13.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಂದೆಯು 21 ಜನ್ಮಗಳಿಗಾಗಿ ಮನಸ್ಸನ್ನು ಇಷ್ಟು ಖುಷಿ ಪಡಿಸುತ್ತಾರೆ, ಅದರಿಂದ ನೀವು ಮನಸ್ಸಿನ ಖುಷಿಗಾಗಿ ಮೇಳ-ಉತ್ಸವಗಳಿಗೆ ಹೋಗುವ ಅವಶ್ಯಕತೆಯೇ ಇಲ್ಲ"

ಪ್ರಶ್ನೆ:
ಯಾವ ಮಕ್ಕಳು ಈಗ ತಂದೆಗೆ ಸಹಯೋಗಿಗಳಾಗುವರು ಅವರಿಗಾಗಿ ಯಾವ ಗ್ಯಾರಂಟಿಯಿದೆ?

ಉತ್ತರ:
ಶ್ರೀಮತದನುಸಾರ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ಸಹಯೋಗಿಯಾಗುವ ಮಕ್ಕಳಿಗಾಗಿ ಗ್ಯಾರೆಂಟಿ ಏನೆಂದರೆ ಅವರನ್ನು ಎಂದೂ ಕಾಲವು ಕಬಳಿಸಲು ಸಾಧ್ಯವಿಲ್ಲ, ಸತ್ಯಯುಗೀ ರಾಜಧಾನಿಯಲ್ಲಿ ಎಂದೂ ಅಕಾಲ ಮೃತ್ಯುವಾಗಲು ಸಾಧ್ಯವಿಲ್ಲ, ಸಹಯೋಗಿ ಮಕ್ಕಳಿಗೆ ತಂದೆಯ ಮೂಲಕ ಇಂತಹ ಬಹುಮಾನವು ಸಿಗುತ್ತದೆ - 21 ಪೀಳಿಗೆಗಳವರೆಗೆ ಅಮರರಾಗಿಬಿಡುತ್ತಾರೆ.

ಓಂ ಶಾಂತಿ.
ಮಾಡಿ-ಮಾಡಲ್ಪಟ್ಟ ಸೃಷ್ಟಿಚಕ್ರದನುಸಾರ ಕಲ್ಪದ ಹಿಂದಿನ ತರಹ ಶಿವ ಭಗವಾನುವಾಚ. ಈಗ ತಮ್ಮ ಪರಿಚಯವಂತೂ ತಾವು ಮಕ್ಕಳಿಗೆ ಸಿಕ್ಕಿತು, ತಂದೆಯ ಪರಿಚಯವೂ ಸಿಕ್ಕಿತು. ಬೇಹದ್ದಿನ ತಂದೆಯನ್ನಂತೂ ತಿಳಿದುಕೊಂಡಿರಿ ಮತ್ತು ಬೇಹದ್ದಿನ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನೂ ತಿಳಿದಿರಿ ನಂಬರ್ವಾರ್ ಪುರುಷಾರ್ಥನುಸಾರ ಚೆನ್ನಾಗಿ ತಿಳಿದುಕೊಳ್ಳುತ್ತಾರೆ ಮತ್ತು ಅನ್ಯರಿಗೂ ತಿಳಿಸುತ್ತಾರೆ. ಇನ್ನೂ ಕೆಲವರು ಅರ್ಧಂಬರ್ಧ ಮತ್ತೆ ಕೆಲವರು ಕಡಿಮೆ. ಹೇಗೆ ಸೈನ್ಯದಲ್ಲಿಯೂ ಕೆಲವರು ಕಮ್ಯಾಂಡರ್ (ದಂಡನಾಯಕ), ಕೆಲವರು ಕ್ಯಾಪ್ಟನ್ (ನಾಯಕ) ಕೆಲಕೆಲವರುವರು ಕೆಲವೊಂದು ಪದವಿಯನ್ನು ಪಡೆಯುತ್ತಾರೆ. ರಾಜ್ಯಪದವಿಯ ಮಾಲೆಯಲ್ಲಿಯೂ ಕೆಲವರು ಸಾಹುಕಾರ ಪ್ರಜೆಗಳು, ಕೆಲವರು ಬಡಪ್ರಜೆಗಳು ನಂಬರ್ವಾರ್ ಇರುತ್ತಾರೆ. ಮಕ್ಕಳಿಗೆ ಗೊತ್ತಿದೆ ನಾವು ಅವಶ್ಯವಾಗಿ ಶ್ರೀಮತದನುಸಾರ ಸೃಷ್ಟಿಯಲ್ಲಿ ಶ್ರೇಷ್ಠ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ಯಾರು ಎಷ್ಟೆಷ್ಟು ಪರಿಶ್ರಮ ಮಾಡುವವರೋ ಅಷ್ಟು ತಂದೆಯಿಂದ ಬಹುಮಾನವು ಸಿಗುತ್ತದೆ. ಇಂದಿನ ದಿನಗಳಲ್ಲಿ ಶಾಂತಿಗಾಗಿ ಸಲಹೆ ಕೊಡುವವರಿಗೂ ಬಹುಮಾನವು ಸಿಗುತ್ತದೆ. ನೀವು ಮಕ್ಕಳಿಗೂ ಬಹುಮಾನವು ಸಿಗುತ್ತದೆ, ಅದು ಅವರಿಗೆ ಸಿಗುವುದಿಲ್ಲ. ಅವರಿಗೆ ಪ್ರತಿಯೊಂದು ವಸ್ತು ಅಲ್ಪಕಾಲಕ್ಕಾಗಿ ಸಿಗುತ್ತದೆ. ನೀವು ತಂದೆಯ ಶ್ರೀಮತದಂತೆ ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ ಅದೂ 21 ಪೀಳಿಗೆಗಾಗಿ ಗ್ಯಾರೆಂಟಿಯಾಗಿದೆ. ಅಲ್ಲಿ ಬಾಲ್ಯ ಅಥವಾ ಯವ್ವನದಲ್ಲಿ ಕಾಲವು ಕಬಳಿಸುವುದಿಲ್ಲ. ಮನಸ್ಸಿನಲ್ಲಿಯೂ ಇರಲಿಲ್ಲ, ಚಿತ್ತದಲ್ಲಿಯೂ ಇರಲಿಲ್ಲ, ನಾವು ಇಂತಹ ಸ್ಥಾನದಲ್ಲಿ ಬಂದು ಕುಳಿತುಕೊಳ್ಳುತ್ತೇವೆ ಎಂದು ಇದೂ ಸಹ ಮಕ್ಕಳಿಗೆ ಗೊತ್ತಿದೆ. ಎಲ್ಲಿ ನಿಮ್ಮ ನೆನಪಾರ್ಥವೂ ಇದೆ, ಅಲ್ಲಿ 5000 ವರ್ಷದ ಹಿಂದೆಯೂ ಸೇವೆ ಮಾಡಿದ್ದೀರಿ. ದಿಲ್ವಾಡಾ ಮಂದಿರ, ಅಚಲ್ಘರ್, ಗುರುಶಿಖರವಿದೆ. ನಿಮಗೆ ಶ್ರೇಷ್ಠಾತಿಶ್ರೇಷ್ಠ ಸದ್ಗುರುವೂ ಸಿಕ್ಕಿದ್ದಾರೆ. ಯಾರ ನೆನಪಾರ್ಥವನ್ನು ಮಾಡಲಾಗಿದೆ? ಅಚಲ್ಗರ್ನ (ಅಬು ಪರ್ವತದಲ್ಲಿರುವ ಒಂದು ಮಂದಿರ) ರಹಸ್ಯವನ್ನು ತಿಳಿದುಕೊಂಡಿದ್ದೀರಿ. ಅದು ಮನೆಯ ಮಹಿಮೆಯಾಯಿತು. ನೀವು ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ತಮ್ಮ ಪುರುಷಾರ್ಥದಿಂದ ಪಡೆಯುತ್ತೀರಿ. ಇದು ವಿಚಿತ್ರವಾದ ನಿಮ್ಮ ಜಡ ನೆನಪಾರ್ಥವಾಗಿದೆ, ಅಲ್ಲಿಯೇ ನೀವು ಚೈತನ್ಯದಲ್ಲಿ ಕುಳಿತುಕೊಂಡಿದ್ದೀರಿ. ಇದೆಲ್ಲವೂ ಆತ್ಮಿಕ ಕಾರೋಬಾರ್ ಆಗಿದೆ, ಇದು ಕಲ್ಪದ ಹಿಂದೆಯೂ ನಡೆದಿತ್ತು. ಇದರ ಪೂರ್ಣ ನೆನಪಾರ್ಥವೂ ಇಲ್ಲಿದೆ. ನಂಬರ್ವನ್ ನೆನಪಾರ್ಥ ಯಾರಾದರೂ ದೊಡ್ಡ ಪರೀಕ್ಷೆ ಪಾಸ್ ಮಾಡಿದರೆ, ಅವರ ಒಳಗಡೆ ಖುಷಿ ಹೊಳಪು ಬಂದುಬಿಡುತ್ತದೆ. ಎಷ್ಟು ಪೀಠೋಪಕರಣಗಳು, ವೇಷಭೂಷಣಗಳನ್ನು ಎಷ್ಟು ಚೆನ್ನಾಗಿ ಇಟ್ಟುಕೊಳ್ಳುತ್ತಾರೆ. ತಾವಂತೂ ವಿಶ್ವದ ಮಾಲೀಕರಾಗುತ್ತೀರಿ ನಿಮ್ಮೊಂದಿಗೆ ಹೋಲಿಕೆ ಮಾಡಲು ಯಾರಿಗೂ ಸಾಧ್ಯವಿಲ್ಲ. ಇದೂ ಶಾಲೆಯಾಗಿದೆ ಓದಿಸುವವರನ್ನು ನೀವು ತಿಳಿದುಕೊಂಡಿದ್ದೀರಿ. ಭಗವಾನುವಾಚ - ಭಕ್ತಿಮಾರ್ಗದಲ್ಲಿ ನೀವು ಯಾರನ್ನು ನೆನಪು ಮಾಡುತ್ತೀರಿ, ಪೂಜೆ ಮಾಡುತ್ತೀರಿ ಅವರ ಬಗ್ಗೆ ಗೊತ್ತೇ ಇರಲಿಲ್ಲ. ತಂದೆಯೇ ಸನ್ಮುಖದಲ್ಲಿ ಬಂದು ಎಲ್ಲಾ ರಹಸ್ಯವನ್ನು ತಿಳಿಸುತ್ತಾರೆ ಏಕೆಂದರೆ ಈ ನೆನಪಾರ್ಥವೆಲ್ಲವೂ ನಿಮ್ಮ ಅಂತಿಮ ಸ್ಥಿತಿಯಾಗಿದೆ. ಈಗ ಇನ್ನೂ ಫಲಿತಾಂಶವೂ ಬಂದಿಲ್ಲ. ಯಾವಾಗ ನಿಮ್ಮ ಸ್ಥಿತಿಯು ಸಂಪೂರ್ಣ ಆಗಿಬಿಡುವುದೋ ಅವರದು ಮತ್ತೆ ಭಕ್ತಿಮಾರ್ಗದಲ್ಲಿ ನೆನಪಾರ್ಥವಾಗುತ್ತದೆ. ಹೇಗೆ ರಕ್ಷಾಬಂಧನದ ಹಬ್ಬವಾಗುತ್ತದೆ. ಪೂರ್ಣ ರಕ್ಷಾ ಬಂಧನವನ್ನು ಕಟ್ಟಿಕೊಂಡಾಗ ನಮ್ಮ ರಾಜ್ಯಭಾಗ್ಯವನ್ನು ಪಡೆಯುತ್ತೇವೆಯೋ ಆ ನಂತರ ನೆನಪಾರ್ಥಗಳನ್ನೇ ಮಾಡುವುದಿಲ್ಲ. ಈ ಸಮಯದಲ್ಲಿ ನಮಗೆ ಎಲ್ಲಾ ಮಂತ್ರಗಳ ಅರ್ಥವನ್ನು ತಿಳಿಸಿದ್ದಾರೆ, ಓಂನ ಅರ್ಥವನ್ನೂ ಸಹ ತಿಳಿಸಿದ್ದಾರೆ. ಓಂನ ಅರ್ಥವೂ ದೊಡ್ಡದಾಗಿಲ್ಲ. ಓಂನ ಅರ್ಥವೇನೆಂದರೆ ನಾನು ಆತ್ಮ, ಈ ಶರೀರ ನನ್ನದು. ಅಜ್ಞಾನ ಕಾಲದಲ್ಲಿಯೂ ನೀವು ದೇಹಾಭಿಮಾನದಲ್ಲಿ ಇರುತ್ತೀರೆಂದರೆ ತಮ್ಮನ್ನು ಶರೀರವೆಂದು ತಿಳಿಯುತ್ತೀರಿ. ದಿನ ಪ್ರತಿದಿನ ಭಕ್ತಿಮಾರ್ಗದಲ್ಲಿ ಕೆಳೆಗೆ ಇಳಿಯುತ್ತಾ ಹೋಗುತ್ತದೆ, ತಮೋಪ್ರಧಾನವಾಗುತ್ತದೆ. ಮೊದಲು ಪ್ರತಿಯೊಂದು ವಸ್ತುವು ಸತೋಪ್ರಧಾನವಾಗಿರುತ್ತದೆ, ಭಕ್ತಿಯೂ ಸಹ ಮೊದಲು ಸತೋಪ್ರಧಾನವಾಗಿತ್ತು, ಆಗ ಒಬ್ಬ ಸತ್ಯ ಶಿವತಂದೆಯನ್ನು ನೆನಪು ಮಾಡುತ್ತಿದ್ದರು, ಕೆಲವರೇ ಇದ್ದರು. ದಿನಪ್ರತಿದಿನ ಬಹಳ ವೃದ್ಧಿಯಾಗುತ್ತದೆ. ವಿದೇಶದಲ್ಲಿ ಹೆಚ್ಚಿನ ಮಕ್ಕಳಿಗೆ ಜನ್ಮ ಕೊಡುತ್ತಾರೆಂದರೆ ಅವರಿಗೆ ಪಾರಿತೋಷಕ ಸಿಗುತ್ತದೆ. ಕಾಮ ಮಹಾಶತ್ರುವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಸೃಷ್ಟಿಯು ಬಹಳ ವೃದ್ಧಿ ಆಗಿಬಿಟ್ಟಿದೆ, ಈಗ ಪವಿತ್ರರಾಗಿ.

ನೀವು ಮಕ್ಕಳು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಈಗ ತಂದೆಯ ಮೂಲಕ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಭಕ್ತಿಯ ಹೆಸರು-ಚಿನ್ಹೆಗಳು ಇರುವುದಿಲ್ಲ. ಈಗಂತೂ ಎಷ್ಟೊಂದು ಆಡಂಬರವಿದೆ, ಮನುಷ್ಯರು ಖುಷಿ ಪಡಬೇಕು ಎಂದು ಬಹಳ ಮೇಳ-ಉತ್ಸವಗಳು ಆಗುತ್ತವೆ. ನಿಮ್ಮ ಮನಸ್ಸನ್ನು 21 ಜನ್ಮಗಳಿಗಾಗಿ ತಂದೆಯು ಬಂದು ಖುಷಿ ಪಡಿಸುತ್ತಾರೆ. ನೀವು ಸದಾ ಖುಷಿಯಲ್ಲಿ ಇರುತ್ತೀರಿ, ನಿಮಗೆ ಮೇಳ ಇತ್ಯಾದಿಗಳಿಗೆ ಹೋಗುವ ವಿಚಾರವೂ ಸಹ ಎಂದೂ ಬರುವುದಿಲ್ಲ. ಮನುಷ್ಯರು ಎಲ್ಲಿಯೇ ಹೋಗುತ್ತಾರೆ ಎಂದರೆ ಸುಖಕ್ಕಾಗಿ ಹೋಗುತ್ತಾರೆ, ನಿಮಗೆ ಇಲ್ಲಿ ಪರ್ವತಗಳ ಮೇಲೆ ಹೋಗುವ ಅವಶ್ಯಕತೆ ಇಲ್ಲ. ಇಲ್ಲಿ ನೋಡಿ, ಮನುಷ್ಯರು ಹೇಗೆ ಸಾಯುತ್ತಾರೆ! ಮನುಷ್ಯರು ಸತ್ಯಯುಗ -ಕಲಿಯುಗ, ಸ್ವರ್ಗ-ನರಕವನ್ನೂ ಸಹ ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ಇಲ್ಲಿ ಪೂರ್ಣ ಜ್ಞಾನ ಸಿಕ್ಕಿದೆ. ನನ್ನ ಜೊತೆ ನೀವು ಇರಬೇಕು ಎಂದು ತಂದೆಯು ಹೇಳುವುದಿಲ್ಲ. ನೀವು ಗೃಹಸ್ಥವನ್ನು ಸಂಭಾಲನೆ ಮಾಡಬೇಕಾಗಿದೆ. ಯಾವುದೇ ಏರುಪೇರುಗಳು ಆದಾಗ ಮಕ್ಕಳು ದೂರ ಆಗುತ್ತಾರೆ. ಆದರೂ ನೀವು ತಂದೆಯ ಸಂಗದಲ್ಲಿ ಸದಾ ಇರುವುದಿಲ್ಲ. ಎಲ್ಲರೂ ಸತೋಪ್ರಧಾನರಾಗಲು ಸಾಧ್ಯವಿಲ್ಲ. ಕೆಲವರು ಸತೋ, ಕೆಲವರು ರಜೋ, ಕೆಲವರು ತಮೋ ಸ್ಥಿತಿಯಲ್ಲಿಯೂ ಇದ್ದಾರೆ. ಎಲ್ಲರೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಈಗ ರಾಜಧಾನಿಯು ಸ್ಥಾಪನೆ ಆಗುತ್ತಿದೆ. ಯಾರು ಎಷ್ಟೆಷ್ಟು ತಂದೆಯನ್ನು ನೆನಪು ಮಾಡುತ್ತಾರೋ ಅದರ ಅನುಸಾರವಾಗಿ ರಾಜಧಾನಿಯಲ್ಲಿ ಪದವಿಯನ್ನು ಪಡೆಯುತ್ತಾರೆ. ಮುಖ್ಯವಾಗಿ ತಂದೆಯನ್ನು ನೆನಪು ಮಾಡುವುದಾಗಿದೆ. ಸ್ವಯಂ ತಂದೆಯೇ ಬಂದು ಡ್ರಿಲ್ ಕಲಿಸುತ್ತಾರೆ. ಇದು ಆಳವಾದ ಶಾಂತಿ (ಡೆಡ್ ಸೈಲೆನ್ಸ್) ಆಗಿದೆ. ಇಲ್ಲಿ ಏನೆಲ್ಲಾ ನೋಡುತ್ತೀರೋ ಅದೆಲ್ಲವನ್ನು ನೋಡಿಯೂ ನೋಡದಂತೆ ಇರಬೇಕು. ದೇಹ ಸಹಿತ ಎಲ್ಲದರ ತ್ಯಾಗ ಮಾಡಬೇಕು. ನೀವು ಏನನ್ನು ನೋಡುತ್ತೀರಿ? ಮೊದಲನೆಯದಾಗಿ ತಮ್ಮ ಮನೆಯನ್ನು ನೋಡುತ್ತೀರಿ ಮತ್ತು ವಿದ್ಯೆ ಅನುಸಾರ ಯಾವ ಪದವಿಯನ್ನು ಪಡೆಯುತ್ತೀರೋ, ಆ ಸತ್ಯಯುಗಿ ರಾಜ್ಯಭಾಗ್ಯವನ್ನು ನೀವೇ ತಿಳಿದುಕೊಂಡಿದ್ದೀರಿ. ಸತ್ಯಯುಗವಿದ್ದಾಗ ತ್ರೇತಾ ಇರುವುದಿಲ್ಲ, ತ್ರೇತಾಯುಗವಿದ್ದಾಗ ದ್ವಾಪರಯುಗವಿಲ್ಲ, ದ್ವಾಪರಯುಗವಿದ್ದಾಗ ಕಲಿಯುಗವಿಲ್ಲ. ಈಗ ಕಲಿಯುಗವೂ ಇದೆ, ಸಂಗಮಯುಗವೂ ಇದೆ. ಭಲೆ ನೀವು ಹಳೆಯ ಪ್ರಪಂಚದಲ್ಲಿ ಕುಳಿತಿದ್ದೀರಿ ಆದರೆ ಬುದ್ಧಿಯಿಂದ ನಾವು ಸಂಗಮಯುಗಿಗಳೆಂದು ನೀವು ತಿಳಿಯುತ್ತೀರಿ, ಸಂಗಮಯುಗವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂದು ನೀವು ಅರಿತಿದ್ದೀರಿ. ಪುರುಷೋತ್ತಮ ವರ್ಷ, ಪುರುಷೋತ್ತಮ ಮಾಸ, ಪುರುಷೋತ್ತಮ ದಿನವು ಈ ಪುರುಷೊತ್ತಮ ಸಂಗಮಯುಗದಲ್ಲಿಯೇ ಆಗುತ್ತದೆ. ಪುರುಷೊತ್ತಮರಾಗುವ ಘಳಿಗೆಯೂ ಈ ಪುರುಷೋತ್ತಮ ಯುಗದಲ್ಲಿಯೇ ಇದೆ. ಇದು ಬಹಳ ಚಿಕ್ಕದಾದ ಯುಗವಾಗಿದೆ. ನೀವು ಬಾಜೋಲಿ ಆಟವನ್ನು ಆಡುತ್ತೀರಿ. ಇದರಿಂದ ನೀವು ಸ್ವರ್ಗದಲ್ಲಿ ಹೋಗುತ್ತೀರಿ. ಬ್ರಹ್ಮಾತಂದೆಯೂ ನೋಡಿದ್ದಾರೆ - ಹೇಗೆ ಸಾಧುಗಳು ಅಥವಾ ಕೆಲಕೆಲವರು ಬಾಜೋಲಿ ಆಟವನ್ನು ಆಡುತ್ತಾ-ಆಡುತ್ತಾ ಯಾತ್ರೆಯಲ್ಲಿ ಹೋಗುತ್ತಾರೆ. ಬಹಳ ಕಠಿಣ ಶ್ರಮ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಕಠಿಣತೆಯ ಮಾತಿಲ್ಲ. ಇವು ಯೋಗಬಲದ ಮಾತುಗಳಾಗಿವೆ. ನೆನಪಿನ ಯಾತ್ರೆಯು ನೀವು ಮಕ್ಕಳಿಗೆ ಕಠಿಣವೆನಿಸುತ್ತದೆಯೇ? ಹೆಸರಂತೂ ಬಹಳ ಸಹಜ ಎಂದು ಇಟ್ಟಿದ್ದಾರೆ ಏಕೆಂದರೆ ಇದನ್ನು ಕೇಳಿ ಯಾರೂ ಹೆದರಬಾರದು ಎಂದು. ಬಾಬಾ ನಾವು ಯೋಗದಲ್ಲಿ ಇರಲು ಆಗುವುದಿಲ್ಲ ಎಂದು ಹೇಳುತ್ತಾರೆ, ಆದ್ದರಿಂದ ತಂದೆಯೂ ಇನ್ನೂ ಹಗುರ ಮಾಡಿ ಹೇಳುತ್ತಾರೆ - ಮಕ್ಕಳೇ, ಇದು ತಂದೆಯ ನೆನಪಾಗಿದೆ, ಎಲ್ಲಾ ವಸ್ತುಗಳನ್ನು ನೆನಪು ಮಾಡಲಾಗುತ್ತದೆ. ಹಾಗೆಯೇ ತಾವು ತಮ್ಮನ್ನು ಆತ್ಮನೆಂದು ತಿಳಿಯಿರಿ. ನೀವು ಮಕ್ಕಳಾಗಿದ್ದೀರಲ್ಲವೇ, ಇವರು ನಿಮ್ಮ ತಂದೆಯು ಆಗಿದ್ದಾರೆ, ಪ್ರಿಯತಮನೂ ಆಗಿದ್ದಾರೆ, ಎಲ್ಲಾ ಪ್ರಿಯತಮೆಯರು ಅವರನ್ನು ನೆನಪು ಮಾಡುತ್ತಾರೆ. ಒಬ್ಬ ತಂದೆ ಎಂಬ ಶಬ್ದವೇ ಸಾಕು. ಭಕ್ತಿಮಾರ್ಗದಲ್ಲಿ ನೀವು ಮಿತ್ರ ಸಂಬಂಧಿಕರನ್ನು ನೆನಪು ಮಾಡುತ್ತೀರಿ ಆದರೂ, ಹೇ! ಪ್ರಭು, ಹೇ! ಈಶ್ವರ ಎಂದು ಅವಶ್ಯವಾಗಿ ಹೇಳುತ್ತೀರಿ, ಕೇವಲ ಅವರು ಯಾರು ಎಂಬುವುದು ಗೊತ್ತಿಲ್ಲ. ಆತ್ಮಗಳ ತಂದೆಯು ಪರಮಾತ್ಮನಾಗಿದ್ದಾರೆ. ಈ ಶರೀರದ ತಂದೆಯಂತೂ ದೇಹಧಾರಿ ಆಗಿದ್ದಾರೆ. ಆತ್ಮಗಳ ತಂದೆಯು ಅಶರೀರಿ ಆಗಿದ್ದಾರೆ, ಅವರು ಎಂದೂ ಪುನರ್ಜನ್ಮದಲ್ಲಿ ಬರುವುದಿಲ್ಲ, ಮತ್ತೆಲ್ಲರೂ ಪುನರ್ಜನ್ಮದಲ್ಲಿ ಬರುತ್ತಾರೆ, ಆದ್ದರಿಂದ ನೆನಪು ಮಾಡುತ್ತಾರೆ ಎಂದಮೇಲೆ ಅವರು ಎಂದಾದರೂ ಸುಖವನ್ನು ಕೊಟ್ಟಿದ್ದಾರೆ ಎಂದು ಅರ್ಥವಾಗಿದೆ. ಅವರಿಗೆ ದುಃಖಹರ್ತ-ಸುಖಕರ್ತ ಎಂದು ಹೇಳಲಾಗುತ್ತದೆ ಆದರೆ, ಅವರ ನಾಮ, ರೂಪ, ದೇಶ, ಕಾಲವನ್ನು ತಿಳಿದುಕೊಂಡಿಲ್ಲ. ಎಷ್ಟು ಮನುಷ್ಯರಿದ್ದಾರೋ ಅಷ್ಟು ಮಾತುಗಳು. ಅನೇಕ ಮತಗಳಾಗಿಬಿಟ್ಟಿವೆ.

ತಂದೆಯು ಎಷ್ಟು ಪ್ರೀತಿಯಿಂದ ಓದಿಸುತ್ತಾರೆ, ಅವರು ಶಾಂತಿಯನ್ನು ಕೊಡುವ ಈಶ್ವರನಾಗಿದ್ದಾರೆ, ಅವರಿಂದ ಎಷ್ಟೊಂದು ಸುಖ ಸಿಗುತ್ತದೆ. ಒಂದೇ ಗೀತೆಯನ್ನು ತಿಳಿಸಿ ಪತಿತರನ್ನು ಪಾವನ ಮಾಡಿಬಿಡುತ್ತಾರೆ. ಪ್ರವೃತ್ತಿ ಮಾರ್ಗವು ಬೇಕಲ್ಲವೇ. ಮನುಷ್ಯರು ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಹೇಳಿಬಿಟ್ಟಿದ್ದಾರೆ, ಒಂದುವೇಳೆ ಹಾಗಿದ್ದರೆ ಅಸಂಖ್ಯಾತ ಮನುಷ್ಯರಾಗಿಬಿಡುತ್ತಾರೆ. ಎಷ್ಟೊಂದು ತಪ್ಪು ಮಾಡಿದ್ದಾರೆ. ಈ ಜ್ಞಾನವು ನಿಮಗೆ ಈಗ ಸಿಗುತ್ತದೆ, ಇದು ಮತ್ತೆ ಪ್ರಾಯಃಲೋಪವಾಗಿಬಿಡುತ್ತದೆ. ಚಿತ್ರವೂ ಇದೆ, ಪೂಜೆಯೂ ಆಗುತ್ತದೆ. ಅವರು ತಮ್ಮನ್ನು ದೇವತಾ ಧರ್ಮವರು ಎಂದು ತಿಳಿಯುವುದಿಲ್ಲ. ಯಾರ್ಯಾರು ಯಾರ ಪೂಜೆ ಮಾಡುವವರೋ ಅವರು ಆ ಧರ್ಮದವರಾಗಿದ್ದಾರೆ. ನಾವು ಆದಿ ಸನಾತನ ದೇವೀ-ದೇವತಾ ಧರ್ಮದವರಾಗಿದ್ದೆವು ಎಂಬುದನ್ನು ತಿಳಿದುಕೊಂಡಿಲ್ಲ. ಅವರದೇ ವಂಶಾವಳಿಯಾಗಿದೆ. ಇದನ್ನು ತಂದೆಯು ತಿಳಿಸುತ್ತಾರೆ. ನೀವು ಪಾವನರಾಗಿದ್ದಿರಿ ನಂತರ ತಮೋಪ್ರಧಾನರಾಗಿಬಿಡುತ್ತೀರಿ. ಈಗ ಪಾವನ ಸತೋಪ್ರಧಾನವಾಗಬೇಕಾಗಿದೆ. ಗಂಗಾ ಸ್ನಾನದಿಂದ ಆಗುವಿರೇನು? ಪತಿತ ಪಾವನನಂತೂ ತಂದೆಯಾಗಿದ್ದಾರೆ. ಅವರು ಯಾವಾಗ ಬಂದು ಮಾರ್ಗವನ್ನು ತಿಳಿಸುತ್ತಾರೋ ಆಗಲೇ ಪಾವನರಾಗುತ್ತಾರೆ. ತಂದೆಯನ್ನು ಕರೆಯುತ್ತಿರುತ್ತಾರೆ ಆದರೆ ಏನನ್ನು ತಿಳಿದುಕೊಂಡಿಲ್ಲ. ಹೇ! ಪತಿತಪಾವನ ತಂದೆಯೇ ಬಂದು ನಮ್ಮನ್ನು ಪಾವನ ಮಾಡಿ ಎಂದು ಕರ್ಮೇಂದ್ರಿಯಗಳ ಮೂಲಕ ಆತ್ಮವು ಕರೆಯುತ್ತದೆ. ಎಲ್ಲರೂ ಪತಿತರಾಗಿದ್ದಾರೆ, ಕಾಮಚಿತೆಯಲ್ಲಿ ಸುಡುತ್ತಿರುತ್ತಾರೆ. ಈ ಪಾಠವು ಹೇಗೆ ಮಾಡಲ್ಪಟ್ಟಿದೆ ಮತ್ತೆ ತಂದೆಯು ಬಂದು ಎಲ್ಲರನ್ನೂ ಪಾವನರನ್ನಾಗಿ ಮಾಡಿಬಿಡುತ್ತಾರೆ. ಇದನ್ನು ತಂದೆಯು ಸಂಗಮಯುಗದಲ್ಲಿಯೇ ತಿಳಿಸುತ್ತಾರೆ. ಸತ್ಯಯುಗದಲ್ಲಿ ಒಂದು ಧರ್ಮವಿರುತ್ತದೆ ಉಳಿದವರೆಲ್ಲರು ಹಿಂತಿರುಗಿ ಹೋಗುತ್ತಾರೆ. ನೀವು ನಾಟಕವನ್ನು ತಿಳಿದುಕೊಂಡಿದ್ದೀರಿ. ಇದನ್ನು ಮತ್ತ್ಯಾರೂ ತಿಳಿದಿಲ್ಲ. ಈ ರಚನೆಯ ಆದಿ-ಮಧ್ಯ-ಅಂತ್ಯವೇನಾಗಿದೆ, ಇದರ ಕಾಲಾವಧಿ ಎಷ್ಟು ಎಂಬುದನ್ನು ನೀವೇ ತಿಳಿದುಕೊಂಡಿದ್ದೀರಿ. ಅವರೆಲ್ಲರೂ ಶೂದ್ರರಾಗಿದ್ದಾರೆ, ನೀವು ಬ್ರಾಹ್ಮಣರಾಗಿದ್ದೀರಿ. ನಿಮ್ಮಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಯಾರಾದರೂ ತಪ್ಪು ಮಾಡಿದರೆ ಅವರ ರಿಜಿಸ್ಟರ್ನಿಂದ ಇವರು ವಿದ್ಯಾಭ್ಯಾಸ ಕಡಿಮೆ ಮಾಡಿದ್ದಾರೆಂದು ತಿಳಿಯುತ್ತದೆ. ಹಾಗೆಯೇ ನಡವಳಿಕೆಯ ರಿಜಿಸ್ಟರ್ ಇರುತ್ತದೆ. ಇಲ್ಲಿಯೂ ರಿಜಿಸ್ಟರ್ ಇರಬೇಕು. ಇದು ನೆನಪಿನ ಯಾತ್ರೆಯಾಗಿದೆ, ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಎಲ್ಲದಕ್ಕಿಂತ ಮುಖ್ಯ ಸಬ್ಜೆಕ್ಟ್ ನೆನಪಿನ ಯಾತ್ರೆಯಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ನಾವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇವೆ ಎಂದು ಆತ್ಮವು ಮುಖದಿಂದ ಹೇಳುತ್ತದೆ. ಇವೆಲ್ಲಾ ಮಾತುಗಳನ್ನು ಈ ಬ್ರಹ್ಮಾತಂದೆಯು ತಿಳಿಸುವುದಿಲ್ಲ, ಜ್ಞಾನಸಾಗರ ಪರಮಪಿತ ಪರಮಾತ್ಮನು ಈ ರಥದಲ್ಲಿ ಕುಳಿತು ತಿಳಿಸುತ್ತಾರೆ. ಗೋಮುಖ ಎಂದು ಹೇಳಲಾಗುತ್ತದೆ. ಎಲ್ಲಿ ನೀವು ಕುಳಿತುಕೊಂಡಿದ್ದೀರಿ ಅಲ್ಲಿ ಮಂದಿರವೂ ಮಾಡಲ್ಪಟ್ಟಿದೆ. ಹೇಗೆ ನಿಮ್ಮ ಏಣಿ ಇದೆಯೋ ಹಾಗೆಯೇ ಅಲ್ಲಿ ಮೆಟ್ಟಿಲುಗಳು ಇವೆ. ನಿಮಗೆ ಏರುವುದರಲ್ಲಿ ಸುಸ್ತಾಗುವುದಿಲ್ಲ.

ನೀವಿಲ್ಲಿ ತಂದೆಯಿಂದ ಓದಿ ರಿಫ್ರೆಷ್ ಆಗಲು ಬರುತ್ತೀರಿ. ಅಲ್ಲಿ ಬಹಳ ಉದ್ಯೋಗ-ವ್ಯವಹಾರಗಳ ಚಿಂತೆ ಇರುತ್ತದೆ. ಶಾಂತಿಯಿಂದ ಕೇಳುವುದಕ್ಕೂ ಆಗುವುದಿಲ್ಲ. ಇಲ್ಲಿ ಕುಳಿತಿದ್ದರೂ ಸಹ ಯಾರು ನೋಡದಿರಲಿ ಬೇಗ ಮನೆಗೆ ಹೋಗೋಣವೆಂದು ಸಂಕಲ್ಪ ನಡೆಯುತ್ತಿರುತ್ತದೆ, ಎಷ್ಟೊಂದು ಚಿಂತೆ ಇರುತ್ತದೆ. ಇಲ್ಲಿ ಯಾವುದೇ ಚಿಂತೆಯೂ ಇಲ್ಲ. ಹೇಗೆ ಹಾಸ್ಟಲ್ನಲ್ಲಿರುತ್ತಾರೆ, ಇಲ್ಲಿ ಈಶ್ವರೀಯ ಪರಿವಾರವಿದೆ, ಶಾಂತಿಧಾಮದಲ್ಲಿ ಸಹೋದರ-ಸಹೋದರರಿರುತ್ತಾರೆ, ಇಲ್ಲಿ ಸಹೋದರ-ಸಹೋದರಿಯಾಗಿರುತ್ತಾರೆ ಏಕೆಂದರೆ, ಇಲ್ಲಿ ಪಾತ್ರವನ್ನು ಅಭಿನಯಿಸಬೇಕಾದರೆ ಸಹೋದರ-ಸಹೋದರಿಯರು ಬೇಕು. ಸತ್ಯಯುಗದಲ್ಲಿಯೂ ನೀವೇ ಪರಸ್ಪರ ಸಹೋದರ-ಸಹೋದರಿಯಾಗಿರುತ್ತೀರಿ ಅದಕ್ಕೆ ಅದ್ವೈತ ರಾಜಧಾನಿ ಎಂದು ಕರೆಯಲಾಗುತ್ತದೆ. ಅಲ್ಲಿ ಕಲಹ-ಜಗಳ ಏನೂ ಆಗುವುದಿಲ್ಲ. ಈಗ ನೀವು ಮಕ್ಕಳಿಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಪೂರ್ಣ ಜ್ಞಾನವು ಸಿಕ್ಕಿದೆ. ಯಾರು ಹೆಚ್ಚಿನ ಭಕ್ತಿಯನ್ನು ಮಾಡಿದ್ದಾರೆಯೋ ಅವರ ಲೆಕ್ಕವನ್ನು ತಂದೆಯು ತಿಳಿಸುತ್ತಾರೆ. ನೀವೇ ಶಿವನ ಅವ್ಯಭಿಚಾರಿ ಭಕ್ತಿಯನ್ನು ಮಾಡುವುದು ಆರಂಭಿಸುತ್ತೀರಿ. ನಂತರ ವೃದ್ಧಿ ಆಗುತ್ತಾ ಹೋಗುತ್ತದೆ ಅದೆಲ್ಲವೂ ಭಕ್ತಿಯಾಗಿದೆ, ಜ್ಞಾನವು ಒಂದೇ ಇರುತ್ತದೆ. ನೀವು ತಿಳಿದುಕೊಂಡಿದ್ದೀರಿ - ನಮಗೆ ಶಿವತಂದೆಯು ಓದಿಸುತ್ತಾರೆ. ಈ ಬ್ರಹ್ಮಾರವರು ಏನನ್ನೂ ತಿಳಿದುಕೊಂಡಿಲ್ಲ. ಯಾರು ಗ್ರೇಟ್-ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದರೋ, ಅವರು ಈಗ ಈ ರೀತಿ ಇದ್ದಾರೆ. ಮತ್ತೆ ಇವರೇ ಮಾಲೀಕನಾಗುತ್ತಾರೆ - ತತತ್ವಂ. ಕೇವಲ ಒಬ್ಬರೇ ಮಾಲೀಕನಾಗುವುದಿಲ್ಲ. ನೀವು ಪುರುಷಾರ್ಥ ಮಾಡುತ್ತೀರಿ, ಇದು ಬೇಹದ್ದಿನ ಶಾಲೆಯಾಗಿದೆ. ಅದರ ಶಾಖೆಗಳು ಬಹಳಷ್ಟಿವೆ. ಗಲ್ಲಿ-ಗಲ್ಲಿ, ಮನೆ-ಮನೆಯಲ್ಲಿಯೂ ಆಗಿಬಿಡುತ್ತವೆ. ನಾವು ನಮ್ಮ ಮನೆಯಲ್ಲಿ ಚಿತ್ರವನ್ನಿಟ್ಟಿದ್ದೇವೆ. ಮಿತ್ರ-ಸಂಬಂಧಿ ಮೊದಲಾದವರು ಯಾರೇ ಬರಲಿ ಅವರಿಗೆ ತಿಳಿಸುತ್ತೇವೆಂದು ಹೇಳುತ್ತಾರೆ. ಯಾರು ಈ ವೃಕ್ಷದ ಎಲೆಗಳಾಗಿರುವರೋ ಅವರು ಬಂದು ಬಿಡುತ್ತಾರೆ. ಅವರ ಕಲ್ಯಾಣಕ್ಕಾಗಿಯೇ ನೀವು ಮಾಡುತ್ತೀರಿ. ಚಿತ್ರಗಳನ್ನು ಕುರಿತು ತಿಳಿಸುವುದು ಸಹಜವಾಗುವುದು. ಬಹಳಷ್ಟು ಶಾಸ್ತ್ರಗಳನ್ನು ಓದಿದ್ದೀರಿ. ಈಗ ಎಲ್ಲವನ್ನೂ ಮರೆಯಬೇಕಾಗಿದೆ. ಓದಿಸುವವರು ಒಬ್ಬರೇ ಆಗಿದ್ದಾರೆ, ಅವರೇ ಸತ್ಯ ಜ್ಞಾನವನ್ನು ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಆಳವಾದ ಶಾಂತಿಯ ಡ್ರಿಲ್ ಮಾಡಲು ಇಲ್ಲಿ ಏನೆಲ್ಲವನ್ನು ಈ ಕಣ್ಣುಗಳಿಂದ ನೋಡುತ್ತೀರಿ, ಅದನ್ನು ನೋಡಬಾರದು. ದೇಹ ಸಹಿತ ಬುದ್ಧಿಯಿಂದ ಎಲ್ಲವನ್ನೂ ತ್ಯಾಗ ಮಾಡಿ ತಮ್ಮ ಮನೆ ಮತ್ತು ರಾಜ್ಯದ ಸ್ಮೃತಿಯಲ್ಲಿರಬೇಕಾಗಿದೆ.

2. ತಮ್ಮ ನಡುವಳಿಕೆಯ ರೆಜಿಸ್ಟರನ್ನು ಇಡಬೇಕಾಗಿದೆ. ವಿದ್ಯೆಯಲ್ಲಿ ಎಂದೂ ತಪ್ಪು ಮಾಡಬಾರದಾಗಿದೆ. ಈ ಪುರುಷೋತ್ತಮ ಸಂಗಮಯುಗದಲ್ಲಿ ಪುರುಷೊತ್ತಮರಾಗಬೇಕು ಮತ್ತು ಅನ್ಯರನ್ನೂ ಮಾಡಬೇಕಾಗಿದೆ.

ವರದಾನ:
ಸದಾ ಸರ್ವ ಪ್ರಾಪ್ತಿಗಳಿಂದ ಸಂಪನ್ನರಾಗಿರುವಂತಹ ಹರ್ಷಿತಮುಖ, ಹರ್ಷಿತಚಿತ್ತ ಭವ

ಎಂದಾದರೂ ಯಾವುದೇ ದೇವಿ ಅಥವಾ ದೇವತಾ ಮೂರ್ತಿ ಮಾಡಿದಾಗ ಅದರಲ್ಲಿ ಚೆಹರೆ ಸದಾ ಹರ್ಷಿತರನ್ನಾಗಿ ತೋರಿಸುತ್ತಾರೆ. ಆದ್ದರಿಂದ ನಿಮ್ಮ ಈ ಸಮಯದಲ್ಲಿನ ಹರ್ಷಿತಮುಖದಿಂದಿರುವುದರ ನೆನಪಾರ್ಥ ಚಿತ್ರದಲ್ಲಿಯೂ ತೋರಿಸುತ್ತಾರೆ. ಹರ್ಷಿತಮುಖ ಅರ್ಥಾತ್ ಸದಾ ಸರ್ವ ಪ್ರಾಪ್ತಿಗಳಿಂದ ಸಂಪನ್ನ. ಯಾರು ಸಂಪನ್ನರಾಗಿರುತ್ತಾರೆ ಅವರೇ ಹರ್ಷಿತರಾಗಿರಲು ಸಾಧ್ಯ. ಒಂದುವೇಳೆ ಯಾವುದಾದರೂ ಅಪ್ರಾಪ್ತಿಯಾದಲ್ಲಿ ಆಗ ಹಷಿತರಾಗಿರಲು ಸಾಧ್ಯವಿಲ್ಲ. ಯಾರು ಎಷ್ಟೇ ಹರ್ಷಿತರಾಗಿರಲು ಪ್ರಯತ್ನ ಮಾಡಲಿ, ಹೊರಗಿನಿಂದ ನಗುತ್ತಾರೆ ಆದರೆ ಹೃದಯದಿಂದ ಅಲ್ಲ. ನೀವಂತೂ ಹೃದಯದಿಂದ ಮುಗುಳ್ನಗುವಿರಿ ಏಕೆಂದರೆ ಸರ್ವ ಪ್ರಾಪ್ತಿಗಳಿಂದ ಸಂಪನ್ನ ಹರ್ಷಿತಚಿತ್ತರಾಗಿರುವಿರಿ.

ಸ್ಲೋಗನ್:
ಪಾಸ್ ವಿತ್ ಆನರ್ ಆಗಬೇಕಾದರೆ ಪ್ರತಿ ಖಜಾನೆಯ ಜಮಾಖಾತೆ ಸಂಪನ್ನವಾಗಿರಬೇಕು.