27.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನೀವು ತಂದೆಯಿಂದ ಆರೋಗ್ಯ, ಐಶ್ವರ್ಯ, ಸಂತೋಷದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ, ಈಶ್ವರೀಯ ಮತದಂತೆ ನಡೆಯುವುದರಿಂದಲೆ ತಂದೆಯ ಆಸ್ತಿಯು ಸಿಗುವುದು"

ಪ್ರಶ್ನೆ:
ತಂದೆಯು ಎಲ್ಲಾ ಮಕ್ಕಳಿಗೆ ವಿಕಲ್ಪಜೀತರಾಗಲು ಯಾವ ಯುಕ್ತಿಯನ್ನು ತಿಳಿಸುತ್ತಾರೆ?

ಉತ್ತರ:
ವಿಕಲ್ಪಜೀತರಾಗಲು ತಮ್ಮನ್ನು ಆತ್ಮನೆಂದು ತಿಳಿದು ಸಹೋದರ-ಸಹೋದರ ದೃಷ್ಟಿಯಿಂದ ನೋಡಿ. ಶರೀರವನ್ನು ನೋಡುವುದರಿಂದ ವಿಕಲ್ಪವು ಬರುತ್ತದೆ, ಆದ್ದರಿಂದ ಭೃಕುಟಿಯಲ್ಲಿ ಸಹೋದರ ಆತ್ಮನನ್ನು ನೋಡಿ. ಪಾವನರಾಗಬೇಕಾದರೆ ಈ ದೃಷ್ಠಿಯನ್ನು ಪಕ್ಕಾ ಮಾಡಿಕೊಳ್ಳಿ. ಪತಿತ-ಪಾವನ ತಂದೆಯನ್ನು ನಿರಂತರವಾಗಿ ನೆನಪು ಮಾಡಿ. ನೆನಪಿನಿಂದಲೇ ತುಕ್ಕು ಬಿಟ್ಟುಹೋಗುತ್ತದೆ, ಅಪಾರ ಖುಷಿಯಾಗುವುದು ಮತ್ತು ವಿಕಲ್ಪಗಳ ಮೇಲೆ ವಿಜಯ ಪ್ರಾಪ್ತಿ ಪಡೆದುಕೊಳ್ಳುತ್ತೀರಿ.

ಓಂ ಶಾಂತಿ.
ಶಿವಭಗವಾನುವಾಚ- ತನ್ನ ಸಾಲಿಗ್ರಾಮಗಳ ಪ್ರತಿ. ಶಿವ ಭಗವಾನುವಾಚವಾಗಿದೆ ಅಂದಾಗ ಅವಶ್ಯವಾಗಿ ಶರೀರವಿದೆ. ಆಗತಾನೆ ವಾಚ ಆಗುವುದು. ಮಾತನಾಡುವುದಕ್ಕೆ ಅವಶ್ಯವಾಗಿ ಬಾಯಿ ಬೇಕಾಗುವುದು ಮತ್ತು ಕೇಳುವಂತಹವರಿಗೂ ಅವಶ್ಯವಾಗಿ ಕಿವಿಗಳು ಬೇಕಾಗಿದೆ. ಆತ್ಮನಿಗೆ ಕಿವಿ, ಬಾಯಿ ಬೇಕಾಗಿದೆ. ಈಗ ನೀವು ಮಕ್ಕಳಿಗೆ ಈಶ್ವರೀಯ ಮತ ಸಿಗುತ್ತಿರುವುದು. ಇದಕ್ಕೆ ರಾಮ ಮತ ಎಂದು ಹೇಳಲಾಗುವುದು. ಅನ್ಯರು ರಾವಣನ ಮತದ ಮೇಲಿರುವರು. ಈಶ್ವರೀಯ ಮತ ಮತ್ತು ಆಸುರಿ ಮತ. ಈಶ್ವರೀಯ ಮತವು ಅರ್ಧಕಲ್ಪ ನಡೆಯುತ್ತದೆ. ತಂದೆಯು ಈಶ್ವರೀಯ ಮತವನ್ನು ಕೊಟ್ಟು ನಿಮ್ಮನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಪುನಃ ಸತ್ಯಯುಗ-ತ್ರೇತಾದಲ್ಲಿ ಅದೇ ಮತ ನಡೆಯುತ್ತದೆ, ಅಲ್ಲಿ ಜನ್ಮಗಳು ಸಹ ಕಡಿಮೆಯಿರುತ್ತದೆ ಏಕೆಂದರೆ ಯೋಗಿ ಮನುಷ್ಯರಾಗಿದ್ದಾರೆ. ಮತ್ತು ದ್ವಾಪರ-ಕಲಿಯುಗದಲ್ಲಿ ರಾವಣ ಮತವಿರುತ್ತದೆ, ಇಲ್ಲಿ ಜನ್ಮಗಳು ಹೆಚ್ಚಾಗಿರುತ್ತದೆ, ಏಕೆಂದರೆ ಭೋಗಿ ಮನುಷ್ಯರಿರುತ್ತಾರೆ, ಆದ್ದರಿಂದ ಆಯಸ್ಸು ಸಹ ಕಡಿಮೆಯಾಗುತ್ತದೆ. ಬಹಳ ಸಂಪ್ರಾದಾಯಗಳು ಆಗಿಬಿಡುತ್ತದೆ ಮತ್ತು ಬಹಳ ದುಃಖಿಗಳಾಗುತ್ತಾರೆ. ರಾಮನ ಮತದವರು ನಂತರ ರಾವಣನ ಮತದೊಂದಿಗೆ ಸೇರಿ ಹೋಗುತ್ತಾರೆ. ಆಗ ಇಡೀ ಪ್ರಪಂಚವು ರಾವಣನ ಮತವಾಗಿಬಿಡುತ್ತದೆ. ನಂತರ ತಂದೆಯು ಬಂದು ಎಲ್ಲರಿಗೂ ರಾಮ ಮತವನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ರಾಮಮತವಿದೆ, ಈಶ್ವರೀಯ ಮತವಿರುತ್ತದೆ. ಅದಕ್ಕೆ ಸ್ವರ್ಗವೆಂದು ಹೇಳಾಲಾಗುತ್ತದೆ. ಈಶ್ವರೀಯ ಮತ ಸಿಗುವುದರಿಂದ ಅರ್ಧಕಲ್ಪಕ್ಕೆ ಸ್ವರ್ಗದ ಸ್ಥಾಪನೆಯಾಗಿಬಿಡುತ್ತದೆ. ಅದು ಯಾವಾಗ ಪೂರ್ಣವಾಗುತ್ತದೆಯೋ ಆಗ ರಾವಣರಾಜ್ಯವಾಗುತ್ತದೆ, ಅದಕ್ಕೆ ಅಸುರೀಮತವೆಂದು ಕರೆಯಲಾಗುತ್ತದೆ. ಈಗ ತಮ್ಮೊಂದಿಗೆ ಕೇಳಿಕೊಳ್ಳಿ - ನಾವು ಅಸುರೀ ಮತದಿಂದ ಏನು ಮಾಡುತ್ತಿದ್ದೆವು? ಈಶ್ವರೀಯ ಮತದಿಂದ ಏನು ಮಾಡುತ್ತಿದ್ದೇವೆ? ಹೇಗೆ ನರಕವಾಸಿಗಳಾಗಿದ್ದೆವು ನಂತರ ಶಿವಾಲಯದಲ್ಲಿ ಸ್ವರ್ಗವಾಸಿಗಳಾಗುತ್ತೇವೆ. ಸತ್ಯಯುಗ-ತ್ರೇತಾವನ್ನು ಶಿವಾಲಯವೆಂದು ಕರೆಯಲಾಗುತ್ತದೆ. ಯಾರ ಹೆಸರಿನಿಂದ ಸ್ಥಾಪನೆಯಾಗುತ್ತದೆಯೋ ಅವರ ಹೆಸರನ್ನೇ ಅವಶ್ಯವಾಗಿ ಇಡುತ್ತಾರೆ. ಅಂದಾಗ ಅದು ಶಿವಾಲಯವಾಗಿದೆ, ಅಲ್ಲಿ ದೇವತೆಗಳಿರುತ್ತಾರೆ. ರಚಯಿತ ತಂದೆಯು ಮಕ್ಕಳಿಗೆ ಈ ಮಾತುಗಳನ್ನು ತಿಳಿಸುತ್ತಿದ್ದಾರೆ. ಏನನ್ನು ರಚಿಸುತ್ತಾರೆಯೊ ಅದನ್ನು ಸಹ ನೀವು ಮಕ್ಕಳು ತಿಳಿದಿದ್ದೀರಿ. ಹೇ ಪತಿತ-ಪಾವನ ಅಥವಾ ಹೇ ಮುಕ್ತಿದಾತ, ರಾವಣರಾಜ್ಯದಿಂದ ಅಥವ ದುಃಖದಿಂದ ಮುಕ್ತಮಾಡುವ ತಂದೆಯೇ, ಎಂದು ಈ ಸಮಯದಲ್ಲಿ ಇಡೀ ರಚನೆಯು ಅವರನ್ನು ಕರೆಯುತ್ತಿದೆ. ಈಗ ನಿಮಗೆ ಸುಖದ ತಿಳುವಳಿಕೆಯಿರುವ ಕಾರಣ ಇದನ್ನು ದುಃಖವೆಂದು ತಿಳಿಯುವಿರಿ, ಇಲ್ಲವೆಂದರೆ ಬಹಳಷ್ಟು ಜನ ಇದನ್ನು ದುಃಖವೆಂದು ತಿಳಿಯುವುದಿಲ್ಲ. ಹೇಗೆ ತಂದೆಯು ಜ್ಞಾನಸಾಗರನಾಗಿದ್ದಾರೆ, ಮನುಷ್ಯ ಸೃಷ್ಟಿಯ ಬೀಜರೂಪವಾಗಿದ್ದಾರೆ, ಅವರಿಂದ ನೀವು ಸಹ ಜ್ಞಾನ ಪೂರ್ಣರಾಗುತ್ತೀರಿ. ಬೀಜದಲ್ಲಿ ವೃಕ್ಷದ ಜ್ಞಾನವಿರುವುದಲ್ಲವೆ ಆದರೆ, ಅದು ಜಡ ವೃಕ್ಷವಾಗಿದೆ. ಒಂದುವೇಳೆ ಚೈತನ್ಯ ವೃಕ್ಷವಾಗಿದ್ದರೆ ಅದು ತಿಳಿಸುತ್ತಿತ್ತು. ನೀವು ಚೈತನ್ಯ ವೃಕ್ಷದವರಾಗಿದ್ದೀರಿ ಆದ್ದರಿಂದ ವೃಕ್ಷವನ್ನೂ ತಿಳಿದಿದ್ದೀರಿ. ತಂದೆಗೆ ಮನುಷ್ಯ ಸೃಷ್ಟಿಯ ಬೀಜರೂಪ, ಸತ್ಚಿತ್ ಆನಂದಸ್ವರೂಪನೆಂದು ಹೇಳಲಾಗುವುದು. ಈ ವೃಕ್ಷದ ಉತ್ಪತ್ತಿ ಮತ್ತು ಪಾಲನೆ ಹೇಗಾಗುವುದೆಂಬುದನ್ನು ಸಹ ಯಾರೂ ತಿಳಿದುಕೊಂಡಿಲ್ಲ, ಅಂದರೆ ಹೊಸವೃಕ್ಷವು ಉತ್ಪನ್ನವಾಗುತ್ತದೆ ಎಂದಲ್ಲ. ಇದನ್ನೂ ಸಹ ತಂದೆಯು ತಿಳಿಸಿದ್ದಾರೆ - ಹೇ ತಂದೆಯೇ ಬಂದು ರಾವಣನಿಂದ ಮುಕ್ತಮಾಡಿ ಎಂದು ಹಳೆಯ ವೃಕ್ಷದ ಮನುಷ್ಯರು ಕರೆಯುತ್ತಾರೆ, ಏಕೆಂದರೆ ಈ ಸಮಯದಲ್ಲಿ ರಾವಣರಾಜ್ಯವಾಗಿದೆ. ಮನುಷ್ಯರು ರಚಯಿತನನ್ನಾಗಲಿ ರಚನೆಯನ್ನಾಗಲಿ ಅರಿತುಕೊಂಡಿಲ್ಲ. ಸ್ವಯಂ ತಂದೆಯು ತಿಳಿಸುತ್ತಿದ್ದಾರೆ - ಮಕ್ಕಳೇ, ನಾನು ಒಂದೇ ಬಾರಿ ಸ್ವರ್ಗವನ್ನಾಗಿ ಮಾಡುತ್ತೇನೆ, ಸ್ವರ್ಗದ ನಂತರ ಮತ್ತೆ ನರಕವಾಗುತ್ತದೆ. ರಾವಣನು ಬರುವ ಕಾರಣ ಮತ್ತೆ ವಾಮಮಾರ್ಗದಲ್ಲಿ ಹೊರಟುಹೋಗುತ್ತಾರೆ. ಸತ್ಯಯುಗದಲ್ಲಿ ಆರೋಗ್ಯ-ಐಶ್ವರ್ಯ-ಸಂತೋಷ ಎಲ್ಲವೂ ಇರುವುದು. ತಾವಿಲ್ಲಿ ತಂದೆಯಿಂದ ಆರೋಗ್ಯ-ಐಶ್ವರ್ಯ-ಸಂತೋಷದ ಆಸ್ತಿಯನ್ನು

ಪಡೆಯಲು ಬಂದಿದ್ದೀರಿ ಏಕೆಂದರೆ ಸ್ವರ್ಗದಲ್ಲಿ ಎಂದೂ ದುಃಖವಾಗುವುದಿಲ್ಲ. ನಾವು ಕಲ್ಪ-ಕಲ್ಪವೂ ಪುರುಷೋತ್ತಮ ಸಂಗಮಯುಗದಲ್ಲಿ ಪುರುಷಾರ್ಥ ಮಾಡುತ್ತೇವೆಂದು ನಿಮ್ಮ ಹೃದಯದಲ್ಲಿದೆ. ಹೆಸರೇ ಎಷ್ಟು ಚೆನ್ನಾಗಿದೆ ಮತ್ತ್ಯಾವುದೇ ಯುಗಕ್ಕೆ ಪುರುಷೋತ್ತಮವೆಂದು ಹೇಳುವುದಿಲ್ಲ. ಆ ಯುಗಗಳಲ್ಲಂತೂ ಏಣಿಯನ್ನು ಇಳಿಯುತ್ತಲೇ ಹೋಗುತ್ತಾರೆ. ತಂದೆಯನ್ನು ಕರೆಯುತ್ತಾರೆ, ಸಮರ್ಪಣೆ ಮಾಡುತ್ತಾರೆ, ಆದರೆ ತಂದೆಯು ಯಾವಾಗ ಬರುತ್ತಾರೆ ಎಂದು ಅವರಿಗೆ ತಿಳಿಯುವುದೇ ಇಲ್ಲ. ಓ ಗಾಡ್ ಫಾದರ್, ನಮ್ಮನ್ನು ಮುಕ್ತ ಮಾಡಿ, ಮಾರ್ಗದರ್ಶಕರಾಗಿ ಎಂದು ಕರೆಯುತ್ತಾರೆ. ಮುಕ್ತಿದಾತ ಎಂದರೆ ಅವಶ್ಯವಾಗಿ ಬರಬೇಕಾಗುತ್ತದೆ ಮತ್ತು ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗಬೇಕಾಗುತ್ತದೆ. ತಂದೆಯು ಮಕ್ಕಳನ್ನು ಬಹಳ ದಿನಗಳ ನಂತರ ನೋಡುತ್ತಾರೆ ಎಂದರೆ ಬಹಳ ಖುಷಿ ಆಗುತ್ತದೆ. ಅವರು ಹದ್ದಿನ ತಂದೆಯಾಗಿದ್ದಾರೆ, ಇವರು ಬೇಹದ್ದಿನ ತಂದೆಯಾಗಿದ್ದಾರೆ. ಈ ತಂದೆಯು ರಚಯಿತನಾಗಿದ್ದಾರೆ, ರಚನೆ ಮಾಡಿದ ನಂತರ ಅವರ ಪಾಲನೆಯನ್ನು ಮಾಡುತ್ತಾರೆ. ಪುನರ್ಜನ್ಮವಂತೂ ತೆಗೆದುಕೊಳ್ಳಬೇಕಾಗುತ್ತದೆ. ಕೆಲವರಿಗೆ 10 ಜನ, ಕೆಲವರಿಗೆ 12 ಜನ ಮಕ್ಕಳಿರುತ್ತಾರೆ, ಆದರೆ ಅದೆಲ್ಲವೂ ಹದ್ದಿನ ಸುಖವಾಗಿದೆ, ಕಾಗವಿಷ್ಟ ಸಮಾನವಾಗಿದೆ. ತಮೋಪ್ರಧಾನವಾಗಿಬಿಡುತ್ತಾರೆ. ತಮೋಪ್ರಧಾನದಲ್ಲಿಯೇ ಸುಖವು ಬಹಳ ಕಡಿಮೆ. ನೀವು ಸತೋಪ್ರಧಾನರಾಗುತ್ತೀರೆಂದರೆ ಬಹಳ ಸುಖವಿರುತ್ತದೆ, ಸತೋಪ್ರಧಾನರಾಗುವ ಯುಕ್ತಿಯನ್ನು ತಂದೆಯೇ ಬಂದು ತಿಳಿಸುತ್ತಾರೆ. ತಂದೆಗೆ ಆಲ್ಮೈಟಿ ಅಥಾರಿಟಿ (ಸರ್ವಶಕ್ತಿವಂತ) ಎಂದು ಹೇಳಲಾಗುತ್ತದೆ. ಇದರಿಂದ ಮನುಷ್ಯರು, ಪರಮಾತ್ಮನು ಸರ್ವಶಕ್ತಿವಂತನಾಗಿದ್ದಾರೆ ಅಂದಮೇಲೆ ಏನು ಬೇಕಾದರೂ ಮಾಡಬಲ್ಲರು, ಸತ್ತಿರುವವರನ್ನು ಬದುಕಿಸಬಲ್ಲರು ಎಂದುಕೊಳ್ಳುತ್ತಾರೆ. ಒಂದುವೇಳೆ ತಾವು ಭಗವಂತನಾಗಿದ್ದರೆ ನೊಣವನ್ನು ಬದುಕಿಸಿ ತೋರಿಸಿ ಎಂದು ಒಮ್ಮೆ ಯಾರೋ ಬರೆದಿದ್ದರು. ಹೀಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ.

ತಂದೆಯು ನಿಮಗೆ ಶಕ್ತಿಯನ್ನು ಕೊಡುತ್ತಾರೆ, ಇದರಿಂದ ನೀವು ರಾವಣನ ಮೇಲೆ ಜಯಗಳಿಸುತ್ತೀರಿ. ಮಂಗನಿಂದ ಮಂದಿರಕ್ಕೆ ಯೋಗ್ಯರಾಗುತ್ತೀರಿ. ಇದನ್ನು ಅವರು ಏನೇನೋ ಮಾಡಿಬಿಟ್ಟಿದ್ದಾರೆ. ವಾಸ್ತವದಲ್ಲಿ ತಾವೆಲ್ಲರೂ ಸೀತೆಯರು, ಭಕ್ತಿನಿಯರಾಗಿದ್ದೀರಿ. ನಿಮ್ಮೆಲ್ಲರನ್ನು ರಾವಣನಿಂದ ಬಿಡಿಸಲಾಗಿದೆ. ರಾವಣನ ಮೂಲಕ ನಿಮಗೆ ಎಂದೂ ಸುಖ ಸಿಗಲು ಸಾಧ್ಯವಿಲ್ಲ. ಈ ಸಮಯದಲ್ಲಿ ಎಲ್ಲರೂ ರಾವಣನ ಬಂಧನದಲ್ಲಿ ಇದ್ದಾರೆ. ರಾಮನ ಬಂಧನದಲ್ಲಿದ್ದಾರೆ ಎಂದೂ ಎಂದಿಗೂ ಸಹ ಹೇಳುವುದಿಲ್ಲ. ರಾಮ ರಾವಣನ ಬಂಧನದಿಂದ ಬಿಡಿಸಲು ಬಂದಿದ್ದಾರೆ. ರಾವಣನನ್ನು 10 ತಲೆವುಳ್ಳವರನ್ನಾಗಿ ಮಾಡುತ್ತಾರೆ. ಅವನಿಗೆ 20 ಭುಜಗಳನ್ನು ತೋರಿಸುತ್ತಾರೆ, ಇದರ ಅರ್ಥವನ್ನು ತಂದೆಯೇ ತಿಳಿಸುತ್ತಾರೆ - 5 ವಿಕಾರಗಳು ಪುರುಷನಲ್ಲಿ, 5 ವಿಕಾರಗಳು ಸ್ತ್ರೀಯಲ್ಲಿಯೂ ಇದೆ. ಅದಕ್ಕೆ ರಾವಣರಾಜ್ಯ ಅಥವಾ 5 ವಿಕಾರ ರೂಪಿ ರಾಜ್ಯ ಎಂದು ಹೇಳುತ್ತಾರೆ. ಇವರ ಬಳಿ ಬಹಳ ಮಾಯೆ ಇದೆ.

ಹಣದ ಮಾಯೆಯ ನಶೆ ಏರಿದೆ ಎಂದು ಹೇಳುವುದಿಲ್ಲ. ಹಣಕ್ಕೆ ಎಂದೂ ಮಾಯೆ ಎಂದು ಹೇಳುವುದಿಲ್ಲ. ಹಣಕ್ಕೆ ಸಂಪತ್ತು ಎಂದು ಹೇಳಲಾಗುತ್ತದೆ. ತಾವು ಮಕ್ಕಳಿಗೆ ಬಹಳಷ್ಟು ಸಂಪತ್ತು ಸಿಗುತ್ತದೆ. ನೀವು ಮಕ್ಕಳು ಏನನ್ನೂ ಬೇಡುವ ಅವಶ್ಯಕತೆ ಇಲ್ಲ ಏಕೆಂದರೆ, ಇದು ವಿದ್ಯೆಯಾಗಿದೆ. ವಿಧ್ಯಾಭ್ಯಾಸದಲ್ಲಿ ಬೇಡುವುದಿಲ್ಲ, ಶಿಕ್ಷಕರು ಏನನ್ನು ಓದಿಸುವರೋ ಅದನ್ನೇ ವಿದ್ಯಾರ್ಥಿಗಳು ಓದುತ್ತಾರೆ. ಯಾರೆಷ್ಟು ಓದುವರೋ ಅಷ್ಟನ್ನು ಪಡೆಯುತ್ತಾರೆ. ಬೇಡುವ ಮಾತಿಲ್ಲ. ಇದರಲ್ಲಿ ಪವಿತ್ರತೆಯು ಬೇಕು. ಒಂದು ಶಬ್ದದ ಬೆಲೆಯು ನೋಡಿ ಎಷ್ಟೊಂದು ಇದೆ. ಪದಮಾಪದಮ ಇದೆ. ತಂದೆಯನ್ನು ತಿಳಿದುಕೊಳ್ಳಿ, ನೆನಪು ಮಾಡಿ. ತಂದೆಯು ಪರಿಚಯವನ್ನು ಕೊಟ್ಟಿದ್ದಾರೆ - ಆತ್ಮವು ಹೇಗೆ ಬಿಂದುವಾಗಿದೆಯೋ ಹಾಗೆಯೇ ನಾನು ಆತ್ಮನು ಬಿಂದುವಾಗಿದ್ದೇನೆ, ಅವರು ಸದಾ ಪವಿತ್ರರಾಗಿದ್ದಾರೆ, ಶಾಂತಿ, ಜ್ಞಾನ, ಪವಿತ್ರತೆಯ ಸಾಗರನಾಗಿದ್ದಾರೆ. ಒಬ್ಬರದೇ ಮಹಿಮೆ ಇದೆ, ಎಲ್ಲರ ಸ್ಥಾನ ಬೇರೆ-ಬೇರೆ ಆಗಿರುತ್ತದೆ. ಕಣ-ಕಣದಲ್ಲಿ ಭಗವಂತನೆಂದು ನಾಟಕದಲ್ಲಿ ರಚಿಸಿದ್ದಾರೆ. ಯಾರು ನಾಟಕವನ್ನು ನೋಡಿದ್ದಾರೋ ಅವರಿಗೆ ಗೊತ್ತಿರುತ್ತದೆ. ಯಾರು ಮಹಾವೀರ ಮಕ್ಕಳಿದ್ದಾರೆ ಅವರಿಗೆ ತಂದೆಯು ತಿಳಿಸುತ್ತಾರೆ - ಭಲೆ ನೀವು ಎಲ್ಲಿಯೇ ಹೋಗಿ ಕೇವಲ ಸಾಕ್ಷಿಯಾಗಿ ನೋಡಬೇಕು.

ಈಗ ನೀವು ಮಕ್ಕಳು ರಾಮರಾಜ್ಯವನ್ನು ಸ್ಥಾಪನೆ ಮಾಡಿ ರಾವಣರಾಜ್ಯವನ್ನು ಸಮಾಪ್ತಿ ಮಾಡುತ್ತೀರಿ, ಇದು ಬೇಹದ್ದಿನ ಮಾತಾಗಿದೆ, ಅವರಂತೂ ಹದ್ದಿನ ಕಥೆಗಳನ್ನು ರಚಿಸಿದ್ದಾರೆ. ನೀವು ಶಿವಶಕ್ತಿ ಸೇನೆ ಆಗಿದ್ದೀರಿ. ಶಿವನು ಸರ್ವಶಕ್ತಿವಂತನಾಗಿದ್ದಾರೆ. ಶಿವನ ಶಕ್ತಿಯನ್ನು ಪಡೆಯುವಂತಹ ಶಿವನ ಸೇವೆ ತಾವಾಗಿದ್ದೀರಿ. ಅವರೂ ಸಹ ಶಿವಸೇನೆ ಎಂದು ಹೆಸರನ್ನು ಇಟ್ಟಿದ್ದಾರೆ. ಈಗ ನಿಮ್ಮ ಹೆಸರು ಏನಿಡುವುದು! ನಿಮಗಂತು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಎಂದು ಹೆಸರನ್ನು ಇಡಲಾಗಿದೆ. ಶಿವನಿಗಂತೂ ಎಲ್ಲರೂ ಸಂತಾನರಾಗಿದ್ದಾರೆ, ಇಡೀ ಪ್ರಪಂಚದ ಆತ್ಮಗಳು ಅವರ ಸಂತಾನರಾಗಿದ್ದಾರೆ, ಶಿವನಿಂದ ನಿಮಗೆ ಶಕ್ತಿಯು ಸಿಗುತ್ತದೆ. ಶಿವತಂದೆಯು ನಿಮಗೆ ಜ್ಞಾನವನ್ನು ಕಲಿಸುತ್ತಾರೆ. ಇದರಿಂದ ನಿಮಗೆ ಇಷ್ಟೊಂದು ಶಕ್ತಿ ಸಿಗುತ್ತದೆ, ಅರ್ಧಕಲ್ಪ ನೀವು ಇಡೀ ವಿಶ್ವದ ಮೇಲೆ ರಾಜ್ಯ ಮಾಡುತ್ತೀರಿ, ಇದು ನಿಮ್ಮ ಯೋಗಬಲದ ಶಕ್ತಿ ಆಗಿದೆ ಮತ್ತು ಅವರದು ಬಾಹುಬಲವಾಗಿದೆ. ಭಾರತದ ಪ್ರಾಚೀನ ರಾಜಯೋಗ ಎಂಬ ಗಾಯನವಿದೆ. ಭಾರತದ ಪ್ರಾಚೀನ ರಾಜಯೋಗವನ್ನು ಕಲಿಯಬೇಕು, ಅದರಿಂದ ಸ್ವರ್ಗ ಸ್ಥಾಪನೆ ಆಗುತ್ತದೆ ಎಂದು ಬಯಸುತ್ತಾರೆ. ಕ್ರೈಸ್ತನಿಗೆ 3000 ವರ್ಷಗಳ ಹಿಂದೆ ಸ್ವರ್ಗ ಇತ್ತು ಎಂಬುದು ಹೇಳುತ್ತಾರೆ ಆದರೆ, ಅದು ಹೇಗಾಯಿತು? ಯೋಗದಿಂದ. ನೀವು ಪ್ರವೃತ್ತಿ ಮಾರ್ಗದ ಸನ್ಯಾಸಿಗಳಾಗಿದ್ದೀರಿ, ಆ ಸನ್ಯಾಸಿಗಳು ಮನೆ-ಮಠವನ್ನು ಬಿಟ್ಟು ಹೋಗುತ್ತಾರೆ. ನಾಟಕದನುಸಾರ ಪ್ರತಿಯೊಬ್ಬರಿಗೂ ಪಾತ್ರವು ಸಿಕ್ಕಿದೆ, ಇಷ್ಟು ಚಿಕ್ಕ ಬಿಂದುವಿನಲ್ಲಿ ಎಷ್ಟೊಂದು ಪಾತ್ರವಿದೆ. ಇದಕ್ಕೆ ಲೀಲೆ ಎಂದು ಹೇಳುತ್ತಾರೆ. ತಂದೆಯಂತೂ ಸದಾ ಶಕ್ತಿವಂತ, ಸತೋಪ್ರಧಾನವಾಗಿದ್ದಾರೆ. ಈಗ ನೀವು ಅವರಿಂದ ಶಕ್ತಿಯನ್ನು ಪಡೆಯುತ್ತೀರಿ. ಇದೂ ಸಹ ನಾಟಕ ಮಾಡಲ್ಪಟ್ಟಿದೆ. ತಂದೆಯು ಕೋಟಿ ಸೂರ್ಯನಿಗಿಂತಲೂ ತೇಜೋಮಯವಾಗಿದ್ದಾರೆ ಎಂದಲ್ಲ, ಮನುಷ್ಯರಂತೂ ಯಾರಿಗೆ ಯಾರ ಭಾವವು ಕುಳಿತಿರುತ್ತದೆಯೋ, ಆ ಭಾವನೆಯಿಂದ ನೋಡುತ್ತಾರೆ, ಕಣ್ಣುಗಳು ಕೆಂಪಗಾಗಿಬಿಡುತ್ತದೆ. ಇನ್ನು ಸಾಕು ನನ್ನಿಂದ ನೋಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಅದೆಲ್ಲವೂ ಭಕ್ತಿ ಮಾರ್ಗದ ಸಂಸ್ಕಾರ ಆಗಿದೆ. ಇದಂತೂ ಜ್ಞಾನವಾಗಿದೆ, ಇದರಲ್ಲಿ ಓದಬೇಕಾಗಿದೆ. ತಂದೆ ಶಿಕ್ಷಕನು ಆಗಿದ್ದಾರೆ, ಓದಿಸುತ್ತಿದ್ದಾರೆ. ಅವರು ನಮಗೆ ತಿಳಿಸುತ್ತಾರೆ- ಮಕ್ಕಳೇ, ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು. ಹಿಯರ್ ನೋ ಈವಿಲ್..... ಎಂದು ತಂದೆಯು ತಿಳಿಸುತ್ತಾರೆ, ಆದರೆ ಇದನ್ನು ಯಾರು ತಿಳಿಸಿದರು ಎಂದು ಮನುಷ್ಯರಿಗೆ ಗೊತ್ತಿಲ್ಲ. ಮೊದಲು ಮಂಗನ ಚಿತ್ರವನ್ನು ರಚಿಸುತ್ತಿದ್ದರು. ಈಗ ಮನುಷ್ಯರ ಚಿತ್ರವನ್ನು ರಚಿಸುತ್ತಾರೆ. ತಂದೆಯೂ ಸಹ ನಳಿನಿ ಎಂಬ ಮಗುವಿನ ಚಿತ್ರವನ್ನು ಮಾಡಿಸಿದ್ದರು. ಮನುಷ್ಯರಿಗೆ ಭಕ್ತಿಯ ನಶೆ ಬಹಳ ಇದೆ ಏಕೆಂದರೆ ಭಕ್ತಿಯ ರಾಜ್ಯವಾಗಿದೆಯಲ್ಲವೇ. ಈಗ ಜ್ಞಾನದ ರಾಜ್ಯವಾಗುವುದಿದೆ ಅಂತರವಾಗಿಬಿಡುತ್ತದೆ, ಮಕ್ಕಳಿಗೂ ತಿಳಿದಿದೆ - ಅವಶ್ಯವಾಗಿ ಜ್ಞಾನದಿಂದ ಬಹಳ ಸುಖವು ಸಿಗುತ್ತದೆ ಮತ್ತು ಭಕ್ತಿಯಿಂದ ಏಣಿಯನ್ನು ಕೆಳಗೆ ಇಳಿಯುತ್ತಾರೆ. ನಾವು ಮೊದಲು ಸತ್ಯಯುಗದಲ್ಲಿ ಹೋಗುತ್ತೇವೆ, ಮತ್ತೆ ಹೇನಿನ ರೀತಿ ಕೆಳಗೆ ಇಳಿಯುತ್ತೇವೆ. 1250 ವರ್ಷಗಳು 2 ಕಲೆಗಳು ಕಡಿಮೆ ಆಗುತ್ತವೆ. ಚಂದ್ರಮನ ಉದಾಹರಣೆ ಇದೆ, ಚಂದ್ರಮನಿಗೆ ಗ್ರಹಣ ಹಿಡಿಯುತ್ತದೆ. ಕಲೆಗಳು ಕಡಿಮೆ ಆಗುವುದು ಶುರು ಆಗುತ್ತದೆ. ಮತ್ತೆ ನಿಧಾನ-ನಿಧಾನವಾಗಿ ಕಲೆಗಳು ಹೆಚ್ಚಾದಾಗ 16 ಕಲೆ ಚಂದ್ರಮನಾಗುತ್ತಾನೆ. ಅದು ಅಲ್ಪಕಾಲದ ಮಾತಾಗಿದೆ, ಇದು ಬೇಹದ್ದಿನ ಮಾತಾಗಿದೆ. ಈ ಸಮಯದಲ್ಲಿ ಎಲ್ಲರ ಮೇಲೆ ರಾಹುವಿನ ಗ್ರಹಣವಿದೆ. ಶ್ರೇಷ್ಠಾತಿ ಶ್ರೇಷ್ಠವಾದದ್ದು ಬೃಹಸ್ಪತಿ ದಶೆ ಆಗಿದೆ. ಬಹಳ ಕನಿಷ್ಟವಾದದ್ದು ರಾಹುವಿನ ದೆಶೆ ಆಗಿದೆ, ಒಮ್ಮೆಲೆ ದಿವಾಳಿ ಆಗಿಬಿಡುತ್ತಾರೆ. ಬೃಹಸ್ಪತಿಯ ದೆಶೆಯಿಂದ ನಾವು ಮೇಲೇರುತ್ತೇವೆ. ಮನುಷ್ಯರು ಬೇಹದ್ದಿನ ತಂದೆಯನ್ನು ತಿಳಿದುಕೊಂಡಿಲ್ಲ. ಈಗ ಎಲ್ಲರ ಮೇಲೆ ಅವಶ್ಯವಾಗಿ ರಾಹುವಿನ ದಶೆ ಇದೆ. ಇದು ನಿಮಗೆ ಗೊತ್ತಿದೆ, ಮತ್ತ್ಯಾರಿಗೂ ಗೊತ್ತಿಲ್ಲ. ರಾಹುವಿನ ದೆಶೆಯೂ ಭಿಕಾರಿಗಳನ್ನಾಗಿ ಮಾಡುತ್ತದೆ. ಬೃಹಸ್ಪತಿಯ ದೆಶೆಯಿಂದ ಸಾಹುಕಾರರಾಗುತ್ತಾರೆ. ಭಾರತವು ಎಷ್ಟೊಂದು ಸಾಹುಕಾರವಾಗಿತ್ತು - ಭಾರತ ಒಂದೇ ಇತ್ತು, ಸತ್ಯಯುಗದಲ್ಲಿ ರಾಮರಾಜ್ಯ, ಪವಿತ್ರರಾಜ್ಯವಿರುತ್ತದೆ. ಅದರ ಮಹಿಮೆ ಆಗುತ್ತದೆ. ಅಪವಿತ್ರ ರಾಜ್ಯದವರು, ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲ ಎಂದು ಹಾಡುತ್ತಾರೆ, ನಿರ್ಗುಣ ಸಂಸ್ಥೆ ಎಂಬ ಇಂತಹ ಸಂಸ್ಥೆಗಳನ್ನು ಮಾಡಿದ್ದಾರೆ. ಅರೇ! ಇಡೀ ಪ್ರಪಂಚ ನಿರ್ಗುಣ ಸಂಸ್ಥೆಯಾಗಿದೆ. ಇದು ಒಬ್ಬರ ಮಾತಲ್ಲ. ಮಕ್ಕಳಿಗೆ ಸದಾ ಮಹಾತ್ಮರು ಎಂದು ಹೇಳಲಾಗುತ್ತದೆ. ಮತ್ತೆ ನೀವೂ ಹೇಳುತ್ತೀರಿ - ಯಾವುದೇ ಗುಣವಿಲ್ಲ, ಇಡೀ ಪ್ರಪಂಚದಲ್ಲಿ ಯಾರಲ್ಲಿಯೂ ಯಾವುದೇ ಗುಣವಿಲ್ಲದ ಕಾರಣ ರಾಹುವಿನ ದೆಶೆ ಕುಳಿತಿದೆ. ಈಗ ತಂದೆಯು ತಿಳಿಸುತ್ತಾರೆ - ದಾನ ಕೊಟ್ಟರೆ ಗ್ರಹಣ ಬಿಡುತ್ತದೆ. ಈಗ ಹೋಗುವುದಂತೂ ಎಲ್ಲರೂ ಹೋಗಬೇಕಲ್ಲವೇ. ದೇಹ ಸಹಿತವಾಗಿ ದೇಹದ ಎಲ್ಲಾ ಧರ್ಮಗಳನ್ನು ಬಿಡಿ. ತಮ್ಮನ್ನು ಆತ್ಮ ಎಂದು ನಿಶ್ಚಯ ಮಾಡಿಕೊಳ್ಳಿ. ತಾವು ಈಗ ಹಿಂತಿರುಗಿ ಹೋಗಬೇಕಾಗಿದೆ. ಪವಿತ್ರರಾಗದ ಕಾರಣ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಈಗ ತಂದೆಯು ಪವಿತ್ರರಾಗುವ ಯುಕ್ತಿಯನ್ನು ತಿಳಿಸುತ್ತಾರೆ - ಬೇಹದ್ದಿನ ತಂದೆಯನ್ನು ನೆನಪು ಮಾಡಿ. ಬಾಬಾ ನಾವು ಮರೆತು ಹೋಗುತ್ತೇವೆ ಎಂದು ಕೆಲವರು ಹೇಳುತ್ತಾರೆ. ತಂದೆಯು ಹೇಳುತ್ತಾರೆ - ಮಧುರ ಮಕ್ಕಳೇ, ಪತಿತಪಾವನ ತಂದೆಯನ್ನು ನೀವು ಮರೆತು ಹೋದರೆ ನೀವು ಹೇಗೆ ಪಾವನರಾಗುತ್ತೀರಿ? ವಿಚಾರ ಮಾಡಿ - ನೀವು ಏನು ಹೇಳುತ್ತೀರಿ!? ನಾವು ತಂದೆಯನ್ನು ಮರೆತುಹೋಗುತ್ತೇವೆ ಎಂದು ಪ್ರಾಣಿಗಳೂ ಸಹ ಎಂದೂ ಹೇಳುವುದಿಲ್ಲ, ನೀವು ಏನು ಹೇಳುತ್ತೀರಿ!? ನಾನು ನಿಮ್ಮ ಬೇಹದ್ದಿನ ತಂದೆಯಾಗಿದ್ದೇನೆ. ನೀವು ಬೇಹದ್ದಿನ ಆಸ್ತಿಯನ್ನು ಪಡೆಯಲು ಬಂದಿದ್ದೀರಿ. ನಿರಾಕಾರ ತಂದೆಯು ಸಾಕಾರದಲ್ಲಿ ಬರುತ್ತಾರೆ ಆಗಲೇ ಓದಿಸುತ್ತಾರೆ. ಈಗ ತಂದೆಯು ಇವರಲ್ಲಿ ಪ್ರವೇಶ ಮಾಡಿದ್ದಾರೆ, ಇವರು ಬಾಪ್ದಾದಾ ಆಗಿದ್ದಾರೆ. ಇಬ್ಬರ ಆತ್ಮಗಳು ಈ ಭೃಕುಟಿಯ ಮಧ್ಯದಲ್ಲಿ ಇವೆ, ನೀವು ಬಾಪ್ದಾದಾ ಎಂದು ಹೇಳುತ್ತೀರಿ, ಅಂದಮೇಲೆ ಅವಶ್ಯವಾಗಿ ಇಬ್ಬರು ಆತ್ಮಗಳು ಇರುತ್ತಾರೆ. ಶಿವಬಾಬಾ ಮತ್ತು ಬ್ರಹ್ಮಾರವರ ಆತ್ಮ. ತಾವು ಎಲ್ಲರೂ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಜ್ಞಾನವು ನಿಮಗೆ ಸಿಗುತ್ತದೆ, ಆದ್ದರಿಂದ ನಾವು ಸಹೋದರ-ಸಹೋದರಿಯರಾಗಿದ್ದೇವೆ, ಪ್ರಜಾಪಿತ ಬ್ರಹ್ಮಾರವರ ಮೂಲಕ ಸಹೋದರ-ಸಹೋದರಿಯರಾಗುತ್ತೇವೆ ಎಂದು ನಿಮಗೆ ಗೊತ್ತಿದೆ. ಈ ನೆನಪು ನಿಮಗೆ ಪಕ್ಕಾ ಇರಬೇಕು, ಆದರೆ ತಂದೆಯು ನೋಡುತ್ತಾರೆ - ಸಹೋದರ-ಸಹೋದರಿಯ ಸಂಬಂಧದಲ್ಲಿಯೂ ಸಹ ನಾಮ-ರೂಪದಲ್ಲಿ ಆಕರ್ಷಣೆ ಆಗುತ್ತದೆ, ಅನೇಕರಿಗೆ ವಿಕಲ್ಪಗಳು ಬರುತ್ತವೆ. ಒಳ್ಳೆಯ ಶರೀರವನ್ನು ನೋಡಿ ವಿಕಲ್ಪಗಳು ಬರುತ್ತವೆ. ತಮ್ಮನ್ನು ಆತ್ಮ ಎಂದು ತಿಳಿದು ಸಹೋದರ-ಸಹೋದರರ ದೃಷ್ಟಿಯಿಂದ ನೋಡಿ, ಆತ್ಮಗಳೆಲ್ಲರೂ ಸಹೋದರರಾಗಿದ್ದಾರೆ ಎಂದು ಈಗ ತಂದೆಯು ತಿಳಿಸುತ್ತಾರೆ. ಸಹೋದರರಿದ್ದಾರೆಂದರೆ ಅವಶ್ಯವಾಗಿ ತಂದೆಯು ಬೇಕು. ಎಲ್ಲರಿಗೂ ಒಬ್ಬ ತಂದೆ ಆಗಿದ್ದಾರೆ, ಎಲ್ಲರೂ ತಂದೆಯನ್ನು ನೆನಪು ಮಾಡುತ್ತಾರೆ, ಈಗ ತಂದೆಯು ತಿಳಿಸುತ್ತಾರೆ - ಸತೋಪ್ರಧಾನರಾಗಬೇಕೆಂದರೆ ನನ್ನನ್ನು ನೆನಪು ಮಾಡಿ, ಎಷ್ಟು ನೆನಪು ಮಾಡುತ್ತೀರೋ ಅಷ್ಟು ತುಕ್ಕು ಬಿಟ್ಟು ಹೋಗುತ್ತದೆ, ಖುಷಿಯ ನಶೆ ಏರುತ್ತದೆ ಮತ್ತು ಸೆಳೆತ ಆಗುತ್ತಿರುತ್ತದೆ ನಂಬರ್ವಾರ್ ಪುರುಷಾರ್ಥದನುಸಾರ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಿದ್ಯೆ ಮೇಲೆ ಪೂರ್ಣ ಗಮನ ಕೊಡಿ, ಸ್ವಯಂ ತಮ್ಮನ್ನು ಸಂಪತ್ತಿವಂತನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಏನನ್ನೂ ಬೇಡಬಾರದು. ಒಬ್ಬ ತಂದೆಯ ನೆನಪು ಮತ್ತು ಪವಿತ್ರತೆಯ ಧಾರಣೆಯಿಂದ ಪದಮಾಪದಮಪತಿಗಳಾಗಬೇಕಾಗಿದೆ.

2. ರಾಹುವಿನ ಗ್ರಹದಿಂದ ಮುಕ್ತರಾಗಲು ವಿಕಾರಗಳ ದಾನ ಕೊಡಬೇಕು. ಹಿಯರ್ ನೋ ಈವಿಲ್ (ಕೆಟ್ಟದ್ದನ್ನು ಕೇಳಬೇಡಿ)..........ಯಾವ ಮಾತುಗಳಿಂದ ಏಣಿಯನ್ನು ಇಳಿದಿದ್ದೀರೋ, ನಿರ್ಗುಣರಾಗಿದ್ದೀರೋ ಅದನ್ನು ಬುದ್ಧಿಯಿಂದ ಮರೆತುಬಿಡಬೇಕಾಗಿದೆ.

ವರದಾನ:
“ಮೊದಲು ನೀವು” ಎನ್ನುವ ಮಂತ್ರದ ಮೂಲಕ ಸರ್ವರಿಂದ ಸನ್ಮಾನ ಪ್ರಾಪ್ತಿ ಮಾಡುವಂತಹ ನಿರ್ಮಾಣ ರಿಂದ ಮಹಾನ್ ಭವ

ಇದೇ ಮಹಾಮಂತ್ರ ಸದಾ ನೆನಪಿರಲಿ “ನಿರ್ಮಾಣವೇ ಸರ್ವ ಮಹಾನ್ ಆಗಿದೆ”. “ಮೊದಲು ನೀವು” ಎಂದು ಮಾಡುವುದೇ ಸರ್ವರಿಂದ ಸ್ವಮಾನ ಪ್ರಾಪ್ತಿ ಮಾಡಿಕೊಳ್ಳುವ ಆಧಾರವಾಗಿದೆ. ಮಹಾನ್ ಆಗುವ ಈ ಮಹಾಮಂತ್ರ ವರದಾನದ ರೂಪದಲ್ಲಿ ಸದಾ ಜೊತೆಯಲ್ಲಿಟ್ಟುಕೊಳ್ಳಿ. ವರದಾನಗಳಿಂದಲೇ ಪಾಲನೆ ಪಡೆಯುತ್ತಾ, ಹಾರುತ್ತಾ ಗುರಿಯನ್ನು ತಲುಪಬೇಕಾಗುತ್ತದೆ. ಪರಿಶ್ರಮ ಯಾವಾಗ ಪಡುವಿರೆಂದರೆ ಯಾವಾಗ ವರದಾನಗಳನ್ನು ಕಾರ್ಯದಲ್ಲಿ ತೊಡಗಿಸದೇ ಹೋದಾಗ. ಒಂದುವೇಳೆ ವರದಾನಗಳಿಂದ ಪಾಲನೆ ಪಡೆಯುತ್ತಿದ್ದರೆ, ವರದಾನಗಳನ್ನು ಕಾರ್ಯದಲ್ಲಿ ತೊಡಗಿಸುತ್ತಿದ್ದರೆ ಪರಿಶ್ರಮ ಸಮಾಪ್ತಿಯಾಗಿಬಿಡುವುದು. ಸದಾ ಸಫಲತೆ ಮತ್ತು ಸಂತುಷ್ಠತೆಯ ಅನುಭವ ಮಾಡುತ್ತ ಇರುತ್ತಾರೆ.

ಸ್ಲೋಗನ್:
ಮುಖದ ಮೂಲಕ ಸೇವೆ ಮಾಡುವುದಕ್ಕಾಗಿ ತಮ್ಮ ಮುಗುಳ್ನಗುತ್ತಿರುವ ರಮಣೀಕ ಮತ್ತು ಗಂಭೀರ ಸ್ವರೂಪ ಇಮರ್ಜ್ ಮಾಡಿಕೊಳ್ಳಿ.