24.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನೀವು ಬೆಳಿಗ್ಗೆ ರಾಜರಾಗುತ್ತೀರಿ, ಸಂಜೆ ಬಿಕ್ಷುಕರಾಗುತ್ತೀರಿ, ಬಿಕ್ಷುಕರಿಂದ ರಾಜ, ಪತಿತರಿಂದ ಪಾವನರಾಗಲು ಮನ್ಮನಾಭವ ಹಾಗೂ ಮಧ್ಯಾಜೀಭವ ಎಂಬ ಎರಡು ಶಬ್ದಗಳು ನೆನಪಿಟ್ಟುಕೊಳ್ಳಿ"

ಪ್ರಶ್ನೆ:
ಕರ್ಮ ಬಂಧನದಿಂದ ಮುಕ್ತರಾಗುವ ಯುಕ್ತಿ ಏನಾಗಿದೆ?

ಉತ್ತರ:
1. ನೆನಪಿನ ಯಾತ್ರೆ ಹಾಗೂ ಜ್ಞಾನದ ಸ್ಮರಣೆ, 2. ಒಬ್ಬ ತಂದೆಯ ಜೊತೆ ಸಂಬಂಧವಿರಲಿ, ಅನ್ಯ ಯಾರಲ್ಲಿಯೂ ಬುದ್ದಿ ಹೋಗದಿರಲಿ, 3. ಯಾವ ಸರ್ವಶಕ್ತಿವಂತ ಬ್ಯಾಟರಿ ಇದ್ದಾರೆ, ಆ ಬ್ಯಾಟರಿಯೊಂದಿಗೆ ಬುದ್ಧಿ ಯೋಗವು ಜೋಡಿಸಲ್ಪಟ್ಟಿರಲಿ. ತಮ್ಮ ಮೇಲೆ ಪೂರ್ಣ ಗಮನವಿರಲಿ, ದೈವಿಗುಣಗಳ ರೆಕ್ಕೆಗಳಿದ್ದಾಗ ಕರ್ಮಬಂಧನದಿಂದ ಮುಕ್ತರಾಗುತ್ತಾ ಹೋಗುತ್ತೀರಿ.

ಓಂ ಶಾಂತಿ.
ತಂದೆ ಕುಳಿತು ತಿಳಿಸುತ್ತಾರೆ, ಇದು ಭಾರತದ ಕಥೆಯಾಗಿದೆ. ಯಾವ ಕಥೆಯಾಗಿದೆ? ಬೆಳಿಗ್ಗೆ ರಾಜರು, ಸಂಜೆ ಬಿಕ್ಷುಕರು. ಇದರ ಕುರಿತು ಒಂದು ಕಥೆ ಇದೆ. ಬೆಳಿಗ್ಗೆ ಸಾಹುಕಾರರಾಗಿದ್ದರು... ಈ ಮಾತುಗಳನ್ನು ನೀವು ಯಾವಾಗ ಶ್ರೀಮಂತರಾಗುತ್ತೀರೋ ಆಗ ಕೇಳುವುದಿಲ್ಲ. ಈ ಸಂಗಮಯುಗದಲ್ಲಿಯೇ ನೀವು ಮಕ್ಕಳು, ಬಿಕ್ಷುಕರು ಮತ್ತು ರಾಜರಾಗುವ ಮಾತುಗಳನ್ನು ಕೇಳುತ್ತೀರಿ. ಇದನ್ನು ಹೃದಯದಲ್ಲಿ ಧಾರಣೆ ಮಾಡಬೇಕಾಗಿದೆ. ಅವಶ್ಯಕವಾಗಿ ಭಕ್ತಿಯು ಬಿಕ್ಷುಕರನ್ನಾಗಿ ಮಾಡುತ್ತದೆ. ಜ್ಞಾನವು ರಾಜರನ್ನಾಗಿ ಮಾಡುತ್ತದೆ. ಈ ದಿನ ಮತ್ತು ರಾತ್ರಿಯು ಬೇಹದ್ದಿನದ್ದಾಗಿದೆ. ಬಿಕ್ಷುಕ ಮತ್ತು ರಾಜರಾಗುವ ಮಾತು ಸಹ ಬೇಹದ್ದಿನದ್ದಾಗಿದೆ ಮತ್ತು ಮಾಡುವವರೂ ಬೇಹದ್ದಿನ ತಂದೆಯಾಗಿದ್ದಾರೆ. ಎಲ್ಲಾ ಪತಿತ ಆತ್ಮಗಳಿಗಾಗಿ ಪಾವನರನ್ನಾಗಿ ಮಾಡುವಂತಹ ಬ್ಯಾಟರಿ ಒಂದೇ ಆಗಿದೆ. ಹೀಗೆ ಮತ್ತೆ ಮತ್ತೆ ನೆನಪು ಮಾಡಿಕೊಂಡರೂ ಖುಷಿಯಲ್ಲಿ ಇರುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ ನೀವು ಬೆಳಿಗ್ಗೆ ರಾಜರಾಗಿಬಿಡುತ್ತೀರಿ ಮತ್ತೆ ಸಂಜೆಗೆ ಬಿಕ್ಷುಕರಾಗಿಬಿಡುತ್ತೀರಿ. ಹೇಗಾಗುತ್ತೀರಿ ಎಂಬುದನ್ನು ತಂದೆಯು ತಿಳಿಸುತ್ತಾರೆ. ಪತಿತರಿಂದ ಪಾವನ, ಬುದ್ಧಿಯಿಂದ ರಾಜರಾಗುವ ಯುಕ್ತಿಯನ್ನೂ ಸಹ ತಂದೆಯೇ ತಿಳಿಸುತ್ತಾರೆ. ಮನ್ಮನಾಭವ, ಮಧ್ಯಾಜೀಭವ ಇವೇ ಎರಡು ಯುಕ್ತಿಗಳಾಗಿವೆ. ಇದನ್ನು ಮಕ್ಕಳು ತಿಳಿದುಕೊಂಡಿದ್ದೀರಿ - ಇದು ಪುರುಷೋತ್ತಮ ಸಂಗಮ ಯುಗವಾಗಿದೆ. ನೀವು ಯಾರೆಲ್ಲರೂ ಇಲ್ಲಿ ಕುಳಿತಿದ್ದೀರಿ ನೀವು ಸ್ವರ್ಗದ ಸಾಹುಕಾರಾಗುತ್ತೀರಿ ಎಂದು ಗ್ಯಾರೆಂಟಿ ಇದೆ ಆದರೆ, ನಂಬರ್ವಾರ್ ಪುರುಷಾರ್ಥದನುಸಾರ. ಶಾಲೆಯಲ್ಲಿಯೂ ಸಹ ಈ ರೀತಿ ಆಗುತ್ತದೆ. ನಂಬರ್ವಾರಾಗಿ ತರಗತಿಯೂ ವರ್ಗಾವಣೆ ಆಗುತ್ತದೆ. ಪರೀಕ್ಷೆಯು ಮುಕ್ತಾಯವಾದಾಗ ಹೋಗಿ ನಂಬರ್ವಾರಾಗಿ ಕುಳಿತುಕೊಳ್ಳುತ್ತಾರೆ. ಅದು ಹದ್ದಿನ ಮಾತಾಗಿದೆ. ಇದು ಬೇಹದ್ದಿನ ಮಾತಾಗಿದೆ. ನಂಬರ್ವಾರ್ ರುದ್ರ ಮಾಲೆಯಲ್ಲಿ ಹೋಗುತ್ತಾರೆ. ಮಾಲೆ ಅಥವಾ ವೃಕ್ಷವಾಗಿದೆ. ಬೀಜವು ವೃಕ್ಷದ್ದೇ ಆಗಿದೆ. ಪರಮಾತ್ಮನು ಮನುಷ್ಯ ಸೃಷ್ಟಿಯ ಬೀಜವಾಗಿದ್ದಾರೆ. ಆ ವೃಕ್ಷ ಹೇಗೆ ವೃದ್ಧಿ ಆಗುತ್ತದೆ ಮತ್ತು ಹೇಗೆ ಹಳೆಯದಾಗುತ್ತದೆ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಮೊದಲು ನೀವು ಇದನ್ನು ತಿಳಿದಿರಲಿಲ್ಲ. ಈಗ ತಂದೆಯೇ ಬಂದು ತಿಳಿಸಿದ್ದಾರೆ. ಇದು ಪುರುಷೊತ್ತಮ ಸಂಗಮಯುಗವಾಗಿದೆ. ಈಗ ನೀವು ಮಕ್ಕಳು ಪುರುಷಾರ್ಥ ಮಾಡಬೇಕಾಗಿದೆ. ದೈವೀಗುಣಗಳ ರೆಕ್ಕೆಗಳನ್ನು ಧಾರಣೆ ಮಾಡಬೇಕಾಗಿದೆ. ತಮ್ಮ ಮೇಲೆ ಪೂರ್ಣ ಗಮನ ಕೊಡಬೇಕಾಗಿದೆ. ನೆನಪಿನ ಯಾತ್ರೆಯಿಂದಲೇ ನೀವು ಪಾವನರಾಗುತ್ತೀರಿ ಮತ್ತ್ಯಾವುದೇ ಉಪಾಯವಿಲ್ಲ. ತಂದೆ, ಯಾರು ಸರ್ವಶಕ್ತಿವಂತ ಬ್ಯಾಟರಿ ಆಗಿದ್ದಾರೋ ಅವರ ಜೊತೆ ಪೂರ್ಣ ಯೋಗವನ್ನು ಜೋಡಿಸಬೇಕು. ಅವರ ಬ್ಯಾಟರಿಯು ಎಂದೂ ಕಡಿಮೆ ಆಗುವುದಿಲ್ಲ. ಅವರು ಸತೋ-ರಜೋ-ತಮೋದಲ್ಲಿ ಬರುವುದಿಲ್ಲ ಏಕೆಂದರೆ ಅವರದು ಸದಾ ಕರ್ಮಾತೀತ ಸ್ಥಿತಿಯಾಗಿದೆ. ನೀವು ಮಕ್ಕಳು ಕರ್ಮಬಂಧನದಲ್ಲಿ ಬರುತ್ತೀರಿ. ಎಷ್ಟು ಕಠಿಣ ಬಂಧನವಾಗಿದೆ. ಈ ಕರ್ಮಬಂಧನಗಳಿಂದ ಮುಕ್ತರಾಗಲು ನೆನಪಿನ ಯಾತ್ರೆ ಒಂದೇ ಉಪಾಯವಾಗಿದೆ. ಇದನ್ನು ಬಿಟ್ಟರೆ ಮತ್ತ್ಯಾವುದೇ ಉಪಾಯವಿಲ್ಲ. ಹೇಗೆ ಈ ಜ್ಞಾನವಿದೆ, ಇದೂ ಸಹ ಮೂಳೆಗಳನ್ನು ಮೃದು ಮಾಡುತ್ತದೆ. ಹಾಗೆ ನೋಡಿದರೆ, ಭಕ್ತಿಯೂ ಸಹ ಮಾಡುತ್ತದೆ. ಆದ್ದರಿಂದಲೇ ಇವರು ಭಕ್ತ ಆತ್ಮನಾಗಿದ್ದಾರೆ. ಇವರಲ್ಲಿ ಸ್ವಲ್ಪವೂ ಮೋಸವಿಲ್ಲ ಎಂದು ಹೇಳುತ್ತಾರೆ. ಆದರೆ ಭಕ್ತರಲ್ಲಿಯೂ ಮೋಸವಿರುತ್ತದೆ. ಬ್ರಹ್ಮಾರವರು ಅನುಭವಿ ಆಗಿದ್ದಾರೆ. ಆತ್ಮವು ಶರೀರದ ಮೂಲಕ ವ್ಯಾಪಾರ, ವ್ಯವಹಾರಗಳನ್ನು ಮಾಡುತ್ತದೆ ಎಂದರೆ ಈ ಜನ್ಮದ್ದೆಲ್ಲವೂ ಸ್ಮೃತಿಯಲ್ಲಿ ಬರುತ್ತದೆ. 4-5 ವರ್ಷ ವಯಸ್ಸಿನಿಂದ ತಮ್ಮ ಜೀವನ ಕಥೆಯು ನೆನಪಿರಬೇಕು. ಕೆಲವರು 10-20 ವರ್ಷಗಳ ಮಾತನ್ನು ಮರೆತು ಹೋಗುತ್ತಾರೆ. ಜನ್ಮ-ಜನ್ಮಾಂತರದ ನಾಮ-ರೂಪವಂತೂ ನೆನಪಿರಲು ಸಾಧ್ಯವಿಲ್ಲ. ಒಂದು ಜನ್ಮದ್ದಾದರೆ ಸ್ವಲ್ಪ ತಿಳಿಸಬಹುದು. ಭಾವಚಿತ್ರ ಮೊದಲಾದವುಗಳನ್ನು ಇಟ್ಟುಕೊಳ್ಳುತ್ತಾರೆ. ಇನ್ನೊಂದು ಜನ್ಮದ ಬಗ್ಗೆ ತಿಳಿದಿರಲು ಸಾಧ್ಯವಿಲ್ಲ. ಪ್ರತಿಯೊಂದು ಆತ್ಮವು ಭಿನ್ನ ನಾಮ, ರೂಪ, ದೇಶ, ಕಾಲಗಳಲ್ಲಿ ಪಾತ್ರವನ್ನು ಅಭಿನಯಿಸುತ್ತದೆ. ನಾಮ, ರೂಪ ಎಲ್ಲಾ ಬದಲಾಗುತ್ತದೆ. ಆತ್ಮವು ಹೇಗೆ ಒಂದು ಶರೀರವನ್ನು ಬಿಟ್ಟು ಇನ್ನೊಂದು ತೆಗೆದುಕೊಳ್ಳುತ್ತದೆ ಎಂದು ಬುದ್ಧಿಯಲ್ಲಿ ಇದೆ. ಅವಶ್ಯವಾಗಿ 84 ಜನ್ಮಗಳು, 84 ಹೆಸರು, 84 ಜನ ತಂದೆಯವರಾಗಿರುತ್ತೀರಿ. ಅಂತ್ಯದಲ್ಲಿ ಮತ್ತೆ ತಮೋಪ್ರಧಾನ ಸಂಬಂಧವಾಗಿಬಿಡುತ್ತದೆ. ಈ ಸಮಯದಲ್ಲಿ ಎಷ್ಟು ಸಂಬಂಧಗಳು ಆಗುತ್ತವೋ ಅಷ್ಟು ಇಡೀ ಕಲ್ಪದಲ್ಲಿ ಇರುವುದಿಲ್ಲ. ಕಲಿಯುಗಿ ಸಂಬಂಧಗಳನ್ನು ಬಂಧನವೆಂದೇ ತಿಳಿಯಬೇಕು. ಎಷ್ಟು ಜನ ಮಕ್ಕಳಿರುತ್ತಾರೆ, ಮತ್ತೆ ಅವರಿಗೆ ವಿವಾಹ ಮಾಡುತ್ತಾರೆ, ನಂತರ ಮಕ್ಕಳಿಗೆ ಜನ್ಮ ಕೊಡುತ್ತಾರೆ. ಈ ಸಮಯದಲ್ಲಿ ಎಲ್ಲದಕ್ಕಿಂತ ಹೆಚ್ಚಿನ ಬಂಧನವಾಗಿದೆ - ಚಿಕ್ಕಪ್ಪ, ದೊಡ್ಡಪ್ಪ, ಮಾವ, ಇತ್ಯಾದಿ...... ಎಷ್ಟು ಹೆಚ್ಚಿನ ಸಂಬಂಧಗಳೋ, ಅಷ್ಟು ಹೆಚ್ಚಿನ ಬಂಧನ. ಪತ್ರಿಕೆಗಳಲ್ಲಿ ಬಂದಿತು- 5 ಜನ ಮಕ್ಕಳು ಒಟ್ಟಿಗೆ ಜನ್ಮ ಪಡೆದುಕೊಂಡರು, 5 ಮಕ್ಕಳು ಆರೋಗ್ಯವಂತರಾಗಿದ್ದಾರೆ. ಅಂದಮೇಲೆ ಲೆಕ್ಕ ಮಾಡಿ ಎಷ್ಟು ಸಂಬಂಧಗಳಾಗಿಬಿಡುತ್ತವೆ! ಈ ಸಮಯದಲ್ಲಿ ನಿಮ್ಮ ಸಂಬಂಧವು ಎಲ್ಲದಕ್ಕಿಂತ ಚಿಕ್ಕದಾಗಿದೆ, ಕೇವಲ ಒಬ್ಬ ತಂದೆಯೊಂದಿಗೆ ಸರ್ವ ಸಂಬಂಧವಿದೆ. ಒಬ್ಬ ತಂದೆಯ ವಿನಃ ಅನ್ಯ ಯಾರೊಂದಿಗೂ ನಿಮ್ಮ ಸಂಬಂಧವಿಲ್ಲ. ಸತ್ಯಯುಗದಲ್ಲಿ ಇದಕ್ಕಿಂತ ಹೆಚ್ಚಿರುತ್ತದೆ. ಈಗ ನಿಮ್ಮದು ವಜ್ರ ಸಮಾನ ಜನ್ಮವಾಗಿದೆ. ಶ್ರೇಷ್ಠ ತಂದೆಯು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ಜೀವಿಸಿದ್ದಂತೆ ಆಸ್ತಿಯನ್ನು ಪಡೆಯಲು ತಂದೆಯ ಮಡಿಲಿಗೆ ಹೋಗುವುದು. ಈಗಲೇ ನಡೆಯುತ್ತದೆ. ನೀವು ಇಂತಹ ತಂದೆಯ ಮಡಿಲಿಗೆ ಬಂದಿದ್ದೀರಿ. ಅವರಿಂದ ನಿಮಗೆ ಆಸ್ತಿ ಸಿಗುತ್ತದೆ. ನೀವು ಬ್ರಾಹ್ಮಣರಿಗಿಂತ ಶ್ರೇಷ್ಠರು ಯಾರೂ ಇಲ್ಲ. ಎಲ್ಲರ ಯೋಗವು ಒಬ್ಬ ತಂದೆಯ ಜೊತೆ ಇದೆ. ನಿಮ್ಮಲ್ಲಿ ಪರಸ್ಪರವೂ ಸಹ ಯಾವುದೇ ಸಂಬಂಧವಿಲ್ಲ. ಸಹೋದರ-ಸಹೋದರಿಯರ ಸಂಬಂಧವೂ ಸಹ ಬೀಳಿಸುತ್ತದೆ. ಆದ್ದರಿಂದ, ಸಂಬಂಧವು ಒಬ್ಬ ತಂದೆಯೊಂದಿಗೆ ಇರಬೇಕು - ಇದು ಹೊಸ ಮಾತಾಗಿದೆ. ಈಗ ಪವಿತ್ರರಾಗಿ ಹಿಂತಿರುಗಿ ಹೋಗಬೇಕಾಗಿದೆ. ಹೀಗೆ ವಿಚಾರಸಾಗರ ಮಂಥನ ಮಾಡುವುದರಿಂದ ನೀವು ಬಹಳ ಹೊಳಪಿನಲ್ಲಿ ಬರುತ್ತೀರಿ. ಸತ್ಯಯುಗಿ ಪ್ರಕಾಶ ಮತ್ತು ಕಲಿಯುಗಿ ಪ್ರಕಾಶತೆಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ಭಕ್ತಿಮಾರ್ಗದ ಸಮಯವೇ ರಾವಣರಾಜ್ಯವಾಗಿದೆ. ಅಂತ್ಯದಲ್ಲಿ ವಿಜ್ಞಾನದ ಪ್ರಗತಿಯೂ ಸಹ ಎಷ್ಟೊಂದು ಆಗುತ್ತದೆ. ಹೇಗೆ ಸತ್ಯಯುಗದೊಂದಿಗೆ ಹೋಲಿಕೆ ಮಾಡುತ್ತಾರೆ.

ಒಂದು ಮಗು ಸಮಾಚಾರವನ್ನು ಬರೆದರು - ಸ್ವರ್ಗದಲ್ಲಿ ಇದ್ದೀರೋ ಅಥವಾ ನರಕದಲ್ಲಿದ್ದೀರೋ? ಎಂದು ನಾವು ಪ್ರಶ್ನೆ ಕೇಳಿದೆವು ಆಗ 4-5 ಜನರು ನಾವು ಸ್ವರ್ಗದಲ್ಲಿದ್ದೇವೆ ಎಂದು ಹೇಳಿದರು. ಬುದ್ಧಿಯಲ್ಲಿ ರಾತ್ರಿ-ಹಗಲಿನ ಅಂತರವಾಗಿಬಿಡುತ್ತದೆ. ಕೆಲವರು ನಾವು ನರಕದಲ್ಲಿದ್ದೇವೆ ಎಂದು ತಿಳಿಯುತ್ತಾರೆ. ಮತ್ತೆ ಅವರಿಗೆ ಸ್ವರ್ಗವಾಸಿ ಆಗಲು ಬಯಸುತ್ತೀರೇನು? ಎಂದು ಕೇಳಬೇಕು. ಸ್ವರ್ಗವನ್ನು ಯಾರು ಸ್ಥಾಪನೆ ಮಾಡುತ್ತಾರೆ? ಇವು ಬಹಳ ಮಧುರಾತಿ ಮಧುರ ಮಾತುಗಳಾಗಿವೆ. ನೀವು ಬರೆದು ಕೊಳ್ಳುತ್ತೀರಿ ಆದರೆ, ಅದು ಪುಸ್ತಕದಲ್ಲಿಯೇ ಉಳಿಯುತ್ತದೆ, ಸಮಯದಲ್ಲಿ ನೆನಪಿಗೆ ಬರುವುದಿಲ್ಲ. ಈಗ ಪತಿತರಿಂದ ಪಾವನರನ್ನಾಗಿ ಮಾಡುವವರು ಪರಮಪಿತ ಶಿವಪರಮಾತ್ಮ ಆಗಿದ್ದಾರೆ. ಅವರು ಹೇಳುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿದರೆ ಪಾಪವು ಸಮಾಪ್ತಿ ಆಗುತ್ತದೆ ಎಂದು ತಿಳಿಸುತ್ತಾರೆ. ನೆನಪಿನಲ್ಲಿ ಏನಾದರೂ ಸಂಪಾದನೆ ಆಗುತ್ತದೆಯಲ್ಲವೇ. ನೆನಪಿನ ಪದ್ಧತಿಯು ಈಗ ಹೊರ ಬಂದಿದೆ. ನೆನಪಿನಿಂದಲೇ ನೀವು ಎಷ್ಟು ಶ್ರೇಷ್ಠ, ಶುದ್ಧವಾಗುತ್ತೀರಿ. ಯಾರು ಎಷ್ಟು ಪರಿಶ್ರಮ ಪಡುತ್ತಾರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುತ್ತಾರೆ ಎಂದು ತಂದೆಯನ್ನೂ ಸಹ ಕೇಳಬಹುದು. ಪ್ರಪಂಚದಲ್ಲಂತೂ ಸಂಬಂಧ ಮತ್ತು ಸಂಪತ್ತಿನ ಹಿಂದೆ ಜಗಳವೇ ಜಗಳವಿದೆ. ಇಲ್ಲಂತೂ ಯಾವುದೇ ಸಂಬಂಧವಿಲ್ಲ. ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ. ತಂದೆಯೂ ಬೇಹದ್ದಿನ ಮಾಲೀಕನಾಗಿದ್ದಾರೆ. ಮಾತುಗಳು ಬಹಳ ಸಹಜವಾಗಿವೆ, ಆ ಕಡೆ ಸ್ವರ್ಗ ಇದೆ ಮತ್ತು ಈ ಕಡೆ ನರಕವಿದೆ. ನರಕವಾಸಿಗಳು ಒಳ್ಳೆಯವರೋ ಅಥವಾ ಸ್ವರ್ಗವಾಸಿಗಳು ಒಳ್ಳೆಯವರೋ? ಯಾರು ಬುದ್ಧಿವಂತರಿರುತ್ತಾರೋ ಅವರು ಸ್ವರ್ಗವಾಸಿಗಳಾಗುವುದೇ ಒಳ್ಳೆಯದು ಎಂದು ಹೇಳುತ್ತಾರೆ. ಕೆಲವರಂತೂ ಸ್ವರ್ಗವಾಸಿಗಳು ಮತ್ತು ನರಕವಾಸಿಗಳು, ಈ ಮಾತುಗಳೊಂದಿಗೆ ನಮಗೆ ಯಾವುದೇ ಅವಶ್ಯಕತೆ ಇಲ್ಲ ಎಂದು ಹೇಳಿಬಿಡುತ್ತಾರೆ ಏಕೆಂದರೆ ತಂದೆಯನ್ನು ತಿಳಿದಿಲ್ಲ. ಕೆಲವರು ತಂದೆಯ ಮಡಿಲಿನಿಂದ ಹೊರ ಬಂದು ಮಾಯೆಯ ಮಡಿಲಿಗೆ ಹೋಗುತ್ತಾರೆ. ವಿಚಿತ್ರವಾಗಿದೆಯಲ್ಲವೇ. ತಂದೆಯು ವಿಚಿತ್ರವಾಗಿದ್ದಾರೆ, ಜ್ಞಾನವು ವಿಚಿತ್ರ, ಎಲ್ಲವೂ ವಿಚಿತ್ರ. ಈ ವಿಚಿತ್ರವನ್ನು ತಿಳಿಯುವವರೂ ಸಹ ಅಂತಹವರೇ ಬೇಕು. ಅವರ ಬುದ್ಧಿಯು ತಂದೆಯ ಜೊತೆ ತೊಡಗಿರಬೇಕು. ರಾವಣನು ವಿಚಿತ್ರವಲ್ಲ, ಅವನ ರಚನೆಯು ವಿಚಿತ್ರವಲ್ಲ, ರಾತ್ರಿ-ಹಗಲಿನ ಅಂತರವಿದೆ. ಕಾಳೀಯ ದಡದಲ್ಲಿ ಹೋದಾಗ ಸರ್ಪವು ಕಚ್ಚಿತು, ಕಪ್ಪಾಗಿಬಿಟ್ಟರೆಂದು ಶಾಸ್ತ್ರಗಳಲ್ಲಿ ಬರೆದುಬಿಟ್ಟಿದ್ದಾರೆ. ಈಗ ನೀವು ಇದನ್ನು ಬಹಳ ಚೆನ್ನಾಗಿ ತಿಳಿಸುತ್ತೀರಿ. ಕೃಷ್ಣನ ಚಿತ್ರವನ್ನು ಯಾರಾದರೂ ತೆಗೆದುಕೊಂಡು ನೋಡಿದರೆ ರಿಫ್ರೆಷ್ ಆಗಿ ಬಿಡುತ್ತಾರೆ. ಇದು 84 ಜನ್ಮಗಳ ಕಥೆಯಾಗಿದೆ. ಕೃಷ್ಣನದು ಹೇಗೋ ನಿಮ್ಮದು ಹಾಗೆಯೇ ಸ್ವರ್ಗದಲ್ಲಂತೂ ನೀವು ಬರುತ್ತೀರಲ್ಲವೇ. ಮತ್ತೆ ತ್ರೇತಾದಲ್ಲಿಯೂ ಬರುತ್ತಿರುತ್ತಾರೆ. ವೃದ್ಧಿ ಆಗುತ್ತಿರುತ್ತದೆ. ತ್ರೇತಾಯುಗದಲ್ಲಿ ಯಾರು ರಾಜರಾಗುತ್ತಾರೆಯೋ ಅವರು ತ್ರೇತಾದಲ್ಲಿಯೇ ಬರುತ್ತಾರೆಂದಲ್ಲ. ವಿದ್ಯಾವಂತರ ಮುಂದೆ ಅವಿದ್ಯಾವಂತರು ತಲೆ ಬಾಗಬೇಕಾಗುತ್ತದೆ. ಈ ನಾಟಕದ ರಹಸ್ಯವು ತಂದೆಗೆ ಗೊತ್ತಿದೆ. ಈಗ ನಿಮಗೆ ತಿಳಿದಿದೆ, ನಿಮ್ಮ ಮಿತ್ರ-ಸಂಬಂಧಿ ಮೊದಲಾದವರೆಲ್ಲರೂ ನರಕವಾಸಿಗಳಾಗಿದ್ದಾರೆ. ನಾವೆಲ್ಲರೂ ಪುರುಷೋತ್ತಮ ಸಂಗಮಯುಗಿಗಳಾಗಿದ್ದೇವೆ, ಈಗ ಪುರುಷೋತ್ತಮರಾಗುತ್ತಿದ್ದೇವೆ. ಹೊರಗಿರುವುದು ಮತ್ತು ಇಲ್ಲಿ 7 ದಿನಗಳು ಬಂದು ಇರುವುದರಲ್ಲಿ ಬಹಳ ಅಂತರವಿರುತ್ತದೆ. ಹಂಸಗಳ ಸಂಗದಿಂದ ಬಂದು ಕೊಕ್ಕರೆಗಳ ಸಂಗದಲ್ಲಿ ಹೋಗುತ್ತಾರೆ. ಕೆಡಿಸುವವರು ಅನೇಕರಿದ್ದಾರೆ, ಅನೇಕ ಮಕ್ಕಳು ಮುರಳಿಯ ಮೇಲೆ ಗಮನವನ್ನೇ ಇಡುವುದಿಲ್ಲ. ತಂದೆಯು ತಿಳಿಸುತ್ತಾರೆ - ಹುಡುಗಾಟಿಕೆ ಮಾಡಬೇಡಿ, ನೀವು ಸುಗಂದಭರಿತ ಹೂಗಳಾಗಬೇಕಾಗಿದೆ. ನೆನಪಿನ ಯಾತ್ರೆ ಒಂದೇ ಸಾಕು, ಇಲ್ಲಿ ನೀವು ಬ್ರಾಹ್ಮಣರದೇ ಸಂಗವಿದೆ, ಶ್ರೇಷ್ಠಾತಿಶ್ರೇಷ್ಠರು ಎಲ್ಲಿ, ನೀಚರು ಎಲ್ಲಿ! ಬಾಬಾ ನಾವು ಕೊಕ್ಕರೆಗಳ ಗುಂಪಿನಲ್ಲಿ ನಾನು ಒಂದು ಹಂಸ ಏನು ಮಾಡುವುದು ಎಂದು ಮಕ್ಕಳು ಬರೆಯುತ್ತಾರೆ. ಕೊಕ್ಕರೆಗಳು ಚುಚ್ಚುತ್ತಿರುತ್ತಾರೆ. ಎಷ್ಟು ಶ್ರಮ ಪಡಬೇಕಾಗುತ್ತದೆ. ತಂದೆಯ ಶ್ರೀಮತದಂತೆ ನಡೆಯುವುದರಿಂದ ಶ್ರೇಷ್ಠ ಪದವಿಯೇ ಸಿಗುತ್ತದೆ. ಸದಾ ಹಂಸಗಳಾಗಿರಿ, ಕೊಕ್ಕರೆಗಳ ಸಂಗದಲ್ಲಿ ಕೊಕ್ಕರೆಗಳು ಆಗಿಬಿಡಬೇಡಿ. ಗಾಯನವಿದೆ - ಆಶ್ಚರ್ಯವಾಗಿ ಕೇಳುತ್ತಾರೆ, ನಡೆಯುತ್ತಾರೆ ಮತ್ತೆ ಓಡಿ ಹೋಗುತ್ತಾರೆ..........ಸ್ವಲ್ಪ ಜ್ಞಾನವಿದ್ದರೆ ಸ್ವರ್ಗದಲ್ಲಂತೂ ಬರುತ್ತಾರೆ ಆದರೆ, ರಾತ್ರಿ-ಹಗಲಿನ ಅಂತರವಾಗುತ್ತದೆ. ಬಹಳ ಕಠಿಣ ಶಿಕ್ಷೆಗಳನ್ನು ಅನುಭವಿಸುತ್ತಾರೆ. ನನ್ನ ಮತದಂತೆ ನಡೆಯದೆ ಪತಿತರಾದರೆ ಒಂದಕ್ಕೆ 100ರಷ್ಟು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಪದವಿಯು ಕಡಿಮೆ ಆಗುತ್ತದೆ ಎಂದು ತಂದೆಯು ಹೇಳುತ್ತಾರೆ. ರಾಜಧಾನಿಯು ಸ್ಥಾಪನೆ ಆಗುತ್ತಿದೆ, ಈ ಮಾತುಗಳು ಮರೆತುಹೋಗುತ್ತವೆ. ಇದು ನೆನಪು ಇದ್ದರೂ ಸಹ ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥವನ್ನು ಅವಶ್ಯವಾಗಿ ಮಾಡುತ್ತಾರೆ. ಮಾಡದಿದ್ದರೆ ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟುಬಿಡುತ್ತಾರೆ ಎಂದು ತಿಳಿಯಲಾಗುತ್ತದೆ. ತಂದೆಯೊಂದಿಗೆ ಯೋಗವಿಲ್ಲ. ಇಲ್ಲಿ ಇದ್ದರೂ ಸಹ ಬುದ್ಧಿಯೋಗವು ಮಕ್ಕಳು-ಮರಿಗಳ ಕಡೆ ಇರುತ್ತದೆ. ತಂದೆಯು ತಿಳಿಸುತ್ತಾರೆ - ಎಲ್ಲವನ್ನು ಮರೆಯುವುದೆಂದರೆ ವೈರಾಗ್ಯವೆಂದು ಹೇಳಲಾಗುತ್ತದೆ. ಇದರಲ್ಲಿಯೂ ಸಹ ಶೇಕಡಾವಾರು ಇದೆ. ಎಲ್ಲಿ ಅಂದರೆ ಅಲ್ಲಿ ವಿಚಾರಗಳು ಹೊರಟುಹೋಗುತ್ತವೆ. ಪರಸ್ಪರ ಪ್ರೀತಿ ಇದ್ದರೂ ಸಹ ಬುದ್ಧಿಯು ಸಿಕ್ಕಿಹಾಕಿಕೊಳ್ಳುತ್ತದೆ.

ಈ ಕಣ್ಣುಗಳಿಂದ ಏನೆಲ್ಲಾ ನೋಡುತ್ತೀರೋ ಅದೆಲ್ಲವು ಸಮಾಪ್ತಿ ಆಗುತ್ತದೆ ಎಂದು ತಂದೆಯು ಪ್ರತಿನಿತ್ಯವು ತಿಳಿಸುತ್ತಾರೆ. ನಿಮ್ಮ ಬುದ್ಧಿಯು ಹೊಸ ಪ್ರಪಂಚದಲ್ಲಿ ಇರಲಿ, ಮತ್ತೆ ಬೇಹದ್ದಿನ ಸಂಬಂಧದೊಂದಿಗೆ ಬುದ್ಧಿಯೋಗವನ್ನು ಇಡಬೇಕು. ಈ ಪ್ರಿಯತಮನು ವಿಚಿತ್ರವಾಗಿದ್ದಾರೆ. ತಾವು ಯಾವಾಗ ಬರುತ್ತೀರೋ ಆಗ ತಮ್ಮ ವಿನಃ ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ ಎಂದು ಭಕ್ತಿಯಲ್ಲಿ ಹಾಡುತ್ತಾರೆ. ನಾನು ಈಗ ಬಂದಿದ್ದೇನೆ ಅಂದಮೇಲೆ ಈಗ ನೀವು ಎಲ್ಲಾ ಕಡೆಯಿಂದ ಬುದ್ಧಿಯನ್ನು ತೆಗೆಯಬೇಕಲ್ಲವೇ. ಇದೆಲ್ಲವೂ ಮಣ್ಣುಪಾಲಾಗುವುದಿದೆ. ನಿಮ್ಮದು ಮಣ್ಣಿನ ಜೊತೆ ಬುದ್ಧಿಯೋಗವಿದ್ದಂತೆ, ನನ್ನ ಜೊತೆ ಬುದ್ಧಿಯೋಗವಿದ್ದರೆ ಮಾಲೀಕರಾಗಿಬಿಡುತ್ತೀರಿ. ತಂದೆಯು ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡುತ್ತಾರೆ. ಭಕ್ತಿ ಏನು ಮತ್ತು ಜ್ಞಾನ ಏನಾಗಿದೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಈಗ ನಿಮಗೆ ಜ್ಞಾನವು ಸಿಕ್ಕಿದೆ ಆದ್ದರಿಂದ, ನೀವು ಭಕ್ತಿಯನ್ನು ತಿಳಿಯುತ್ತೀರಿ. ಈಗ ನಿಮಗೆ ಅನುಭವವಾಗುತ್ತಿದೆ- ಭಕ್ತಿಯಲ್ಲಿ ಎಷ್ಟೊಂದು ದುಃಖವಿದೆ, ಮನುಷ್ಯರು ಭಕ್ತಿ ಮಾಡುತ್ತಾರೆ, ತನ್ನನ್ನು ಬಹಳ ಸುಖಿಯೆಂದು ತಿಳಿಯುತ್ತಾರೆ. ಅನಂತರವೂ ಭಗವಂತನು ಬಂದು ಫಲವನ್ನು ಕೊಡುತ್ತಾರೆಂದು ಹೇಳುತ್ತಾರೆ. ಯಾರಿಗೆ ಮತ್ತು ಹೇಗೆ ಫಲ ಕೊಡುತ್ತಾರೆಂದು ತಿಳಿದುಕೊಂಡೇ ಇಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ - ತಂದೆಯು ಭಕ್ತಿಯ ಫಲವನ್ನು ಕೊಡುವುದಕ್ಕಾಗಿ ಬಂದಿದ್ದಾರೆ. ಯಾವ ತಂದೆಯಿಂದ ವಿಶ್ವದ ರಾಜಧಾನಿಯು ಸಿಗುತ್ತಿದೆಯೋ, ಆ ತಂದೆ ನೀಡುವ ಆದೇಶದಂತೆ ನಡೆಯಬೇಕಾಗುತ್ತದೆ. ಅದಕ್ಕೆ ಶ್ರೇಷ್ಠಾತಿ ಶ್ರೇಷ್ಠ ಮತವೆಂದು ಹೇಳಲಾಗುತ್ತದೆ, ಮತವಂತೂ ಎಲ್ಲರಿಗೂ ಸಿಗುತ್ತದೆ ಆದರೆ, ಕೆಲವರು ನಡೆಯುತ್ತಾರೆ ಕೆಲವರು ನಡೆಯುವುದಿಲ್ಲ. ಬೇಹದ್ದಿನ ಸಾಮ್ರಾಜ್ಯವು ಸ್ಥಾಪನೆಯಾಗುವುದಿದೆ. ನೀವೀಗ ತಿಳಿಯುತ್ತೀರಿ - ನಾವು ಏನಾಗಿದ್ದೆವು ಈಗ ನಮ್ಮ ಸ್ಥಿತಿಯೇನಾಗಿದೆ. ಮಾಯೆಯು ಒಮ್ಮೆಲೆ ಸಮಾಪ್ತಿ ಮಾಡಿಬಿಡುತ್ತದೆ. ಇದಂತೂ ಶವಗಳ ಪ್ರಪಂಚವಾಗಿದೆ. ಭಕ್ತಿಮಾರ್ಗದಲ್ಲಿ ನೀವು ಏನನ್ನು ಕೇಳುತ್ತಿದ್ದಿರೋ ಅದನ್ನು ಸತ್ಯ-ಸತ್ಯವೆಂದು ಹೇಳುತ್ತಿದ್ದಿರಿ ಆದರೆ, ನೀವೀಗ ತಿಳಿದುಕೊಂಡಿದ್ದೀರಿ- ಒಬ್ಬ ತಂದೆಯೇ ಸತ್ಯವನ್ನು ತಿಳಿಸುತ್ತಾರೆ, ಇಂತಹ ತಂದೆಯನ್ನು ನೆನಪು ಮಾಡಬೇಕು. ಇಲ್ಲಿ ಹೊರಗಿನವರು ಕುಳಿತಿದ್ದರೆ, ಅವರಿಗೆ ಏನೂ ಅರ್ಥವಾಗುವುದಿಲ್ಲ. ಇವರೇನು ತಿಳಿಸುತ್ತಾರೆಯೋ ಗೊತ್ತಿಲ್ಲ ಎಂದು ಹೇಳುತ್ತಾರೆ. ಇಡೀ ಪ್ರಪಂಚವು ಪರಮಾತ್ಮ ಸರ್ವವ್ಯಾಪಿಯಾಗಿದ್ದಾರೆಂದು ಹೇಳುತ್ತಾರೆ ಮತ್ತು ಅವರು ನಮ್ಮ ತಂದೆಯಾಗಿದ್ದಾರೆಂದು ಇವರು ಹೇಳುತ್ತಾರೆ. ಅವರು ತಲೆಯಿಂದ ಇಲ್ಲಾ-ಇಲ್ಲಾ ಎನ್ನುತ್ತಿರುತ್ತಾರೆ. ಆದರೆ ನಿಮ್ಮ ಒಳಗಡೆಯಿಂದ ಹೌದು-ಹೌದು ಎಂದು ಬರುತ್ತಾ ಇರುತ್ತದೆ. ಆದ್ದರಿಂದ ಹೊಸಬರಿಗೆ ಇಲ್ಲಿ ಅನುಮತಿ ಕೊಡುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ

ಧಾರಣೆಗಾಗಿ ಮುಖ್ಯಸಾರ-
1. ಸುಗಂಧಭರಿತ ಹೂಗಳಾಗಲು ಸಂಗವನ್ನು ಬಹಳ ಸಂಭಾಲನೆ ಮಾಡಬೇಕಾಗಿದೆ. ಹಂಸಗಳ ಸಂಗ ಮಾಡಬೇಕಾಗಿದೆ. ಹಂಸಗಳಾಗಿರಬೇಕಾಗಿದೆ. ಮುರುಳಿಯನ್ನು ಎಂದೂ ನಿರ್ಲಕ್ಷ್ಯ ಮಾಡಬಾರದು.

2. ಕರ್ಮಬಂಧನದಿಂದ ಮುಕ್ತರಾಗಲು ಸಂಗಮಯುಗದಲ್ಲಿ ತಮ್ಮ ಸರ್ವಸಂಬಂಧವನ್ನು ಒಬ್ಬ ತಂದೆಯೊಂದಿಗೆ ಇಡಬೇಕಾಗಿದೆ. ಪರಸ್ಪರರಲ್ಲಿ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳಬಾರದು. ಯಾವುದೇ ಹದ್ದಿನ ಸಂಬಂಧದಲ್ಲಿ ಪ್ರೀತಿಯಿಟ್ಟು ಬುದ್ಧಿಯೋಗವನ್ನು ಜೋತಾಡಿಸಬಾರದಾಗಿದೆ. ಒಬ್ಬರನ್ನೇ ನೆನಪು ಮಾಡಬೇಕಾಗಿದೆ.

ವರದಾನ:
ಪರಮಾತ್ಮನ ಪ್ರೀತಿಯಲ್ಲಿ ಲೀನವಾಗುವಂತಹ ಹಾಗೂ ಮಿಲನದಲ್ಲಿ ಮಗ್ನವಾಗುವಂತಹ ಸತ್ಯ ಸ್ನೇಹಿ ಭವ

ಸ್ನೇಹದ ನಿಶಾನಿ ಗಾಯನ ಮಾಡಲಾಗುತ್ತೆ-ಎರಡಿದ್ದರೂ ಸಹ ಎರಡಾಗಿಲ್ಲ ಆದರೆ ಸೇರಿಕೊಂಡು ಒಂದಾಗಿಬಿಡುವುದು, ಇದಕ್ಕೆ ಹೇಳಲಾಗುವುದು ಸಮಾವೇಶವಾಗುವುದು ಎಂದು. ಭಕ್ತರು ಇದೇ ಸ್ನೇಹದ ಸ್ಥಿತಿಯನ್ನು ಸಮಾವೇಶವಾಗುವುದು ಲೀನವಾಗುವುದು ಎಂದು ಹೇಳಿಬಿಟ್ಟಿದ್ದಾರೆ. ಪ್ರಿತಿಯಲ್ಲಿ ಲೀನವಾಗುವುದು- ಈ ಸ್ಥಿತಿಯಾಗಿದೆ ಆದರೆ ಸ್ಥಿತಿಗೆ ಬದಲಾಗಿ ಅವರು ಆತ್ಮದ ಅಸ್ತಿತ್ವವನ್ನು ಸದಾ ಕಾಲಕ್ಕಾಗಿ ಸಮಾಪ್ತಿಯಾಗುವುದು ಎಂದು ತಿಳಿದು ಬಿಟ್ಟರು. ನೀವು ಮಕ್ಕಳು ಯಾವಾಗ ತಂದೆಯ ಅಥವಾ ಆತ್ಮೀಯ ಪ್ರಿಯತಮನ ಮಿಲನದಿಂದ ಮಗ್ನರಾಗಿಬಿಡುವರೆಂದರೆ ಸಮಾನರಾಗಿಬಿಡುವಿರಿ.

ಸ್ಲೋಗನ್:
ಅಂತರ್ಮುಖಿಗಳು ಅವರೇ ಆಗಿದ್ದಾರೆ ಯಾರು ವ್ಯರ್ಥ ಸಂಕಲ್ಪಗಳಿಂದ ಮನಸ್ಸಿನ ಮೌನವಿರುತ್ತಾರೆ ಅವರು.