26.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಶರೀರ ನಿರ್ವಹಣಾರ್ಥವಾಗಿ ಕರ್ಮ ಮಾಡುತ್ತಾ ಬೇಹದ್ದಿನ ಉನ್ನತಿ ಮಾಡಿಕೊಳ್ಳಿ, ಬೇಹದ್ದಿನ ವಿದ್ಯೆಯನ್ನು ಎಷ್ಟು ಚೆನ್ನಾಗಿ ಓದುತ್ತೀರೋ ಅಷ್ಟು ಉನ್ನತಿ ಆಗುತ್ತದೆ"

ಪ್ರಶ್ನೆ:
ನೀವು ಮಕ್ಕಳು ಯಾವ ಬೇಹದ್ದಿನ ವಿದ್ಯೆಯನ್ನು ಓದುತ್ತಿದ್ದೀರಿ, ಇದರಲ್ಲಿ ಎಲ್ಲದಕ್ಕಿಂತ ಉತ್ತಮ, ಕಷ್ಟವಾದ ಸಬ್ಜೆಕ್ಟ್ (ವಿಷಯ) ಯಾವುದಾಗಿದೆ?

ಉತ್ತರ:
ಈ ವಿದ್ಯೆಯಲ್ಲಿ ಪರಸ್ಪರ ಸಹೋದರ-ಸಹೋದರ ದೃಷ್ಟಿಯನ್ನು ಪರಿಪಕ್ವ ಮಾಡಿಕೊಳುವುದು ಎಲ್ಲದಕ್ಕಿಂತ ಮ ವಿಷಯವಾಗಿದೆ. ತಂದೆಯು ಜ್ಞಾನದ ಯಾವ ಮೂರನೇಯ ನೇತ್ರವನ್ನು ಕೊಟ್ಟಿದ್ದಾರೆಯೋ, ಆ ನೇತ್ರದಿಂದ ಸಹೋದರ ಆತ್ಮವನ್ನು ನೋಡಿ ಆಗ ಎಂದೂ ಕಣ್ಣುಗಳು ಮೋಸ ಹೋಗುವುದಿಲ್ಲ. ಯಾವುದೇ ದೇಹಧಾರಿಯ ನಾಮ-ರೂಪದಲ್ಲಿ ಬುದ್ಧಿಯು ಹೋಗಬಾರದು. ಬುದ್ಧಿಯಲ್ಲಿ ಅಂಶಮಾತ್ರವೂ ವಿಕಾರಿ ಛೀ-ಛೀ ಸಂಕಲ್ಪಗಳು ನಡೆಯಬಾರದು. ಆದರೆ ಇದು ಪರಿಶ್ರಮವಾಗಿದೆ. ಈ ಸಬ್ಜೆಕ್ಟ್ ನಲ್ಲಿ ೀರ್ಣರಾಗುವವರು ವಿಶ್ವದ ಮಾಲೀಕರಾಗಿಬಿಡುತ್ತಾರೆ.

ಓಂ ಶಾಂತಿ.
ಬೇಹದ್ದಿನ ತಂದೆಯು ಬೇಹದ್ದಿನ ಮಕ್ಕಳಿಗೆ ತಿಳಿಸುತ್ತಾರೆ. ಪ್ರತಿಯೊಂದು ಮಾತು - ಒಂದು ಹದ್ದಿನದ್ದಾಗಿರುತ್ತದೆ, ಇನ್ನೊಂದು ಬೇಹದ್ದಿನದಾಗಿರುತ್ತದೆ. ಇಷ್ಟು ಸಮಯ ನೀವು ಹದ್ದಿನಲ್ಲಿದ್ದಿರಿ, ಈಗ ಬೇಹದ್ದಿನಲ್ಲಿ ಇದ್ದೀರಿ. ನಿಮ್ಮ ವಿದ್ಯೆಯೂ ಸಹ ಬೇಹದ್ದಿನದಾಗಿದೆ. ಬೇಹದ್ದಿನ ಚಕ್ರವರ್ತಿಗಳಾಗಲು ವಿದ್ಯೆಯಿದೆ, ಇದಕ್ಕಿಂತ ಉತ್ತಮ ವಿದ್ಯೆ ಬೇರೆ ಯಾವುದೂ ಇರಲು ಸಾಧ್ಯವಿಲ್ಲ. ಈ ವಿದ್ಯೆಯನ್ನು ಯಾರು ಓದಿಸುತ್ತಾರೆ? ಬೇಹದ್ದಿನ ತಂದೆ ಭಗವಂತ. ಶರೀರ ನಿರ್ವಹಣೆಗಾಗಿ ಎಲ್ಲವನ್ನೂ ಮಾಡಬೇಕು ಆದರೆ, ತಮ್ಮ ಉನ್ನತಿಗಾಗಿಯೂ ಏನಾದರೂ ಮಾಡಿಕೊಳ್ಳಬೇಕಾಗುತ್ತದೆ. ಅನೇಕರು ನೌಕರಿ ಮಾಡುತ್ತಿದ್ದರೂ ಉನ್ನತಿಗಾಗಿ ಹೆಚ್ಚಿನದಾಗಿ ಓದುತ್ತಿರುತ್ತಾರೆ ಆದರೆ, ಅಲ್ಲಿ ಅದು ಕ್ಷಣಿಕದ ಉನ್ನತಿಯಾಗಿದೆ, ಇಲ್ಲಿ ಬೇಹದ್ದಿನ ತಂದೆಯ ಬಳಿ ಬೇಹದ್ದಿನ ಉನ್ನತಿಯಾಗಿದೆ. ಈಗ ನೀವು ಹದ್ದಿನ ಮತ್ತು ಬೇಹದ್ದಿನ ಎರಡು ಉನ್ನತಿಗಳನ್ನು ಮಾಡಿಕೊಳ್ಳಿ ಎಂದು ತಂದೆಯು ತಿಳಿಸುತ್ತಾರೆ. ನಾವು ಬೇಹದ್ದಿನ ಸತ್ಯ ಸಂಪಾದನೆಯನ್ನು ಮಾಡಬೇಕು ಎಂದು ಬುದ್ಧಿಯಿಂದ ತಿಳಿಯುತ್ತೀರಿ. ಇಲ್ಲಂತೂ ಎಲ್ಲವೂ ಮಣ್ಣುಪಾಲಾಗುವುದಿದೆ. ಎಷ್ಟೆಷ್ಟು ನೀವು ಬೇಹದ್ದಿನ ಸಂಪಾದನೆಯಲ್ಲಿ ಸಮಯ ಕೊಡುತ್ತಾ ಹೋಗುತ್ತೀರೋ ಅಷ್ಟು ಹದ್ದಿನ ಸಂಪಾದನೆಯ ಮಾತುಗಳು ಮರೆತುಹೋಗುತ್ತವೆ. ಈಗ ವಿನಾಶವಾಗಲಿದೆ ಎಂಬುದನ್ನು ಎಲ್ಲರೂ ತಿಳಿಯುತ್ತಾರೆ. ವಿನಾಶವೂ ಸಮೀಪ ಬರುತ್ತಿದ್ದಂತೆ ಭಗವಂತನನ್ನೂ ಹುಡುಕುತ್ತಾರೆ. ವಿನಾಶವಾಗುತ್ತದೆ ಎಂದರೆ ಅವಶ್ಯವಾಗಿ ಸ್ಥಾಪನೆ ಮಾಡುವವರು ಇರುತ್ತಾರೆಂದು ಪ್ರಪಂಚದವರು ತಿಳಿದುಕೊಂಡಿಲ್ಲ. ನೀವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ವಿದ್ಯೆಯನ್ನು ಓದುತ್ತಿದ್ದೀರಿ. ಹಾಸ್ಟಲ್ನಲ್ಲಿ ವಿದ್ಯಾರ್ಥಿಗಳಿರುತ್ತಾರೆ ಆದರೆ, ಈ ಹಾಸ್ಟಲ್ ಭಿನ್ನವಾಗಿದೆ ಇದರಲ್ಲಿ ಕೆಲವರು ಇಂತಹವರೂ ಇರುತ್ತಾರೆ - ಪ್ರಾರಂಭದಲ್ಲಿ ಬಂದವರು ಹಾಗೆಯೇ ಉಳಿದುಕೊಂಡಿದ್ದಾರೆ. ಹಾಗೆಯೇ ಬಂದರು, ವಿಭಿನ್ನರು ಬಂದರು. ಎಲ್ಲರೂ ಒಳ್ಳೆಯವರೇ ಬಂದರು ಎಂದಲ್ಲ. ಚಿಕ್ಕ-ಚಿಕ್ಕ ಮಕ್ಕಳನ್ನೂ ಕರೆತಂದಿರಿ. ನೀವು ಮಕ್ಕಳನ್ನು ಸಂಭಾಲನೆ ಮಾಡುತ್ತಿದ್ದೀರಿ ಆದರೆ, ಅವರಲ್ಲಿ ಅನೇಕರು ಹೊರಟು ಹೋದರು. ಹೂದೋಟದಲ್ಲಿ ಹೂಗಳನ್ನು ನೋಡಿ ಪಕ್ಷಿಗಳೂ ಸಹ ಹೇಗೆ ಧ್ವನಿ ಮಾಡುತ್ತವೆ. ಈ ಸಮಯದಲ್ಲಿ ಮನುಷ್ಯ ಸೃಷ್ಟಿಯೂ ಸಹ ಹಾಗೆಯೇ ಇದೆ. ನಮ್ಮಲ್ಲಿ ಯಾವುದೇ ಸಭ್ಯತೆ ಇರಲಿಲ್ಲ. ಸಭ್ಯತೆವುಳ್ಳವರ ಮಹಿಮೆಗಳನ್ನು ಮಾಡುತ್ತಿದ್ದೆವು. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲ ಎಂದು ಹಾಡುತ್ತಿದ್ದೆವು. ಭಲೆ ಎಷ್ಟೇ ಹಿರಿಯ ವ್ಯಕ್ತಿಗಳು ಬರಲಿ, ನಾವು ರಚಯಿತ ತಂದೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೆಂದು ಅನುಭವ ಮಾಡುತ್ತಾರೆ ಆದರೆ, ಅವರು ಯಾವ ಕೆಲಸಕ್ಕೂ ಇಲ್ಲ. ನೀವೂ ಸಹ ಹಾಗೆಯೇ ಇದ್ದೀರಿ. ಈಗ ತಂದೆಯದು ಚಮತ್ಕಾರವಾಗಿದೆ ಎಂದು ತಿಳಿಸುತ್ತೀರಿ. ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಆ ರಾಜ್ಯಭಾಗ್ಯವನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾವುದೇ ವಿಘ್ನಗಳನ್ನು ಹಾಕಲು ಸಾಧ್ಯವಿಲ್ಲ. ನಾವು ಹೇಗಿದ್ದವರು ಹೇಗಾದೆವು! ಅಂದಮೇಲೆ ಇಂತಹ ತಂದೆಯ ಶ್ರೀಮತದಂತೆ ಅವಶ್ಯವಾಗಿ ನಡೆಯಬೇಕು. ಭಲೆ ಪ್ರಪಂಚದಲ್ಲಿ ಎಷ್ಟೇ ನಿಂದನೆ, ಏರುಪೇರು ಆಗುತ್ತವೆ, ಇದು ಯಾವುದೇ ಹೊಸ ಮಾತಲ್ಲ. 5000 ವರ್ಷಗಳ ಹಿಂದೆಯೂ ಆಗಿತ್ತು, ಶಾಸ್ತ್ರಗಳಲ್ಲಿಯೂ ಇದೆ. ಮಕ್ಕಳಿಗೆ ತಿಳಿಸಿದ್ದಾರೆ, ಯಾವ ಭಕ್ತಿಮಾರ್ಗದ ಶಾಸ್ತ್ರಗಳು ಇವೆಯೋ ಅದನ್ನು ಭಕ್ತಿಮಾರ್ಗದಲ್ಲಿ ಓದುತ್ತಿದ್ದಿರಿ. ಈ ಸಮಯದಲ್ಲಿ ನೀವು ಜ್ಞಾನದಿಂದ ಸುಖಧಾಮಕ್ಕೆ ಹೋಗುತ್ತೀರಿ, ಅದಕ್ಕಾಗಿ ಪೂರ್ಣ ಪುರುಷಾರ್ಥ ಮಾಡಬೇಕು. ಈಗ ಎಷ್ಟು ಪುರುಷಾರ್ಥ ಮಾಡುತ್ತೀರೋ ಕಲ್ಪ-ಕಲ್ಪವು ಅಷ್ಟೇ ಆಗುತ್ತದೆ. ಈಗ ತಮ್ಮಲ್ಲಿ ಪರಿಶೀಲನೆ ಮಾಡಿಕೊಳ್ಳಬೇಕು - ನಾವು ಎಲ್ಲಿಯವರೆಗೆ ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆ, ನಾವು ಎಷ್ಟು ಚೆನ್ನಾಗಿ ಓದುತ್ತೇವೆಯೋ ಅಷ್ಟು ಮೇಲೆ ಹೋಗುತ್ತೇವೆ. ಇವರು ನನಗಿಂತಲೂ ಬುದ್ಧಿವಂತರಾಗಿದ್ದಾರೆ, ನಾವು ಬುದ್ಧಿವಂತರಾಗಬೇಕು ಎಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ತಿಳಿದುಕೊಳ್ಳಬೇಕು. ವ್ಯಾಪಾರಿಗಳಲ್ಲಿಯೂ ಸಹ ಈ ರೀತಿ ಆಗುತ್ತದೆ - ನಾನು ಇವರಿಗಿಂತ ಮೇಲೆ ಹೋಗಬೇಕು ಅಂದರೆ ಬುದ್ಧಿವಂತರಾಗಬೇಕು ಎಂದು ಅಲ್ಪಕಾಲದ ಸುಖಕ್ಕಾಗಿ ಪರಿಶ್ರಮ ಮಾಡುತ್ತಾರೆ. ಮಧುರಾತಿ ಮಧುರ ಮಕ್ಕಳೇ, ನಾನು ನಿಮ್ಮ ಎಷ್ಟು ದೊಡ್ಡ ತಂದೆಯಾಗಿದ್ದೇನೆ ಎಂದು ತಂದೆಯು ತಿಳಿಸುತ್ತಾರೆ. ಸಾಕಾರ ತಂದೆಯು ಇದ್ದಾರೆ, ನಿರಾಕಾರ ತಂದೆಯು ಇದ್ದಾರೆ, ಇಬ್ಬರು ಒಟ್ಟಿಗೆ ಇದ್ದಾರೆ. ಮಧುರ ಮಕ್ಕಳೇ, ಈಗ ನೀವು ಬೇಹದ್ದಿನ ವಿದ್ಯೆಯನ್ನು ಅರಿತುಕೊಂಡಿದ್ದೀರಿ ಎಂದು ಇಬ್ಬರು ಸೇರಿ ಹೇಳುತ್ತಾರೆ. ಮತ್ತ್ಯಾರೂ ತಿಳಿದುಕೊಂಡಿಲ್ಲ. ಮೊದಲ ಮಾತು, ನಮಗೆ ಓದಿಸುವವರು ಯಾರು? ಭಗವಂತನು ಏನನ್ನು ಓದಿಸುತ್ತಾರೆ? ರಾಜಯೋಗ. ನೀವು ರಾಜಋಷಿಗಳಾಗಿದ್ದೀರಿ, ಅವರು ಹಠಯೋಗಿಗಳಾಗಿದ್ದಾರೆ. ಅವರು ಋಷಿಗಳಾಗಿದ್ದಾರೆ ಆದರೆ, ಹದ್ದಿನ ಋಷಿಗಳು. ನಾವು ಮನೆ, ಮಠವನ್ನು ತ್ಯಜಿಸಿದ್ದೇವೆ ಎಂದು ಅವರು ಹೇಳುತ್ತಾರೆ, ಇದೇನಾದರೂ ಒಳ್ಳೆಯ ಕೆಲಸ ಮಾಡಿದ್ದಾರೇಯೇ? ಯಾವಾಗ ನಿಮಗೆ ವಿಕಾರಕ್ಕಾಗಿ ತೊಂದರೆ ಕೊಡುತ್ತಾರೆಯೋ ಆಗ ನೀವು ಮನೆಯನ್ನು ತ್ಯಜಿಸುತ್ತೀರಿ. ಆ ಸನ್ಯಾಸಿಗಳಿಗೆ ಯಾವ ತೊಂದರೆ ಆಯಿತು? ನಿಮಗೆ ಏಟು ಬಿದ್ದ ಕಾರಣ ನೀವು ಓಡಿ ಬಂದಿದ್ದೀರಿ. ಒಬ್ಬೊಬ್ಬರನ್ನು ಕೇಳಿ ಕುಮಾರಿಯರು, ಸ್ತ್ರೀಯರು, ಎಷ್ಟೊಂದು ಏಟನ್ನು ತಿಂದಿದ್ದಾರೆ. ಆದ್ದರಿಂದಲೇ ಹೊರಟು ಬಂದಿದ್ದಾರೆ. ಪ್ರಾರಂಭದಲ್ಲಿ ಅನೇಕರು ಬಂದರು, ಇಲ್ಲಿ ಜ್ಞಾನಾಮೃತವು ಸಿಗುತ್ತಿತ್ತು, ಆದ್ದರಿಂದ ನಾವು ಜ್ಞಾನಾಮೃತವನ್ನು ಕುಡಿಯಲು ಓಂ ರಾಧೆ (ಮಮ್ಮಾರವರ) ಬಳಿ ಹೋಗುತ್ತಿದ್ದೆವು. ಪತ್ರವನ್ನು ತೆಗೆದುಕೊಂಡು ಬಂದರು. ಈ ವಿಕಾರದ ಮೇಲೆಯೇ ಜಗಳ, ಹೊಡೆದಾಟವು ಪ್ರಾರಂಭದಿಂದಲೂ ನಡೆಯುತ್ತಾ ಬಂದಿದೆ. ಯಾವಾಗ ಆಸುರೀ ಪ್ರಪಂಚದ ವಿನಾಶ ಆಗುವುದೋ ಆಗ ಇವು ನಿಲ್ಲುತ್ತವೆ. ಮತ್ತೆ ಅರ್ಧಕಲ್ಪಕ್ಕಾಗಿ ಇದು ನಿಂತುಹೋಗುತ್ತದೆ.

ಈಗ ನೀವು ಮಕ್ಕಳು ಬೇಹದ್ದಿನ ತಂದೆಯಿಂದ ಪ್ರಾಲಬ್ಧವನ್ನು ಪಡೆಯುತ್ತೀರಿ. ಬೇಹದ್ದಿನ ತಂದೆಯು ಎಲ್ಲರಿಗೆ ಬೇಹದ್ದಿನ ಪ್ರಾಲಬ್ಧವನ್ನು ಕೊಡುತ್ತಾರೆ. ಹದ್ದಿನ ತಂದೆಯು ಹದ್ದಿನ ಪ್ರಾಲಬ್ಧವನ್ನು ಕೊಡುತ್ತಾರೆ. ಅಲ್ಲಿ ಗಂಡು ಮಕ್ಕಳಿಗೆ ಆಸ್ತಿ ಸಿಗುತ್ತದೆ. ಇಲ್ಲಿ ತಂದೆಯು ನೀವು ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಇಬ್ಬರೂ ಆಸ್ತಿಗೆ ಅಧಿಕಾರಿ ಆಗಿದ್ದೀರಿ ಎಂದು ತಿಳಿಸುತ್ತಾರೆ. ಆ ಲೌಕಿಕ ತಂದೆಯ ಬಳಿ ಭೇದ-ಭಾವ ಇರುತ್ತದೆ. ಕೇವಲ ಮಗನನ್ನು ವಾರಸುದಾರರನ್ನಾಗಿ ಮಾಡುತ್ತಾರೆ. ಸ್ತ್ರೀಯನ್ನು ಅರ್ಧಾಂಗಿ ಎಂದು ಹೇಳುತ್ತಾರೆ ಆದರೆ ಅವರ ಭಾಗವನ್ನು ಕೊಡುವುದಿಲ್ಲ. ಮಗನೇ ಸಂಭಾಲನೆ ಮಾಡುತ್ತಾನೆ. ತಂದೆಗೆ ಮಕ್ಕಳಲ್ಲಿ ಮೋಹವಿರುತ್ತದೆ, ಈ ತಂದೆಯಂತೂ ನಿಯಮನುಸಾರ ಎಲ್ಲಾ ಮಕ್ಕಳಿಗೆ (ಆತ್ಮಗಳಿಗೆ) ಆಸ್ತಿಯನ್ನು ಕೊಡುತ್ತಾರೆ. ಇಲ್ಲಿ ಮಗ ಅಥವಾ ಮಗಳ ಭೇದವು ಗೊತ್ತೇ ಇಲ್ಲ. ನೀವು ತಂದೆಯಿಂದ ಎಷ್ಟೊಂದು ಆಸ್ತಿಯನ್ನು ಪಡೆಯುತ್ತೀರಿ ಆದರೂ ಪೂರ್ಣ ಓದುವುದಿಲ್ಲ ಎಂದರೆ ಪೂರ್ಣ ವಿದ್ಯೆಯನ್ನು ಬಿಟ್ಟುಬಿಡುತ್ತೀರಿ. ಬಾಬಾ, ಇಂತಹವರು ರಕ್ತದಿಂದ ಬರೆದುಕೊಟ್ಟಿದ್ದಾರೆ ಆದರೆ ಈಗ ಬರುತ್ತಿಲ್ಲ ಎಂದು ಮಕ್ಕಳು ಬರೆಯುತ್ತಾರೆ. ಬಾಬಾ, ತಾವು ಪ್ರೀತಿ ಮಾಡಿ, ಇಲ್ಲಾ ತಿರಸ್ಕರಿಸಿ ನಾವು ತಮ್ಮನ್ನು ಎಂದೂ ಬಿಟ್ಟು ಹೋಗುವುದಿಲ್ಲ ಎಂದು ರಕ್ತದಲ್ಲಿ ಬರೆದುಕೊಡುತ್ತಾರೆ, ಆದರೆ ತಂದೆಯಿಂದ ಪಾಲನೆ ಪಡೆದು ಮತ್ತೆ ಹೊರಟುಹೋಗುತ್ತಾರೆ. ಇದೆಲ್ಲವೂ ನಾಟಕವಾಗಿದೆ ಎಂದು ತಂದೆಯು ತಿಳಿಸುತ್ತಾರೆ, ಕೆಲವರು ಆಶ್ಚರ್ಯವೆನಿಸುವಂತೆ ಓಡಿಹೋಗುತ್ತಾರೆ. ಇಲ್ಲಿ ಕುಳಿತಿದ್ದಾರೆಂದರೆ ನಿಶ್ಚಯವಿದೆ - ಇಂತಹ ಬೇಹದ್ದಿನ ತಂದೆಯನ್ನು ನಾವು ಹೇಗೆ ಬಿಡುವುದು. ಇದು ವಿದ್ಯೆಯಾಗಿದೆ. ನಾನು ಜೊತೆ ಕರೆದುಕೊಂಡು ಹೋಗುತ್ತೇನೆಂದು ಗ್ಯಾರಂಟಿಯನ್ನು ಕೊಡುತ್ತೇನೆ. ಸತ್ಯಯುಗದ ಆದಿಯಲ್ಲಿ ಇಷ್ಟೆಲ್ಲಾ ಮನುಷ್ಯರು ಇರಲಿಲ್ಲ. ಈಗ ಸಂಗಮದಲ್ಲಿ ಎಲ್ಲಾ ಮನುಷ್ಯರು ಇದ್ದಾರೆ. ಸತ್ಯಯುಗದಲ್ಲಿ ಬಹಳ ಕಡಿಮೆ ಇದ್ದಾರೆ. ಇಷ್ಟೆಲ್ಲಾ ಧರ್ಮದವರು ಯಾರೂ ಇರುವುದಿಲ್ಲ. ಅವರದೆಲ್ಲಾ ತಯಾರಾಗುತ್ತಿದೆ. ಈ ಶರೀರವನ್ನು ಬಿಟ್ಟು ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ, ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಪಾತ್ರವನ್ನು ಅಭಿನಯಿಸಲು ಎಲ್ಲಿಂದ ಬಂದಿದ್ದಾರೋ ಅಲ್ಲಿಗೆ ಹೋಗುತ್ತಾರೆ. ಆ ನಾಟಕವು 2 ಗಂಟೆಯದ್ದಾಗಿದೆ, ಆದರೆ ಇದು ಬೇಹದ್ದಿನ ನಾಟಕವಾಗಿದೆ. ನಿಮಗೆ ತಿಳಿದಿದೆ, ನಾವು ಆ ಮನೆಯ ನಿವಾಸಿಗಳಾಗಿದ್ದೇವೆ ಮತ್ತು ಒಬ್ಬ ತಂದೆಯ ಮಕ್ಕಳಾಗಿದ್ದೇವೆ. ನಾವು ಇರುವಂತಹ ಸ್ಥಾನವು ವಾಣಿಯಿಂದ ದೂರವಾಗಿರುವ ನಿರ್ವಾಣಧಾಮವಾಗಿದೆ, ಅಲ್ಲಿ ಶಬ್ದವಿರುವುದಿಲ್ಲ. ಬ್ರಹ್ಮ್ತತ್ವದಲ್ಲಿ ಲೀನವಾಗಿಬಿಡುತ್ತೇವೆಂದು ಮನುಷ್ಯರು ತಿಳಿಯುತ್ತಾರೆ. ಆತ್ಮವು ಅವಿನಾಶಿಯಾಗಿದೆ, ಅದು ಎಂದೂ ವಿನಾಶ ಆಗಿವುದಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಎಷ್ಟೊಂದು ಜೀವಾತ್ಮರಿದ್ದಾರೆ, ಆತ್ಮವು ವಿನಾಶಿ ಜೀವ ಅರ್ಥಾತ್ ಶರೀರದ ಮೂಲಕ ಪಾತ್ರವನ್ನು ಅಭಿನಯಿಸುತ್ತದೆ. ಆತ್ಮಗಳೆಲ್ಲರೂ ನಾಟಕದ ಪಾತ್ರಧಾರಿಗಳಾಗಿದ್ದಾರೆ. ಎಲ್ಲಾ ಆತ್ಮಗಳ ನಿವಾಸ ಸ್ಥಾನ ಬ್ರಹ್ಮಾಂಡ ಆ ಮನೆಯಾಗಿದೆ. ಆತ್ಮವು ಅಂಡಾಕಾರವಾಗಿ ಕಾಣಿಸುತ್ತದೆ. ಬಹ್ಮಾಂಡ ಅದರ ನಿವಾಸ ಸ್ಥಾನವಾಗಿದೆ. ಪ್ರತಿಯೊಂದು ಮಾತನ್ನು ಚೆನ್ನಾಗಿ ತಿಳಿಯಬೇಕಾಗಿದೆ. ತಿಳಿಯದಿದ್ದರೆ ಮುಂದೆ ಹೋದಂತೆ ತಿಳಿಯುತ್ತಾ ಹೋಗುತ್ತೀರಿ. ಒಂದುವೇಳೆ ಕೇಳುತ್ತಲೇ ಇದ್ದರೆ ಮಾತ್ರ. ಬಿಟ್ಟುಬಿಡುತ್ತೀರಿ ಎಂದರೆ ಮತ್ತೇನನ್ನೂ ತಿಳಿದುಕೊಳ್ಳಲು ಆಗುವುದಿಲ್ಲ. ನೀವು ಮಕ್ಕಳಿಗೆ ಗೊತ್ತಿದೆ, ಈ ಹಳೆಯ ಪ್ರಪಂಚವು ಸಮಾಪ್ತಿ ಆಗಿ ಹೊಸ ಪ್ರಪಂಚವು ಸ್ಥಾಪನೆಯಾಗುತ್ತದೆ. ನಿನ್ನೆ ನೀವು ವಿಶ್ವದ ಮಾಲೀಕರಾಗಿದ್ದಿರಿ, ಈಗ ಪುನಃ ವಿಶ್ವದ ಮಾಲೀಕರಾಗಲು ಬಂದಿದ್ದೀರಿ ಎಂದು ತಂದೆಯು ಹೇಳುತ್ತಾರೆ. ತಂದೆಯು ನಮ್ಮನ್ನು ಮಾಲೀಕರನ್ನಾಗಿ ಮಾಡುತ್ತಾರೆ ಅದನ್ನು ಯಾರೂ ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಗೀತೆಯು ಇದೆಯಲ್ಲವೆ. ಆಕಾಶ, ಭೂಮಿ ಎಲ್ಲದರ ಮೇಲೆ ಅಧಿಕಾರವಿರುತ್ತದೆ. ಈ ಪ್ರಪಂಚದಲ್ಲಿ ನೋಡಿ, ಏನೇನಿದೆ! ಎಲ್ಲರೂ ಸ್ವಾರ್ಥದ ಜೊತೆಗಾರರಾಗಿದ್ದಾರೆ. ಅಲ್ಲಂತೂ ಈ ರೀತಿ ಇರುವುದಿಲ್ಲ. ಹೇಗೆ ಲೌಕಿಕ ತಂದೆಯು ಮಕ್ಕಳಿಗೆ ಹಣ, ಸಂಪತ್ತೆಲ್ಲವೂ ಕೊಟ್ಟು ಇದನ್ನು ಚೆನ್ನಾಗಿ ಸಂಭಾಲನೆ ಮಾಡಿ ಎಂದು ಹೇಳುತ್ತಾರೆ ಹಾಗೆಯೇ ಬೇಹದ್ದಿನ ತಂದೆಯು ಸಹ ಹೇಳುತ್ತಾರೆ - ನಿಮಗೆ ಹಣ, ಸಂಪತ್ತು ಎಲ್ಲವನ್ನೂ ಕೊಡುತ್ತೇನೆ. ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು ನೀವು ನನ್ನನ್ನು ಕರೆದಿರಿ ಆದ್ದರಿಂದ, ಪಾವನರನ್ನಾಗಿ ಮಾಡಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ತಂದೆಯು ಎಷ್ಟು ಯುಕ್ತಿಯಿಂದ ತಿಳಿಸುತ್ತಾರೆ - ಇದರ ಹೆಸರೇ ಆಗಿದೆ, ಸಹಜ ಜ್ಞಾನ ಮತ್ತು ಯೋಗ. ಸೆಕೆಂಡಿನ ಮಾತಾಗಿದೆ, ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿ. ನೀವೀಗ ಎಷ್ಟು ದೂರಾಂದೇಶಿ (ವಿಶಾಲ) ಬುದ್ಧಿಯವರಾಗಿ ಬಿಟ್ಟಿದ್ದೀರಿ. ಇದೇ ಚಿಂತನೆ ನಡೆಯುತ್ತಿರಲಿ - ನಾವು ಬೇಹದ್ದಿನ ತಂದೆಯ ಮೂಲಕ ಓದುತ್ತಿದ್ದೇವೆ, ನಾವು ನಮಗಾಗಿ ರಾಜ್ಯಸ್ಥಾಪನೆ ಮಾಡಿಕೊಳ್ಳುತ್ತಿದ್ದೇವೆ ಅಂದಮೇಲೆ ಅದರಲ್ಲಿ ನಾವು ಶ್ರೇಷ್ಠಪದವಿಯನ್ನು ಏಕೆ ಪಡೆಯಬಾರದು! ಕಡಿಮೆ ಪದವಿಯನ್ನು ಏಕೆ ಪಡೆಯಬೇಕು! ರಾಜಧಾನಿಯು ಸ್ಥಾಪನೆ ಆಗುತ್ತಿದೆ, ಅದರಲ್ಲಿಯೂ ಪದವಿಗಳು ಇರುತ್ತವೆಯಲ್ಲವೇ. ದಾಸ-ದಾಸಿಯರು ಅನೇಕರಿರುತ್ತಾರೆ, ಅವರು ಬಹಳ ಸುಖವನ್ನು ಪಡೆಯುತ್ತಾರೆ, ಅದರ ಜೊತೆ ಮಹಲ್ಗಳಲ್ಲಿ ಇರುತ್ತಾರೆ. ಮಕ್ಕಳು ಮೊದಲಾದವರನ್ನು ಸಂಭಾಲನೆ ಮಾಡುತ್ತಾರೆ, ಎಷ್ಟೊಂದು ಸುಖಿಯಾಗಿರುತ್ತಾರೆ. ಕೇವಲ ದಾಸ-ದಾಸಿಯರು ಎಂದು ಹೆಸರಿದೆ, ರಾಜ-ರಾಣಿಯು ಏನನ್ನು ತಿನ್ನುವರೋ ಅದನ್ನೇ ದಾಸ-ದಾಸಿಯರೂ ತಿನ್ನುತ್ತಾರೆ. ಪ್ರಜೆಗಳಿಗಂತು ಸಿಗುವುದಿಲ್ಲ. ದಾಸ-ದಾಸಿಯರಿಗೂ ಬಹಳ ಮಾನ್ಯತೆ ಇದೆ, ಆದರೆ ಅವರಲ್ಲಿಯೂ ನಂಬರ್ವಾರ್ ಇರುತ್ತಾರೆ. ನೀವು ಮಕ್ಕಳು ಇಡೀ ವಿಶ್ವದ ಮಾಲೀಕರಾಗುತ್ತೀರಿ. ದಾಸ-ದಾಸಿಯರು ಇಲ್ಲಿಯು ರಾಜರುಗಳ ಬಳಿ ಇರುತ್ತಾರೆ, ಯಾವಾಗ ರಾಜಕುಮಾರಿಯರು ಸಭೆ ಸೇರುತ್ತಾರೆ ಪರಸ್ಪರ ಮಿಲನ ಮಾಡುತ್ತಾರೆಂದರೆ, ಪೂರ್ಣ ಶೃಂಗಾರ ಮಾಡಿಕೊಂಡು ಕಿರೀಟವನ್ನು ಧರಿಸುತ್ತಾರೆ. ಮತ್ತೆ ಅವರಲಿಯು ನಂಬರ್ವಾರ್ ಶೋಭಾಯಮಾನ ಸಭೆ ಸೇರುತ್ತಾರೆ ಅದರಲ್ಲಿ ರಾಣಿಯರು ಕುಳಿತುಕೊಳ್ಳುವುದಿಲ್ಲ ಅವರು ಪರದೆಯ ಒಳಗಡೆ ಇರುತ್ತಾರೆ. ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಅವರನ್ನು ನೀವು ಪ್ರಾಣದಾತನೆಂದು, ಜೀವದಾನ ನೀಡುವವರೆಂದು ಹೇಳುತ್ತೀರಿ. ಪದೇ-ಪದೇ ಶರೀರ ಬಿಡುವುದರಿಂದ ಪಾರು ಮಾಡುವವರಾಗಿದ್ದಾರೆ. ಅಲ್ಲಿ ಸಾಯುವ ಚಿಂತೆಯೇ ಇರುವುದಿಲ್ಲ, ಇಲ್ಲಿ ಎಷ್ಟೊಂದು ಚಿಂತೆ ಇರುತ್ತದೆ. ಇಲ್ಲಿ ಸ್ವಲ್ಪವೇನಾದರೂ ಆಯಿತೆಂದರೆ, ಅವರನ್ನು ಬದುಕಿಸಬೇಕೆಂದು ವೈದ್ಯರನ್ನು ಕರೆಸುತ್ತಾರೆ, ಸತ್ಯಯುಗದಲ್ಲಿ ಹೆದರುವ ಮಾತಿಲ್ಲ. ನೀವು ಮೃತ್ಯುವಿನ ಮೇಲೆ ಜಯಗಳಿಸುತ್ತೀರಿ ಅಂದಮೇಲೆ ಎಷ್ಟೊಂದು ನಶೆ ಇರಬೇಕು. ಓದಿಸುವವರನ್ನು ನೆನಪು ಮಾಡಿದರೂ ಸಾಕು ನೆನಪಿನ ಯಾತ್ರೆಯಾಯಿತು. ತಂದೆ, ಶಿಕ್ಷಕ, ಸದ್ಗುರುವನ್ನು ನೆನಪು ಮಾಡಿದರೂ ಸರಿ. ಎಷ್ಟು ಶ್ರೀಮತದಂತೆ ನಡೆಯುತ್ತೀರಿ, ಮನಸಾ-ವಾಚಾ-ಕರ್ಮಣಾ ಪಾವನರಾಗಬೇಕಾಗಿದೆ. ಬುದ್ಧಿಯಲ್ಲಿ ವಿಕಾರಿ ಸಂಕಲ್ಪಗಳೂ ಸಹ ನಡೆಯಬಾರದು ಆದರೆ, ಯಾವಾಗ ಸಹೋದರ-ಸಹೋದರಿ ಎಂದು ತಿಳಿಯುತ್ತೀರೋ, ಆಗಲೇ ಅದು ಆಗುತ್ತದೆ. ಸಹೋದರ-ಸಹೋದರಿ ಎಂದು ತಿಳಿಯುವುದರಿಂದಲು ಸಹ ಛೀ-ಛೀ ಆಗಿಬಿಡುತ್ತಾರೆ. ಎಲ್ಲದಕ್ಕಿಂತ ಅಧಿಕವಾಗಿ ಮೋಸ ಮಾಡುವಂತಹದ್ದು ಈ ಕಣ್ಣುಗಳಾಗಿವೆ, ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿದು ಸಹೋದರ-ಸಹೋದರನೆಂದು ನೋಡಿ ಎಂದು ತಂದೆಯು ಮೂರನೆಯ ನೇತ್ರವನ್ನು ಕೊಟ್ಟಿದ್ದಾರೆ, ಇದಕ್ಕೆ ಜ್ಞಾನದ ಮೂರನೆಯ ನೇತ್ರವೆಂದು ಹೇಳಲಾಗುತ್ತದೆ. ಸಹೋದರ-ಸಹೋದರಿಯ ದೃಷ್ಟಿಯಲ್ಲಿಯು ಫೇಲ್ ಆಗುತ್ತೀರೆಂದರೆ, ಇನ್ನೊಂದು ಯುಕ್ತಿಯನ್ನು ತೆಗೆಯಲಾಗುತ್ತದೆ. ತಮ್ಮನ್ನು ಸಹೋದರ-ಸಹೋದರನೆಂದು ತಿಳಿಯಿರಿ. ಇದು ಬಹಳ ಕಷ್ಠವಾಗಿದೆ. ಸಬ್ಜೆಕ್ಟ್ ಇರುತ್ತದೆಯಲ್ಲವೇ, ಕೆಲವು ಸಬ್ಜೆಕ್ಟ್ ಬಹಳ ಕಷ್ಟವಾಗಿರುತ್ತದೆ, ಇದು ವಿದ್ಯೆಯಾಗಿದೆ, ಇದರಲ್ಲಿಯೂ ಉತ್ತಮ ಸಬ್ಜೆಕ್ಟ್ ಆಗಿದೆ - ನೀವು ಯಾರದೇ ನಾಮ, ರೂಪದಲ್ಲಿ ಸಿಕ್ಕಿಹಾಕಿಕೊಳ್ಳುವಂತಿಲ್ಲ. ಬಹಳ ದೊಡ್ಡ ಪರೀಕ್ಷೆಯಾಗಿದೆ - ವಿಶ್ವದ ಮಾಲೀಕರಾಗಬೇಕಾಗಿದೆ. ಮುಖ್ಯ ಮಾತು ಸಹೋದರ-ಸಹೋದರ ಎಂದು ತಿಳಿಯಿರಿ ಅಂದಮೇಲೆ ಮಕ್ಕಳು ಎಷ್ಟೊಂದು ಪುರುಷಾರ್ಥ ಮಾಡಬೇಕು, ಆದರೆ ನಡೆಯುತ್ತಾ-ನಡೆಯುತ್ತಾ ಅನೇಕರು ಶತ್ರುಗಳು ಆಗಿಬಿಡುತ್ತಾರೆ, ಇಲ್ಲಿಯು ಆ ರೀತಿ ಆಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಒಳ್ಳೊಳ್ಳೆಯ ಮಕ್ಕಳನ್ನು ಮಾಯೆಯು ತನ್ನವರನ್ನಾಗಿ ಮಾಡಿಕೊಳ್ಳುತ್ತದೆ. ಆದ್ದರಿಂದಲೇ ಮಕ್ಕಳು ನನಗೆ ವಿಚ್ಛೆದನವನ್ನೂ ಕೊಟ್ಟುಬಿಡುತ್ತಾರೆ, ವಿಚ್ಛೇದನ ಮಕ್ಕಳು ತಂದೆಗೆ ಕೊಡುವರು ಮತ್ತು ಡೈವೋರ್ಸ್ ಸ್ತ್ರೀ ಮತ್ತು ಪತಿಗೆ ಆಗುತ್ತದೆ. ತಂದೆಯು ಹೇಳುತ್ತಾರೆ. ನಮಗೆ ಇಬ್ಬರೂ ಸಿಗುತ್ತಾರೆ, ಒಳ್ಳೊಳ್ಳೆಯ ಮಕ್ಕಳೂ ಸಹ ವಿಚ್ಛೇದನವನ್ನು ಕೊಟ್ಟು ಹೋಗಿ ರಾವಣನಿಗೆ ವಶರಾಗಿಬಿಡುತ್ತಾರೆ, ವಿಚಿತ್ರವಾದ ಆಟಾವಾಗಿದೆಯಲ್ಲವೇ! ಎಂದು ತಂದೆಯು ತಿಳಿಸುತ್ತಾರೆ. ಮಾಯೆಯು ಏನು ತಾನೇ ಮಾಡುವುದಿಲ್ಲ? ಮಾಯೆಯು ಬಹಳ ಕಠಿಣವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಗಜನನ್ನು ಗ್ರಾಹ ಅರ್ಥಾತ್ ಮೊಸಳೆಯು ತಿಂದಿತು ಎಂದು ಗಾಯನವಿದೆ. ಅನೇಕರು ಹುಡುಗಾಟಿಕೆ ಮಾಡಿ ಕುಳಿತುಕೊಳ್ಳುತ್ತಾರೆ. ತಂದೆಗೆ ಗೌರವ ಕೊಡದಿದ್ದರೆ ಮಾಯೆಯು ಹಸಿಯಾಗಿಯೇ ತಿಂದುಬಿಡುತ್ತದೆ. ಮಾಯೆಯು ಹೀಗಿದೆ, ಕೆಲ-ಕೆಲವರನ್ನು ಒಮ್ಮೆಲೇ ಹಿಡಿದುಕೊಂಡುಬಿಡುತ್ತದೆ. ಒಳ್ಳೆಯದು!

ಮಕ್ಕಳಿಗೆ ಎಷ್ಟೆಂದು ತಿಳಿಸಲಿ! ಮುಖ್ಯ ಮಾತಾಗಿದೆ ತಂದೆಯ ಪರಿಚಯ. ಮುಸಲ್ಮಾನರೂ ಸಹ ಮುಂಜಾನೆ ಎದ್ದು ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಈ ವೇಳೆಯು ನಿದ್ರೆ ಮಾಡುವ ವೇಳೆ ಅಲ್ಲ, ಈ ಉಪಾಯದಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಮತ್ತ್ಯಾವುದೇ ಉಪಾಯವಿಲ್ಲ. ತಂದೆಯು ನೀವು ಮಕ್ಕಳ ಜೊತೆ ಎಷ್ಟು ಪ್ರಾಮಾಣಿಕರಾಗಿದ್ದಾರೆ, ಎಂದೂ ನಿಮ್ಮನ್ನು ಬಿಡುವುದಿಲ್ಲ. ನಿಮ್ಮನ್ನು ಸುಧಾರಣೆ ಮಾಡಿ ಜೊತೆಯಲ್ಲಿ ಕರೆದುಕೊಂಡು ಹೋಗುವುದಕ್ಕಾಗಿಯೇ ಬಂದಿದ್ದಾರೆ. ನೆನಪಿನ ಯಾತ್ರೆಯಿಂದಲೇ ನೀವು ಸತೋಪ್ರಧಾನರಾಗುತ್ತೀರಿ. ಒಂದುಕಡೆ ಜಮಾ ಆಗುತ್ತಾ ಹೋಗುತ್ತದೆ. ನಾವು ಎಷ್ಟು ನೆನಪು ಮಾಡುತ್ತೇವೆ, ಎಷ್ಟು ಸರ್ವೀಸ್ ಮಾಡುತ್ತೇವೆ ಎನ್ನುವುದು ಲೆಕ್ಕವನ್ನು ಇಡಿ ಎಂದು ತಂದೆಯು ಹೇಳುತ್ತಾರೆ. ವ್ಯಾಪಾರಿಗಳು ನಷ್ಟವನ್ನು ನೋಡಿದರೆ ಎಚ್ಚರಿಕೆಯಿಂದ ಇರುತ್ತಾರೆ. ನಷ್ಟವನ್ನು ಮಾಡಿಕೊಳ್ಳಬಾರದು. ಇದು ಕಲ್ಪ-ಕಲ್ಪಾಂತರಕ್ಕಾಗಿ ನಷ್ಟವಾಗಿಬಿಡುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮನಸಾ-ವಾಚಾ-ಕರ್ಮಣಾ ಪಾವನರಾಗಬೇಕಾಗಿದೆ. ಬುದ್ಧಿಯಲ್ಲಿ ವಿಕಾರಿ ಸಂಕಲ್ಪಗಳೂ ಸಹ ಬರಬಾರದು. ಇದಕ್ಕಾಗಿ ನಾವು ಆತ್ಮಗಳು ಸಹೋದರ-ಸಹೋದರರಾಗಿದ್ದೇವೆ ಎನ್ನುವ ಅಭ್ಯಾಸ ಮಾಡಬೇಕಾಗಿದೆ. ಯಾರದೇ ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳಬಾರದು.

2. ಹೇಗೆ ತಂದೆಯು ಪ್ರಾಮಾಣಿಕರಾಗಿದ್ದಾರೆ, ಮಕ್ಕಳನ್ನು ಸುಧಾರಣೆ ಮಾಡಿ ಜೊತೆಗೆ ಕರೆದುಕೊಂಡು ಹೋಗುತ್ತಾರೆ, ಹಾಗೆಯೇ ಪ್ರಾಮಾಣಿಕರಾಗಬೇಕಾಗಿದೆ. ಎಂದಿಗೂ ವಿಚ್ಛೇದನ ಅಥವಾ ಡೈವರ್ಸ್ ಕೊಡಬಾರದು.

ವರದಾನ:
ಸದಾ ಹಗುರ ಆಗಿ ತಂದೆಯ ನಯನಗಳಲ್ಲಿ ಸಮಾವೇಶರಾಗಿರುವಂತಹ ಸಹಜಯೋಗಿ ಭವ

ಸಂಗಮಯುಗದಲ್ಲಿ ಖುಷಿಗಳ ಏನು ಖಜಾನೆಗಳ ಗಣಿ ಸಿಗುತ್ತೆ ಅದು ಬೇರೆ ಯಾವುದೇ ಯುಗದಲ್ಲಿ ಸಿಗಲು ಸಾಧ್ಯವಿಲ್ಲ. ಈ ಸಮಯ ತಂದೆ ಮತ್ತು ಮಕ್ಕಳ ಮಿಲನ ಆಗಿದೆ, ಆಸ್ತಿಯಿದೆ, ವರದಾನಗಳಿವೆ. ಆಸ್ತಿ ಅಥವಾ ವರದಾನ ಎರಡರಲ್ಲಿಯೂ ಪರಿಶ್ರಮ ಇರುವುದಿಲ್ಲ ಆದ್ದರಿಂದ ನಿಮ್ಮ ಟೈಟಲ್ ಆಗಿದೆ ಸಹಜಯೋಗಿ. ಬಾಪ್ದಾದಾರವರಿಗೆ ಮಕ್ಕಳ ಪರಿಶ್ರಮವನ್ನು ನೋಡಲು ಸಾಧ್ಯವಾಗಲ್ಲ, ಹೇಳುತ್ತಾರೆ ಮಕ್ಕಳೇ ನಿಮ್ಮ ಎಲ್ಲಾ ಹೊರೆ ತಂದೆಗೆ ಕೊಟ್ಟು ನೀವು ಹಗುರವಾಗಿ ಬಿಡಿ. ಇಷ್ಟು ಹಗುರರಾಗಿ ಯಾರನ್ನು ತಂದೆ ತನ್ನ ಕಣ್ಣಿನೊಳಗೆ ಕೂರಿಸಿಕೊಂಡು ಜೊತೆಯಲ್ಲಿ ಕರೆದೊಯ್ಯುತ್ತಾರೆ. ತಂದೆಯೊಂದಿಗೆ ಸ್ನೇಹದ ನಿಶಾನಿಯಾಗಿದೆ-ಸದಾ ಹಗುರ ಆಗಿ ತಂದೆಯ ದೃಷ್ಠಿಯಲ್ಲಿ ಸಮಾವೇಶವಾಗಿಬಿಡುವುದು.

ಸ್ಲೋಗನ್:
ನಕಾರಾತ್ಮಕವಾಗಿ ಯೋಚಿಸುವ ರಸ್ತೆ ಬಂದ್ಮಾಡಿಬಿಡಿ ಆಗ ಸಫಲತಾ ಸ್ವರೂಪರಾಗಿಬಿಡುವಿರಿ.