂಪಾದನೆ ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಶೀಕರಣ ಮಂತ್ರವನ್ನು ಎಲ್ಲರಿಗೂ ಕೊಡಬೇಕಾಗಿದೆ. ವಿದ್ಯೆಯ ಪರಿಶ್ರಮದಿಂದ ರಾಜ್ಯಭಾಗ್ಯದ ತಿಲಕವನ್ನು ತೆಗೆದುಕೊಳ್ಳಬೇಕಾಗಿದೆ. ಈ ದುಃಖದ ಬೆಟ್ಟವನ್ನು ದೂರ ಸರಿಸಲು ತಮ್ಮ ಬೆರಳನ್ನು ಕೊಡಬೇಕಾಗಿದೆ.

2. ಸಂಗಮಯುಗದಲ್ಲಿ ಪುರುಷೋತ್ತಮರಾಗುವ ಪುರುಷಾರ್ಥ ಮಾಡಬೇಕಾಗಿದೆ. ತಂದೆಯನ್ನು ನೆನಪು ಮಾಡುವ ಡ್ರಿಲ್ ಮಾಡಬೇಕಾಗಿದೆ ಆದರೆ ಯೋಗ-ಯೋಗ ಎಂದು ಹೇಳಿ ತಬ್ಬಿಬ್ಬಾಗಬಾರದು.

ವರದಾನ:
ಸೇವೆಯಲ್ಲಿ ವಿಘ್ನಗಳನ್ನು ಉನ್ನತಿಯ ಮೆಟ್ಟಿಲು ಎಂದು ತಿಳಿದುಕೊಂಡು ಮುಂದುವರೆಯುವ ನಿರ್ವಿಘ್ನ, ಸತ್ಯ ಸೇವಾಧಾರಿ ಭವ

ಸೇವೆಯು ಬ್ರಾಹ್ಮಣ ಜೀವನವನ್ನು ಸದಾ ನಿರ್ವಿಘ್ನವನ್ನಾಗಿ ಮಾಡುವ ಸಾಧನವೂ ಆಗಿದೆ, ಮತ್ತೆನಂತರ ಸೇವೆಯಲ್ಲಿಯೇ ವಿಘ್ನಗಳ ಪರೀಕ್ಷೆಯೂ ಸಹ ಹೆಚ್ಚಿನದಾಗಿ ಬರುತ್ತದೆ. ನಿರ್ವಿಘ್ನ ಸೇವಾಧಾರಿಗಳನ್ನು ಸತ್ಯಸೇವಾಧಾರಿ ಎಂದು ಹೇಳಲಾಗುತ್ತದೆ. ವಿಘ್ನವು ಬರುವುದೂ ಸದಾ ಡ್ರಾಮಾದಲ್ಲಿ ನಿಗಧಿಯಾಗಿದೆ. ಬಂದೇ ಬರುತ್ತದೆ ಮತ್ತು ಬರುತ್ತಲೇ ಇರುತ್ತದೆ ಏಕೆಂದರೆ ಈ ವಿಘ್ನ ಅಥವ ಪರೀಕ್ಷೆಗಳು ಅನುಭವಿಯನ್ನಾಗಿ ಮಾಡುತ್ತದೆ. ಇದನ್ನು ವಿಘ್ನವೆಂದು ತಿಳಿಯದೆ, ಅನುಭವದ ಉನ್ನತಿಯಾಗುತ್ತಿದೆ- ಈ ಭಾವದಿಂದ ನೋಡುತ್ತೀರೆಂದರೆ ಉನ್ನತಿಯ ಮೆಟ್ಟಿಲೆಂದು ಅನುಭವವಾಗುತ್ತದೆ ಮತ್ತು ಮುಂದುವರೆಯುತ್ತಿರುತ್ತೀರಿ.

ಸ್ಲೋಗನ್:
ವಿಘ್ನರೂಪರಲ್ಲ, ವಿಘ್ನ-ವಿನಾಶಕರಾಗಿರಿ.