01.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ಜ್ಞಾನ ಪೂರ್ಣನಾಗಿದ್ದಾರೆ, ಅವರನ್ನು ಎಲ್ಲವನ್ನೂ ತಿಳಿದಿರುವವರೆಂದು ಹೇಳುವುದು ಉಲ್ಟಾ
ಮಹಿಮೆಯಾಗಿದೆ, ತಂದೆಯು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುವುದಕ್ಕಾಗಿಯೇ ಬರುತ್ತಾರೆ”
ಪ್ರಶ್ನೆ:
ತಂದೆಯ
ಜೊತೆಜೊತೆಗೆ ಎಲ್ಲರಿಗಿಂತ ಅಧಿಕ ಮಹಿಮೆ ಮತ್ತ್ಯಾರದ್ದಾಗಿದೆ ಮತ್ತು ಹೇಗೆ?
ಉತ್ತರ:
ತಂದೆಯ ಜೊತೆ
ಭಾರತದ ಮಹಿಮೆಯೂ ಬಹಳಷ್ಟಿದೆ, ಭಾರತವೇ ಅವಿನಾಶಿ ಖಂಡವಾಗಿದೆ, ಭಾರತವೇ ಸ್ವರ್ಗವಾಗುತ್ತದೆ. ತಂದೆಯು
ಭಾರತವಾಸಿಗಳನ್ನೇ ಧನವಂತರು, ಸುಖಿ ಮತ್ತು ಪವಿತ್ರರನ್ನಾಗಿ ಮಾಡಿದ್ದಾರೆ. 2. ಗೀತೆಯ ಮಹಿಮೆಯು
ಅಪರಮಪಾರವಾಗಿದೆ. ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ. 3. ನೀವು ಚೈತನ್ಯ ಜ್ಞಾನಗಂಗೆಯರಿಗೂ
ಬಹಳ ಮಹಿಮೆಯಿದೆ. ನೀವು ಡೈರೆಕ್ಟ್ ಜ್ಞಾನಸಾಗರನಿಂದ ಹೊರಟಿದ್ದೀರಿ.
ಓಂ ಶಾಂತಿ.
ಓಂ ಶಾಂತಿಯ ಅರ್ಥವನ್ನು ಹೊಸ ಹಾಗೂ ಹಳೆಯ ಮಕ್ಕಳು ತಿಳಿದುಕೊಂಡಿದ್ದೀರಿ. ನಾವೆಲ್ಲಾ ಆತ್ಮಗಳು
ಪರಮಾತ್ಮನ ಸಂತಾನರಾಗಿದ್ದೇವೆ. ನೀವು ಮಕ್ಕಳು ತಿಳಿದುಕೊಂಡಿರುವಿರಿ ಪರಮಾತ್ಮನು
ಶ್ರೇಷ್ಠಾತಿಶ್ರೇಷ್ಠ ಮತ್ತು ಎಲ್ಲರ ಪ್ರಿಯಾತಿಪ್ರಿಯ ಪ್ರಿಯತಮನೂ ಆಗಿದ್ದಾರೆ. ಮಕ್ಕಳಿಗೆ ಜ್ಞಾನ
ಮತ್ತು ಭಕ್ತಿಯ ರಹಸ್ಯವನ್ನು ತಿಳಿಸಲಾಗಿದೆ. ಜ್ಞಾನವೆಂದರೆ ದಿನ ಸತ್ಯಯುಗ-ತ್ರೇತಾಯುಗ,
ಭಕ್ತಿಯೆಂದರೆ ರಾತ್ರಿ, ದ್ವಾಪರ-ಕಲಿಯುಗ. ಭಾರತದ್ದೇ ಮಾತಾಗಿದೆ. ಮೊಟ್ಟಮೊದಲಿಗೆ ನೀವು
ಭಾರತವಾಸಿಗಳೇ ಬರುತ್ತೀರಿ. ನೀವು ಭಾರತವಾಸಿಗಳಿಗಾಗಿಯೇ 84 ಜನ್ಮಗಳ ಚಕ್ರವಿದೆ. ಭಾರತವೇ ಅವಿನಾಶಿ
ಖಂಡವಾಗಿದೆ. ಇದೇ ಭಾರತಖಂಡವು ಸ್ವರ್ಗವಾಗುತ್ತದೆ, ಮತ್ತ್ಯಾವುದೇ ಖಂಡವು ಸ್ವರ್ಗವಾಗುವುದಿಲ್ಲ.
ಮಕ್ಕಳಿಗೆ ತಿಳಿಸಲಾಗಿದೆ - ಹೊಸಪ್ರಪಂಚ ಸತ್ಯಯುಗದಲ್ಲಿ ಭಾರತವೇ ಇರುತ್ತದೆ. ಭಾರತವೇ ಸ್ವರ್ಗವೆಂದು
ಕರೆಸಿಕೊಳ್ಳುತ್ತದೆ. ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತೆ
ನರಕವಾಸಿಗಳಾಗುತ್ತಾರೆ. ಅವರೇ ಪುನಃ ಸ್ವರ್ಗವಾಸಿಗಳಾಗುತ್ತಾರೆ ಈ ಸಮಯದಲ್ಲಿ ಎಲ್ಲರೂ
ನರಕವಾಸಿಗಳಾಗಿದ್ದಾರೆ. ಆದರು ಸಹ ಮತ್ತೆಲ್ಲಾ ಖಂಡಗಳು ವಿನಾಶವಾಗಿ ಮತ್ತೆ ಭಾರತವೇ ಇರುವುದು.
ಭಾರತಖಂಡದ ಮಹಿಮೆಯು ಅಪರಮಪಾರವಾಗಿದೆ. ಭಾರತದಲ್ಲಿಯೇ ತಂದೆಯು ಬಂದು ನಿಮಗೆ ರಾಜಯೋಗವನ್ನು
ಕಲಿಸುತ್ತಾರೆ. ಇದು ಗೀತೆಯ ಪುರುಷೋತ್ತಮ ಸಂಗಮಯುಗವಾಗಿದೆ. ಭಾರತವೇ ಮತ್ತೆ
ಪುರುಷೋತ್ತಮವಾಗುವುದಿದೆ. ಈಗ ಆ ಆದಿಸನಾತನ ದೇವಿ-ದೇವತಾಧರ್ಮವೂ ಇಲ್ಲ, ರಾಜ್ಯವೂ ಇಲ್ಲ ಆದ್ದರಿಂದ
ಆ ಯುಗವೂ ಇಲ್ಲ. ನೀವು ತಿಳಿದುಕೊಂಡಿದ್ದೀರಿ - ಪ್ರಪಂಚದ ಸರ್ವಶಕ್ತಿವಂತನೆಂದು ಒಬ್ಬ ಭಗವಂತನಿಗೇ
ಹೇಳಲಾಗುತ್ತದೆ. ಭಗವಂತನು ಅಂತರ್ಯಾಮಿಯಾಗಿದ್ದಾರೆ, ಅವರು ಆಂತರ್ಯವನ್ನು ತಿಳಿದಿದ್ದಾರೆ ಎಂದು
ಹೇಳಿ ಭಾರತವಾಸಿಗಳೇ ಬಹಳ ತಪ್ಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಯಾರ ಆಂತರ್ಯವನ್ನು
ನೋಡುವುದಿಲ್ಲ. ಪತಿತರನ್ನು ಪಾವನ ಮಾಡುವುದೇ ನನ್ನ ಕೆಲಸವಾಗಿದೆ. ಬಾಬಾ, ತಾವಂತೂ
ಅಂತರ್ಯಾಮಿಯಾಗಿದ್ದೀರೆಂದು ಅನೇಕರು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ನಾನು
ಅಂತರ್ಯಾಮಿಯಲ್ಲ, ನಾನು ಯಾರ ಹೃದಯವನ್ನೂ ಹೊಕ್ಕು ನೋಡುವುದಿಲ್ಲ ಕೇವಲ ಪತಿತರನ್ನು ಪಾವನ ಮಾಡಲು
ಬರುತ್ತೇನೆ. ನಾನು ಬರುವುದೇ ಪತಿತಪ್ರಪಂಚದಲ್ಲಿ ಮತ್ತು ಯಾವಾಗ ಹಳೆಯ ಪ್ರಪಂಚವನ್ನು ಹೊಸದನ್ನಾಗಿ
ಮಾಡಬೇಕಾಗಿದೆಯೋ ಆಗ ಒಂದೇಬಾರಿ ಬರುತ್ತೇನೆ. ಮನುಷ್ಯರಿಗೆ ಈ ಪ್ರಪಂಚವು ಹೊಸದರಿಂದ ಹಳೆಯದು,
ಹಳೆಯದರಿಂದ ಯಾವಾಗ ಹೊಸದಾಗುತ್ತದೆ ಎಂಬುದೇ ತಿಳಿದಿಲ್ಲ. ಪ್ರತಿಯೊಂದು ವಸ್ತು ಹೊಸದರಿಂದ ಹಳೆಯದು,
ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ ಬರುತ್ತದೆ. ಮನುಷ್ಯರು ಸಹ ಇದೇ ರೀತಿ ಬರುತ್ತಾರೆ. ಬಾಲಕನು
ಸತೋಪ್ರಧಾನನಾಗಿರುತ್ತಾನೆ ನಂತರ ಯುವಕನಾಗುತ್ತಾನೆ ನಂತರ ವೃದ್ಧನಾಗುತ್ತಾನೆ ಅರ್ಥಾತ್ ಸತೋ, ರಜೋ,
ತಮೋದಲ್ಲಿ ಬರುತ್ತಾನೆ. ವೃದ್ಧ ಶರೀರವಾದಾಗ ಅದನ್ನು ಬಿಟ್ಟು ಮತ್ತೆ ಮಗುವಾಗುತ್ತಾನೆ, ಮಕ್ಕಳಿಗೆ
ಗೊತ್ತಿದೆ, ಹೊಸ ಪ್ರಪಂಚದಲ್ಲಿ ಭಾರತವು ಎಷ್ಟೊಂದು ಶ್ರೇಷ್ಠವಾಗಿತ್ತು, ಭಾರತದ ಮಹಿಮೆಯು
ಅಪರಮಪಾರವಾಗಿದೆ. ಇಷ್ಟೊಂದು ಸುಖಿ, ಧನವಂತ, ಪವಿತ್ರವಾದದ್ದು ಮತ್ತ್ಯಾವ ಖಂಡವೂ ಇಲ್ಲ. ಅದನ್ನು
ಮತ್ತೆ ಸತೋಪ್ರಧಾನವನ್ನಾಗಿ ಮಾಡಲು ತಂದೆಯು ಬಂದಿದ್ದಾರೆ, ಸತೋಪ್ರಧಾನ ಪ್ರಪಂಚದ
ಸ್ಥಾಪನೆಯಾಗುತ್ತಿದೆ, ತ್ರಿಮೂರ್ತಿ ಬ್ರಹ್ಮಾ, ವಿಷ್ಣು, ಶಂಕರರನ್ನು ಯಾರು ರಚನೆ ಮಾಡಿದರು?
ಶ್ರೇಷ್ಠಾತಿಶ್ರೇಷ್ಠನಂತೂ ಶಿವನಾಗಿದ್ದಾರೆ. ತ್ರಿಮೂರ್ತಿ ಬ್ರಹ್ಮನೆಂದು ಮನುಷ್ಯರು ಹೇಳುತ್ತಾರೆ
ಅರ್ಥವನ್ನಂತೂ ತಿಳಿದುಕೊಂಡಿಲ್ಲ. ವಾಸ್ತವದಲ್ಲಂತೂ ತ್ರಿಮೂರ್ತಿ ಶಿವನೆಂದು ಹೇಳಬೇಕು,
ಬ್ರಹ್ಮನೆಂದಲ್ಲ. ದೇವ-ದೇವ ಮಹಾದೇವ ಎಂದು ಹಾಡುತ್ತಾರೆ, ಶಂಕರನನ್ನು ಶ್ರೇಷ್ಠಸ್ಥಾನದಲ್ಲಿ
ಇಡುತ್ತಾರೆ ಅಂದಮೇಲೆ ತ್ರಿಮೂರ್ತಿ ಶಂಕರನೆಂದು ಹೇಳಬೇಕಿತ್ತಲ್ಲವೆ! ತ್ರಿಮೂರ್ತಿ ಬ್ರಹ್ಮನೆಂದು
ಏಕೆ ಹೇಳುತ್ತಾರೆ? ಶಿವನು ರಚಯಿತನಾಗಿದ್ದಾರೆ, ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ
ಬ್ರಾಹ್ಮಣರ ಸ್ಥಾಪನೆ ಮಾಡುತ್ತಾರೆಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿ ಜ್ಞಾನಪೂರ್ಣ ತಂದೆಯನ್ನು
ಎಲ್ಲವನ್ನೂ ಅರಿತಿರುವವರೆಂದು ಹೇಳಿಬಿಡುತ್ತಾರೆ, ಆ ಮಹಿಮೆಯಂತೂ ಅರ್ಥಸಹಿತವಾಗಿಲ್ಲ. ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ತಂದೆಯ ಮೂಲಕ ನಮಗೆ ಆಸ್ತಿಯು ಸಿಗುತ್ತದೆ. ಸ್ವಯಂ ಅವರೇ ನಾವು
ಬ್ರಾಹ್ಮಣರಿಗೆ ಓದಿಸುತ್ತಾರೆ ಏಕೆಂದರೆ ಅವರು ತಂದೆಯೂ ಆಗಿದ್ದಾರೆ, ಪಾರಲೌಕಿಕ ಶಿಕ್ಷಕನೂ
ಆಗಿದ್ದಾರೆ. ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಸುತ್ತುತ್ತದೆ ಎಂಬುದನ್ನೂ ಸಹ ತಿಳಿಸುತ್ತಾರೆ,
ಅವರೇ ಜ್ಞಾನಪೂರ್ಣನಾಗಿದ್ದಾರೆ. ಆದರೆ ಅವರು ತಿಳಿದು-ತಿಳಿಸಿಕೊಡುವವರಲ್ಲ, ಈ ಮಾತು ತಪ್ಪಾಗಿದೆ.
ನಾನು ಬಂದು ಕೇವಲ ಪತಿತರನ್ನು ಪಾವನರನ್ನಾಗಿ ಮಾಡುತ್ತೇನೆ. 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು
ಕೊಡುತ್ತೇನೆ. ಭಕ್ತಿಮಾರ್ಗದಲ್ಲಿ ಅಲ್ಪಕಾಲದ ಸುಖವಿದೆ, ಇದನ್ನು ಸನ್ಯಾಸಿಗಳು, ಹಠಯೋಗಿಗಳು
ತಿಳಿದುಕೊಂಡೇ ಇಲ್ಲ. ಬ್ರಹ್ಮ್ತತ್ವವನ್ನು ನೆನಪು ಮಾಡುತ್ತಾರೆ. ಬಹ್ಮ್ತತ್ವವು ಭಗವಂತನಲ್ಲ,
ಭಗವಂತನು ಒಬ್ಬ ನಿರಾಕಾರ ಶಿವನಾಗಿದ್ದಾರೆ, ಅವರೇ ಸರ್ವ ಆತ್ಮಗಳ ತಂದೆಯಾಗಿದ್ದಾರೆ. ನಾವಾತ್ಮಗಳ
ನಿವಾಸ ಸ್ಥಾನವು ಬ್ರಹ್ಮಾಂಡ, ಮಧುರ ಮನೆಯಾಗಿದೆ. ಅಲ್ಲಿಂದ ನಾವಾತ್ಮಗಳು ಇಲ್ಲಿ
ಪಾತ್ರವನ್ನಭಿನಯಿಸಲು ಬರುತ್ತೇವೆ. ನಾನು ಒಂದು ಶರೀರವನ್ನು ಬಿಟ್ಟು ಎರಡನೆ ಅಥವಾ ಮೂರನೆಯ
ಶರೀರವನ್ನು ತೆಗೆದುಕೊಳ್ಳುತ್ತೇನೆ ಎಂದು ಆತ್ಮವು ಹೇಳುತ್ತದೆ. 84 ಜನ್ಮಗಳು ಸಹ
ಭಾರತವಾಸಿಗಳದ್ದಾಗಿದೆ, ಇವರೇ ಬಹಳ ಭಕ್ತಿ ಮಾಡಿದ್ದಾರೆ ಮತ್ತೆ ಇವರೇ ಜ್ಞಾನವನ್ನು ಹೆಚ್ಚಿನದಾಗಿ
ತೆಗೆದುಕೊಳ್ಳುತ್ತಾರೆ.
ತಂದೆಯು ತಿಳಿಸುತ್ತಾರೆ
- ಗೃಹಸ್ಥ ವ್ಯವಹಾರದಲ್ಲಿ ಭಲೆ ಇರಿ, ಆದರೆ ಶ್ರೀಮತದಂತೆ ನಡೆಯಿರಿ, ನೀವೆಲ್ಲಾ ಆತ್ಮಗಳು ಒಬ್ಬ
ಪರಮಾತ್ಮ ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ. ಭಕ್ತಿಮಾರ್ಗದಿಂದ ಹಿಡಿದು ನೀವು ನೆನಪು ಮಾಡುತ್ತಾ
ಬಂದಿದ್ದೀರಿ. ಆತ್ಮವು ತಂದೆಯನ್ನು ನೆನಪು ಮಾಡುತ್ತದೆ, ಇದು ದುಃಖಧಾಮವಾಗಿದೆ. ನಾವಾತ್ಮಗಳೇ ಮೂಲತಃ
ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ನಂತರ ಸುಖಧಾಮದಲ್ಲಿ ಬರುತ್ತೇವೆ. 84 ಜನ್ಮಗಳನ್ನು
ತೆಗೆದುಕೊಂಡೆವು, ಹಮ್ ಸೋ, ಸೋ ಹಮ್ನ ಅರ್ಥವನ್ನು ತಿಳಿಸಿದ್ದಾರೆ. ಇದಕ್ಕೆ ಅವರು ಆತ್ಮವೇ
ಪರಮಾತ್ಮ, ಪರಮಾತ್ಮನೇ ಆತ್ಮನೆಂದು ಹೇಳುತ್ತಾರೆ. ಈಗ ತಂದೆಯು ತಿಳಿಸಿದ್ದಾರೆ - ನಾವೇ ದೇವತಾ,
ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೇವೆ. ಈಗ ನಾವು ದೇವತೆಗಳಾಗಲು ಬ್ರಾಹ್ಮಣರಾಗಿದ್ದೇವೆ, ಇದು
ಯಥಾರ್ಥ ಅರ್ಥವಾಗಿದೆ. ಅವರು ಹೇಳುವುದು ತಪ್ಪಾಗಿದೆ. ಸತ್ಯಯುಗದಲ್ಲಿ ಒಂದು ದೇವಿ-ದೇವತಾ
ಧರ್ಮವಿತ್ತು, ಅದ್ವೈತ ಧರ್ಮವಿತ್ತು, ಕೊನೆಯಲ್ಲಿ ಅನ್ಯಧರ್ಮಗಳು ಬಂದಿರುವ ಕಾರಣ ದ್ವೈತವಾಗಿದೆ.
ದ್ವಾಪರದಿಂದ ಆಸುರೀ ರಾಜ್ಯವು ಆರಂಭವಾಗಿಬಿಡುತ್ತದೆ. ಸತ್ಯಯುಗದಲ್ಲಿ ರಾವಣರಾಜ್ಯವೇ ಇರುವುದಿಲ್ಲ
ಅಂದಮೇಲೆ ಪಂಚವಿಕಾರಗಳು ಸಹ ಇರಲು ಸಾಧ್ಯವಿಲ್ಲ. ಅದು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ.
ರಾಮ-ಸೀತೆಯರಿಗೂ 14 ಕಲಾ ಸಂಪೂರ್ಣರೆಂದು ಹೇಳಲಾಗುತ್ತದೆ. ರಾಮನಿಗೆ ಬಾಣವನ್ನು ಏಕೆ ತೋರಿಸಿದ್ದಾರೆ
ಎಂಬುದನ್ನೂ ಸಹ ಯಾವ ಮನುಷ್ಯರೂ ಅರಿತುಕೊಂಡಿಲ್ಲ. ಇಲ್ಲಿ ಹಿಂಸೆಯ ಮಾತಂತೂ ಇಲ್ಲ. ನೀವು ಈಶ್ವರೀಯ
ವಿದ್ಯಾರ್ಥಿಗಳಾಗಿದ್ದೀರಿ ಅಂದಮೇಲೆ ಇವರು ತಂದೆಯೂ ಆದರು, ನೀವು ವಿದ್ಯಾರ್ಥಿಗಳಾಗಿರುವಕಾರಣ
ಶಿಕ್ಷಕರೂ ಆದರು ಮತ್ತು ನೀವು ಮಕ್ಕಳಿಗೆ ಸದ್ಗತಿ ನೀಡಿ ಸ್ವರ್ಗದಲ್ಲಿ ಕರೆದುಕೊಂಡು ಹೋಗುವುದರಿಂದ
ತಂದೆ, ಶಿಕ್ಷಕ, ಸದ್ಗುರು ಮೂವರೂ ಆದರು. ನೀವು ಅವರ ಮಕ್ಕಳಾಗಿದ್ದೀರಿ ಅಂದಮೇಲೆ ನಿಮಗೆ ಎಷ್ಟೊಂದು
ಖುಷಿಯಿರಬೇಕು! ಮನುಷ್ಯರಂತೂ ಏನೂ ತಿಳಿದುಕೊಂಡಿಲ್ಲ. ರಾವಣರಾಜ್ಯವಲ್ಲವೆ! ಪ್ರತೀ ವರ್ಷವೂ
ರಾವಣನನ್ನು ಸುಡುತ್ತಾ ಬರುತ್ತಾರೆ ಆದರೆ ರಾವಣ ಯಾರು ಎಂಬುದನ್ನು ತಿಳಿದುಕೊಂಡಿಲ್ಲ. ನೀವು
ತಿಳಿದುಕೊಂಡಿದ್ದೀರಿ - ಈ ರಾವಣನು ಭಾರತದ ಎಲ್ಲರಿಗಿಂತ ದೊಡ್ಡ ಶತ್ರುವಾಗಿದ್ದಾನೆ. ಈ ಜ್ಞಾನವು
ನೀವು ಮಕ್ಕಳಿಗೆ ಜ್ಞಾನಪೂರ್ಣ ತಂದೆಯಿಂದಲೇ ಸಿಗುತ್ತದೆ. ಅವರೇ ಜ್ಞಾನಸಾಗರ, ಆನಂದಸಾಗರನಾಗಿದ್ದಾರೆ.
ಜ್ಞಾನಸಾಗರನಿಂದ ನೀವು ಮೋಡಗಳನ್ನು ತುಂಬಿಸಿಕೊಂಡು ಮತ್ತೆ ಹೋಗಿ ಮಳೆ ಸುರಿಸುತ್ತೀರಿ. ನೀವು
ಜ್ಞಾನಗಂಗೆಯರಾಗಿದ್ದೀರಿ, ನಿಮ್ಮದೇ ಮಹಿಮೆಯಿದೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು
ಪಾವನರನ್ನಾಗಿ ಮಾಡಲು ಬಂದಿದ್ದೇನೆ. ಇದೊಂದು ಜನ್ಮದಲ್ಲಿ ಪವಿತ್ರರಾಗಿ, ನನ್ನನ್ನು ನೆನಪು ಮಾಡಿ
ಆಗ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿಬಿಡುತ್ತೀರಿ. ನಾನೇ ಪತಿತ-ಪಾವನನಾಗಿದ್ದೇನೆ. ಎಷ್ಟು
ಸಾಧ್ಯವೋ ಅಷ್ಟು ನೆನಪನ್ನು ಹೆಚ್ಚಿಸಿಕೊಳ್ಳಿ. ಬಾಯಿಂದ ಶಿವಬಾಬಾ ಎಂದು ಹೇಳಬೇಕಾಗಿಲ್ಲ. ಹೇಗೆ
ಪ್ರಿಯತಮೆಯು ಪ್ರಿಯತಮನನ್ನು ನೆನಪು ಮಾಡುತ್ತಾಳೆ. ಒಂದುಬಾರಿ ನೋಡಿದರೆ ಸಾಕು ಬುದ್ಧಿಯಲ್ಲಿ ಅವರದೇ
ನೆನಪಿರುತ್ತದೆ. ಭಕ್ತಿಮಾರ್ಗದಲ್ಲಿಯೂ ಯಾರು ಯಾವ ದೇವತೆಯನ್ನು ನೆನಪು ಮಾಡುತ್ತಾರೆ, ಪೂಜೆ
ಮಾಡುತ್ತಾರೆಯೋ ಅವರ ಸಾಕ್ಷಾತ್ಕಾರವಾಗಿಬಿಡುತ್ತದೆ. ಅದು ಅಲ್ಪಕಾಲಕ್ಕೆ ಮಾತ್ರ. ಭಕ್ತಿಮಾಡುತ್ತಾ
ಕೆಳಗಿಳಿಯುತ್ತಾ ಬಂದಿದ್ದಾರೆ. ಈಗಂತೂ ಮೃತ್ಯುವು ಸನ್ಮುಖದಲ್ಲಿ ನಿಂತಿದೆ. ಅಯ್ಯೊ ಅಯ್ಯೊ ನಂತರ
ಮತ್ತೆ ಜಯಜಯಕಾರವಾಗುತ್ತದೆ. ಭಾರತದಲ್ಲಿಯೇ ರಕ್ತದ ನದಿಗಳು ಹರಿಯಲಿವೆ. ಜನಾಂಗೀಯ ಗಲಭೆ, ಕೋಮು
ಗಲಭೆಗಳ ಚಿಹ್ನೆಗಳನ್ನೂ ನೋಡುತ್ತಿದ್ದೀರಿ. ತಮೋಪ್ರಧಾನರಾಗಿಬಿಟ್ಟಿದ್ದಾರೆ, ನೀವೀಗ
ಸತೋಪ್ರಧಾನರಾಗುತ್ತಿದ್ದೀರಿ. ಯಾರು ಕಲ್ಪದ ಹಿಂದೆ ದೇವತೆಗಳಾಗಿದ್ದಾರೆಯೋ ಅವರೇ ಬಂದು ತಂದೆಯಿಂದ
ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಕಡಿಮೆ ಭಕ್ತಿ ಮಾಡಿದ್ದರೆ ಸ್ವಲ್ಪವೇ ಜ್ಞಾನವನ್ನು
ತೆಗೆದುಕೊಳ್ಳುತ್ತಾರೆ. ಮತ್ತೆ ಪ್ರಜೆಗಳಲ್ಲಿಯೂ ನಂಬರ್ವಾರ್ ತೆಗೆದುಕೊಳ್ಳುತ್ತಾರೆ. ಒಳ್ಳೆಯ
ಪುರುಷಾರ್ಥಿಗಳು ಶ್ರೀಮತದಂತೆ ನಡೆದು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ನಡವಳಿಕೆಯೂ
ಚೆನ್ನಾಗಿರಬೇಕು. ದೈವೀಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ಇವೇ ಮತ್ತೆ 21 ಜನ್ಮಗಳವರೆಗೆ
ನಡೆಯುತ್ತದೆ. ಈಗ ಎಲ್ಲರದೂ ಆಸುರೀಗುಣಗಳಾಗಿವೆ, ಅಸುರೀ ಪ್ರಪಂಚ, ಪತಿತ ಪ್ರಪಂಚವಲ್ಲವೆ. ನೀವು
ಮಕ್ಕಳಿಗೆ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಲಾಗಿದೆ. ಈ ಸಮಯದಲ್ಲಿ ತಂದೆಯು ತಿಳಿಸುತ್ತಾರೆ -
ಮಕ್ಕಳೇ, ನೆನಪು ಮಾಡುವ ಪರಿಶ್ರಮ ಪಡಿ, ಆಗ ನೀವು ಸತ್ಯಚಿನ್ನವಾಗಿಬಿಡುತ್ತೀರಿ. ಸತ್ಯಯುಗವು
ಸ್ವರ್ಣೀಮಯುಗವಾಗಿದೆ, ಸತ್ಯಚಿನ್ನವೇ ನಂತರ ತ್ರೇತಾಯುಗದಲ್ಲಿ ಬೆಳ್ಳಿಯ ಲೋಹವು ಬೆರಕೆಯಾಗುತ್ತದೆ.
ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ, ಈಗಂತು ಯಾವುದೇ ಕಲೆಯಿಲ್ಲ. ಯಾವಾಗ ಈ ಸ್ಥಿತಿಯುಂಟಾಗುವುದೋ
ಆಗ ತಂದೆಯು ಬರುತ್ತಾರೆ. ಇದು ಸಹ ನಾಟಕದಲ್ಲಿ ನಿಗಧಿಯಾಗಿದೆ.
ಈ ರಾವಣರಾಜ್ಯದಲ್ಲಿ
ಎಲ್ಲರೂ ಬುದ್ಧಿಹೀನರಾಗಿಬಿಟ್ಟಿದ್ದಾರೆ. ಯಾರು ಬೇಹದ್ದಿನ ಪಾತ್ರಧಾರಿಗಳಾಗಿಯೂ ಸಹ ನಾಟಕದ
ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿಲ್ಲ. ನೀವು ಪಾತ್ರಧಾರಿಗಳಾಗಿದ್ದೀರಲ್ಲವೆ. ನಿಮಗೆ ತಿಳಿದಿದೆ
- ನಾವಿಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೇವೆ. ಆದರೆ ಪಾತ್ರಧಾರಿಗಳಾಗಿಯೂ ತಿಳಿದುಕೊಂಡಿಲ್ಲ
ಆದ್ದರಿಂದಲೇ ಬೇಹದ್ದಿನ ತಂದೆಯು ನೀವು ಎಷ್ಟೊಂದು ಬುದ್ಧಿಹೀನರಾಗಿಬಿಟ್ಟಿದ್ದೀರಿ ಎಂದು
ಹೇಳುತ್ತಾರಲ್ಲವೆ. ಈಗ ನಾನು ಬುದ್ಧಿವಂತರು, ವಜ್ರಸಮಾನರನ್ನಾಗಿ ಮಾಡುತ್ತೇನೆ. ಮತ್ತೆ ರಾವಣನು
ಕವಡೆಯ ಸಮಾನರನ್ನಾಗಿ ಮಾಡಿಬಿಡುತ್ತಾನೆ. ನಾನೇ ಬಂದು ಎಲ್ಲರನ್ನೂ ಜೊತೆ ಕರೆದುಕೊಂಡು ಹೋಗುತ್ತೇನೆ.
ಮತ್ತೆ ಈ ಪತಿತಪ್ರಪಂಚವು ವಿನಾಶವಾಗುತ್ತದೆ. ಎಲ್ಲರನ್ನು ಸೊಳ್ಳೆಗಳೋಪಾದಿಯಲ್ಲಿ ಕರೆದುಕೊಂಡು
ಹೋಗುತ್ತೇನೆ. ಲಕ್ಷ್ಯವು ನಿಮ್ಮ ಸನ್ಮುಖದಲ್ಲಿದೆ, ಅವರಂತೆ ನೀವೀಗ ಆಗಬೇಕಾಗಿದೆ. ಆಗಲೇ ನೀವು
ಸ್ವರ್ಗವಾಸಿಗಳಾಗುವಿರಿ. ನೀವು ಬ್ರಹ್ಮಾಕುಮಾರ-ಕುಮಾರಿಯರು ಈ ಪುರುಷಾರ್ಥವನ್ನು ಮಾಡುತ್ತಿದ್ದೀರಿ.
ಮನುಷ್ಯರ ಬುದ್ಧಿಯು ತಮೋಪ್ರಧಾನರಾಗಿರುವ ಕಾರಣ ಅವರು ತಿಳಿದುಕೊಳ್ಳುವುದೇ ಇಲ್ಲ. ಇಷ್ಟೊಂದು ಮಂದಿ
ಬ್ರಹ್ಮಾಕುಮಾರ-ಕುಮಾರಿಯರು ಇರುವರೆಂದರೆ ಅವಶ್ಯವಾಗಿ ಪ್ರಜಾಪಿತ ಬ್ರಹ್ಮನೂ ಇರಬೇಕಲ್ಲವೆ.
ಬ್ರಾಹ್ಮಣರು ಶಿಖೆಯ ಸಮಾನವಾಗಿದ್ದಾರೆ, ಬ್ರಾಹ್ಮಣರು ನಂತರ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರ........
ಚಿತ್ರಗಳಲ್ಲಿ ಬ್ರಾಹ್ಮಣರು ಮತ್ತು ಶಿವನನ್ನು ಮರೆಮಾಡಿಬಿಟ್ಟಿದ್ದಾರೆ. ನೀವು ಬ್ರಾಹ್ಮಣರು ಈಗ
ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಶ್ರೇಷ್ಠಪದವಿಗಾಗಿ ಶ್ರೀಮತದಂತೆ ನಡೆದು ಒಳ್ಳೆಯ ಗುಣಗಳನ್ನು ಧಾರಣೆ ಮಾಡಬೇಕಾಗಿದೆ.
2. ಸತ್ಯ ಪ್ರಿಯತಮೆಯರಾಗಿ
ಒಬ್ಬ ಪ್ರಿಯತಮನನ್ನೇ ನೆನಪು ಮಾಡಬೇಕಾಗಿದೆ. ಎಷ್ಟು ಸಾಧ್ಯವೋ ಅಷ್ಟು ನೆನಪಿನ ಅಭ್ಯಾಸವನ್ನು
ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು.
ವರದಾನ:
ನಿಮಿತ್ತತನದ
ಸ್ಮೃತಿಯಿಂದ ಮಯೆಯ ಗೇಟ್ ಬಂದ್ ಮಾಡುವಂತಹ ಡಬಲ್ಲೈಟ್ ಭವ.
ಯಾರು ಸದಾ ತಮ್ಮನ್ನು
ನಿಮಿತ್ತ ಎಂದು ತಿಳಿದು ನಡೆಯುತ್ತಾರೆ, ಅವರಿಗೆ ಡಬಲ್ ಲೈಟ್ ಸ್ಥಿತಿಯ ಅನುಭವ ಸ್ವತಃವಾಗಿ
ಆಗುತ್ತದೆ. ಮಾಡಿಮಾಡಿಸುವಂತಹವರು ಮಾಡಿಸುತ್ತಿದ್ದಾರೆ, ನಾನು ನಿಮಿತ್ತನಾಗಿದ್ದೇನೆ. ಇದೇ
ಸ್ಮೃತಿಯಿಂದ ಸಫಲತೆಯಾಗುತ್ತದೆ. ನನ್ನತನ ಬಂದಿತು ಅರ್ಥಾತ್ ಮಾಯಯ ಗೇಟ್ ತೆರೆಯಿತು, ನಿಮಿತ್ತ ಎಂದು
ತಿಳಿಯುವುದು ಅರ್ಥಾತ್ ಮಾಯೆಯ ಗೇಟ್ ಬಂದ್ ಆಯಿತು. ಅಂದರೆ ನಿಮಿತ್ತ ಎಂದು ತಿಳಿಯುವುದರಿಂದ
ಮಾಯಾಜೀತ್ ಕೂಡ ಆಗುವಿರಿ ಮತ್ತು ಡಬಲ್ ಲೈಟ್ ಸಹ ಆಗಿಬಿಡುವಿರಿ. ಜೊತೆ ಜೊತೆಯಲ್ಲಿ ಸಫಲತೆ ಕೂಡ
ಅವಶ್ಯವಾಗಿ ಸಿಗುತ್ತದೆ. ಇದೇ ಸ್ಮೃತಿ ನಂಬರ್ಒನ್ ಸ್ಥಾನ ಪಡೆಯಲು ಆಧಾರವಾಗಿ ಬಿಡುತ್ತದೆ.
ಸ್ಲೋಗನ್:
ತ್ರಿಕಾಲದರ್ಶಿಯಾಗಿ ಪ್ರತಿಯೊಂದು ಕರ್ಮ ಮಾಡಿದಾಗ ಸಫಲತ ಸಹಜವಾಗಿ ಸಿಗುತ್ತಿರುತ್ತದೆ.
ಮಾತೇಶ್ವರೀಜಿಯವರ
ಮಹಾವಾಕ್ಯ
1. “ಮನುಷ್ಯಾತ್ಮ ತನ್ನ
ಪೂರ್ತಿ ಸಂಪಾದನೆಯ ಅನುಸಾರ ಭವಿಷ್ಯ ಪ್ರಾಲಭ್ದ ಭೋಗಿಸುತ್ತದೆ”
ನೊಡಿ, ಬಹಳ ಮನುಷ್ಯರು
ಹೀಗೆ ತಿಳಿಯುತ್ತಾರೆ, ನಮ್ಮ ಪೂರ್ವ ಜನ್ಮಗಳ ಒಳ್ಳೆಯ ಸಂಪಾದನೆಯಿಂದ ಈಗ ಈ ಜ್ಞಾನ ಪ್ರಾಪ್ತಿಯಾಗಿದೆ
ಆದರೆ ಇಂತಹ ಮಾತು ಇಲ್ಲವೇ ಇಲ್ಲ, ಪೂರ್ವಜನ್ಮದ ಒಳ್ಳೆಯ ಫಲವಾಗಿದೆ ಇದನ್ನಂತೂ ನಾವು ತಿಳಿದಿದ್ದೇವೆ.
ಕಲ್ಪದ ಚಕ್ರ ತಿರುಗುತ್ತಲೇ ಇರುತ್ತದೆ ಸತೋ,ರಜೋ,ತಮೋ ಬದಲಾವಣೆಯಾಗುತ್ತಾ ಇರುತ್ತದೆ ಆದರೆ ಡ್ರಾಮ
ಅನುಸಾರ ಪುರುಷಾರ್ಥದಿಂದ ಪ್ರಾಲಭ್ಧ ಮಾಡಿಕೊಳ್ಳುವಂತಹ ಮಾರ್ಜಿನ್ ಇಡಲಾಗಿದೆ ಅದಕ್ಕಾಗಿಯೇ
ಸತ್ಯಯುಗದಲ್ಲಿ ಕೆಲವರು ರಾಜ-ರಾಣಿ,ಕೆಲವರು ದಾಸಿ, ಕೆಲವರು ಪ್ರಜೆಯ ಪದವಿಯನ್ನು ಪಡೆಯುತ್ತಾರೆ.
ಆದ್ದರಿಂದ ಇದೇ ಪುರುಷಾರ್ಥದ ಸಿದ್ಧಿಯಿದೆ. ಅಲ್ಲಿ ದ್ವೇಶ, ಈಷ್ರ್ಯೆ ಇರುವುದಿಲ್ಲ, ಅಲ್ಲಿ
ಪ್ರಜೆಗಳು ಸಹ ಸುಖಿಯಾಗಿರುತ್ತಾರೆ. ರಾಜಾ-ರಾಣಿ ಪ್ರಜೆಗಳನ್ನು ಈ ರೀತಿ ಸಂಭಾಲನೆ ಮಾಡುತ್ತಾರೆ
ಹೇಗೆ ತಂದೆ-ತಾಯಿ ತಮ್ಮ ಮಕ್ಕಳನ್ನು ಸಂಭಾಲನೆ ಮಾಡುತ್ತಾರೆ, ಅಲ್ಲಿ ಬಡವಾ. ಶ್ರೀಮಂತ ಎಲ್ಲರೂ
ಸಂತುಷ್ಠರಾಗಿರುತ್ತಾರೆ. ಈ ಒಂದು ಜನ್ಮದ ಪುರುಷಾರ್ಥದಿಂದ 21 ಪೀಳಿಗೆಗಾಗಿ ಸುಖವನ್ನು ಭೋಗಿಸುವಿರಿ,
ಇದಾಗಿದೆ ಅವಿನಾಶಿ ಸಂಪಾದನೆ, ಯಾವುದು ಈ ಅವಿನಾಶಿ ಸಂಪಾದನೆಯಲ್ಲಿ ಅವಿನಾಶಿ ಜ್ಞಾನದಿಂದ ಅವಿನಾಶಿ
ಪದವಿ ಸಿಗುವುದು, ಈಗ ನಾವು ಸತ್ಯಯುಗಿ ಪ್ರಪಂಚಕ್ಕೆ ಹೋಗುತ್ತಿದ್ದೇವೆ ಇದು ವ್ಯಾವಹಾರಿಕ ಆಟ
ನಡೆಯುತ್ತಿದೆ, ಇಲ್ಲಿ ಯಾವುದೇ ಛೂ! ಮಂತ್ರದ ಮಾತಿಲ್ಲ.
2. “ಗುರು ಮತ, ಶಾಸ್ತ್ರ
ಮತ ಯಾವುದೂ ಪರಮಾತ್ಮನ ಮತ ಅಲ್ಲ”
ಪರಮಾತ್ಮ ಹೇಳುತ್ತಾರೆ
ಮಕ್ಕಳೇ, ಈ ಗುರು ಮತ, ಶಾಸ್ತ್ರ ಮತ ಯಾವುದೂ ನನ್ನ ಮತ ಅಲ್ಲ, ಇವರು ಕೇವಲ ನನ್ನ ಹೆಸರು ಹೇಳಿ ಮತ
ಕೊಡುತ್ತಾರೆ. ಆದರೆ ನನ್ನ ಮತ ನನಗೇ ಗೊತ್ತು. ನನ್ನ ಮಿಲನದ ಮತವನ್ನು ನಾನು ಬಂದು ಕೊಡುತ್ತೇನೆ,
ಅದಕ್ಕೆ ಮೊದಲು ನನ್ನ ವಿಳಾಸ ಯಾರಿಗೂ ತಿಳಿದಿಲ್ಲ. ಗೀತೆಯಲ್ಲಿ ಭಲೆ ಭಗವಾನುವಾಚ ಎಂದಿದೆ. ಆದರೆ
ಗೀತೆಯನ್ನೂ ಸಹ ಮನುಷ್ಯರು ಮಾಡಿದ್ದಾರೆ, ಭಗವಂತನಂತೂ ಸ್ವಯಂ ಜ್ಞಾನಸಾಗರನಾಗಿದ್ದಾನೆ, ಭಗವಂತ ಏನು
ಮಹಾವಾಕ್ಯ ಹೇಳುತ್ತಾರೆ ಅದರ ನೆನಪಾರ್ಥವಾಗಿ ನಂತರ ಗೀತೆಯನ್ನು ಮಾಡಲಾಗಿದೆ. ಈ ವಿಧ್ವಾಂಸರು,
ಪಂಡಿತರು, ಆಚಾರ್ಯರು ಹೇಳುತ್ತಾರೆ ಪರಮಾತ್ಮನು ಸಂಸ್ಕøತದಲ್ಲಿ ಮಹಾವಾಕ್ಯ ಉಚ್ಚಾರಣೆ ಮಾಡಿದ್ದಾರೆ,
ಅದನ್ನು ಕಲಿಯದ ಹೊರತು ಪರಮಾತ್ಮನನ್ನು ಮಿಲನ ಮಾಡಲು ಸಾಧ್ಯವಿಲ್ಲ. ಇವರಂತೂ ಇನ್ನೂ ಉಲ್ಟಾ
ಕರ್ಮಕಾಂಡದಲ್ಲಿ ಸಿಕ್ಕಿಹಾಕಿಸುತ್ತಾರೆ, ವೇದ,ಶಾಸ್ತ್ರ ಓದಿ ಒಂದುವೇಳೆ ಮೆಟ್ಟಿಲನ್ನು ಹತ್ತಿದ್ದೇ
ಆದರೆ, ನಂತರ ಅಷ್ಟೇ ಇಳಿಯ ಬೇಕಾಗುತ್ತದೆ ಅರ್ಥಾತ್ ಅವರನ್ನು ಮರೆತು ಒಬ್ಬ ಪರಮಾತ್ಮನ ಜೊತೆ
ಬುದ್ಧಿಯೋಗವನ್ನು ಜೋಡಿಸಬೇಕು ಏಕೆಂದರೆ ಪರಮಾತ್ಮ ಸ್ಪಷ್ಟವಾಗಿ ಹೇಳುತ್ತಾರೆ ಈ ಕರ್ಮಕಾಂಡ,
ವೇದ,ಶಾಸ್ತ್ರ ಓದುವುದರಿಂದ ನನ್ನ ಪ್ರಾಪ್ತಿಯಾಗುವುದಿಲ್ಲ. ನೋಡಿ ದೃವ, ಪ್ರಹ್ಲಾದ, ಮೀರಾ
ಇವರೆಲ್ಲ ಯಾವ ಶಾಸ್ತ್ರ ಓದಿದ್ದರು? ಇಲ್ಲಿ ಓದಿರುವುದೆಲ್ಲವನ್ನೂ ಮರೆಯಬೇಕಾಗುತ್ತದೆ. ಹೇಗೆ
ಅರ್ಜುನನು ಓದಿದ್ದನು, ಆದರೆ ಅದನ್ನು ಸಹ ಮರೆಯಬೇಕಾಯಿತು. ಭಗವಂತನ ಸ್ಪಷ್ಟ
ಮಹಾವಾಕ್ಯವಾಗಿದೆ-ಶ್ವಾಸೋ-ಶ್ವಾಸ ನನ್ನನ್ನು ನೆನಪುಮಾಡಿ ಇದರಲ್ಲಿ ಏನನ್ನೂ ಮಾಡುವ
ಅವಶ್ಯಕತೆಯಿಲ್ಲ. ಎಲ್ಲಿಯವರೆಗೆ ಈ ಜ್ಞಾನ ಇಲ್ಲ ಅಲ್ಲಿಯವರೆಗೆ ಭಕ್ತಿಮಾರ್ಗ ನಡೆಯುತ್ತದೆ ಆದರೆ
ಜ್ಞಾನದ ದೀಪವು ಜಾಗೃತವಾಗಿಬಿಡುವುದು ಇದರಿಂದ ಕರ್ಮಕಾಂಡ ಬಿಟ್ಟುಹೋಗಿಬಿಡುತ್ತೆ ಏಕೆಂದರೆ
ಕರ್ಮಕಾಂಡ ಮಾಡುತ್ತಾ-ಮಾಡುತ್ತಾ ಒಂದುವೇಳೆ ಶರೀರ ಬಿಟ್ಟು ಹೋದರೆ ಅದರಿಂದ ಏನು ಲಾಭ ಸಿಕ್ಕಿತು?
ಪ್ರಾಲಬ್ಧವಂತೂ ಆಗಲೇ ಇಲ್ಲ, ಕರ್ಮ ಬಂಧನದ ಲೆಕ್ಕಾಚಾರದಿಂದಂತೂ ಮುಕ್ತಿ ಸಿಗಲಿಲ್ಲ. ಜನರಂತೂ
ತಿಳಿಯುತ್ತಾರೆ ಸುಳ್ಳು ಹೇಳಬಾರದು, ಕಳ್ಳತನ ಮಾಡಬಾರದು, ಯಾರಿಗೂ ದುಃಖ ಕೊಡಬಾರದು......ಇದು
ಒಳ್ಳೆಯ ಕರ್ಮವಾಗಿದೆ. ಆದರೆ ಇದಂತೂ ಸದಾಕಾಲಕ್ಕಾಗಿ ಕರ್ಮದ ಬಂಧನದಿಂದ ಬಿಡಿಸಿಕೊಳ್ಳಬೇಕು ಮತ್ತು
ವಿಕರ್ಮಗಳ ಬೇರನ್ನು ತೆಗೆದುಹಾಕಬೇಕು. ನಾವಂತು ಈಗ ಬಯಸುತ್ತೇವೆ, ಇಂತಹ ಬೀಜ ಹಾಕಿ ಯಾವುದರಿಂದ
ಒಳ್ಳೆಯ ಕರ್ಮದ ಮರ ಬೆಳೆಯಬೇಕು, ಅದರಿಂದ ಮನುಷ್ಯ ಜೀವನದ ಕಾರ್ಯವನ್ನು ತಿಳಿದು ಶ್ರೇಷ್ಠ
ಕರ್ಮವನ್ನು ಮಾಡಬೇಕು. ಒಳ್ಳೆಯದು. ಓಂ ಶಾಂತಿ.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
ಶಿವ ಶಕ್ತಿಯ ಅರ್ಥವೇ
ಆಗಿದೆ ಕಂಬೈಂಡ್. ತಂದೆ ಮತ್ತು ನೀವು – ಇಬ್ಬರನ್ನು ಸೇರಿಸಿ ಶಿವಶಕ್ತಿ ಎಂದು ಹೇಳಲಾಗುತ್ತದೆ.
ಯಾರು ಕಂಬೈಂಡ್ ಆಗಿರುತ್ತಾರೆ ಅವರನ್ನು ಯಾರು ಬೇರ್ಪಡಿಸಲು ಸಾಧ್ಯವಿಲ್ಲ. ಇದೇ ನೆನಪಿಟ್ಟುಕೊಳ್ಳಿ
ನಾವು ಕಂಬೈಂಡ್ ಆಗಿರುವುದಕ್ಕೆ ಅಧಿಕಾರಿಯಾಗಿದ್ದೇವೆ. ಮೊದಲು ಹುಡುಕುವವರಾಗಿದ್ದೇವು ಮತ್ತು ಈಗ
ಜೊತೆಯಲ್ಲಿರುವವರಾಗಿದ್ದೇವೆ – ಈ ನಶೆ ಸದಾ ಇರಲಿ.