16.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನೀವು ಸತೋಪ್ರಧಾನರಾಗಬೇಕಾದರೆ, ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿ, ಪಾರಸನಾಥ ಶಿವತಂದೆಯು ನಿಮ್ಮನ್ನು ಪಾರಸಪುರಿಯ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ"

ಪ್ರಶ್ನೆ:
ನೀವು ಮಕ್ಕಳು ಯಾವ ಒಂದು ಮಾತಿನ ಧಾರಣೆಯಿಂದಲೇ ಮಹಿಮಾ ಯೋಗ್ಯರಾಗಿಬಿಡುತ್ತೀರಿ?

ಉತ್ತರ:
ಬಹಳ-ಬಹಳ ನಿರ್ಮಾಣಚಿತ್ತರಾಗಿ ಯಾವುದೇ ಮಾತಿನ ಅಹಂಕಾರವಿರಬಾರದು, ಬಹಳ ಮಧುರರಾಗಿರಬೇಕು. ಅಹಂಕಾರ ಬಂದಿತು ಎಂದರೆ ಶತ್ರುಗಳಾಗಿಬಿಡುತ್ತಾರೆ, ಪವಿತ್ರತೆಯ ಮಾತಿನ ಮೇಲೆಯೇ ಮರು ಅಥವಾ ನೀಚರಾಗುತ್ತಾರೆ. ಪವಿತ್ರರಾದಾಗ ಮಾನ್ಯತೆ ಇರುತ್ತದೆ, ಅಪವಿತ್ರರಾದಾಗ ಎಲ್ಲರಿಗೂ ತಲೆ ಬಾಗುತ್ತಾರೆ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ನಾನು ಈ ಮಕ್ಕಳಿಗೆ ತಿಳಿಸುತ್ತೇನೆ ಎಂದು ತಂದೆಯು ತಿಳಿಯುತ್ತಾರೆ. ಇದನ್ನೂ ಸಹ ಮಕ್ಕಳಿಗೆ ತಿಳಿಸಲಾಗಿದೆ, ಭಕ್ತಿಮಾರ್ಗದಲ್ಲಿ ಭಿನ್ನ-ಭಿನ್ನ ಹೆಸರುಗಳಿಂದ ಅನೇಕಾನೇಕ ಚಿತ್ರಗಳನ್ನು ಮಾಡಿಬಿಟ್ಟಿದ್ದಾರೆ. ಹೇಗೆ ನೇಪಾಳದಲ್ಲಿ ಪಾರಸನಾಥನೆಂದು ಆರಾಧಿಸುತ್ತಾರೆ. ಅವರದೂ ಬಹಳ ದೊಡ್ಡ ಮಂದಿರವಿದೆ ಆದರೆ ಏನೂ ಇಲ್ಲ, ನಾಲ್ಕು ಬಾಗಿಲುಗಳು, ನಾಲ್ಕು ಮೂರ್ತಿಗಳು, ನಾಲ್ಕನೆಯದರಲ್ಲಿ ಕೃಷ್ಣನನ್ನು ಇಟ್ಟಿದ್ದಾರೆ. ಈಗ ಬಹುಷಃ ಬದಲಾವಣೆ ಮಾಡಿರಬೇಕು. ಪಾರಸನಾಥನೆಂದು ಅವಶ್ಯವಾಗಿ ಶಿವತಂದೆಗೆ ಹೇಳುತ್ತಾರೆ, ಮನುಷ್ಯರನ್ನು ಅವರೇ ಪಾರಸಬುದ್ಧಿಯವರನ್ನಾಗಿ ಮಾಡುತ್ತಾರೆ ಅಂದಾಗ ಮೊಟ್ಟಮೊದಲು ಅವರಿಗೆ ಇದನ್ನು ತಿಳಿಸಬೇಕು - ಭಗವಂತನು ಶ್ರೇಷ್ಠಾತಿ ಶ್ರೇಷ್ಠವಾಗಿದ್ದಾರೆ ನಂತರ ಇಡೀ ಪ್ರಪಂಚವಾಗಿದೆ. ಸೂಕ್ಷ್ಮವತನದ ಸೃಷ್ಟಿಯಂತೂ ಇಲ್ಲ. ನಂತರ ಈ ಲಕ್ಷ್ಮೀ-ನಾರಯಣರು ಅಥವಾ ವಿಷ್ಣು ಆಗಿದ್ದಾರೆ. ವಾಸ್ತವದಲ್ಲಿ ವಿಷ್ಣುವಿನ ಮಂದಿರವೂ ತಪ್ಪಾಗಿದೆ. ವಿಷ್ಣು ಚತುರ್ಭುಜ, ನಾಲ್ಕು ಭುಜಗಳನ್ನು ಹೊಂದಿರುವ ಮನುಷ್ಯರು ಯಾರೂ ಇಲ್ಲ. ಇವರು ಲಕ್ಷ್ಮೀ-ನಾರಾಯಣರಾಗಿದ್ದಾರೆ ಎಂದು ತಂದೆಯು ತಿಳಿಸುತ್ತಾರೆ. ಇವರನ್ನು ಒಟ್ಟಿಗೆ ವಿಷ್ಣುವಿನ ರೂಪದಲ್ಲಿ ತೋರಿಸಿದ್ದಾರೆ. ಲಕ್ಷ್ಮೀ-ನಾರಾಯಣರು ಬೇರೆ-ಬೇರೆ ಆಗಿದ್ದಾರೆ, ಸೂಕ್ಷ್ಮವತನದಲ್ಲಿ ವಿಷ್ಣುವನ್ನಾಗಿ ತೋರಿಸಿದ್ದಾರೆ. ಸೂಕ್ಷ್ಮವತನದಲ್ಲಿ ವಿಷ್ಣುವಿಗೆ ನಾಲ್ಕು ಭುಜಗಳನ್ನು ತೋರಿಸಿದ್ದಾರೆ ಅರ್ಥಾತ್ ಇಬ್ಬರನ್ನು ಸೇರಿಸಿ ಚತುರ್ಭುಜವನ್ನಾಗಿ ತೋರಿಸಿದ್ದಾರೆ. ಆದರೆ, ಇಂತಹ ಯಾವುದೇ ಮಾತಿಲ್ಲ. ಮಂದಿರದಲ್ಲಿ ಯಾವ ಚತುರ್ಭುಜನನ್ನು ತೋರಿಸುತ್ತಾರೆ ಅವರು ಸೂಕ್ಷ್ಮವತನದವರಾಗಿದ್ದಾರೆ. ಚತುರ್ಭುಜನಿಗೆ ಶಂಖು, ಚಕ್ರ, ಗಧ, ಪದ್ಮ ಮೊದಲಾದವುಗಳನ್ನು ತೋರಿಸುತ್ತಾರೆ. ಆದರೆ ಈ ರೀತಿ ಇಲ್ಲ. ಚಕ್ರವೂ ಸಹ ನೀವು ಮಕ್ಕಳಿಗೆ ಇದೆ. ನೇಪಾಳದಲ್ಲಿ ವಿಷ್ಣುವಿನ ದೊಡ್ಡ ಚಿತ್ರವನ್ನು ಕ್ಷೀರಸಾಗರದಲ್ಲಿ ತೋರಿಸುತ್ತಾರೆ. ಪೂಜೆಯ ದಿನಗಳಲ್ಲಿ ಸ್ವಲ್ಪ ಹಾಲನ್ನು ಹಾಕುತ್ತಾರೆ. ತಂದೆಯು ಒಂದೊಂದು ಮಾತನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ. ಹೀಗೆ ಯಾರೂ ವಿಷ್ಣುವಿನ ಅರ್ಥವನ್ನು ತಿಳಿಸಲು ಸಾಧ್ಯವಿಲ್ಲ. ಅವರಿಗೆ ಗೊತ್ತೇ ಇಲ್ಲ. ಇದನ್ನು ಸ್ವಯಂ ಭಗವಂತನೇ ತಿಳಿಸುತ್ತಾರೆ. ಶಿವತಂದೆಗೆ ಭಗವಂತನೆಂದು ಹೇಳಲಾಗುತ್ತದೆ, ಅವರು ಒಬ್ಬರೇ ಆಗಿದ್ದಾರೆ ಆದರೆ, ಭಕ್ತಿ ಮಾರ್ಗದವರು ಅನೇಕ ಹೆಸರನ್ನು ಇಟ್ಟಿದ್ದಾರೆ. ನೀವು ಈಗ ಅನೇಕ ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ. ಭಕ್ತಿಮಾರ್ಗದಲ್ಲಿ ಬಹಳ ಮೋಸ ಹೋಗುತ್ತಾರೆ. ಮೊದಲು ನೀವು ಮೋಸ ಹೋದಿರಿ. ಒಂದುವೇಳೆ ಈಗ ನೀವು ಮಂದಿರ ಮೊದಲಾದವುಗಳನ್ನು ನೋಡುತ್ತೀರೆಂದರೆ ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ, ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ ಎಂದು ಆ ಮಂದಿರಗಳ ಮೇಲೆ ತಿಳಿಸುತ್ತೀರಿ. ಆತ್ಮವು ಶರೀರದ ಮೂಲಕ ಓ ಪರಮಪಿತ ಎಂದು ಹೇಳುತ್ತದೆ. ಜ್ಞಾನಸಾಗರ, ಸುಖದ ಸಾಗರ ಎಂದು ಅವರ ಮಹಿಮೆಯು ಆಗಿದೆ. ಭಕ್ತಿಯಲ್ಲಿ ಅನೇಕ ಚಿತ್ರಗಳಿವೆ. ಜ್ಞಾನಮಾರ್ಗದಲ್ಲಿ ಜ್ಞಾನಸಾಗರನು ಒಬ್ಬರೇ ಆಗಿದ್ದಾರೆ, ಅವರೇ ಪರಮಪಿತ ಪರಮಾತ್ಮ. ಅವರೇ ಸರ್ವರ ಸದ್ಗತಿದಾತನಾಗಿದ್ದಾರೆ. ನಿಮ್ಮ ಬುದ್ಧಿಯಲ್ಲಿ ಪೂರ್ಣ ಚಕ್ರವಿದೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ ಅವರಿಗಾಗಿಯೇ ಗಾಯನವಿದೆ - ಸ್ಮರಣೆ ಮಾಡಿ ಮಾಡಿ ಸುಖವನ್ನು ಪಡೆಯಿರಿ ಅರ್ಥಾತ್ ಒಬ್ಬ ತಂದೆಯನ್ನೇ ನೆನಪು ಮಾಡಿ ಅಥವಾ ಸ್ಮರಣೆ ಮಾಡುತ್ತಾ ಇರಿ ಆಗ ಶರೀರದ ಕಲಹ-ಕ್ಲೇಶಗಳು ಕಳೆಯುತ್ತದೆ ಮತ್ತು ಜೀವನ್ಮುಕ್ತಿಯನ್ನು ಪಡೆಯುತ್ತೀರಿ. ಇದು ಜೀವನ್ಮುಕ್ತಿಯಾಗಿದೆಯಲ್ಲವೇ. ತಂದೆಯಿಂದ ಈ ಸುಖದ ಆಸ್ತಿಯು ಸಿಗುತ್ತದೆ. ಇದನ್ನು ಒಂಟಿಯಾಗಿ ಅಂತು ಪಡೆಯುವುದಿಲ್ಲ. ಅವಶ್ಯವಾಗಿ ರಾಜಧಾನಿಯು ಇರುತ್ತದೆಯಲ್ಲವೇ. ಅಂದರೆ ತಂದೆಯು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ. ಸತ್ಯಯುಗದಲ್ಲಿ ರಾಜಾ-ರಾಣಿ, ಪ್ರಜೆಗಳೆಲ್ಲರೂ ಇರುತ್ತಾರೆ. ನೀವು ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ ಅಂದಾಗ ನೀವು ಹೋಗಿ ದೊಡ್ಡ ಕುಲದಲ್ಲಿ ಜನ್ಮ ಪಡೆಯುತ್ತೀರಿ. ಬಹಳ ಸುಖ ಸಿಗುತ್ತದೆ, ಯಾವಾಗ ಅದು ಸ್ಥಾಪನೆ ಆಗಿಬಿಡುತ್ತದೆಯೋ ಆಗ ಪತಿತ ಆತ್ಮರು ಶಿಕ್ಷೆಗಳನ್ನು ಅನುಭವಿಸಿ ಹಿಂತಿರುಗಿ ಹೊರಟು ಹೋಗುತ್ತಾರೆ, ತಮ್ಮ-ತಮ್ಮ ವಿಭಾಗದಲ್ಲಿ ಹೋಗಿ ನಿಲ್ಲುತ್ತಾರೆ. ಎಷ್ಟೆಲ್ಲಾ ಆತ್ಮಗಳು ಬರುತ್ತಾರೆ ಮತ್ತು ವೃದ್ಧಿ ಆಗುತ್ತಿರುತ್ತದೆ. ಮೇಲಿನಿಂದ ಹೇಗೆ ಬರುತ್ತಾರೆ ಎಂದು ಬುದ್ಧಿಯಲ್ಲಿ ಇರಬೇಕು. 2 ಎಲೆಗಳಿಗೆ ಬದಲಾಗಿ 10 ಒಟ್ಟಿಗೆ ಬರಬೇಕು ಎಂದಲ್ಲ. ನಿಯಮದನುಸಾರವಾಗಿ ಎಲೆಗಳು ಬರುತ್ತವೆ. ಇದು ಬಹಳ ದೊಡ್ಡ ವೃಕ್ಷವಾಗಿದೆ, ಒಂದು ದಿನದಲ್ಲಿ ಲಕ್ಷದಷ್ಟು ವೃದ್ಧಿ ಆಗಿಬಿಡುತ್ತದೆ ಎಂದು ತಿಳಿಸುತ್ತಾರೆ ಅಂದಮೇಲೆ ಮೊದಲು ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ ಎಂದು ತಿಳಿಸಬೇಕು, ಪತಿತಪಾವನ, ದುಃಖಹರ್ತ-ಸುಖಕರ್ತನು ಅವರೇ ಆಗಿದ್ದಾರೆ. ಯಾರೆಲ್ಲಾ ಪಾತ್ರಧಾರಿಗಳು ದುಃಖಿ ಆಗುತ್ತಾರೋ ಅವರೆಲ್ಲರಿಗೆ ಬಂದು ಸುಖ ಕೊಡುತ್ತಾರೆ. ದುಃಖ ಕೊಡುವವನು ರಾವಣನಾಗಿದ್ದಾನೆ. ಮನುಷ್ಯರಿಗೆ ಬಂದು ತಿಳಿದುಕೊಳ್ಳಲು ತಂದೆಯು ಬಂದಿದ್ದಾರೆ ಎಂಬುದು ತಿಳಿದೇ ಇಲ್ಲ. ಅನೇಕರು ತಿಳಿಯುತ್ತಾ-ತಿಳಿಯುತ್ತಾ ಮತ್ತೆ ಹೊರಟು ಹೋಗುತ್ತಾರೆ. ಹೇಗೆ ಸ್ನಾನ ಮಾಡುತ್ತಾ-ಮಾಡುತ್ತಾ ಕಾಲು ಜಾರಿದರೆ ನೀರಿನೊಳಗೆ ಹೋಗಿಬಿಡುತ್ತಾರೆ. ಬಾಬಾರವರು ಅನುಭವಿ ಆಗಿದ್ದಾರಲ್ಲವೇ. ಇದು ವಿಷಯ ಸಾಗರವಾಗಿದೆ, ತಂದೆಯು ನಿಮ್ಮನ್ನು ಕ್ಷೀರಸಾಗರದೆಡೆಗೆ ಕರೆದುಕೊಂಡು ಹೋಗುತ್ತಾರೆ ಆದರೆ ಮಾಯಾ ರೂಪಿ ಮೊಸಳೆಯು ಒಳ್ಳೊಳ್ಳೆಯ ಮಹಾರಥಿಗಳನ್ನೂ ಸಹ ತಿಂದು ಬಿಡುತ್ತದೆ. ಜೀವಿಸಿದ್ದಂತೆಯೇ ತಂದೆಯ ಮಡಿಲಿನಿಂದ ಸತ್ತು ರಾವಣನ ಮಡಿಲಿಗೆ ಹೊರಟುಹೋಗುತ್ತಾರೆ ಅರ್ಥಾತ್ ಜ್ಞಾನದಿಂದ ಸತ್ತುಹೋಗುತ್ತಾರೆ. ನೀವು ಮಕ್ಕಳ ಬುದ್ಧಿಯಲ್ಲಿ ಇದೆ - ಶ್ರೇಷ್ಠಾತಿ ಶ್ರೇಷ್ಠ ತಂದೆಯು ಮತ್ತೆ ರಚನೆಯನ್ನು ರಚಿಸುತ್ತಾರೆ. ಇತಿಹಾಸ, ಭೂಗೋಳವು ಸೂಕ್ಷ್ಮವತನದ್ದಲ್ಲ. ಭಲೇ ನೀವು ಸೂಕ್ಷ್ಮವತನಕ್ಕೆ ಹೋಗುತ್ತೀರಿ, ಸಾಕ್ಷಾತ್ಕಾರವನ್ನು ನೋಡುತ್ತೀರಿ, ಅಲ್ಲಿ ಚತುರ್ಭುಜವನ್ನು ನೋಡುತ್ತೀರಿ, ಚಿತ್ರಗಳಲ್ಲಿ ಇದೆ ಅಂದಾಗ ಅದು ಬುದ್ಧಿಯಲ್ಲಿ ಕುಳಿತಿದ್ದರೆ ಅವಶ್ಯವಾಗಿ ಸಾಕ್ಷಾತ್ಕಾರ ಆಗುತ್ತದೆ ಅಂದಾಗ ಇಂತಹ ಯಾವುದೇ ವಸ್ತುವಿಲ್ಲ. ಇದು ಭಕ್ತಿಮಾರ್ಗದ ಚಿತ್ರಗಳಾಗಿವೆ. ಇಲ್ಲಿಯವರೆಗೆ ಭಕ್ತಿಮಾರ್ಗವು ನಡೆಯುತ್ತದೆ. ಈ ಭಕ್ತಿಯು ಪೂರ್ಣವಾದರೆ ಮತ್ತೆ ಚಿತ್ರಗಳೇ ಇರುವುದಿಲ್ಲ. ಸ್ವರ್ಗದಲ್ಲಿ ಈ ಎಲ್ಲಾ ಮಾತುಗಳು ಮರೆತುಹೋಗುತ್ತದೆ. ಈಗ ಬುದ್ಧಿಯಲ್ಲಿ ಚತುರ್ಭುಜ ವಿಷ್ಣುವಿನ 2 ರೂಪಗಳಾದ ಲಕ್ಷ್ಮೀ-ನಾರಾಯಣರಿದ್ದಾರೆ. ಲಕ್ಷ್ಮೀ-ನಾರಾಯಣರ ಪೂಜೆಯು ವಿಷ್ಣುವಿನ ಪೂಜೆ, ಲಕ್ಷ್ಮೀ-ನಾರಾಯಣರ ಮಂದಿರ ಅಥವಾ ಚತುರ್ಭುಜ ವಿಷ್ಣುವಿನ ಮಂದಿರ ಒಂದೇ ಆಗಿದೆ. ಇವೆರಡರ ಜ್ಞಾನವು ಮತ್ತ್ಯಾರಿಗೂ ಇಲ್ಲ. ಇವರ ಪಾಲನೆಯನ್ನೂ ಮಾಡುತ್ತಾರೆ. ಇಡೀ ವಿಶ್ವದ ಮಾಲೀಕರಾಗುವುದರಿಂದ ವಿಶ್ವದ ಪಾಲನೆಯನ್ನೂ ಮಾಡುತ್ತಾರೆ.

ಶಿವಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಿಂದ ಈ ಯೋಗಾಗ್ನಿಯಿಂದಲೇ ವಿಕರ್ಮಗಳು ವಿನಾಶ ಆಗುತ್ತದೆ. ವಿಸ್ತಾರದಲ್ಲಿ ತಿಳಿಸಬೇಕಾಗುತ್ತದೆ. ಹೇಳಿ, ಇದೂ ಸಹ ಗೀತೆಯಾಗಿದೆ. ಕೇವಲ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿಬಿಟ್ಟಿದ್ದಾರೆ. ಇದು ತಪ್ಪಾಗಿದೆ, ಎಲ್ಲರ ನಿಂದನೆ ಮಾಡಿಬಿಟ್ಟಿದ್ದಾರೆ. ಆದ್ದರಿಂದ ಭಾರತವು ತಮೋಪ್ರಧಾನ ಆಗಿಬಿಟ್ಟಿದೆ. ಈಗ ಕಲಿಯುಗೀ ಪ್ರಪಂಚದ ಅಂತ್ಯವಾಗಿದೆ, ಇದಕ್ಕೆ ತಮೋಪ್ರಧಾನ, ಕಬ್ಬಿಣದ ಸಮಾನ ಪ್ರಪಂಚವೆಂದು ಹೇಳಲಾಗುತ್ತದೆ. ಯಾರು ಸತೋಪ್ರಧಾನವಾಗುತ್ತಾರೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಜನನ-ಮರಣದಲ್ಲಂತೂ ಅವಶ್ಯವಾಗಿ ಬರಬೇಕಾಗಿದೆ. ಯಾವಾಗ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೋ ಆಗ ಮತ್ತೆ ಮೊದಲನೆಯ ನಂಬರಿನಲ್ಲಿ ಬಾಬಾರವರು ಬರಬೇಕಾಗುತ್ತದೆ. ಇದು ಒಬ್ಬರ ಮಾತಲ್ಲ, ಇವರದು ಇಡೀ ರಾಜಧಾನಿ ಇತ್ತಲ್ಲವೇ, ಮತ್ತೆ ಅವಶ್ಯವಾಗಿ ಆಗಬೇಕು. ತಂದೆಯು ಎಲ್ಲರಿಗಾಗಿ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದಾಗ ಆ ಯೋಗಾಗ್ನಿಯಿಂದ ಪಾಪಗಳು ಭಸ್ಮವಾಗುತ್ತವೆ. ಕಾಮಚಿತೆಯ ಮೇಲೆ ಕುಳಿತು ಎಲ್ಲರೂ ಕಪ್ಪಾಗಿಬಿಟ್ಟಿದ್ದಾರೆ, ಈಗ ಕಪ್ಪಾಗಿರುವವರು ಹೇಗೆ ಸುಂದರರಾಗುವುದು? ಅದನ್ನು ತಂದೆ0iÉುೀ ಕಲಿಸುತ್ತಾರೆ. ಕೃಷ್ಣನ ಆತ್ಮವು ಭಿನ್ನ-ಭಿನ್ನ ನಾಮ, ರೂಪಗಳನ್ನು ತೆಗೆದುಕೊಂಡು ಬರುವುದು, ಯಾರು ಲಕ್ಷ್ಮೀ-ನಾರಾಯಣರು ಆಗಿದ್ದರೋ, ಅವರೇ 84 ಜನ್ಮಗಳ ನಂತರ ಮತ್ತೆ ಆ ರೀತಿ ಆಗಬೇಕಾಗಿದೆ. ಆದ್ದರಿಂದ ಅವರ ಬಹಳ ಜನ್ಮಗಳ ಅಂತಿಮದಲ್ಲಿ ತಂದೆಯು ಬಂದು ಪ್ರವೇಶ ಮಾಡುತ್ತಾರೆ. ನಂತರ ಅವರು (ಬ್ರಹ್ಮಾ) ಸತೋಪ್ರಧಾನ ವಿಶ್ವದ ಮಾಲೀಕರಾಗುತ್ತಾರೆ. ನಿಮ್ಮಲ್ಲಿ ಪಾರಸನಾಥನನ್ನೂ ಪೂಜಿಸುತ್ತಾರೆ, ಶಿವನನ್ನೂ ಪೂಜಿಸುತ್ತಾರೆ ಅಂದಾಗ ಅವಶ್ಯವಾಗಿ ಶಿವನೇ ಅವರನ್ನು ಇಂತಹ ಪಾರಸನಾಥರನ್ನಾಗಿ ಮಾಡಿರಬೇಕು. ಶಿಕ್ಷಕರಂತೂ ಬೇಕಲ್ಲವೇ. ಅವರು ಜ್ಞಾನಸಾಗರರಾಗಿದ್ದಾರೆ, ಈಗ ಸತೋಪ್ರಧಾನ, ಪಾರಸನಥರಾಗಬೇಕೆಂದರೆ, ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಿ, ಅವರೇ ಎಲ್ಲರ ದುಃಖವನ್ನು ದೂರ ಮಾಡುವವರಾಗಿದ್ದಾರೆ. ತಂದೆಯಂತೂ ಸುಖ ನೀಡುವವರಾಗಿದ್ದಾರೆ. ಇದು ಮುಳ್ಳುಗಳ ಕಾಡಾಗಿದೆ. ತಂದೆಯು ಹೂದೋಟವನ್ನಾಗಿ ಮಾಡಲು ಬಂದಿದ್ದಾರೆ, ತಂದೆಯು ತಮ್ಮ ಪರಿಚಯವನ್ನು ಕೊಡುತ್ತಾರೆ - ನಾನು ಈ ಸಾಧಾರಣ ವೃದ್ಧನ ತನುವಿನಲ್ಲಿ ಪ್ರವೇಶ ಮಾಡುತ್ತೇನೆ, ಇವರು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ ಅಂದಾಗ ಇದು ಈಶ್ವರೀಯ ವಿಶ್ವವಿದ್ಯಾಲಯವಾಯಿತು. ರಾಜಾ-ರಾಣಿ ಆಗುವುದು ಇದರ ಗುರಿ-ಉದ್ದೇಶವೇ ಆಗಿದೆ ಅಂದಾಗ ಅವಶ್ಯವಾಗಿ ಪ್ರಜೆಗಳೂ ಆಗುತ್ತಾರೆ. ಮನುಷ್ಯರು ಯೋಗ-ಯೋಗ ಎಂದು ಬಹಳ ಹೇಳುತ್ತಿರುತ್ತಾರೆ, ನಿವೃತ್ತಿ ಮಾರ್ಗದವರು ಅನೇಕ ಹಠಯೋಗವನ್ನು ಮಾಡುತ್ತಿರುತ್ತಾರೆ, ಅವರು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ತಂದೆಯದು ಒಂದೇ ಪ್ರಕಾರದ ಯೋಗವಾಗಿದೆ. ಕೇವಲ ತಮ್ಮನ್ನು ಆತ್ಮ ಎಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. 84 ಜನ್ಮಗಳು ಪೂರ್ಣವಾಯಿತು, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಪಾವನರಾಗಬೇಕಾಗಿದೆ. ಒಬ್ಬ ತಂದೆಯನ್ನು ನೆನಪು ಮಾಡಿ, ಉಳಿದೆಲ್ಲವನ್ನು ಬಿಡಿ. ಭಕ್ತಿಮಾರ್ಗದಲ್ಲಿ ತಾವು ಬಂದರೆ ನಾವು ಒಬ್ಬರ ಸಂಗವನ್ನೇ ಮಾಡುತ್ತೇವೆ ಎಂದು ನೀವು ಹಾಡುತ್ತಿದ್ದಿರಿ. ಅಂದಮೇಲೆ ಅವಶ್ಯವಾಗಿ ಅವರಿಂದ ಆಸ್ತಿಯು ಸಿಕ್ಕಿತ್ತಲ್ಲವೇ. ಅರ್ಧಕಲ್ಪ ಸ್ವರ್ಗವಿರುತ್ತದೆ ನಂತರ ನರಕವಾಗುತ್ತದೆ, ರಾವಣರಾಜ್ಯವು ಪ್ರಾರಂಭವಾಗುತ್ತದೆ. ತಮ್ಮನ್ನು ದೇಹವೆಂದು ತಿಳಿಯಬೇಡಿ, ಆತ್ಮವು ಅವಿನಾಶಿ ಆಗಿದೆ, ಆತ್ಮದಲ್ಲಿಯೇ ಪೂರ್ಣ ಪಾತ್ರವು ನೊಂದಾವಣೆ ಆಗಿದೆ, ಅದನ್ನು ನೀವು ಅಭಿನಯಿಸುತ್ತೀರಿ ಎಂದು ಈ ರೀತಿ ತಿಳಿಸಬೇಕು. ಈಗ ಶಿವತಂದೆಯನ್ನು ನೆನಪು ಮಾಡಿದರೆ ದೋಣಿಯು ಪಾರಾಗಿಬಿಡುತ್ತದೆ. ಸನ್ಯಾಸಿಗಳೂ ಪವಿತ್ರರಾಗುತ್ತಾರೆ ಎಂದರೆ ಅವರಿಗೆ ಎಷ್ಟು ಮಾನ್ಯತೆ ಇರುತ್ತದೆ, ಎಲ್ಲರೂ ತಲೆ ಬಾಗುತ್ತಾರೆ. ಪವಿತ್ರತೆಯ ಮಾತಿನಲ್ಲಿಯೇ ಉತ್ತಮರು, ನೀಚರು ಆಗುತ್ತಾರೆ. ದೇವತೆಗಳು ಸಂಪೂರ್ಣ ಉತ್ತಮರಾಗಿದ್ದಾರೆ. ಸನ್ಯಾಸಿಗಳು ಕೇವಲ ಒಂದು ಜನ್ಮ ಪವಿತ್ರರಾಗುತ್ತಾರೆ, ಮತ್ತೆ ಇನ್ನೊಂದು ಜನ್ಮವಂತೂ ವಿಕಾರದಿಂದಲೇ ಪಡೆಯುತ್ತಾರೆ. ದೇವತೆಗಳು ಸತ್ಯಯುಗದಲ್ಲಿಯೇ ಇರುತ್ತಾರೆ, ಈಗ ನೀವು ಓದುತ್ತೀರಿ ಮತ್ತು ಓದಿಸುತ್ತೀರಿ. ಕೆಲವರು ಓದುತ್ತಾರೆ ಆದರೆ ಅನ್ಯರಿಗೆ ತಿಳಿಸಲು ಅವರಿಂದ ಆಗುವುದಿಲ್ಲ ಏಕೆಂದರೆ ಧಾರಣೆ ಆಗುವುದಿಲ್ಲ. ತಂದೆಯು ಹೇಳುತ್ತಾರೆ - ನಿಮ್ಮ ಅದೃಷ್ಟದಲ್ಲಿ ಇಲ್ಲವೆಂದರೆ ತಂದೆ ಏನು ಮಾಡುತ್ತಾರೆ! ಒಂದುವೇಳೆ ತಂದೆಯು ಕುಳಿತು ಎಲ್ಲರಿಗೂ ಆಶೀರ್ವಾದ ಮಾಡುವುದಾದರೆ ಎಲ್ಲರೂ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳುವರು. ಭಕ್ತಿಮಾರ್ಗದಲ್ಲಿ ಅವರು ಆಶೀರ್ವಾದ ಮಾಡುತ್ತಾರೆ, ಸನ್ಯಾಸಿಗಳೂ ಸಹ ಮಾಡುತ್ತಾರೆ. ಅವರ ಹತ್ತೀರ ಹೋಗಿ ನಮಗೆ ಒಳ್ಳೆಯ ಮಕ್ಕಳಾಗಲಿ ಆಶೀರ್ವಾದ ಮಾಡಿ ಎಂದು ಅವರಿಗೆ ಹೇಳುತ್ತಾರೆ. ಒಳ್ಳೆಯದು. ಮಕ್ಕಳೂ ಆಗುವರು, ಒಂದುವೇಳೆ ಹೆಣ್ಣು ಮಗುವಾಯಿತೆಂದರೆ ನಾಟಕದ ಪೂರ್ವ ನಿಶ್ಚಿತವೆಂದು ಹೇಳುತ್ತಾರೆ. ಗಂಡು ಮಗುವಾದರೆ ವಾಹ್!ವಾಹ್! ಎಂದು ಹೇಳಿ ಚರಣಗಳಿಗೆ ಬೀಳುತ್ತಾರೆ. ಒಳ್ಳೆಯದು. ಒಂದುವೇಳೆ ಆ ಮಗು ಸತ್ತರೆ ಅಳುತ್ತಾ, ಚೀರುತ್ತಾ ಗುರುಗಳಿಗೆ ನಿಂದನೆ ಮಾಡಲು ತೊಡಗುತ್ತಾರೆ. ಇದು ನಾಟಕದ ಲೀಲೆ ಆಗಿತ್ತು ಎಂದು ಗುರುಗಳು ಹೇಳುತ್ತಾರೆ, ಆಗ ಮೊದಲೇ ಇದನ್ನು ಏಕೆ ತಿಳಿಸಲಿಲ್ಲ ಎಂದು ಹೇಳುತ್ತಾರೆ. ಯಾರಾದರೂ ಸತ್ತಿರುವವರು ಬದುಕಿಬಿಟ್ಟರೆ ಇದನ್ನೂ ಲೀಲೆ ಎಂದು ಹೇಳುತ್ತಾರೆ. ಅದು ನಾಟಕದಲ್ಲಿ ನಿಗಧಿ ಆಗಿದೆ, ಆತ್ಮವು ಎಲ್ಲಿಯೋ ಮುಚ್ಚಿಟ್ಟುಕೊಳ್ಳುತ್ತದೆ. ವೈದ್ಯರೂ ಸಹ ಇವರು ಸತ್ತುಹೋಗಿದ್ದಾರೆ ಎಂದು ತಿಳಿಯುತ್ತಾರೆ ಆದರೆ ಮತ್ತೆ ಬದುಕಿಬಿಡುತ್ತಾರೆ. ಚಿತೆಯ ಮೇಲಿರುವವರು ಎದ್ದು ನಿಲ್ಲುತ್ತಾರೆ. ಯಾರಾದರೂ ಒಬ್ಬರು ಯಾರನ್ನಾದರೂ ನಂಬಿದರೆ ಅನೇಕರು ಅವರ ಹಿಂದೆ ಬೀಳುತ್ತಾರೆ.

ನೀವು ಮಕ್ಕಳು ಬಹಳ ನಿರ್ಮಾಣಚಿತ್ತರಾಗಿ ನಡೆಯಬೇಕು. ಅಂಶಮಾತ್ರವೂ ಅಹಂಕಾರವಿರಬಾರದು. ಇಂದಿನ ದಿನಗಳಲ್ಲಿ ಯಾರಿಗಾದರೂ ಸ್ವಲ್ಪ ಅಹಂಕಾರ ತೋರಿಸಿದರೂ ಶತೃತ್ವವೂ ಹೆಚ್ಚುತ್ತದೆ, ಬಹಳ ಮಧುರರಾಗಿ ನಡೆಯಬೇಕು. ನೇಪಾಳದಲ್ಲಿಯೂ ತಂದೆಯ ಸಂದೇಶ ಹರುಡುವುದು. ಈಗ ನೀವು ಮಕ್ಕಳ ಮಹಿಮೆಯ ಸಮಯವಲ್ಲ. ಇಲ್ಲದಿದ್ದರೆ ಅವರ ಗದ್ದಿಗೆಗಳು ಹಾರಿಹೋಗುತ್ತಿತ್ತು. ದೊಡ್ದ-ದೊಡ್ಡವರು ಜಾಗೃತರಾಗಿ ಮತ್ತು ಸಭೆಯಲ್ಲಿ ಕುಳಿತು ತಿಳಿಸಿದರೆ ಅವರ ಹಿಂದೆ ಅನೇಕರು ಬಂದುಬಿಡುತ್ತಾರೆ. ಒಂದುವೇಳೆ ಪ್ರಧಾನಮಂತ್ರಿಗಳು ಕುಳಿತು ಭಾರತದ ರಾಜಯೋಗವು ಬ್ರಹ್ಮಾಕುಮಾರ-ಕುಮಾರಿಯರ ವಿನಃ ಯಾರೂ ಕಲಿಸಲು ಸಾಧ್ಯವಿಲ್ಲವೆಂದು ನಿಮ್ಮ ಮಹಿಮೆ ಮಾಡಿದರೆ ಆಗ ಅನೇಕರು ಅದನ್ನು ಒಪ್ಪುತ್ತಾರೆ ಆದರೆ ಇಂತಹವರು ಇಲ್ಲಿಯವರೆಗೆ ಯಾರೂ ಇಲ್ಲ. ಮಕ್ಕಳು ಬಹಳ ಬುದ್ಧಿವಂತರು, ಚಮತ್ಕಾರಿಗಳಾಗಬೇಕಾಗಿದೆ. ಯಾರು-ಯಾರು ಹೇಗೆ ಭಾಷಣ ಮಾಡುತ್ತಾರೆ ಎಂದು ಕಲಿಯಬೇಕು. ಸರ್ವೀಸ್ ಮಾಡುವ ಯುಕ್ತಿಯನ್ನು ತಂದೆಯು ಕಲಿಸುತ್ತಾರೆ. ತಂದೆಯು ಯಾವ ಮುರಳಿಯನ್ನು ತಿಳಿಸಿದ್ದರೋ, ಕಲ್ಪ-ಕಲ್ಪವೂ ಹಾಗೇ ತಿಳಿಸಿರಬೇಕು. ಇದೂ ನಾಟಕದಲ್ಲಿ ನಿಗಧಿಯಾಗಿದೆ. ಹೀಗೆ ಏಕೆ? ಎಂದು ಪ್ರಶ್ನೆಯು ಉದ್ಭವಿಸಲು ಸಾಧ್ಯವಿಲ್ಲ. ನಾಟಕದನುಸಾರ ಏನನ್ನು ತಿಳಿಸಬೇಕಾಗಿತ್ತೋ ಅದನ್ನು ತಿಳಿಸಿದ್ದೇನೆ ಮತ್ತು ತಿಳಿಸುತ್ತಿರುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಮನುಷ್ಯರಂತೂ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ ಆಗ, ಮೊದಲು ಮನ್ಮನಾಭವ ಆಗಿ ಎಂದು ತಿಳಿಸಿ. ತಂದೆಯನ್ನು ಅರಿತರೆ ನೀವು ಎಲ್ಲವನ್ನು ಅರಿತುಕೊಳ್ಳುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸರ್ವೀಸಿನ ಯುಕ್ತಿಯನ್ನು ಕಲಿತು ಬಹಳ-ಬಹಳ ಬುದ್ಧಿವಂತರು ಮತ್ತು ಚಮತ್ಕಾರಿಗಳಾಗಬೇಕಾಗಿದೆ. ಧಾರಣೆ ಮಾಡಿ ಮತ್ತು ಅನ್ಯರಿಗೆ ಮಾಡಿಸಬೇಕಾಗಿದೆ. ವಿದ್ಯೆಯಿಂದ ತಮ್ಮ ಅದೃಷ್ಟವನ್ನು ತಾವೇ ರೂಪಿಸಿಕೊಳ್ಳಬೇಕಾಗಿದೆ.

2. ಯಾವುದೇ ಮಾತಿನಲ್ಲಿ ಅಂಶ ಮಾತ್ರವೂ ಅಹಂಕಾರವನ್ನು ತೋರಿಸಬಾರದು, ಬಹಳ ಬಹಳ ಮಧುರ ಮತ್ತು ನಿರ್ಮಾಣ ಚಿತ್ತರಾಗಬೇಕಾಗಿದೆ. ಮಾಯಾ ರೂಪಿ ಮೊಸಳೆಯಿಂದ ತಮ್ಮನ್ನು ರಕ್ಷಿಸಕೊಳ್ಳಬೇಕಾಗಿದೆ.

ವರದಾನ:
ಕಳೆದು ಹೋದದಕ್ಕೆ ಶ್ರೇಷ್ಠ ವಿಧಿಯಿಂದ ಕಳೆದು ನೆನಪಾರ್ಥ ಸ್ವರೂಪ ಮಾಡುವಂತಹ ಪಾಸ್ ವಿತ್ ಆನರ್ ಭವ

“ಕಳೆದು ಹೋದದ್ದು ಕಳೆದು ಹೋಯಿತು” ಅದು ಆಗಲೆ ಬೇಕು. ಸಮಯ ಮತ್ತು ದೃಶ್ಯ ಎಲ್ಲವೂ ಪಾಸ್ ಆಗಿಬಿಡುವುದು ಆದರೆ ಪಾಸ್ ವಿತ್ ಆನರ್ ಆಗಿ ಪ್ರತಿ ಸಂಕಲ್ಪ ಹಾಗೂ ಸಮಯವನ್ನು ಪಾಸ್ ಮಾಡಿ ಅರ್ಥಾತ್ ಗತಿಸಿ ಹೋದದಕ್ಕೆ ಇಂತಹ ಶ್ರೇಷ್ಠ ವಿಧಿಯಿಂದ ಕಳೆಯಿರಿ, ಯಾವುದು ಕಳೆದು ಹೋಯಿತು ಅದನ್ನು ಸ್ಮøತಿಗೆ ಬಂದೊಡನೆ ವ್ಹಾ!ವ್ಹಾ! ನ ಮಾತು ಹೃದಯದಿಂದ ಹೊರಬರಲಿ. ಅನ್ಯ ಆತ್ಮಗಳು ನಿಮ್ಮ ಕಳೆದುಹೋದ ಕಥೆಯಿಂದ ಪಾಠ ಕಲಿಯಲಿ. ನಿಮ್ಮ ಕಳೆದು ಹೋದ, ನೆನಪು-ಸ್ವರೂಪ ಆಗಿಬಿಡಲಿ ಆಗ ಕೀರ್ತನೆ ಅರ್ಥಾತ್ ಕೀರ್ತಿ ಹಾಡುತ್ತಿರುತ್ತಾರೆ.

ಸ್ಲೋಗನ್:
ಸ್ವ-ಕಲ್ಯಾಣದ ಶ್ರೇಷ್ಠ ಪ್ಲಾನ್ ಮಾಡಿ ಆಗ ವಿಶ್ವ ಸೇವೆಯಲ್ಲಿ ಸಕಾಶ ಸಿಗುವುದು.