21.04.24    Avyakt Bapdada     Kannada Murli    30.03.99     Om Shanti     Madhuban


ತೀವ್ರ ಪುರುಷಾರ್ಥದ ಕಿಚ್ಚನ್ನು (ಬೆಂಕಿಯ ಕಿಡಿ) ಜ್ವಾಲೆಯಾಗಿ ಪರಿವರ್ತಿಸುವ ಮೂಲಕ ಬೇಹದ್ದಿನ ವೈರಾಗ್ಯದ ಅಲೆಯನ್ನು ಹರಡಿಸಿ.


ಇಂದು ಬಾಪ್ದಾದಾರವರು ಪ್ರತಿಯೊಂದು ಮಗುವಿನ ಮಸ್ತಕದ ಮೇಲೆ ಮೂರು ರೇಖೆಗಳನ್ನು ನೋಡುತ್ತಿದ್ದಾರೆ ಅದರಲ್ಲಿ ಒಂದು ರೇಖೆ-- ಪರಮಾತ್ಮ ಪೋಷಣೆಯ ಭಾಗ್ಯದ ರೇಖೆಯಾಗಿದೆ. ಈ ಪರಮಾತ್ಮ ಪೋಷಣೆಯ ಭಾಗ್ಯ ಇಡೀ ಕಲ್ಪದಲ್ಲಿ ಈಗ ಒಮ್ಮೆ ಮಾತ್ರ ಪ್ರಾಪ್ತಿಯಾಗುತ್ತದೆ. ಸಂಗಮ ಯುಗವನ್ನು ಹೊರತುಪಡಿಸಿ ಈ ಪರಮಾತ್ಮ ಪೋಷಣೆಯು ಇನ್ನೆಂದೂ ಪ್ರಾಪ್ತಿಯಾಗುವುದಿಲ್ಲ ಈ ಪರಮಾತ್ಮ ಪಾಲನೆಯು ಅತಿ ವಿರಳವಾಗಿ ಕೆಲವೇ ಕೆಲವು ಮಕ್ಕಳಿಗೆ ಪ್ರಾಪ್ತಿಯಾಗುತ್ತದೆ ಎರಡನೇ ರೇಖೆಯಾಗಿದೆ-- ಪರಮಾತ್ಮ ಶಿಕ್ಷಣದ ಭಾಗ್ಯದ ರೇಖೆ. ಪರಮಾತ್ಮ ಶಿಕ್ಷಣ ಇದು ಎಂತಹ ಭಾಗ್ಯವಾಗಿದೆ ಇಲ್ಲಿ ಸ್ವಯಂ ಪರಮಾತ್ಮನೇ ಶಿಕ್ಷಕನಾಗಿ ಓದಿಸುತ್ತಿದ್ದಾರೆ ಮೂರನೇ ರೇಖೆಯಾಗಿದೆ-- ಪರಮಾತ್ಮ ಪ್ರಾಪ್ತಿಯ ರೇಖೆ. ಯೋಚಿಸಿರಿ ಎಷ್ಟೊಂದು ಪ್ರಾಪ್ತಿಗಳಿವೆ ಎಲ್ಲರಿಗೂ ನೆನಪಿದೆಯಲ್ಲವೇ-- ಪ್ರಾಪ್ತಿಗಳ ಪಟ್ಟಿ ಇಷ್ಟು ದೊಡ್ಡದಾಗಿದೆ! ಹಾಗಾಗಿ ಈ ಮೂರು ರೇಖೆಗಳು ಪ್ರತಿಯೊಬ್ಬರ ಮಸ್ತಕದಲ್ಲಿ ಮಿಂಚುತ್ತಿವೆ ತಮ್ಮನ್ನು ಅಂತಹ ಅದೃಷ್ಟಶಾಲಿ ಆತ್ಮಗಳೆಂದು ಪರಿಗಣಿಸುತ್ತೀರಾ? ಪೋಷಣೆ, ಶಿಕ್ಷಣ ಮತ್ತು ಪ್ರಾಪ್ತಿಗಳು. ಜೊತೆ ಜೊತೆಗೆ ಬಾಪ್ ದಾದ ಮಕ್ಕಳ ನಿಶ್ಚಯದ ಆಧಾರದ ಮೇಲೆ ಆಧ್ಯಾತ್ಮಿಕ ನೋಡುತ್ತಿದ್ದಾ ನಶೆಯನ್ನ್ನೂ ನೋಡುತ್ತಿದ್ದಾರೆ ಪ್ರತಿಯೊಂದು ದೈವಿಕ ಮಗುವು ಎಷ್ಟೊಂದು ಆಧ್ಯಾತ್ಮಿಕ ನಶೆ ಇರುವ ಆತ್ಮಗಳಾಗಿದ್ದಾರೆ! ಅವರು ಇಡೀ ವಿಶ್ವದಲ್ಲಿ ಹಾಗೂ ಇಡೀ ಕಲ್ಪದಲ್ಲಿ ಎಲ್ಲರಿಗಿಂತ ಅತ್ಯುನ್ನತರೂ, ಮಹಾನರೂ ಹಾಗೂ ಪವಿತ್ರರೂ ಆಗಿದ್ದಾರೆ. ದೇವತಾ ರೂಪದಲ್ಲಿ ಸರ್ವ ಗುಣಗಳಿಂದ ಸಂಪನ್ನರು, ಸಂಪೂರ್ಣ ನಿರ್ವಿಕಾರಿಗಳು, ತನು ಮನದಿಂದ ಪವಿತ್ರ ಆತ್ಮಗಳು ತಮ್ಮಂತೆ ಬೇರೆ ಯಾರು ಆಗುವುದಿಲ್ಲ. ತದನಂತರ ಅತ್ಯುನ್ನತರೂ ಆಗಿದ್ದೀರಿ, ಪವಿತ್ರರೂ ಆಗಿದ್ದೀರಿ ಜೊತೆಗೆ ಶ್ರೀಮಂತರೂ ಆಗಿದ್ದೀರಿ. ಸ್ಥಾಪನೆಯ ಸಮಯದಲ್ಲಿಯೂ ಸಹ ಪ್ರಾಪ್ತಾದ ಅವರು ಮಕ್ಕಳಿಗೆ ನೆನಪಿಸುತಿದ್ದರು ಮತ್ತು ಪತ್ರಿಕೆಗಳಲ್ಲಿಯೂ ಸಹ "ಓಂ ಮಂಡಳಿಯು ವಿಶ್ವದಲ್ಲಿ ಶ್ರೀಮಂತರು" ಎಂದು ಮುದ್ರಿಸಿದರು. ಇದು ಸ್ಥಾಪನೆಯ ಸಮಯದ ನಿಮ್ಮೆಲ್ಲರ ಮಹಿಮೆಯಾಗಿದೆ. ಈ ದಿನದ ಎಷ್ಟೇ ದೊಡ್ಡ ಮಲ್ಟಿ ಮಲ್ಟಿ ಮಿಲೇನಿಯರ್ ಆಗಿದ್ದರೂ ಕೂಡ ನಿಮ್ಮಷ್ಟು ರಿಚೆಸ್ಟ್ ಆಗಲು ಸಾಧ್ಯವಿಲ್ಲ ಇಷ್ಟೊಂದು ಶ್ರೀಮಂತರಾಗಲು ಇರುವ ಉಪಾಯವೇನು? ಇದು ತುಂಬಾ ಚಿಕ್ಕ ಸಾಧನವಾಗಿದೆ ಶ್ರೀಮಂತರಾಗಲು ಜನರು ಎಷ್ಟೊಂದು ಪರಿಶ್ರಮವನ್ನು ಪಡುತ್ತಾರೆ ಆದರೆ ನೀವು ಎಷ್ಟು ಸಹಜವಾಗಿ ಶ್ರೀಮಂತರಾಗುತ್ತಿದ್ದೀರಿ. ಸಾಧನವು ಏನಾಗಿದೆ ಎಂಬುದು ಗೊತ್ತಿದೆಯಲ್ಲವೇ! ಕೇವಲ ಒಂದು ಸಣ್ಣ ಬಿಂದುವನ್ನು ಇಡಬೇಕು ಅಷ್ಟೇ ಬಿಂದುವನ್ನು ಇಟ್ಟೆವು, ಗಳಿಕೆ ಆಯಿತು. ಆತ್ಮವೂ ಬಿಂದು , ಪರಮಾತ್ಮನೂ ಬಿಂದು ಮತ್ತು ನಾಟಕಕ್ಕೆ. ಹಾಕುವುದು, ಇದು ಕೂಡ ಬಿಂದು. ಹಾಗಾಗಿ ಆತ್ಮ ಬಿಂದುವನ್ನು ಸ್ಮರಿಸಿದೆವು, ಆದಾಯ ಹೆಚ್ಚಾಯಿತು. ಹಾಗೆ ಲೌಕಿಕದಲ್ಲಿಯೂ ನೋಡಿರಿ ಬಿಂದುವಿನಿಂದಲೇ ಸಂಖ್ಯೆಯು ದೊಡ್ಡದಾಗುತ್ತದೆ ಒಂದರ ಮುಂದೆ ಬಿಂದುವನ್ನು ಹಾಕಿದರೆ ಏನಾಗುತ್ತದೆ? 10. ಎರಡು ಬಿಂದುಗಳನ್ನು ಹಾಕಿ, ಮೂರು ಬಿಂದುಗಳನ್ನು ಹಾಕಿ, ನಾಲ್ಕು ಬಿಂದುಗಳನ್ನು ಹಾಕಿ ಸಂಖ್ಯೆ ದೊಡ್ಡದಾಗುತ್ತಾ ಹೋಗುತ್ತದೆ. ಹಾಗಾದರೆ ತಮ್ಮ ಸಾಧನ ಎಷ್ಟು ಸಹಜವಾಗಿದೆ!" ನಾನು ಆತ್ಮ" ಈ ನೆನಪಿನ ಬಿಂದುವನ್ನು ಹಾಕುವುದು ಎಂದರೆ ಸಂಪತ್ತನ್ನು ಸಂಗ್ರಹಿಸುವುದು ನಂತರ "ತಂದೆ" ಬಿಂದಿಯನ್ನು ಹಾಕಿ ಮತ್ತು ಸಂಪತ್ತು ಸಂಗ್ರಹವಾಗುತ್ತದೆ ಕರ್ಮದಲ್ಲಿ ಸಂಬಂಧಗಳಲ್ಲಿ ನಾಟಕದ ಪೂರ್ಣ ವಿರಾಮವನ್ನು ಹಾಕಿರಿ, ಹಿಂದೆ ಆಗಿರುವ ವಿಷಯಗಳಿಗೆ ಪೂರ್ಣವಿರಾಮ ಹಾಕಿ ಆಗ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಹಾಗಾದರೆ ಇಡೀ ದಿನದಲ್ಲಿ ಎಷ್ಟು ಬಾರಿ ಬಿಂದುವನ್ನು ಹಾಕುತ್ತೀರಿ ಎಂದು ಹೇಳಿ? ಹಾಗೂ ಬಿಂದುವನ್ನು ಹಾಕುವುದು ಎಷ್ಟು ಸಹಜವಾಗಿದೆ! ಕಷ್ಟವೇ? ಬಿಂದು ಜಾರಿ ಹೋಗುತ್ತದೆಯೇ?

ಸಂಪಾದನೆಯ ಏಕೈಕ ಮಾರ್ಗವೆಂದರೆ ಬಿಂದುವನ್ನು ಹಾಕುವುದು ಎಂದು ಬಾಪ್ ದಾದ ಕಲಿಸಿಕೊಟ್ಟಿದ್ದಾರೆ. ಹಾಗಾದರೆ ಎಲ್ಲರಿಗೂ ಬಿಂದುವನ್ನು ಹಾಕಲು ಬರುತ್ತದೆಯೇ? ಬರುತ್ತದೆ ಆದರೆ ಒಂದು ಕೈ ಚಪ್ಪಾಳೆಯನ್ನು ತಟ್ಟಿ. ಖಂಡಿತವಾಗಿಯೂ ಬರುತ್ತದೆಯಲ್ಲವೇ! ಅಥವಾ ಕೆಲವೊಮ್ಮೆ ಜಾರಿ ಹೋಗುತ್ತದೆ, ಕೆಲವೊಮ್ಮೆ ಅಂಟಿಕೊಳ್ಳುತ್ತದೆಯೋ? ಎಲ್ಲಕ್ಕಿಂತ ಸುಲಭ ಬಿಂದು ಹಾಕುವುದಾಗಿದೆ. ಕುರುಡರು ಕೂಡ ಕಾಗದದ ಮೇಲೆ ಪೆನ್ಸಿಲ್ ಇಟ್ಟರೆ ಬಿಂದುವಾಗುತ್ತದೆ ಮತ್ತು ತಾವಂತೂ ತ್ರಿನೇತ್ರಿ ಆಗಿದ್ದೀರಿ, ಆದ್ದರಿಂದ ಈ ಮೂರು ಬಿಂದುಗಳನ್ನು ಶಾಶ್ವತವಾಗಿ ಉಪಯೋಗಿಸಿರಿ ಪ್ರಶ್ನಾರ್ಥಕ ಚಿಹ್ನೆ ಎಷ್ಟು ವಕ್ರವಾಗಿದೆ? ಬರೆದು ನೋಡಿ , ವಕ್ರವಾಗಿದೆ ಅಲ್ಲವೇ? ಹಾಗೂ ಬಿಂದು ಎಷ್ಟು ಸರಳವಾಗಿದೆ. ಆದ್ದರಿಂದ ಬಾಪ್ ದಾದ ಮಕ್ಕಳಿಗೆ ವಿವಿಧ ರೀತಿಯಲ್ಲಿ ಸಮಾನರಾಗುವ ವಿಧಾನವನ್ನುಹೇಳುತ್ತಾ ಇರುತ್ತಾರೆ ಆ ವಿಧಾನವೇ ಬಿಂದು. ಬೇರೆ ಯಾವ ವಿಧಾನವು ಇಲ್ಲ ವಿದೇಹಿ ಆಗುತ್ತೀರೆಂದರೆ ಅದರ ವಿಧಾನವೇ ಆಗಿದೆ-- ಬಿಂದು ಆಗುವುದು. ಅಶರೀರಿ ಆಗಿ, ಕರ್ಮಾತೀರಾಗಿ ಎಲ್ಲದರ ವಿಧಿಯು ಬಿಂದು ಆಗಿದೆ. ಆದ್ದರಿಂದ ಬಾದಾದ ಮೊದಲೇ ಹೇಳಿದ್ದಾರೆ-- ಅಮೃತ ವೇಳೆಯಲ್ಲಿ ಬಾಪ್ದಾದಾರವರೊಂದಿಗೆ ಅವರೊಂದಿಗೆ ಮಿಲನ ಮಾಡುತ್ತಾ ಆತ್ಮಿಕ ವರ್ತಾಲಾಪ ಮಾಡುತ್ತಾ, ತಮ್ಮ ಕೆಲಸ ಕಾರ್ಯಗಳಿಗೆ ಬರುವಾಗ ಮೊದಲು ಮೂರು ಬಿಂದುಗಳ ತಿಲಕವನ್ನು ಮಸ್ತಕದ ಮೇಲೆ ಹಚ್ಚಿಕೊಳ್ಳಿ, ಆ ಕೆಂಪು ತಿಲಕವನ್ನು ಅಲ್ಲ ಆದರೆ ಸ್ಮೃತಿಯ ತಿಲಕವನ್ನು ಹಚ್ಚಿಕೊಳ್ಳಿ ಹಾಗೂ ಯಾವುದೇ ಕಾರಣದಿಂದಲೂ ಈ ಸ್ಮೃತಿಯ ತಿಲಕ ಅಳಿಸಿ ಹೋಗದಂತೆ ಎಚ್ಚರವಹಿಸಿ. ಏಕೆಂದರೆ ಇದು ಅಳಿಸದ ಅವಿನಾಶಿ ತಿಲಕವಾಗಿದೆ ಅಲ್ಲವೇ?

ಬಾಪ್ದಾದಾರವರು ಮಕ್ಕಳ ಪ್ರೀತಿಯನ್ನು ನೋಡುತ್ತಾರೆ ಎಷ್ಟು ಪ್ರೀತಿಯಿಂದ ಮಿಲನ ಮಾಡಲು ಓಡೋಡಿ ಬಂದು ತಲುಪುತ್ತಾರೆ ಹಾಗೂ ಇಂದು ಹಾಲಿನಲ್ಲಿ ಮೊದಲನೇ ಸಾಲಿನಲ್ಲಿ, ಹತ್ತಿರ ಕುಳಿತುಕೊಂಡು ಮಿಲನ ಮಾಡಲು ಪ್ರೀತಿಯಿಂದ ನಿದ್ದೆ ನೀರಡಿಕೆ ಯನ್ನು ಮರೆತು ಎಷ್ಟೊಂದು ಪರಿಶ್ರಮದಿಂದ ಪ್ರಯತ್ನ ಪಡುತ್ತಾರೆ. ಬಾಪ್ ದಾದ ಎಲ್ಲವನ್ನು ನೋಡುತ್ತಾರೆ, ಏನೇನು ಮಾಡುತ್ತಾರೆ ಆ ಎಲ್ಲಾ ಪ್ರಯತ್ನಗಳನ್ನು ನೋಡುತ್ತಾರೆ. ಬಾಬ್ ದಾದಾ ಮಕ್ಕಳ ಈ ಪ್ರೀತಿಯ ಮೇಲೆ ಬಲಿಹಾರಿಯಾಗುತ್ತಾರೆ ಮತ್ತು ಹೇಗೆ ಭೌತಿಕವಾಗಿ ಭೇಟಿಯಾಗಲು ಓಡೋಡಿ ಬರುತ್ತೀರೋ ಹಾಗೆಯೇ ತಂದೆಯ ಸಮಾನರಾಗಲು ತೀವ್ರಪುರುಷಾರ್ಥ ಮಾಡಿ ಎಂದು ಹೇಳುತ್ತಾರೆ ಮಿಲನದಲ್ಲಿ ಎಲ್ಲರೂ ತಮಗೆ ಮುಂದೆ ಕುಳಿತುಕೊಳ್ಳಲು ನಂಬರ್ ಸಿಗಬೇಕೆಂದು ಭಾವಿಸುತ್ತೀರಲ್ಲವೇ. ಎಲ್ಲರಿಗೂ ಸಿಗುವುದಿಲ್ಲ ಇದು ಭೌತಿಕ ಪ್ರಪಂಚವಾಗಿದೆ ಅಲ್ಲವೇ! ಭೌತಿಕ ಪ್ರಪಂಚದ ನಿಯಮಗಳನ್ನು ಅನುಸರಿಸಲೇಬೇಕು . ಬಾಪ್ ದಾದ ಕೂಡ ಎಲ್ಲರೂ ಮುಂದೆಯೇ ಕುಳಿತುಕೊಳ್ಳಲಿ ಎಂದು ಭಾವಿಸುತ್ತಾರೆ ಆದರೆ ಇದು ಸಾಧ್ಯವೇ? ಇದು ಆಗುತ್ತಲೂ ಇದೆ ಹೇಗೆ? ಹಿಂದೆ ಕುಳಿತುಕೊಂಡವರನ್ನು ಬಾಪ್ದಾದ ಯಾವಾಗಲೂ ತಮ್ಮ ದೃಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ ಆದ್ದರಿಂದ ದೃಷ್ಟಿಯಲ್ಲಿದ್ದವರು ಎಲ್ಲರಿಗಿಂತ ಸಮೀಪದಲ್ಲಿದ್ದಾರೆ ಹಾಗಾಗಿ ನೀವು ಹಿಂದೆ ಕುಳಿತುಕೊಂಡಿಲ್ಲ ಆದರೆ ಬಾಬ್ದಾದ ಅವರ ನಯನಗಳಲ್ಲಿ ಕುಳಿತುಕೊಂಡಿದ್ದೀರಿ. ಕಣ್ಮಣಿಗಳಾಗಿದ್ದೀರಿ ಹಿಂದಿರುವವರು ಕೇಳಿಸಿಕೊಂಡಿರಾ? ನೀವು ದೂರದಲ್ಲಿಲ್ಲ ಹತ್ತಿರದಲ್ಲಿ ಇದ್ದೀರಿ. ನೀವು ದೇಹದಿಂದ ಹಿಂದೆ ಕುಳಿತಿರಬಹುದು ಆದರೆ ಆತ್ಮ ಎಲ್ಲರಿಗಿಂತ ಸಮೀಪವಾಗಿದೆ ಹಾಗೂ ಬಾಪು ದಾದ ಹಿಂದೆ ಇರುವವರನ್ನೇ ಹೆಚ್ಚು ನೋಡುತ್ತಾರೆ ನೋಡಿ ಹತ್ತಿರ ಇರುವವರನ್ನು ಈ ಭೌತಿಕ ಕಣ್ಣುಗಳಿಂದ ನೋಡುವ ಅವಕಾಶವಿದೆ ಹಾಗೂ ಹಿಂದೆ ಕುಳಿತವರನ್ನು ಭೌತಿಕ ಕಣ್ಣುಗಳಿಂದ ನೋಡಲು ಆಗುವುದಿಲ್ಲ ಆದ್ದರಿಂದ ವಾಪ್ದಾದ ಅವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ.

ಬಾಪ್ದಾದಾರವರು ಮುಗುಳ್ನಗುತ್ತಿದ್ದಾರೆ, ಎರಡು ಗಂಟೆಯಾಗುತ್ತದೆ ಸಾಲು ಪ್ರಾರಂಭವಾಗುತ್ತದೆ ಮಕ್ಕಳು ನಿಂತಲ್ಲೇ ಆಯಾಸಗೊಳ್ಳುತ್ತಾರೆ ಎಂದು ಬಾಪ್ ದಾದಾ ಅವರಿಗೆ ಅರ್ಥವಾಗುತ್ತದೆ ಆದರೆ ಬಾಪ್ ದಾದ ಎಲ್ಲ ಮಕ್ಕಳಿಗೆ ಪ್ರೀತಿಯಿಂದ ಮಸಾಜ್ ಮಾಡುತ್ತಾರೆ ಕಾಲುಗಳ ಮಾಲಿಶ್ ಆಗುತ್ತದೆ, ಬಾಪ್ದಾದಾರವರ ಮಸಾಜ್ ನೋಡಿದ್ದೀರಲ್ಲವೇ-- ಬಹಳ ವಿಶಿಷ್ಟ ಹಾಗೂ ಸುಂದರವಾಗಿದೆ ಹಾಗಾಗಿ ಇಂದು ಎಲ್ಲರೂ ಈ ಸೀಸನ್ನ ಕೊನೆಯ ಅವಕಾಶವನ್ನು ಪಡೆಯಲು ಎಲ್ಲೆಡೆಯಿಂದ ಧಾವಿಸಿ ಬಂದಿದ್ದಾರೆ ಚೆನ್ನಾಗಿದೆ ತಂದೆಯ ಜೊತೆ ಮಿಲನದ ಉಲ್ಲಾಸ ಉತ್ಸಾಹವು ಸದಾ ನಮ್ಮನ್ನು ಮುನ್ನಡೆಸುತ್ತದೆ ಆದರೆ ಬಾಬ್ದಾದರಂತೂ ಮಕ್ಕಳನ್ನು ಒಂದು ಕ್ಷಣವೂ ಮರೆಯುವುದಿಲ್ಲ. ತಂದೆ ಒಬ್ಬರು ಮತ್ತು ಮಕ್ಕಳು ಅನೇಕರಿದ್ದಾರೆ ಆದರೆ ಅನೇಕ ಮಕ್ಕಳನ್ನು ಕೂಡ ಒಂದು ಕ್ಷಣವು ಮರೆಯುವುದಿಲ್ಲ ಏಕೆಂದರೆ ಅಗಲಿ ಬಹಳ ಕಾಲದ ನಂತರ ಮರಳಿ ಸಿಕ್ಕಿರುವಿರಿ. ನೋಡಿ ದೇಶ ವಿದೇಶಗಳ ಮೂಲೆ ಮೂಲೆಗಳಿಂದ ತಂದೆಯೇ ತಮ್ಮನ್ನು ಹುಡುಕಿದ್ದಾರೆ ತಮಗೆ ತಂದೆಯನ್ನು ಹುಡುಕಲು ಸಾಧ್ಯವಾಯಿತೆ? ತಂದೆಯನ್ನು ಹುಡುಕುತ್ತಾ ಅಲೆಯುತ್ತಿದ್ದಿರಿ ಆದರೆ ಅವರನ್ನು ಹುಡುಕಲಾಗಲಿಲ್ಲ ಮತ್ತು ತಂದೆಯು ವಿವಿಧ ದೇಶಗಳಲ್ಲಿ, ಹಳ್ಳಿಗಳಲ್ಲಿ, ಮತ್ತು ತಂದೆಯ ಮಕ್ಕಳು ಎಲ್ಲಿದ್ದರೋ ಅಲ್ಲಿಂದ ಹುಡುಕಿದರು ತಮ್ಮವರನ್ನಾಗಿ ಮಾಡಿಕೊಂಡರು ಗೀತೆ ಹಾಡುತ್ತೀರಲ್ಲವೇ-- "ನಾನು ಬಾಬಾರವರು ಮತ್ತು ಬಾಬಾ ನನ್ನವರು" ಯಾವ ಜಾತಿ ನೋಡಿಲ್ಲ ದೇಶ ನೋಡಿಲ್ಲ ಬಣ್ಣವನ್ನು ನೋಡಿಲ್ಲ ಎಲ್ಲರ ಮಸ್ತಕದಲ್ಲಿ ಒಂದು ಆತ್ಮಿಕ ಬಣ್ಣವನ್ನು ನೋಡಿದೆನು-- ಬೆಳಕಿನ ಬಿಂದು. ಡಬಲ್ ಫಾರಿನರ್ಸ್ ಏನು ತಿಳಿದುಕೊಂಡಿರಿ? ತಂದೆಯು ಜಾತಿ ನೋಡಿದರ? ಕಪ್ಪಾಗಿದ್ದಾನೋ, ಸುಂದರನೋ, ಬೆಳ್ಳಗಿದ್ದಾನೋ, ಕೃಷ್ಣ ವರ್ಣದವನೋ, ಏನನ್ನು ನೋಡಲಿಲ್ಲ ನನ್ನವನಾಗಿದ್ದಾನೆ-- ಅದನ್ನು ಮಾತ್ರ ನೋಡಿದರು ಹಾಗಾದರೆ ಹೇಳಿ ಇದು ತಂದೆಯ ಪ್ರೀತಿಯೋ ಅಥವಾ ತಮ್ಮ ಪ್ರೀತಿಯೋ? ಯಾರ ಪ್ರೀತಿಯಾಗಿದೆ?(ಇಬ್ಬರದ್ದು ಆಗಿದೆ) ಮಕ್ಕಳು ಉತ್ತರಿಸುವುದರಲ್ಲಿ ಜಾಣರು ಅವರು ಹೇಳುತ್ತಾರೆ, ಬಾಬಾ ಪ್ರೀತಿಯು ಪ್ರೀತಿಯನ್ನು ಸೆಳೆಯುತ್ತದೆ ಎಂದು ನೀವೇ ಹೇಳುತ್ತೀರಿ ಹಾಗಾಗಿ ನಿಮಗೆ ಪ್ರೀತಿ ಇದೆ ಆದ್ದರಿಂದ ನಮಗೂ ಇದೆ ಆಗಲೇ ಪ್ರೀತಿಯನ್ನು ಸೆಳೆಯುತ್ತದೆ ಮಕ್ಕಳು ಕೂಡ ಬುದ್ಧಿವಂತರಾಗಿದ್ದಾರೆ. ಇಷ್ಟೊಂದು ಧೈರ್ಯ, ಉಲ್ಲಾಸ ಉತ್ಸಾಹವಿರುವ ಮಕ್ಕಳಿದ್ದಾರೆ ಎಂದು ತಂದೆ ಸಂತೋಷಪಡುತ್ತಾರೆ.

ಬಾಪ್ದಾದಾರವರು ಅನೇಕ ಮಕ್ಕಳ 15 ದಿನಗಳ ಚಾರ್ಟನ ಫಲಿತಾಂಶಗಳನ್ನು ಪಡೆದಿದ್ದಾರೆ. ಎಲ್ಲೆಡೆಯ ಫಲಿತಾಂಶದಲ್ಲಿ ಬಾಪ್ದಾದ ನೋಡಿದ ಒಂದು ವಿಷಯವೆಂದರೆ ಬಹುತೇಕ ಎಲ್ಲ ಮಕ್ಕಳು ಪುರುಷಾರ್ಥದ ಕಡೆಗೆ ಗಮನ ಕೊಡುತ್ತಿದ್ದಾರೆ . ಪಸೆರ್ಂಟೇಜ್ ಅವರು ಬಯಸಿದಷ್ಟು ಇಲ್ಲ ಆದರೆ ಅದರಡೆ ಗಮನ ಕೊಡುತ್ತಿದ್ದಾರೆ. ತೀವ್ರ ಪುರುಷಾÁರ್ಥಿ ಮಕ್ಕಳು ಮನಸ್ಸಿನಲ್ಲಿಯೇ ತಮ್ಮ ಪ್ರತಿಜ್ಞೆಯನ್ನು ಈಡೇರಿಸುವ ಲಕ್ಷದಲ್ಲಿ ಮುಂದುವರೆಯುತ್ತಿದ್ದಾರೆ ಮತ್ತು ಮುಂದುವರೆಯುತ್ತಾ ತಮ್ಮ ಗಮನ ಸ್ಥಾನವನ್ನು ತಲುಪಿ ಬಿಡುತ್ತಾರೆ. ಕೆಲವು ಮಕ್ಕಳು ಈಗಲೂ ಕೂಡ ಕೆಲವೊಮ್ಮೆ ಅಜಾಗರೂಕತೆಯಲ್ಲಿ ಮತ್ತು ಕೆಲವೊಮ್ಮೆ ಆಲಸ್ಯದಲ್ಲಿ ಕಡಿಮೆ ಗಮನವನ್ನು ಕೊಡುತ್ತಿದ್ದಾರೆ ಅವರ ಒಂದು ವಿಶೇಷ ಸ್ಲೋಗನ್ ಇದೆ-- ಆಗಿಯೇ ಆಗುತ್ತದೆ, ಆಗುತ್ತೇವೆ....... ಇದು ಹುಡುಗಾಟಿಕೆಯಾಗಿದೆ. ಹೋಗಲೇಬೇಕು, ಇದು ತೀವ್ರಪುರುಷಾರ್ಥವಾಗಿದೆ. ಬಾಪ್ದಾದ ಅನೇಕ ವಾಗ್ದಾನಗಳನ್ನು ಕೇಳುತ್ತಾರೆ, ಮತ್ತು ಮಕ್ಕಳು ಪದೇಪದೇ ಒಳ್ಳೆಯ ಭರವಸೆಗಳನ್ನು ನೀಡುತ್ತಾರೆ ಮಕ್ಕಳು ಎಷ್ಟು ಧೈರ್ಯದಿಂದ ವಾಗ್ದಾನ ಮಾಡುತ್ತಾರೆಂದರೆ ಆ ಸಮಯದಲ್ಲಿ ಮಕ್ಕಳು ಬಾಪ್ದಾದರವರ ಹೃದಯವನ್ನು ಸಿಹಿಯಾಗಿಸುತ್ತಾರೆ. ತಂದೆಯ ಹೃದಯವು ಸಿಹಿ ಆಗುತ್ತದೆ ಆದರೆ ವಾಗ್ದಾನವೆಂದರೆ ಪುರುಷಾರ್ಥದಲ್ಲಿ ಗರಿಷ್ಠ ಲಾಭ. ಆದರೆ ಯಾವುದೇ ಪ್ರಯೋಜನವಾಗದಿದ್ದರೆ ವಾಗ್ದಾನ ಸಮರ್ಥವಾಗಿಲ್ಲ. ವಾಗ್ದಾನ ಕೊಟ್ಟರೂ ಹೃದಯವನ್ನಂತು ಸಿಹಿ ಮಾಡುತ್ತಿರಲ್ಲವೇ! ಜೊತೆಗೆ ತೀವ್ರಪುರುಷಾರ್ಥದ ಕಿಚ್ಚನ್ನು (ಬೆಂಕಿಯ ಕಿಡಿ) ಬೆಂಕಿಯ ರೂಪದಲ್ಲಿ ತನ್ನಿ. ಜ್ವಾಲಾಮುಖಿಯಾಗಿ. ಸಮಯಕ್ಕೆ ತಕ್ಕಂತೆ ಉಳಿದುಕೊಂಡಿರುವ ಮನಸ್ಸಿನ, ಸಂಬಂಧ ಸಂಪರ್ಕಗಳ ಯಾವುದೇ ಲೆಕ್ಕಾಚಾರವನ್ನು ಜ್ವಾಲಾ ಸ್ವರೂಪದಲ್ಲಿ ಸುಟ್ಟು ಭಸ್ಮ ಮಾಡಿ. ಕಿಡಿ ಇದೆ, ಇದರಲ್ಲಿ ಬಾಪ್ದಾದ ಪಾಸ್ ಮಾಡಿದ್ದಾರೆ ಆದರೆ ಈಗ ಆ ಕಿಡಿಯನ್ನು ಅಗ್ನಿ ರೂಪದಲ್ಲಿ ತನ್ನಿ.

ಪ್ರಪಂಚದ ಒಂದು ಕಡೆ ಭ್ರಷ್ಟಾಚಾರ, ದಬ್ಬಾಳಿಕೆಯ ಬೆಂಕಿ ಇರುತ್ತದೆ, ಇನ್ನೊಂದು ಕಡೆ ತಾವು ಮಕ್ಕಳ ಶಕ್ತಿಶಾಲಿ ಯೋಗ ಅಂದರೆ ಪುರುಷಾರ್ಥದ ಅಗ್ನಿಯು ಜ್ವಾಲೆಯ ರೂಪದಲ್ಲಿ ಅವಶ್ಯಕವಾಗಿದೆ. ಈ ಜ್ವಾಲಾ ರೂಪ ಈ ಭ್ರಷ್ಟಾಚಾರ, ದಬ್ಬಾಳಿಕೆಯ ಅಗ್ನಿಯನ್ನು ಸಮಾಪ್ತಿ ಮಾಡುತ್ತದೆ ಹಾಗೂ ಸರ್ವ ಆತ್ಮಗಳಿಗೆ ಸಹಯೋಗ ಕೊಡುತ್ತದೆ ತಮ್ಮಪುರುಷಾರ್ಥದ ಕಿಡಿ ಜ್ವಾಲೆಯ ರೂಪದಲ್ಲಿರಲಿ ಅಂದರೆ ಶಕ್ತಿಶಾಲಿ ಯೋಗವಾಗಿರಲಿ, ಆಗ ಈ ನೆನಪಿನ ಅಗ್ನಿ ಆ ಅಗ್ನಿಯನ್ನು ಸಮಾಪ್ತಿಗೊಳಿಸುತ್ತದೆ ಹಾಗೂ ಇನ್ನೊಂದು ಬದಿ, ಆತ್ಮಗಳಿಗೆ ಪರಮಾತ್ಮ ಸಂದೇಶದ, ಶೀತಲ ಸ್ವರೂಪದ ಅನುಭವವನ್ನು ಮಾಡಿಸುತ್ತದೆ ಬೇಹದ್ದಿನ ವೈರಾಗ್ಯವನ್ನು ಪ್ರಜ್ವಲಿತಗೊಳಿಸುತ್ತದೆ. ಒಂದು ಬದಿ ಭಸ್ಮ ಮಾಡುತ್ತದೆ ಇನ್ನೊಂದು ಬದಿ ತಂಪನ್ನು ಕೂಡ ನೀಡುತ್ತದೆ. ಬೇಹದ್ದಿನ ವೈರಾಗ್ಯದ ಅಲೆಯನ್ನು ಹರಡಿಸುತ್ತದೆ. ಮಕ್ಕಳು ಹೇಳುತ್ತಾರೆ--" ನನ್ನ ಯೋಗವಂತು ಇದೆ, ಬಾಬಾರನ್ನು ಹೊರತುಪಡಿಸಿ ಬೇರೆ ಯಾರು ಇಲ್ಲ, ಇದು ಬಹಳ ಒಳ್ಳೆಯದು. ಆದರೆ ಸಮಯಕ್ಕೆ ತಕ್ಕಂತೆ ಈಗ ಶಾಲೆಯ ರೂಪವನ್ನು ತೆಗೆದುಕೊಳ್ಳಿ ಹೇಗೆ ನೆನಪಾರ್ಥದಲ್ಲಿ ಶಕ್ತಿಯರ ಶಕ್ತಿ ರೂಪ, ಮಹಾಶಕ್ತಿ ರೂಪ, ಸರ್ವಶಸ್ತ್ರಧಾರಿಯನ್ನಾಗಿ ತೋರಿಸುತ್ತಾರಲ್ಲವೇ, ಈಗ ಅದೇ ಮಹಾ ಶಕ್ತಿಯ ರೂಪವನ್ನು ಪ್ರತ್ಯಕ್ಷಗೊಳಿಸಿ. ಪಾಂಡವರಾಗಲಿ, ಶಕ್ತಿಯರಾಗಲಿ, ಎಲ್ಲರೂ ಸಾಗರದಿಂದ ಹೊರಟ ಜ್ಞಾನ ನದಿಗಳಾಗಿದ್ದೀರಿ, ಸಾಗರ ಅಲ್ಲ, ನದಿ ಆಗಿದ್ದೀರಿ. ಜ್ಞಾನಗಂಗೆಗಳಾಗಿದ್ದೀರಿ. ಹಾಗಾದರೆ ಜ್ಞಾನಗಂಗೇಯರು ಈಗ ಆತ್ಮಗಳನ್ನು ತಮ್ಮ ಜ್ಞಾನದ ಶೀತಲತೆಯ ಮೂಲಕ ಪಾಪಗಳ ಅಗ್ನಿಯಿಂದ ಮುಕ್ತರನ್ನಾಗಿ ಮಾಡಿ ಇದು ವರ್ತಮಾನ ಸಮಯದ ಬ್ರಾಹ್ಮಣರ ಕರ್ತವ್ಯವಾಗಿದೆ.

ಈ ವರ್ಷ ಯಾವ ಸೇವೆ ಮಾಡಬೇಕೆಂದು ಎಲ್ಲ ಮಕ್ಕಳು ಕೇಳುತ್ತಾರೆ. ಆಗ ಬಾಪ್ ದಾದಾ ಮೊದಲನೆಯ ಸೇವೆಯನ್ನು ಹೀಗೆ ವಿವರಿಸುತ್ತಾರೆ ಈಗ ಸಮಯಕ್ಕೆ ತಕ್ಕಂತೆ ಎಲ್ಲ ಮಕ್ಕಳ ವಾನಪ್ರಸ್ಥದ ಹಂತವಾಗಿದೆ ಹಾಗಾಗಿ ವಾಹನ ಪ್ರಸ್ತಿಗಳು ತಮ್ಮ ಸಮಯ ಹಾಗೂ ಸಂಪನ್ಮೂಲಗಳನ್ನು ಬೇರೆಲ್ಲ ಮಕ್ಕಳಿಗೆ ಕೊಟ್ಟು ತಾವು ವಾನಪೃಸ್ಥಿಗಳಾಗುತ್ತಾರೆ. ಆದ್ದರಿಂದ ತಾವೆಲ್ಲರೂ ಕೂಡ ತಮ್ಮ ಸಮಯ ಹಾಗೂ ಶ್ರೇಷ್ಠ ಸಂಕಲ್ಪದ ಖಜಾನೆಗಳನ್ನು ಈಗ ಬೇರೆಯವರಿಗಾಗಿ ಉಪಯೋಗಿಸಿ ತಮಗಾಗಿ ತಮ್ಮ ಸಮಯ, ಸಂಕಲ್ಪಗಳನ್ನು ಕಡಿಮೆ ಬಳಸಿ. ಅದನ್ನು ಇತರರಿಗಾಗಿ ಬಳಸಿದಾಗ ತಾವು ಸ್ವಯಂ ಆ ಸೇವೆಯ ಪ್ರತ್ಯಕ್ಷಫಲದ ನಿಮಿತ್ತರಾಗುತ್ತೀರಿ. ಮನಸ್ಸಿನಿಂದ ಸೇವೆ, ಪದಗಳಿಂದ ಸೇವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ-- ಮಾಸ್ಟರ್ ಕೊಡುವವರಾಗಿ ಬ್ರಾಹ್ಮಣರಿಗೆ ಹಾಗೂ ಯಾರೇ ಸಂಬಂಧ ಸಂಪರ್ಕದಲ್ಲಿ ಬರುವವರಿಗೆ ಏನನ್ನಾದರೂ ಕೊಡುತ್ತಿರಿ ನಿಸ್ವಾರ್ಥರಾಗಿ ಖುಷಿ ಕೊಡಿ, ಶಾಂತಿ ಕೊಡಿ, ಆನಂದದ ಅನುಭವ ಮಾಡಿಸಿ, ಪ್ರೇಮದ ಅನುಭವ ಮಾಡಿಸಿ. ಕೊಡಬೇಕು ಕೊಡುವುದು ಎಂದರೆ ಸ್ವತಹ ಪಡೆಯುವುದಾಗಿದೆ ಸಂಬಂಧ ಸಂಪರ್ಕದಲ್ಲಿ ಬರುವವರು ಏನನ್ನಾದರೂ ಯಾವ ಸಮಯದಲ್ಲಾದರೂ , ಯಾವ ರೂಪದಲ್ಲಾದರೂ, ಪಡೆದುಕೊಂಡು ಹೋಗಲಿ. ತಾವು ಮಾಸ್ಟರ್ ದಾತರ ಬಳಿಗೆ ಬಂದು ಬರಿಗೈಯಿಂದ ತೆರಳಬಾರದು. ಹೇಗೆ ಬ್ರಹ್ಮಾ ಬಾಬಾ ಅವರನ್ನು ನೋಡಿದ್ದೇವೆ-- ತಿರುಗಾಡುವಾಗಲೂ ಯಾವುದಾದರೂ ಮಗು ಎದುರಿಗೆ ಬಂದರೆ ಏನನ್ನಾದರೂ ಅನುಭವ ಮಾಡದೆ ಬರಿ ಕೈಯಲ್ಲಿ ಹೋಗುತ್ತಿರಲಿಲ್ಲ. ಹಾಗಾಗಿ ಯಾರಾದರೂ ಬಂದು ಭೇಟಿಯಾದರೆ, ಏನನ್ನಾದರೂ ಪಡೆದುಕೊಂಡರೋ ಅಥವಾ ಬರಿಗೈಯಿಂದ ತೆರಳಿದರೋ ಎಂದು ಪರಿಶೀಲಿಸಿ. ಸಂಪತ್ತು ಇರುವವರು ಕೊಡದೆ ಇರಲಾರರು ಅಕ್ಷಯ, ಅಖಂಡ ದಾನಿ ಆಗಿರಿ. ಯಾರಾದ್ರೂ ಬೇಡಿದರೆ, ಇಲ್ಲ. ದಾನಿಯು ಯಾವತ್ತೂ ಕೇಳಿದಾಗ ಮಾತ್ರ ಕೊಡಬೇಕು ಎಂದು ನೋಡುವುದಿಲ್ಲ. ಅಕ್ಷಯ ಮಹಾದಾನಿ, ಮಹಾನ್ ದಾತ ಸ್ವತಹ ಕೊಡುತ್ತಾನೆ. ಹಾಗಾಗಿ ಈ ವರ್ಷದ ಮೊದಲ ಸೇವೆ-- ಮಹಾನ್ ದಾನಿಯಾಗಿ ಮಾಡಿ. ತಾವು ಪರಮಾತ್ಮನಿಂದ ಪಡೆದದ್ದನ್ನು ಕೊಡುತ್ತೀರಿ ಬ್ರಾಹ್ಮಣರು ಭಿಕ್ಷುಕರಲ್ಲ ಆದರೆ ಸಹಯೋಗಿಗಳಾಗಿದ್ದಾರೆ. ಆದ್ದರಿಂದ ಬ್ರಾಹ್ಮಣರು ಪರಸ್ಪರ ದಾನವನ್ನು ಕೊಡಬಾರದು, ಸಹಯೋಗವನ್ನು ಕೊಡಬೇಕು. ಮೊದಲನೇ ನಂಬರಿನ ಸೇವೆಯಾಗಿದೆ. ಹಾಗೂ ಜೊತೆಗೆ ಬಾಪ್ದಾದಾರವರು ವಿದೇಶದ ಮಕ್ಕಳಿಂದ ಶುಭವಾರ್ತೆಯನ್ನು ಕೇಳಿದರು ಈ ಸೃಷ್ಟಿಯಲ್ಲಿ ಸಂದೇಶ ಹರಡಿಸಲು ನಿಮಿತ್ತರಾದವರಿಗೆ ಬಾಬಾ ಮೈಕ್ ಎಂಬ ಹೆಸರನ್ನು ಕೊಟ್ಟಿದ್ದಾರೆ ವಿದೇಶದ ಮಕ್ಕಳು ಪರಸ್ಪರ ತಮ್ಮೊಳಗೆ ಈ ಕಾರ್ಯವನ್ನು ಮಾಡಿದ್ದಾರೆಂದು ಬಾಪ್ದಾದಾರವರು ನೋಡಿದರು ಮತ್ತು ಪ್ಲಾನ್ ಮಾಡಿದಿರೆಂದರೆ ಪ್ರಾಕ್ಟಿಕಲ್ ಆಗಿ ಆಗಲೇಬೇಕು. ಆದರೆ 13 ವಲಯಗಳಿರುವ ಭಾರತದಲ್ಲಿಯು ಸಹ, ಪ್ರತಿ ವಲಯದಿಂದ ಕನಿಷ್ಠ ಒಬ್ಬ ವಿಶೇಷ ನಿಮಿತ್ತ ಸೇವಾದಾರಿ ಇರಬೇಕು, ಅವರನ್ನು ಮೈಕ್ ಎಂದು ಕರೆಯಬೇಕು ಅಥವಾ ಬೇರೆ ಏನನ್ನಾದರೂ ಕರೆಯಬಹುದು, ಯಾರನ್ನಾದರೂ ಸಂದೇಶ ಹರಡುವ ಸಾಧನವನ್ನಾಗಿ ಮಾಡಬೇಕು ಬಾಪ್ದಾದಾರವರು ಕನಿಷ್ಠ ಇದನ್ನು ಹೇಳಿದ್ದಾರೆ ಆದರೆ ದೊಡ್ಡ ದೊಡ್ಡ ದೇಶಗಳಲ್ಲಿ ಹೀಗೆ ನಿಮಿತ್ತರಾಗುವವರಿದ್ದರೆ ಕೇವಲ ವಲಯದವರು ಮಾತ್ರವಲ್ಲ ಆದರೆ ದೊಡ್ಡ ದೊಡ್ಡ ದೇಶಗಳಿಂದಲೂ ಕೂಡ ಇಂತಹವರನ್ನು ಸಿದ್ಧಪಡಿಸಿ ಕಾರ್ಯಕ್ರಮಗಳನ್ನು ಮಾಡಬೇಕು. ಬಾಪ್ದಾದಾರವರು ವಿದೇಶದ ಮಕ್ಕಳಿಗೆ ಹೃದಯದಲ್ಲೇ ಅಭಿನಂದನೆಗಳನ್ನು ಕೊಟ್ಟಿದ್ದಾರೆ, ಅವರು ಮೈಕ್ಗಳನ್ನು ಪ್ರಾಕ್ಟಿಕಲ್ನಲ್ಲಿ ತರುವ ಪ್ಲಾನನ್ನು ಮೊದಲು ಬಾಪ್ದಾದಾರವರ ಎದುರಿಗೆ ತಂದಿದ್ದಾರೆ ಹಾಗಾಗಿ ಈಗ ಮುಖದಿಂದಲೂ ಅಭಿನಂದನೆಗಳನ್ನು ನೀಡುತ್ತಿದ್ದಾರೆ. ಅಂದಹಾಗೆ, ಭಾರತದಲ್ಲಿ ಇದು ಇನ್ನೂ ಸಹಜವಾಗಿದೆ ಎಂದು ಬಾಪ್ದಾದಾರವರಿಗೆ ತಿಳಿದಿದೆ ಆದರೆ ಈಗ ಗುಣಮಟ್ಟದ ಸೇವೆಯನ್ನು ಮಾಡಿ ಮತ್ತು ಸಹಯೋಗಿಗಳನ್ನು ಹತ್ತಿರಕ್ಕೆ ಕರೆತನ್ನಿ ಅನೇಕ ಸಹಯೋಗಿಗಳಿದ್ದಾರೆ ಆದರೆ ಸಂಘಟನೆಯಲ್ಲಿ ಅವರನ್ನು ಇನ್ನೂ ಹತ್ತಿರಕ್ಕೆ ಕರೆತನ್ನಿ.

ಜೊತೆಗೆ ಬ್ರಾಹ್ಮಣ ಆತ್ಮಗಳನ್ನು ಇನ್ನಷ್ಟು ಹತ್ತಿರಕ್ಕೆ ತರಲು, ಮಧುಬನದ ನಾಲ್ಕು ದಿಕ್ಕುಗಳಲ್ಲೂ ಹಾಗೂ ಎಲ್ಲೆಡೆ ಜ್ವಾಲೆಯ ವಾತಾವರಣವನ್ನು ಸೃಷ್ಟಿಸಲು ಭಟ್ಟಿ ಮಾಡಿ, ಪರಸ್ಪರ ಸಂಘಟನೆಯಲ್ಲಿ ಆತ್ಮಿಕ ವಾತಲಾಪ ಮಾಡಿ ಜ್ವಾಲಾ ಸ್ವರೂಪದ ಅನುಭವ ಮಾಡಿಸಿ ಮತ್ತು ಅನೇಕರನ್ನು ಮುಂದುವರೆಸಿ. ಈ ಸೇವೆಯಲ್ಲಿ ತೊಡಗಿದಾಗ ಎಲ್ಲಾ ಸಣ್ಣ ವಿಷಯಗಳು-- ಸಮಯ ತೆಗೆದುಕೊಳ್ಳುತ್ತದೆ, ಪರಿಶ್ರಮವಿದೆ, ಎದೆ ಗುಂದುವ ಇವುಗಳೆಲ್ಲ ಜ್ವಾಲಾಮುಖಿ ಸ್ವರೂಪದ ಮುಂದೆ ಗೊಂಬೆಯ ಆಟಗಳಂತೆ ಭಾಸವಾಗುತ್ತದೆ. ತಾವು ಸ್ವತಃ ಸಹಜವಾಗಿ ಸುರಕ್ಷಿತರಾಗುತ್ತಿರಿ. ಚಿಕ್ಕ ಪುಟ್ಟ ಕಾರ್ಯಗಳಿಗಾಗಿ ಶ್ರಮಿಸುತ್ತಿರುವ ಮಾಸ್ಟರ್ ಆಲ್ಮಟ್ಟಿ ಅಥಾರಿಟಿ ಮಕ್ಕಳನ್ನು ನೋಡಿದಾಗ ಬಾಪ್ದಾದಾರವರಿಗೆ ಅತ್ಯಂತ ಕನಿಕರವಾಗುತ್ತದೆ ಎಂದು ಬಾಪ್ದಾದಾರವರು ಹೇಳಿದರು ಪ್ರೀತಿಯ ಜ್ವಾಲಾಮುಖಿಯ ಕಡಿಮೆಯಾದಾಗ ಪರಿಶ್ರಮವೆನಿಸುತ್ತದೆ. ಹಾಗಾಗಿ ಈಗ ಪರಿಶ್ರಮದಿಂದ ಮುಕ್ತರಾಗಿ ಆಜಾಗರೂಕ ರಾಗಬೇಡಿ ಆದರೆ ಪರಿಶ್ರಮದಿಂದ ಮುಕ್ತರಾಗಿ. ಪರಿಶ್ರಮವನ್ನಂತು ಪಡುವುದಿಲ್ಲ ಹಾಗಾಗಿ ಆರಾಮವಾಗಿ ನಿದ್ದೆ ಮಾಡೋಣ ಎಂದು ಯೋಚಿಸಬೇಡಿ. ಆದರೆ ಪರಿಶ್ರಮವನ್ನು ಪ್ರೀತಿಯಿಂದ ಕೊನೆಗೊಳಿಸಿ. ಆ ಜಾಗರೂಕತೆಯಿಂದಲ್ಲ, ಏನು ಮಾಡಬೇಕೆಂದು ಅರ್ಥವಾಯಿತೇ?

ಇನ್ನೂ ಬಾಪದಾದಾರವರು ಬರುವುದು ಇದ್ದೇ ಇದೆ. ಮುಂದೆ ಏನಾಗುತ್ತದೆ ಎಂದು ಕೇಳುತ್ತಾರೆ ಬಾಪ್ದಾದಾರವರು ಬರುತ್ತಾರೋ ಅಥವಾ ಇಲ್ಲವೋ? ಬಾಪ್ದಾದಾರವರು ಇಲ್ಲ ಎಂದು ಹೇಳುವುದಿಲ್ಲ ಹೌದು ಹೌದು ಎಂದು ಹೇಳುತ್ತಾರೆ ಮಕ್ಕಳು ಹುಜೂರ್ ಎನ್ನುತ್ತಾರೆ ತಂದೆ ಹಾಜರಾಗುತ್ತಾರೆ. ಹಾಗಾದರೆ ಏನು ಮಾಡಬೇಕು ಏನು ಮಾಡಬಾರದು ಎಂದು ಅರ್ಥವಾಯಿತೆ. ಪ್ರೀತಿಯಿಂದ ಪರಿಶ್ರಮವನ್ನು ಸಮಾಪ್ತಿ ಮಾಡಿ. ಈಗ ಪರಿಶ್ರಮ ಮುಕ್ತ ವರ್ಷವನ್ನು ಆಚರಿಸಿ--ಪ್ರೀತಿಯಿಂದ ಆಲಸ್ಯದಿಂದ ಅಲ್ಲ. ಇದನ್ನು ಖಚಿತವಾಗಿ ನೆನಪಿಡಿ-- ಆಲಸ್ಯವಿರಬಾರದು.

ಸರಿ. ಎಲ್ಲಾ ಸಂಕಲ್ಪಗಳು ಈಡೇರಿದವೇ? ಯಾವುದಾದರೂ ಉಳಿದಿದೆಯಾ? ಜನಕ್ (ಜಾನಕಿ ದಾದಿ)ಗೆ ಕೇಳುತ್ತಾರೆ - ಏನಾದರೂ ಇದೆಯೇ? ದಾದಿಯಂತೂ ಮುಗುಳ್ನಗುತ್ತಿದ್ದಾರೆ. ಆಟ ಪೂರ್ಣಗೊಂಡಿತೆ? ಈ ಆಪರೇಷನ್ ಕೂಡ ಏನಾಗಿದೆ? ಆಟದಲ್ಲಿ ಆಟವಾಗಿದೆ ಆಟ ಚೆನ್ನಾಗಿತ್ತು ತಾನೇ!

(ಡ್ರಿಲ್) ಒಂದು ಕ್ಷಣದಲ್ಲಿ ಬಿಂದು ಸ್ವರೂಪರಾಗಿ ಮನಸ್ಸು ಬುದ್ಧಿಯನ್ನು ಏಕಾಗ್ರಗೊಳಿಸುವ ಅಭ್ಯಾಸವನ್ನು ಪದೇಪದೇ ಮಾಡಿ ಸ್ಟಾಪ್ ಎಂದ ತಕ್ಷಣ ಒಂದು ಸೆಕೆಂಡಿನಲ್ಲಿ ವ್ಯರ್ಥ ದೇಹಭಾನದಿಂದ ಮನಸ್ಸು ಮತ್ತು ಬುದ್ಧಿಯನ್ನು ಏಕಾಗ್ರಗೊಳಿಸಿ ದಿನವಿಡೀ ಈ ನಿಯಂತ್ರಣ ಶಕ್ತಿಯನ್ನು ಬಳಸಲು ಪ್ರಯತ್ನಿಸಿ. ಹಾಗಲ್ಲ ನಿಯಂತ್ರಣ ಶಕ್ತಿಯನ್ನು ಆದೇಶ ಮಾಡಿ ಎರಡು ಅಥವಾ ಐದು ನಿಮಿಷಗಳ ನಂತರ ನಿಯಂತ್ರಣವಾಗುತ್ತದೆ. ಆದ್ದರಿಂದ ಆಗಾಗ ನಿಯಂತ್ರಣ ಶಕ್ತಿಯನ್ನು ಬಳಸುತ್ತಿರಿ ಸೆಕೆಂಡ್ ಸೆಕೆಂಡಿನಲ್ಲಿ ಆಗುತ್ತದೆಯೋ, ನಿಮಿಷಗಳಲ್ಲಿ ಆಗುತ್ತದೆಯೋ, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆಯೋ ಎಂದು ಪರಿಶೀಲಿಸುತ್ತಿರಿ. ಈಗ ಪ್ರತಿಯೊಬ್ಬರೂ ತಮ್ಮ ಚಾರ್ಟನ್ನು ಇನ್ನೂ ಮೂರು ತಿಂಗಳುಗಳ ಕಾಲ ಕೊಡಬೇಕು. ಪ್ರಮಾಣ ಪತ್ರ ಪಡೆಯಬೇಕು ಮೊದಲು ತಾವೇ ತಮಗೆ ಸರ್ಟಿಫಿಕೇಟ್ ಕೊಟ್ಟು ಕೊಳ್ಳಬೇಕು ನಂತರ ಬಾಪ್ದಾದಾರವರು ಕೊಡುತ್ತಾರೆ. ಒಳ್ಳೆಯದು.

ಎಲ್ಲಾ ಕಡೆಯ ಪರಮಾತ್ಮ ಪಾಲನೆಯ ಅಧಿಕಾರಿ ಆತ್ಮಗಳಿಗೆ, ಪರಮಾತ್ಮ ಶಿಕ್ಷಣದ ಅಧಿಕಾರಿ ಆತ್ಮಗಳಿಗೆ, ಪರಮಾತ್ಮ ಪ್ರಾಪ್ತಿಗಳಿಂದ ಸಂಪನ್ನ ಆತ್ಮಗಳಿಗೆ, ಸದಾ ಬಿಂದುವಿನ ವಿಧಾನದಿಂದ ತೀವ್ರ ಪುರುಷಾರ್ಥಿ ಆತ್ಮಗಳಿಗೆ, ಸದಾ ಪ್ರೀತಿಯಲ್ಲಿ ಮುಳುಗಿರುವ ಹಾಗೂ ಪರಿಶ್ರಮದಿಂದ ಮುಕ್ತ ಮಕ್ಕಳಿಗೆ ಜ್ವಾಲಾ ಸ್ವರೂಪದ ವಿಶೇಷ ಆತ್ಮಗಳಿಗೆ ಬಾಪ್ದಾದಾರವರ ನೆನಪು ಪ್ರೀತಿ ಮತ್ತು ನಮಸ್ತೆ.

ವರದಾನ:
ಶುದ್ಧ ಮತ್ತು ಸಮರ್ಥ ಸಂಕಲ್ಪಗಳ ಶಕ್ತಿಯಿಂದ ವ್ಯರ್ಥ ಪ್ರಕಂಪನಗಳನ್ನು ಸಮಾಪ್ತಿಗೊಳಿಸುವ ಸತ್ಯಸೇವಾಧಾರಿ ಭವ

ಸಂಕಲ್ಪವೂ ಸೃಷ್ಟಿಯನ್ನು ಸೃಷ್ಟಿಸಿ ಬಿಡುತ್ತದೆ ಎಂದು ಹೇಳಲಾಗುತ್ತದೆ. ಯಾವಾಗ ಬಲಹೀನ ಮತ್ತು ವ್ಯರ್ಥಸಂಕಲ್ಪವನ್ನು ಮಾಡುತ್ತೀರಿ, ಆಗ ವ್ಯರ್ಥದ ವಾಯುಮಂಡಲದ ಸೃಷ್ಟಿಯಾಗಿಬಿಡುತ್ತದೆ. ಸತ್ಯಸೇವಾಧಾರಿಗಳು ಅವರಾಗಿದ್ದಾರೆ, ಯಾರು ತಮ್ಮ ಶುದ್ಧ ಶಕ್ತಿಶಾಲಿ ಸಂಕಲ್ಪಗಳಿಂದ ಹಳೆಯ ಪ್ರಕಂಪನಗಳನ್ನೂ ಸಮಾಪ್ತಿ ಮಾಡಿಬಿಡುತ್ತಾರೆ. ಹೇಗೆ ವಿಜ್ಞಾನಿಗಳು ಶಸ್ತ್ರಗಳಿಂದ ಶಸ್ತ್ರಗಳನ್ನು ಸಮಾಪ್ತಿ ಮಾಡಿಬಿಡುತ್ತಾರೆ, ಒಂದು ವಿಮಾನದಿಂದ ಇನ್ನೊಂದು ವಿಮಾನವನ್ನು ಬೀಳಿಸಿಬಿಡುತ್ತಾರೆ, ಹಾಗೆಯೇ ತಮ್ಮ ಶುದ್ಧ ಸಮರ್ಥಸಂಕಲ್ಪಗಳ ಪ್ರಕಂಪನವು, ವ್ಯರ್ಥ ಪ್ರಕಂಪನಗಳನ್ನು ಸಮಾಪ್ತಿ ಮಾಡಿಬಿಡಲಿ, ಈಗ ಇಂತಹ ಸೇವೆಯನ್ನು ಮಾಡಿರಿ.

ಸ್ಲೋಗನ್:
ವಿಘ್ನವೆಂಬ ಚಿನ್ನದ ಸೂಕ್ಷ್ಮ ಎಳೆಗಳಿಂದ ಮುಕ್ತರಾಗಿರಿ, ಮುಕ್ತಿ ವರ್ಷವನ್ನಾಚರಿಸಿರಿ.

ಸೂಚನೆ: ಇಂದು ತಿಂಗಳಿನ ಮೂರನೆಯ ರವಿವಾರವಾಗಿದೆ, ಎಲ್ಲರೂ ಸಂಘಟಿತ ರೂಪದಲ್ಲಿ ಸಂಜೆ 6.30ರಿಂದ 7.30ರವರೆಗೆ ಅಂತರಾಷ್ಟ್ರೀಯ ಯೋಗದಲ್ಲಿ ಸಮೂಹದಲ್ಲಿದ್ದು, ತಮ್ಮ ಪೂಜ್ಯ ಸ್ವರೂಪದಲ್ಲಿ ಸ್ಥಿತರಾಗಿ, ಸ್ವಯಂನ್ನು ಇಷ್ಟ ದೇವ ಅಥವಾ ಇಷ್ಟ ದೇವಿ ತಿಳಿದು ತಮ್ಮ ಭಕ್ತರ ಎಲ್ಲಾ ಮನೋಕಾಮನೆಗಳನ್ನು ಪೂರ್ಣ ಮಾಡಿ, ದೃಷ್ಟಿಯಿಂದ ಪ್ರಸನ್ನ ಮಾಡುವಂತಹ, ದರ್ಶನೀಯ ಮೂರ್ತರಾಗಿ ಸರ್ವರಿಗೆ ದರ್ಶನ ಮಾಡಿಸುತ್ತಾ ಪ್ರಸನ್ನರನ್ನಾಗಿ ಮಾಡುವ ಸೇವೆಯನ್ನು ಮಾಡಿ.