12.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಂದೆಯ ಪ್ರೀತಿಯಂತು ಎಲ್ಲಾ ಮಕ್ಕಳೊಂದಿಗೆ ಇದೆ, ಆದರೆ ತಂದೆಯ ಸಲಹೆಯನ್ನು ಯಾರು ತಕ್ಷಣ ಪಾಲಿಸುತ್ತಾರೆಯೋ ಅವರ ಆಕರ್ಷಣೆಯಾಗುತ್ತದೆ, ಗುಣವಂತ ಮಕ್ಕಳು ಪ್ರೀತಿಯನ್ನು ಸೆಳೆಯುತ್ತಾರೆ"

ಪ್ರಶ್ನೆ:
ತಂದೆಯು ಯಾವ ಕಾಂಟ್ರಾಕ್ಟ್ (ಗುತ್ತಿಗೆ) ತೆಗೆದುಕೊಂಡಿದ್ದಾರೆ?

ಉತ್ತರ:
ಎಲ್ಲರನು ಹೂವನ್ನಾಗಿ ಮಾಡಿ ಹಿಂತಿರುಗಿ ಕರೆದುಕೊಂಡು ಹೋಗುವ ಕಾಂಟ್ರಾಕ್ಟ್ ಒಬ್ಬ ತಂದೆಯದಾಗಿದೆ. ತಂದೆಯಂತಹ ಕಾಂಟ್ರಾಕ್ಟರ್ ಪ್ರಪಂಚದಲ್ಲಿ ಮತ್ತ್ಯಾರೂ ಇಲ್ಲ. ಅವರೇ ಸರ್ವರ ಸದ್ಗತಿ ಮಾಡಲು ಬರುತ್ತಾರೆ. ತಂದೆಯು ಸೇವೆಯ ವಿನಃ ಇರಲಾರರು. ಅಂದಾಗ ಮಕ್ಕಳೂ ಸಹ ಸರ್ವೀಸಿನ ಸಾಕ್ಷಿಯನ್ನು ಕೊಡಬೇಕು. ಕೇಳಿಯೂ ಕೇಳದಂತಿರಬಾರದು.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ ತಮ್ಮನ್ನು ಆತ್ಮನೆಂದು ತಿಳಿದು ಕುಳಿತುಕೊಳ್ಳಿ. ಇದನ್ನು ತಂದೆ ಒಬ್ಬರೇ ತಿಳಿಸುತ್ತಾರೆ ಮತ್ತ್ಯಾವುದೇ ಮನುಷ್ಯರು ಯಾರಿಗೂ ತಿಳಿಸಲು ಸಾಧ್ಯವಿಲ್ಲ. ತಮ್ಮನ್ನು ಆತ್ಮನೆಂದು ತಿಳಿಯಿರಿ ಎಂಬುದನ್ನು 5000 ವರ್ಷಗಳ ನಂತರ ತಂದೆಯೇ ಬಂದು ಕಲಿಸುತ್ತಾರೆ. ಇದನ್ನು ನೀವು ಮಕ್ಕಳು ತಿಳಿದಿದ್ದೀರಿ. ಇದು ಪುರುಷೋತ್ತಮ ಸಂಗಮಯುಗ ಎಂದು ಯಾರಿಗೂ ಗೊತ್ತಿಲ್ಲ. ನಾವು ಪುರುಷೋತ್ತಮ ಸಂಗಮಯುಗದಲ್ಲಿ ಇದ್ದೇವೆ ಎಂದೂ ಸಹ ತಾವು ಮಕ್ಕಳಿಗೆ ನೆನಪಿರಲಿ. ಇದೂ ಸಹ ಮನ್ಮನಾಭವ ಆಗಿದೆ. ನನ್ನನ್ನು ನೆನಪು ಮಾಡಿ ಏಕೆಂದರೆ ಈಗ ಹಿಂತಿರುಗಿ ಹೋಗಬೇಕಾಗಿದೆ ಎಂದು ತಂದೆಯು ತಿಳಿಸುತ್ತಾರೆ. 84 ಜನ್ಮಗಳು ಈಗ ಪೂರ್ಣ ಆಗಿದೆ, ಈಗ ಸತೋಪ್ರಧಾನರಾಗಿ ಹಿಂತಿರುಗಿ ಹೋಗಬೇಕಾಗಿದೆ. ಕೆಲವರಂತೂ ಸ್ವಲ್ಪವೂ ನೆನಪು ಮಾಡುವುದಿಲ್ಲ. ತಂದೆಯು ಪ್ರತಿಯೊಬ್ಬರ ಪುರುಷಾರ್ಥವನ್ನು ಚೆನ್ನಾಗಿ ಅರಿತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಇಲ್ಲಿನವರು ಇರಬಹುದು ಅಥವಾ ಹೊರಗಿನವರು ಇರಬಹುದು, ತಂದೆಗೆ ಗೊತ್ತಿದೆ, ಭಲೆ ಇಲ್ಲಿ ಕುಳಿತು ನೋಡುತ್ತೇನೆ ಆದರೆ ಯಾರು ಮಧುರಾತಿ ಮಧುರ ಸೇವಾಧಾರಿ ಮಕ್ಕಳಿದ್ದಾರೆಯೋ ಅವರನ್ನು ನೆನಪು ಮಾಡುತ್ತೇನೆ. ಇವರು ಯಾವ ಪ್ರಕಾರದ ಹೂವಾಗಿದ್ದಾರೆ, ಇವರಲ್ಲಿ ಯಾವ-ಯಾವ ಗುಣಗಳಿವೆ ಎಂದು ಅವರನ್ನೇ ನೋಡುತ್ತೇನೆ. ಕೆಲವರು ಯಾವುದೇ ಗುಣ ಇಲ್ಲದೇ ಇರುವವರೂ ಸಹ ಇದ್ದಾರೆ, ಇಂತಹವರನ್ನು ತಂದೆಯು ಏನು ಮಾಡುತ್ತಾರೆ! ತಂದೆಯಂತೂ ಚುಂಬಕ, ಪವಿತ್ರ ಆತ್ಮ ಆದ್ದರಿಂದ ಅವಶ್ಯ ಆಕರ್ಷಣೆ ಮಾಡುತ್ತಾರೆ. ಆದರೆ ತಂದೆಗೆ ತಿಳಿದೇ ಇರುತ್ತದೆ-ತಂದೆಯು ತಮ್ಮ ಪೂರ್ಣ ಚಾರ್ಟನ್ನು ತಿಳಿಸುತ್ತಾರೆಂದರೆ ಮಕ್ಕಳೂ ಸಹ ತಿಳಿಸಬೇಕು. ನಾನು ನಿಮ್ಮನ್ನು ವಿಶ್ವಕ್ಕೆ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ಯಾರು ಎಂತಹ ಪುರುಷಾರ್ಥ ಮಾಡುತ್ತಾರೋ ಹಾಗೆ ಪಡೆದುಕೊಳ್ಳುತ್ತಾರೆ. ಏನೇನು ಪುರುಷಾರ್ಥ ಮಾಡುತ್ತಾರೆ ಎಂಬುದೂ ಸಹ ತಿಳಿಯಬೇಕು. ತಂದೆಯು ಬರೆಯುತ್ತಾರೆ - ಎಲ್ಲರ ವೃತ್ತಿಯನ್ನು ಬರೆದು ಕಳುಹಿಸಿ ಅಥವಾ ಅವರಿಂದ ಬರೆಯಿಸಿ ಕಳುಹಿಸಿ. ಯಾರು ಸ್ಫೂರ್ತಿಯುಳ್ಳ ಬಹಳ ಬುದ್ಧಿವಂತ ಬ್ರಾಹ್ಮಣಿಯಾಗಿರುತ್ತಾರೆಯೋ ಅವರು ಏನು ವ್ಯವಹಾರ ಮಾಡುತ್ತಾರೆ, ಎಷ್ಟು ಸಂಪಾದನೆ ಇದೆ ಎಂದು ಎಲ್ಲವನ್ನು ಬರೆದು ಕಳುಹಿಸುತ್ತಾರೆ. ತಂದೆಯು ತನ್ನ ಪೂರ್ಣ ಪರಿಚಯವನ್ನು ತಿಳಿಸುತ್ತಾರೆ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಎಲ್ಲರ ಸ್ಥಿತಿಯನ್ನು ತಿಳಿದಿದ್ದಾರೆ. ಭಿನ್ನ-ಭಿನ್ನ ಹೂಗಳಿದ್ದಾರಲ್ಲವೇ (ಒಂದೊಂದು ಹೂವನ್ನು ತೋರಿಸಿ) ನೋಡಿ, ಎಷ್ಟು ಸುಗಂಧವಿದೆ, ಪೂರ್ಣ ಅರಳಿದಾಗ ಎಷ್ಟು ಸುಂದರವಾಗಿ ಶೋಭಿಸುತ್ತದೆ. ನೀವೂ ಸಹ ಈ ಲಕ್ಷ್ಮೀ-ನಾರಾಯಣರಂತೆ ಯೋಗ್ಯರಾಗಿಬಿಡುತ್ತೀರಿ ಅಂದಾಗ ತಂದೆಯೂ ನಿಮ್ಮನ್ನು ನೋಡುತ್ತಿರುತ್ತಾರೆ. ಎಲ್ಲರಿಗೆ ಸಕಾಶವನ್ನು ಕೊಡುತ್ತಾರೆಂದಲ್ಲ. ಯಾರು ಹೇಗಿರುವರೋ ಹಾಗೆಯೇ ಆಕರ್ಷಣೆ ಮಾಡುತ್ತಾರೆ. ಯಾರಲ್ಲಿ ಯಾವುದೇ ಗುಣವಿಲ್ಲವೋ ಅವರೇನು ಆಕರ್ಷಣೆ ಮಾಡುತ್ತಾರೆ? ಇಂತಹವರು ಅಲ್ಲಿಗೆ ಹೋಗಿ ಅತೀ ಕಡಿಮೆ ಪದವಿಯನ್ನು ಪಡೆಯುತ್ತಾರೆ. ತಂದೆಯು ಪ್ರತಿಯೊಬ್ಬರ ಗುಣಗಳನ್ನು ನೋಡುತ್ತಾರೆ ಮತ್ತು ಪ್ರೀತಿಯನ್ನೂ ಮಾಡುತ್ತಾರೆ. ಪ್ರೀತಿಯಲ್ಲಿ ನಯನಗಳು ತೊಯ್ದು ಬಿಡುತ್ತವೆ. ಈ ಸೇವಾಧಾರಿಗಳು ಎಷ್ಟೊಂದು ಸೇವೆ ಮಾಡುತ್ತಾರೆ! ಇವರಿಗೆ ಸೇವೆ ಮಾಡದೆ ವಿಶ್ರಾಂತಿ ಎನಿಸುವುದೇ ಇಲ್ಲ. ಕೆಲವರಂತೂ ಸೇವೆಯನ್ನು ಮಾಡುವುದು ತಿಳಿದುಕೊಂಡೇ ಇಲ್ಲ, ಯೋಗದಲ್ಲಿ ಕುಳಿತುಕೊಳ್ಳುವುದಿಲ್ಲ, ಜ್ಞಾನದ ಭಾವನೆ ಇಲ್ಲ ಇಂತಹವರು ಏನು ಪದವಿಯನ್ನು ಪಡೆಯುತ್ತಾರೆ ಎಂದು ತಂದೆಯು ತಿಳಿಯುತ್ತಾರೆ. ಯಾರನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಯಾರು ಒಳ್ಳೆ ಬುದ್ಧಿವಂತರಿದ್ದಾರೋ, ಸೇವಾಕೇಂದ್ರ ಸಂಭಾಲನೆ ಮಾಡುತ್ತಾರೋ ಅವರು ಒಬ್ಬೊಬ್ಬರ ಲೆಕ್ಕಾಚಾರವನ್ನು ಕಳುಹಿಸಬೇಕು ಆಗ ಇವರು ಎಲ್ಲಿಯವರೆಗೆ ಪುರುಷಾರ್ಥಿಗಳಾಗಿದ್ದಾರೆ ಎಂದು ತಂದೆಯು ತಿಳಿದುಕೊಳ್ಳುವರು. ತಂದೆಯಂತೂ ಜ್ಞಾನಸಾಗರನಾಗಿದ್ದಾರೆ, ಮಕ್ಕಳಿಗೆ ಜ್ಞಾನವನ್ನು ಕೊಡುತ್ತಾರೆ. ಯಾರು ಎಷ್ಟು ಜ್ಞಾನವನ್ನು ಪಡೆಯುತ್ತಾರೆ, ಗುಣವಂತರಾಗುತ್ತಾರೆ ಎಂಬುದು ಬಹುಬೇಗನೆ ತಿಳಿಯುತ್ತದೆ. ತಂದೆಯ ಪ್ರೀತಿ ಎಲ್ಲರ ಮೇಲಿದೆ, ಇದರ ಮೇಲೆ ಒಂದು ಗೀತೆ ಇದೆ, ಮುಳ್ಳುಗಳೊಂದಿಗೆ ನಿಮ್ಮ ಪ್ರೀತಿ ಇದೆ, ಹೂಗಳೊಂದಿಗೂ ನಿಮ್ಮ ಪ್ರೀತಿ ಇದೆ........ನಂಬರ್ವಾರಂತೂ ಇದ್ದೇ ಇದ್ದಾರೆ. ಅಂದಮೇಲೆ ತಂದೆಯ ಜೊತೆ ಎಷ್ಟು ಒಳ್ಳೆಯ ಪ್ರೀತಿ ಇರಬೇಕು. ತಂದೆಯು ಏನು ಹೇಳುತ್ತಾರೋ ಅದನ್ನು ತಕ್ಷಣ ಮಾಡಿ ತೋರಿಸಬೇಕು. ಆಗ ತಂದೆಯ ಜೊತೆ ಪ್ರೀತಿ ಇದೆ ಎಂದು ತಂದೆಯು ತಿಳಿಯುತ್ತಾರೆ, ಅವರಿಗೆ ಆಕರ್ಷಣೆ ಆಗುತ್ತದೆ. ತಂದೆಯಲ್ಲಿ ಇಂತಹ ಆಕರ್ಷಣೆ ಇದೆ, ಅವರನ್ನು ಒಂದೇ ಸಲ ಹೋಗಿ ಹಿಡಿದುಕೊಳ್ಳುತ್ತಾರೆ. ಆದರೆ ಎಲ್ಲಿಯವರೆಗೆ ತುಕ್ಕು ಬಿಟ್ಟು ಹೋಗುವುದಿಲ್ಲವೋ ಅಲ್ಲಿಯವರೆಗೆ ಆಕರ್ಷಣೆಯೂ ಆಗುವುದಿಲ್ಲ. ಒಬ್ಬೊಬ್ಬರನ್ನು ನೋಡುತ್ತೇನೆಂದು ತಂದೆಯು ಹೇಳುತ್ತಾರೆ.

ತಂದೆಗೆ ಸೇವಾಧಾರಿ ಮಕ್ಕಳು ಬೇಕು. ತಂದೆಯಂತೂ ಸೇವೆಗಾಗಿಯೇ ಬರುತ್ತಾರೆ. ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಇದು ನಿಮಗೆ ಗೊತ್ತಿದೆ ಆದರೆ ಪ್ರಪಂಚದವರು ತಿಳಿದುಕೊಂಡಿಲ್ಲ ಏಕೆಂದರೆ ಈಗ ನೀವು ಕೆಲವರೇ ಇದ್ದೀರಿ, ಎಲ್ಲಿಯವರೆಗೆ ಯೋಗವಿರುವುದಿಲ್ಲವೋ ಅಲ್ಲಿಯವರೆಗೆ ಆಕರ್ಷಣೆಯೂ ಆಗುವುದಿಲ್ಲ, ಆ ಪರಿಶ್ರಮವನ್ನು ಕೆಲವರೇ ಮಾಡುತ್ತಾರೆ. ಯಾವುದಾದರೊಂದು ಮಾತಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಇದು ಏನು ಕೇಳಿದರೆ ಅದನ್ನು ಸತ್ಯ-ಸತ್ಯವೆನ್ನುವ ಆ ಸತ್ಸಂಗ ಅಲ್ಲ. ಸರ್ವಶಾಸ್ತ್ರಮಯಿ ಶಿರೋಮಣಿ ಒಂದು ಗೀತೆಯಾಗಿದೆ, ಗೀತೆಯಲ್ಲಿಯೇ ರಾಜಯೋಗವಿದೆ. ವಿಶ್ವದ ಮಾಲೀಕರು ತಂದೆಯೇ ಆಗಿದ್ದಾರೆ. ತಂದೆಯು ಮಕ್ಕಳಿಗೆ ಹೇಳುತ್ತಿರುತ್ತಾರೆ. ಮಕ್ಕಳಿಗೆ ಹೇಳುತ್ತಿರುತ್ತೇನೆ ಗೀತೆಯಿಂದಲೇ ಪ್ರಭಾವವಾಗುತ್ತದೆ ಆದರೆ ಅಷ್ಟು ಶಕ್ತಿಯೂ ಬೇಕಲ್ಲವೆ. ಯೋಗಬಲದ ಹೊಳಪು ಚೆನ್ನಾಗಿರಬೇಕು ಆದರೆ ಅದರಲ್ಲಿಯೇ ಬಹಳ ನಿರ್ಬಲರಾಗುತ್ತಾರೆ. ಇನ್ನೂ ಸ್ವಲ್ಪ ಸಮಯವಿದೆ, ನಾವು ಪ್ರೀತಿ ಕೊಟ್ಟರೆ ಎಲ್ಲರೂ ಕೊಡುತ್ತಾರೆ ಎಂದು ಹೇಳುತ್ತಾರೆ ಅಂದಾಗ ತಂದೆಯು ಹೇಳುತ್ತಾರೆ - ನನ್ನನ್ನು ಪ್ರೀತಿ ಮಾಡಿ ಆಗ ನಾನೂ ಮಾಡುವೆನು. ಇದು ಆತ್ಮಿಕ ಪ್ರೀತಿಯಾಗಿದೆ. ಒಬ್ಬ ತಂದೆಯ ನೆನಪಿನಲ್ಲಿ ಇದ್ದರೆ ಈ ನೆನಪಿನಿಂದಲೇ ವಿಕರ್ಮ ವಿನಾಶವಾಗುತ್ತದೆ. ಕೆಲವರಂತೂ ನೆನಪೇ ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ - ಇಲ್ಲಿ ಭಕ್ತಿಯ ಮಾತಿಲ್ಲ, ಇವರು ಶಿವತಂದೆಯ ರಥವಾಗಿದ್ದಾರೆ, ಇವರ ಮೂಲಕ ಶಿವತಂದೆಯು ಓದಿಸುತ್ತಾರೆ. ನನ್ನ ಕಾಲನ್ನು ತೊಳೆದು ಕುಡಿಯಿರಿ ಎಂದು ತಂದೆಯು ಹೇಳುವುದಿಲ್ಲ. ತಂದೆಯಂತೂ ಕೈ ಜೋಡಿಸುವುದಕ್ಕೂ ಬಿಡುವುದಿಲ್ಲ. ಇದು ವಿದ್ಯೆಯಾಗಿದೆ. ಕೈ ಜೋಡಿಸುವುದರಿಂದ ಏನಾಗುತ್ತದೆ. ತಂದೆಯಂತೂ ಸರ್ವರ ಸದ್ಗತಿ ಮಾಡುವವರಾಗಿದ್ದಾರೆ. ಕೋಟಿಯಲ್ಲಿ ಕೆಲವರೇ ಈ ಮಾತುಗಳನ್ನು ತಿಳಿಯುತ್ತಾರೆ. ಕಲ್ಪದ ಹಿಂದಿನವರೇ ತಿಳಿಯುತ್ತಾರೆ. ಭೋಲಾನಾಥ ತಂದೆಯು ಬಂದು ಭೋಲಾ ಭೋಲಾ (ಮುಗ್ದ) ಮಾತೆಯರಿಗೆ ಜ್ಞಾನವನ್ನು ಕೊಟ್ಟು ಮೇಲೆತ್ತುತ್ತಾರೆ. ತಂದೆಯು ಮುಕ್ತಿ ಮತ್ತು ಜೀವನ್ಮುಕ್ತಿಯಲ್ಲಿ ಏರಿಸುತ್ತಾರೆ. ಕೇವಲ ತಿಳಿಸುತ್ತಾರೆ - ಮಕ್ಕಳೇ, ವಿಕಾರಗಳನ್ನು ಬಿಡಿ, ಆದರೆ ಇದರಲ್ಲಿಯೇ ದೊಂಬಿಯಾಗುತ್ತದೆ (ಜಗಳ). ನನ್ನಲ್ಲಿ ಯಾವ-ಯಾವ ಅವಗುಣಗಳಿವೆ? ಎಂದು ತಮ್ಮನ್ನು ತಾವು ನೋಡಿಕೊಳ್ಳಿ. ವ್ಯಾಪಾರಿಗಳು ಪ್ರತಿನಿತ್ಯ ಲಾಭ-ನಷ್ಟದ ಲೆಕ್ಕವನ್ನುಇಡುತ್ತಾರೆ. ತಾವೂ ಸಹ ಲೆಕ್ಕವನ್ನಿಡಿ - ಎಷ್ಟು ಸಮಯ ಅತಿಪ್ರಿಯ ತಂದೆ ಯಾರು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಅವರನ್ನು ನೆನಪು ಮಾಡಿದ್ದೇವೆಯೇ? ನೋಡಿಕೊಂಡಾಗ ಕಡಿಮೆ ನೆನಪು ಮಾಡಿದರೆ ನಾವು ಇಂತಹ ತಂದೆಯನ್ನು ನೆನಪೇ ಮಾಡಲಿಲ್ಲವೆಂದು ನಾಚಿಕೆಯಾಗುತ್ತದೆ. ನಮ್ಮ ತಂದೆಯು ಎಲ್ಲರಿಗಿಂತಲೂ ವಿಚಿತ್ರವಾಗಿದ್ದಾರೆ. ಇಡೀ ಸೃಷ್ಟಿಯಲ್ಲಿ ಸ್ವರ್ಗವು ಎಲ್ಲದಕ್ಕಿಂತ ವಿಚಿತ್ರವಾಗಿದೆ. ಸ್ವರ್ಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ ಆದರೆ ನೀವು 5000 ವರ್ಷಗಳೆಂದು ಹೇಳುತ್ತೀರಿ. ಎಷ್ಟೊಂದು ರಾತ್ರಿ-ಹಗಲಿನ ವ್ಯತ್ಯಾಸವಿದೆ. ಯಾರು ಹಳೆಯ ಭಕ್ತರಿದ್ದಾರೋ ಅವರ ಮೇಲೆ ತಂದೆಯು ಬಲಿಹಾರಿ ಆಗುತ್ತಾರೆ. ಹೆಚ್ಚಿನ ಭಕ್ತಿಯನ್ನು ಮಾಡಿದ್ದಾರಲ್ಲವೇ. ಬ್ರಹ್ಮಾತಂದೆ ಈ ಜನ್ಮದಲ್ಲಿಯೂ ಗೀತೆಯನ್ನು ಓದುತ್ತಿದ್ದರು ಮತ್ತು ಲಕ್ಷ್ಮೀ-ನಾರಾಯಣರ ಚಿತ್ರವನ್ನು ಇಟ್ಟುಕೊಳ್ಳುತ್ತಿದ್ದರು. ಲಕ್ಷ್ಮಿಯನ್ನು ದಾಸತ್ವದಿಂದ ಮುಕ್ತಿ ಮಾಡಿಬಿಟ್ಟರೆ ಎಷ್ಟು ಖುಷಿ ಇರುತ್ತದೆ. ಹೇಗೆ ನಾವು ಈ ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಪಡೆಯುತ್ತೇವೆ. ನಾನು ಹೋಗಿ ಸುಂದರ ರಾಜಕುಮಾರನಾಗುತ್ತೇನೆ ಎಂದು ಬ್ರಹ್ಮಾತಂದೆಗೂ ಸಹ ಖುಷಿ ಇರುತ್ತದೆ. ಪುರುಷಾರ್ಥವನ್ನೂ ಸಹ ಮಾಡಿಸುತ್ತಿರುತ್ತಾರೆ. ಸುಮ್ಮನೆ ಹೇಗಾಗುತ್ತಾರೆ! ನೀವೂ ಸಹ ತಂದೆಯನ್ನು ಚೆನ್ನಾಗಿ ನೆನಪು ಮಾಡುತ್ತೀರೆಂದರೆ ಸ್ವರ್ಗದ ಆಸ್ತಿಯನ್ನು ಪಡೆಯುತ್ತೀರಿ. ಕೆಲವರು ಓದುವುದೇ ಇಲ್ಲ, ದೈವೀಗುಣಗಳನ್ನೂ ಸಹ ಧಾರಣೆ ಮಾಡುವುದಿಲ್ಲ. ಚಾರ್ಟನ್ನೇ ಇಡುವುದಿಲ್ಲ. ಯಾರು ಶ್ರೇಷ್ಠರಾಗಬೇಕೋ ಅವರೇ ಸದಾ ಚಾರ್ಟನ್ನು ಇಡುತ್ತಾರೆ ಇಲ್ಲವೆಂದರೆ ಕೇವಲ ಶೋ ಮಾಡುತ್ತಾರೆ. 15-20 ದಿನಗಳ ನಂತರ ಬರೆಯುವುದನ್ನು ಬಿಟ್ಟುಬಿಡುತ್ತಾರೆ ಇಲ್ಲಂತೂ ಪರೀಕ್ಷೆಗಳೆಲ್ಲವೂ ಗುಪ್ತವಾಗಿದೆ. ಪ್ರತಿಯೊಬ್ಬರ ವಿದ್ಯಾರ್ಹತೆಯನ್ನು ತಂದೆಯು ತಿಳಿದಿದ್ದಾರೆ. ತಂದೆ ಹೇಳಿದ್ದನ್ನು ತಕ್ಷಣ ಪಾಲಿಸಿದರು, ಆಜ್ಞಾಕಾರಿ, ಪ್ರಾಮಾಣಿಕರು ಎಂದು ಹೇಳುತ್ತಾರೆ. ಈಗ ಮಕ್ಕಳು ಬಹಳ ಕೆಲಸ ಮಾಡಬೇಕು ಎಂದು ತಂದೆಯು ಹೇಳುತ್ತಾರೆ. ಎಷ್ಟು ಒಳ್ಳೊಳ್ಳೆಯ ಮಕ್ಕಳೂ ಸಹ ವಿಚ್ಛೇದನವನ್ನು ಕೊಟ್ಟು ಹೊರಟುಹೋಗುತ್ತಾರೆ. ಇವರು (ಬ್ರಹ್ಮಾರವರು) ಎಂದೂ ವಿಚ್ಛೇದನವನ್ನು ಕೊಡುವುದಿಲ್ಲ. ಇವರಂತೂ ನಾಟಕದನುಸಾರ ದೊಡ್ಡ ಕಾಂಟ್ರಾಕ್ಟ್ ನ್ನು ತೆಗೆದುಕೊಳ್ಳುವುದಕ್ಕಾಗಿಯೇ ಬಂದಿದ್ದಾರೆ. ನಾನು ಎಲ್ಲರಿಗಿಂತ ದೊಡ್ಡ ಕಾಂಟ್ರಾಕ್ಟರ್ ಆಗಿದ್ದೇನೆ, ಎಲ್ಲರನ್ನು ಹೂಗಳನ್ನಾಗಿ ಮಾಡಿ ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆ. ಪತಿತರನ್ನು ಪಾವನರನ್ನಾಗಿ ಮಾಡುವ ಕಾಂಟ್ರಾಕ್ಟರ್ ಒಬ್ಬರೇ ಆಗಿದ್ದಾರೆ ಎಂದು ನೀವು ಮಕ್ಕಳಿಗೂ ಗೊತ್ತಿದೆ, ಅವರು ನಿಮ್ಮ ಮುಂದೆ ಕುಳಿತಿದ್ದಾರೆ. ಕೆಲವರಿಗೆ ಎಷ್ಟು ನಿಶ್ಚಯವಿದೆ, ಕೆಲವರಿಗೆ ಇಲ್ಲವೇ ಇಲ್ಲ. ಇಂದು ಇಲ್ಲಿದ್ದಾರೆ ನಾಳೆ ಹೊರಟೇ ಹೋಗುತ್ತಾರೆ. ಚಲನೆಯೇ ಹಾಗಿದೆ. ನಾವು ತಂದೆಯ ಬಳಿ ಇದ್ದು ತಂದೆಗೆ ಮಕ್ಕಳಾಗಿಯೂ ಏನು ಮಾಡುತ್ತಿದ್ದೇವೆ? ಎಂದು ಆಂತರ್ಯದಲ್ಲಿ ಅವಶ್ಯವಾಗಿ ತಿನ್ನುತ್ತದೆ. ಏನೂ ಸೇವೆ ಮಾಡದಿದ್ದರೆ ಸಿಗುವುದಾದರೂ ಏನು? ಚರಿತ್ರೆಯಂತೂ ಚೆನ್ನಾಗಿರಬೇಕು ಬಾಕಿ ಓಡಿಸುವುದು-ಮಾಡುವುದು ಇದು ಯಾವುದೂ ಚರಿತ್ರೆ ಅಲ್ಲ. ಸರ್ವರ ಸದ್ಗತಿ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ, ಅವರು ಕಲ್ಪ-ಕಲ್ಪವೂ ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಲಕ್ಷಾಂತರವರ್ಷಗಳ ಮಾತೇ ಇಲ್ಲ.

ಅಂದಮೇಲೆ ಮಕ್ಕಳು ಕೆಟ್ಟ ಅಭ್ಯಾಸಗಳನ್ನು ಬಿಡಬೇಕು ಇಲ್ಲವೆಂದರೆ ಪದವಿ ಏನು ಸಿಗುತ್ತದೆ? ಪ್ರಿಯತಮನೂ ಸಹ ಗುಣವನ್ನು ನೋಡಿ ಬಲಿಹಾರಿ ಆಗುತ್ತಾರಲ್ಲವೇ! ಯಾರು ಅವರ ಸೇವೆ ಮಾಡುತ್ತಾರೆಯೋ ಅವರಿಗೆ ಬಲಿಹಾರಿ ಆಗುತ್ತಾರೆ. ಯಾರು ಸೇವೆ ಮಾಡುವುದಿಲ್ಲವೋ ಅವರೇನು ಕೆಲಸಕ್ಕೆ ಬರುತ್ತಾರೆ! ಈ ಮಾತುಗಳು ಬಹಳ ತಿಳಿದುಕೊಳ್ಳುವಂತಹದ್ದಾಗಿದೆ. ನೀವು ಮಹಾನ್ ಭಾಗ್ಯಶಾಲಿಗಳಾಗಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ನಿಮ್ಮಂತಹ ಭಾಗ್ಯಶಾಲಿಗಳು ಬೇರೆ ಯಾರೂ ಇಲ್ಲ. ಭಲೆ ನೀವು ಸ್ವರ್ಗದಲ್ಲಿ ಹೋಗುತ್ತೀರಿ, ಆದರೂ ಸಹ ಶ್ರೇಷ್ಠ ಪ್ರಾಲಬ್ದವನ್ನು ಮಾಡಿಕೊಳ್ಳಬೇಕು. ಕಲ್ಪ-ಕಲ್ಪಾಂತರದ ಮಾತಾಗಿದೆ. ಪದವಿ ಕಡಿಮೆಯಾಗಿಬಿಡುತ್ತದೆ. ಏನು ಸಿಕ್ಕಿದರೆ ಅದೇ ಒಳ್ಳೆಯದು ಎಂದು ಖುಷಿ ಆಗಿಬಿಡಬಾರದು. ಬಹಳ ಒಳ್ಳೆಯ ಪುರುಷಾರ್ಥ ಮಾಡಬೇಕಾಗಿದೆ. ಎಷ್ಟು ಆತ್ಮಗಳನ್ನು ತಮ್ಮ ಸಮಾನರನ್ನಾಗಿ ಮಾಡಿದ್ದೇವೆ? ಎಂದು ಸರ್ವೀಸಿನ ಪ್ರತ್ಯಕ್ಷ ಪ್ರಮಾಣವನ್ನು ಕೊಡಬೇಕು. ನಿಮ್ಮ ಪ್ರಜೆಗಳು ಎಲ್ಲಿದ್ದಾರೆ? ತಂದೆ, ಶಿಕ್ಷಕ ಎಲ್ಲರಿಂದ ಪುರುಷಾರ್ಥ ಮಾಡಿಸುತ್ತಾರೆ ಆದರೆ ಇದು ಅದೃಷ್ಟದಲ್ಲಿ ಇರಬೇಕಲ್ಲವೇ. ತಂದೆಯು ತಮ್ಮ ಶಾಂತಿಧಾಮವನ್ನು ಬಿಟ್ಟು ಪತಿತ ಪ್ರಪಂಚದಲ್ಲಿ ಪತಿತ ಶರೀರದಲ್ಲಿ ಬರುವುದು ಎಲ್ಲದಕ್ಕಿಂತ ದೊಡ್ಡ ಆಶೀರ್ವಾದ ಆಗಿದೆ. ಇಲ್ಲದಿದ್ದರೆ ನಿಮಗೆ ರಚಯಿತ ಹಾಗೂ ರಚನೆಯ ಜ್ಞಾನವನ್ನು ಯಾರು ತಿಳಿಸುತ್ತಾರೆ? ಸತ್ಯಯುಗದಲ್ಲಿ ರಾಮರಾಜ್ಯ ಮತ್ತು ಕಲಿಯುಗದಲ್ಲಿ ರಾವಣರಾಜ್ಯವಿದೆ ಎಂದು ಯಾರ ಬುದ್ಧಿಯಲ್ಲೂ ಕುಳಿತುಕೊಳ್ಳುವುದಿಲ್ಲ. ರಾಮರಾಜ್ಯದಲ್ಲಿ ಒಂದೇ ರಾಜ್ಯವಿತ್ತು, ರಾವಣರಾಜ್ಯದಲ್ಲಿ ಅನೇಕ ರಾಜ್ಯಗಳಿವೆ. ಆದ್ದರಿಂದ ನೀವು ನರಕವಾಸಿಗಳಾಗಿದ್ದೀರಾ ಅಥವಾ ಸ್ವರ್ಗವಾಸಿಗಳಾಗಿದ್ದೀರಾ? ಎಂದು ಕೇಳುತ್ತೀರಿ. ಆದರೆ ನಾವು ಎಲ್ಲಿದ್ದೇವೆ ಎಂದು ಮನುಷ್ಯರು ತಿಳಿದುಕೊಂಡಿಲ್ಲ. ಇದು ಮುಳ್ಳುಗಳ ಕಾಡಾಗಿದೆ, ಸತ್ಯಯುಗವು ಹೂದೋಟವಾಗಿದೆ. ಈಗ ಮಾತಾಪಿತ, ಅನನ್ಯ ಮಕ್ಕಳನ್ನು ಅನುಸರಿಸಿದಾಗಲೇ ಶ್ರೇಷ್ಠರಾಗುತ್ತೀರಿ. ತಂದೆಯು ಬಹಳ ತಿಳಿಸುತ್ತಾರೆ, ಆದರೂ ಸಹ ಇದನ್ನು ತಿಳಿಯುವವರೇ ತಿಳಿಯುತ್ತಾರೆ. ಕೆಲವರಂತೂ ಕೇಳಿದ ನಂತರ ಬಹಳ ಚೆನ್ನಾಗಿ ವಿಚಾರ ಸಾಗರ ಮಂಥನ ಮಾಡುತ್ತಾರೆ, ಇನ್ನೂ ಕೆಲವರು ಕೇಳಿಯೂ ಕೇಳದಂತಿರುತ್ತಾರೆ. ಎಲ್ಲಿ ನೋಡಿದರಲ್ಲಿ ಶಿವತಂದೆಯ ನೆನಪಿದೆಯೇ? ಎಂದು ಬರೆಯಲ್ಪಟ್ಟಿದೆ. ಇದರಿಂದ ಆಸ್ತಿಯು ಅವಶ್ಯವಾಗಿ ನೆನಪಿಗೆ ಬರುತ್ತದೆ. ದೈವೀಗುಣಗಳಿದ್ದರೆ ದೇವತೆಗಳಾಗುತ್ತೀರಿ. ಒಂದುವೇಳೆ ಕ್ರೋಧವಿದ್ದರೆ, ಆಸುರೀ ಗುಣಗಳಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಯಾವುದೇ ಭೂತವಿರುವುದಿಲ್ಲ. ರಾವಣನೇ ಇಲ್ಲವೆಂದರೆ ರಾವಣನ ಭೂತಗಳು ಎಲ್ಲಿಂದ ಬರುತ್ತವೆ? ದೇಹಾಭಿಮಾನ, ಕಾಮ, ಕ್ರೋಧ.... ಇವು ದೊಡ್ಡ ಭೂತಗಳಾಗಿವೆ. ಇದನ್ನು ತೆಗೆಯುವ ಒಂದೇ ಉಪಾಯವಾಗಿದೆ - ತಂದೆಯ ನೆನಪು. ತಂದೆಯ ನೆನಪಿನಿಂದಲೇ ಎಲ್ಲಾ ಭೂತಗಳು ಓಡಿಹೋಗುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿ ಕ್ಲಾಸ್
ಬಹಳ ಮಕ್ಕಳಿಗೆ ಮನಸ್ಸಾಗುತ್ತದೆ ನಾವೂ ಸಹ ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳುವಂತಹ ಸೇವೆ ಮಾಡೋಣವೆಂದು. ತಮ್ಮ ಪ್ರಜೆಗಳನ್ನು ಮಾಡಿಕೊಳ್ಳೋಣವೆಂದು. ಹೇಗೆ ನಮ್ಮ ಬೇರೆ ಸೋದರರು ಸೇವೆಮಾಡುತ್ತಾರೆ ನಾವೂ ಅದೇ ರೀತಿ ಮಾಡಬೇಕು ಎಂದು. ಮಾತೆಯರು ಹೆಚ್ಚಿಗೆ ಇದ್ದಾರೆ. ಕಳಶ ಕೂಡ ಮಾತೆಯರ ಮೇಲೆ ಇಡಲಾಗಿದೆ. ಬಾಕಿ ಇದೆಲ್ಲಾ ಪ್ರವೃತ್ತಿ ಮಾರ್ಗವಾಗಿದೆ. ಎರಡೂ ಬೇಕಲ್ಲವೇ. ಬಾಬಾ ಕೇಳುತ್ತಾರೆ ಎಷ್ಟು ಮಕ್ಕಳಿದ್ದಾರೆ? ನೋಡುತ್ತಾರೆ ಸರಿಯಾದ ಜವಾಬು ಕೊಡುತ್ತಾರೆಯೇ ಎಂದು. 5 ಜನ ಮಕ್ಕಳಿದ್ದಾರೆ. ಅದರಲ್ಲಿ ಶಿವಬಾಬಾ ಕೂಡ ಒಬ್ಬರಾಗಿದ್ದಾರೆ. ಕೆಲವರಂತೂ ನೆಪಮಾತ್ರಕ್ಕೆ ಹೇಳುತ್ತಾರೆ. ಕೆಲವರು ಸತ್ಯವಾಗಿ ಹೇಳುತ್ತಾರೆ. ಯಾರು ವಾರಿಸ್ ಮಾಡುತ್ತಾರೆ, ಅವರು ವಿಜಯಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ. ಯಾರು ಸತ್ಯ-ಸತ್ಯ ವಾರಿಸ್ ಮಾಡುತ್ತಾರೆ ಅವರು ಖುದ್ದು ವಾರಿಸ್ ಆಗುತ್ತಾರೆ. ಸತ್ಯ ಹೃದಯಕ್ಕೆ ಸಾಹೇಬ ಕೂಡ ರಾಜಿóಯಾಗುತ್ತಾರೆ..... ಬಾಕೀ ಎಲ್ಲರೂ ಸುಮ್ಮನೆ ನೆಪಮಾತ್ರಕ್ಕೆ ಹೇಳುತ್ತಾರೆ. ಈ ಸಮಯದಲ್ಲಿ ಪಾರಲೌಕಿಕ ತಂದೆಯೇ ಯಾರು ಎಲ್ಲರಿಗೂ ಆಸ್ತಿಕೊಡುತ್ತಾರೆ ಆದ್ದರಿಂದ ನೆನಪು ಕೂಡಅವರನ್ನೇ ಮಾಡುತ್ತಾರೆ ಯಾರಿಂದ 21 ಜನ್ಮಗಳಿಗೆ ಆಸ್ತಿ ಸಿಗುತ್ತದೆ. ಬುದ್ಧಿಯಲ್ಲಿ ಜ್ಞಾನವಿದೆ ಇಲ್ಲಿ ಎಲ್ಲರೂ ಇರಲು ಸಾಧ್ಯವಿಲ್ಲ. ತಂದೆ ಪ್ರತಿಯೊಬ್ಬರ ಅವಸ್ಥೆಯನ್ನು ನೋಡುತ್ತಾರೆ ಸತ್ಯ-ಸತ್ಯ ವಾರಿಸ್ ಮಾಡಿದ್ದಾರೆ ಇಲ್ಲಾ ಮಾಡುವಂತಹ ಇಚ್ಚೆ ಇಟ್ಟಿದ್ದಾರೆ. ವಾರಿಸ್ ಮಾಡುವಂತಹ ಅರ್ಥವನ್ನು ತಿಳಿದಿದ್ದಾರೆ. ಬಹಳ ಜನರಿದ್ದಾರೆ ತಿಳಿದುಕೊಂಡಿದ್ದರೂ ಸಹಾ ಮಾಡಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಮಾಯೆಗೆ ವಶ ಆಗಿದ್ದಾರೆ. ಈ ಸಮಯದಲ್ಲಿ, ಈಶ್ವರನ ವಶದಲ್ಲಿದ್ದಾರೆ, ಅಥವಾ ಮಾಯೆಯ ವಶದಲ್ಲಿದ್ದಾರೆ. ಈಶ್ವರನ ವಶದಲ್ಲಿ ಯಾರಿದ್ದಾರೆ ಅವರು ವಾರಿಸ್ ಮಾಡುತ್ತಾರೆ. ಮಾಲೆ 8 ರದೂ ಆಗುತ್ತದೆ ಮತ್ತು 108 ರದೂ ಆಗುತ್ತದ್ತೆ. ಎಂಟರ ಮಾಲೆಯಂತೂ ಖಂಡಿತ ಕಮಾಲ್ ಮಾಡಬಹುದು. ಖಂಡಿತ ವಾರಿಸ್ ಆಗಿ ಮಾಡಿಯೇ ತೀರುತ್ತಾರೆ. ಭಲೇ ವಾರಿಸ್ ಅನ್ನೂ ಮಾಡುತ್ತಾರೆ ಆಸ್ತಿಯನ್ನಂತೂ ಪಡೆದೇ ಪಡೆಯುತ್ತಾರೆ. ಆದರೂ ಇಂತಹ ಶ್ರೇಷ್ಠ ವಾರಿಸ್ ಆಗಿ ಮಾಡುವಂತಹವರ ಕರ್ಮವೂ ಅದೇ ರೀತಿ ಶ್ರೇಷ್ಠವಾಗಿರುತ್ತದೆ. ಯಾವುದೇ ವಿಕರ್ಮವಾಗಬಾರದು. ವಿಕಾರ ಏನೇ ಇದ್ದರೂ ಅದು ವಿಕರ್ಮವೇ ತಾನೇ. ತಂದೆಯನ್ನು ಬಿಟ್ಟು ಬೇರೆ ಯಾರನ್ನೋ ನೆನಪು ಮಾಡುವುದು- ಇದು ಸಹ ವಿಕರ್ಮವೇ ಆಗಿದೆ. ತಂದೆಯೆಂದರೆ ತಂದೆ. ತಂದೆ ಮುಖದಿಂದ ಹೇಳುತ್ತಾರೆ ನನ್ನನ್ನೊಬ್ಬನನ್ನೇ ನೆನಪುಮಾಡಿ ಎಂದು. ಸೂಚನೆ ಸಿಕ್ಕಿದೆ ತಾನೇ. ಹಾಗಿದ್ದಲ್ಲಿ ತಕ್ಷಣ ನೆನಪಿನಲ್ಲಿ ತೊಡಗಿರಿ- ಅದರಲ್ಲಿಯೇ ಬಹಳ ಪರಿಶ್ರಮವಿದೆ. ಒಬ್ಬ ತಂದೆಯನ್ನು ನೆನಪುಮಾಡಿದಾಗ ಮಾಯೆ ಅಷ್ಟು ತೊಂದರೆ ಕೊಡುವುದಿಲ್ಲ. ಬಾಕಿ ಮಾಯೆ ಕೂಡ ಬಹಳ ಜಬರ್ದಸ್ತ್ ಆಗಿದೆ. ಬುದ್ಧಿಯಲ್ಲಿ ಬರುತ್ತೆ, ಮಾಯೆ ದೊಡ್ಡ ವಿಕರ್ಮ ಮಾಡಿಸುತ್ತದೆ. ದೊಡ್ಡ-ದೊಡ್ಡ ಮಹಾರಥಿಗಳನ್ನು ಸಹ ಬೀಳಿಸುತ್ತದೆ, ಸೋಲಿಸಿಬಿಡುತ್ತದೆ. ದಿನ ಪ್ರತಿದಿನ ಸೆಂಟರ್ಸ್ಗಳು ವೃದ್ಧಿಯಾಗುತ್ತಿರುತ್ತದೆ. ಗೀತಾ ಪಾಠಶಾಲೆ ಮತ್ತು ಮ್ಯೂಜಿಯಂಗಳು ತೆರೆಯುತ್ತಿರುತ್ತವೆ. ಇಡೀ ಜಗತ್ತಿನ ಜನ ತಂದೆಯನ್ನೂ ಒಪ್ಪುತ್ತಾರೆ, ಬ್ರಹ್ಮಾರವರನ್ನೂ ಒಪ್ಪುತ್ತಾರೆ. ಬ್ರಹ್ಮಾರವರನ್ನೇ ಪ್ರಜಾಪಿತ ಎಂದು ಕರೆಯಲಾಗುತ್ತದೆ. ಆತ್ಮಗಳಿಗಂತೂ ಪ್ರಜೆಯೆಂದು ಹೇಳುವುದಿಲ್ಲ. ಮನುಷ್ಯ ಸೃಷ್ಠಿಯನ್ನು ಯಾರು ರಚಿಸುತ್ತಾರೆ ? ಪ್ರಜಾಪಿತ ಬ್ರಹ್ಮಾರವರ ಹೆಸರು ಬಂದರೆ ಇವರು ಸಾಕಾರವಾಗಿದ್ದಾರೆ, ಅವರು ನಿರಾಕಾರ ಆಗಿದ್ದಾರೆ. ಅವರು ಅನಾದಿಯಾಗಿದ್ದಾರೆ. ಅವರನ್ನೂ ಅನಾದಿಯೆಂದು ಹೇಳಲಾಗುತ್ತದೆ. ಇಬ್ಬರ ಹೆಸರು ಬಹಳ ವಿಶೇಷವಾಗಿದೆ. ಅವರು ಆತ್ಮೀಯ ತಂದೆ, ಇವರು ಪ್ರಜಾಪಿತ. ಇಬ್ಬರೂ ಕುಳಿತು ನಿಮಗೆ ಓದಿಸುತ್ತಾರೆ. ಎಷ್ಟು ವಿಶೇಷವಾದರು ! ಮಕ್ಕಳಿಗೆ ಎಷ್ಟು ನಶೆ ಏರಬೇಕಾಗಿದೆ ! ಖುಷಿ ಎಷ್ಟಿರಬೇಕು ! ಆದರೆ ಮಾಯೆ ಖುಷಿ ಮತ್ತು ನಶೆಯಲ್ಲಿರಲು ಬಿಡುವುದಿಲ್ಲಾ. ಹೀಗೆ ವಿಧ್ಯಾರ್ಥಿಗಳು ವಿಚಾರಸಾಗರ ಮಂಥನ ಮಾಡುತ್ತಿದ್ದರೆ ಸೇವೆಕೂಡ ಮಾಡಬಹುದು. ಖುಷಿ ಕೂಡಯಿರಬಹುದು, ಆದರೆ ಒಂದುಪಕ್ಷ ಈಗ ಸಮಯ ಇದೆ. ಯಾವಾಗ ಕರ್ಮಾತೀತ ಅವಸ್ಥೆಯಿರುತ್ತೆ ಆಗ ಖುಷಿಯಲ್ಲಿರಬಹುದು. ಒಳ್ಳೆಯದು. ಆತ್ಮೀಯ ಮಕ್ಕಳ ಪ್ರತಿ ಆತ್ಮೀಯ ಬಾಪ್ದಾದಾರವರ ನೆನಪು ಪ್ರೀತಿ ಮತ್ತು ಗುಡ್ನೈಟ್.

ಧಾರಣೆಗಾಗಿ ಮುಖ್ಯಸಾರ-
1. ಅತೀ ಮಧುರ ತಂದೆಯನ್ನು ಇಡೀ ದಿನದಲ್ಲಿ ಎಷ್ಟು ನೆನಪು ಮಾಡಿದೆವು? ಎಂದು ಪ್ರತಿನಿತ್ಯ ರಾತ್ರಿಯಲ್ಲಿ ತಮ್ಮ ಚಾರ್ಟನ್ನು ನೋಡಿಕೊಳ್ಳಬೇಕು. ತಮ್ಮ ಶೋ ಮಾಡಲು ಚಾರ್ಟನ್ನು ಇಡಬಾರದು, ಗುಪ್ತ ಪುರುಷಾರ್ಥ ಮಾಡಬೇಕಾಗಿದೆ.

2. ತಂದೆ ಏನು ತಿಳಿಸುತ್ತಾರೋ ಅದನ್ನು ವಿಚಾರ ಸಾಗರ ಮಂಥನ ಮಾಡಬೇಕು. ಸರ್ವೀಸಿನ ಸಾಕ್ಷಿಯನ್ನು ಕೊಡಬೇಕು. ಕೇಳಿಯೂ ಕೇಳದಂತಿರಬಾರದು. ಒಳಗೆ ಯಾವುದೇ ಆಸುರಿ ಗುಣಗಳು ಇದ್ದರೆ, ಅದನ್ನು ಪರಿಶೀಲನೆ ಮಾಡಿ ತೆಗೆದುಹಾಕಬೇಕು.

ವರದಾನ:
ವೈರಾಗ್ಯ ವೃತ್ತಿಯ ಮೂಲಕ ಈ ಸಾರವಿಲ್ಲದ ಜಗತ್ತಿನ ಸೆಳೆತದಿಂದ ಮುಕ್ತರಾಗಿರುವಮತಹ ಸತ್ಯ ರಾಜಋಷಿ ಭವ

ರಾಜಋಷಿ ಅರ್ಥಾತ್ ರಾಜ್ಯವಿದ್ದರೂ ಸಹ ಬೆಹದ್ದಿನ ವೈರಾಗಿ, ದೇಹ ಮತ್ತು ದೇಹದ ಹಳೆಯ ಜಗತ್ತಿನ ಮೇಲೆ ಸ್ವಲ್ಪವೂ ಸಹ ಸೆಳೆತವನ್ನಿಡಬೇಡಿ ಏಕೆಂದರೆ ಈ ಹಳೆಯ ಜಗತ್ತೇ ಅಸಾರ ಸಂಸಾರವಾಗಿದೆ ಎಂದು ತಿಳಿದಿರುವಿರಿ, ಇದರಲ್ಲಿ ಏನೂ ಸಾರವಿಲ್ಲ. ಅಸಾರ ಸಂಸಾರದಲ್ಲಿ ಬ್ರಾಹ್ಮಣರ ಶ್ರೇಷ್ಠ ಸಂಸಾರ ಸಿಕ್ಕಿ ಬಿಟ್ಟಿದೆ ಆದ್ದರಿಂದ ಆ ಸಂಸಾರದಲ್ಲಿ ಬೇಹದ್ದಿನ ವೈರಾಗ್ಯ ಅರ್ಥಾತ್ ಯಾವುದೇ ಸೆಳೆತ ಇಲ್ಲ. ಯಾವಾಗ ಯಾವುದರಲ್ಲಿಯೂ ಸೆಳೆತ ಅಥವಾ ಭಾಗುವಿಕೆ ಇರಬಾರದು ಆಗ ಹೇಳಲಾಗುವುದು ರಾಜಋಷಿ ಹಾಗೂ ತಪಸ್ವಿ.

ಸ್ಲೋಗನ್:
ಯುಕ್ತಿಯುಕ್ತ ಮಾತು ಇದೇ ಆಗಿದೆ ಯಾವುದು ಮಧುರ ಮತ್ತು ಶುಭಭಾವನಾ ಸಂಪನ್ನವಾಗಿರುವುದು.