28.04.24    Avyakt Bapdada     Kannada Murli    23.10.99     Om Shanti     Madhuban


"ಸಮಯದ ಕೂಗು- ದಾತ ಆಗಿ"


ಇಂದು ಸರ್ವ ಶ್ರೇಷ್ಠ ಭಾಗ್ಯವಿಧಾತ, ಸರ್ವ ಶಕ್ತಿಗಳ ದಾತ ಬಾಪ್ದಾದಾರವರು ನಾಲ್ಕಾರು ಕಡೆಯ ಸರ್ವ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಮಧುಬನದಲ್ಲಾಗಿರಲಿ, ಸಮ್ಮುಖದಲ್ಲಾಗಿರಲಿ, ದೇಶ ವಿದೇಶದಲ್ಲಿ, ನೆನಪಿನಲ್ಲಿದ್ದು ಕೇಳುತ್ತಿರಬಹುದು, ನೋಡುತ್ತಿರಬಹುದು, ಎಲ್ಲಿಯೇ ಕುಳಿತಿರಲಿ ಆದರೆ ಹೃದಯದ ಸಮೀಪದಲ್ಲಿದ್ದಾರೆ. ನೀವೆಲ್ಲರೂ ಸಹ ಹರ್ಷಿತರಾಗುತ್ತಿದ್ದೀರಿ ಅಲ್ಲವೇ! ಮಕ್ಕಳು ಹರ್ಷಿತ ಹಾಗೂ ಬಾಪ್ದಾದಾರವರು ಸಹ ಹರ್ಷಿತ. ಇದೆ ಹೃದಯದ ಸದಾ ಸತ್ಯವಾದ ಹರ್ಷ ಇಡೀ ಪ್ರಪಂಚದ ದುಃಖವನ್ನು ದೂರ ಮಾಡುವಂತಹದ್ದಾಗಿದೆ. ಈ ಹೃದಯದ ಹರ್ಷ ಆತ್ಮಗಳಿಗೆ ತಂದೆಯ ಅನುಭವ ಮಾಡಿಸುವಂತಹದ್ದಾಗಿದೆ ಏಕೆಂದರೆ ತಂದೆಯು ಸಹ ಸದಾ ಸರ್ವ ಆತ್ಮರ ಪ್ರತಿ ಸೇವಾಧಾರಿಯಾಗಿದ್ದಾರೆ ಹಾಗೂ ನೀವೆಲ್ಲರೂ ಮಕ್ಕಳು ತಂದೆಯ ಜೊತೆ ಸೇವೆಯಲ್ಲಿ ಜೊತೆಗಾರರಾಗಿದ್ದೀರಿ. ಜೊತೆಗಾರರಾಗಿದ್ದೀರಿ ಅಲ್ಲವೇ! ತಂದೆಯ ಜೊತೆಗಾರರು ಹಾಗೂ ವಿಶ್ವದ ದುಃಖವನ್ನು ಪರಿವರ್ತನೆ ಮಾಡಿ ಸದಾ ಖುಷಿಯಾಗಿರುವ ಸಾಧನವನ್ನು ಕೊಡುವ ಸೇವೆಯಲ್ಲಿ ಸದಾ ಉಪಸ್ಥಿತರಾಗಿರುತ್ತೀರಿ. ಸದಾ ಸೇವಾದಾರಿಯಾಗಿದ್ದೀರಿ. ಕೇವಲ ನಾಲ್ಕು ಗಂಟೆ, ಆರು ಗಂಟೆ ಸೇವೆ ಮಾಡುವಂತಹವರಲ್ಲ. ಪ್ರತಿಯೊಂದು ಕ್ಷಣ ಸೇವೆಯ ವೇದಿಕೆ ಮೇಲೆ ಪಾತ್ರವನ್ನು ಅಭಿನಯಿಸುವಂತಹ ಪರಮಾತ್ಮನ ಜೊತೆಗಾರರಾಗಿದ್ದೀರಿ. ನೆನಪು ನಿರಂತರವಾಗಿದೆ, ಇದೇ ರೀತಿ ಸೇವೆಯೂ ಸಹ ನಿರಂತರವಾಗಿದೆಯೆ?. ತಮ್ಮನ್ನು ನಿರಂತರ ಸೇವಾಧಾರಿ ಎಂದು ಅನುಭವ ಮಾಡುತ್ತೀರಾ? ಅಥವಾ 8-10 ಗಂಟೆಯ ಸೇವಾದಾರಿಯಾಗಿದ್ದೀರಾ? ಈ ಬ್ರಾಹ್ಮಣ ಜನ್ಮವೇ ನೆನಪು ಹಾಗೂ ಸೇವೆಗಾಗಿ ಇದೆ. ಬೇರೆ ಏನಾದರೂ ಮಾಡುವುದಿದೆಯೇ? ಇಷ್ಟೇ ಅಲ್ಲವೇ! ಪ್ರತಿಯೊಂದು ಶ್ವಾಸ, ಪ್ರತಿಯೊಂದು ಕ್ಷಣ ನೆನಪು ಹಾಗೂ ಸೇವೆ ಜೊತೆ ಜೊತೆಯಲ್ಲಿದೆಯೇ ಅಥವಾ ಸೇವೆಯ ಸಮಯ ಬೇರೆ ಹಾಗೂ ನೆನಪಿನ ಸಮಯ ಬೇರೆಯಾಗಿದೆಯೇ? ಇಲ್ಲ ಅಲ್ಲವೇ? ಒಳ್ಳೆಯದು, ಸಮತೋಲನ ಇದೆಯೇ? ಒಂದುವೇಳೆ 100 ಪ್ರತಿಶತ ಸೇವೆ ಇದ್ದರೆ, ನೂರು ಪ್ರತಿಶತ ನೆನಪು ಸಹ ಇದೆಯೇ? ಎರಡರ ಸಮತೋಲನ ಇದೆಯೇ? ಅಂತರ ಬಂದುಬಿಡುತ್ತದೆ ಅಲ್ಲವೇ? ಕರ್ಮ ಯೋಗಿಯ ಅರ್ಥವೇ ಆಗಿದೆ ಕರ್ಮ ಹಾಗೂ ನೆನಪು, ಸೇವೆ ಹಾಗೂ ನೆನಪು- ಎರಡರ ಬ್ಯಾಲೆನ್ಸ್ ಸಮನಾಗಿ ಇರಬೇಕು. ಹೀಗಲ್ಲ ಕೆಲವೊಮ್ಮೆ ನೆನಪು ಜಾಸ್ತಿ ಹಾಗೂ ಸೇವೆ ಕಡಿಮೆ, ಅಥವಾ ಸೇವೆ ಜಾಸ್ತಿ ನೆನಪು ಕಡಿಮೆ. ಹೇಗೆ ಎಲ್ಲಿಯವರೆಗೂ ಆತ್ಮ ಹಾಗೂ ಶರೀರ ವೇದಿಕೆಯ ಮೇಲೆ ಇರುತ್ತದೆ ಅಲ್ಲಿಯವರೆಗೂ ಜೊತೆ ಜೊತೆಯಲ್ಲಿ ಇರುತ್ತದೆ ಅಲ್ಲವೇ. ಬೇರೆಯಾಗಲು ಸಾಧ್ಯವೇ? ಇದೆ ರೀತಿ ನೆನಪು ಹಾಗೂ ಸೇವೆ ಜೊತೆ ಜೊತೆಯಲ್ಲಿ ಇರಲಿ. ನೆನಪು ಎಂದರೆ ತಂದೆಯ ಸಮಾನ, ಸ್ವಯಂ ನ ಸ್ವಮಾನದ ನೆನಪು. ಯಾವಾಗ ತಂದೆಯ ನೆನಪಿರುತ್ತದೆ ಆಗ ಸ್ವತಹವಾಗಿ ಸ್ವಮಾನದ ನೆನಪು ಸಹ ಇರುತ್ತದೆ. ಒಂದು ವೇಳೆ ಸ್ವಮಾನದಲ್ಲಿ ಇರುವುದಿಲ್ಲ ಎಂದರೆ ನೆನಪು ಸಹ ಶಕ್ತಿಶಾಲಿಯಾಗಿ ಇರಲು ಸಾಧ್ಯವಿಲ್ಲ.

ಸ್ವಮಾನ ಎಂದರೆ ತಂದೆಯ ಸಮಾನ. ಸಂಪೂರ್ಣ ಸ್ವಮಾನದಲ್ಲಿ ಇರುವವರೆ ತಂದೆಯ ಸಮಾನ. ಹಾಗೂ ಇಂತಹ ನೆನಪಿನಲ್ಲಿ ಇರುವಂತಹ ಮಕ್ಕಳು ಸದಾ ದಾತ ಆಗಿರುತ್ತಾರೆ. ತೆಗೆದುಕೊಳ್ಳುವವರಲ್ಲ, ದೇವತೆ ಎಂದರೆ ದಾನ ಮಾಡುವವರು. ಇಂದು ಬಾಪ್ದಾದಾರವರು ಎಲ್ಲಾ ಮಕ್ಕಳ ದಾತಾತನದ ಸ್ಥಿತಿಯನ್ನು ಚೆಕ್ ಮಾಡುತ್ತಿದ್ದರು- ಎಲ್ಲಿಯವರೆಗೂ ದಾತನ ಮಕ್ಕಳು ದಾತ ಆಗಿದ್ದಾರೆ ಎಂದು? ಹೇಗೆ ತಂದೆ ಎಂದು ಸಹ ಪಡೆಯುವ ಸಂಕಲ್ಪವನ್ನು ಮಾಡುವುದಿಲ್ಲ, ಕೊಡುವ ಸಂಕಲ್ಪವನ್ನು ಮಾಡುತ್ತಾರೆ. ಒಂದು ವೇಳೆ, ಹಳೆಯದೆಲ್ಲವನ್ನು ಕೊಟ್ಟುಬಿಡಿ ಎಂದು ಹೇಳುತ್ತಾರೆ ಎಂದರು ಸಹ, ಹಳೆಯದರ ಬದಲಾಗಿ ಹೊಸದನ್ನು ಕೊಡುತ್ತಾರೆ. ತಂದೆ ತೆಗೆದುಕೊಳ್ಳುತ್ತಾರೆ ಎಂದರೆ ಕೊಡುತ್ತಾರೆ. ವರ್ತಮಾನ ಸಮಯ ಬಾಪ್ದಾದಾರವರಿಗೆ ಮಕ್ಕಳ ಒಂದು ವಿಷಯ ಬಹಳ ಇಷ್ಟವಾಗುತ್ತದೆ. ಯಾವ ವಿಷಯ? ವಿದೇಶದ ವಿಷಯವಾಗಿದೆ. ಯಾವುದು?( ಕಾಲ್ ಆಫ್ ಟೈಮ್) (ಸಮಯದ ಕರೆ)

ಬಾಪ್ದಾದಾರವರು ನೋಡುತ್ತಿದ್ದರು -ಮಕ್ಕಳಿಗಾಗಿ ಸಮಯದ ಕರೆ ಏನಾಗಿದೆ! ನೀವು ನೋಡುತ್ತಿರುವಿರಿ- ವಿಶ್ವಕ್ಕಾಗಿ, ಸೇವೆಗಾಗಿ, ಬಾಪ್ದಾದಾರವರು ಸೇವೆಯ ಜೊತೆಗಾರರಂತೂ ಆಗಿದ್ದಾರೆ. ಆದರೆ ಬಾಪ್ದಾದಾರವರು ನೋಡುತ್ತಿದ್ದಾರೆ ಮಕ್ಕಳಿಗಾಗಿ ಸಮಯದ ಕರೆ ಏನಾಗಿದೆ? ನೀವು ಕೂಡ ಸಮಯದ ಕರೆ ಏನಾಗಿದೆ ಎಂದು ತಿಳಿದಿದ್ದೀರಲ್ಲವೇ? ತಮಗಾಗಿ ಯೋಚಿಸಿ. ಸೇವೆಯ ಪ್ರತಿಯಾಗಿ ಭಾಷಣವನ್ನಂತು ಮಾಡಿದ್ದೀರಿ, ಮಾಡುತ್ತಿರುವಿರಿ! ಆದರೆ ತಮಗಾಗಿ, ತಮ್ಮೊಂದಿಗೆ ಕೇಳಿಕೊಳ್ಳಿ ನಮಗಾಗಿ ಸಮಯದ ಕರೆ ಏನಾಗಿದೆ? ವರ್ತಮಾನ ಸಮಯದ ಕರೆ ಏನಾಗಿದೆ? ಬಾಪ್ದಾದಾರವರು ನೋಡುತ್ತಿದ್ದರು- ಈಗಿನ ಸಮಯದ ಅನುಸಾರ ಪ್ರತಿ ಸಮಯ, ಪ್ರತಿಯೊಂದು ಮಗುವಿನಲ್ಲಿ ದಾತಾತನದ ಸ್ಮೃತಿ ಇನ್ನಷ್ಟು ಹೆಚ್ಚಾಗಬೇಕು. ಸ್ವ ಉನ್ನತಿಯ ಪ್ರತಿಯಾಗಿ ದಾತಾತನದ ಭಾವ ಆಗಿರಲಿ, ಸರ್ವರ ಪ್ರತಿ ಸ್ನೇಹ ಇಮರ್ಜ ರೂಪದದಲ್ಲಿ ಕಾಣಿಸಲಿ. ಯಾರೇ ಹೇಗೆ ಇರಲಿ, ಏನೇ ಆಗಿರಲಿ, ನಾನು ಕೊಡಬೇಕು. ಎಂದ ಮೇಲೆ ದಾತ ಸದಾ ಬೇಹದ್ದಿನ ವೃತ್ತಿಯವರಾಗಿರುತ್ತಾರೆ, ಹದ್ದಿನದ್ದಲ್ಲ ಹಾಗೂ ದಾತ ಸದಾ ಸಂಪನ್ನ, ಭರ್ಪೂರ್ ಆಗಿರುತ್ತಾರೆ. ದಾತ ಸದಾ ಕ್ಷಮೆಯ ಮಾಸ್ಟರ್ ಸಾಗರ ರಾಗಿರುತ್ತಾರೆ. ಈ ಕಾರಣದಿಂದ ತಮ್ಮ ಹದ್ದಿನ ಸಂಸ್ಕಾರಗಳು ಅಥವಾ ಅನ್ಯರ ಸಂಸ್ಕಾರಗಳು ಇಮರ್ಜ್ ಆಗುವುದಿಲ್ಲ, ಮರ್ಜ್ ಆಗುತ್ತದೆ. ನಾನು ಕೊಡಬೇಕು. ಅನ್ಯರು ಕೊಡಲಿ ಅಥವಾ ಕೊಡದೆ ಇರಲಿ ಆದರೆ ನಾನು ದಾತ ಆಗಬೇಕು. ಯಾವುದೇ ಸಂಸ್ಕಾರ ವಶ ಪರವಶ ಆತ್ಮವಾಗಿರಲಿ, ಆ ಆತ್ಮಗಳಿಗೆ ನಾನು ಸಹಯೋಗ ಕೊಡಬೇಕು. ಎಂದ ಮೇಲೆ ಯಾರದ್ದೆ ಹದ್ದಿನ ಸಂಸ್ಕಾರ ತಮ್ಮನ್ನು ಪ್ರಭಾವಿತರನ್ನಾಗಿ ಮಾಡಲು ಸಾಧ್ಯವಿಲ್ಲ . ಅನ್ಯರು ಸನ್ಮಾನ ಕೊಡಲಿ, ಕೊಡದೆ ಇರಲಿ, ಅವರು ಕೊಡದೆ ಇದ್ದರೂ ಸಹ ನಾನು ಕೊಡಬೇಕು. ಇಂತಹ ದಾತಾನನ್ನು ಈಗ ಇಮರ್ಜ್ ಮಾಡಿಕೊಳ್ಳಿ. ಮನಸ್ಸಿನಲ್ಲಿ ಭಾವನೆಯಂತೂ ಇದೆ ಆದರೆ....`ಆದರೆ’ ಎಂದು ಬರೆದಿರಲಿ. ನಾನು ಮಾಡಲೇಬೇಕು. ಯಾವುದೇ ತಮ್ಮ ಕೆಲಸಕ್ಕೆ ಬರದೇ ಇರುವಂತಹ ಚಲನೆ ಅಥವಾ ಮಾತು, ಇಷ್ಟವಾಗದೇ ಇರುವಂತಹದ್ದು ಏನಿದೆ, ಅದನ್ನು ತೆಗೆದುಕೊಳ್ಳಬೇಡಿ. ಕೆಟ್ಟ ವಸ್ತುವನ್ನು ತೆಗೆದುಕೊಳ್ಳಲಾಗುತ್ತದೆಯೇ? ಮನಸ್ಸಿನಲ್ಲಿ ಧಾರಣೆ ಮಾಡುವುದು ಎಂದರೆ ತೆಗೆದುಕೊಳ್ಳುವುದು. ಬುದ್ಧಿಯವರೆಗೂ ಅಲ್ಲ. ಬುದ್ಧಿಯಲ್ಲೂ ಮಾತು ಬಂದು ಬಿಟ್ಟಿತು, ಇದು ಸಹ ಆಗಬಾರದು. ಆ ವಸ್ತುವೇ ಕೆಟ್ಟದ್ದು ಎಂದ ಮೇಲೆ, ಒಳ್ಳೆಯದಲ್ಲ ಎಂದ ಮೇಲೆ ಅದನ್ನು ಬುದ್ಧಿ ಹಾಗೂ ಹೃದಯದಲ್ಲಿ ತೆಗೆದುಕೊಳ್ಳಬೇಡಿ ಅರ್ಥಾತ್ ಧಾರಣೆ ಮಾಡಬೇಡಿ. ತೆಗೆದುಕೊಳ್ಳುವ ಬದಲಾಗಿ ಶುಭ ಭಾವನೆ, ಶುಭಕಾಮನೆ, ದಾತ ಆಗಿ ಕೊಡಿ. ತೆಗೆದುಕೊಳ್ಳಬೇಡಿ; ಏಕೆಂದರೆ ಈಗ ಸಮಯದ ಅನುಸಾರ ಒಂದು ವೇಳೆ ಹೃದಯ ಹಾಗೂ ಬುದ್ಧಿ ಖಾಲಿ ಇಲ್ಲ ಎಂದರೆ ನಿರಂತರ ಸೇವಾದಾರಿ ಆಗಲು ಸಾಧ್ಯವಿಲ್ಲ. ಹೃದಯ ಹಾಗೂ ಬುದ್ಧಿ ಯಾವಾಗ ಯಾವುದೇ ಮಾತಿನಲ್ಲಿ ವ್ಯಸ್ತವಾಗಿದ್ದರೆ ಸೇವೆ ಹೇಗೆ ಮಾಡುವಿರಿ? ಲೌಕಿಕದಲ್ಲಿ ಹೇಗೆ ಎಂಟು ಗಂಟೆ, ಕೆಲವರು ಹತ್ತು ಗಂಟೆ ಕೆಲಸ ಮಾಡುತ್ತಾರೆ, ಅದೇ ರೀತಿ ಇಲ್ಲಿಯೂ ಸಹ ಆಗಿಬಿಡುತ್ತದೆ. 8 ಗಂಟೆಯ ಸೇವಾದಾರಿ, 6 ಗಂಟೆಯ ಸೇವಾಧಾರಿ. ನಿರಂತರ ಸೇವಾಧಾರಿಯಾಗಲು ಸಾಧ್ಯವಿಲ್ಲ. ಮನಸ ಸೇವೆ ಮಾಡಿ, ವಾಚ ಸೇವೆ ಮಾಡಿ ಅಥವಾ ಕರ್ಮಣ ಸೇವೆ ಮಾಡಿ ಎಂದರೆ ಸಂಬಂಧ ಸಂಪರ್ಕದಿಂದ ಮಾಡಿ. ಪ್ರತಿಯೊಂದು ಕ್ಷಣ ದಾತ ಅರ್ಥಾತ್ ಸೇವಾದಾರಿ. ಬುದ್ಧಿಯನ್ನು ಖಾಲಿಯಾಗಿ ಇಡುವುದರಿಂದ ತಂದೆಯ ಸೇವೆಯಲ್ಲಿ ಜೊತೆಗಾರರಾಗುವಿರಿ. ಹೃದಯವನ್ನು ಸದಾ ಸ್ವಚ್ಛವಾಗಿ ಇಡುವುದರಿಂದ ನಿರಂತರ ತಂದೆಯ ಸೇವೆಯಲ್ಲಿ ಜೊತೆಗಾರರಾಗುವಿರಿ. ನಿಮ್ಮೆಲ್ಲರ ಪ್ರತಿಜ್ಞೆ ಏನಾಗಿದೆ? ಜೊತೆಯಲ್ಲಿ ಇರುತ್ತೇವೆ, ಜೊತೆಯಲ್ಲಿ ನಡೆಯುತ್ತೇವೆ. ಪ್ರತಿಜ್ಞೆ ಮಾಡಿದ್ದೀರಲ್ಲವೇ? ಅಥವಾ ನೀವು ಮುಂದೆ ಇರಿ ನಾವು ಹಿಂದೆ ಹಿಂದೆ ಬರುತ್ತೇವೆ? ಇಲ್ಲ ಅಲ್ಲವೇ? ಜೊತೆಯ ಪ್ರತಿಜ್ಞೆ ಮಾಡಿದ್ದೀರಲ್ಲವೇ? ತಂದೆ ಸೇವೆ ಇಲ್ಲದೆ ಇರುತ್ತಾರೆಯೇ? ನೆನಪು ಇಲ್ಲದೆ ಸಹ ಇರುವುದಿಲ್ಲ. ಎಷ್ಟು ತಂದೆಯ ನೆನಪಿರುತ್ತದೆ ಅಷ್ಟು ನೀವು ಪರಿಶ್ರಮದಿಂದ ಇರುತ್ತೀರಿ. ಆದರೆ ಪರಿಶ್ರಮದಿಂದ, ಗಮನದಿಂದ. ತಂದೆಗೆ ಬೇರೆ ಏನಿದೆ? ಪರಮಾತ್ಮನಿಗೆ ಆತ್ಮಗಳೇ ಇದ್ದಾರೆ ಅಷ್ಟೇ ನಂಬರ್ವಾರ್ ಆತ್ಮಗಳಂತು ಇದ್ದಾರೆ. ಮಕ್ಕಳ ನೆನಪಿಲ್ಲದೆ ತಂದೆ ಇರಲು ಸಾಧ್ಯವೇ ಇಲ್ಲ. ತಂದೆ ಮಕ್ಕಳ ನೆನಪಿಲ್ಲದೆ ಇರಲು ಸಾಧ್ಯವೇ? ನೀವು ಇರುತ್ತೀರಾ? ಕೆಲವೊಮ್ಮೆ ಹುಡುಗಾಟಕೆಯಲ್ಲಿ ಬಂದುಬಿಡುತ್ತೀರಿ.

ಹಾಗಾದರೆ ಏನು ಕೇಳಿದಿರಿ? ಸಮಯದ ಕರೆಯಾಗಿದೆ- ದಾತ ಆಗಿ. ಬಹಳ ಅವಶ್ಯಕವಾಗಿದೆ. ಇಡೀ ವಿಶ್ವದ ಆತ್ಮಗಳ ಕರೆಯಾಗಿದೆ- ಹೇ ನಮ್ಮ ಇಷ್ಟ... ಇಷ್ಟ ದೇವತೆಯರಾಗಿದ್ದೀರಲ್ಲವೇ! ಯಾವುದಾದರೂ ಒಂದು ರೂಪದಲ್ಲಿ ಸರ್ವ ಆತ್ಮಗಳಿಗಾಗಿ ಇಷ್ಟ ಆಗಿದ್ದೀರಿ. ಈಗ ಎಲ್ಲಾ ಆತ್ಮಗಳ ಕರೆಯಾಗಿದೆ- ಹೇ ಇಷ್ಟದೇವ, ದೇವಿಯರೇ ಪರಿವರ್ತನೆ ಮಾಡಿ. ಈ ಕೂಗು ಕೇಳಿಸುತ್ತದೆಯೇ? ಪಾಂಡವರಿಗೆ ಈ ಕೂಗು ಕೇಳಿಸುತ್ತದೆಯೇ? ಕೇಳಿಸಿಕೊಂಡು ನಂತರ ಏನು ಮಾಡುತ್ತೀರಿ? ಕೇಳಿಸುತ್ತದೆ ಎಂದರೆ ಪರಿಹಾರ ಕೊಡುತ್ತೀರಾ ಅಥವಾ ಯೋಚಿಸುತ್ತೀರಾ- ಹಾ ಮಾಡೋಣ? ಕರೆ ಕೇಳಿಸುತ್ತದೆಯೇ? ಸಮಯದ ಕರೆಯನ್ನು ಕೇಳುತ್ತೀರೇ ಅಥವಾ ಕೇವಲ ಆತ್ಮರ ಕರೆಯನ್ನು ಕೇಳುತ್ತೀರಾ? ಇಷ್ಟ ದೇವಿ ದೇವತೆಯರೇ ಈಗ ತಮ್ಮ ದಾತಾತನದ ರೂಪವನ್ನು ಇಮರ್ಜ್ ಮಾಡಿಕೊಳ್ಳಿ. ಕೊಡಬೇಕು. ಯಾವುದೇ ಆತ್ಮ ವಂಚಿತವಾಗಿ ಉಳಿದುಕೊಂಡು ಬಿಡದಿರಲಿ. ಇಲ್ಲವಾದರೆ ದೂರುಗಳ ಮಾಲೆಗಳು ಬೀಳುತ್ತವೆ. ದೂರುಗಳಂತು ಕೊಡುತ್ತಾರಲ್ಲವೇ! ದೂರುಗಳ ಮಾಲೆಗಳನ್ನು ಹಾಕಿಕೊಳ್ಳುವ ಇಷ್ಟ ಆಗಿದ್ದರೆ ಅಥವಾ ಹೂಗಳ ಮಾಲೆಯನ್ನು ಹಾಕಿಕೊಳ್ಳುವ ಇಷ್ಟ ದೇವಿಯರಾಗಿದ್ದೀರಾ? ಯಾವ ಇಷ್ಟ ಆಗಿದ್ದೀರಿ? ಪೂಜ್ಯರಾಗಿದ್ದೀರಲ್ಲವೇ! ನಾವಂತೂ ನಂತರ ಬರುವವರಾಗಿದ್ದೀರಿ ಎಂದು ತಿಳಿದುಕೊಳ್ಳಬೇಡಿ. ಯಾರು ದೊಡ್ಡ ದೊಡ್ಡವರಾಗಿದ್ದಾರೆ ಅವರೇ ದಾತ ಆಗುತ್ತಾರೆ, ನಾವೆಲ್ಲಿ ಆಗುತ್ತೇವೆ. ಹೀಗಲ್ಲ, ಎಲ್ಲರೂ ದಾತ ಆಗಬೇಕು.

ಯಾರೆಲ್ಲ ಮೊದಲ ಬಾರಿ ಮದುಬನಕ್ಕೆ ಬಂದಿದ್ದೀರಿ ಅವರು ಕೈ ಎತ್ತಿ, ಯಾರೆಲ್ಲಾ ಮೊದಲ ಬಾರಿ ಬಂದಿದ್ದೀರಿ ಅವರು ದಾತ ಆಗುತ್ತಿರೋ ಅಥವಾ ಎರಡು ಮೂರು ವರ್ಷದಲ್ಲಿ ಆಗುತ್ತಿರೋ? ಒಂದು ವರ್ಷದವರು ದಾತ ಆಗುತ್ತೀರಾ?( ಆಗುತ್ತೇವೆ) ಬಹಳ ಒಳ್ಳೆಯ ಬುದ್ಧಿವಂತರಾಗಿದ್ದಾರೆ. ಬಾಪ್ದಾದಾರವರು ಸಾಹಸದ ಮೇಲೆ ಸದಾ ಖುಷಿಯಾಗುತ್ತಾರೆ. ಒಂದು ವರ್ಷದವರಾಗಿರಲಿ, ಆರು ತಿಂಗಳಿನವರು ಆಗಿರಲಿ ಆದರೆ ಬಾಪ್ದಾದಾರವರು ತಿಳಿದಿದ್ದಾರೆ ಒಂದು ವರ್ಷದವರಾಗಿದ್ದೀರಾ ಅಥವಾ, ಒಂದು ತಿಂಗಳಿನವರಾಗಿದ್ದೀರಾ, ಒಂದು ತಿಂಗಳಿನವರು ಸಹ ತಮ್ಮನ್ನು ಬ್ರಹ್ಮಾಕುಮಾರ ಅಥವಾ ಬ್ರಹ್ಮಾಕುಮಾರಿ ಎಂದು ಕರೆಸಿಕೊಳ್ಳುತ್ತೀರಲ್ಲವೇ! ಹಾಗಾದರೆ ಬ್ರಹ್ಮಾಕುಮಾರ ಅಥವಾ ಬ್ರಹ್ಮಾಕುಮಾರಿ ಎಂದರೆ ಬ್ರಹ್ಮಾತಂದೆಯ ಆಸ್ತಿಯ ಅಧಿಕಾರಿಗಳಾಗಿದ್ದೀರಿ. ಬ್ರಹ್ಮಾನನ್ನು ತಂದೆ ಎಂದುಕೊಂಡಿರಿ ಆಗಲೇ ಕುಮಾರ ಕುಮಾರಿಯರಾದರಿ ಅಲ್ಲವೇ? ಹಾಗಾದರೆ ಬ್ರಹ್ಮಾಕುಮಾರ ಹಾಗೂ ಬ್ರಹ್ಮಾಕುಮಾರಿ, ತಂದೆ ಬ್ರಹ್ಮಾ, ಶಿವ ಬಾಬಾರವರ ಆಸ್ತಿಗೆ ಅಧಿಕಾರಿಯಾಗಿದ್ದೀರಿ ಅಲ್ಲವೇ! ಒಂದು ತಿಂಗಳಿನವರಿಗೆ ಆಸ್ತಿ ಸಿಗುವುದಿಲ್ಲವೇ? ಒಂದು ತಿಂಗಳಿನವರಿಗೆ ಆಸ್ತಿ ಸಿಗುತ್ತದೆಯೇ? ಆಸ್ತಿ ಸಿಕ್ಕಿತು ಎಂದ ಮೇಲೆ ಕೊಡುವುದಕ್ಕಾಗಿ ದಾತ ಆಗಿದ್ದೀರಲ್ಲವೇ! ಏನು ಸಿಗುತ್ತದೆಯೋ ಅದನ್ನು ಕೊಡಲು ಆರಂಭ ಮಾಡಲೇಬೇಕು ಅಲ್ಲವೇ.

ಒಂದು ವೇಳೆ ತಂದೆ ಎಂದುಕೊಂಡು ಕನೆಕ್ಷನ್ ಜೋಡಿಸಿದರೆ ಒಂದು ದಿನದಲ್ಲಿಯೇ ಆಸ್ತಿಯನ್ನು ಪಡೆದುಕೊಳ್ಳಬಹುದು. ಹೀಗಲ್ಲ- ಹೌದು ಚೆನ್ನಾಗಿದೆ, ಯಾವುದೋ ಒಂದು ಶಕ್ತಿ ಇದೆ, ತಿಳುವಳಿಕೆಯಲ್ಲಿ ಬರುತ್ತದೆ... ಈ ರೀತಿಯಲ್ಲ. ಆಸ್ತಿಗೆ ಅಧಿಕಾರಿಗಳು ಮಕ್ಕಳಾಗಿರುತ್ತಾರೆ. ತಿಳಿದುಕೊಳ್ಳುವವರು, ನೋಡುವವರು ಅಲ್ಲ. ಒಂದು ವೇಳೆ ಒಂದು ದಿನದಲ್ಲಿಯೂ ಸಹ ಹೃದಯದಿಂದ ತಂದೆ ಎಂದು ಕೊಂಡರೆ ಆಸ್ತಿಯ ಅಧಿಕಾರಿ ಆಗಬಹುದು. ನೀವು ಎಲ್ಲರೂ ಆಸ್ತಿಯ ಅಧಿಕಾರಿಗಳಾಗಿದ್ದೀರಲ್ಲವೇ? ನೀವಂತು ಬ್ರಹ್ಮಾಕುಮಾರ ಕುಮಾರಿಯರಾಗಿದ್ದೀರಲ್ಲವೇ ಅಥವಾ ಇನ್ನು ಆಗುತ್ತಿರುವಿರಾ? ಆಗಿಬಿಟ್ಟಿದ್ದೀರಾ ಅಥವಾ ಇನ್ನೂ ಆಗುತ್ತಿದ್ದೀರಾ? ಯಾರು ನಿಮ್ಮನ್ನು ಬದಲಾಯಿಸಲು ಆಗುವುದಿಲ್ಲವೇ? ಬ್ರಹ್ಮಾಕುಮಾರ - ಕುಮಾರಿಯ ಬದಲಾಗಿ ಕೇವಲ ಕುಮಾರ ಕುಮಾರಿಯರು ಆಗಲು ಸಾಧ್ಯವಿಲ್ಲ ಅಲ್ಲವೇ? ಬ್ರಹ್ಮಾಕುಮಾರ ಹಾಗೂ ಕುಮಾರಿ ಆಗುವುದರಲ್ಲಿ ಎಷ್ಟು ಲಾಭವಿದೆ? ಒಂದು ಜನ್ಮದ ಲಾಭವಲ್ಲ, ಅನೇಕ ಜನ್ಮಗಳ ಲಾಭ. ಪುರುಷಾರ್ಥ ಅರ್ಧ ಜನ್ಮ ಅಥವಾ ಮುಕ್ಕಾಲು ಜನ್ಮ ಹಾಗೂ ಅನೇಕ ಜನ್ಮಗಳ ಪ್ರಾರಬ್ಧ. ಇದರಲ್ಲಿ ಲಾಭವೇ ಲಾಭವಿದೆಯಲ್ಲವೇ.

ಬಾಪ್ದಾದಾರವರು ಸಮಯದ ಅನುಸಾರ ವರ್ತಮಾನ ಸಮಯ ವಿಶೇಷವಾಗಿ ಒಂದು ಮಾತಿನ ಗಮನವನ್ನು ತರಿಸುತ್ತಾರೆ ಏಕೆಂದರೆ ಬಾಪ್ದಾದಾರವರು ಮಕ್ಕಳ ಫಲಿತಾಂಶವನ್ನು ನೋಡುತ್ತಿರುತ್ತಾರೆ! ಎಂದ ಮೇಲೆ ಫಲಿತಾಂಶದಲ್ಲಿ ನೋಡಲಾಯಿತು- ಸಾಹಸ ಬಹಳ ಚೆನ್ನಾಗಿದೆ, ಲಕ್ಷವೂ ಸಹ ಬಹಳ ಚೆನ್ನಾಗಿದೆ. ಲಕ್ಷದ ಅನುಸಾರ ಇನ್ನು ಲಕ್ಷ ಹಾಗೂ ಲಕ್ಷಣ ಇದರಲ್ಲಿ ಅಂತರವಿದೆ. ಲಕ್ಷ ಎಲ್ಲರದು ನಂಬರ್ ಒನ್ ಇದೆ, ಬಾಪ್ದಾದಾರವರು ಯಾರನ್ನೇ ನಿಮ್ಮ ಲಕ್ಷ್ಯ 21 ಜನ್ಮಗಳಿಗಾಗಿ ರಾಜ್ಯ ಭಾಗ್ಯ ತೆಗೆದುಕೊಳ್ಳುವುದಾಗಿದೆಯೇ, ಸೂರ್ಯ ವಂಶೀಯರಾಗುವುದಾಗಿದೆಯೇ ಅಥವಾ ಚಂದ್ರ ವಂಶೀಯರಾಗುವುದಾಗಿದೆಯೆ ಎಂದು ಕೇಳಿದರೆ? ಎಲ್ಲರೂ ಯಾವುದಕ್ಕೆ ಕೈ ಎತ್ತುವಿರಿ? ಸೂರ್ಯವಂಶೀಯರಾಗುವುದರಲ್ಲಿ ಅಲ್ಲವೇ! ಯಾರಾದರೂ ಚಂದ್ರವಂಶಿ ಆಗಲು ಬಯಸುವವರು ಇದ್ದೀರಾ? ಯಾರು ಇಲ್ಲ.( ಒಬ್ಬರು ಕೈಯೆತ್ತಿದರು) ಒಳ್ಳೆಯದಾಗಿದೆ, ಇಲ್ಲವಾದರೆ ಆ ಸೀಟ್ ಖಾಲಿಯಾಗಿ ಉಳಿದುಕೊಂಡು ಬಿಡುತ್ತದೆ. ಎಂದ ಮೇಲೆ ಎಲ್ಲರ ಲಕ್ಷ ಬಹಳ ಚೆನ್ನಾಗಿದೆ, ಲಕ್ಷ ಹಾಗೂ ಲಕ್ಷಣದ ಸಮಾನತೆ- ಇದರ ಮೇಲೆ ಗಮನವನ್ನು ಕೊಡುವುದು ಅವಶ್ಯಕವಾಗಿದೆ. ಇದರ ಕಾರಣ ಏನಾಗಿದೆ? ಇಂದು ಹೇಳಿದೆವಲ್ಲವೇ- ಕೆಲವೊಮ್ಮೆ ತೆಗೆದುಕೊಳ್ಳುವವರು ಆಗಿಬಿಡುತ್ತೀರಿ. ಇವರು ಮಾಡಲಿ, ಈ ರೀತಿ ಆಗಲಿ, ಇವರು ಸಹಯೋಗ ಕೊಡಲಿ, ಇವರು ಬದಲಾದರೆ ನಾನು ಬದಲಾಗುತ್ತೇನೆ. ಈ ಮಾತು ಸರಿಹೋದರೆ ನಾನು ಸರಿ ಹೋಗುತ್ತೇನೆ. ಇದು ತೆಗೆದುಕೊಳ್ಳುವುದಾಗಿದೆ. ಧಾತಾತನವಲ್ಲ. ಯಾರೇ ಕೊಡಲಿ ಅಥವಾ ಕೊಡದೆ ಇರಲಿ, ತಂದೆಯಂತು ಎಲ್ಲವನ್ನು ಕೊಟ್ಟುಬಿಟ್ಟಿದ್ದಾರೆ. ತಂದೆ ಕೆಲವರಿಗೆ ಹೆಚ್ಚು ಕೆಲವರಿಗೆ ಕಡಿಮೆ ಕೊಟ್ಟಿದ್ದಾರೆ? ಒಂದೇ ಕೋರ್ಸ್ ಆಗಿದೆ ಅಲ್ಲವೇ! 60 ವರ್ಷದವರಾಗಿರಲಿ, ಒಂದು ತಿಂಗಳಿನವರಾಗಿರಲಿ, ಕೋರ್ಸ್ ಅಂತು ಒಂದೇ ಆಗಿದೆ ಅಥವಾ 60 ವರ್ಷದವರೆಗೆ ಬೇರೆ ಕೋರ್ಸ್ ಹಾಗೂ ಒಂದು ತಿಂಗಳಿನವರಿಗೆ ಬೇರೆಯಾಗಿದೆಯೆ? ಅವರು ಸಹ ಅದೇ ಕೋರ್ಸ್ ಪಡೆದಿದ್ದಾರೆ ಹಾಗೂ ಈಗಲೂ ಸಹ ಅದೇ ಕೋರ್ಸ್ ನಡೆಯುತ್ತಿದೆ. ಅದೇ ಜ್ಞಾನವಾಗಿದೆ, ಅದೇ ಪ್ರೀತಿಯಾಗಿದೆ, ಅದೇ ಸರ್ವ ಶಕ್ತಿಗಳಿವೆ. ಎಲ್ಲವೂ ಒಂದೇ ರೀತಿ ಇದೆ. ಅವರಿಗೆ 16 ಶಕ್ತಿಗಳು, ಇವರಿಗೆ 8 ಶಕ್ತಿಗಳು, ಈ ರೀತಿ ಇಲ್ಲ. ತಂದೆ ಯಾವಾಗ ಎಲ್ಲರನ್ನು ಸಂಪನ್ನರಾಗಿ ಮಾಡಿದ್ದಾರೆ ಎಂದ ಮೇಲೆ ಸಂಪನ್ನ ಆತ್ಮ ದಾತ ಆಗಿರುತ್ತಾರೆ, ತೆಗೆದುಕೊಳ್ಳುವವರಲ್ಲ. ನಾನು ಕೊಡಬೇಕು. ಅನ್ಯರು ಕೊಡಲಿ ಕೊಡದೆ ಇರಲಿ, ತೆಗೆದುಕೊಳ್ಳುವ ಇಚ್ಛೆ ಇರಬಾರದು, ಕೊಡುವ ಇಚ್ಛೆ ಇರಬೇಕು. ಹಾಗೂ ಎಷ್ಟು ಕೊಡುವಿರಿ, ದಾತ ಆಗುವಿರಿ ಅಷ್ಟು ಖಜನೆಗಳು ವೃದ್ಧಿಯಾಗುತ್ತಾ ಹೋಗುತ್ತದೆ. ಒಂದು ವೇಳೆ ನೀವು ಯಾರಿಗಾದರೂ ಸ್ವಮಾನ ಕೊಟ್ಟರೆ, ಅನ್ಯರಿಗೆ ಕೊಡುವುದು ಅರ್ಥಾತ್ ತಮ್ಮ ಸ್ವಮಾನವನ್ನು ಹೆಚ್ಚಿಸಿಕೊಳ್ಳುವುದು. ಕೊಡುವುದಾಗಿರುವುದಿಲ್ಲ ಆದರೆ ಕೊಡುವುದು ಎಂದರೆ ತೆಗೆದುಕೊಳ್ಳುವುದು. ತೆಗೆದು ಕೊಳ್ಳಬೇಡಿ, ಕೊಟ್ಟರೆ ತೆಗೆದುಕೊಳ್ಳುವುದೇ ಆಗಿರುತ್ತದೆ. ಹಾಗಾದರೆ ಸಮಯದ ಕರೆ ಏನಾಗಿದೆ ಎಂದು ತಿಳಿಯಿತೇ? ದಾತ ಆಗಿ. ಒಂದು ಅಕ್ಷರವನ್ನು ನೆನಪಿಡಿ. ಏನೇ ಆಗಲಿ "ದಾತ" ಈ ಶಬ್ದವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ. ಇಚ್ಛಾ ಮಾತ್ರಂ ಅವಿದ್ಯ. ಸೂಕ್ಷ್ಮವಾಗಿಯೂ ತೆಗೆದುಕೊಳ್ಳುವ ಇಚ್ಛೆ ಇಲ್ಲ, ಸ್ತೂಲದಲ್ಲಿಯೂ ತೆಗೆದುಕೊಳ್ಳುವ ಇಚ್ಛೆ ಇಲ್ಲ. ದಾತನ ಅರ್ಥವೇ ಆಗಿದೆ ಇಚ್ಚಾ ಮಾತ್ರಂ ಅವಿದ್ಯ. ಏನನ್ನೇ ತೆಗೆದುಕೊಳ್ಳಲು, ಯಾವುದೇ ಅಪ್ರಾಪ್ತಿಯ ಅನುಭವವೇ ಆಗುವುದಿಲ್ಲ. ಸರ್ವಪ್ರಾಪ್ತಿ ಸಂಪನ್ನ. ಹಾಗಾದರೆ ಲಕ್ಷ್ಯ ಏನಾಗಿದೆ? ಸಂಪನ್ನ ರಾಗುವುದಾಗಿದೆ ಅಲ್ಲವೇ? ಅಥವಾ ಎಷ್ಟು ಸಿಗುತ್ತದೆಯೋ ಅಷ್ಟು ಸಾಕು ಎನ್ನುತ್ತೀರಾ? ಸಂಪನ್ನ ರಾಗವುದೇ ಸಂಪೂರ್ಣ ರಾಗುವುದಾಗಿದೆ.

ಇಂದು ವಿದೇಶಿಯರಿಗೆ ವಿಶೇಷ ಚಾನ್ಸ್ ಸಿಕ್ಕಿದೆ. ಒಳ್ಳೆಯದಾಗಿದೆ. ಮೊದಲ ಚಾನ್ಸ್ ವಿದೇಶಿಯರು ತೆಗೆದುಕೊಂಡರು, ಅತಿ ಪ್ರಿಯರಾಗಿದ್ದೀರಿ ಅಲ್ಲವೇ. ಎಲ್ಲರಿಗೂ ನಿಷೇಧಿಸಿದ್ದೇವೆ ಹಾಗೂ ವಿದೇಶಿಯರಿಗೆ ನಿಮಂತ್ರಣ ಕೊಟ್ಟಿದ್ದೇವೆ. ಬಾಪ್ದಾದಾರವರಿಗೂ ಸಹ ಎಲ್ಲಾ ಮಕ್ಕಳ ನೆನಪಿದೆ ಆದರೂ ಸಹ ಡಬಲ್ ವಿದೇಶಿಯರನ್ನು ನೋಡಿ, ಅವರ ಸಾಹಸವನ್ನು ನೋಡಿ ಬಹಳ ಖುಷಿಯಾಗುತ್ತದೆ. ಈಗ ವರ್ತಮಾನ ಸಮಯದಲ್ಲಿ ಅಷ್ಟೊಂದು ಏರುಪೇರಿನಲ್ಲಿ ಬರುತ್ತಿಲ್ಲ. ಈಗ ಬದಲಾವಣೆ ಬಂದಿದೆ. ಶುರುವಾತಿನಲ್ಲಿ ಯಾವ ಪ್ರಶ್ನೆಗಳಿರುತ್ತಿತ್ತು- ಭಾರತದ ಕಲ್ಚರ್ ಆಗಿದೆ, ಫಾರಿನ್ ಕಲ್ಚರ್ ಆಗಿದೆ... ಈಗ ಎಲ್ಲದರ ತಿಳುವಳಿಕೆ ಬಂದಿದೆ. ಈಗ ಬ್ರಾಹ್ಮಣ ಕಲ್ಚರ್ ನಲ್ಲಿ ಬಂದುಬಿಟ್ಟಿದ್ದಾರೆ. ಭಾರತದ ಕಲ್ಚರ್ ಅಲ್ಲ, ಫಾರಿನ್ ಕಲ್ಚರು ಅಲ್ಲ, ಬ್ರಾಹ್ಮಣ ಕಲ್ಚರ್ ನಲ್ಲಿ ಬಂದು ಬಿಟ್ಟಿದ್ದೀರಿ, ಭಾರತದ ಕಲ್ಚರ್ ಸ್ವಲ್ಪ ಕಿರಿಕಿರಿ ಮಾಡುತ್ತಾರೆ ಆದರೆ ಬ್ರಾಹ್ಮಣ ಕಲ್ಚರ್ ಸಹಜವಾಗಿದೆ ಅಲ್ಲವೇ! ಬ್ರಾಹ್ಮಣ ಕಲ್ಚರ್ ಆಗಿದೆ- ಸ್ವಮಾನದಲ್ಲಿರಿ ಹಾಗೂ ಸ್ವರಾಜ್ಯ ಅಧಿಕಾರಿಗಳಾಗಿ. ಇದೇ ಬ್ರಾಹ್ಮಣ ಕಲ್ಚರ್ ಆಗಿದೆ. ಇದು ಇಷ್ಟವಾಗುತ್ತದೆಯೇ? ಈಗ ಪ್ರಶ್ನೆಗಳಂತೂ ಇಲ್ಲ ಅಲ್ಲವೇ, ಭಾರತದ ಕಲ್ಚರ್ ನಲ್ಲಿ ಹೇಗೆ ಬರುವುದು, ಕಷ್ಟವಾಗಿದೆಯೇ? ಸಹಜವಾಗಿದೆ ಅಲ್ಲವೇ? ನೋಡಿ ಆಮೇಲೆ ಅಲ್ಲಿ ಹೋಗಿ ಸ್ವಲ್ಪ ಕಷ್ಟ! ಎಂದು ಹೇಳಬಾರದು. ಸಹಜ ಎಂದಂತು ಹೇಳಿಬಿಟ್ಟೆವು ಆದರೆ ಇದು ಸ್ವಲ್ಪ ಕಷ್ಟವಾಗಿದೆ! ಸಹಜವಾಗಿದೆಯೇ ಅಥವಾ ಸ್ವಲ್ಪ ಸ್ವಲ್ಪ ಕಷ್ಟ ಎನಿಸುತ್ತದೆ? ಸ್ವಲ್ಪವೂ ಕಷ್ಟವಿಲ್ಲವೇ. ಬಹಳ ಸಹಜವಾಗಿದೆ. ಈಗ ಎಲ್ಲಾ ಆಟವು ಪೂರ್ತಿಯಾಗಿದೆ ಹಾಗಾಗಿ ನಗು ಬರುತ್ತದೆ. ಈಗ ಪಕ್ಕಾ ಆಗಿಬಿಟ್ಟಿದ್ದೀರಿ. ಬಾಲ್ಯತನದ ಆಟಗಳು ಈಗ ಸಮಾಪ್ತಿ ಆಗಿಬಿಟ್ಟಿವೆ. ಈಗ ಅನುಭವಿ ಆಗಿದ್ದೀರಿ ಹಾಗೂ ಬಾಪ್ದಾದಾರವರು ನೋಡುತ್ತಾರೆ- ಎಷ್ಟು ಹಳೆಯವರು ಪಕ್ಕಾ ಆಗುತ್ತಾ ಹೋಗುತ್ತಾರೆ ಅಷ್ಟು ಯಾರೆಲ್ಲಾ ಹೊಸಬರು ಬರುತ್ತಾರೆ ಅವರು ಸಹ ಪಕ್ಕಾ ಆಗುತ್ತಾರೆ. ಚೆನ್ನಾಗಿದೆ. ಒಬ್ಬರು ಇನ್ನೊಬ್ಬರನ್ನು ಚೆನ್ನಾಗಿ ಮುಂದುವರೆಸುತ್ತಾ ಹೋಗುತ್ತಿರುವಿರಿ. ಒಳ್ಳೆಯ ಪರಿಶ್ರಮ ಪಡುತ್ತೀರಿ. ಈಗ ದಾದಿಯವರ ಬಳಿ ಮಾತುಗಳನ್ನಂತೂ ತೆಗೆದುಕೊಂಡು ಬರುತ್ತಿಲ್ಲ ಅಲ್ಲವೇ. ಮಾತುಗಳು ಕಥೆಗಳು ದಾದಿಯರ ಬಳಿ ತೆಗೆದುಕೊಂಡು ಹೋಗುತ್ತೀರಾ? ಕಡಿಮೆಯಾಗಿಬಿಟ್ಟಿದೆ! ಅಂತರವಂತು ಇದೆ ಅಲ್ಲವೇ?(ದಾದಿ ಜಾನಕಿಯವರೊಂದಿಗೆ) ನೀವು ಈಗ ಅನಾರೋಗ್ಯರಾಗಬೇಡಿ? ಮಾತುಕತೆಗಳಲ್ಲಿ ಅನಾರೋಗ್ಯರಾಗುತ್ತಾರೆ, ಅದಂತೂ ಸಮಾಪ್ತಿಯಾಗಿದೆ. ಚೆನ್ನಾಗಿದೆ. ಎಲ್ಲಕ್ಕಿಂತ ಒಳ್ಳೆಯ ವಿಶೇಷ ಗುಣವಾಗಿದೆ- ಹೃದಯದ ಸ್ವಚ್ಛತೆ, ಚೆನ್ನಾಗಿದೆ. ಒಳಗಡೆ ಇಟ್ಟುಕೊಳ್ಳುವುದಿಲ್ಲ, ಹೊರಗಡೆ ತೆಗೆದು ಬಿಡುತ್ತೀರಿ. ಯಾವ ಮಾತು ಇರುತ್ತದೆ. ಹೀಗಲ್ಲ ಹಾಗೆ. ಹೀಗೆ ಹಾಗೆ ಎಂದು ಹೇಳುವುದಿಲ್ಲ, ಯಾವ ಮಾತಿದೆಯೋ ಅದನ್ನು ಹೇಳಿಬಿಡುತ್ತೀರಿ, ಈ ವಿಶೇಷತೆ ಚೆನ್ನಾಗಿದೆ. ಹಾಗಾಗಿ ಬಾಪ್ದಾದಾರವರು ಹೇಳುತ್ತಾರೆ ಸತ್ಯ ಹಾಗೂ ಸ್ವಚ್ಛ ಹೃದಯದ ಮೇಲೆ ತಂದೆ ಒಪ್ಪಿಕೊಳ್ಳುತ್ತಾರೆ. ಹೌದು ಎಂದರೆ ಹೌದು, ಇಲ್ಲ ಎಂದರೆ ಇಲ್ಲ. ಹೀಗಲ್ಲ- ನೋಡೋಣ...! ಬಲವಂತವಾಗಿ ನಡೆಯುವುದಿಲ್ಲ. ನಡೆದರೆ ಸಂಪೂರ್ಣವಾಗಿ ನಡೆಯುತ್ತಾರೆ, ಇಲ್ಲವಾದರೆ ಇಲ್ಲ . ಒಳ್ಳೆಯದು. ಯಾವ ಮಕ್ಕಳು ನೆನಪು ಪ್ರೀತಿಯನ್ನು ಕಳಿಸಿದ್ದಾರೆ, ಬಾಪ್ದಾದಾರವರು ಆ ಎಲ್ಲಾ ಮಕ್ಕಳಿಗೆ, ಯಾರು ಪತ್ರದ ಮೂಲಕ ಅಥವಾ ಯಾವುದೇ ರೀತಿಯಲ್ಲಿ ನೆನಪು ಪ್ರೀತಿಯನ್ನು ಕಳುಹಿಸಿದ್ದಾರೆ ಅದು ಬಾಪ್ದಾದಾರವರಿಗೆ ಸ್ವೀಕಾರವಾಗಿದೆ. ಹಾಗೂ ಬಾಪ್ದಾದಾರವರು ರಿಟರ್ನ್ ನಲ್ಲಿ ಎಲ್ಲಾ ಮಕ್ಕಳಿಗೂ ದಾತಾತನದ ವರದಾನವನ್ನು ಕೊಡುತ್ತಿದ್ದಾರೆ. ಒಳ್ಳೆಯದು! ಒಂದು ಸೆಕೆಂಡಿನಲ್ಲಿ ಹಾರಲು ಸಾಧ್ಯವೇ? ರೆಕ್ಕೆಗಳು ಶಕ್ತಿಶಾಲಿಯಾಗಿದೆ ಅಲ್ಲವೇ? ಬಾಬಾ ಎಂದು ಹೇಳಿದಿರಿ ಹಾಗೂ ಹಾರಿ ಹೋದಿರಿ. (ಡ್ರಿಲ್)

ನಾಲ್ಕಾರು ಕಡೆಯ ಸರ್ವ ಶ್ರೇಷ್ಠ ತಂದೆಯ ಸಮಾನ ದಾತಾತನದ ಭಾವನೆಯನ್ನು ಇಟ್ಟುಕೊಳ್ಳುವಂತಹ, ಶ್ರೇಷ್ಠ ಆತ್ಮಗಳಿಗೆ ನಿರಂತರ ನೆನಪು ಹಾಗೂ ಸೇವೆಯಲ್ಲಿ ತತ್ಪರವಾಗಿರುವಂತಹ, ಪರಮಾತ್ಮ ಸೇವೆಯ ಜೊತೆಗಾರ ಮಕ್ಕಳಿಗೆ ಸದಾ ಲಕ್ಷ್ಯ ಹಾಗೂ ಲಕ್ಷಣವನ್ನು ಸಮಾನವನ್ನಾಗಿ ಮಾಡುವಂತಹ, ಸದಾ ತಂದೆಯ ಸ್ನೇಹಿತ ಹಾಗೂ ಸಮಾನ, ಸಮೀಪರಾಗುವಂತಹ ಬಾಪ್ದಾದಾರವರ ನಯನಗಳ ನಕ್ಷತ್ರಗಳು, ಸದಾ ವಿಶ್ವಕಲ್ಯಾಣದ ಭಾವನೆಯಲ್ಲಿರುವಂತಹ ದಯಾಹೃದಯಿ, ಮಾಸ್ಟರ್ ಕ್ಷಮೆಯ ಸಾಗರ ಮಕ್ಕಳಿಗೆ ದೂರ ಕುಳಿತಿರುವಂತಹ, ಮಧುಬನದಲ್ಲಿ ಕೆಳಗೆ ಕುಳಿತುಕೊಂಡಿರುವಂತಹ ಹಾಗೂ ಬಾಪ್ದಾದಾರವರ ಸಮ್ಮುಖದಲ್ಲಿ ಕುಳಿತುಕೊಂಡಿರುವಂತಹ ಸರ್ವ ಮಕ್ಕಳಿಗೆ ನೆನಪು ಪ್ರೀತಿ ಹಾಗೂ ನಮಸ್ತೆ.

ವರದಾನ:
ಹೃದಯದಲ್ಲಿ ಒಬ್ಬ ದಿಲಾರಾಮನನ್ನು ಸಮಾವೇಶ ಮಾಡಿಕೊಂಡು ಒಬ್ಬರೊಂದಿಗೆ ಸರ್ವ ಸಂಬಂಧದ ಅನುಭೂತಿ ಮಾಡುವಂತಹ ಸಂತುಷ್ಠ ಆತ್ಮ ಭವ

ಜ್ಞಾನವನ್ನು ಅಳವಡಿಸಿ ಕೊಳ್ಳುವ ಸ್ಥಾನವಾಗಿದೆ ಬುದ್ದಿ ಆದರೆ ಪ್ರಿಯಕರನನ್ನು ಸಮಾವೇಶ ಮಾಡಿಕೊಳ್ಳುವ ಸ್ಥಾನವಾಗಿದೆ ಹೃದಯ. ಕೆಲವು ಪ್ರಿಯತಮೆಯರು ಬುದ್ದಿಯನ್ನು ಹೆಚ್ಚು ಒಡಿಸುತ್ತಾರೆ ಆದರೆ ಬಾಪ್ದಾದಾ ಸತ್ಯ ಹೃದಯವುಳ್ಳವರ ಮೇಲೆ ರಾಜಿóಯಾಗಿದ್ದಾರೆ ಆದ್ದರಿಂದ ಹೃದಯದ ಅನುಭವ ಹೃದಯಕ್ಕೆ ಗೊತ್ತಿರುತ್ತದೆ, ಹೃದಯರಾಮನಿಗೆ ಗೊತ್ತಿರುತ್ತದೆ. ಯಾರು ಹೃದಯದಿಂದ ಸೇವೆ ಮಾಡುತ್ತಾರೆ ಅಥವಾ ನೆನಪು ಮಾಡುತ್ತಾರೆ ಅವರು ಪರಿಶ್ರಮ ಕಡಿಮೆ ಮತ್ತು ಸಂತುಷ್ಠತೆ ಹೆಚ್ಚು ಸಿಗುವುದು. ಹೃದಯವಂತರು ಸದಾ ಸಂತುಷ್ಠತೆಯ ಗೀತೆಯನ್ನು ಹಾಡುತ್ತಾರೆ. ಅವರು ಸಮಯ ಪ್ರಮಾಣ ಒಬ್ಬರ ಜೊತೆ ಸರ್ವ ಸಂಬಂಧಗಳ ಅನುಭೂತಿಯಾಗುವುದು.

ಸ್ಲೋಗನ್:
ಅಮೃತವೇಳೆ ಪ್ಲೇನ್ ಬುದ್ದಿಯವರಾಗಿ ಕುಳಿತುಕೊಂಡಾಗ ಸೇವೆಯಲ್ಲಿ ಹೊಸ ಹೊಸ ವಿಧಿಗಳು ಟಚ್ ಆಗುವುದು.