19.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಇಡೀ ಪ್ರಪಂಚದ ಹಾಹಾಕಾರವನ್ನು ಅಳಿಸಿ ಜಯಜಯಕಾರವನ್ನಾಗಿ ಮಾಡಲು ತಂದೆಯು ಬಂದಿದ್ದಾರೆ, ಹಳೆಯ ಪ್ರಪಂಚದಲ್ಲಿ ಹಾಹಾಕಾರವಿದೆ, ಹೊಸ ಪ್ರಪಂಚದಲ್ಲಿ ಜಯಜಯಕಾರವಿರುತ್ತದೆ"

ಪ್ರಶ್ನೆ:
ಯಾವ ಈಶ್ವರೀಯ ನಿಯಮದಿಂದ ಬಡವರೇ ತಂದೆಯ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ, ಸಾಹುಕಾರರು ಪಡೆಯಲಾಗುವುದಿಲ್ಲ?

ಉತ್ತರ:
ಈಶ್ವರೀಯ ನಿಯಮವಾಗಿದೆ - ಪೂರ್ಣ ಭಿಕಾರಿಗಳಾಗಿ ಏನೆಲ್ಲಾ ಇದೆಯೋ ಅದನ್ನು ಮರೆಯುತ್ತಾ ಹೋಗಿ. ಬಡ ಮಕ್ಕಳೇ ಸಹಜವಾಗಿ ಮರೆಯುತ್ತಾರೆ, ಸಾಹುಕಾರರು ಯಾರು ತಮ್ಮನ್ನು ಸ್ವರ್ಗದಲ್ಲಿದ್ದೇವೆಂದು ತಿಳಿಯುತ್ತಾರೆ, ಅವರ ಬುದ್ದಿಯಿಂದ ಏನೂ ಮರೆಯುವುದಿಲ್ಲ. ಆದ್ದರಿಂದ ಯಾರಿಗೆ ಹಣ-ಅಧಿಕಾರ, ಮಿತ್ರ-ಸಂಬಂಧಿಗಳ ನೆನಪಿರುತ್ತದೆಯೋ ಅವರು ಸತ್ಯಯೋಗಿಗಳಾಗಲು ಸಾಧ್ಯವೇ ಇಲ್ಲ. ಅವರಿಗೆ ಸ್ವರ್ಗದಲ್ಲಿ ಶ್ರೇಷ್ಠ ಪದವಿಯೂ ಸಿಗಲು ಸಾಧ್ಯವಿಲ್ಲ.

ಓಂ ಶಾಂತಿ.
ಮಧುರಾತಿ ಮಧುರ ನಿಶ್ಚಯ ಬುದ್ಧಿ ಮಕ್ಕಳು ಬಹಳ ಚೆನ್ನಾಗಿ ತಿಳಿದಿದ್ದಾರೆ, ತಂದೆಯು ಇಡೀ ಪ್ರಪಂಚದ ಜಗಳವನ್ನು ದೂರ ಮಾಡಲು ಬಂದಿದ್ದಾರೆ ಎನ್ನುವುದು ನಿಮಗೆ ಪಕ್ಕಾ ನಿಶ್ಚಯವಿದೆ. ಈ ತನುವಿನಲ್ಲಿ (ಬ್ರಹ್ಮಾರವರಲ್ಲಿ) ತಂದೆಯು ಬಂದಿದ್ದಾರೆ, ಅವರ ಹೆಸರು ಶಿವ ಆಗಿದೆ ಎಂದು ಯಾರು ಚತುರ ಬುದ್ಧಿವಂತ ಮಕ್ಕಳಿದ್ದಾರೆ ಅವರಿಗೆ ಗೊತ್ತಿದೆ. ಏಕೆ ಬಂದಿದ್ದಾರೆ? ಹಾಹಾಕಾರವನ್ನು ನಾಶ ಮಾಡಿ ಜಯಜಯಕಾರವನ್ನು ಮಾಡಲು ಬಂದಿದ್ದಾರೆ. ಮೃತ್ಯುಲೋಕದಲ್ಲಿ ಎಷ್ಟೊಂದು ಜಗಳ ಮುಂತಾದವುಗಳಿವೆ. ಎಲ್ಲರೂ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಹೋಗಬೇಕಾಗಿದೆ. ಅಮರಲೋಕದಲ್ಲಿ ಈ ಜಗಳ-ಕಲಹದ ಮಾತೇ ಇರುವುದಿಲ್ಲ. ಇಲ್ಲಿ ಎಷ್ಟೊಂದು ಹಾಹಾಕಾರವಿದೆ, ಎಷ್ಟೊಂದು ನ್ಯಾಯಾಲಯ, ನ್ಯಾಯಾಧೀಶರಿದ್ದಾರೆ, ಹೊಡೆದಾಟವು ಇದೆ. ವಿದೇಶಗಳಲ್ಲಿಯೂ ನೋಡಿ, ಹಾಹಾಕಾರವಿದೆ. ಇಡೀ ಪ್ರಪಂಚದಲ್ಲಿ ಬಹಳ ಏರುಪೇರಿದೆ ಇದಕ್ಕೆ ಹಳೆಯ ತಮೋಪ್ರಧಾನ ಪ್ರಪಂಚವೆಂದು ಹೇಳಲಾಗುತ್ತದೆ. ಕೊಳಕೇ ಕೊಳಕಾಗಿದೆ, ಕಾಡೆ-ಕಾಡಾಗಿದೆ. ಬೇಹದ್ದಿನ ತಂದೆಯು ಇದೆಲ್ಲವನ್ನೂ ದೂರ ಮಾಡಲು ಬಂದಿದ್ದಾರೆ. ಈಗ ಮಕ್ಕಳು ಬಹಳ ಚತುರ, ಬುದ್ಧಿವಂತರಾಗಬೇಕಾಗಿದೆ. ಒಂದುವೇಳೆ ಮಕ್ಕಳಲ್ಲಿಯೂ ಸಹ ಜಗಳ-ಕಲಹವಾಗುತ್ತಿದ್ದರೆ, ತಂದೆಗೆ ಹೇಗೆ ಸಹಯೋಗಿಗಳಾಗುತ್ತೀರಿ. ತಂದೆಗೆ ಬಹಳ ಚತುರ, ಬುದ್ಧಿವಂತ, ಸಹಯೋಗಿ ಮಕ್ಕಳು ಬೇಕು. ಅವರಲ್ಲಿ ಯಾವುದೇ ಏರುಪೇರುಗಳು ಇರಬಾರದು. ಇದೂ ಸಹ ಮಕ್ಕಳಿಗೆ ತಿಳಿದಿದೆ, ಏಕೆಂದರೆ ಇದು ಹಳೆಯ ಪ್ರಪಂಚವಾಗಿದೆ, ಅನೇಕ ಧರ್ಮಗಳಿವೆ, ತಮೋಪ್ರಧಾನ, ವಿಕಾರಿ ಪ್ರಪಂಚವಾಗಿದೆ. ಇಡೀ ಪ್ರಪಂಚವೇ ಪತಿತವಾಗಿದೆ. ಈ ಪತಿತ, ಹಳೆಯ ಪ್ರಪಂಚದಲ್ಲಿ ಜಗಳವೇ ಜಗಳವಿದೆ. ಇದೆಲ್ಲವನ್ನು ದೂರ ಮಾಡಲು ಹಾಗೂ ಜಯ-ಜಯಕಾರವನ್ನಾಗಿ ಮಾಡಲು ತಂದೆಯು ಬರುತ್ತಾರೆ. ಈ ಪ್ರಪಂಚದಲ್ಲಿ ಎಷ್ಟೊಂದು ದುಃಖ, ಅಶಾಂತಿ ಇದೆ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಂಡಿದ್ದೀರಿ. ಆದ್ದರಿಂದ ವಿಶ್ವದಲ್ಲಿ ಶಾಂತಿಯ ಸ್ಥಾಪನೆ ಆಗಲಿ ಎಂದು ಬಯಸುತ್ತಾರೆ. ಈಗ ಇಡೀ ವಿಶ್ವದಲ್ಲಿ ಪೂರ್ಣ ಶಾಂತಿಯನ್ನು ಮನುಷ್ಯರು ಸ್ಥಾಪನೆ ಮಾಡಲು ಹೇಗೆ ಸಾಧ್ಯ. ಬೇಹದ್ದಿನ ತಂದೆಯನ್ನು ಕಲ್ಲು, ಮುಳ್ಳಿನಲ್ಲಿ ಹಾಕಿಬಿಟ್ಟಿದ್ದಾರೆ, ಇದೂ ಸಹ ಆಟವಾಗಿದೆ. ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಈಗ ಎದ್ದು ನಿಲ್ಲಿ, ತಂದೆಗೆ ಸಹಯೋಗಿಗಳಾಗಿ. ತಂದೆಯಿಂದ ತಮ್ಮ ರಾಜ್ಯಭಾಗ್ಯವನ್ನು ಪಡೆಯಬೇಕಾಗಿದೆ. ಕಡಿಮೆ ಏನಿಲ್ಲ, ಅಪಾರ ಸುಖವಿದೆ. ಮಧುರ ಮಕ್ಕಳೇ, ನಾಟಕದನುಸಾರ ಬೇಹದ್ದಿನ ತಂದೆಯೇ ನಿಮ್ಮನ್ನು ಪದಮಾಪದಮ ಭಾಗ್ಯಶಾಲಿಗಳನ್ನಾಗಿ ಮಾಡಲು ಬಂದಿದ್ದಾರೆ ಎಂದು ತಂದೆಯು ತಿಳಿಸುತ್ತಾರೆ. ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರು ರಾಜ್ಯ ಮಾಡುತ್ತಿದ್ದರು, ಭಾರತವು ಸ್ವರ್ಗವಾಗಿತ್ತು. ಸ್ವರ್ಗವನ್ನು ವಂಡರ್ ಆಫ್ ವರ್ಲ್ಡ್ (ವಿಶ್ವದ ಅದ್ಭುತ ಎಂದು ಹೇಳಲಾಗುತ್ತದೆ). ತ್ರೇತಾಯುಗಕ್ಕೂ ಈ ರೀತಿ ಹೇಳುವುದಿಲ್ಲ. ಮಕ್ಕಳು ಇಂತಹ ಸ್ವರ್ಗದಲ್ಲಿ ಬರುವಂತಹ ಪುರುಷಾರ್ಥ ಮಾಡಬೇಕಾಗಿದೆ. ಮೊದಲು-ಮೊದಲು ನಾವು ಸ್ವರ್ಗದಲ್ಲಿ ಬರಬೇಕು, ಲಕ್ಷ್ಮೀ-ನಾರಾಯಣರಾಗಬೇಕು ಎಂದು ಮಕ್ಕಳು ಬಯಸುತ್ತೀರಿ, ಈಗ ಈ ಹಳೆಯ ಪ್ರಪಂಚದಲ್ಲಿ ಬಹಳ ಹಾಹಾಕಾರ ಆಗಲಿದೆ. ರಕ್ತದ ನದಿಗಳು ಹರಿಯುತ್ತವೆ. ರಕ್ತದ ನದಿಗಳ ನಂತರ ತುಪ್ಪದ ನದಿಗಳು ಹರಿಯುತ್ತವೆ. ಅದಕ್ಕೆ ಕ್ಷೀರಸಾಗರ ಎಂದು ಹೇಳುತ್ತಾರೆ. ಇಲ್ಲಿಯೂ ಸಹ ದೊಡ್ಡ ಕೊಳವನ್ನು ನಿರ್ಮಿಸುತ್ತಾರೆ, ಅದಕ್ಕೆ ಒಂದು ದಿನ ನಿಗಧಿ ಮಾಡಿಕೊಂಡು ಬಂದು ಅದರಲ್ಲಿ ಹಾಲನ್ನು ಹಾಕುತ್ತಾರೆ, ಅದರಲ್ಲಿ ಸ್ನಾನ ಮಾಡುತ್ತಾರೆ. ಶಿವಲಿಂಗದ ಮೇಲೂ ಹಾಲನ್ನು ಎರೆಯುತ್ತಾರೆ. ಸತ್ಯಯುಗದ ಮಹಿಮೆಯು ಇದೆ - ಅಲ್ಲಿ ಹಾಲು, ತುಪ್ಪದ ನದಿಗಳಿವೆ ಆದರೆ, ಇಂತಹ ಮಾತಿಲ್ಲ (ಅಂದಾಗ ಅಲ್ಲಿ ಎಲ್ಲವೂ ಸಂಪನ್ನವಾಗಿರುತ್ತದೆ ಎಂದರ್ಥ). ಪ್ರತಿ 5000 ವರ್ಷಗಳ ನಂತರ ನೀವು ವಿಶ್ವದ ಮಾಲೀಕರಾಗುತ್ತೀರಿ. ಈ ಸಮಯದಲ್ಲಿ ನೀವು ಗುಲಾಮರಾಗಿದ್ದೀರಿ ಮತ್ತೆ ನೀವು ರಾಜರಾಗುತ್ತೀರಿ. ಇಡೀ ಪ್ರಕೃತಿ ನಿಮ್ಮ ದಾಸಿ ಆಗಿಬಿಡುತ್ತದೆ. ಅಲ್ಲಿ ಎಂದೂ ನಿಯಮಕ್ಕೆ ವಿರುದ್ಧವಾಗಿ ಮಳೆ ಬೀಳುವುದಿಲ್ಲ, ನದಿಗಳು ಉಕ್ಕುವುದಿಲ್ಲ. ಯಾವುದೇ ಉಪದ್ರವಗಳಾಗುವುದಿಲ್ಲ. ಇಲ್ಲಿ ನೋಡಿ ಎಷ್ಟೊಂದು ಉಪದ್ರವಗಳು ಆಗುತ್ತವೆ. ಅಲ್ಲಿ ಪಕ್ಕಾ ವೈಷ್ಣವರಿರುತ್ತಾರೆ, ವಿಕಾರಿ ವೈಷ್ಣವರಲ್ಲ. ಯಾರಾದರೂ ಸಸ್ಯಾಹಾರಿ ಆದರೆ ಅವರನ್ನು ವೈಷ್ಣವರೆಂದು ಹೇಳುತ್ತಾರೆ ಆದರೆ ಇಲ್ಲ. ವಿಕಾರದಿಂದ ಪರಸ್ಪರ ಬಹಳ ದುಃಖ ಕೊಡುತ್ತಾರೆ, ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ. ಹಳ್ಳಿಯ ಬಾಲಕ....ಎಂಬ ಗಾಯನವೂ ಸಹ ಇದೆ. ಕೃಷ್ಣನಂತೂ ಹಳ್ಳಿಯ ಬಾಲಕನಾಗಲು ಸಾಧ್ಯವಿಲ್ಲ. ಕೃಷ್ಣನು ವೈಕುಂಠದ ಮಾಲೀಕನಾಗುತ್ತಾನೆ, 84 ಜನ್ಮಗಳನ್ನು ಪಡೆಯುತ್ತಾನೆ.

ನಾವು ಭಕ್ತಿಯಲ್ಲಿ ಎಷ್ಟು ಮೋಸ ಹೋದೆವು, ಹಣವನ್ನು ವ್ಯರ್ಥ ಮಾಡಿದೆವು ಎಂದು ಇದನ್ನೂ ಸಹ ಈಗ ತಿಳಿದುಕೊಂಡಿದ್ದೀರಿ. ನಿಮಗೆ ಎಷ್ಟೊಂದು ಧನವನ್ನು ಕೊಟ್ಟೆನು, ರಾಜ್ಯಭಾಗ್ಯವನ್ನೂ ಕೊಟ್ಟಿದ್ದೆನು ಅದೆಲ್ಲವೂ ಎಲ್ಲಿ ಹೋಯಿತು? ಎಂದು ತಂದೆಯು ಕೇಳುತ್ತಾರೆ. ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಿದೆನು ಮತ್ತೆ ನೀವೇನು ಮಾಡಿದಿರಿ? ತಂದೆಯಂತೂ ನಾಟಕವನ್ನು ತಿಳಿದಿದ್ದಾರೆ. ಹೊಸ ಪ್ರಪಂಚವೇ ಹಳೆಯ ಪ್ರಪಂಚವಾಗಿದೆ. ಹಳೆಯ ಪ್ರಪಂಚ ಹೊಸ ಪ್ರಪಂಚವಾಗಿದೆ. ಇದು ಚಕ್ರವಾಗಿದೆ, ಏನೆಲ್ಲವೂ ಕಳೆದುಹೋಗಿದೆಯೋ ಅದು ಮತ್ತೆ ಪುನರಾವರ್ತನೆ ಆಗುತ್ತದೆ. ಇನ್ನೂ ಸ್ವಲ್ಪವೇ ಸಮಯವಿದೆ, ಪುರುಷಾರ್ಥ ಮಾಡಿ ಭವಿಷ್ಯಕ್ಕಾಗಿ ಜಮಾ ಮಾಡಿಕೊಳ್ಳಿ ಎಂದು ತಂದೆಯು ತಿಳಿಸುತ್ತಾರೆ. ಹಳೆಯ ಪ್ರಪಂಚದ್ದೆಲ್ಲಾ ಮಣ್ಣುಪಾಲಾಗಲಿದೆ. ಸಾಹುಕಾರರು ಈ ಜ್ಞಾನವನ್ನು ಪಡೆಯುವುದಿಲ್ಲ, ತಂದೆಯು ಬಡವರ ಬಂಧು ಆಗಿದ್ದಾರೆ. ಇಲ್ಲಿನ ಬಡವರೇ ಅಲ್ಲಿನ ಸಾಹುಕಾರರಾಗುತ್ತಾರೆ. ಸಾಹುಕಾರರು ಅಲ್ಲಿ ಬಡವರಾಗುತ್ತಾರೆ. ಅನೇಕರು ಪದಮಾಪತಿಗಳಿದ್ದಾರೆ, ಅವರು ಬರುತ್ತಾರೆ ಆದರೆ ಅವರು ಬಡವರಾಗುತ್ತಾರೆ. ಅವರು ತಮ್ಮನ್ನು ಸ್ವರ್ಗದಲ್ಲಿ ಇದ್ದೇವೆ ಎಂದು ತಿಳಿದಿದ್ದಾರೆ. ಅದು ಬುದ್ಧಿಯಿಂದ ಹೋಗುವುದೇ ಇಲ್ಲ. ಇಲ್ಲಂತೂ ಎಲ್ಲವನ್ನು ಮರೆತು ಹೋಗಿ ಖಾಲಿ ಭಿಕಾರಿಗಳಾಗಿ ಎಂದು ತಂದೆಯು ತಿಳಿಸುತ್ತಾರೆ. ಇಂದಿನ ದಿನಗಳಲ್ಲಿ ಅಂತೂ ಕಿಲೋಗ್ರಾಂ, ಕಿಲೋಮೀಟರ್, ಇತ್ಯಾದಿ ಏನೇನೋ ಬಂದಿದೆ. ಯಾವ ರಾಜನು ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೋ ಅವರು ತಮ್ಮ ಭಾಷೆಯನ್ನು ನಡೆಸುತ್ತಾರೆ. ವಿದೇಶದ್ದನ್ನು ನಕಲು ಮಾಡುತ್ತಾರೆ. ತಮ್ಮ ಬುದ್ಧಿಯಂತೂ ಇಲ್ಲ ಎಲ್ಲವೂ ತಮೋಪ್ರಧಾನವಾಗಿದೆ. ಅಮೆರಿಕಾ ಮೊದಲಾದ ದೇಶಗಳಲ್ಲಿ ವಿನಾಶದ ಸಾಮಾಗ್ರಿಗಳಿವೆ, ಎಷ್ಟೊಂದು ಹಣ ತೊಡಗಿಸುತ್ತಾರೆ. ವಿಮಾನದಿಂದ ಬಾಂಬುಗಳನ್ನು ಹಾಕುತ್ತಾರೆ, ಇದಕ್ಕೆ ಬೆಂಕಿ ಬೀಳಲಿದೆ, ಮಕ್ಕಳಿಗೂ ಗೊತ್ತಿದೆ - ತಂದೆಯು ವಿನಾಶ ಮತ್ತು ಸ್ಥಾಪನೆಯ ಕಾರ್ಯವನ್ನು ಮಾಡಿಸುವುದಕ್ಕಾಗಿಯೇ ಬರುತ್ತಾರೆ. ನಿಮ್ಮಲ್ಲಿಯೂ ತಿಳಿಸಿಕೊಡುವವರೂ ನಂಬರ್ವಾರ್ ಇದ್ದಾರೆ. ಎಲ್ಲರೂ ಒಂದೇ ರೀತಿ ನಿಶ್ಚಯಬುದ್ಧಿಯವರಿಲ್ಲ. ಹೇಗೆ ಬ್ರಹ್ಮಾತಂದೆ ಮಾಡಿದ್ದಾರೋ ಅವರನ್ನು ಅನುಸರಿಸಬೇಕು. ಹಳೆಯ ಪ್ರಪಂಚದಲ್ಲಿ ಈ ಬಿಡಿಗಾಸನ್ನು ಏನು ಮಾಡುತ್ತೀರಿ? ಇತ್ತೀಚಿಗಂತೂ ಕಾಗದ ನೋಟುಗಳು ಹೊರ ಬಂದಿವೆ, ಸತ್ಯಯುಗದಲ್ಲಿ ಚಿನ್ನದ ನಾಣ್ಯಗಳು ಇರುತ್ತವೆ, ಚಿನ್ನದ ಮಹಲ್ಗಳು ಆಗುತ್ತವೆ ಆದರೆ ನಾಣ್ಯಗಳಿಗೆ ಅಲ್ಲಿ ಏನು ಬೆಲೆಯಿದೆ. ಹೇಗೆ ಎಲ್ಲವೂ ಅಲ್ಲಿ ಉಚಿತವಾಗಿರುತ್ತದೆ, ಸತೋಪ್ರಧಾನ ಧರಣಿ ಅಲ್ಲವೇ! ಈಗಂತೂ ಹಳೆಯದಾಗಿಬಿಟ್ಟಿದೆ, ಸತ್ಯಯುಗವೂ ಸತೋಪ್ರಧಾನ ಹೊಸ ಪ್ರಪಂಚವಾಗಿದೆ, ಹೊಸ ಭೂಮಿ ಇರುತ್ತದೆ. ನೀವು ಸೂಕ್ಷ್ಮವತನಕ್ಕೆ ಹೋಗುತ್ತೀರಿ ಎಂದರೆ ಶೂಭಿರಸ ಇತ್ಯಾದಿಯನ್ನು ಕುಡಿಯುತ್ತೀರಿ ಆದರೆ, ಅಲ್ಲಿ ಯಾವುದೇ ಹಣ್ಣಿನ ವೃಕ್ಷಗಳಂತೂ ಇಲ್ಲ, ಮೂಲವತನದಲ್ಲಿಯೂ ಇಲ್ಲ. ಯಾವಾಗ ನೀವು ವೈಕುಂಠದಲ್ಲಿ ಹೋಗುತ್ತೀರಿ, ಅಲ್ಲಿ ನಿಮಗೆ ಎಲ್ಲವೂ ಸಿಗುತ್ತವೆ. ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಿ, ಸೂಕ್ಷ್ಮವತನದಲ್ಲಿ ವೃಕ್ಷಗಳು ಇರುವುದಿಲ್ಲ. ವೃಕ್ಷಗಳು ಧರಣಿಯ ಮೇಲೆ ಇರುತ್ತದೆ ಹೊರತು ಆಕಾಶದಲ್ಲಿ ಅಲ್ಲ. ಭಲೆ ಬ್ರಹ್ಮ ಮಹಾತತ್ವವೆಂದು ಹೆಸರಿದೆ ಆದರೆ ಅದು ಆಕಾಶವಾಗಿದೆ. ಹೇಗೆ ಈ ನಕ್ಷತ್ರಗಳು ಆಕಾಶದಲ್ಲಿ ಇದೆಯೋ ಹಾಗೆಯೇ ನೀವು ಬಹಳ ಚಿಕ್ಕ-ಚಿಕ್ಕ ಆತ್ಮಗಳು ಅಲ್ಲಿ ಇರುತ್ತೀರಿ. ನಕ್ಷತ್ರಗಳು ನೋಡಲು ದೊಡ್ಡ ರೂಪದಲ್ಲಿ ಕಂಡುಬರುತ್ತದೆ. ಬ್ರಹ್ಮತತ್ವದಲ್ಲಿ ಯಾವುದೇ ದೊಡ್ಡರೂಪದ ಆತ್ಮಗಳು ಇರುವುದಿಲ್ಲ. ಇದನ್ನು ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ವಿಚಾರಸಾಗರ ಮಂಥನ ಮಾಡಬೇಕಾಗಿದೆ. ಅಂದಾಗ ಆತ್ಮಗಳು ಮೇಲಿರುತ್ತಾರೆ, ಆತ್ಮವು ಚಿಕ್ಕ ಬಿಂದು ಆಗಿದೆ. ಈ ಎಲ್ಲಾ ಮಾತುಗಳನ್ನು ನೀವು ಧಾರಣೆ ಮಾಡಬೇಕಾಗಿದೆ, ಆಗಲೇ ಅನ್ಯರಿಗೆ ಧಾರಣೆ ಮಾಡಿಸಲು ಸಾಧ್ಯ. ಶಿಕ್ಷಕರು ಸ್ವಯಂ ಎಲ್ಲವನ್ನು ತಿಳಿದುಕೊಂಡಿರುತ್ತಾರೆ ಆದ್ದರಿಂದಲೇ ಅನ್ಯರಿಗೆ ಓದಿಸುತ್ತಾರೆ. ಇಲ್ಲದಿದ್ದರೆ ಅವರು ಎಂತಹ ಶಿಕ್ಷಕರು! ಆದರೆ ಇಲ್ಲಿ ಶಿಕ್ಷಕರು ನಂಬರ್ವಾರ್ ಇದ್ದಾರೆ, ನೀವು ಮಕ್ಕಳು ವೈಕುಂಠವನ್ನೂ ಸಹ ತಿಳಿದುಕೊಳ್ಳಬಲ್ಲಿರಿ. ಹಾಗಿದ್ದರೆ ನೀವು ವೈಕುಂಠವನ್ನು ನೋಡಿಲ್ಲ ಎಂದಲ್ಲ. ಅನೇಕ ಮಕ್ಕಳು ಸಾಕ್ಷಾತ್ಕಾರದಲ್ಲಿ ನೋಡಿದ್ದೀರಿ, ಅಲ್ಲಿ ಹೇಗೆ ಸ್ವಯಂವರ ಆಗುತ್ತದೆ, ಯಾವ ಭಾಷೆ ಇರುತ್ತದೆ, ಎಲ್ಲವನ್ನು ನೋಡಿದ್ದೀರಿ. ಅಂತ್ಯದಲ್ಲಿಯೂ ನೀವು ಸಾಕ್ಷಾತ್ಕಾರವನ್ನು ನೋಡುತ್ತೀರಿ. ಆದರೆ ಯಾರು ಯೋಗಯುಕ್ತರಾಗಿರುತ್ತಾರೆಯೋ ಅವರೇ ನೋಡಲು ಸಾಧ್ಯ. ಉಳಿದಂತೆ ಯಾರಿಗೆ ತಮ್ಮ ಮಿತ್ರ ಸಂಬಂಧಿ, ಹಣ-ಅಧಿಕಾರವು ನೆನಪಿಗೆ ಬರುತ್ತಿರುತ್ತದೆಯೋ ಅವರು ಏನು ನೋಡುತ್ತಾರೆ! ಸತ್ಯ ಯೋಗಿಗಳೇ ಅಂತ್ಯದವರೆಗೆ ಇರುತ್ತಾರೆ ಅವರನ್ನು ತಂದೆಯು ನೋಡಿ ಖುಷಿ ಆಗುತ್ತಾರೆ. ಹೂಗಳದ್ದೇ ತೋಟವಾಗುತ್ತದೆ, ಅನೇಕರು 10-15 ವರ್ಷಗಳಿದ್ದು ಮತ್ತೆ ಹೊರಟುಹೋಗುತ್ತಾರೆ, ಅಂತಹವರಿಗೆ ಎಕ್ಕದ ಹೂಗಳು ಎಂದು ಹೇಳಲಾಗುತ್ತದೆ. ಬಹಳ ಒಳ್ಳೊಳ್ಳೆಯ ಮಕ್ಕಳು ಮಮ್ಮಾ-ಬಾಬಾರವರಿಗೂ ಸಹ ಸಂದೇಶವನ್ನು ತೆಗೆದುಕೊಂಡು ಬರುತ್ತಿದ್ದರು, ಡ್ರಿಲ್ ಮಾಡಿಸುತ್ತಿದ್ದರು, ಅವರೂ ಸಹ ಇಂದು ಇಲ್ಲ. ಇದನ್ನು ಮಕ್ಕಳು ತಿಳಿದುಕೊಂಡಿದ್ದೀರಿ ಮತ್ತು ಬಾಪ್ದಾದಾರವರಿಗೂ ಸಹ ಗೊತ್ತಿದೆ - ಮಾಯೆಯು ಬಹಳ ಶಕ್ತಿಶಾಲಿ ಆಗಿದೆ. ಇದು ಮಾಯೆಯ ಜೊತೆ ಗುಪ್ತವಾದ ಯುದ್ಧವಾಗಿದೆ. ಗುಪ್ತ ಬಿರುಗಾಳಿ ಆಗಿದೆ. ಮಾಯೆಯು ನಿಮಗೆ ಬಹಳ ತೊಂದರೆ ಕೊಡುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಈ ಸೋಲು-ಗೆಲುವಿನ ನಾಟಕವು ಮಾಡಲ್ಪಟ್ಟಿದೆ. ನಿಮ್ಮದು ಆಯುಧಗಳಿಂದ ಮಾಡುವ ಯುದ್ಧವಲ್ಲ. ಈ ಭಾರತದ ಪ್ರಾಚೀನ ರಾಜಯೋಗವು ಪ್ರಸಿದ್ಧವಾಗಿದೆ. ಈ ಯೋಗಬಲದಿಂದಲೇ ನೀವು ವಿಶ್ವದ ಮಾಲೀಕರಾಗುತ್ತೀರಿ. ಬಾಹುಬಲದಿಂದ ಯಾರೂ ವಿಶ್ವದ ರಾಜ್ಯಭಾಗ್ಯವನ್ನು ಪಡೆಯಲು ಸಾಧ್ಯವಿಲ್ಲ, ಆಟವು ಬಹಳ ವಿಚಿತ್ರವಾಗಿದೆ. ಕಥೆಯು ಇದೆ - ಎರಡು ಬೆಕ್ಕುಗಳು ಬೆಣ್ಣೆಗಾಗಿ ಹೊಡೆದಾಡಿದವು...... ಸೆಕೆಂಡಿನಲ್ಲಿ ವಿಶ್ವದ ರಾಜ್ಯಭಾಗ್ಯ ಎಂದು ಹೇಳಲಾಗುತ್ತದೆ. ಅದನ್ನು ಮಕ್ಕಳು ಸಾಕ್ಷಾತ್ಕಾರದಲ್ಲಿಯೇ ನೋಡಿದ್ದೀರಿ. ಕೃಷ್ಣನ ಬಾಯಿಯಲ್ಲಿ ಬೆಣ್ಣೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಕೃಷ್ಣನ ಬಾಯಿಯಲ್ಲಿ ಹೊಸ ಪ್ರಪಂಚವನ್ನು ನೋಡುತ್ತೀರಿ. ಯೋಗಬಲದಿಂದ ನೀವು ವಿಶ್ವದ ರಾಜ್ಯರೂಪಿ ಬೆಣ್ಣೆಯನ್ನು ಪಡೆಯುತ್ತೀರಿ. ರಾಜ್ಯಕ್ಕಾಗಿ ಎಷ್ಟೊಂದು ಯುದ್ಧವಾಗುತ್ತದೆ. ಅನೇಕರು ಯುದ್ಧದಿಂದ ಸಮಾಪ್ತಿ ಆಗುತ್ತಾರೆ, ಈ ಹಳೆಯ ಪ್ರಪಂಚದ ಲೆಕ್ಕಾಚಾರವು ಸಮಾಪ್ತಿ ಆಗಲಿದೆ. ಈ ಪ್ರಪಂಚದ ಯಾವ ಒಂದು ವಸ್ತುವೂ ಸಹ ಉಳಿಯುವುದಿಲ್ಲ. ತಂದೆಯ ಶ್ರೀಮತವಾಗಿದೆ - ಮಕ್ಕಳೇ ಹಿಯರ್ ನೋ ಈವಿಲ್, ಸೀ ನೋ ಈವಿಲ್........ ಅವರು ಕೋತಿಗಳ ಚಿತ್ರವನ್ನು ಮಾಡುತ್ತಾರೆ. ಇತ್ತೀಚಿಗೆ ಮನುಷ್ಯರದೂ ಮಾಡುತ್ತಾರೆ. ಮೊದಲು ಚೀನಾದ ಕಡೆಯಿಂದ ಆನೆಯ ದಂತದ ವಸ್ತುಗಳು ಬರುತ್ತಿತ್ತು. ಗಾಜಿನ ಬಳೆಗಳನ್ನು ಧರಿಸುತ್ತಿದ್ದರು. ಇಲ್ಲಂತೂ ಅಭರಣಗಳನ್ನು ಧರಿಸಲು ಕಿವಿ-ಮೂಗು ಚುಚ್ಚುತ್ತಾರೆ. ಸತ್ಯಯುಗದಲ್ಲಿ ಮೂಗು, ಕಿವಿಗಳನ್ನು ಚುಚ್ಚುವ ಅವಶ್ಯಕತೆ ಇರುವುದಿಲ್ಲ. ಇಲ್ಲಂತೂ ಮಾಯೆಯು ಹೀಗಿದೆ, ಅದು ಎಲ್ಲರ ಕಿವಿ ಮೂಗನ್ನು ಕತ್ತರಿಸುತ್ತದೆ. ಈಗ ನೀವು ಮಕ್ಕಳು ಸ್ವಚ್ಛ ಆಗುತ್ತೀರಿ. ಅಲ್ಲಿ ಸ್ವಾಭಾವಿಕ ಸೌಂದರ್ಯವಿರುತ್ತದೆ. ಯಾವುದೇ ವಸ್ತುಗಳನ್ನು ಹಾಕಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಇಲ್ಲಂತೂ ಶರೀರವೇ ತಮೋಪ್ರಧಾನ ತತ್ವಗಳಿಂದ ಆಗುವ ಕಾರಣ ರೋಗಗಳು ಬರುತ್ತವೆ. ಅಲ್ಲಿ ಈ ಮಾತುಗಳು ಇರುವುದಿಲ್ಲ. ಈಗ ನೀವು ಆತ್ಮಗಳಿಗೆ ಬಹಳ ಖುಷಿ ಆಗುತ್ತದೆ. ಬೇಹದ್ದಿನ ತಂದೆಯು ಓದಿಸಿ ನರನಿಂದ ನಾರಾಯಣ, ಅಮರಪುರಿಯ ಮಾಲೀಕರನ್ನಾಗಿ ಮಾಡುತ್ತಾರೆ. ಆದ್ದರಿಂದಲೇ ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಗೋಪ-ಗೋಪಿಕೆಯರನ್ನು ಕೇಳಿ..... ಎಂಬ ಗಾಯನವಿದೆ. ಭಕ್ತರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ಖುಷಿ ಆಗಿರುವ ಮತ್ತು ಈ ಮಾತುಗಳನ್ನು ಸ್ಮರಣೆ ಮಾಡುವಂತಹ ಮಕ್ಕಳು ಕೆಲವರೇ ಇದ್ದಾರೆ. ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರವಾಗುತ್ತದೆ. ಯಾವ ದ್ರೌಪದಿಯ ಗಾಯನವಿದೆಯೋ ಅದು ಈಗ ಪ್ರತ್ಯಕ್ಷದಲ್ಲಿ ಆಗುತ್ತಿದೆ. ದ್ರೌಪದಿಯೂ ಏಕೆ ಕರೆದಳು? ಇದನ್ನು ಮನುಷ್ಯರು ತಿಳಿದುಕೊಂಡಿಲ್ಲ. ತಾವೆಲ್ಲರೂ ದ್ರೌಪದಿಯರಾಗಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಸ್ತ್ರೀಯರು ಸದಾ ಸ್ತ್ರೀಯರಾಗಿ0iÉುೀ ಜನ್ಮ ಪಡೆಯುತ್ತಾರೆ ಎಂದಲ್ಲ. 2 ಬಾರಿ ಸ್ತ್ರೀಯರಾಗಬಹುದು, ಹೆಚ್ಚಿಗೆ ಇಲ್ಲ. ಮಾತೆಯರು, ಓ ತಂದೆ ರಕ್ಷಣೆ ಮಾಡಿ, ಈ ದುಶ್ಶಾಸನ ವಿಕಾರಕ್ಕಾಗಿ ತೊಂದರೆ ಕೊಡುತ್ತಾರೆ ಎಂದು ಕೂಗುತ್ತಾರೆ. ಇದಕ್ಕೆ ವೇಶ್ಯಾಲಯವೆಂದು ಕರೆಯಲಾಗುತ್ತದೆ. ಇದು ರಾವಣನಿಂದ ಸ್ಥಾಪನೆ ಆಗಿದೆ. ಸ್ವರ್ಗಕ್ಕೆ ಶಿವಾಲಯವೆಂದು ಹೇಳಲಾಗುತ್ತದೆ, ಶಿವಾಲಯವು ಶಿವ ತಂದೆಯಿಂದ ಸ್ಥಾಪನೆ ಆಗಿದೆ. ತಂದೆಯು ನಿಮಗೆ ಜ್ಞಾನವನ್ನು ಕೊಡುತ್ತಾರೆ, ತಂದೆಗೆ ಜ್ಞಾನಪೂರ್ಣರು ಎಂದು ಹೇಳಲಾಗುತ್ತದೆ. ಜ್ಞಾನಪೂರ್ಣರು ಎಂದರೆ ಎಲ್ಲರ ಮನಸ್ಸನ್ನು ಅರಿತಿರುವವರೆಂದಲ್ಲ, ಇದರಿಂದ ಪ್ರಯೋಜನವಾದರೂ ಏನು! ಈ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ನನ್ನ ಹೊರತು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ ಎಂದು ತಂದೆಯು ತಿಳಿಸುತ್ತಾರೆ. ನಾನೇ ಕುಳಿತು ಓದಿಸುತ್ತೇನೆ. ಜ್ಞಾನಸಾಗರ ತಂದೆ ಒಬ್ಬರೇ ಆಗಿದ್ದಾರೆ. ಅಲ್ಲಿ ಭಕ್ತಿಯ ಪ್ರಾಲಬ್ದವಿರುತ್ತದೆ, ಸತ್ಯಯುಗ-ತ್ರೇತಾದಲ್ಲಿ ಭಕ್ತಿ ಇರುವುದಿಲ್ಲ. ವಿದ್ಯೆಯಿಂದಲೇ ರಾಜಧಾನಿಯು ಸ್ಥಾಪನೆ ಆಗುತ್ತಿದೆ. ರಾಷ್ಟ್ರಪತಿ ಮೊದಲಾದವರಿಗೆ ಎಷ್ಟು ಜನ ಮಂತ್ರಿಗಳಿರುತ್ತಾರೆ, ಸಲಹೆ ನೀಡಲು ಮಂತ್ರಿಗಳನ್ನು ಇಟ್ಟುಕೊಳ್ಳುತ್ತಾರೆ. ಸತ್ಯಯುಗದಲ್ಲಿ ಮಂತ್ರಿಗಳನ್ನು ಇಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಈಗ ತಂದೆಯು ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರು ನೋಡಿ, ಎಷ್ಟೊಂದು ಬುದ್ಧಿವಂತರಾಗಿದ್ದರು, ಬೇಹದ್ದಿನ ರಾಜ್ಯಭಾಗ್ಯವು ಬೇಹದ್ದಿನ ತಂದೆಯಿಂದ ಸಿಗುತ್ತದೆ. ತಂದೆಯ ಶಿವಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಶಿವತಂದೆಯು ಭಾರತದಲ್ಲಿ ಬಂದು ವಿಶ್ವದ ಮಾಲೀಕರನ್ನಾಗಿ ಮಾಡಿ ಹೋಗಿದ್ದಾರೆ. ಇದು ಲಕ್ಷಾಂತರ ವರ್ಷಗಳ ಮಾತಲ್ಲ. ಇದು ನಿನ್ನೆಯ ಮಾತಾಗಿದೆ. ಒಳ್ಳೆಯದು, ಹೆಚ್ಚಿಗೆ ಇನ್ನೇನು ತಿಳಿಸಲಿ. ತಂದೆಯು ತಿಳಿಸುತ್ತಾರೆ - ಮನ್ಮನಾಭವ. ವಾಸ್ತವದಲ್ಲಿ ಇದು ಸನ್ನೆಯ ವಿದ್ಯೆಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಗೆ ಪೂರ್ಣ ಸಹಯೋಗಿಗಳಾಗಲು ಚತುರರು, ಬುದ್ಧಿವಂತರಾಗಿರಬೇಕು. ಒಳಗೆ ಯಾವುದೇ ಗಡಿಬಿಡಿ(ಏರುಪೇರು) ಇರಬಾರದು.

2. ಸ್ಥಾಪನೆ ಮತ್ತು ವಿನಾಶದ ಕರ್ತವ್ಯವನ್ನು ನೋಡುತ್ತಾ ಪೂರ್ಣ ನಿಶ್ಚಯಬುದ್ಧಿಯವರಾಗಿ ತಂದೆಯನ್ನು ಅನುಸರಿಸಬೇಕು. ಬಿಡಿಗಾಸಿನ ಹಳೆಯ ಪ್ರಪಂಚದಿಂದ ಬುದ್ಧಿಯನ್ನು ತೆಗೆದು ಪೂರ್ಣ ಭಿಕಾರಿಗಳಾಗಬೇಕು. ಮಿತ್ರ-ಸಂಬಂಧಿ, ಹಣ-ಅಧಿಕಾರ ಮೊದಲಾದುದೆಲ್ಲವನ್ನೂ ಮರೆಯಬೇಕಾಗಿದೆ.

ವರದಾನ:
ಸಂಘಟನೆಯಲ್ಲಿರುತ್ತಾ, ಎಲ್ಲರ ಸ್ನೇಹಿಗಳಾಗುತ್ತಾ ಬುದ್ಧಿಯ ಆಶ್ರಯ ಒಬ್ಬ ತಂದೆಯನ್ನು ಮಾಡಿಕೊಳ್ಳುವಂತಹ ಕರ್ಮಯೋಗಿ ಭವ

ಕೆಲವು ಮಕ್ಕಳು ಸಂಗಟನೆಯಲ್ಲಿ ಸ್ನೇಹಿಗಳಾಗುವ ಬದಲು ನ್ಯಾರಾ ಆಗಿಬಿಡುತ್ತಾರೆ. ಎಲ್ಲಿ ಸಿಕ್ಕಿಹಾಕಿಕೊಂಡುಬಿಡುವೆನೊ ಎಂದು ಭಯ ಬೀಳುತ್ತಾರೆ, ಇದಕ್ಕೆ ಬದಲು ದೂರ ಉಳಿಯುವುದೇ ಒಳ್ಳೆಯದು ಎಂದು, ಆದರೆ ಇಲ್ಲಾ, 21 ಜನ್ಮ ಪರಿವಾರದಲ್ಲಿರ ಬೇಕು, ಒಂದುವೇಳೆ ಭಯಬಿದ್ದು ದೂರ ಸರಿದರೆ ಆಗ ಇದೂ ಸಹ ಕರ್ಮ-ಸನ್ಯಾಸಿಯ ಸಂಸ್ಕಾರವಾಯಿತು. ಕರ್ಮಯೋಗಿಗಳಾಗ ಬೇಕು, ಕರ್ಮ ಸನ್ಯಾಸಿ ಅಲ್ಲಾ. ಸಂಗಟನೆಯಲ್ಲಿರಿ, ಎಲ್ಲರ ಸ್ನೇಹಿಗಳಾಗಿ ಆದರೆ ಬುದ್ದಿಯ ಆಶ್ರಯ ಒಬ್ಬ ತಂದೆಯಾಗಿರ ಬೇಕು, ಇನ್ನೊಬ್ಬರು ಇರಬಾರದು. ಬುದ್ದಿಗೆ ಬೇರೆಯಾವುದೆ ಆತ್ಮದ ಜೊತೆ, ಗುಣ ಅಥವಾ ಯಾವುದೇ ಆಕರ್ಷಣೆ ಮಾಡಬಾರದು ಆಗ ಹೇಳಲಾಗುವುದು ಕರ್ಮಯೋಗಿ ಪವಿತ್ರ ಆತ್ಮ.

ಸ್ಲೋಗನ್:
ಬಾಪ್ದಾದಾರವರ ರೈಟ್ ಹ್ಯಾಂಡ್ ಆಗಿ, ಲೆಫ್ಟ್ ಹ್ಯಾಂಡ್ ಅಲ್ಲ.