01.12.24    Avyakt Bapdada     Kannada Murli    18.01.2003     Om Shanti     Madhuban


“ಬ್ರಾಹ್ಮಣ ಜನ್ಮದ ಸ್ಮೃತಿಗಳ ಮುಖಾಂತರ ಸಮರ್ಥರಾಗಿ ಸರ್ವರನ್ನು ಸಮರ್ಥರನ್ನಾಗಿ ಮಾಡಿರಿ”


ಇಂದು ನಾಲ್ಕೂ ಕಡೆಯ ಸರ್ವ ಸ್ನೇಹಿ ಮಕ್ಕಳ ಸ್ನೇಹದ ಮಧುರಾತಿ ಉಧುರ ನೆನಪಿನ ಭಿನ್ನ-ಭಿನ್ನವಾದ ಮಾತು, ಸ್ನೇಹದ ಮುತ್ತುಗಳ ಮಾಲೆಯು ಬಾಪ್ದಾದಾರವರ ಬಳಿ ಅಮೃತವೇಳೆಗೆ ಮೊದಲೇ ತಲುಪಿತ್ತು. ಮಕ್ಕಳ ಸ್ನೇಹ ಬಾಪ್ದಾದಾರವರನ್ನು ಸ್ನೇಹದ ಸಾಗರದಲ್ಲಿ ಸಮಾವೇಶ ಮಾಡುತ್ತದೆ. ಪ್ರತಿಯೊಬ್ಬ ಮಕ್ಕಳಲ್ಲಿ ಸ್ನೇಹದ ಶಕ್ತಿ ಅಪಾರವಾಗಿದೆ ಎನ್ನುವುದನ್ನು ಬಾಪ್ದಾದಾರವರು ನೋಡಿದರು. ಈ ಸ್ನೇಹದ ಶಕ್ತಿ ಪ್ರತಿಯೊಂದು ಮಕ್ಕಳನ್ನು ಸಹಜ ಯೋಗಿಯನ್ನಾಗಿ ಮಾಡುತ್ತದೆ. ಸ್ನೇಹದ ಆಧಾರದಲ್ಲಿ ಸರ್ವ ಆಕರ್ಷಣೆಗಳಿಂದ ಭಿನ್ನರಾಗಿ ಮುಂದೆ ನಡೆಯುತ್ತಿದ್ದೀರಿ. ಬಾಪ್ದಾದಾ ಹಾಗೂ ವಿಶೇಷ ಆತ್ಮಗಳ ಮುಖಾಂತರ ಭಿನ್ನ- ಮತ್ತು ಪ್ರೀತಿಯ ಸ್ನೇಹದ ಅನುಭವ ಆಗುತ್ತಿಲ್ಲ ಎಂದು ಹೇಳುವ ಯಾವುದೇ ಒಂದು ಮಗುವನ್ನು ನೋಡಿಲ್ಲ. ಪ್ರತಿಯೊಬ್ಬ ಬ್ರಾಹ್ಮಣ ಆತ್ಮದ, ಬ್ರಾಹ್ಮಣ ಜೀವನದ ಆದಿ ಕಾಲ ಸ್ನೇಹದ ಶಕ್ತಿಯದ ಮುಖಾಂತರವೇ ಆಗಿದೆ. ಬ್ರಾಹ್ಮಣ ಜನ್ಮದಲ್ಲಿ ಈ ಸ್ನೇಹದ ಶಕ್ತಿ ವರದಾನವಾಗಿ ಮುಂದುವರೆಸುತ್ತದೆ. ಅಂದಾಗ ಇಂದಿನ ದಿನ ವಿಶೇಷ ತಂದೆ ಮತ್ತು ಮಕ್ಕಳ ಸ್ನೇಹದ ದಿನವಾಗಿದೆ. ಪ್ರತಿಯೊಬ್ಬರು ತಮ್ಮ ಮನಸ್ಸಿನಲ್ಲಿ ಸ್ನೇಹದ ಮುತ್ತುಗಳ ಮಾಲೆಯನ್ನು ಬಹಳ-ಬಹಳ ಬಾಪ್ದಾದಾರವರಿಗೆ ತೊಡಿಸಿದಿರಿ ಮತ್ತು ಶಕ್ತಿಗಳು ಇಂದಿನ ದಿನ ಗುಪ್ತವಾಗಿದೆ. ಆದರೆ ಸ್ನೇಹದ ಶಕ್ತಿ ಪ್ರತ್ಯಕ್ಷವಾಗಿದೆ. ಬಾಪ್ದಾದಾ ಮಕ್ಕಳ ಸ್ನೇಹದ ಸಾಗರದಲ್ಲಿ ತಲ್ಲೀನರಾಗಿದ್ದಾರೆ.

ಇಂದಿನ ದಿನ ಸ್ಮೃತಿಯ ದಿವಸವಾಗಿದೆ ಎಂದು ಹೇಳುತ್ತೀರಿ. ಸ್ಮೃತಿಯ ದಿವಸ ಕೇವಲ ಬ್ರಹ್ಮಾತಂದೆಯ ಸ್ಮೃತಿಯ ದಿವಸವಲ್ಲ ಆದರೆ ಬಾಪ್ದಾದಾ ಹೇಳುತ್ತಾರೆ ಇಂದು ಮತ್ತು ಸದಾ ನೆನಪು ಇಟ್ಟುಕೊಳ್ಳಬೇಕು ಬಾಪ್ದಾದಾ ಬ್ರಾಹ್ಮಣ ಜನ್ಮವನ್ನು ತೆಗುದುಕೊಳ್ಳತ್ತಲೇ ಆದಿಯಿಂದ ಇಲ್ಲಿಯತನಕ ಯಾವ-ಯಾವ ಸ್ಮೃತಿಗಳನ್ನು ತರಿಸಿದ್ದಾರೆ. ಆ ಸ್ಮೃತಿಗಳ ಮಾಲೆಯನ್ನು ನೆನಪು ಮಾಡಿ, ಬಹಳ ದೊಡ್ಡ ಮಾಲೆಯಾಗುತ್ತದೆ. ಎಲ್ಲದಕ್ಕಿಂತ ಮೊದಲನೆಯ ಸ್ಮೃತಿ ಎಲ್ಲರಿಗೂ ಯಾವುದು ಸಿಕ್ಕಿದೆ? ಮೊದಲನೆಯ ಪಾಠ ನೆನಪು ಇದೆಯಲ್ಲವೇ! ನಾನು ಯಾರು? ಈ ಸ್ಮೃತಿಯೇ ಹೊಸ ಜನ್ಮವನ್ನು ಕೊಟ್ಟಿದೆ, ವೃತ್ತಿ-ದೃಷ್ಟಿ-ಸ್ಕøತಿಯನ್ನು ಪರಿವರ್ತನೆ ಮಾಡಿದೆ. ಈ ರೀತಿಯ ಸ್ಮೃತಿಗಳು ನೆನಪಿಗೆ ಬರುತ್ತಲೇ ಆತ್ಮೀಯ ಖುಷಿಯ ಹೊಳಪು ನಯನಗಳಲ್ಲಿ ಮುಖದಲ್ಲಿ ಬರುತ್ತದೆ. ನೀವು ಮಕ್ಕಳು ಸ್ಮೃತಿಗಳನ್ನು ನೆನಪು ಮಾಡುತ್ತೀರಿ ಮತ್ತು ಭಕ್ತರು ಮಾಲೆಯನ್ನು ಸ್ಮರಣೆ ಮಾಡುತ್ತಾರೆ. ಒಂದೇ ಸ್ಮೃತಿ ಅಮೃತವೇಳೆಯಿಂದ ಕರ್ಮಯೋಗಿಗಳಾಗುವ ಸಮಯದ ತನಕ ಪದೆ-ಪದೆ ನೆನಪು ಇದ್ದಾಗ ಸ್ಮೃತಿ ಸಮರ್ಥ ಸ್ವರೂಪವಾಗಿಬಿಡುತ್ತದೆ ಏಕೆಂದರೆ ಹೇಗೆ ಸ್ಮೃತಿ ಇರುತ್ತದೆ ಹಾಗೆಯೇ ಸಮರ್ಥತೆ ಸ್ವತಃ ಬರುತ್ತದೆ. ಆದ್ದರಿಂದ ಇಂದಿನ ದಿನವನ್ನು ಸ್ಮೃತಿಯ ದಿನದ ಜೊತೆ-ಜೊತೆಗೆ ಸಮರ್ಥತೆಯ ದಿನ ಎಂದು ಹೇಳಲಾಗುತ್ತದೆ. ಬ್ರಹ್ಮಾ ತಂದೆ ಎದುರಿಗೆ ಬರುತ್ತಲೇ ತಂದೆಯ ದೃಷ್ಟಿ ಬೀಳುತ್ತಲೇ ಆತ್ಮಗಳಲ್ಲಿ ಸಮರ್ಥತೆ ಬರುತ್ತದೆ. ಎಲ್ಲರೂ ಅನುಭವಿಗಳು ಆಗಿದ್ದೀರಿ. ಎಲ್ಲರೂ ಅನುಭವಿಗಳು ಆಗಿದ್ದೀರಲ್ಲವೇ! ಸಾಕಾರ ರೂಪದಲ್ಲಿ ನೋಡಿರಬಹುದು, ಆವ್ಯಕ್ತರೂಪದ ಪಾಲನೆಯಿಂದ ಪಾಲನೆಯನ್ನು ತೆಗೆದುಕೊಳ್ಳುತ್ತಾ ಅವ್ಯಕ್ತ ಸ್ಥಿತಿಯ ಅನುಭವ ಮಾಡುತ್ತಿರಿ, ಸೆಕೆಂಡಿನಲ್ಲಿ ಮನಸ್ಸಿನಿಂದ ಬಾಪ್ದಾದಾ ಎಂದು ಹೇಳಿದಿರಿ ಮತ್ತು ಸಮರ್ಥತೆ ಸ್ವತಃ ಬರುತ್ತದೆ ಆದ್ದರಿಂದ ಓ ಸಮರ್ಥ ಆತ್ಮಗಳೇ! ಈಗ ಅನ್ಯ ಆತ್ಮಗಳನ್ನು ತಮ್ಮ ಸಮರ್ಥತೆಯಿಂದ ಸಮರ್ಥರನ್ನಾಗಿ ಮಾಡಿರಿ. ಉಮ್ಮಂಗ ಇದೆಯಲ್ಲವೇ! ಉಮ್ಮಂಗ ಇದೆಯೇ, ಏಕೆಂದರೆ ಅಸಮರ್ಥರನ್ನು ಸಮರ್ಥರನ್ನಾಗಿ ಮಾಡಬೇಕಲ್ಲವೇ! ನಾಲ್ಕೂ ಕಡೆ ಬಲಹೀನ ಆತ್ಮಗಳನ್ನು ಸಮರ್ಥರನ್ನಾಗಿ ಮಾಡುವ ಉಮ್ಮಂಗ ಚೆನ್ನಾಗಿದೆ ಎನ್ನುವುದನ್ನು ಬಾಪ್ದಾದಾರವರು ನೋಡಿದರು.

ಶಿವರಾತ್ರಿಯ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡುತ್ತಿದ್ದೀರಿ. ಎಲ್ಲರಿಗೂ ಉಮ್ಮಂಗ ಇದೆಯಲ್ಲವೇ! ಉಮ್ಮಂಗ ಇದೆಯೇ? ಯಾರಿಗೆ ಉಮ್ಮಂಗ ಇದೆ - ನಾವು ಈ ಶಿವರಾತ್ರಿಯಲ್ಲಿ ಕಮಾಲ್ ಮಾಡುತ್ತೇವೆ ಎನ್ನುವವರು ಕೈಯನ್ನು ಎತ್ತಿ. ಈ ರೀತಿ ಕಮಾಲ್ ಧಮಾಲನ್ನು ಸಮಾಪ್ತಿ ಮಾಡುತ್ತದೆ. ಜಯ- ಜಯಕಾರವಾಗಬೇಕು. ವಾಹ್! ವಾಹ್! ಸಮರ್ಥ ಆತ್ಮಗಳೇ ವಾಹ್! ಎಲ್ಲಾ ಜೋನಿನವರು ಪ್ರೋಗ್ರಾಮನ್ನು ಮಾಡಿದ್ದೀರಲ್ಲವೇ! ಪಂಜಾಬಿನವರು ಮಾಡಿದ್ದೀರಲ್ಲವೇ! ಚೆನ್ನಾಗಿದೆ. ಅಲೆದಾಡುತ್ತಿರುವ ಆತ್ಮಗಳಿಗೆ, ಬಾಯಾರಿರುವ ಆತ್ಮಗಳಿಗೆ, ಅಶಾಂತ ಆತ್ಮಗಳಿಗೆ ಈ ರೀತಿ ಆತ್ಮಗಳಿಗೆ ಬೊಗಸೆಯಷ್ಟಾದರೂ ಕೊಡಿರಿ ಏಕೆಂದರೆ ಅವರೂ ಸಹ ನಿಮ್ಮ ಸಹೋದರ-ಸಹೋದರಿಯರಾಗಿದ್ದಾರೆ ಅಂದಾಗ ತಮ್ಮ ಸಹೋದರರ ಮೇಲೆ, ಸಹೋದರಿಯರ ಮೇಲೆ ದಯೆ ಬರುತ್ತದೆಯಲ್ಲವೇ! ನೋಡಿ ಇಂದಿನ ದಿನ ಪರಮಾತ್ಮನನ್ನು ಅಪಾಯದ ಸಮಯದಲ್ಲಿ ನೆನಪು ಮಾಡುತ್ತಾರೆ ಆದರೆ ಶಕ್ತಿಯರನ್ನು, ದೇವತೆಗಳಲ್ಲಿಯೂ ಗಣೇಶನಿದ್ದಾನೆ, ಹನುಮಂತನಿದ್ದಾನೆ ಮತ್ತು ಇನ್ನೂ ದೇವತೆಗಳನ್ನು ಹೆಚ್ಚಾಗಿ ನೆನಪು ಮಾಡುತ್ತಾರೆ ಅಂದಾಗ ಅವರೆಲ್ಲಾ ಯಾರಾಗಿದ್ದಾರೆ? ನೀವೇಯಲ್ಲವೇ! ನಿಮ್ಮನ್ನು ಪ್ರತಿನಿತ್ಯ ನೆನಪು ಮಾಡುತ್ತಾರೆ - ಹೇ! ಕೃಪಾಳು, ದಯಾಳು ದಯೆ ತೋರಿಸಿ, ಕೃಪೆ ಮಾಡಿ ಎಂದು ಕರೆಯುತ್ತಾರೆ. ಸ್ವಲ್ಪವಾದರೂ ಒಂದು ಸುಖ-ಶಾಂತಿಯ ಹನಿಯನ್ನು ಕೊಡಿರಿ. ತಮ್ಮ ಮುಖಾಂತರ ಒಂದು ಹನಿಯ ಬಾಯಾರಿಕೆಯಲ್ಲಿ ಇದ್ದಾರೆ. ಅಂದಾಗ ದುಃಖಗಳ, ಬಾಯಾರಿರುವ ಆತ್ಮಗಳ ಶಬ್ದ ಹೇ! ಶಕ್ತಿಯರೇ, ಹೇ! ದೇವರೇ ನಿಮ್ಮ ಬಳಿ ತಲುಪಿಲ್ಲವೇ! ತಲುಪುತ್ತಿದೆಯಲ್ಲವೇ? ಬಾಪ್ದಾದಾ ಯಾವಾಗ ಕರೆಯನ್ನು ಕೇಳಿದರು ಆಗ ಶಕ್ತಿಯರನ್ನು ಮತ್ತು ದೇವರನ್ನು ನೆನಪು ಮಾಡುತ್ತಾರೆ ಅಂದಾಗ ಒಳ್ಳೆಯ ಕಾರ್ಯಕ್ರಮವನ್ನು ದಾದಿಗಳು ಮಾಡಿದ್ದಾರೆ, ಬಾಬಾರವರಿಗೆ ಇಷ್ಟವಾಗಿದೆ. ನಾಳೆಯಿಂದ ಸ್ಮೃತಿಯ ದಿವಸ ಸದಾಕಾಲಕ್ಕೋಸ್ಕರವಿದೆ, ಆದರೂ ಸಹ ಇಂದಿನ ದಿನ ಸ್ಮೃತಿಯ ಮುಖಾಂತರ ಸರ್ವ ಸಮರ್ಥತೆಗಳನ್ನು ವಿಶೇಷವಾಗಿ ಪ್ರಾಪ್ತಿ ಮಾಡಿಕೊಂಡಿರಿ. ಈಗ ನಾಳೆಯಿಂದ ಶಿವರಾತ್ರಿಯ ತನಕ ಬಾಪ್ದಾದಾ ನಾಲ್ಕೂ ಕಡೆಯ ಮಕ್ಕಳಿಗೆ ಹೇಳುತ್ತಾರೆ - ಈ ವಿಶೇಷ ದಿನ ಇದೇ ಲಕ್ಷ್ಯವನ್ನು ಇಟ್ಟುಕೊಳ್ಳಿ - ಹೆಚ್ಚಾಗಿ ಆತ್ಮಗಳಿಗೆ ಬೊಗಸೆಯ ಮನಸ್ಸಿನ ಮುಖಾಂತರ ಹಾಗೂ ವಾಣಿಯ ಮುಖಾಂತರ ಹಾಗೂ ಸಂಬಂಧ-ಸಂಪರ್ಕದ ಮುಖಾಂತರ ಯಾವುದಾದರೂ ವಿಧಿಯಿಂದ ಸಂದೇಶವನ್ನು ಅವಶ್ಯಕವಾಗಿ ಕೊಡಬೇಕು. ನಿಮ್ಮ ನಿಂದನೆಯನ್ನು ಕೆಳಗೆ ಇಳಿಸಿಕೊಳ್ಳಿ. ಈಗ ವಿನಾಶದ ದಿನಾಂಕವಂತೂ ಕಾಣಿಸುತ್ತಿಲ್ಲ ಎಂದು ಮಕ್ಕಳು ಯೋಚಿಸುತ್ತಾರೆ. ಅಂದಾಗ ಎಂದಾದರೂ ಒಂದು ದಿನ ನಿಂದನೆಯನ್ನು ಪೂರ್ಣ ಮಾಡುತ್ತಾರೆ. ಆ ರೀತಿ ಅಲ್ಲ, ಒಂದುವೇಳೆ ಈಗಿನಿಂದಲೇ ನಿಂದನೆಯನ್ನು ಪೂರ್ಣ ಮಾಡಿಲ್ಲವೆಂದಾಗ ಈ ನಿಂದನೆಯೂ ಸಿಗುತ್ತದೆ ತಾವು ಮೊದಲು ಏಕೆ ತಿಳಿಸಲಿಲ್ಲ. ನಾವು ಸ್ವಲ್ಪ ಏನಾದರೂ ಮಾಡಿಕೊಳ್ಳುತ್ತಿದ್ದೇವು, ಈಗ ಕೇವಲ ಅಹೋ! ಪ್ರಭು ಎಂದು ಹೇಳುತ್ತಾರೆ ಆದ್ದರಿಂದ ಅವರಿಗೂ ಸ್ವಲ್ಪ ಆಸ್ತಿಯ ಬೊಗಸೆಯನ್ನು ತೆಗೆದುಕೊಳ್ಳುವುದಕ್ಕೆ ಬಿಡಿ. ಅವರಿಗೂ ಸ್ವಲ್ಪ ಸಮಯವನ್ನು ಕೊಡಿ. ಒಂದು ಹನಿಯ ಬಾಯಾರಿಕೆಯನ್ನು ನೀಗಿಸಿರಿ. ಬಾಯಾರಿಕೆಗೋಸ್ಕರ ಒಂದು ಹನಿಯೂ ಬಹಳ ಮಹತ್ವವುಳ್ಳಂತದ್ದಾಗಿದೆ. ಅಂದಾಗ ನಾಳೆಯಿಂದ ಬಾಪ್ದಾದಾ ಬಟ್ಟೆಯ ಧ್ವಜವಲ್ಲ, ಡಂಗೂರವನ್ನು ಬಾರಿಸುತ್ತಿದ್ದಾರೆ - ಆತ್ಮಗಳಿಗೆ ಹೇ! ತೃಪ್ತ ಆತ್ಮಗಳೇ ಸಂದೇಶ ಕೊಡಿ, ಸಂದೇಶ ಕೊಡಿ. ಈ ಕಾರ್ಯಕ್ರಮವನ್ನು ಮಾಡಿರಿ. ಕಡಿಮೆ ಎಂದರೆ ಶಿವರಾತ್ರಿಯಲ್ಲಿ ತಂದೆಯ ಜನ್ಮದಿನದಿಂದ ಮುಖವನ್ನು ಸಿಹಿ ಮಾಡಿಕೊಳ್ಳಬೇಕು – ನಮಗೆ ಸಂದೇಶ ಸಿಕ್ಕಿದೆ. ಈ ದಿಲ್ಖುಷ್ ಮಿಠಾಯಿಯನ್ನು ಎಲ್ಲರಿಗೂ ತಿಳಿಸಿರಿ, ತಿನ್ನಿಸಿರಿ. ಸಾಧಾರಣ ಶಿವರಾತ್ರಿಯನ್ನು ಆಚರಣೆ ಮಾಡಬಾರದು. ಸ್ವಲ್ಪ ಚಮತ್ಕಾರವನ್ನು ಮಾಡಿ ತೋರಿಸಬೇಕು. ಉಮಂಗವಿದೆಯೇ? ಮೊದಲನೆಯ ಸಾಲಿನವರಿಗೆ ಇದೆಯೇ? ಬಹಳ ವಿಜೃಂಭಣೆಯಿಂದ ಮಾಡಿ. ಕಡಿಮೆ ಎಂದರೆ ಶಿವರಾತ್ರಿಯ ಎಷ್ಟು ಬಹಳ ಮಹಿಮೆ ಇದೆ ಎಂದಾದರೂ ತಿಳಿದುಕೊಳ್ಳಿರಿ. ನಮ್ಮ ತಂದೆಯ ಜನ್ಮದಿನವಾಗಿದೆ ಎಂದು ಕೇಳಿ ಖುಷಿಯನ್ನು ಆಚರಣೆ ಮಾಡಲಿ.

ಬಾಪ್ದಾದಾ ನೋಡುತ್ತಿದ್ದರು - ಅಮೃತವೇಳೆ ಮೆಜಾರಿಟಿ ನೆನಪು ಮತ್ತು ಈಶ್ವರೀಯ ಪ್ರಾಪ್ತಿಗಳ ನಶೆ ಬಹಳ ಚೆನ್ನಾಗಿತ್ತು. ಆದರೆ ಕರ್ಮಯೋಗಿಗಳ ಸ್ಥಿತಿಯಲ್ಲಿ ಯಾವ ಅಮೃತವೇಳೆಯ ನಶೆ ಇದೆ ಅದು ಸ್ವಲ್ಪ ಅಂತರ ಬರುತ್ತದೆ. ಕಾರಣ ಏನಾಗಿದೆ? ಕರ್ಮ ಮಾಡುತ್ತಾ ಆತ್ಮಾಭಿಮಾನಿ ಮತ್ತು ಕರ್ಮದ ಅಭಿಮಾನಿ ಎರಡೂ ಇರಬೇಕು. ಕರ್ಮ ಮಾಡುತ್ತಾ ನಾನು ಆತ್ಮನಾಗಿದ್ದೇನೆ ಎನ್ನುವ ವಿಧಿಯಾಗಿದೆ. ಯಾವ ಆತ್ಮನಾಗಿದ್ದೇನೆ. ಅದನ್ನು ತಿಳಿದುಕೊಂಡಿದ್ದೀರಲ್ಲವೇ, ಯಾವ ಭಿನ್ನ-ಭಿನ್ನ ಆತ್ಮಗಳ ಸ್ವಮಾನ ಸಿಕ್ಕಿದೆ ಆ ರೀತಿ ಆತ್ಮ ಮಾಡುವಂತಹವನಾಗಿ ಈ ಕಮೇರ್ಂದ್ರಿಯಗಳ ಮುಖಾಂತರ ಕರ್ಮ ಮಾಡಿಸುವವನಾಗಿದ್ದೇನೆ. ಈ ಕಮೇರ್ಂದ್ರಿಯಗಳು ಕರ್ಮಾಚಾರಿ ಆಗಿದೆ. ಆದರೆ ಕರ್ಮಾಚಾರಿಗಳಿಂದ ಕರ್ಮ ಮಾಡಿಸುವಂತಹ ನಾನು ಮಾಡಿಸುವವನಾಗಿದ್ದೇನೆ. ಭಿನ್ನನಾಗಿದ್ದೇನೆ. ಏನು, ಲೌಕಿಕದಲ್ಲಿಯೂ ಡೈರೆಕ್ಟ್ ತಮ್ಮ ಜೊತೆಗಾರರಿಂದ ನಿಮಿತ್ತ ಸೇವೆ ಮಾಡಿಸುವವರಿಂದ ಸೇವೆ ಮಾಡಿಸುತ್ತಾ, ಡೈರೆಕ್ಷನ್ ಕೊಡುತ್ತಾ, ಕೆಲಸವನ್ನು ಮಾಡುತ್ತಾ ನಾನು ನಿರ್ದೇಶಕನಾಗಿದ್ದೇನೆ ಎನ್ನುವುದನ್ನು ಮರೆತುಬಿಡುತ್ತಾರೆ. ತಮ್ಮನ್ನು-ತಾವು ಮಾಡಿಸುವಂತಹ ಶಕ್ತಿಶಾಲಿ ಆತ್ಮನಾಗಿದ್ದೇನೆ, ಈ ಆತ್ಮ ಮತ್ತು ಶರೀರ ಮಾಡುವುದಾಗಿದೆ ಮತ್ತು ಅವರು ಮಾಡಿಸುವವರಾಗಿದ್ದಾರೆ ಎನ್ನುವ ಈ ಸ್ಮೃತಿ ಮರ್ಜ್ ಆಗುತ್ತದೆ. ತಮ್ಮೆಲ್ಲರಿಗೂ, ಹಳೆಯ ಮಕ್ಕಳಿಗೂ ಸಹ ತಿಳಿದಿದೆ - ಬ್ರಹ್ಮಾತಂದೆಯು ಶುರು-ಶುರುವಿನಲ್ಲಿ ಏನು ಅಭ್ಯಾಸ ಮಾಡಿದರು? ಒಂದು ಡೈರಿ ಇತ್ತಲ್ಲವೇ? ಇಡೀ ದಿನದಲ್ಲಿ ನಾನು ಆತ್ತ, ಜಸೋದ ಆತ್ಮ, ಈ ಮಗು ಆತ್ಮವಾಗಿದೆ. ಆತ್ಮವಾಗಿದೆ, ಆತ್ಮವಾಗಿದೆ ಎನ್ನುವ ಒಂದೇ ಶಬ್ದವಿತ್ತು. ಈ ಅಡಿಪಾಯವೇ ಸದಾ ಕಾಲಕ್ಕೊಸ್ಕರ ಅಭ್ಯಾಸ ಮಾಡಿದರು ಅಂದಾಗ ಈ ಮೊದಲನೆಯ ಪಾಠ ನಾನು ಯಾರು? ಪದೆ-ಪದೆ ಇದರ ಅಭ್ಯಾಸ ಮಾಡಬೇಕು. ಚೆಕ್ ಮಾಡಿಕೊಳ್ಳಬೇಕು, ನಾನು ಆತ್ಮನಾಗಿದ್ದೇನೆ ಎನ್ನುವುದಲ್ಲ. ನಾನಾತ್ಮ ಮಾಡಿಸುವಂತಹವನಾಗಿ ಕರ್ಮ ಮಾಡಿಸುತ್ತಿದ್ದೇನೆ ಎಂದು ಅನುಭವ ಮಾಡಿ. ಮಾಡುವವನು ಬೇರೆ ಆಗಿದ್ದಾನೆ. ಮಾಡಿಸುವಂತಹವರು ಬೇರೆ ಆಗಿದ್ದಾರೆ. ಈ ಕಮೇರ್ಂದ್ರಿಯಗಳು ಕರ್ಮಾಚಾರಿ ಆಗಿದೆ ಎನ್ನುವುದು ಬ್ರಹ್ಮಾತಂದೆಯ ಎರಡನೆಯ ಅನುಭವ ಆಗಿದೆ. ಇದನ್ನು ಕೇಳಿದ್ದೀರಲ್ಲವೇ. ಅಂದಾಗ ಪ್ರತಿ ನಿತ್ಯ ರಾತ್ರಿಯ ಕಛೇರಿಯನ್ನು ಕೇಳಿದ್ದೀರಲ್ಲವೇ! ಅಂದಾಗ ಮಾಲೀಕರಾಗಿ ಈ ಕರ್ಮೇದ್ರಿಯ ರೂಪಿ ಕರ್ಮಾಚಾರಿಗಳಿಂದ ಸ್ಥಿತಿ-ಗತಿಯನ್ನು ಕೇಳುತ್ತಿದ್ದರಲ್ಲವೇ! ಅಂದಾಗ ಹೇಗೆ ಬ್ರಹ್ಮಾ ತಂದೆಯೇ ಈ ಅಭ್ಯಾಸದ ಅಡಿಪಾಯವನ್ನು ಬಹಳ ಪಕ್ಕಾ ಮಾಡಿಕೊಂಡಿದ್ದ, ಆದ್ದರಿಂದ ಯಾವ ಮಕ್ಕಳು ಅಂತಿಮದಲ್ಲಿ ಜೊತೆ ಇದ್ದರೂ ಅವರು ಏನು ಅನುಭವ ಮಾಡಿದರು? ತಂದೆ ಕಾರ್ಯವನ್ನು ಮಾಡುತ್ತಾ ಶರೀರದಲ್ಲಿ ಇದ್ದರೂ ಸಹ ಅಶರೀರಿ ಸ್ಥಿತಿಯಲ್ಲಿ ನಡೆಯುತ್ತಾ-ಓಡಾಡುತ್ತಿರುವ ಅನುಭವವಾಗುತ್ತಿತ್ತು. ಕರ್ಮದ ಲೆಕ್ಕವನ್ನು ಸಮಾಪ್ತಿ ಮಾಡಬೇಕಾಯಿತು. ಆದರೆ ಸಾಕ್ಷಿಯಾಗಿದ್ದರು, ಸ್ವಯಂ ಕರ್ಮದ ಲೆಕ್ಕಾಚಾರಕ್ಕೆ ವಶರಾಗಲಿಲ್ಲ, ಅನ್ಯರ ಕರ್ಮದ ಲೆಕ್ಕಾಚಾರ ಸಮಾಪ್ತಿ ಆಗುವ ಅನುಭವ ಮಾಡಿಸಲಿಲ್ಲ. ಬ್ರಹ್ಮಾ ತಂದೆ ಅವ್ಯಕ್ತರಾಗುವುದು ನಿಮಗೆ ತಿಳಿದಿರಲಿಲ್ಲ, ಗೊತ್ತಿರಲಿಲ್ಲವಲ್ಲವೇ! ಅಂದಾಗ ಅಷ್ಟು ಭಿನ್ನ, ಸಾಕ್ಷಿ, ಅಶರೀರಿ ಅರ್ಥಾತ್ ಕರ್ಮಾತೀತ ಸ್ಥಿತಿ ಬಹುಕಾಲದಿಂದ ಅಭ್ಯಾಸ ಮಾಡಿ ಆಗ ಅಂತಿಮದಲ್ಲಿಯೂ ಅದೇ ಸ್ವರೂಪ ಅನುಭವವಾಗುತ್ತದೆ. ಈ ಬಹಳ ಕಾಲದ ಅಭ್ಯಾಸವೇ ಕೆಲಸಕ್ಕೆ ಬರುತ್ತದೆ. ಅಂತಿಮದಲ್ಲಿ ದೇಹಬಾನವನ್ನು ಬಿಡುತ್ತೇವೆ ಎಂದು ಯೋಚಿಸಬೇಡಿ. ಬಹಳ ಕಾಲದ ಆಶರೀರಿತನದ, ದೇಹದಿಂದ ಭಿನ್ನ ಮಾಡಿಸುವ ಸ್ಥಿತಿಯ ಅನುಭವವಾಗಬೇಕು. ಅಂತಿಮ ಕಾಲದಲ್ಲಿ ಯುವಕರಾಗಿರಲಿ, ವೃದ್ಧರಾಗಿರಲಿ, ಆರೋಗ್ಯವಂತರಾಗಿರಲಿ, ಕಾಯಿಲೆ ಇರಲಿ, ಯಾರದ್ದೂ ಯಾವಾಗಲೂ ಸಹ ಬರಬಾರದು. ಆದ್ದರಿಂದ ಬಹಳ ಕಾಲದ ಅಭ್ಯಾಸ ಸಾಕ್ಷಿತನದ್ದಾಗಿದೆ, ಅದರ ಬಗ್ಗೆ ಗಮನವನ್ನು ಕೊಡಬೇಕು. ಎಷ್ಟೆ ಪ್ರಾಕೃತಿಕ ಅಪಾಯಗಳು ಬರಲಿ ಆದರೆ ಈ ಅಶರೀರಿತನದ ಸ್ಥಿತಿ ತಮ್ಮನ್ನು ಸಹಜವಾಗಿ ಭಿನ್ನ ಮತ್ತು ಪ್ರಿಯವನ್ನಾಗಿ ಮಾಡುತ್ತದೆ. ಆದ್ದರಿಂದ ಬಹಳ ಕಾಲದ ಶಬ್ದವನ್ನು ಬಾಪ್ದಾದಾ ಅಂಡರ್ಲೈನ್ ಮಾಡಿಸುತ್ತಾರೆ. ಏನೇ ಆಗಲಿ ಇಡೀ ದಿನದಲ್ಲಿ ಸಾಕ್ಷಿತನದ ಸ್ಥಿತಿಯ ಮಾಡಿಸುವಂತಹ ಸ್ಥಿತಿಯ, ಅಶರೀರಿ ತನದ ಸ್ಥಿತಿಯ ಅನುಭವ ಪದೆ-ಪದೆ ಮಾಡಿ, ಆಗ ಆಂತ್ ಮತಿ ಫರಿಸ್ಥಾ ಸೋ ದೇವತೆಗಳಾಗುವುದು ನಿಶ್ಚಿತವಾಗಿದೆ. ತಂದೆಯ ಸಮಾನವಾಗಬೇಕಾದರೆ ತಂದೆ ನಿರಾಕಾರ ಮತ್ತು ಫರಿಸ್ಥೆ ಆಗಿದ್ದರು. ಬ್ರಹ್ಮಾ ತಂದೆಯ ಸಮಾನ ಆಗಬೇಕು ಅರ್ಥಾತ್ ಫರಿಸ್ಥಾ ಸ್ಥಿತಿಯಲ್ಲಿ ಇರಬೇಕು. ಹೇಗೆ ಫರಿಶ್ತಾ ಸ್ವರೂಪವನ್ನು ಸಾಕಾರ ರೂಪದಲ್ಲಿ ನೋಡಿದರು. ಮಾತನ್ನು ಕೇಳುತ್ತಾ, ಮಾತನಾಡುತ್ತಾ, ಕಾರ್ಯ-ವ್ಯವಹಾರ ಮಾಡುತ್ತಾ ಹೇಗೆ ತಂದೆ ಶರೀರದಲ್ಲಿ ಇದ್ದರು ಶರೀರದಿಂದ ಭಿನ್ನ ಎನ್ನುವ ಅನುಭವ ಮಾಡಿದರು. ಕಾರ್ಯವನ್ನು ಬಿಟ್ಟು ಅಶರೀರಿಗಳಾಗುವುದು ಸ್ವಲ್ಪ ಸಮಯಕ್ಕೋಸ್ಕರ ಮಾತ್ರ ಸಾಧ್ಯ. ಆದರೆ ಕಾರ್ಯ ಮಾಡುತ್ತಾ, ಅಶರೀರಿಗಳಾಗಲು ಸಮಯವನ್ನು ತೆಗೆದು ಶಕ್ತಿಶಾಲಿ ಸ್ಥಿತಿಯ ಅನುಭವ ಮಾಡಬೇಕು. ತಾವೆಲ್ಲರೂ ಫರಿಸ್ಥೆಗಳು ಆಗಿದ್ದೀರಿ. ತಂದೆಯ ಮುಖಾಂತರ ಈ ಬ್ರಾಹ್ಮಣ ಜೀವನದ ಆಧಾರವನ್ನು ತೆಗೆದುಕೊಂಡು ಸಂದೇಶ ಕೊಡುವುದುಕ್ಕೋಸ್ಕರ ಸಾಕಾರದಲ್ಲಿ ಕಾರ್ಯ ಮಾಡುತ್ತಿದ್ದೀರಿ, ಫರಿಶ್ತಾ ಅರ್ಥಾತ್ ದೇಹದಲ್ಲಿದ್ದರೂ ದೇಹದಿಂದ ಭಿನ್ನ ಮತ್ತು ಈ ಉದಾಹರಣೆ ಬ್ರಹ್ಮಾ ತಂದೆಯನ್ನು ನೋಡಿದಿರಿ, ಅಸಂಭವವಲ್ಲ, ನೋಡಿದಿರಿ, ಅನುಭವ ಮಾಡಿದಿರಿ. ಯಾರೆಲ್ಲಾ ನಿಮಿತ್ತರಿದ್ದಾರೆ ಈಗ ವಿಸ್ತಾರ ಜಾಸ್ತಿ ಇದೆ. ಆದರೆ ಎಷ್ಟು ಬ್ರಹ್ಮಾತಂದೆಯ ಹೊಸ ಜ್ಞಾನ, ಹೊಸ ಜೀವನ, ಹೊಸ ಪ್ರಪಂಚವನ್ನು ಜವಾಬ್ದಾರಿ ಇತ್ತು, ಅಷ್ಟು ಈಗ ಯಾರಿಗೂ ಇಲ್ಲ ಅಂದಾಗ ಎಲ್ಲರ ಲಕ್ಷ್ಯ ಬ್ರಹ್ಮಾತಂದೆಗೆ ಸಮಾನ ಆಗುವುದು ಅರ್ಥಾತ್ ಫರಿಶ್ತೆಗಳು ಆಗುವುದಾಗಿದೆ. ಶಿವತಂದೆಯ ಸಮಾನ ಆಗುವುದು ಎಂದರೆ ನಿರಾಕಾರ ಸ್ಥಿತಿಯಲ್ಲಿ ಸ್ಥಿತರಾಗುವುದಾಗಿದೆ. ಶ್ರಮವಾಗುತ್ತದೆಯೇನು? ತಂದೆ ಮತ್ತು ಅಣ್ಣನ ಜೊತೆ ಪ್ರೀತಿ ಇದೆಯಲ್ಲವೇ! ಅಂದಾಗ ಯಾರ ಮೇಲೆ ಪ್ರೀತಿ ಇದೆ ಅವರ ರೀತಿ ಆಗಬೇಕು. ತಂದೆಯ ಸಮಾನ ಆಗಲೇಬೇಕು ಎನ್ನುವ ಸಂಕಲ್ಪ ಇದ್ದಾಗ ಶ್ರಮವಾಗುವುದಿಲ್ಲ. ಕೇವಲ ಪದೆ-ಪದೆ ಗಮನ ಕೊಡಿ. ಸಾಧಾರಣ ಜೀವನವಲ್ಲ. ಸಾಧಾರಣ ಜೀವನ ಜೀವಿಸುವಂತಹವರು ಬಹಳಷ್ಟು ಇದ್ದಾರೆ. ದೊಡ್ಡ- ದೊಡ್ಡ ಕಾರ್ಯ ಮಾಡುವಂತಹವರೂ ಸಹ ಬಹಳಷ್ಟು ಇದ್ದಾರೆ. ಆದರೆ ತಮ್ಮ ರೀತಿಯ ಕಾರ್ಯವನ್ನು ತಾವು ಬ್ರಾಹ್ಮಣ ಆತ್ಮಗಳನ್ನು ಬಿಟ್ಟರೆ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ.

ಇಂದು ಸ್ಮೃತಿಯ ದಿವಸದಲ್ಲಿ ಬಾಪ್ದಾದಾರವರ ಸಮಾನತೆಯಲ್ಲಿ ಸಮೀಪಕ್ಕೆ ಬನ್ನಿ, ಸಮೀಪ ಬನ್ನಿ, ಸಮೀಪ ಬನ್ನಿ ಎನ್ನುವ ವರದಾನವನ್ನು ಕೊಡುತ್ತಿದ್ದಾರೆ ಎಲ್ಲರೂ ಹದ್ದಿನಿಂದ ದೂರ, ಸಂಕಲ್ಪ, ಮಾತು, ಕರ್ಮ, ಸಂಬಂಧ-ಸಂಪರ್ಕ ಎಲ್ಲಾ ಹದ್ದಿನಿಂದ ದೂರ ತಮ್ಮ ಮನಸ್ಸಿನ ದೋಣಿಯನ್ನು ಈ ಹದ್ದಿನಿಂದ ದೂರ ಮಾಡಿ ಮುಕ್ತ ಮಾಡಬೇಕು. ಈಗಿನಿಂದಲೇ ಜೀವನದಲ್ಲಿ ಇದ್ದು ಮುಕ್ತ ಆರೀತಿ ಜೀವನ್ನುಕ್ಕಿಯ ಆಲೌಕಿಕ ಅನುಭವ ಬಹಳ ಕಾಲದಿಂದ ಮಾಡಬೇಕು. ಒಳ್ಳೆಯದು. ನಾಲ್ಕಾರೂ ಕಡೆಯ ಮಕ್ಕಳ ಪತ್ರ ಬಹಳ ಸಿಕ್ಕಿದೆ ಮತ್ತು ಮಧುಬನದವರ ಕ್ರೋಧಮುಕ್ತ ರಿಪೋರ್ಟ್, ಸಮಾಚಾರ ಬಾಪ್ದಾದಾರವರ ಬಳಿ ತಲುಪಿದೆ. ಬಾಪ್ದಾದಾ ಧೈರ್ಯವನ್ನು ನೋಡಿ ಖುಷಿ ಆಗುತ್ತಾರೆ, ಮತ್ತು ಮುಂದಕ್ಕೋಸ್ಕರ ಸದಾ ಮುಕ್ತರಾಗುವುದಕ್ಕೋಸ್ಕರ ಸಹನ ಶಕ್ತಿಯ ಕವಚವನ್ನು ಹಾಕಿಕೊಳ್ಳಬೇಕು. ಅಂದಾಗ ಎಷ್ಟೇ ಯಾರದಾರೂ ಪ್ರಯತ್ನ ಪಡಲಿ ಆದರೆ ತಾವು ಸದಾ ಸುರಕ್ಷಿತವಾಗಿರುತ್ತೀರಿ.

ಈ ರೀತಿ ಸರ್ವ ಧೃಡ ಸಂಕಲ್ಪಧಾರೀ, ಸದಾ ಸ್ಮೃತಿ ಸ್ವರೂಪ ಆತ್ಮಗಳಿಗೆ, ಸದಾ ಸರ್ವ ಸಮರ್ಥತೆಗಳನ್ನು ಸಮಯದಲ್ಲಿ ಕಾರ್ಯದಲ್ಲಿ ಉಪಯೋಗಿಸುವಂತಹ ವಿಶೇಷ ಆತ್ಮಗಳಿಗೆ ಸದಾ ಸರ್ವ ಆತ್ಮಗಳ ಮೇಲೆ ದಯಾ ಹೃದಯಿ ಆತ್ಮಗಳಿಗೆ, ಸದಾ ಬಾಪ್ದಾದಾ ಸಮಾನ ಆಗುವ ಸಂಕಲ್ಪವನ್ನು ಸಾಕಾರ ರೂಪದಲ್ಲಿ ತರುವಂತಹ ಈ ರೀತಿ ಬಹಳ- ಬಹಳ-ಬಹಳ ಪ್ರಿಯ ಮತ್ತು ಭಿನ್ನ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಮತ್ತು ನಮಸ್ತೆ.

ಡಬಲ್ ವಿದೇಶಿಯರು: ಡಬಲ್ ವಿದೇಶಿಯರಿಗೆ ಡಬಲ್ ನಶೆ ಇದೆ. ಏಕೆ ಡಬಲ್ ನಶೆ ಇದೆ? ಏಕೆಂದರೆ ಹೇಗೆ ತಂದೆ ದೂರದೇಶದವರಾಗಿದ್ದಾರೆ ಹಾಗೆಯೇ ನಾವು ದೂರದೇಶದಿಂದ ಬಂದಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ಬಾಪ್ ದಾದಾ ಡಬಲ್ ವಿದೇಶಿ ಮಕ್ಕಳ ಒಂದು ವಿಶೇಷತೆಯನ್ನು ನೋಡಿದರು - ದೀಪದಿಂದ-ದೀಪವನ್ನು ಬೆಳಗುತ್ತಾ ಅನೇಕ ದೇಶಗಳಲ್ಲಿ ಬಾಪ್ದಾದಾರವರ ಜಾಗೃತರಾಗಿರುವ ದೀಪಗಳ ದೀಪಾವಳಿಯನ್ನು ಆಚರಣೆ ಮಾಡಿದರು. ಈಗಲೂ ಸಹ ಎಷ್ಟು ದೇಶದವರು ಬಂದಿದ್ದಾರೆ ಎಂದು ಕೇಳಿದರು. [35] 35 ದೇಶದವರು ಬಂದಿದ್ದಾರೆ. ಈ ಸರಿದಿಯಲ್ಲಿ ಮತ್ತು ಹೊರಗೆ ಇನ್ನೆಷ್ಟು ಇದ್ದಾರೆ? ಅಂದಾಗ ಡಬಲ್ ವಿದೇಶಿಯರಿಗೆ ಸಂದೇಶ ಕೊಡುವ ಆಸಕ್ತಿ ಚೆನ್ನಾಗಿದೆ. ಪ್ರತಿಯೊಂದು ಗ್ರೂಪಿನಲ್ಲಿ 35-40 ದೇಶಗಳು ಬರುವುದನ್ನು ಬಾಪ್ದಾದಾ ನೋಡಿದರು. ಶುಭಶಯಗಳು, ಸದಾ ಸ್ವಯಂ ಹಾರುತ್ತಿರಿ ಮತ್ತು ಫರಿಸ್ಥೆಗಳಾಗಿ ಹಾರುತ್ತಾ-ಹಾರುತ್ತಾ ಸಂದೇಶವನ್ನು ಕೊಡಿ. ಒಳ್ಳೆಯದು. ತಾವು 35 ದೇಶದವರನ್ನು ಬಾಪ್ದಾದಾ ನೋಡುತ್ತಿಲ್ಲ. ಬೇರೆಲ್ಲಾ ದೇಶದವರನ್ನು ತಮ್ಮ ಜೊಕೆ ನೋಡುತ್ತಿದ್ದಾರೆ ಅಂದಾಗ ನಂಬರ್ವನ್ ತಂದೆಯ ಸಮಾನ ಆಗುವಂತಹವರು ಆಗಿದ್ದೀರಲ್ಲವೇ! ನಂಬರ್ವನ್ನಿನ ನಂಬರ್ವಾರ್ ಆಗುವಂತಹವರಾಗಿದ್ದೀರಾ? ನಂಬರ್ವನ್? ನಂಬರ್ವಾರಲ್ಲ. ನಂಬರ್ವನ್ ಆಗುವುದು ಎಂದರೆ ಅರ್ಥ ಪ್ರತಿಯೊಂದು ಸಮಯ ವಿಜಯಿಗಳಾಗುವಂತಹವರು. ಯಾರು ವಿಜಯಿಗಳಾಗುತ್ತಾರೋ ಅವರೇ ನಂಬರ್ವನ್ ಆಗುತ್ತಾರೆ. ಆ ರೀತಿ ಇದ್ದೀರಲ್ಲವೇ? ಬಹಳ ಒಳ್ಳೆಯದು. ವಿಜಯಿಗಳಾಗಿ ಮತ್ತು ಸದಾ ವಿಜಯಿಗಳಾಗುವಂತಹವರು. ಒಳ್ಳೆಯದು. ಬೇರೆಲ್ಲರಿಗೂ ಎಲ್ಲೆಲ್ಲಿ ಹೋದರೋ ಈ ಸ್ಮೃತಿಯನ್ನು ಕೊಡಿಸಬೇಕು - ಎಲ್ಲಾ ಡಬಲ್ ವಿದೇಶಿಗಳು ನಂಬರ್ವನ್ ಆಗಬೇಕು.

ಒಳ್ಳೆಯದು. ಬಾಪ್ದಾದಾ ಎಲ್ಲಾ ಮಾತೆಯರಿಗೂ, ಗೋಪಾಲನ ಪ್ರೀತಿ ಮಾತೆಯರಿಗೆ ಬಹಳ-ಬಹಳ ಹೃದಯದಿಂದ ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ ಮತ್ತು ಪಾಂಡವರು ಯುವಕರಾಗಿರಬಹುದು, ಪ್ರವೃತ್ತಿಯಲ್ಲಿ ಇರುವಂತಹವರಾಗಿರಬಹುದು, ಪಾಂಡವರು ಸದಾ ಪಾಂಡವಪತಿ ಜೊತೆಯಲ್ಲಿ ಇರಬೇಕು, ಆ ರೀತಿ ಜೊತೆಗಾರ ಪಾಂಡವರಿಗೆ ಬಾಪ್ದಾದಾ ಬಹಳ-ಬಹಳ ನೆನಪು ಪ್ರೀತಿಯನ್ನು ಕೊಡುತ್ತಿದ್ದಾರೆ.

ದಾದಿಯರ ಜೊತೆ: ಇಂದಿನ ದಿನ ಏನು ನೆನಪಿಗೆ ಬರುತ್ತದೆ? ವಿಲ್ಪವರ್ ಸಿಕ್ಕಿತಲ್ಲವೇ! ವಿಲ್ಪವರ್ಸಿನ ವರದಾನವಾಗಿದೆ. ಬಹಳ ಒಳ್ಳೆಯ ಪಾತ್ರ ಮಾಡಿದಿರಿ ಅದಕ್ಕೋಸ್ಕರ ಶುಭಾಶಯಗಳು. ಎಲ್ಲರ ಆಶೀರ್ವಾದ ತಮಗೆ ಬಹಳಷ್ಟು ಇದೆ. ತಮ್ಮನ್ನು ನೋಡಿ ಎಲ್ಲರೂ ಖುಷಿ ಆಗುತ್ತಾರೆ. ಮಾತನಾಡಿ ಅಥವಾ ಮಾತನಾಡದೆ ಇರಿ. ತಮಗೆ ಏನಾದರೂ ಆದರೆ ನಮಗೆ ಆಗುತ್ತಿದೆ ಎಂದು ಎಲ್ಲರೂ ತಿಳಿದುಕೊಳ್ಳುತ್ತಾರೆ. ಅಷ್ಟು ಪ್ರೀತಿ ಇದೆ. ಎಲ್ಲರಿಗೂ ಬಹಳ ಪ್ರೀತಿ ಇದೆ. ಈ ಪ್ರೀತಿಯೇ ಎಲ್ಲರನ್ನು ನಡೆಸುತ್ತಿದೆ. ಧಾರಣೆ ಕಡಿಮೆ ಇರಲಿ ಅಥವಾ ಜಾಸ್ತಿ ಇರಲಿ ಆದರೆ ಪ್ರೀತಿಯಂತೂ ನಡೆಸುತ್ತಿದೆ. ಬಹಳ ಒಳ್ಳೆಯದು.

ಈಶೂ ದಾದಿಯ ಜೊತೆ: ಇವರೂ ಸಹ ಲೆಕ್ಕವನ್ನು ಸಮಾಪ್ತಿ ಮಾಡಿದರು. ಯಾವುದೇ ಮಾತು ಇಲ್ಲ. ಇವರ ಸಹಜ ಪುರುಷಾರ್ಥ, ಸಹಜ ಲೆಕ್ಕ ಸಮಾಪ್ತಿ. ಸಹಜವಾಯಿತು. ಮಲಗಿಕೊಳ್ಳುತ್ತಾ, ಮಲಗಿಕೊಳ್ಳುತ್ತಾ ವಿಷ್ಣುವಿನ ರೀತಿ ವಿಶ್ರಾಂತಿ ಸಿಕ್ಕಿತು. ಒಳ್ಳೆಯದು. ಆದರೂ ಸಹ ಸಾಕಾರದಿಂದ ಇಲ್ಲಿಯ ತನಕ ಯಜ್ಞದ ರಕ್ಷಕರಾಗಿದ್ದಾರೆ ಅಂದಾಗ ಯಜ್ಞದ ರಕ್ಷಕರಾಗಿರುವವರಿಗೆ ಬಹಳ ಆಶೀರ್ವಾದಗಳು ಸಿಗುತ್ತದೆ.

ಎಲ್ಲಾ ದಾದಿಯರು ಬಾಪ್ದಾದಾರವರಿಗೆ ಬಹಳ-ಬಹಳೆ ಸಮೀಪ ಇದ್ದಾರೆ. ಸಮೀಪರತ್ನವಾಗಿದ್ದಾರೆ ಮತ್ತು ಎಲ್ಲರಿಗೂ ದಾದಿಯರ ಬೆಲೆ ಇದೆ. ಸಂಘಟನೆಯು ಚೆನ್ನಾಗಿದೆ. ತಾವು ದಾದಿಯರ ಸಂಘಟನೆ ಇಷ್ಟು ವರ್ಷ ಯಜ್ಞದ ರಕ್ಷಣೆ ಮಾಡಿದಿರಿ ಮತ್ತು ಮಾಡುತ್ತೀರಿ. ಈ ಏಕತೆ ಎಲ್ಲಾ ಸಫಲತೆಗೆ ಆಧಾರವಾಗಿದೆ. ತಂದೆಯನ್ನು ಮಧ್ಯದಲ್ಲಿ ಇಟ್ಟಿದ್ದಾರೆ. ಈ ಗಮನವನ್ನು ಬಹಳ ಚೆನ್ನಾಗಿ ಇಟ್ಟಿದ್ದಾರೆ. ಒಳ್ಳೆಯದು. ಎಲ್ಲರೂ ಚೆನ್ನಾಗಿದ್ದೀರಾ.

ವರದಾನ:
ಸರ್ವ ಸಂಬಂಧಗಳಿಂದ ಒಬ್ಬ ತಂದೆಯನ್ನು ತಮ್ಮ ಜೊತೆಗಾರನನ್ನಾಗಿ ಮಾಡಿಕೊಳ್ಳುವಂತಹ ಸಹಜ ಪುರುಷಾರ್ಥಿ ಭವ.

ತಂದೆ ಸ್ವಯಂ ಸರ್ವ ಸಂಬಂಧಗಳಲ್ಲಿ ಜೊತೆಯನ್ನು ನಿಭಾಯಿಸಲು ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ಎಂತಹ ಸಮಯ ಅಂತಹ ಸಂಬಂಧದಿಂದ ತಂದೆಯ ಜೊತೆಯಲ್ಲಿರಿ ಮತ್ತು ಜೊತೆಗಾರನನ್ನಾಗಿ ಮಾಡಿಕೊಳ್ಳಿ. ಎಲ್ಲಿ ಸದಾ ಜೊತೆಯಿರುತ್ತಾರೆ ಮತ್ತು ಜೊತೆಗಾರರಾಗಿಯೂ ಇರುತ್ತಾರೆ, ಅಲ್ಲಿ ಯಾವುದೇ ಕಷ್ಟವಾಗಲು ಸಾಧ್ಯವಿಲ್ಲ. ಯಾವಾಗ ನಿಮ್ಮನ್ನು ಒಬ್ಬಂಟಿಗರು ಎಂದು ಅನುಭವ ಮಾಡುವಿರಿ ಆ ಸಮಯದಲ್ಲಿ ತಂದೆಯ ಬಿಂದು ರೂಪವನ್ನು ನೆನಪು ಮಾಡಿಕೊಳ್ಳಬೇಡಿ, ಪ್ರಾಪ್ತಿಗಳ ಪಟ್ಟಿಯನ್ನು ಎದುರಿಗೆ ತಂದುಕೊಳ್ಳಿ, ಭಿನ್ನ-ಭಿನ್ನ ಸಮಯದ ರಮಣೀಕತೆಯ ಅನುಭವದ ಕಥೆಗಳನ್ನು ಸ್ಮೃತಿಯಲ್ಲಿ ತಂದುಕೊಳ್ಳಿ, ಸರ್ವ ಸಂಬಂಧಗಳ ರಸದ ಅನುಭವ ಮಾಡಿದಾಗ ಪರಿಶ್ರಮ ಸಮಾಪ್ತಿಯಾಗಿ ಬಿಡುವುದು ಮತ್ತು ಸಹಜ ಪುರುಷಾರ್ಥಿಗಳಾಗಿ ಬಿಡುವಿರಿ.

ಸ್ಲೋಗನ್:
ಬಹುರೂಪಿಯಾಗಿ ಮಾಯೆಯ ಬಹು ರೂಪಗಳನ್ನು ಗುರುತಿಸಿ ಆಗ ಮಾಸ್ಟರ್ ಮಾಯಾಪತಿ ಆಗಿ ಬಿಡುವಿರಿ.