02.01.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯ
ಪಾತ್ರವು ನಿಖರವಾಗಿದೆ, ಅವರು ತಮ್ಮ ಸಮಯದಲ್ಲಿ ಬರುತ್ತಾರೆ, ಇದರಲ್ಲಿ ಸ್ವಲ್ಪವೂ
ಅಂತರವಾಗುವುದಿಲ್ಲ, ಅವರು ಬರುವ ನೆನಪಾರ್ಥ ಶಿವರಾತ್ರಿಯನ್ನು ಹೆಚ್ಚಿನ ವಿಜೃಂಭಣೆಯಿಂದ ಆಚರಿಸಿ”
ಪ್ರಶ್ನೆ:
ಎಂತಹ ಮಕ್ಕಳ
ವಿಕರ್ಮವು ಸಂಪೂರ್ಣವಾಗಿ ವಿನಾಶವಾಗುವುದಿಲ್ಲ?
ಉತ್ತರ:
ಯಾರ ಯೋಗವು
ಸರಿಯಾಗಿಲ್ಲವೋ ತಂದೆಯ ನೆನಪಿರುವುದಿಲ್ಲವೋ ಅವರ ವಿಕರ್ಮಗಳು ವಿನಾಶವಾಗುವುದಿಲ್ಲ. ಯೋಗಯುಕ್ತರಾಗಿ
ಇಲ್ಲದೇ ಇರುವಕಾರಣ ಇಷ್ಟು ಸದ್ಗತಿಯಾಗುವುದಿಲ್ಲ. ಪಾಪವು ಉಳಿದುಕೊಳ್ಳುತ್ತದೆ ಮತ್ತೆ ಪದವಿಯೂ
ಕಡಿಮೆಯಾಗುತ್ತದೆ. ಯೋಗವಿಲ್ಲದಿದ್ದರೆ ನಾಮರೂಪದಲ್ಲಿ ಸಿಲುಕುತ್ತಿರುತ್ತಾರೆ. ಅವರ ಮಾತುಗಳೇ
ಬರುತ್ತಿರುತ್ತವೆ. ಅಂತಹವರು ದೇಹೀ ಅಭಿಮಾನಿಯಾಗಿರಲು ಸಾಧ್ಯವಿಲ್ಲ.
ಗೀತೆ:
ಇಂದು
ಬೆಳಗ್ಗೆ-ಬೆಳಗ್ಗೆ ಬಂದವರು ಯಾರು....
ಓಂ ಶಾಂತಿ.
ಎಷ್ಟು ಗಂಟೆಗೆ ಮುಂಜಾನೆಯಾಗುತ್ತದೆ? ತಂದೆಯು ಮುಂಜಾನೆ ಎಷ್ಟು ಗಂಟೆಗೆ ಬರುತ್ತಾರೆ? ಕೆಲವರು
ಹೇಳಿದರು - 3 ಗಂಟೆ, ಕೆಲವರು ಹೇಳಿದರು - 4 ಗಂಟೆ, ಇನ್ನೂ ಕೆಲವರು ಸಂಗಮಯುಗದಲ್ಲಿ, ಹಲವರು 12
ಗಂಟೆಗೆ ಎಂದು ಹೇಳಿದರು. ತಂದೆಯು ನಿಖರವಾಗಿ ಕೇಳುತ್ತಾರೆ - 12 ಗಂಟೆಗಂತೂ ನೀವು ಬೆಳಗಿನ
ಸಮಯವೆಂದು ಹೇಳಲು ಸಾಧ್ಯವಿಲ್ಲ. 12 ಗಂಟೆಯು ಹೊಡೆದು ಒಂದು ಸೆಕೆಂಡ್ ಆಯಿತು, ಒಂದು
ನಿಮಿಷವಾಯಿತೆಂದರೆ ಎ.ಎಂ. ಎಂದರೆ ಮುಂಜಾನೆಯು ಆರಂಭವಾಯಿತು. ಇದು ಸಂಪೂರ್ಣ ಮುಂಜಾನೆಯಾಗಿದೆ.
ನಾಟಕದಲ್ಲಿ ಇದರ ಪಾತ್ರವು ಬಹಳ ನಿಖರವಾಗಿದೆ. ಒಂದು ಕ್ಷಣವೂ ತಡವಾಗಲು ಸಾಧ್ಯವಿಲ್ಲ. ಈ ನಾಟಕವು
ಅನಾದಿಯಾಗಿ ಮಾಡಲ್ಪಟ್ಟಿದೆ. 12 ಗಂಟೆಯ ಮೇಲೆ ಒಂದು ಕ್ಷಣವು ಎಲ್ಲಿಯವರೆಗೆ ಆಗುವುದಿಲ್ಲವೋ
ಅಲ್ಲಿಯವರೆಗೆ ಅದನ್ನು ಎ.ಎಂ. ಅಂದರೆ ಮುಂಜಾನೆಯೆಂದು ಹೇಳುವುದಿಲ್ಲ. ಇದು ಬೇಹದ್ದಿನ ಮಾತಾಗಿದೆ.
ತಂದೆಯು ತಿಳಿಸುತ್ತಾರೆ - ನಾನು ಬೆಳಗ್ಗೆ-ಬೆಳಗ್ಗೆ ಬರುತ್ತೇನೆ. ವಿದೇಶಿಯರ ಎ.ಎಂ. ಮತ್ತು ಪಿ.ಎಂ.
ನಿಖರವಾಗಿ ನಡೆಯುತ್ತದೆ. ಅವರ ಬುದ್ಧಿಯಾದರೂ ಚೆನ್ನಾಗಿದೆ, ಅವರು ಇಷ್ಟು ಸತೋಪ್ರಧಾನರಾಗುವುದಿಲ್ಲ
ಮತ್ತು ತಮೋಪ್ರಧಾನರೂ ಆಗುವುದಿಲ್ಲ. ಭಾರತವಾಸಿಯರೇ 100% ಸತೋಪ್ರಧಾನರು ಮತ್ತು 100%
ತಮೋಪ್ರಧಾನರಾಗಿದ್ದಾರೆ ಅಂದಾಗ ತಂದೆಯು ಬಹಳ ಆಕ್ಯುರೇಟ್ ಆಗಿದ್ದಾರೆ. ಮುಂಜಾನೆ ಅರ್ಥಾತ್ 12
ಗಂಟೆಯ ಮೇಲೆ ಒಂದುನಿಮಿಷ, ಸೆಕೆಂಡಿನ ಲೆಕ್ಕವನ್ನೂ ಇಡುವುದಿಲ್ಲ. ಒಂದು ಸೆಕೆಂಡ್ ಕಳೆಯುವುದರಲ್ಲಿ
ಗೊತ್ತಾಗುವುದೇ ಇಲ್ಲ. ಈಗ ಈ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಪ್ರಪಂಚದವರಂತೂ
ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ತಂದೆಯನ್ನು ಎಲ್ಲಾ ಭಕ್ತರು ದುಃಖದಲ್ಲಿ ಪತಿತ-ಪಾವನ ತಂದೆಯೇ
ಬನ್ನಿ ಎಂದು ನೆನಪು ಮಾಡುತ್ತಾರೆ ಆದರೆ ಅವರು ಯಾರು? ಯಾವಾಗ ಬರುತ್ತಾರೆ? ಇದೇನನ್ನೂ
ತಿಳಿದುಕೊಂಡಿಲ್ಲ. ಮನುಷ್ಯರಾಗಿದ್ದರೂ ಸಹ ನಿಖರವಾಗಿ ಏನೂ ಗೊತ್ತಿಲ್ಲ ಏಕೆಂದರೆ ಪತಿತ,
ತಮೋಪ್ರಧಾನರಾಗಿದ್ದಾರೆ. ಕಾಮವೂ ಸಹ ಎಷ್ಟು ತಮೋಪ್ರಧಾನವಾಗಿದೆ! ಈಗ ಬೇಹದ್ದಿನ ತಂದೆಯು ಆದೇಶ
ನೀಡುತ್ತಾರೆ - ಮಕ್ಕಳೇ, ಕಾಮಜೀತರು-ಜಗಜ್ಜೀತರಾಗಿ. ಒಂದುವೇಳೆ ಈಗ ಪವಿತ್ರರಾಗದಿದ್ದರೆ
ವಿನಾಶವನ್ನು ಹೊಂದುತ್ತೀರಿ. ನೀವು ಪವಿತ್ರರಾಗುವುದರಿಂದ ಅವಿನಾಶಿ ಪದವಿಯನ್ನು ಪಡೆಯುತ್ತೀರಿ.
ನೀವು ರಾಜಯೋಗವನ್ನು ಕಲಿಯುತ್ತಿದ್ದೀರಲ್ಲವೆ. ಸ್ಲೋಗನ್ ಸಹ ಬರೆಯುತ್ತೀರಿ - “ಪವಿತ್ರರಾಗಿ-ಯೋಗಿಗಳಾಗಿ”.
ವಾಸ್ತವದಲ್ಲಿ ರಾಜಯೋಗಿಗಳಾಗಿ ಎಂದು ಬರೆಯಬೇಕು. `ಯೋಗಿ’ ಶಬ್ಧವು ಸಾಮಾನ್ಯವಾಗಿದೆ.
ಬ್ರಹ್ಮ್ತತ್ವದೊಂದಿಗೆ ಯೋಗವನ್ನಿಡುತ್ತಾರೆ. ಅವರೂ ಸಹ ಯೋಗಿಗಳಾದರು, ಮಕ್ಕಳು ತಂದೆಯೊಂದಿಗೆ
ಸ್ತ್ರೀ-ಪುರುಷನೊಂದಿಗೆ ಯೋಗವನ್ನಿಡುತ್ತಾರೆ ಆದರೆ ನಿಮ್ಮದು ಇದು ರಾಜಯೋಗವಾಗಿದೆ. ತಂದೆಯು
ರಾಜಯೋಗವನ್ನು ಕಲಿಸುತ್ತಾರೆ ಆದ್ದರಿಂದ ರಾಜಯೋಗವೆಂದು ಬರೆಯುವುದು ಸರಿಯಾಗಿದೆ. ಪವಿತ್ರರಾಗಿ
ರಾಜಯೋಗಿಗಳಾಗಿ. ದಿನ-ಪ್ರತಿದಿನ ತಿದ್ದುಪಡಿಯಾಗುತ್ತಾ ಇರುತ್ತದೆ. ತಂದೆಯೂ ಸಹ ತಿಳಿಸುತ್ತಾರೆ -
ಇಂದು ನಿಮಗೆ ಗುಹ್ಯಾತಿ ಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ಈಗ ಶಿವಜಯಂತಿಯೂ ಬರುವುದಿದೆ.
ಶಿವಜಯಂತಿಯನ್ನು ನೀವು ಬಹಳ ಚೆನ್ನಾಗಿ ಆಚರಿಸಬೇಕಾಗಿದೆ. ಶಿವಜಯಂತಿಯಂದು ಬಹಳ ಒಳ್ಳೆಯ ಸರ್ವೀಸ್
ಮಾಡಬೇಕಾಗಿದೆ. ಯಾರ ಬಳಿ ಪ್ರದರ್ಶನಿಯಿದೆಯೋ ಎಲ್ಲರೂ ತಮ್ಮ-ತಮ್ಮ ಸೇವಾಕೇಂದ್ರದಲ್ಲಿ ಅಥವಾ
ಮನೆಯಲ್ಲಿ ಶಿವಜಯಂತಿಯನ್ನು ಬಹಳ ಚೆನ್ನಾಗಿ ಆಚರಣೆ ಮಾಡಿ ಮತ್ತು ಬರೆಯಿರಿ - ಶಿವತಂದೆಯು
ಗೀತಾಜ್ಞಾನದಾತ ತಂದೆಯಿಂದ ಆಸ್ತಿಯನ್ನು ಪಡೆಯುವ ಮಾರ್ಗವನ್ನು ಬಂದು ಕಲಿಯಿರಿ. ಭಲೆ ದೀಪಗಳನ್ನು
ಬೆಳಗಿಸಿ, ಮನೆ-ಮನೆಯಲ್ಲಿ ಶಿವಜಯಂತಿಯನ್ನು ಆಚರಿಸಬೇಕು. ನೀವು ಜ್ಞಾನಗಂಗೆಯರಾಗಿದ್ದೀರಲ್ಲವೆ
ಅಂದಮೇಲೆ ಪ್ರತಿಯೊಬ್ಬರ ಮನೆಯಲ್ಲಿ ಗೀತಾ ಪಾಠಶಾಲೆಯಿರಬೇಕು. ಮನೆ-ಮನೆಯಲ್ಲಿ ಗೀತೆಯನ್ನು
ಓದುತ್ತಾರಲ್ಲವೆ. ಪುರುಷರಿಗಿಂತಲೂ ಮಾತೆಯರು ಭಕ್ತಿಯಲ್ಲಿ ಮುಂದಿರುತ್ತಾರೆ. ಇಂತಹ
ಪರಿವಾರಗಳಿರುತ್ತವೆ ಎಲ್ಲಿ ಗೀತೆಯನ್ನು ಓದುತ್ತಾರೆ ಅಂದಾಗ ಮನೆಯಲ್ಲಿಯೂ ಚಿತ್ರಗಳನ್ನು
ಇಟ್ಟುಕೊಳ್ಳಬೇಕು ಮತ್ತು ಬರೆಯಿರಿ - ಬಂದು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ.
ಈ ಶಿವಜಯಂತಿಯ ಹಬ್ಬವು
ವಾಸ್ತವದಲ್ಲಿ ನಿಮ್ಮ ಸತ್ಯದೀಪಾವಳಿಯಾಗಿದೆ. ಯಾವಾಗ ಶಿವತಂದೆಯು ಬರುವರೋ ಆಗ ಮನೆ-ಮನೆಯಲ್ಲಿ
ಬೆಳಕಾಗಿಬಿಡುತ್ತದೆ. ಈ ಹಬ್ಬವನ್ನು ಹೆಚ್ಚಿನ ದೀಪಗಳನ್ನಿರಿಸಿ ಪ್ರಕಾಶತೆ ಮಾಡಿ ಆಚರಿಸಿ. ನೀವು
ಸತ್ಯದೀಪಾವಳಿಯನ್ನು ಆಚರಿಸುತ್ತೀರಿ. ಸತ್ಯಯುಗದಲ್ಲಿ ಇದು ಸಂಪೂರ್ಣ ದೀಪಾವಳಿಯಾಗುತ್ತದೆ. ಅಲ್ಲಿ
ಮನೆ-ಮನೆಯಲ್ಲಿಯೂ ಬೆಳಕೇ ಬೆಳಕಿರುವುದು ಅರ್ಥಾತ್ ಪ್ರತಿಯೊಂದು ಆತ್ಮನ ಜ್ಯೋತಿಯು
ಜಾಗೃತವಾಗಿರುತ್ತದೆ. ಇಲ್ಲಂತೂ ಅಂಧಕಾರವಿದೆ. ಆತ್ಮಗಳು ಆಸುರೀ ಬುದ್ಧಿಯವರಾಗಿಬಿಟ್ಟಿದ್ದಾರೆ.
ಅಲ್ಲಿ ಪವಿತ್ರ ಆತ್ಮಗಳಿರುವುದರಿಂದ ದೈವೀ ಬುದ್ಧಿಯಿರುತ್ತದೆ. ಆತ್ಮವೇ ಪತಿತ, ಆತ್ಮವೇ
ಪಾವನವಾಗುತ್ತದೆ. ಈಗ ನೀವು ಕನಿಷ್ಟರಿಂದ ಶ್ರೇಷ್ಠರಾಗುತ್ತಿದ್ದೀರಿ. ಆತ್ಮವು ಪವಿತ್ರವಾದಾಗ
ಪವಿತ್ರ ಶರೀರವೇ ಸಿಗುತ್ತದೆ. ಇಲ್ಲಿ ಆತ್ಮವು ಅಪವಿತ್ರವಾಗಿರುವುದರಿಂದ ಶರೀರ ಮತ್ತು ಪ್ರಪಂಚವು
ಅಪವಿತ್ರವಾಗಿದೆ. ಈ ಮಾತುಗಳನ್ನು ನಿಮ್ಮಲ್ಲಿ ಕೆಲವರೇ ಯಥಾರ್ಥ ರೀತಿಯಲ್ಲಿ ತಿಳಿದುಕೊಳ್ಳುತ್ತಾರೆ
ಮತ್ತು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರಲ್ಲಿ ಖುಷಿಯಿರುತ್ತದೆ. ನಂಬರ್ವಾರ್
ಪುರುಷಾರ್ಥವನ್ನಂತೂ ಮಾಡುತ್ತಿರುತ್ತಾರೆ. ಗ್ರಹಚಾರವು ಎಲ್ಲರ ಮೇಲೆ ಕುಳಿತುಕೊಳ್ಳುತ್ತದೆ,
ಕೆಲವೊಮ್ಮೆ ರಾಹುವಿನ ಗ್ರಹಚಾರಿಯು ಕುಳಿತುಕೊಂಡರೆ ಆಶ್ಚರ್ಯವೆನಿಸುವಂತೆ ಜ್ಞಾನವನ್ನು
ಬಿಟ್ಟುಹೋಗುತ್ತಾರೆ. ಬೃಹಸ್ಪತಿ ದೆಶೆಯ ಬದಲಾಗಿ ರಾಹುವಿನ ದೆಶೆಯು ಕುಳಿತುಕೊಳ್ಳುತ್ತದೆ.
ಕಾಮವಿಕಾರದಲ್ಲಿ ಹೋದರೆಂದರೆ ರಾಹುವಿನ ದೆಶೆಯು ಕುಳಿತುಕೊಂಡಿತೆಂದರ್ಥ. ಮಲ್ಲ
ಯುದ್ಧವಿರುತ್ತದೆಯಲ್ಲವೆ. ನೀವು ಮಾತೆಯರು ಬಹುಷಃ ನೋಡಿರುವುದಿಲ್ಲ ಏಕೆಂದರೆ ಮಾತೆಯರು ನಾಲ್ಕು
ಗೋಡೆಗಳ ಮಧ್ಯದಲ್ಲಿ ಇರುವವರಾಗಿದ್ದೀರಿ. ಈಗ ನಿಮಗೆ ತಿಳಿದಿದೆ, ಭ್ರಮರಿಯನ್ನು
ಮನೆಕಟ್ಟುವಂತದ್ದೆಂದು ಹೇಳುತ್ತಾರೆ. ಮನೆಯನ್ನು ಕಟ್ಟುವುದರಲ್ಲಿ ಒಳ್ಳೆಯ ಕಲೆಗಾರನಾಗಿರುತ್ತದೆ
ಆದ್ದರಿಂದ ಗರೇತ್ರಿ ಎಂಬ ಹೆಸರಿದೆ. ಎಷ್ಟೊಂದು ಪರಿಶ್ರಮಪಡುತ್ತದೆ, ಅದೂ ಸಹ ಪಕ್ಕಾ
ಮೇಸ್ತ್ರಿಯಾಗಿರುತ್ತದೆ. 2-3 ಕೋಣೆಗಳನ್ನು ಮಾಡಿರುತ್ತದೆ, 3-4 ಕೀಟಗಳನ್ನು ತೆಗೆದುಕೊಂಡು
ಬರುತ್ತದೆ. ಹಾಗೆಯೇ ನೀವೂ ಸಹ ಬ್ರಾಹ್ಮಿಣಿಯರಾಗಿದ್ದೀರಿ. ಭಲೆ ಒಂದೆರಡು ಮನೆಗಳನ್ನಾದರೂ ಮಾಡಿ,
10-12 ಆದರೂ ಮಾಡಿ, 500 ಬೇಕಾದರೂ ಮಾಡಿ. ಪ್ರದರ್ಶನಿ ಇತ್ಯಾದಿಗಳನ್ನು ಮಾಡುತ್ತೀರಿ, ಇದೂ ಸಹ ಮನೆ
ಮಾಡಿದಂತಾಯಿತಲ್ಲವೆ. ಅದರಲ್ಲಿ ಕುಳಿತು ಎಲ್ಲರಿಗೆ ಜ್ಞಾನದ ಧ್ವನಿ ಮಾಡುತ್ತೀರಿ ಅದರಿಂದ ಕೆಲವರು
ತಿಳಿದುಕೊಂಡು ಕೀಟಗಳಿಂದ ಬ್ರಾಹ್ಮಣರಾಗುತ್ತಾರೆ. ಇನ್ನೂ ಕೆಲವರು ಹಾಗೆಯೇ ಉಳಿಯುತ್ತಾರೆ ಅರ್ಥಾತ್
ಈ ಧರ್ಮದವರಲ್ಲ ಅಂದರೆ ಈ ಧರ್ಮದವರಿಗೂ ಸಂಪೂರ್ಣವಾಗಿ ಪ್ರೇರಣೆ ಸಿಗುವುದು. ನೀವಾದರೂ
ಮನುಷ್ಯರಾಗಿದ್ದೀರಿ, ನಿಮ್ಮ ಶಕ್ತಿಯು ಆ ಭ್ರಮರಿಗಿಂತಲೂ ಹೆಚ್ಚಿನದಾಗಿದೆ. ನೀವು 2000 ಮಂದಿಯ
ಮಧ್ಯದಲ್ಲಿಯೂ ಭಾಷಣ ಮಾಡಬಹುದು. ಮುಂದೆಹೋದಂತೆ 4-5 ಸಾವಿರ ಜನರ ಸಭೆಯಲ್ಲಿಯೂ ನೀವು ಹೋಗುತ್ತೀರಿ.
ನಿಮ್ಮೊಂದಿಗೆ ಭ್ರಮರಿಯ ಹೋಲಿಕೆಯಿದೆ. ಇತ್ತೀಚೆಗೆ ಸನ್ಯಾಸಿಗಳೂ ಸಹ ವಿದೇಶಗಳಲ್ಲಿ ಹೋಗಿ ನಾವು
ಭಾರತದ ಪ್ರಾಚೀನ ರಾಜಯೋಗವನ್ನು ಕಲಿಸುತ್ತೇವೆಂದು ಹೇಳುತ್ತಾರೆ. ಈಗಂತೂ ಮಾತೆಯರೂ ಸಹ ಕಾವೀ
ಬಟ್ಟೆಯನ್ನು ಧರಿಸಿ ಹೋಗುತ್ತಾರೆ, ವಿದೇಶಿಗಳಿಗೆ ಮೋಸ ಮಾಡಿ ಬರುತ್ತಾರೆ. ಭಾರತದ ಪ್ರಾಚೀನ
ರಾಜಯೋಗವನ್ನು ಕಲಿಯಿರಿ ಎಂದು ಅವರಿಗೆ ಹೇಳುತ್ತಾರೆ. ಆದರೆ ಭಾರತದಲ್ಲಿ ಹೋಗಿ ನೀವು ಕಲಿಯಿರಿ ಎಂದು
ಹೇಳುವುದಿಲ್ಲ. ನೀವಂತೂ ವಿದೇಶಕ್ಕೆ ಹೋಗುತ್ತೀರೆಂದರೆ ಅಲ್ಲಿಯೇ ಕುಳಿತು ತಿಳಿಸಿಕೊಡುತ್ತೀರಿ - ಈ
ರಾಜಯೋಗವನ್ನು ಕಲಿಯಿರಿ, ಇದರಿಂದ ಸ್ವರ್ಗದಲ್ಲಿ ನಿಮ್ಮ ಜನ್ಮವಾಗುವುದು. ಇದರಲ್ಲಿ ವಸ್ತ್ರಗಳನ್ನು
ಬದಲಾಯಿಸುವ ಮಾತಿಲ್ಲ. ಇಲ್ಲಿಯೇ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ತನ್ನನ್ನು ಆತ್ಮನೆಂದು ತಿಳಿದು
ತಂದೆಯನ್ನು ನೆನಪು ಮಾಡಿ. ತಂದೆಯೇ ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ. ಎಲ್ಲರನ್ನೂ ದುಃಖದಿಂದ
ಬಿಡುಗಡೆ ಮಾಡುತ್ತಾರೆ.
ಈಗ ನೀವು
ಸತೋಪ್ರಧಾನರಾಗಬೇಕಾಗಿದೆ. ಮೊದಲು ನೀವು ಸತ್ಯಯುಗದಲ್ಲಿದ್ದಿರಿ, ಈಗ ಕಲಿಯುಗದಲ್ಲಿದ್ದೀರಿ. ಇಡೀ
ಪ್ರಪಂಚ, ಎಲ್ಲಾ ಧರ್ಮದವರು ಕಲಿಯುಗದಲ್ಲಿದ್ದಾರೆ. ಯಾವುದೇ ಧರ್ಮದವರು ಸಿಕ್ಕಿದರೆ ಅವರಿಗೆ
ತಿಳಿಸಬೇಕು - ತಂದೆಯು ತಿಳಿಸುತ್ತಾರೆ, ತನ್ನನ್ನು ಆತ್ಮವೆಂದು ತಿಳಿದು ನನ್ನನ್ನು ನೆನಪು ಮಾಡಿದರೆ
ನೀವು ಪಾವನರಾಗಿಬಿಡುತ್ತೀರಿ. ಮತ್ತೆ ನಾನು ಜೊತೆ ಕರೆದುಕೊಂಡು ಹೋಗುತ್ತೇನೆ. ಕೇವಲ ಇಷ್ಟನ್ನೇ
ತಿಳಿಸಿ ಹೆಚ್ಚಿನದಾಗಿ ಬೇಡ - ಇದಂತೂ ಬಹಳ ಸಹಜವಾಗಿದೆ. ನಿಮ್ಮ ಶಾಸ್ತ್ರಗಳಲ್ಲಿಯೂ ಇದೆ -
ಮನೆ-ಮನೆಯಲ್ಲಿ ಸಂದೇಶ ಕೊಟ್ಟರೂ ಯಾರೋ ಒಬ್ಬರು ಉಳಿದುಕೊಂಡರು ಮತ್ತೆ ಅವರು ನನಗೆ ಯಾರೂ
ತಿಳಿಸಲಿಲ್ಲವೆಂದು ದೂರು ನೀಡಿದರು. ಅಂದಾಗ ತಂದೆಯು ಬಂದಿದ್ದಾರೆ ಎಂದು ಡಂಗೂರವನ್ನು ಸಾರಬೇಕು.
ಒಂದುದಿನ ಅವಶ್ಯವಾಗಿ ಶಾಂತಿಧಾಮ-ಸುಖಧಾಮದ ಆಸ್ತಿಯನ್ನು ಕೊಡಲು ತಂದೆಯು ಬಂದಿದ್ದಾರೆಂಬ ಸಂದೇಶವು
ತಿಳಿಯುತ್ತದೆ. ಅವಶ್ಯವಾಗಿ ಯಾವಾಗ ದೇವತಾ ಧರ್ಮವಿತ್ತೋ ಆಗ ಮತ್ತ್ಯಾವುದೇ ಧರ್ಮಗಳಿರಲಿಲ್ಲ,
ಎಲ್ಲರೂ ಶಾಂತಿಧಾಮದಲ್ಲಿದ್ದರು. ಇಂತಿಂತಹ ವಿಚಾರಗಳು ನಡೆಯಬೇಕು, ಘೋಷಣಾ ವಾಕ್ಯಗಳನ್ನು ಮಾಡಿಸಬೇಕು.
ತಂದೆಯು ತಿಳಿಸುತ್ತಾರೆ – ದೇಹ ಸಹಿತ ಎಲ್ಲಾ ಸಂಬಂಧಗಳನ್ನು ಬಿಡಿ, ತಮ್ಮನ್ನು ಆತ್ಮವೆಂದು ತಿಳಿದು
ತಂದೆಯಾದ ನನ್ನನ್ನು ನೆನಪು ಮಾಡಿ ಆಗ ಆತ್ಮವು ಪವಿತ್ರವಾಗಿಬಿಡುವುದು. ಈಗ ಆತ್ಮಗಳು
ಅಪವಿತ್ರವಾಗಿದ್ದಾರೆ. ತಂದೆಯು ಎಲ್ಲರನ್ನೂ ಪವಿತ್ರರನ್ನಾಗಿ ಮಾಡಿ ಮಾರ್ಗದರ್ಶಕನಾಗಿ ಈಗ
ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಎಲ್ಲರೂ ತಮ್ಮ-ತಮ್ಮ ವಿಭಾಗದಲ್ಲಿ ಹೋಗಿ
ಕುಳಿತುಕೊಳ್ಳುತ್ತಾರೆ. ನಂತರ ದೇವತಾ ಧರ್ಮದವರು ನಂಬರ್ವಾರ್ ಆಗಿ ಕೆಳಗಿಳಿಯುತ್ತಾರೆ. ಎಷ್ಟು
ಸಹಜವಾಗಿದೆ! ಇದು ಬುದ್ಧಿಯಲ್ಲಿ ಧಾರಣೆಯಾಗಬೇಕು. ಯಾರು ಸೇವೆ ಮಾಡುವರೋ ಅವರನ್ನು ಮುಚ್ಚಿಡಲು
ಸಾಧ್ಯವಿಲ್ಲ. ಹಾಗೆಯೇ ಸೇವಾಭಂಗ ಮಾಡುವವರನ್ನೂ ಸಹ ಮುಚ್ಚಿಡಲು ಸಾಧ್ಯವಿಲ್ಲ. ಸೇವಾಧಾರಿಗಳನ್ನು
ಕರೆಸುತ್ತಾರೆ, ಯಾರು ಜ್ಞಾನವನ್ನು ಸ್ವಲ್ಪವೂ ತಿಳಿಸುವುದಿಲ್ಲವೋ ಅವರನ್ನು ಕರೆಸುತ್ತಾರೆಯೇ?
ಅಂತಹವರು ಇನ್ನೂ ಹೆಸರನ್ನು ಕೆಡಿಸಿಬಿಡುತ್ತಾರೆ. ಇದರಿಂದ ಬ್ರಹ್ಮಾಕುಮಾರ-ಕುಮಾರಿಯರು ಹೀಗೂ
ಇರುತ್ತಾರೆಯೇ? ಪೂರ್ಣ ಪ್ರತ್ಯುತ್ತರವನ್ನೂ ಕೊಡುವುದಿಲ್ಲ ಅಂದಮೇಲೆ ಹೆಸರು ಕೆಟ್ಟುಹೋಯಿತಲ್ಲವೆ.
ಶಿವತಂದೆಯ ಹೆಸರನ್ನು ಕೆಡಿಸುವವರು ಉತ್ತಮ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಹೇಗೆ ಇಲ್ಲಿಯೂ ಸಹ
ಕೆಲವರು ಕೋಟ್ಯಾಧಿಪತಿಗಳೂ ಇದ್ದಾರೆ, ಪದಮಾಪತಿಗಳೂ ಇದ್ದಾರೆ. ಕೆಲವರಂತೂ ನೋಡಿ, ಹಸಿವಿನಿಂದ
ನರಳುತ್ತಿದ್ದಾರೆ. ಇಂತಹ ಬಿಕಾರಿಗಳೂ ಸಹ ಬಂದು ರಾಜಕುಮಾರರಾಗುತ್ತಾರೆ. ಈಗ ನೀವು ಮಕ್ಕಳೇ
ತಿಳಿದುಕೊಂಡಿದ್ದೀರಿ - ಅದೇ ಶ್ರೀಕೃಷ್ಣನು ಯಾರು ಸ್ವರ್ಗದ ರಾಜಕುಮಾರನಾಗಿದ್ದರೋ ಅವರು ಕೊನೆಯಲ್ಲಿ
ಬಿಕಾರಿಯಾಗುತ್ತಾರೆ ಮತ್ತೆ ಬಿಕಾರಿಯಿಂದ ರಾಜಕುಮಾರನಾಗುತ್ತಾರೆ. ಇವರು ಬಿಕಾರಿಯಾಗಿದ್ದರಲ್ಲವೆ,
ಅಲ್ಪಸ್ವಲ್ಪ ಸಂಪಾದನೆ ಮಾಡಿದರೂ ಸಹ ನೀವು ಮಕ್ಕಳಿಗಾಗಿಯೇ. ಇಲ್ಲವೆಂದರೆ ನಿಮ್ಮಲ್ಲೆರ ಪಾಲನೆ
ಹೇಗಾಗುವುದು? ಇವೆಲ್ಲಾ ಮಾತುಗಳು ಶಾಸ್ತ್ರಗಳಲಿಲ್ಲ. ಶಿವತಂದೆಯೇ ಬಂದು ತಿಳಿಸುತ್ತಾರೆ -
ಅವಶ್ಯವಾಗಿ ಇವರು (ಬ್ರಹ್ಮಾ) ಹಳ್ಳಿಯ ಬಾಲಕನಾಗಿದ್ದರು, ಹೆಸರೇನು ಶ್ರೀಕೃಷ್ಣನೆಂದು ಇರಲಿಲ್ಲ.
ಇದು ಆತ್ಮದ ಮಾತಾಗಿದೆ ಆದ್ದರಿಂದ ಮನುಷ್ಯರು ತಬ್ಬಿಬ್ಬಾಗಿದ್ದಾರೆ. ತಂದೆಯು ತಿಳಿಸಿದರು -
ಶಿವಜಯಂತಿಯಂದು ಪ್ರತಿಯೊಬ್ಬರೂ ಮನೆ-ಮನೆಯಲ್ಲಿ ಚಿತ್ರಗಳನ್ನಿಟ್ಟು ಸರ್ವೀಸ್ ಮಾಡಿ ಬರೆಯಿರಿ -
ಬೇಹದ್ದಿನ ತಂದೆಯಿಂದ 21 ಜನ್ಮಗಳಿಗಾಗಿ ಸ್ವರ್ಗದ ರಾಜ್ಯಭಾಗ್ಯವು ಸೆಕೆಂಡಿನಲ್ಲಿ ಹೇಗೆ ಸಿಗುತ್ತದೆ
ಎಂದು ಬಂದು ತಿಳಿದುಕೊಳ್ಳಿ. ಹೇಗೆ ದೀಪಾವಳಿಯಂದು ಮನುಷ್ಯರು ಬಹಳ ಅಂಗಡಿಗಳನ್ನು ತೆರೆದು
ಕುಳಿತುಕೊಳ್ಳುತ್ತಾರೆ, ನೀವು ಅವಿನಾಶಿ ಜ್ಞಾನರತ್ನಗಳ ಅಂಗಡಿಯನ್ನು ತೆರೆದು
ಕುಳಿತುಕೊಳ್ಳಬೇಕಾಗಿದೆ. ನಿಮ್ಮ ಅಂಗಡಿಯು ಎಷ್ಟು ಶೃಂಗಾರವಾಗಿರುವುದು! ಮನುಷ್ಯರು ದೀಪಾವಳಿಯಂದು
ಶೃಂಗಾರ ಮಾಡುತ್ತಾರೆ, ನೀವು ಶಿವಜಯಂತಿಯಂದು ಮಾಡಿ. ಯಾವ ಶಿವತಂದೆಯು ಎಲ್ಲರ ದೀಪವನ್ನು
ಬೆಳಗಿಸುತ್ತಾರೆ, ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಅವರಂತೂ ಲಕ್ಷ್ಮಿಯಿಂದ
ವಿನಾಶೀಧನವನ್ನು ಬೇಡುತ್ತಾರೆ ಮತ್ತು ಇಲ್ಲಿ ಜಗದಂಬೆಯಿಂದ ನಿಮಗೆ ವಿಶ್ವದ ರಾಜ್ಯಭಾಗ್ಯವು
ಸಿಗುತ್ತದೆ. ಈ ರಹಸ್ಯವನ್ನು ತಂದೆಯು ತಿಳಿಸುತ್ತಾರೆ. ತಂದೆಯು ಯಾವುದೇ ಶಾಸ್ತ್ರವನ್ನು
ತೆಗೆದುಕೊಂಡು ತಿಳಿಸುವುದಿಲ್ಲ. ತಂದೆಯು ಹೇಳುತ್ತಾರೆ - ನಾನು ಜ್ಞಾನಪೂರ್ಣನಾಗಿದ್ದೇನೆ ಅಲ್ಲವೆ.
ಹಾ! ಇದಂತೂ ತಿಳಿದಿದೆ, ಇಂತಿಂತಹ ಮಕ್ಕಳು ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತಾರೆ ಆದ್ದರಿಂದ ನೆನಪು
ಬರುತ್ತದೆ. ಬಾಕಿ ಒಬ್ಬೊಬ್ಬರಲ್ಲಿಯೂ ಕುಳಿತು ಅವರನ್ನು ಅರಿತುಕೊಳ್ಳುತ್ತೇನೆಂದಲ್ಲ. ಕೆಲವೊಂದು
ಸಮಯದಲ್ಲಿ ಇವರು ಪತಿತರಾಗಿದ್ದಾರೆ ಎಂದು ತಿಳಿಯುತ್ತದೆ, ಸಂಶಯವೂ ಬರುತ್ತದೆ. ಅವರ ಮುಖವೂ ಸಹ
ನಿರಾಶೆಯಾಗಿಬಿಡುತ್ತದೆ. ಇವರನ್ನು ವಿಚಾರಿಸಿ ಎಂದು ಮೇಲಿಂದ ಬಾಬಾರವರೂ ಸಹ ಆದೇಶವನ್ನು
ಕಳುಹಿಸುತ್ತಾರೆ. ಇದೂ ಸಹ ನಾಟಕದಲ್ಲಿ ನೊಂದಣಿಯಾಗಿದೆ. ಕೆಲವರಿಗೆ ಹೇಳಲಾಗುತ್ತದೆ - ಎಲ್ಲರಿಗೆ
ಹೇಳುವುದಿಲ್ಲ, ಇಂತಹವರು ಅನೇಕರಿದ್ದಾರೆ - ಮುಖವನ್ನು ಕಪ್ಪು ಮಾಡಿಕೊಳ್ಳುತ್ತಾರೆ. ಯಾರು ಈ ರೀತಿ
ಮಾಡುತ್ತಾರೆಯೋ ಅವರು ತನಗೇ ನಷ್ಟ ಮಾಡಿಕೊಳ್ಳುತ್ತಾರೆ. ಸತ್ಯವನ್ನು ಹೇಳುವುದರಿಂದ ಸ್ವಲ್ಪ
ಲಾಭವಾಗುತ್ತದೆ ಇಲ್ಲವೆಂದರೆ ಇನ್ನೂ ಹೆಚ್ಚಿನ ನಷ್ಟವಾಗುತ್ತದೆ. ತಂದೆಯು ನಮ್ಮನ್ನು ಸುಂದರರನ್ನಾಗಿ
ಮಾಡಲು ಬಂದಿದ್ದಾರೆ ಮತ್ತೆ ನಮ್ಮ ಮುಖವನ್ನು ಕಪ್ಪಾಗಿ ಮಾಡಿಕೊಳ್ಳುತ್ತೇವೆ ಎಂಬುದನ್ನು
ತಿಳಿದುಕೊಳ್ಳಬೇಕು. ಇದು ಮುಳ್ಳಿನ ಪ್ರಪಂಚವಾಗಿದೆ, ಮಾನವ ಮುಳ್ಳುಗಳಾಗಿವೆ. ಸತ್ಯಯುಗಕ್ಕೆ
ಅಲ್ಲಾನ ಹೂದೋಟವೆಂದು ಕರೆಯಲಾಗುತ್ತದೆ, ಇದು ಕಾಡಾಗಿದೆ ಆದ್ದರಿಂದ ತಂದೆಯು ಹೇಳುತ್ತಾರೆ - ಯಾವಾಗ
ಧರ್ಮದ ನಿಂದನೆಯಾಗುತ್ತದೆಯೋ ಆಗ ನಾನು ಬರುತ್ತೇನೆ. ಮೊದಲನೇ ನಂಬರಿನ ಶ್ರೀಕೃಷ್ಣನನ್ನು ನೋಡಿ,
ಮತ್ತೆ 84 ಜನ್ಮದ ನಂತರ ಹೇಗಾಗುತ್ತಾನೆ! ಈಗ ಎಲ್ಲರೂ ತಮೋಪ್ರಧಾನರಾಗಿದ್ದಾರೆ, ಪರಸ್ಪರ ಯುದ್ಧ
ಮಾಡುತ್ತಿರುತ್ತಾರೆ. ಇದೂ ಸಹ ನಾಟಕದಲ್ಲಿದೆ ನಂತರ ಸ್ವರ್ಗದಲ್ಲಿ ಇದ್ಯಾವುದೂ ಇರುವುದಿಲ್ಲ.
ಜ್ಞಾನಬಿಂದುಗಳು ಅನೇಕ ಪ್ರಕಾರದಲ್ಲಿವೆ, ಅದನ್ನು ಬರೆದುಕೊಳ್ಳಬೇಕು. ಹೇಗೆ ಬ್ಯಾರಿಸ್ಟರ್ ಸಹ
ವಿಚಾರಗಳ ಪುಸ್ತಕವನ್ನಿಡುತ್ತಾರಲ್ಲವೆ. ವೈದ್ಯರೂ ಸಹ ಪುಸ್ತಕವನ್ನಿಡುತ್ತಾರೆ, ಅದನ್ನು ನೋಡಿಕೊಂಡು
ಔಷಧಿಯನ್ನು ಕೊಡುತ್ತಾರೆ ಅಂದಾಗ ಮಕ್ಕಳು ಎಷ್ಟು ಚೆನ್ನಾಗಿ ಓದಬೇಕು, ಸೇವೆಯನ್ನು ಮಾಡಬೇಕು.
ತಂದೆಯು ಮನ್ಮನಾಭವದ ನಂಬರ್ವನ್ ಮಂತ್ರವನ್ನು ಕೊಟ್ಟಿದ್ದಾರೆ. ತಂದೆ ಮತ್ತು ಆಸ್ತಿಯನ್ನು ನೆನಪು
ಮಾಡಿದ್ದೇ ಆದರೆ ಸ್ವರ್ಗದ ಮಾಲೀಕರಾಗಿಬಿಡುತ್ತಾರೆ. ಶಿವಜಯಂತಿಯನ್ನು ಆಚರಿಸುತ್ತಾರೆ ಆದರೆ
ಶಿವತಂದೆಯು ಏನು ಮಾಡಿದರು? ಅವಶ್ಯವಾಗಿ ಸ್ವರ್ಗದ ಆಸ್ತಿಯನ್ನು ಕೊಟ್ಟಿರಬೇಕು. ಇಲ್ಲಿಗೆ 5000
ವರ್ಷಗಳಾಯಿತು, ಸ್ವರ್ಗದಿಂದ ನರಕ, ನರಕದಿಂದ ಸ್ವರ್ಗವಾಗುತ್ತದೆ.
ತಂದೆಯು ತಿಳಿಸುತ್ತಾರೆ
- ಮಕ್ಕಳೇ, ಯೋಗಯುಕ್ತರಾಗಿದ್ದೇ ಆದರೆ ನಿಮಗೆ ಪ್ರತಿಯೊಂದು ಮಾತು ಚೆನ್ನಾಗಿ ಅರ್ಥವಾಗುತ್ತದೆ ಆದರೂ
ಸಹ ಯೋಗ ಸರಿಯಾಗಿಲ್ಲವೆಂದರೆ ತಂದೆಯ ನೆನಪು ಇಲ್ಲವೆಂದರೆ ಏನನ್ನೂ ಸಹ ತಿಳಿದುಕೊಳ್ಳಲು
ಸಾಧ್ಯವಿಲ್ಲ, ವಿಕರ್ಮವೂ ಸಹ ವಿನಾಶವಾಗುವುದಿಲ್ಲ. ಯೋಗಯುಕ್ತರಾಗದ ಕಾರಣ ಇಷ್ಟೊಂದು ಸದ್ಗತಿಯೂ ಸಹ
ಆಗುವುದಿಲ್ಲ, ಪಾಪವು ಉಳಿದುಕೊಂಡುಬಿಡುತ್ತದೆ. ನಂತರ ಪದವಿಯೂ ಸಹ ಕಡಿಮೆಯಾಗುತ್ತದೆ. ಅನೇಕರು
ಸ್ವಲ್ಪವೂ ಯೋಗ ಮಾಡುವುದಿಲ್ಲ. ನಾಮರೂಪದಲ್ಲಿ ಮುಳುಗಿರುತ್ತಾರೆ. ಅವರದೇ ನೆನಪು ಬರುತ್ತಾ
ಇರುತ್ತದೆ ಅಂದಾಗ ಹೇಗೆ ವಿಕರ್ಮ ವಿನಾಶವಾಗುತ್ತದೆ? ದೇಹೀ-ಅಭಿಮಾನಿಗಳಾಗಿ ಎಂದು ತಂದೆಯು
ಹೇಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಶಿವಜಯಂತಿಯಂದು ಅವಿನಾಶಿ ಜ್ಞಾನರತ್ನಗಳ ಅಂಗಡಿಯನ್ನು ತೆರೆದು ಸೇವೆಯನ್ನು ಮಾಡಬೇಕು.
ಮನೆ-ಮನೆಯನ್ನು ಬೆಳಗಿಸಿ ಎಲ್ಲರಿಗೂ ತಂದೆಯ ಪರಿಚಯವನ್ನು ಕೊಡಬೇಕು.
2. ಸತ್ಯತಂದೆಯೊಂದಿಗೆ
ಸತ್ಯವಾಗಿರಬೇಕು. ಯಾವುದೇ ವಿಕರ್ಮವನ್ನು ಮಾಡಿ ಮುಚ್ಚಿಡಬಾರದು. ಯಾವುದೇ ಪಾಪವು ಉಳಿಯಬಾರದು - ಆ
ರೀತಿ ಯೋಗಯುಕ್ತರಾಗಬೇಕು. ಯಾರದೇ ನಾಮರೂಪದಲ್ಲಿ ಸಿಲುಕಿಕೊಳ್ಳಬಾರದು.
ವರದಾನ:
ನನ್ನತನದ
ಭಾನವನ್ನು ಅಳಿಸುವಂತಹ ಬ್ರಹ್ಮಾ ತಂದೆಯ ಸಮಾನ ಶ್ರೇಷ್ಠ ತ್ಯಾಗಿ ಭವ
ಸಂಬಂಧದ ತ್ಯಾಗ, ವೈಭವಗಳ
ತ್ಯಾಗ ಯಾವುದೇ ದೊಡ್ಡ ಮಾತಲ್ಲ ಆದರೆ ಪ್ರತಿ ಕಾರ್ಯದಲ್ಲಿ, ಸಂಕಲ್ಪದಲ್ಲಿಯೂ ಅನ್ಯರನ್ನು
ಮುಂದಿಡುವ ಭಾವನೆ ಇಡುವುದು ಅರ್ಥಾತ್ ತನ್ನತನವನ್ನು ಅಳಿಸುವುದಾಗಿದೆ, ಮೊದಲು ನೀವು ಎನ್ನುವುದು....
ಇದಾಗಿದೆ ಶ್ರೇಷ್ಠ ತ್ಯಾಗ. ಇದನ್ನೇ ಸ್ವಯಂನ ಭಾನವನ್ನು ಅಳಿಸುವುದು ಎಂದು ಹೇಳಲಾಗುತ್ತದೆ. ಹೇಗೆ
ಬ್ರಹ್ಮಾ ತಂದೆಯು ಸದಾ ಮಕ್ಕಳನ್ನು ಮುಂದೆ ಇಟ್ಟರು. “ನಾನು ಮುಂದೆ ಇರಬೇಕು” ಇದರಲ್ಲಿಯೂ ಸದಾ
ತ್ಯಾಗಿಯಾಗಿರಬೇಕು, ಇದೇ ತ್ಯಾಗದ ಕಾರಣ ಎಲ್ಲದಕ್ಕಿಂತ ಮುಂದೆ ಅರ್ಥಾತ್ ನಂಬರ್ಒನ್ನಲ್ಲಿ ಹೋಗುವ
ಫಲ ಸಿಕ್ಕಿತು. ಅಂದಾಗ ಫಾಲೋ ಫಾದರ್.
ಸ್ಲೋಗನ್:
ತಕ್ಷಣ ಯಾರದ್ದೇ
ಕಡಿಮೆ-ಬಲಹೀನತೆಗಳನ್ನು ತೆಗೆಯುವುದು – ಇದೇ ದುಃಖ ಕೊಡುವುದಾಗಿದೆ.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ
ಹೇಗೆ ಎತ್ತರದ
ಟಾವರ್ನಿಂದ ಸಕಾಶ ಕೊಡುತ್ತದೆ, ಲೈಟ್ ಮೈಟ್ ಹರಡಿಸುತ್ತದೆ. ಅದೇ ರೀತಿ ನೀವು ಮಕ್ಕಳು ಸಹ ತಮ್ಮ
ಶ್ರೇಷ್ಠ ಸ್ಥಿತಿ ಅಥವಾ ಶ್ರೇಷ್ಠ ಸ್ಥಾನದಲ್ಲಿ ಕುಳಿತು ಕಡಿಮೆ ಕಡಿಮೆ 4 ಗಂಟೆ ವಿಶ್ವಕ್ಕೆ ಲೈಟ್
ಮತ್ತು ಮೈಟ್ ಕೊಡಿ. ಹೇಗೆ ಸೂರ್ಯನು ವಿಶ್ವಕ್ಕೆ ಬೆಳಕು ಕೊಡಬೇಕೆಂದರೆ ಎತ್ತರದಲ್ಲಿರಬೇಕು. ಸಾಕಾರ
ಸೃಷ್ಟಿಗೆ ಸಕಾಶ ಕೊಡಲು ಶ್ರೇಷ್ಠ ಸ್ಥಾನದ ನಿವಾಸಿಯಾಗಿ.