20.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನೀವು ಯೋಗ ಬಲದಿಂದ ಈ ಉಪ್ಪು ನೀರಿನ ಕಾಲುವೆಯನ್ನು ದಾಟಿ ಮನೆಗೆ ಹೋಗಬೇಕಾಗಿದೆ, ಆದ್ದರಿಂದ ಎಲ್ಲಿಗೆ ಹೋಗಬೇಕಾಗಿದೆಯೋ ಅದನ್ನು ನೆನಪು ಮಾಡಿ, ನಾವು ಈಗ ಬಿಕ್ಷುಕರಿಂದ ಸಾಹುಕಾರರಾಗುತ್ತೇವೆ ಎಂದು ಇದೇ ಖುಷಿಯಲ್ಲಿ ಇರಿ"

ಪ್ರಶ್ನೆ:
ದೈವೀಗುಣಗಳ ಸಬ್ಜೆಕ್ಟ್ ನಲ್ಲಿ ಯಾವ ಮಕ್ಕಳ ಗಮನವಿರುತ್ತದೆಯೋ ಅವರ ಲಕ್ಷಣಗಳು ಏನಾಗಿದೆ?

ಉತ್ತರ:
ನಾವು ಎಂತಹ ಕರ್ಮವನ್ನು ಮಾಡುತ್ತೇವೆಯೋ ನಮ್ಮನ್ನು ನೋಡಿ ಅನ್ಯರು ಮಾಡುತ್ತಾರೆ ಎಂದು ಅವರ ಬುದ್ಧಿಯಲ್ಲಿ ಇರುತ್ತದೆ. ಎಂದೂ ಯಾರಿಗೂ ತೊಂದರೆ ಕೊಡುವುದಿಲ್ಲ. ಅವರ ಮುಖದಿಂದ ಎಂದೂ ಉಲ್ಟಾ-ಸುಲ್ಟಾ ಮಾತುಗಳು ಹೊರ ಬರುವುದಿಲ್ಲ. ಮನಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡುವುದಿಲ್ಲ. ತಂದೆಯ ಸಮಾನ ಸುಖವನ್ನು ಕೊಡುವ ಲಕ್ಷ್ಯ ಇದ್ದಾಗ ದೈವೀಗುಣಗಳ ಸಬ್ಜೆಕ್ಟ್ ನಲ್ಲಿ ಗಮನವಿದೆ ಎಂದು ಹೇಳಲಾಗುತ್ತದೆ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ, ನೆನಪಿನ ಯಾತ್ರೆಯನ್ನೂ ಕಲಿಸುತ್ತಾರೆ. ನೆನಪಿನ ಯಾತ್ರೆಯ ಅರ್ಥವನ್ನೂ ಮಕ್ಕಳು ತಿಳಿದುಕೊಂಡಿರುತ್ತೀರಿ, ಭಕ್ತಿಮಾರ್ಗದಲ್ಲಿಯೂ ಸಹ ಎಲ್ಲರೂ ಶಿವತಂದೆಯನ್ನು, ದೇವತೆಗಳನ್ನು ನೆನಪು ಮಾಡುತ್ತಾರೆ ಅಂದರೆ, ನೆನಪಿನಿಂದ ವಿಕರ್ಮ ವಿನಾಶವಾಗುತ್ತದೆ ಎಂದು ತಿಳಿದಿರುವುದಿಲ್ಲ. ತಂದೆಯು ಪತಿತಪಾವನರಾಗಿದ್ದಾರೆ, ಅವರೇ ಪಾವನರನ್ನಾಗಿ ಮಾಡುವ ಯುಕ್ತಿಯನ್ನು ತಿಳಿಸುತ್ತಾರೆ ಎಂದು ಮಕ್ಕಳಿಗೆ ಗೊತ್ತಿದೆ. ತಂದೆಯು ಪತಿತ-ಪಾವನನಾಗಿದ್ದಾರೆ ಅವರೇ ಪಾವನರನ್ನಾಗಿ ಮಾಡುವ ಯುಕ್ತಿಯನ್ನು ತಿಳಿಸುತ್ತಾರೆ. ಆತ್ಮವೇ ಪಾವನವಾಗುತ್ತದೆ, ಆತ್ಮವೇ ಪತಿತವಾಗುತ್ತದೆ. ಮಕ್ಕಳು ತಿಳಿದುಕೊಂಡಿದ್ದೀರಿ, ಭಾರತದಲ್ಲಿಯೇ ತಂದೆಯು ಬಂದು ನೆನಪಿನ ಯಾತ್ರೆಯನ್ನು ಕಲಿಸುತ್ತಾರೆ ಮತ್ತೆಲ್ಲಿಯೂ ಕಲಿಸಲು ಸಾಧ್ಯವಿಲ್ಲ. ಮಕ್ಕಳು ಸ್ಥೂಲ ಯಾತ್ರೆಗಳನ್ನು ಬಹಳ ಮಾಡಿದ್ದೀರಿ. ಈ ಯಾತ್ರೆಯನ್ನು ಕೇವಲ ಒಬ್ಬ ತಂದೆಯೇ ಕಲಿಸುತ್ತಾರೆ. ಈಗ ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ, ಮಾಯೆಯು ಎಲ್ಲರ ಬುದ್ಧಿಗೆ ಬೀಗವನ್ನು ಹಾಕಿಬಿಟ್ಟಿದೆ. ಈಗ ತಂದೆಯ ಮೂಲಕ ನಿಮಗೆ ಅರಿವು ಆಗಿದೆ - ನಾವು ಎಷ್ಟು ಬುದ್ಧಿವಂತರು, ಧನವಂತರು ಮತ್ತು ಪವಿತ್ರರಾಗಿದ್ದೆವು, ನಾವು ಇಡೀ ವಿಶ್ವದ ಮಾಲೀಕರಾಗಿದ್ದೆವು. ಈಗ ಪುನಃ ನಾವೇ ಆಗುತ್ತಿದ್ದೇವೆ. ತಂದೆ ಎಷ್ಟು ಬೇಹದ್ದಿನ ರಾಜ್ಯಭಾಗ್ಯವನ್ನು ಕೊಡುತ್ತಾರೆ, ಲೌಕಿಕ ತಂದೆಯು ಭಲೇ ಲಕ್ಷ-ಕೋಟಿಗಳಷ್ಟು ಕೊಡಬಹುದು ಆದರೆ ಇಲ್ಲಂತೂ ಮಧುರ ಬೇಹದ್ದಿನ ತಂದೆಯು ಬೇಹದ್ದಿನ ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದಾರೆ. ಆದ್ದರಿಂದ ನೀವಿಲ್ಲಿ ಓದಲು ಬಂದಿದ್ದೀರಿ, ಯಾರ ಬಳಿ? ಬೇಹದ್ದಿನ ತಂದೆಯ ಬಳಿ. ಬಾಬಾ ಶಬ್ಧವು ಮಮ್ಮಾನಿಗಿಂತಲೂ ಮಧುರವಾಗಿದೆ. ಭಲೇ ಮಮ್ಮಾ ಪಾಲನೆಯನ್ನು ಮಾಡುತ್ತಾರೆ ಆದರೆ, ತಂದೆಯಂತೂ ತಂದೆಯಾಗಿದ್ದಾರೆ, ಅವರಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ನೀವು ಸದಾ ಸುಖಿ ಮತ್ತು ಸದಾ ಸೌಭಾಗ್ಯವತಿಯಾಗಿದ್ದೀರಿ. ತಂದೆಯು ನಿಮ್ಮನ್ನು ಪುನಃ ಎಂತಹವರನ್ನಾಗಿ ಮಾಡುತ್ತಾರೆ! ಇನ್ನು ಯಾವುದೇ ಹೊಸ ಮಾತಿಲ್ಲ. ಗಾಯನವು ಇದೆ - ಬೆಳ್ಳಿಗ್ಗೆ ಸಾಹುಕಾರರಾಗಿದ್ದರೆ ರಾತ್ರಿ ಬಿಕ್ಷುಕರಾಗಿದ್ದರು. ನೀವೂ ಸಹ ಬೆಳಿಗ್ಗೆ ಸಾಹುಕಾರರು ಮತ್ತು ಬೇಹದ್ದಿನ ರಾತ್ರಿಯಲ್ಲಿ ಬಿಕ್ಷುಕರಾಗಿ ಬಿಡುತ್ತೀರಿ. ತಂದೆಯು ಪ್ರತಿ ನಿತ್ಯವು ಸ್ಮೃತಿಯನ್ನು ತರಿಸುತ್ತಾರೆ- ಮಕ್ಕಳೇ, ನೆನ್ನೆ ನೀವು ವಿಶ್ವದ ಮಾಲೀಕರಾಗಿದ್ದೀರಿ ಇಂದು ನೀವು ಗುಲಾಮರಾಗಿಬಿಟ್ಟಿದ್ದೀರಿ. ಈಗ ಮತ್ತೆ ಮುಂಜಾನೆಯು ಬರುತ್ತದೆ ಎಂದರೆ ನೀವು ಸಾಹುಕಾರರಾಗಿ ಬಿಡುತ್ತೀರಿ. ಎಷ್ಟು ಸಹಜ ಮಾತಾಗಿದೆ. ನೀವು ಮಕ್ಕಳಿಗೆ ಸಾಹುಕಾರರಾಗುವ ಬಹಳಾ ಖುಷಿಯಿರಬೇಕು - ಬ್ರಾಹ್ಮಣರ ದಿನ ಮತ್ತು ಬ್ರಾಹ್ಮಣರ ರಾತ್ರಿಯಾಗಿದೆ. ಈಗ ದಿನದಲ್ಲಿ ಸಾಹುಕಾರರಾಗುತ್ತಿದ್ದೀರಿ ಮತ್ತು ಅವಶ್ಯವಾಗಿ ಆಗೆಯೇ ಆಗುತ್ತೀರಿ. ಆದರೆ ನಂಬರ್ವಾರ್ ಪುರುಷಾರ್ಥದ ಅನುಸಾರ ತಂದೆಯು ತಿಳಿಸುತ್ತಾರೆ - ಇದು ಉಪ್ಪು ನೀರಿನ ಕಾಲವಾಗಿದೆ. ಇದನ್ನು ನೀವೇ ಯೋಗಬಲದಿಂದ ಪಾರುಮಾಡುತ್ತಿದ್ದೀರಿ. ಎಲ್ಲಿಗೆ ಹೋಗಬೇಕಾಗಿದೆಯೋ ಅದು ನೆನಪಿರಬೇಕು. ನಾವೀಗ ಮನೆಗೆ ಹೋಗಬೇಕಾಗಿದೆ. ನಮ್ಮನ್ನು ಕರೆದುಕೊಂಡು ಹೋಗಲು ಸ್ವಯಂ ತಂದೆಯೇ ಬಂದಿದ್ದಾರೆ. ಬಹಳ ಪ್ರೀತಿಯಿಂದ ತಿಳಿಸುತ್ತಾರೆ - ನೀವೇ ಪಾವನರಾಗಿದ್ದಿರಿ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗಿದ್ದೀರಿ ಮತ್ತೆ ಪಾವನರಾಗಬೇಕಾಗಿದೆ. ಪಾವನರಾಗಲು ಮತ್ತೆ ಯಾವುದೇ ಉಪಾಯವಿಲ್ಲ. ನಿಮಗೆ ಗೊತ್ತಿದೆ, ಪತಿತ-ಪಾವನ ಬಂದಿದ್ದಾರೆ ಮತ್ತು ನೀವು ಅವರ ಮತದಂತೆ ನಡೆದು ಪಾವನರಾಗುತ್ತೀರಿ. ನೀವು ಇಂತಹ ಪದವಿ ಪಡೆಯುತ್ತೀರೆಂದು ನೀವು ಮಕ್ಕಳಿಗೆ ಬಹಳ ಖುಷಿಯಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು 21 ಜನ್ಮಗಳಿಗೆ ಸದಾ ಸುಖಿಯಾಗಿರುತ್ತೀರಿ. ತಂದೆಯು ಸುಖಧಾಮದ, ರಾವಣ ದುಃಖಧಾಮದ ಆಸ್ತಿಯನ್ನು ಕೊಡುತ್ತಾರೆ. ನೀವು ಮಕ್ಕಳಿಗೆ ಗೊತ್ತಿದೆ - ರಾವಣ ನಿಮ್ಮ ಹಳೆಯ ಶತ್ರುವಾಗಿದ್ದಾನೆ, ರಾವಣ ನಿಮ್ಮನ್ನು ಪಂಚವಿಕಾರ ರೂಪಿ ಪಂಜರದಲ್ಲಿ ಹಾಕಿದ್ದಾನೆ, ತಂದೆಯು ಬಂದು ಬಿಡಿಸುತ್ತಾರೆ. ಯಾರು ಎಷ್ಟು ತಂದೆಯನ್ನು ನೆನಪು ಮಾಡುತ್ತಾರೆ ಅಷ್ಟೇ ಅನ್ಯರಿಗೂ ಪರಿಚಯ ಕೊಡುತ್ತಾರೆ. ನೆನಪು ಮಾಡದೆ ಇರುವವರು ದೇಹಾಭಿಮಾನದಲ್ಲಿರುತ್ತಾರೆ, ಅವರು ತಂದೆಯನ್ನು ನೆನಪು ಮಾಡುವುದಿಲ್ಲ. ತಂದೆಯ ಪರಿಚಯವನ್ನು ಕೊಡುವುದಕ್ಕೆ ಸಾಧ್ಯವಿಲ್ಲ. ನಾವು ಆತ್ಮಗಳು ಸಹೋದರ-ಸಹೋದರಿಯಾಗಿದ್ದೇವೆ. ಮನೆಯಿಂದ ಭಿನ್ನ-ಭಿನ್ನ ಪಾತ್ರವನ್ನಭಿನಯಿಸುವುದಕ್ಕೆ ಬಂದಿದ್ದೀರಿ. ಪೂರ್ಣ ಪಾತ್ರವು ಅಭಿನಯವಾಗುತ್ತದೆ ಎಂಬುದನ್ನು ನೋಡುತ್ತಿದ್ದೀರಿ ಎಂಬುದು ನಿಮ್ಮ ಬುದ್ಧಿಯಲ್ಲಿದೆ. ಯಾರಿಗೆ ಪಕ್ಕಾ ನಿಶ್ಚಿಯವಿರುತ್ತದೆಯೋ ಅವರು ಬಂದು ಇಲ್ಲಿ ರಿಫ್ರೆಷ್ ಆಗುತ್ತಾರೆ. ಇದು ಯಾವುದೇ ಶಿಕ್ಷಕರ ಜೊತೆಯಲ್ಲಿಯೇ ಇರುವಂತಹ ವಿಧ್ಯಾಭ್ಯಾಸವಲ್ಲ. ನೀವು ಮನೆಯಲ್ಲಿದ್ದರು ಸಹ ವಿಧ್ಯಾಭ್ಯಾಸವನ್ನು ಮಾಡಬಹುದು. 7 ದಿನಗಳು ಚೆನ್ನಾಗಿ ತಿಳಿದುಕೊಳ್ಳಿ. ನಂತರ ಬ್ರಾಹ್ಮಣಿಯರು ಕೆಲವರು ಒಂದು ತಿಂಗಳಿನಲ್ಲಿ, ಕೆಲವರು 6 ತಿಂಗಳಿನಲ್ಲಿ, ಕೆಲವರು 12 ತಿಂಗಳ ನಂತರ ಕರೆತರುತ್ತಾರೆ. ತಂದೆಯು ತಿಳಿಸುತ್ತಾರೆ - ನಿಶ್ಚಯವಾಯಿತೆಂದರೆ ಓಡಿ ಬರುತ್ತಾರೆ.

ರಕ್ಷಾಬಂಧನವನ್ನು ಕಟ್ಟಿ ಪ್ರತಿಜ್ಞೆ ಮಾಡಿಸಬೇಕಾಗಿದೆ - ನಾವು ವಿಕಾರಗಳಲ್ಲಿ ಹೋಗುವುದಿಲ್ಲ, ನಾವು ಶಿವತಂದೆಯೊಂದಿಗೆ ಪ್ರತಿಜ್ಞೆ ಮಾಡುತ್ತೇವೆ. ಶಿವತಂದೆಯು ತಿಳಿಸುತ್ತಾರೆ ಮಕ್ಕಳೇ, ನೀವು ಅವಶ್ಯವಾಗಿ ನಿರ್ವಿಕಾರಿಗಳು ಆಗಬೇಕು, ಒಂದುವೇಳೆ ಒಂದು ವಿಕಾರದಲ್ಲಿ ಹೋಗುತ್ತೀರಿ ಎಂದರೆ ಮಾಡಿಕೊಂಡಿರುವ ಸಂಪಾದನೆ ಎಲ್ಲವೂ ಕಳೆದು ಹೋಗುತ್ತದೆ. ಒಂದಕ್ಕೆ ನೂರರಷ್ಟು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. 63 ಜನ್ಮಗಳು ನೀವು ಪೆಟ್ಟನ್ನು ಅನುಭವಿಸಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ - ನೀವು ಪವಿತ್ರರಾಗಿ ನನ್ನನ್ನು ನೆನಪು ಮಾಡಿ ಆಗ ನಿಮ್ಮ ಪಾಪಗಳು ಭಸ್ಮವಾಗಿಬಿಡುತ್ತದೆ. ಆತ್ಮವು ಸಹೋದರ-ಸಹೋದರನಾಗಿದೆ. ಯಾರ ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ಒಂದುವೇಳೆ ಯಾರಾದರು ನಿಯಮಿತವಾಗಿ ಓದುವುದಿಲ್ಲವೆಂದರೆ ಅವರನ್ನು ಬೇಗನೇ ಕರೆದುಕೊಂಡು ಹೋಗಬಾರದು. ಭಲೇ ತಂದೆಯು ತಿಳಿಸುತ್ತಾರೆ - ಒಂದು ದಿನದಲ್ಲಿ ಬಾಣವು ನಾಟುತ್ತದೆ. ಆದರೆ ತಿಳುವಳಿಕೆಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ನೀವು ಬ್ರಾಹ್ಮಣರು ಎಲ್ಲರಿಗಿಂತ ಉತ್ತಮರಾಗಿದ್ದೀರಿ. ಇದು ನಿಮ್ಮ ಶ್ರೇಷ್ಠ ಕುಲವಾಗಿದೆ. ಅಲ್ಲಿ ಯಾವುದೇ ಸತ್ಸಂಗಗಳಿರುವುದಿಲ್ಲ. ಸತ್ಸಂಗಗಳು ಭಕ್ತಿ ಮಾರ್ಗದಲ್ಲಿರುತ್ತದೆ. ನಿಮಗೆ ಗೊತ್ತಿದೆ- ಸತ್ಯ ಸಂಗವು ಮೇಲೆತ್ತುತ್ತದೆ. ಯಾವಾಗ ಸತ್ಯಯುಗದ ಸ್ಥಾಪನೆಯಾಗಬೇಕಾಗಿದೆಯೋ, ಆಗಲೇ ಸತ್ಯ ತಂದೆಯ ಸಂಗವು ಸಿಗುವುದು. ಇದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ ಏಕೆಂದರೆ, ಬುದ್ಧಿಯ ಬೀಗವು ಹಾಕಲ್ಪಟ್ಟಿದೆ. ಈಗ ಸತ್ಯಯುಗದಲ್ಲಿ ಹೋಗಬೇಕಾಗಿದೆ. ಸತ್ಯದ ಸಂಗವು ಪುರುಷೋತ್ತಮ ಸಂಗಮಯುಗದಲ್ಲಿಯೇ ಸಿಗುತ್ತದೆ. ಆ ಗುರುಗಳಂತೂ ಸಂಗಮಯುಗಿಗಳಲ್ಲ. ಬಾಬಾರವರು ಬರುತ್ತಾರೆಂದರೆ ಮಗು-ಮಗು ಎಂದು ಕರೆಯುತ್ತಾರೆ. ಆ ಗುರುಗಳಿಗೆ ನೀವು ತಂದೆ ಎಂದು ಹೇಳುತ್ತೀರಾ! ಬುದ್ಧಿಗೆ ಸಂಪೂರ್ಣ ಗಾಡ್ರೆಜ್ ಬೀಗವೂ ಹಾಕಲ್ಪಟ್ಟಿದೆ. ತಂದೆಯು ಬಂದು ಬೀಗವನ್ನು ತೆಗೆಯುತ್ತಾರೆ. ನೋಡಿ, ತಂದೆಯು ಎಷ್ಟು ಯುಕ್ತಿಯನ್ನು ರಚಿಸುತ್ತಾರೆ - ಆದ್ದರಿಂದ ಮನುಷ್ಯರು ಬಂದು ವಜ್ರಸಮಾನ ಜೀವನವನ್ನು ರೂಪಿಸಿಕೊಳ್ಳಲು ಮಾಸ ಪತ್ರಿಕೆಗಳನ್ನು ಮುದ್ರಿಸುತ್ತಿರುತ್ತಾರೆ ಅದರಿಂದ ಅನೇಕರ ಕಲ್ಯಾಣವಾಗುತ್ತದೆ. ಅನೇಕರ ಆಶೀರ್ವಾದವು ಸಿಗುತ್ತದೆ. ಪ್ರಜೆಗಳನ್ನು ಮಾಡುವ ಪುರುಷಾರ್ಥ ಮಾಡಬೇಕು. ತಮ್ಮನ್ನು ಬಂಧನದಿಂದ ಬಿಡಿಸಿಕೊಳ್ಳಬೇಕು. ಶರೀರ ನಿರ್ವಾಹಣೆಗಾಗಿ ಅವಶ್ಯವಾಗಿ ಸೇವೆ ಮಾಡಬೇಕು. ಈಶ್ವರೀಯ ಸೇವೆಯು ಕೇವಲ ಬೆಳಗ್ಗೆ ಮತ್ತು ಸಂಜೆ ಇರುತ್ತದೆ. ಆ ಸಮಯದಲ್ಲಿ ಎಲ್ಲರಿಗೆ ಬಿಡುವಿರುತ್ತದೆ. ಯಾರ ಜೊತೆಯಲ್ಲಿಯೂ ನೀವು ಲೌಕಿಕ ಸೇವೆ ಮಾಡುತ್ತೀರೋ ಅವರಿಗೂ ಸಹ ಪರಿಚಯ ನೀಡುತ್ತಾ ಇರಿ - ನಿಮಗೆ ಇಬ್ಬರು ತಂದೆಯರಿದ್ದಾರೆ. ಲೌಕಿಕ ತಂದೆಯು ಎಲ್ಲರಿಗೆ ಬೇರೆ-ಬೇರೆಯಾಗಿರುತ್ತಾರೆ. ಪಾರಲೌಕಿಕ ತಂದೆಯು ಎಲ್ಲರಿಗೆ ಒಬ್ಬರೇ ಆಗಿದ್ದಾರೆ, ಇವರು ಪರಮಾತ್ಮನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನದು ಪಾತ್ರವಿದೆ, ಈಗ ನೀವು ಮಕ್ಕಳು ನನ್ನ ಪರಿಚಯವನ್ನು ಅರಿತುಕೊಂಡಿದ್ದೀರಿ, ಆತ್ಮವನ್ನು ಅರಿತಿದ್ದೀರಿ. ಆತ್ಮಕ್ಕೆ ಭೃಕುಟಿಯ ಮಧ್ಯೆ ಹೊಳೆಯುವ ನಕ್ಷತ್ರವೆಂದು ಹೇಳುತ್ತಾರೆ, ಅದು ಅಕಾಲಸಿಂಹಾಸನವು ಆಗಿದೆ. ಆತ್ಮನನ್ನೆಂದೂ ಕಾಲವು ಕಬಳಿಸುವುದಿಲ್ಲ, ಅದು ಕೇವಲ ಮೈಲಿಗೆ ಮತ್ತು ಸ್ವಚ್ಚವಾಗುತ್ತದೆ. ಆತ್ಮದ ಸಿಂಹಾಸನವು ಶೋಭಿಸುವುದು ಸಹ ಭೃಕುಟಿಯ ಮಧ್ಯದಲ್ಲಿಯೇ. ತಿಲಕದ ಗುರುತನ್ನು ಸಹ ಇಲ್ಲಿಯೇ ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು, ತಮಗೆ ತಾವೇ ರಾಜ್ಯ ತಿಲಕವನ್ನು ಕೊಡುವಷ್ಟು ಯೋಗ್ಯರನ್ನಾಗಿ ಮಾಡಿಕೊಳ್ಳಿ. ನಾನು ಎಲ್ಲರಿಗೆ ರಾಜ್ಯತಿಕಲಕವನ್ನು ಕೊಡುತ್ತೇನೆಂದಲ್ಲ. ನೀವು ನಿಮಗೆ ಕೊಟ್ಟುಕೊಳ್ಳಿ. ತಂದೆಗೆ ಗೊತ್ತಿದೆ - ಯಾರು ಬಹಳ ಸೇವೆಯನ್ನು ಮಾಡುತ್ತಾರೆ. ಪತ್ರಿಕೆಗಳಲ್ಲಿಯೂ ಸಹ ಲೇಖನಗಳು ಬಹಳ ಚೆನ್ನಾಗಿ ಬರುತ್ತವೆ. ಜೊತೆ-ಜೊತೆಗೆ ಯೋಗದ ಪರಿಶ್ರಮ ಮಾಡಬೇಕಾಗುವುದು, ಅದರಿಂದ ವಿಕರ್ಮ ವಿನಾಶವಾಗುತ್ತದೆ. ದಿನ-ಪ್ರತಿದಿನ ನೀವು ಒಳ್ಳೆಯ ರಾಜಯೋಗಿಗಳಾಗುತ್ತೀರಿ. ಹೇಗೆ ಈ ಶರೀರದಿಂದ ದೂರವಾಗುತ್ತಿದ್ದೇವೆ, ನಾವು ಹೊರಟು ಹೋಗುತ್ತೇವೆಂದು ತಿಳಿಯುತ್ತೀರಿ. ಸೂಕ್ಷ್ಮವತನದವರೆಗೆ ಮಕ್ಕಳು ಹೋಗುತ್ತೀರಿ. ಮೂಲವತನವು ಸಹ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅದು ಆತ್ಮಗಳ ಮನೆಯಾಗಿದೆ. ಮನುಷ್ಯರು ಶಾಂತಿಧಾಮಕ್ಕಾಗಿಯೇ ಭಕ್ತಿಮಾಡುತ್ತಾರೆ. ಸುಖಧಾಮವಂತೂ ಅವರಿಗೆ ತಿಳಿದೇ ಇಲ್ಲ. ಸ್ವರ್ಗಕ್ಕೆ ಹೋಗುವ ಶಿಕ್ಷಣವನ್ನು ತಂದೆಯ ವಿನಃ ಮತ್ತೆ ಯಾರು ಕೊಡಲು ಸಾಧ್ಯವಿಲ್ಲ. ಇದು ಪ್ರವೃತ್ತಿ ಮಾರ್ಗವಾಗಿದೆ, ಇಬ್ಬರು ಮುಕ್ತಿಧಾಮಕ್ಕೆ ಹೋಗಬೇಕಾಗಿದೆ, ಅವರು ಉಲ್ಟಾ ಮಾರ್ಗವನ್ನು ತಿಳಿಸುತ್ತಾರೆ ಆದರೆ, ಯಾರು ಹೋಗುವುದಿಲ್ಲ. ಎಲ್ಲರನ್ನು ಅಂತಿಮದಲ್ಲಿ ತಂದೆಯು ಕರೆದುಕೊಂಡು ಹೋಗುತ್ತಾರೆ. ಇದು ಅವರ ಕರ್ತವ್ಯವಾಗಿದೆ. ಕೆಲವರು ಬಹಳ ಚೆನ್ನಾಗಿ ಓದಿ ರಾಜ್ಯಭಾಗ್ಯವನ್ನು ಪಡೆಯುತ್ತಾರೆ. ಉಳಿದವರೆಲ್ಲರೂ ಹೇಗೆ ಓದುತ್ತಾರೆ! ಅವರು ಹೇಗೆ ನಂಬರ್ವಾರ್ ಆಗಿ ಬರುತ್ತಾರೆಯೋ ಹಾಗೆಯೇ ನಂಬರ್ವಾರ್ ಹೋಗುತ್ತಾರೆ. ಈ ಮಾತುಗಳಲ್ಲಿ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡಬೇಡಿ.

ತಂದೆಯನ್ನು ನೆನಪು ಮಾಡುವುದಕ್ಕೂ ಸಮಯ ಸಿಗುವುದಿಲ್ಲವೆಂದು ಹೇಳುತ್ತೀರಿ ಅಂದಮೇಲೆ ಮತ್ತೆ ಇದರಲ್ಲಿ ಸಮಯವನ್ನು ಏಕೆ ವ್ಯರ್ಥಮಾಡುತ್ತೀರಿ. ಇದಂತೂ ನಿಶ್ಚಿಯವಿದೆ ಬೇಹದ್ದಿನ ತಂದೆಯು ಶಿಕ್ಷಕ, ಗುರುವು ಆಗಿದ್ದಾರೆ. ಅನ್ಯ ಯಾರನ್ನು ನೆನಪು ಮಾಡುವ ಅವಶ್ಯಕತೆಯಿಲ್ಲ. ನಿಮಗೆ ಗೊತ್ತಿದೆ ಕಲ್ಪದ ಹಿಂದೆಯು ಶ್ರೀಮತದಂತೆ ನಡೆದು ಪಾವನರಾಗಿದ್ದೆವು. ಪದೇ-ಪದೇ ಚಕ್ರವನ್ನು ತಿರುಗಿಸುತ್ತಾ ಇರಿ. ನಿಮ್ಮ ಹೆಸರೇ ಆಗಿದೆ - ಸ್ವದರ್ಶನಚಕ್ರಧಾರಿಗಳು. ಜ್ಞಾನಸಾಗರನಿಂದ ತುಂಬಿಸಿಕೊಳ್ಳುವುದರಲ್ಲಿ (ನೀರುತೆಗೆಯುವ ರಾಟೆಯಂತೆ) ನಿಮಗೆ ತಡವಾಗುವುದಿಲ್ಲ ಆದರೆ ಖಾಲಿಯಾಗುವುದರಲ್ಲಿ ತಡವಾಗುತ್ತದೆ. ನೀವು ಮಧುರ ಅಗಲಿ ಮರಳಿ ಸಿಕ್ಕಿದ ಮಕ್ಕಳಾಗಿದ್ದೀರಿ ಏಕೆಂದರೆ ಕಲ್ಪದ ನಂತರ ಬಂದು ಸೇರಿದ್ದೀರಿ. ಇದು ಪಕ್ಕಾ ನಿಶ್ಚಯವಿರಬೇಕು. ನಾವು 84 ಜನ್ಮಗಳ ನಂತರ ಬಂದು ಪುನಃ ತಂದೆಯೊಂದಿಗೆ ಸೇರುತ್ತೇವೆ ತಂದೆಯು ತಿಳಿಸುತ್ತಾರೆ - ಯಾರು ಮೊದಲು ಭಕ್ತಿ ಮಾಡುತ್ತಾರೋ, ಅವರೇ ಮೊದಲು ಜ್ಞಾನವನ್ನು ಪಡೆಯಲು ಯೋಗ್ಯರಾಗಿದ್ದಾರೆ ಏಕೆಂದರೆ ಭಕ್ತಿಯ ಫಲಬೇಕು ಅಂದಾಗ ಸದಾ ತಮ್ಮ ಫಲ ಅಥವಾ ಆಸ್ತಿಯನ್ನು ನೆನಪು ಮಾಡುತ್ತಾ ಇರಿ. ಫಲ ಎಂಬ ಶಬ್ಧವು ಭಕ್ತಿಮಾರ್ಗದ್ದಾಗಿದೆ, ಆಸ್ತಿ ಎನ್ನುವುದು ಸರಿಯಾಗಿದೆ. ಬೇಹದ್ದಿನ ತಂದೆಯನ್ನು ನೆನಪು ಮಾಡುವುದರಿಂದ ಆಸ್ತಿಯು ಸಿಗುತ್ತದೆ ಅನ್ಯ ಯಾವುದೇ ಉಪಾಯವಿಲ್ಲ. ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ. ನಾವು ಪ್ರಾಚೀನ ಯೋಗವನ್ನು ಕಲಿಯುತ್ತೇವೆಂದು ಅವರು ಹೇಳುತ್ತಾರೆ ಆಗ ತಂದೆಯು ತಿಳಿಸುತ್ತಾರೆ - ಅವರು ನಾಟಕದ ಅನುಸಾರ ಹಠಯೋಗಿ ಆಗುತ್ತಾರೆ. ರಾಜಯೋಗವನ್ನು ಈಗ ನೀವು ಕಲಿಯುತ್ತೀರಿ, ಏಕೆಂದರೆ ಈಗ ಸಂಗಮಯುಗವಾಗಿದೆ. ಅವರ ಧರ್ಮವೇ ಬೇರೆಯಾಗಿದೆ. ವಾಸ್ತವದಲ್ಲಿ ಅವರನ್ನು ಗುರುಗಳನ್ನಾಗಿ ಮಾಡಿಕೊಳ್ಳಬಾರದು ಆದರೆ, ಇದೂ ಸಹ ನಾಟಕದ ಅನುಸಾರ ಮತ್ತೆ ಅವಶ್ಯವಾಗಿ ಗುರುಗಳನ್ನು ಮಾಡಿಕೊಳ್ಳುತ್ತಾರೆ. ನೀವು ಮಕ್ಕಳೆಲ್ಲಾ ಸತ್ಯವಂತರಾಗಬೇಕಾಗಿದೆ. ಧರ್ಮದಲ್ಲಿ0iÉುೀ ಶಕ್ತಿಯಿದೆ. ನಿಮ್ಮನ್ನು ಯಾವ ದೇವಿ-ದೇವತೆಗಳನ್ನಾಗಿ ಮಾಡುತ್ತೇನೆ ಆ ಧರ್ಮವು ಬಹಳ ಸುಖ ಕೊಡುವಂತಹದ್ದಾಗಿದೆ. ಯಾರು ನನ್ನೊಂದಿಗೆ ಯೋಗವನ್ನಿಡುತ್ತಾರೆಯೋ, ಅವರಿಗೆ ನನ್ನ ಶಕ್ತಿಯು ಸಿಗುತ್ತದೆ ಅಂದಾಗ, ಸ್ವಯಂ ತಂದೆಯು ಧರ್ಮ ಸ್ಥಾಪನೆ ಮಾಡುತ್ತಾರೆ. ಅವರಲ್ಲಿ ಬಹಳ ಶಕ್ತಿಯಿದೆ, ಇಡೀ ವಿಶ್ವದ ಮಾಲೀಕರಾಗಿಬಿಡುತ್ತೀರಿ. ತಂದೆಯು ಈ ಧರ್ಮದ ಮಹಿಮೆ ಮಾಡುತ್ತಾರೆ. ಇದರಲ್ಲಿ ಬಹಳ ಶಕ್ತಿಯಿದೆ. ಆಲ್ಮೈಟಿ ತಂದೆಯಿಂದ ಅನೇಕರಿಗೆ ಮೈಟ್ (ಶಕ್ತಿ) ಸಿಗುತ್ತದೆ. ವಾಸ್ತವದಲ್ಲಿ ಶಕ್ತಿಯೂ ಎಲ್ಲರಿಗೂ ಸಿಗುತ್ತದೆ ಆದರೆ, ನಂಬರ್ವಾರ್. ನಿಮಗೆ ಎಷ್ಟು ಶಕ್ತಿಯು ಬೇಕೋ, ಅಷ್ಟನ್ನು ತಂದೆಯಿಂದ ಪಡೆಯಿರಿ ಮತ್ತೆ ದೈವೀಗುಣಗಳ ವಿಷಯವುಬೇಕು. ಯಾರಿಗೂ ತೊಂದರೆ ಮಾಡಬಾರದು, ದುಃಖ ಕೊಡಬಾರದು. ಇವರು (ಬ್ರಹ್ಮಾ) ಎಂದೂ ಯಾರಿಗು ಉಲ್ಟಾ -ಸುಲ್ಟಾ ಶಬ್ಧಗಳನ್ನು ಹೇಳುವುದಿಲ್ಲ ಏಕೆಂದರೆ, ಇವರಿಗೆ ತಿಳಿದಿದೆ - ನಾನು ಎಂತಹ ಕರ್ಮವನ್ನು ಮಾಡುತ್ತೇನೆಯೋ, ನನ್ನನ್ನು ನೋಡಿ ಅನ್ಯರು ಮಾಡುತ್ತಾರೆ. ಆಸುರೀ ಗುಣಗಳಿಂದ ದೈವೀಗುಣಗಳಲ್ಲಿ ಬರಬೇಕಾಗಿದೆ. ನೋಡಿಕೊಳ್ಳಬೇಕು - ನಾನು ಯಾರಿಗೂ ದುಃಖವನ್ನು ಕೊಡಲಿಲ್ಲವೇ? ಯಾರಿಗೂ ದುಃಖವನ್ನು ಕೊಡದೆ ಇರುವವರು ಯಾರು ಇಲ್ಲ, ಯಾವುದಾದರೊಂದು ತಪ್ಪುಗಳು ಅವಶ್ಯವಾಗಿ ಆಗುತ್ತದೆ. ಮನಸಾ-ವಾಚ-ಕರ್ಮಣ ಯಾರಿಗೂ ದುಃಖ ಕೊಡದಂತಹ ಸ್ಥಿತಿ ಅಂತ್ಯದಲ್ಲಿಯೇ ಬರುವುದು. ಈ ಸಮಯದಲ್ಲಿ ನಾವು ಪುರುಷಾರ್ಥಿ ಸ್ಥಿತಿಯಲ್ಲಿದ್ದೇವೆ. ಪ್ರತಿಯೊಂದು ಮಾತು ನಂಬರ್ವಾರ್ ಪುರುಷಾರ್ಥದನುಸಾರ ಆಗುತ್ತದೆ. ಎಲ್ಲರೂ ಸುಖಕ್ಕಾಗಿಯೇ ಪುರುಷಾರ್ಥ ಮಾಡುತ್ತಾರೆ ಆದರೆ, ತಂದೆಯ ವಿನಃ ಯಾರು ಸುಖ ಕೊಡಲು ಸಾಧ್ಯವಿಲ್ಲ. ನೋಡುತ್ತೇವೆ - ಸೋಮನಾಥನ ಮಂದಿರದಲ್ಲಿ ಎಷ್ಟು ವಜ್ರ - ವೈಡೂರ್ಯಗಳಿದ್ದವು ಅವೆಲ್ಲವೂ ಎಲ್ಲಿಂದ ಬಂದಿತು? ಹೇಗೆ ಸಾಹುಕಾರರಾದರು? ಇಡೀ ದಿನ ಈ ವಿದ್ಯೆಯ ಚಿಂತನೆ ಇರಬೇಕು. ಗೃಹಸ್ಥ ವ್ಯವಹಾರದಲ್ಲಿದ್ದು ಕಮಲಪುಷ್ಪ ಸಮಾನ ಪವಿತ್ರರಾಗಬೇಕು. ನೀವು ಈ ಪುರುಷಾರ್ಥವನ್ನು ಮಾಡುತ್ತೀರಿ ಅದರಿಂದಲೇ ಮಾಲೆಯಾಗಿದೆ. ಕಲ್ಪ-ಕಲ್ಪವು ಆಗುತ್ತಿರುತ್ತದೆ. ಮಾಲೆಯೂ ಯಾರ ನೆನಪಾರ್ಥವಾಗಿದೆ ಎಂದು ನೀವು ತಿಳಿದುಕೊಂಡಿದ್ದೀರಿ. ಅವರಂತು ಕೇವಲ ಮಾಲೆಯ ಸ್ಮರಣೆ ಮಾಡಿ, ಬಹಳ ಮಸ್ತರಾಗಿ ಬಿಡುತ್ತಾರೆ. ಭಕ್ತಿಯಲ್ಲಿ ಏನಿರುತ್ತದೆ ಮತ್ತು ಜ್ಞಾನದಲ್ಲಿ ಏನಿರುತ್ತದೆ ಎಂದು ನೀವೇ ತಿಳಿದುಕೊಂಡಿದ್ದೀರಿ. ನೀವು ಯಾರಿಗೆ ಬೇಕಾದರು ತಿಳಿಸಬಹುದು. ಪುರುಷಾರ್ಥವನ್ನು ಮಾಡುತ್ತಾ-ಮಾಡುತ್ತಾ ಕೊನೆಗೆ ಅಂತಿಮದ ಫಲಿತಾಂಶವು ಕಲ್ಪದ ಹಿಂದಿನ ತರಹವೇ ಬರುತ್ತದೆ. ಪ್ರತಿಯೊಬ್ಬರು ತಮ್ಮ ಪರಿಶೀಲನೆ ಮಾಡಿಕೊಳ್ಳುತ್ತಾಯಿರಿ. ನಮಗೆ ಈ ರೀತಿಯಾಗಬೇಕೆಂದು ನೀವು ತಿಳಿಯುತ್ತೀರಿ. ಪುರುಷಾರ್ಥದ ಅವಕಾಶವು ಸಿಕ್ಕಿದೆ. ನಂಬರ್ವಾರ್ ಪುರುಷಾರ್ಥದ ಅನುಸಾರ ತಂದೆಯೂ ನಿಮ್ಮ ಸ್ವಾಗತ ಮಾಡುತ್ತಾರೆ. ನೀವು ಮಕ್ಕಳು ಯಾವ ಸ್ವಾಗತ ಮಾಡುತ್ತೀರೋ ಅದಕ್ಕಿಂತಲೂ ಹೆಚ್ಚಾಗಿ ನಿಮ್ಮನ್ನು ಸ್ವಾಗತ ಮಾಡುತ್ತಾರೆ. ನಿಮ್ಮ ಸ್ವಾಗತ ಮಾಡುವುದೇ ತಂದೆಯ ಕರ್ತವ್ಯವಾಗಿದೆ. ಸ್ವಾಗತ ಎಂದರೆ ಸದ್ಗತಿ. ಇದು ಎಲ್ಲದಕ್ಕಿಂತ ಶ್ರೇಷ್ಠ ಸ್ವಾಗತವಾಗಿದೆ. ನಿಮ್ಮೆಲ್ಲರ ಸ್ವಾಗತ ಮಾಡಲು ತಂದೆಯು ಬರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅನೇಕರ ಆಶೀರ್ವಾದವನ್ನು ಪಡೆಯಲು ಕಲ್ಯಾಣಕಾರಿಗಳು ಆಗಬೇಕಾಗಿದೆ. ಶರೀರ ನಿರ್ವಾಹಣಾರ್ಥವಾಗಿ ಕರ್ಮ ಮಾಡುತ್ತಲೂ, ತಮ್ಮನ್ನು ಬಂಧನದಿಂದ ಮುಕ್ತ ಮಾಡಿಕೊಂಡು, ಬೆಳಿಗ್ಗೆ - ಸಂಜೆ ಈಶ್ವರೀಯ ಸೇವೆಯನ್ನು ಅವಶ್ಯವಾಗಿ ಮಾಡಬೇಕಾಗಿದೆ.

2. ಅನ್ಯ ಮಾತುಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದೆ ತಂದೆಯನ್ನು ನೆನಪು ಮಾಡಿ ಶಕ್ತಿಯನ್ನು ಪಡೆಯಬೇಕಾಗಿದೆ. ಸತ್ಯ ತಂದೆಯ ಸಂಗದಲ್ಲೇ ಇರಬೇಕಾಗಿದೆ. ಮನಸಾ-ವಾಚ-ಕರ್ಮಣ ಎಲ್ಲರಿಗೆ ಸುಖ ಕೊಡುವ ಪುರುಷಾರ್ಥ ಮಾಡಬೇಕಾಗಿದೆ.

ವರದಾನ:
ಪವಿತ್ರತೆಯ ವನ್ನು ಮೂಲ ಸಂಸ್ಕಾರ ಮಾಡಿಕೊಂಡು ಪವಿತ್ರ ಜೀವನ ಮಾಡುವಂತಹ ಪರಿಶ್ರಮ ಮುಕ್ತ ಭವ

ಕೆಲವು ಮಕ್ಕಳಿಗೆ ಪವಿತ್ರತೆಯಲ್ಲಿ ಪರಿಶ್ರಮವೆನ್ನಿಸುತ್ತದೆ, ಇದರಿಂದ ಸಿದ್ದವಾಗುತ್ತದೆ ವರದಾತ ತಂದೆಯಿಂದ ಜನ್ಮದಿನದ ವರದಾನ ಪಡೆದಿಲ್ಲವೆಂದು. ವರದಾನದಲ್ಲಿ ಪರಿಶ್ರಮವಿರುವುದಿಲ್ಲ. ಪ್ರತಿ ಬ್ರಾಹ್ಮಣ ಆತ್ಮಗಳಿಗೆ ಜನ್ಮಪಡೆದ ನಂತರ ಮೊದಲ ವರದಾನವಾಗಿದೆ “ಪವಿತ್ರ ಭವ, ಯೋಗಿ ಭವ”. ಹೇಗೆ ಜನ್ಮದ ಸಂಸ್ಕಾರ ಬಹಳ ಪಕ್ಕಾ ಆಗಿರುತ್ತದೆ, ಆದ್ದರಿಂದ ಪವಿತ್ರತೆ ಬ್ರಾಹ್ಮಣ ಜನ್ಮದ ಆದಿ ಸಂಸ್ಕಾರ, ಮೂಲ ಸಂಸ್ಕಾರವಾಗಿರುತ್ತದೆ. ಇದೇ ಸ್ಮೃತಿಯಿಂದ ಪವಿತ್ರ ಜೀವನ ನಡೆಸಿ. ಪರಿಶ್ರಮದಿಂದ ಮುಕ್ತರಾಗಿ.

ಸ್ಲೋಗನ್:
ಟ್ರಸ್ಟಿ ಅವರೇ ಆಗಿದ್ದಾರೆ ಯಾರಲ್ಲಿ ಸೇವೆಯ ಶುದ್ಧಭಾವನೆಯಿದೆ ಅವರು.