01.01.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಜ್ಞಾನದ ಮಳೆಯನ್ನು ಸುರಿಸಿ ಹಸಿರನ್ನಾಗಿ ಮಾಡುವಂತಹವರಾಗಿದ್ದೀರಿ, ನೀವು ಧಾರಣೆಯನ್ನು ಮಾಡಿ ಮತ್ತು
ಮಾಡಿಸುವವರಾಗಬೇಕು”
ಪ್ರಶ್ನೆ:
ಯಾವ ಮೋಡವು ಮಳೆ
ಸುರಿಸುವುದಿಲ್ಲ, ಅದಕ್ಕೆ ಯಾವ ಹೆಸರನ್ನು ಕೊಡುವುದು?
ಉತ್ತರ:
ಅದಕ್ಕೆ ನಿರ್ಬಲ
ಮೋಡವೆಂದು ಕರೆಯಲಾಗುತ್ತದೆ. ಯಾರು ಧೃಡವಾಗಿರುತ್ತಾರೆ ಅವರು ಮಳೆಯನ್ನು ಸುರಿಸುತ್ತಾರೆ. ಒಂದುವೇಳೆ
ಧಾರಣೆಯಾಗಿದ್ದೇ ಆದರೆ ಜ್ಞಾನದ ಮಳೆಯನ್ನು ಸುರಿಸದೇ ಇರಲು ಸಾಧ್ಯವಿಲ್ಲ. ಯಾರು ಧಾರಣೆ ಮಾಡಿ
ಅನ್ಯರಿಗೆ ಮಾಡಿಸುವುದಿಲ್ಲವೋ ಅವರ ಹೊಟ್ಟೆಯು ಬೆನ್ನಿಗೆ ಹೋಗಿ ಅಂಟಿಕೊಂಡಿರುತ್ತದೆ, ಅವರು
ಬಡವರಾಗಿರುತ್ತಾರೆ, ಪ್ರಜೆಗಳಾಗಿ ಹೋಗುತ್ತಾರೆ.
ಪ್ರಶ್ನೆ:
ನೆನಪಿನ
ಯಾತ್ರೆಯಲ್ಲಿ ಮುಖ್ಯ ಪರಿಶ್ರಮ ಯಾವುದಿದೆ?
ಉತ್ತರ:
ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ಬಿಂದು ರೂಪದಲ್ಲಿ ನೆನಪು ಮಾಡುವುದು. ತಂದೆಯು
ಯಾರಾಗಿದ್ದಾರೆ, ಹೇಗಿದ್ದಾರೆಯೋ ಅದೇ ಸ್ವರೂಪದಿಂದ ಯಥಾರ್ಥ ನೆನಪು ಮಾಡುವುದರಲ್ಲಿಯೇ ಪರಿಶ್ರಮವಿದೆ.
ಗೀತೆ:
ಯಾರು ಪ್ರಿಯತಮನ
ಜೊತೆಯಿದ್ದಾರೆ...............
ಓಂ ಶಾಂತಿ.
ಹೇಗೆ ಸಾಗರದ ಮೇಲೆ ಮೋಡಗಳಿದೆಯೆಂದರೆ ಆ ಮೋಡಗಳ ತಂದೆಯು ಸಾಗರನಾಗಿದ್ದಾರೆ. ಯಾವ ಮೋಡವು ಸಾಗರದ
ಜೊತೆಯಿದೆ ಅವರಿಗಾಗಿಯೇ ಮೇಲೆ ಮಳೆ ಸುರಿಯುತ್ತದೆ. ಆ ಮೋಡವೂ ಸಹ ನೀರನ್ನು ತುಂಬಿಕೊಂಡು ನಂತರ ಮಳೆ
ಸುರಿಸುತ್ತದೆ. ನೀವು ಸಾಗರನ ಬಳಿ ತುಂಬಿಕೊಳ್ಳಲು ಬರುತ್ತೀರಿ. ಸಾಗರನ ಮಕ್ಕಳು ಮೋಡಗಳಾಗಿಯೇ
ಇದ್ದೀರಿ, ಯಾರು ಮಧುರವಾದ ನೀರ (ಜ್ಞಾನ) ನ್ನು ಸೆಳೆದುಕೊಳ್ಳುತ್ತಾರೆ. ಮೋಡಗಳೂ ಸಹ ಅನೇಕ
ಪ್ರಕಾರದ್ದಿದೆ. ಕೆಲವು ಬಹಳ ಜೋರಾಗಿ ಮಳೆಯನ್ನು ಸುರಿಸುತ್ತವೆ. ಅವರ ಹೆಸರನ್ನೂ ಸಹ ಗಾಯನ
ಮಾಡಲಾಗುತ್ತದೆ. ಹೇಗೆ ಬಹಳಷ್ಟು ಮಳೆಯಾದರೆ ಮನುಷ್ಯರು ಸಂತೋಷ ಪಡುತ್ತಾರೆ. ಇಲ್ಲಿಯೂ ಸಹ ಹಾಗೆಯೇ
ಯಾರು ಒಳ್ಳೆಯ ಮಳೆಯನ್ನು ಸುರಿಸುತ್ತಾರೆಯೋ ಅವರ ಮಹಿಮೆಯಾಗುತ್ತದೆ. ಯಾರು ಮಳೆ ಸುರಿಸುವುದಿಲ್ಲವೋ
(ಅನ್ಯರಿಗೆ ಜ್ಞಾನವನ್ನು ಹೇಳುವುದಿಲ್ಲವೋ) ಅವರ ಹೃದಯವು ಬಲಹೀನವಾಗಿರುತ್ತದೆ ಅವರ ಹೊಟ್ಟೆ
ತುಂಬುವುದಿಲ್ಲ. ಪೂರ್ಣರೀತಿಯಲ್ಲಿ ಧಾರಣೆಯಾಗದೇ ಇರುವುದರಿಂದ ಹೊಟ್ಟೆಯು ಹೋಗಿ ಬೆನ್ನಿಗೆ
ಅಂಟಿಕೊಂಡಿರುತ್ತದೆ (ಜ್ಞಾನದಲ್ಲಿ ಬಲಹೀನರಾಗಿರುತ್ತಾರೆ). ಬರಗಾಲವು ಬಂದಿತೆಂದರೆ ಮನುಷ್ಯರ
ಹೊಟ್ಟೆಯು ಬೆನ್ನಿಗೆ ಅಂಟಿಕೊಂಡಿರುತ್ತದೆ. ಇಲ್ಲಿಯೂ ಸಹ ಧಾರಣೆ ಮಾಡಿ ಮತ್ತು ಧಾರಣೆಯನ್ನು
ಮಾಡಿಸುವುದಿಲ್ಲ ಅಂತಹವರ ಹೊಟ್ಟೆಯು ಹೋಗಿ ಬೆನ್ನಿಗೆ ಅಂಟಿಕೊಂಡಿರುತ್ತದೆ. ಯಾರು ಹೆಚ್ಚಾಗಿ ಮಳೆ
ಸುರಿಸುವಂತಹವರಿರುತ್ತಾರೆಯೋ ಅವರು ರಾಜ-ರಾಣಿಯರಾಗುತ್ತಾರೆ ಮತ್ತು ಇವರು ಬಡವರಾಗಿರುತ್ತಾರೆ.
ಬಡವರ ಹೊಟ್ಟೆಯು ಬೆನ್ನಿಗೆ ಅಂಟಿಕೊಂಡಿರುತ್ತದೆ. ಮಕ್ಕಳು ಚೆನ್ನಾಗಿ ಧಾರಣೆ ಮಾಡಬೇಕು. ಇದರಲ್ಲಿಯೂ
ಆತ್ಮ-ಪರಮಾತ್ಮನ ಜ್ಞಾನವು ಎಷ್ಟು ಸಹಜವಾಗಿದೆ,ಈಗ ನೀವುತಿಳಿದುಕೊಳ್ಳುವಿರಿ ನಾವೆಲ್ಲಾ ಆತ್ಮಗಳು
ಮೊದಲು ನಮ್ಮಲ್ಲಿ ಆತ್ಮ ಮತ್ತು ಪರಮಾತ್ಮನ ಜ್ಞಾನವಿರಲಿಲ್ಲ ಆಗ ಹೊಟ್ಟೆಯು ಬೆನ್ನಿಗೆ
ಅಂಟಿತ್ತಲ್ಲವೆ. ಮುಖ್ಯವಾದುದು ಆತ್ಮ ಮತ್ತು ಪರಮಾತ್ಮನದಾಗಿದೆ. ಮನುಷ್ಯಾತ್ಮನನ್ನೇ
ತಿಳಿದುಕೊಳ್ಳಲಿಲ್ಲವೆಂದರೆ ಪರಮಾತ್ಮನನ್ನು ಹೇಗೆ ತಿಳಿದುಕೊಳ್ಳಲು ಸಾಧ್ಯವಿದೆ! ಎಷ್ಟೊಂದು ದೊಡ್ಡ
ವಿದ್ವಾಂಸರು, ಪಂಡಿತರು ಮೊದಲಾದವರಿದ್ದಾರೆ, ಯಾರೂ ಸಹ ಆತ್ಮನನ್ನು ತಿಳಿದುಕೊಂಡಿಲ್ಲ. ಈಗ ನಿಮಗೆ
ತಿಳಿದಿದೆ – ಇದರಲ್ಲಿ 84 ಜನ್ಮಗಳ ಅವಿನಾಶಿಯಾದ ಪಾತ್ರವು ತುಂಬಿದೆ. ಆತ್ಮವು ಹೇಗೆ ಆಲ್ರೌಂಡರ್
ಪಾತ್ರವನ್ನಭಿನಯಿಸುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಅವರಂತೂ ಆತ್ಮನೇ ಪರಮಾತ್ಮನೆಂದು
ಹೇಳಿಬಿಡುತ್ತಾರೆ. ನೀವು ಮಕ್ಕಳಿಗೆ ಆದಿಯಿಂದ ಹಿಡಿದು ಅಂತ್ಯದವರೆಗಿನ ಪೂರ್ಣಜ್ಞಾನವಿದೆ. ಅವರು
ಡ್ರಾಮಾದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ಈಗ ತಮಗೆ ಎಲ್ಲದರ ಜ್ಞಾನ
ಸಿಕ್ಕಿದೆ. ತಂದೆಯು ರಚಿಸಿರುವ ಜ್ಞಾನಯಜ್ಞದಲ್ಲಿ ಎಲ್ಲದರ ಸ್ವಾಹಾ ಆಗಲಿದೆ ಎಂಬುದು ನಿಮಗೆ
ತಿಳಿದಿದೆ ಆದ್ದರಿಂದ ದೇಹ ಸಹಿತವಾಗಿ ಏನೆಲ್ಲವೂ ಇದೆಯೋ ಅದನ್ನು ಮರೆತು ತನ್ನನ್ನು ಆತ್ಮನೆಂದು
ತಿಳಿಯಿರಿ ಎಂದು ತಂದೆಯು ಹೇಳುತ್ತಾರೆ. ತಂದೆಯನ್ನು ಮತ್ತು ಶಾಂತಿಧಾಮ ಮಧುರ ಮನೆಯನ್ನು ನೆನಪು
ಮಾಡಿ, ಇದು ದುಃಖಧಾಮವಾಗಿದೆ, ಇದರಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿಸಿಕೊಡಲು
ಸಾಧ್ಯವಿದೆ. ನೀವು ಜ್ಞಾನದಿಂದ ಸಂಪನ್ನರಾಗಿದ್ದೀರಿ, ಉಳಿದೆಲ್ಲಾ ಪರಿಶ್ರಮ ನೆನಪಿನ ಮೇಲೆ
ಆಧಾರಿತವಾಗಿದೆ. ಜನ್ಮ-ಜನ್ಮಾಂತರದ ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಗಳಾಗುವುದರಲ್ಲಿಯೇ
ಬಹಳ ಪರಿಶ್ರಮವಿದೆ ಆದರೆ ಇದು ಹೇಳುವುದಾದರೆ ಬಹಳ ಸಹಜವಾಗಿದೆ ಆದರೆ ತನ್ನನ್ನು ಆತ್ಮನೆಂದು ತಿಳಿದು
ತಂದೆಯನ್ನೂ ಸಹ ಬಿಂದುರೂಪದಲ್ಲಿ ನೆನಪು ಮಾಡಿ. ನೆನಪು ಮಾಡುವುದರಲ್ಲಿಯೇ ಪರಿಶ್ರಮವಿದೆ. ತಂದೆಯು
ತಿಳಿಸುತ್ತಾರೆ - ನಾನು ಯಾರಾಗಿದ್ದೇನೆಯೋ, ಹೇಗಿದ್ದೇನೆಯೋ ಹಾಗೆಯೇ ನೆನಪು ಮಾಡಲು ಕಷ್ಟವಿದೆ.
ಹಾಗೆಯೇ ಆ ರೀತಿ ನೆನಪು ಮಾಡುವುದೂ ಕಷ್ಟವಾಗುತ್ತದೆ. ತಂದೆಯು ಹೇಗಿದ್ದಾರೆಯೋ ಹಾಗೆಯೇ
ಮಕ್ಕಳಿರುತ್ತಾರಲ್ಲವೆ. ತನ್ನನ್ನು ತಿಳಿದುಕೊಂಡಿದ್ದೇ ಆದರೆ ತಂದೆಯನ್ನು ತಿಳಿದುಕೊಳ್ಳುತ್ತೀರಿ.
ನಿಮಗೆ ತಿಳಿದಿದೆ - ಓದಿಸುವಂತಹವರು ಒಬ್ಬರೇ ತಂದೆಯಾಗಿದ್ದಾರೆ, ಓದುವಂತಹವರು ಅನೇಕರಿದ್ದಾರೆ.
ತಂದೆಯು ರಾಜಧಾನಿಯನ್ನು ಹೇಗೆ ಸ್ಥಾಪನೆ ಮಾಡುತ್ತಾರೆಂದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ ಬಾಕಿ
ಉಳಿದ ಶಾಸ್ತ್ರ ಮುಂತಾದವೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ತಿಳಿಸಿಕೊಡಲು ನಾವು
ಹೇಳಬೇಕಾಗುತ್ತದೆ. ಇದರಲ್ಲಿ ತಿರಸ್ಕಾರದ ಯಾವುದೇ ಮಾತಿಲ್ಲ. ಶಾಸ್ತ್ರದಲ್ಲಿಯೂ ಸಹ ಬ್ರಹ್ಮನ ದಿನ
ಮತ್ತು ರಾತ್ರಿಯೆಂದು ಹೇಳುತ್ತಾರೆ ಆದರೆ ತಿಳಿದುಕೊಂಡಿಲ್ಲ. ರಾತ್ರಿ ಮತ್ತು ಹಗಲು ಅರ್ಧ-ಅರ್ಧ
ಇರುತ್ತದೆ. ಏಣಿಯ ಬಗ್ಗೆ ಎಷ್ಟು ಸಹಜವಾಗಿ ತಿಳಿಸಿಕೊಡಲಾಗುತ್ತದೆ.
ಮನುಷ್ಯರು ಭಗವಂತನು ಬಹಳ
ಸಮರ್ಥನಾಗಿದ್ದಾರೆ, ಅವರು ಏನು ಬೇಕಾದರೂ ಮಾಡಲು ಸಾಧ್ಯವಿದೆಯೆಂದು ತಿಳಿದುಕೊಂಡಿದ್ದಾರೆ ಆದರೆ
ತಂದೆಯು ನಾನೂ ಸಹ ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆಂದು ಹೇಳುತ್ತಾರೆ. ಭಾರತದಲ್ಲಿ
ಎಷ್ಟೆಲ್ಲಾ ಆಪತ್ತುಗಳು ಬರುತ್ತವೆ, ಪದೇ-ಪದೇ ನಾನು ಬರುತ್ತೇನೆಯೇ? ನನ್ನ ಪಾತ್ರಕ್ಕೂ ಸೀಮಿತವಿದೆ.
ಯಾವಾಗ ಹೆಚ್ಚು ದುಃಖವಾಗುತ್ತದೆಯೋ ಆಗ ನಾನು ನನ್ನ ಸಮಯದಲ್ಲಿ ಬರುತ್ತೇನೆ. ಒಂದು ಸೆಕೆಂಡಿನ
ವ್ಯತ್ಯಾಸವೂ ಆಗುವುದಿಲ್ಲ. ಡ್ರಾಮಾದಲ್ಲಿ ಪ್ರತಿಯೊಬ್ಬರದೂ ಆಕ್ಯುರೇಟ್ ಪಾತ್ರವು ನೊಂದಣಿಯಾಗಿದೆ.
ಇದು ಶ್ರೇಷ್ಠಾತಿಶ್ರೇಷ್ಠ ತಂದೆಯ ಅವತರಣೆಯಾಗಿದೆ, ನಂತರ ನಂಬರ್ವಾರ್ ಎಲ್ಲರೂ ಬರುತ್ತಾರೆ. ಕಡಿಮೆ
ಶಕ್ತಿಯುಳ್ಳಂತಹವರೂ ಬರುತ್ತಾರೆ, ನೀವು ಮಕ್ಕಳಿಗೆ ಈಗ ತಂದೆಯಿಂದ ಜ್ಞಾನವು ಸಿಕ್ಕಿದೆ ಅದರಿಂದ
ವಿಶ್ವದ ಮಾಲೀಕರಾಗುತ್ತೀರಿ. ನಿಮ್ಮಲ್ಲಿಯೂ ಸಂಪೂರ್ಣ ಶಕ್ತಿಯು ಬಂದುಬಿಡುತ್ತದೆ. ಪುರುಷಾರ್ಥವನ್ನು
ಮಾಡಿ ನೀವು ತಮೋಪ್ರಧಾನದಿಂದ ಸತೋಪ್ರಧಾನರಾಗಿಬಿಡುತ್ತೀರಿ. ಬೇರೆಯವರದು ಪಾತ್ರವೇ ಇಲ್ಲ. ನಾಟಕವು
ಮುಖ್ಯವಾದುದಾಗಿದೆ. ಇದರ ಜ್ಞಾನವು ನೀವು ಮಕ್ಕಳಿಗೆ ಈಗ ಸಿಗುತ್ತದೆ. ಉಳಿದೆಲ್ಲವೂ ಭೌತಿಕತೆಯಿಂದ
ಕೂಡಿದೆ ಏಕೆಂದರೆ ಇದೆಲ್ಲವನ್ನೂ ಈ ಕಣ್ಣಿನಿಂದ ನೋಡಲಾಗುತ್ತದೆ. ವಿಶ್ವದಲ್ಲಿ ಅತ್ಯದ್ಭುತವಾದವರು
ತಂದೆಯಾಗಿದ್ದಾರೆ. ಅವರು ಮತ್ತೆ ಸ್ವರ್ಗವನ್ನೇ ರಚನೆ ಮಾಡುತ್ತಾರೆ, ಅದನ್ನು ಸ್ವರ್ಗ, ಪ್ಯಾರಡೈಸ್
ಎಂದು ಕರೆಯುತ್ತಾರೆ. ಅದರದು ಎಷ್ಟೊಂದು ಮಹಿಮೆಯಿದೆ! ತಂದೆ ಮತ್ತು ತಂದೆಯ ರಚನೆಯದು ಬಹಳ
ಮಹಿಮೆಯಿದೆ. ಶ್ರೇಷ್ಠಾತಿಶ್ರೇಷ್ಠ ಭಗವಂತನಾಗಿದ್ದಾರೆ, ಶ್ರೇಷ್ಠಾತಿಶ್ರೇಷ್ಠ ಸ್ವರ್ಗದ ರಚನೆಯನ್ನು
ತಂದೆಯು ಹೇಗೆ ಮಾಡುತ್ತಾರೆ! ಇದು ಯಾರೂ ಸಹ ಸ್ವಲ್ಪವೂ ತಿಳಿದುಕೊಂಡಿಲ್ಲ. ಮಧುರಾತಿ ಮಧುರ ಮಕ್ಕಳೂ
ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ ಮತ್ತೆ ಅದರನುಸಾರವಾಗಿ ಪದವಿಯನ್ನು
ಪಡೆಯುತ್ತೀರಿ. ಯಾರು ಪುರುಷಾರ್ಥವನ್ನು ಮಾಡಿದ್ದಾರೆಯೋ ಅವರು ಡ್ರಾಮಾನುಸಾರವೇ ಮಾಡುತ್ತಾರೆ.
ಪುರುಷಾರ್ಥದ ವಿನಃ ಏನೂ ಸಿಗಲು ಸಾಧ್ಯವಿಲ್ಲ. ಕರ್ಮದ ವಿನಃ ಒಂದು ಸೆಕೆಂಡ್ ಸಹ ಇರಲು ಸಾಧ್ಯವಿಲ್ಲ.
ಅವರು ಹಠಯೋಗ, ಪ್ರಾಣಾಯಾಮ ಮಾಡುತ್ತಾರೆ. ಇದರಿಂದ ಜಡವಾಗಿಬಿಡುತ್ತಾರೆ. ಒಳಗಡೆಯಿರುತ್ತಾರೆ, ಮೇಲೆ
ಮಣ್ಣನ್ನು ಹಾಕಲಾಗುತ್ತದೆ. ಮಣ್ಣಿನ ಮೇಲೆ ನೀರನ್ನು ಹಾಕಿದಾಗ ಹುಲ್ಲು ಬೆಳೆಯುತ್ತದೆ ಆದರೂ
ಇದರಿಂದ ಯಾವುದೇ ಲಾಭವಿಲ್ಲ. ಎಷ್ಟು ದಿನ ಹಾಗೆಯೇ ಕುಳಿತುಕೊಂಡಿರುತ್ತಾರೆ? ಕರ್ಮವನ್ನಂತೂ
ಮಾಡಲೇಬೇಕು. ಕರ್ಮಸನ್ಯಾಸಿಗಳಂತೂ ಯಾರೂ ಆಗಲು ಸಾಧ್ಯವಿಲ್ಲ. ಭಲೆ ಅಡಿಗೆ ಮುಂತಾದುವನ್ನು
ಮಾಡುವುದಿಲ್ಲ, ಆದ್ದರಿಂದ ಅವರಿಗೆ ಕರ್ಮಸನ್ಯಾಸಿಗಳೆಂದು ಹೇಳಿಬಿಡುತ್ತಾರೆ. ಇದೂ ಸಹ ಡ್ರಾಮಾದಲ್ಲಿ
ಅವರ ಪಾತ್ರವಿದೆ. ಈ ನಿವೃತ್ತಿ ಮಾರ್ಗದವರು ಇಲ್ಲವೆಂದಿದ್ದರೆ ಭಾರತದ ಸ್ಥಿತಿಯೇನಾಗುತ್ತಿತ್ತು?
ಭಾರತವು ನಂಬರ್ವನ್ ಪವಿತ್ರವಾಗಿತ್ತು. ತಂದೆಯು ಮೊಟ್ಟಮೊದಲು ಪವಿತ್ರತೆಯನ್ನು ಸ್ಥಾಪನೆ
ಮಾಡುತ್ತಾರೆ, ಅದು ಪುನಃ ಅರ್ಧಕಲ್ಪ ನಡೆಯುತ್ತದೆ. ಅವಶ್ಯವಾಗಿ ಸತ್ಯಯುಗದಲ್ಲಿ ಒಂದು ಧರ್ಮ, ಒಂದು
ರಾಜ್ಯವಿತ್ತು ಪುನಃ ಈಗ ದೈವೀರಾಜ್ಯವು ಮತ್ತೆ ಸ್ಥಾಪನೆಯಾಗುತ್ತಿದೆ. ಇಂತಹ ಒಳ್ಳೊಳ್ಳೆಯ
ಸ್ಲೋಗನ್ಗಳನ್ನು ಮಾಡಿಸಿ ಮನುಷ್ಯರನ್ನು ಎಚ್ಚರಿಸಬೇಕಾಗಿದೆ - ಪುನಃ ದೇವತಾ ರಾಜ್ಯಭಾಗ್ಯವನ್ನು
ಪಡೆದುಕೊಳ್ಳಲು ಬನ್ನಿ ಎಂದು ತಿಳಿಸಿ. ಈಗ ನೀವು ಎಷ್ಟು ಚೆನ್ನಾಗಿ ತಿಳಿಸುತ್ತೀರಿ. ಕೃಷ್ಣನನ್ನು
ಶ್ಯಾಮ-ಸುಂದರ ಎಂದು ಏಕೆ ಕರೆಯಲಾಗುತ್ತದೆ - ಇದೂ ಸಹ ಈಗ ನೀವು ತಿಳಿದುಕೊಂಡಿದ್ದೀರಿ. ಇತ್ತೀಚಿನ
ದಿನಗಳಲ್ಲಿ ಇಂತಹ ಹೆಸರುಗಳನ್ನು ಬಹಳಷ್ಟು ಇಟ್ಟುಕೊಳ್ಳುತ್ತಾರೆ, ಕೃಷ್ಣನೊಂದಿಗೆ ಕಾಂಪೀಟೇಷನ್
ಮಾಡುತ್ತಾರೆ. ಪತಿತರಾಜರು ಹೇಗೆ ಪಾವನ ರಾಜರುಗಳ ಮುಂದೆ ಹೋಗಿ ತಲೆಬಾಗುತ್ತಾರೆ ಆದರೆ ಅವರು
ಏನನ್ನಾದರೂ ತಿಳಿದುಕೊಂಡಿದ್ದಾರಾ? ಯಾರು ಪೂಜ್ಯರಿದ್ದರೋ ಅವರೇ ಪೂಜಾರಿಗಳಾಗುತ್ತಾರೆಂಬುದನ್ನು
ನೀವು ಮಕ್ಕಳಿಗೆ ತಿಳಿದಿದೆ. ಈಗ ನೀವು ಮಕ್ಕಳ ಬುದ್ದಿಯಲ್ಲಿ ಇಡೀ ಚಕ್ರವಿದೆ, ಇದು ನೆನಪಿದ್ದರೂ
ಸಾಕು ಸ್ಥಿತಿಯು ಬಹಳ ಚೆನ್ನಾಗಿರುತ್ತದೆ ಆದರೆ ಮಾಯೆಯು ಸ್ಮರಣೆ ಮಾಡಲು ಬಿಡುವುದಿಲ್ಲ
ಮರೆಸಿಬಿಡುತ್ತದೆ. ಸದಾಕಾಲ ಹರ್ಷಿತ ಮುಖವಾಗಿರುತ್ತದೆಯೆಂದರೆ ನಿಮ್ಮನ್ನು ದೇವತೆಗಳೆಂದು
ಕರೆಯಲಾಗುತ್ತದೆ. ಲಕ್ಷ್ಮಿ-ನಾರಾಯಣ ಚಿತ್ರವನ್ನು ನೋಡಿ! ಎಷ್ಟೊಂದು ಖುಷಿಯಾಗುತ್ತದೆ.
ರಾಧಾ-ಕೃಷ್ಣ ಅಥವಾ ರಾಮ-ಸೀತೆಯರನ್ನು ನೋಡಿದಾಗ ಇಷ್ಟೊಂದು ಖುಷಿಯಾಗುವುದಿಲ್ಲ ಏಕೆಂದರೆ ಕೃಷ್ಣನಿಗೆ
ಶಾಸ್ತ್ರದಲ್ಲಿ ಅಲ್ಲಸಲ್ಲದ ಮಾತುಗಳನ್ನು ಬರೆದಿದ್ದಾರೆ. ಈ ಬಾಬಾ (ಬ್ರಹ್ಮಾ) ರವರೂ ಸಹ
ಶ್ರೀನಾರಾಯಣನಾಗುತ್ತಾರೆ. ಬಾಬಾ ಲಕ್ಷ್ಮಿ-ನಾರಾಯಣರ ಚಿತ್ರವನ್ನು ನೋಡಿ ಸಂತೋಷಪಡುತ್ತಾರೆ.
ಇನ್ನೆಷ್ಟು ಸಮಯ ಈ ಹಳೆಯ ಶರೀರದಲ್ಲಿರುತ್ತೇವೆ ಮತ್ತೆ ಹೋಗಿ ರಾಜಕುಮಾರರಾಗುತ್ತೇವೆ ಮಕ್ಕಳೂ ಸಹ ಈ
ರೀತಿ ತಿಳಿಯಬೇಕು - ಈ ಗುರಿ-ಧ್ಯೇಯವಿದೆಯಲ್ಲವೆ. ಇದನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ.
ಖುಷಿಯಲ್ಲಿ ಎಷ್ಟೊಂದು ಗದ್ಗದಿತರಾಗಬೇಕು! ಎಷ್ಟು ಓದುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು
ಪಡೆಯುತ್ತೀರಿ. ಓದಲಿಲ್ಲವೆಂದರೆ ಯಾವ ಪದವಿಯು ಸಿಗುತ್ತದೆ? ವಿಶ್ವದ ಮಹಾರಾಜ-ಮಹಾರಾಣಿಯರೆಲ್ಲಿ,
ಸಾಹುಕಾರರೆಲ್ಲಿ? ನೌಕರ-ಚಾಕರರೆಲ್ಲಿ? ವಿದ್ಯೆಯಂತೂ ಒಂದೇ ಆಗಿದೆ, ಕೇವಲ ಮನ್ಮನಾಭವ, ಮಧ್ಯಾಜೀಭವ.
ತಂದೆ ಮತ್ತು ಆಸ್ತಿ, ನೆನಪು ಮತ್ತು ಜ್ಞಾನ. ಇವರಿಗೆ (ಬ್ರಹ್ಮಾ) ಎಷ್ಟೊಂದು ಸಂತೋಷವಾಯಿತು – ತಂದೆ
(ಬ್ರಹ್ಮಾ) ಗೆ ಅಲ್ಲಾ ಸಿಕ್ಕಿದರು ಆಗ ತನ್ನದೆಲ್ಲವನ್ನೂ ಕೊಟ್ಟುಬಿಟ್ಟರು. ಎಷ್ಟೊಂದು ದೊಡ್ಡ
ಲಾಟರಿ ಸಿಕ್ಕಿತು! ಮತ್ತೆ ಇನ್ನೇನು ಬೇಕು. ಅಂದಾಗ ಮಕ್ಕಳ ಆಂತರ್ಯದಲ್ಲಿ ಎಷ್ಟೊಂದು ಖುಷಿಯಿರಬೇಕು!
ಆದ್ದರಿಂದ ಇಂತಹ ಟ್ರಾನ್ಸ್ ಲೈಟ್ ನ ಚಿತ್ರವನ್ನು (ಲಕ್ಷ್ಮಿ-ನಾರಾಯಣನ ಚಿತ್ರ) ಎಲ್ಲರಿಗೋಸ್ಕರ
ಮಾಡಿಸಿ. ಇದನ್ನು ಮಕ್ಕಳು ನೋಡಿ ಖುಷಿಪಡಲಿ. ಶಿವಬಾಬಾ ಬ್ರಹ್ಮಾರವರ ಮೂಲಕ ನಮಗೆ ಆಸ್ತಿಯನ್ನು
ಕೊಡುತ್ತಿದ್ದಾರೆ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಸಂಪೂರ್ಣ ತುಚ್ಛ
ಬುದ್ಧಿಯುಳ್ಳವರಾಗಿದ್ದಾರೆ. ಈಗ ನೀವು ತುಚ್ಛ ಬುದ್ಧಿಯವರಿಂದ ಸ್ವಚ್ಛ ಬುದ್ಧಿಯವರಾಗುತ್ತಿದ್ದೀರಿ,
ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ಏನನ್ನೂ ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ. ಈ ವಿದ್ಯೆಯಿಂದ
ನಿಮಗೆ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ ಆದ್ದರಿಂದ ತಂದೆಗೆ ಜ್ಞಾನಪೂರ್ಣನೆಂದು ಕರೆಯಲಾಗುತ್ತದೆ.
ಮನುಷ್ಯರು ಪ್ರತಿಯೊಬ್ಬರ ಹೃದಯವನ್ನು ಪರಮಾತ್ಮ ತಿಳಿದಿದ್ದಾರೆ ಎಂದು ತಿಳಿದುಕೊಂಡಿದ್ದಾರೆ ಆದರೆ
ತಂದೆಯು ಜ್ಞಾನವನ್ನು ಕೊಡುತ್ತಾರೆ. ಶಿಕ್ಷಕರಿಗೆ ಇಂತಹವರು ಓದುತ್ತಾರೆಂದು ತಿಳಿದಿರುತ್ತದೆ ಬಾಕಿ
ಇಡೀ ದಿನದಲ್ಲಿ ಇವರ ಬುದ್ಧಿಯಲ್ಲಿ ಏನೇನು ನಡೆಯುತ್ತಿದೆ ಎಂದು ಕುಳಿತು ನೋಡುತ್ತಾರೇನು? ಇದು
ಅದ್ಭುತವಾದ ಜ್ಞಾನವಾಗಿದೆ, ತಂದೆಯನ್ನು ಜ್ಞಾನಸಾಗರ, ಸುಖದ ಸಾಗರನೆಂದು ಕರೆಯಲಾಗುತ್ತದೆ. ನೀವೂ
ಸಹ ಈಗ ಮಾ|| ಜ್ಞಾನಸಾಗರರಾಗುತ್ತೀರಿ ನಂತರ ಈ ಬಿರುದು ಕೊನೆಯಾಗುತ್ತದೆ ನಂತರ ಸರ್ವಗುಣ ಸಂಪನ್ನ,
16 ಕಲಾ ಸಂಪೂರ್ಣನಾಗುತ್ತೀರಿ. ಇದು ಮನುಷ್ಯರ ಶ್ರೇಷ್ಠ ಪದವಿಯಾಗಿದೆ. ಈ ಸಮಯದಲ್ಲಿ ಈಶ್ವರೀಯ
ಪದವಿಯಿದೆ. ಇದು ಎಷ್ಟೊಂದು ತಿಳಿದು ಮತ್ತು ತಿಳಿಸುವಂತಹ ಮಾತಾಗಿದೆ. ಲಕ್ಷ್ಮಿ-ನಾರಾಯಣರ
ಚಿತ್ರವನ್ನು ನೋಡಿ ಬಹಳ ಖುಷಿಯಾಗಬೇಕು. ನಾವೀಗ ವಿಶ್ವದ ಮಾಲೀಕರಾಗುತ್ತೇವೆ. ಜ್ಞಾನದಿಂದಲೇ ಎಲ್ಲಾ
ಗುಣಗಳು ಬರುತ್ತವೆ. ತಮ್ಮ ಗುರಿ-ಧ್ಯೇಯವನ್ನು ನೋಡುವುದರಿಂದಲೇ ಪ್ರಫುಲ್ಲರಾಗುತ್ತೀರಿ ಆದ್ದರಿಂದ
ತಂದೆಯು ಹೇಳುತ್ತಾರೆ - ಈ ಲಕ್ಷ್ಮಿ-ನಾರಾಯಣರ ಚಿತ್ರವು ಪ್ರತಿಯೊಬ್ಬರ ಬಳಿಯೂ ಇರಬೇಕು. ಈ ಚಿತ್ರವು
ಮನಸ್ಸಿನಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ. ಈ ಮೃತ್ಯುಲೋಕದಲ್ಲಿ ಇದು ಕೊನೆಯ ಜನ್ಮವೆಂದು
ಮನಸ್ಸಿನಲ್ಲಿ ಬರುತ್ತದೆ ನಂತರ ನಾವು ಅಮರಲೋಕದಲ್ಲಿ ಹೋಗಿ ಇಂತಹವರಾಗುತ್ತೇವೆ, ತತತ್ವಂ. ಆತ್ಮ ಸೋ
ಪರಮಾತ್ಮನೆಂದಲ್ಲ, ಈ ಜ್ಞಾನವು ಬುದ್ಧಿಯಲ್ಲಿ ಕುಳಿತಿರಲಿ. ಯಾವಾಗಲೇ ಯಾರಿಗಾದರೂ
ತಿಳಿಸುತ್ತೀರೆಂದರೆ ನಾವು ಎಂದೂ ಸಹ ಯಾರಿಂದಲೂ ಬೇಡುವುದಿಲ್ಲವೆಂದು ಹೇಳಿ. ಪ್ರಜಾಪಿತ ಬ್ರಹ್ಮಾನ
ಮಕ್ಕಳು ಅನೇಕರಿದ್ದಾರೆ. ನಾವು ನಮ್ಮದೇ ತನು-ಮನ-ಧನದಿಂದ ಸೇವೆಯನ್ನು ಮಾಡುತ್ತೇವೆ. ಬ್ರಾಹ್ಮಣರು
ತಮ್ಮ ಸಂಪಾದನೆಯಿಂದಲೇ ಯಜ್ಞವನ್ನು ನಡೆಸುತ್ತಿದ್ದಾರೆ. ಶೂದ್ರರ ಹಣವನ್ನು ಉಪಯೋಗಿಸಲು
ಸಾಧ್ಯವಿಲ್ಲ. ಅನೇಕ ಮಂದಿ ಮಕ್ಕಳಿದ್ದಾರೆ, ಎಷ್ಟು ತನು-ಮನ-ಧನದಿಂದ ಸೇವೆ ಮಾಡುತ್ತಾರೆ,
ಸಮರ್ಪಿತರಾಗುತ್ತಾರೆ ಅಷ್ಟು ಪದವಿಯು ಸಿಗುತ್ತದೆ ಎಂಬುದು ಅವರಿಗೆ ತಿಳಿದಿದೆ. ತಂದೆಯು ಬೀಜವನ್ನು
ಬಿತ್ತಿದ್ದಾರೆಂದರೆ ಲಕ್ಷ್ಮಿ-ನಾರಾಯಣರಾಗುತ್ತೇವೆ ಎಂಬುದು ತಿಳಿದಿದೆ. ಹಣವು ಇಲ್ಲಿ ಕೆಲಸಕ್ಕೆ
ಬರುವುದಿಲ್ಲ ಅಂದಮೇಲೆ ಈ ಕಾರ್ಯದಲ್ಲಿ ಏಕೆ ತೊಡಗಿಸಬಾರದು? ಸಮರ್ಪಿತರಾದವರು ಹಸಿವೆಯಿಂದ
ಸಾಯುತ್ತಾರೇನು? ಬಹಳ ರಕ್ಷಣೆ ಸಿಗುತ್ತಾ ಇರುತ್ತದೆ. ತಂದೆಯು ಎಷ್ಟೊಂದು ರಕ್ಷಣೆಯನ್ನು
ಮಾಡುತ್ತಿರುತ್ತಾರೆ. ಇವರು ಶಿವತಂದೆಯ ರಥವಾಗಿದ್ದಾರಲ್ಲವೆ! ಇಡೀ ವಿಶ್ವವನ್ನು ಸ್ವರ್ಗವನ್ನಾಗಿ
ಮಾಡುವವರಾಗಿದ್ದಾರೆ. ಇವರು ಸುಂದರ ಯಾತ್ರಿಕನಾಗಿದ್ದಾರೆ.
ಪರಮಪಿತ ಪರಮಾತ್ಮನು ಬಂದು
ಎಲ್ಲರನ್ನೂ ಸುಂದರರನ್ನಾಗಿ ಮಾಡುತ್ತಾರೆ. ನೀವು ಕಪ್ಪಾದವರಿಂದ ಸುಂದರರಾಗಿಬಿಡುತ್ತೀರಲ್ಲವೆ!
ಎಂತಹ ಸುಂದರ ಪ್ರಿಯತಮನಾಗಿದ್ದಾರೆ! ಅವರು ಬಂದು ಎಲ್ಲರನ್ನೂ ಸುಂದರರನ್ನಾಗಿ ಮಾಡಿಬಿಡುತ್ತಾರೆ.
ಅವರ ಮೇಲೆ ಬಲಿಹಾರಿಯಾಗಿಬಿಡಬೇಕು, ನೆನಪು ಮಾಡುತ್ತಾ ಇರಬೇಕು. ಹೇಗೆ ಆತ್ಮನನ್ನು ನೋಡಲು
ಸಾಧ್ಯವಿಲ್ಲ, ತಿಳಿದುಕೊಳ್ಳಬಹುದು ಹಾಗೆಯೇ ಪರಮಾತ್ಮನನ್ನೂ ಸಹ ತಿಳಿದುಕೊಳ್ಳಬಹುದಷ್ಟೆ.
ನೋಡುವವರಾಗಿದ್ದರೆ ಆತ್ಮ-ಪರಮಾತ್ಮ ಇಬ್ಬರೂ ಒಂದೇರೀತಿ ಬಿಂದುವಾಗಿದ್ದಾರೆ. ಉಳಿದೆಲ್ಲವೂ
ಜ್ಞಾನವಾಗಿದೆ - ಇದು ಬಹಳ ತಿಳಿದುಕೊಳ್ಳುವ ಮಾತಾಗಿದೆ. ಮಕ್ಕಳ ಬುದ್ಧಿಯಲ್ಲಿ ಇದು
ಕುಳಿತುಕೊಳ್ಳಬೇಕು. ಬುದ್ಧಿಯಲ್ಲಿ ನಂಬರ್ವಾರ್ ಪುರುಷಾರ್ಥದನುಸಾರ ಧಾರಣೆಯಾಗುತ್ತದೆ. ವೈದ್ಯರಿಗೂ
ಸಹ ಔಷಧಿಯು ನೆನಪಿರುತ್ತದೆಯಲ್ಲವೆ. ಆ ಸಮಯದಲ್ಲಿ ಕುಳಿತು ಪುಸ್ತಕವನ್ನು ನೋಡುವುದಿಲ್ಲ.
ವೈದ್ಯರಿಗೂ ಸಹ ವಿಷಯಗಳಿರುತ್ತವೆ, ಬ್ಯಾರಿಸ್ಟರ್ಗಳ ಬಳಿಯೂ ವಿಷಯಗಳಿರುತ್ತವೆ, ನಿಮ್ಮ ಬಳಿಯೂ
ಯಾವುದರ ಬಗ್ಗೆ ತಿಳಿಸಬೇಕೆಂದು ವಿಷಯಗಳಿರುತ್ತವೆ. ಕೆಲವರಿಗೆ ಕೆಲವೊಂದು ವಿಚಾರಗಳು ಲಾಭದಾಯಕವೆಂದು
ಅನಿಸುತ್ತದೆ, ಕೆಲವರಿಗೆ ಕೆಲವೊಂದು ವಿಚಾರಗಳಿಂದ ಬಾಣವು ನಾಟುತ್ತದೆ. ಜ್ಞಾನಬಿಂದುಗಳಂತೂ ಅನೇಕ
ಇವೆ, ಯಾರು ಚೆನ್ನಾಗಿ ಧಾರಣೆ ಮಾಡುತ್ತಾರೆಯೋ ಅವರು ಚೆನ್ನಾಗಿ ಸೇವೆ ಮಾಡುತ್ತಾರೆ.
ಅರ್ಧಕಲ್ಪದಿಂದ ಮಹಾರೋಗಿಗಳಾಗಿದ್ದಾರೆ, ಆತ್ಮವು ಪತಿತವಾಗಿಬಿಟ್ಟಿದೆ ಅದಕ್ಕಾಗಿ ಒಬ್ಬರೇ ಅವಿನಾಶಿ
ಸರ್ಜನ್ ಔಷಧಿಯನ್ನು ಕೊಡುತ್ತಾರೆ. ಅವರು ಸದಾಕಾಲದ ಸರ್ಜನ್ ಆಗಿರುತ್ತಾರೆ. ಅವರು ಎಂದೂ
ರೋಗಿಯಾಗುವುದಿಲ್ಲ, ಉಳಿದೆಲ್ಲರೂ ರೋಗಿಗಳಾಗುತ್ತಾರೆ. ಅವಿನಾಶಿ ಸರ್ಜನ್ ಒಮ್ಮೆಲೆ ಬಂದು
ಮನ್ಮನಾಭವದ ಇಂಜೆಕ್ಷನ್ ಹಾಕುತ್ತಾರೆ. ಎಷ್ಟೊಂದು ಸಹಜವಾಗಿದೆ! ಸದಾಕಾಲ ನಿಮ್ಮ ಜೇಬಿನಲ್ಲಿ
ಚಿತ್ರಗಳನ್ನಿಟ್ಟುಕೊಳ್ಳಿ. ಬ್ರಹ್ಮಾತಂದೆಯು ನಾರಾಯಣ ಪೂಜಾರಿಯಾಗಿದ್ದರು, ಲಕ್ಷ್ಮಿಯ ಚಿತ್ರವನ್ನು
ತೆಗೆದು ಒಬ್ಬನೇ ನಾರಾಯಣನ ಚಿತ್ರವನ್ನಿಟ್ಟುಕೊಂಡರು. ನಾನು ಯಾರ ಪೂಜೆಯನ್ನು ಮಾಡುತ್ತಿದ್ದೆನೋ ಅದೇ
ನಾನಾಗುತ್ತಿದ್ದೇನೆ ಎಂಬುದು ಈಗ ತಿಳಿಯುತ್ತದೆ. ಲಕ್ಷ್ಮಿಗೆ ವಿದಾಯಿ ಕೊಟ್ಟರೆಂದರೆ ನಾನು
ಲಕ್ಷ್ಮಿಯಾಗುವುದಿಲ್ಲವೆಂದು ಪಕ್ಕಾ ಆಯಿತು. ಲಕ್ಷ್ಮಿಯು ಕುಳಿತು ಕಾಲನ್ನು ಒತ್ತುವ ಚಿತ್ರವು
ಇಷ್ಟವಾಗುತ್ತಿರಲಿಲ್ಲ. ಅದನ್ನು ನೋಡಿ ಪುರುಷರು ಸ್ತ್ರೀಯರಿಂದ ಕಾಲನ್ನೊತ್ತಿಸಿಕೊಳ್ಳುತ್ತಾರೆ.
ಲಕ್ಷ್ಮಿಯು ಅಲ್ಲಿ ಈ ರೀತಿ ಕಾಲನ್ನು ಒತ್ತುತ್ತಾಳೆ0iÉುೀ? ಈ ರೀತಿ-ಪದ್ಧತಿಗಳೆಲ್ಲವೂ
ಅಲ್ಲಿರುವುದಿಲ್ಲ. ಈ ಪದ್ಧತಿಗಳೆಲ್ಲವೂ ರಾವಣನ ರಾಜ್ಯದ್ದಾಗಿದೆ. ಈ ಚಿತ್ರದಲ್ಲಿ ಎಲ್ಲದರ
ಜ್ಞಾನವಿದೆ. ಮೇಲೆ ತ್ರಿಮೂರ್ತಿಯೂ ಸಹ ಇದ್ದಾರೆ, ಈ ಜ್ಞಾನವನ್ನು ಇಡೀ ದಿನ ಸ್ಮರಣೆ ಮಾಡಿ ಆಗ ಬಹಳ
ಆಶ್ಚರ್ಯವೆನಿಸುತ್ತದೆ. ಭಾರತವು ಈಗ ಸ್ವರ್ಗವಾಗುತ್ತಿದೆ, ಎಷ್ಟು ಒಳ್ಳೆಯ ತಿಳುವಳಿಕೆಯಿದೆ ಆದರೆ
ಮನುಷ್ಯರ ಬುದ್ಧಿಯಲ್ಲಿ ಏಕೆ ಕುಳಿತುಕೊಳ್ಳುವುದಿಲ್ಲ? ಎಂಬುದು ಗೊತ್ತಿಲ್ಲ. ಬೆಂಕಿಯು ಬಹಳ ಜೋರಾಗಿ
ಹತ್ತಿಕೊಳ್ಳುತ್ತದೆ. ಬೊಂಬಿನ ಕಾಡಿಗೆ ಬೆಂಕಿ ಬೀಳುವುದಿದೆ. ರಾವಣ ರಾಜ್ಯವು ಸಂಪೂರ್ಣ
ಸಮಾಪ್ತಿಯಾಗಬೇಕು. ಯಜ್ಞದಲ್ಲಿ ಪವಿತ್ರ ಬ್ರಾಹ್ಮಣರು ಬೇಕು. ಇದು ಬಹಳ ದೊಡ್ಡ ಯಜ್ಞವಾಗಿದೆ. ಇದು
ಇಡೀ ವಿಶ್ವದಲ್ಲಿಯೇ ಪವಿತ್ರತೆಯನ್ನು ತರುವಂತಹದ್ದಾಗಿದೆ. ಆ ಬ್ರಾಹ್ಮಣರೂ ಸಹ ತಮ್ಮನ್ನು ಬ್ರಹ್ಮನ
ಸಂತಾನರೆಂದು ಹೇಳಿಕೊಳ್ಳುತ್ತಾರೆ ಆದರೆ ಅವರು ಕುಖವಂಶಾವಳಿಗಳಾಗಿದ್ದಾರೆ. ಬ್ರಹ್ಮನ ಸಂತಾನರಂತೂ,
ಪವಿತ್ರ ಮುಖವಂಶಾವಳಿಗಳಾಗಿದ್ದರಲ್ಲವೆ. ಅವರಿಗೆ ಇದನ್ನು ತಿಳಿಸಿಕೊಡಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಸ್ವಚ್ಛಬುದ್ಧಿಯುಳ್ಳವರಾಗಿ ಅದ್ಭುತ ಜ್ಞಾನವನ್ನು ಧಾರಣೆ ಮಾಡಿ ತಂದೆಯ ಸಮಾನ
ಮಾ||ಜ್ಞಾನಸಾಗರರಾಗಬೇಕು. ಜ್ಞಾನದಿಂದ ಸರ್ವಗುಣಗಳನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಳ್ಳಬೇಕು.
2. ಹೇಗೆ ತಂದೆಯು
ತನು-ಮನ-ಧನವನ್ನು ಸೇವೆಯಲ್ಲಿ ತೊಡಗಿಸಿದರು, ಸಮರ್ಪಿತ ಮಾಡಿದರು ಹಾಗೆ0iÉುೀ ತಂದೆಯ ಸಮಾನ
ತನ್ನದೆಲ್ಲವನ್ನೂ ಈಶ್ವರೀಯ ಸೇವೆಯಲ್ಲಿ ಸಫಲ ಮಾಡಬೇಕು. ಸದಾ ಪ್ರಫುಲ್ಲಿತರಾಗಿರಲು ಗುರಿ-ಧ್ಯೇಯದ
ಚಿತ್ರವನ್ನು ಜೊತೆಯಲ್ಲಿಟ್ಟುಕೊಳ್ಳಬೇಕು.
ವರದಾನ:
ಏಕರಸ ಸ್ಥಿತಿ
ಮೂಲಕ ಸದಾ ಒಬ್ಬ ತಂದೆಗೆ ಫಾಲೋ ಫಾದರ್ ಮಾಡುವಂತಹ ಪ್ರಸನ್ನಚಿತ್ತ ಭವ
ನೀವು ಮಕ್ಕಳಿಗಾಗಿ
ಬ್ರಹ್ಮಾ ತಂದೆಯ ಜೀವನವು ಅಕ್ಯುರೇಟ್ ಕಂಪ್ಯೂಟರ್ ಆಗಿದೆ. ಹೇಗೆ ಇತ್ತೀಚೆಗೆ ಕಂಪ್ಯೂಟರ್ ಮೂಲಕ
ಪ್ರತಿಯೊಬ್ಬರು ಪ್ರಶ್ನೆಗೆ ಉತ್ತರ ಕೇಳುತ್ತಾರೆ. ಹಾಗೆಯೇ ಮನಸ್ಸಿನಲ್ಲಿ ಯಾವಾಗ ಯಾವುದೇ ಪ್ರಶ್ನೆ
ಎದ್ದುಳುತ್ತದೆ, ಏನು, ಏಕೆ, ಹೇಗೆ ಎನ್ನುವುದರ ಬದಲಾಗಿ ಬ್ರಹ್ಮಾ ತಂದೆಯ ಜೀವನ ರೂಪಿ
ಕಂಪ್ಯೂಟರ್ನ್ನು ನೋಡಿ. ಏನು ಮತ್ತು ಹೇಗೆ ಎನ್ನುವ ಪ್ರಶ್ನೆ ಹೀಗೆ ಎನ್ನುವುದರಲ್ಲಿ ಬದಲಾಗಿ
ಬಿಡುವುದು. ಪ್ರಶ್ನಚಿತ್ತರಾಗುವ ಬದಲಾಗಿ ಪ್ರಸನ್ನಚಿತ್ತರಾಗಿ ಬಿಡುವರು. ಪ್ರಸನ್ನಚಿತ್ತ ಅರ್ಥಾತ್
ಏಕರಸ ಸ್ಥಿತಿಯಲ್ಲಿ ಒಬ್ಬ ತಂದೆಯನ್ನು ಫಾಲೋ ಮಾಡುವವರು.
ಸ್ಲೋಗನ್:
ಆತ್ಮಿಕ ಶಕ್ತಿಯ
ಆಧಾರದ ಮೇಲೆ ಸದಾ ಸ್ವಸ್ಥರಾಗಿರುವ ಅನುಭವ ಮಾಡಿ.
ಸೂಚನೆ:
ಎಲ್ಲಾ ಬ್ರಹ್ಮಾವತ್ಸರು 1 ಜನವರಿಯಿಂದ 31 ಜನವರಿ 2025ರವರೆಗೆ ವಿಶೇಷ ಅಂರ್ತಮುಖತೆಯ ಗುಹೆಯಲ್ಲಿ
ಕುಳಿತು ಯೋಗ ತಪಸ್ಯೆ ಮಾಡುತ್ತಾ ಇಡೀ ವಿಶ್ವಕ್ಕೆ ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ವಿಶೇಷ ಸಕಾಶ
ಕೊಡುವಂತಹ ಸೇವೆಯನ್ನು ಮಾಡಿರಿ. ಇದೇ ಲಕ್ಷ್ಯದಿಂದ ಈ ತಿಂಗಳಿನ ಪತ್ರ ಪುಷ್ಪದಲ್ಲಿ ಕಲಿಸಿರುವಂತಹ
ಅವ್ಯಕ್ತ ಸೂಚನೆಗಳನ್ನು ಪ್ರತಿದಿನದ ಮುರಳಿಯ ಕೆಳಗಡೆಗೆ ಕೊಡಲಾಗುವುದು, ನೀವು ಈ ಪಾಯಿಂಟ್ಸಗಳ ಮೇಲೆ
ವಿಶೇಷ ಮನನ ಚಿಂತನೆ ಮಾಡುತ್ತ ಮನಸಾ ಸೇವೆಯ ಅನುಭವಿಗಳಾಗಿ.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ
ನೀವು ಶಾಂತಿ ಧೂತನ
ಮಕ್ಕಳಾಗಿದ್ದೀರಿ, ಎಲ್ಲೇ ಇರಿ, ನಡೆಯುತ್ತಾ-ತಿರುಗಾಡುತ್ತಾ ಸದಾ ತಮ್ಮನ್ನು ಶಾಂತಿಯ ಧೂತರೆಂದು
ತಿಳಿದು ನಡೆಯಿರಿ. ಯಾರು ಸ್ವಯಂ ಶಾಂತ ಸ್ವರೂಪ, ಶಕ್ತಿಶಾಲಿ ಸ್ವರೂಪದಲ್ಲಿ ಸ್ಥಿತರಾಗುತ್ತಾರೆ
ಅವರೇ ಅನ್ಯರಿಗೂ ಶಾಂತಿ ಮತ್ತು ಶಕ್ತಿಯ ಸಕಾಶ ಕೊಡುತ್ತಿರುತ್ತಾರೆ.