30.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಮ್ಮ ಲೆಕ್ಕವನ್ನು (ಅಕೌಂಟ್) ಪರಿಶೀಲನೆ ಮಾಡಿಕೊಳ್ಳಿ, ಇಡೀ ದಿನದಲ್ಲಿ ತಂದೆಯನ್ನು ಎಷ್ಟು ಸಮಯ ನೆನಪು ಮಾಡಿದೆವು, ಯಾವುದೇ ತಪ್ಪನ್ನಂತು ಮಾಡಲಿಲ್ಲವೇ? ಏಕೆಂದರೆ ಪ್ರತಿಯೊಬ್ಬರು ವ್ಯಾಪಾರಿ ಆಗಿದ್ದೀರಿ"

ಪ್ರಶ್ನೆ:
ಯಾವ ಒಂದು ಪರಿಶ್ರಮವನ್ನು ಅಂತರ್ಮುಖಿಯಾಗಿ ಮಾಡುತ್ತಿದ್ದಾಗ ಅಪಾರ ಖುಷಿ ಇರುವುದು?

ಉತ್ತರ:
ಜನ್ಮ-ಜನ್ಮಾಂತರದಿಂದ ಏನೆಲ್ಲಾ ಮಾಡಿದಿರಿ, ಅದು ಮುಂದೆ ಬರುತ್ತಿರುತ್ತದೆ. ಅದೆಲ್ಲದರಿಂದ ಬುದ್ಧಿಯೋಗವನ್ನು ತೆಗೆದು ಸತೋಪ್ರಧಾನರಾಗಲು ತಂದೆಯನ್ನು ನೆನಪು ಮಾಡುವ ಪರಿಶ್ರಮ ಪಡುತ್ತಿರಿ. ಎಲ್ಲಾ ಕಡೆಯಿಂದ ಬುದ್ಧಿಯೋಗವನ್ನು ತೆಗೆದು ಅಂತರ್ಮುಖಿಯಾಗಿ ತಂದೆಯನ್ನು ನೆನಪು ಮಾಡಿ, ಸರ್ವೀಸಿನ ಸಾಕ್ಷಿಯನ್ನು ಕೊಡಿ. ಆಗ ಅಪಾರ ಖುಷಿ ಇರುತ್ತದೆ.

ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಇದಂತು ಮಕ್ಕಳಿಗೆ ತಿಳಿದಿದೆ - ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ ಅಂದಾಗ ಆತ್ಮಿಕ ತಂದೆಯು ಬೇಹದ್ದಿನ ತಂದೆಯಾದರು. ಆತ್ಮಿಕ ಮಕ್ಕಳು ಬೇಹದ್ದಿನ ಮಕ್ಕಳಾದಿರಿ, ತಂದೆಯಂತು ಎಲ್ಲಾ ಮಕ್ಕಳ ಸದ್ಗತಿ ಮಾಡಬೇಕಾಗಿದೆ. ಯಾರ ಮೂಲಕ? ಈ ಮಕ್ಕಳ ಮೂಲಕ ವಿಶ್ವದ ಸದ್ಗತಿ ಮಾಡಬೇಕಾಗಿದೆ. ಇಡೀ ವಿಶ್ವದ ಮಕ್ಕಳಂತು ಇಲ್ಲಿಗೆ ಬಂದು ಓದುವುದಿಲ್ಲ. ಹೆಸರೇ ಆಗಿದೆ - ಈಶ್ವರೀಯ ವಿಶ್ವವಿದ್ಯಾಲಯ. ಎಲ್ಲರಿಗೂ ಮುಕ್ತಿಯಂತು ಸಿಗುತ್ತದೆ. ಮುಕ್ತಿ ಎಂದಾದರು ಹೇಳಿ, ಜೀವನ್ಮುಕ್ತಿ ಎಂದಾದರೂ ಹೇಳಿ. ಮುಕ್ತಿಯಲ್ಲಿ ಹೋಗಿ ಪುನಃ ಜೀವನ್ಮುಕ್ತಿಯಲ್ಲಿ ಎಲ್ಲರೂ ಬರಲೇಬೇಕಾಗಿದೆ. ಆದ್ದರಿಂದ ಎಲ್ಲರೂ ಮುಕ್ತಿಧಾಮದ ಮೂಲಕ ಜೀವನ್ಮುಕ್ತಿಯಲ್ಲಿ ಬರುತ್ತಾರೆ ಎಂದು ಹೇಳುತ್ತಾರೆ. ಒಬ್ಬರ ಹಿಂದೆ ಇನ್ನೊಬ್ಬರು ಪಾತ್ರವನ್ನು ಅಭಿನಯಿಸಲು ಬರಲೇಬೇಕಾಗಿದೆ. ಅಲ್ಲಿಯವರೆಗೂ ಮುಕ್ತಿಧಾಮದಲ್ಲಿ ಇರಬೇಕಾಗುತ್ತದೆ. ಮಕ್ಕಳಿಗೆ ಈಗ ರಚಯಿತ ಮತ್ತು ರಚನೆಯ ಅರಿವು ಆಗಿದೆ. ಈ ಇಡೀ ರಚನೆಯು ಅನಾದಿಯಾಗಿದೆ, ರಚಯಿತ ಒಬ್ಬ ತಂದೆಯೇ ಆಗಿದ್ದಾರೆ. ಎಲ್ಲಾ ಆತ್ಮಗಳು ಬೇಹದ್ದಿನ ತಂದೆಯ ಮಕ್ಕಳಾಗಿದ್ದಾರೆ, ಯಾವಾಗ ಮಕ್ಕಳಿಗೆ ಇದು ತಿಳಿಯುತ್ತದೆಯೋ ಆಗ ಅವರೇ ಬಂದು ಯೋಗವನ್ನು ಕಲಿಯುತ್ತಾರೆ. ಇದು ಭಾರತಕ್ಕಾಗಿಯೇ ಯೋಗವಿದೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಭಾರತವಾಸಿಗಳಿಗೆ ನೆನಪಿನ ಯಾತ್ರೆಯನ್ನು ಕಲಿಸಿ ಪಾವನರನ್ನಾಗಿ ಮಾಡುತ್ತಾರೆ ಮತ್ತು ಈ ಸೃಷ್ಟಿ ಚಕ್ರವು ಹೇಗೆ ತಿರುಗುತ್ತದೆ ಎಂಬ ಜ್ಞಾನವನ್ನು ಕೊಡುತ್ತಾರೆ. ಇದು ಸಹ ಮಕ್ಕಳೇ ತಿಳಿದುಕೊಂಡಿದ್ದೀರಿ. ರುದ್ರ ಮಾಲೆಯು ಇದೆ, ಅದರ ಮಹಿಮೆ ಮತ್ತು ಪೂಜೆ ಆಗುತ್ತದೆ. ಸ್ಮರಣೆ ಮಾಡಲಾಗುತ್ತದೆ, ಭಕ್ತಿಯ ಮಾಲೆಯು ಇದೆ, ಶ್ರೇಷ್ಠಾತಿ ಶ್ರೇಷ್ಠ ಭಕ್ತರ ಮಾಲೆಯಾಗಿದೆ. ಭಕ್ತರ ಮಾಲೆಯ ನಂತರ ಜ್ಞಾನ ಮಾಲೆ ಆಗಬೇಕು. ಭಕ್ತಿ ಮತ್ತು ಜ್ಞಾನವಿದೆಯಲ್ಲವೇ. ಭಕ್ತರ ಮಾಲೆಯು ಇದೆ ಹಾಗೆಯೇ ರುದ್ರಮಾಲೆಯು ಇದೆ. ಅಂತಿಮದಲ್ಲಿ ರುಂಡಮಾಲೆ ಎಂದು ಹೇಳಲಾಗುತ್ತದೆ ಏಕೆಂದರೆ ಸರ್ವಶ್ರೇಷ್ಠರು ಈ ಮನುಷ್ಯ ಸೃಷ್ಟಿಯಲ್ಲಿ ವಿಷ್ಣುವಿದ್ದಾರೆ, ಯಾರನ್ನು ಸೂಕ್ಷ್ಮ ವತನದಲ್ಲಿ ತೋರಿಸುತ್ತಾರೆ. ಪ್ರಜಾಪಿತ ಇವರಾಗಿದ್ದಾರೆ, ಇವರ ಮಾಲೆಯು ಇದೆ. ಅಂತಿಮದಲ್ಲಿ ಈ ಮಾಲೆ ಆಗುವುದು. ಆಗಲೇ ರುದ್ರಮಾಲೆ ಮತ್ತು ವಿಷ್ಣುವಿನ ವೈಜಯಂತಿಯ ಮಾಲೆ ಆಗುವುದು. ಶ್ರೇಷ್ಠಾತಿ ಶ್ರೇಷ್ಠ ಶಿವತಂದೆ ಆಗಿದ್ದಾರೆ ಮತ್ತೆ ಶ್ರೇಷ್ಠಾತಿ ಶ್ರೇಷ್ಠ ವಿಷ್ಣುವಿನ ರಾಜ್ಯವಾಗಿದೆ. ಶೋಭೆಗಾಗಿ ಭಕ್ತಿಯಲ್ಲಿ ಎಷ್ಟೊಂದು ಚಿತ್ರಗಳನ್ನು ಮಾಡಿದ್ದಾರೆ ಆದರೆ, ಜ್ಞಾನವು ಸ್ವಲ್ಪವೂ ಇಲ್ಲ. ನೀವು ಯಾವ ಚಿತ್ರಗಳನ್ನು ಮಾಡಿಸುತ್ತೀರೊ, ಅದರ ಪರಿಚಯವನ್ನು ತಿಳಿಸುವುದರಿಂದ ಮನುಷ್ಯರು ಅರಿತುಕೊಳ್ಳಬೇಕು. ಇಲ್ಲವೆಂದರೆ, ಶಿವ ಮತ್ತು ಶಂಕರರನ್ನು ಸೇರಿಸಿಬಿಡುತ್ತಾರೆ.

ಸೂಕ್ಷ್ಮ ವತನದಲ್ಲಿ ಎಲ್ಲವೂ ಸಾಕ್ಷಾತ್ಕಾರದ ಮಾತಾಗಿದೆ ಎಂದು ತಂದೆಯು ತಿಳಿಸಿದ್ದಾರೆ. ಮೂಳೆ-ಮಾಂಸಗಳ ಶರೀರವಿರುವುದಿಲ್ಲ. ಕೇವಲ ಸಾಕ್ಷಾತ್ಕಾರವನ್ನು ಮಾಡುತ್ತಾರೆ. ಸಂಪೂರ್ಣ ಬ್ರಹ್ಮನೂ ಇದ್ದಾರೆ, ಆದರೆ ಅವರು ಸಂಪೂರ್ಣ, ಅವ್ಯಕ್ತ ಬ್ರಹ್ಮನಾಗಿದ್ದಾರೆ. ಈಗ ವ್ಯಕ್ತ ಬ್ರಹ್ಮನೇ ಅವ್ಯಕ್ತ ಆಗಬೇಕಾಗಿದೆ. ವ್ಯಕ್ತ ಬ್ರಹ್ಮನೇ ಅವ್ಯಕ್ತ ಆಗುತ್ತಾರೆ. ಅವರಿಗೆ ಫರಿಸ್ಥೆ ಎಂದು ಹೇಳುತ್ತಾರೆ. ಸೂಕ್ಷ್ಮವತನದಲ್ಲಿ ಅವರ ಚಿತ್ರವನ್ನು ಇಟ್ಟಿದ್ದಾರೆ. ಸೂಕ್ಷ್ಮವತನದಲ್ಲಿ ಹೋಗುತ್ತಾರೆ ಎಂದರೆ ಬಾಬಾರವರು ಶೋಭೀರಸವನ್ನು ಕುಡಿಸುತ್ತಾರೆ ಎಂದು ಹೇಳುತ್ತಾರೆ ಆದರೆ, ಅಲ್ಲಿ ವೃಕ್ಷ ಮೊದಲಾದವಂತೂ ಇಲ್ಲ, ಎಲ್ಲವೂ ವೈಕುಂಠದಲ್ಲಿ ಇರುತ್ತದೆ ಆದರೆ, ವೈಕುಂಠದಿಂದ ಅದನ್ನು ತೆಗೆದುಕೊಂಡು ಬಂದು ಸೂಕ್ಷವತನದಲ್ಲಿ ಕುಡಿಸುವರೆಂದಲ್ಲ. ಇದೆಲ್ಲವೂ ಕೇವಲ ಸೂಕ್ಷ್ಮವತನದಲ್ಲಿ ಸಾಕ್ಷಾತ್ಕಾರದ ಮಾತುಗಳಾಗಿವೆ. ಇದು ಮಕ್ಕಳಿಗೆ ತಿಳಿದಿದೆ - ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಮತ್ತು ಆತ್ಮಾಭಿಮಾನಿಗಳಾಗಬೇಕಾಗಿದೆ. ನಾನು ಆತ್ಮ ಅವಿನಾಶಿ ಆಗಿದ್ದೇನೆ, ಈ ಶರೀರವು ವಿನಾಶಿ ಆಗಿದೆ. ಆತ್ಮದ ಜ್ಞಾನವೂ ಸಹ ನೀವು ಮಕ್ಕಳಲ್ಲಿ ಇದೆ, ಮನುಷ್ಯರಂತೂ ಆತ್ಮ ಏನು ಎಂಬುದನ್ನು ತಿಳಿದುಕೊಂಡಿಲ್ಲ, ಅವರಿಗೆ ಆತ್ಮನಲ್ಲಿ 84 ಜನ್ಮಗಳ ಪಾತ್ರವು ಹೇಗೆ ತುಂಬಲ್ಪಟ್ಟಿದೆ ಎಂಬುದೂ ಗೊತ್ತಿಲ್ಲ. ಈ ಜ್ಞಾನವನ್ನು ಕೇವಲ ತಂದೆಯೇ ಕೊಡುತ್ತಾರೆ, ತಮ್ಮ ಜ್ಞಾನವನ್ನೂ ಕೊಡುತ್ತಾರೆ, ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿಯೂ ಮಾಡುತ್ತಾರೆ. ಕೇವಲ ಇದೇ ಪುರುಷಾರ್ಥ ಮಾಡುತ್ತೀರಿ - ನಾವು ಆತ್ಮಗಳಾಗಿದ್ದೇವೆ, ಈಗ ಪರಮಾತ್ಮನ ಜೊತೆ ಯೋಗವನ್ನು ಇಡಬೇಕಾಗಿದೆ. ಒಬ್ಬ ತಂದೆಗೆ ಸರ್ವಶಕ್ತಿವಂತ, ಪತಿತಪಾವನ ಎಂದು ಹೇಳುತ್ತಾರೆ. ಪತಿತಪಾವನ ಬನ್ನಿ ಎಂದು ಸನ್ಯಾಸಿಗಳೂ ಕರೆಯುತ್ತಾರೆ. ಕೆಲವರಂತು ಬ್ರಹ್ಮ್ ತತ್ವವನ್ನು ಪತಿತಪಾವನ ಎಂದು ಹೇಳಿಬಿಡುತ್ತಾರೆ. ಈಗ ನೀವು ಮಕ್ಕಳಿಗೆ ಭಕ್ತಿಯು ಎಷ್ಟು ಸಮಯ ನಡೆಯುತ್ತದೆ, ಜ್ಞಾನವು ಎಷ್ಟು ಸಮಯ ನಡೆಯುತ್ತದೆ, ಇದನ್ನು ತಂದೆಯು ಕುಳಿತು ತಿಳಿಸುತ್ತಾರೆ. ಮೊದಲು ಏನೂ ತಿಳಿದಿರಲಿಲ್ಲ. ಮನುಷ್ಯರಾಗಿಯು ತುಚ್ಚ ಬುದ್ಧಿಯವರಾಗಿ ಬಿಟ್ಟಿದ್ದಾರೆ. ಸತ್ಯಯುಗದಲ್ಲಿ ಸಂಪೂರ್ಣ ಸ್ವಚ್ಛ ಬುದ್ಧಿಯವರಾಗಿದ್ದರು, ಅವರಲ್ಲಿ ಎಷ್ಟೊಂದು ದೈವೀಗುಣಗಳು ಇತ್ತು. ನೀವು ಮಕ್ಕಳು ಸಹ ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ, ಇವರಂತು ದೇವತೆ ಆಗಿದ್ದಾರೆ ಎಂದು ಹೇಳುತ್ತಾರಲ್ಲವೇ. ಭಲೆ ಸಾಧು, ಸಂತ ಮಹಾತ್ಮರಿಗೆ ಜನರು ಮಾನ್ಯತೆ ನೀಡುತ್ತಾರೆ ಆದರೆ, ಅವರು ದೈವೀ ಬುದ್ಧಿಯವರಂತು ಅಲ್ಲ. ರಜೋಗುಣಿ ಬುದ್ಧಿಯವರಾಗಿಬಿಡುತ್ತಾರೆ. ರಾಜಾ-ರಾಣಿ, ಪ್ರಜೆಗಳೂ ಇದ್ದಾರೆ. ರಾಜಧಾನಿಯು ಯಾವಾಗ ಮತ್ತು ಹೇಗೆ ಸ್ಥಾಪನೆ ಆಗುತ್ತದೆ ಎಂದು ಪ್ರಪಂಚದವರಿಗೆ ತಿಳಿದಿಲ್ಲ. ಇಲ್ಲಿ ನೀವು ಎಲ್ಲಾ ಹೊಸ ಮಾತುಗಳನ್ನು ಕೇಳುತ್ತೀರಿ, ತಂದೆಯು ಮಾಲೆಯ ರಹಸ್ಯವನ್ನು ತಿಳಿಸಿದ್ದಾರೆ. ಸರ್ವಶ್ರೇಷ್ಠ ತಂದೆಯಾಗಿದ್ದಾರೆ, ಅವರ ಮಾಲೆಯು ಮೇಲಿದೆ. ರುದ್ರನು ಆ ನಿರಾಕಾರನಾಗಿದ್ದಾರೆ, ನಂತರ ಸಾಕಾರ ಲಕ್ಷ್ಮೀ-ನಾರಾಯಣರ ಮಾಲೆಯು ಇದೆ. ಬ್ರಾಹ್ಮಣರ ಮಾಲೆಯು ಈಗ ತಯಾರಾಗುವುದಿಲ್ಲ, ಅಂತಿಮದಲ್ಲಿ ನೀವು ಬ್ರಾಹ್ಮಣರ ಮಾಲೆ ಆಗುತ್ತದೆ. ಈ ಮಾತುಗಳಲ್ಲಿ ಹೆಚ್ಚಿನ ಪ್ರಶ್ನೆ-ಉತ್ತರ ಮಾಡುವ ಅವಶ್ಯಕತೆ ಇಲ್ಲ. ಮೂಲ ಮಾತು ತಮ್ಮನ್ನು ಆತ್ಮ ಎಂದು ತಿಳಿದು ಪರಮಾತ್ಮನನ್ನು ನೆನಪು ಮಾಡಿ. ಇದು ಪಕ್ಕಾ ನಿಶ್ಚಯ ಆಗಬೇಕು. ಪತಿತರನ್ನು ಪಾವನರನ್ನಾಗಿ ಮಾಡುವುದೇ ಮೂಲ ಮಾತಾಗಿದೆ. ಇದೇ ಪ್ರಪಂಚ ಪತಿತವಾಗಿದೆ ಮತ್ತು ಇದೇ ಪಾವನ ಆಗಬೇಕಾಗಿದೆ. ಮೂಲವತನದಲ್ಲಿಯೂ ಎಲ್ಲರೂ ಪಾವನರಿರುತ್ತಾರೆ, ಸುಖಧಾಮದಲ್ಲಿಯೂ ಎಲ್ಲರೂ ಪಾವನರಿರುತ್ತಾರೆ. ನೀವು ಪಾವನರಾಗಿ ಪಾವನ ಪ್ರಪಂಚಕ್ಕೆ ಹೋಗುತ್ತೀರಿ ಅಂದರೆ ಈಗ ಪಾವನ ಪ್ರಪಂಚವು ಸ್ಥಾಪನೆ ಆಗುತ್ತಿದೆ. ಇದೆಲ್ಲವೂ ನಾಟಕದಲ್ಲಿ ನಿಗಧಿ ಆಗಿದೆ.

ತಂದೆಯು ತಿಳಿಸುತ್ತಾರೆ - ಇಡೀ ದಿನದಲ್ಲಿ ತಮ್ಮ ಲೆಕ್ಕವನ್ನು ನೋಡಿಕೊಳ್ಳಿ. ಯಾವುದೇ ತಪ್ಪಂತೂ ಆಗಲಿಲ್ಲವೇ? ವ್ಯಾಪಾರಿಗಳು ತಮ್ಮ ಲೆಕ್ಕವನ್ನು ಇಡುತ್ತಾರೆ. ಇದು ಸಹ ಸಂಪಾದನೆ ಆಗಿದೆ. ನೀವು ಪ್ರತಿಯೊಬ್ಬರು ವ್ಯಾಪಾರಿ ಆಗಿದ್ದೀರಿ. ತಂದೆಯೊಂದಿಗೆ ವ್ಯಾಪಾರ ಮಾಡುತ್ತೀರಿ ಅಂದಮೇಲೆ, ನನ್ನಲ್ಲಿ ಎಷ್ಟು ದೈವೀಗುಣಗಳಿವೆ, ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ? ಎಷ್ಟು ಸಮಯ ಅಶರೀರಿ ಆಗುತ್ತೇನೆ? ಎಂದು ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು. ಅಶರೀರಿ ಆಗಿ ಬಂದಿದ್ದೆವು ಮತ್ತೆ ಅಶರೀರಿ ಆಗಿ ಹೋಗಬೇಕಾಗಿದೆ. ಇಲ್ಲಿಯವರೆಗೆ ಎಲ್ಲರೂ ಬರುತ್ತಲೇ ಇರುತ್ತಾರೆ, ಮಧ್ಯದಲ್ಲಿ ಒಬ್ಬರೂ ಸಹ ಹಿಂತಿರುಗಿ ಹೋಗುವಂತಿಲ್ಲ. ಎಲ್ಲರೂ ಒಟ್ಟಿಗೆ ಹೋಗಬೇಕಾಗಿದೆ. ಭಲೆ ಸೃಷ್ಟಿಯು ಖಾಲಿ ಆಗುವುದಿಲ್ಲ, ರಾಮನು ಹೋದ, ರಾವಣನೂ ಹೋದ ಎಂಬ ಗಾಯನವಿದೆ ಆದರೆ, ಇಬ್ಬರೂ ಇರುತ್ತಾರೆ. ರಾವಣ ಸಂಪ್ರದಾಯವು ಹೋಗುತ್ತದೆ ಎಂದರೆ ಮತ್ತೆ ಹಿಂತಿರುಗಿ ಬರುವುದಿಲ್ಲ. ಬಾಕಿ ಇವರು ಉಳಿಯುತ್ತಾರೆ. ಇದೂ ಸಹ ಮುಂದೆ ಹೋದಂತೆ ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ. ಹೊಸ ಪ್ರಪಂಚವು ಹೇಗೆ ಸ್ಥಾಪನೆ ಆಗುತ್ತದೆ, ಅಂತಿಮದಲ್ಲಿ ಏನಾಗುತ್ತದೆ? ಇದನ್ನು ಅರಿತುಕೊಳ್ಳಬೇಕು. ಮತ್ತೆ ಕೇವಲ ನಮ್ಮ ಧರ್ಮವಷ್ಟೇ ಉಳಿಯುತ್ತದೆ. ಸತ್ಯಯುಗದಲ್ಲಿ ನೀವು ರಾಜ್ಯ ಮಾಡುತ್ತೀರಿ, ಕಲಿಯುಗವು ಸಮಾಪ್ತಿ ಆಗಿಬಿಡುತ್ತದೆ ನಂತರ ಸತ್ಯಯುಗ ಬರುತ್ತದೆ. ಈಗ ರಾವಣ ಸಂಪ್ರದಾಯ ಮತ್ತು ರಾಮನ ಸಂಪ್ರದಾಯ ಎರಡೂ ಇದೆ. ಇದೆಲ್ಲವೂ ಸಂಗಮಯುಗದಲ್ಲಿಯೇ ಆಗುತ್ತದೆ, ಈಗ ನೀವು ಎಲ್ಲವನ್ನೂ ಅರಿತುಕೊಳ್ಳುತ್ತೀರಿ. ಉಳಿದೆಲ್ಲಾ ರಹಸ್ಯಗಳನ್ನು ಮುಂದೆ ಹೋದಂತೆ ನಿಧಾನ-ನಿಧಾನವಾಗಿ ತಿಳಿಸುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಯಾವುದು ರಿಕಾರ್ಡಿನಲ್ಲಿ ನಿಗಧಿ ಆಗಿದೆಯೋ ಅದು ಬರುತ್ತಾ ಹೋಗುತ್ತದೆ. ನೀವು ತಿಳಿದುಕೊಳ್ಳುತ್ತಾ ಹೋಗುತ್ತೀರಿ, ಸಮಯಕ್ಕೆ ಮುಂಚೆ ಏನನ್ನೂ ತಿಳಿಸುವುದಿಲ್ಲ, ಇದು ಸಹ ನಾಟಕದ ಯೋಜನೆ ಆಗಿದೆ. ರಿಕಾರ್ಡ್ ತಿರುಗುತ್ತಾ ಹೋಗುತ್ತದೆ, ತಂದೆಯು ಹೇಳುತ್ತಾ ಹೋಗುತ್ತಾರೆ. ನಿಮ್ಮ ಬುದ್ಧಿಯಲ್ಲಿ ಎಲ್ಲಾ ಮಾತುಗಳ ತಿಳುವಳಿಕೆಯು ಹೆಚ್ಚುತ್ತಾ ಹೋಗುತ್ತದೆ. ಹೇಗೆ-ಹೇಗೆ ರಿಕಾರ್ಡ್ ತಿರುಗುತ್ತಾ ಹೋಗುತ್ತದೆಯೋ ಹಾಗೆಯೇ ತಂದೆಯ ಮುರಳಿಯೂ ನಡೆಯುತ್ತಾ ಹೋಗುತ್ತದೆ. ನಾಟಕದ ರಹಸ್ಯವೆಲ್ಲವೂ ತುಂಬಲ್ಪಟ್ಟಿದೆ. ಹೊಸ ಮಾತಿಲ್ಲ. ತಂದೆಯ ಬಳಿ ಯಾವುದು ಹೊಸ ಮಾತು ಇರುವುದೋ, ಅದು ಪುನರಾವರ್ತನೆ ಆಗುತ್ತದೆ. ನೀವು ಕೇಳುತ್ತೀರಿ ಮತ್ತು ತಿಳಿಸುತ್ತಾ ಹೋಗುತ್ತೀರಿ, ಉಳಿದೆಲ್ಲವೂ ಗುಪ್ತವಾಗಿದೆ. ಈ ರಾಜಧಾನಿಯು ಸ್ಥಾಪನೆ ಆಗುತ್ತಿದೆ, ಪೂರ್ಣ ಮಾಲೆಯು ತಯಾರಾಗುತ್ತದೆ. ಬೇರೆ-ಬೇರೆ ಆಗಿ ಹೋಗಿ ನೀವು ರಾಜಧಾನಿಯಲ್ಲಿ ಜನ್ಮ ಪಡೆಯುತ್ತೀರಿ, ಅಲ್ಲಿ ರಾಜಾ-ರಾಣಿ, ಪ್ರಜೆ ಎಲ್ಲರೂ ಬೇಕು. ಇದೆಲ್ಲವನ್ನು ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗುತ್ತದೆ. ಪ್ರತ್ಯಕ್ಷದಲ್ಲಿ ಏನಿರುತ್ತದೆಯೋ ಅದನ್ನು ನೋಡಲಾಗುತ್ತದೆ. ಯಾರು ಇಲ್ಲಿಂದ ಹೋಗುತ್ತಾರೆಯೋ ಅವರು ಒಳ್ಳೆಯ ಸಾಹುಕಾರರ ಮನೆಯಲ್ಲಿ ಹೋಗಿ ಜನ್ಮ ಪಡೆಯುತ್ತಾರೆ. ಅಲ್ಲಿ ನಿಮಗೆ ಬಹಳ ಉಪಚಾರವಾಗುತ್ತದೆ. ಈ ಸಮಯದಲ್ಲಿಯು ರತ್ನ ಜಡಿತ ವಸ್ತುಗಳು ಎಲ್ಲರ ಬಳಿ ಇರುತ್ತದೆ ಆದರೆ, ಅದರಲ್ಲಿ ಇಷ್ಟು ಶಕ್ತಿ ಇರುವುದಿಲ್ಲ. ಶಕ್ತಿಯು ನಿಮ್ಮಲ್ಲಿ ಇದೆ, ನೀವು ಎಲ್ಲಿ ಹೋಗುತ್ತೀರೋ ಅಲ್ಲಿ ತಮ್ಮ ಪ್ರತ್ಯಕ್ಷತೆ ಮಾಡುತ್ತೀರಿ. ನೀವಂತು ಶ್ರೇಷ್ಠರಾಗುತ್ತೀರಿ ಆದ್ದರಿಂದ ನೀವು ಹೋಗಿ ಅಲ್ಲಿ ದೈವೀ ಚರಿತ್ರೆಯನ್ನು ತೋರಿಸುತ್ತೀರಿ, ಆಸುರೀ ಮಕ್ಕಳು ಜನಿಸುತ್ತಿದ್ದಂತೆಯೇ ಅಳುತ್ತಿರುತ್ತಾರೆ, ಕೊಳಕಾಗಿರುತ್ತಾರೆ. ನೀವಂತು ಬಹಳ ನಿಯಮ ಪೂರ್ವಕವಾಗಿ ಬೆಳೆಯುತ್ತೀರಿ. ಕೊಳಕಿನ ಮಾತಿಲ್ಲ, ಇಲ್ಲಂತು ಮಕ್ಕಳು ಕೊಳಕಾಗುತ್ತಾರೆ, ಸತ್ಯಯುಗದಲ್ಲಿ ಇಂತಹ ಮಾತುಗಳು ಇರುವುದಿಲ್ಲ. ಅದು ಸ್ವರ್ಗವಾಗಿದೆಯಲ್ಲವೇ. ಅಲ್ಲಿ ಅಗರಬತ್ತಿಯನ್ನು ಇಡಿ ಅಥವಾ ಉರಿಸಿ ಎಂದು ಹೇಳಲು ಅಂತಹ ಯಾವುದೇ ದುರ್ವಾಸನೆ ಇರುವುದಿಲ್ಲ. ಹೂದೋಟಗಳಲ್ಲಿ ಬಹಳ ಸುಗಂಧಭರಿತ ಹೂಗಳು ಇರುತ್ತವೆ. ಇಲ್ಲಿನ ಹೂಗಳಲ್ಲಿ ಅಷ್ಟೊಂದು ಸುಗಂಧವಿಲ್ಲ. ಅಲ್ಲಂತು ಪ್ರತಿಯೊಂದು ವಸ್ತುವಿನಲ್ಲಿ 100% ಸುವಾಸನೆ ಇರುತ್ತದೆ. ಇಲ್ಲಂತು ಅಲ್ಲಿಗೆ ಹೋಲಿಸಿದರೆ 1% ಸಹ ಇಲ್ಲ. ಅಲ್ಲಂತು ಹೂಗಳು ಸಹ ಬಹಳ ಸುಂದರವಾಗಿರುತ್ತವೆ. ಇಲ್ಲಿ ಭಲೆ ಯಾರು ಎಷ್ಟೇ ಸಾಹುಕಾರರಾಗಿರಬಹುದು ಆದರು ಅಲ್ಲಿನಷ್ಟಿಲ್ಲ. ಅಲ್ಲಂತೂ ವಿಧ-ವಿಧವಾದ ವಸ್ತುಗಳು ಇರುತ್ತವೆ. ಪಾತ್ರೆಗಳೆಲ್ಲವೂ ಚಿನ್ನದ್ದಾಗಿರುತ್ತವೆ. ಇಲ್ಲಿನ ಕಲ್ಲುಗಳು ಹೇಗೋ ಹಾಗೆಯೇ ಅಲ್ಲಿ ಚಿನ್ನ ಇರುತ್ತದೆ. ಮರಳಿನಲ್ಲಿಯೂ ಚಿನ್ನ ಇರುತ್ತದೆ. ಅಂದಮೇಲೆ ವಿಚಾರ ಮಾಡಿ - ಎಷ್ಟು ಚಿನ್ನ ಇರಬಹುದು, ಅದರಿಂದ ಮನೆಗಳು ತಯಾರಾಗುತ್ತವೆ. ಅಲ್ಲಿ ಚಳಿಯು ಇರುವುದಿಲ್ಲ, ಸೆಕೆಯು ಆಗುವುದಿಲ್ಲ. ಅಂತಹ ವಾತಾವರಣ ಇರುತ್ತದೆ. ಅಲ್ಲಿ, ಪಂಖವನ್ನು ಹಾಕಲು ತಾಪದ ದುಃಖವು ಇರುವುದಿಲ್ಲ. ಅದರ ಹೆಸರೇ ಆಗಿದೆ ಸ್ವರ್ಗ. ಅಲ್ಲಿ ಅಪಾರ ಸುಖವಿರುತ್ತದೆ. ನಿಮ್ಮಂತಹ ಪದಮಾಪದಮ ಭಾಗ್ಯಶಾಲಿಗಳು ಯಾರೂ ಆಗುವುದಿಲ್ಲ. ಲಕ್ಷ್ಮೀ-ನಾರಾಯಣರ ಎಷ್ಟೊಂದು ಮಹಿಮೆಯನ್ನು ಹಾಡುತ್ತಾರೆ, ಅವರನ್ನು ಯಾರು ಹಾಗೆ ಮಾಡುತ್ತಾರೆಯೋ ಅವರದು ಎಷ್ಟೊಂದು ಮಹಿಮೆ ಇರಬೇಕು. ಮೊದಲು ಅವ್ಯಭಿಚಾರಿ ಭಕ್ತಿ ಇರುತ್ತದೆ ನಂತರ ದೇವತೆಗಳ ಭಕ್ತಿಯು ಪ್ರಾರಂಭವಾಗುತ್ತದೆ. ಅದನ್ನೂ ಸಹ ಭೂತ ಪೂಜೆ ಎಂದು ಹೇಳಲಾಗುತ್ತದೆ. ಶರೀರವಂತು ಇರುವುದಿಲ್ಲ, ಪಂಚತತ್ವಗಳ ಪೂಜೆ ಆಗುತ್ತದೆ. ಶಿವತಂದೆಗೆ ಭೂತ ಪೂಜೆ ಎಂದು ಹೇಳುವುದಿಲ್ಲ. ಪೂಜೆ ಮಾಡುವುದಕ್ಕಾಗಿ ಯಾವುದಾದರು ವಸ್ತುವಿನಿಂದ ಅಥವಾ ಚಿನ್ನದಿಂದ ತಯಾರಿಸುತ್ತಾರೆ. ಆತ್ಮಕ್ಕೆ ಚಿನ್ನ ಎಂದು ಹೇಳುತ್ತಾರೇನು! ಆತ್ಮವು ಯಾವ ಪದಾರ್ಥದಿಂದ ತಯಾರಾಗಿದೆ? ಶಿವನ ಚಿತ್ರವು ಯಾವ ವಸ್ತುವಿನಿಂದ ತಯಾರಾಗಿದೆ ಎಂದರೆ ತಕ್ಷಣ ತಿಳಿಸುತ್ತಾರೆ ಆದರೆ, ಆತ್ಮ-ಪರಮಾತ್ಮನು ಯಾವ ವಸ್ತುವಿನಿಂದ ತಯಾರಾಗಿದೆ ಎಂದರೆ ಯಾರೂ ತಿಳಿಸುವುದಿಲ್ಲ. ಸತ್ಯಯುಗದಲ್ಲಿ ಪಂಚತತ್ವಗಳು ಶುದ್ಧವಾಗಿರುತ್ತದೆ, ಇಲ್ಲಿ ಅಶುದ್ಧವಾಗಿದೆ. ಅಂದಾಗ ಪುರುಷಾರ್ಥಿ ಮಕ್ಕಳು ಇಂತಿಂತಹ ವಿಚಾರಗಳನ್ನು ಮಾಡುತ್ತಿರುತ್ತಾರೆ. ಇವೆಲ್ಲಾ ಮಾತುಗಳನ್ನೂ ಸಹ ಬಿಟ್ಟುಬಿಡಿ, ಏನಾಗಬೇಕೋ ಅದೆಲ್ಲಾ ಆಗಬೇಕು ಎಂದು ತಂದೆಯು ತಿಳಿಸುತ್ತಾರೆ. ಮೊದಲು ತಂದೆಯನ್ನು ನೆನಪು ಮಾಡಿ, ನಾಲ್ಕು ಕಡೆಯಿಂದ ಬುದ್ಧಿಯನ್ನು ತೆಗೆದು ನನ್ನೊಬ್ಬನನ್ನೇ ನೆನಪು ಮಾಡಿ ಆಗ ವಿಕರ್ಮ ವಿನಾಶ ಆಗುತ್ತದೆ. ಏನೆಲ್ಲವನ್ನು ಕೇಳುತ್ತೀರೋ ಅದೆಲ್ಲವನ್ನು ಬಿಟ್ಟು ಒಂದು ಮಾತನ್ನು ಪಕ್ಕಾ ಮಾಡಿಕೊಳ್ಳಿ - ನಾವು ಸತೋಪ್ರಧಾನರಾಗಬೇಕಾಗಿದೆ, ಮತ್ತೆ ಸತ್ಯಯುಗದಲ್ಲಿ ಕಲ್ಪ-ಕಲ್ಪವು ಏನಾಗಿರುವುದೋ ಅದೇ ಆಗುವುದು. ಅದರಲ್ಲಿ ಸ್ವಲ್ಪವೂ ಅಂತರವಿರುವುದಿಲ್ಲ. ಮೂಲ ಮಾತಾಗಿದೆ, ತಂದೆಯನ್ನು ನೆನಪು ಮಾಡಿ - ಇದು ಪರಿಶ್ರಮ ಆಗಿದೆ. ಅದನ್ನು ಪೂರ್ಣ ಮಾಡಿ ಬಿರುಗಾಳಿಗಳು ಬಹಳ ಬರುತ್ತವೆ. ಜನ್ಮ-ಜನ್ಮಾಂತರದಿಂದ ಏನೆಲ್ಲವನ್ನು ಮಾಡಿದ್ದಿರೋ ಅದೆಲ್ಲವೂ ಮುಂದೆ ಬರುತ್ತದೆ. ಆದ್ದರಿಂದ ಎಲ್ಲಾ ಕಡೆಯಿಂದ ಬುದ್ಧಿಯನ್ನು ತೆಗೆದು ಅಂತರ್ಮುಖಿಗಳಾಗಿ ನನ್ನನ್ನು ನೆನಪು ಮಾಡುವ ಪುರುಷಾರ್ಥ ಮಾಡಿ. ನೀವು ಮಕ್ಕಳಿಗೆ ಸ್ಮೃತಿ ಅಂತೂ ಬಂದಿದೆ, ನಂಬರ್ವಾರ್ ಪುರುಷಾರ್ಥದನುಸಾರ. ಸರ್ವೀಸ್ನಿಂದಲೂ ತಿಳಿಯುತ್ತದೆ - ಸರ್ವೀಸ್ ಮಾಡುವವರಿಗೆ ಸರ್ವೀಸಿನ ಖುಷಿ ಇರುತ್ತದೆ. ಯಾರು ಚೆನ್ನಾಗಿ ಸರ್ವೀಸ್ ಮಾಡುತ್ತಾರೋ ಅವರಿಗೆ ಸರ್ವೀಸಿನ ಪ್ರತ್ಯಕ್ಷ ಪ್ರಮಾಣವೂ ಸಿಗುತ್ತದೆ. ಮಾರ್ಗದರ್ಶಕರಾಗಿ ಬರುತ್ತಾರೆ. ಯಾರು ಮಹಾರಥಿ, ಕುದುರೆ ಸವಾರ, ಕಾಲಾಳುಗಳಾಗಿದ್ದಾರೆ ಎಂಬುದು ತಕ್ಷಣ ತಿಳಿಯುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅನ್ಯ ಎಲ್ಲಾ ಮಾತುಗಳನ್ನು ಬಿಟ್ಟು ಬುದ್ಧಿಯನ್ನು ಎಲ್ಲಾ ಕಡೆಯಿಂದ ತೆಗೆದು ಸತೋಪ್ರಧಾನರಾಗಲು ಅಶರೀರಿ ಆಗುವ ಅಭ್ಯಾಸ ಮಾಡಬೇಕಾಗಿದೆ. ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ.

2. ಬುದ್ಧಿಯಲ್ಲಿ ಒಳ್ಳೊಳ್ಳೆ ವಿಚಾರಗಳನ್ನು ತರಬೇಕಾಗಿದೆ - ನಮ್ಮ ರಾಜ್ಯದಲ್ಲಿ (ಸ್ವರ್ಗ) ಏನೇನಿರುತ್ತದೆ, ಅದರ ಕುರಿತು ಮೇಲೆ ವಿಚಾರ ಮಾಡಿ, ತಮ್ಮನ್ನು ಅದಕ್ಕೆ ಯೋಗ್ಯ ಚರಿತ್ರವಂತನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಇಲ್ಲಿಂದ ಬುದ್ಧಿಯನ್ನು ತೆಗೆಯಬೇಕಾಗಿದೆ.

ವರದಾನ:
ಸೇವೆಯ ಮೂಲಕ ಮೇವಾ (ಡ್ರೈ ಫ್ರೂಟ್) ಪ್ರಾಪ್ತಿ ಮಾಡಿಕೊಳ್ಳುವಂತಹ ಸರ್ವ ಹದ್ದಿನ ಇಚ್ಛೆಗಳಿಂದ ದೂರ ಸದಾ ಸಂಪನ್ನ ಮತ್ತು ಸಮಾನ ಭವ

ಸೇವೆಯ ಅರ್ಥವೇ ಆಗಿದೆ ಮೇವಾ ಕೊಡುವಂತಹದು. ಒಂದುವೇಳೆ ಯಾವುದಾದರೂ ಸೇವೆ ಅಸಂತುಷ್ಠ ಮಾಡಿದರೆ ಆಗ ಆ ಸೇವೆ, ಸೇವೆ ಅಲ್ಲ. ಅಂತಹ ಸೇವೆ ಬಲೇ ಬಿಟ್ಟುಬಿಡಿ ಆದರೆ ಸಂತುಷ್ಠತೆಯನ್ನು ಬಿಡಬೇಡಿ. ಹೇಗೆ ಶರೀರದ ತೃಪ್ತಿಯವರು ಸದಾ ಸಂತುಷ್ಠರಾಗಿರುತ್ತಾರೆ ಅದೇರೀತಿ ಮನಸ್ಸಿನ ತೃಪ್ತಿಯುಳ್ಳವರು ಸಹ ಸಂತುಷ್ಠರಾಗಿರುತ್ತಾರೆ. ಸಂತುಷ್ಠತೆ ತೃಪ್ತಿಯ ನಿಶಾನಿಯಾಗಿದೆ. ತೃಪ್ತ ಆತ್ಮರಲ್ಲಿ ಯಾವುದೇ ಹದ್ದಿನ ಇಚ್ಛೆ, ಮಾನ್ಯತೆ, ಗೌರವ, ಪರಿಹಾರ, ಸಾಧನದ ಹಸಿವು ಇರುವುದಿಲ್ಲ. ಅವರು ಹದ್ದಿನ ಸರ್ವ ಇಚ್ಛೆಗಳಿಂದ ದೂರ ಸದಾ ಸಂಪನ್ನ ಮತ್ತು ಸಮಾನರಾಗಿರುತ್ತಾರೆ.

ಸ್ಲೋಗನ್:

ಸತ್ಯ ಹೃದಯದಿಂದ ನಿಸ್ವಾರ್ಥ ಸೇವೆಯಲ್ಲಿ ಮುಂದುವರೆಯುವುದು ಅರ್ಥಾತ್ ಪುಣ್ಯದ ಖಾತೆ ಜಮಾ ಆಗುವುದು.