22.04.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಸರ್ವರ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ, ತಂದೆಯಂತಹ ನಿಷ್ಕಾಮ ಸೇವೆಯನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ”

ಪ್ರಶ್ನೆ:
ಹೊಸ ಪ್ರಪಂಚ ಸ್ಥಾಪನೆ ಮಾಡುವುದಕ್ಕಾಗಿ ತಂದೆಯು ಯಾವ ಶ್ರಮ ಪಡಬೇಕಾಗುತ್ತದೆ?

ಉತ್ತರ:
ಒಮ್ಮೆಲೆ ಅಜಾಮೀಳರಂತಹ ಪಾಪಿಗಳನ್ನೂ ಪುನಃ ಲಕ್ಷ್ಮಿ-ನಾರಾಯಣರಂತೆ ಪೂಜ್ಯ ದೇವಿ-ದೇವತೆಗಳಾನ್ನಾಗಿ ಮಾಡುವ ಶ್ರಮ ತಂದೆಯು ಪಡಬೇಕಾಗುತ್ತದೆ. ತಂದೆಯು ನೀವು ಮಕ್ಕಳನ್ನು ದೇವತೆಗಳನ್ನಾಗಿ ಮಾಡುವ ಶ್ರಮಪಡುತ್ತಾರೆ. ಉಳಿದ ಎಲ್ಲಾ ಆತ್ಮಗಳು ಹಿಂತಿರುಗಿ ಶಾಂತಿಧಾಮಕ್ಕೆ ಹೋಗುತ್ತಾರೆ. ಪ್ರತಿಯೊಬ್ಬರೂ ತಮ್ಮ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಯೋಗ್ಯರಾಗಿ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ.

ಗೀತೆ:
ಈ ಪಾಪದ ಪ್ರಪಂಚದಿಂದ ದೂರ ಕರೆದುಕೊಂಡು ಹೋಗಿ...............

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳಿಗೆ ಗೊತ್ತಿದೆ, ಇದು ಪಾಪದ ಪ್ರಪಂಚವಾಗಿದೆ, ಹೊಸ ಪ್ರಪಂಚವು ಪುಣ್ಯದ ಪ್ರಪಂಚವಾಗಿರುತ್ತದೆ. ಅಲ್ಲಿ ಯಾವುದೇ ಪಾಪವಾಗುವುದಿಲ್ಲ. ಅದು ರಾಮ ರಾಜ್ಯ, ಇದು ರಾವಣ ರಾಜ್ಯವಾಗಿದೆ. ಈ ರಾವಣ ರಾಜ್ಯದಲ್ಲಿ, ಎಲ್ಲರೂ ಪತಿತ-ದುಃಖಿಯಾಗಿದ್ದಾರೆ ಆದ್ದರಿಂದಲೇ ಹೇ! ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಎಲ್ಲಾ ಧರ್ಮದವರೂ ಓ ಗಾಡ್ ಫಾದರ್ ಬಂದು ನಮ್ಮನ್ನು ಮುಕ್ತರನ್ನಾಗಿ ಮಾಡಿ, ಮಾರ್ಗದರ್ಶಕರಾಗಿ ಎಂದು ಕರೆಯುತ್ತಾರೆ. ಅಂದರೆ ತಂದೆಯು ಯಾವಾಗ ಬರುತ್ತಾರೆಯೋ ಆಗ ಇಡೀ ಸೃಷ್ಠಿಯಲ್ಲಿ ಎಲ್ಲಾ ಧರ್ಮದವರನ್ನು ಕರೆದುಕೊಂಡು ಹೋಗುತ್ತಾರೆ. ಈ ಸಮಯದಲ್ಲಿ ಎಲ್ಲರೂ ರಾವಣರಾಜ್ಯದಲ್ಲಿದ್ದಾರೆ, ತಂದೆಯು ಎಲ್ಲಾ ಧರ್ಮದವರನ್ನು ಪುನಃ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಎಲ್ಲದರ ವಿನಾಶವಾಗಲಿದೆ. ತಂದೆ ಇಲ್ಲಿ ಬಂದು ಮಕ್ಕಳನ್ನು ಸುಖಧಾಮಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ, ಎಲ್ಲರ ಕಲ್ಯಾಣ ಮಾಡುತ್ತಾರೆ. ಆದುದರಿಂದ ಆ ಒಬ್ಬರಿಗೆ ಸರ್ವರ ಸದ್ಗತಿದಾತ, ಸರ್ವರ ಕಲ್ಯಾಣ ಮಾಡುವವರು ಎಂದು ಹೇಳಲಾಗುತ್ತದೆ. ತಂದೆ ಹೇಳುತ್ತಾರೆ ಈಗ ನಿಮಗೆ ವಾಪಸ್ಸು ಹೋಗಬೇಕಾಗಿದೆ, ಎಲ್ಲಾ ಧರ್ಮದವರೂ ಶಾಂತಿಧಾಮ, ನಿರ್ವಾಣಧಾಮಕ್ಕೆ ಹೊಗಬೇಕಾಗಿದೆ. ಅಲ್ಲಿ ಎಲ್ಲಾ ಆತ್ಮಗಳು ಶಾಂತಿಯಲ್ಲಿರುತ್ತಾರೆ. ಬೇಹದ್ದಿನ ತಂದೆ ಯಾರು ರಚಯಿತನಾಗಿದ್ದಾರೆಯೋ ಅವರೇ ಬಂದು ಎಲ್ಲರಿಗೆ ಮುಕ್ತಿ ಹಾಗೂ ಜೀವನ್ಮುಕ್ತಿಯನ್ನು ಕೊಡುತ್ತಾರೆ ಅಂದಮೇಲೆ ಎಲ್ಲಾ ಮಹಿಮೆಯು ಒಬ್ಬ ಗಾಡ್ಫಾದರ್ಗೆ ಮಾಡಬೇಕು. ಅವರೇ ಬಂದು ಎಲ್ಲರ ಸೇವೆ ಮಾಡುತ್ತಾರೆ. ಅಂದಮೇಲೆ ಅವರನ್ನೇ ನೆನಪು ಮಾಡಬೇಕು. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ದೂರ ದೇಶದ ಪರಂಧಾಮದ ನಿವಾಸಿಯಾಗಿದ್ದೇನೆ. ಎಲ್ಲದಕ್ಕಿಂತ ಮೊದಲು ಯಾವ ಆದಿ ಸನಾತನ ದೇವಿ-ದೇವತೆಯ ಧರ್ಮವಿತ್ತೋ ಅದು ಈಗಿಲ್ಲ, ಆದ್ದರಿಂದ ನನ್ನನ್ನು ಕರೆಯುತ್ತಾರೆ. ನಾನು ಬಂದು ಎಲ್ಲಾ ಮಕ್ಕಳನ್ನು ಪುನಃ ಕರೆದುಕೊಂಡು ಹೋಗುತ್ತೇನೆ. ಈಗ ಹಿಂದು ಎಂದು ಯಾವುದೇ ಧರ್ಮವಿಲ್ಲ. ಮೂಲತಃ ಅದು ದೇವಿ-ದೇವತಾ ಧರ್ಮವಾಗಿದೆ. ಆದರೆ ಪವಿತ್ರವಾಗಿರದೆ ಇರುವ ಕಾರಣ ಅಥವಾ ಅಪವಿತ್ರರಾಗುವ ಕಾರಣ ತಮ್ಮನ್ನು ದೇವತೆಗಳ ಬದಲಾಗಿ ಹಿಂದುಗಳೆಂದು ಹೇಳಿಬಿಡುತ್ತಾರೆ. ಹಿಂದು ಧರ್ಮ ಸ್ಥಾಪನೆ ಮಾಡುವವರು ಯಾರು ಇಲ್ಲ. ಸರ್ವ ಶಾಸ್ತ್ರ ಶಿರೋಮಣಿ ಗೀತೆಯಾಗಿದೆ. ಅದನ್ನು ಭಗವಂತನೇ ಹೇಳಿರುವುದು. ಒಬ್ಬ ಭಗವಂತನನ್ನೇ ಗಾಡ್ಫಾದರ್ ಎಂದು ಹೇಳಲಾಗುತ್ತದೆ. ಶ್ರೀ ಕೃಷ್ಣ ಅಥವಾ ಲಕ್ಷ್ಮಿ-ನಾರಾಯಣರಿಗೆ ಗಾಡ್ಫಾದರ್ ಅಥವಾ ಪತಿತ-ಪಾವನನೆಂದು ಹೇಳಲಾಗುವುದಿಲ್ಲ. ಇವರಂತೂ ರಾಜ-ರಾಣಿಯಾಗಿದ್ದಾರೆ. ಅವರನ್ನು ಈ ರೀತಿ ಯಾರು ಮಾಡಿದರು? ತಂದೆ. ತಂದೆಯು ಮೊದಲು ಹೊಸ ಪ್ರಪಂಚವನ್ನು ರಚಿಸುತ್ತಾರೆ ಅದಕ್ಕೆ ಇವರು ಮಾಲೀಕರಾಗುತ್ತಾರೆ. ಹೇಗಾದರು ಎಂಬುದನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ. ದೊಡ್ಡ-ದೊಡ್ಡ ಲಕ್ಷ್ಯಾಧೀಶ್ವರರು ಮಂದಿರಗಳನ್ನು ನಿರ್ಮಿಸುತ್ತಾರೆ ಅಂದಾಗ ಅವರನ್ನು ಕೇಳಬೇಕು - ಇವರು ಈ ವಿಶ್ವದ ರಾಜ್ಯವನ್ನು ಹೇಗೆ ಪಡೆದರು? ಹೇಗೆ ಮಾಲೀಕರಾದರು? ಇದನ್ನು ಎಂದೂ ಯಾರು ತಿಳಿಸಲು ಸಾಧ್ಯವಿಲ್ಲ. ಇಂತಹ ಫಲವನ್ನು ಪಡೆಯಲು ಯಾವ ಕರ್ಮವನ್ನು ಮಾಡಿದರು? ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ನಿಮ್ಮ ಧರ್ಮವನ್ನು ಮರೆತಿದ್ದೀರಿ. ಆದಿ ಸನಾತನ ದೇವೀ-ದೇವತಾ ಧರ್ಮವನ್ನು ಅರಿಯದಿರುವ ಕಾರಣ ಎಲ್ಲರು ಅನ್ಯ ಧರ್ಮದಲ್ಲಿ ಸೇರಿದ್ದಾರೆ. ಅವರು ಮತ್ತೆ ತಮ್ಮ-ತಮ್ಮ ಧರ್ಮಕ್ಕೆ ಹಿಂತಿರುಗುತ್ತಾರೆ. ಯಾರು ಆದಿ ಸನಾತನ ದೇವಿ-ದೇವತಾ ಧರ್ಮದವರು ಆಗಿರುತ್ತಾರೋ ಅವರು ಮತ್ತೆ ತಮ್ಮ ಧರ್ಮದಲ್ಲಿಯೇ ಬಂದು ಬಿಡುತ್ತಾರೆ. ಕ್ರಿಶ್ಚಿಯನ್ ಧರ್ಮದವರಾಗಿದ್ದರೆ ಅವರು ಮತ್ತೆ ಕ್ರಿಶ್ಚಿಯನ್ ಧರ್ಮದಲ್ಲಿ ಬಂದು ಬಿಡುತ್ತಾರೆ. ಈ ಆದಿ ಸನಾತನ ದೇವಿ-ದೇವತಾ ಧರ್ಮದ ಸಸಿಯು ನಾಟಿಯಾಗುತ್ತಿದೆ. ಯಾರ್ಯಾರೋ ಯಾವ ಧರ್ಮದವರಾಗಿದ್ದಾರೋ ಅವರು ಮತ್ತೆ ತಮ್ಮ-ತಮ್ಮ ಧರ್ಮದಲ್ಲಿ ಬರಬೇಕಾಗುತ್ತದೆ. ಇದು ವೃಕ್ಷವಾಗಿದೆ. ಇದಕ್ಕೆ ಮೂರು ಕೊಂಬೆಗಳು ಇರುತ್ತವೆ ಮತ್ತೆ ಅದರಿಂದ ವೃದ್ಧಿಯಾಗುತ್ತಿರುತ್ತದೆ. ಈ ಜ್ಞಾನವನ್ನಂತೂ ಮತ್ಯಾರೂ ಕೊಡಲು ಸಾಧ್ಯವಿಲ್ಲ. ಈಗ ತಂದೆಯು ತಿಳಿಸುತ್ತಾರೆ - ನೀವು ತಮ್ಮ ಧರ್ಮದಲ್ಲಿ ಬಂದು ಬಿಡಿ. ಕೆಲವರು ನಾನು ಸನ್ಯಾಸಿ ಧರ್ಮದಲ್ಲಿ ಹೋಗುತ್ತೇನೆ, ರಾಮಕೃಷ್ಣ ಪರಮಹಂಸರು ಸನ್ಯಾಸಿಯ ಅನುಯಾಯಿಯಾಗಿದ್ದೇನೆಂದು ಹೇಳುತ್ತಾರೆ. ಅವರು ನಿವೃತ್ತಿ ಮಾರ್ಗದವರಾಗಿದ್ದಾರೆ, ನೀವು ಪ್ರವೃತ್ತಿ ಮಾರ್ಗದವರಾಗಿದ್ದೀರಿ. ಗೃಹಸ್ಥ ಮಾರ್ಗದವರು ನಿವೃತ್ತಿ ಮಾರ್ಗದವರ ಅನುಯಾಯಿಗಳಾಗಲು ಹೇಗೆ ಸಾಧ್ಯ? ನೀವು ಮೊದಲು ಪ್ರವೃತ್ತಿ ಮಾರ್ಗದಲ್ಲಿ ಪವಿತ್ರರಾಗಿದ್ದೀರಿ ಮತ್ತೆ ರಾವಣನ ಮೂಲಕ ನೀವು ಅಪವಿತ್ರರಾಗಿದ್ದಿರಿ. ಈ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ನೀವು ಗೃಹಸ್ಥ ಆಶ್ರಮದವರಾಗಿದ್ದೀರಿ. ಭಕ್ತಿಯನ್ನು ನೀವೇ ಮಾಡಬೇಕಾಗಿದೆ. ತಂದೆಯು ಬಂದು ಭಕ್ತಿಯ ಫಲ ಸದ್ಗತಿಯನ್ನು ನೀಡುತ್ತಾರೆ. ಧರ್ಮವೇ ಶಕ್ತಿಯೆಂದು ಹೇಳಲಾಗುತ್ತದೆ. ತಂದೆಯು ಧರ್ಮ ಸ್ಥಾಪನೆ ಮಾಡುತ್ತಾರೆ. ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ. ತಂದೆಯಿಂದ ನಿಮಗೆ ಎಷ್ಟೊಂದು ಶಕ್ತಿಯು ಸಿಗುತ್ತದೆ. ಒಬ್ಬ ಸರ್ವಶಕ್ತಿವಂತ ತಂದೆಯೇ ಬಂದು ಎಲ್ಲರ ಸದ್ಗತಿಯನ್ನು ಮಾಡುತ್ತಾರೆ ಮತ್ಯಾರು ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ಪಡೆಯಲು ಸಾಧ್ಯವಿಲ್ಲ. ಇಲ್ಲಿ ವೃದ್ಧಿ ಹೊಂದುತ್ತಿರುತ್ತಾರೆ. ಹಿಂತಿರುಗಿ ಯಾರು ಹೋಗಲು ಸಾಧ್ಯವಿಲ್ಲ. ತಂದೆಯು - ತಿಳಿಸುತ್ತಾರೆ ನಾನು ಎಲ್ಲಾ ಧರ್ಮಗಳ ಸೇವಕನಾಗಿದ್ದೇನೆ. ನಾನು ಬಂದು ಎಲ್ಲರಿಗೆ ಸದ್ಗತಿ ಕೊಡುತ್ತೇನೆ. ಸತ್ಯಯುಗಕ್ಕೆ ಸದ್ಗತಿ ಎಂದು ಹೇಳಲಾಗುತ್ತದೆ. ಮುಕ್ತಿಯು ಶಾಂತಿಧಾಮದಲ್ಲಿದೆ ಅಂದಾಗ ಎಲ್ಲರಿಗಿಂತ ಹಿರಿಯರು ಯಾರಾದರು? ತಂದೆಯು ತಿಳಿಸುತ್ತಾರೆ - ಹೇ ಆತ್ಮಗಳೇ, ತಾವೆಲ್ಲರೂ ಸಹೋದರರಾಗಿದ್ದೀರಿ. ಎಲ್ಲರಿಗೂ ತಂದೆಯಿಂದ ಆಸ್ತಿಯು ಸಿಗುತ್ತದೆ. ನಾನು ಬಂದು ಎಲ್ಲರನ್ನು ತಮ್ಮ-ತಮ್ಮ ವಿಭಾಗದಲ್ಲಿ ಕಳುಹಿಸಲು ಯೋಗ್ಯರನ್ನಾಗಿ ಮಾಡುತ್ತೇನೆ. ಯೋಗ್ಯರಾಗದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಹಿಂತಿರುಗಿ ಹೋಗುತ್ತಾರೆ. ಅದು ಶಾಂತಿಧಾಮ ಮತ್ತು ಅದು ಸುಖಧಾಮವಾಗಿದೆ.

ತಂದೆಯು ಹೇಳುತ್ತಾರೆ - ನಾನು ಬಂದು ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತೇನೆ. ಇದರಲ್ಲಿ ಶ್ರಮ ಪಡಬೇಕಾಗುತ್ತದೆ. ಒಮ್ಮೆಲೇ ಅಜಾಮೀಳರಂತಹ ಪಾಪಿಗಳನ್ನು ಇಂತಹ ದೇವಿ-ದೇವತೆಗಳನ್ನಾಗಿ ಮಾಡುತ್ತೇನೆ. ಯಾವಾಗಿನಿಂದ ನೀವು ವಾಮ ಮಾರ್ಗದಲ್ಲಿ ಹೋಗಿದ್ದೀರೋ, ಆಗಿನಿಂದಲೂ ಏಣಿಯನ್ನು ಇಳಿಯುತ್ತಲೇ ಬಂದಿದ್ದೀರಿ. ಈ 84 ಜನ್ಮಗಳ ಏಣಿಯೇ ಕೆಳಗೆ ಇಳಿಯುವುದಾಗಿದೆ. ಸತೋಪ್ರಧಾನರಿಂದ ಸತೋ, ರಜೋ, ತಮೋ. ಈಗ ಇದು ಸಂಗಮಯುಗವಾಗಿದೆ. ತಂದೆ ಹೇಳುತ್ತಾರೆ, ನಾನು ಒಂದೇ ಬಾರಿ ಬರುತ್ತೇನೆ. ನಾನು ಯವುದೇ ಇಬ್ರಾಹಿಂ ಅಥವಾ ಬುದ್ಧನ ಶರೀರದಲ್ಲಿ ಬರುವುದಿಲ್ಲ. ಪುರುಷೋತ್ತಮ ಸಂಗಮಯುಗದಲ್ಲಿಯೇ ಬರುತ್ತೇನೆ. ಈಗ ತಂದೆಯನ್ನು ಅನುಸರಿಸಿ ಎಂದು ಹೇಳಲಾಗುತ್ತದೆ. ನೀವೆಲ್ಲಾ ಆತ್ಮಗಳು ನನ್ನನ್ನು ಅನುಸರಿಸಬೇಕಾಗಿದೆ. ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ಪಾಪಗಳು ಯೋಗಾಗ್ನಿಯಲ್ಲಿ ಭಸ್ಮವಾಗುತ್ತದೆ. ಇದಕ್ಕೆ ಯೋಗಾಗ್ನಿ ಎಂದು ಹೇಳಲಾಗುತ್ತದೆ. ನೀವು ಸತ್ಯ-ಸತ್ಯ ಬ್ರಾಹ್ಮಣರಾಗಿದ್ದೀರಿ. ನೀವು ಕಾಮ ಚಿತೆಯಿಂದ ಇಳಿದು ಜ್ಞಾನಚಿತೆಯ ಮೇಲೆ ಕುಳಿತುಕೊಳ್ಳುತ್ತೀರಿ, ಇದನ್ನು ಒಬ್ಬ ತಂದೆಯೇ ತಿಳಿಸುತ್ತಾರೆ. ಕ್ರೈಸ್ತ, ಬುದ್ಧ, ಮೊದಲಾದವರೆಲ್ಲರೂ ಒಬ್ಬ ತಂದೆಯನ್ನೇ ನೆನಪು ಮಾಡುತ್ತಾರೆ. ಆದರೆ ಅವರನ್ನು ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಈಗ ನೀವು ಆಸ್ತಿಕರಾಗಿದ್ದೀರಿ. ನೀವು ತಂದೆಯ ಮೂಲಕ ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿದ್ದೀರಿ. ಋಷಿ-ಮುನಿಗಳೆಲ್ಲರೂ ನೇತಿ-ನೇತಿ ನಮಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದರು. ಸ್ವರ್ಗವು ಸತ್ಯ ಖಂಡವಾಗಿದೆ. ಅಲ್ಲಿ ದುಃಖದ ಹೆಸರೇ ಇಲ್ಲ. ಇಲ್ಲಿ ಬಹಳ ದುಃಖವಿದೆ, ಆಯಸ್ಸು ಬಹಳ ಕಡಿಮೆ ಇದೆ. ದೇವತೆಗಳಿಗೆ ದೀರ್ಘಾಯಸ್ಸಿರುತ್ತದೆ. ಅವರು ಪವಿತ್ರ ಯೋಗಿಗಳಾಗಿರುತ್ತಾರೆ, ಇಲ್ಲಿ ಅಪವಿತ್ರ ಭೋಗಿಗಳಿದ್ದಾರೆ. ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಆಯಸ್ಸು ಕಡಿಮೆ ಆಗುತ್ತಾ ಹೋಗುತ್ತದೆ, ಅಕಾಲ ಮೃತ್ಯುವೂ ಆಗುತ್ತದೆ. ತಂದೆಯು ನಿಮ್ಮನ್ನು ಈ ರೀತಿ ಮಾಡುತ್ತಾರೆ, ನೀವು 21 ಜನ್ಮಗಳವರೆಗೆ ಎಂದೂ ರೋಗಿಯಾಗುವುದಿಲ್ಲ ಅಂದಮೇಲೆ ಇಂತಹ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಲ್ಲವೆ. ಆತ್ಮವು ಎಷ್ಟೊಂದು ಬುದ್ಧಿವಂತನಾಗಬೇಕು. ತಂದೆಯು ಇಂತಹ ಆಸ್ತಿಯನ್ನು ಕೊಡುತ್ತಾರೆ, ಅಲ್ಲಿ ಯಾವುದೇ ದುಃಖವಿರುವುದಿಲ್ಲ. ನೀವು ಅಳುವುದು-ಕೂಗಾಡುವುದು ಎಲ್ಲವೂ ನಿಂತುಹೋಗುತ್ತದೆ. ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಇದೂ ಡ್ರಾಮಾ ಆಗಿದೆ. ತಂದೆಯು ಕರ್ಮ-ಅಕರ್ಮ-ವಿಕರ್ಮದ ಗತಿಯನ್ನೂ ತಿಳಿಸುತ್ತಾರೆ. ಕೃಷ್ಣನ ಆತ್ಮವು 84 ಜನ್ಮಗಳನ್ನು ಭೋಗಿಸಿ, ಈಗ ಅಂತ್ಯದಲ್ಲಿ ಅದೇ ಜ್ಞಾನವನ್ನು ಕೇಳುತ್ತಿದೆ. ಬ್ರಹ್ಮನ ಹಗಲು ಮತ್ತು ರಾತ್ರಿ ಎಂದು ಗಾಯನವಿದೆ. ಬ್ರಹ್ಮಾರವರ ಹಗಲು-ರಾತ್ರಿಯೇ ಬ್ರಾಹ್ಮಣರ ಹಗಲು-ರಾತ್ರಿಯಾಗಿದೆ. ಈಗ ನಿಮ್ಮದು ದಿನವಾಗಲಿದೆ. ಮಹಾಶಿವರಾತ್ರಿ ಎಂದು ಹೇಳುತ್ತಾರೆ, ಈಗ ಭಕ್ತಿಯ ರಾತ್ರಿಯು ಮುಕ್ತಾಯವಾಗಿ ಜ್ಞಾನದ ಉದಯವಾಗುತ್ತದೆ. ಈಗ ಸಂಗಮವಾಗಿದೆ, ನೀವು ಈಗ ಪುನಃ ಸ್ವರ್ಗವಾಸಿಗಳಾಗುತ್ತಿದ್ದೀರಿ. ಅಂಧಕಾರ ರಾತ್ರಿಯಲ್ಲಿ ಮೋಸ ಹೋದಿರಿ, ಹಣೆಯನ್ನೂ ಸವೆಸಿದಿರಿ, ಹಣವನ್ನು ಕಳೆದುಕೊಂಡಿರಿ. ಆದ್ದರಿಂದ, ಈಗ ನಾನು ನಿಮ್ಮನ್ನು ಶಾಂತಿಧಾಮ ಮತ್ತು ಸುಖಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ತಂದೆಯು ತಿಳಿಸುತ್ತಾರೆ. ನೀವು ಸುಖಧಾಮದ ನಿವಾಸಿಗಳಾಗಿದ್ದೀರಿ. 84 ಜನ್ಮಗಳ ನಂತರ ದುಃಖ ಧಾಮದಲ್ಲಿ ಬಂದಿದ್ದೀರಿ. ಬಾಬಾ, ಈ ಹಳೆಯ ಪ್ರಪಂಚದಲ್ಲಿ ಬನ್ನಿ ಎಂದು ಕರೆಯುತ್ತೀರಿ. ಇದು ನಿಮ್ಮ ಪ್ರಪಂಚವಲ್ಲ, ಈಗ ನೀವು ಯೋಗಬಲದಿಂದ ತಮ್ಮ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೀರಿ. ತಾವು ಈಗ ಡಬಲ್ ಅಹಿಂಸಕರಾಗಬೇಕಾಗಿದೆ. ಕಾಮ ವಿಕಾರವನ್ನು ನಡೆಸಬಾರದು, ಜಗಳ-ಕಲಹವನ್ನೂ ಮಾಡಬಾರದು. ನಾನು ಪ್ರತಿ 5000 ವರ್ಷಗಳ ನಂತರ ಬರುತ್ತೇನೆ. ಈ ಕಲ್ಪವು 5000 ವರ್ಷಗಳದ್ದಾಗಿದೆ, ಲಕ್ಷಾಂತರ ವರ್ಷಗಳದಲ್ಲ. ಒಂದುವೇಳೆ ಲಕ್ಷಾಂತರ ವರ್ಷಗಳದ್ದಾಗಿದ್ದರೆ ಇಲ್ಲಿ ಬಹಳಷ್ಟು ಜನಸಂಖ್ಯೆ ಆಗಿಬಿಡುತ್ತಿತ್ತು. ಮನುಷ್ಯರು ಅಸತ್ಯವನ್ನು ಹೇಳುತ್ತಿದ್ದಾರೆ, ಆದ್ದರಿಂದ ನಾನು ಕಲ್ಪ-ಕಲ್ಪವು ಬರುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ನಾಟಕದಲ್ಲಿ ನನ್ನ ಪಾತ್ರವಿದೆ. ಪಾತ್ರವಿಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ. ನಾನೂ ಸಹ ನಾಟಕದ ಬಂಧನದಲ್ಲಿ ಇದ್ದೇನೆ. ಸಮಯದಲ್ಲಿ ಬರುತ್ತೇನೆ. ಮನ್ಮನಾಭವ ಅಂದರೆ ಇದರ ಅರ್ಥವನ್ನು ಯಾರೂ ತಿಳಿಸಿಕೊಡುವುದಿಲ್ಲ. ತಂದೆ ಹೇಳುತ್ತಾರೆ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ ಆಗ ಎಲ್ಲರೂ ಪಾವನರಾಗಿಬಿಡುತ್ತೀರಿ. ಮಕ್ಕಳು ತಂದೆಯನ್ನು ನೆನಪು ಮಾಡಲು ಶ್ರಮ ಪಡುತ್ತಾ ಇರುತ್ತಾರೆ.

ಇದು ಈಶ್ವರೀಯ ವಿಶ್ವವಿದ್ಯಾಲಯವಾಗಿದೆ, ಇಂತಹ ವಿಶ್ವವಿದ್ಯಾಲಯ ಬೇರೆ ಯಾವುದೂ ಇಲ್ಲ. ಇಲ್ಲಿ ಈಶ್ವರ ತಂದೆಯು ಬಂದು ಇಡೀ ವಿಶ್ವವನ್ನು ಪರಿವರ್ತನೆ ಮಾಡುತ್ತಾರೆ. ನರಕದಿಂದ ಸ್ವರ್ಗವನ್ನಾಗಿ ಮಾಡುತ್ತಾರೆ, ಆ ಸ್ವರ್ಗದಲ್ಲಿ ನೀವು ರಾಜ್ಯವನ್ನು ಮಾಡುತ್ತೀರಿ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಆಗ ತಮೋಪ್ರಧಾನರಿಂದ ಸತೋಪ್ರಧಾನರಾಗಿಬಿಡುತ್ತೀರಿ. ಇವರು ತಂದೆಯ ಭಾಗ್ಯಶಾಲಿ ರಥವಾಗಿದ್ದಾರೆ. ಇವರಲ್ಲಿ ತಂದೆಯು ಬಂದು ಪ್ರವೇಶ ಮಾಡುತ್ತಾರೆ. ಶಿವ ಜಯಂತಿಯನ್ನು ಯಾರೂ ತಿಳಿದುಕೊಂಡಿಲ್ಲ. ಅವರಂತೂ ಪರಮಾತ್ಮ ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳುತ್ತಾರೆ. ಯಾವುದೇ ವಸ್ತುವೂ ನಾಮ-ರೂಪದಿಂದ ಭಿನ್ನವಾಗಿರುವುದಿಲ್ಲ. ಇದು ಭೂಮಿಯಾಗಿದೆ ಎಂದು ಹೇಳುತ್ತಾರೆಂದರೆ, ಇದೂ ಸಹ ಹೆಸರಾಯಿತಲ್ಲವೆ. ಭಲೆ ಆಕಾಶವಿದೆ ಆದರೆ ಅದು ಹೆಸರಾಗಿದೆ, ಅಂದಮೇಲೆ ತಂದೆಗೂ ಹೆಸರಿದೆ ಕಲ್ಯಾಣಕಾರಿ. ಭಕ್ತಿಮಾರ್ಗದಲ್ಲಿ ಇವರಿಗೆ ಅನೇಕ ಹೆಸರುಗಳನ್ನಿಟ್ಟಿದ್ದಾರೆ. ಬಬುಲ್ನಾಥ ಎಂದು ಹೇಳುತ್ತಾರೆ, ಅವರು ಬಂದು ಕಾಮದ ಕತ್ತಿಯಿಂದ ಬಿಡಿಸಿ ಪಾವನರನ್ನಾಗಿ ಮಾಡುತ್ತಾರೆ. ನಿವೃತ್ತಿ ಮಾರ್ಗದವರು ಬ್ರಹ್ಮವನ್ನೇ ಪರಮಾತ್ಮನೆಂದು ತಿಳಿಯುತ್ತಾರೆ, ಅವರನ್ನೇ ನೆನಪು ಮಾಡುತ್ತಾರೆ. ಬ್ರಹ್ಮ್ ಯೋಗಿ, ತತ್ವಯೋಗಿಗಳೆಂದು ಕರೆಸಿಕೊಳ್ಳುತ್ತಾರೆ ಆದರೆ ಅದು ಇರುವಂತಹ ಸ್ಥಾನವಾಯಿತು. ಅದಕ್ಕೆ ಬ್ರಹ್ಮಾಂಡವೆಂದು ಹೇಳಲಾಗುತ್ತದೆ. ಅವರು ಬ್ರಹ್ಮ ತತ್ವವನ್ನೇ ಭಗವಂತನೆಂದು ಕರೆಯುತ್ತಾರೆ, ನಾವು ಅದರಲ್ಲಿ ಲೀನವಾಗಿಬಿಡುತ್ತೇವೆಂದು ತಿಳಿಯುತ್ತಾರೆ. ಅಂದರೆ ಆತ್ಮವನ್ನು ವಿನಾಶಿಯನ್ನಾಗಿ ಮಾಡಿಬಿಡುತ್ತಾರೆ. ನಾನೇ ಬಂದು ಸರ್ವರ ಸದ್ಗತಿಯನ್ನು ಮಾಡುತ್ತೇನೆ ಎಂದು ತಂದೆಯು ತಿಳಿಸುತ್ತಾರೆ ಆದ್ದರಿಂದ ಶಿವಜಯಂತಿಯು ವಜ್ರಸಮಾನವಾಗಿದೆ. ಉಳಿದೆಲ್ಲಾ ಜಯಂತಿಗಳು ಕವಡೆಯ ಸಮಾನವಾಗಿದೆ. ಶಿವತಂದೆಯೇ ಎಲ್ಲರ ಸದ್ಗತಿ ಮಾಡುತ್ತಾರೆ, ಅಂದಮೇಲೆ ಅವರು ವಜ್ರಸಮಾನರಾಗಿದ್ದಾರೆ, ಅವರೇ ನಿಮ್ಮನ್ನು ಸ್ವರ್ಣಿಮಯುಗದಲ್ಲಿ ಕರೆದುಕೊಂಡು ಹೋಗುತ್ತಾರೆ. ಈ ಜ್ಞಾನವನ್ನು ನಿಮಗೆ ತಂದೆಯೇ ಬಂದು ಓದಿಸುತ್ತಾರೆ. ಇದರಿಂದ ನೀವು ದೇವೀ-ದೇವತೆಗಳಾಗುತ್ತೀರಿ ನಂತರ ಈ ಜ್ಞಾನವು ಪ್ರಾಯಃಲೋಪವಾಗಿಬಿಡುತ್ತದೆ. ಈ ಲಕ್ಷ್ಮೀ-ನಾರಯಣರಲ್ಲಿ ರಚಯಿತ ಮತ್ತು ರಚನೆಯ ಜ್ಞಾನವಿಲ್ಲ.

ಮಕ್ಕಳು ಈ ಗೀತೆಯನ್ನು ಕೇಳಿದಿರಿ, ಬಾಬಾ ನಮ್ಮನ್ನು ಇಂತಹ ಸ್ಥಳದಲ್ಲಿ ಕರೆದುಕೊಂಡು ಹೋಗಿ ಎಲ್ಲಿ ಶಾಂತಿ ಮತ್ತು ಸುಖವಿರುತ್ತದೆ ಎಂದು ಹೇಳುತ್ತಾರೆ. ಅದು ಶಾಂತಿಧಾಮವಾಗಿದೆ, ಇನ್ನೊಂದು ಸುಖಧಾಮವಾಗಿದೆ ಅಲ್ಲಿ ಅಕಾಲ ಮೃತ್ಯುವಾಗುವುದಿಲ್ಲ ಅಂದಾಗ ಮಕ್ಕಳನ್ನು ಆ ಸುಖ-ಶಾಂತಿಯ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿ ಕ್ಲಾಸ್
ಈಗ ನಿಮ್ಮ ಸೂರ್ಯವಂಶಿ, ಚಂದ್ರವಂಶಿ ಎರಡೂ ಮನೆತನಗಳು ಆಗುತ್ತವೆ. ಎಷ್ಟು ನೀವು ತಿಳಿಯುವಿರಿ ಮತ್ತು ಪವಿತ್ರರಾಗುವಿರಿ ಅಷ್ಟು ಬೇರೆ ಯಾರೂ ತಿಳಿದುಕೊಳ್ಳಲಾಗುವುದಿಲ್ಲ, ಪವಿತ್ರರಾಗಿಯು ಇರುವುದಿಲ್ಲ. ಬಾಕಿ ಕೇಳತ್ತಾರೆ ತಂದೆ ಬಂದಿದ್ದಾರೆ ಎಂದು, ಎಂದಮೇಲೆ ತಂದೆಯನ್ನು ನೆನಪು ಮಾಡಲು ತೊಡಗುವರು. ಅಲ್ಲದೆ ನೀವು ಮುಂದೆ ಹೋಗಿ ಇದನ್ನೂ ನೋಡುವಿರಿ-ಲಕ್ಷಾಂತರ, ಕೋಟ್ಯಾಂತರ ಜನರು ತಿಳಿದುಕೊಳ್ಳುತ್ತಾ ಹೋಗುವರು. ವಾಯುಮಂಡಲವೇ ಆ ರೀತಿ ಆಗುವುದು. ಮುಂದಿನ ಯುದ್ಧದಲ್ಲಿ ಎಲ್ಲರೂ ಹತಾಶರಾಗಿ ಆಗಿಬಿಡುವರು. ಎಲ್ಲರಿಗೂ ಟಚ್ ಆಗುವುದು. ನಿಮ್ಮ ಧ್ವನಿಯೂ ಸಹ ಆಗುವುದು. ಸ್ವರ್ಗದ ಸ್ಥಾಪನೆಯಾಗುತ್ತಿದೆ. ಬಾಕಿ ಎಲ್ಲರ ಮೃತ್ಯು ತಯಾರಾಗಿದೆ. ಆದರೆ, ಆ ಸಮಯ ಈ ರೀತಿ ಇರುವುದು ಯಾರಿಗೂ ತೂಕಡಿಸಲೂ ಸಹ ಸಮಯವಿರುವುದಿಲ್ಲ. ಮುಂದೆ ಹೋದಂತೆ ಬಹಳ ಏನಾಗುವುದು ತಿಳಿದುಕೊಳ್ಳುವರು, ಹೀಗೂ ಅಲ್ಲ- ಇದೆಲ್ಲವೂ ಆ ಸಮಯದಲ್ಲಿ ಆಗುವುದು ಎಂದು. ಕೆಲವರು ಮರಣವನ್ನೂ ಹೊಂದುವರು. ಏನು ಕಲ್ಪ-ಕಲ್ಪವಾಗುವುದೊ ಅದೇ ಆಗುವುದು. ಆ ಸಮಯದಲ್ಲಿ ಒಬ್ಬ ತಂದೆಯ ನೆನಪಿನಲ್ಲಿರುವಿರಿ. ಧ್ವನಿಯೂ ಸಹ ಕಡಿಮೆಯಾಗಿ ಬಿಡುವುದು. ನಂತರ ತಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಲು ತೊಡಗುವಿರಿ. ನೀವೆಲ್ಲರೂ ಸಾಕ್ಷಿಯಾಗಿ ನೋಡುವಿರಿ. ಬಹಳ ಭಯಾನಕ ಘಟನೆಗಳು ಆಗುತ್ತಿರುವುದು. ಎಲ್ಲರಿಗೂ ತಿಳಿದು ಹೋಗುವುದು ಈಗ ವಿನಾಶವಾಗುವುದಿದೆ ಎಂದು. ಪ್ರಪಂಚ ಬದಲಾಗಬೇಕು. ವಿವೇಕ ಹೇಳುವುದು ವಿನಾಶ ಯಾವಾಗ ಆಗುವುದೆಂದರೆ ಯಾವಾಗ ಬಾಂಬ್ಸ್ ಗಳು ಬೀಳುತ್ತವೆ ಆಗ. ಈಗ ಪರಸ್ಪರ ಹೇಳುತ್ತಿರುತ್ತಾರೆ ಕಂಡೀಷನ್ ಹಾಕಿ, ವಚನ ಕೊಡಿ ನಾವು ಬಾಂಬ್ಸ್ ಹಾಕುವುದಿಲ್ಲಾ ಎಂದು. ಆದರೆ ಈ ಎಲ್ಲಾ ವಸ್ತುಗಳು ಮಾಡಿರುವುದೇ ವಿನಾಶಕ್ಕಾಗಿ.

ನೀವು ಮಕ್ಕಳಿಗೆ ಬಹಳ ಖುಶಿ ಇರಬೇಕು. ನೀವು ತಿಳಿದಿರುವಿರಿ ಹೊಸ ಪ್ರಪಂಚ ತಯಾರಾಗುತ್ತಿದೆ. ತಂದೆಯೇ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವರೆಂದು ತಿಳಿದಿರುವಿರಿ. ಅಲ್ಲಿ ದುಃಖದ ಹೆಸರು ಗುರುತೂ ಸಹಾ ಇರುವುದಿಲ್ಲ. ಅದರ ಹೆಸರೇ ಆಗಿದೆ ಸ್ವರ್ಗ(ಪ್ಯಾರಡೈಸ್). ಹೇಗೆ ನಿಮಗೆ ನಿಶ್ಚಯವಿದೆ ಹಾಗೇ ಮುಂದೆ ಹೋಗುತ್ತಾ ಬಹಳ ಜನರಿಗೆ ಆಗುವುದು. ಏನಾಗುವುದು ಎಂದು ಅವರ ಅನುಭವವನ್ನು ಪಡೆಯಬೇಕು. ಮುಂದೆ ಹೋದಂತೆ ಬಹಳ ಪಡೆಯುವಿರಿ. ಅಂತ್ಯದ ಸಮಯದಲ್ಲಿ ನೆನಪಿನ ಯಾತ್ರೆಯಲ್ಲಿಯೂ ಸಹ ಬಹಳಷ್ಟು ಇರುತ್ತಾರೆ. ಈಗಂತೂ ಸಮಯ ಇನ್ನೂ ಇದೆ, ಪುರುಷಾರ್ಥ ಪೂರ್ತಿ ಮಾಡದೇ ಹೋದರೆ, ಪದವಿ ಕಡಿಮೆಯಾಗಿಬಿಡುವುದು. ಪುರುಷಾರ್ಥ ಮಾಡುವುದರಿಂದ ಪದವಿಯೂ ಚೆನ್ನಾಗಿರುವುದು ಸಿಗುವುದು. ಆ ಸಮಯದಲ್ಲಿ ನಿಮ್ಮ ಅವಸ್ಥೆಯೂ ಸಹ ಬಹಳ ಚೆನ್ನಾಗಿರುವುದು. ಸಾಕ್ಷಾತ್ಕಾರವನ್ನೂ ಸಹ ಮಾಡುವಿರಿ. ಕಲ್ಪ-ಕಲ್ಪ ಹೇಗೆ ವಿನಾಶ ಆಗಿತ್ತು, ಅದೇ ರೀತಿ ಆಗುವುದು. ಯಾರಿಗೆ ನಿಶ್ಚಯ ಇರುವುದು, ಚಕ್ರದ ಜ್ಞಾನ ಇರುವುದು ಅವರು ಖುಷಿಯಲ್ಲಿರುತ್ತಾರೆ. ಒಳ್ಳೆಯದು. ಆತ್ಮೀಯ ಮಕ್ಕಳೇ ಗುಡ್ ನೈಟ್.

ಧಾರಣೆಗಾಗಿ ಮುಖ್ಯಸಾರ-
1. ಡಬಲ್ ಅಹಿಂಸಕರಾಗಿ ಯೋಗಬಲದಿಂದ ಈ ನರಕವನ್ನು ಸ್ವರ್ಗವನ್ನಾಗಿ ಮಾಡಬೇಕು. ತಮೋಪ್ರಧಾನರಿಂದ ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕು.

2. ಒಬ್ಬ ತಂದೆಯನ್ನು ಸಂಪೂರ್ಣ ಅನುಸರಿಸಬೇಕು. ಸತ್ಯ-ಸತ್ಯ ಬ್ರಾಹ್ಮಣರಾಗಿ ಯೋಗಾಗ್ನಿಯಿಂದ ವಿಕರ್ಮಗಳನ್ನು ಭಸ್ಮ ಮಾಡಬೇಕು. ಎಲ್ಲರನ್ನೂ ಕಾಮಚಿತೆಯಿಂದ ಇಳಿಸಿ ಜ್ಞಾನಚಿತೆಯ ಮೇಲೆ ಕುಳ್ಳರಿಸಬೇಕು.

ವರದಾನ:
ನಿಸ್ವಾರ್ಥ ಮತ್ತು ನಿರ್ವಿಕಲ್ಪ ಸ್ಥಿತಿಯಿಂದ ಸೇವೆ ಮಾಡುವಂತಹ ಸಫಲತಾ ಮೂರ್ತಿ ಭವ

ಸೇವೆಯಲ್ಲಿ ಸಫಲತೆಯ ಆಧಾರ ನಿಮ್ಮ ನಿಸ್ವಾರ್ಥ ಮತ್ತು ನಿರ್ವಿಕಲ್ಪ ಸ್ಥಿತಿಯಾಗಿದೆ. ಈ ಸ್ಥಿತಿಯಲ್ಲಿ ಇರುವವರು ಸೇವೆ ಮಾಡುತ್ತಾ ಸ್ವಯಂ ಕೂಡಾ ಸಂತುಷ್ಠ ಮತ್ತು ಹರ್ಷಿತವಾಗಿರುತ್ತಾ ಮತ್ತು ಅವರಿಂದ ಬೇರೆಯವರೂ ಸಹಾ ಸಂತುಷ್ಠವಾಗಿರುತ್ತಾರೆ. ಸೇವೆಯಲ್ಲಿ ಸಂಗಟನೆ ಇರುತ್ತೆ ಮತ್ತು ಸಂಗಟನೆಯಲ್ಲಿ ಬಿನ್ನ-ಬಿನ್ನ ವಿಚಾರ ವಿರುತ್ತೆ. ಅದರೆ ಅನೇಕತೆಯಲ್ಲಿ ತಬ್ಬಿಬ್ಬಾಗ ಬೇಡಿ. ಹೀಗೆ ಯೋಚಿಸ ಬೇಡಿ ಯಾರದನ್ನು ಒಪ್ಪಬೇಕು, ಯಾರದನ್ನು ಒಪ್ಪ ಬಾರದು. ನಿಸ್ವಾರ್ಥ ಮತ್ತು ನಿರ್ವಿಕಲ್ಪ ಭಾವದಿಂದ ನಿರ್ಣಯ ತೆಗೆದುಕೊಳ್ಳಿ ಆಗ ಯಾವುದೇ ವ್ಯರ್ಥ ಸಂಕಲ್ಪ ಬರುವುದಿಲ್ಲ ಮತ್ತು ಸಫಲತಾ ಮೂರ್ತಿಆಗಿಬಿಡುವಿರಿ.

ಸ್ಲೋಗನ್:
ಈಗ ಸಕಾಶದ ಮೂಲಕ ಬುದ್ಧಿಯನ್ನು ಪರಿವರ್ತನೆ ಮಾಡುವ ಸೇವೆಯನ್ನು ಪ್ರಾರಂಭಮಾಡಿ.