01.03.26 Avyakt Bapdada
Kannada
Murli 09.03.2009 Om Shanti Madhuban
“ಪರಮಾತ್ಮನ ಸಂಗದ ರಂಗಿನ
ಮತ್ತು ಕಂಬೈಂಡ್ ಸ್ವರೂಪದ ಯಥಾರ್ಥ ಹೋಲಿಯನ್ನು ಆಚರಿಸಿ”
ಈ ದಿನ ಪವಿತ್ರ (ಹೋಲಿಯಸ್ಟ್)
ತಂದೆ ತನ್ನ ಪವಿತ್ರ (ಹೋಲಿ) ಮಕ್ಕಳ ಜೊತೆ ಹೋಲಿಯನ್ನು ಆಚರಣೆ ಮಾಡಲು ಬಂದಿದ್ದಾರೆ. ಎಲ್ಲಾ ಮಕ್ಕಳು
ಹೋಲಿ ಮಕ್ಕಳಾಗಿದ್ದಾರೆ. ತಾವೆಲ್ಲರೂ ಸಹ ಹೋಲಿಯನ್ನು ಆಚರಣೆ ಮಾಡಲು ಬಂದಿದ್ದೀರಿ. ಯೋಚನೆ ಮಾಡಿ,
ತಾವು ಪವಿತ್ರ ಆತ್ಮಗಳ ಮೇಲೆ ಎಂತಹ ಬಣ್ಣ ಹಾಕಲಾಗಿದೆ ಯಾವುದರಿಂದ ಹೋಲಿ (ಪವಿತ್ರ) ಆಗಿ
ಬಿಟ್ಟಿದ್ದೀರಿ! ಬಣ್ಣವಂತೂ ಅನೇಕ ಪ್ರಕಾರವಾಗಿರುತ್ತದೆ ಆದರೆ ತಮ್ಮ ಮೇಲೆ ಎಂತಹ ಬಣ್ಣ ಹಾಕಲಾಗಿದೆ?
ಎಲ್ಲದಕ್ಕಿಂತ ಶ್ರೇಷ್ಠ ಬಣ್ಣ ಯಾವುದು, ಯಾವುದರಿಂದ ತಾವು ಪವಿತ್ರರಾಗಿ ಬಿಟ್ಟಿದ್ದೀರಿ?
ಎಲ್ಲದಕ್ಕಿಂತ ಅತಿ ದೊಡ್ಡ ಬಣ್ಣ ಪರಮಾತ್ಮನ ಸಂಗದ ಬಣ್ಣವಾಗಿದೆ. ಅಂದಾಗ ಪರಮಾತ್ಮನ ಸಂಗದ
ಬಣ್ಣದಿಂದ ಸಹಜವಾಗಿ ಪವಿತ್ರ (ಹೋಲಿ) ಆಗಿ ಬಿಟ್ಟಿದ್ದೀರಿ ಏಕೆಂದರೆ ಪರಮಾತ್ಮನ ಸಂಗ ಅವಿನಾಶಿ
ಸಂಗದ ಬಣ್ಣವಾಗಿದೆ ಮತ್ತು ಬಣ್ಣ ಅಂತೂ ಸ್ವಲ್ಪ ಸಮಯಕ್ಕಾಗಿ ಇರುತ್ತದೆ ಆದರೆ ಪರಮಾತ್ಮನ ಸಂಗದ
ಬಣ್ಣದಿಂದ ಸಹಜವಾಗಿಯೇ ಹೋಲಿ ಅರ್ಥಾತ್ ಪವಿತ್ರರಾಗಿ ಬಿಟ್ಟಿದ್ದೀರಿ. ಆತ್ಮದ ಬಣ್ಣ
ಅಪವಿತ್ರತೆಯಿಂದ ಪವಿತ್ರ ಆಗಿ ಬಿಟ್ಟಿದೆ ಏಕೆಂದರೆ ತಾವು ಎಲ್ಲರೂ ಪರಮಾತ್ಮನನ್ನು ತಮ್ಮ
ಜೊತೆಗಾರರನ್ನಾಗಿ ಮಾಡಿಕೊಂಡಿದ್ದೀರಿ, ಜೊತೆ ಮಾಡಿಕೊಂಡಿದ್ದೀರಿ ಆದ್ದರಿಂದ ಕಂಬೈಂಡ್ ಆಗಿ
ಬಿಟ್ಟಿದ್ದೀರಿ. ಈ ಕಂಬೈಂಡ್ ಸ್ವರೂಪ ಪ್ರಿಯ ಅನಿಸುತ್ತದೆಯಲ್ಲವೇ! ಈ ಕಂಬೈಂಡ್ ರೂಪ ಎಂದೂ ಬೇರೆ
ಆಗಲು ಸಾಧ್ಯವಿಲ್ಲ. ಅನುಭವ ಇದೆಯಲ್ಲವೇ. ಸದಾ ಕಂಬೈಂಡ್ ಆಗಿರುತ್ತೀರಲ್ಲವೇ! ಒಂಟಿಯಾಗುವುದಿಲ್ಲ.
ಮಾಯೆ ಒಂಟಿಯನ್ನಾಗಿ ಮಾಡಲು ಪ್ರಯತ್ನ ಮಾಡುತ್ತದೆ, ಆದರೆ ಯಾರು ಸದಾ ಕಂಬೈಂಡ್ ಆಗಿರುತ್ತಾರೆ ಅವರು
ಎಂದೂ ಬೇರೆ ಆಗಲು ಸಾಧ್ಯವಿಲ್ಲ ಏಕೆಂದರೆ ಮಾಯೆ ತಂದೆಯಿಂದ ಬಿಡಿಸಿ ನಂತರ ಹಳೆಯ ಸಂಸ್ಕಾರವನ್ನು
ಇಮರ್ಜ್ ಮಾಡುತ್ತದೆ ಮತ್ತು ಹಳೆಯ ಸಂಸ್ಕಾರ ಸಮಾವೇಶ (ಇಮರ್ಜ್) ಆದಾಗ ಶುದ್ಧ ಸಂಸ್ಕಾರ ಇಲ್ಲದ ಹಾಗೆ
(ಮರ್ಜ್) ಆಗಿ ಬಿಡುತ್ತದೆ. ಹುಡುಗಾಟಿಕೆ ಹಾಗೂ ಆಲಸ್ಯ ಹಳೆಯ ಸಂಸ್ಕಾರ ಆಗಿದೆ, ಇದು ಭಿನ್ನ-ಭಿನ್ನ
ರೂಪದಲ್ಲಿ ಇಮರ್ಜ್ ಆಗುವುದರಿಂದ ಕಂಬೈಂಡ್ ರೂಪ ಬೇರೆ ಆಗಿ ಬಿಡುತ್ತದೆ. ಅಂದಾಗ ಪ್ರತಿಯೊಬ್ಬರು ಸದಾ
ಕಂಬೈಂಡ್ ಆಗಿರುತ್ತೇನೆಯೇ ಅಥವಾ ಕೆಲವೊಮ್ಮೆ ಒಂಟಿಯಾಗಿಯೂ ಇರುತ್ತೇನೆಯೇ ಎಂದು ಪರಿಶೀಲನೆ
ಮಾಡಿಕೊಳ್ಳಿ. ಮಾಯೆಯ ಅನೇಕ ಸ್ವರೂಪಗಳನ್ನಂತೂ ತಿಳಿದುಕೊಂಡು ಬಿಟ್ಟಿದ್ದೀರಲ್ಲವೇ! ಮಾಯೆ
ಚತುರತೆಯಿಂದ ತನ್ನ ಬಣ್ಣವನ್ನು ಹಾಕಿ ಬಿಡುತ್ತದೆ. ಕಂಬೈಂಡ್ ರೂಪದಿಂದ ಬೇರೆ ಆಗುವುದು ಅರ್ಥಾತ್
ಮಾಯೆಯ ಬಣ್ಣವನ್ನು ಹಾಕಿಕೊಳ್ಳುವುದು. ಈ ಹುಡುಗಾಟಿಕೆ ಹಾಗೂ ಆಲಸ್ಯ ಬಹಳ ಭಿನ್ನ-ಭಿನ್ನ ರೂಪದಲ್ಲಿ
ಬರುತ್ತದೆ. ಅದನ್ನು ಗುರುತಿಸುವುದಕ್ಕಾಗಿ ಮಾಯೆಯು ತನ್ನ ಕಡೆ ಆಕರ್ಷಣೆ ಮಾಡಿ ಬಿಡುತ್ತದೆ, ಈ
ಹುಡುಗಾಟಿಕೆ ಹಾಗೂ ಆಲಸ್ಯ ರಾವಣನ ಖಜಾನೆ ಆಗಿದೆ, ತಂದೆಯ ಖಜಾನೆ ಅಲ್ಲ, ಮತ್ತೆ ಮಕ್ಕಳೂ ಸಹ ರಾವಣನ
ಖಜಾನೆಯನ್ನು ಬಹಳ ನಶೆಯಿಂದ ನಾನು ಬಯಸುವುದಿಲ್ಲ ಆದರೆ ನನ್ನ ಸಂಸ್ಕಾರ ಎಂದು ಹೇಳಿ ಬಿಡುತ್ತಾರೆ.
ಸಂಸ್ಕಾರ ನನ್ನದು ಎಂದು ಹೇಳಲು ತೊಡಗುತ್ತಾರೆ. ಇದು ಪರಮಾತ್ಮನ ಖಜಾನೆ ಆಗಿದೆಯೇ? ಅದನ್ನು ನನ್ನ
ಸಂಸ್ಕಾರ ಎಂದು ಹೇಳುವುದು! ಯೋಚನೆ ಮಾಡಿ, ಸರಿಯೇನು? ನನ್ನದು ಮಾಡಿಕೊಂಡಿ ಬಿಡುವುದು, ಇದು ಮಾಯೆಯ
ಚತುರತೆ ಆಗಿದೆ. ತಂದೆಯ ಖಜಾನೆ ಪ್ರಿಯವಾಗಿದೆಯೋ ಅಥವಾ ಮಾಯೆಯ ಖಜಾನೆ ಪ್ರಿಯವಾಗಿದೆಯೋ? ಸಹಜವಾಗಿ
ಮಕ್ಕಳು ತಾನು ತಪ್ಪಿಸಿಕೊಳ್ಳಲು ನನ್ನ ಸಂಸ್ಕಾರ, ಬಯಸುವುದಿಲ್ಲ ಎಂದು ಹೇಳಿ ಬಿಡುತ್ತಾರೆ.
ಅಂದಮೇಲೆ ಯೋಚನೆ ಮಾಡಿ ಇದು ನನ್ನದೇನು! ರಾವಣನ ಖಜಾನೆಯನ್ನು ತನ್ನದನ್ನಾಗಿ ಮಾಡಿಕೊಳ್ಳುವುದರಿಂದ
ನಿಧಾನಕ್ಕೆ ಶುಭ ಸಂಸ್ಕಾರ ಏನಿದೆ ಅದು ಸಮಾಪ್ತಿ ಆಗಿ ಬಿಡುತ್ತದೆ ಎಂದು ತಂದೆ ಹೇಳುತ್ತಾರೆ.
ಪರಮಾತ್ಮನ ಸಂಗದ ಬಣ್ಣ ಕಡಿಮೆ ಆಗಿ ಬಿಡುತ್ತದೆ ಮತ್ತು ಮಾಯೆಯ ಬಣ್ಣ ಇಮರ್ಜ್ ಆಗಿ ಬಿಡುತ್ತದೆ.
ಹಾಗಾದರೆ ನಡೆಯುತ್ತಾ ನಡೆಯುತ್ತಾ ಯಾವ ಬಣ್ಣದ ಪ್ರಭಾವ ಏರಿದೆ? ಎಂದು ತಮ್ಮನ್ನು ತಾವೇ ಪರಿಶೀಲನೆ
ಮಾಡಿಕೊಳ್ಳಬೇಕು. ಮನುಷ್ಯರೂ ಸಹ ಹೋಲಿ ಹಬ್ಬಕ್ಕೆ ಏನು ಮಾಡುತ್ತಾರೆ? ಮೊದಲು ಕೆಟ್ಟದ್ದನ್ನು
ಸುಡುತ್ತಾರೆ, ನಂತರ ಬಣ್ಣ ಹಾಕಿಕೊಳ್ಳುತ್ತಾ ಆಚರಣೆ ಮಾಡುತ್ತಾರೆ. ಅಂದಾಗ ತಮ್ಮ ಮೇಲೆ
ಬಾಪ್ದಾದಾರವರು ಸಂಗದ ಬಣ್ಣವಂತೂ ಹಾಕಿದ್ದಾರೆ ಆದರೆ ಜೊತೆಯಲ್ಲಿ ಜ್ಞಾನದ ಬಣ್ಣ, ಶಕ್ತಿಗಳ ಬಣ್ಣ,
ಗುಣಗಳ ಬಣ್ಣವನ್ನು ಅವರು ಹಾಕುತ್ತಿರುತ್ತಾರೆ.
ಎಲ್ಲರ ಮೇಲೆ ಈ ಆತ್ಮಿಕ
ಬಣ್ಣದ ಪ್ರಭಾವ ಏರಿದೆಯಲ್ಲವೇ! ಏರಿದೆಯೇ? ಕೈ ಎತ್ತಿ. ಆತ್ಮಿಕ ಬಣ್ಣ ಏರಿದೆಯಲ್ಲವೆ,
ಇಳಿಸಿಕೊಳ್ಳುವವರು ಅಲ್ಲ ತಾನೇ! ಯಾರ ಮೇಲೆ ಆತ್ಮಿಕ ಬಣ್ಣದ ಪ್ರಭಾವ ಏರಿದೆ, ಅವಿನಾಶಿ ಬಣ್ಣ ಏರಿದೆ,
ಅವರ ಮೇಲೆ ಬೇರೆ ಯಾವುದೇ ಬಣ್ಣದ ಪ್ರಭಾವ ಆಗಲು ಸಾಧ್ಯವಿಲ್ಲ. ಈ ಬಣ್ಣದಿಂದ ಎಷ್ಟು ಪವಿತ್ರ (ಹೋಲಿ)
ಆಗಿ ಬಿಟ್ಟಿದ್ದೀರಿ? ಪೂರ್ತಿ ಕಲ್ಪದಲ್ಲಿ ತಮ್ಮ ಹಾಗೆ ಪವಿತ್ರ (ಹೋಲಿ) ಆಗಲು ಸಾಧ್ಯವಾಗದಷ್ಟು
ಹೋಲಿ ಆಗಿ ಬಿಟ್ಟಿದ್ದೀರಿ. ತಮ್ಮ ಪವಿತ್ರತೆ ಪ್ರಭುವಿನ ಸಂಗದ ಬಣ್ಣವಾಗಿದೆ, ಪರಮಾತ್ಮನ ಜೊತೆ
ಕಂಬೈಂಡ್ ಆಗಿರುವ ಅನುಭವ ಎಲ್ಲದಕ್ಕಿಂತ ಭಿನ್ನ ಹಾಗೂ ಪ್ರಿಯವಾಗಿದೆ. ಮತ್ತೆ ಯಾರೆಲ್ಲಾ
ಪವಿತ್ರರಾಗುತ್ತಾರೆ, ಅವರ ಶರೀರ ಪವಿತ್ರ ಆಗುವುದಿಲ್ಲ, ಆತ್ಮ ಪವಿತ್ರ ಆಗುತ್ತದೆ ಆದರೆ ತಾವು ಈ
ರೀತಿ ಪವಿತ್ರರಾಗುತ್ತೀರಿ ಯಾವುದರಿಂದ ತಮ್ಮ ಶರೀರ ಹಾಗೂ ಆತ್ಮ ಪವಿತ್ರವಾಗಿರುತ್ತದೆ. ಮತ್ತು
ಪವಿತ್ರತೆಗೆ ಸುಖ, ಶಾಂತಿ, ಪ್ರೇಮ, ಆನಂದದ ಜನನಿ ಎಂದು ಹೇಳಲಾಗುತ್ತದೆ. ಎಲ್ಲಿ ಪವಿತ್ರತೆ
ಇರುತ್ತದೆ ಅಲ್ಲಿ ಸುಖ-ಶಾಂತಿ ಜೊತೆಯಲ್ಲಿ ಇದ್ದೇ ಇರುತ್ತದೆ ಏಕೆಂದರೆ ಎಲ್ಲಿ ಜನನಿ (ತಾಯಿ)
ಇರುತ್ತಾರೋ ಅಲ್ಲಿ ಮಕ್ಕಳು ಇರುತ್ತಾರೆ ಏಕೆಂದರೆ ತಂದೆ ಬಂದು ತಮ್ಮನ್ನು ಈ ರೀತಿ ಪವಿತ್ರರನ್ನಾಗಿ
(ಹೋಲಿ) ಮಾಡುತ್ತಾರೆ ಯಾವುದರಿಂದ ತಮ್ಮ ಜಡ ಚಿತ್ರಗಳು ಕಲಿಯುಗದ ಕೊನೆಯಲ್ಲೂ ಸಹ ತಾವು ತಮ್ಮ
ಚಿತ್ರಗಳನ್ನು ನೋಡುತ್ತೀರಿ ಎಷ್ಟು ವಿಧಿ ಪೂರ್ವಕವಾಗಿ ಆ ಚಿತ್ರಗಳಿಗೆ ಪೂಜೆ ಮಾಡಲಾಗುತ್ತದೆ, ಇದು
ಪವಿತ್ರತೆಯ ವಿಶೇಷತೆಯಾಗಿದೆ ಮತ್ತು ಎಷ್ಟೇ ಮಹಾನ್ ಆತ್ಮಗಳಾಗಲಿ, ಧರ್ಮಾತ್ಮರು ಪವಿತ್ರರಾಗಲಿ ಆದರೆ
ಯಾರದೂ ಮಂದಿರ ಆಗುವುದಿಲ್ಲ. ಈ ರೀತಿ ವಿಧಿ ಪೂರ್ವಕವಾಗಿ ಯಾರಿಗೂ ಪೂಜೆ ಆಗುವುದಿಲ್ಲ ಮತ್ತು ಕೊನೆ
ಜನ್ಮದವರೆಗೆ ತಮ್ಮ ಚಿತ್ರಗಳು ಆಶೀರ್ವಾದ ಕೊಡುತ್ತಿರುತ್ತವೆ. ಸ್ವಲ್ಪ ಸಮಯದ ಸುಖ-ಶಾಂತಿಯನ್ನು
ಅನುಭವ ಮಾಡಿಸುತ್ತದೆ. ಅಂದಾಗ ತಮ್ಮ ಹೋಲಿ ಹಾಗೂ ಪ್ರಪಂಚದವರ ಹೋಲಿಗೆ ಎಷ್ಟು ಅಂತರ ಇದೆ! ಭಲೆ
ಮನೋರಂಜನೆಗಾಗಿ ತಾವೂ ಸಹ ಸ್ವಲ್ಪ ಆಚರಣೆ ಮಾಡುತ್ತೀರಿ, ಆದರೆ ಪರಮಾತ್ಮನ ಸಂಗದ ಬಣ್ಣ ಹಾಗೂ
ಕಂಬೈಂಡ್ ಸ್ವರೂಪದ ಯಥಾರ್ಥ ಹೋಲಿಯನ್ನು ತಾವು ಆಚರಣೆ ಮಾಡುತ್ತೀರಿ. ಹೋಲಿಯನ್ನು ಮನುಷ್ಯರೂ ಸಹ
ಭಿನ್ನ-ಭಿನ್ನ ರೂಪದಲ್ಲಿ ಆಚರಣೆ ಮಾಡುತ್ತಾರೆ, ಹೇಗೆ ತಮಗೆ ಗೊತ್ತಿದೆ ಹೋಲಿ ಶಬ್ದದ ರಹಸ್ಯವೂ ಸಹ
ಇದೆ, ಯಾವುದನ್ನು ತಾವೇ ತಿಳಿದುಕೊಂಡಿದ್ದೀರಿ, ತಾವೇ ಆಚರಣೆ ಮಾಡುತ್ತೀರಿ. ಹೋಲಿಯ ಅರ್ಥವೇ ಕಳೆದು
ಹೋಗಿದೆ (ಹೋಲಿ). ಕಳೆದು ಹೋಗಿರುವುದು ಕಳೆದು ಹೋಗಿದೆ. ಅಂದಾಗ ತಾವೆಲ್ಲರೂ ಹಳೆಯ ಜೀವನ, ಹಳೆಯ
ಮಾತುಗಳು, ಹಳೆಯ ಸಂಸ್ಕಾರ, ಹಳೆಯ ವ್ಯರ್ಥ ಸಂಕಲ್ಪವನ್ನು (ಹೋಲಿ) ಕಳೆದು ಬಿಟ್ಟಿದ್ದೀರಲ್ಲವೇ.
ಕಳೆದು ಹೋಗಿರುವುದನ್ನು ಕಳೆಯುವುದು ಅರ್ಥಾತ್ ಹೋಲಿ ಮಾಡುವುದು. ಈ ರೀತಿ ಮಾಡಿದ್ದೀರಾ? ಅಥವಾ ಈಗಲೂ
ಸಹ ಎಂದಾದರೂ ಹಳೆಯ ಸಂಸ್ಕಾರ ಬಂದು ಬಿಡುತ್ತದೆಯೇ? ನಮ್ಮ ಜನ್ಮವೇ ಹೊಸದೆಂದಾಗ, ತಾವೆಲ್ಲರೂ
ಮರುಜೀವ ಆಗಿದ್ದೀರಲ್ಲವೇ! ಆಗಿದ್ದೀರಾ? ಮರುಜೀವ ಆಗಿದ್ದೀರಾ? ಕೈ ಎತ್ತಿ. ಒಳ್ಳೆಯದು. ಹೊಸ ಜನ್ಮ
ಆಗಿ ಬಿಟ್ಟಿದೆ. ಅಂದಮೇಲೆ ಹಳೆಯ ಜನ್ಮ ಹೇಗೆ ನೆನಪಿಗೆ ಬರುತ್ತದೆ? ಹಳೆಯದು ಹಳೆಯದಾಗಿ ಬಿಟ್ಟಿದೆ.
ಒಂದುವೇಳೆ ಕಳೆದು ಹೋಗಿರುವ ಮಾತುಗಳು ಅಥವಾ ಸಂಕಲ್ಪ, ಸಂಸ್ಕಾರ ಇಮರ್ಜ್ ಆಗಿದ್ದರೆ ಏನು
ಹೇಳುತ್ತಾರೆ? ಹೋಲಿ ಆಚರಣೆ ಮಾಡಿದ್ದೀರಾ? ಕಳೆದು ಹೋಗಿರುವುದನ್ನು ಮರೆತಿಲ್ಲ (ಹೋಲಿ ಮಾಡಿಲ್ಲ).
ಪರಮಾತ್ಮನ ಸಂಗದ ಬಣ್ಣ ಚೆನ್ನಾಗಿ ಹಾಕಿಕೊಂಡಿಲ್ಲ. ಪರಮಾತ್ಮನ ಸಂಗದ ಬಣ್ಣ ಹಾಕಿಕೊಳ್ಳುವುದು
ಅರ್ಥಾತ್ ಹಳೆಯ ಜನ್ಮವನ್ನು ಮರೆಯುವುದು. ಹಳೆಯ ಮಾತುಗಳನ್ನು ಮರೆಯುವುದು. ಏಕೆಂದರೆ ಮರುಜೀವ
ಆಗಿದ್ದೀರಲ್ಲವೇ. ಹೇಗೆ ಶರೀರದಿಂದ ಒಂದು ಜನ್ಮ ಬಿಟ್ಟು ಇನ್ನೊಂದು ಜನ್ಮ ಪಡೆದುಕೊಂಡಾಗ ಹಳೆಯ
ಜನ್ಮ ನೆನಪು ಬರುತ್ತದೇನು? ಅಂದಾಗ ತಾವೆಲ್ಲಾ ಬ್ರಾಹ್ಮಣ ಜನ್ಮವನ್ನು ಧಾರಣೆ ಮಾಡುವವರಾಗಿದ್ದೀರಿ.
ಅಂದಮೇಲೆ ಹಿಂದಿನ ಜನ್ಮದ ಸಂಸ್ಕಾರ ಯಾವುದಕ್ಕೆ ನನ್ನ ಸಂಸ್ಕಾರ ಎಂದು ಹೇಳುತ್ತೀರಿ, ಅದು
ನಿಮ್ಮದೇನು? ನಿಮ್ಮದೇನು, ಇದು ಬ್ರಾಹ್ಮಣ ಜೀವನದ ಸಂಸ್ಕಾರವೇನು? ಕೆಲವೊಮ್ಮೆ ಹುಡುಗಾಟಿಕೆ,
ಕೆಲವೊಮ್ಮೆ ರಾಯಲ್ ಆಲಸ್ಯ, ಆಲಸ್ಯದ್ದು ಬಹಳ ಭಿನ್ನ-ಭಿನ್ನ ರೂಪಗಳಿವೆ. ಕೆಲವೊಮ್ಮೆ ಇದರ ಮೇಲೆ
ಕ್ಲಾಸ್ ಮಾಡಬೇಕು. ಆಲಸ್ಯ ಎಷ್ಟು ಪ್ರಕಾರ ಇದೆ ಮತ್ತು ಎಷ್ಟು ರಾಯಲ್ ರೂಪದಲ್ಲಿ ಬರುತ್ತದೆ!
ಬ್ರಾಹ್ಮಣ ಜೀವನ ಅರ್ಥಾತ್
ಹೊಸ ಜೀವನ, ಇದರಲ್ಲಿ ಹಳೆಯದು ಇರಲು ಸಾಧ್ಯವಿಲ್ಲ. ಈ ದಿನ ಹೋಲಿಯನ್ನು ಆಚರಣೆ ಮಾಡಲು
ಬಂದಿದ್ದೀರಲ್ಲವೇ! ಹೋಲಿ ಅರ್ಥಾತ್ ಕಳೆದು ಹೋಗಿರುವುದನ್ನು ಮರೆಯುವುದು, ಅಂದಾಗ ಇಂದು ಹೋಲಿ ಆಚರಣೆ
ಮಾಡುವುದು ಅರ್ಥಾತ್ ಹಳೆಯ ಸಂಸ್ಕಾರದ ಹೋಲಿಯನ್ನು ಸುಡುವುದು. ಸುಟ್ಟಿದ ಮೇಲೆ ಆಚರಣೆ
ಮಾಡಲಾಗುತ್ತದೆ. ಈಗ ತಮ್ಮದು ಆಚರಣೆ ಮಾಡುವ ಸ್ವರೂಪವಾಗಿದೆ. ಸುಟ್ಟು ಹಾಕಿದ್ದೀರಿ, ಈಗ ಆಚರಣೆ
ಮಾಡಬೇಕು. ಪ್ರಭುವಿನ ಸಂಗದ ಬಣ್ಣದ ಮಜಾ ಪಡೆದುಕೊಳ್ಳುವವರಾಗಿದ್ದೀರಿ. ಕಂಬೈಂಡ್ ಆಗಿರುವ ಅನುಭವ
ಮಾಡುವವರಾಗಿದ್ದೀರಿ ಏಕೆ? ಪವಿತ್ರ ತಂದೆ ತಮ್ಮ ಮೇಲೆ ಪವಿತ್ರರಾಗುವ ಬಣ್ಣವನ್ನು ಹಾಕಿದ್ದಾರೆ.
ಇಂದು ಎಂತಹ ಹೋಲಿಯನ್ನು
ಆಚರಣೆ ಮಾಡುತ್ತೀರಿ? ಇಂದು ವಿಶೇಷವಾಗಿ ಯಾವುದೇ ಹಳೆಯ ಸಂಸ್ಕಾರವನ್ನು ಬರಲು ಬಿಡಬೇಡಿ, ಈ
ಹೋಲಿಯನ್ನು ಆಚರಣೆ ಮಾಡಬೇಕು. ಆಚರಣೆ ಮಾಡಲು ಸಾಧ್ಯವೇ ಅಥವಾ ಕೆಲವೊಮ್ಮೆ ಹಳೆಯ ಸಂಸ್ಕಾರ ಬಂದು
ಬಿಡುತ್ತದೆಯೇ? ನಾನು ಮಾಡಲು ಬಯಸುವುದಿಲ್ಲ ಆದರೆ ನನ್ನ ಸಂಸ್ಕಾರ ಆಗಿದೆ ಎನ್ನುವುದು ರಾಯಲ್
ಶಬ್ದವಾಗಿದೆ. ಈ ಶಬ್ದವನ್ನು ಇಂದು ದೃಢ ಸಂಕಲ್ಪದ ವಿಧಿಯ ಮೂಲಕ ಸಮಾಪ್ತಿ ಮಾಡಿ ಬಿಡಿ. ಇಂದು ಅಂತಹ
ಹೋಲಿಯನ್ನು ಸದಾ ಕಾಲಕ್ಕಾಗಿ ಆಚರಣೆ ಮಾಡುವ ಸಾಹಸ ಇಟ್ಟುಕೊಳ್ಳುತ್ತೀರಾ? ಅಥವಾ ಕೆಲವೊಮ್ಮೆ ಆಚರಣೆ
ಮಾಡುತ್ತೀರಾ? ಇಂದಿನಿಂದ ಹಳೆಯ ಸಂಸ್ಕಾರ ಸಮಾಪ್ತಿ, ಕಳೆದುಹೋಗಿರುವುದು ಕಳೆದು ಹೋಗಿತ್ತು, ಹೊಸ
ಜನ್ಮ ಆಗಿದೆ, ಹಳೆಯ ಜನ್ಮ ಸಮಾಪ್ತಿ ಆಗಿದೆ ಎಂದು ಯಾರು ತಿಳಿದುಕೊಂಡಿದ್ದೀರಿ. ಇಂತಹ ಸಾಹಸ
ಇಟ್ಟುಕೊಳ್ಳುವ ತಂದೆಯ ಮಧುರಾತಿ ಮಧುರ, ಮುದ್ದಾದ ಅಗಲಿ ಹೋಗಿ ಸಿಕ್ಕಿರುವ ಮಕ್ಕಳಲ್ಲವೇ! ಅಂದಾಗ ಈ
ಸಂಕಲ್ಪ ದೃಢವಾಗಿರಬೇಕು, ಕೇವಲ ಸಂಕಲ್ಪ ಅಲ್ಲ ದೃಢ ಸಂಕಲ್ಪ ಮಾಡುವ ಸಾಹಸವಿದೆಯೇ? ಕೈ ಎತ್ತಿ, ನೋಡಿ
ಎಲ್ಲರೂ ಸಾಹಸ ಇಟ್ಟಿದ್ದಾರೆ. ಕೆಲವರು ಉಳಿದುಕೊಂಡರೂ ತಾವೆಲ್ಲರೂ ಜೊತೆಗಾರರಲ್ಲವೇ. ಪಕ್ಕಾ
ಜೊತೆಗಾರರಲ್ಲವೇ, ಎರಡು ಕೈಗಳು ಎತ್ತಿ. ಇವರೆಲ್ಲರ ಪೋಟೋ ತೆಗೆಯಿರಿ. ಒಳ್ಳೆಯದು. ಡಬಲ್ ವಿದೇಶಿಯರೂ
ಸಹ ಕೈ ಎತ್ತುತ್ತಿದ್ದಾರೆ.
ಬಾಪ್ದಾದಾರವರು ತಮಗೆ
ಹೋಲಿಯನ್ನು ಹೋಲಿ (ಕಳೆದು ಹೋಗಿರುವುದನ್ನು ಮರೆಯುವ) ರೂಪದಲ್ಲಿ ಆಚರಣೆ ಮಾಡುವ ಪದಮಾಪದಮಾದಷ್ಟು
ಶುಭಾಶಯಗಳನ್ನು ಕೊಡುತ್ತಿದ್ದಾರೆ. ಈಗ ಅಪ್ಪಿ ತಪ್ಪಿಯಾದರೂ ತಮ್ಮ ಮುಖದಿಂದ ಈ ಶಬ್ದ ಬರಬಾರದು.
ನನ್ನ ಸಂಸ್ಕಾರ, ರಾವಣನ ಸಂಸ್ಕಾರವನ್ನು ನನ್ನ ಸಂಸ್ಕಾರ ಎಂದು ಹೇಳುತ್ತೀರಿ, ಕಮಾಲ್ ಆಗಿದೆ!
ತಪ್ಪಾಗಿ ಹೇಳಿ ಬಿಡುತ್ತೀರಿ. ಹೇಳಿ ಬಿಡುತ್ತಾರೆ, ನಂತರ ಆಂತರಿಕವಾಗಿ ಮನಸ್ಸು
ತಿನ್ನುತ್ತಿರುತ್ತದೆ, ಅನುಭೂತಿಯೂ ಸಹ ಆಗುತ್ತದೆ, ತಂದೆಯ ಜೊತೆ ಮಾತುಗಳನ್ನೂ ಸಹ ಆಡುತ್ತಾರೆ,
ಕ್ಷಮೆ ಕೂಡ ತೆಗೆದುಕೊಳ್ಳುತ್ತಾರೆ. ಬಾಬಾ ನಾಳೆಯಿಂದ ಈ ತಪ್ಪು ಮಾಡುವುದಿಲ್ಲ. ಮತ್ತೆ ಮಾಡಿ
ಬಿಡುತ್ತಾರೆ. ಈಗ ಬಾಪ್ದಾದಾರವರು ಏನು ಮಾಡಲಿ? ನೊಡುತ್ತಾ ಇರಲೇನು? ಈಗ ಈ ಶಬ್ದವನ್ನು ಸುಟ್ಟು
ಹಾಕಿ. ನೋಡಿ ಸುಡುವುದರಲ್ಲೂ ಸಹ ಒಂದು ಒಳ್ಳೆಯ ಮಾತನ್ನು ಹೇಳುತ್ತಾರೆ, ಕೋಕಿಯನ್ನು ದಾರವನು ಕಟ್ಟಿ
ಸುಡುತ್ತಾರೆ, ಕೋಕಿ ಬೆಂದ ಮೇಲೆ ತೆಗೆದಾಗ ಕೋಕಿ ಬೆಂದಿರುತ್ತದೆ ಆದರೆ ದಾರ ಸುಡುವುದಿಲ್ಲ. ಈ
ಚಿನ್ಹೆಯೂ ಸಹ ಆತ್ಮ ಅವಿನಾಶಿ ಹಾಗೂ ಶರೀರ ವಿನಾಶಿ ಎಂದು ಏನು ಓದಿದ್ದೀರಿ, ತಮ್ಮ ಮೊದಲನೇ
ಪಾಠದ್ದಾಗಿದೆ. ತಮ್ಮ ಈ ಹಬ್ಬಗಳು ಅಥವಾ ಶಾಸ್ತ್ರಗಳನ್ನು ಮಾಡುವವರು, ತಂದೆಯ ಮಕ್ಕಳೇ ಆಗಿದ್ದಾರೆ,
ಆದರೆ ತಾವು ಅಗಲಿ ಹೋಗಿ ಸಿಕ್ಕಿದ್ದೀರಿ, ಆದರೆ ಅವರ ಚಮತ್ಕಾರವೂ ಸಹ ಕಡಿಮೆ ಏನಿಲ್ಲ ಎನ್ನುವುದು
ಬಾಪ್ದಾದಾರವರು ನೋಡಿದ್ದಾರೆ. ಹಿಟ್ಟಿನಲ್ಲಿ ಉಪ್ಪು ಆಗಿದೆ ಆದರೆ ಬಹಳ ರಮಣೀಯಕವಾಗಿ ಮಾಡಿದ್ದಾರೆ.
ತಾವು ನೋಡಿ ಪ್ರತಿಯೊಂದು ಹಬ್ಬವನ್ನು ನೆನಪಾರ್ಥವನ್ನಾಗಿ ಮಾಡಿದ್ದಾರೆ, ಆದರೆ ಕೆಲವೊಂದು ಮಾತುಗಳು
ಯಾವುದು ಸೂಕ್ಷ್ಮವಾಗಿದೆ ಅದಕ್ಕೆ ಸ್ಥೂಲ ರೂಪವನ್ನು ಕೊಟ್ಟು ಬಿಟ್ಟಿದ್ದಾರೆ. ಆದರೆ ನೆನಪಾರ್ಥವಂತೂ
ಮಾಡಿದ್ದಾರಲ್ಲವೇ! ಭಕ್ತಿಯಲ್ಲೂ ಸಹ ಕಡಿಮೆಯಂತೂ ಮಾಡಿಲ್ಲ, ಭಕ್ತಿ ದ್ವಾಪರ, ಕಲಿಯುಗದಲ್ಲಿ
ಇರುವುದು ಆದರೂ ಸಹ ಯಾವುದಾದರೂ ನೆನಪಾರ್ಥ ಮಾತುಗಳನ್ನು ಇಟ್ಟಿದ್ದಾರೆ. ಅತೀ ವಿಕಾರಿ ಆಗುವುದರಿಂದ
ರಕ್ಷಣೆ ಮಾಡಿದ್ದಾರೆ. ಬಾಪ್ದಾದಾರವರು ಈ ಸಾಮಾಗ್ರಿ, ಹಬ್ಬ ಹಾಗೂ ಶಾಸ್ತ್ರ ಮಾಡುವವರಿಗೂ ಸಹ ಅದರ
ಫಲವನ್ನು ಕೊಡುತ್ತಾರೆ. ಆದರೂ ಸಹ ಭಕ್ತಿಯಲ್ಲಿ ಏನಾದರೂ ನೆನಪು ಮಾಡುತ್ತಾರೆ, ವಿಕಾರಗಳಿಂದ
ಸ್ವಲ್ಪ ಸಮಯಕ್ಕಾಗಿ ರಕ್ಷಣೆ ಆಗುತ್ತದೆ.
ಇಂದು ತಾವು ಯಾವ
ಹೋಲಿಯನ್ನು ಆಚರಣೆ ಮಾಡಿದ್ದೀರಿ? ಎಂತಹ ಹೋಲಿಯನ್ನು ಆಚರಣೆ ಮಾಡಿದ್ದೀರಾ? ಪಕ್ಕಾ ಆಗಿದೆಯಲ್ಲವೇ!
ಆಚರಣೆ ಮಾಡಿದ್ದೀರಾ? ಆಚರಣೆ ಮಾಡಿದ್ದೀರಾ? ಒಳ್ಳೆಯದು. ನಂತರ ನಾಳೆ ಮಾಯೆಯೂ ಬರುತ್ತದೆ, ಏಕೆಂದರೆ
ಮಾಯೆಯೂ ಸಹ ಕೇಳುತ್ತಿದೆ, ಆದರೆ ತಾವು ಈ ರೀತಿ ಮಾಡಬಾರದು (ತಮ್ಮೊಂದಿಗೆ ಕರೆಯಬಾರದು). ಮಜಾ
ಇದೆಯಲ್ಲವೇ, ಇದರಲ್ಲಿ ಮಜಾ ಇದೆಯಲ್ಲವೇ. ಮಜಾದಲ್ಲಿ ಇರಬೇಕು.
ತಂದೆಯನ್ನು ನೆನಪು
ಮಾಡಬೇಕು, ಅಂದಾಗ ತಂದೆ ನಮಗೆ ಎಷ್ಟು ಆತ್ಮಿಕ ಬಣ್ಣ ಹಾಕುತ್ತಿದ್ದಾರೆ, ಯಾವುದರಿಂದ ತಾವು ಹೋಲಿ
ಹಂಸಗಳಾಗಿ ಬಿಟ್ಟಿದ್ದೀರಿ. ಹೋಲಿ ಹಂಸ ಅರ್ಥಾತ್ ನಿರ್ಣಯ ಶಕ್ತಿವುಳ್ಳ ಹೋಲಿ ಹಂಸ. ಯಾವುದಾದರೂ
ಕಾರ್ಯವನ್ನು ಮಾಡುತ್ತೀರೆಂದಾಗ ಒಂದು ಸೀಟ್ ಫಿಕ್ಸ್ ಮಾಡಿಕೊಂಡು ಬಿಡಿ, ಮೊದಲು ಆ ಸೀಟಿನಲ್ಲಿ ಸೆಟ್
ಆಗಿ ನಂತರ ನಿರ್ಣಯ ಮಾಡಿ, ಆ ಸೀಟ್ ಗೊತ್ತಿದೆಯೇ, ಆ ಸೀಟ್ ತ್ರಿಕಾಲದರ್ಶಿಯ ಸೀಟ್ ಆಗಿದೆ. ಮೊದಲು
ತ್ರಿಕಾಲದರ್ಶಿಯ ಸೀಟಿನಲ್ಲಿ ಸೆಟ್ ಆಗಿ ಮೂರು ಕಾಲಗಳನ್ನು ನೋಡಿ, ಕೇವಲ ವರ್ತಮಾನ ಅಲ್ಲ, ಆದಿ,
ಮಧ್ಯ, ಅಂತ್ಯ ಮೂರು ಕಾಲಗಳನ್ನು ನೋಡಿ, ಮೂರು ಕಾಲದಲ್ಲಿ ಲಾಭವಿದೆಯೋ ಅಥವಾ ನಷ್ಟವಿದೆಯೋ? ಎಂದು
ನೋಡಿ. ಕೆಲವು ಮಕ್ಕಳು ಬಹಳ ಚತುರವಾಗಿದ್ದಾರೆ. ಚತುರತೆ ತಿಳಿಸಲೇನು? ಏನು ಹೇಳುತ್ತಾರೆ, ಹಾಗೆ
ಕಾರ್ಯವನ್ನು ನಡೆಸಬೇಕಲ್ಲವೇ, ಆದ್ದರಿಂದ ಕಾರ್ಯವನ್ನು ನಡೆಸಿ ಬಿಟ್ಟಿದ್ದೇನೆ ಆದರೆ ನನಗೆ
ಮಾಡಬಾರದು ಎಂದು ಗೊತ್ತಿದೆ ಆದರೂ ಮಾಡಿ ಬಿಟ್ಟೆ. ಹೋಗಿಲಿ ಮಾಡಿ ಬಿಟ್ಟಿದ್ದೀರಿ ಅಂದಾಗ ಕರ್ಮದ
ಫಲವಂತೂ ಸಿಗುತ್ತದೆಯಲ್ಲವೇ! ಅಂದಾಗ ಚತುರತೆ ಮಾಡಬೇಡಿ, ತಂದೆಗೂ ಸಹ ಬಹಳ ಸಮಾಧಾನ ಮಾಡುತ್ತಾರೆ.
ತಪ್ಪು ಮಾಡುತ್ತಾರಲ್ಲವೇ ನಂತರ ಬಾಪ್ದಾದಾರವರಿಗೆ ಬಾಬಾ ತಾವಂತೂ ದಯಾ ಸಾಗರನಾಗಿದ್ದೀರಲ್ಲವೇ!
ತಾವಂತೂ ಕ್ಷಮಾ ಸಾಗರನಾಗಿದ್ದೀರಲ್ಲವೇ! ಎಂಬ ಮಾತುಗಳನ್ನು ಹೇಳುತ್ತಾರೆ. ತಂದೆಗೂ ಸಹ ತಾವು
ಯಾರಾಗಿದ್ದೀರಿ ಎಂದು ನೆನಪು ಮಾಡುತ್ತಾರೆ. ನನಗೆ ತಿಳಿಸಿ ಸಮಾಪ್ತಿ ಮಾಡಿ ಎಂದು ತಾವು
ಹೇಳಿದ್ದೀರಲ್ಲವೇ ಎಂದು ಮಕ್ಕಳು ಹೇಳುತ್ತಾರೆ. ಆದರೆ ಅನುಭೂತಿಯಿಂದ ತಿಳಿಸಿ ಸಮಾಪ್ತಿ ಮಾಡಿ ಬಿಡಿ.
ಒಂದು ಶಬ್ದವನ್ನು ಪಕ್ಕಾ ಮಾಡಿಕೊಂಡು ಬಿಡುತ್ತೀರಿ, ತಿಳಿಸುವುದಂತೂ ಮಾಡುತ್ತೀರಿ ಆದರೆ ಮೊದಲು
ದೃಢ ಸಂಕಲ್ಪದಿಂದ ಸ್ವಯಂನ್ನು ಪರಿವರ್ತನೆ ಮಾಡಿಕೊಂಡು ನಂತರ ತಿಳಿಸಿ. ತಾವು ಹೇಳಿದ್ದೀರಲ್ಲವೇ
ಎಂದು ಬಹಳ ಸಮಾಧಾನ ಮಾಡುತ್ತಾರೆ. ತಾವು ಇದನ್ನು ಹೇಳಿದ್ದೀರಲ್ಲವೇ, ತಾವು ಇದನ್ನು
ಹೇಳಿದ್ದೀರಲ್ಲವೇ ಎಂದು ತಂದೆಗೂ ಸಹ ನೆನಪು ಮಾಡಿಸುತ್ತಾರೆ. ಬಹಳ ಚತುರತೆ ಮಾಡುತ್ತಾರೆ. ಈಗ
ಚತುರತೆಯನ್ನು ಮಾಡಬಾರದು. ಸಾಹಸವನ್ನು ಇಟ್ಟುಕೊಳ್ಳಬೇಕು. ಮಾಡಲೇಬೇಕು, ಮಾಡೋಣ, ಮಾಡೋಣ ಎಂದು
ಹೇಳಬಾರದು.
ಬಾಪ್ದಾದಾ ಪೂರ್ತಿ
ದಿನದಲ್ಲಿ ಣ, ಣ (ಗೆ, ಗೆ) ಎನ್ನುವ ಗೀತೆಯನ್ನು ಬಹಳ ಕೇಳುತ್ತಾರೆ. ಮಾಡೋಣ, ನೋಡೋಣ, ಆಗೋಣ, ಆದರೆ
ಎಷ್ಟು ವೇಗವಾಗಿ? ಣ, ಣ ಎನ್ನುವವರು ತಂದೆಯ ಜೊತೆ ಹೋಗುತ್ತಾರೇನು? ತಂದೆಯಂತೂ ಎವರ್ರೆಡಿ ಆದರೆ ಣ,
ಣ ಎನ್ನುವವರು ಎವರ್ರೆಡಿ ಆಗಲಿಲ್ಲ. ಅಂದಾಗ ತಂದೆಯ ಜೊತೆ ಹೇಗೆ ಹೋಗುತ್ತೀರಿ. ನೋಡುತಿರುತ್ತಾರೆ,
ತಂದೆಯ ಜೊತೆ ಹೋಗುತ್ತಿದ್ದಾರೆ. ತಂದೆಗೆ ಪ್ರತಿಯೊಬ್ಬ ಮಗುವಿನ ಮೇಲೆ ಬಹಳ ಪ್ರೀತಿ ಇದೆ. ತನ್ನ
ಮಕ್ಕಳಾಗಿ, ಜೊತೆ ಬರದೆ ಇರುವುದು ತಂದೆಗೆ ಇಷ್ಟ ಇಲ್ಲ. ಮನೆಗೆ ಹಿಂತಿರುಗುವ ಸಮಯ ಬಂದು ಬಿಟ್ಟಿದೆ
ಅಂದಾಗ ಮನೆಗೆ ಹೋಗುವುದಿಲ್ಲವೇನು? ಏಕೆಂದರೆ ಮನೆಗೆ ಹೋಗಿ ನಂತರ ರಾಜ್ಯದಲ್ಲಿ ಬರಬೇಕು. ಜೊತೆಯಲ್ಲಿ
ಮನೆಗೆ ಹೋಗಿಲ್ಲವೆಂದರೆ ಬ್ರಹ್ಮಾ ತಂದೆಯ ಜೊತೆ ರಾಜ್ಯದಲ್ಲೂ ಸಹ ಬರುವುದಿಲ್ಲ, ಹಿಂದೆ ಬರುತ್ತಾರೆ.
ಅಂದಾಗ ತಮ್ಮ ವಾಯಿದೆ ಏನು? ಜೊತೆಯಲ್ಲಿ ಹೋಗುತ್ತೇವೆಯೋ, ಅಥವಾ ಬಂದು ಬಿಡೋಣ ಎನ್ನುತ್ತೀರೋ,
ಇದರಲ್ಲೂ ಸಹ ಣ, ಣ ಎಂದು ಸೇರಿಸುತ್ತಾರೆ. ತಲುಪಿ ಬಿಡುತ್ತೇವೆ, ನೋಡಿ ಬಾಬಾ ಖಂಡಿತ ತಲುಪಿ
ಬಿಡುತ್ತೇವೆ. ಅಂದಾಗ ಈ ಭಾಷೆಯನ್ನು ಈಗ ಸಮಾಪ್ತಿ ಮಾಡಿ. ಒಳ್ಳೆಯದು.
ಮೊದಲು ಬಾಪ್ದಾದಾರವರು
ಎಲ್ಲಾ ಕಡೆ ಇರುವ ಸರ್ವ ಮಕ್ಕಳನ್ನೂ ಸಹ ನೋಡುತ್ತಿದ್ದಾರೆ - ದೂರ ಕುಳಿತಿದ್ದರೂ ವಿಜ್ಞಾನದ
ಸಾಧನಗಳ ಮೂಲಕ ಹೆಚ್ಚಿನ ಸ್ಥಾನಗಳಲ್ಲಿ, ಸೇವಾಕೇಂದ್ರಗಳಲ್ಲಿ ಅವರೂ ಸಹ ಬಾಪ್ದಾದಾರವರನ್ನು
ನೋಡುತ್ತಿದ್ದಾರೆ, ತಾವು ಟೋಲಿ ತಿನ್ನುತ್ತೀರಲ್ಲವೇ ಅವರೂ ಸಹ ಟೋಲಿಯನ್ನು ಹಂಚುತ್ತಾರೆ. ಅಂದಾಗ
ಬಾಪ್ದಾದಾರವರು ದೂರ ಇದ್ದರೂ ಹೇಗೆ ಸಮೀಪತೆಯನ್ನು ಅನುಭವ ಮಾಡುತ್ತಿದ್ದಾರೆ ಎನ್ನುವುದು
ನೋಡುತ್ತಿದ್ದಾರೆ. ಎಲ್ಲಾಕಡೆ ಇರುವ ಮಕ್ಕಳು ಯಾರು ತಂದೆಯ ಸಮಾನ ಸಂಪನ್ನ, ಸಂಪೂರ್ಣರಾಗಬೇಕು, ಈ
ಸಂಕಲ್ಪವನ್ನು ಧಾರಣೆ ಮಾಡಿಕೊಂಡಿದ್ದೀರಿ ಮತ್ತು ದೃಢತೆಯ ಬಲವನ್ನು ಸಮಯಕ್ಕೆ ಈ ಸಂಕಲ್ಪವನ್ನು
ಕೊಡುತ್ತಿರುತ್ತಾರೆ, ಅಂತಹ ಎಲ್ಲಾ ಕಡೆಯ ಶುಭ ಸಂಕಲ್ಪವನ್ನು ಧಾರಣೆ ಮಾಡುವ, ಜೊತೆ-ಜೊತೆಗೆ ತಂದೆಯ
ಆಸೆಗಳನ್ನು ಪೂರ್ಣ ಮಾಡುವ ಆಶಾ ನಕ್ಷತ್ರಗಳೇ, ಜೊತೆ-ಜೊತೆಗೆ ದಾದಿ ಮಾತನ್ನು, ಈಗ ಕರ್ಮಾತೀತ
ಆಗಲೇಬೇಕು, ಆಗಲೇಬೇಕು, ಆಗಲೇಬೇಕು....ಮತ್ತು ಮಮ್ಮಾರವರ ಮಾತು ಸದಾ ಏನು ಮಾಡಬೇಕೋ ಅದನ್ನು ಇಂದೇ
ಮಾಡಿ, ನಾಳೆಯ ಮೇಲೆ ಬಿಡಬೇಡಿ, ಮತ್ತು ದೀದಿಯವರ ಮಾತು ಈಗ ಮನೆಗೆ ಹೋಗಬೇಕು, ಇದು ಕಿವಿಯಲ್ಲಿ
ಮೊಳಗುತ್ತಿರಬೇಕು. ಈಗ ಪದೇ-ಪದೇ ಮನೆಗೆ ಹೋಗಬೇಕು. ಕರ್ಮಾತೀತರಾಗಬೇಕು, ಮನೆಗೆ ಹೋಗಬೇಕು ಎಂದು ಈಗ
ಗುಂಗಲ್ಲಿ ಇರಿ. ಈ ಮಾತುಗಳನ್ನು ಪದೇ-ಪದೇ ಸ್ಮೃತಿಯಲ್ಲಿ ತೆಗೆದುಕೊಂಡು ಬರುವ ಸಮರ್ಥ ಆತ್ಮಗಳಿಗೆ,
ಬಾಪ್ದಾದಾರವರ ಹೋಲಿ (ಪವಿತ್ರ) ಮಕ್ಕಳಿಗೆ ಹೋಲಿಯ ಶುಭಾಶಯಗಳು ಮತ್ತು ಜೊತೆಗೆ ಬಾಪ್ದಾದಾರವರು
ಮೊದಲೇ ಮಧುಬನ ಮಿಠಾಯಿಗಿಂತ ಮೊದಲು ಮುಖ ತೆರೆಯಿರಿ ಮತ್ತು ಮಿಠಾಯಿ ತಿನ್ನಿ, ತಿಂದಿದ್ದೀರಾ,
ಅಂದಾಗ ಎಲ್ಲರಿಗೆ ಬಹಳ ಬಹಳ ಪದಮಾಗುಣ ಬಾಪ್ದಾದಾರವರ ಹಾಗೂ ಅಡ್ವಾನ್ಸ್ ಪಾರ್ಟಿಯ ಎಲ್ಲಾ ಮಕ್ಕಳಿಗೆ
ನೆನಪು ಪ್ರೀತಿ ಹಾಗೂ ತಂದೆಯ ನಮಸ್ತೆ.
ವರದಾನ:
ಸರ್ವ ಆತ್ಮರ
ಪ್ರತಿ ಸ್ನೇಹ ಹಾಗೂ ಶುಭ ಚಿಂತಕನ ಭಾವನೆಯಿಡುವಂತಹ ದೇಹಿ-ಅಭಿಮಾನಿ ಭವ.
ಹೇಗೆ ಮಹಿಮೆ ಮಾಡುವಂತಹ
ಆತ್ಮನ ಪ್ರತಿ ಸ್ನೇಹದ ಭಾವನೆಯಿರುವುದು, ಹಾಗೆಯೇ ಯಾವಾಗ ಯಾರೇ ಶಿಕ್ಷಣ ಸೂಚನೆಯನ್ನು ಕೊಡುವರೆಂದರೆ,
ಅದರಲ್ಲಿಯೂ ಆ ಆತ್ಮನ ಬಗ್ಗೆ - ಇವರು ನನಗಾಗಿ ಅತಿ ಶ್ರೇಷ್ಠವಾದ ಶುಭ ಚಿಂತಕನಾಗಿದ್ದಾರೆ ಎಂಬ
ಸ್ನೇಹದ, ಶುಭ ಚಿಂತನೆಯ ಭಾವನೆಯಿರಲಿ. ಇಂತಹ ಸ್ಥಿತಿಗೆ ದೇಹಿ-ಅಭಿಮಾನಿ ಸ್ಥಿತಿಯೆಂದು
ಹೇಳಲಾಗುವುದು. ಒಂದುವೇಳೆ ದೇಹಿ-ಅಭಿಮಾನಿ ಆಗಿಲ್ಲದಿದ್ದರೆ ಅವಶ್ಯವಾಗಿ ದೇಹಭಿಮಾನವೇ ಇದೆ.
ಅಭಿಮಾನ ಇರುವವರೆಂದಿಗೂ ತನ್ನ ಅಪಮಾನವನ್ನು ಸಹನೆ ಮಾಡಲು ಸಾಧ್ಯವಿಲ್ಲ.
ಸ್ಲೋಗನ್:
ಸದಾ ಪರಮಾತ್ಮನ
ಪ್ರೀತಿಯಲ್ಲಿ ಮುಳುಗಿರುತ್ತೀರೆಂದರೆ, ದುಃಖಗಳ ಪ್ರಪಂಚವು ಮರೆತು ಹೋಗುವುದು.
ಅವ್ಯಕ್ತ ಸೂಚನೆ:-
“ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”
ಯಾವಾಗ ದೊಡ್ಡವರ ಕೈಯಲ್ಲಿ
ಕೈಯಿದ್ದಾಗ ಚಿಕ್ಕವರು ಚಿಂತೆಯಿಲ್ಲದೆ, ನಿಶ್ಚಿಂತರಾಗಿ ಬಿಡುತ್ತಾರೆ. ನಿಮಗೆ ನಿಶ್ಚಯವಿದೆ -
ಪ್ರತಿ ಕರ್ಮದಲ್ಲಿ ಬಾಪ್ದಾದಾರವರು ನಮ್ಮ ಜೊತೆಯಿದ್ದಾರೆ ಮತ್ತು ಈ ಅಲೌಕಿಕ ಜೀವನದ ಕೈ ಅವರ
ಕೈಯಲ್ಲಿದೆ ಅರ್ಥಾತ್ ಜೀವನವು ಅವರಿಗೆ ಅರ್ಪಣೆಯಾಯಿತೆಂದರೆ ಜವಾಬ್ದಾರಿಯೂ ಅವರದ್ದಾಗಿ ಬಿಡುತ್ತದೆ.
ಎಲ್ಲಾ ಹೊರೆಯನ್ನು ತಂದೆಗೆ ಕೊಟ್ಟು ಹಗುರವಾಗಿರಿ ಆಗ ನಿಶ್ಚಿಂತರಾಗಿರುತ್ತೀರಿ ಮತ್ತು ಪ್ರತಿ
ಕಾರ್ಯವೂ ನಿಖರವಾಗಿ ಆಗುವುದು.