01.11.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ಸಮಯದಲ್ಲಿ ನಿರಾಕಾರ ತಂದೆಯು ಸಾಕಾರದಲ್ಲಿ ಬಂದು ನಿಮ್ಮ ಶೃಂಗಾರ ಮಾಡುತ್ತಾರೆ, ಒಬ್ಬರೇ ಅಲ್ಲ”
ಪ್ರಶ್ನೆ:
ನೀವು ಮಕ್ಕಳು
ನೆನಪಿನ ಯಾತ್ರೆಯಲ್ಲಿ ಏಕೆ ಕುಳಿತುಕೊಳ್ಳುತ್ತೀರಿ?
ಉತ್ತರ:
1. ಏಕೆಂದರೆ ಈ
ನೆನಪಿನ ಯಾತ್ರೆಯಿಂದಲೇ ನಮಗೆ ದೀರ್ಘಾಯಸ್ಸು ಸಿಗುತ್ತದೆ ಎಂದು ನಿಮಗೆ ತಿಳಿದಿದೆ. ನಾವು
ನಿರೋಗಿಯಾಗುತ್ತೇವೆ. 2. ನೆನಪಿನಿಂದಲೇ ನಮ್ಮ ಪಾಪ ಭಸ್ಮವಾಗುತ್ತದೆ, ನಾವು ಸತ್ಯಚಿನ್ನವಾಗುತ್ತೇವೆ.
ಆತ್ಮನಲ್ಲಿರುವ ರಜೋ, ತಮೋವಿನ ತುಕ್ಕು ಬಿಟ್ಟುಹೋಗುತ್ತದೆ. ಆತ್ಮವು ಕಂಚನವಾಗಿಬಿಡುತ್ತದೆ. 3.
ನೆನಪಿನಿಂದಲೇ ನೀವು ಪಾವನಪ್ರಪಂಚದ ಮಾಲೀಕರಾಗಿಬಿಡುತ್ತೀರಿ. 4. ನಿಮ್ಮ ಶೃಂಗಾರವಾಗುತ್ತದೆ. 5.
ನೀವು ಬಹಳ ಧನವಂತರಾಗುತ್ತೀರಿ. ಈ ನೆನಪೇ ನಿಮ್ಮನ್ನು ಪದಮಾಪದಮ ಭಾಗ್ಯಶಾಲಿಯನ್ನಾಗಿ ಮಾಡುತ್ತದೆ.
ಓಂ ಶಾಂತಿ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ - ನೀವು ಇಲ್ಲಿ ಕುಳಿತು ಏನು ಮಾಡುತ್ತೀರಿ?
ನೀವು ಶಾಂತಿಯಲ್ಲಿ ಕುಳಿತಿಲ್ಲ. ಅರ್ಥಸಹಿತವಾಗಿ ಜ್ಞಾನಮಯ ಸ್ಥಿತಿಯಲ್ಲಿ ಕುಳಿತಿದ್ದೀರಾ? ನೀವು
ಮಕ್ಕಳಿಗೆ ಈ ಜ್ಞಾನವಂತೂ ಇದೆ - ತಂದೆಯನ್ನು ನಾವೇಕೆ ನೆನಪು ಮಾಡುತ್ತೇವೆ. ತಂದೆಯು ನಮಗೆ
ಧೀರ್ಘಾಯಸ್ಸನ್ನು ಕೊಡುತ್ತಾರೆ. ತಂದೆಯನ್ನು ನೆನಪು ಮಾಡುವುದರಿಂದ ನಮ್ಮ ಪಾಪವು ನಾಶವಾಗುತ್ತದೆ,
ನಾವು ಸತ್ಯಚಿನ್ನ, ಸತೋಪ್ರಧಾನರಾಗಿಬಿಡುತ್ತೇವೆ. ನಿಮಗೆ ಎಷ್ಟೊಂದು ಶೃಂಗಾರವಾಗುತ್ತದೆ! ನಿಮ್ಮ
ಆಯಸ್ಸು ಧೀರ್ಘವಾಗುತ್ತದೆ. ಆತ್ಮವು ಚಿನ್ನವಾಗಿಬಿಡುತ್ತದೆ. ಈಗ ಆತ್ಮನಲ್ಲಿ ಕಲ್ಮಷವಿದೆ.
ನೆನಪಿನಿಂದ ಆ ಎಲ್ಲಾ ಕಲಬೆರಕೆಯು ರಜೋ, ತಮೋಪ್ರಧಾನದಿಂದ ಬಿಡುಗಡೆಯಾಗುತ್ತದೆ. ನಿಮಗೆ ಇಷ್ಟೊಂದು
ಲಾಭವಾಗುತ್ತದೆ ಮತ್ತೆ ಧೀರ್ಘಾಯಸ್ಸಾಗಿಬಿಡುತ್ತದೆ. ನೀವು ಸ್ವರ್ಗವಾಸಿಗಳಾಗಿಬಿಡುತ್ತೀರಿ ಮತ್ತು
ಧನವಂತರಾಗುತ್ತೀರಿ. ನೀವು ಪದಮಾಪದಮ ಭಾಗ್ಯಶಾಲಿಗಳಾಗಿಬಿಡುತ್ತೀರಿ. ಆದ್ದರಿಂದ ತಂದೆಯು
ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ಇದನ್ನು ಯಾವ ದೇಹಧಾರಿ ಹೇಳುತ್ತಿಲ್ಲ, ತಂದೆಗಂತೂ
ಶರೀರವಿಲ್ಲ. ನೀವಾತ್ಮಗಳು ನಿರಾಕಾರಿಯಾದವರು ನಂತರ ಪುನರ್ಜನ್ಮದಲ್ಲಿ ಬರುತ್ತಾ-ಬರುತ್ತಾ
ಪಾರಸಬುದ್ಧಿಯಿಂದ ಕಲ್ಲುಬುದ್ಧಿಯವರಾಗಿಬಿಟ್ಟಿದ್ದೀರಿ ಈಗ ಮತ್ತೆ ಚಿನ್ನದ ಸಮಾನರಾಗಬೇಕು. ಈಗ ನೀವು
ಪವಿತ್ರರಾಗುತ್ತಿದ್ದೀರಿ. ಗಂಗಾಸ್ನಾನವನ್ನಂತೂ ಜನ್ಮ-ಜನ್ಮಾಂತರ ಮಾಡುತ್ತಿದ್ದೀರಿ. ಆ ಸ್ನಾನದಿಂದ
ಪಾವನರಾಗುತ್ತೇವೆಂದು ತಿಳಿದಿದ್ದಿರಿ, ಆದರೆ ಪಾವನರಾಗುವ ಬದಲಾಗಿ ಇನ್ನೂ ಪತಿತರಾಗಿ ಇನ್ನೂ
ನಷ್ಟದಲ್ಲಿ ಬಂದು ತಲುಪಿದ್ದೀರಿ ಏಕೆಂದರೆ ಇದಾಗಿದೆ, ಅಸತ್ಯಮಾಯೆ. ಸುಳ್ಳು ಹೇಳುವಂತಹ ಸಂಸ್ಕಾರವು
ಎಲ್ಲರಲ್ಲಿಯೂ ಇದೆ. ತಂದೆಯು ಹೇಳುತ್ತಾರೆ - ನಾನು ನಿಮ್ಮನ್ನು ಪಾವನ ಮಾಡಿ ಹೋಗುತ್ತೇನೆ ನಂತರ
ನಿಮ್ಮನ್ನು ಪತಿತರನ್ನಾಗಿ ಯಾರು ಮಾಡುತ್ತಾರೆ. ಈಗ ನೀವು ಅನುಭವ ಮಾಡುತ್ತೀರಲ್ಲವೆ. ಎಷ್ಟೊಂದು
ಗಂಗಾಸ್ನಾನ ಮಾಡುತ್ತಾ ಬಂದಿರಿ ಆದರೂ ಪಾವನರಾಗಲೇ ಇಲ್ಲ. ಪಾವನರಾದರೆ ಪಾವನ ಪ್ರಪಂಚಕ್ಕೆ
ಹೋಗಬೇಕಾಗುತ್ತದೆಯಲ್ಲವೆ. ಶಾಂತಿಧಾಮ ಹಾಗೂ ಸುಖಧಾಮವು ಪಾವನಧಾಮಗಳಾಗಿವೆ. ಇದು ರಾವಣನ
ಪ್ರಪಂಚವಾಗಿದೆ, ಇದನ್ನು ದುಃಖಧಾಮವೆಂದು ಕರೆಯಲಾಗುವುದು. ಇದು ಸಹಜವಾಗಿ ತಿಳಿದುಕೊಳ್ಳುವ
ಮಾತುಗಳಾಗಿವೆ, ಇದನ್ನು ತಿಳಿದುಕೊಳ್ಳಲು ಯಾವುದೇ ಕಷ್ಟವಿಲ್ಲ, ಅನ್ಯರಿಗೆ ಹೇಳಲೂ
ಕಷ್ಟವಾಗುವುದಿಲ್ಲ. ಯಾರಾದರೂ ಸಿಕ್ಕಿದರೆ ಕೇವಲ ಇಷ್ಟನ್ನೇ ಹೇಳಿ - ನಿಮ್ಮನ್ನು ನೀವು ಆತ್ಮವೆಂದು
ತಿಳಿದು ತಂದೆಯನ್ನು ನೆನಪು ಮಾಡಿ. ಆತ್ಮಗಳ ತಂದೆಯು ಪರಮಪಿತ ಪರಮಾತ್ಮ ಶಿವ ಆಗಿದ್ದಾರೆ.
ಪ್ರತಿಯೊಬ್ಬರ ಶರೀರದ ತಂದೆ ಬೇರೆ-ಬೇರೆಯಾಗಿದ್ದಾರೆ, ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ.
ಎಷ್ಟೊಂದು ಚೆನ್ನಾಗಿ ಹಿಂದಿಯಲ್ಲಿಯೇ ತಿಳಿಸಿಕೊಡುತ್ತಾರೆ. ಹಿಂದಿಭಾಷೆಯು ಮುಖ್ಯವಾದುದಾಗಿದೆ. ಈ
ದೇವಿ-ದೇವತೆಗಳಿಗೆ ನೀವು ಪದಮಾಪದಮ ಭಾಗ್ಯಶಾಲಿಗಳೆಂದು ಹೇಳುತ್ತೀರಲ್ಲವೆ. ಇವರೆಷ್ಟು
ಭಾಗ್ಯಶಾಲಿಗಳು, ಇವರು ಹೇಗೆ ಸ್ವರ್ಗದ ಮಾಲೀಕರಾದರೆಂದು ಯಾರಿಗೂ ತಿಳಿಯದು. ಈಗ ತಂದೆಯು
ತಿಳಿಸುತ್ತಾರೆ - ಈ ಸಹಜಯೋಗದ ಮೂಲಕ ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ಹೀಗೆ ಆಗುತ್ತೀರಿ. ಈಗ ಇದು
ಹಳೆಯ ಹಾಗೂ ಹೊಸಪ್ರಪಂಚದ ಸಂಗಮವಾಗಿದೆ ನಂತರ ನೀವು ಹೊಸಪ್ರಪಂಚದ ಮಾಲೀಕರಾಗಿಬಿಡುತ್ತೀರಿ.
ಅದಕ್ಕಾಗಿ ತಂದೆಯು ತಿಳಿಸುತ್ತಾರೆ - ಎರಡು ಅಕ್ಷರವನ್ನು ಅರ್ಥಸಹಿತವಾಗಿ ನೆನಪು ಮಾಡಿ. ಮನ್ಮನಾಭವ
ಎಂದು ಗೀತೆಯಲ್ಲಿ ಇದೆ, ಅಕ್ಷರವನ್ನೇನೋ ಓದುತ್ತಾರೆ ಆದರೆ ಅರ್ಥವನ್ನಂತೂ ತಿಳಿದುಕೊಂಡಿಲ್ಲ.
ತಂದೆಯು ತಿಳಿಸುತ್ತಾರೆ - ನಾನೇ ಪತಿತ-ಪಾವನ ಆಗಿದ್ದೇನೆ, ನನ್ನನ್ನು ನೆನಪು ಮಾಡಿ - ಹೀಗೆ ಯಾರೂ
ಸಹ ಹೇಳಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡಿದಾಗ ನೀವು ಪಾವನರಾಗಿ,
ಪಾವನಪ್ರಪಂಚಕ್ಕೆ ಹೊರಟುಹೋಗುತ್ತೀರಿ. ಮೊಟ್ಟಮೊದಲು ನೀವು ಸತೋಪ್ರಧಾನರಾಗಿದ್ದವರು ನಂತರ
ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ತಮೋಪ್ರಧಾನರಾಗಿದ್ದೀರಿ. 84
ಜನ್ಮಗಳ ನಂತರ ಈಗ ನೀವು ಹೊಸಪ್ರಪಂಚದಲ್ಲಿ ದೇವತೆಗಳಾಗುತ್ತೀರಿ.
ರಚಯಿತ ಹಾಗೂ ರಚನೆ
ಎರಡನ್ನು ನೀವು ತಿಳಿದುಕೊಂಡಿದ್ದೀರಿ ಆದ್ದರಿಂದ ಈಗ ನೀವು ಆಸ್ತಿಕರಾಗಿಬಿಟ್ಟಿದ್ದೀರಿ. ಮೊದಲು
ನೀವು ಜನ್ಮ-ಜನ್ಮಾಂತರ ನಾಸ್ತಿಕರಾಗಿದ್ದಿರಿ. ತಂದೆಯು ತಿಳಿಸುವಂತಹ ಮಾತುಗಳನ್ನು ಯಾರೂ
ತಿಳಿದುಕೊಂಡಿಲ್ಲ. ನೀವು ಎಲ್ಲಿಗೇ ಬೇಕಾದರೂ ಹೋಗಿ ಆದರೆ ಈ ಮಾತುಗಳನ್ನು ಯಾರೂ ಹೇಳುವುದಿಲ್ಲ. ಈಗ
ಇಬ್ಬರು ತಂದೆಯರು ನಿಮ್ಮ ಶೃಂಗಾರ ಮಾಡುತ್ತಿದ್ದಾರೆ, ಮೊದಲು ತಂದೆಯೊಬ್ಬರೇ ಶರೀರವಿಲ್ಲದೆ ಇದ್ದರು.
ಮೇಲೆ (ಪರಮಧಾಮ) ಕುಳಿತು ನಿಮ್ಮ ಶೃಂಗಾರ ಮಾಡಲು ಸಾಧ್ಯವಿಲ್ಲ. ಹೇಳುತ್ತಾರಲ್ಲವೆ - 1ರ ಪಕ್ಕ
2ನ್ನು ಸೇರಿಸಿದಾಗ 12 ಆಗುತ್ತದೆ. ಇಲ್ಲಿ ಪ್ರೇರಣೆ ಅಥವಾ ಶಕ್ತಿಯ ಮಾತಿಲ್ಲ, ಪ್ರೇರಣೆಯ ಮೂಲಕ
ಮಿಲನ ಮಾಡಲಾಗುವುದಿಲ್ಲ. ನಿರಾಕಾರನು ಯಾವಾಗ ಸಾಕಾರ (ಶರೀರ) ವನ್ನು ಪಡೆದಾಗ ನಿಮ್ಮ ಶೃಂಗಾರ
ಮಾಡುತ್ತಾರೆ. ತಂದೆಯು ನಮ್ಮನ್ನು ಸುಖಧಾಮಕ್ಕೆ ಕರೆದೊಯ್ಯುತ್ತಿದ್ದಾರೆಂದೂ ಸಹ ತಿಳಿಯುತ್ತಾರೆ.
ನಾಟಕದ ಯೋಜನೆಯನುಸಾರವಾಗಿ ತಂದೆಯು ಬಂಧಿಸಲ್ಪಟ್ಟಿದ್ದಾರೆ, ಅವರಿಗೆ ಈ ಕರ್ತವ್ಯವು ದೊರಕಿದೆ. ನೀವು
ಮಕ್ಕಳಿಗಾಗಿ ಪ್ರತೀ 5000 ವರ್ಷಗಳಿಗೊಮ್ಮೆ ಬರುತ್ತಾರೆ, ಈ ಯೋಗಬಲದಿಂದ ನೀವು ಎಷ್ಟೊಂದು ಚಿನ್ನದ
ಸಮಾನರಾಗುತ್ತೀರಿ. ಆತ್ಮ ಹಾಗೂ ಶರೀರವೆರಡೂ ಚಿನ್ನವಾಗುತ್ತದೆ ನಂತರ ಅಪವಿತ್ರರಾಗುತ್ತೀರಿ. ಈಗ
ನಿಮಗೆ ಈ ಪುರುಷಾರ್ಥದಿಂದ ಶೃಂಗರಿಸಲ್ಪಟ್ಟವರಾಗುತ್ತೇವೆ ಎಂಬ ಸಾಕ್ಷಾತ್ಕಾರ ಮಾಡಿಕೊಳ್ಳುತ್ತೀರಿ,
ಅಲ್ಲಿ ಅಪವಿತ್ರ ದೃಷ್ಟಿಯಿರುವುದಿಲ್ಲ ಆದರೂ ಎಲ್ಲಾ ಅಂಗಾಂಗಳು ಮುಚ್ಚಲ್ಪಟ್ಟಿರುತ್ತವೆ. ಇಲ್ಲಿ
ನೋಡಿ, ಈ ಅಪವಿತ್ರ ಮಾತುಗಳನ್ನು ಈ ರಾವಣರಾಜ್ಯದಲ್ಲಿ ಕಲಿಯುತ್ತಾರೆ. ಈ ಲಕ್ಷ್ಮಿ-ನಾರಾಯಣರನ್ನು
ನೋಡಿ, ಅವರ ವಸ್ತ್ರ ಮೊದಲಾದುವುಗಳು ಎಷ್ಟೊಂದು ಚೆನ್ನಾಗಿದೆ! ಇಲ್ಲಿ ಎಲ್ಲರೂ
ದೇಹಾಭಿಮಾನದಲ್ಲಿದ್ದಾರೆ, ಅವರಿಗೆ ದೇಹಾಭಿಮಾನಿಗಳೆಂದು ಹೇಳಲಾಗುವುದಿಲ್ಲ. ಅವರಿಗೆ
ಪ್ರಾಕೃತಿಕವಾದ ಸೌಂದರ್ಯವಿದೆ. ತಂದೆಯು ನಿಮ್ಮನ್ನು ಇಂತಹ ಪ್ರಾಕೃತಿಕ ಸೌಂದರ್ಯವುಳ್ಳಂತಹವರನ್ನಾಗಿ
ಮಾಡುತ್ತಾರೆ. ಈ ಸಮಯದಲ್ಲಂತೂ ಸತ್ಯ ಆಭರಣವನ್ನು ಯಾರೂ ತೊಡುವುದಿಲ್ಲ, ಒಂದುವೇಳೆ ತೊಟ್ಟರೆ ಲೂಟಿ
ಮಾಡಿಬಿಡುತ್ತಾರೆ. ಅಲ್ಲಂತೂ ಈ ಮಾತುಗಳಿರುವುದಿಲ್ಲ. ಇಂತಹ ತಂದೆಯು ನಿಮಗೆ ಸಿಕ್ಕಿದ್ದಾರೆ, ಇವರ
ವಿನಃ ನೀವು ಅಂತಹ ದೇವತೆಗಳಾಗಲು ಸಾಧ್ಯವಿಲ್ಲ. ಕೆಲವರು ನಾವು ನೇರವಾಗಿ ಶಿವತಂದೆಯಿಂದ
ಪಡೆಯುತ್ತೇವೆಂದು ಹೇಳುತ್ತಾರೆ ಆದರೆ ಹೇಗೆ ತೆಗೆದುಕೊಳ್ಳುತ್ತಾರೆ? ಒಂದುವೇಳೆ ಸೀದಾ
ಪ್ರಯತ್ನಪಟ್ಟು ನೋಡಿ, ಸಿಗುತ್ತದೆಯೇ! ಈ ರೀತಿ ಬಹಳಷ್ಟು ಮಂದಿ ಹೇಳುತ್ತಾರೆ, ನಾವು ಶಿವತಂದೆಯಿಂದ
ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಬ್ರಹ್ಮನನ್ನು ಕೇಳುವ ಅವಶ್ಯಕತೆಯೇನು? ಶಿವತಂದೆಯು
ಪ್ರೇರಣೆಯಿಂದ ಸ್ವಲ್ಪ ಕೊಟ್ಟುಬಿಡುತ್ತಾರೆಂದು. ಒಳ್ಳೊಳ್ಳೆಯ ಹಳೆಯ ಮಕ್ಕಳೂ ಈ ರೀತಿ ಮಾಯೆಗೆ
ವಶರಾಗಿಬಿಡುತ್ತಾರೆ. ಒಬ್ಬನನ್ನೇ ಒಪ್ಪಿಕೊಳ್ಳುತ್ತಾರೆ ಆದರೆ ಒಬ್ಬರು ಏನು ಮಾಡಲು ಸಾಧ್ಯ! ತಂದೆಯೂ
ಹೇಳುತ್ತಾರೆ - ನಾನೊಬ್ಬನೇ ಹೇಗೆ ಬರಲಿ, ಬಾಯಿಲ್ಲದೇ ಹೇಗೆ ಮಾತನಾಡಲಿ? ಮುಖದ ಗಾಯನವಿದೆಯಲ್ಲವೆ!
ಗೋಮುಖದಿಂದ ಅಮೃತವನ್ನು ತೆಗೆದುಕೊಳ್ಳಲು ಎಷ್ಟೊಂದು ಕಷ್ಟಪಡುತ್ತಾರೆ ನಂತರ ಶ್ರೀನಾಥಕ್ಕೆ ಹೋಗಿ
ದರ್ಶನ ಮಾಡುತ್ತಾರೆ ಆದರೆ ಅವರ ದರ್ಶನ ಮಾಡುವುದರಿಂದ ಏನಾಗುತ್ತದೆ? ಅದನ್ನು ಭೂತಪೂಜೆಯೆಂದು
ಕರೆಯಲಾಗುವುದು. ಮೂರ್ತಿಯಲ್ಲಿ ಆತ್ಮವು ಇಲ್ಲವೇ ಇಲ್ಲ. ಬಾಕಿ ಪಂಚತತ್ವಗಳ ಗೊಂಬೆಯನ್ನು
ಮಾಡಲ್ಪಟ್ಟಿರುತ್ತದೆ ಅರ್ಥಾತ್ ಮಾಯೆಯನ್ನು ನೆನಪು ಮಾಡಿದಂತಾಯಿತಲ್ಲವೆ. ಪಂಚತತ್ವಗಳು
ಪ್ರಕೃತಿಯಲ್ಲವೆ. ಅದನ್ನು ನೆನಪು ಮಾಡಿದರೆ ಏನಾಗುತ್ತದೆ? ಪ್ರಕೃತಿಯ ಆಧಾರವಂತೂ ಎಲ್ಲರಿಗೂ ಇದೆ
ಆದರೆ ಅಲ್ಲಿ ಸತೋಪ್ರಧಾನ ಪ್ರಕೃತಿಯಿದೆ, ಇಲ್ಲಿ ತಮೋಪ್ರಧಾನ ಪ್ರಕೃತಿಯಿದೆ. ತಂದೆಗೆ ಸತೋಪ್ರಧಾನ
ಪ್ರಕೃತಿಯನ್ನು ಎಂದಿಗೂ ತೆಗೆದುಕೊಳ್ಳಬೇಕಾಗುವುದಿಲ್ಲ, ಇಲ್ಲಂತೂ ಸತೋಪ್ರಧಾನತೆ ಪ್ರಕೃತಿಯು ಸಿಗಲು
ಸಾಧ್ಯವಿಲ್ಲ. ಇಲ್ಲಿರುವಂತಹ ಸಾಧು-ಸಂತರ ಉದ್ಧಾರವನ್ನೂ ನಾನೇ ಮಾಡಬೇಕಾಗುತ್ತದೆಯೆಂದು ತಂದೆಯು
ತಿಳಿಸುತ್ತಾರೆ. ನಾನು ನಿವೃತ್ತಿಮಾರ್ಗದಲ್ಲಿ ಬರುವುದೇ ಇಲ್ಲ, ಇದು ಪ್ರವೃತ್ತಿಮಾರ್ಗವಾಗಿದೆ.
ಪವಿತ್ರರಾಗಿ ಎಂದು ಎಲ್ಲರಿಗೂ ಹೇಳುತ್ತೇನೆ. ಅಲ್ಲಂತೂ ನಾಮ, ರೂಪವೆಲ್ಲವೂ ಪರಿವರ್ತನೆಯಾಗುತ್ತದೆ,
ತಂದೆಯು ತಿಳಿಸುತ್ತಾರೆ - ನೋಡಿ, ಈ ನಾಟಕವು ಹೇಗೆ ಮಾಡಲ್ಪಟ್ಟಿದೆ. ಒಬ್ಬರ ಜೀವನಕ್ಕೂ,
ಮತ್ತೊಬ್ಬರ ಜೀವನಕ್ಕೂ ಸಂಬಂಧವೇ ಇಲ್ಲ. ಇಷ್ಟೊಂದು ಕೋಟ್ಯಾಂತರ ಮಂದಿಯಿದ್ದಾರೆ, ಎಲ್ಲರ ಜೀವನ
ಬೇರೆ-ಬೇರೆಯಾಗಿದೆ. ಯಾರು ಎಷ್ಟೇ ಮಾಡಲಿ ಆದರೆ ಒಬ್ಬರ ಜೀವನಕ್ಕೂ ಮತ್ತೊಬ್ಬರ ಜೀವನಕ್ಕೂ
ಹೋಲಿಕೆಯಿಲ್ಲ, ಇದನ್ನೇ ಈಶ್ವರನ ಅದ್ಭುತವೆಂದು ಕರೆಯಲಾಗುವುದು. ಸ್ವರ್ಗವನ್ನು ಅದ್ಭುತವೆಂದು
ಹೇಳುತ್ತಾರೆ. ಎಷ್ಟೊಂದು ಶೋಭನೀಯವಾಗಿರುತ್ತದೆ. 7 ಅದ್ಭುತಗಳು ಮಾಯೆಯದ್ದಾಗಿದೆ, ಒಂದು ಅದ್ಭುತ
ತಂದೆಯದಾಗಿದೆ. ಆ 7 ಅದ್ಭುತಗಳನ್ನು ತಕ್ಕಡಿಯಲ್ಲಿ ಒಂದುಕಡೆಯಿಟ್ಟು, ಈ ಒಂದು ಅದ್ಭುತವನ್ನು ಒಂದು
ಕಡೆಯಿಡಿ ಆಗ ತಂದೆಯ ಅದ್ಭುತವೇ ಬಾರಿಯಾಗುತ್ತದೆ. ಒಂದುಕಡೆ ಜ್ಞಾನ, ಮತ್ತೊಂದುಕಡೆ
ಭಕ್ತಿಯನ್ನಿಟ್ಟಾಗ ಜ್ಞಾನದಕಡೆಯೇ ಬಹಳ ಭಾರವಾಗುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ-
ಭಕ್ತಿಯನ್ನು ಕಲಿಸುವಂತಹವರಂತೂ ಅನೇಕರಿದ್ದಾರೆ, ಜ್ಞಾನಕೊಡುವವರಂತೂ ಒಬ್ಬರೇ ಆಗಿದ್ದಾರೆ.
ಆದುದರಿಂದ ತಂದೆಯು ಕುಳಿತು ಓದಿಸುತ್ತಾರೆ, ಶೃಂಗಾರ ಮಾಡುತ್ತಾರೆ. ಪವಿತ್ರರಾಗಿ ಎಂದು ತಂದೆಯು
ತಿಳಿಸುತ್ತಾರೆ. ಆದರೆ ಅವರು ಹೇಳುತ್ತಾರೆ ಇಲ್ಲ ನಾವು ಅಪವಿತ್ರರಾಗುತ್ತೇವೆ. ಆದುದರಿಂದ
ಗರುಡಪುರಾಣದಲ್ಲಿ ವಿಷಯವೈತರಣಿ ನದಿಯನ್ನು ತೋರಿಸುತ್ತಾರಲ್ಲವೆ. ಚೇಳು, ಮಂಡರಗಪ್ಪೆ, ಹಾವು
ಮೊದಲಾದುವುಗಳು ಪರಸ್ಪರ ಒಬ್ಬೊಬ್ಬರನ್ನು ಕಚ್ಚುತ್ತಿರುತ್ತವೆ. ತಂದೆಯು ಹೇಳುತ್ತಾರೆ - ನೀವು
ಎಷ್ಟೊಂದು ನಿರ್ಧನಿಕರಾಗಿಬಿಡುತ್ತೀರಿ. ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ಹೊರಗಡೆ
ಅನ್ಯರಿಗೆ ಹೀಗೆ ಸೀದಾ ಹೇಳಿದಾಗ ಕೋಪಗೊಳ್ಳುತ್ತಾರೆ, ಬಹಳ ಯುಕ್ತಿಯಿಂದ ತಿಳಿಸಿಕೊಡಬೇಕಾಗುವುದು.
ಕೆಲವು ಮಕ್ಕಳಲ್ಲಿ ಹೇಗೆ ಮಾತನಾಡಬೇಕೆಂದು ಬುದ್ಧಿಯಿರುವುದಿಲ್ಲ. ಚಿಕ್ಕಮಕ್ಕಳು
ಮುಗ್ಧರಾಗಿರುವಕಾರಣ ಅವರಿಗೆ ಮಹಾತ್ಮರೆಂದು ಕರೆಯಲಾಗುವುದು. ಕೃಷ್ಣ ಮಹಾತ್ಮನೆಲ್ಲಿ, ಮಹಾತ್ಮರೆಂದು
ಹೇಳಿಕೊಳ್ಳುವ ನಿವೃತ್ತಿಮಾರ್ಗದ ಸನ್ಯಾಸಿಗಳೆಲ್ಲಿ? ಅದು ಪ್ರವೃತ್ತಿಮಾರ್ಗವಾಗಿದೆ. ಅಲ್ಲಿ
ಭ್ರಷ್ಟಚಾರದಿಂದ ಎಂದಿಗೂ ಜನ್ಮವಾಗುವುದಿಲ್ಲ. ಅದನ್ನು ಶ್ರೇಷ್ಠಾಚಾರಿಯೆಂದು ಕರೆಯಲಾಗುವುದು. ಈಗ
ನೀವು ಶ್ರೇಷ್ಠಾಚಾರಿಗಳಾಗುತ್ತಿದ್ದೀರಿ. ಮಕ್ಕಳಿಗೆ ಗೊತ್ತಿದೆ, ಇಲ್ಲಿ ಬಾಪ್ದಾದಾ ಇಬ್ಬರೂ
ಜೊತೆಯಲ್ಲಿದ್ದಾರೆ. ಅಂದಾಗ ಉತ್ತಮವಾದ ಶೃಂಗಾರವನ್ನು ಅಗತ್ಯವಾಗಿ ಮಾಡುತ್ತಾರೆ. ಯಾರು ಮಕ್ಕಳಿಗೆ
ಈ ರೀತಿ ಶೃಂಗಾರ ಮಾಡಿದ್ದಾರೆಯೋ ಅವರನ್ನು ಮಿಲನ ಮಾಡಬೇಕೆಂದು ಮನಸ್ಸಾಗುತ್ತದೆಯಲ್ಲವೆ ಆದುದರಿಂದ
ನೀವಿಲ್ಲಿಗೆ ರಿಫ್ರೆಷ್ ಆಗಲು ಬರುತ್ತೀರಿ. ತಂದೆಯ ಬಳಿಗೆ ಬರಲು ಮನಸ್ಸಿಗೆ
ಆಕರ್ಷಣೆಯಾಗುತ್ತಿರುತ್ತದೆ. ಯಾರಿಗೆ ನಿಶ್ಚಯವಿರುತ್ತದೆಯೋ ಅವರು, ನೀವು ಹೊಡೆಯಿರಿ ಅಥವಾ ಏನೇ
ಮಾಡಿ, ನಿಮ್ಮ ಜೊತೆಯನ್ನು ನಾವು ಬಿಡುವುದಿಲ್ಲವೆಂದು ಹೇಳುತ್ತಾರೆ. ಕೆಲವರಂತೂ ಕಾರಣವಿಲ್ಲದೇ
ಬಿಟ್ಟುಬಿಡುತ್ತಾರೆ. ಇದೂ ಸಹ ನಾಟಕದಲ್ಲಿ ಆಟವು ಮಾಡಲ್ಪಟ್ಟಿದೆ. ತಂದೆಗೆ ವಿಚ್ಛೇದನವನ್ನು
ಕೊಟ್ಟುಬಿಡುತ್ತಾರೆ.
ತಂದೆಯು ತಿಳಿದಿದ್ದಾರೆ
- ಇದು ರಾವಣನ ವಂಶವಾಗಿದೆ, ಕಲ್ಪ-ಕಲ್ಪವೂ ಹೀಗೆಯೇ ಆಗುತ್ತದೆ. ಕೆಲವರು ನಂತರ ಮರಳಿ
ಬಂದುಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಕೈಬಿಡುವುದರಿಂದ ಪದವಿಯು ಕಡಿಮೆಯಾಗುತ್ತದೆ,
ಸನ್ಮುಖದಲ್ಲಿ ಬಂದು ನಾವು ಇಂತಹ ತಂದೆಯನ್ನು ಎಂದಿಗೂ ಬಿಡುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತಾರೆ
ಆದರೆ ಮಾಯಾರಾವಣನೇನೂ ಕಡಿಮೆಯಿಲ್ಲ. ತಕ್ಷಣ ತನ್ನಕಡೆ ಸೆಳೆದುಬಿಡುತ್ತಾನೆ ನಂತರ ಅವರು ತಂದೆಯ
ಸನ್ಮುಖದಲ್ಲಿ ಬಂದಾಗ ತಿಳಿಸಿಕೊಡಲಾಗುತ್ತದೆ. ತಂದೆಯೇನೂ ಕೊಳಲನ್ನು ಹಿಡಿದು ತಿಳಿಸಿಕೊಡುವುದಿಲ್ಲ.
ತಂದೆಯಂತೂ ಪ್ರೀತಿಯಿಂದ ತಿಳಿಸಿಕೊಡುತ್ತಾರೆ, ನಿಮ್ಮನ್ನು ಮಾಯಾಮೊಸಳೆ ತಿಂದುಬಿಡುತ್ತದೆ.
ಒಳ್ಳೆಯದಾಯಿತು. ತಪ್ಪಿಸಿಕೊಂಡು ಬಂದುಬಿಟ್ಟಿರಲ್ಲವೆ. ಮಾಯೆಯ ಗುರಿ ನಾಟಿದ್ದರೆ ಪದವಿಯು
ಕಡಿಮೆಯಾಗುತ್ತದೆ. ಸದಾ ಯಾರು ಏಕರಸವಾಗಿರುತ್ತಾರೆಯೋ ಅವರು ಎಂದಿಗೂ ದೂರವಾಗುವುದಿಲ್ಲ, ಎಂದಿಗೂ
ಕೈಬಿಡುವುದಿಲ್ಲ. ಇಲ್ಲಿಂದ ತಂದೆಯನ್ನು ಬಿಟ್ಟು ಸತ್ತು ಮಾಯಾರಾವಣನವರಾದರೆ ಅವರನ್ನು ಮಾಯೆಯು
ಇನ್ನೂ ಹೆಚ್ಚಾಗಿ ತಿಂದುಬಿಡುತ್ತದೆ. ತಂದೆಯು ತಿಳಿಸುತ್ತಾರೆ - ನಿಮಗೆ ಎಷ್ಟೊಂದು ಶೃಂಗಾರ
ಮಾಡುತ್ತೇನೆ, ಉತ್ತಮರಾಗಿ ನಡೆದುಕೊಳ್ಳಿ ಎಂದು ತಿಳಿಸಿಕೊಡಲಾಗುತ್ತದೆ. ಯಾರಿಗೂ ದುಃಖವನ್ನು
ಕೊಡಬೇಡಿ, ರಕ್ತದಿಂದಲೂ ಬರೆದುಕೊಡುತ್ತಾರೆ ನಂತರ ಹೇಗಿದ್ದರೋ ಹಾಗೆಯೇ ಆಗಿಬಿಡುತ್ತಾರೆ. ಮಾಯೆಯು
ಬಹಳ ಭಯಂಕರವಾಗಿದೆ. ಕಿವಿ, ಮೂಗಿನಿಂದ ಹಿಡಿದುಕೊಂಡು ಬಹಳ ಚಡಪಡಿಸುವಂತೆ ಮಾಡುತ್ತದೆ. ಈಗ ನಿಮಗೆ
ಜ್ಞಾನದ ಮೂರನೆಯ ನೇತ್ರವನ್ನು ಕೊಡುತ್ತಿರುವಾಗ ಅಪವಿತ್ರ ದೃಷ್ಟಿಯೆಂದಿಗೂ ಬರಬಾರದಾಗಿದೆ. ವಿಶ್ವದ
ಮಾಲೀಕರಾಗಬೇಕೆಂದರೆ ಸ್ವಲ್ಪವಾದರೂ ಕಷ್ಟಪಡಬೇಕಲ್ಲವೆ. ಈಗ ಆತ್ಮ ಮತ್ತು ಶರೀರವೆರಡೂ
ತಮೋಪ್ರಧಾನವಾಗಿದೆ, ಕಲಬೆರಕೆಯಾಗಿಬಿಟ್ಟಿದೆ. ಈ ಕಲಬೆರಕೆಯು ಭಸ್ಮವಾಗಲು ನನ್ನನ್ನು ನೆನಪು ಮಾಡಿ
ಎಂದು ತಂದೆಯು ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡುವುದಿಲ್ಲವೆಂದರೆ ನಿಮಗೆ
ನಾಚಿಕೆಯಾಗುವುದಿಲ್ಲವೆ! ನೆನಪು ಮಾಡಲಿಲ್ಲವೆಂದರೆ ಮಾಯೆಯ ಭೂತವು ನಿಮ್ಮನ್ನು ನುಂಗಿಬಿಡುತ್ತದೆ.
ಈ ರಾವಣರಾಜ್ಯದಲ್ಲಿ ನೀವು ಎಷ್ಟೊಂದು ಅಪವಿತ್ರರಾಗಿಬಿಟ್ಟಿದ್ದೀರಿ, ಇಲ್ಲಿ ವಿಕಾರದಿಂದ
ಜನ್ಮವಾಗದವರು ಒಬ್ಬರೂ ಇಲ್ಲ, ಅಲ್ಲಿ ಈ ವಿಕಾರದ ಹೆಸರೂ ಇರುವುದಿಲ್ಲ, ರಾವಣನೂ ಇರುವುದಿಲ್ಲ.
ದ್ವಾಪರದಿಂದ ರಾವಣರಾಜ್ಯವು ಬರುತ್ತದೆ. ಒಬ್ಬ ತಂದೆಯೇ ಪಾವನ ಮಾಡುವವರಾಗಿದ್ದಾರೆ. ತಂದೆಯು
ಹೇಳುತ್ತಾರೆ - ಮಕ್ಕಳೇ, ಈ ಒಂದುಜನ್ಮದಲ್ಲಿಯೇ ಪವಿತ್ರರಾಗಬೇಕು ನಂತರ ವಿಕಾರದ ಮಾತಿರುವುದಿಲ್ಲ.
ಅದು ನಿರ್ವಿಕಾರಿ ಪ್ರಪಂಚವಾಗಿದೆ. ನೀವು ತಿಳಿದುಕೊಂಡಿದ್ದೀರಿ - ಇವರು ಪವಿತ್ರ
ದೇವಿ-ದೇವತೆಗಳಾಗಿದ್ದಂತಹವರು ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ
ಕೆಳಗಡೆ ಬಂದಿದ್ದಾರೆ. ಈಗ ಪತಿತರಾಗಿರುವಕಾರಣ ನಮ್ಮನ್ನು ಈ ಪತಿತ ಪ್ರಪಂಚದಿಂದ ಬಿಡಿಸು ಎಂದು
ಕರೆಯುತ್ತಾರೆ. ಈಗ ತಂದೆಯು ಬಂದಿರುವಕಾರಣ ಇದು ಪತಿತ ಕೆಲಸವೆಂದು ನಿಮಗೆ ತಿಳಿದಿದೆ. ಮೊದಲು ನೀವು
ರಾವಣರಾಜ್ಯದಲ್ಲಿದ್ದ ಕಾರಣ ತಿಳಿದುಕೊಂಡಿರಲಿಲ್ಲ, ಈಗ ತಂದೆಯು ತಿಳಿಸುತ್ತಾರೆ - ಸುಖಧಾಮಕ್ಕೆ
ಹೋಗಬೇಕೆಂದರೆ ಅಪವಿತ್ರತೆಯನ್ನು ಬಿಡಿ. ನೀವು ಅರ್ಧಕಲ್ಪ ಅಪವಿತ್ರರಾಗಿದ್ದಿರಿ, ಅದೇ ತಲೆಯ ಮೇಲೆ
ಬಹಳ ಹೊರೆಯಿದೆ, ಹಾಗೆಯೇ ನೀವು ಬಹಳ ನಿಂದನೆಯನ್ನೂ ಮಾಡಿದ್ದೀರಿ. ತಂದೆಯನ್ನು ನಿಂದಿಸಿದ್ದರಿಂದ
ಇನ್ನೂ ಪಾಪವು ಹೆಚ್ಚಾಯಿತು. ಇದೂ ಸಹ ನಾಟಕದಲ್ಲಿ ನಿಮ್ಮ ಪಾತ್ರವಾಗಿದೆ. ನಿಮ್ಮ ಆತ್ಮಕ್ಕೂ ಸಹ 84
ಜನ್ಮಗಳ ಪಾತ್ರವು ಸಿಕ್ಕಿದೆ, ಅದನ್ನು ಅಭಿನಯಿಸಬೇಕು, ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು
ಅಭಿನಯಿಸಲೇಬೇಕು, ಮತ್ತೆ ನೀವೇಕೆ ಅಳಬೇಕು! ಸತ್ಯಯುಗದಲ್ಲಿ ಯಾರೂ ಅಳುವುದಿಲ್ಲ. ಆಮೇಲೆ ಜ್ಞಾನದ
ದೆಶೆ ಪೂರ್ಣವಾದ ನಂತರ ಅವರೇ ದುಃಖಿಗಳಾಗುತ್ತಾ ನಿಂದಿಸಲು ಪ್ರಾರಂಭ ಮಾಡುತ್ತಾರೆ. ಮೋಹಜೀತನ
ಕಥೆಯನ್ನೂ ಸಹ ನೀವು ಕೇಳಿದ್ದೀರಿ. ಅದು ಒಂದು ಸುಳ್ಳಿನ ಉದಾಹರಣೆಯನ್ನಾಗಿ ಮಾಡಿದ್ದಾರೆ.
ಸತ್ಯಯುಗದಲ್ಲಿ ಯಾರಿಗೂ ಅಕಾಲಮೃತ್ಯುವಾಗುವುದಿಲ್ಲ, ಮೋಹಜೀತರನ್ನಾಗಿ ಮಾಡುವವರು ಒಬ್ಬ
ತಂದೆಯಾಗಿದ್ದಾರೆ. ಪರಮಪಿತ ಪರಮಾತ್ಮನಿಗೆ ನೀವು ಮಕ್ಕಳಾಗುತ್ತೀರಿ, ಅವರು ನಿಮ್ಮನ್ನು ವಿಶ್ವದ
ಮಾಲೀಕರನ್ನಾಗಿ ಮಾಡುತ್ತಾರೆ. ತಮ್ಮನ್ನು ತಾವು ಕೇಳಿಕೊಳ್ಳಬೇಕು - ನಾವಾತ್ಮಗಳು ಅವರಿಗೆ
ಮಕ್ಕಳಾಗಿದ್ದೇವೆಯೇ? ಅಂತೆಯೇ ಲೌಕಿಕ ವಿದ್ಯೆಯಲ್ಲೇನು ಇಟ್ಟಿದ್ದೀರಿ? ಈ ಸಮಯದಲ್ಲಂತೂ ಪತಿತ
ಮನುಷ್ಯರ ಚಹರೆಯನ್ನೂ ನೋಡಬಾರದು, ಮಕ್ಕಳೂ ಸಹ ಸಂಗಮಯುಗದಲ್ಲಿದ್ದೇವೆಂದು ಬುದ್ಧಿಯಿಂದ
ತಿಳಿದುಕೊಳ್ಳಬೇಕು. ಒಬ್ಬ ತಂದೆಯನ್ನೇ ನೆನಪು ಮಾಡಬೇಕು ಹಾಗೂ ಎಲ್ಲರನ್ನೂ ನೋಡುತ್ತಿದ್ದರೂ
ನೋಡದಹಾಗೆ ಇರಬೇಕು. ನಾವು ಹೊಸಪ್ರಪಂಚವನ್ನು ನೋಡುತ್ತೇವೆ, ಹೊಸಸಂಬಂಧಗಳನ್ನೇ ನೋಡುತ್ತೇವೆ. ಹಳೆಯ
ಸಂಬಂಧವನ್ನು ನೋಡುತ್ತಿದ್ದರೂ ನೋಡುವುದಿಲ್ಲ. ಇದೆಲ್ಲವೂ ಭಸ್ಮವಾಗುವುದಾಗಿದೆ. ನಾವು ಒಂಟಿಯಾಗಿ
ಬಂದಿದ್ದೇವೆ, ನಂತರ ಒಂಟಿಯಾಗಿಯೇ ಹೋಗುತ್ತೇವೆ. ತಂದೆಯು ಒಮ್ಮೆಯೇ ಬಂದು ಜೊತೆಯಲ್ಲಿ ಕರೆದುಕೊಂಡು
ಹೋಗುತ್ತಾರೆ. ಇದನ್ನು ಶಿವನ ಒಡ್ಡೋಲಗವೆಂದು ಕರೆಯಲಾಗುವುದು. ಎಲ್ಲರೂ ಶಿವತಂದೆಗೆ
ಮಕ್ಕಳಾಗಿದ್ದಾರೆ, ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಮನುಷ್ಯರಿಂದ ದೇವತೆಯನ್ನಾಗಿ
ಮಾಡುತ್ತಾರೆ. ಮೊದಲು ವಿಷವನ್ನು ಕುಡಿಯುತ್ತಿದ್ದಿರಿ, ಈಗ ಅಮೃತವನ್ನು ಕುಡಿಯಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸ್ವಯಂನ್ನು
ಸಂಗಮಯುಗೀ ನಿವಾಸಿಯೆಂದು ತಿಳಿದು ನಡೆಯಬೇಕು. ಹಳೆಯ ಸಂಬಂಧಗಳನ್ನು ನೋಡುತ್ತಿದ್ದರೂ ನೋಡಬಾರದು.
ನಾವು ಒಂಟಿಯಾಗಿ ಬಂದಿದ್ದೇವೆ, ಒಂಟಿಯಾಗಿ ಹೋಗಬೇಕೆಂದು ಬುದ್ಧಿಯಲ್ಲಿರಬೇಕು.
2. ಆತ್ಮ ಹಾಗೂ
ಶರೀರವೆರಡನ್ನೂ ಪವಿತ್ರವನ್ನಾಗಿ ಮಾಡಿಕೊಳ್ಳಲು ಆತ್ಮವನ್ನು ನೋಡುವ ಅಭ್ಯಾಸ ಮಾಡಿಕೊಳ್ಳಬೇಕು.
ಅಪವಿತ್ರ ದೃಷ್ಟಿಯನ್ನು ಸಮಾಪ್ತಿ ಮಾಡಬೇಕು. ಜ್ಞಾನ ಹಾಗೂ ಯೋಗದಿಂದ ತಮ್ಮ ಶೃಂಗಾರ ಮಾಡಿಕೊಳ್ಳಬೇಕು.
ವರದಾನ:
ಮನ್ಮನಾಭವದ
ಅಲೌಕಿಕ ವಿಧಿಯಿಂದ ಮನೋರಂಜನೆ ಆಚರಿಸುವಂತಹ ತಂದೆ ಸಮಾನ ಭವ
ಸಂಗಮಯುಗದಲ್ಲಿ
ನೆನಪಾರ್ಥ ಆಚರಿಸುವುದು ಅರ್ಥಾತ್ ತಂದೆ ಸಮಾನ ಆಗುವುದು. ಇದು ಸಂಗಮಯುಗದ ಶೋಭೆಯಾಗಿದೆ. ಚೆನ್ನಾಗಿ
ಆಚರಿಸಿ ಆದರೆ ತಂದೆಯ ಜೊತೆ ಮಿಲನ ಮಾಡುತ್ತಾ ಆಚರಿಸಿ. ಕೇವಲ ಮನೋರಂಜನೆಯ ರೂಪದಿಂದಲ್ಲ ಆದರೆ
ಮನ್ಮನಾಭವದಲ್ಲಿರುತ್ತಾ ಮನೋರಂಜನೆ ಆಚರಿಸಿ. ಅಲೌಕಿಕ ವಿಧಿಯಿಂದ ಅಲೌಕಿಕತೆಯ ಮನೋರಂಜನೆ
ಅವಿನಾಶಿಯಾಗಿಬಿಡುವುದು. ಸಂಗಮಯುಗಿ ದೀಪಾವಳಿಯ ವಿಧಿ-ಹಳೆಯ ಖಾತೆಯನ್ನು ಸಮಾಪ್ತಿಮಾಡುವುದಾಗಿದೆ,
ಪ್ರತಿ ಸಂಕಲ್ಪ. ಪ್ರತಿ ಘಳಿಗೆ ಹೊಸತನ ಅರ್ಥಾತ್ ಅಲೌಕಿಕವಾಗಿರಲಿ. ಹಳೆಯ ಸಂಕಲ್ಪ,
ಸಂಸ್ಕಾರ-ಸ್ವಭಾವ, ಚಲನೆ-ವಲನೆ ಇದು ರಾವಣನ ಸಾಲವಾಗಿದೆ ಇದನ್ನು ಒಂದೇ ದೃಡ ಸಂಕಲ್ಪದಿಂದ ಸಮಾಪ್ತಿ
ಮಾಡಿ.
ಸ್ಲೋಗನ್:
ಮಾತುಗಳನ್ನು
ನೋಡುವ ಬದಲು ಸ್ವಯಂ ಅನ್ನು ಹಾಗೂ ತಂದೆಯನ್ನು ನೋಡಿ.