01.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಶಾಂತಿಧಾಮವು ಪಾವನ ಆತ್ಮಗಳ ಮನೆಯಾಗಿದೆ, ಆ ಮನೆಗೆ ಹೋಗಬೇಕೆಂದರೆ ಸಂಪೂರ್ಣ ಪಾವನರಾಗಿ”

ಪ್ರಶ್ನೆ:
ತಂದೆಯು ಎಲ್ಲಾ ಮಕ್ಕಳಿಗೆ ಯಾವ ಗ್ಯಾರಂಟಿ ಕೊಡುತ್ತಾರೆ?

ಉತ್ತರ:
ಮಧುರ ಮಕ್ಕಳೇ, ನೀವು ನನ್ನನ್ನು ನೆನಪು ಮಾಡಿದರೆ ನಾನು ನಿಮ್ಮನ್ನು ಶಿಕ್ಷೆಗಳನ್ನನುಭವಿಸದೆ ಮನೆಗೆ ಕರೆದುಕೊಂಡು ಹೋಗುತ್ತೇನೆಂದು ಗ್ಯಾರಂಟಿ ಕೊಡುತ್ತೇನೆ. ನೀವು ಒಬ್ಬ ತಂದೆಯೊಂದಿಗೆ ಮನಸ್ಸನ್ನಿಡಿ, ಈ ಹಳೆಯ ಪ್ರಪಂಚವನ್ನು ನೋಡಿಯೂ ನೋಡದಂತಿರಿ. ಈ ಪ್ರಪಂಚದಲ್ಲಿರುತ್ತಾ ಪವಿತ್ರರಾಗಿ ತೋರಿಸಿ ಆಗ ತಂದೆಯು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಅವಶ್ಯವಾಗಿ ಕೊಡುತ್ತಾರೆ.

ಓಂ ಶಾಂತಿ.
ಆತ್ಮಿಕ ಮಕ್ಕಳೊಂದಿಗೆ ಆತ್ಮಿಕ ತಂದೆಯು ಕೇಳುತ್ತಿದ್ದಾರೆ, ಇದಂತೂ ಮಕ್ಕಳಿಗೆ ಗೊತ್ತಿದೆ- ತಂದೆಯು ನಾವು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವುದಕ್ಕಾಗಿ ಬಂದಿದ್ದಾರೆ ಅಂದಮೇಲೆ ಈಗ ಮನೆಗೆ ಹೋಗುವ ಬಯಕೆಯಿದೆಯೇ? ಅದು ಎಲ್ಲಾ ಆತ್ಮಗಳ ಮನೆಯಾಗಿದೆ. ಇಲ್ಲಿ ಎಲ್ಲಾ ಜೀವಾತ್ಮರಿಗೆ ಒಂದೇ ಮನೆಯಲ್ಲ, ಇದಂತೂ ತಿಳಿದುಕೊಂಡಿದ್ದೀರಿ- ತಂದೆಯು ಬಂದಿದ್ದಾರೆ. ತಂದೆಯನ್ನು ನಿಮಂತ್ರಣದ ಮೇರೆಗೆ ನಮ್ಮನ್ನು ಮನೆ ಅಥವಾ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಕರೆದಿದ್ದಿರಿ. ಈಗ ತಂದೆಯು ತಿಳಿಸುತ್ತಾರೆ- ತಮ್ಮ ಮನಸ್ಸನ್ನು ಕೇಳಿಕೊಳ್ಳಿ- ಹೇ ಆತ್ಮರೇ, ನೀವು ಪತಿತರು ಅಲ್ಲಿಗೆ ಹೋಗಲು ಹೇಗೆ ಸಾಧ್ಯ? ಪಾವನರಂತೂ ಅವಶ್ಯವಾಗಿ ಆಗಬೇಕಾಗಿದೆ. ಈಗ ಮನೆಗೆ ಹೋಗಬೇಕಾಗಿದೆ ಮತ್ತೇನೂ ಹೇಳುವಂತಿಲ್ಲ. ಭಕ್ತಿಮಾರ್ಗದಲ್ಲಿ ನೀವು ಇಷ್ಟೊಂದು ಸಮಯದಿಂದ ಪುರುಷಾರ್ಥ ಮಾಡಿದ್ದೀರಿ, ಏತಕ್ಕಾಗಿ? ಮುಕ್ತಿಗಾಗಿ ಅಂದಮೇಲೆ ಈಗ ತಂದೆಯು ಪ್ರಶ್ನಿಸುತ್ತಾರೆ- ಮನೆಗೆ ಹೋಗುವ ವಿಚಾರವಿದೆಯೇ? ಮಕ್ಕಳು ಹೇಳುತ್ತಾರೆ- ಬಾಬಾ, ಇದಕ್ಕಾಗಿಯೇ ನಾವು ಇಷ್ಟು ಭಕ್ತಿಯನ್ನು ಮಾಡಿದ್ದೇವೆ. ಇದು ಕೂಡ ಮಕ್ಕಳಿಗೆ ತಿಳಿದಿದೆ, ಎಲ್ಲಾ ಜೀವಾತ್ಮರನ್ನು ಕರೆದುಕೊಂಡು ಹೋಗಬೇಕಾಗಿದೆ ಆದರೆ ಪವಿತ್ರರಾಗಿ ಮನೆಗೆ ಹೋಗಬೇಕಾಗಿದೆ. ನಂತರ ಪವಿತ್ರಆತ್ಮರೇ ಮೊಟ್ಟಮೊದಲು ಬರುತ್ತಾರೆ, ಅಪವಿತ್ರ ಆತ್ಮಗಳು ಶಾಂತಿಧಾಮದಲ್ಲಿರಲು ಸಾಧ್ಯವಿಲ್ಲ. ಈಗ ಯಾರೆಲ್ಲಾ ಕೋಟ್ಯಾಂತರ ಆತ್ಮಗಳಿದ್ದಾರೆಯೋ ಎಲ್ಲರೂ ಮನೆಗೆ ಅವಶ್ಯವಾಗಿ ಹೋಗಬೇಕಾಗಿದೆ. ಆ ಮನೆಗೆ ಶಾಂತಿಧಾಮ, ವಾನಪ್ರಸ್ಥವೆಂದು ಹೇಳಲಾಗುತ್ತದೆ. ಪಾವನರಾಗಿ ಪಾವನ ಶಾಂತಿಧಾಮಕ್ಕೆ ಹೋಗಬೇಕಾಗಿದೆಯಷ್ಟೇ. ಎಷ್ಟು ಸಹಜಮಾತಾಗಿದೆ! ಅದು ಆತ್ಮಗಳ ಪಾವನ ಶಾಂತಿಧಾಮವಾಗಿದೆ. ಸತ್ಯಯುಗವು ಜೀವಾತ್ಮರ ಪಾವನ ಸುಖಧಾಮವಾಗಿದೆ. ಇದು ಜೀವಾತ್ಮನ ಪತಿತ ದುಃಖಧಾಮವಾಗಿದೆ. ಇದರಲ್ಲಿ ತಬ್ಬಿಬ್ಬಾಗುವ ಮಾತೇ ಇಲ್ಲ. ಶಾಂತಿಧಾಮದಲ್ಲಿ ಎಲ್ಲಾ ಪವಿತ್ರ ಆತ್ಮಗಳು ನಿವಾಸ ಮಾಡುತ್ತಾರೆ. ಅದು ಆತ್ಮಗಳ ಪವಿತ್ರಪ್ರಪಂಚ, ನಿರ್ವಿಕಾರಿ, ನಿರಾಕಾರಿ ಪ್ರಪಂಚವಾಗಿದೆ. ಇದು ಎಲ್ಲಾ ಜೀವಾತ್ಮರ ಹಳೆಯ ಪ್ರಪಂಚವಾಗಿದೆ, ಎಲ್ಲರೂ ಪತಿತರಾಗಿದ್ದಾರೆ. ಈಗ ತಂದೆಯು ಆತ್ಮಗಳನ್ನು ಪಾವನ ಮಾಡಿ ಪಾವನ ಪ್ರಪಂಚ, ಶಾಂತಿಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ. ಮತ್ತೆ ರಾಜಯೋಗವನ್ನು ಯಾರು ಕಲಿಯುತ್ತಾರೆಯೋ ಅವರೇ ಪಾವನ ಸುಖಧಾಮದಲ್ಲಿ ಬರುತ್ತಾರೆ. ಇದಂತೂ ಬಹಳ ಸಹಜವಾಗಿದೆ, ಇದರಲ್ಲಿ ಯಾವುದೇ ಮಾತಿನ ವಿಚಾರ ಮಾಡಬಾರದು. ಬುದ್ಧಿಯಿಂದ ತಿಳಿದುಕೊಳ್ಳಬೇಕಾಗಿದೆ- ನಾವಾತ್ಮಗಳ ತಂದೆಯು ನಮ್ಮನ್ನು ಪಾವನ ಶಾಂತಿಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ. ಅಲ್ಲಿ ಹೋಗುವ ಯಾವ ಮಾರ್ಗವನ್ನು ಮರೆತುಹೋಗಿದ್ದೇವೋ ಅದನ್ನು ಈಗ ತಂದೆಯು ತಿಳಿಸುತ್ತಿದ್ದಾರೆ, ಕಲ್ಪ-ಕಲ್ಪದಲ್ಲಿಯೂ ನಾನು ಹೀಗೆಯೇ ಬಂದು ತಿಳಿಸುತ್ತೇನೆ- ಹೇ ಮಕ್ಕಳೇ, ಶಿವ ತಂದೆಯಾದ ನನ್ನನ್ನು ನೆನಪು ಮಾಡಿ. ಸರ್ವರ ಸದ್ಗತಿದಾತ ಒಬ್ಬರೇ ಸದ್ಗುರುವಾಗಿದ್ದಾರೆ, ಅವರೇ ಬಂದು ಮಕ್ಕಳಿಗೆ ಸಂದೇಶ ಅಥವಾ ಶ್ರೀಮತವನ್ನು ಕೊಡುತ್ತಾರೆ- ಮಕ್ಕಳೇ, ಈಗ ನೀವು ಏನು ಮಾಡುತ್ತೀರಿ? ಅರ್ಧಕಲ್ಪ ನೀವು ಬಹಳ ಭಕ್ತಿಯನ್ನು ಮಾಡಿದ್ದೀರಿ, ದುಃಖಿಯಾಗಿದ್ದೀರಿ. ಖರ್ಚು ಮಾಡುತ್ತಾ-ಮಾಡುತ್ತಾ ಕಂಗಾಲರಾಗಿಬಿಟ್ಟಿರಿ. ಆತ್ಮವೂ ಸಹ ಸತೋಪ್ರಧಾನದಿಂದ ತಮೋಪ್ರಧಾನವಾಗಿಬಿಟ್ಟಿದೆ. ಸಾಕು, ಈ ಸ್ವಲ್ಪ ಮಾತುಗಳೇ ತಿಳಿದುಕೊಳ್ಳುವಂತದ್ದಾಗಿದೆ. ಈಗ ಮನೆಗೆ ಹೋಗಬೇಕೆ ಅಥವಾ ಬೇಡವೇ? ಹೌದು ಬಾಬಾ, ಅವಶ್ಯವಾಗಿ ಹೋಗಬೇಕು. ಅದು ನಮ್ಮ ಮಧುರ ಶಾಂತಿಯಮನೆ ಆಗಿದೆ. ಇದೂ ಸಹ ಗೊತ್ತಿದೆ, ಅವಶ್ಯವಾಗಿ ನಾವೀಗ ಪತಿತರಾಗಿದ್ದೇವೆ ಆದ್ದರಿಂದ ಹೋಗಲು ಸಾಧ್ಯವಿಲ್ಲ. ಈಗ ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ ಆಗ ನಿಮ್ಮ ಪಾಪಗಳು ನಾಶವಾಗುತ್ತವೆ. ಕಲ್ಪ-ಕಲ್ಪವೂ ಇದೇ ಸಂದೇಶವನ್ನು ಕೊಡುತ್ತೇನೆ. ತಮ್ಮನ್ನು ಆತ್ಮನೆಂದು ತಿಳಿಯಿರಿ, ಈ ದೇಹವಂತೂ ಸಮಾಪ್ತಿಯಾಗಲಿದೆ ಬಾಕಿ ಆತ್ಮಗಳಂತೂ ಮರಳಿ ಮನೆಗೆ ಹೋಗಬೇಕಾಗಿದೆ ಅದಕ್ಕೆ ನಿರಾಕಾರಿ ಪ್ರಪಂಚವೆಂದು ಹೇಳುತ್ತಾರೆ. ಎಲ್ಲಾ ನಿರಾಕಾರಿ ಆತ್ಮಗಳು ಅಲ್ಲಿಯೇ ಇರುತ್ತಾರೆ. ಅದು ಆತ್ಮಗಳ ಮನೆಯಾಗಿದೆ. ನಿರಾಕಾರ ತಂದೆಯೂ ಸಹ ಅಲ್ಲಿರುತ್ತಾರೆ. ತಂದೆಯು ಅಲ್ಲಿಯೇ ಇರುತ್ತಾರೆ. ಅದು ಆತ್ಮಗಳ ಮನೆಯಾಗಿದೆ. ನಿರಾಕಾರ ತಂದೆಯೂ ಸಹ ಅಲ್ಲಿರುತ್ತಾರೆ. ತಂದೆಯು ಎಲ್ಲರಿಗಿಂತ ಕೊನೆಯಲ್ಲಿ ಬರುತ್ತಾರೆ ಏಕೆಂದರೆ ಮತ್ತೆ ಎಲ್ಲರನ್ನೂ ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗಬೇಕಾಗಿದೆ. ಒಬ್ಬ ಪತಿತ ಆತ್ಮವೂ ಸಹ ಇರುವುದಿಲ್ಲ, ಇದರಲ್ಲಿ ಯಾವುದೇ ತಬ್ಬಿಬ್ಬಾಗುವ ಅಥವಾ ಕಷ್ಟದ ಮಾತಿಲ್ಲ. ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡು, ಜೊತೆ ಕರೆದುಕೊಂಡು ಹೋಗಿ ಎಂದು ಹಾಡುತ್ತಾರೆ. ಎಲ್ಲರ ತಂದೆಯಲ್ಲವೆ! ಮತ್ತೆ ಯಾವಾಗ ನಾವು ಹೊಸ ಪ್ರಪಂಚದಲ್ಲಿ ಪಾತ್ರವನ್ನಭಿನಯಿಸಲು ಬಂದಾಗ ಕಡಿಮೆ ಜನಸಂಖ್ಯೆಯಿರುತ್ತದೆ ಬಾಕಿ ಇಷ್ಟು ಕೋಟ್ಯಾಂತರ ಆತ್ಮಗಳು ಎಲ್ಲಿರುತ್ತಾರೆ? ಮಕ್ಕಳಿಗೆ ತಿಳಿದಿದೆ- ಸತ್ಯಯುಗದಲ್ಲಿ ಕೆಲವರೇ ಜೀವಾತ್ಮರಿದ್ದರು, ಚಿಕ್ಕವೃಕ್ಷವಾಗಿತ್ತು ನಂತರ ವೃದ್ಧಿಯಾಯಿತು. ವೃಕ್ಷದಲ್ಲಿ ಅನೇಕ ಧರ್ಮಗಳ ವಿಭಿನ್ನತೆಯಿದೆ. ಅದಕ್ಕೆ ಕಲ್ಪವೃಕ್ಷವೆಂದು ಹೇಳಲಾಗುತ್ತದೆ. ಒಂದುವೇಳೆ ಏನೂ ಅರ್ಥವಾಗಿಲ್ಲವೆಂದರೆ ಕೇಳಬಹುದು. ಕೆಲವರು ಹೇಳುತ್ತಾರೆ- ಬಾಬಾ, ನಾವು ಕಲ್ಪದ ಆಯಸ್ಸು 5000 ವರ್ಷಗಳೆಂದು ಹೇಗೆ ನಂಬುವುದು. ಅರೆ! ತಂದೆಯಂತೂ ಸತ್ಯವನ್ನು ತಿಳಿಸುತ್ತಾರೆ, ಚಕ್ರದ ಕಾಲಾವಧಿಯನ್ನು ತಿಳಿಸಿದ್ದಾರೆ.

ಈ ಕಲ್ಪದ ಸಂಗಮಯುಗದಲ್ಲಿಯೇ ತಂದೆಯು ಬಂದು ದೈವೀರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಅದು ಈಗ ಇಲ್ಲ. ಸತ್ಯಯುಗದಲ್ಲಿ ಒಂದೇ ದೈವೀ ರಾಜಧಾನಿಯಿರುವುದು. ಈ ಸಮಯದಲ್ಲಿ ನಿಮಗೆ ರಚಯಿತ ಮತ್ತು ರಚನೆಯ ಜ್ಞಾನವನ್ನು ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ- ನಾನು ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ, ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತೇನೆ. ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ನಾಟಕದನುಸಾರ ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದಾಗುತ್ತದೆ. ಇದರ ನಾಲ್ಕೂಭಾಗಗಳು ಸಮನಾಗಿದೆ, ಇದಕ್ಕೆ ಸ್ವಸ್ತಿಕ್ ಎಂದು ಕರೆಯಲಾಗುತ್ತದೆ ಆದರೆ ಏನೂ ತಿಳಿದುಕೊಂಡಿಲ್ಲ. ಭಕ್ತಿಮಾರ್ಗcದಲ್ಲಿ ಹೇಗೆ ಗೊಂಬೆಯಾಟವನ್ನು ಆಡುತ್ತಿರುತ್ತಾರೆ. ಬಹಳಷ್ಟು ಚಿತ್ರಗಳಿವೆ, ದೀಪಾವಳಿಯಲ್ಲಿ ವಿಶೇಷವಾಗಿ ಅಂಗಡಿಯನ್ನು ತೆರೆಯುತ್ತಾರೆ. ಅನೇಕಾನೇಕ ಚಿತ್ರಗಳಿವೆ, ಈಗ ನೀವು ತಿಳಿದುಕೊಂಡಿದ್ದೀರಿ- ಒಬ್ಬರು ಶಿವತಂದೆ ಮತ್ತು ನಾವು ಮಕ್ಕಳು. ಮತ್ತೆ ಇಲ್ಲಿಗೆ ಬಂದಾಗ ಲಕ್ಷ್ಮೀ-ನಾರಾಯಣರ ರಾಜ್ಯ ಮತ್ತು ರಾಮ-ಸೀತೆಯರ ರಾಜ್ಯ ಅನಂತರ ಅನ್ಯಧರ್ಮದವರು ಬರುತ್ತಾರೆ, ಅವರೊಂದಿಗೆ ನೀವು ಮಕ್ಕಳ ಸಂಬಂಧವೇ ಇಲ್ಲ. ಅವರು ತಮ್ಮ-ತಮ್ಮ ಸಮಯದಲ್ಲಿ ಬರುತ್ತಾರೆ, ಮತ್ತೆ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ನೀವು ಮಕ್ಕಳೂ ಸಹ ಮನೆಗೆ ಹೋಗಬೇಕಾಗಿದೆ ಈ ಪೂರ್ಣಪ್ರಪಂಚವು ವಿನಾಶವಾಗಲಿದೆ, ಈಗ ಇದರಲ್ಲೇನಿರುವುದು! ಈ ಪ್ರಪಂಚದ ಕಡೆ ಮನಸ್ಸೇ ಹೋಗುವುದಿಲ್ಲ. ಒಬ್ಬ ಪ್ರಿಯತಮನೊಂದಿಗೆ ಮನಸ್ಸಿಡಬೇಕು, ಅವರು ತಿಳಿಸುತ್ತಾರೆ- ಹೇ ಪ್ರಿಯತಮೆಯರೇ, ನನ್ನೊಬ್ಬನ ಜೊತೆ ಮನಸ್ಸಿಟ್ಟರೆ ನೀವು ಪಾವನರಾಗುತ್ತೀರಿ. ಈಗ ಬಹಳ ಸಮಯವು ಕಳೆಯಿತು, ಸ್ವಲ್ಪವೇ ಉಳಿದಿದೆ. ಸಮಯವು ಹೋಗುತ್ತಾ ಇರುತ್ತದೆ. ಯೋಗದಲ್ಲಿಲ್ಲದಿದ್ದರೆ ಅಂತಿಮದಲ್ಲಿ ಅವರು ಬಹಳ ಪಶ್ಚಾತ್ತಾಪ ಪಡುತ್ತಾರೆ, ಶಿಕ್ಷೆಗಳನ್ನು ಅನುಭವಿಸುತ್ತಾರೆ, ಪದವಿಯು ಭ್ರಷ್ಟವಾಗಿಬಿಡುತ್ತದೆ. ಇದೂ ಸಹ ನೀವು ಮಕ್ಕಳಿಗೆ ತಿಳಿದಿದೆ- ನಮ್ಮ ಮನೆಯನ್ನು ಬಿಟ್ಟು ನಾವು ಎಷ್ಟೊಂದು ಸಮಯವಾಗಿಹೋಯಿತು. ಮನೆಗೆ ಹೋಗುವುದಕ್ಕಾಗಿಯೇ ತಲೆಕೆಡಿಸಿಕೊಳ್ಳುತ್ತಾರಲ್ಲವೆ. ತಂದೆಯೂ ಸಹ ಮನೆಯಲ್ಲಿಯೇ ಸಿಗುವರು, ಸತ್ಯಯುಗದಲ್ಲಂತೂ ಸಿಗುವುದಿಲ್ಲ, ಮುಕ್ತಿಧಾಮದಲ್ಲಿ ಹೋಗುವುದಕ್ಕಾಗಿ ಮನುಷ್ಯರು ಎಷ್ಟೊಂದು ಶ್ರಮಪಡುತ್ತಾರೆ. ಅದಕ್ಕೆ ಭಕ್ತಿಮಾರ್ಗವೆಂದು ಹೇಳಲಾಗುತ್ತದೆ. ಈಗ ಡ್ರಾಮಾನುಸಾರ ಭಕ್ತಿಯು ಸಮಾಪ್ತಿಯಾಗಬೇಕಾಗಿದೆ. ಈಗ ನಾನು ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗುವುದಕ್ಕಾಗಿ ಬಂದಿದ್ದೇನೆ. ಅವಶ್ಯವಾಗಿ ಕರೆದುಕೊಂಡು ಹೋಗುತ್ತೇನೆ. ಯಾರೆಷ್ಟು ಪಾವನರಾಗುತ್ತೀರೋ ಅಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ನನ್ನನ್ನು ನೆನಪು ಮಾಡಿ, ನಿಮ್ಮನ್ನು ಶಿಕ್ಷೆಯನ್ನನುಭವಿಸದೆ ಮನೆಗೆ ಹೋಗುತ್ತೀರಿ ಎಂದು ಗ್ಯಾರಂಟಿ ಕೊಡುತ್ತೇನೆ. ನೆನಪಿನಿಂದ ನಿಮ್ಮ ಎಲ್ಲಾ ವಿಕರ್ಮಗಳು ವಿನಾಶವಾಗುತ್ತದೆ. ಒಂದುವೇಳೆ ನೆನಪು ಮಾಡದಿದ್ದರೆ ಶಿಕ್ಷೆಗಳನ್ನನುಭವಿಸಬೇಕಾಗುತ್ತದೆ, ಪದವಿಯೂ ಭ್ರಷ್ಟವಾಗಿಬಿಡುತ್ತದೆ. ಇಡೀ 5000 ವರ್ಷಗಳ ನಂತರ ನಾನು ಬಂದು ಇದನ್ನೇ ತಿಳಿಸುತ್ತೇನೆ. ನಾನು ಅನೇಕಾನೇಕ ಬಾರಿ ನಿಮ್ಮನ್ನು ಹಿಂತಿರುಗಿ ಕರೆದುಕೊಂಡು ಹೋಗಲು ಬಂದಿದ್ದೆನು. ನೀವು ಮಕ್ಕಳೇ ಸೋಲು-ಗೆಲುವಿನ ಪಾತ್ರವನ್ನಭಿನಯಿಸುತ್ತೀರಿ ನಂತರ ನಾನು ಕರೆದುಕೊಂಡು ಹೋಗಲು ಬರುತ್ತೇನೆ. ಇದು ಪತಿತ ಪ್ರಪಂಚವಾಗಿದೆ ಆದ್ದರಿಂದಲೇ ಪತಿತ-ಪಾವನನೇ ಬನ್ನಿ, ನಾವು ವಿಕಾರಿ ಪತಿತರಾಗಿದ್ದೇವೆ, ಬಂದು ನಿರ್ವಿಕಾರಿ ಪಾವನರನ್ನಾಗಿ ಮಾಡಿ ಎಂದೂ ಹಾಡುತ್ತಾರೆ. ಇದು ವಿಕಾರಿ ಪ್ರಪಂಚವಾಗಿದೆ, ಈಗ ನೀವು ಮಕ್ಕಳು ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ. ಯಾರು ಕೊನೆಯಲ್ಲಿ ಬರುವರೋ ಅವರು ಶಿಕ್ಷೆಗಳನ್ನನುಭವಿಸಿ ಹೋಗುತ್ತಾರೆ ಆದ್ದರಿಂದ ಮತ್ತೆ ಬರುವುದೂ ಸಹ ಇಂತಹ ಪ್ರಪಂಚದಲ್ಲಿಯೇ, ಎಲ್ಲಿ (ತ್ರೇತಾಯುಗ) 2 ಕಲೆಗಳು ಕಡಿಮೆಯಾಗಿಬಿಡುತ್ತವೆ, ಅವರಿಗೆ ಸಂಪೂರ್ಣ ಪವಿತ್ರರೆಂದು ಹೇಳುವುದಿಲ್ಲ ಆದ್ದರಿಂದ ಈಗ ಪೂರ್ಣ ಪುರುಷಾರ್ಥ ಮಾಡಬೇಕು. ಕಡಿಮೆ ಪದವಿಯಾಗಿಬಿಡುವಂತಾಗಬಾರದು. ಭಲೆ ರಾವಣರಾಜ್ಯವಿರುವುದಿಲ್ಲ ಆದರೆ ಪದವಿಯಂತೂ ನಂಬರ್ವಾರ್ ಇರುತ್ತದೆ. ಆತ್ಮದಲ್ಲಿ ತುಕ್ಕುಬೀಳುತ್ತದೆಯೆಂದರೆ ಅದಕ್ಕೆ ಅಂತಹ ಶರೀರವೇ ಸಿಗುತ್ತದೆ. ಆತ್ಮವು ಚಿನ್ನದಿಂದ ಬೆಳ್ಳಿಯ ಸಮಾನವಾಗಿಬಿಡುತ್ತದೆ. ಬೆಳ್ಳಿಯ ಅಂಶವು (ತುಕ್ಕು) ಆತ್ಮದಲ್ಲಿ ಬೀಳುತ್ತದೆ. ಮತ್ತೆ ದಿನ-ಪ್ರತಿದಿನ ಹೆಚ್ಚಿನದಾಗಿ ಕೊಳಕಾದ ತುಕ್ಕು ಬೀಳುತ್ತಾ ಹೋಗುತ್ತದೆ. ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ. ಯಾರಿಗಾದರೂ ಅರ್ಥವಾಗದಿದ್ದರೆ ಕೈಯನ್ನೆತ್ತಿ. ಯಾರು 84 ಜನ್ಮಗಳ ಚಕ್ರವನ್ನು ಸುತ್ತಿದ್ದಾರೆಯೋ ಅವರಿಗೇ ತಿಳಿಸುತ್ತೇನೆ. ಇವರ (ಬ್ರಹ್ಮಾ) 84 ಜನ್ಮಗಳ ಅಂತಿಮದಲ್ಲಿ ನಾನು ಬಂದು ಪ್ರವೇಶ ಮಾಡುತ್ತೇನೆ. ಇವರೇ ಮತ್ತೆ ಮೊದಲ ನಂಬರಿನಲ್ಲಿ ಬರಬೇಕಾಗಿದೆ. ಯಾರು ಮೊದಲಿಗನಾಗಿದ್ದಾರೆಯೋ ಅವರೆ ಕೊನೆಯಲ್ಲಿದ್ದಾರೆ ಪುನಃ ಅವರೇ ಮೊದಲಿಗರಾಗಬೇಕಾಗಿದೆ. ಯಾರು ಬಹಳ ಜನ್ಮಗಳ ಅಂತಿಮದಲ್ಲಿ ಪತಿತರಾಗಿಬಿಟ್ಟಿದ್ದಾರೆಯೋ ಅವರ ಶರೀರದಲ್ಲಿಯೇ ಪತಿತ-ಪಾವನನಾದ ನಾನು ಬರುತ್ತೇನೆ. ಅವರನ್ನು ಪಾವನ ಮಾಡುತ್ತೇನೆ. ನಾನು ಎಷ್ಟು ಸ್ಪಷ್ಟವಾಗಿ ತಿಳಿಸುತ್ತೇನೆ.

ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಗೀತಾಜ್ಞಾನವಂತೂ ಬಹಳಷ್ಟು ಕೇಳಿದ್ದೀರಿ ಮತ್ತು ಹೇಳಿದ್ದೀರಿ. ಆದರೆ ಅದರಿಂದಲೂ ಸಹ ನೀವು ಸದ್ಗತಿಯನ್ನು ಪಡೆಯಲಿಲ್ಲ. ಅನೇಕ ಸನ್ಯಾಸಿಗಳು ನಿಮಗೆ ಮಧುರಾತಿ ಮಧುರ ಕಂಠದಿಂದ ಶಾಸ್ತ್ರಗಳನ್ನು ತಿಳಿಸಿದರು. ಈ ಮಧುರವಾದ ಶಬ್ಧಗಳನ್ನು ಕೇಳಿ ದೊಡ್ಡ-ದೊಡ್ಡವ್ಯಕ್ತಿಗಳು ಹೋಗಿ ಸೇರುತ್ತಾರೆ, ಕನರಸವಲ್ಲವೆ! ಭಕ್ತಿಮಾರ್ಗದಲ್ಲಿ ಇರುವುದೇ ಕನರಸ ಆದರೆ ಇಲ್ಲಂತೂ ಆತ್ಮವು ತಂದೆಯನ್ನು ನೆನಪು ಮಾಡಬೇಕಾಗಿದೆ. ಭಕ್ತಿಮಾರ್ಗವು ಈಗ ಪೂರ್ಣವಾಗುತ್ತದೆ. ತಂದೆಯು ತಿಳಿಸುತ್ತಾರೆ- ನಾನು ನೀವು ಮಕ್ಕಳಿಗೆ ಜ್ಞಾನವನ್ನು ತಿಳಿಸಲು ಬಂದಿದ್ದೇನೆ. ಇದು ಯಾರಿಗೂ ಗೊತ್ತಿಲ್ಲ. ನಾನೇ ಜ್ಞಾನಸಾಗರನಾಗಿದ್ದೇನೆ. ಜ್ಞಾನಕ್ಕೆ ತಿಳುವಳಿಕೆ ಎಂದು ಹೇಳಲಾಗುತ್ತದೆ. ತಂದೆಯು ನಿಮಗೆ ಎಲ್ಲವನ್ನೂ ಓದಿಸುತ್ತಾರೆ. 84 ಜನ್ಮಗಳ ಚಕ್ರವನ್ನೂ ತಿಳಿಸುತ್ತಾರೆ. ನಿಮ್ಮಲ್ಲಿ ಪೂರ್ಣಜ್ಞಾನವಿದೆ. ಸ್ಥೂಲವತನದಿಂದ ಸೂಕ್ಷ್ಮವತನವನ್ನು ಪಾರುಮಾಡಿ ಮೂಲವತನಕ್ಕೆ ಹೋಗುತ್ತೀರಿ. ಮೊಟ್ಟಮೊದಲು ಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ. ಅಲ್ಲಿ ವಿಕಾರಿ ಮಕ್ಕಳಿರುವುದಿಲ್ಲ, ರಾವಣರಾಜ್ಯವೇ ಇರುವುದಿಲ್ಲ. ಯೋಗಬಲದಿಂದ ಎಲ್ಲವೂ ನಡೆಯುತ್ತದೆ. ಈಗ ಮಗುವಾಗಿ ಗರ್ಭಮಹಲಿನಲ್ಲಿ ಹೋಗಬೇಕೆಂದು ನಿಮಗೆ ಸಾಕ್ಷಾತ್ಕಾರವಾಗುತ್ತದೆ, ಆಗ ಖುಷಿಯಿಂದ ಹೋಗುತ್ತಾರೆ. ಇಲ್ಲಂತೂ ಮನುಷ್ಯರು ಶರೀರವಿರುವಾಗ ಎಷ್ಟೊಂದು ಅಳುತ್ತಾರೆ, ಚೀರಾಡುತ್ತಾರೆ. ಇಲ್ಲಂತೂ ಗರ್ಭಜೈಲಿನಲ್ಲಿ ಹೋಗುತ್ತಾರಲ್ಲವೆ. ಸತ್ಯಯುಗದಲ್ಲಿ ಅಳುವ, ಚೀರಾಡುವ ಮಾತಿಲ್ಲ. ಶರೀರವಂತೂ ಅವಶ್ಯವಾಗಿ ಬದಲಾಯಿಸಬೇಕಾಗುತ್ತದೆ. ಹೇಗೆ ಸರ್ಪದ ಉದಾಹರಣೆಯಿದೆ ಅಂದಮೇಲೆ ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ಹೆಚ್ಚಿನದಾಗಿ ಕೇಳುವುದಿರುವುದಿಲ್ಲ. ಒಮ್ಮೆಲೆ ಪಾವನರಾಗುವ ಪುರುಷಾರ್ಥದಲ್ಲಿ ತೊಡಗಬೇಕು. ತಂದೆಯನ್ನು ನೆನಪು ಮಾಡುವುದು ಪರಿಶ್ರಮವಾಗುತ್ತದೆಯೇ! ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಲ್ಲವೆ. ನಾನು ನಿಮ್ಮ ತಂದೆ, ಸುಖದ ಆಸ್ತಿಯನ್ನು ಕೊಡುತ್ತೇನೆ. ನೀವು ಈ ಒಂದು ಅಂತಿಮ ಜನ್ಮದಲ್ಲಿ ನೆನಪಿನಲ್ಲಿರಲು ಸಾಧ್ಯವಿಲ್ಲವೆ! ನೀವು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತೀರಿ ಆದರೂ ಸಹ ಮತ್ತೆ ಮನೆಯಲ್ಲಿ ಹೋಗಿ ಸ್ತ್ರೀ ಮೊದಲಾದವರ ಚಹರೆಯನ್ನು ನೋಡುತ್ತಾರೆಂದರೆ ಮಾಯೆಯು ತಿಂದುಬಿಡುತ್ತದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಯಾರಲ್ಲಿಯೂ ಮನಸ್ಸಿಡಬೇಡಿ, ಎಲ್ಲವೂ ಸಮಾಪ್ತಿಯಾಗಲೇಬೇಕು ಅಂದಾಗ ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗುತ್ತದೆ. ನಡೆಯುತ್ತಾ-ತಿರುಗಾಡುತ್ತಾ ತಂದೆ ಮತ್ತು ತಮ್ಮ ರಾಜಧಾನಿಯನ್ನು ನೆನಪು ಮಾಡಿ. ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಸತ್ಯಯುಗದಲ್ಲಿ ಈ ಕೊಳಕು ಪದಾರ್ಥಗಳಾದ ಮಾಂಸ ಇತ್ಯಾದಿಗಳಿರುವುದೇ ಇಲ್ಲ. ತಂದೆಯು ತಿಳಿಸುತ್ತಾರೆ- ವಿಕಾರಗಳನ್ನೂ ಬಿಟ್ಟುಬಿಡಿ. ನಾನು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಎಷ್ಟು ಲಾಭವಾಗುತ್ತದೆ! ಅಂದಮೇಲೆ ಏಕೆ ಪವಿತ್ರರಾಗಿರುವುದಿಲ್ಲ. ಕೇವಲ ಒಂದುಜನ್ಮದಲ್ಲಿ ಪವಿತ್ರರಾಗುವುದರಿಂದ ಎಷ್ಟು ದೊಡ್ಡ ಸಂಪಾದನೆಯಾಗಿಬಿಡುತ್ತದೆ. ಭಲೆ ಒಟ್ಟಿಗೆ ಇರಿ, ಜ್ಞಾನದ ಕತ್ತಿಯು ನಡುವೆ ಇರಲಿ. ಪವಿತ್ರರಾಗಿ ತೋರಿಸಿದರೆ ಎಲ್ಲರಿಗಿಂತ ತಮ್ಮ ಪದವಿಯನ್ನು ಪಡೆಯುತ್ತೀರಿ ಏಕೆಂದರೆ ಬಾಲಬ್ರಹ್ಮಾಚಾರಿಗಳಾದಿರಿ. ಮತ್ತೆ ಜ್ಞಾನವೂ ಬೇಕು, ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳಬೇಕಾಗಿದೆ. ನಾವು ಹೇಗೆ ಒಟ್ಟಿಗೆ ಇದ್ದರೂ ಪವಿತ್ರರಾಗಿರುತ್ತೇವೆ ಎಂಬುದನ್ನು ಸನ್ಯಾಸಿಗಳಿಗೂ ತೋರಿಸಬೇಕಾಗಿದೆ- ಇವರಲ್ಲಂತೂ ಬಹಳ ಶಕ್ತಿಯಿದೆ ಎಂದು ತಿಳಿಯುತ್ತಾರೆ. ತಂದೆಯು ಹೇಳುತ್ತಾರೆ- ಈ ಒಂದು ಜನ್ಮದಲ್ಲಿ ಪವಿತ್ರರಾಗಿರುವುದರಿಂದ 21 ಜನ್ಮಗಳವರೆಗೆ ನೀವು ವಿಶ್ವದ ಮಾಲೀಕರಾಗುತ್ತೀರಿ. ಎಷ್ಟು ದೊಡ್ಡ ಬಹುಮಾನವು ಸಿಗುತ್ತದೆ ಅಂದಾಗ ಏಕೆ ಪವಿತ್ರರಾಗಿದ್ದು ತೋರಿಸುವುದಿಲ್ಲ. ಇನ್ನು ಸ್ವಲ್ಪ ಸಮಯವೇ ಇದೆ, ತಂದೆಯ ಸಂದೇಶದ ಸದ್ದು ಕೇಳಿಬರುತ್ತದೆ. ಪತ್ರಿಕೆಗಳಲ್ಲಿಯೂ ಬರುತ್ತದೆ. ಈಗ ಅದರ ಚಿಹ್ನೆಗಳನ್ನಂತೂ ನೋಡಿದ್ದೀರಲ್ಲವೆ. ಒಂದು ಅಣುಬಾಂಬಿನಿಂದ ಯಾವ ಸ್ಥಿತಿಯಾಯಿತು, ಇಲ್ಲಿಯವರೆಗೆ ಆಸ್ಪತ್ರೆಯಲ್ಲಿದ್ದಾರೆ ಈಗಂತೂ ಇಂತಹ ಅಣುಬಾಂಬುಗಳನ್ನು ತಯಾರಿಸುತ್ತಾರೆ ಅದರಿಂದ ತಕ್ಷಣ ಸಮಾಪ್ತಿಯಾಗುತ್ತದೆ. ಯಾವುದೂ ಕಷ್ಟವಾಗುವುದಿಲ್ಲ ಮತ್ತು ಇದು ರಿಹರ್ಸಲ್ ಆಗಿ ನಂತರ ಫೈನಲ್ ಆಗುತ್ತದೆ. ಬಾಂಬು ಹಾಕಿದ ತಕ್ಷಣ ಸಾಯುತ್ತಾರೆಯೇ ಅಥವಾ ಇಲ್ಲವೇ ಎಂದು ನೋಡುತ್ತಾರೆ ನಂತರ ಮತ್ತೊಂದು ಯುಕ್ತಿಯನ್ನು ರಚಿಸುತ್ತಾರೆ. ಆ ಸಮಯದಲ್ಲಿ ಆಸ್ಪತ್ರೆ ಮೊದಲಾದವುಗಳಿರುವುದಿಲ್ಲ. ಗಾಯಗೊಂಡವರಿಗೆ ಯಾರು ಕುಳಿತು ಸೇವೆ ಮಾಡುತ್ತಾರೆ! ಬ್ರಾಹ್ಮಣರಿಗೆ ತಿನ್ನಿಸುವವರೂ ಇಲ್ಲ ಏಕೆಂದರೆ ಶ್ರಾದ್ಧ ಮಾಡುವುದಕ್ಕೂ ಇರುವುದಿಲ್ಲ. ಬಾಂಬು ಹಾಕಿದರೆಂದರೆ ಎಲ್ಲವೂ ಸಮಾಪ್ತಿ. ಭೂಕಂಪದಲ್ಲಿ ಎಲ್ಲವೂ ಒಳಗೆ ಹೊರಟುಹೋಗುತ್ತದೆ. ತಡವಾಗುವುದಿಲ್ಲ, ಇಲ್ಲಿ ಅನೇಕ ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ ಅಂದಮೇಲೆ ಇಷ್ಟೆಲ್ಲಾ ಜನಸಂಖ್ಯೆಯು ಹೇಗೆ ವಿನಾಶವಾಗಬಹುದು!! ಮುಂದೆಹೋದಂತೆ ನೋಡಬೇಕಾಗಿದೆ, ಸತ್ಯಯುಗದಲ್ಲಂತೂ ಪ್ರಾರಂಭದಲ್ಲಿ 9 ಲಕ್ಷವಿರುತ್ತಾರೆ.

ನೀವು ಫಕೀರರು ಆಗಿದ್ದೀರಿ, ತಂದೆಯೂ ಸಹ ನಿಮಗೆ ಪ್ರಿಯರಾಗಿದ್ದಾರೆ. ಈಗ ಎಲ್ಲವನ್ನೂ ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿದುಕೊಂಡಿದ್ದೀರಿ ಆದ್ದರಿಂದ ಇಂತಹ ಬಡವರಿಗೆ ತಂದೆ ಪ್ರಿಯವಾಗುತ್ತಾರೆ. ಸತ್ಯಯುಗದಲ್ಲಿ ಬಹಳ ಚಿಕ್ಕವೃಕ್ಷವಿರುತ್ತದೆ. ತಂದೆಯು ಬಹಳಷ್ಟು ತಿಳಿಸುತ್ತಾರೆ. ಯಾರೆಲ್ಲಾ ಪಾತ್ರಧಾರಿಗಳಿದ್ದಾರೆಯೋ ಅವರೆಲ್ಲರೂ ಅವಿನಾಶಿಯಾಗಿದ್ದಾರೆ, ತಮ್ಮ-ತಮ್ಮ ಪಾತ್ರವನ್ನಭಿನಯಿಸಲು ಬರುತ್ತಾರೆ. ಕಲ್ಪ-ಕಲ್ಪವೂ ನೀವೇ ಬಂದು ತಂದೆಯಿಂದ ವಿದ್ಯಾರ್ಥಿಗಳಾಗಿ ಓದುತ್ತೀರಿ. ನಿಮಗೆ ಗೊತ್ತಿದೆ- ತಂದೆಯು ನಮ್ಮನ್ನು ಪವಿತ್ರರನ್ನಾಗಿ ಮಾಡಿ ಜೊತೆ ಕರೆದುಕೊಂಡು ಹೋಗುತ್ತಾರೆ. ತಂದೆಯೂ ಸಹ ಡ್ರಾಮಾನುಸಾರ ಬಂಧಿತನಾಗಿದ್ದಾರೆ. ಎಲ್ಲರನ್ನೂ ಅವಶ್ಯವಾಗಿ ವಾಪಸ್ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ ಹೆಸರೇ ಆಗಿದೆ- ಪಾಂಡವಸೇನೆ. ನೀವು ಪಾಂಡವರು ಏನು ಮಾಡುತ್ತಿದ್ದೀರಿ? ನೀವು ಪಾಂಡವರು ತಂದೆಯಿಂದ ನಂಬರ್ವಾರ್ ಪುರುಷಾರ್ಥದನುಸಾರ ರಾಜ್ಯಭಾಗ್ಯವನ್ನು ಕಲ್ಪದ ಹಿಂದಿನ ತರಹ ಪಡೆಯುತ್ತಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಗೆ ಪ್ರಿಯರಾಗಲು ಪೂರ್ಣ ಭಿಕಾರಿಗಳಾಗಬೇಕಾಗಿದೆ. ದೇಹವನ್ನೂ ಸಹ ಮರೆತು ಸ್ವಯಂನ್ನು ಆತ್ಮವೆಂದು ತಿಳಿಯುವುದೇ ಭಿಕಾರಿಗಳಾಗುವುದಾಗಿದೆ. ತಂದೆಯಿಂದ ಅತಿದೊಡ್ಡ ಬಹುಮಾನವನ್ನು ಪಡೆಯಲು ಸಂಪೂರ್ಣ ಪಾವನರಾಗಿ ತೋರಿಸಬೇಕಾಗಿದೆ.

2. ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನಿಡಬಾರದು. ಒಬ್ಬ ಪ್ರಿಯತಮನೊಂದಿಗೇ ಮನಸ್ಸನ್ನಿಡಬೇಕಾಗಿದೆ. ತಂದೆ ಮತ್ತು ರಾಜಧಾನಿಯನ್ನು ನೆನಪು ಮಾಡಬೇಕಾಗಿದೆ.

ವರದಾನ:
ಬ್ರಾಹ್ಮಣ ಜೀವನದಲ್ಲಿ ಸದಾ ಹಸನ್ಮುಖಿಗಳು ಮತ್ತು ಜಾಗರೂಕ ಮೂಡ್ನಲ್ಲಿರುವಂತಹ ಕಂಬೈಂಡ್ ಸ್ವರೂಪಧಾರಿ ಭವ.

ಒಂದುವೇಳೆ ಯಾವುದೇ ಪರಿಸ್ಥಿತಿಯಲ್ಲಿ ಪ್ರಸನ್ನತೆಯ ಮೂಡ್ ಪರಿವರ್ತನೆಯಾದರೆ ಅದನ್ನು ಸದಾ ಕಾಲದ ಪ್ರಸನ್ನತೆಯೆಂದು ಹೇಳಲಾಗುವುದಿಲ್ಲ. ಬ್ರಾಹ್ಮಣ ಜೀವನದಲ್ಲಿ ಸದಾ ಹಸನ್ಮುಖಿ ಮತ್ತು ಜಾಗರೂಕ ಮೂಡ್ ಇರಬೇಕು. ಮೂಡ್ ಬದಲಾವಣೆಯಾಗುತ್ತಿರಬಾರದು. ಯಾವಾಗ ಮೂಡ್ ಬದಲಾವಣೆಯಾಗುತ್ತಿರುತ್ತದೆ ಆಗ ಹೇಳುತ್ತಾರೆ ನನಗೆ ಏಕಾಂತ ಬೇಕಾಗಿದೆ ಎಂದು. ಇಂದು ನನ್ನ ಮೂಡ್ ಈ ರೀತಿ ಇದೆ. ಯಾವಾಗ ಒಂಟಿಯಾಗಿರುವಿರಿ ಆಗ ಮೂಡ್ ಬದಲಾಗುತ್ತಿರುತ್ತದೆ, ಸದಾ ಕಂಬೈಂಡ್ ರೂಪದಲ್ಲಿದ್ದಾಗ ಮೂಡ್ ಬದಲಾಗುವುದಿಲ್ಲ.

ಸ್ಲೋಗನ್:
ಯಾವುದೇ ಉತ್ಸವ ಆಚರಿಸುವುದು ಅರ್ಥಾತ್ ನೆನಪು ಮತ್ತು ಸೇವೆಯ ಉತ್ಸಾಹದಲ್ಲಿರುವುದು.