23.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಂದೆಯು ಯಾವ ಶಿಕ್ಷಣವನ್ನು ಕೊಡುತ್ತಾರೆಯೋ ಅದನ್ನು ಜಾರಿಗೆ ತನ್ನಿ, ನೀವು ಪ್ರತಿಜ್ಞೆ ಮಾಡಿ, ತಮ್ಮ ವಚನವನ್ನು ಹಿಂತೆಗೆದುಕೊಳ್ಳಬಾರದು, ಆಜ್ಞೆಯ ಉಲ್ಲಂಘನೆ ಮಾಡಬಾರದು"

ಪ್ರಶ್ನೆ:
ನಿಮ್ಮ ವಿದ್ಯೆಯ ಸಾರ ಏನಾಗಿದೆ? ನೀವು ಯಾವ ಅಭ್ಯಾಸವನ್ನು ಅವಶ್ಯವಾಗಿ ಮಾಡಬೇಕಾಗಿದೆ?

ಉತ್ತರ:
ವಾನಪ್ರಸ್ಥದಲ್ಲಿ ಹೋಗುವುದು ನಿಮ್ಮ ವಿದ್ಯೆಯಾಗಿದೆ. ವಾಣಿಯಿಂದ ದೂರ ಹೋಗುವುದು ಈ ವಿದ್ಯೆಯ ಸಾರವಾಗಿದೆ. ತಂದೆಯೇ ವಾಪಸ್ ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ನೀವು ಮಕ್ಕಳು ಮನೆಗೆ ಹೋಗುವುದಕ್ಕೆ ಮೊದಲು ಸತೋಪ್ರಧಾನರಾಗಬೇಕಾಗಿದೆ. ಇದಕ್ಕಾಗಿ ಏಕಾಂತದಲ್ಲಿ ಹೋಗಿ ಆತ್ಮಾಭಿಮಾನಿ ಆಗುವ ಅಭ್ಯಾಸ ಮಾಡಿ, ಅಶರೀರಿ ಆಗುವ ಅಭ್ಯಾಸವೇ ಆತ್ಮನನ್ನು ಸತೋಪ್ರಧಾನವನ್ನಾಗಿ ಮಾಡುತ್ತದೆ.

ಓಂ ಶಾಂತಿ.
ತಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡುವುದರಿಂದ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿಬಿಡುತ್ತೀರಿ ಮತ್ತು ವಿಶ್ವದ ಮಾಲೀಕರಾಗಿಬಿಡುತ್ತೀರಿ. ಕಲ್ಪ-ಕಲ್ಪವೂ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ ಮತ್ತು 84 ಜನ್ಮಗಳಲ್ಲಿ ತಮೋಪ್ರಧಾನರಾಗುತ್ತೀರಿ. ತಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂದು ತಂದೆಯು ಶಿಕ್ಷಣ ನೀಡುತ್ತಾರೆ. ಭಕ್ತಿ ಮಾರ್ಗದಲ್ಲೂ ಸಹ ನೀವು ನೆನಪು ಮಾಡುತ್ತಿದ್ದೀರಿ ಆದರೆ ಆ ಸಮಯದಲ್ಲಿ ಮಂದಬುದ್ಧಿಯ ಜ್ಞಾನವಿತ್ತು. ಈಗ ಬಹಳ ಸೂಕ್ಷ್ಮ ಬುದ್ಧಿಯ ಜ್ಞಾನವಾಗಿದೆ. ನೀವು ಪ್ರತ್ಯಕ್ಷ ರೂಪದಲ್ಲಿ ತಂದೆಯನ್ನು ನೆನಪು ಮಾಡಬೇಕು. ಆತ್ಮವೂ ಸಹ ನಕ್ಷತ್ರ ಸಮಾನವಾಗಿದೆ, ತಂದೆಯು ನಕ್ಷತ್ರದ ಹಾಗೆಯೇ ಇದ್ದಾರೆ ಎಂದು ಇದನ್ನೂ ಸಹ ತಿಳಿಸಬೇಕು. ಕೇವಲ ಅವರು ಪುನರ್ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ, ನೀವು ತೆಗೆದುಕೊಳ್ಳುತ್ತೀರಿ, ಆದ್ದರಿಂದ ನೀವು ತಮೋಪ್ರಧಾನರಾಗಬೇಕಾಗುತ್ತದೆ ಮತ್ತೆ ಸತೋಪ್ರಧಾನರಾಗಲು ಶ್ರಮ ಪಡಬೇಕಾಗುತ್ತದೆ. ಮಾಯೆಯು ಘಳಿಗೆ-ಘಳಿಗೆ ಮರೆಸಿಬಿಡುತ್ತದೆ. ಈಗ ತಪ್ಪಿಲ್ಲದವರಾಗಬೇಕು, ತಪ್ಪು ಮಾಡಬಾರದು. ಈ ತಪ್ಪುಗಳ ಕಾರಣವೇ ತಮೋಪ್ರಧಾನರಾಗಿದ್ದೀರಿ, ಇನ್ನೂ ತಪ್ಪುಗಳನ್ನು ಮಾಡುತ್ತಾ ಇರುತ್ತೀರೆಂದರೆ ನೀವು ತಮೋಪ್ರಧಾನರಾಗಿಬಿಡುತ್ತೀರಿ. ತಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಿ, ಬ್ಯಾಟರಿಯನ್ನು ಚಾರ್ಜ್ ಮಾಡಿ ಎಂದು ತಂದೆಯ ಆದೇಶ ಸಿಗುತ್ತದೆ. ಆಗ ನೀವು ಸತೋಪ್ರಧಾನ ವಿಶ್ವದ ಮಾಲೀಕರಾಗುತ್ತೀರಿ. ಶಿಕ್ಷಕರಂತೂ ಎಲ್ಲರಿಗೆ ಓದಿಸುತ್ತಾರೆ ಆದರೆ ವಿದ್ಯಾರ್ಥಿಗಳಲ್ಲಿ ನಂಬರ್ವಾರಾಗಿ ತೇರ್ಗಡೆ ಆಗುತ್ತಾರೆ ಮತ್ತೆ ನಂಬರ್ವಾರಾಗಿ ಸಂಪಾದನೆ ಮಾಡುತ್ತಾರೆ. ನೀವೂ ಸಹ ನಂಬರ್ವಾರ್ ಆಗಿ ಉತ್ತೀರ್ಣರಾಗುತ್ತೀರೆಂದರೆ ಮತ್ತೆ ನಂಬರ್ವಾರ್ ಪದವಿ ಪಡೆಯುತ್ತಾರೆ. ವಿಶ್ವದ ಮಾಲೀಕರೆಲ್ಲಿ, ಪ್ರಜೆಗಳು, ದಾಸ-ದಾಸಿಯರೆಲ್ಲಿ! ಯಾವ ವಿದ್ಯಾರ್ಥಿಗಳು ಒಳ್ಳೆಯ ಸುಪುತ್ರರು, ಆಜ್ಞಾಕಾರಿಗಳು, ಪ್ರಾಮಾಣಿಕರು, ವಿಧೇಯರಾಗಿರುತ್ತಾರೆಯೋ ಅವರು ಅವಶ್ಯವಾಗಿ ಶಿಕ್ಷಕರ ಮತದಂತೆ ನಡೆಯುತ್ತಾರೆ, ರಿಜಿಸ್ಟರ್ ಎಷ್ಟು ಚೆನ್ನಾಗಿರುತ್ತದೆಯೋ ಅಷ್ಟು ಹೆಚ್ಚಿನ ಅಂಕಗಳು ಸಿಗುತ್ತವೆ. ಆದ್ದರಿಂದ ತಂದೆಯೂ ಸಹ ಮಕ್ಕಳೇ ತಪ್ಪುಗಳನ್ನು ಮಾಡದಿರಿ ಅಥವಾ ಕಲ್ಪದ ಹಿಂದೆಯೂ ಅನುತ್ತೀರ್ಣರಾಗಿದ್ದೇವೆ ಎಂದು ತಿಳಿಯಬೇಡಿ ಎಂಬುದು ಮಕ್ಕಳಿಗೆ ಪದೇ-ಪದೇ ತಿಳಿಸುತ್ತಾರೆ. ನಾವು ಸರ್ವೀಸ್ ಮಾಡಿಲ್ಲವೆಂದರೆ ಅವಶ್ಯವಾಗಿ ಕಲ್ಪದ ಹಿಂದೆಯೂ ಅನುತ್ತೀರ್ಣರಾಗಿರುತ್ತೇವೆ ಎಂದು ಅನೇಕರಿಗೆ ಇದು ಮನಸ್ಸಿನಲ್ಲಿ ಬರುತ್ತದೆ. ತಂದೆಯು ಎಚ್ಚರಿಕೆ ನೀಡುತ್ತಿರುತ್ತಾರೆ, ನೀವು ಸತ್ಯಯುಗೀ ಸತೋಪ್ರಧಾನರಿಂದ ಕಲಿಯುಗೀ ತಮೋಪ್ರಧಾನರಾಗಿದ್ದೀರಿ ಮತ್ತೆ ವಿಶ್ವದ ಇತಿಹಾಸ, ಭೂಗೋಳವು ಪುನರಾವರ್ತನೆ ಆಗುತ್ತದೆ. ಸತೋಪ್ರಧಾನರಾಗಲು ಬಹಳ ಸಹಜ ಮಾರ್ಗವನ್ನು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ನೀವು ಏರುತ್ತಾ-ಏರುತ್ತಾ ಸತೋಪ್ರಧಾನರಾಗಿಬಿಡುತ್ತೀರಿ. ನಿಧಾನ-ನಿಧಾನವಾಗಿ ಮೇಲೇರುತ್ತೀರಿ ಆದ್ದರಿಂದ ಮರೆಯಬೇಡಿ, ಆದರೆ ಮಾಯೆ ಮರೆಸಿಬಿಡುತ್ತದೆ. ಅವಿಧೇಯರನ್ನಾಗಿ ಮಾಡುತ್ತದೆ. ತಂದೆಯು ಯಾವ ಸಲಹೆಯನ್ನು ನೀಡುತ್ತಾರೆಯೋ ಅದನ್ನು ಒಪ್ಪುತ್ತಾರೆ, ಪ್ರತಿಜ್ಞೆ ಮಾಡುತ್ತಾರೆ ಆದರೆ ಅದರಂತೆ ನಡೆಯುವುದಿಲ್ಲ. ಆದ್ದರಿಂದ ಆಜ್ಞೆಯ ಉಲ್ಲಂಘನೆ ಮಾಡಿ ತಮ್ಮ ವಚನದಿಂದ ಹಿಂತಿರುಗುವವರು ಎಂದು ತಂದೆಯು ಹೇಳುತ್ತಾರೆ. ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ ಮೇಲೆ ಜಾರಿಗೆ ತರಬೇಕಾಗುತ್ತದೆ. ಬೇಹದ್ದಿನ ತಂದೆ ಎಂತಹ ಶಿಕ್ಷಣವನ್ನು ಕೊಡುತ್ತಾರೋ, ಆ ಶಿಕ್ಷಣವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಅವಶ್ಯವಾಗಿ ಪರಿವರ್ತನೆಯೂ ಆಗಬೇಕಾಗಿದೆ. ಚಿತ್ರಗಳು ಎಷ್ಟು ಚೆನ್ನಾಗಿವೆ, ಬ್ರಹ್ಮಾವಂಶಿಯರಾಗಿ ನಂತರ ವಿಷ್ಣುವಂಶಿಯರಾಗುತ್ತೀರಿ. ಇದು ಹೊಸ ಈಶ್ವರೀಯ ಭಾಷೆಯಾಗಿದೆ. ಇದನ್ನು ಅರಿತುಕೊಳ್ಳಬೇಕಾಗಿದೆ. ಈ ಆತ್ಮಿಕ ಜ್ಞಾನವನ್ನು ಯಾರೂ ಕೊಡುವುದಿಲ್ಲ, ಕೆಲಕೆಲವು ಸಂಸ್ಥೆಗಳು ಸ್ಥಾಪನೆಯಾಗಿವೆ. ಅವರೂ ಸಹ ಆಧ್ಯಾತ್ಮಿಕ ಸಂಸ್ಥೆ ಎಂದು ಹೆಸರು ಇಟ್ಟಿದ್ದಾರೆ ಆದರೆ, ನಿಮ್ಮ ಸಂಸ್ಥೆ ವಿನಃ ಮತ್ತ್ಯಾವುದೇ ಆಧ್ಯಾತ್ಮಿಕ ಸಂಸ್ಥೆ ಇರಲು ಸಾಧ್ಯವಿಲ್ಲ. ಅನೇಕರು ಇದನ್ನು ನಕಲು ಮಾಡುತ್ತಾರೆ. ಇದು ಹೊಸ ಮಾತಾಗಿದೆ. ನೀವು ಕೆಲವರೇ ಇದ್ದೀರಿ. ನಿಮ್ಮ ವಿನಃ ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಈಗ ಪೂರ್ಣ ವೃಕ್ಷವು ನಿಂತಿದೆ, ಈಗ ಅದರ ಬುಡವೇ ಇಲ್ಲ ಮತ್ತು ಅದರ ಬುಡವು ಎದ್ದು ನಿಲ್ಲುತ್ತದೆ, ಉಳಿದ ಕೊಂಬೆ-ರೆಂಬೆಗಳು ಉಳಿಯುವುದಿಲ್ಲ, ಎಲ್ಲವೂ ಸಮಾಪ್ತಿ ಆಗುತ್ತದೆ. ಬೇಹದ್ದಿನ ತಂದೆಯೇ ಬೇಹದ್ದಿನ ತಿಳುವಳಿಕೆಯನ್ನು ನೀಡುತ್ತಾರೆ. ಈಗ ಇಡೀ ಪ್ರಪಂಚದಲ್ಲಿ ರಾವಣರಾಜ್ಯವಿದೆ. ಇದು ಲಂಕೆಯಾಗಿದೆ. ಆ ಲಂಕೆಯಂತೂ ಸಮುದ್ರದ ಆಚೆ ಇದೆ, ಬೇಹದ್ದಿನ ಪ್ರಪಂಚವು ಸಮುದ್ರದಲ್ಲಿ ಇದೆ, ನಾಲ್ಕೂ ಕಡೆ ನೀರಿದೆ, ಅವು ಹದ್ದಿನ ಮಾತುಗಳಾಗಿವೆ. ತಂದೆಯು ಬೇಹದ್ದಿನ ಮಾತುಗಳನ್ನು ತಿಳಿಸುತ್ತಾರೆ, ತಂದೆಯೊಬ್ಬರೇ ತಿಳಿಸುವವರಾಗಿದ್ದಾರೆ, ಇದು ವಿದ್ಯಾಭ್ಯಾಸವಾಗಿದೆ. ನೌಕರಿಯು ಸಿಗುವವರೆಗೆ, ವಿದ್ಯಾಭ್ಯಾಸದ ಫಲಿತಾಂಶ ಬರುವವರೆಗೂ ವಿದ್ಯಾಭ್ಯಾಸದಲ್ಲಿಯೇ ತೊಡಗಿರುತ್ತಾರೆ ಅದರಲ್ಲಿಯೇ ವಿದ್ಯಾರ್ಥಿಯ ಕರ್ತವ್ಯವು ವಿದ್ಯಾಭ್ಯಾಸದಲ್ಲಿ ಗಮನವು ನೀಡುವುದಾಗಿದೆ. ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ಓಡಾಡುತ್ತಾ ಬುದ್ಧಿ ನೆನಪು ಮಾಡಬೇಕಾಗಿದೆ. ವಿದ್ಯಾರ್ಥಿಯ ಬುದ್ಧಿಯಲ್ಲಿ ವಿದ್ಯೆ ಇರುತ್ತದೆ. ಪರೀಕ್ಷೆಯ ದಿನಗಳಲ್ಲಿ ಅನುತ್ತೀರ್ಣರಾಗಬಾರದೆಂದು ಬಹಳ ದೊಡ್ಡದಾಗಿ ಪರಿಶ್ರಮ ಮಾಡುತ್ತಾರೆ. ವಿಶೇಷವಾಗಿ ಮುಂಜಾನೆಯ ಸಮಯದಲ್ಲಿ ತೋಟದಲ್ಲಿ ಹೋಗಿ ಓದುತ್ತಾರೆ ಏಕೆಂದರೆ ಮನೆಯ ವಾತಾವರಣ ಸದ್ದು-ಗದ್ದಲ ಮತ್ತು ಕೊಳಕಾಗಿರುತ್ತದೆ. ಆತ್ಮಾಭಿಮಾನಿಗಳಾಗುವ ಅಭ್ಯಾಸ ಮಾಡಿ ಆಗ ಮರೆಯುವುದಿಲ್ಲ ಎಂದು ತಂದೆಯು ಹೇಳುತ್ತಾರೆ. ಏಕಾಂತವಾದ ಸ್ಥಾನಗಳು ಬಹಳಷ್ಟು ಇವೆ. ಯಜ್ಞದ ಪ್ರಾರಂಭದಲ್ಲಿ ನೀವೆಲ್ಲಾ ಕ್ಲಾಸ್ ಮುಗಿಸಿ ಬೆಟ್ಟಗಳ ಮೇಲೆ ಹೋಗುತ್ತಿದ್ದೀರಿ. ಈಗಂತೂ ದಿನ-ಪ್ರತಿದಿನವು ಸೂಕ್ಷ್ಮವಾಗಿ ಹೋಗುತ್ತಿದೆ. ವಿದ್ಯಾರ್ಥಿಗೆ ತನ್ನ ಗುರಿ-ಧ್ಯೇಯವು ನೆನಪಿರುತ್ತದೆ. ಇದು ವಾನಪ್ರಸ್ಥ ಸ್ಥಿತಿಯಲ್ಲಿ ಹೋಗುವ ವಿದ್ಯೆಯಾಗಿದೆ. ಇದನ್ನು ಒಬ್ಬ ತಂದೆಯ ವಿನಃ ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. ಸಾಧು-ಸಂತ ಮೊದಲಾದವರು ಭಕ್ತಿಯನ್ನೇ ಕಲಿಸುತ್ತಾರೆ. ಶಬ್ದದಿಂದ ದೂರ ಹೋಗುವ ಮಾರ್ಗವನ್ನು ಒಬ್ಬ ತಂದೆಯೇ ತಿಳಿಸುತ್ತಾರೆ. ತಂದೆಯೊಬ್ಬರೇ ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಈಗ ನಿಮ್ಮದು ಬೇಹದ್ದಿನ ವಾನಪ್ರಸ್ಥ ಸ್ಥಿತಿಯಾಗಿದೆ, ಇದನ್ನು ಯಾರೂ ತಿಳಿದುಕೊಂಡಿಲ್ಲ. ಮಕ್ಕಳೇ ಈಗ ನೀವು ವಾನಪ್ರಸ್ಥಿಗಳಾಗಿದ್ದೀರಿ, ಈಗ ಪೂರ್ಣ ಪ್ರಪಂಚದ ಸ್ಥಿತಿ ವಾನಪ್ರಸ್ಥ ಸ್ಥಿತಿಯಾಗಿದೆ. ಯಾರೇ ಓದಲಿ, ಬಿಡಲಿ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ಯಾರೆಲ್ಲಾ ಆತ್ಮಗಳು ಮೂಲವತನಕ್ಕೆ ಹೋಗುವರೋ ಅವರು ತಮ್ಮ-ತಮ್ಮ ವಿಭಾಗಗಳಲ್ಲಿ ಹೊರಟುಹೋಗುತ್ತಾರೆ. ಆತ್ಮಗಳ ವೃಕ್ಷವೂ (ನಿರಾಕಾರಿ ವೃಕ್ಷ) ಸಹ ವಿಚಿತ್ರವಾಗಿ ಮಾಡಲ್ಪಟ್ಟಿದೆ. ಈ ಪೂರ್ತಿಡ್ರಾಮದ ಚಕ್ರವು ಪೂರ್ಣವಾಗಿ ನಿಖರವಾಗಿದೆ. ಸ್ವಲ್ಪವೂ ವ್ಯತ್ಯಾಸವಾಗುವುದಿಲ್ಲ. ಹೇಗೆ ಲಿವರ್ ಮತ್ತು ಸಿಲೆಂಡರ್ ಗಡಿಯಾರವಿರುತ್ತದೆಯಲ್ಲವೆ. ಲಿವರ್ ಗಡಿಯಾರವು ಸಂಪೂರ್ಣ ಸರಿಯಾಗಿರುತ್ತದೆ. ಇದರಲ್ಲಿಯೂ ಕೆಲವರ ಬುದ್ಧಿಯು ಲಿವರ್ ಗಡಿಯಾರದಂತೆ ಇರುತ್ತದೆ. ಇನ್ನೂ ಕೆಲವರದು ಸಿಲೆಂಡರ್ ಗಡಿಯಾರದಂತೆ ಇರುತ್ತದೆ. ಕೆಲವರಿಗಂತೂ ಇದು ಬುದ್ದಿಗೆ ಹಿಡಿಸುವುದೇ ಇಲ್ಲ. ಗಡಿಯಾರವು ಹೇಗೆ ನಡೆಯುವುದೇ ಇಲ್ಲವೇನೋ ಎನ್ನುವಂತೆ. ತಾವಂತೂ ಲಿವರ್ ಗಡಿಯಾರ ಆಗಬೇಕಾಗಿದೆ. ಆಗ ರಾಜಧಾನಿಯಲ್ಲಿ ಬರುತ್ತೀರಿ, ಸಿಲೆಂಡರ್ ಗಡಿಯಾರದಂತೆ ಇರುವವರು ಪ್ರಜೆಗಳಲ್ಲಿ ಹೋಗುತ್ತಾರೆ. ಈಗ ಲಿವರ್ ಗಡಿಯಾರದಂತೆ ಪುರುಷಾರ್ಥ ಮಾಡಬೇಕು. ರಾಜ್ಯ ಪದವಿಯನ್ನು ಪಡೆಯುವವರಿಗಾಗಿಯೇ ಕೋಟಿಯಲ್ಲಿ ಕೆಲವರು ಎಂದು ಹೇಳಲಾಗುತ್ತದೆ. ಅವರೇ ವಿಜಯಮಾಲೆಯಲ್ಲಿ ಪೆÇೀಣಿಸಲ್ಪಡುತ್ತಾರೆ. ಮಕ್ಕಳಿಗೆ ಗೊತ್ತಿದೆ ಖಂಡಿತ ಪರಿಶ್ರಮವಿದೆ. ಬಾಬಾ, ಪದೇ-ಪದೇ ಮರೆತುಹೋಗುತ್ತೇವೆಂದು ಹೇಳುತ್ತಾರೆ, ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ ಎಷ್ಟು ಪೈಲ್ವಾನರಾಗುತ್ತೀರೋ ಅಷ್ಟೇ ಮಾಯೆಯೂ ಶಕ್ತಿಶಾಲಿಯಾಗಿ ಹೋರಾಡುತ್ತದೆ. ಹೇಗೆ ಮಲ್ಲಯುದ್ಧದ ರೀತಿಯಲ್ಲಿ. ಅದರಲ್ಲಿ ಬಹಳ ಎಚ್ಚರಿಕೆಯಿಂದ ಇರುತ್ತಾರೆ. ಪೈಲ್ವಾನರನ್ನು ಪೈಲ್ವಾನರು ತಿಳಿದುಕೊಂಡಿರುತ್ತಾರೆ ಇಲ್ಲಿಯೂ ಹಾಗೆಯೇ ಮಹಾವೀರ ಮಕ್ಕಳೂ ಇದ್ದಾರೆ, ಅವರಲ್ಲೂ ಸಹ ನಂಬರ್ವಾರ್ ಆಗಿದ್ದಾರೆ. ಒಳ್ಳೊಳ್ಳೆಯ ಮಹಾರಥಿಗಳಿಗೂ ಮಾಯೆಯು ಬಿರುಗಾಳಿಗಳನ್ನು ತರುತ್ತದೆ. ಮಾಯೆಯು ಎಷ್ಟೇ ತೊಂದರೆ ಕೊಡಲಿ, ಬಿರುಗಾಳಿಗಳನ್ನು ತರಲಿ ಎಚ್ಚರಿಕೆಯಿಂದಿರಿ, ಯಾವುದೇ ಮಾತಿನಲ್ಲಿ ಸೋಲಬೇಡಿ. ಮನಸ್ಸಿನಲ್ಲಿ ಭಲೆ ಬಿರುಗಾಳಿಯು ಬರುತ್ತದೆ. ಅದನ್ನು ಕರ್ಮೇಂದ್ರಿಯಗಳಿಂದ ಮಾಡಬೇಡಿ. ಬಿರುಗಾಳಿಯು ಬೀಳಿಸಲು ಬರುತ್ತದೆ. ಮಾಯೆಯ ಹೋರಾಟವಾಗದೇ ಇದ್ದರೆ ಅವರಿಗೆ ಪೈಲ್ವಾನರೆಂದು ಹೇಗೆ ಹೇಳುವುದು! ಆದ್ದರಿಂದ ಮಾಯೆಯ ಬಿರುಗಾಳಿಗಳಿಗೆ ಹೆದರಬಾರದು. ಆದರೆ ನಡೆಯುತ್ತಾ-ನಡೆಯುತ್ತಾ ಅನೇಕರು ಕರ್ಮೇಂದ್ರಿಯಗಳಿಗೆ ವಶರಾಗಿ ತಕ್ಷಣ ಬೀಳುತ್ತಾರೆ. ತಂದೆಯಂತೂ ಪ್ರತಿನಿತ್ಯವು ತಿಳಿಸುತ್ತಾರೆ - ಮಕ್ಕಳೇ ಕರ್ಮೇಂದ್ರಿಯಗಳಿಂದ ವಿಕರ್ಮ ಮಾಡಬೇಡಿ, ನಿಯಮಕ್ಕೆ ವಿರುದ್ಧವಾದ ಕಾರ್ಯ ಮಾಡುವುದನ್ನು ಬಿಡುವುದಿಲ್ಲವೆಂದರೆ ಬಿಡಿಗಾಸಿನ ಪದವಿಯನ್ನು ಪಡೆಯುತ್ತೀರಿ. ನಾವು ಅನುತ್ತೀರ್ಣರಾಗುತ್ತೇವೇನೋ ಎಂದು ತಮ್ಮಲ್ಲಿಯೂ ತಿಳಿದುಕೊಳ್ಳುತ್ತಾರೆ. ಹೋಗುವುದಂತೂ ಎಲ್ಲರೂ ಹೋಗಬೇಕಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುತ್ತಾ ಇರಿ, ಆ ನೆನಪೂ ಸಹ ವಿನಾಶ ಹೊಂದುವುದಿಲ್ಲ. ಸ್ವಲ್ಪ ನೆನಪು ಮಾಡಿದರೂ ಸಹ ಸ್ವರ್ಗದಲ್ಲಿ ಬಂದುಬಿಡುತ್ತೀರಿ. ಕಡಿಮೆ ಅಥವಾ ಬಹಳ ನೆನಪು ಮಾಡುವುದರಿಂದ ಯಾವ-ಯಾವ ಪದವಿ ಸಿಗುತ್ತದೆ ಎಂದು ನೀವು ತಿಳಿದುಕೊಳ್ಳುತ್ತೀರಿ. ಯಾರನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಯಾರ್ಯಾರು ಏನಾಗುತ್ತಾರೆಂದು ತಾವೇ ತಿಳಿದುಕೊಳ್ಳಬಹುದು. ಒಂದುವೇಳೆ ನಮಗೆ ಹೃದಯಘಾತವಾದರೆ ಯಾವ ಪದವಿಯನ್ನು ಪಡೆಯುತ್ತೇವೆ? ಎಂದು ತಂದೆಯೊಂದಿಗೆ ಕೇಳಬಹುದು. ಮುಂದೆ ಹೋದಂತೆ ತಾವೇ ತಿಳಿದುಕೊಳ್ಳುತ್ತಾ ಹೋಗುತ್ತೀರಿ, ವಿನಾಶ ಸನ್ಮುಖದಲ್ಲಿದೆ. ಬಿರುಗಾಳಿ, ಮಳೆ, ಪ್ರಾಕೃತಿಕ ವಿಕೋಪಗಳು ಕೇಳಿ ಬರುವುದಿಲ್ಲ. ರಾವಣನಂತೂ ಕುಳಿತೇ ಇದ್ದಾನೆ, ಇದು ಬಹಳ ದೊಡ್ಡ ಪರೀಕ್ಷೆಯಾಗಿದೆ. ಯಾರು ಉತ್ತೀರ್ಣರಾಗುವವರೋ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ರಾಜರು ಪ್ರಜೆಗಳನ್ನು ಸಂಭಾಲನೆ ಮಾಡಲು ಬಹಳ ಬುದ್ಧಿವಂತರಾಗಿರಬೇಕು. ಐ.ಸಿ.ಎಸ್ ಪರೀಕ್ಷೆಯಲ್ಲಿ ಕೆಲವರೇ ತೇರ್ಗಡೆ ಆಗುತ್ತಾರೆ. ತಂದೆಯು ನಿಮಗೆ ಓದಿಸಿ ಸ್ವರ್ಗಕ್ಕೆ ಮಾಲೀಕರು, ಸತೋಪ್ರಧಾನರನ್ನಾಗಿ ಮಾಡುತ್ತಾರೆ. ನಿಮಗೂ ತಿಳಿದಿದೆ - ಸತೋಪ್ರಧಾನರಿಂದ ತಮೋಪ್ರಧನರಾದೆವು ಮತ್ತೆ ತಂದೆಯ ನೆನಪಿನಿಂದ ಈಗ ಸತೋಪ್ರಧಾನರಾಗಬೇಕಾಗಿದೆ. ಪತಿತಪಾವನ ತಂದೆಯ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮನ್ಮನಾಭವ. ಇದು ಅದೇ ಗೀತಾಭಾಗವಾಗಿದೆ. ಡಬಲ್ ಕಿರೀಟಧಾರಿಗಳಾಗುವ ಗೀತೆಯಾಗಿದೆ. ಮಾಡುವವರೂ ತಂದೆಯಲ್ಲವೆ. ನಿಮ್ಮ ಬುದ್ಧಿಯಲ್ಲಿ ಪೂರ್ಣ ಜ್ಞಾನವಿದೆ. ಯಾರು ಒಳ್ಳೆಯ ಬುದ್ಧಿವಂತರಿದ್ದಾರೆಯೋ ಅವರ ಬಳಿ ಧಾರಣೆಯೂ ಚೆನ್ನಾಗಿ ಆಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ

ರಾತ್ರಿ ಕ್ಲಾಸ್-05.01.69

ಮಕ್ಕಳು ಇಲ್ಲಿ ಕ್ಲಾಸ್ನಲ್ಲಿ ಕುಳಿತಿರುವಿರಿ ಮತ್ತು ನಮ್ಮ ಶಿಕ್ಷಕರು ಯಾರೆಂದು ನೀವು ತಿಳಿದಿರುವಿರಿ. ಈಗ ಇದೇ ನೆನಪು ಸದಾ ವಿಧ್ಯಾರ್ಥಿಗಳಿಗಿರುತ್ತದೆ, ನಮ್ಮ ಶಿಕ್ಷಕರು ಯಾರಾಗಿದ್ದಾರೆ ಎಂದು. ಇಲ್ಲಿ ಮರೆತುಬಿಡುವಿರಿ. ಶಿಕ್ಷಕರು ತಿಳಿದಿದ್ದಾರೆ ಮಕ್ಕಳು ನನ್ನನ್ನು ಪದೇ-ಪದೇ ಮರೆತುಬಿಡುತ್ತಾರೆ ಎಂದು. ಇಂತಹ ಆತ್ಮೀಯ ತಂದೆ ಎಂದೂ ಸಿಕ್ಕಿರಲಿಲ್ಲ. ಸಂಗಮಯುಗದಲ್ಲಿ ಮಾತ್ರ ಸಿಗುತ್ತಾರೆ. ಸತ್ಯಯುಗ ಮತ್ತು ಕಲಿಯುಗದಲ್ಲಿ ಶಾರೀರಿಕ ತಂದೆ ಸಿಗುತ್ತಾರೆ. ಮಕ್ಕಳಿಗೆ ಇದನ್ನು ನೆನಪು ತರಿಸುತ್ತಾರೆ ಏಕೆಂದರೆ ಮಕ್ಕಳಿಗೆ ಪಕ್ಕಾ ಆಗಲಿ- ಇದು ಸಂಗಮಯುಗವಾಗಿದೆ, ಇದರಲ್ಲಿ ನಾವು ಮಕ್ಕಳು ಹೀಗೆ ಪುರುಷೋತ್ತಮರಾಗುವವರಿದ್ದೇವೆ ಎಂದು. ತಂದೆಯನ್ನು ನೆನಪು ಮಾಡುವುದರಿಂದ ಮೂರು ನೆನಪುಗಳು ಬರಬೇಕಾಗಿದೆ. ಶಿಕ್ಷಕರನ್ನು ನೆನಪುಮಾಡುವುದರಿಂದಲೂ ಮೂರು ನೆನಪು, ಗುರುವನ್ನು ನೆನಪು ಮಾಡಿದರೂ ಮೂರು ನೆನಪು ಬರಬೇಕಾಗಿದೆ. ಖಂಡಿತ ಇದನ್ನು ನೆನಪು ಮಾಡಬೇಕಾಗುತ್ತದೆ. ಮುಖ್ಯ ಮಾತಾಗಿದೆ ಪವಿತ್ರರಾಗುವುದು. ಪವಿತ್ರರಿಗೆ ಸತೋಪ್ರಧಾನರೆಂದು ಹೇಳಲಾಗುತ್ತದೆ. ಅವರು ಇರುವುದೇ ಸತ್ಯಯುಗದಲ್ಲಿ. ಈಗ ಚಕ್ರ ಸುತ್ತಿ ಬಂದಿರುವಿರಿ. ಸಂಗಮಯುಗವಾಗಿದೆ. ಕಲ್ಪ-ಕಲ್ಪ ತಂದೆಯೇ ಬರುತ್ತಾರೆ, ಓದಿಸುತ್ತಾರೆ. ತಂದೆಯ ಬಳಿ ನೀವು ಇರುತ್ತಿರಲ್ಲವೇ. ಇದೂ ತಿಳಿದಿರುವಿರಿ, ಇವರು ಸತ್ಯ ಸದ್ಗುರುವಾಗಿದ್ದಾರೆ ಮತ್ತು ಖಂಡಿತವಾಗಿ ಮುಕ್ತಿ-ಜೀವನ್ಮುಕ್ತಿಗೆ ದಾರಿ ತೋರಿಸುತ್ತಾರೆ. ಡ್ರಾಮಾ ಪ್ಲಾನ್ ಅನುಸಾರ ನಾವು ಪುರುಷಾರ್ಥ ಮಾಡಿ ತಂದೆಯನ್ನು ಅನುಸರಿಸುತ್ತೇವೆ. ಈ ಶಿಕ್ಷಣವನ್ನು ಪಡೆದು ಅನುಸರಿಸುತ್ತೇವೆ. ಹೇಗೆ ಇವರು ಕಲಿಯುತ್ತಿದ್ದಾರೆ ಅದೇ ರೀತಿ ನೀವು ಮಕ್ಕಳೂ ಪುರುಷಾರ್ಥ ಮಾಡುತ್ತಿರುವಿರಿ. ದೇವತೆಗಳಾಗಬೇಕಾದರೆ ಶುದ್ಧ ಕರ್ಮ ಮಾಡಬೇಕು. ಯಾವುದೇ ಕೊಳಕು ಇರಬಾರದು. ಮತ್ತು ಬಹಳ ಮುಖ್ಯ ಮಾತು ತಂದೆಯನ್ನು ನೆನಪು ಮಾಡುವುದಾಗಿದೆ. ನೀವು ತಿಳಿಯುವಿರಿ ತಂದೆಯನ್ನು ಮರೆತುಬಿಡುತ್ತೇವೆ, ಶಿಕ್ಷಣವನ್ನೂ ಮರೆತುಬಿಡುತ್ತೇವೆ ಮತ್ತು ನೆನಪಿನ ಯಾತ್ರೆಯನ್ನು ಮರೆತುಬಿಡುತ್ತೇವೆ ಎಂದು. ತಂದೆಯನ್ನು ಮರೆಯುವುದರಿಂದ ಜ್ಞಾನವೂ ಮರೆತು ಹೋಗುವುದು. ನಾನು ವಿಧ್ಯಾರ್ಥಿಯಾಗಿರುವೆನು ಎನ್ನುವುದೂ ಮರೆತು ಹೋಗುತ್ತದೆ. ನೆನಪಂತು ಮೂವರನ್ನೂ ಮಾಡಬೇಕಾಗಿದೆ. ತಂದೆಯನ್ನು ನೆನಪು ಮಾಡಿದರೆ ಶಿಕ್ಷಕ, ಸದ್ಗುರು ಖಂಡಿತ ನೆನಪಿಗೆ ಬರುತ್ತಾರೆ. ಶಿವಬಾಬಾರನ್ನು ನೆನಪು ಮಾಡುವುದರ ಜೊತೆ-ಜೊತೆ ದೈವಿಗುಣಗಳು ಖಂಡಿತ ಬೇಕಾಗಿದೆ. ತಂದೆಯ ನೆನಪಿನಲ್ಲಿದೆ ಚಮತ್ಕಾರ. ತಂದೆ ಮಕ್ಕಳಿಗೆ ಎಷ್ಟು ಚಮತ್ಕಾರ ಕಲಿಸುತ್ತಾರೆ ಅಷ್ಟು ಬೇರೆಯಾರೂ ಕಲಿಸಲು ಸಾಧ್ಯವಿಲ್ಲಾ. ತಮೋಪ್ರಧಾನರಿಂದ ನಾವು ಈ ಜನ್ಮದಲ್ಲಿಯೇ ಸತೋಪ್ರಧಾನರಾಗುತ್ತೇವೆ. ತಮೋಪ್ರಧಾನರಾಗುವಲ್ಲಿ ಇಡೀ ಕಲ್ಪವೇ ಬೇಕಾಗುತ್ತದೆ. ಈಗ ಈ ಒಂದೇ ಜನ್ಮದಲ್ಲಿ ನಾವು ಸತೋಪ್ರಧಾನರಾಗಬೇಕಾಗಿದೆ, ಇದರಲ್ಲಿ ಯಾರು ಎಷ್ಟು ಪರಿಶ್ರಮ ಪಡುತ್ತಾರೆ ಅಷ್ಟು ಇಡೀ ಪ್ರಪಂಚವೂ ಪರಿಶ್ರಮ ಪಡುವುದಿಲ್ಲ. ಬೇರೆ ಧರ್ಮದವರೂ ಪರಿಶ್ರಮ ಪಡುವುದಿಲ್ಲ. ಮಕ್ಕಳು ಸಾಕ್ಷಾತ್ಕಾರ ಮಾಡಿದ್ದಾರೆ. ಧರ್ಮ ಸ್ಥಾಪಕರು ಬರುತ್ತಾರೆ. ಪಾತ್ರ ಮಾಡುತ್ತಾರೆ ಭಿನ್ನ-ಭಿನ್ನ ಡ್ರೆಸ್ನಲ್ಲಿ. ತಮೋಪ್ರಧಾನದಲ್ಲಿ ಅವರು ಬರುತ್ತಾರೆ. ಬುದ್ಧಿಯು ಹೇಳುತ್ತದೆ ಹೇಗೆ ನಾವು ಸತೋಪ್ರಧಾನರಾಗುತ್ತೇವೆ ಹಾಗೆಯೇ ಎಲ್ಲರೂ ಆಗುತ್ತಾರೆ. ಪವಿತ್ರತೆಯ ದಾನವನ್ನು ತಂದೆಯಿಂದ ಪಡೆಯುತ್ತಾರೆ. ಎಲ್ಲರೂ ಕರೆಯುತ್ತಾರೆ, ನಮ್ಮನ್ನು ಇಲ್ಲಿಂದ ಬಿಡುಗಡೆ ಮಾಡಿ ಮನೆಗೆ ಕರೆದೊಯ್ಯಿರಿ, ಮಾರ್ಗದರ್ಶಕರಾಗಿ ಎಂದು. ಈಗಂತೂ ಡ್ರಾಮಾ ಪ್ಲಾನ್ ಅನುಸಾರ ಎಲ್ಲರೂ ಮನೆಗೆ ಹೋಗಲೇ ಬೇಕಾಗಿದೆ. ಅನೇಕ ಬಾರಿ ಮನೆಗೆ ಹೋಗುತ್ತೇವೆ. ಕೆಲವರು ಪೂರ್ತಿ 5000 ವರ್ಷ ಮನೆಯಲ್ಲಿ ಇರುವುದಿಲ್ಲ. ಕೆಲವರು 5000 ವರ್ಷ ಇರುತ್ತಾರೆ. ಅಂತ್ಯದಲ್ಲಿ ಬರುವವರು ಹೇಳುತ್ತಾರೆ, 4999 ವರ್ಷ ಶಾಂತಿಧಾಮದಲ್ಲಿ ಇದ್ದೆವು ಎಂದು. ನಾವು ಹೇಳುತ್ತೇವೆ 4999 ವರ್ಷ ಈ ಸೃಷ್ಟಿಯಲ್ಲಿ ಇದ್ದೇವೆ ಎಂದು. ಮಕ್ಕಳಿಗೆ ಇದೇ ನಿಶ್ಚಯ ಇದೆ 83-84 ಜನ್ಮ ತೆಗೆದುಕೊಂಡಿದ್ದೇವೆ ಎಂದು. ಯಾರು ಬಹಳ ಬುದ್ಧಿವಂತರಾಗಿದ್ದಾರೆ, ಅವರು ಖಂಡಿತ ಮೊದಲೇ ಬಂದಿರುತ್ತಾರೆ. ಒಳ್ಳೆಯದು. ಮಧುರಾತಿ ಮಧುರ ಆತ್ಮೀಯ ಮಕ್ಕಳ ಪ್ರತಿ ನೆನಪು ಪ್ರೀತಿ ಮತ್ತು ಗುಡ್ನೈಟ್.

ಧಾರಣೆಗಾಗಿ ಮುಖ್ಯಸಾರ-
1. ಸತೋಪ್ರಧಾನರಾಗಲು ನೆನಪಿನ ಯಾತ್ರೆಯಿಂದ ನಿಮ್ಮ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಬೇಕು. ತಪ್ಪಿಲ್ಲದವರಾಗಬೇಕು. ತಮ್ಮ ರಿಜಿಸ್ಟರ್ನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು, ಯಾವುದೇ ತಪ್ಪು ಮಾಡಬಾರದು.

2. ಯಾವುದೇ ನಿಯಮಕ್ಕೆ ವಿರುದ್ಧವಾದ ಕರ್ಮವನ್ನು ಮಾಡಬಾರದು. ಮಾಯೆಯ ಬಿರುಗಾಳಿಗೆ ಹೆದರದೆ ಕರ್ಮೇಂದ್ರಿಯಜೀತರಾಗಬೇಕು. ಲಿವರ್ ಗಡಿಯಾರ ಸಮಾನ ನಿಖರವಾದ ಪುರುಷಾರ್ಥ ಮಾಡಬೇಕು.

ವರದಾನ:
ಸೇವೆಯ ಮೂಲಕ ಖುಷಿ, ಶಕ್ತಿ ಮತ್ತು ಸರ್ವರ ಆಶೀರ್ವಾದ ಪ್ರಾಪ್ತಿ ಮಾಡಿಕೊಳ್ಳುವಂತಹ ಪುಣ್ಯ ಆತ್ಮ ಭವ

ಸೇವೆಯ ಪ್ರತ್ಯಕ್ಷ ಫಲ-ಖುಷಿ ಮತ್ತು ಶಕ್ತಿ ಸಿಗುತ್ತದೆ. ಸೇವೆಮಾಡುತ್ತಾ ಆತ್ಮಗಳನ್ನು ತಂದೆಯ ಆಸ್ತಿಯ ಅಧಿಕಾರಿಗಳನ್ನಾಗಿ ಮಾಡುವುದು-ಇದು ಪುಣ್ಯದ ಕೆಲಸವಾಗಿದೆ. ಯಾರು ಪುಣ್ಯ ಮಾಡುತ್ತಾರೆ ಅವರಿಗೆ ಆಶೀರ್ವಾದ ಖಂಡಿತವಾಗಿ ಸಿಗುವುದು. ಎಲ್ಲ ಆತ್ಮಗಳ ಹೃದಯದಲ್ಲಿ ಏನು ಖುಷಿಯ ಸಂಕಲ್ಪ ಉತ್ಪನ್ನವಾಗುವುದು, ಆಶುಭ ಸಂಕಲ್ಪ ಆಶೀರ್ವಾದವಾಗಿ ಬಿಡುವುದು ಮತ್ತು ಭವಿಷ್ಯವೂ ಸಹ ಜಮಾ ಆಗಿಬಿಡುವುದು ಆದ್ದರಿಂದ ಸದಾ ತಮ್ಮನ್ನು ಸೇವಾಧಾರಿ ಎಂದು ತಿಳಿದು ಸೇವೆಯ ಅವಿನಾಶಿ ಫಲ ಖುಷಿ ಮತ್ತು ಶಕ್ತಿ ಸದಾ ಪಡೆಯುತ್ತಿರಿ.

ಸ್ಲೋಗನ್:
ಮನಸಾ-ವಾಚಾದ ಶಕ್ತಿಯಿಂದ ವಿಘ್ನದ ಪರದೆ ಸರಿದಾಗ ಒಳಗೆ ಕಲ್ಯಾಣದ ದೃಶ್ಯ ಕಂಡುಬರುವುದು.