01.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಾವೆಲ್ಲರೂ ಪರಸ್ಪರ ಆತ್ಮಿಕ ಸಹೋದರ-ಸಹೋದರರಾಗಿದ್ದೀರಿ, ನಿಮ್ಮಲ್ಲಿ ಆತ್ಮಿಕ ಪ್ರೀತಿ ಇರಬೇಕಾಗಿದೆ, ಆತ್ಮನ ಪ್ರೀತಿ ಆತ್ಮನೊಂದಿಗಿರಲಿ, ಶರೀರದ ಜೊತೆ ಅಲ್ಲ”

ಪ್ರಶ್ನೆ:
ತಂದೆ ತಮ್ಮ ಮನೆಯ ಯಾವ ಅದ್ಭುತವಾದ ಮಾತನ್ನು ತಿಳಿಸಿದ್ದಾರೆ?

ಉತ್ತರ:
ನನ್ನ ಮನೆಗೆ ಬರುವ ಆತ್ಮರು ತಮ್ಮ-ತಮ್ಮ ವಿಭಾಗದಲ್ಲಿ ತಮ್ಮ ನಂಬರಿನಲ್ಲಿ ಸ್ಥಿತರಾಗುತ್ತಾರೆ, ಅವರು ಎಂದಿಗೂ ಸ್ಥಾನವನ್ನು ಬಿಟ್ಟು ಅಲುಗಾಡುವುದಿಲ್ಲ, ಅಲ್ಲಿ ಎಲ್ಲ ಧರ್ಮದ ಆತ್ಮರೂ ನನ್ನ ಸಮೀಪ ಇರುತ್ತಾರೆ. ಅಲ್ಲಿಂದ ನಂಬರವಾರಾಗಿ ತಮ್ಮ ತಮ್ಮ ಸಮಯದಲ್ಲಿ ಪಾತ್ರ ಅಭಿನಯಿಸಲು ಬರುತ್ತಾರೆ - ಈ ಅದ್ಭುತವಾದ ಜ್ಞಾನವು ನಿಮಗೆ ಇದೇ ಸಮಯದಲ್ಲಿ ಕಲ್ಪದಲ್ಲಿ ಒಂದೇ ಸಾರಿ ಸಿಗುತ್ತದೆ. ಈ ಜ್ಞಾನವನ್ನು ಬೇರೆ ಯಾರೂ ಕೊಡಲು ಸಾಧ್ಯವಿಲ್ಲ.

ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಮಕ್ಕಳಿಗೆ ಗೊತ್ತಿದೆ - ನಾವಾತ್ಮರಿಗೆ ತಂದೆಯು ತಿಳಿಸಿಕೊಡುತ್ತಾರೆ ಹಾಗೂ ತಂದೆಯೂ ನಮ್ಮನ್ನು ಆತ್ಮಗಳ ತಂದೆಯೆಂದು ತಿಳಿಯುತ್ತಾರೆ. ಮತ್ತ್ಯಾರೂ ಎಂದಿಗೂ ತಿಳಿಸುವುದಿಲ್ಲ. ಇದನ್ನು ತಂದೆಯೇ ಆತ್ಮಗಳಿಗೆ ತಿಳಿಸುತ್ತಾರೆ. ಈ ಜ್ಞಾನದ ಪ್ರಾಲಭ್ದವನ್ನು ನೀವು ಹೊಸ ಪ್ರಪಂಚಕ್ಕೆ ನಂಬರವಾರ್ ಪುರುಷಾರ್ಥ ಅನುಸಾರವಾಗಿ ತೆಗೆದುಕೊಂಡು ಹೋಗುವವರಿದ್ದೀರಿ. ಈ ಪ್ರಪಂಚವು ಈಗ ಪರಿವರ್ತನೆ ಆಗುತ್ತದೆ, ಪರಿವರ್ತನೆ ಮಾಡುವವರು ತಂದೆ ಆಗಿದ್ದಾರೆ ಎಂಬ ನೆನಪೂ ಸಹ ಎಲ್ಲರಿಗೂ ಇರುವುದಿಲ್ಲ. ಇಲ್ಲಂತೂ ಸನ್ಮುಖದಲ್ಲಿ ಕುಳಿತಿರುವಿರಿ ಮತ್ತು ಮನೆಗೆ ಹೋದ ನಂತರ ಇಡೀ ದಿನ ನಿಮ್ಮ ಉದ್ಯೋಗ ವ್ಯವಹಾರದಲ್ಲಿಯೇ ತೊಡಗಿಬಿಡುತ್ತೀರಿ. ತಂದೆಯ ಶ್ರೀಮತವಾಗಿದೆ - ಮಕ್ಕಳೇ, ಎಲ್ಲಿಯೇ ಇದ್ದರೂ ನೀವು ನನ್ನನ್ನು ನೆನಪು ಮಾಡಿರಿ. ಹೇಗೆ ಕನ್ಯೆಗೆ ತನಗೆ ಯಾವ ಪತಿ ಸಿಗುತ್ತಾರೆ ಎನ್ನುವುದು ತಿಳಿದಿರುವುದಿಲ್ಲ, ಭಾವ ಚಿತ್ರ ನೋಡಿದ ನಂತರ ಅವರ ನೆನಪೇ ಇರುತ್ತದೆ. ಎಲ್ಲಿದ್ದರೂ ಒಬ್ಬರನ್ನೊಬ್ಬರು ನೆನಪು ಮಾಡುತ್ತಾರೆ. ಇದು ದೈಹಿಕ ಪ್ರೀತಿ ಆಗಿದೆ. ಆದರೆ ಇಲ್ಲಿ ಆತ್ಮಿಕ ಪ್ರೀತಿ ಇದೆ. ಆತ್ಮಿಕ ಪ್ರೀತಿಯೂ ಯಾರ ಜೊತೆ? ಆತ್ಮಿಕ ತಂದೆಯ ಜೊತೆ ಆತ್ಮಿಕ ಮಕ್ಕಳು ಮತ್ತು ಮಕ್ಕಳಲ್ಲಿಯೂ ಪರಸ್ಪರ ಸಹೋದರತ್ವದ ಪ್ರೀತಿ. ನೀವು ಮಕ್ಕಳಲ್ಲಿಯೂ ಸಹ ಬಹಳ ಪ್ರೀತಿ ಇರಬೇಕು ಅಂದರೆ ಆತ್ಮಗಳ ಜೊತೆ ಆತ್ಮಗಳ ಪ್ರೀತಿಯೂ ಬೇಕು. ನೀವು ಮಕ್ಕಳಿಗೆ ಈ ಶಿಕ್ಷಣ ಈಗ ಸಿಗುತ್ತದೆ ಆದರೆ ಪ್ರಪಂಚದ ಮನುಷ್ಯರಿಗೆ ಎನೂ ತಿಳಿದಿಲ್ಲ. ತಾವೆಲ್ಲರೂ ಸಹೋದರ ಸಹೋದರಾಗಿದ್ದೀರಿ ಅಂದಮೇಲೆ ಪರಸ್ಪರ ಅವಶ್ಯವಾಗಿ ಪ್ರೀತಿ ಇರಬೇಕು. ಏಕೆಂದರೆ ಒಬ್ಬ ತಂದೆಯ ಮಕ್ಕಳಾಗಿದ್ದೀರಿ ಅಲ್ಲವೆ. ಇದಕ್ಕೆ ಆತ್ಮಿಕ ಪ್ರೀತಿ ಎಂದು ಹೇಳುತ್ತಾರೆ. ನಾಟಕದನುಸಾರ ಕೇವಲ ಪುರುಷೋತ್ತಮ ಸಂಗಮದಲ್ಲಿಯೇ ತಂದೆ ಬಂದು ಸನ್ಮುಖದಲ್ಲಿ ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ ಮತ್ತು ತಂದೆ ಇಲ್ಲಿಗೆ ಬಂದಿದ್ದಾರೆ ಎಂದು ಮಕ್ಕಳೂ ತಿಳಿದುಕೊಂಡಿದ್ದೀರಿ. ನಾವು ಮಕ್ಕಳನ್ನು ಪವಿತ್ರ ಹೂವುಗಳನ್ನಾಗಿ ಮಾಡಿ ಪತಿತರಿಂದ ಪಾವನ ಮಾಡಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ ಅಂದರೆ ಕೈ ಹಿಡಿದು ಕರೆದುಕೊಂಡು ಹೋಗುತ್ತಾರೆಂದಲ್ಲ. ಎಲ್ಲ ಆತ್ಮಗಳು ಹಕ್ಕಿಗಳು ಹೋಗುವ ರೀತಿಯಲ್ಲಿ ಹಾರಿ ಹೋಗುತ್ತಾರೆ. ಹೇಗೆ ಸ್ಥೂಲ ಮಾರ್ಗದರ್ಶಕರು ಇರುತ್ತಾರೆ ಮತ್ತು ಅವರ ಜೊತೆ ಇನ್ನೂ ಕೆಲವರು ಇರುತ್ತಾರೆ, ಮುಂದೆ ಕುಳಿತಿರುತ್ತಾರೆ. ಅವುಗಳಿಗೆ ಮಾರ್ಗದರ್ಶಕನಿರುತ್ತದೆ, ಅದರ ಜೊತೆ ಮುಂದಿನ ಭಾಗದಲ್ಲಿ ಇನ್ನೂ ಹಲವು ಮಾರ್ಗದರ್ಶಕ ಹಕ್ಕಿಗಳು ಇರುತ್ತವೆ. ಪೂರ್ಣ ಸಮೂಹವು ಒಟ್ಟಿಗೆ ಹೋಗುವಾಗ ಬಹಳ ಶಬ್ದವಾಗುತ್ತದೆ. ಸೂರ್ಯನ ಬೆಳಕನ್ನು ಮುಚ್ಚಿಬಿಡುತ್ತವೆ. ಅಷ್ಟು ದೊಡ್ಡ ಗುಂಪು ಇರುತ್ತದೆ. ನೀವು ಆತ್ಮಗಳ ಸಮೂಹ ಎಣಿಕೆ ಇಲ್ಲದಷ್ಟು ದೊಡ್ಡದು. ಎಂದೂ ಎಣಿಕೆ ಮಾಡಲು ಸಾಧ್ಯವಿಲ್ಲ. ಇಲ್ಲಿ ಮನುಷ್ಯರನ್ನು ಎಣಿಸಲು ಸಾಧ್ಯವಿಲ್ಲ. ಜನಗಣತಿ ಮಾಡುತ್ತಾರೆ ಆದರೆ ಕರಾರುವಾಕ್ಕಾಗಿ ಎಣಿಕೆ ಮಾಡಲು ಆಗುವುದಿಲ್ಲ. ಎಷ್ಟೊಂದು ಆತ್ಮಗಳಿದ್ದಾರೆ. ಎಂದೂ ಇದರ ಲೆಕ್ಕವನ್ನು ತೆಗೆಯಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಎಷ್ಟು ಮನುಷ್ಯರಿದ್ದರು ಎಂದು ಅಂದಾಜು ಮಾಡಲಾಗುತ್ತದೆ. ಏಕೆಂದರೆ ಕೇವಲ ಭಾರತವೇ ಉಳಿಯುತ್ತದೆ. ನಿಮ್ಮ ಬುದ್ಧಿಯಲ್ಲಿದೆ - ನಾವು ವಿಶ್ವದ ಮಾಲೀಕರಾಗುತ್ತಿದ್ದೇವೆ. ಆತ್ಮವು ಶರೀರದಲ್ಲಿದ್ದಾಗ ಜೀವಾತ್ಮವಾಗಿರುತ್ತದೆ ಎಂದರೆ ಇವೆರಡೂ ಒಟ್ಟಿಗೆ ಸುಖ ಅಥವಾ ದುಃಖವನ್ನು ಭೋಗಿಸುತ್ತದೆ. ಇದನ್ನು ಆತ್ಮವೇ ಪರಮಾತ್ಮ, ಅದು ಎಂದಿಗೂ ದುಃಖವನ್ನು ಅನುಭವಿಸುವುದಿಲ್ಲ ನಿರ್ಲೇಪವಾಗಿದೆ ಎಂದು ಅನೇಕರು ತಿಳಿಯುತ್ತಾರೆ, ಇನ್ನು ಕೆಲವರು ನಾವು ನಮ್ಮನ್ನಂತೂ ಆತ್ಮ ಎಂದು ನಿಶ್ಚಯ ಮಾಡಿಕೊಳ್ಳುತ್ತೇವೆ ಆದರೆ ತಂದೆಯನ್ನು ಎಲ್ಲಿ ನೆನಪು ಮಾಡುವುದು? ಎಂದು ಹೇಳಿ ಈ ಮಾತಿನಲ್ಲಿಯೂ ಅನೇಕರು ತಬ್ಬಿಬ್ಬಾಗುತ್ತಾರೆ. ತಂದೆಯು ಪರಮಧಾಮ ನಿವಾಸಿ ಆಗಿದ್ದಾರೆ ಎಂದು ನಿಮಗೆ ತಿಳಿದಿದೆ, ತಂದೆ ತಮ್ಮ ಪರಿಚಯ ಕೊಟ್ಟಿದ್ದಾರೆ, ಎಲ್ಲಿಯೇ ನಡೆದಾಡುತ್ತಾ ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿರಿ. ತಂದೆ ಪರಮಧಾಮದಲ್ಲಿ ಇರುತ್ತಾರೆ, ನೀವು ಆತ್ಮರೂ ಸಹ ಆಲ್ಲಿನ ನಿವಾಸಿಗಳು,ನಂತರ ಇಲ್ಲಿ ಪಾತ್ರ ಮಡಲು ಬರುತ್ತೀರಿ ಈ ಜ್ಞಾನವೂ ಸಹ ಈಗಲೇ ಸಿಕ್ಕಿದೆ.

ನೀವು ದೇವತೆಗಳಾಗಿರುವಾಗ, ಇಂತಿಂತಹ ಧರ್ಮದ ಆತ್ಮರು ಮೇಲಿದ್ದಾರೆ ಎನ್ನುವುದು ನೆನಪಿರುವುದಿಲ್ಲ. ಮೇಲಿನಿಂದ ಬಂದು ಹೇಗೆ ಶರೀರವನ್ನು ಧಾರಣೆ ಮಾಡಿ ಪಾತ್ರ ಅಭಿನಯಿಸುತ್ತೇವೆ ಎಂಬ ಚಿಂತನೆಯೂ ನಡೆಯುವುದಿಲ್ಲ. ತಂದೆಯೂ ಪರಮಧಾಮದಲ್ಲಿರುತ್ತಾರೆ, ಈ ಶರೀರದಲ್ಲಿ ಬಂದು ಪ್ರವೇಶ ಆಗುತ್ತಾರೆ ಎನ್ನುವುದೂ ಸಹ ಮೊದಲು ತಿಳಿದಿರಲಿಲ್ಲ. ಈಗ ಅವರು ತಾವು ಶರೀರದಲ್ಲಿ ಪ್ರವೇಶ ಮಾಡುತ್ತಾರೆಂದು ತಮ್ಮ ವಿಳಾಸ ತಿಳಿಸುತ್ತಾರೆ. ನೀವು ಶಿವಬಾಬಾ ಛಿ/o ಪರಮಧಾಮ ಎಂದು ಬರೆದರೆ ಪರಮಧಾಮಕ್ಕಂತೂ ಪತ್ರ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಶಿವಬಾಬಾ ಛಿ/o ಬ್ರಹ್ಮಾ ಎಂದು ಬರೆಯುತ್ತೀರಿ ಮತ್ತು ಇಲ್ಲಿಯ ವಿಳಾಸ ಬರೆಯುತ್ತೀರಿ ಏಕೆಂದರೆ ತಂದೆ ಇಲ್ಲಿಯೇ ಬಂದಿದ್ದಾರೆ ಎಂದು ನಿಮಗೆ ಗೊತ್ತಿದೆ. ಈ ರಥದಲ್ಲಿ ಪ್ರವೇಶ ಮಾಡುತ್ತಾರೆ ಹಾಗೆ ನೋಡಿದರೆ ಆತ್ಮರೂ ಸಹ ಪರಮಧಾಮ ನಿವಾಸಿಗಳು. ನೀವು ಸಹೋದರ ಸಹೋದರರಾಗಿದ್ದೀರಿ. ಸದಾ ಇದನ್ನೇ ತಿಳಿಯಿರಿ - ಇವರು ಆತ್ಮಾ ಅಗಿದ್ದಾರೆ, ಇವರ ಹೆಸರು ಇಂತಹದು. ಆತ್ಮವನ್ನು ಇಲ್ಲಿಯೇ ನೋಡುತ್ತೀರಿ ಆದರೆ ಮನುಷ್ಯರು ದೇಹದ ಅಭಿಮಾನದಲ್ಲಿ ಬಂದು ಬಿಡುತ್ತಾರೆ. ತಂದೆಯು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ, ತಿಳಿಸುತ್ತಾರೆ - ನೀವು ನಿಮ್ಮನ್ನು ಆತ್ಮ ಎಂದು ತಿಳಿಯಿರಿ ಹಾಗೂ ನನ್ನನ್ನು ನೆನಪು ಮಾಡಿರಿ. ಈ ಸಮಯದಲ್ಲಿ ತಂದೆ ತಿಳಿಸುತ್ತಾರೆ - ನಾನು ಇಲ್ಲಿಗೆ ಬಂದಿದ್ದೇನೆ ಮತ್ತು ಮಕ್ಕಳಿಗೆ ಜ್ಞಾನವನ್ನೂ ಕೊಡುತ್ತೇನೆ, ಹಳೆಯ ಕರ್ಮೇಂದ್ರಿಯಗಳನ್ನು ತೆಗೆದುಕೊಂಡಿದ್ದೇನೆ ಅದರಲ್ಲಿಯೂ ಮುಖ ಮುಖ್ಯವಾಗಿದೆ. ನಯನಗಳೂ ಇವೆ. ಆದರೆ ಜ್ಞಾನಾಮೃತವೂ ಮುಖದಿಂದಲೇ ಸಿಗುತ್ತದೆ. ಗೋಮುಖವೆಂದು ಹೇಳುತ್ತಾರಲ್ಲವೆ ಅರ್ಥಾತ್ ಇದು ತಾಯಿಯ ಮುಖವಾಗಿದೆ. ದೊಡ್ಡ ತಾಯಿಯ ಮೂಲಕ ನಿಮ್ಮನ್ನು ದತ್ತು ಮಾಡಿಕೊಳ್ಳುತ್ತಾರೆ. ಯಾರು? ಶಿವತಂದೆ. ಅವರು ಇಲ್ಲಿಯೇ ಇದ್ದಾರಲ್ಲವೆ! ಈ ಜ್ಞಾನವೆಲ್ಲವೂ ಬುದ್ಧಿಯಲ್ಲಿರಬೇಕು. ನಾನು ನಿಮ್ಮನ್ನು ಪ್ರಜಾಪಿತ ಬ್ರಹ್ಮಾನ ಮೂಲಕ ದತ್ತು ಮಾಡಿಕೊಳ್ಳುತ್ತೇನೆ ಅಂದ ಮೇಲೆ ಇವರು ತಾಯಿಯೂ ಆದರು. ನೀವು ಮಾತ ಪಿತ ನಾವು ನಿಮ್ಮ ಬಾಲಕರು. . . ಎನ್ನುವ ಗಾಯನ ಇದೆ ಅಂದಾಗ ಅವರು ಎಲ್ಲ ಆತ್ಮಗಳ ತಂದೆ ಆಗಿದ್ದಾರೆ. ಅವರಿಗೆ (ಶಿವತಂದೆಗೆ) ತಾಯಿಯೆಂದು ಹೇಳುವುದಿಲ್ಲ, ಅವರು ತಂದೆ ಆಗಿದ್ದಾರೆ. ತಂದೆಯಿಂದ ಆಸ್ತಿ ಸಿಗುತ್ತದೆ ಮತ್ತು ತಾಯಿಯೂ ಬೇಕು. ಅವರು ಇಲ್ಲಿಗೆ ಬರುತ್ತಾರೆ. ಈಗ ನಿಮಗೆ ಸ್ಪಷ್ಟವಾಗಿದೆ - ತಂದೆ ಪರಮಧಾಮದಲ್ಲಿರುತ್ತಾರೆ, ನಾವು ಆತ್ಮಗಳು ಅಲ್ಲಿರುತ್ತೇವೆ, ನಂತರ ಪಾತ್ರ ಮಾಡಲು ಇಲ್ಲಿ ಬರುತ್ತೇವೆ. ಪ್ರಪಂಚದವರಿಗೆ ಈ ಮಾತುಗಳ ಬಗ್ಗೆ ಏನೂ ತಿಳಿದಿಲ್ಲ. ಅವರು ಕಲ್ಲು ಮುಳ್ಳು ಎಲ್ಲದರಲ್ಲಿ ಪರಮಾತ್ಮ ಇದ್ದಾನೆ ಎಂದು ಹೇಳುತ್ತಾರೆ. ಈ ರೀತಿ ಇದ್ದಿದ್ದರೆ ಲೆಕ್ಕವಿಲ್ಲದಷ್ಟಾಗುತ್ತಿದ್ದರು. ಇದಕ್ಕೆ ಘೋರ ಅಂಧಕಾರ ಎಂದು ಹೇಳಲಾಗುತ್ತದೆ. ಗಾಯನವೂ ಇದೆ, ಜ್ಞಾನ ಸೂರ್ಯ ಪ್ರಕಟ ಅದಾಗ ಅಜ್ಞಾನ ಅಂಧಕಾರ ದೂರ ಆಗುತ್ತದೆ. ಈ ಸಮಯದಲ್ಲಿ ರಾವಣನ ರಾಜ್ಯವಿದೆ ಆ ಕಾರಣದಿಂದಾಗಿ ಅಂಧಕಾರ ಇದೆ ಎನ್ನುವ ಜ್ಞಾನ ಇದೆ. ಅಲ್ಲಿ ರಾವಣನ ರಾಜ್ಯ ಇರುವುದಿಲ್ಲ ಆದ್ದರಿಂದ ಯಾವ ವಿಕಾರ ಇರುವುದಿಲ್ಲ, ದೇಹ ಅಭಿಮಾನವೂ ಇರುವುದಿಲ್ಲ. ಅಲ್ಲಿ ಆತ್ಮಾಭಿಮಾನಿ ಆಗಿರುತ್ತಾರೆ. ಆತ್ಮಕ್ಕೆ ಜ್ಞಾನವಿರುತ್ತದೆ - ಈಗ ಪುಟ್ಟಮಗುವಾಗಿದ್ದೇನೆ, ಈಗ ಯುವಕನಾಗಿದ್ದೇನೆ, ಈಗ ವೃದ್ಧ ಶರೀರವಾಗಿದೆ ಆದ್ದರಿಂದ ಈಗ ಈ ಶರೀರ ಬಿಟ್ಟು ಮತ್ತೊಂದನ್ನು ಪಡೆಯುತ್ತೇನೆ. ಇಂತಹವರು ಸತ್ತು ಹೋದರು ಎಂದು ಸತ್ಯಯುಗದಲ್ಲಿ ಹೇಳುವುದಿಲ್ಲ ಏಕೆಂದರೆ ಅದು ಅಮರಲೋಕವಾಗಿದೆ. ಖುಷಿಯಿಂದ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಈಗ ಆಯುಷ್ಯ ಮುಗಿಯಿತು, ಇದನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕು ಎನ್ನುವುದು ತಿಳಿಯುತ್ತದೆ, ಇದಕ್ಕೆ ಸನ್ಯಾಸಿಗಳು ಸರ್ಪದ ಉದಾಹರಣೆ ಕೊಡುತ್ತಾರೆ. ವಾಸ್ವದಲ್ಲಿ ಈ ಉದಾಹರಣೆ ತಂದೆ ಕೊಟ್ಟಿರುವುದಾಗಿದೆ. ಅದನ್ನು ಸನ್ಯಾಸಿಗಳು ತೆಗೆದುಕೊಂಡಿದ್ದಾರೆ. ಆದ್ದರಿಂದ ತಂದೆಯೂ ತಿಳಿಸುತ್ತಾರೆ – ಈಗ ನಾನು ನಿಮಗೆ ಹೇಳುವ ಜ್ಞಾನ ಪ್ರಾಯಃಲೋಪವಾಗುತ್ತದೆ. ತಂದೆಯ ಅಕ್ಷರವೂ ಇದೆ, ಚಿತ್ರವೂ ಇದೆ ಆದರೆ ಹಿಟ್ಟಿನಲ್ಲಿ ಉಪ್ಪು ಇದ್ದಂತೆ. ಆದ್ದರಿಂದ ತಂದೆ ಕುಳಿತು ಅರ್ಥವನ್ನು ತಿಳಿಸುತ್ತಾರೆ. ಸರ್ಪವು ಹೇಗೆ ಹಳೆಯ ಪೋರೆಯನ್ನು ಬಿಡುತ್ತದೆ ಮತ್ತು ಹೊಸ ಪೋರೆಯು ಬರುತ್ತದೆ ಅದಕ್ಕೆ ಒಂದು ಶರೀರ ಬಿಟ್ಟು ಇನ್ನೊಂದು ಶರೀರ ಪ್ರವೇಶ ಮಾಡುತ್ತದೆ ಎಂದು ಹೇಳುವುದಿಲ್ಲ. ಪೋರೆ ಬಿಡುವುದು ಒಂದು ಸರ್ಪದ ಉದಾಹರಣೆ ಆಗಿದೆ. ಆ ಪೋರೆಯೂ ಕಾಣಿಸುತ್ತದೆ. ಹೇಗೆ ವಸ್ತ್ರಗಳನ್ನು ಕಳಚುತ್ತಾರೆ ಹಾಗೆಯೇ ಸರ್ಪವೂ ಪೋರೆಯನ್ನು ಕಳಚುತ್ತದೆ ಇನ್ನೊಂದು ಸಿಗುತ್ತದೆ. ಸರ್ಪವಂತೂ ಬದುಕಿಯೇ ಇರುತ್ತದೆ. ಸದಾ ಅಮರವಾಗಿರುತ್ತದೆ ಎಂದಲ್ಲ. 2-3 ಪೋರೆಗಳನ್ನು ಬದಲಿಸಿ ನಂತರ ಸತ್ತುಹೋಗುತ್ತದೆ. ಹಾಗೆಯೇ ಸತ್ಯಯುಗದಲ್ಲಿ ನೀವೂ ಸಹ ಸಮಯಾನುಸಾರ ಒಂದು ಪೆÇರೆಯನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಿರಿ. ಈಗ ನಾವು ಗರ್ಭದಲ್ಲಿ ಹೋಗಬೇಕಾಗಿದೆ ಎಂದು ನಿಮಗೆ ತಿಳಿಯುತ್ತದೆ. ಅಲ್ಲಿ ಯೋಗ ಬಲದ ಮಾತಾಗಿದೆ. ನೀವು ಯೋಗಬಲದಿಂದ ಜನಿಸುತ್ತೀರಿ. ಆದ್ದರಿಂದ ಅಮರರೆಂದು ಹೇಳುತ್ತಾರೆ. ಆತ್ಮ ಹೇಳುತ್ತದೆ ಈಗ ನಾನು ವೃದ್ಧನಾಗಿದ್ದೇನೆ, ಶರೀರ ಹಳೆಯದಾಗಿದೆ ಹಾಗೂ ಈಗ ನಾನು ಹೋಗಿ ಚಿಕ್ಕ ಮಗುವಾಗುತ್ತೇನೆ ಎಂದು ಸಾಕ್ಷಾತ್ಕಾರ ಆಗುತ್ತದೆ. ಆಗ ತಾನಾಗಿಯೇ ಶರೀರ ಬಿಟ್ಟು ಚಿಕ್ಕ ಮಗುವಿನ ಶರೀರದಲ್ಲಿ ಪ್ರವೇಶ ಮಾಡುತ್ತದೆ. ಅಲ್ಲಿ ಶರೀರಕ್ಕೆ ಜೈಲು ಎಂದು ಹೇಳುವುದಿಲ್ಲ. ಮಹಲು ಎನ್ನುವರು ಅನುಭವಿಸಬೇಕಾದ ಯಾವ ಪಾಪವಾಗಿರುವಿದಿಲ್ಲ. ಗರ್ಭ ಮಹಲಿನಲ್ಲಿ ಆರಾಮವಾಗಿರುತ್ತಾರೆ, ದುಃಖದ ಯಾವ ಮಾತೂ ಇರುವುದಿಲ್ಲ. ಅಲ್ಲಿ ಖಾಯಿಲೆ ಬರುವಂತಹ ಯಾವ ಕೊಳಕು ಪದಾರ್ಥ ತಿನ್ನುವುದಿಲ್ಲ.

ಈಗ ತಂದೆ ತಿಳಿಸುತ್ತಾರೆ - ಮಕ್ಕಳೇ, ನೀವು ನಿರ್ವಾಣಧಾಮಕ್ಕೆ ಹೋಗಬೇಕಾಗಿದೆ. ಈ ಪ್ರಪಂಚವು ಬದಲಾಗುತ್ತದೆ. ಹಳೆಯದರಿಂದ ಪುನಃ ಹೊಸದಾಗುತ್ತದೆ. ಪ್ರತಿಯೊಂದು ವಸ್ತುವೂ ಪರಿವರ್ತನೆಯಾಗುತ್ತದೆ. ವೃಕ್ಷದಿಂದ ಬೀಜವು ಬರುತ್ತದೆ. ಮತ್ತೆ ಬೀಜವನ್ನು ಹಾಕಿದಾಗ ಎಷ್ಟೊಂದು ಫಲವು ಸಿಗುತ್ತದೆ. ಸತ್ಯಯುಗದಲ್ಲಿ ಒಂದೇ ಮಗು ಯೋಗಬಲದಿಂದ ಜನ್ಮ ಪಡೆಯುತ್ತದೆ. ಇಲ್ಲಿ ವಿಕಾರದಿಂದ 5-6 ಮಕ್ಕಳ ಜನ್ಮವಾಗುತ್ತದೆ. ಸತ್ಯಯುಗ ಮತ್ತು ಕಲಿಯುಗಕ್ಕೆ ಬಹಳ ಅಂತರ ಇದೆ ಎಂದು ತಂದೆ ತಿಳಿಸುತ್ತಾರೆ. ಹೊಸ ಪ್ರಪಂಚ ಹೇಗೆ ಹಳೆಯದಾಗುತ್ತದೆ ಮತ್ತು ಹೇಗೆ 84 ಜನ್ಮಗಳನ್ನು ಪಡೆಯುತ್ತಾರೆ, ಇದೂ ಸಹ ತಿಳಿಸಲಾಗುತ್ತದೆ. ಪ್ರತಿಯೊದು ಆತ್ಮ ತನ್ನ ತನ್ನ ಪಾತ್ರ ಮುಗಿಸಿ ಹೋದ ಮೇಲೆ ತನ್ನ ತನ್ನ ಸ್ಥಾನದಲ್ಲಿ ಸ್ಥಿತರಾಗುತ್ತಾರೆ, ಸ್ರಥಾನ ಬದಲಾವಣೆಯಾಗುವುದಿಲ್ಲ ನಂತರ ನಂಬರವಾರ್ ಕೆಳಗೆ ಬರುತ್ತಾರೆ. ಆದ್ದರಿಂದ ಮೂಲ ವತನದ ಚಿಕ್ಕ ಚಿಕ್ಕ ಮಾದರಿಯನ್ನು ಮಾಡಿಡುತ್ತಾರೆ. ಎಲ್ಲ ಧರ್ಮದವರಿಗೆ ತಮ್ಮ ತಮ್ಮ ವಿಭಾಗಳಿವೆ, ದೇವಿ ದೇವತಾ ಧರ್ಮವೂ ಮೊದಲನೇಯದಾಗಿದೆ. ನಂತರ ಕ್ರಮೇಣ ಬರುತ್ತಾರೆ. ಹಾಗೆಯೇ ಹೋಗಿ ಸ್ಥಿತ ಆಗುತ್ತಾರೆ. ನೀವೂ ಸಹ ನಂಬರವಾರ ತೇರ್ಗಡೆ ಆಗಿ ಆ ಅಂಕಗಳನುಸಾರ ಸ್ಥಿತರಾಗುತ್ತೀರಿ. ತಂದೆಯ ಈ ವಿದ್ಯೆ ಕಲ್ಪದಲ್ಲಿ ಒಮ್ಮೆ ಮಾತ್ರವೇ ಇರುತ್ತದೆ. ಆತ್ಮಗಳ ವೃಕ್ಷ ಎಷ್ಟು ಚಿಕ್ಕದಾಗಿರುತ್ತದೆ. ಹೇಗೆ ನಿಮ್ಮದು ಇಷ್ಟು ದೊಡ್ಡ ವೃಕ್ಷವಾಗಿದೆ. ನೀವು ಮಕ್ಕಳು ದಿವ್ಯ ದೃಷ್ಟಿಯಿಂದ ನೋಡಿ ಬಂದು ಇಲ್ಲಿ ಚಿತ್ರಗಳನ್ನು ರಚಿಸುತ್ತೀರಿ. ಆತ್ಮ ಎಷ್ತು ಸೂಕ್ಷ್ಮವಾಗಿದೆ, ಶರೀರ ಎಷ್ಟು ದೊಡ್ಡದಾಗಿದೆ. ಎಲ್ಲ ಆತ್ಮಗಳು ಅಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ಬಹಳ ಕಡಿಮೆ ಸ್ಥಾನದಲ್ಲಿ ಸಮೀಪದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ, ಮನುಷ್ಯರ ವೃಕ್ಷ ದೊಡ್ಡದಾಗಿದೆ. ಮನುಷ್ಯರಿಗೆ ನಡೆಯಲು-ತಿರುಗಾಡಲು, ಓದಲು-ಆಟವಾಡಲು, ನೌಕರಿ ಮಾಡಲು ಸ್ಥಳವು ಬೇಕಲ್ಲವೆ. ಎಲ್ಲವನ್ನೂ ಮಾಡಲು ಸ್ಥಳವು ಬೇಕು, ನಿರಾಕಾರಿ ಪ್ರಪಂಚದಲ್ಲಿ ಆತ್ಮಗಳಿಗೆ ಚಿಕ್ಕ ಸ್ಥಾನವಿರುತ್ತದೆ. ಆದ್ದರಿಂದ ಈ ಚಿತ್ರಗಳಲ್ಲಿಯೂ ತೋರಿಸಲಾಗಿದೆ. ಇದು ಮಾಡಿ-ಮಾಡಲ್ಪಟ್ಟಿರುವ ನಾಟಕವಾಗಿದೆ, ಶರೀರ ಬಿಟ್ಟು ಆತ್ಮಗಳು ಅಲ್ಲಿಗೆ ಹೋಗಬೇಕಾಗಿದೆ. ನೀವು ಮಕ್ಕಳ ಬುದ್ಧಿಯಲ್ಲಿದೆ – ಅಲ್ಲಿ ನಾವು ಹೇಗೆ ಇರುತ್ತೇವೆ ಮತ್ತು ಅನ್ಯ ಧರ್ಮದವರು ಹೇಗಿರುತ್ತಾರೆ ನಂತರ ನಂಬರವಾರ್ ಹೇಗೆ ಬೇರೆ ಬೇರೆಯಾಗುತ್ತಾರೆ ಇವೆಲ್ಲ ಮಾತುಗಳನ್ನು ನಿಮಗೆ ಕಲ್ಪ ಕಲ್ಪವೂ ಒಬ್ಬ ತಂದೆ ಬಂದು ತಿಳಿಸುತ್ತಾರೆ. ಉಳಿದೆಲ್ಲವೂ ದೈಹಿಕ ವಿದ್ಯೆಗಳಾಗಿವೆ ಅವಕ್ಕೆ ಆತ್ಮಿಕ ವಿದ್ಯೆ ಎಂದು ಹೇಳಲು ಸಾಧ್ಯವಿಲ್ಲ.

ಈಗ ನೀವು ತಿಳೀದುಕೊಂಡಿದ್ದೀರಿ - ನಾವು ಆತ್ಮ ಆಗಿದ್ದೇವೆ. ಐ (ನಾನು) ಅಂದರೆ ಆತ್ಮ, ಮೈ(ನನ್ನದು) ಅಂದರೆ ಇದು ನನ್ನ ಶರೀರವಾಗಿದೆ. ಮನುಷ್ಯರು ಇದನ್ನು ತಿಳಿದುಕೊಂಡಿಲ್ಲ, ಅವರಿಗೆ ಸದಾ ದೈಹಿಕ ಸಂಬಂಧವಿರುತ್ತದೆ. ಸತ್ಯಯುಗದಲ್ಲಿಯೂ ದೈಹಿಕ ಸಂಬಂಧವಿರುತ್ತದೆ. ಆದರೆ ಅಲ್ಲಿ ನೀವು ಆತ್ಮಾಭಿಮಾನಿ ಆಗಿರುತ್ತೀರಿ. ನಾವು ಆತ್ಮ ಆಗಿದ್ದೇವೆ, ಈ ನಮ್ಮ ಶರೀರ ಈಗ ವೃದ್ಧವಾಗಿದೆ ಆದುದರಿಂದ ಇದನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ ಎನ್ನುವುದು ತಿಳಿದಿರುತ್ತದೆ, ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ನೀವು ಮಕ್ಕಳು ತಂದೆಯಿಂದ ರಾಜ್ಯಭಾಗ್ಯವನ್ನು ಪಡೆಯಬೇಕಾಗಿದೆ. ಅವಶ್ಯವಾಗಿ ಬೇಹದ್ದಿನ ತಂದೆಯಲ್ಲವೆ! ಮನುಷ್ಯರು ಎಲ್ಲಿಯವರೆಗೆ ಜ್ಞಾನವನ್ನು ಪೂರ್ಣ ಅರ್ಥ ಮಾಡಿಕೊಳ್ಳುವುದಿಲ್ಲ ಅಲ್ಲಿಯವರೆಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ನೀವು ಬ್ರಾಹ್ಮಣರಿಗೆ ಜ್ಞಾನವಿದೆ, ವಾಸ್ತವದಲ್ಲಿ ನೀವು ಬ್ರಾಹ್ಮಣರ ಮಂದಿರವೂ ಸಹ ಅಜ್ಮೀರಿನಲ್ಲಿದೆ. ಒಬ್ಬರು ಪುಷ್ಕರಣಿ ಮತ್ತು ಇನ್ನೊಬ್ಬರು ಸಾರಸಿದ್ಧ ಬ್ರಾಹ್ಮಣರು ಇರುತ್ತಾರೆ. ಅಜ್ಮೀರನಲ್ಲಿ ಬ್ರಹ್ಮಾನ ಮಂದಿರವನ್ನು ನೋಡಲು ಹೋಗುತ್ತಾರೆ, ಬ್ರಹ್ಮಾ ಕುಳಿತಿದ್ದಾರೆ, ದಾಡಿ ಮೀಸೆಯನ್ನು ತೋರಿಸಿದ್ದಾರೆ. ಅವರನ್ನು ಮನುಷ್ಯರ ರೂಪದಲ್ಲಿ ತೋರಿಸಿದ್ದಾರೆ. ನೀವು ಬ್ರಾಹ್ಮಣರೂ ಸಹ ಮನುಷ್ಯರರೂಪದಲ್ಲಿರುವಿರಿ. ಬ್ರಾಹ್ಮಣರಿಗೆ ದೇವತೆ ಎಂದು ಹೇಳುವುದಿಲ್ಲ. ಬ್ರಹ್ಮಾನ ಸಂತಾನರಾದ ನೀವೇ ಸತ್ಯ ಸತ್ಯ ಬ್ರಾಹ್ಮಣರಾಗಿರುವಿರಿ. ಅವರೇನು ಬ್ರಹ್ಮಾನ ಸಂತಾನರಲ್ಲ. ಕೊನೆಯಲ್ಲಿ ಬಂದವರಿಗೆ ಏನೂ ತಿಳಿಯುವುದಿಲ್ಲ. ನಿಮ್ಮದು ಇದು ವಿರಾಟ ರೂಪವಾಗಿದೆ, ಇದು ಬುದ್ಧಿಯಲ್ಲಿ ನೆನಪಿರಬೇಕು. ಇದು ಪೂರ್ನ ಜ್ಞಾನವಾಗಿದೆ. ಇದನ್ನು ನೀವು ಯಾರಿಗಾದರೂ ಬಹಳ ಚೆನ್ನಾಗಿ ತಿಳಿಸಬಹುದು - ನಾವು ಆತ್ಮಗಳು ತಂದೆಯ ಮಕ್ಕಳಾಗಿದ್ದೇವೆ - ಇದನ್ನು ಯಥಾರ್ಥವಾಗಿ ತಿಳಿದುಕೊಂಡು ಈ ನಿಶ್ಚಯವೂ ಬಹಳ ಪಕಾ ಪಕ್ಕಾ ಆಗಿರಬೇಕು. ಇದಂತೂ ಯಥಾರ್ಥವಾದ ಮಾತಾಗಿದೆ. ಎಲ್ಲ ಆತ್ಮಗಳ ತಂದೆ ಒಬ್ಬ ಪರಮಪಿತ ಪರಮಾತ್ಮನಾಗಿದ್ದಾರೆ, ಎಲ್ಲರೂ ಆವರನ್ನೇ ನೆನಪು ಮಾಡುತ್ತಾರೆ. ಮನುಷ್ಯರ ಬಾಯಿಂದ ಹೇ ಭಗವಂತ ಎಂದು ಅವಶ್ಯ ಹೊರಬರುತ್ತದೆ. ಪರಮಾತ್ಮ ಯಾರು ಎನ್ನುವುದನ್ನು ತಂದೆಯು ಬಂದು ತಿಳಿಸುವವರೆಗೆ ಯಾರಿಗೂ ತಿಳಿಯುವುದಿಲ್ಲ. ತಂದೆ ತಿಳಿಸಿದ್ದಾರೆ – ಈ ಲಕ್ಷ್ಮೀ ನಾರಾಯಣ ಯಾರು ವಿಶ್ವದ ಮಾಲೀಕರಾಗಿದ್ದರು ಇವರಿಗೇ ಗೊತ್ತಿರಲಿಲ್ಲ ಅಂದ ಮೇಲೆ ಋಷಿ ಮುನಿಗಳಿಗೆ ಹೇಗೆ ಗೊತ್ತಿರುತ್ತದೆ! ಈಗ ನೀವು ತಂದೆಯ ಮೂಲಕ ಅರಿತಿದ್ದೀರಿ, ಆಸ್ತಿಕರಾಗಿದ್ದೀರಿ ಏಕೆಂದರೆ ನೀವು ರಚೈತಾ ಮತ್ತು ರಚನೆಯ ಆದಿ ಮಧ್ಯ ಅಂತ್ಯವನ್ನು ತಿಳಿದುಕೊಂಡಿದ್ದೀರಿ, ಕೆಲವರು ಬಹಳ ಚೆನ್ನಾಗಿ ಧಾರಣೆ ಮಾಡುತ್ತಾರೆ, ಇನ್ನು ಕೆಲವರು ಕಡಿಮೆ ಧಾರಣೆ ಮಾಡುತ್ತಾರೆ. ಈ ವಿದ್ಯೆಯು ಬಹಳಸಹಜವೂ ಆಗಿದೆ, ದೊಡ್ಡದೂ ಆಗಿದೆ. ತಂದೆಯಲ್ಲಿ ಇಷ್ಟೊಂದು ಜ್ಞಾನವಿದೆ ಸಾಗರವನ್ನು ಶಾಹಿಯಾಗಿ ಮಾಡಿಕೊಂಡು ಬರೆದರೂ ಸಹ ಅದರ ಅಂತ್ಯವನ್ನು ಬರೆಯಲು ಸಾಧ್ಯವಿಲ್ಲ. ತಂದೆಯು ಸಹಜ ಮಾಡಿ ತಿಳಿಸುತ್ತಾರೆ, ತಂದೆಯನ್ನು ತಿಳಿದುಕೊಳ್ಳಬೇಕು, ಸ್ವದರ್ಶನ ಚಕ್ರಧಾರಿಯಾಗಬೇಕು. ಅಷ್ಟೆ! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸದಾ ನೆನಪು ಸ್ಥಿರವಾಗಿರಲು ತಿರುಗಾಡುತ್ತಾ ಈ ಚಿಂತನೆ ಮಾಡಬೇಕು - ನಾವು ಆತ್ಮಗಳು, ಪರಮಧಾಮದ ನಿವಾಸಿಯಾದ ನಾವು ಇಲ್ಲಿಗೆ ಪಾತ್ರವನ್ನಭಿನಯಿಸಲು ಬಂದಿದ್ದೇವೆ, ತಂದೆಯೂ ಪರಮಧಾಮದಲ್ಲಿರುತ್ತಾರೆ, ಈ ಬ್ರಹ್ಮಾರವರ ತನುವಿನಲ್ಲಿ ಬಂದಿದ್ದಾರೆ.

2. ಹೇಗೆ ಆತ್ಮಿಕ ತಂದೆಯೊಂದಿಗೆ ಆತ್ಮಿಕ ಪ್ರೀತಿ ಇದೆ ಅದೇ ರೀತಿ ಪರಸ್ಪರ ಆತ್ಮಿಕ ಪ್ರೀತಿಯಿಂದಿರಬೇಕು. ಆತ್ಮದ ಪ್ರೀತಿಯು ಆತ್ಮದೊಂದಿಗಿರಲಿ ಶರೀರದೊಂದಿಗಲ್ಲ. ಆತ್ಮಾಭಿಮಾನಿಯಾಗುವ ಸಂಪೂರ್ಣ ಅಭ್ಯಾಸ ಮಾಡಬೇಕು.

ವರದಾನ:
ಹದ್ದಿನ ಕಾಮನೆಗಳಿಂದ ಮುಕ್ತರಾಗಿ ಸರ್ವ ಪ್ರಶ್ನೆಗಳಿಂದ ದೂರ ಆಗುವಂತಹ ಸರ್ವ ಪ್ರಶ್ನೆಗಳಿಂದ ದೂರ ಇರುವಂತಹ ಸದಾ ಪ್ರಸನ್ನಚಿತ್ತ ಭವ

ಯಾವ ಮಕ್ಕಳು ಹದ್ದಿನ ಕಾಮನೆಗಳಿಂದ ಮುಕ್ತರಾಗಿರುತ್ತಾರೆ ಅವರ ಚೆಹರೆ ಮೇಲೆ ಪ್ರಸನ್ನತೆಯ ಹೊಳಪು ಕಾಣಿಸುತ್ತದೆ. ಪ್ರಸನ್ನಚಿತ್ತರು ಯಾವುದೇ ಮಾತಿನಲ್ಲಿ ಪ್ರಶ್ನಚಿತ್ತರಾಗುವುದಿಲ್ಲ. ಅವರು ಸದಾ ನಿಸ್ವಾರ್ಥಿ ಆಗಿರುತ್ತಾರೆ ಮತ್ತು ಎಲ್ಲರೂ ನಿರ್ದೋಷಿ ಎಂದು ಅನುಭವ ಮಾಡುತ್ತಾರೆ, ಅನ್ಯ ಯಾರ ಮೇಲೂ ದೋಷ ಹಾಕುವುದಿಲ್ಲ. ಯಾವುದೇ ಪರಿಸ್ಥಿತಿ ಬರಲಿ, ಯಾವುದೇ ಆತ್ಮ ಲೆಕ್ಕಾಚಾರವನ್ನು ಸಮಾಪ್ತಿ ಮಾಡುವ ಆತ್ಮ ಎದುರಿಸಲು ಬರುತ್ತಾ ಇರಲಿ, ಶರೀರದ ಕರ್ಮ ಭೋಗ ಎದುರಿಸಲು ಬರುತ್ತಾ ಇರಲಿ ಆದರೆ ಸಂತುಷ್ಟತೆಯ ಕಾರಣ ಅವರು ಸದಾ ಪ್ರಸನ್ನಚಿತ್ತರಾಗಿರುತ್ತಾರೆ.

ಸ್ಲೋಗನ್:
ವ್ಯರ್ಥದ ಚೆಕಿಂಗ್ ಅಟೆನ್ಷನ್ನಿಂದ ಮಾಡಿ, ಹುಡುಗಾಟಿಕೆಯ ರೂಪದಲ್ಲಿ ಅಲ್ಲ.