01.09.24 Avyakt Bapdada
Kannada
Murli 25.11.2001 Om Shanti Madhuban
ಆಶೀರ್ವಾದವನ್ನು ಕೊಡಿ
ಆಶೀರ್ವಾದವನ್ನು ತೆಗೆದುಕೊಳ್ಳಿ, ಕಾರಣದ ನಿವಾರಣೆ ಮಾಡಿ ಸಮಸ್ಯೆಗಳ ಸಮಾಧಾನವನ್ನು ಮಾಡಿ
ಇಂದು ಪ್ರೀತಿಯ ಸಾಗರ
ಬಾಪ್ದಾದಾ ತನ್ನ ಪ್ರೀತಿ ಸ್ವರೂಪ ಮಕ್ಕಳ ಪ್ರೀತಿಯ ಬಂಧನಕ್ಕೆ ಆಕರ್ಷಿತರಾಗಿ ಮಿಲನ ಮಾಡಲು
ಬಂದಿದ್ದಾರೆ. ಮಕ್ಕಳು ಕರೆದರು ಹಾಗೂ ಮಾಲೀಕ ತಂದೆ ಪ್ರತ್ಯಕ್ಷ ಆಗಿಬಿಟ್ಟರು. ಅವ್ಯಕ್ತ
ಮಿಲನವನ್ನಂತು ಸದಾ ಮಾಡುತ್ತಲೇ ಇರುತ್ತೀರಿ. ಆದರೆ ಸಾಕಾರದಲ್ಲಿ ಕರೆದಿದ್ದೀರೆಂದರೆ ಬಾಪ್ದಾದಾ
ಮಕ್ಕಳ ವಿಶಾಲ ಮೇಳದಲ್ಲಿ ತಲುಪಿದ್ದಾರೆ. ಬಾಪ್ದಾದಾರವರಿಗೆ ಮಕ್ಕಳ ಸ್ನೇಹ, ಮಕ್ಕಳ ಪ್ರೀತಿಯನ್ನು
ನೋಡಿ ಖುಷಿಯಾಗುತ್ತಿದೆ. ಮತ್ತು ಹೃದಯದಿಂದ ನಾಲ್ಕೂ ಕಡೆಯ ಮಕ್ಕಳಿಗೋಸ್ಕರ ಹಾಡನ್ನು ಹಾಡುತ್ತಾರೆ
ವಾಹ್! ಶ್ರೇಷ್ಠ ಭಾಗ್ಯವಾನ್ ಮಕ್ಕಳೇ ವಾಹ್! ವಾಹ್! ಭಗವಂತನ ಪ್ರೀತಿಪಾತ್ರ ಆತ್ಮಗಳಾಗಿದ್ದೀರಿ
ವಾಹ್! ಇಂತಹ ದೊಡ್ಡ ಭಾಗ್ಯ, ಇಂತಹ ಸಾಧಾರಣ ರೂಪದಲ್ಲಿ ಸಹಜವಾಗಿ ಪ್ರಾಪ್ತಿಯಾಗುವುದೆಂದು ನೀವು
ಕನಸಿನಲ್ಲೂ ಸಹ ಯೋಚಿಸಿರಲಿಲ್ಲ. ಆದರೆ ಈ ದಿನ ಸಾಕಾರ ರೂಪದಲ್ಲಿ ಭಾಗ್ಯವನ್ನು
ನೋಡುತ್ತಿದ್ದೀರಲ್ಲವೇ, ಬಾಪ್ದಾದಾ ನೋಡುತ್ತಿದ್ದಾರೆ ದೂರ ಕುಳಿತಿದ್ದರೂ ಸಹ ಮಿಲನ ಮೇಳವನ್ನು
ಆಚರಿಸುತ್ತಿದ್ದೀರಿ. ಬಾಪ್ದಾದಾರವರು ದೂರದಲ್ಲಿರುವವರನ್ನು ನೋಡಿ ಮಿಲನ ಮಾಡುತ್ತಿದ್ದಾರೆ.
ಮೆಜಾರಿಟಿ ಮಾತೆಯರಿಗೆ ಗೋಲ್ಡನ್ ಚಾನ್ಸ್ ಸಿಕ್ಕಿದೆ ಮತ್ತು ಬಾಪ್ದಾದಾರವರಿಗೂ ಸಹ ವಿಶೇಷ ಶಕ್ತಿ
ಸೇನೆಯನ್ನು ನೋಡಿ ಖುಷಿಯಾಗುತ್ತಿದೆ. ಏಕೆಂದರೆ ನಾಲ್ಕು ಗೋಡೆಯ ಮಧ್ಯದಲ್ಲಿದ್ದ ಮಾತೆಯರು ತಂದೆಯ
ಮುಖಾಂತರ ವಿಶ್ವ ಕಲ್ಯಾಣಕಾರಿಯಾಗಿ ವಿಶ್ವದ ರಾಜ್ಯಾಧಿಕಾರಿ ಆಗಿಬಿಟ್ಟಿದ್ದೀರಿ. ಆಗಿದ್ದೀರೋ? ಅಥವಾ
ಆಗಬೇಕಾಗಿದೆಯೋ? ಆಗಿದ್ದೀರಲ್ಲವೇ? ವಿಶ್ವದ ರಾಜ್ಯಭಾಗ್ಯವೆಂಬ ಬೆಣ್ಣೆಯ ಮುದ್ದೆ ನಿಮ್ಮೆಲ್ಲರ
ಕೈಯಲ್ಲಿ ಇದೆ ಅಲ್ಲವೇ! ಬಾಪ್ದಾದಾರವರೂ ನೋಡಿದರು, ಯಾರೆಲ್ಲಾ ಮಾತೆಯರು ಮಧುಬನದಲ್ಲಿ ತಲುಪಿದ್ದೀರಿ
ಅವರಿಗೆ ಒಂದು ಮಾತಿನ ತುಂಬಾ ಖುಷಿ ಇದೆ. ಅದು ಯಾವುದು? ಏಕೆಂದರೆ ಮಾತೆಯರಿಗೆ ವಿಶೇಷವಾದ ಖುಷಿ
ಇದೆಯಲ್ಲವೇ? ನಶೆಯಿಂದ ಹೇಳುತ್ತೀರಲ್ಲವೆ? ನಮ್ಮನ್ನು ಬಾಪ್ದಾದಾರವರೇ ವಿಶೇಷವಾಗಿ ಕರೆದಿದ್ದಾರೆ.
ಆದ್ದರಿಂದ ಬಾಪ್ದಾದಾರವರಿಗೆ ಮಾತೆಯರೊಂದಿಗೆ ವಿಶೇಷವಾದ ಪ್ರೀತಿ ಇದೆಯಲ್ಲವೇ! ಮಾತೆಯರು ನಶೆಯಿಂದ
ಹೇಳುತ್ತಾರೆ ಬಾಪ್ದಾದಾ ನಮ್ಮನ್ನು ಕರೆದಿದ್ದಾರೆ ಎಂದಾಗ ನಾವೇಕೆ ಬರಬಾರದು! ಬಾಪ್ದಾದಾರವರು
ಮಕ್ಕಳ ಆತ್ಮೀಯ ವಾರ್ತಾಲಾಪವನ್ನು ಕೇಳುತ್ತಾರೆ, ಖುಷಿಯ ನಶೆಯನ್ನು ನೋಡುತ್ತಾರೆ. ಪಾಂಡವರೂ ಸಹ
ಕಡಿಮೆ ಇಲ್ಲ, ಪಾಂಡವರಿಲ್ಲದೆ ವಿಶ್ವದ ಕಾರ್ಯ ಸಮಾಪ್ತಿ ಆಗುವುದಿಲ್ಲ. ಇಂದು ಅಣ್ಣಂದಿರು
ಮಾತೆಯರನ್ನು ವಿಶೇಷವಾಗಿ ಮುಂದಿಟ್ಟಿದ್ದೀರಿ.
ಬಾಪ್ದಾದಾ ಎಲ್ಲಾ ಮಕ್ಕಳಿಗೆ ಬಹಳ ಸಹಜ ಪುರುಷಾರ್ಥದ ವಿಧಿಯನ್ನು ಹೇಳುತ್ತಿದ್ದಾರೆ. ಮಾತೆಯರಿಗೆ
ಸಹಜವಾಗಿ ಬೇಕಲ್ಲವೇ? ಬಾಪ್ದಾದಾ ಇದನ್ನೇ ಎಲ್ಲಾ ಮಾತೆಯರಿಗೆ, ಮಕ್ಕಳಿಗೆ ಹೇಳುತ್ತಾರೆ "ಎಲ್ಲದಕ್ಕಿಂತ
ಸಹಜ ಪುರುಷಾರ್ಥದ ಸಾಧನವಾಗಿದೆ- ಕೇವಲ ನಡೆದಾಡುತ್ತಾ, ತಿರುಗಾಡುತ್ತಾ, ಸಂಬಂಧ-ಸಂಪರ್ಕದಲ್ಲಿ
ಬರುತ್ತಾ ಪ್ರತಿಯೊಬ್ಬ ಆತ್ಮನಿಗೆ ಹೃದಯದಿಂದ ಶುಭಭಾವನೆಯ ಆಶೀರ್ವಾದವನ್ನು ಕೊಡಿ ಮತ್ತು
ಅನ್ಯರಿಂದಲೂ ಆಶಿರ್ವಾದವನ್ನು ತೆಗೆದುಕೊಳ್ಳಿ. ಒಂದುವೇಳೆ ನಿಮಗೆ ಯಾರಾದರೂ ಏನಾದರೂ ಕೊಡಲಿ, ಶಾಪ
ಕೊಟ್ಟರೂ ಸಹ ನೀವು ಶಾಪವನ್ನು ತನ್ನ ಶುಭಭಾವನೆಯ ಶಕ್ತಿಯಿಂದ ಆಶೀರ್ವಾದವನ್ನಾಗಿ ಪರಿವರ್ತನೆ
ಮಾಡಿಕೊಳ್ಳಿ" ನಿಮ್ಮ ಮೂಲಕ ಪ್ರತಿಯೊಬ್ಬ ಆತ್ಮನಿಗೆ ಆಶೀರ್ವಾದದ ಅನುಭವ ಆಗಬೇಕು. ಯಾವ ಸಮಯದಲ್ಲಿ
ಶಾಪ ಕೊಡುತ್ತಾರೆ ಆ ಸಮಯದಲ್ಲಿ ಅವರಿಗೆ ನಿಮ್ಮಿಂದ ಆಶೀರ್ವಾದದ ಅನುಭವ ಆಗಬೇಕು. ಏಕೆಂದರೆ ಅವರು ಆ
ಸಮಯದಲ್ಲಿ ಒಂದಲ್ಲಾ ಒಂದು ವಿಕಾರದ ವಶೀಭೂತರಾಗಿರುತ್ತಾರೆ. ವಶೀಭೂತ ಆತ್ಮನ ಪ್ರತಿ ಅಥವಾ ಪರವಶ
ಆತ್ಮರ ಪ್ರತಿ ಎಂದೂ ಶಾಪದ ರೀತಿಯಲ್ಲಿ ನೋಡಬೇಡಿ. ಅವರ ಪ್ರತಿ ಸದಾ ಸಹಯೋಗ ನೀಡುವ ಆಶೀರ್ವಾದ ಬರಲಿ.
ಕೇವಲ ಒಂದು ಮಾತು ಸದಾ ನೆನಪಿಟ್ಟುಕೊಳ್ಳಿ, ನಾನು ನಿರಂತರ "ಈ ಒಂದೇ ಕಾರ್ಯವನ್ನು
ಮಾಡಬೇಕಾಗಿದೆ-ಸಂಕಲ್ಪ, ಮಾತು, ಕರ್ಮ, ಸಂಬಂಧ-ಸಂಪರ್ಕದ ಮೂಲಕ ಆಶೀರ್ವಾದ ಕೊಡುವುದು ಹಾಗೂ
ಆಶೀರ್ವಾದ ತೆಗೆದುಕೊಳ್ಳುವುದು.” ಒಂದುವೇಳೆ ಯಾವುದೇ ಆತ್ಮನ ಪ್ರತಿ ವ್ಯರ್ಥಸಂಕಲ್ಪ ಅಥವಾ
ನೆಗೆಟೀವ್ (ನಕಾರಾತ್ಮಕ) ಸಂಕಲ್ಪ ಬಂದರೂ ಸಹ ಇದನ್ನು ನೆನಪಿಟ್ಟುಕೊಳ್ಳಿ-ನನ್ನ ಕರ್ತವ್ಯ ಏನಾಗಿದೆ
ಎಂದು. ಹೇಗೆ ಬೆಂಕಿ ಆರಿಸುವವರು (ಅಗ್ನಿ ಶಾಮಕದಳ) ಎಲ್ಲಾದರೂ ಬೆಂಕಿ ಬಿದ್ದಾಗ ಬೆಂಕಿಯನ್ನು
ನೋಡಿದಾಗ ಅದನ್ನು ಆರಿಸುವ ಕಾರ್ಯವನ್ನು ಅವರು ಮರೆಯುವುದಿಲ್ಲ. ಅವರಿಗೆ ನಾವು ಆರಿಸುವವರು ಎಂಬುದು
ಸದಾ ನೆನಪಿರುತ್ತದೆ. ಹಾಗೆಯೇ ಯಾರಾದರೂ ಯಾವುದೇ ವಿಕಾರದ ಕಾರಣ ಇಂತಹ ಕಾರ್ಯ ಮಾಡುತ್ತಿದ್ದಾರೆ
ಅದನ್ನು ನೋಡಿದಾಗ ಅದು ನಿಮಗೆ ಇಷ್ಟ ಆಗುವುದಿಲ್ಲ, ಆಗ ನಿಮಗೆ ನಿಮ್ಮ ಕರ್ತವ್ಯದ ನೆನಪು ಇರಲಿ. ಈಗ
ನನ್ನ ಕರ್ತವ್ಯ ಏನಾಗಿದೆ. ಈಗ ನಾನು ಆಶೀರ್ವಾದ ಕೊಡುವುದು, ಶುಭಭಾವನೆಯ ಸಹಯೋಗ ಕೊಡುವುದು. ಕೇವಲ
ಒಂದು ಅಕ್ಷರ ನೆನಪಿಟ್ಟುಕೊಳ್ಳಿ, ಮಾತೆಯರು ಆಶೀರ್ವಾದ ಕೊಡುವುದು ಮತ್ತು ತೆಗೆದುಕೊಳ್ಳುವುದು.
ಇದನ್ನು ಮಾಡಲು ಆಗುತ್ತದೆಯಲ್ಲವೇ! ಮಾಡುತ್ತೀರಲ್ಲವೇ ಅಥವಾ ಪಾಂಡವರು ಮಾಡಿದ್ದೀರಲ್ಲವೇ? ಪಾಂಡವರು
ಹೇಳುತ್ತಾರೆ ಮಾಡಲೇಬೇಕೆಂದು. ಪಾಂಡವರ ಗಾಯನವಿದೆ ಸದಾ ವಿಜಯೀ. ಮತ್ತು ಶಕ್ತಿಯರು
ವಿಶ್ವಕಲ್ಯಾಣಕಾರಿಯೆಂದು ನಿಮ್ಮ ಹೆಸರೇ ಪ್ರಸಿದ್ಧವಾಗಿದೆಯಲ್ಲವೇ,
ಬಾಪ್ದಾದಾರವರಿಗೆ ನಾಲ್ಕೂ ಕಡೆಯ ಮಕ್ಕಳಿಂದ ಇದುವರೆಗೂ ಒಂದು ಆಸೆ ಉಳಿದುಕೊಂಡಿದೆ. ಅದು ಯಾವುದೆಂದು
ಹೇಳುವುದೇ? ಗೊತ್ತಿದೆಯಾ? ಟೀಚರ್ಸ್ ತಿಳಿದಿದ್ದೀರಲ್ಲವೇ. ಎಲ್ಲಾ ಮಕ್ಕಳು ಯಥಾಶಕ್ತಿ
ಪುರುಷಾರ್ಥವನ್ನಂತೂ ಮಾಡುತ್ತಿದ್ದಾರೆ. ಬಾಪ್ದಾದಾರವರು ಪುರುಷಾರ್ಥವನ್ನು ನೋಡಿ ಮುಗುಳ್ನಗುತ್ತಾರೆ.
ಆದರೆ ಒಂದು ಆಸೆ ಇದೆ. ಅದೇನೆಂದರೆ ಪುರುಷಾರ್ಥದಲ್ಲಿ ಈಗ ತೀವ್ರಗತಿ ಆಗಬೇಕಾಗಿದೆ. ಪುರುಷಾರ್ಥವಂತೂ
ಇದೆ. ಆದರೆ ಈಗ ತೀವ್ರಗತಿಯಲ್ಲಿ ಮಾಡಬೇಕಾಗಿದೆ. ಇದರ ವಿಧಿಯಾಗಿದೆ - ಕಾರಣ ಎಂಬ ಶಬ್ದವು
ಸಮಾಪ್ತಿಯಾಗಲಿ, ಮತ್ತು ನಿವಾರಣ ಸ್ವರೂಪರು ಸದಾ ಆಗಬೇಕು. ಕಾರಣವಂತೂ ಸಮಯನುಸಾರವಾಗಿ ಬರುತ್ತಲೇ
ಇರುತ್ತದೆ ಮುಂದೆಯೂ ಆಗುತ್ತದೆ. ಆದರೆ ನೀವು ಮಕ್ಕಳು ನಿವಾರಣಾ ಸ್ವರೂಪರಾಗಿ. ಏಕೆಂದರೆ ನೀವೆಲ್ಲಾ
ಮಕ್ಕಳು ವಿಶ್ವದ ಕಾರಣವನ್ನು ನಿವಾರಣೆ ಮಾಡಿ ಎಲ್ಲಾ ಮೆಜಾರಿಟಿ ಆತ್ಮಗಳನ್ನು ನಿರ್ವಾಣಧಾಮಕ್ಕೆ
ಕಳುಹಿಸ ಬೇಕಾಗಿದೆ. ಯಾವಾಗ ಸ್ವಯಂನ್ನು ನಿವಾರಣ ಸ್ವರೂಪರನ್ನಾಗಿ ಮಾಡಿಕೊಳ್ಳುತ್ತೀರಿ, ಆಗ
ವಿಶ್ವದ ಆತ್ಮರನ್ನು ನಿವಾರಣ ಸ್ವರೂಪದ ಮೂಲಕ ಎಲ್ಲಾ ಸಮಸ್ಯೆಗಳಿಂದ ನಿವಾರಣೆ ಮಾಡಿ
ನಿರ್ವಾಣಧಾಮಕ್ಕೆ ಕಳುಹಿಸಬಹುದಾಗಿದೆ. ಈಗ ವಿಶ್ವದ ಆತ್ಮಗಳು ಮುಕ್ತಿಯನ್ನು ಬಯಸುತ್ತಾರೆ. ತಂದೆಯ
ಮೂಲಕ ಮುಕ್ತಿಯ ಆಸ್ತಿಯನ್ನು ಕೊಡಿಸುವಂತಹವರು ನಿಮಿತ್ತ ತಾವು ಮಕ್ಕಳಾಗಿದ್ದೀರಿ. ನಿಮಿತ್ತ
ಆತ್ಮಗಳು ಮೊದಲು ಸ್ವಯಂನ ಭಿನ್ನ ಸಮಸ್ಯೆಗಳ ಕಾರಣವನ್ನು ನಿವಾರಣೆ ಮಾಡಿ, ತನ್ನನ್ನು ಮುಕ್ತರನ್ನಾಗಿ
ಮಾಡಿಕೊಳ್ಳುತ್ತೀರೆಂದಾಗ ವಿಶ್ವಕ್ಕೆ ಮುಕ್ತಿಯ ಆಸ್ತಿಯನ್ನು ಕೊಡಲು ಸಾಧ್ಯವಾಗುತ್ತದೆ.
ಮುಕ್ತರಾಗಿದ್ದೀರಾ? ಯಾವುದೇ ಪ್ರಕಾರದ ಸಮಸ್ಯೆಯ ಕಾರಣ ಮುಂದೆ ಬರದೇ ಇರಲಿ, ಈ ಕಾರಣ ಇದೆ, ಆ
ಕಾರಣವಿದೆ ಎಂದು. ಯಾವಾಗ ಕಾರಣವು ಸಮ್ಮುಖದಲ್ಲಿ ಬರುತ್ತದೆ ಎಂದಾಗ ಆ ಕಾರಣಕ್ಕೆ ಒಂದು
ಸೆಕೆಂಡಿನಲ್ಲಿ ನಿವಾರಣೆಯನ್ನು ಯೋಚನೆ ಮಾಡಿ. ಇದನ್ನು ಯೋಚನೆ ಮಾಡಿ-ಯಾವಾಗ ವಿಶ್ವದ ನಿವಾರಣೆಯನ್ನು
ಮಾಡುತ್ತೇವೆಂದರೆ ತನ್ನ ಸಣ್ಣ ಸಣ್ಣ ಸಮಸ್ಯೆಗಳನ್ನು ನಿವಾರಣೆ ಮಾಡಲು ಆಗುವುದಿಲ್ಲವೇ?
ಮಾಡಲಾಗುವುದಿಲ್ಲವೇ? ಈಗಂತೂ ಆತ್ಮಗಳ ಕ್ಯೂ ತಮ್ಮ ಮುಂದೆ ಬರುತ್ತದೆ- ಹೇ ಮುಕ್ತಿಧಾತ!
ಮುಕ್ತಿಯನ್ನು ನೀಡಿ ಎಂದು ಕೇಳುತ್ತಾರೆ. ಏಕೆಂದರೆ ನೀವು ಮುಕ್ತಿಧಾತನ ಡೈರೆಕ್ಟ್ ಮಕ್ಕಳು,
ಅಧಿಕಾರಿ ಮಕ್ಕಳಾಗಿದ್ದೀರಿ. ಮಾಸ್ಟರ್ ಮುಕ್ತಿದಾತರಲ್ಲವೇ? ಆದರೆ ನಿಮ್ಮ ಮುಂದೆ ಕ್ಯೂ (ಏಕೆ? ಏನು?)
ಎನ್ನುವ ಒಂದು ಅಡಚಣೆಯ ಬಾಗಿಲು ಮುಚ್ಚಿದೆ, ಕ್ಯೂ (ಏಕೆ?) ಎನ್ನುವ ಕ್ಯೂ ತಯಾರಾಗಿಬಿಟ್ಟಿದೆ.
ಪುರುಷಾರ್ಥದಲ್ಲಿ ಈ ಏಕೆ ಎನ್ನುವ ಶಬ್ದದ ಬಾಗಿಲು ಮುಚ್ಚಿದೆ. ಇದರಿಂದಲೇ ಅನೇಕ ಕ್ಯೂ ಅನ್ನು ಜೊತೆ
ತರುತ್ತದೆ ಎಂದಾಗ ಬಾಪ್ದಾದಾ ಈಗ ದೇಶ ವಿದೇಶದ ಎಲ್ಲಾ ಮಕ್ಕಳಲ್ಲಿ ಈ ಸ್ಮೃತಿಯನ್ನು
ತರಿಸುತ್ತಿದ್ದಾರೆ-ನೀವು ಸಮಸ್ಯೆಗಳ ಏಕೆ? ಎಂಬ ಕ್ಯೂಅನ್ನು ಸಮಾಪ್ತಿ ಮಾಡಿ. ಮಾಡಲಾಗುತ್ತದೆಯೇ?
ಟೀಚರ್ಸ್ ಮಾಡುತ್ತೀರಾ? ಪಾಂಡವರು ಮಾಡಲಾಗುತ್ತದೆಯೇ? ಕೈ ಎತ್ತಿ....ಎಲ್ಲರೂ ಕೈಯನ್ನು
ಎತ್ತಿದ್ದೀರಾ? ಅಥವಾ ಕೆಲವರೋ? ಈ ಫಾರಿನರ್ಸ್ ಎತ್ತುತ್ತಿಲ್ಲ. ಭಾಷೆಯ ಅನುವಾದ ಅಂತ್ಯದಲ್ಲಿ
ಆಗುತ್ತದೆ. ವಿದೇಶದವರು ತಯಾರಾಗಿದ್ದೀರಾ? ಹೌದೋ ಅಥವಾ ಇಲ್ಲವೋ? ಹೌದು ಎಂದರೆ ಸೀದಾ ಕೈ ಎತ್ತಿ,
ಅರ್ಧ ಅಲ್ಲ ಸೀದಾ ಕೈ ಎತ್ತಿ. ಈಗ ಯಾವುದೇ ಸೇವಾಕೇಂದ್ರದಲ್ಲಿ ಯಾವುದೇ ಸಮಸ್ಯೆಯ ಹೆಸರು ಇರಬಾರದು.
ಈ ರೀತಿ ಇರಲು ಸಾಧ್ಯವೇ? ಯಾವುದೇ ಸಮಸ್ಯೆ ಇರಬಾರದು. ಮುಂದೆ ಸಾಲಿನಲ್ಲಿ ಕುಳಿತಿರುವವರು ಹೇಳಿ
ಸಾಧ್ಯವೇ? ಮೋಹಿನಿ... ಮುನ್ನಿ.... ಹೇಳಿ ಸಾಧ್ಯವಿದೆಯೇ? ಎಲ್ಲರೂ ನಿಶ್ಚಯ
ಮಾಡಬೇಕಲ್ಲವೇ-ಪ್ರತಿಯೊಬ್ಬರು ನಾನು ಮಾಡಬೇಕು ಎಂದು. ಟೀಚರ್ಸ್ ನಾನು ಮಾಡಬೇಕು ಎಂದು,
ಸ್ಟೂಡೆಂಟ್ಸ್ ಪ್ರವೃತ್ತಿಯವರು ನಾವು ಮಾಡಬೇಕೆಂದು, ಮಧುಬನದಲ್ಲಿರುವವರು ತಿಳಿಯಿರಿ ನಾವು ಮಾಡಬೇಕು
ಎಂದು. ಮಧುಬನದವರು ಕೈ ಎತ್ತಿ ಎಲ್ಲಾ ಸಮಸ್ಯೆಗಳನ್ನು ಸಮಾಪ್ತಿ ಮಾಡಲು ಸಾಧ್ಯವೆಂದು. ನಿಮಗೆ
ಒಳ್ಳೆಯ ಜಾಗ ಸಿಕ್ಕಿದೆ ಏಕೆಂದರೆ ನೀವು ಅಧಿಕಾರಿಗಳಾಗಿದ್ದೀರಲ್ಲವೇ? ಮುಂದಿನ ಸಾಲಿನವರು ಕೈ ಎತ್ತಿ?
ಸಮಸ್ಯೆ ಎಂಬ ಶಬ್ದವೇ ಸಮಾಪ್ತಿಯಾಗಬೇಕು. ಕಾರಣ ಸಮಾಪ್ತಿಯಾಗಿ ನಿವಾರಣೆ ಎನ್ನುವ ಶಬ್ದ ಬರಲಿ.
ಸಾಧ್ಯವಿದೆಯೇ? ಏನು ಇದು ಸಾಧ್ಯವಿಲ್ಲವೇ? ಯಾವಾಗ? ಮೊದಲು ಮೊದಲು ಸ್ಥಾಪನೆಯ ಸಮಯದಲ್ಲಿ ಎಲ್ಲಾ
ಬಂದಂತಹ ಮಕ್ಕಳು ಏನು ಪ್ರತಿಜ್ಞೆ ಮಾಡಿದ್ದೀರಿ. ಮಾಡಿ ತೋರಿಸಿದಿರಿ, ಅಸಂಭವವನ್ನು ಸಂಭವವನ್ನಾಗಿ
ಮಾಡಿ ತೋರಿಸಿದಿರಿ. ಎಷ್ಟು ಸಮಯವಾಯಿತು. 65 ವರ್ಷಗಳಿಂದ ಅಸಂಭವವನ್ನು ಸಂಭವ ಮಾಡಲಾಗುವುದಿಲ್ಲವೆ?
ಮುಖ್ಯ ಟೀಚರ್ಸ್ ಕೈ ಎತ್ತಿ. ಪಾಂಡವರು ಏಕೆ ಕೈ ಎತ್ತಿಲ್ಲ, ಅಗುವುದಿಲ್ಲವೇ? ಸಂಶಯವೇ? ಸ್ವಲ್ಪ
ಯೋಚಿಸುತ್ತಿದ್ದಾರೆ. ಯೋಚಿಸಬೇಡಿ, ಮಾಡಲೇಬೇಕಾಗಿದೆ. ಬೇರೆಯವರದನ್ನು ಯೋಚಿಸಬೇಡಿ, ಪ್ರತಿಯೊಬ್ಬರು
ತನ್ನದನ್ನು ಯೋಚಿಸಿ. ತನ್ನದನ್ನು ಯೋಚಿಸಬಹುದಲ್ಲವೇ? ನಾನು ಸಮಸ್ಯೆ ಇಲ್ಲದೆ ಇರುತ್ತೇನೆ ಎಂದು
ತನ್ನದನ್ನು ಯೋಚಿಸಿ ತನಗಾಗಿ ಸಾಹಸ ಇಡಬಹುದಲ್ಲವೇ? ಅಥವಾ ಇಲ್ಲವೋ? ಫಾರಿನರ್ಸ್ ಸಾಹಸ
ಮಾಡುತ್ತೀರಲ್ಲವೇ? ಅಭಿನಂದನೆಗಳು, ಒಳ್ಳೆಯದು ಕೈ ಎತ್ತಿ, ಬೇರೆಯವರನ್ನು ನೋಡಿ ಕೈ ಎತ್ತಬೇಡಿ,
ಹೃದಯಪೂರ್ವಕವಾಗಿ ಕೈ ಎತ್ತಿ. ಈ ರೀತಿ ಅಲ್ಲ ಎಲ್ಲರೂ ಕೈ ಎತ್ತುತ್ತಿದ್ದಾರೆ ನಾನೂ ಎತ್ತಿದೆ.
ಒಂದುವೇಳೆ ಹೃದಯಪೂರ್ವಕವಾಗಿ ದೃಡ ಸಂಕಲ್ಪ ಮಾಡುತ್ತೀರೆಂದರೆ ಕಾರಣವನ್ನು ಸಮಾಪ್ತಿ ಮಾಡಿ. ನಿವಾರಣ
ಸ್ವರೂಪರಾಗಲೇಬೇಕು. ಸಹನೆ ಮಾಡಬೇಕೇ, ಎದುರಿಸಬೇಕೇ ಹಾಗಾದರೆ ಪರಸ್ಪರ ಸಂಬಂಧ-ಸಂಪರ್ಕದಲ್ಲಿ ಏನೇ
ಆಗಲಿ ಏನೇ ಬಂದರೂ ಸಮಸ್ಯಾ ಸ್ವರೂಪರಾಗಬಾರದು. ಸಾಧ್ಯವಿದೆಯೇ? ಒಂದುವೇಳೆ ದೃಢ ನಿಶ್ಚಯವಿದ್ದರೆ
ಅವರು ಕೊನೆಯಿಂದ ಮೊದಲವರೆಗೆ ಕೈ ಎತ್ತಿ. (ಬಾಪ್ದಾದಾರವರು ಎಲ್ಲರನ್ನೂ ಕೈ ಎತ್ತಿಸಿದರು,
ಟಿ.ವಿಯಲ್ಲಿ ದೃಶ್ಯವನ್ನು ನೋಡಿದರು) ಒಳ್ಳೆಯದು ಎಕ್ಸರ್ಸೈಜ್ ಆಯಿತ್ತಲ್ಲವೆ. ಕೈಯನ್ನು ಏಕೆ
ಎತ್ತಿಸುತ್ತಿದ್ದಾರೆಂದರೆ ಹೇಗೆ ಒಬ್ಬರನ್ನೊಬ್ಬರು ನೋಡಿ ಕೈ ಎತ್ತಲು ಉತ್ಸಾಹ ಬರುತ್ತದೆಯಲ್ಲವೇ!
ಹಾಗೆಯೇ ಸಮಸ್ಯೆ ಬಂದಾಗ ಮುಂದೆ ಬಾಪ್ದಾದಾರವರನ್ನು ನೋಡಿ, ಮನ ತುಂಬಿ ಹೇಳಿ ಬಾಬಾ ಎಂದು. ಬಾಬಾ
ಪ್ರತ್ಯಕ್ಷವಾಗಿಬಿಡುತ್ತಾರೆ ಆಗ ನಿಮ್ಮ ಸಮಸ್ಯೆ ದೂರವಾಗಿಬಿಡುತ್ತದೆ. ಮಾಸ್ಟರ್ ಸರ್ವಶಕ್ತಿವಾನ್
ಎಂಬ ನಿಮ್ಮ ಟೈಟಲನ್ನು ಸದಾ ನೆನಪು ಮಾಡಿ. ಇಲ್ಲವೆಂದರೆ ಬಾಪ್ದಾದಾ ಮಾಸ್ಟರ್ ಸರ್ವಶಕ್ತಿವಾನ್
ಎನ್ನುವ ಬದಲು ನೆನಪು ಪ್ರೀತಿಯಲ್ಲಿ ಕೇವಲ ಶಕ್ತಿವಾನ್ ಎಂದು ಹೇಳುವುದೇ? ಇದು
ಚೆನ್ನಾಗಿರುವುದಿಲ್ಲ ತಾನೆ? ಮಾಸ್ಟರ್ ಸರ್ವಶಕ್ತಿವಾನ್ ಮಕ್ಕಳು ಏನು ಮಾಡಲು ಸಾಧ್ಯವಿಲ್ಲ. ನಿಮ್ಮ
ಟೈಟಲನ್ನು ಸದಾ ನೆನಪು ಇಟ್ಟುಕೊಳ್ಳಿ ಮಾಸ್ಟರ್ ಸರ್ವಶಕ್ತಿವಾನ್ ಎಂದರೆ ವಿಶ್ವವನ್ನು ಕಲ್ಯಾಣ
ಮಾಡುವುದಾಗಿದೆ. ತನ್ನ ಟೈಟಲ್ ಮತ್ತು ಕರ್ತವ್ಯವನ್ನು ನೆನಪಿಟ್ಟುಕೊಂಡರೆ ಶಕ್ತಿಗಳು ತಾನಾಗಿಯೇ
ಬರುತ್ತವೆ. ನೀವು ಶಕ್ತಿಗಳ ಮೇಲೂ ಸಮಯದಲ್ಲಿ ಆರ್ಡರ್ ಮಾಡಿ. ಶಕ್ತಿಯನ್ನು ನೀವು ಧಾರಣೆ
ಮಾಡುತ್ತೀರಿ ಆದರೆ ನೀವು ಮಾಡುವ ತಪ್ಪು ಏನೆಂದರೆ ಸಮಯಕ್ಕೆ ಸರಿಯಾಗಿ ಉಪಯೋಗಿಸುವುದರ ಬದಲು ಸಮಯ
ಮುಗಿದ ಮೇಲೆ ಉಪಯೋಗಿಸುತ್ತೀರಿ. ನಂತರ ಯೋಚಿಸುತ್ತೀರಿ ಹೀಗೆ ಮಾಡಬೇಕಿತ್ತಲ್ಲವೇ ಎಂದು. ಹೇಗೆ
ನಿಮ್ಮ ಕಮೇರ್ಂದ್ರಿಯಗಳನ್ನು ನಿಮ್ಮ ಆಜ್ಞೆಯ ಪ್ರಮಾಣ ಉಪಯೋಗಿಸುತ್ತೀರಿ. ಕಾಲನ್ನು, ಕೈಯನ್ನು ಹೇಗೆ
ಬೇಕೋ ಹಾಗೆ ಆಡಿಸುತ್ತೀರಲ್ಲವೇ? ಹಾಗೆಯೇ ಪ್ರತಿ ಶಕ್ತಿಗಳನ್ನು ಸಮಯದಲ್ಲಿ ಕಾರ್ಯದಲ್ಲಿ
ಉಪಯೋಗಿಸಿದಾಗ ಆ ಶಕ್ತಿಗಳು ಸಮಯದಲ್ಲಿ ತನ್ನ ಕೆಲಸವನ್ನು ಮಾಡುತ್ತವೆ. ಶಕ್ತಿಯನ್ನು
ತುಂಬಿಕೊಳ್ಳುತ್ತೀರಿ ಆದರೆ ಸಮಯದಲ್ಲಿ ಶಕ್ತಿಯನ್ನು ಕಡಿಮೆ ಉಪಯೋಗಿಸುತ್ತೀರಿ. ಸಮಯದಲ್ಲಿ
ಕಾರ್ಯದಲ್ಲಿ ಉಪಯೋಗಿಸುವುದರಿಂದ ಶಕ್ತಿ ತನ್ನ ಕಾರ್ಯವನ್ನು ಖಂಡಿತ ಮಾಡುತ್ತದೆ. ಕೆಲವೊಮ್ಮೆ ಕೆಲವು
ಮಕ್ಕಳ ಮುಖ ಈ ರೀತಿ ಕಾಣುತ್ತದೆ. ಹೆಚ್ಚು ಯೋಚನೆ ಮಾಡುವುದರಲ್ಲಿ ಗಂಭೀರವಾಗಿ ಕಾಣುತ್ತಾರೆ.
ಅದಕ್ಕೆ ಬಾಬಾ ಹೇಳುತ್ತಾರೆ ಖುಷಿಯಿಂದ ಇರಿ, ಹಾಡಿರಿ, ಕುಣಿಯಿರಿ. ನಿಮ್ಮ ಬ್ರಾಹ್ಮಣ ಜೀವನವೇ
ಖುಷಿಯಿಂದ ನರ್ತನ ಮಾಡುವುದಾಗಿದೆ ಮತ್ತು ತನ್ನ ಭಾಗ್ಯ ಹಾಗೂ ಭಗವಂತನ ಗೀತೆಯನ್ನು
ಹಾಡುವುದಕ್ಕಾಗಿಯೇ ಇದೆ. ಖುಷಿಯಲ್ಲಿ ನರ್ತನ ಮಾಡುವವರು ಗಂಭೀರವಾಗಿದ್ದರೆ ನೋಡುವವರು ಇವರಿಗೆ
ನರ್ತನ ಮಾಡಲು ಬರುವುದಿಲ್ಲವೆಂದು ತಿಳಿಯುತ್ತಾರೆ. ಗಂಭೀರತೆ ಒಳ್ಳೆಯದು ಆದರೆ ಅತಿ ಹೆಚ್ಚಿನ
ಗಂಭೀರತೆ ಸ್ವಲ್ಪ ಯೋಚನೆ ಮಾಡುವಂತಹದಾಗಿರುತ್ತದೆ.
ಬಾಪ್ದಾದಾರವರು ಈಗ ಕೇಳಿದರು-ದೆಹಲಿ ಉದ್ಘಾಟನೆ ಆಗುತ್ತದೆ ಎಂದು (9 ಡಿಸೆಂಬರ್ 2001 ರಂದು
ದೇಹಲಿಯ ಗುಡಗಾಂವನಲ್ಲಿ ಓಂ ಶಾಂತಿ ರಿಟ್ರೀಟ್ ಸೆಂಟರ್ನ ಉದ್ಘಾಟನೆಯಿದೆ). ಆದರೆ ಬಾಪ್ದಾದಾ ಯಾವ
ಉದ್ಘಾಟನೆಯನ್ನು ನೋಡಲು ಬಯಸುತ್ತಾರೆ? ಸಣ್ಣ-ಪುಟ್ಟ ಉದ್ಘಾಟನೆಯಂತೂ ಆಗುತ್ತಲೇ ಇರುತ್ತದೆ, "ವಿಶ್ವದ
ಸ್ಟೇಜ್ನ ಮೇಲೆ ಎಲ್ಲರೂ ತಂದೆಯ ಸಮಾನ ಸೂಕ್ಷ್ಮ ದೇವತೆಯಾಗಿ ಮುಂದೆ ಬರಬೇಕು. ಹಾಗೂ ಪರದೆ
ತೆರೆಯಬೇಕು" ಇಂತಹ ಉದ್ಘಾಟನೆ ಚೆನ್ನಾಗಿರುತ್ತದೆಯಲ್ಲವೇ? ನೀವು ಮಕ್ಕಳ ಆತ್ಮೀಯ ವಾರ್ತಾಲಾಪವನ್ನು
ಬಾಬಾರವರು ಕೇಳುತ್ತಾ ಇರುತ್ತಾರೆ. ಬಾಬಾರವರಿಗೆ ಇದೇ ಇಚ್ಛೆ ಇದೆ-ನೀವು ಮಕ್ಕಳು ಈಗ ಬಾಬಾರವರನ್ನು
ಪ್ರತ್ಯಕ್ಷತೆ ಮಾಡಿಸಬೇಕು. ವಿಶ್ವದ ಸ್ಟೇಜ್ ಮೇಲೆ ಮಕ್ಕಳು ಮೊದಲು ಪ್ರತ್ಯಕ್ಷ ಆಗಬೇಕು ಎನ್ನುವುದು,
ತಂದೆಯು ಮಕ್ಕಳ ಜೊತೆ ಪ್ರತ್ಯಕ್ಷ ಆಗುವ ಈ ಉದ್ಘಾಟನೆಯನ್ನು ನೋಡಲು ಬಾಬಾ ಬಯಸುತ್ತಾರೆ. ಒಲವು
ಉತ್ಸಾಹವಂತೂ ಚೆನ್ನಾಗಿದೆ. ಆತ್ಮೀಯ ವಾರ್ತಾಲಾಪ ಮಾಡುವಾಗ ಎಲ್ಲರ ಉತ್ಸಾಹ ಹೆಚ್ಚಾಗಿರುತ್ತದೆ.
ಆದರೆ ಕರ್ಮ ಯೋಗಿ ಆಗುವಾಗ ಸ್ವಲ್ಪ ವ್ಯತ್ಯಾಸವಾಗಿಬಿಡುತ್ತದೆ. ಮಾತೆಯರು ಏನು ಮಾಡುತ್ತೀರಿ?
ಮಾತೆಯರದು ಬಹಳ ದೊಡ್ಡ ಗುಂಪು ಇದೆ. ಮಾತೆಯರನ್ನು ನೋಡಿ ಬಾಪ್ದಾದಾರವರಿಗೆ ಬಹಳ ಖುಷಿ ಆಗುತ್ತದೆ.
ಯಾರೂ ಕೂಡ ಮಾತೆಯರನ್ನು ಇಷ್ಟು ಮುಂದೆ ತಂದಿಲ್ಲ. ಆದರೆ ಬಾಪ್ದಾದಾ ಮಾತೆಯರು ಬಹಳ
ಮುಂದುವರೆಯುವುದನ್ನು ನೋಡಿ ಬಹಳ ಖುಷಿ ಪಡುತ್ತಾರೆ. ಮಾತೆಯರದು ಒಂದು ವಿಶೇಷವಾದ ಸಂಕಲ್ಪವಿದೆ.
ಯಾರು ಮಾಡದೇ ಇರುವುದನ್ನು ನಾವು ಮಾತೆಯರು ತಂದೆಯ ಜೊತೆ ಇದ್ದು ಮಾಡಿ ತೋರಿಸುತ್ತೇವೆ. ಮಾತೆಯರು
ಏನು ತಾನೇ ಮಾಡಲು ಸಾಧ್ಯವಿಲ್ಲ? ಮಾತೆಯರಲ್ಲಿ ಒಲವು ಉತ್ಸಾಹ ಬಹಳ ಚೆನ್ನಾಗಿದೆ. ಏನೂ ಅರ್ಥ
ಆಗದಿದ್ದರೂ ಸಹ ನಾನು ಬಾಬಾರವರ ಮಗು, ಬಾಬಾ ನನ್ನವರು....ನನ್ನ ಬಾಬಾ ಎಂದು ಹೇಳುತ್ತೀರಲ್ಲವೇ?
ನನ್ನ ಬಾಬಾ ಎನ್ನುವ ಗೀತೆಯನ್ನು ಹಾಡುತ್ತಾ ಇರಿ.
ಒಳ್ಳೆಯದು ಈಗ ಒಂದು ಸೆಕೆಂಡ್ ಬಾಪ್ದಾದಾ ಹೇಳುತ್ತಾರೆ ಎಲ್ಲರೂ ಅಲರ್ಟಾಗಿ ಕುಳಿತುಕೊಳ್ಳಿ. ಈಗ
ಎಲ್ಲರಿಗೂ ಬಾಪ್ದಾದಾರವರೊಂದಿಗೆ ಪ್ರೀತಿ ಇದೆ. 100% ಪ್ರೀತಿ ಇದೆಯಲ್ಲವೇ! ಪ್ರೀತಿಯಂತೂ % ನಲ್ಲಿ
ಇಲ್ಲ ತಾನೆ? 100%ಇದೆಯೇ, ಇದೆ ಅಂದಾಗ 100%ಪ್ರೀತಿ ಸರಾಸರಿ ಇದೆ ಅಲ್ಲವೇ? ಯಾರಿಗಾದರೂ ಸ್ವಲ್ಪ
ಕಡಿಮೆ ಇದೆಯೆಂದರೆ ಅವರು ಕೈ ಎತ್ತಿ. ಒಂದುವೇಳೆ 100% ಪ್ರೀತಿ ಇಲ್ಲವೆಂದರೆ ಕೈ ಎತ್ತಿ, ಬಾಬಾ
ಪ್ರೀತಿಯಿಂದ ಮಾತನಾಡುತ್ತಿದ್ದಾರೆ. ಇಲ್ಲಿ ಒಬ್ಬೊಬ್ಬರು ಇದ್ದಾರೆ ಆದರೂ ಪರವಾಗಿಲ್ಲ,
ಪ್ರೀತಿಯಿಲ್ಲವೆಂದರೆ ನಂತರ ಪ್ರೀತಿ ಬಂದೇ ಬರುತ್ತದೆ. ಹೋಗುವುದಾದರೂ ಎಲ್ಲಿಗೆ? ಪ್ರೀತಿಯನ್ನಂತೂ
ಮಾಡಲೇಬೇಕಾಗಿದೆ, ಒಳ್ಳೆಯದು. ಈಗ ಎಲ್ಲರೂ ಅಲರ್ಟ್ ಆಗಿ ಕುಳಿತಿದ್ದೀರಲ್ಲವೇ. ಈಗ ಎಲ್ಲರೂ ತಂದೆಯ
ಮೇಲಿನ ಪ್ರೀತಿಯ ಗುರುತಾಗಿ ಒಂದು ಸೆಕೆಂಡ್ನಲ್ಲಿ ಬಾಬಾರವರ ಮುಂದೆ ಅಂತರ್ಮುಖಿಯಾಗಿ ತಮಗೆ ತಾವೇ
ಹೃತ್ತೂರ್ವಕವಾಗಿ ಮನಸ್ಸಿನಲ್ಲಿ ಒಂದು ಸಂಕಲ್ಪವನ್ನು ಮಾಡಿ- ಈಗ ನಾವು ಸ್ವಯಂನ ಪ್ರತಿ ಅಥವಾ
ಅನ್ಯರ ಪ್ರತಿ ಸಮಸ್ಯೆ ಆಗುವುದಿಲ್ಲವೆಂದು. ಈ ದೃಢ ಸಂಕಲ್ಪವನ್ನು ಪ್ರೀತಿಯ ಪ್ರತಿಯಾಗಿ
ಮಾಡಲಾಗುತ್ತದೆಯೇ? ಮಾಡುತ್ತೀರಾ? ಯಾರು ತಿಳಿದಿದ್ದೀರಿ, ಏನೇ ಆಗಲಿ ಒಂದುವೇಳೆ ಏನೇ ಆದರೂ ಸರಿ
ಸೆಕೆಂಡ್ನಲ್ಲಿ ಸ್ವಯಂನ್ನು ಪರಿವರ್ತನೆ ಮಾಡಿಕೊಳ್ಳುತ್ತೇವೆಂದು ಆ ಸಂಕಲ್ಪವನ್ನು ಹೃದಯದಲ್ಲಿ ದೃಢ
ಮಾಡಿಕೊಳ್ಳಿ. ಬಾಪ್ದಾದಾ ಅದಕ್ಕೆ ಸಹಾಯ ನೀಡುತ್ತಾರೆ. ಆದರೆ ಸಹಾಯವನ್ನು ಪಡೆಯುವುದರ
ವಿಧಿಯಾಗಿದೆ-ದೃಢ ಸಂಕಲ್ಪದ ಸ್ಮೃತಿ. ಬಾಪ್ದಾದಾರವರ ಮುಂದೆ ಸಂಕಲ್ಪ ತೆಗೆದುಕೊಂಡಿದ್ದೀರಿ, ಈ
ಸ್ಮೃತಿಯ ವಿಧಿ ತಮಗೆ ಸಹಯೋಗ ನೀಡುತ್ತದೆ. ಇದನ್ನು ಮಾಡಲಾಗುತ್ತದೆಯೇ? ತಲೆ ಅಲುಗಾಡಿಸಿ, ನೋಡಿ
ಸಂಕಲ್ಪದಿಂದ ಏನು ತಾನೇ ಆಗಲು ಸಾಧ್ಯವಿಲ್ಲ! ಗಾಬರಿ ಆಗಬೇಡಿ. ಬಾಪ್ದಾದಾರವರ ಹೆಚ್ಚಿನ ಸಹಾಯವು
ಖಂಡಿತ ಸಿಗುತ್ತದೆ. ಬಾಪ್ದಾದಾರವರಂತೂ ತನ್ನ ಶುಭ ಸಂಕಲ್ಪವನ್ನು ಹೇಳಿದರು. ಅದನ್ನು ಈಗ ಮಾಡುವುದು
ಮಕ್ಕಳ ಕರ್ತವ್ಯವಾಗಿದೆ. ಯಾರು ಎಷ್ಟು ಮಾಡುತ್ತಾರೋ ಅಷ್ಟು ಅವರ ಖಾತೆಯಲ್ಲಿ ಜಮಾ ಆಗುತ್ತದೆ,
ಬಾಪ್ದಾದಾರವರು ತಿಳಿದುಕೊಂಡಿದ್ದಾರೆ-ಎಲ್ಲಾ ಮಕ್ಕಳ ಖಾತೆಯು ಇಡೀ ಕಲ್ಪಕ್ಕಾಗಿ ಇಷ್ಟೊಂದು ಜಮಾ
ಆಗಲಿ. ರಾಜ್ಯವನ್ನು ಮಾಡಲಿ ಮತ್ತು ಅರ್ದ ಕಲ್ಪ ಪೂಜ್ಯರೂ ಸಹ ಆಗಲಿ, ಪೂಜ್ಯರಾಗುವ ಖಾತೆ ಮತ್ತು
ರಾಜ್ಯಾಧಿಕಾರಿ ಆಗುವ ಖಾತೆ ಈ ಎರಡು ಜಮಾ ಆಗಲಿ. ಯಾವುದೇ ಮಗುವಿನ ಖಾತೆ ಕಡಿಮೆ ಆಗಬಾರದು. ಎಲ್ಲವೂ
ತುಂಬಿರಲಿ, ಸಂಪನ್ನವಾಗಿರಲಿ, ಸಂಪೂರ್ಣವಾಗಿರಲಿ ಇದನ್ನೇ ಬಾಬಾ ಇಷ್ಟ ಪಡುತ್ತಾರೆ. ಒಳ್ಳೆಯದು ಇಂದು
ವಿಜ್ಞಾನದ ಸಾಧನಗಳಿಂದ ದೂರ ದೂರದಲ್ಲಿರುವ ಮಕ್ಕಳೂ ಸಹ ನೋಡುತ್ತಿದ್ದಾರೆ. ಕೇಳುತ್ತಿದ್ದಾರೆ (ಇಂದು
ಬಾಪ್ದಾದಾರವರ ಮುರುಳಿಯನ್ನು ಟೀ.ವಿ ಯಲ್ಲಿ ಮತ್ತು ವಿದೇಶದಲ್ಲಿ ಇಂಟರ್ನೆಟ್ ಮೂಲಕ
ಕೇಳುತ್ತಿದ್ದಾರೆ ಹಾಗೂ ನೋಡುತ್ತಿದ್ದಾರೆ), ಆ ಎಲ್ಲಾ ಮಕ್ಕಳನ್ನು ಬಾಪ್ದಾದಾರವರು
ನೋಡುತ್ತಿದ್ದಾರೆ. ಒಳ್ಳೆಯದು ಎಲ್ಲಾ ಮಕ್ಕಳಿಗೆ ಬಾಪ್ದಾದಾ ಮಿಲನದ ಮೇಳದ ಅಭಿನಂದನೆಯನ್ನು
ತಿಳಿಸುತ್ತಿದ್ದಾರೆ. ಭಲೇ ಕೆಲವರು ಪತ್ರದ ಮೂಲಕ ಮಿಲನದ ಮೇಳವನ್ನು ಆಚರಿಸಿರಬಹುದು, ಅಥವಾ
ಸಮ್ಮುಖದಲ್ಲಿ ಮಿಲನ ಮಾಡಿರಬಹುದು, ಅಥವಾ ತನ್ನ ಸ್ಥಾನದಲ್ಲಿದ್ದು ಮಿಲನವನ್ನು ಮಾಡಿರಬಹುದು.
ನಾಲ್ಕೂ ಕಡೆಯ ಒಬ್ಬೊಬ್ಬ ಮಗುವೂ ಸಹ ಬಾಪ್ದಾದಾರವರಿಗೆ ಅತಿ ಪ್ರಿಯವಾಗಿದ್ದಾರೆ. ಬಾಪ್ದಾದಾ
ಒಬ್ಬೊಬ್ಬ ಮಗುವನ್ನೂ ನೋಡಿ ಅತೀ ಹರ್ಷಿತರಾಗುತ್ತಿದ್ದಾರೆ. ಮಕ್ಕಳು ಹೇಳುತ್ತಾರೆ- ಮಕ್ಕಳ ಪ್ರೀತಿ
ಎಣಿಸಲು ಸಾಧ್ಯವಿಲ್ಲ, ವರ್ಣನೆ ಮಾಡಲು ಸಾಧ್ಯವಿಲ್ಲವೆಂದು. ಹಾಗೆಯೇ ತಂದೆ ಕೂಡ
ಹೇಳುತ್ತಾರೆ-ಸಿಕಿಲದೆ, ಮುದ್ದಾದ ಮಕ್ಕಳು, ವಿಶೇಷ ಆತ್ಮರು ಮಕ್ಕಳ ಮೇಲಿನ ಪ್ರೀತಿಯನ್ನು ವರ್ಣನೆ
ಮಾಡಲು ಸಾಧ್ಯವಿಲ್ಲ. ಇಂತಹ ಮಕ್ಕಳು ಇಡೀ ಕಲ್ಪದಲ್ಲಿ ಯಾರಿಗೂ ಸಹ ಸಿಗುವುದಿಲ್ಲ.
ಇಂತಹ ಸರ್ವ ತೀವ್ರ ಪುರುಷಾರ್ಥಿ ಶ್ರೇಷ್ಠ ಆತ್ಮರಿಗೆ, ಸದಾ ತಂದೆಯ ಪ್ರೀತಿಯ ಮರುಪಾವತಿ ಮಾಡುವ
ಸಾಹಸವಂತ ಮಕ್ಕಳಿಗೆ, ಸದಾ ತನ್ನ ವಿಶೇಷತೆಯ ಮೂಲಕ ಅನ್ಯರಿಗೂ ಸಹ ವಿಶೇಷ ಆತ್ಮರನ್ನಾಗಿ ಮಾಡುವಂತಹ
ಪುಣ್ಯಾತ್ಮ ಮಕ್ಕಳಿಗೆ, ಸದಾ ಸಮಸ್ಯಾ ಸಮಾಧಾನ ಸ್ವರೂಪರಾಗಿ ಮುಂದೆ ಹಾರುವಂತಹ ಮಕ್ಕಳಿಗೆ
ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ.
ಬೀಳ್ಕೊಡುಗೆ ಸಮಯದಲ್ಲಿ.... ಇಂದು ವಿಶೇಷವಾಗಿ ಯಾರೆಲ್ಲಾ ಮಧುಬನದಲ್ಲಿ ಸೆಕ್ಯುರಿಟಿ ಕಾರ್ಯದಲ್ಲಿ
ಬಿಜಿ ಆಗಿದ್ದಾರೆ, ಅವರು ಬಾಪ್ದಾದಾರವರ ಮುಂದೆ ಬರುತ್ತಿದ್ದಾರೆ. ಯಜ್ಞದ ರಕ್ಷಣೆ ಮಾಡುವಂತಹವರದು
ಬಹಳ ದೊಡ್ಡ ಕಾರ್ಯ ಆಗಿದೆ. ರಕ್ಷಣೆ ಮಾಡುತ್ತಿದ್ದಾರೆ ಹಾಗೂ ದೂರ ಕುಳಿತಿದ್ದರೂ ನೆನಪು
ಮಾಡುತ್ತಿದ್ದಾರೆ. ಅವರಿಗೆ ವಿಶೇಷವಾಗಿ ಬಾಪ್ದಾದಾ ಯಾರೆಲ್ಲಾ ಸೇವಾರ್ಥವಾಗಿ ಕುಳಿತಿದ್ದಾರೆ, ಭಲೇ
ಜ್ಞಾನ ಸರೋವರದವರಾಗಿರಲಿ, ಪಾಂಡವ ಭವನದವರಾಗಿರಲಿ ಅಥವಾ ಶಾಂತಿವನದವರಾಗಿರಲಿ ಯಾರೆಲ್ಲಾ ರಕ್ಷಣೆ
ಮಾಡುವಂತಹವರಿದ್ದಾರೆ, ಅವರೆಲ್ಲರಿಗೆ ಬಾಪ್ದಾದಾ ವಿಶೇಷವಾಗಿ ನೆನಪು ಪ್ರೀತಿ ನೀಡುತ್ತಿದ್ದಾರೆ.
ಮ್ಯೂಸಿಯಂನವರು, ಮಾನೆಸರ್ನವರು ಯಾರೆಲ್ಲಾ ಕಾರ್ಯದಲ್ಲಿ ತೊಡಗಿದ್ದೀರಿ, ಅವರೆಲ್ಲರಿಗೂ ಬಹಳ ನೆನಪು
ಪ್ರೀತಿಗಳು.
ವರದಾನ:
ವರದಾನ: ಹಳೆಯ
ಸಂಸ್ಕಾರ ಮತ್ತು ಸಂಸಾರದ ಸಂಬಂಧಗಳ ಆಕರ್ಷಣೆಯಿಂದ ಮುಕ್ತರಾಗಿರುವಂತಹ ಡಬಲ್ ಲೈಟ್ ಫರಿಶ್ತಾ ಭವ.
ಫರಿಶ್ತಾ ಎಂದರೇನೆ ಹಳೆಯ
ಸಂಸಾರದ ಆಕರ್ಷಣೆಗಳಿಂದ ಮುಕ್ತ, ಸಂಬಂಧಗಳ ರೂಪದಲ್ಲಿಯೂ ಆಕರ್ಷಣೆ ಇಲ್ಲ. ದೇಹ ಅಥವಾ ಯಾವುದೇ
ದೇಹಧಾರಿ ವ್ಯಕ್ತಿ ಅಥವಾ ವಸ್ತುಗಳ ಕಡೆಯೂ ಆಕರ್ಷಣೆ ಇಲ್ಲ, ಅದೇ ರೀತಿ ಹಳೆಯ ಸಂಸ್ಕಾರಗಳ
ಆಕರ್ಷಣೆಯಿಂದಲೂ ಮುಕ್ತ - ಸಂಕಲ್ಪ, ವೃತ್ತಿ ಅಥವಾ ವಾಣಿಯ ರೂಪದಲ್ಲಿ ಯಾವುದೇ ಸಂಸ್ಕಾರದ ಆಕರ್ಷಣೆ
ಇಲ್ಲ. ಯಾವಾಗ ಈ ರೀತಿ ಸರ್ವ ಆಕರ್ಷಣೆಗಳಿಂದ ಅಥವಾ ವ್ಯರ್ಥ ಸಮಯ, ವ್ಯರ್ಥ ಸಂಗ, ವ್ಯರ್ಥ
ವಾತಾವರಣದಿಂದ ಮುಕ್ತರಾಗುವಿರಿ ಆಗ ಹೇಳಲಾಗುವುದು ಡಬಲ್ ಲೈಟ್ ಫರಿಶ್ತಾ.
ಸ್ಲೋಗನ್:
ಶಾಂತಿಯ ಶಕ್ತಿಯ
ಮೂಲಕ ಸರ್ವ ಆತ್ಮಗಳ ಪಾಲನೆ ಮಾಡುವಂತಹವರೆ ಆತ್ಮೀಯ ಸಮಾಜ ಸೇವಕರಾಗಿದ್ದಾರೆ.