14.04.24    Avyakt Bapdada     Kannada Murli    15.03.99     Om Shanti     Madhuban


ಕರ್ಮಾತೀತ ಸ್ಥಿತಿಯನ್ನು ತಲುಪಲು, ನಿಯಂತ್ರಣ ಶಕ್ತಿಯನ್ನು ಹೆಚ್ಚಿಸಿ ಮತ್ತು ಸ್ವ-ರಾಜ್ಯದ ಅಧಿಕಾರಿ ಆಗಿ.


ಇಂದು ಬಾಪ್ದಾದಾರವರು ಎಲ್ಲಾ ಕಡೆಯ ತನ್ನ ರಾಜಕುಮಾರ ರಾಜಕುಮಾರಿಯರನ್ನು, ಪರಮಾತ್ಮ ಪ್ರೀತಿಯ ಮಕ್ಕಳನ್ನು ಇಂತಹ ದೈವೀಕ ವಾತ್ಸಲ್ಯ ಅಥವಾ ದೈವೀಕ ಪ್ರೀತಿಯು ಕೆಲವೇ ಕೆಲವು ಮಕ್ಕಳಿಗೆ ಪ್ರಾಪ್ತವಾಗುತ್ತದೆ.ಅತಿ ವಿರಳವಾಗಿ ಕೆಲವರಲ್ಲಿ ಕೆಲವು ಮಕ್ಕಳು ಇಂತಹ ಭಾಗ್ಯಕ್ಕೆ ಅರ್ಹರಾಗುತ್ತಾರೆ. ಅಂತಹ ಭಾಗ್ಯವಂತ ಮಕ್ಕಳನ್ನು ನೋಡಿ ಪಾಪ್ ದಾದ ಕೂಡ ಹರ್ಷಿತವಾಗುತ್ತಾರೆ. ರಾಜ್ ದುಲಾರೆ ಅಂದರೆ ರಾಜನ ಮಕ್ಕಳು. ಹಾಗಾದರೆ ಹಾಗಾದರೆ ತಮ್ಮನ್ನು ರಾಜ ಎಂದು ಪರಿಗಣಿಸುತ್ತೀರಾ? ತಮ್ಮ ಹೆಸರು ಆಗಿದೆ ರಾಜ ಯೋಗಿ. ರಾಜ ಯೋಗಿ ಎಂದರೆ ರಾಜ ಮಕ್ಕಳು. ವರ್ತಮಾನ ಸಮಯದಲ್ಲೂ ರಾಜರಾಗಿದ್ದೀರಿ ಹಾಗೂ ಭವಿಷ್ಯದಲ್ಲೂ ರಾಜರಾಗುತ್ತೀರಿ. ತಮ್ಮ ಡಬಲ್ ರಾಜ ಪದವಿಯನ್ನು ಅನುಭವ ಮಾಡುತ್ತೀರಾ? ನಾನು ರಾಜನಾಗಿದ್ದೇನೆಯೇ ಎಂದು ತಮ್ಮನ್ನು ತಾವು ಅವಲೋಕಿಸಿಕೊಳ್ಳಬೇಕು. ಸ್ವ--ರಾಜ್ಯದ ಅಧಿಕಾರಿ ಆಗಿದ್ದೇನೆಯೇ? ರಾಜ್ಯದ ಪ್ರತಿಯೊಬ್ಬ ಕರ್ಮಚಾರಿಯೂ ತಮ್ಮ ಆದೇಶವನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆಯೇ? ರಾಜನ ವಿಶೇಷತೆ ಏನಾಗಿರುತ್ತದೆ, ಅದಂತೂ ಗೊತ್ತಿದೆಯಲ್ಲವೇ? ಆಳುವ ಹಾಗೂ ನಿಯಂತ್ರಿಸುವ ಶಕ್ತಿ ಎರಡನ್ನೂ ತಾವು ಪಡೆದುಕೊಂಡಿದ್ದೀರಾ? ರಾಜ್ಯದ ಕರ್ಮಚಾರಿಗಳು ಸದಾ ತಮ್ಮ ನಿಯಂತ್ರಣದಲ್ಲಿ ಇರುತ್ತಾರೆಯೇ ಎಂದುತಮ್ಮನ್ನು ತಾವು ಕೇಳಿಕೊಳ್ಳಿ .

ಇಂದು ಬಾಪ್ದಾದಾರವರು ಮಕ್ಕಳ ನಿಯಂತ್ರಣ ಶಕ್ತಿ ಮತ್ತು ಆಡಳಿತದ ಶಕ್ತಿಯನ್ನು ಪರಿಶೀಲಿಸುತ್ತಿದ್ದರು, ಆಗ ಏನು ನೋಡಿರಬಹುದು? ತಮಗೆಲ್ಲ ಗೊತ್ತೇ ಇದೆ. ಅಖಂಡ ರಾಜ್ಯದ ಅಧಿಕಾರ ಇನ್ನೂವರೆಗೂ ಎಲ್ಲರಿಗೂ ಸಿಕ್ಕಿಲ್ಲ ಎಂದು ನೋಡಿದರು. ಅಖಂಡ, ಮಧ್ಯದಲ್ಲಿ ಖಂಡಿತವಾಗುತ್ತದೆ ಏಕೆ? ಸದಾ ಸ್ವರಾಜ್ಯದ ಬದಲು, ರಾಜ್ಯ ವಿಭಜಿತವಾಗಿರುತ್ತದೆ ಇಲ್ಲಿ ರಾಜ್ಯ ಎಂದರೆ - ಕರ್ಮೇಂದ್ರಿಯಗಳು. ಕರ್ಮೇಂದ್ರಿಯಗಳು ಸ್ವಯಂನ ಬದಲಾಗಿ ಪರರ ಅಧೀನವಾಗಿರುತ್ತವೆ. ಮಾಯೆಯ ರಾಜ್ಯದ ಪ್ರಭಾವ ಅಂದರೆ ಪರರ ಅಧೀನವಾಗಿರುವುದು. ವರ್ತಮಾನ ಸಮಯದಲ್ಲಿ ಕೆಲವೇ ಕೆಲವರು ಸರಿಯಾಗಿದ್ದರೆ ಹಾಗೂ ಹೆಚ್ಚಿನವರು ಮಾಯೆಯ ವಿಶೇಷ ಪ್ರಭಾವಕ್ಕೆ ಅಧೀನರಾಗಿದ್ದಾರೆ. ನಮ್ಮ ಆದಿ ಅನಾದಿ ಸಂಸ್ಕಾರಗಳ ನಡುವೆ ಮಧ್ಯದ ಸಂಸ್ಕಾರ ಅಂದರೆ ದ್ವಾಪರದಿಂದ ಅಂತ್ಯದವರೆಗಿನ ಸಂಸ್ಕಾರಗಳ ಪ್ರಭಾವದಲ್ಲಿ ಬರುತ್ತೇವೆ. ನಮ್ಮ ಅಂತ್ಯದ ಸಂಸ್ಕಾರಗಳು ನಮ್ಮ ಕರ್ಮೇಂದ್ರಿಯಗಳ ಮೇಲಿನ ಅಧಿಪತ್ಯವನ್ನು ಖಂಡಿಸಿ ಬಿಡುತ್ತವೆ. ಅಂತ್ಯದ ಸಂಸ್ಕಾರಗಳಲ್ಲೇ ವ್ಯರ್ಥವನ್ನು ಯೋಚಿಸುವುದು, ವ್ಯರ್ಥವಾಗಿ ಸಮಯ ಕಳೆಯುವುದು, ವ್ಯರ್ಥ ಮಾತುಕತೆ ಅದು ಕೇಳುವುದೇ ಆಗಿರಬಹುದು ಅಥವಾ ಹೇಳುವುದೇ ಆಗಿರ ಬಹುದು ಇವೆಲ್ಲವೂ ಬರುತ್ತವೆ ಒಂದು ಕಡೆ ವ್ಯರ್ಥದ ಸಂಸ್ಕಾರ ಇನ್ನೊಂದೆಡೆ ಹುಡುಗಾಟಿಕೆಯ ಸಂಸ್ಕಾರಗಳು ಇವು ಬೇರೆ ಬೇರೆ ರೂಪಗಳಲ್ಲಿ ಸ್ವರಾಜ್ಯವನ್ನು, ಅಂದರೆ ನಮ್ಮ ಕರ್ಮೇಂದ್ರಿಯಗಳ ಮೇಲೆ ನಮ್ಮ ಅಧಿಪತ್ಯವನ್ನು ಖಂಡಿಸಿಬಿಡುತ್ತವೆ. ಮಕ್ಕಳು ಹೇಳುತ್ತಿರುತ್ತಾರೆ ಸಮಯ ಸಮೀಪ ಬರುತ್ತಿದೆ ಆದರೆ ಆರಂಭದಲ್ಲಿ ಹುಟ್ಟಿಕೊಳ್ಳದ ಸಂಸ್ಕಾರಗಳು ಈಗ ಅಲ್ಲಿ ಇಲ್ಲಿ ಹೊರಹೊಮ್ಮುತ್ತಿದೆ, ವಾಯುಮಂಡಲದಲ್ಲಿ ಸಂಸ್ಕಾರಗಳು ಹುಟ್ಟಿಕೊಳ್ಳುತ್ತಿವೆ ಇದಕ್ಕೆ ಕಾರಣವೇನು? ಇದು ಮಾಯೆಯ ಅತಿಕ್ರಮಣದ ಸಾಧನವಾಗಿದೆ ಮಾಯೆ ಸಂಸ್ಕಾರಗಳನ್ನು ತನ್ನದಾಗಿಸಿಕೊಂಡು ಪರಮಾತ್ಮನ ಮಾರ್ಗದಲ್ಲಿ ಅಂದರೆ ಶ್ರೀಮತದಲ್ಲಿ ಹೃದಯವಿಧಿರ್ಣರಾಗುವಂತೆ ಮಾಡುತ್ತದೆ. ಮಕ್ಕಳು ಯೋಚಿಸುತ್ತಾರೆ - ಇಲ್ಲಿಯವರೆಗೂ ಹೀಗೆ ಇದ್ದೇವೆ ಬಾಬಾರವರ ಸಮಾನತೆಯ ಸಫಲತೆ ಸಿಗುತ್ತದೆಯೋ ಇಲ್ಲವೋ! ಎಲ್ಲಿಯೋ ಯಾವುದೋ ಮಾತಿನಲ್ಲಿ ದುರ್ಬಲತೆ ಇರಬಹುದು ಅದೇ ದೌರ್ಬಲ್ಯದ ರೂಪದಲ್ಲಿ, ಮಾಯೆಯು ಮನಸ್ಸು ಮುರಿಯುವಂತೆ ಮಾಡಲು ಪ್ರಯತ್ನ ಪಡುತ್ತದೆ. ಬಹಳ ಒಳ್ಳೆಯದು. ಜ್ಞಾನಮಾರ್ಗದಲ್ಲಿ ನಡೆಯುತ್ತಿರುವಾಗ ಯಾವುದಾದರೂ ರೀತಿಯಲ್ಲಿ ಮಾಯೆ ಸಂಸ್ಕಾರಗಳ ಮೇಲೆ ದಾಳಿ ಹೊರಹೊಮ್ಮುವಂತೆ ಮಾಡುವ ಮೂಲಕ ಹೃದಯವನ್ನು ನಿರಾಶೆಗೊಳಿಸಲು ಪ್ರಯತ್ನಿಸುತ್ತದೆ ಕೊನೆಯಲ್ಲಿ ಎಲ್ಲಾ ಸಂಸ್ಕಾರಗಳು ಕೊನೆಗೊಳ್ಳಬೇಕು ಆದ್ದರಿಂದ ಕೆಲವೊಮ್ಮೆ ಹಳೆಯ ಸಂಸ್ಕಾರಗಳು ಹೊರಹೊಮ್ಮುತ್ತವೆ ಆದರೆ ಬಾಪ್ ದಾದ ತಾವೆಲ್ಲ ಅದೃಷ್ಟಶಾಲಿ ಮಕ್ಕಳಿಗೆ ಸಂಕೇತ ಕೊಡುತ್ತಿದ್ದಾರೆ- ಭಯ ಪಡಬೇಡಿ ಮಾಯೆಯ ತಂತ್ರಗಳನ್ನು ಅರ್ಥ ಮಾಡಿಕೊಳ್ಳಿ. ಆಲಸ್ಯ ಮತ್ತು ವ್ಯರ್ಥ ಇದರಲ್ಲಿ ನೆಗೆಟಿವ್ ಕೂಡ ಬರುತ್ತದೆ - ಈ ಎರಡು ಸಂಸ್ಕಾರಗಳ ಬಗ್ಗೆ ವಿಶೇಷ ಗಮನ ಹರಿಸಿ ಇವೆರಡೂ ಸಂಸ್ಕಾರಗಳು ವರ್ತಮಾನ ಸಮಯದಲ್ಲಿ ಮಾಯೆಯು ನಮ್ಮ ಮೇಲೆ ಆಕ್ರಮಣ ಮಾಡುವ ಸಾಧನಗಳಾಗಿವೆ ಎಂದು ಅರ್ಥ ಮಾಡಿಕೊಳ್ಳಿ.

ತಂದೆಯ ಜೊತೆಗಿನ ಅನುಭವ, ಕಂಬೈಂಡ್ ಸ್ವರೂಪದ ಅನುಭವ ವನ್ನು ಮಾಡಿಕೊಳ್ಳಿ ಇಮರ್ಜ ಮಾಡಿಕೊಳ್ಳಿ ಹೀಗಲ್ಲ- ತಂದೆ ನನ್ನವರೇ ಆಗಿದ್ದಾರೆ ಜೊತೆಗಂತೂ ಇದ್ದೇ ಇರುತ್ತಾರೆ. ತಂದೆಯ ಜೊತೆಗಿನ ಅನುಭವ ಪ್ರಾಕ್ಟಿಕಲ್ ಆಗಿ ಇಮರ್ಜ ಆಗಬೇಕು. ಆಗ ಈ ಮಾಯೆಯ ಆಕ್ರಮಣ, ಆಕ್ರಮಣವಾಗುವುದಿಲ್ಲ, ಮಾಯೆ ಸೋಲನ್ನಪುತ್ತದೆ. ಇದು ಮಾಯ ಸೋಲು ಆಕ್ರಮಣವಲ್ಲ. ಸುಮ್ಮನೆ ಗಾಬರಿಯಾಗಬೇಡಿ ಏನಾಯ್ತು, ಏಕೆ ಆಯಿತು ಅಂತ ಧೈರ್ಯವಾಗಿರಿ ತಂದೆ ಜೊತೆಯಾಗಿರುವುದನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ ತಂದೆಯ ಜೊತೆಗಿದ್ದೇನೆಯೇ ಎಂದು ಪರಿಶೀಲಿಸಿಕೊಳ್ಳಿ. ತಂದೆಯ ಜೊತೆಗಿನ ಅನುಭವ ಮರ್ಜ್ ರೂಪದಲ್ಲಿ ಇಲ್ಲ ತಾನೆ? ತಂದೆಯು ನಮ್ಮೊಂದಿಗಿದ್ದಾರೆ ಎಂಬ ಜ್ಞಾನವಿದೆ, ಜ್ಞಾನದ ಜೊತೆ ಜೊತೆಗೆ ತಂದೆಯ ಶಕ್ತಿಗಳು ನಿಮ್ಮೊಂದಿಗೆ ಇವೆಯೇ? ಸರ್ವಶಕ್ತಿವಂತನ ಜೊತೆಗಿದ್ದೀರೆಂದರೆ ಎಲ್ಲಾ ಶಕ್ತಿಗಳನ್ನು ಇಮರ್ಜ ರೂಪದಲ್ಲಿ ಅನುಭವ ಮಾಡಿ, ಇದಕ್ಕೆ ತಂದೆಯ ಜೊತೆಗಿರುವ ಅನುಭವ ಎಂದು ಹೇಳಲಾಗುತ್ತದೆ. ಹುಡುಗಾಟಿಕೆಯಲ್ಲಿ ಬರಬೇಡಿ -- ತಂದೆಯನ್ನು ಹೊರೆತುಪಡಿಸಿ ಬೇರೆ ಯಾರಿದ್ದಾರೆ ತಂದೆಯು ಮಾತ್ರ ಇದ್ದಾರೆ. ತಂದೆಯೇ ತಮ್ಮ ಜೊತೆಗಿದ್ದಾರೆ ಎಂದಾದರೆ ಅವರ ಸರ್ವ ಶಕ್ತಿಗಳು ತಮ್ಮ ಜೊತೆಗಿವೆಯೇ? ನೀವು ಲೋಕದ ಜನರಿಗೆ ಹೇಳುವಂತೆ ಪರಮಾತ್ಮ ಸರ್ವವ್ಯಾಪಿಯಾಗಿದ್ದರೆ ಪರಮಾತ್ಮನ ಗುಣಗಳು ಅನುಭವಕ್ಕೆ ಬರಬೇಕು ಮತ್ತು ಗೋಚರಿಸಬೇಕು ಹಾಗೆಯೇ ಬಾಪ್ ದಾದ ನಮ್ಮನ್ನು ಕೇಳುತ್ತಾರೆ- ತಂದೆಯು ನಿಮ್ಮ ಜೊತೆಗಿದ್ದರೆ ಕಂಬೈನ್ಡ್ ಆಗಿದ್ದರೆ ಅವರ ಶಕ್ತಿಗಳು ತಮ್ಮ ಪ್ರತಿ ಕಾರ್ಯದಲ್ಲು ಅನುಭವವಾಗುತ್ತದೆಯೇ? ಇದು ಅನ್ಯರಿಗು ಅನುಭವವಾಗುತ್ತದೆಯೇ? ನೀವು ಏನು ಅರ್ಥ ಮಾಡಿಕೊಂಡಿದ್ದೀರಿ? ಡಬಲ್ ಫಾರಿನರ್ಸ್ ನೀವು ಏನು ಅರ್ಥ ಮಾಡಿಕೊಂಡಿದ್ದೀರಿ? ಸರ್ವಶಕ್ತಿಗಳು ತಮ್ಮೊಂದಿಗೆ ಇವೆಯೇ? ಸದಾಕಾಲಕ್ಕೂ ಇರುತ್ತವೆಯೇ? ಮೊದಲನೇ ಪ್ರಶ್ನೆಗೆ ಎಲ್ಲರೂ ಹೌದು ಎನ್ನುತ್ತಾರೆ. ಎರಡನೇ ಪ್ರಶ್ನೆ ಯಾವಾಗಲೂ? ಎಂದಾಗ ಯೋಚಿಸಲು ಪ್ರಾರಂಭಿಸುತ್ತೀರಿ. ಹಾಗಾದರೆ ಅಖಂಡ ರಾಜ್ಯ ಆಗಲಿಲ್ಲ ಅಲ್ಲವೇ? ತಾವು ಯಾವ ಸವಾಲನ್ನು ತೆಗೆದುಕೊಂಡಿದ್ದೀರಿ ಅಖಂಡ ರಾಜ್ಯವನ್ನು ಸ್ಥಾಪಿಸುತ್ತಿದ್ದೀರಾ ಅಥವಾ ಖಂಡಿತ ರಾಜ್ಯವನ್ನು ಸ್ಥಾಪಿಸುತ್ತಿದ್ದೀರಾ? ಏನು ಮಾಡುತ್ತಿದ್ದೀರಿ? ಅಖಂಡ ರಾಜ್ಯ ಅಲ್ಲವೇ! ಟೀಚರ್ಸ್ ಹೇಳಿ, ಅಖಂಡ ರಾಜ್ಯ ತಾನೆ? ಹಾಗಾದರೆ ಈಗಲೇ ಪರಿಶೀಲಿಸಿ, ಅದು ಅಖಂಡ ಸ್ವರಾಜ್ಯವೇ? ರಾಜ್ಯ ಅಂದರೆ ಪ್ರತಿಫಲವನ್ನು ಶಾಶ್ವತವಾಗಿ ತೆಗೆದುಕೊಳ್ಳಬೇಕೆ ಅಥವಾ ಮಧ್ಯದಲ್ಲಿ ನಷ್ಟವಾದರೂ ಹಾನಿ ಇಲ್ಲವೇ? ಈ ರೀತಿಯೇ? ಪಡೆಯುವಾಗ ಶಾಶ್ವತವಾಗಿ ಹಾಗೂ ಪುರುಷಾರ್ಥದಲ್ಲಿ ಕೆಲವೊಮ್ಮೆ ಮಾಡಿದರೆ ಆಗುತ್ತೆ, ಹೀಗೆ ಅಂದುಕೊಂಡಿದ್ದೀರಾ? ತಮ್ಮ ಜೀವನದ ಡಿಕ್ಷನರಿ ಯಿಂದ ಕೆಲವೊಮ್ಮೆ(ಸಮ್ ಟೈಮ್) ಮತ್ತು ಏನಾದರೂ (ಸಂಥಿಂಗ್) ಎಂಬ ಪದಗಳನ್ನು ತೆಗೆದುಹಾಕಲು ವಿದೇಶಿಯರಿಗೆ ಬಾಪ್ದಾದಾರವರು ಹೇಳಿದ್ದಾರೆ ಈಗ ಕೆಲವೊಮ್ಮೆ(ಸಮ್ ಟೈಮ್) ಮುಗಿದಿದೆಯೇ? ಜಯಂತಿ ಹೇಳು. ಫಲಿತಾಂಶ ಕೊಡುತ್ತಿಯಲ್ಲವೇ? ಹಾಗಾದರೆ ಕೆಲವೊಮ್ಮೆ(ಸಮ್ ಟೈಮ್) ಮುಗಿದಿದೆಯೇ? ಕೆಲವೊಮ್ಮೆ(ಸಮ್ ಟೈಮ್) ಪದವನ್ನು ಯಾರೆಲ್ಲಾ ಸಮಾಪ್ತಿ ಮಾಡಿದ್ದೀರಿ ಅವರು ಕೈ ಎತ್ತಿ. ಸಮಾಪ್ತಿ ಆಯಿತೋ ಅಥವಾ ಸಮಾಪ್ತಿ ಆಗುತ್ತದೆಯೋ? ಎತ್ತರವಾಗಿ ಕೈಯೆತ್ತಿ. ಸೂಕ್ಷ್ಮವತನದ ಟಿವಿಯಲ್ಲಿ ತಮ್ಮ ಕೈಗಳು ಕಾಣುತ್ತಿವೆ, ಇಲ್ಲಿಯ ಟಿವಿಯಲ್ಲಿ ಎಲ್ಲರ ಕೈಗಳು ಕಾಣುವುದಿಲ್ಲ. ಇದು ಕಲಿಯುಗ ಟಿವಿ ಅಲ್ಲವೇ, ಅಲ್ಲಿ ಜಾದುವಿನ ಟಿವಿಯಾಗಿದೆ ಆದ್ದರಿಂದ ಎಲ್ಲರ ಕೈಗಳು ಕಾಣುತ್ತವೆ. ಬಹಳ ಒಳ್ಳೆಯದು ಆದರೂ ಬಹುತೇಕ ಎಲ್ಲರೂ ಕೈಗಳನ್ನು ಎತ್ತಿದ್ದಾರೆ ಅವರಿಗೆಲ್ಲ ಶಾಶ್ವತವಾದ ಅಭಿನಂದನೆಗಳು, ಒಳ್ಳೆಯದು! ಈಗ ಯಾರೆಲ್ಲ ಭಾರತವಾಸಿಗಳ ಎಲ್ಲಾ ಕರ್ಮೇಂದ್ರಿಯಗಳು ಕಾನೂನು ಮತ್ತು ವ್ಯವಸ್ಥೆಯಲ್ಲಿವೆ ಅಂದರೆ ಪ್ರಾಕ್ಟಿಕಲ್ ಆಗಿ ಸದಾಕಾಲ ಸ್ವರಾಜ್ಯದಲ್ಲಿವೆ ಅವರು ಕೈಯೆತ್ತಿ. ಧೃಡವಾಗಿ ಕೈಯೆತ್ತಿ, ಹಗುರವಾಗಿ ಅಲ್ಲ. ಸಭೆಯಲ್ಲಿ ಕೈಯೆತ್ತಿದ್ದು ಸದಾ ನೆನಪಿರಲಿ. ಆಮೇಲೆ ಬಾಪ್ದಾದರವರಿಗೆ ಮಧುರವಾದ ಮಾತುಗಳಲ್ಲಿ ಹೇಳುತ್ತಾರೆ-- ಬಾಬಾ ತಮಗೊಂತು ಗೊತ್ತಿದೆಯಲ್ಲವೇ. ಕೆಲವೊಮ್ಮೆ ಮಾಯೆ ಬಂದುಬಿಡುತ್ತದೆ ತಾನೇ! ಹಾಗಾಗಿ ತಮ್ಮ ಕೈಗಳ ಬಗ್ಗೆ ಜಾಗರೂಕರಾಗಿರಿ. ಒಳ್ಳೆಯದು ಆದರೂ ಧೈರ್ಯವನ್ನು ಇಟ್ಟಿದ್ದರೆ ಧೈರ್ಯ ಕಳೆದುಕೊಳ್ಳಬೇಡಿ ಧೈರ್ಯಕ್ಕೆ ಬಾಪ್ದಾದಾರವರ ಸಹಾಯ ಖಂಡಿತವಾಗಿಯೂ ಇರುತ್ತದೆ.

ಇಂದಿನ ಸಮಯಕ್ಕೆ ಅನುಗುಣವಾಗಿ ತಮ್ಮ ಮೇಲೆ, ತಮ್ಮ ಕರ್ಮೇಂದ್ರಿಯಗಳ ಮೇಲೆ ಅಂದರೆ ತಮಗೆ ತಮ್ಮ ಮೇಲೆ ಇರಬೇಕಾದ ನಿಯಂತ್ರಣ ಶಕ್ತಿ ಕಡಿಮೆಯಾಗಿದೆ, ಅದು ಹೆಚ್ಚಾಗಬೇಕು ಎಂದು ನೋಡುತ್ತಿದ್ದಾರೆ. ಬಾಪ್ ದಾದಾ ಮಕ್ಕಳ ಸಂಭಾಷಣೆಯನ್ನು ಕೇಳುತ್ತಾ ನಗುತ್ತಿದ್ದರು, ನಾಲ್ಕು ಗಂಟೆಗಳ ಶಕ್ತಿಯುತ ಯೋಗ ಆಗುತ್ತಿಲ್ಲ ಎಂದು ಮಕ್ಕಳು ಸಂಭಾಷಿಸುತ್ತಿದ್ದರು. ಬಾಬ್ದಾದ ಅವರು 8 ಗಂಟೆಯಿಂದ 4 ಗಂಟೆಗೆ ಇಳಿಸಿದರು ಈಗ ಮಕ್ಕಳು ಎರಡು ಗಂಟೆ ಸರಿಯಾಗಿದೆ ಎಂದು ಹೇಳುತ್ತಿದ್ದಾರೆ ಹಾಗಾದರೆ ಹೇಳಿ, ನಿಯಂತ್ರಿಸುವ ಶಕ್ತಿ ಇದೆಯೇ? ಮತ್ತು ಈ ಅಭ್ಯಾಸವನ್ನು ಇಂದಿನಿಂದ ಮಾಡದಿದ್ದರೆ, ನಾವು ಸಮಯಕ್ಕೆ ಸರಿಯಾಗಿ ಮತ್ತು ರಾಜ್ಯ ಅಧಿಕಾರಿಗಳು ಆಗಲು ಹೇಗೆ ಸಾಧ್ಯವಾಗುತ್ತದೆ! ಆಗಲೇ ಬೇಕಲ್ಲವೇ ಮಕ್ಕಳು ನಗುತ್ತಾರೆ ಇಂದು ಬಾಪ್ದಾದ ಮಕ್ಕಳ ಅನೇಕ ಮಾತುಗಳನ್ನು ಕೇಳಿದ್ದಾರೆ ಮಕ್ಕಳು ಹೇಳುತ್ತಾರೆ, ಟ್ರಾಫಿಕ್ ಕಂಟ್ರೋಲ್ ಮೂರು ನಿಮಿಷ ಮಾಡಲು ಆಗುವುದಿಲ್ಲ ,ಶರೀರವನ್ನು ಕಂಟ್ರೋಲ್ ಮಾಡಬಹುದು, ಎದ್ದು ನಿಲ್ಲಬಹುದು, ಹೆಸರೇ ಆಗಿದೆ ಮನಸ್ಸಿನ ನಿಯಂತ್ರಣ ಆದರೆ ಕೆಲವೊಮ್ಮೆ ಮನಸ್ಸನ್ನು ನಿಯಂತ್ರಿಸಲಾಗುತ್ತದೆ ಕೆಲವೊಮ್ಮೆ ಆಗಲ್ಲ ಎಂದು ಹೇಳಿ ಮಕ್ಕಳು ಬಾಪ್ ದಾದ ಅವರನ್ನು ನಗಿಸುತ್ತಾರೆ ಹಾಗಾದರೆ ಇದಕ್ಕೆ ಕಾರಣವೇನು? ನಿಯಂತ್ರಣ ಶಕ್ತಿಯ ಕೊರತೆ. ಅದನ್ನು ಇನ್ನೂ ಹೆಚ್ಚಿಸಿಕೊಳ್ಳಬೇಕಿದೆ. ನಿಮ್ಮ ಕೈಯನ್ನು ಮೇಲಕ್ಕೆತ್ತಲು ಬಯಸಿ ಆದೇಶಿಸಿದರೆ ಮೇಲಕ್ಕೆತ್ತುತ್ತೀರಿ ಕ್ರ್ಯಾಕ್ ಇರದಿದ್ದರೆ ಮೇಲಕ್ಕೆ ಎತ್ತುತ್ತಿರಿ ಅಲ್ಲವೇ! ಹಾಗೆಯೇ ಮನಸ್ಸು, ಈ ಸೂಕ್ಷ್ಮ ಶಕ್ತಿಯನ್ನು ನಿಯಂತ್ರಣಕ್ಕೆ ತರಬೇಕು. ತರಲೇ ಬೇಕಾಗಿದೆ. ಆದೇಶಿಸಿರಿ -- ಮನಸ್ಸು ಸ್ಟಾಪ್ ಎಂದರೆ ಸ್ಟಾಪ್ ಆಗಬೇಕು. ಸೇವೆಯ ಬಗ್ಗೆ ಯೋಚಿಸಿ, , ಸೇವೆಯಲ್ಲಿ ತೊಡಗಿಸಿ. ನೀವು ಪರಂ ಧಾಮಕ್ಕೆ ಹೋದರೆ, ಮನಸ್ಸು ಪರಂ ಧಾಮ ಕ್ಕೆ ಹೋಗಬೇಕು. ಸೂಕ್ಷ್ಮವತನಕ್ಕೆ ಹೋದರೆ, ಸೆಕೆಂಡ್ ನಲ್ಲಿ ಅಲ್ಲಿಗೆ ಹೋಗಬೇಕು ನೀವು ಏನು ಯೋಚಿಸುತ್ತೀರೋ, ಅದು ಆದೇಶವಾಗಲಿ. ಈಗ ಈ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಸಣ್ಣ ಸಣ್ಣ ಸಂಸ್ಕಾರಗಳಲ್ಲಿ, ಯುದ್ಧಗಳಲ್ಲಿ ಸಮಯವನ್ನು ವ್ಯರ್ಥಗೊಳಿಸಬೇಡಿ, ಇಂದು ಈ ಸಂಸ್ಕಾರವನ್ನು ಓಡಿಸಿದರು ನಾಳೆ ಇನ್ನೊಂದು ಸಂಸ್ಕಾರವನ್ನು ಓಡಿಸಿದಿರಿ. ನಿಯಂತ್ರಣ ಶಕ್ತಿಯನ್ನು ಅಳವಡಿಸಿಕೊಂಡರೆ ಹೀಗೆ ವಿವಿಧ ಸಂಸ್ಕಾರಗಳ ಮೇಲೆ ಸಮಯ ಕಳೆಯಬೇಕಾಗಿಲ್ಲಹೀಗೆ ಯೋಚಿಸಬಾರದು, ಹೀಗೆ ಮಾಡಬಾರದು, ಹೀಗೆ ಮಾತನಾಡಬಾರದು. ಇದೆಲ್ಲಾ ಸ್ಟಾಪ್. ಹಾಗಾಗಿ ಸ್ಟಾಪ್ ಆಗಿ ಬಿಡಬೇಕು ಇದು ಕರ್ಮಾತೀರ್ಥ ಸ್ಥಿತಿಯನ್ನು ತಲುಪುವ ವಿಧಾನವಾಗಿದೆ ಇದು ಕರ್ಮಾತೀತ ಸ್ಥಿತಿಯನ್ನು ತಲುಪುವ ವಿಧಾನವಾಗಿದೆ. ಹಾಗಾದರೆ ನೀವು ಕರ್ಮಾತೀರಾಗಬೇಕು ತಾನೆ? ನೀವೇ ಆಗಬೇಕು ಬೇರೆ ಯಾರು ಬರುವುದಿಲ್ಲ ಎಂದು ಬಾಪ್ದಾದಾ ಹೇಳುತ್ತಾರೆ. ತಾವೇ ಆಗಿದ್ದೀರಿ ತಮ್ಮನ್ನೇ ಜೊತೆಗೆ ಕರೆದುಕೊಂಡು ಹೋಗುತ್ತೇವೆ ಆದರೆ ಕರ್ಮಾ ತೀರ್ಥರಾದವರನ್ನು ಕರೆದುಕೊಂಡು ಹೋಗುತ್ತೇವೆ ಅಲ್ಲವೇ ಜೊತೆಗೆ ಬರುತ್ತೀರೋ ಅಥವಾ ಹಿಂಬಾಲಿಸುತ್ತೀರೋ? (ಜೊತೆಗೆ ಬರುತ್ತೇವೆ) ಇದನ್ನಂತೂ ತುಂಬಾ ಚೆನ್ನಾಗಿ ಹೇಳಿದಿರಿ. ಜೊತೆಗೆ ಬರುತ್ತೇವೆ, ಲೆಕ್ಕಾಚಾರಗಳನ್ನು ಸಮಪ್ತಿ ಮಾಡುತ್ತೀರಾ? ಇದಕ್ಕೆ ಹೌದು ಎಂದು ಹೇಳಲಿಲ್ಲ. ಕರ್ಮಾ ತೀರಾಗಿ ಜೊತೆಗೆ ಬರುತ್ತೀರಲ್ಲವೇ ಜೊತೆಯಾಗಿ ನಡೆಯುವುದು ಎಂದರೆ ಒಡನಾಡಿಯಾಗಿ ನಡೆಯುವುದು ಜೋಡಿ ಚೆನ್ನಾಗಿ ಇರಬೇಕಲ್ಲವೇ ಅಥವಾ ಒಬ್ಬರು ಉದ್ದ ಒಬ್ಬರು ಗಿಡ್ಡ ನಡೆಯುತ್ತದೆಯೇ? ಇಬ್ಬರು ಸಮಾನವಾಗಿ ಇರಬೇಕಲ್ಲವೇ! ಆದ್ದರಿಂದ ಕರ್ಮಾತೀತರಾಗಲೇಬೇಕು. ಹಾಗಾದರೆ ಏನು ಮಾಡುವಿರಿ? ಈಗ ತಮ್ಮ ರಾಜ್ಯವನ್ನು ಚೆನ್ನಾಗಿ ನಿಭಾಯಿಸಿ. ಪ್ರತಿದಿನ ತಮ್ಮ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ. ರಾಜ್ಯ ಅಧಿಕಾರಿ ಆಗಿದ್ದೀರಲ್ಲವೇ! ಹಾಗಾದರೆ ತಮ್ಮ ನ್ಯಾಯಾಲಯವನ್ನು ನಡೆಸಿ, ಧಮೇರ್ಂದ್ರಿಯಗಳ ಕೌಶಲ್ಯದ ಬಗ್ಗೆ ಕೇಳಿ ತಿಳಿದುಕೊಳ್ಳಿ. ಕರ್ಮೇಂದ್ರಿಯಗಳು ಆದೇಶದ ಅನುಸಾರವಾಗಿ ಇವೆಯೇ ಎಂದು ಪರಿಶೀಲಿಸಿಕೊಳ್ಳಿ. ಬ್ರಹ್ಮ ತಂದೆ ಕೂಡ ಪ್ರತಿದಿನ ದರ್ಬಾರ್ ನಡೆಸುತ್ತಿದ್ದರು. ಅದರ ಬಗ್ಗೆ ಬರೆದಿಟ್ಟ ಪುಸ್ತಕ ಇದೆಯಲ್ಲವೇ. ಅದನ್ನು ಇವರಿಗೆಲ್ಲ ಹೇಳಿ, ತೋರಿಸಿ. ಬ್ರಹ್ಮ ತಂದೆಯೂ ಪರಿಶ್ರಮ ಪಟ್ಟರು, ಪ್ರತಿದಿನ ತಮ್ಮ ದರ್ಬಾರ್ ನಡೆಸುತ್ತಿದ್ದರು ಆಗಲೇ ಕರ್ಮಾತೀರಾಗಲು ಸಾಧ್ಯವಾಯಿತು. ಹಾಗಾದರೆ ಈಗ ಎಷ್ಟು ಸಮಯ ಬೇಕು? ಅಥವಾ ಎವೆರೆಡಿ ಆಗಿದ್ದೀರೋ? ಇಂತಹ ಸ್ಥಿತಿಯಿಂದ ಸೇವೆ ಕೂಡ ತುಂಬಾ ತೀವ್ರ ಗತಿಯಲ್ಲಿ ಆಗುತ್ತದೆ ಯಾಕೆ? ಯಾಕೆಂದರೆ ಒಂದೇ ಸಮಯದಲ್ಲಿ ಮನಸ್ಸು ಶಕ್ತಿಶಾಲಿ ಮಾತು ಶಕ್ತಿಶಾಲಿ ಸಂಬಂಧಗಳಲ್ಲಿ ನಡತೆ ಹಾಗೂ ಮುಖ ಲಕ್ಷಣಗಳು ಶಕ್ತಿಶಾಲಿ ಆಗಿರುತ್ತವೆ ಮೂರು ಸೇವೆಗಳು ಒಂದೇ ಸಮಯದಲ್ಲಿ ಅತ್ಯಂತ ವೇಗವಾಗಿ ಫಲಿತಾಂಶಗಳನ್ನು ನೀಡುತ್ತವೆ. ಈ ಸಾಧನೆಯೆಲ್ಲಿ ಸೇವೆ ಕಡಿಮೆಯಾಗುತ್ತದೆ ಎಂದು ಯೋಚಿಸಬೇಡಿ. ಇಲ್ಲ ಸಫಲತೆ ಸಹಜ ಅನಿಸುತ್ತದೆ ಮತ್ತು ಸೇವೆಗೆ ಸಾಧನವಾಗಿರುವವರೆಲ್ಲರೂ ಸಂಘಟಿತರಾಗಿ ಅಂತಹ ವೇದಿಕೆಯನ್ನು ರಚಿಸಿದರೆ ಕಡಿಮೆ ಶ್ರಮ ಮತ್ತು ಹೆಚ್ಚಿನ ಯಶಸ್ಸು ಸಿಗುತ್ತದೆ ಹಾಗಾಗಿ ತಮ್ಮ ವಿಶೇಷ ಗಮನವನ್ನು ನಿಯಂತ್ರಣ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೊಡಿ. ನಮ್ಮ ಸಂಕಲ್ಪಗಳು, ಸಮಯ, ಸಂಸ್ಕಾರಗಳು ಎಲ್ಲವುಗಳ ಮೇಲೆ ನಿಯಂತ್ರಣವಿರಲಿ. ಬಾಪ್ದಾದ ಅನೇಕ ಬಾರಿ ಹೇಳಿದ್ದಾರೆ-- ನೀವೆಲ್ಲರೂ ರಾಜರಾಗಿದ್ದೀರಿ ನಿಮಗೆ ಯಾವಾಗ ಬೇಕೊ, ಹೇಗೆ ಬೇಕೋ, ಎಲ್ಲಿ ಬೇಕೋ, ಎಷ್ಟು ಬೇಕೋ ಎಷ್ಟು ಸಮಯ ಬೇಕೋ ಅಷ್ಟು ನಿಮ್ಮ ಮನಸ್ಸು ಮತ್ತು ಬುದ್ಧಿ ಕಾನೂನು ಮತ್ತು ವ್ಯವಸ್ಥೆಯಲ್ಲಿ ಇರಬೇಕು. ಇದನ್ನು ಮಾಡಬೇಡ ಎಂದು ಹೇಳಿದರು, ಅದು ನಡೆಯುತ್ತಿದ್ದರೆ, ನೀವು ಅದನ್ನು ಮಾಡುತ್ತಿದ್ದರೆ ಅದನ್ನು ಲಾ ಮತ್ತು ಆರ್ಡರ್ ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಸ್ವರಾಜ್ಯ ಅಧಿಕಾರಿ, ಯಾವಾಗಲೂ ತಮ್ಮ ರಾಜ್ಯವನ್ನು ಪ್ರತ್ಯಕ್ಷ ಸ್ವರೂಪದಲ್ಲಿ ತಂದುಕೊಳ್ಳಿ. ತರಬೇಕಲ್ಲವೇ? ತರುತ್ತಿದ್ದೀರಿ ಆದರೆ ಬಾಪ್ ದಾದ ಹೇಳುತ್ತಾರೆ- ಸದಾ ಎಂಬ ಶಬ್ದವನ್ನು ಸೇರಿಸಿ. ಬಾಪ್ ದಾದ ಇನ್ನೊಮ್ಮೆ ಕೊನೆಯ ಬಾರಿ ಬರುತ್ತಾರೆ, ಇನ್ನೂ ಒಂದು ಟರ್ನ್ ಇದೆ. ಆ ಟರ್ನನಲ್ಲಿ (sಸರದಿಯಲ್ಲಿ) ಫಲಿತಾಂಶ ಕೇಳುತ್ತಾರೆ. 15 ದಿನಗಳು ಇವೆ ತಾನೇ. ಹಾಗಾದರೆ 15 ದಿನಗಳಲ್ಲಿ ಸ್ವಲ್ಪ ಫಲಿತಾಂಶವನ್ನು ತೋರಿಸುತ್ತಿರೋ ಅಥವಾ ಇಲ್ಲವೇ? ಟೀಚರ್ಸ್ ಹೇಳಿ 15 ದಿನಗಳಲ್ಲಿ ಫಲಿತಾಂಶ ತೋರಿಸುತ್ತೀರಾ?

ಒಳ್ಳೆಯದು ಮಧುಬನ ದವರು 15 ದಿನಗಳಲ್ಲಿ ಫಲಿತಾಂಶವನ್ನು ತೋರಿಸುತ್ತಾರೆ ಈಗ ಹೇಳಿ ಹೌದು ಅಥವಾ ಇಲ್ಲ! ಈಗ ಕೈ ಎತ್ತಿ( ಎಲ್ಲರೂ ಕೈಯೆತ್ತಿದರು) ತಮ್ಮ ಕೈಗಳ ಬಗ್ಗೆ ಎಚ್ಚರಿಕೆ ಇರಲಿ ಯಾರು ಪ್ರಯತ್ನಪಡುವವರಿದ್ದಿರೋ ಅವರು ಕೈ ಎತ್ತಿ ಜ್ಞಾನ ಸರೋವರ, ಶಾಂತಿವನದವರು ಎದ್ದೇಳಿ( ಬಾಪ್ ದಾದಾ ಅವರು ಮಧುಬನ, ಜ್ಞಾನ ಸರೋವರ, ಶಾಂತಿವನದ ಮುಖ್ಯ ಸಹೋದರ ಸಹೋದರಿಯರನ್ನು ಮುಂಬಾಗಕ್ಕೆ ಕರೆದರು)

ಬಾಪ್ದಾದಾರವರು ತಮ್ಮೆಲ್ಲರನ್ನು ತಮ್ಮ ದರ್ಶನ ಕೊಡಿಸುವುದಕ್ಕಾಗಿ ಕರೆದಿದ್ದಾರೆ. ತಮ್ಮನ್ನು ನೋಡಿ ಎಲ್ಲರೂ ಸಂತೋಷಪಡುತ್ತಾರೆ. ಬಾಪ್ದಾತ ಅವರ ಇಚ್ಛೆ ಏನು ಎಂಬುದನ್ನು ಹೇಳುತ್ತಾರೆ. ಅದು ಪಾಂಡವ ಭವನ ಶಾಂತಿವನ ಜ್ಞಾನ ಸರೋವರ ಅಥವಾ ಹಾಸ್ಪಿಟಲ್ ಆಗಿರಲಿ-- ನಾಲ್ಕು ಧಾಮಗಳಿವೆ ಐದನೆಯದು ಚಿಕ್ಕದಾಗಿದೆ ಬಾಪ್ದಾದ ನಾಲ್ವರಲ್ಲಿಯೂ ಒಂದೇ ಆಶಯವನ್ನು ಹೊಂದಿದ್ದಾರೆ . ಬಾಪ್ ದಾದ ಮೂರು ಮೂರು ತಿಂಗಳು ನಾಲ್ಕು ಧಾಮಗಳಲ್ಲಿ ಅಖಂಡ, ನಿರ್ವಿಘ್ನ. ದೃಢವಾದ ಸ್ವರಾಜ್ಯ ಅಧಿಕಾರಿ ರಾಜರುಗಳ ಫಲಿತಾಂಶವನ್ನು ನೋಡಲು ಇಚ್ಚಿಸುತ್ತಾರೆ. ಮೂರು ತಿಂಗಳ ಕಾಲ ಅಲ್ಲಿಂದ ಇಲ್ಲಿಂದ ಬೇರೆ ಯಾವ ಮಾತು ಕೇಳಿ ಬರಬಾರದು. ಎಲ್ಲರೂ ಸ್ವರಾಕ್ಷ ಅಧಿಕಾರಿ, ನಂಬರ್ ಒನ್ ಮೂರು ತಿಂಗಳ ಕಾಲ ಇಂತಹ ಫಲಿತಾಂಶವನ್ನು ಕೊಡಲು ಸಾಧ್ಯವೇ?( ನಿರ್ವೈರ್ ಅಣ್ಣನವರಿಗೆ)- ಪಾಂಡವರ ಕಡೆಯಿಂದ ನೀವ್ ಇದ್ದೀರಿ, ಆಗುತ್ತದೆಯೇ? ದಾದಿಯಂತೂ ಇದ್ದಾರೆ ಆದರೆ ಜೊತೆಗೆ ಇಲ್ಲಿ ಮುಂದೆ ಕುಳಿತವರೆಲ್ಲರೂ ಇದ್ದಾರೆ. ಹಾಗಾದರೆ ಇದು ಸಾಧ್ಯವೇ?( ದಾದಿ ಹೇಳುತ್ತಿದ್ದಾರೆ ಅದು ಸಾಧ್ಯ) ಪಾಂಡವ ಭವನದವರು ಕೈಯೆತ್ತಿ. ಆಗುತ್ತದೆಯೇ ಯಾರೋ ದುರ್ಬಲರಿದ್ದಾರೆ ಮತ್ತು ಅವರಿಗೆ ಏನಾದರೂ ಸಂಭವಿಸಿದೆ ಎಂದು ಭಾವಿಸೋಣ ಆಗ ನೀವು ಏನು ಮಾಡುತ್ತೀರಿ? ಸಹಕರಿಸುತ್ತಾ ಫಲಿತಾಂಶವನ್ನು ಕೊಡಬೇಕು ಎನ್ನುವುದು ತಮಗೆ ಗೊತ್ತಿದೆ ಇಂತಹ ಧೈರ್ಯವಿದೆಯೇ? ಇದು ಸಾಧ್ಯವೇ ಅಥವಾ ಮಾತ್ರ ತಮ್ಮೊಬ್ಬರದ್ದೇ ಧೈರ್ಯವಿದೆಯೋ? ಬೇರೆಯವರ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತೀರಾ? ಬೇರೆಯವರ ತಪ್ಪನ್ನು ಆಂತರ್ಯದಲ್ಲಿ ಇಟ್ಟುಕೊಳ್ಳುತ್ತೀರಾ? ವಾತಾವರಣದಲ್ಲಿ ಹರಡಬೇಡಿ, ಮುಚ್ಚಿಟ್ಟುಕೊಳ್ಳಿ, ಇದನ್ನು ಮಾಡಲು ಸಾಧ್ಯವೇ? ಹೌದು ಎಂದು ಜೋರಾಗಿ ಹೇಳಿ. ಅಭಿನಂದನೆಗಳು ಮೂರು ತಿಂಗಳ ನಂತರ ರಿಪೋರ್ಟ್ ನೋಡುತ್ತೇವೆ. ಯಾವುದೇ ಸ್ಥಾನದಿಂದ ಬೇರೆ ಯಾವ ವರದಿಯು ಬರಬಾರದು . ಪರಸ್ಪರ ಪ್ರಕಂಪನಗಳನ್ನು ಹೊರಡಿಸಿ ಮತ್ತು ಪ್ರೀತಿಯಿಂದ ಪ್ರಕಂಪನಗಳನ್ನು ಕೊಡಿ ಜಗಳ ಮಾಡಬೇಡಿ.

ಹೀಗೆಯೇ ಡಬಲ್ ವಿದೇಶಿಯರು ಫಲಿತಾಂಶವನ್ನು ನೀಡುತ್ತಿರಲ್ಲವೇ ಎಲ್ಲರೂ ಆಗಲೇಬೇಕಲ್ಲವೇ ತಮ್ಮ ಸೆಂಟರ್ ನಲ್ಲಿ ತಮ್ಮ ಜೊತೆಗಾರರೊಂದಿಗೆ ಮೂರು ತಿಂಗಳ ಫಲಿತಾಂಶವನ್ನು ಕೊಡುತ್ತೇವೆ ಎಂದು ಭಾವಿಸುವ ಡಬಲ್ ವಿದೇಶಿಯರು ಕೈ ಎತ್ತಿ ಹೇಳಲು ಆಗುವುದಿಲ್ಲ ಆದರೆ ಪ್ರಯತ್ನಿಸುತ್ತೇವೆ ಎನ್ನುವವರು ಶುದ್ಧ ಹೃದಯವಿದೆ ಶುದ್ಧ ಹೃದಯವಿರುವವರಿಗೆ ಸಹಾಯ ಸಿಗುತ್ತದೆ ಒಳ್ಳೆಯದು( ನಂತರ ಬಾಪ್ದಾದ ಅವರು ಎಲ್ಲ ವಲಯಗಳ ಸಹೋದರ ಸಹೋದರಿಯರು ತಮ್ಮ ಕೈಗಳನ್ನು ಮೇಲಕ್ಕೆತ್ತಿ ಹಾಗೂ ತಮ್ಮ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದರು ಮೊದಲು ಮಹಾರಾಷ್ಟ್ರ ದಲ್ಲಿ ಕರ್ನಾಟಕದ ಸಹೋದರ ಸಹೋದರಿಯರನ್ನು ನಿಲ್ಲುವಂತೆ ಮಾಡಿದರು ಮತ್ತು ವಚನ ಕೊಡುವಂತೆ ಮಾಡಿದರು ನಂತರ ಯುಪಿ ಅವರಿಗೆ ಸೇವೆಯ ಅಭಿನಂದನೆಗಳನ್ನು ತಿಳಿಸಿದರು)

ಒಳ್ಳೆಯದು. ಎಲ್ಲ ಕಡೆಯ ಸರ್ವ ಸ್ವರಾಜ್ಯದ ಅಧಿಕಾರಿ ಆತ್ಮಗಳಿಗೆ, ಸದಾ ಯಾವಾಗಲೂ ಅಖಂಡ ರಾಜ್ಯಕ್ಕೆ ಅರ್ಹರಾದ ಆತ್ಮಗಳಿಗೆ, ತಂದೆಯಂತೆ ಯಾವಾಗಲೂ ಕರ್ಮಾತೀತ ಹಂತವನ್ನು ತಲುಪುವಂತಹ ಆತ್ಮಗಳಿಗೆ, ತಂದೆಯನ್ನು ಅನುಸರಿಸುವ ತೀವ್ರಪುರುಷಾರ್ಥಗಳಿಗೆ, ಪರಸ್ಪರ ಯಾವಾಗಲೂ ಪರಸ್ಪರ ಯಾವಾಗಲೂ ಶುಭ ಭಾವನೆ ಶುಭಕಾಮನೆಯ ಸಹಯೋಗ ನೀಡುವಂತಹ ಶುಭಚಿಂತಕ್ಕ ಮಕ್ಕಳಿಗೆ ನೆನಪು ಪ್ರೀತಿ ಹಾಗೂ ನಮಸ್ತೆ.

ವರದಾನ:
ವಿಘ್ನಕಾರಿ ಆತ್ಮವನ್ನು ಶಿಕ್ಷಕ ಎಂದು ತಿಳಿದು ಅದರಿಂದ ಪಾಠ ಕಲಿಯುಂತಹ ಅನುಭವಿ-ಮೂರ್ತಿ ಭವ

ಯಾವ ಆತ್ಮಗಳು ವಿಘ್ನಹಾಕಲು ನಿಮಿತ್ತರಾಗುತ್ತಾರೆ ಅವರನ್ನು ವಿಘ್ನಕಾರಿ ಆತ್ಮವೆಂದು ನೋಡಬೇಡಿ, ಅವರನ್ನು ಸದಾ ಪಾಠ ಕಲಿಸುವಂತಹವರು, ಮುಂದುವರೆಸುವಂತಹ ನಿಮಿತ್ತ ಆತ್ಮ ಎಂದು ತಿಳಿಯಿರಿ. ಅನುಭವಿಗಳನ್ನಾಗಿ ಮಾಡುವಂತಹ ಶಿಕ್ಷಕರೆಂದು ತಿಳಿಯಿರಿ. ಯಾವಾಗ ಹೇಳುವಿರಿ ನಿಂದನೆ ಮಾಡುವವರೂ ಮಿತ್ರರು, ಎಂದಮೇಲೆ ವಿಘ್ನಗಳನ್ನು ಪಾರುಮಾಡಿ ಅನುಭವಿಗಳನ್ನಾಗಿ ಮಾಡುವ ಶಿಕ್ಷಕರಾದರು ಆದ್ದರಿಂದ ವಿಘ್ನಕಾರಿ ಆತ್ಮರನ್ನು ಆ ದೃಷ್ಠಿಯಿಂದ ನೋಡುವ ಬದಲಿಗೆವಿಘ್ನಗಳಿಂದ ಪಾರುಮಾಡಲು ನಿಮಿತ್ತ, ಅಚಲರನ್ನಾಗಿ ಮಾಡಲು ನಿಮಿತ್ತ ಎಂದು ತಿಳಿಯಿರಿ, ಇದರಿಂದ ಇನ್ನೂ ಸಹ ಅನುಭವಗಳ ಅಥಾರಿಟಿ ಹೆಚ್ಚಾಗುತ್ತಾ ಹೋಗುವುದು.

ಸ್ಲೋಗನ್:
ದೂರುಗಳ ಫೈಲ್ ಸಮಾಪ್ತಿ ಮಾಡಿ ಫೈನ್ ಮತ್ತು ರಿಫೈನ್ ಆಗಿ.