17.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಈ ವಿಚಿತ್ರವಾದ ವಿದ್ಯೆಯನ್ನು ಬೇಹದ್ದಿನ ತಂದೆಯು ಓದಿಸುತ್ತಾರೆ, ತಂದೆ ಮತ್ತು ಅವರ ವಿದ್ಯೆಯಲ್ಲಿ ಯಾವುದೇ ಸಂಶಯ ಬರಬಾರದು, ಮೊದಲು ನಮಗೆ ಓದಿಸುವವರು ಯಾರು ಎಂದು ನಿಶ್ಚಯ ಇರಬೇಕು"

ಪ್ರಶ್ನೆ:
ನೀವು ಮಕ್ಕಳಿಗೆ ನಿರಂತರ ನೆನಪಿನ ಯಾತ್ರೆಯಲ್ಲಿ ಇರುವ ಶ್ರೀಮತವು ಏಕೆ ಸಿಕ್ಕಿದೆ?

ಉತ್ತರ:
ಏಕೆಂದರೆ ಮಾಯಾ ಶತ್ರು ಈಗಲೂ ನಿಮ್ಮ ಹಿಂದೆಯೇ ಇದ್ದಾನೆ, ಯಾವುದು ನಿಮ್ಮನ್ನು ಬೀಳಿಸಿದೆ. ಈಗ ಅದು ನಿಮ್ಮ ಹಿಂದೆ ಬರುವುದು ಬಿಡುವುದಿಲ್ಲ ಆದ್ದರಿಂದ ಹುಡುಗಾಟಿಕೆ ಮಾಡಬಾರದು. ಭಲೆ ನೀವು ಸಂಗಮಯುಗದಲ್ಲಿ ಇದ್ದೀರಿ ಆದರೆ ಅರ್ಧಕಲ್ಪ ನೀವು ಮಾಯೆಗೆ ವಶರಾಗಿದ್ದಿರಿ ಆದ್ದರಿಂದ ಬೇಗನೆ ಬಿಡುವುದಿಲ್ಲ. ನೆನಪು ಮರೆತು ಹೋಯಿತು ಮತ್ತು ಮಾಯೆಯು ವಿಕರ್ಮ ಮಾಡಿಸಿತು ಆದ್ದರಿಂದ ಎಚ್ಚರಿಕೆಯಿಂದ ಇರಬೇಕು. ಆಸುರಿ ಮತದಂತೆ ನಡೆಯಬಾರದು.

ಓಂ ಶಾಂತಿ.
ಈಗ ಮಕ್ಕಳೂ ಇದ್ದೀರಿ, ತಂದೆಯು ಇದ್ದಾರೆ. ತಂದೆಯು ಅನೇಕ ಮಕ್ಕಳಿಗೆ ಓ ಮಗುವೇ ಎಂದು ಹೇಳುತ್ತಾರೆ ಮತ್ತೆ ಎಲ್ಲಾ ಮಕ್ಕಳೂ ಸಹ ಓ ಬಾಬಾ ಎಂದು ಹೇಳುತ್ತಾರೆ, ಮಕ್ಕಳೂ ಅನೇಕರಿದ್ದಾರೆ. ನೀವು ತಿಳಿಯುತ್ತೀರಿ –ಈ ಜ್ಞಾನ ನಾವು ಆತ್ಮಗಳಿಗಾಗಿಯೇ ಇದೆ. ಒಬ್ಬ ತಂದೆಗೆ ಎಷ್ಟು ಜನ ಮಕ್ಕಳಿದ್ದಾರೆ! ತಂದೆಯು ಓದಿಸಲು ಬಂದಿದ್ದಾರೆ ಎಂದು ಮಕ್ಕಳಿಗೂ ತಿಳಿದಿದೆ, ಅವರು ಮೊಟ್ಟ ಮೊದಲು ತಂದೆಯಾಗಿದ್ದಾರೆ, ಮತ್ತೆ ಶಿಕ್ಷಕರೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಈಗ ತಂದೆಯಂತೂ ತಂದೆಯೇ, ಮತ್ತೆ ಪಾವನರನ್ನಾಗಿ ಮಾಡಲು ನೆನಪಿನ ಯಾತ್ರೆಯನ್ನು ಕಲಿಸುತ್ತಾರೆ. ಮತ್ತೆ ಮಕ್ಕಳು ಇದನ್ನು ತಿಳಿಯುತ್ತೀರಿ - ಈ ವಿದ್ಯೆಯು ಅದ್ಭುತವಾಗಿದೆ. ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಂದೆಯ ವಿನಃ ಯಾರೂ ತಿಳಿಸಲು ಸಾಧ್ಯವಿಲ್ಲ. ಆದ್ದರಿಂದ ಅವರನ್ನು ಬೇಹದ್ದಿನ ತಂದೆ ಎಂದು ಹೇಳಲಾಗುತ್ತದೆ. ಈ ನಿಶ್ಚಯವಂತೂ ಮಕ್ಕಳಿಗೆ ಅವಶ್ಯವಾಗಿ ಕುಳಿತುಕೊಳ್ಳುತ್ತದೆ. ಇದರಲ್ಲಿ ಸಂಶಯದ ಮಾತು ಉದ್ಭವಿಸಲು ಸಾಧ್ಯವಿಲ್ಲ. ಇಷ್ಟು ಬೇಹದ್ದಿನ ವಿದ್ಯೆಯನ್ನು ಬೇಹದ್ದಿನ ತಂದೆಯ ವಿನಃ ಅನ್ಯರು ಯಾರೂ ಓದಿಸಲು ಸಾಧ್ಯವಿಲ್ಲ. ಬಾಬಾ ಬನ್ನಿ, ಬಂದು ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ ಏಕೆಂದರೆ, ಇದು ಪತಿತ ಪ್ರಪಂಚವಾಗಿದೆ. ತಂದೆಯು ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಬಾಬಾ ಬಂದು ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುವುದಿಲ್ಲ. ಅವರು ನಾವು ಆತ್ಮಗಳ ತಂದೆಯಾಗಿದ್ದಾರೆ ಎಂದು ಮಕ್ಕಳಿಗೆ ತಿಳಿದಿದೆ. ಆದ್ದರಿಂದ ದೇಹದ ಪರಿವೆ ತುಂಡಾಗುತ್ತದೆ. ಅವರು ನಮ್ಮ ತಂದೆಯಾಗಿದ್ದಾರೆ ಎಂದು ಆತ್ಮವುs ಹೇಳುತ್ತದೆ. ಈಗ ಇದಂತೂ ನಿಶ್ಚಯವಾಗಿದೆ, ಅವಶ್ಯವಾಗಿ ತಂದೆಯ ವಿನಃ ಮತ್ತ್ಯಾರೂ ಇಷ್ಟೊಂದು ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಮೊದಲು ಈ ನಿಶ್ಚಯಬುದ್ಧಿ ಬೇಕು. ಆತ್ಮಕ್ಕೆ ಬುದ್ಧಿಯಲ್ಲಿ ನಿಶ್ಚಯವಾಗುತ್ತದೆ. ಇವರು ನಮ್ಮ ತಂದೆಯಾಗಿದ್ದಾರೆ ಎಂದು. ಆತ್ಮಕ್ಕೆ ಜ್ಞಾನವು ಸಿಗುತ್ತದೆ. ಮಕ್ಕಳಿಗೆ ಇದು ಪಕ್ಕಾ ನಿಶ್ಚಯವಿರಬೇಕು. ಏನನ್ನೂ ಮುಖದಿಂದ ಹೇಳುವಂತಿಲ್ಲ. ನಾವು ಆತ್ಮಗಳು ಒಂದು ಶರೀರವನ್ನು ಬಿಟ್ಟು ಮತ್ತೊಂದನ್ನು ತೆಗೆದುಕೊಳ್ಳುತ್ತೇವೆ, ಆತ್ಮದಲ್ಲಿಯೇ ಎಲ್ಲಾ ಸಂಸ್ಕಾರವಿದೆ.

ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ ತಂದೆಯು ಬಂದಿದ್ದಾರೆ, ನಮಗೆ ಈ ರೀತಿ ಓದಿಸುತ್ತಾರೆ, ಕರ್ಮವನ್ನು ಕಲಿಸುತ್ತಾರೆ, ಇದರಿಂದ ಮತ್ತೆ ನಾವು ಇದೇ ಪ್ರಪಂಚದಲ್ಲಿ ಬರುವುದಿಲ್ಲ. ಮನುಷ್ಯರಂತೂ ಇದೇ ಪ್ರಪಂಚದಲ್ಲಿ ಬರಬೇಕು ಎಂದು ತಿಳಿಯುತ್ತಾರೆ, ಆದರೆ ನೀವು ಹೀಗೆ ತಿಳಿಯುವುದಿಲ್ಲ. ನೀವು ಈ ಅಮರ ಕಥೆಯನ್ನು ಕೇಳಿ ಅಮರಪುರಿಗೆ ಹೋಗುತ್ತೀರಿ. ಅಮರಪುರಿ ಎಂದರೆ ಎಲ್ಲಿ ಸದಾ ಅಮರರಾಗಿರುತ್ತಾರೆ. ಸತ್ಯಯುಗ, ತ್ರೇತಾಯುಗವು ಅಮರಪುರಿಯಾಗಿದೆ. ಮಕ್ಕಳಿಗೆ ಎಷ್ಟೊಂದು ಖುಷಿ ಇರಬೇಕು, ಈ ವಿದ್ಯೆಯನ್ನು ತಂದೆಯ ವಿನಃ ಬೇರೆ ಯಾರೂ ಓದಿಸಲು ಸಾಧ್ಯವಿಲ್ಲ. ತಂದೆಯು ನಮಗೆ ಓದಿಸುತ್ತಾರೆ ಮತ್ತು ಯಾರು ಶಿಕ್ಷಕರಾಗಿರುತ್ತಾರೆಯೋ ಅವರು ಸಾಮಾನ್ಯ ಮನುಷ್ಯರಾಗಿದ್ದಾರೆ, ಆದರೆ ಇಲ್ಲಿ ನೀವು ಪತಿತಪಾವನ, ದುಃಖಹರ್ತ-ಸುಖಕರ್ತ ಎಂದು ಹೇಳುತ್ತೀರೋ ಆ ತಂದೆಯು ಈಗ ಸನ್ಮುಖದಲ್ಲಿ ಓದಿಸುತ್ತಿದ್ದಾರೆ. ಸನ್ಮುಖವಿಲ್ಲದೆ ರಾಜಯೋಗದ ವಿದ್ಯೆಯನ್ನು ಹೇಗೆ ಓದಿಸುವುದು? ತಂದೆಯು ಹೇಳುತ್ತಾರೆ - ನೀವು ಮಧುರ ಮಕ್ಕಳಿಗೆ ಇಲ್ಲಿ ಓದಿಸಲು ಬರುತ್ತೇನೆ, ಓದಿಸಲು ಇವರಲ್ಲಿ ಪ್ರವೇಶ ಮಾಡುತ್ತೇನೆ. ಭಗವಾನುವಾಚ ಇದೆ ಎಂದರೆ ಅವಶ್ಯವಾಗಿ ಅವರಿಗೆ ಶರೀರವು ಬೇಕು. ಕೇವಲ ಮುಖವಲ್ಲ ಆದರೆ ಪೂರ್ಣ ಶರೀರವು ಬೇಕು. ತಂದೆಯೇ ಹೇಳುತ್ತಾರೆ - ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ನಾನು ಕಲ್ಪ-ಕಲ್ಪವು ಪುರುಷೋತ್ತಮ ಸಂಗಮ ಯುಗದಲ್ಲಿ ಸಾಧಾರಣ ತನುವಿನಲ್ಲಿ ಬರುತ್ತೇನೆ. ಬಹಳ ಬಡವರು ಅಲ್ಲ, ಬಹಳ ಸಾಹುಕಾರರೂ ಅಲ್ಲ, ಸಾಧಾರಣವಾಗಿದ್ದಾರೆ. ಇದಂತೂ ನೀವು ಮಕ್ಕಳಿಗೆ ನಿಶ್ಚಯವಿರಬೇಕು - ಅವರು ನಮ್ಮ ತಂದೆಯಾಗಿದ್ದಾರೆ, ನಾವು ಆತ್ಮಗಳಾಗಿದ್ದೇವೆ. ಅವರು ನಾವು ಆತ್ಮಗಳ ತಂದೆಯಾಗಿದ್ದಾರೆ. ಇಡೀ ಪ್ರಪಂಚದ ಯಾರೆಲ್ಲಾ ಮನುಷ್ಯಾತ್ಮರಿದ್ದಾರೆಯೋ ಅವರೆಲ್ಲರಿಗೂ ತಂದೆಯಾಗಿದ್ದಾರೆ, ಆದ್ದರಿಂದ ಅವರಿಗೆ ಬೇಹದ್ದಿನ ತಂದೆ ಆಗಿದ್ದಾರೆ ಎಂದು ಹೇಳಲಾಗುತ್ತದೆ. ಶಿವಜಯಂತಿಯನ್ನು ಆಚರಿಸಲಾಗುತ್ತದೆ ಆದರೆ ಅದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಶಿವಜಯಂತಿಯನ್ನು ಯಾವಗಿನಿಂದ ಆಚರಿಸಲಾಗುತ್ತದೆ ಎಂದು ಯಾರೊಂದಿಗಾದರೂ ಕೇಳಿ. ಅದಕ್ಕೆ ಅವರು ಪರಂಪರೆಯಿಂದ ಎಂದು ಹೇಳುತ್ತಾರೆ. ಅದು ಯಾವಾಗಿನಿಂದ? ಯಾವುದಾದರೂ ದಿನಾಂಕವಂತೂ ಬೇಕಲ್ಲವೇ. ನಾಟಕವು ಅನಾದಿಯಾಗಿದೆ, ಆದರೆ ನಾಟಕದಲ್ಲಿ ಯಾವ ಚಟುವಟಿಕೆಗಳು ನಡೆಯುತ್ತದೆಯೋ ಅದರ ತಿಥಿ, ತಾರೀಖು ಬೇಕಲ್ಲವೇ. ಇದನ್ನು ಯಾರೂ ತಿಳಿದುಕೊಂಡಿಲ್ಲ. ನಮ್ಮ ಶಿವತಂದೆಯೇ ಬರುತ್ತಾರೆಂದು, ಆ ಪ್ರೀತಿಯಿಂದ ಜಯಂತಿಯನ್ನು ಆಚರಿಸುವುದಿಲ್ಲ. ನೆಹರು ಜಯಂತಿಯನ್ನು ಅಷ್ಟು ಪ್ರೀತಿಯಿಂದ ಆಚರಿಸುತ್ತಾರೆ, ಆನಂದ ಬಾಷ್ಪಗಳು ಬರುತ್ತವೆ. ಶಿವಜಯಂತಿಯ ಬಗ್ಗೆ ಯಾರಿಗೂ ಗೊತ್ತಿಲ್ಲ. ಈಗ ನೀವು ಮಕ್ಕಳು ಅನುಭವಿಗಳಾಗಿದ್ದೀರಿ, ಅನೇಕ ಮನುಷ್ಯರಿದ್ದಾರೆ, ಅವರಿಗೆ ಏನೂ ಗೊತ್ತಿಲ್ಲ. ಎಷ್ಟೊಂದು ಮೇಳಗಳು ಸೇರುತ್ತವೆ. ಅಲ್ಲಿಗೂ ಯಾರು ಹೋಗುವರೋ ಅವರಿಗೆ ಏನೂ ಗೊತ್ತಿಲ್ಲ. ಸತ್ಯವೇನಿದೆ ಎಂದು ತಿಳಿಸಬಹುದು. ಹೇಗೆ ಬಾಬಾರವರು ಅಮರನಾಥದ ಉದಾಹರಣೆಯನ್ನು ತಿಳಿಸಿದರೋ, ಅಲ್ಲಿ ಹೋಗಿ ಸತ್ಯವಾಗಿಯೂ ಏನಾಗುತ್ತದೆ ಎಂಬುದನ್ನು ನೋಡಿದರು. ಬೇರೆಯವರಂತೂ ಅನ್ಯರ ಮೂಲಕ ಏನನ್ನು ಕೇಳುವವರೋ ಅದನ್ನು ತಿಳಿಸುತ್ತಾರೆ. ಹಿಮದ ಲಿಂಗವಾಗುತ್ತದೆ ಎಂದು ಯಾರಾದರೂ ಹೇಳಿದರೆ ಅದಕ್ಕೆ ಸತ್ಯವೆಂದು ನಂಬುತ್ತಾರೆ. ಈಗ ನೀವು ಮಕ್ಕಳಿಗೆ ಸತ್ಯ ಯಾವುದು, ಅಸತ್ಯ ಏನಾಗಿದೆ ಎಂದು ಅನುಭವವಾಗಿದೆ. ಇದುವರೆಗೆ ಏನೆಲ್ಲವನ್ನು ಕೇಳುತ್ತಾ-ಓದುತ್ತಾ ಬಂದಿದ್ದೀರೋ ಅದೆಲ್ಲವೂ ಅಸತ್ಯವಾಗಿತ್ತು, ಸುಳ್ಳು ಮಾಯೆ, ಸುಳ್ಳು ಶರೀರ... ಎಂದು ಗಾಯನವಿದೆ. ಇದು ಅಸತ್ಯದ ಪ್ರಪಂಚವಾಗಿದೆ, ಸ್ವರ್ಗವು ಸತ್ಯ ಖಂಡವಾಗಿದೆ. ಸತ್ಯಯುಗ, ತ್ರೇತಾ, ದ್ವಾಪರ ಯುಗವು ಕಳೆಯಿತು, ಈಗ ಕಲಿಯುಗವು ನಡೆಯುತ್ತಿದೆ. ಇದನ್ನೂ ಸಹ ಬಹಳ ಕೆಲವರೇ ಅರಿತುಕೊಳ್ಳುತ್ತಾರೆ. ನಿಮ್ಮಬುದ್ಧಿಯಲ್ಲಿ ಎಲ್ಲಾ ವಿಚಾರಗಳು ಇರುತ್ತವೆ. ತಂದೆಯ ಬಳಿ ಪೂರ್ಣ ಜ್ಞಾನವಿದೆ, ಅವರಿಗೆ ಜ್ಞಾನ ಸಾಗರನೆಂದು ಹೇಳುತ್ತಾರೆ, ಅವರ ಬಳಿ ಯಾವ ಜ್ಞಾನವಿದೆಯೋ ಅದನ್ನು ಬ್ರಹ್ಮಾರವರ ಮೂಲಕ ಕೊಟ್ಟು ನಮ್ಮನ್ನು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಹೇಗೆ ಶಿಕ್ಷಕರೂ ಸಹ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತಾರೆ ಎಂದಾಗ ಬೇಹದ್ದಿನ ತಂದೆಯೂ ಸಹ ಪ್ರಯತ್ನ ಪಟ್ಟು ತನ್ನ ಸಮಾನವನ್ನಾಗಿ ಮಾಡುತ್ತಾರೆ. ಆದರೆ, ಹೀಗೆ ಲೌಕಿಕ ತಂದೆಯು ಮಾಡುವುದಿಲ್ಲ. ಈಗ ನೀವು ಪಾರಲೌಕಿಕ ತಂದೆಯ ಬಳಿ ಬಂದಿದ್ದೀರಿ, ಅವರಿಗೆ ತಿಳಿದಿದೆ - ನಾನು ಮಕ್ಕಳನ್ನು ನನ್ನ ಸಮಾನ ಮಾಡಿಕೊಳ್ಳಬೇಕಾಗಿದೆ. ಹೇಗೆ ಶಿಕ್ಷಕರು ತನ್ನ ಸಮಾನ ಮಾಡಿಕೊಳ್ಳುತ್ತಾರೆ, ನಂಬರ್ವಾರ್ ಆಗುತ್ತಾರೆ. ಈ ತಂದೆಯೂ ಸಹ ಹಾಗೆಯೇ ಹೇಳುತ್ತಾರೆ, ನಂಬರ್ವಾರ್ ಆಗುತ್ತೀರಿ. ನಾನು ಯಾವ ವಿದ್ಯೆಯನ್ನು ಓದಿಸುತ್ತೇನೆಯೋ ಇದು ಅವಿನಾಶಿ ವಿದ್ಯೆಯಾಗಿದೆ. ಯಾರು ಎಷ್ಟು ಓದುತ್ತಾರೋ, ಅದು ವ್ಯರ್ಥವಾಗಿ ಹೋಗುವುದಿಲ್ಲ. ಮುಂದೆ ಹೋದಂತೆ ತಾವೇ ಹೇಳುತ್ತಾರೆ - ನಾವು 4 ವರ್ಷಗಳ ಹಿಂದೆ, 8 ವರ್ಷಗಳ ಹಿಂದೆಯೇ ಯಾರಿಂದಲೋ ಜ್ಞಾನವನ್ನು ಕೇಳಿದ್ದೆವು, ಈಗ ಪುನಃ ಬಂದಿದ್ದೇವೆ. ಮತ್ತೆ ಕೆಲವರಂತೂ ಹಿಡಿದುಕೊಂಡು ಬಿಡುತ್ತಾರೆ. ಜ್ಯೋತಿಯಂತೂ ಇದೆ, ಮತ್ತೆ ಆ ಜ್ಯೋತಿಗೆ ಕೆಲವೊಂದು ಪತಂಗಗಳು ಬಲಿಹಾರಿ ಆಗಿಬಿಡುತ್ತಾರೆ. ಕೆಲವರು ಕೇವಲ ಸುತ್ತಾಡಿ ಹೋಗುತ್ತಾರೆ. ಪ್ರಾರಂಭದಲ್ಲಿ ಜ್ಯೋತಿಗೆ ಅನೇಕ ಪತಂಗಗಳು ಬಲಿಹಾರಿ ಆಗಿಬಿಟ್ಟರು. ನಾಟಕದ ಯೋಜನೆಯ ಅನುಸಾರ ಭಟ್ಟಿ ಆಗಬೇಕಿತ್ತು. ಕಲ್ಪ-ಕಲ್ಪವು ಹೀಗೆಯೇ ಆಗುತ್ತಾ ಬಂದಿದೆ. ಏನೆಲ್ಲವೂ ಕಳೆಯಿತೋ ಕಲ್ಪದ ಹಿಂದೆಯೂ ಹೀಗಾಗಿತ್ತು, ಮುಂದೆಯೂ ಅದೇ ಆಗುವುದು. ಬಾಕಿ ಇದು ಪಕ್ಕಾ ನಿಶ್ಚಯವನ್ನು ಇಟ್ಟುಕೊಳ್ಳಿ - ನಾವಾತ್ಮಗಳು ಆಗಿದ್ದೇವೆ, ತಂದೆಯು ನಮಗೆ ಓದಿಸುತ್ತಾರೆ. ಈ ನಿಶ್ಚಯದಲ್ಲಿ ಪರಿಪಕ್ವವಾಗಿರಿ, ಮರೆಯಬೇಡಿ. ತಂದೆಯನ್ನು ತಂದೆ ಎಂದು ತಿಳಿಯದ ಮನುಷ್ಯರು ಯಾರೂ ಇರುವುದಿಲ್ಲ. ಭಲೆ ವಿಚ್ಛೇದನವನ್ನು ಕೊಟ್ಟ ಮೇಲೂ ಸಹ ನಾವು ನಮ್ಮ ತಂದೆಗೆ ವಿಚ್ಛೇದನವನ್ನು ಕೊಟ್ಟಿದ್ದೇವೆ ಎಂದು ತಿಳಿಯುತ್ತಾರೆ. ಇವರಂತೂ ಬೇಹದ್ದಿನ ತಂದೆಯಾಗಿದ್ದಾರೆ, ಅವರನ್ನು ನಾವು ಎಂದಿಗೂ ಬಿಡುವುದಿಲ್ಲ. ಅಂತ್ಯದವರೆಗೂ ಜೊತೆ ಇರುತ್ತೇವೆ. ಈ ತಂದೆಯಂತೂ ಎಲ್ಲರ ಸದ್ಗತಿ ಮಾಡುವವರು ಆಗಿದ್ದಾರೆ. 5000 ವರ್ಷಗಳ ನಂತರ ಬರುತ್ತಾರೆ. ಇದನ್ನು ತಿಳಿಯುತ್ತೀರಿ - ಸತ್ಯಯುಗದಲ್ಲಿ ಬಹಳ ಕೆಲವರೇ ಮನುಷ್ಯರು ಇರುತ್ತಾರೆ. ಉಳಿದವರೆಲ್ಲರೂ ಶಾಂತಿಧಾಮದಲ್ಲಿ ಇರುತ್ತಾರೆ. ಈ ಜ್ಞಾನವನ್ನೂ ಸಹ ತಂದೆಯೇ ತಿಳಿಸುತ್ತಾರೆ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಅವರು ನೀವು ಆತ್ಮಗಳ ತಂದೆಯಾಗಿದ್ದಾರೆ, ಚೈತನ್ಯ ಬೀಜರೂಪನಾಗಿದ್ದಾರೆ. ಯಾವ ಜ್ಞಾನವನ್ನು ಕೊಡುತ್ತಾರೆ? ಸೃಷ್ಟಿ ರೂಪಿ ವೃಕ್ಷದ ಜ್ಞಾನವನ್ನು ಕೊಡುತ್ತಾರೆ. ರಚಯಿತನು ಅವಶ್ಯವಾಗಿ ರಚನೆಯ ಜ್ಞಾನವನ್ನು ಕೊಡುತ್ತಾರೆ. ಸತ್ಯಯುಗವು ಯಾವಾಗ ಇತ್ತು, ಎಲ್ಲಿ ಹೋಯಿತು ಎಂದು ನಿಮಗೆ ತಿಳಿದಿತ್ತೇನು!

ಈಗ ನೀವು ಸನ್ಮುಖದಲ್ಲಿ ಕುಳಿತಿದ್ದೀರಿ, ತಂದೆಯು ಮಾತನಾಡುತ್ತಿದ್ದಾರೆ. ಇವರು ನಾವೆಲ್ಲಾ ಆತ್ಮಗಳ ತಂದೆಯಾಗಿದ್ದಾರೆ, ನಮಗೆ ಓದಿಸುತ್ತಿದ್ದಾರೆ ಎಂದು ಪಕ್ಕಾ ನಿಶ್ಚಯ ಮಾಡಿಕೊಳ್ಳುತ್ತೀರಿ. ಇವರು ಯಾವುದೇ ದೈಹಿಕ ಶಿಕ್ಷಕರಲ್ಲ, ಈ ಶರೀರದಲ್ಲಿ ಓದಿಸುವಂತಹ ಆ ನಿರಾಕಾರ ಶಿವತಂದೆಯು ವಿರಾಜಮಾನವಾಗಿದ್ದಾರೆ. ಅವರು ನಿರಾಕರನಾಗಿದ್ದರೂ ಸಹ ಜ್ಞಾನಸಾಗರನಾಗಿದ್ದಾರೆ, ಮನುಷ್ಯರಂತೂ ಅವರಿಗೆ ಯಾವುದೇ ಆಕಾರವಿಲ್ಲವೆಂದು ಹೇಳಿಬಿಡುತ್ತಾರೆ. ಮಹಿಮೆಯನ್ನು ಮಾಡುತ್ತಾರೆ - ಜ್ಞಾನಸಾಗರ, ಸುಖದಸಾಗರ... ಆದರೆ ತಿಳಿದುಕೊಳ್ಳುವುದಿಲ್ಲ. ನಾಟಕದನುಸಾರ ಬಹಳ ದೂರ ಹೋಗಿಬಿಟ್ಟಿದ್ದಾರೆ. ತಂದೆಯು ಬಹಳ ಸಮೀಪ ಕರೆತರುತ್ತಾರೆ. ಇದಂತೂ 5000 ವರ್ಷಗಳ ಮಾತಾಗಿದೆ. ನೀವು ತಿಳಿಯುತ್ತೀರಿ - ಪ್ರತಿ 5000 ವರ್ಷಗಳ ನಂತರ ತಂದೆಯು ನಮಗೆ ಓದಿಸಲು ಬರುತ್ತಾರೆ. ಈ ಜ್ಞಾನವು ಮತ್ತ್ಯಾರಿಂದಲೂ ಸಿಗಲು ಸಾಧ್ಯವಿಲ್ಲ. ಈ ಜ್ಞಾನವು ಹೊಸಪ್ರಪಂಚಕ್ಕಾಗಿ ಇದೆ. ಇದನ್ನು ಯಾವುದೇ ಮನುಷ್ಯರು ಕೊಡಲು ಸಾಧ್ಯವಿಲ್ಲ ಏಕೆಂದರೆ ತಮೋಪ್ರಧಾನರಾಗಿದ್ದಾರೆ. ಅವರು ಯಾರನ್ನೂ ಸತೋಪ್ರಧಾನರನ್ನಾಗಿ ಮಾಡಲು ಸಾಧ್ಯವಿಲ್ಲ. ಅವರಂತೂ ತಮೋಪ್ರಧಾನರಾಗುತ್ತಲೇ ಹೋಗುತ್ತಾರೆ.

ತಂದೆಯು ನಮಗೆ ಇವರಲ್ಲಿ ಪ್ರವೇಶ ಮಾಡಿ ತಿಳಿಸುತ್ತಿದ್ದಾರೆ ಎಂದು ನೀವು ಈಗ ತಿಳಿದುಕೊಂಡಿದ್ದೀರಿ ಮತ್ತೆ ಹೇಳುತ್ತಾರೆ - ಹುಡುಗಾಟಿಕೆ ಮಾಡಬೇಡಿ. ಶತ್ರುವೂ ಈಗಲೂ ನಿಮ್ಮ ಬೆನ್ನ ಹಿಂದೆಯೇ ಇದ್ದಾನೆ, ಇವನೇ ನಿಮ್ಮನ್ನು ಬೀಳಿಸಿದ್ದಾನೆ, ಅವನು ಈಗ ನಿಮ್ಮ ಬೆನ್ನು ಬಿಡುವುದಿಲ್ಲ, ಭಲೆ ನೀವು ಸಂಗಮಯುಗದಲ್ಲಿ ಇದ್ದೀರಿ, ಆದರೆ ಅರ್ಧಕಲ್ಪ ನೀವು ರಾವಣನಿಗೆ ವಶರಾಗಿದ್ದೀರಿ, ಆದ್ದರಿಂದ ಅವನು ಬೇಗನೇ ಬಿಡುವುದಿಲ್ಲ. ಎಚ್ಚರಿಕೆಯಿಂದ ಇರುವುದಿಲ್ಲ, ನೆನಪು ಮಾಡುವುದಿಲ್ಲವೆಂದರೆ ಇನ್ನೂ ವಿಕರ್ಮವನ್ನು ಮಾಡಿಸಿಬಿಡುತ್ತಾನೆ. ನಂತರ ಯಾವುದಾದರೂ ಒಂದು ಏಟು ಬೀಳುತ್ತದೆ. ಈಗಂತೂ ನೋಡಿ, ಮನುಷ್ಯರು ತಮಗೆ ತಾವೇ ಪೆಟ್ಟು ಕೊಟ್ಟುಕೊಂಡಿದ್ದಾರೆ. ಏನೇನೋ ಹೇಳಿಬಿಡುತ್ತಾರೆ. ಶಿವಶಂಕರ ಒಂದೇ ಎಂದು ಹೇಳಿಬಿಡುತ್ತಾರೆ, ಅವರ ಕರ್ತವ್ಯವೇನು ಮತ್ತು ಇವರ ಕರ್ತವ್ಯವೇನು? ಎಷ್ಟೊಂದು ಅಂತರವಿದೆ. ಶಿವನು ಶ್ರೇಷ್ಠಾತಿಶ್ರೇಷ್ಠ ಭಗವಂತ ಆಗಿದ್ದಾರೆ, ಶಂಕರ ದೇವತೆ ಆಗಿದ್ದಾರೆ ಅಂದಮೇಲೆ ಶಿವ-ಶಂಕರ ಒಂದೇ ಎಂದು ಹೇಳಿಬಿಡುತ್ತಾರೆ, ಅವರು ಒಂದೇ ಎಂದು ಹೇಗೆ ಹೇಳಿಬಿಡುತ್ತಾರೆ. ಇಬ್ಬರ ಪಾತ್ರವೇ ಬೇರೆ-ಬೇರೆ ಆಗಿದೆ. ಇಲ್ಲಿಯೂ ಅನೇಕರ ಹೆಸರುಗಳು ಹೀಗಿವೆ - ರಾಧೆ-ಕೃಷ್ಣ, ಲಕ್ಷ್ಮೀನಾರಾಯಣ, ಶಿವಶಂಕರ... ತಮಗೆ 2-2 ಹೆಸರುಗಳನ್ನು ಇಟ್ಟುಕೊಂಡಿದ್ದಾರೆ. ಅಂದಾಗ ಮಕ್ಕಳೂ ತಿಳಿಯುತ್ತೀರಿ - ಈ ಸಮಯದವರೆಗೆ ತಂದೆಯು ಏನನ್ನು ತಿಳಿಸಿದ್ದಾರೋ ಅದು ಪುನರಾವರ್ತನೆ ಆಗುವುದು. ಇನ್ನೂ ಕೆಲವು ದಿನಗಳು ಮಾತ್ರವೇ ಇದೆ. ತಂದೆಯು ಕುಳಿತುಬಿಡುತ್ತಾರೆಯೇ! ಮಕ್ಕಳು ನಂಬರ್ವಾರಾಗಿ ಓದಿ ಪೂರ್ಣ ಕರ್ಮಾತೀತರಾಗಿಬಿಡುತ್ತೀರಿ. ನಾಟಕದನುಸಾರ ಮಾಲೆಯು ತಯಾರಾಗಿಬಿಡುತ್ತದೆ. ಯಾವ ಮಾಲೆ? ಎಲ್ಲಾ ಆತ್ಮಗಳ ಮಾಲೆ ಆಗುವುದು, ಆಗ ಹಿಂತಿರುಗಿ ಹೋಗುತ್ತೀರಿ. ನಂಬರ್ವನ್ ಮಾಲೆಯಂತೂ ನಿಮ್ಮದಾಗಿದೆ. ಶಿವತಂದೆಯ ಮಾಲೆಯೂ ಬಹಳ ದೊಡ್ಡದಾಗಿದೆ, ಅಲ್ಲಿಂದ ನಂಬರ್ವಾರ್ ಪಾತ್ರವನ್ನು ಅಭಿನಯಿಸಲು ಬಂದಿದ್ದೀರಿ. ನೀವು ಎಲ್ಲರೂ ಬಾಬಾ, ಬಾಬಾ ಎಂದು ಹೇಳುತ್ತೀರಿ. ಎಲ್ಲರೂ ಒಂದೇ ಮಾಲೆಯ ಮಣಿಗಳಾಗಿದ್ದೀರಿ, ಎಲ್ಲರಿಗೆ ವಿಷ್ಣುವಿನ ಮಾಲೆಯ ಮಣಿಗಳು ಎಂದು ಹೇಳುವುದಿಲ್ಲ. ಇದನ್ನು ತಂದೆಯು ಓದಿಸುತ್ತಾರೆ, ಸೂರ್ಯವಂಶಿಯರೇ ಆಗಬೇಕಾಗಿದೆ. ಸೂರ್ಯವಂಶಿ, ಚಂದ್ರವಂಶಿ ಯಾವುದು ಕಳೆದು ಹೋಯಿತೋ ಅದು ಮತ್ತೆ ಬರುತ್ತದೆ. ಈ ಪದವಿಯೂ ವಿದ್ಯೆಯ ಆಧಾರದಿಂದಲೇ ಸಿಗುತ್ತದೆ. ತಂದೆಯ ವಿದ್ಯೆ ಇಲ್ಲದೆ ಈ ಪದವಿಯು ಸಿಗಲು ಸಾಧ್ಯವಿಲ್ಲ. ಚಿತ್ರವೂ ಇದೆ ಆದರೆ ನಾವು ಈ ರೀತಿ ಆಗಲು ಸಾಧ್ಯವೆಂದು ಯಾರೂ ಸಹ ಇಂತಹ ಚಲನೆಯನ್ನು ನಡೆಯುವುದಿಲ್ಲ. ಸತ್ಯ ನಾರಾಯಣನ ಕಥೆಯನ್ನು ಕೇಳುತ್ತಾರೆ, ಗರುಡ ಪುರಾಣದಲ್ಲಿ ಎಲ್ಲವೂ ಇಂತಹ ಮಾತುಗಳಿವೆ ಅವುಗಳನ್ನು ಮನುಷ್ಯರಿಗೆ ತಿಳಿಸುತ್ತಾರೆ. ಇದು ವಿಷಯ ವೈತರಣಿ ನದಿ, ರೌರೌವ ನರಕವಾಗಿದೆ, ವಿಶೇಷವಾಗಿ ಭಾರತಕ್ಕೆ ಹೇಳುತ್ತಾರೆ ಎಂದು ತಂದೆಯು ತಿಳಿಸುತ್ತಾರೆ. ಬೃಹಸ್ಪತಿ ದಶೆಯು ಭಾರತದ ಮೇಲೆ ಕುಳಿತಿದೆ, ವೃಕ್ಷ ಪತಿಯೂ ಭಾರತವಾಸಿಗಳಿಗೆ ಓದಿಸುತ್ತಾರೆ. ಬೇಹದ್ದಿನ ತಂದೆಯು ಕುಳಿತು ಬೇಹದ್ದಿನ ಮಾತುಗಳನ್ನು ತಿಳಿಸುತ್ತಾರೆ. ದಶೆಯು ಕುಳಿತುಕೊಳ್ಳುತ್ತದೆ ಈಗ ರಾಹುವಿನ ದಶೆಯು ಇದೆ ಆದ್ದರಿಂದಲೇ ದಾನ ಕೊಟ್ಟರೆ ಗ್ರಹಣ ಬಿಡುವುದು ಎಂದು ಹೇಳುತ್ತಾರೆ. ತಂದೆಯೂ ಸಹ ತಿಳಿಸುತ್ತಾರೆ - ಈ ಕಲಿಯುಗದ ಅಂತ್ಯದಲ್ಲಿ ಎಲ್ಲರ ಮೇಲೆ ರಾಹುವಿನ ದಶೆ ಇದೆ, ಈ ವೃಕ್ಷಪತಿಯಾದ ನಾನು ಭಾರತದ ಮೇಲೆ ಬೃಹಸ್ಪತಿಯ ದಶೆಯನ್ನು ಕೂರಿಸಲು ಬಂದಿದ್ದೇನೆ. ಸತ್ಯಯುಗದಲ್ಲಿ ಬೃಹಸ್ಪತಿ ದಶೆಯು ಭಾರತದ ಮೇಲೆ ಇತ್ತು, ಈಗ ರಾಹುವಿನ ದಶೆ ಇದೆ, ಇದು ಬೇಹದ್ದಿನ ಮಾತಾಗಿದೆ. ಇದು ಯಾವುದೇ ಶಾಸ್ತ್ರ ಮೊದಲಾದವುಗಳಲ್ಲ. ಈ ಪತ್ರಿಕೆ ಮೊದಲಾದವುಗಳೂ ಸಹ ಯಾರು ಮೊದಲು ಏನಾದರೂ ತಿಳಿದುಕೊಂಡಿರುತ್ತಾರೋ ಅವರಿಗೇ ಅರ್ಥವಾಗುತ್ತದೆ. ಈ ಪತ್ರಿಕೆಗಳನ್ನು ಓದುವುದರಿಂದ ಅವರು ಇನ್ನೂ ಹೆಚ್ಚಿನದಾಗಿ ತಿಳಿದುಕೊಳ್ಳಲು ಓಡುತ್ತಾರೆ. ಉಳಿದವರಂತೂ ಏನನ್ನೂ ತಿಳಿಯುವುದಿಲ್ಲ. ಯಾರು ಸ್ವಲ್ಪ ಓದಿ ಮತ್ತು ಬಿಡುತ್ತಾರೆಂದರೆ ಅವರಲ್ಲಿ ಮತ್ತೆ ಸ್ವಲ್ಪ ಜ್ಞಾನದ ಎಣ್ಣೆಯನ್ನು ಹಾಕುವುದರಿಂದ ಮತ್ತೆ ಜಾಗೃತರಾಗಿಬಿಡುತ್ತಾರೆ. ಜ್ಞಾನಕ್ಕೆ ಎಣ್ಣೆ ಎಂದು ಹೇಳಲಾಗುತ್ತದೆ. ತಂದೆಯು ನಂದಿಹೋಗಿರುವ ದೀಪದಲ್ಲಿ ಎಣ್ಣೆಯನ್ನು ಹಾಕುತ್ತಿದ್ದಾರೆ. ಹೇಳುತ್ತಾರೆ - ಮಕ್ಕಳೇ ಮಾಯೆಯ ಬಿರುಗಾಳಿಗಳು ಬರುತ್ತವೆ. ದೀಪವನ್ನು ನಂದಿಸಿಬಿಡುತ್ತವೆ. ಜ್ಯೋತಿಗೆ ಕೆಲವೊಂದು ಪತಂಗಗಳು ಸುಟ್ಟುಹೋಗುತ್ತವೆ, ಕೆಲವು ಸುತ್ತಾಡಿ ಹೊರಟುಹೋಗುತ್ತವೆ. ಅದೇ ಮಾತು ಪ್ರತ್ಯಕ್ಷರೂಪದಲ್ಲಿ ನಡೆಯುತ್ತದೆ. ಎಲ್ಲರೂ ನಂಬರ್ವಾರ್ ಪತಂಗಗಳಾಗಿದ್ದೀರಿ. ಮೊದಲು ಒಮ್ಮೇಲೆ ಮನೆ-ಮಠವನ್ನು ಬಿಟ್ಟು ಬಂದರು, ಪತಂಗಗಳಾದರು. ಹೇಗೆ ಒಮ್ಮೇಲೇ ಲಾಟರಿ ಸಿಕ್ಕಿಬಿಟ್ಟಿತು, ಏನೆಲ್ಲವೂ ಕಳೆಯಿತೋ ಮತ್ತೆ ಹಾಗೆಯೇ ಮಾಡುತ್ತೀರಿ. ಭಲೆ ಹೊರಟುಹೋದರು ಆದ್ದರಿಂದ ಅವರು ಸ್ವರ್ಗದಲ್ಲಿ ಬರುವುದಿಲ್ಲವೆಂದು ತಿಳಿಯಬೇಡಿ. ಪತಂಗಗಾಳಾದರು, ಪ್ರಿಯತಮೆಯರಾದರು ಮತ್ತೆ ಮಾಯೆಯು ಸೋಲಿಸಿತು. ಆದ್ದರಿಂದ ಕಡಿಮೆ ಪದವಿಯನ್ನು ಪಡೆಯುತ್ತಾರೆ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಅನ್ಯ ಸತ್ಸಂಗಗಳಲ್ಲಿ ಯಾರ ಬುದ್ಧಿಗಳಲ್ಲಿಯೂ ಇರುವುದಿಲ್ಲ, ನಿಮ್ಮ ಬುದ್ಧಿಯಲ್ಲಿದೆ - ತಂದೆಯಿಂದ ಹೊಸ ಪ್ರಪಂಚಕ್ಕಾಗಿ ನಾವೆಲ್ಲರೂ ನಮ್ಮ ಪುರುಷಾರ್ಥದನುಸಾರ ನಂಬರ್ವಾರ್ ಓದುತ್ತಿದ್ದೇವೆ. ನಾವು ಬೇಹದ್ದಿನ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ. ಆತ್ಮವು ಸ್ಥೂಲ ಕಣ್ಣುಗಳಿಗೆ ಕಾಣಿಸುವುದಿಲ್ಲ, ಅದು ಅವ್ಯಕ್ತವಾಗಿದೆ, ಅದನ್ನು ದಿವ್ಯದೃಷ್ಟಿಯ ಮೂಲಕವೇ ನೋಡಬಹುದಾಗಿದೆ ಎಂದು ಇದೂ ಸಹ ತಿಳಿದಿದೆ. ನಾವು ಆತ್ಮಗಳೂ ಸಹ ಸೂಕ್ಷ್ಮ ಬಿಂದುಗಳಾಗಿದ್ದೇವೆ ಆದರೆ ದೇಹದ ಅಭಿಮಾನವನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯುವುದು ಶ್ರೇಷ್ಠ ವಿದ್ಯಾಭ್ಯಾಸವಾಗಿದೆ. ಆ ವಿದ್ಯಾಭ್ಯಾಸದಲ್ಲಿಯೂ ಯಾವ ಸಬ್ಜೆಕ್ಟ್ ಕಷ್ಟವಾಗಿರುತ್ತದೆಯೋ ಅದರಲ್ಲಿ ಅನುತ್ತೀರ್ಣರಾಗುತ್ತಾರೆ. ಈ ಸಬ್ಜೆಕ್ಟ್ ಬಹಳ ಸಹಜವಾಗಿದೆ. ಆದರೆ ಕೆಲವರಿಗೆ ಇದು ಕಷ್ಟದ ಅನುಭವವಾಗುತ್ತದೆ.

ಈಗ ನೀವು ತಿಳಿಯುತ್ತೀರಿ - ನೀವೂ ಸಹ ನಿರಾಕಾರ ಆತ್ಮಗಳಾಗಿದ್ದೀರಿ, ಆದರೆ ಶರೀರದ ಜೊತೆ ಇದ್ದೀರಿ. ಇವೆಲ್ಲಾ ಮಾತುಗಳನ್ನು ಬೇಹದ್ದಿನ ತಂದೆಯೇ ತಿಳಿಸುತ್ತಾರೆ, ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಅಂದಮೇಲೆ ಏನು ಮಾಡುತ್ತೀರಿ? ಅವರಿಗೆ ಧನ್ಯವಾದಗಳನ್ನು ಹೇಳುತ್ತೀರಿ. ತಂದೆಯು ತಿಳಿಸುತ್ತಾರೆ ಇದು ಅನಾದಿ ನಾಟಕವು ಮಾಡಲ್ಪಟ್ತಿದೆ. ನಾನು ಯಾವುದೇ ಹೊಸ ಮಾತನ್ನು ಹೇಳುವುದಿಲ್ಲ. ನಾಟಕದನುಸಾರ ನಾನು ನಿಮಗೆ ಓದಿಸುತ್ತೇನೆ. ಧನ್ಯವಾದಗಳನ್ನು ಭಕ್ತಿಮಾರ್ಗದಲ್ಲಿ ತಿಳಿಸುತ್ತಾರೆ, ವಿದ್ಯಾರ್ಥಿಗಳು ಚೆನ್ನಾಗಿ ಓದಿದರೆ ನಮ್ಮ ಹೆಸರು ಪ್ರಸಿದ್ಧ ಆಗುವುದು ಎಂದು ಶಿಕ್ಷಕರು ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಹೇಳುತ್ತಾರೆ. ಯಾರು ಚೆನ್ನಾಗಿ ಓದುತ್ತಾರೆ, ಓದಿಸುತ್ತಾರೆಯೋ ಅವರಿಗೆ ಧನ್ಯವಾದಗಳನ್ನು ತಿಳಿಸಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಧನ್ಯವಾದಗಳನ್ನು ಹೇಳುತ್ತಾರೆ. ಮಧುರ ಮಕ್ಕಳೇ ಜೀವಿಸಿಯೇ ಇರಿ (ಅಮರರಾಗಿ) ಇಂತಹ ಸರ್ವೀಸ್ ಮಾಡುತ್ತಿರಿ, ಕಲ್ಪದ ಹಿಂದೆಯು ಮಾಡಿದಿರಿ ಎಂದು ತಂದೆಯು ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸದಾ ನಶೆ ಹಾಗೂ ನಿಶ್ಚಯವಿರಲಿ - ನಮಗೆ ಓದಿಸುವವರು ಯಾವುದೇ ದೈಹಿಕ ಶಿಕ್ಷಕರಲ್ಲ. ಸ್ವಯಂ ಜ್ಞಾನ ಸಾಗರ, ನಿರಾಕಾರ ತಂದೆಯು ಶಿಕ್ಷಕರಾಗಿ ನಮಗೆ ಓದಿಸುತ್ತಿದ್ದಾರೆ. ಈ ವಿದ್ಯೆಯಿಂದಲೇ ನಾವು ಸತೋಪ್ರಧಾನರಾಗಬೇಕಾಗಿದೆ.

2. ಆತ್ಮ ರೂಪಿ ದೀಪದಲ್ಲಿ ಪ್ರತಿನಿತ್ಯವು ಜ್ಞಾನದ ಎಣ್ಣೆಯನ್ನು ಹಾಕಬೇಕಾಗಿದೆ. ಜ್ಞಾನದ ಎಣ್ಣೆಯಿಂದ ಸದಾ ಈ ರೀತಿ ಪ್ರಜ್ವಲಿತರಾಗಿರಬೇಕು ಮಾಯೆಯ ಯಾವುದೇ ಬಿರುಗಾಳಿಗಳು ಅಲುಗಾಡಿಸಲು ಸಾಧ್ಯ ಆಗಬಾರದು. ಪೂರ್ಣ ಪತಂಗಗಳು ಆಗಿ ಜ್ಯೋತಿಗೆ ಬಲಿಹಾರಿ ಆಗಬೇಕು.

ವರದಾನ:
ಸದಾ ಒಬ್ಬ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿರುವಂತಹ ಸಹಯೋಗಿ ಆತ್ಮ ಭವ

ಯಾವ ಮಕ್ಕಳಿಗೆ ತಂದೆಯ ಜೊತೆ ಅತಿಯಾದ ಸ್ನೇಹವಿದೆ, ಆ ಸ್ನೇಹಿ ಆತ್ಮ ಸದಾ ತಂದೆಯ ಶ್ರೇಷ್ಠ ಕಾರ್ಯದಲ್ಲಿ ಸಹಯೋಗಿಯಾಗುತ್ತಾರೆ ಮತ್ತು ಯಾರು ಎಷ್ಟು ಸಹಯೋಗಿ ಅಷ್ಟೇ ಸಹಜಯೋಗಿಗಳಾಗುತ್ತಾರೆ. ತಂದೆಯ ಸ್ನೇಹದಲ್ಲಿ ಸಮಾವೇಶವಾಗಿರುವ ಸಹಯೋಗಿ ಆತ್ಮ ಎಂದೂ ಮಾಯೆಯ ಸಹಯೋಗಿಯಾಗಲು ಸಾಧ್ಯವಿಲ್ಲ. ಅವರ ಪ್ರತಿ ಸಂಕಲ್ಪದಲ್ಲಿ ಬಾಬಾ ಮತ್ತು ಸೇವೆ ಇರುವುದು ಆದ್ದರಿಂದ ನಿದ್ರೆ ನಿದ್ರೆಯಾಗಿರುವುದಿಲ್ಲ, ಹೇಗೆ ಸಂಪಾದನೆ ಮಾಡಿ ಖುಷಿಯಲ್ಲಿ ಮಲಗಿರುತ್ತಾರೆ ಅಷ್ಟು ಪರಿವರ್ತನೆಯಾಗಿಬಿಡುವುದು.

ಸ್ಲೋಗನ್:
ಪ್ರೇಮದ ಕಣ್ಣೀರು ಹೃದಯವೆಂಬ ಡಬ್ಬಿಯಲ್ಲಿ ಮುತ್ತಿನಂತೆ ಆಗಿಬಿಡುವುದು.