01.03.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಪ್ರೀತಿ
ಮತ್ತು ವಿಪರೀತ ಇದು ಪ್ರವೃತ್ತಿ ಮಾರ್ಗದ ಶಬ್ಧವಾಗಿದೆ, ಈಗ ನಿಮ್ಮ ಪ್ರೀತಿಯು ಒಬ್ಬ
ತಂದೆಯೊಂದಿಗಿದೆ, ನೀವು ಮಕ್ಕಳು ನಿರಂತರ ತಂದೆಯ ನೆನಪಿನಲ್ಲಿರುತ್ತೀರಿ”
ಪ್ರಶ್ನೆ:
ನೆನಪಿನ
ಯಾತ್ರೆಗೆ ಮತ್ತ್ಯಾವ ಹೆಸರನ್ನು ಕೊಡುತ್ತೀರಿ?
ಉತ್ತರ:
ನೆನಪಿನ
ಯಾತ್ರೆಯು ಪ್ರೀತಿಯ ಯಾತ್ರೆಯಾಗಿದೆ. ವಿಪರೀತ ಬುದ್ಧಿಯವರಿಂದ ನಾಮ-ರೂಪದಲ್ಲಿ
ಸಿಕ್ಕಿಹಾಕಿಕೊಳ್ಳುವ ದುರ್ಗಂಧವು ಬರುತ್ತದೆ, ಅವರ ಬುದ್ಧಿಯು ತಮೋಪ್ರಧಾನವಾಗಿಬಿಡುತ್ತದೆ. ಯಾರ
ಪ್ರೀತಿಯು ಒಬ್ಬ ತಂದೆಯೊಂದಿಗಿದೆಯೋ, ಅವರು ಜ್ಞಾನದಾನ ಮಾಡುತ್ತಿರುತ್ತಾರೆ. ಯಾವುದೇ
ದೇಹಧಾರಿಯೊಂದಿಗೆ ಅವರ ಪ್ರೀತಿಯಿರುವುದಿಲ್ಲ.
ಗೀತೆ:
ಈ ಸಮಯವು
ಕಳೆಯುತ್ತಿದೆ.................
ಓಂ ಶಾಂತಿ.
ತಂದೆಯು ಮಕ್ಕಳಿಗೆ ತಿಳಿಸುತ್ತಿದ್ದಾರೆ - ಈಗ ಇದಕ್ಕೆ ನೆನಪಿನ ಯಾತ್ರೆಯೆಂದೂ ಹೇಳಲಾಗುತ್ತದೆ,
ಪ್ರೀತಿಯ ಯಾತ್ರೆಯೆಂದೂ ಹೇಳಲಾಗುತ್ತದೆ. ಮನುಷ್ಯರಂತೂ ಆ ತೀರ್ಥಯಾತ್ರೆಗಳಿಗೆ ಹೋಗುತ್ತಾರೆ ಅಂದರೆ
ರಚನೆ (ದೇವತೆ) ಯ ಯಾತ್ರೆಗೆ ಹೋಗುತ್ತಾರೆ. ಭಿನ್ನ-ಭಿನ್ನ ರಚನೆಯಿದೆಯಲ್ಲವೆ. ರಚಯಿತನನ್ನಂತೂ ಯಾರೂ
ತಿಳಿದುಕೊಂಡಿಲ್ಲ. ಈಗ ನೀವು ರಚಯಿತ ತಂದೆಯನ್ನು ಅರಿತುಕೊಂಡಿದ್ದೀರಿ ಅಂದಮೇಲೆ ಆ ತಂದೆಯ ನೆನಪು
ಮಾಡುವುದರಲ್ಲಿ ನೀವು ಎಂದೂ ನಿಂತುಬಿಡಬಾರದು. ನಿಮಗೆ ನೆನಪಿನ ಯಾತ್ರೆಯು ಸಿಕ್ಕಿದೆ, ಇದಕ್ಕೆ
ನೆನಪಿನ ಯಾತ್ರೆ ಅಥವಾ ಪ್ರೀತಿಯ ಯಾತ್ರೆಯೆಂದೂ ಕರೆಯಲಾಗುತ್ತದೆ. ಯಾರಿಗೆ ತಂದೆಯ ಪ್ರತಿ ಹೆಚ್ಚಿನ
ಪ್ರೀತಿಯಿರುವುದೋ ಅವರು ಯಾತ್ರೆಯನ್ನೂ ಸಹ ಚೆನ್ನಾಗಿ ಮಾಡುತ್ತಾರೆ. ಎಷ್ಟು ಪ್ರೀತಿಯಿಂದ
ಯಾತ್ರೆಯಲ್ಲಿರುತ್ತಾರೆಯೋ ಅಷ್ಟು ಪವಿತ್ರವಾಗುತ್ತಾ ಹೋಗುತ್ತಾರೆ. ಶಿವಭಗವಾನುವಾಚ ಇದೆಯಲ್ಲವೆ.
ವಿನಾಶಕಾಲೇ ವಿಪರೀತಬುದ್ಧಿ ಮತ್ತು ವಿನಾಶಕಾಲೇ ಪ್ರೀತಿಬುದ್ಧಿ. ನೀವು ಮಕ್ಕಳಿಗೆ ತಿಳಿದಿದೆ - ಈಗ
ವಿನಾಶಕಾಲವಾಗಿದೆ, ಇದು ಅದೇ ಗೀತಾಭಾಗವು ನಡೆಯುತ್ತಿದೆ. ಶ್ರೀಕೃಷ್ಣನ ಗೀತೆ ಮತ್ತು ತ್ರಿಮೂರ್ತಿ
ಶಿವನ ಗೀತೆಯ ಅಂತರವನ್ನೂ ಸಹ ತಂದೆಯು ತಿಳಿಸಿದ್ದಾರೆ. ಈಗ ಗೀತೆಯ ಭಗವಂತ ಯಾರು? ಪರಮಪಿತ
ಶಿವಭಗವಾನುವಾಚ. ಕೇವಲ ಶಿವ ಎಂದು ಬರೆಯಬಾರದು ಏಕೆಂದರೆ ಶಿವ ಎಂಬ ಹೆಸರು ಅನೇಕರಿಗಿದೆ ಆದ್ದರಿಂದ
ಪರಮಪಿತ ಪರಮಾತ್ಮ ಶಿವ ಎಂದು ಬರೆಯುವುದರಿಂದ ಅವರು ಶ್ರೇಷ್ಠಾತಿಶ್ರೇಷ್ಠನಾಗಿಬಿಟ್ಟರು. ತಮ್ಮನ್ನು
ಯಾರೂ ಸಹ ಪರಮಪಿತನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಸನ್ಯಾಸಿಗಳು ಶಿವೋಹಂ ಎಂದು
ಹೇಳಿಕೊಳ್ಳುತ್ತಾರೆ. ಅವರು ತಂದೆಯನ್ನು ನೆನಪು ಮಾಡುವುದಕ್ಕೂ ಸಾಧ್ಯವಿಲ್ಲ ಏಕೆಂದರೆ ತಂದೆಯನ್ನು
ತಿಳಿದುಕೊಂಡೇ ಇಲ್ಲ. ತಂದೆಯೊಂದಿಗೆ ಪ್ರೀತಿಯೂ ಇಲ್ಲ, ಪ್ರೀತಿ ಮತ್ತು ವಿಪರೀತ ಈ ಶಬ್ಧವು
ಪ್ರವೃತ್ತಿ ಮಾರ್ಗಕ್ಕಾಗಿಯೇ ಇದೆ. ಕೆಲವು ಮಕ್ಕಳಿಗೆ ತಂದೆಯೊಂದಿಗೆ ಪ್ರೀತಿ ಬುದ್ಧಿಯಿರುತ್ತದೆ,
ಇನ್ನೂ ಕೆಲವರಿಗೆ ವಿಪರೀತವೂ ಇರುತ್ತದೆ, ನಿಮ್ಮಲ್ಲಿಯೂ ಹಾಗೆಯೆ. ಯಾರು ತಂದೆಯ ಸೇವೆಯಲ್ಲಿ
ತತ್ಫರರಾಗಿರುತ್ತಾರೆಯೋ ಅವರಿಗೆ ತಂದೆಯ ಜೊತೆ ಪ್ರೀತಿಬುದ್ಧಿಯಿದೆ. ತಂದೆಯ ವಿನಃ ಮತ್ತ್ಯಾರೊಂದಿಗೂ
ಪ್ರೀತಿಯಿರಲು ಸಾಧ್ಯವಿಲ್ಲ. ಬಾಬಾ, ನಾವು ತಮ್ಮ ಸಹಯೋಗಿಗಳಾಗಿದ್ದೇವೆಂದು ಶಿವತಂದೆಗೇ ಹೇಳುತ್ತಾರೆ.
ಇದರಲ್ಲಿ ಬ್ರಹ್ಮಾರವರ ಮಾತೇ ಇಲ್ಲ. ಶಿವತಂದೆಯ ಜೊತೆ ಯಾವ ಆತ್ಮಗಳ ಪ್ರೀತಿಯಿದೆಯೋ ಅವರು
ಅವಶ್ಯವಾಗಿ ಸಹಯೋಗಿಗಳಾಗಿರುತ್ತಾರೆ. ಶಿವತಂದೆಯ ಜೊತೆ ಅವರು ಸೇವೆ ಮಾಡುತ್ತಿರುತ್ತಾರೆ.
ಪ್ರೀತಿಯಿಲ್ಲವೆಂದರೆ ಅರ್ಥ ವಿಪರೀತವಾಗಿಬಿಡುತ್ತಾರೆ, ವಿಪರೀತಬುದ್ಧಿ ವಿನಃಶ್ಯಂತಿ. ಯಾರಿಗೆ
ತಂದೆಯೊಂದಿಗೆ ಪ್ರೀತಿಯಿದೆಯೋ ಅವರು ಸಹಯೋಗಿಗಳೂ ಆಗುತ್ತಾರೆ. ಎಷ್ಟು ಪ್ರೀತಿಯೋ ಅಷ್ಟು ಸೇವೆಯಲ್ಲಿ
ಸಹಯೋಗಿಗಳಾಗುತ್ತಾರೆ. ನೆನಪೇ ಮಾಡುವುದಿಲ್ಲವೆಂದರೆ ಪ್ರೀತಿಯೂ ಇಲ್ಲ ಮತ್ತೆ ದೇಹಧಾರಿಗಳೊಂದಿಗೆ
ಪ್ರೀತಿಯುಂಟಾಗಿಬಿಡುತ್ತದೆ. ಮನುಷ್ಯರು ಮನುಷ್ಯರಿಗೆ ತಮ್ಮ ಸ್ಮರಣಾರ್ಥವಾಗಿ ವಸ್ತುಗಳನ್ನು
ಕೊಡುತ್ತಾರಲ್ಲವೆ. ಅದನ್ನು ನೋಡಿದಾಗ ಅವಶ್ಯವಾಗಿ ಅವರ ನೆನಪು ಬರುತ್ತದೆ.
ಈಗ ತಂದೆಯು ನೀವು
ಮಕ್ಕಳಿಗೆ ಅವಿನಾಶಿ ಜ್ಞಾನರತ್ನಗಳ ಉಡುಗೊರೆಯನ್ನು ಕೊಡುತ್ತಾರೆ. ಇದರಿಂದ ನೀವು ರಾಜ್ಯಪದವಿಯನ್ನು
ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಅವಿನಾಶಿ ಜ್ಞಾನರತ್ನಗಳ ದಾನ ಮಾಡುತ್ತಾರೆಂದರೆ ಅವರು
ಪ್ರೀತಿಬುದ್ಧಿಯವರೆಂದರ್ಥ ತಂದೆಯು ಎಲ್ಲರ ಕಲ್ಯಾಣ ಮಾಡಲು ಬಂದಿದ್ದಾರೆ, ಅದರಲ್ಲಿ ನಾವೂ ಸಹ
ಸಹಯೋಗಿಗಳಾಗ ಬೇಕೆಂದು ತಿಳಿದುಕೊಂಡಿದ್ದಾರೆ. ಇಂತಹ ಪ್ರೀತಿಬುದ್ಧಿಯುಳ್ಳವರು ವಿಜಯಿಗಳಾಗುತ್ತಾರೆ.
ಯಾರು ನೆನಪು ಮಾಡುವುದೇ ಇಲ್ಲವೋ ಅವರು ಪ್ರೀತಿಬುದ್ಧಿಯವರಲ್ಲ. ತಂದೆಯೊಂದಿಗೆ ಪ್ರೀತಿಯಿದ್ದು
ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತದೆ ಮತ್ತು ಅನ್ಯರಿಗೂ ಕಲ್ಯಾಣದ ಮಾರ್ಗವನ್ನು
ತಿಳಿಸುತ್ತಾರೆ. ನೀವು ಬ್ರಾಹ್ಮಣ ಮಕ್ಕಳದೂ ಸಹ ಪ್ರೀತಿ ಮತ್ತು ವಿಪರೀತದ ಮೇಲೆ ಆಧಾರಿತವಾಗಿದೆ.
ತಂದೆಯನ್ನು ಹೆಚ್ಚು ನೆನಪು ಮಾಡುತ್ತಾರೆಂದರೆ ಪ್ರೀತಿಯಿದೆಯೆಂದರ್ಥ. ತಂದೆಯು ತಿಳಿಸುತ್ತಾರೆ -
ನಿರಂತರ ನನ್ನನ್ನು ನೆನಪು ಮಾಡಿ. ನನ್ನ ಸಹಯೋಗಿಗಳಾಗಿ. ರಚನೆಗೆ ಒಬ್ಬ ರಚಯಿತ ತಂದೆಯ ನೆನಪೇ
ಇರಬೇಕು. ಯಾವುದೇ ರಚನೆಯನ್ನು ನೆನಪು ಮಾಡಬಾರದು. ಪ್ರಪಂಚದಲ್ಲಂತೂ ರಚಯಿತನನ್ನು ಯಾರೂ
ಅರಿತುಕೊಂಡಿಲ್ಲ, ನೆನಪೂ ಮಾಡುವುದಿಲ್ಲ. ಸನ್ಯಾಸಿಗಳೂ ಸಹ ಬಹ್ಮ್ ತತ್ವವನ್ನು ನೆನಪು ಮಾಡುತ್ತಾರೆ
ಅಂದಮೇಲೆ ಅದೂ ಸಹ ರಚನೆಯಾಯಿತು. ಎಲ್ಲರಿಗೆ ರಚಯಿತನಂತೂ ಒಬ್ಬರೇ ಆಗಿದ್ದಾರಲ್ಲವೆ! ಅನ್ಯ ಏನೆಲ್ಲಾ
ವಸ್ತುಗಳನ್ನು ಈ ಕಣ್ಣುಗಳಿಂದ ನೋಡುತ್ತೀರೋ ಅದೆಲ್ಲವೂ ರಚನೆಯಾಗಿದೆ. ಯಾರು ಕಾಣಿಸುವುದಿಲ್ಲವೋ
ಅವರು ರಚಯಿತ ತಂದೆಯಾಗಿದ್ದಾರೆ. ಬ್ರಹ್ಮಾ, ವಿಷ್ಣು, ಶಂಕರದೂ ಚಿತ್ರವಿದೆ, ಅವರೂ ಸಹ
ರಚನೆಯಾಗಿದ್ದಾರೆ. ತಂದೆಯು ಯಾವ ಚಿತ್ರವನ್ನು ಮಾಡಿಸಲು ತಿಳಿಸಿದ್ದಾರೆಯೋ ಅದರಲ್ಲಿ ಮೇಲೆ
ಬರೆಯಬೇಕು - ಪರಮಪಿತ ಪರಮಾತ್ಮ ತ್ರಿಮೂರ್ತಿ ಶಿವಭಗವಾನುವಾಚ. ಭಲೆ ಯಾರೇ ತನ್ನನ್ನು ಭಗವಂತನೆಂದು
ಹೇಳಿಕೊಳ್ಳಲಿ ಆದರೆ ತಮ್ಮನ್ನು ಪರಮಪಿತನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಬುದ್ಧಿಯು
ಶಿವತಂದೆಯೊಂದಿಗಿದೆ, ಶರೀರದ ಜೊತೆಯಿಲ್ಲ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಅಶರೀರಿ
ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ಪ್ರೀತಿ ಮತ್ತು ವಿಪರೀತದ ಸಂಪೂರ್ಣ ಆಧಾರವು
ಸೇವೆಯ ಮೇಲಿದೆ. ಒಳ್ಳೆಯ ಪ್ರೀತಿಯಿದ್ದರೆ ತಂದೆಯ ಸೇವೆಯನ್ನೂ ಚೆನ್ನಾಗಿ ಮಾಡುತ್ತಾರೆ ಆಗ
ವಿಜಯಿಗಳೆಂದು ಹೇಳಲಾಗುತ್ತದೆ. ಪ್ರೀತಿಯಿಲ್ಲವೆಂದರೆ ಸೇವೆಯನ್ನೂ ಮಾಡುವುದಿಲ್ಲ ಮತ್ತೆ ಪದವಿಯೂ
ಕಡಿಮೆ. ಕಡಿಮೆ ಪದವಿಯವರಿಗೆ ಶ್ರೇಷ್ಠ ಪದವಿಯನ್ನು ವಿನಾಶ ಮಾಡಿಕೊಂಡರೆಂದು ಹೇಳಲಾಗುತ್ತದೆ. ಹಾಗೆ
ನೋಡಿದರೆ ಎಲ್ಲದರ ವಿನಾಶವಾಗುತ್ತದೆ ಅದರೆ ಇದು ವಿಶೇಷವಾಗಿ ಪ್ರೀತಿ ಮತ್ತು ವಿಪರೀತದ ಮಾತಾಗಿದೆ.
ರಚಯಿತ ತಂದೆಯು ಒಬ್ಬರೇ ಆಗಿದ್ದಾರೆ, ಅವರಿಗೆ ಶಿವಪರಮಾತ್ಮಾಯನಮಃ ಎಂದು ಹೇಳುತ್ತಾರೆ,
ಶಿವಜಯಂತಿಯನ್ನೂ ಆಚರಿಸುತ್ತಾರೆ, ಶಂಕರ ಜಯಂತಿಯೆಂದು ಎಂದೂ ಕೇಳಿಲ್ಲ. ಪ್ರಜಾಪಿತ ಬ್ರಹ್ಮನ ಹೆಸರು
ಪ್ರಸಿದ್ಧವಾಗಿದೆ. ವಿಷ್ಣುವಿನ ಜಯಂತಿಯನ್ನು ಆಚರಿಸುವುದಿಲ್ಲ, ಕೃಷ್ಣಜಯಂತಿಯನ್ನಾಚರಿಸುತ್ತಾರೆ.
ಕೃಷ್ಣ ಮತ್ತು ವಿಷ್ಣುವಿನಲ್ಲಿ ಅಂತರವೇನಿದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಮನುಷ್ಯರದು
ವಿನಾಶಕಾಲೇ ವಿಪರೀತಬುದ್ಧಿಯಾಗಿದೆ, ಅಂದಾಗ ನಿಮ್ಮಲ್ಲಿಯೂ ಸಹ ಪ್ರೀತಿ ಮತ್ತು ವಿಪರೀತಬುದ್ಧಿಯವರು
ಇದ್ದಾರಲ್ಲವೆ. ತಂದೆಯು ತಿಳಿಸುತ್ತಾರೆ - ನಿಮ್ಮ ಈ ಆತ್ಮಿಕ ವ್ಯವಹಾರವು ಬಹಳ ಚೆನ್ನಾಗಿದೆ.
ಬೆಳಗ್ಗೆ ಮತ್ತು ಸಂಜೆ ಈ ಸೇವೆಯಲ್ಲಿ ತೊಡಗಿರಿ, ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಒಳ್ಳೆಯ
ಸಮಯವೆಂದು ಹೇಳುತ್ತಾರೆ. ಸತ್ಸಂಗ ಮೊದಲಾದುವುಗಳನ್ನೂ ಸಹ ಬೆಳಗ್ಗೆ ಮತ್ತು ಸಂಜೆಯಲ್ಲಿಯೇ
ಮಾಡುತ್ತಾರೆ. ರಾತ್ರಿಯಲ್ಲಿ ವಾಯುಮಂಡಲವು ಕೆಟ್ಟುಹೋಗಿರುತ್ತದೆ. ರಾತ್ರಿಯಲ್ಲಿ ಆತ್ಮವು ಸ್ವಯಂ
ಶಾಂತಿಯಲ್ಲಿ ಹೊರಟುಹೋಗುತ್ತದೆ ಅದಕ್ಕೆ ನಿದ್ರೆಯೆಂದು ಹೇಳಲಾಗುತ್ತದೆ ಮತ್ತು ಮುಂಜಾನೆ
ಜಾಗೃತಗೊಳ್ಳುತ್ತದೆ. ಪ್ರಭಾತದಲ್ಲಿ ರಾಮನ ಸ್ಮರಣೆ ಮಾಡುಮಾನವ ಎಂದು ಹೇಳುತ್ತಾರೆ. ಈಗ ತಂದೆಯು
ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ, ಯಾವಾಗ ಶಿವತಂದೆಯು ಶರೀರದಲ್ಲಿ
ಪ್ರವೇಶ ಮಾಡುವರೋ ಆಗಲೇ ನನ್ನನ್ನು ನೆನಪು ಮಾಡಿ ಅದರಿಂದ ವಿಕರ್ಮಗಳು ವಿನಾಶವಾಗುತ್ತದೆ ಎಂದು
ಹೇಳುತ್ತಾರೆ. ನಾವು ಎಷ್ಟು ತಂದೆಯನ್ನು ನೆನಪು ಮಾಡುತ್ತೇವೆ ಮತ್ತು ಆತ್ಮಿಕ ಸೇವೆ ಮಾಡುತ್ತೇವೆ
ಎಂಬುದನ್ನು ನೀವೂ ಸಹ ತಿಳಿದುಕೊಂಡಿದ್ದೀರಿ ಅಂದಾಗ ಎಲ್ಲರಿಗೆ ಇದೇ ಪರಿಚಯವನ್ನು ಕೊಡಬೇಕು -
ತಮ್ಮನ್ನು ಆತ್ಮನೆಂದು ತಿಳಿಯಿರಿ, ತಂದೆಯನ್ನು ನೆನಪು ಮಾಡಿ ಆಗ ತಮೋಪ್ರಧಾನರಿಂದ
ಸತೋಪ್ರಧಾನರಾಗಿಬಿಡುತ್ತೀರಿ, ಆತ್ಮದಲ್ಲಿರುವ ತುಕ್ಕು ಬಿಟ್ಟುಹೋಗುವುದು. ಪ್ರೀತಿಬುದ್ಧಿಯಲ್ಲಿಯೇ
ಪರ್ಸೆಂಟೇಜ್ ಇದೆ. ತಂದೆಯ ಜೊತೆ ಪ್ರೀತಿಯಿಲ್ಲವೆಂದರೆ ಅವಶ್ಯವಾಗಿ ತನ್ನ ದೇಹದಲ್ಲಿ ಪ್ರೀತಿಯಿದೆ
ಅಥವಾ ಮಿತ್ರ-ಸಂಬಂಧಿ ಮೊದಲಾದವರೊಂದಿಗೆ ಪ್ರೀತಿಯಿದೆಯೆಂದರ್ಥ. ತಂದೆಯೊಂದಿಗೆ ಪ್ರೀತಿಯಿದೆಯೆಂದರೆ
ಸೇವೆಯಲ್ಲಿ ತೊಡಗಿಬಿಡುತ್ತಾರೆ. ತಂದೆಯ ಜೊತೆ ಪ್ರೀತಿಯಿಲ್ಲವೆಂದರೆ ಸೇವೆಯನ್ನೂ ಮಾಡುವುದಿಲ್ಲ.
ತಂದೆ ಮತ್ತು ಆಸ್ತಿಯ ರಹಸ್ಯವನ್ನು ಅನ್ಯರಿಗೆ ತಿಳಿಸುವುದು ಬಹಳ ಸಹಜವಾಗಿದೆ. ಹೇ ಭಗವಂತ, ಹೇ
ಪರಮಾತ್ಮ ಎಂದು ಹೇಳಿ ನೆನಪು ಮಾಡುತ್ತಾರೆ ಆದರೆ ಅವರನ್ನು ಅರ್ಥಮಾಡಿಕೊಂಡಿಲ್ಲ. ತಂದೆಯು
ತಿಳಿಸಿದ್ದಾರೆ - ಪ್ರತಿಯೊಂದು ಚಿತ್ರದಲ್ಲಿ ಮೇಲೆ ಪರಮಪಿತ ತ್ರಿಮೂರ್ತಿ ಶಿವಭಗವಾನುವಾಚ ಎಂದು
ಬರೆಯಬೇಕಾಗಿದೆ. ಅದರಿಂದ ಯಾರು ಏನೂ ಮಾತನಾಡಲು ಸಾಧ್ಯವಾಗುವುದಿಲ್ಲ. ಈಗ ನೀವು ಮಕ್ಕಳು ತಮ್ಮ
ಸಸಿಯನ್ನು ನಾಟಿ ಮಾಡುತ್ತಿದ್ದೀರಿ, ಎಲ್ಲರಿಗೆ ಮಾರ್ಗವನ್ನು ತಿಳಿಸಿ ಅದರಿಂದ ಅವರು ಬಂದು ತಂದೆಯ
ಆಸ್ತಿಯನ್ನು ಪಡೆಯಲಿ ತಂದೆಯನ್ನೇ ಅರಿತುಕೊಂಡಿಲ್ಲ ಆದ್ದರಿಂದ ಪ್ರೀತಿಬುದ್ಧಿಯೂ ಇಲ್ಲ, ಪಾಪವು
ಹೆಚ್ಚುತ್ತಾ-ಹೆಚ್ಚುತ್ತಾ ಒಮ್ಮೆಲೇ ತಮೋಪ್ರಧಾನರಾಗಿಬಿಟ್ಟಿದ್ದಾರೆ. ಯಾರು ಬಹಳ ನೆನಪು ಮಾಡುವರೋ
ಅವರಿಗೆ ತಂದೆಯ ಜೊತೆ ಪ್ರೀತಿಯಿರುತ್ತದೆ. ಅವರದೇ ಪಾರಸಬುದ್ಧಿಯಾಗಿರುತ್ತದೆ. ಒಂದುವೇಳೆ ಬುದ್ಧಿಯು
ಬೇರೆ-ಬೇರೆಕಡೆ ಅಲೆಯುತ್ತಿದ್ದರೆ ತಮೋಪ್ರಧಾನವಾಗಿಯೇ ಇರುತ್ತಾರೆ. ಭಲೆ ಸನ್ಮುಖದಲ್ಲಿ
ಕುಳಿತಿದ್ದಾರೆ ಆದರೆ ಅವರನ್ನು ಪ್ರೀತಿಬುದ್ಧಿಯವರೆಂದು ಹೇಳಲಾಗುವುದಿಲ್ಲ ಏಕೆಂದರೆ ನೆನಪು
ಮಾಡುವುದೇ ಇಲ್ಲ. ಪ್ರೀತಿಬುದ್ಧಿಯ ಚಿಹ್ನೆಯಾಗಿದೆ - ನೆನಪು. ಅಂತಹವರು ಧಾರಣೆಯನ್ನೂ ಮಾಡುತ್ತಾರೆ,
ಅನ್ಯರಿಗೂ ಸಹ ತಂದೆಯನ್ನು ನೆನಪು ಮಾಡಿದರೆ ಪಾವನರಾಗುತ್ತೀರೆಂದು ದಯೆತೋರಿಸುತ್ತಾರೆ. ಈ
ಜ್ಞಾನವನ್ನು ಯಾರಿಗಾದರೂ ತಿಳಿಸುವುದು ಬಹಳ ಸುಲಭ. ತಂದೆಯು ಸ್ವರ್ಗದ ರಾಜ್ಯಭಾಗ್ಯದ ಆಸ್ತಿಯನ್ನು
ಮಕ್ಕಳಿಗೇ ಕೊಡುತ್ತಾರೆ. ಅವಶ್ಯವಾಗಿ ಶಿವತಂದೆಯು ಕಲ್ಪದ ಹಿಂದೆಯೂ ಸಹ ಬಂದಿದ್ದರು, ಆದ್ದರಿಂದಲೇ
ಶಿವಜಯಂತಿಯನ್ನಾಚರಿಸುತ್ತಾರಲ್ಲವೆ. ಕೃಷ್ಣ, ರಾಮ ಮೊದಲಾದವರೆಲ್ಲರೂ ಬಂದುಹೋಗಿದ್ದಾರೆ.
ಆದ್ದರಿಂದಲೇ ಆಚರಿಸುತ್ತಾರಲ್ಲವೆ. ಶಿವತಂದೆಯನ್ನೂ ಸಹ ನೆನಪು ಮಾಡುತ್ತಾರೆ ಏಕೆಂದರೆ ಅವರು ಬಂದು
ಮಕ್ಕಳಿಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ, ಹೊಸಬರು ಈ ಮಾತುಗಳನ್ನು ಅರಿತುಕೊಳ್ಳಲು
ಸಾಧ್ಯವಾಗುವುದಿಲ್ಲ. ಭಗವಂತನು ಹೇಗೆ ಬಂದು ಆಸ್ತಿಯನ್ನು ಕೊಡುತ್ತಾರೆ, ಇದನ್ನೂ ಸಹ
ತಿಳಿದುಕೊಂಡಿಲ್ಲ, ಸಂಪೂರ್ಣ ಕಲ್ಲುಬುದ್ಧಿಯವರಾಗಿದ್ದಾರೆ. ನೆನಪು ಮಾಡುವ ಬುದ್ಧಿಯೇ ಇಲ್ಲ. ಸ್ವಯಂ
ತಂದೆಯು ತಿಳಿಸುತ್ತಾರೆ - ನೀವು ಅರ್ಧಕಲ್ಪದ ಪ್ರಿಯತಮೆಯರಾಗಿದ್ದೀರಿ, ಈಗ ನಾನು ಬಂದಿದ್ದೇನೆ,
ಭಕ್ತಿಮಾರ್ಗದಲ್ಲಿ ನೀವು ಎಷ್ಟೊಂದು ಅಲೆದಾಡುತ್ತೀರಿ. ಆದರೆ ಭಗವಂತನು ಯಾರಿಗೂ ಸಿಗಲೇ ಇಲ್ಲ. ಈಗ
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಭಾರತದಲ್ಲಿಯೇ ಬಂದಿದ್ದರು ಮತ್ತು
ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಿದ್ದರು, ಕೃಷ್ಣನು ಈ ಮಾರ್ಗವನ್ನು ತಿಳಿಸುವುದಿಲ್ಲ.
ಭಗವಂತನೊಂದಿಗೆ ಪ್ರೀತಿಯು ಹೇಗೆ ಜೋಡಿಸಲ್ಪಡುತ್ತದೆ ಎಂಬುದನ್ನು ತಂದೆಯು ಬಂದು ಭಾರತವಾಸಿಗಳಿಗೇ
ತಿಳಿಸುತ್ತಾರೆ. ಬರುವುದೂ ಭಾರತದಲ್ಲಿಯೇ, ಶಿವಜಯಂತಿಯನ್ನು ಇಲ್ಲಿಯೇ ಆಚರಿಸುತ್ತಾರೆ. ನೀವು
ಮಕ್ಕಳಿಗೂ ತಿಳಿದಿದೆ - ಶ್ರೇಷ್ಠಾತಿಶ್ರೇಷ್ಠನು ಭಗವಂತನಾಗಿದ್ದಾರೆ, ಅವರ ಹೆಸರಾಗಿದೆ - ಶಿವ.
ಆದ್ದರಿಂದ ನೀವು ಕರೆಯುತ್ತೀರಿ - ಶಿವಜಯಂತಿಯು ವಜ್ರಸಮಾನ ಜಯಂತಿಯಾಗಿದೆ, ಉಳಿದೆಲ್ಲರದೂ ಕವಡೆಯ
ಸಮಾನ ಜಯಂತಿಯಾಗಿದೆ. ಹೀಗೆ ಬರೆಯುವುದರಿಂದ ನೋಡಿದವರಿಗೆ ಕೋಪ ಬಂದುಬಿಡುತ್ತದೆ ಆದ್ದರಿಂದ
ಪ್ರತಿಯೊಂದು ಚಿತ್ರದಲ್ಲಿ ಶಿವಭಗವಾನುವಾಚ ಎಂದು ಇದ್ದಾಗ ನೀವು ಸುರಕ್ಷಿತರಾಗಿರುತ್ತೀರಿ.
ಕೆಲಕೆಲವು ಮಕ್ಕಳು ಪೂರ್ಣ ಅರಿತುಕೊಂಡಿಲ್ಲವೆಂದರೆ ಬೇಜಾರಾಗಿಬಿಡುತ್ತಾರೆ. ಮಾಯೆಯ ಗ್ರಹಚಾರಿಯು
ಮೊದಲ ಯುದ್ಧವನ್ನು ಬುದ್ಧಿಯ ಮೇಲೆಯೇ ಮಾಡುತ್ತದೆ. ತಂದೆಯಿಂದ ಬುದ್ಧಿಯೋಗವನ್ನು ತೆಗೆಸಿಬಿಡುತ್ತದೆ.
ಇದರಿಂದ ಒಮ್ಮೆಲೆ ಮೇಲಿನಿಂದ ಕೆಳಗಿಳಿಯುತ್ತಾರೆ. ದೇಹಧಾರಿಗಳ ಜೊತೆ ಬುದ್ಧಿಯೋಗವು
ಸಿಲುಕಿಕೊಳ್ಳುತ್ತದೆಯೆಂದರೆ ತಂದೆಯಿಂದ ವಿಪರೀತರಾದರಲ್ಲವೆ. ನೀವು ಒಬ್ಬ ವಿಚಿತ್ರ ವಿದೇಹಿ
ತಂದೆಯೊಂದಿಗೆ ಪ್ರೀತಿಯನ್ನಿಡಬೇಕಾಗಿದೆ, ದೇಹಧಾರಿಗಳೊಂದಿಗೆ ಪ್ರೀತಿಯನ್ನಿಡುವುದು
ನಷ್ಟಕಾರಕವಾಗಿದೆ. ಬುದ್ಧಿಯೋಗವು ತಂದೆಯಿಂದ ತುಂಡರಿಸುತ್ತದೆಯೆಂದರೆ ಒಮ್ಮೆಲೆ ಕೆಳಗೆ ಬೀಳುತ್ತಾರೆ.
ಭಲೆ ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ ಆದರೂ ಸಹ ತಿಳಿಸುವುದು ಒಳ್ಳೆಯದಲ್ಲವೆ. ವಿಪರೀತ
ಬುದ್ಧಿಯವರಿಂದ ಹೇಗೆ ನಾಮ-ರೂಪದಲ್ಲಿ ಸಿಕ್ಕಿಕೊಳ್ಳುವ ದುರ್ಗಂಧವು ಬರುತ್ತದೆ, ಇಲ್ಲವಾಗಿದ್ದರೆ
ಸೇವೆಯಲ್ಲಿ ಎದ್ದುನಿಲ್ಲುತ್ತಿದ್ದರು. ತಂದೆಯು ನೆನ್ನೆಯೂ ಸಹ ಬಹಳ ಚೆನ್ನಾಗಿ ತಿಳಿಸಿದ್ದರು -
ಮುಖ್ಯಮಾತಾಗಿದೆ, ಗೀತೆಯ ಭಗವಂತ ಯಾರು? ಇದರಲ್ಲಿಯೇ ನಿಮ್ಮ ವಿಜಯವಾಗಬೇಕಾಗಿದೆ. ನೀವು ಕೇಳುತ್ತೀರಿ
- ಗೀತೆಯ ಭಗವಂತ ಶಿವನೋ ಅಥವಾ ಶ್ರೀಕೃಷ್ಣನೋ? ಸುಖ ನೀಡುವವರು ಯಾರು? ಸುಖ ನೀಡುವವರಂತೂ
ಶಿವನಾಗಿದ್ದಾರೆ, ಅವರಿಗೆ ಮತವನ್ನು ನೀಡಬೇಕು. ಅವರದೇ ಮಹಿಮೆಯಿದೆ. ಈಗ ಮತ (ಓಟು) ನೀಡಿ ಗೀತೆಯ
ಭಗವಂತ ಯಾರು? ಶಿವನಿಗೆ ಯಾರು ಓಟು (ಮತ) ಕೊಡುವರೋ ಅವರಿಗೆ ಪ್ರೀತಿಬುದ್ಧಿಯವರೆಂದು ಹೇಳಲಾಗುತ್ತದೆ.
ಇದು ಅತಿದೊಡ್ಡ ಚುನಾವಣೆಯಾಗಿದೆ. ಯಾರು ಇಡೀ ದಿನ ವಿಚಾರಸಾಗರ ಮಂಥನ ಮಾಡುತ್ತಿರುವರೋ ಅವರ
ಬುದ್ಧಿಯಲ್ಲಿಯೇ ಇವೆಲ್ಲಾ ಯುಕ್ತಿಗಳು ಹೊಳೆಯುತ್ತವೆ.
ಕೆಲವು ಮಕ್ಕಳು
ನಡೆಯುತ್ತಾ-ನಡೆಯುತ್ತಾ ಮುನಿಸಿಕೊಳ್ಳುತ್ತಾರೆ. ಈಗೀಗ ನೋಡಿದರೆ ಪ್ರೀತಿಯಿರುತ್ತದೆ ಮತ್ತು ಈಗೀಗ
ಆ ಪ್ರೀತಿಯು ಕತ್ತರಿಸಿ ಹೋಗುತ್ತದೆ, ಮುನಿಸಿಕೊಳ್ಳುತ್ತಾರೆ. ಯಾವುದಾದರೂ ಮಾತಿನಿಂದ
ಮುನಿಸಿಕೊಂಡರೆ ಅವರು ಮತ್ತೆ ನೆನಪನ್ನೂ ಮಾಡುವುದಿಲ್ಲ, ಪತ್ರವನ್ನೂ ಬರೆಯುವುದಿಲ್ಲ ಅಂದರೆ
ಪ್ರೀತಿಯಿಲ್ಲವೆಂದರ್ಥ. ಇದಕ್ಕೆ ತಂದೆಯೂ ಸಹ 6-8 ತಿಂಗಳವರೆಗೆ ಪತ್ರವನ್ನು ಬರೆಯುವುದಿಲ್ಲ.
ತಂದೆಯು ಕಾಲರಕಾಲನಾಗಿದ್ದಾನಲ್ಲವೆ. ಜೊತೆಯಲ್ಲಿ ಧರ್ಮರಾಜನೂ ಆಗಿದ್ದಾರೆ. ತಂದೆಯನ್ನು ನೆನಪು
ಮಾಡುವುದಕ್ಕೆ ಬಿಡುವೇ ಇಲ್ಲವೆಂದರೆ ನೀವೇನು ಪದವಿಯನ್ನು ಪಡೆಯುತ್ತೀರಿ? ಪದವಿಯು
ಭ್ರಷ್ಟವಾಗಿಬಿಡುತ್ತದೆ. ಆರಂಭದಲ್ಲಿ ತಂದೆಯು ಬಹಳ ಯುಕ್ತಿಯಿಂದ ಪದವಿಗಳನ್ನು ತಿಳಿಸುತ್ತಿದ್ದರು.
ಈಗಂತೂ ಆ ಮಾತಿಲ್ಲ. ಈಗ ಪುನಃ ಮಾಲೆಯಾಗಲಿದೆ. ಸೇವಾಧಾರಿ ಮಕ್ಕಳನ್ನು ತಂದೆಯೂ ಮಹಿಮೆ
ಮಾಡುತ್ತಿರುತ್ತಾರೆ. ಯಾರು ರಾಜರಾಗುವರೋ ಅವರು ನಮ್ಮ ಜೊತೆಗಾರರೂ ಸಹ ಆಗಲಿ, ಇವರೂ ನಮ್ಮ ಹಾಗೆ
ರಾಜ್ಯ ಮಾಡಲಿ ಎಂದು ಹೇಳುತ್ತಾರೆ. ರಾಜನಿಗೆ ಅನ್ನದಾತ, ಮಾತಾಪಿತನೆಂದು ಹೇಳುತ್ತಾರೆ. ಈಗ
ತಾಯಿಯಂತೂ ಜಗದಂಬೆಯಾಗಿದ್ದಾರೆ, ಅವರ ಮೂಲಕ ನಿಮಗೆ ಅಪಾರ ಸುಖವು ಸಿಗುತ್ತದೆ. ನೀವು
ಪುರುಷಾರ್ಥದಿಂದ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ದಿನ-ಪ್ರತಿದಿನ ಕಳೆಯುತ್ತಾಹೋದಂತೆ ನೀವು
ಮಕ್ಕಳಿಗೆ ಯಾರ್ಯಾರು ಏನಾಗುವರು ಎಂಬುದೂ ತಿಳಿಯುತ್ತಾ ಹೋಗುತ್ತದೆ. ಸೇವೆ ಮಾಡುವವರನ್ನು ತಂದೆಯೂ
ಸಹ ನೆನಪು ಮಾಡುತ್ತಾರೆ. ಸೇವೆಯನ್ನು ಮಾಡಲಿಲ್ಲವೆಂದರೆ ತಂದೆಯು ಏಕೆ ನೆನಪು ಮಾಡುತ್ತಾರೆ? ತಂದೆಯು
ಯಾರು ಪ್ರೀತಿಬುದ್ಧಿಯವರಿರುತ್ತಾರೆಯೋ ಅಂತಹ ಮಕ್ಕಳನ್ನೇ ನೆನಪು ಮಾಡುತ್ತಾರೆ.
ಇದನ್ನೂ ಸಹ ತಂದೆಯು
ತಿಳಿಸಿದ್ದಾರೆ – ಯಾರಾದರೂ ಕೊಟ್ಟಿರುವ ವಸ್ತುಗಳನ್ನು ನೀವು ತೊಟ್ಟುಕೊಳ್ಳುತ್ತೀರೆಂದರೆ ಅವರ
ನೆನಪು ಅವಶ್ಯವಾಗಿ ಬರುತ್ತದೆ ಆದ್ದರಿಂದ ಶಿವತಂದೆಯ ಭಂಡಾರದಿಂದ ತೆಗೆದುಕೊಳ್ಳುತ್ತೀರೆಂದರೆ
ಶಿವತಂದೆಯ ನೆನಪೇ ಬರುವುದು. ಈ ಬಾಬಾರವರು ತಮ್ಮ ಅನುಭವವನ್ನು ತಿಳಿಸುತ್ತಾರೆ - ಕೊಟ್ಟಿರುವವರ
ನೆನಪಂತೂ ಅವಶ್ಯವಾಗಿ ಬರುತ್ತದೆ ಆದ್ದರಿಂದ ಯಾರದೇ ಕೊಟ್ಟಿರುವ ವಸ್ತುವನ್ನು ತಮ್ಮ ಬಳಿ
ಇಟ್ಟುಕೊಳ್ಳಬಾರದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ವಿದೇಹಿ,
ವಿಚಿತ್ರ ತಂದೆಯೊಂದಿಗೆ ಹೃದಯದ ಸತ್ಯಪ್ರೀತಿಯನ್ನಿಡಬೇಕಾಗಿದೆ. ಸದಾ ಗಮನವಿರಲಿ - ಮಾಯೆಯ
ಗ್ರಹಚಾರವು ಎಂದೂ ಬುದ್ಧಿಯ ಮೇಲೆ ಯುದ್ಧ ಮಾಡದಿರಲಿ.
2. ಎಂದೂ ಸಹ
ತಂದೆಯೊಂದಿಗೆ ಮುನಿಸಿಕೊಳ್ಳಬಾರದು. ಸೇವಾಧಾರಿಗಳಾಗಿ ತಮ್ಮ ಭವಿಷ್ಯವನ್ನು ಶ್ರೇಷ್ಠ
ಮಾಡಿಕೊಳ್ಳಬೇಕಾಗಿದೆ. ಅನ್ಯರು ಕೊಟ್ಟಿರುವ ವಸ್ತುವನ್ನು ತಮ್ಮ ಬಳಿ ಇಟ್ಟುಕೊಳ್ಳಬಾರದು.
ವರದಾನ:
ಶುದ್ಧಿಯ ವಿಧಿಯ
ಮೂಲಕ ಕೋಟೆಯನ್ನು ಶಕ್ತಿಶಾಲಿ ಮಾಡುವಂತಹ ಸದಾ ವಿಜಯಿ ಮತ್ತು ನಿರ್ವಿಘ್ನ ಭವ
ಈ ಕೋಟೆಯ ಪ್ರತಿ ಆತ್ಮ
ಸದಾ ವಿಜಯಿ ಮತ್ತು ನಿರ್ವಿಘ್ನರಾಗಿರಬೇಕು ಇದಕ್ಕಾಗಿ ವಿಶೇಷ ಸಮಯದಲ್ಲಿ ನಾಲ್ಕೂಕಡೆ ಒಟ್ಟಿಗೆ
ಯೋಗದ ಪ್ರೋಗ್ರಾಮ್ ಇಡಿ. ನಂತರ ಯಾರೂ ಸಹ ಈ ಹಗ್ಗವನ್ನು ಕತ್ತರಿಸಲು ಸಾಧ್ಯವಿಲ್ಲ ಏಕೆಂದರೆ ಎಷ್ಟು
ಸೇವೆ ವೃದ್ಧಿಯಾಗುತ್ತಾ ಹೋಗುತ್ತದೆ ಅಷ್ಟೂ ಮಾಯೆ ತನ್ನವರನ್ನಾಗಿ ಮಾಡಿಕೊಳ್ಳಲು ಪ್ರಯತ್ನವನ್ನೂ
ಸಹ ಮಾಡುತ್ತದೆ ಆದ್ದರಿಂದ ಯಾವರೀತಿ ಯವುದೇ ಕಾರ್ಯ ಪ್ರಾರಂಭ ಮಾಡುವ ಮೊದಲು ಸ್ಥಾನವನ್ನು ಶುದ್ಧ್ದಿ
ಮಾಡುವ ವಿಧಿಯನ್ನು ಅನುಸರಿಸುವಿರಿ. ಅದೇ ರೀತಿ ಸಂಗಟಿತ ರೂಪದಲ್ಲಿ ನೀವು ಸರ್ವ ಶ್ರೇಷ್ಠ
ಆತ್ಮರುಗಳ ಒಂದೇ ಶುದ್ಧ ಸಂಕಲ್ಪವಾಗಿರಲಿ-ವಿಜಯಿ, ಇದಾಗಿದೆ ಶುದ್ದಿಯ ವಿಧಿ-ಯಾವುದರಿಂದ ಕೋಟೆ
ಶಕ್ತಿಶಾಲಿಯಾಗಿಬಿಡುತ್ತದೆ.
ಸ್ಲೋಗನ್:
ಯುಕ್ತಿಯುಕ್ತ
ಅಥವಾ ಯಥಾರ್ಥ ಸೇವೆಯ ಪ್ರತ್ಯಕ್ಷ ಫಲವಾಗಿದೆ ಖುಷಿ.
ಅವ್ಯಕ್ತ ಸೂಚನೆ; ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ಬ್ರಾಹ್ಮಣ ಜೀವನದಲ್ಲಿ
ಮೊದಲ ನಂಬರ್ನ ಕಲ್ಚರ್ (ಸಂಸ್ಕೃತಿಯನ್ನು) ಆಗಿದೆ “ಸತ್ಯತೆ ಹಾಗೂ ಸಭ್ಯತೆ”. ಅಂದ ಮೇಲೆ
ಪ್ರತಿಯೊಬ್ಬರ ಚಹರೆ ಹಾಗೂ ಚಲನೆಯಲ್ಲಿ ಈ ಬ್ರಾಹ್ಮಣ ಕಲ್ಚರ್(ಸಂಸ್ಕೃತಿಯನ್ನು) ಪ್ರತ್ಯಕ್ಷವಾಗಲಿ.
ಪ್ರತಿಯೊಬ್ಬ ಬ್ರಾಹ್ಮಣ ಮುಗುಳ್ನಗುತ್ತಾ ಪ್ರತಿಯೊಬ್ಬರ ಸಂಪರ್ಕದಲ್ಲಿ ಬರಲಿ. ಯಾರೇ ಹೇಗೆ ಇರಲಿ,
ಆದರೆ ನೀವು ತಮ್ಮ ಈ ಕಲ್ಚರ್ ಅನ್ನು (ಸಂಸ್ಕೃತಿಯನ್ನು) ಎಂದು ಸಹ ಬಿಡಬೇಡಿ ಆಗ ಸಹಜ ಪರಮಾತ್ಮ
ಪ್ರತ್ಯಕ್ಷತೆಯ ನಿಮಿತ್ತ ರಾಗುವಿರಿ.