01.10.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-
ದೇಹೀ-ಅಭಿಮಾನಿಯಾಗುವ ಅಭ್ಯಾಸ ಮಾಡಿ, ಈ ಅಭ್ಯಾಸದಿಂದಲೇ ನೀವು ಪುಣ್ಯಾತ್ಮರಾಗಲು ಸಾಧ್ಯವಾಗುತ್ತದೆ”
ಪ್ರಶ್ನೆ:
ಯಾವ ಒಂದು
ಜ್ಞಾನದ ಕಾರಣ ನೀವು ಮಕ್ಕಳು ಸದಾ ಹರ್ಷಿತರಾಗುತ್ತೀರಿ?
ಉತ್ತರ:
ನಿಮಗೆ ಜ್ಞಾನವು
ಸಿಕ್ಕಿದೆ- ಈ ನಾಟಕವು ಬಹಳ ಅದ್ಭುತವಾಗಿ ಮಾಡಲ್ಪಟ್ತಿದೆ, ಇದರಲ್ಲಿ ಪ್ರತಿಯೊಬ್ಬ ಪಾತ್ರಧಾರಿಯ
ಅವಿನಾಶಿ ಪಾತ್ರವು ನಿಗಧಿಯಾಗಿದೆ. ಎಲ್ಲರೂ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.
ಇದನ್ನು ತಿಳಿದ ಕಾರಣವೇ ನೀವು ಮಕ್ಕಳು ಸದಾ ಹರ್ಷಿತರಾಗಿರುತ್ತೀರಿ.
ಪ್ರಶ್ನೆ:
ಯಾವ ಒಂದು ಗುಣ
ತಂದೆಯ ಹತ್ತಿರ ಮಾತ್ರ ಇದೆ, ಇನ್ನ್ಯಾರ ಬಳಿಯೂ ಇಲ್ಲ?
ಉತ್ತರ:
ದೇಹೀ-ಅಭಿಮಾನಿಯಾಗುವ ಗುಣ(ಕಲೆ) ಒಬ್ಬ ತಂದೆಯ ಹತ್ತಿರ ಮಾತ್ರ ಇದೆ, ಏಕೆಂದರೆ ಅವರು ಸ್ವಯಂ ಸದಾ
ದೇಹೀ ಆಗಿದ್ದಾರೆ, ಶ್ರೇಷ್ಠವಾಗಿದ್ದಾರೆ. ಈ ಗುಣ ಅಥವಾ ಕಲೆ ಮತ್ತ್ಯಾವ ಮನುಷ್ಯರಿಗೂ ಬರಲು
ಸಾಧ್ಯವಿಲ್ಲ.
ಓಂ ಶಾಂತಿ.
ಆತ್ಮಿಕ ಮಕ್ಕಳು ಅರ್ಥಾತ್ ಆತ್ಮಗಳಿಗೆ ತಂದೆಯು ಕುಳಿತು ತಿಳಿಸುತ್ತಾರೆ. ತಮ್ಮನ್ನು ತಾವು
ಆತ್ಮವೆಂದು ತಿಳಿಯಬೇಕಾಗಿದೆಯಲ್ಲವೆ. ತಂದೆಯೂ ಮಕ್ಕಳಿಗೆ ಮೊಟ್ಟಮೊದಲು ನಾವು ಆತ್ಮರಾಗಿದ್ದೇವೆ, ಈ
ಶರೀರವಲ್ಲ ಎಂದು ಅಭ್ಯಾಸ ಮಾಡಿ ಎಂದು ತಿಳಿಸುತ್ತಾರೆ. ಯಾವಾಗ ನಮ್ಮನ್ನು ನಾವು ಆತ್ಮವೆಂದು
ತಿಳಿಯುತ್ತೇವೆ ಆಗಲೇ ಪರಮಾತ್ಮನನ್ನು ನೆನಪು ಮಾಡಲು ಸಾಧ್ಯವಾಗುತ್ತದೆ. ನಮ್ಮನ್ನು ನಾವು
ಆತ್ಮವೆಂದು ತಿಳಿಯಲಿಲ್ಲವೆಂದರೆ ಅವಶ್ಯವಾಗಿ ಲೌಕಿಕ ಸಂಬಂಧಿ ವ್ಯವಹಾರಗಳು ನೆನಪಿಗೆ ಬರುತ್ತಾ
ಇರುತ್ತದೆ. ಆ ಕಾರಣ ಮೊಟ್ಟಮೊದಲು ಇದೇ ಅಭ್ಯಾಸವನ್ನು ಮಾಡಬೇಕು- ನಾನು ಆತ್ಮನಾಗಿದ್ದೇನೆ ಎಂದು.
ಆಗ ಆತ್ಮೀಯ ತಂದೆಯ ನೆನಪು ಇರುತ್ತದೆ. ತಂದೆಯು ಈ ಶಿಕ್ಷಣವನ್ನು ಕೊಡುತ್ತಾರೆ- ನಮ್ಮನ್ನು ನಾವು
ದೇಹವೆಂದು ತಿಳಿಯಬಾರದು. ಈ ಜ್ಞಾನವನ್ನು ಇಡೀ ಕಲ್ಪದಲ್ಲಿ ಒಮ್ಮೆ ಮಾತ್ರವೇ ತಿಳಿಸುತ್ತಾರೆ. ಪುನಃ
5000 ವರ್ಷಗಳ ನಂತರ ಈ ಜ್ಞಾನವು ಸಿಗುತ್ತದೆ. ತನ್ನನ್ನು ಆತ್ಮನೆಂದು ತಿಳಿಯುವುದರಿಂದ ತಂದೆಯ
ನೆನಪೂ ಸಹ ಬರುತ್ತದೆ. ಅರ್ಧಕಲ್ಪ ತನ್ನನ್ನು ದೇಹವೆಂದು ತಿಳಿದುಕೊಂಡಿದ್ದೀರಿ. ಈಗ ತನ್ನನ್ನು ತಾನು
ಆತ್ಮವೆಂದು ತಿಳಿಯಬೇಕು. ಹೇಗೆ ನೀವು ಆತ್ಮಗಳಾಗಿದ್ದೀರಿ, ಹಾಗೆಯೇ ನಾನೂ ಸಹ ಆತ್ಮನಾಗಿದ್ದೇನೆ
ಆದರೆ ನಾನು ಶ್ರೇಷ್ಠವಾಗಿದ್ದೇನೆ. ನಾನು ಆತ್ಮನಾಗಿದ್ದೇನೆ, ನನಗೆ ಯಾವುದೇ ದೇಹದ ನೆನಪು ಬರುವುದೇ
ಇಲ್ಲ. ಈ ಬ್ರಹ್ಮಾ ಶರೀರಧಾರಿಯಾಗಿದ್ದಾರೆ. ತಂದೆಯು ನಿರಾಕಾರನಾಗಿದ್ದಾರೆ. ಈ ಪ್ರಜಾಪಿತ ಬ್ರಹ್ಮಾ
ಸಾಕಾರಿಯಾಗುತ್ತಾರೆ. ಶಿವತಂದೆಯ ವಾಸ್ತವಿಕ ಹೆಸರು- ಶಿವ ಎಂದಾಗಿದೆ. ಅವರೂ ಆತ್ಮವೇ ಆಗಿದ್ದಾರೆ.
ಕೇವಲ ಶ್ರೇಷ್ಠಾತಿಶ್ರೇಷ್ಠ ಅಥವಾ ಪರಮ ಆತ್ಮನಾಗಿದ್ದೆನೆ, ಕೇವಲ ಈ ಸಮಯದಲ್ಲಿಯೇ ಬಂದು ಬ್ರಹ್ಮನ
ಶರೀರದಲ್ಲಿ ಪ್ರವೇಶ ಮಾಡುತ್ತೇನೆ ಎಂದು ಹೇಳುತ್ತಾರೆ. ತಂದೆಯು ಎಂದೂ ದೇಹದ ಅಭಿಮಾನದಲ್ಲಿ
ಬರುವುದಿಲ್ಲ. ದೇಹದ ಅಭಿಮಾನಿಗಳು ಸಾಕಾರಿ ಮನುಷ್ಯರಾಗಿರುತ್ತಾರೆ, ತಂದೆಯು ನಿರಾಕಾರನಾಗಿದ್ದಾರೆ.
ಅವರು ಬಂದು ಈ ಅಭ್ಯಾಸವನ್ನು ಮಾಡಿಸುತ್ತಾರೆ. ತಂದೆಯು ತಿಳಿಸುತ್ತಾರೆ- ತಮ್ಮನ್ನು ತಾವು
ಆತ್ಮನೆಂದು ತಿಳಿಯಿರಿ. ನಾನು ಆತ್ಮನಾಗಿದ್ದೇನೆ, ಆತ್ಮನಾಗಿದ್ದೇನೆ- ಈ ಪಾಠವನ್ನು ಕುಳಿತು
ಅಭ್ಯಾಸವನ್ನು ಮಾಡಬೇಕು. ನಾನು ಆತ್ಮ ಶಿವತಂದೆಯ ಮಗುವಾಗಿದ್ದೇನೆ. ಪ್ರತಿಯೊಂದು ಮಾತಿನ
ಅಭ್ಯಾಸವಿರಬೇಕು. ತಂದೆಯು ಯಾವುದೇ ಹೊಸಮಾತನ್ನು ತಿಳಿಸುವುದಿಲ್ಲ. ನೀವು ಯಾವಾಗ ತನ್ನನ್ನು
ಆತ್ಮನೆಂದು ಪಕ್ಕಾ ನಿಶ್ಚಯ ಮಾಡಿಕೊಳ್ಳುತ್ತೀರೋ ಆಗ ತಂದೆಯ ನೆನಪು ಪಕ್ಕಾ ಇರುತ್ತದೆ. ದೇಹದ
ಅಭಿಮಾನವಿದ್ದರೆ ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ಅರ್ಧಕಲ್ಪ ನಿಮ್ಮಲ್ಲಿ ದೇಹದ
ಅಹಂಕಾರವಿರುತ್ತದೆ. ಈಗ ನಿಮಗೆ ತನ್ನನ್ನು ಆತ್ಮವೆಂದು ತಿಳಿಯಬೇಕೆಂದು ಕಲಿಸುತ್ತೇನೆ. ತನ್ನನ್ನು
ಆತ್ಮವೆಂದು ತಿಳಿಯಿರಿ ಎಂದು ಸತ್ಯಯುಗದಲ್ಲಿ ಯಾರೂ ಕಲಿಸಿಕೊಡುವುದಿಲ್ಲ. ಶರೀರದ ಹೆಸರಂತೂ ಇದ್ದೇ
ಇರುತ್ತದೆ. ಇಲ್ಲವೆಂದರೆ ಒಬ್ಬರಿನ್ನೊಬ್ಬರನ್ನು ಹೇಗೆ ಕರೆಯುವುದು? ಇಲ್ಲಿನ ಪ್ರಾಲಬ್ಧವನ್ನು
ಸತ್ಯಯುಗದಲ್ಲಿ ಪಡೆಯುತ್ತೇವೆ. ಬಾಕಿ ಎಲ್ಲರನ್ನು ಹೆಸರಿಂದಲೇ ಕರೆಯುತ್ತೇವಲ್ಲವೆ. ಕೃಷ್ಣನಿಗೂ
ಶರೀರದ ಹೆಸರಿದೆಯಲ್ಲವೆ. ಹೆಸರಿಲ್ಲದೆ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ
ತನ್ನನ್ನು ಆತ್ಮವೆಂದು ತಿಳಿಯಿರಿ ಎಂದು ಹೇಳುತ್ತಾರೆಂದಲ್ಲ. ಸತ್ಯಯುಗದಲ್ಲಿ
ಆತ್ಮಾಭಿಮಾನಿಗಳಾಗಿರುತ್ತಾರೆ. ಈ ಅಭ್ಯಾಸವನ್ನು ಈಗ ಮಾಡಿಸಲಾಗುತ್ತದೆ ಏಕೆಂದರೆ ಪಾಪದ ಹೊರೆಯು
ಬಹಳಷ್ಟಿದೆ. ನಿಧಾನ-ನಿಧಾನಕ್ಕೆ ಸ್ವಲ್ಪ-ಸ್ವಲ್ಪ ಪಾಪ ಜಾಸ್ತಿಯಾಗುತ್ತಾ ಈಗ ಪೂರ್ಣ
ಪಾಪಾತ್ಮಾರಾಗಿದ್ದಾರೆ. ಅರ್ಧಕಲ್ಪ ಏನೆಲ್ಲಾ ಮಾಡಿದಿರೋ ಅದೆಲ್ಲವೂ ಸಮಾಪ್ತಿಯಾಗುತ್ತದೆಯಲ್ಲವೆ.
ನಿಧಾನ-ನಿಧಾನವಾಗಿ ಕಡಿಮೆಯಾಗಿಬಿಡುತ್ತದೆ. ಸತ್ಯಯುಗದಲ್ಲಿ ನೀವು ಸತೋಪ್ರಧಾನರಾಗಿರುತ್ತೀರಿ,
ತ್ರೇತಾಯುಗದಲ್ಲಿ ಸತೋ ಆಗುತ್ತೀರಿ. ಆಸ್ತಿಯು ಈ ಸಮಯದಲ್ಲಿ ಸಿಗುತ್ತದೆ. ತನ್ನನ್ನು ಆತ್ಮನೆಂದು
ತಿಳಿದು ತಂದೆಯನ್ನು ನೆನಪು ಮಾಡುವುದರಿಂದಲೇ ಆಸ್ತಿಯು ಸಿಗುತ್ತದೆ. ಆತ್ಮಾಭಿಮಾನಿಯಾಗುವಂತಹ
ಶಿಕ್ಷಣವನ್ನು ಈ ಸಮಯದಲ್ಲಿಯೇ ತಂದೆಯು ತಿಳಿಸುತ್ತಾರೆ. ಸತ್ಯಯುಗದಲ್ಲಿ ಈ ಶಿಕ್ಷಣವು ಇರುವುದಿಲ್ಲ.
ತಮ್ಮ-ತಮ್ಮ ಹೆಸರಿನ ಮೇಲೆ ನಡೆಯುತ್ತದೆ. ಈಗ ಪ್ರತಿಯೊಬ್ಬರು ನೆನಪಿನ ಶಕ್ತಿಯಿಂದ ಪಾಪಾತ್ಮರಿಂದ
ಪುಣ್ಯಾತ್ಮರಾಗುತ್ತೀರಿ. ಸತ್ಯಯುಗದಲ್ಲಿ ಈ ಶಿಕ್ಷಣದ ಅಗತ್ಯವಿಲ್ಲ ಅಥವಾ ನೀವು ಅಲ್ಲಿಗೆ ಈ
ಶಿಕ್ಷಣವನ್ನು ತೆಗೆದುಕೊಂಡು ಹೋಗುವುದಿಲ್ಲ. ಸತ್ಯಯುಗಕ್ಕೆ ಈ ಜ್ಞಾನ ಅಥವಾ ಯೋಗವನ್ನು
ತೆಗೆದುಕೊಂಡುಹೋಗುವುದಿಲ್ಲ. ನೀವು ಈಗಲೇ ಪತಿತರಿಂದ ಪಾವನರಾಗಬೇಕಾಗಿದೆ. ನಂತರ ನಿಧಾನ-ನಿಧಾನವಾಗಿ
ಕಲೆಗಳು ಕಡಿಮೆಯಾಗುತ್ತದೆ. ಹೇಗೆ ಚಂದ್ರಮನ ಕಲೆ ಕಡಿಮೆಯಾಗುತ್ತಾ ಇರುತ್ತದೆಯಲ್ಲವೆ. ಆದರೆ
ಇದರಲ್ಲಿ ಗೊಂದಲವಾಗಬಾರದು. ಏನಾದರು ಅರ್ಥವಾಗಿಲ್ಲವೆಂದರೆ ಕೇಳಿ.
ನಾನು ಆತ್ಮನೆಂದು ಮೊದಲು ಪಕ್ಕಾ ನಿಶ್ಚಯವಿರಬೇಕು. ಈಗ ನಿಮ್ಮ ಆತ್ಮವೇ ತಮೋಪ್ರಧಾನವಾಗಿದೆ. ಮೊದಲು
ಸತೋಪ್ರಧಾನವಾಗಿತ್ತು. ದಿನ-ಪ್ರತಿದಿನ ಕಲೆಗಳು ಕಡಿಮೆಯಾಗುತ್ತಿರುತ್ತದೆ. ನಾನು ಆತ್ಮನಾಗಿದ್ದೇನೆ-
ಇದು ಪಕ್ಕಾ ಆಗದೇ ಇರುವ ಕಾರಣ ತಂದೆಯನ್ನು ಮರೆಯುತ್ತೇವೆ. ಮೊಟ್ಟಮೊದಲಿನ ಮುಖ್ಯವಾದ ಮಾತು ಇದೇ
ಆಗಿದೆ. ಆತ್ಮಾಭಿಮಾನಿಗಳಾಗುವುದರಿಂದ ತಂದೆಯ ನೆನಪು ಮತ್ತು ಆಸ್ತಿಯ ನೆನಪು ಬರುತ್ತದೆ. ಆಸ್ತಿಯ
ನೆನಪಾಗುವುದರಿಂದ ಪವಿತ್ರರೂ ಸಹ ಆಗುತ್ತೀರಿ, ದೈವೀಗುಣಗಳೂ ಸಹ ಧಾರಣೆಯಾಗುತ್ತದೆ. ಗುರಿ-ಉದ್ದೇಶವೂ
ಮುಂದಿದೆ. ಇದು ಈಶ್ವರೀಯ ವಿಶ್ವವಿದ್ಯಾಲಯವಾಗಿದೆ. ಇಲ್ಲಿ ಭಗವಂತ ಓದಿಸುತ್ತಿದ್ದಾರೆ.
ದೇಹೀ-ಅಭಿಮಾನಿಗಳನ್ನಾಗಿಯೂ ಸಹ ಅವರೇ ಮಾಡಲು ಸಾಧ್ಯ ಮತ್ತ್ಯಾರೂ ಈ ಕಲೆಯನ್ನು ತಿಳಿದುಕೊಂಡಿಲ್ಲ.
ಒಬ್ಬ ತಂದೆಯೇ ಕಲಿಸುತ್ತಾರೆ. ಬ್ರಹ್ಮಾರವರೂ ಸಹ ಪುರುಷಾರ್ಥ ಮಾಡುತ್ತಾರೆ. ತಂದೆಯು
ಆತ್ಮಾಭಿಮಾನಿಯಾಗುವ ಪುರುಷಾರ್ಥವನ್ನು ಮಾಡುವ ಅಗತ್ಯವಿಲ್ಲ ಏಕೆಂದರೆ ಅವರು ಎಂದೂ ದೇಹವನ್ನು
ಪಡೆದುಕೊಳ್ಳುವುದೇ ಇಲ್ಲ. ಅವರು ನಿಮ್ಮನ್ನು ದೇಹೀ-ಅಭಿಮಾನಿಯನ್ನಾಗಿ ಮಾಡಲು ಕೇವಲ ಈ ಸಮಯದಲ್ಲಿ
ಬರುತ್ತಾರೆ. ಯಾರ ತಲೆಯಲ್ಲಿ ಯೋಚನೆಯಿರುತ್ತದೆಯೋ ಅವರು ಹೇಗೆ ನಿದ್ರೆ ಮಾಡಲು ಸಾಧ್ಯ...... ಎಂಬ
ನಾಣ್ಣುಡಿ ಇದೆ. ವ್ಯವಹಾರ ಅತಿಯಾದಾಗ ಸಮಯವು ಸಿಗುವುದಿಲ್ಲ ಮತ್ತು ಯಾರಿಗೆ ಸಮಯವಿರುತ್ತದೆಯೋ ಅವರು
ತಂದೆಯ ಬಳಿ ಪುರುಷಾರ್ಥವನ್ನು ಮಾಡಲು ಬರುತ್ತಾರೆ. ಕೆಲವರು ಹೊಸಬರೂ ಸಹ ಬರುತ್ತಾರೆ. ಈ ಜ್ಞಾನವು
ಬಹಳ ಚೆನ್ನಾಗಿದೆ ಎಂದು ಅರಿತುಕೊಳ್ಳುತ್ತಾರೆ. ತಂದೆಯಾದ ನನ್ನನ್ನು ನೆನಪು ಮಾಡಿದ್ದೇ ಆದರೆ
ನಿಮ್ಮ ವಿಕರ್ಮ ವಿನಾಶವಾಗುತ್ತದೆ- ಎಂಬ ಅಕ್ಷರವು ಗೀತೆಯಲ್ಲಿದೆ. ತಂದೆಯು ಇದನ್ನೇ
ತಿಳಿಸಿಕೊಡುತ್ತಾರೆ, ತಂದೆಯು ಯಾರನ್ನೂ ದೂಷಿಸುವುದಿಲ್ಲ. ನೀವು ಪತಿತರಿಂದ ಪಾವನರಾಗಲೇಬೇಕಾಗಿದೆ
ಮತ್ತು ನಾನು ಬಂದು ಪತಿತರಿಂದ ಪಾವನರನ್ನಾಗಿ ಮಾಡಲೇಬೇಕಾಗಿದೆ. ಇದು ಮಾಡಿ-ಮಾಡಲ್ಪಟ್ಟಂತಹ
ನಾಟಕವಾಗಿದೆ. ಇದರಲ್ಲಿ ಯಾರನ್ನೂ ನಿಂದನೆ ಮಾಡುವ ಅವಶ್ಯಕತೆಯೇ ಇಲ್ಲ. ನೀವು ಮಕ್ಕಳು ಜ್ಞಾನವನ್ನು
ಚೆನ್ನಾಗಿ ತಿಳಿದುಕೊಂಡಿದ್ದೀರಿ. ಮತ್ತ್ಯಾರೂ ಸಹ ಈಶ್ವರನನ್ನು ತಿಳಿದುಕೊಂಡೇ ಇಲ್ಲ ಆದ್ದರಿಂದ
ಅವರನ್ನು ನಿರ್ಧನಿಕರು ನಾಸ್ತಿಕರು ಎಂದು ಕರೆಯಲಾಗುತ್ತದೆ. ತಂದೆಯು ನಿಮ್ಮನ್ನು ಎಷ್ಟೊಂದು
ಬುದ್ಧಿವಂತರನ್ನಾಗಿ ಮಾಡುತ್ತಾರೆ. ಶಿಕ್ಷಕನ ರೂಪದಲ್ಲಿ ಶಿಕ್ಷಣವನ್ನು ನೀಡುತ್ತಾರೆ. ಈ
ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಮುಂತಾದ ಶಿಕ್ಷಣವು ಸಿಗುವುದರಿಂದ ನೀವು ಸುಧಾರಣೆಯನ್ನು
ಹೊಂದುತ್ತೀರಿ. ಭಾರತ ಯಾವುದು ಶಿವಾಲಯವಾಗಿತ್ತೋ ಅದೇ ಈಗ ವೇಶ್ಯಾಲಯವಾಗಿದೆಯಲ್ಲವೆ. ಇದರಲ್ಲಿ
ನಿಂದನೆಯ ಮಾತೇ ಇಲ್ಲ. ಇದು ಆಟವಾಗಿದೆ. ಇದನ್ನು ತಂದೆಯು ತಿಳಿಸಿಕೊಡುತ್ತಾರೆ. ನೀವು ದೇವತೆಗಳಿಂದ
ಅಸುರರು ಹೇಗಾದಿರಿ, ನೀವು ಏಕೆ ಆದಿರಿ? ಎಂದು ಕೇಳುವುದಿಲ್ಲ. ತಂದೆಯು ಬಂದಿರುವುದೇ ಮಕ್ಕಳಿಗೆ
ತನ್ನ ಪರಿಚಯವನ್ನು ಕೊಡಲು ಮತ್ತು ಸೃಷ್ಟಿಚಕ್ರ ಹೇಗೆ ಸುತ್ತುತ್ತದೆ- ಈ ಜ್ಞಾನವನ್ನು ಕೊಡುತ್ತಾರೆ.
ಇದನ್ನು ಮನುಷ್ಯರೇ ಅರಿತುಕೊಳ್ಳುತ್ತಾರಲ್ಲವೆ. ನೀವು ಅರಿತುಕೊಂಡು ಮತ್ತೆ ದೇವತೆಗಳಾಗುತ್ತೀರಿ. ಈ
ವಿದ್ಯೆಯು ಮನುಷ್ಯರಿಂದ ದೇವತೆಗಳಾಗುವುದಾಗಿದೆ. ಯಾವುದನ್ನು ತಂದೆಯು ಓದಿಸುತ್ತಾರೆ, ಇಲ್ಲಂತೂ
ಎಲ್ಲಾ ಮನುಷ್ಯರೇ ಮನುಷ್ಯರಿದ್ದಾರೆ, ಶಿಕ್ಷಕರಾಗಿ ಓದಿಸಲು ದೇವತೆಗಳು ಈ ಸೃಷ್ಟಿಯಲ್ಲಿ ಬರಲು
ಸಾಧ್ಯವಿಲ್ಲ. ಓದಿಸುವಂತಹ ತಂದೆಯು ಹೇಗೆ ಓದಿಸಲು ಬರುತ್ತಾರೆಂದು ನೋಡಿ. ಪರಮಪಿತ ಪರಮಾತ್ಮ
ರಥವನ್ನು ತೆಗೆದುಕೊಳ್ಳುತ್ತಾರೆ ಎಂಬ ಗಾಯನವೂ ಸಹ ಇದೆ ಆದರೆ ಯಾವ ರಥವನ್ನು ತೆಗೆದುಕೊಳ್ಳುತ್ತಾರೆ
ಎಂಬುದನ್ನು ಪೂರ್ಣವಾಗಿ ಬರೆದಿಲ್ಲ. ತ್ರಿಮೂರ್ತಿಗಳ ರಹಸ್ಯವನ್ನೂ ಸಹ ಯಾರೂ ತಿಳಿದುಕೊಂಡಿಲ್ಲ.
ಪರಮಪಿತ ಅರ್ಥಾತ್ ಪರಮ ಆತ್ಮ. ಅವರು ಯಾರಾಗಿದ್ದಾರೆ ಎಂಬುದನ್ನು ಅವರೇ ಪರಿಚಯವನ್ನು
ಕೊಡುತ್ತಾರಲ್ಲವೆ. ಇದರಲ್ಲಿ ಅಹಂಕಾರದ ಮಾತಿಲ್ಲ. ತಿಳಿಯದೇ ಇರುವ ಕಾರಣ ಇವರಿಗೆ ಅಹಂಕಾರವೆಂದು
ಹೇಳುತ್ತಾರೆ. ಈ ಬ್ರಹ್ಮಾರವರು ನಾನು ಪರಮಾತ್ಮನಾಗಿದ್ದೇನೆ ಎಂದು ಹೇಳುವುದಿಲ್ಲ. ಇದು
ತಿಳಿದುಕೊಳ್ಳುವಂತಹ ಮಾತಾಗಿದೆ. ಇದು ತಂದೆಯ ಮಹಾವಾಕ್ಯವಾಗಿದೆ- ಎಲ್ಲಾ ಆತ್ಮಗಳ ತಂದೆಯು ಒಬ್ಬರೇ
ಆಗಿದ್ದಾರೆ. ಅವರಿಗೆ ಅಣ್ಣ ಎಂದು ಕರೆಯಲಾಗುತ್ತದೆ. ಇವರು ಭಾಗ್ಯಶಾಲಿ ರಥವಾಗಿದ್ದಾರಲ್ಲವೆ. ಹೆಸರೂ
ಸಹ ಬ್ರಹ್ಮಾ ಎಂದು ಇಡಲಾಗಿದೆ ಏಕೆಂದರೆ ಬ್ರಾಹ್ಮಣರು ಬೇಕಲ್ಲವೆ. ಆದಿದೇವ ಪ್ರಜಾಪಿತ
ಬ್ರಹ್ಮನಾಗಿದ್ದಾರೆ. ಪ್ರಜೆಗಳ ಪಿತ, ಈಗ ದತ್ತು ಮಾಡಿಕೊಳ್ಳುವುದಿಲ್ಲವೆಂದು ಮಕ್ಕಳಿಗೆ ಶಿವತಂದೆಯು
ತಿಳಿಸುತ್ತಾರೆ. ನೀವೆಲ್ಲಾ ಆತ್ಮರು ಸದಾಕಾಲ ನನ್ನ ಮಕ್ಕಳೇ ಆಗಿರುತ್ತೀರಿ, ನಾನು ನಿಮ್ಮನ್ನು
ಮಕ್ಕಳನ್ನಾಗಿ ಮಾಡಿಕೊಳ್ಳುವುದಿಲ್ಲ. ನಾನು ನೀವು ಆತ್ಮರ ಅನಾದಿ ತಂದೆಯಾಗಿದ್ದೇನೆ. ತಂದೆಯು ಎಷ್ಟು
ಚೆನ್ನಾಗಿ ತಿಳಿಸಿಕೊಡುತ್ತಾರೆ. ತನ್ನನ್ನು ಆತ್ಮನೆಂದು ತಿಳಿಯಿರಿ ಎಂದು ಹೇಳುತ್ತಾರೆ. ನೀವು
ಸಂಪೂರ್ಣ ಹಳೆಯ ಪ್ರಪಂಚದ ಸನ್ಯಾಸ ಮಾಡುತ್ತೀರಿ. ನಾವು ಮರಳಿ ಈ ಪ್ರಪಂಚದಿಂದ ಹೋಗುತ್ತಿದ್ದೇವೆ
ಎಂದು ಬುದ್ಧಿಯಿಂದ ತಿಳಿದುಕೊಂಡಿದ್ದೀರಿ. ಸನ್ಯಾಸ ಮಾಡಿ ಕಾಡಿನಲ್ಲಿ ಹೋಗಬೇಕಾಗಿದೆ ಎಂಬ ಮಾತಿಲ್ಲ.
ಇಡೀ ಪ್ರಪಂಚದ ಸನ್ಯಾಸ ಮಾಡಿ ನಾವು ನಮ್ಮ ಮನೆಗೆ ಹೋಗುತ್ತೇವೆ, ಆದ್ದರಿಂದ ಯಾವುದೇ ವಸ್ತುವಿನ
ನೆನಪು ಬರಬಾರದು. ಒಬ್ಬ ತಂದೆಯ ವಿನಃ ಯಾವುದೇ ವಸ್ತುವಿನ ನೆನಪು ಬರಬಾರದು. 60 ವರ್ಷಗಳ ಆಯಸ್ಸು
ಆಗಿದೆ ಎಂದರೆ ಶಬ್ಧದಿಂದ ದೂರವಾಗಿ ವಾನಪ್ರಸ್ಥದಲ್ಲಿ ಹೋಗುವ ಪುರುಷಾರ್ಥ ಮಾಡಬೇಕು. ವಾಸ್ತವದಲ್ಲಿ
ವಾನಪ್ರಸ್ಥದ ಮಾತು ಈ ಸಮಯದ್ದಾಗಿದೆ. ಭಕ್ತಿಮಾರ್ಗದಲ್ಲಿ ವಾನಪ್ರಸ್ಥದ ಬಗ್ಗೆ ಯಾರೂ ತಿಳಿದಿಲ್ಲ.
ವಾನಪ್ರಸ್ಥದ ಅರ್ಥವನ್ನು ತಿಳಿಸಲು ಸಾಧ್ಯವಿಲ್ಲ. ವಾನಪ್ರಸ್ಥವೆಂದರೆ ಶಬ್ಧದಿಂದ ದೂರವಾಗಿ
ಮೂಲವತನಕ್ಕೆ ಹೋಗುವುದಾಗಿದೆ. ಅಲ್ಲಿ ಎಲ್ಲಾ ಆತ್ಮರು ನಿವಾಸ ಮಾಡುತ್ತಾರೆಂದಾಗ ವಾನಪ್ರಸ್ಥ
ಸ್ಥಿತಿಯಾಗಿರುತ್ತದೆ. ಎಲ್ಲರೂ ಮನೆಗೆ ಹೋಗಬೇಕಾಗಿದೆ.
ಆತ್ಮವು ಭೃಕುಟಿಯ ಮಧ್ಯದಲ್ಲಿ ಹೊಳೆಯುತ್ತಿರುವ ನಕ್ಷತ್ರವಾಗಿದೆ ಎಂಬುದನ್ನು ಶಾಸ್ತ್ರದಲ್ಲಿ
ತೋರಿಸಿದ್ದಾರೆ. ಕೆಲವರು ಆತ್ಮ ಅಂಗುಷ್ಟಾಕಾರವಾಗಿದೆ ಎಂದು ತಿಳಿದಿದ್ದಾರೆ. ಅಂಗುಷ್ಟಾಕಾರವನ್ನೇ
ನೆನಪು ಮಾಡುತ್ತಾರೆ. ನಕ್ಷತ್ರವನ್ನು ಹೇಗೆ ನೆನಪು ಮಾಡುವುದು? ಪೂಜೆಯನ್ನು ಹೇಗೆ ಮಾಡುವುದು? ನೀವು
ದೇಹಾಭಿಮಾನದಲ್ಲಿ ಯಾವಾಗ ಬರುತ್ತೀರೋ ಆಗ ಪೂಜಾರಿಗಳಾಗುತ್ತೀರಿ ಎಂದು ತಂದೆಯು ತಿಳಿಸುತ್ತಾರೆ.
ಇದಕ್ಕೆ ಭಕ್ತಿಯ ವಿಸ್ತಾರವೆಂದು ಕರೆಯಲಾಗುತ್ತದೆ. ಜ್ಞಾನದ ವಿಸ್ತಾರವೇ ಬೇರೆಯಾಗಿದೆ. ಜ್ಞಾನ
ಮತ್ತು ಭಕ್ತಿ ಒಟ್ಟಿಗೆ ಇರಲು ಸಾಧ್ಯವಿಲ್ಲ. ಹಗಲು ಮತ್ತು ರಾತ್ರಿ ಒಟ್ಟಿಗೆ ಇರಲು ಸಾಧ್ಯವಿಲ್ಲ.
ಸುಖಕ್ಕೆ ಹಗಲೆಂದು ಹೇಳಲಾಗುತ್ತದೆ, ದುಃಖ ಅರ್ಥಾತ್ ಭಕ್ತಿಗೆ ರಾತ್ರಿಯೆಂದು ಹೇಳಲಾಗುತ್ತದೆ.
ಪ್ರಜಾಪಿತ ಬ್ರಹ್ಮಾರವರ ಹಗಲು ಮತ್ತೆ ರಾತ್ರಿ ಎಂದು ಕರೆಯಲಾಗುತ್ತದೆ. ಪ್ರಜೆಗಳು ಮತ್ತೆ
ಬ್ರಹ್ಮಾರವರು ಒಟ್ಟಿಗೆ ಇರುತ್ತಾರಲ್ಲವೆ. ನಾವು ಬ್ರಾಹ್ಮಣರೇ ಅರ್ಧಕಲ್ಪ ಸುಖವನ್ನು ಭೋಗಿಸುತ್ತೇವೆ
ನಂತರ ಅರ್ಧಕಲ್ಪ ದುಃಖವನ್ನು ಭೋಗಿಸುತ್ತೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಇದು
ಬುದ್ಧಿಯಿಂದ ತಿಳಿದುಕೊಳ್ಳುವ ಮಾತುಗಳಾಗಿವೆ. ಎಲ್ಲರೂ ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ.
ಆದರೂ ಸಹ ತಂದೆಯು ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ ಎಂದು ತಾವಾಗಿಯೇ
ತಿಳಿಸುತ್ತಿರುತ್ತಾರೆ. ಇದರಿಂದ ನೀವು ಪಾವನರಾಗಿಬಿಡುತ್ತೀರಿ. ಈ ಸಂದೇಶವನ್ನು ಎಲ್ಲರಿಗೂ
ತಲುಪಿಸುವ ಸೇವೆಯನ್ನು ಮಾಡಬೇಕು. ಯಾರು ಸೇವೆಯನ್ನೇ ಮಾಡುವುದಿಲ್ಲವೋ ಅವರು ಹೂಗಳಾಗುವುದಿಲ್ಲ.
ಹೂದೋಟದ ಮಾಲಿ ತೋಟಕ್ಕೆ ಬರುತ್ತಾರೆಂದರೆ ಅವರ ಮುಂದೆ ಹೂಗಳೇ ಕಾಣಿಸಬೇಕು. ಯಾರು
ಸೇವಾಧಾರಿಗಳಾಗಿದ್ದಾರೆಯೋ ಅವರು ಅನೇಕರ ಕಲ್ಯಾಣವನ್ನು ಮಾಡುತ್ತಾರೆ. ಯಾರಿಗೆ ದೇಹಾಭಿಮಾನವಿದೆ
ಅವರು ನಾನು ಹೂ ಆಗಿಲ್ಲ ಎಂದು ತಾವೇ ತಿಳಿದುಕೊಳ್ಳುತ್ತಾರೆ. ತಂದೆಯ ಮುಂದೆ ಒಳ್ಳೊಳ್ಳೆಯ ಹೂಗಳು
ಕುಳಿತಿದ್ದಾರೆ. ತಂದೆಯ ದೃಷ್ಟಿ ಅವರ ಮೇಲೆ ಹೋಗುತ್ತದೆ. ಜ್ಞಾನಮುರಳಿಯ ನರ್ತನವೂ ಸಹ ಚೆನ್ನಾಗಿ
ನಡೆಯುತ್ತದೆ. ಶಾಲೆಯಲ್ಲಿಯೂ ಸಹ ಶಿಕ್ಷಕರಿಗೆ ಯಾರು ಮೊದಲನೆ ದರ್ಜೆಯವರು, ಯಾರು ಎರಡನೆಯವರು,
ಮೂರನೆಯವರು ಎಂಬುದನ್ನು ತಿಳಿದುಕೊಂಡಿರುತ್ತಾರಲ್ಲವೆ. ತಂದೆಯ ಗಮನವೂ ಸಹ ಸೇವಾಧಾರಿ ಮಕ್ಕಳಕಡೆ
ಇರುತ್ತದೆ. ಅವರೇ ಹೃದಯವನ್ನೇರುತ್ತಾರೆ. ಸೇವಾಭಂಗವನ್ನು ಮಾಡುವವರು ತಂದೆಯ ಹೃದಯವನ್ನು ಏರಲು
ಸಾಧ್ಯವಿಲ್ಲ. ತಂದೆಯು ಮೊಟ್ಟಮೊದಲನೆಯ ಮಾತನ್ನು ತಿಳಿಸಿಕೊಡುತ್ತಾರೆ- ತನ್ನನ್ನು ಆತ್ಮನೆಂದು
ನಿಶ್ಚಯ ಮಾಡಿಕೊಳ್ಳಿ. ಆಗ ತಂದೆಯ ನೆನಪು ಉಳಿಯುತ್ತದೆ. ದೇಹಾಭಿಮಾನ ಇರುತ್ತದೆಯೆಂದರೆ ತಂದೆಯ
ನೆನಪು ಉಳಿಯಲು ಸಾಧ್ಯವಿಲ್ಲ. ಲೌಕಿಕ ವ್ಯಾಪಾರ, ಉದ್ಯೋಗ, ಲೌಕಿಕ ಸಂಬಂಧಿಗಳಕಡೆ ಬುದ್ಧಿಯು
ಹೊರಟುಹೋಗುತ್ತದೆ. ಆತ್ಮಾಭಿಮಾನಿಗಳಾಗುವುದರಿಂದ ಪಾರಲೌಕಿಕ ತಂದೆಯ ನೆನಪು ಬರುತ್ತದೆ. ತಂದೆಯನ್ನು
ಬಹಳ ಪ್ರೀತಿಯಿಂದ ನೆನಪು ಮಾಡಬೇಕು. ತನ್ನನ್ನು ಆತ್ಮನೆಂದು ತಿಳಿಯಬೇಕು- ಇದರಲ್ಲಿಯೇ ಪರಿಶ್ರಮವಿದೆ,
ಇದಕ್ಕಾಗಿ ಏಕಾಂತ ಬೇಕಾಗಿದೆ. 7 ದಿನಗಳ ಭಟ್ಟಿಯ ಕೋರ್ಸ್ ಬಹಳ ಕಠಿಣವಾಗಿರುತ್ತದೆ. ಆ ಸಂದರ್ಭದಲ್ಲಿ
ಯಾರದೇ ನೆನಪು ಬರಬಾರದು. ಆ ಸಮಯದಲ್ಲಿ ಯಾರಿಗೂ ಪತ್ರವನ್ನೂ ಸಹ ಬರೆಯಬಾರದು. ಪ್ರಾರಂಭದಲ್ಲಿ ಈ
ರೀತಿಯ ಭಟ್ಟಿ ನಡೆದಿತ್ತು ಆದರೆ ಎಲ್ಲರನ್ನು ಇಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ
ಮನೆಯಲ್ಲಿಯೇ ಇದ್ದು ಅಭ್ಯಾಸ ಮಾಡಿ ಎಂದು ಹೇಳಲಾಗುತ್ತದೆ. ಭಕ್ತರೂ ಸಹ ಭಕ್ತಿಯನ್ನು ಮಾಡಲು ಬೇರೆ
ಪೂಜಾ ರೂಮನ್ನು ಮಾಡಿರುತ್ತಾರೆ. ಪೂಜಾ ಮನೆಯಲ್ಲಿ ಕುಳಿತು ಮಾಲೆಯನ್ನು ಜಪಿಸುತ್ತಿರುತ್ತಾರೆ.
ನೆನಪಿನ ಯಾತ್ರೆಗೂ ಸಹ ಏಕಾಂತಬೇಕಾಗಿದೆ. ಒಬ್ಬ ತಂದೆಯನ್ನೇ ನೆನಪು ಮಾಡಬೇಕು. ಇದರಲ್ಲಿ ಯಾವುದೇ
ಪ್ರತ್ಯುತ್ತರ ಕೊಡುವ ಮಾತಿಲ್ಲ. ಈ ನೆನಪಿನ ಅಭ್ಯಾಸಕ್ಕಾಗಿ ಸಮಯವನ್ನು ತೆಗೆಯಬೇಕಾಗಿದೆ.
ಲೌಕಿಕ ತಂದೆಯು ಹದ್ದಿನ ರಚಯಿತನಾಗಿದ್ದಾರೆ, ಇವರು ಬೇಹದ್ದಿನವರು. ಪ್ರಜಾಪಿತ ಬ್ರಹ್ಮಾರವರು
ಬೇಹದ್ದಿನವರಾಗಿದ್ದಾರಲ್ಲವೆ, ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ಶಿವತಂದೆಯು ದತ್ತು
ಮಾಡಿಕೊಳ್ಳುವುದಿಲ್ಲ. ಅವರಿಗೆ ಸದಾ ಮಕ್ಕಳೇ ಆಗಿದ್ದಾರೆ. ಶಿವತಂದೆಯ ಮಕ್ಕಳು ನಾವಾಗಿದ್ದೇವೆ,
ಆತ್ಮರು ಅನಾದಿಯಾಗಿದ್ದೇವೆ ಎಂದು ನೀವು ಹೇಳುತ್ತೀರಿ. ಬ್ರಹ್ಮಾರವರು ನಿಮ್ಮನ್ನು ದತ್ತು
ಮಾಡಿಕೊಂಡಿದ್ದಾರೆ, ಪ್ರತಿಯೊಂದು ಮಾತು ಚೆನ್ನಾಗಿ ತಿಳಿದುಕೊಳ್ಳುವಂತಹದ್ದಾಗಿದೆ. ತಂದೆಯು
ನಿತ್ಯವೂ ತಿಳಿಸಿಕೊಡುತ್ತಾರೆ ಆದರೂ ಮಕ್ಕಳು ಬಾಬಾ ನಿಮ್ಮ ನೆನಪೇ ಇರುವುದಿಲ್ಲವೆಂದು ಹೇಳುತ್ತಾರೆ.
ಸ್ವಲ್ಪ ಸಮಯವನ್ನು ನೆನಪು ಮಾಡಲು ತೆಗೆಯಬೇಕೆಂದು ತಂದೆಯು ಹೇಳುತ್ತಾರೆ. ಕೆಲವರು ಸಮಯವನ್ನೇ
ತೆಗೆಯುವುದಿಲ್ಲ. ಬುದ್ಧಿಯಲ್ಲಿ ಬಹಳ ಕೆಲಸವಿರುತ್ತದೆ. ಮತ್ತೆ ನೆನಪಿನ ಯಾತ್ರೆಯು ಹೇಗೆ ಮಾಡುವುದು?
ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದ್ದೇ ಆದರೆ ನೀವು ಪಾವನರಾಗಿಬಿಡುತ್ತೀರಿ.
ಇದು ಮೂಲಮಾತಾಗಿದೆ ಎಂದು ತಂದೆಯು ತಿಳಿಸುತ್ತಾರೆ. ನಾನು ಆತ್ಮನಾಗಿದ್ದೇನೆ, ಶಿವತಂದೆಯ
ಮಗುವಾಗಿದ್ದೇನೆ, ಇದು ಮನ್ಮನಾಭವ ಆಯಿತಲ್ಲವೆ. ಇದರಲ್ಲಿ ಪರಿಶ್ರಮ ಪಡಬೇಕಾಗಿದೆ. ಆಶೀರ್ವಾದದ
ಮಾತಿಲ್ಲ. ಇದು ವಿದ್ಯೆಯಾಗಿದೆ. ಇದರಲ್ಲಿ ಕೃಪೆ ಅಥವಾ ಆಶೀರ್ವಾದ ನಡೆಯುವುದಿಲ್ಲ. ನಾನು ಎಂದಾದರೂ
ನಿಮ್ಮ ತಲೆಯ ಮೇಲೆ ಕೈಯಿಡುತ್ತೇನೆಯೇ! ನಾವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳುತ್ತೇವೆ ಎಂಬುದು ನಿಮಗೆ ತಿಳಿದಿದೆ. ಅಮರಭವ, ಆಯುಷ್ಯವಾನ್ಭವ... ಇದರಲ್ಲಿ ಎಲ್ಲವೂ
ಬಂದುಬಿಡುತ್ತದೆ. ನೀವು ಧೀರ್ಘವಾದ ಆಯಸ್ಸನ್ನು ಪಡೆಯುತ್ತೀರಿ. ಅಲ್ಲಿ ಎಂದೂ ಸಹ ಅಕಾಲಮೃತ್ಯು
ಸಂಭವಿಸುವುದಿಲ್ಲ. ಈ ಆಸ್ತಿಯನ್ನು ಯಾವುದೇ ಸಾಧು-ಸಂತ ಮುಂತಾದವರು ಕೊಡಲು ಸಾಧ್ಯವಿಲ್ಲ. ಅವರು
ಪುತ್ರವಾನ್ಭವ ಎಂದು ಹೇಳುತ್ತಾರೆ. ಅದಕ್ಕೆ ಮನುಷ್ಯರು ಅವರ ಕೃಪೆಯಿಂದ ಮಗುವಾಯಿತು ಎಂದು
ತಿಳಿದುಕೊಳ್ಳುತ್ತಾರೆ. ಯಾರಿಗೆ ಮಕ್ಕಳಿರುವುದಿಲ್ಲವೋ ಅವರು ಹೋಗಿ ಅವರ ಶಿಷ್ಯರಾಗಿಬಿಡುತ್ತಾರೆ.
ಜ್ಞಾನವು ಒಂದೇಬಾರಿ ಸಿಗುತ್ತದೆ. ಇದು ಅವ್ಯಭಿಚಾರಿ ಜ್ಞಾನವಾಗಿದೆ. ಇದರ ಪ್ರಾಲಬ್ಧವು
ಅರ್ಧಕಲ್ಪದವರೆಗೆ ನಡೆಯುತ್ತದೆ ನಂತರ ಅಜ್ಞಾನ. ಭಕ್ತಿಮಾರ್ಗಕ್ಕೆ ಅಜ್ಞಾನವೆಂದು ಹೇಳಲಾಗುತ್ತದೆ.
ಪ್ರತಿಯೊಂದು ಮಾತನ್ನು ಎಷ್ಟೊಂದು ಚ್ನೆನಾಗಿ ತಿಳಿಸಿಕೊಡಲಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈಗ
ವಾನಪ್ರಸ್ಥ ಸ್ಥಿತಿಯಾಗಿದೆ, ಇದಕ್ಕಾಗಿ ಬುದ್ಧಿಯಿಂದ ಎಲ್ಲವನ್ನೂ ಸನ್ಯಾಸ ಮಾಡಿ ಒಬ್ಬ ತಂದೆಯ
ನೆನಪಿನಲ್ಲಿರಬೇಕು. ಏಕಾಂತದಲ್ಲಿ ಕುಳಿತು ನಾನು ಆತ್ಮವಾಗಿದ್ದೇನೆ.... ಆತ್ಮನಾಗಿದ್ದೇನೆ....
ಎಂಬ ಅಭ್ಯಾಸವನ್ನು ಮಾಡಬೇಕು.
2. ಸೇವಾಧಾರಿ
ಹೂಗಳಾಗಬೇಕು. ದೇಹಾಭಿಮಾನಕ್ಕೆ ವಶೀಭೂತರಾಗಿ ಸೇವಾಭಂಗವಾಗುವ ಯಾವುದೇ ಕರ್ಮವನ್ನು ಮಾಡಬಾರದು.
ಅನೇಕರ ಕಲ್ಯಾಣಕ್ಕೆ ನಿಮಿತ್ತರಾಗಬೇಕು. ನೆನಪಿಗಾಗಿ ಸ್ವಲ್ಪ ಸಮಯವನ್ನು ಅವಶ್ಯವಾಗಿ ತೆಗೆದು
ಇಡಬೇಕು.
ವರದಾನ:
ಪರಮಾತ್ಮ
ಜ್ಞಾನದ ನವೀನತೆ ”ಪವಿತ್ರತೆ”ಯನ್ನು ಧಾರಣೆ ಮಾಡುವಂತಹ ಸರ್ವ ಸೆಳೆತಗಳಿಂದ ಮುಕ್ತ ಭವ
ಈ ಪರಮಾತ್ಮ ಜ್ಞಾನದ
ನವೀನತೆಯಾಗಿದೆ ಪವಿತ್ರತೆ. ಹೆಮ್ಮೆಯಿಂದ ಹೇಳುವಿರಿ ಬೆಂಕಿ ಮತ್ತು ಹತ್ತಿ ಒಂದೇಕಡೆ ಇದ್ದರೂ ಸಹ
ಬೆಂಕಿ ತಾಕುವುದಿಲ್ಲ. ಇಡೀ ವಿಶ್ವದವರಿಗೆ ನಿಮ್ಮದು ಈ ಚಾಲೆಂಜ್ ಆಗಿದೆ ಪವಿತ್ರತೆಯ ವಿನಹ ಜ್ಞಾನಿ
ಅಥವಾ ಯೋಗಿ ಆತ್ಮ ಆಗಲು ಸಾಧ್ಯವಿಲ್ಲ. ಆದ್ದರಿಂದ ಪವಿತ್ರತೆ ಅರ್ಥಾತ್ ಸಂಪೂರ್ಣ ಸೆಳೆತದಿಂದ
ಮುಕ್ತ. ಯಾವುದೇ ವ್ಯಕ್ತಿ ಅಥವಾ ಸಾಧನಗಳಂದಿಗೂ ಸೆಳೆತ ಇರಬಾರದು. ಇಂತಹ ಪವಿತ್ರತೆಯ ಮೂಲಕವೇ
ಪ್ರಕೃತಿಯನ್ನು ಪಾವನ ಮಾಡುವಂತಹ ಸೇವೆ ಮಾಡಲು ಸಾಧ್ಯ.
ಸ್ಲೋಗನ್:
ಪವಿತ್ರತೆ
ನಿಮ್ಮ ಜೀವನದ ಮುಖ್ಯ ಅಡಿಪಾಯವಾಗಿದೆ, ಧರಣಿ ಬಾಯಿ ಬಿಟ್ಟರೂ ಧರ್ಮವನ್ನು ಬಿಡಬೇಡಿ.