02.03.25    Avyakt Bapdada     Kannada Murli    15.10.2004     Om Shanti     Madhuban


“ಏಕತೆಯನ್ನು ಪ್ರತ್ಯಕ್ಷ ಮಾಡುವುದಕ್ಕಾಗಿ ಏಕರಸ ಸ್ಥಿತಿಯನ್ನು ತಯಾರು ಮಾಡಿ, ಸ್ವಮಾನದಲ್ಲಿ ಇರಿ, ಎಲ್ಲರಿಗೂ ಸನ್ಮಾನ ಕೊಡಿ”


ಇಂದು ಬಾಪ್ದಾದಾರವರು ಪ್ರತಿಯೊಂದು ಮಗುವಿನ ಮಸ್ತಕದಲ್ಲಿ ಮೂರು ಭಾಗ್ಯದ ನಕ್ಷತ್ರಗಳು ಹೊಳೆಯುತ್ತಿರುವುದನ್ನು ನೋಡುತ್ತಿದ್ದಾರೆ. ಒಂದನೆಯದು ಪರಮಾತ್ಮನ ಪಾಲನೆಯ ಭಾಗ್ಯ, ಪರಮಾತ್ಮನ ವಿದ್ಯೆಯ ಭಾಗ್ಯ, ಪರಮಾತ್ಮನ ವರದಾನಗಳ ಭಾಗ್ಯ. ಇಂತಹ ಮೂರು ನಕ್ಷತ್ರಗಳನ್ನು ಎಲ್ಲರ ಮಸ್ತಕದ ಮಧ್ಯದಲ್ಲಿ ನೋಡುತ್ತಿದ್ದಾರೆ. ತಾವು ತಮ್ಮ ಭಾಗ್ಯದ ಹೊಳೆಯುತ್ತಿರುವ ನಕ್ಷತ್ರಗಳನ್ನು ನೋಡುತ್ತಿರುವಿರಾ? ಕಾಣಿಸುತ್ತದೆಯೇ? ಇಂತಹ ಶ್ರೇಷ್ಠ ಭಾಗ್ಯದ ನಕ್ಷತ್ರಗಳು ಇಡೀ ವಿಶ್ವದಲ್ಲಿ ಬೇರೆ ಯಾರ ಮಸ್ತಕದಲ್ಲಿಯೂ ಸಹ ಹೊಳೆಯುತ್ತಿರುವಂತೆ ಕಾಣಿಸುವುದಿಲ್ಲ. ಈ ಭಾಗ್ಯದ ನಕ್ಷತ್ರಗಳಂತೂ ಎಲ್ಲರ ಮಸ್ತಕದಲ್ಲಿ ಹೊಳೆಯುತ್ತಿದೆ, ಆದರೆ ಹೊಳಪಿನಲ್ಲಿ ಕೆಲವೊಂದು ಕಡೆ ಅಂತರ ಕಾಣಿಸುತ್ತಿದೆ. ಕೆಲವರ ಹೊಳಪು ಬಹಳ ಶಕ್ತಿಶಾಲಿಯಾಗಿ ಇದೆ, ಕೆಲವರ ಹೊಳಪು ಮಧ್ಯಮವಾಗಿದೆ. ಭಾಗ್ಯ ವಿಧಾತ ಎಲ್ಲಾ ಮಕ್ಕಳಿಗೂ ಒಂದೇ ಸಮಾನ ಭಾಗ್ಯ ಕೊಟ್ಟಿದ್ದಾರೆ. ಕೆಲವರಿಗೆ ವಿಶೇಷವಾಗಿ ಕೊಟ್ಟಿಲ್ಲ. ಪಾಲನೆಯನ್ನು ಸಹ ಒಂದೇ ರೀತಿ, ವಿದ್ಯೆಯೂ ಸಹ ಒಟ್ಟಿಗೆ, ವರದಾನವು ಸಹ ಒಂದೇ ರೀತಿ ಎಲ್ಲರಿಗೂ ಸಿಕ್ಕಿದೆ. ಇಡೀ ವಿಶ್ವದ ಮೂಲೆ ಮೂಲೆಯಲ್ಲಿ ಸದಾ ಒಂದೇ ವಿದ್ಯೆ ಇರುತ್ತದೆ. ಒಂದೇ ಮುರಳಿ, ಒಂದೇ ತಾರೀಕು ಹಾಗೂ ಅಮೃತ ವೇಳೆ ಸಮಯವೂ ಸಹ ತಮ್ಮ ತಮ್ಮ ದೇಶದ ಪ್ರಮಾಣ ಇದ್ದರೂ ಸಹ ಒಂದೇ ಆಗಿದೆ, ವರದಾನವು ಒಂದೇ ಆಗಿದೆ, ಇದು ಅದ್ಭುತವಾಗಿದೆ. ಸ್ಲೋಗನ್ ಸಹ ಒಂದೇ ಆಗಿದೆ. ಯಾವುದೇ ವ್ಯತ್ಯಾಸ ಇದೆಯೇ? ಅಮೇರಿಕ ಹಾಗೂ ಲಂಡನ್ನಲ್ಲಿ ವ್ಯತ್ಯಾಸ ಇದೆಯೇ? ಇಲ್ಲ. ಅಂದಮೇಲೆ ಅಂತರ ಏಕೆ ಇದೆ?

ಅಮೃತ ವೇಳೆಯ ಪಾಲನೆ ನಾಲ್ಕಾರು ಕಡೆ ಒಬ್ಬರೇ ಬಾಪ್ದಾದಾ ಮಾಡುತ್ತಾರೆ. ನಿರಂತರ ನೆನಪಿನ ವಿಧಿಯು ಸಹ ಎಲ್ಲರಿಗೂ ಒಂದೇ ಸಿಕ್ಕಿದೆ, ಆದರೂ ಸಹ ಏಕೆ ನಂಬರ್ ವಾರ್ ಆಗಿದ್ದೀರಿ? ಒಂದೇ ವಿಧಿ ಆದರೆ ಸಿದ್ದಿಯ ಪ್ರಾಪ್ತಿಯಲ್ಲಿ ಅಂತರ ಏಕೆ? ಬಾಪ್ದಾದಾರವರಿಗೆ ನಾಲ್ಕಾರು ಕಡೆಯ ಮಕ್ಕಳ ಮೇಲೆ ಪ್ರೀತಿಯೂ ಸಹ ಒಂದೇ ರೀತಿ ಇದೆ. ಬಾಪ್ದಾದಾರವರ ಪ್ರೀತಿಯಲ್ಲಿ ಭಲೇ ಪುರುಷಾರ್ಥದ ಪ್ರಮಾಣ ನಂಬರ್ನಲ್ಲಿ ಲಾಸ್ಟ್ ನಂಬರ್ನಲ್ಲಿ ಇದ್ದರು ಸಹ, ಬಾಪ್ದಾದಾರವರ ಪ್ರೀತಿ ಲಾಸ್ಟ್ ನಂಬರ್ನವರಿಗೂ ಸಹ ಅದೇ ಆಗಿದೆ. ಲಾಸ್ಟ್ ನಂಬರ್ನವರಿಗೆ ಪ್ರೀತಿಯ ಜೊತೆಗೆ ಇನ್ನಷ್ಟು ದಯೆಯೂ ಇದೆ- ಲಾಸ್ಟ್ ಇರುವವರು ಫಾಸ್ಟ್ ಆಗಿ, ಫಸ್ಟ್ ನಲ್ಲಿ ಬಂದು ಬಿಡಲಿ. ಯಾರೆಲ್ಲಾ ದೂರ ದೂರದಿಂದ ತಲುಪಿದ್ದೀರಿ, ಹೇಗೆ ತಲುಪಿದ್ದೀರಿ? ಪರಮಾತ್ಮನ ಪ್ರೀತಿ ನಿಮ್ಮನ್ನು ಸೆಳೆದು ತಂದಿದೆ ಅಲ್ಲವೇ! ಪ್ರೀತಿಯ ದಾರದಲ್ಲಿ ಸೆಳೆದು ಬಂದಿದ್ದೀರಿ. ಬಾಪ್ ದಾದ ರವರಿಗೆ ಎಲ್ಲರೊಂದಿಗೆ ಪ್ರೀತಿ ಇದೆ. ಈ ರೀತಿ ತಿಳಿಯುತ್ತೀರಿ ಅಲ್ಲವೇ ಅಥವಾ ಪ್ರಶ್ನೆ ಬರುತ್ತದೆಯೇ- ನನ್ನೊಂದಿಗೆ ಪ್ರೀತಿ ಇದೆಯೇ ಅಥವಾ ಕಡಿಮೆ ಇದೆಯೇ? ಬಾಪ್ದಾದಾರವರ ಪ್ರೀತಿ ಪ್ರತಿಯೊಬ್ಬ ಮಗುವಿನೊಂದಿಗೆ ಒಬ್ಬರು ಇನ್ನೊಬ್ಬರಿಗಿಂತ ಜಾಸ್ತಿ ಇದೆ. ಹಾಗೂ ಈ ಪರಮಾತ್ಮನ ಪ್ರೀತಿಯೇ ಎಲ್ಲಾ ಮಕ್ಕಳ ವಿಶೇಷ ಪಾಲನೆಯ ಆಧಾರವಾಗಿದೆ. ಪ್ರತಿಯೊಬ್ಬರು ಏನೆಂದು ತಿಳಿಯುತ್ತೀರಿ- ನನ್ನ ಪ್ರೀತಿ ತಂದೆಯೊಂದಿಗೆ ಜಾಸ್ತಿ ಇದೆಯೇ ಅಥವಾ ಅನ್ಯರ ಪ್ರೀತಿ ಜಾಸ್ತಿ ಇದೆಯೇ, ನನ್ನದು ಕಡಿಮೆ ಇದೆಯೇ? ಈ ರೀತಿ ತಿಳಿಯುತ್ತೀರ? ನನಗೆ ಪ್ರೀತಿ ಇದೆ ಎಂದು ತಿಳಿಯುತ್ತೀರಿ ಅಲ್ಲವೇ? ನನ್ನ ಪ್ರೀತಿ ಇದೆ ಅಲ್ಲವೇ, ಇದೆ ಅಲ್ಲವೇ? ಪಾಂಡವರು ಇದೆಯಲ್ಲವೇ? ಪ್ರತಿಯೊಬ್ಬರು ಹೇಳುತ್ತಾರೆ “ನನ್ನ ಬಾಬಾ”, ಸೆಂಟರ್ ಇಂಚಾರ್ಜ್ನ ಬಾಬಾ ಎಂದು ಹೇಳುವುದಿಲ್ಲ, ದಾದಿಯ ಬಾಬಾ, ಜಾನಕಿ ದಾದಿಯ ಬಾಬಾ, ಎಂದು ಹೇಳುತ್ತೀರಾ? ಇಲ್ಲ. ನನ್ನ ಬಾಬಾ ಎಂದು ಹೇಳುತ್ತೀರಿ. ಯಾವಾಗ ನನ್ನದು ಎಂದು ಹೇಳುತ್ತೀರಿ ಆಗ ಬಾಬಾರವರು ಸಹ ನನ್ನದು ಎಂದು ಹೇಳಿಬಿಟ್ಟರು, ಕೇವಲ ಒಂದು ನನ್ನ ಶಬ್ಧದಲ್ಲಿಯೇ ಮಕ್ಕಳು ತಂದೆಯವರದ್ದಾಗಿ ಬಿಟ್ಟರು ಹಾಗು ತಂದೆ ಮಕ್ಕಳದ್ದಾಗಿ ಬಿಟ್ಟರು. ಪರಿಶ್ರಮ ಎನಿಸಿತೆ? ಪರಿಶ್ರಮ ಎನಿಸಿತೆ? ಸ್ವಲ್ಪ ಸ್ವಲ್ಪ? ಇಲ್ಲವೇ? ಕೆಲವೊಮ್ಮೆ ಅನಿಸಿದೆ? ಅನಿಸಲಿಲ್ಲವೇ? ಅನಿಸುತ್ತದೆ. ಯಾವಾಗ ಪರಿಶ್ರಮ ಅನಿಸುತ್ತದೆ. ಆಗ ಏನು ಮಾಡುತ್ತೀರಿ? ದಣಿದು ಬಿಡುತ್ತೀರಿ. ಹೃದಯದಿಂದ, ಪ್ರೀತಿಯಿಂದ ಹೇಳಿ ”ನನ್ನ ಬಾಬಾ”, ಆಗ ಪರಿಶ್ರಮವು ಪ್ರೀತಿಯಲ್ಲಿ ಬದಲಾಗಿ ಬಿಡುತ್ತದೆ. ನನ್ನ ಬಾಬಾ ಎಂದು ಹೇಳುವುದರಿಂದಲೇ ಬಾಬಾರವರ ಬಳಿ ಧ್ವನಿ ತಲುಪಿ ಬಿಡುತ್ತದೆ ಹಾಗೂ ತಂದೆ ಎಕ್ಸ್ಟ್ರಾ ಸಹಯೋಗ ಕೊಡುತ್ತಾರೆ ಆದರೆ ಇದು ಹೃದಯದ ವ್ಯಾಪಾರವಾಗಿದೆ, ಮಾತಿನ ವ್ಯಾಪಾರವಲ್ಲ. ಹೃದಯದ ವ್ಯಾಪಾರವಾಗಿದೆ. ಹಾಗಾದರೆ ಹೃದಯದ ವ್ಯಾಪಾರ ಮಾಡುವುದರಲ್ಲಿ ಬುದ್ಧಿವಂತರಾಗಿದ್ದೀರಿ ಅಲ್ಲವೇ? ಆಗಿದ್ದೀರಿ ಅಲ್ಲವೇ? ಹಿಂದೆ ಕುಳಿತಿರುವವರಿಗೆ ಬರುತ್ತದೆಯೇ? ಬರುತ್ತದೆ ಆದ್ದರಿಂದಲೇ ತಲುಪಿದ್ದೀರಿ. ಆದರೆ ಎಲ್ಲರಿಗಿಂತ ದೂರದೇಶಿ ಯಾರಾಗಿದ್ದಾರೆ? ಅಮೇರಿಕ? ಅಮೇರಿಕದವರು ದೂರದೇಶಿ ಆಗಿದ್ದಾರೆಯೇ ಅಥವಾ ತಂದೆ ದೂರದೇಶಿ ಆಗಿದ್ದಾರೆಯೇ? ಅಮೇರಿಕ ಅಂತೂ ಈ ಪ್ರಪಂಚದಲ್ಲಿಯೇ ಇದೆ. ತಂದೆಯಂತು ಇನ್ನೊಂದು ಪ್ರಪಂಚದಿಂದ ಬರುತ್ತಾರೆ. ಅಂದಮೇಲೆ ಎಲ್ಲರಿಗಿಂತ ದೂರದೇಶಿ ಯರಾಗಿದ್ದಾರೆ? ಅಮೇರಿಕ ಅಲ್ಲ? ಎಲ್ಲರಿಗಿಂತ ದೂರದೇಶಿ ಬಾಪ್ ದಾದಾ ಆಗಿದ್ದಾರೆ. ಒಬ್ಬರು ವತನದಿಂದ ಬರುತ್ತಾರೆ, ಒಬ್ಬರು ಪರಮಧಾಮದಿಂದ ಬರುತ್ತಾರೆ, ಅಂದಮೇಲೆ ಅದರ ಮುಂದೆ ಅಮೆರಿಕ ಏನಾಗಿದೆ? ಏನೂ ಅಲ್ಲ.

ಅಂದಮೇಲೆ ಇಂದು ದೂರದೇಶಿ ತಂದೆ ಈ ಸಾಕಾರ ಪ್ರಪಂಚದ ದೂರದೇಶಿ ಮಕ್ಕಳೊಂದಿಗೆ ಮಿಲನ ಮಾಡುತ್ತಿದ್ದಾರೆ. ನಶೆ ಇದೆಯೇ? ಇಂದು ನಮಗಾಗಿ ಬಾಪ್ದಾದಾ ಬಂದಿದ್ದಾರೆ! ಭಾರತವಾಸಿಯರಂತೂ ಬಾಬಾರವರ ದಾಗಿಯೇ ಇದ್ದಾರೆ ಆದರೆ ಡಬಲ್ ವಿದೇಶಿಯರನ್ನು ನೋಡಿ ಬಾಪ್ದಾದರವರು ವಿಶೇಷ ಖುಷಿಪಡುತ್ತಾರೆ. ಏಕೆ ಖುಷಿ ಪಡುತ್ತಾರೆ? ಬಾಪ್ದಾದರವರು ನೋಡಿದ್ದಾರೆ ಭಾರತದಲಂತೂ ಬಾಬಾ ಬಂದಿದ್ದಾರೆ ಆದ್ದರಿಂದ ಭಾರತವಾಸಿಯರಿಗೆ ಈ ನಶೆ ಎಕ್ಸ್ ಟ್ರಾ ಇದೆ ಆದರೆ ಡಬಲ್ ಫಾರಿನರ್ಸ್ಗಳೊಂದಿಗೆ ಪ್ರೀತಿ ಏಕೆ ಇದೆ ಎಂದರೆ- ಭಿನ್ನ-ಭಿನ್ನ ಕಲ್ಚರ್ ಇದ್ದರೂ ಸಹ ಬ್ರಾಹ್ಮಣ ಕಲ್ಚರ್ನಲ್ಲಿ ಪರಿವರ್ತನೆ ಆಗಿಬಿಟ್ಟಿರಿ. ಆಗಿಬಿಟ್ಟಿದ್ದೀರಿ ಅಲ್ಲವೇ? ಈಗಂತೂ ಸಂಕಲ್ಪ ಬರುವುದಿಲ್ಲ- ಇದು ಭಾರತದ ಕಲ್ಚರ್ ಆಗಿದೆ, ನಮ್ಮ ಕಲ್ಚರ್ ಅಂತೂ ಬೇರೆಯಾಗಿದೆ. ಇಲ್ಲ. ಈಗ ಬಾಪ್ದಾದಾರವರು ಫಲಿತಾಂಶದಲ್ಲಿ ನೋಡುತ್ತಿದ್ದಾರೆ, ಎಲ್ಲರೂ ಒಂದು ಕಲ್ಚರಿನವರಾಗಿ ಬಿಟ್ಟಿದ್ದಾರೆ. ಎಲ್ಲಿಯವರೇ ಆಗಿರಲಿ, ಸಾಕಾರ ಶರೀರಕ್ಕಾಗಿ ಭಿನ್ನ-ಭಿನ್ನ ದೇಶವಿದೆ ಆದರೆ ಆತ್ಮ ಬ್ರಾಹ್ಮಣ ಕಲ್ಚರಿನ ದಾಗಿದೆ ಹಾಗೂ ಡಬಲ್ ಫಾರಿನರ್ಸ್ನ ಒಂದು ಮಾತು ಬಾಪ್ದಾದಾರವರಿಗೆ ಬಹಳ ಒಳ್ಳೆಯದನಿಸುತ್ತದೆ, ಅದು ಯಾವುದು ಗೊತ್ತಿದೆಯೇ? (ಬೇಗ ಸೇವೆ ಮಾಡಲು ತೊಡಗಿ ಬಿಟ್ಟಿದ್ದಾರೆ) ಇನ್ನು ಹೇಳಿ? (ನೌಕರಿಯು ಮಾಡುತ್ತಾರೆ, ಸೇವೆಯು ಮಾಡುತ್ತಾರೆ) ಇದನ್ನು ಅಂತೂ ಭಾರತದಲ್ಲಿಯೂ ಮಾಡುತ್ತಾರೆ. ಭಾರತದಲ್ಲಿಯೂ ನೌಕರಿ ಮಾಡುತ್ತಾರೆ. (ಏನೇ ಆಗುತ್ತದೆ ಎಂದರೆ ಸತ್ಯತೆಯಿಂದ ತಮ್ಮ ಬಲಹೀನತೆಯನ್ನು ಹೇಳುತ್ತಾರೆ, ಸ್ಪಷ್ಟವಾದಿ ಆಗಿದ್ದಾರೆ) ಒಳ್ಳೆಯದು, ಭಾರತದವರು ಸಷ್ಟವಾದಿ ಆಗಿಲ್ಲವೇ?

ಬಾಪ್ದಾದಾ ಇದನ್ನು ನೋಡಿದರು- ಬಲೆ ದೂರ ಇರುತ್ತಾರೆ ಆದರೆ ತಂದೆಯ ಪ್ರೀತಿಯ ಕಾರಣ ಪ್ರೀತಿಯಲ್ಲಿ ಬಹುತೇಕರು ಸಮೀಪ ಇದ್ದಾರೆ. ಭಾರತಕ್ಕೆ ಅಂತೂ ಭಾಗ್ಯ ಇದ್ದೇ ಇದೆ ಆದರೆ ದೂರ ಇದ್ದರು ಎಲ್ಲರೂ ಪ್ರೀತಿಯಲ್ಲಿ ಸಮೀಪ ಇದ್ದಾರೆ. ಒಂದುವೇಳೆ ಬಾಪ್ದಾದಾ ಕೇಳುತ್ತಾರೆ ಪ್ರೀತಿಯಲ್ಲಿ ಎಷ್ಟು ಪಸೆರ್ಂಟ್ ಇದ್ದೀರಿ? ತಂದೆಯ ಪ್ರೀತಿಯ ಸಬ್ಜೆಕ್ಟ್ನಲ್ಲಿ ಪಸೆರ್ಂಟೇಜ್ ಇದೆಯೇ? ಯಾರು ನೂರು ಪಸೆರ್ಂಟ್ ಪ್ರೀತಿಯಲ್ಲಿ ಇದ್ದೇವೆ ಎಂದು ತಿಳಿಯುತ್ತೀರಿ ಅವರು ಕೈ ಎತ್ತಿ. (ಎಲ್ಲರೂ ಕೈ ಎತ್ತಿದರು) ಒಳ್ಳೆಯದು- ನೂರು ಪಸೆರ್ಂಟ್? ಭಾರತ ವಾಸಿಯವರು ಕೈ ಎತ್ತುತ್ತಿಲ್ಲ? ನೋಡಿ ಭಾರತಕಂತೂ ಎಲ್ಲರಿಗಿಂತ ದೊಡ್ಡ ಭಾಗ್ಯ ಸಿಕ್ಕಿದೆ- ತಂದೆ ಭಾರತದಲ್ಲಿಯೇ ಬಂದಿದ್ದಾರೆ. ಇದರಲ್ಲಿ ತಂದೆಗೆ ಅಮೇರಿಕ ಇಷ್ಟವಾಗಿಲ್ಲ, ಆದರೆ ಭಾರತ ಇಷ್ಟವಾಯಿತು. ಇವರು (ಅಮೇರಿಕಾದ ಗಾಯತ್ರಿ ಸಹೋದರಿ) ಸಮ್ಮುಖದಲ್ಲಿ ಕುಳಿತಿದ್ದಾರೆ ಆದ್ದರಿಂದ ಅಮೇರಿಕ ಎಂದು ಹೇಳುತ್ತಿದ್ದೇವೆ. ಆದರೆ ದೂರ ಇದ್ದರೂ ಸಹ ಒಳ್ಳೆಯ ಪ್ರೀತಿ ಇದೆ. ತೊಂದರೆಗಳು ಬರುತ್ತದೆ ಆದರೂ ಸಹ ಬಾಬಾ ಬಾಬಾ ಎಂದು ಹೇಳಿ ಅಳಿಸಿ ಬಿಡುತ್ತೀರಿ. ಪ್ರೀತಿಯಲ್ಲಿ ಅಂತೂ ಬಾಪ್ದಾದಾರವರು ಸಹ ಪಾಸ್ ಮಾಡಿಬಿಟ್ಟಿದ್ದಾರೆ ಇನ್ನು ಯಾವುದರಲ್ಲಿ ಪಾಸ್ ಆಗಬೇಕು? ಆಗಬೇಕಲ್ಲವೇ. ಆಗಿದ್ದೀರಿ ಹಾಗೂ ಇನ್ನೂ ಆಗಬೇಕು! ಅಂದ ಮೇಲೆ ವರ್ತಮಾನ ಸಮಯ ಪ್ರಮಾಣ ಬಾಪ್ದಾದಾರವರು ಇದನ್ನೇ ಬಯಸುತ್ತಾರೆ- ಪ್ರತಿಯೊಬ್ಬ ಮಗುವಿನಲ್ಲಿ ಸ್ವ ಪರಿವರ್ತನೆಯ ಶಕ್ತಿಯ ಪಸೆರ್ಂಟೇಜ್, ಹೇಗೆ ಪ್ರೀತಿಯ ಶಕ್ತಿಯಲ್ಲಿ ಎಲ್ಲರೂ ಕೈ ಎತ್ತಿದರು, ಎಲ್ಲರೂ ಕೈ ಎತ್ತಿದರು ಅಲ್ಲವೇ! ಅದೇ ಪ್ರಮಾಣ ಸ್ವ ಪರಿವರ್ತನೆಯಲ್ಲಿಯೂ ತೀವ್ರಗತಿ ಇದೆಯೇ? ಇದರಲ್ಲಿ ಅರ್ಧ ಕೈ ಎತ್ತುವಿರಾ ಅಥವಾ ಪೂರ್ಣವಾಗಿ ಎತ್ತುವಿರ? ಹೇಗೆ ಎತ್ತುವಿರಿ? ಪರಿವರ್ತನೆಯನ್ನು ಮಾಡುತ್ತೀರಿ ಆದರೆ ಅದರಲ್ಲಿ ಸಮಯ ಹಿಡಿಸುತ್ತದೆ. ಸಮಯದ ಸಮೀಪತೆಯ ಪ್ರಮಾಣ ಸ್ವ ಪರಿವರ್ತನೆಯ ಶಕ್ತಿ ಇಷ್ಟು ತೀವ್ರವಾಗಿರಬೇಕು- ಹೇಗೆ ಕಾಗದದ ಮೇಲೆ ಬಿಂದಿ ಇಡುತ್ತೀರಿ ಎಂದರೆ ಎಷ್ಟು ಸಮಯ ಹಿಡಿಸುತ್ತದೆ? ಎಷ್ಟು ಸಮಯ ಹಿಡಿಸುತ್ತದೆ? ಬಿಂದಿ ಇಡುವುದರಲ್ಲಿ ಎಷ್ಟು ಸಮಯ ಹಿಡಿಸುತ್ತದೆ? ಕ್ಷಣವು ಬೇಕಾಗಿಲ್ಲ. ಸರಿಯಲ್ಲವೇ! ಅಂದ ಮೇಲೆ ಇಂತಹ ತೀವ್ರಗತಿ ಇದೆಯೇ? ಇದರಲ್ಲಿ ಕೈ ಎತ್ತಬಹುದೇ? ಇದರಲ್ಲಿ ಅರ್ಧ ಕೈ ಎತ್ತುವರು. ಸಮಯದ ಗತಿ ತೀವ್ರವಾಗಿದೆ, ಸ್ವ ಪರಿವರ್ತನೆಯ ಶಕ್ತಿ ಇಷ್ಟು ತೀವ್ರವಾಗಿರಬೇಕು ಹಾಗೂ ಯಾವಾಗ ಪರಿವರ್ತನೆ ಎಂದು ಹೇಳುತ್ತೀರಿ ಎಂದರೆ ಪರಿವರ್ತನೆಗೆ ಮೊದಲು ಸದಾ ಸ್ವ ಎಂಬ ಶಬ್ದವನ್ನು ನೆನಪಿಟ್ಟುಕೊಳ್ಳಿ. ಪರಿವರ್ತನೆ ಅಲ್ಲ, ಸ್ವ ಪರಿವರ್ತನೆ. ಬಾಪ್ದಾದರವರಿಗೆ ನೆನಪಿದೆ- ಮಕ್ಕಳು ಬಾಪ್ದಾದರೊಂದಿಗೆ ಒಂದು ವರ್ಷಕ್ಕಾಗಿ ಪ್ರತಿಜ್ಞೆ ಮಾಡಿದ್ದರು - ‘ಸಂಸ್ಕಾರ ಪರಿವರ್ತನೆಯಿಂದ ಸಂಸಾರ ಪರಿವರ್ತನೆ ಮಾಡುತ್ತೇವೆ’. ನೆನಪಿದೆಯೇ? ವರ್ಷವನ್ನು ಆಚರಿಸಿದಿರಿ’ ಸಂಸ್ಕಾರ ಪರಿವರ್ತನೆಯಿಂದ ಸಂಸಾರ ಪರಿವರ್ತನೆ’. ಸಂಸಾರದ ಗತಿಯಂತೂ ಅತಿಯಲ್ಲಿ ಹೋಗುತ್ತಿದೆ ಆದರೆ ಸಂಸ್ಕಾರ ಪರಿವರ್ತನೆಯ ವೇಗ ಇಷ್ಟು ತೀವ್ರವಾಗಿದೆಯೇ? ಹಾಗೆ ನೋಡಿದರೆ ಫಾರಿನ್ನ ವಿಶೇಷತೆಯಾಗಿದೆ, ಸಾಧಾರಣ ರೂಪದಲ್ಲಿ, ಫಾರಿನ್ ತೀವ್ರವಾಗಿ ನಡೆಯುತ್ತದೆ, ಫಾಸ್ಟ್ ಮಾಡುತ್ತಾರೆ. ಅಂದಮೇಲೆ ತಂದೆ ಕೇಳುತ್ತಾರೆ- ಸಂಸ್ಕಾರ ಪರಿವರ್ತನೆಯಲ್ಲಿ ಫಾಸ್ಟ್ ಇದ್ದೀರ? ಬಾಪ್ದಾದರವರು ಸ್ವ ಪರಿವರ್ತನೆಯ ಗತಿ ಈಗ ತೀವ್ರ ನೋಡಲು ಬಯಸುತ್ತಾರೆ. ಎಲ್ಲರೂ ಕೇಳುತ್ತೀರಿ ಅಲ್ಲವೇ! ಬಾಪ್ ದಾದರವರು ಏನನ್ನು ಬಯಸುತ್ತಾರೆ? ಪರಸ್ಪರ ಆತ್ಮಿಕ ವಾರ್ತಾಲಾಪ ಮಾಡುತ್ತೀರಿ ಅಲ್ಲವೇ, ಅಂದ ಮೇಲೆ ಒಬ್ಬರು ಇನ್ನೊಬ್ಬರೊಂದಿಗೆ ಕೇಳುತ್ತೀರಿ ಬಾಪ್ದಾದರವರು ಏನನ್ನು ಬಯಸುತ್ತಾರೆ? ಬಾಪ್ ದಾದರವರು ಇದನ್ನೇ ಬಯಸುತ್ತಾರೆ. ಸೆಕೆಂಡ್ ನಲ್ಲಿ ಬಿಂದಿ ಇಡಿ. ಹೇಗೆ ಕಾಗದದ ಮೇಲೆ ಬಿಂದಿ ಇಡುತ್ತೀರಿ ಅಲ್ಲವೇ, ಅದಕ್ಕಿಂತ ಫಾಸ್ಟ್, ಪರಿವರ್ತನೆಯಲ್ಲಿ ಏನೆಲ್ಲ ಅಯತಾರ್ಥ ಇದೆ ಅದರಲ್ಲಿ ಬಿಂದು ಇಡಿ. ಬಿಂದುವನ್ನು ಇಡಲು ಬರುತ್ತದೆಯೇ? ಬರುತ್ತದೆ ಅಲ್ಲವೇ! ಆದರೆ ಕೆಲವೊಮ್ಮೆ ಪ್ರಶ್ನಾರ್ಥಕ ಚಿನ್ಹೆ ಬಂದುಬಿಡುತ್ತದೆ. ಬಿಂದಿಯನ್ನು ಇಡುತ್ತೀರಿ ಹಾಗೂ ಅದು ಪ್ರಶ್ನಾರ್ಥಕ ಚಿನ್ಹೆ ಆಗಿಬಿಡುತ್ತದೆ. ಇದು ಏಕೆ, ಇದು ಏನು? ಈ ಏಕೆ ಹಾಗೂ ಏನು... ಇದು ಬಿಂದುವನ್ನು ಪ್ರಶ್ನಾರ್ಥಕ ಚಿಹ್ನೆಯಲ್ಲಿ ಬದಲಾಯಿಸಿಬಿಡುತ್ತದೆ. ಬಾಪ್ ದಾದಾರವರು ಮೊದಲು ಸಹ ಹೇಳಿದ್ದರು- ವೈ, ವೈ ಎನ್ನಬೇಡಿ, ಏನನ್ನು ಹೇಳಿ? ಫ್ಲೈ ಅಥವಾ ವಾಹ! ವಾಹ! ಮಾಡಿ ಅಥವಾ ಫ್ಲೈ ಮಾಡಿ. ವೈ, ವೈ ಮಾಡಬೇಡಿ. ವೈ, ವೈ ಮಾಡುವುದು ಬೇಗ ಬಂದುಬಿಡುತ್ತದೆ! ಬರುತ್ತದೆ ಅಲ್ಲವೇ? ಯಾವಾಗ ವೈ ಬರುತ್ತದೆ ಆಗ ವಾ ವಾ ಮಾಡಿಬಿಡಿ. ಯಾರೇ ಏನೇ ಮಾಡುತ್ತಾರೆಂದರೆ, ವಾಹ ಡ್ರಾಮಾ ವಾಹ ಎಂದು ಹೇಳಿ! ಇವರು ಏಕೆ ಮಾಡುತ್ತಾರೆ, ಇವರು ಏಕೆ ಹೇಳುತ್ತಾರೆ, ಅಲ್ಲ. ಇವರು ಮಾಡುತ್ತಾರೆ ಎಂದರೆ ನಾನೂ ಸಹ ಮಾಡುತ್ತೇನೆ ಈ ರೀತಿ ಅಲ್ಲ.

ಇತ್ತೀಚಿಗೆ ಬಾಪ್ದಾದರವರು ನೋಡುತ್ತಿದ್ದರು, ಹೇಳಲೇ! ಪರಿವರ್ತನೆ ಮಾಡಬೇಕಲ್ಲವೇ ಇತ್ತೀಚಿಗೆ ಫಲಿತಾಂಶದಲ್ಲಿ ವಿದೇಶದಲ್ಲಾಗಲಿ ಅಥವಾ ಭಾರತದಲ್ಲಿ ಆಗಿರಲಿ ಎರಡು ಕಡೆ ಒಂದು ಮಾತಿನ ಅಲೆ ಇದೆ, ಅದು ಯಾವುದು? ಈ ರೀತಿ ಆಗಬೇಕು, ಇದು ಸಿಗಬೇಕು, ಇದು ಇವರು ಮಾಡಬೇಕು... ನಾನು ಏನನ್ನು ಯೋಚಿಸುತ್ತೇನೆ, ಹೇಳುತ್ತೇನೆ ಅದೇ ನಡೆಯಬೇಕು.. ಈ ಬೇಕು ಬೇಕು ಎನ್ನುವ ಮಾತು ಸಂಕಲ್ಪದಲ್ಲಿಯೂ ಇದ್ದರೆ ಅದು ವ್ಯರ್ಥ ಸಂಕಲ್ಪವಾಗಿದೆ, ವ್ಯರ್ಥ ಸಂಕಲ್ಪ ಬೆಸ್ಟ್ ಆಗಲು ಬಿಡುವುದಿಲ್ಲ. ಬಾಪ್ದಾದರವರು ಎಲ್ಲರ ವೇಸ್ಟ್ನ ಚಾರ್ಟ್ ಸ್ವಲ್ಪ ಸಮಯಕ್ಕಾಗಿ ನೋಟ್ ಮಾಡಿದ್ದಾರೆ. ಚೆಕ್ ಮಾಡಿದರು. ಬಾಪ್ದಾದಾರವರ ಬಳಿಯಂತೂ ಪವರ್ಫುಲ್ ಮಷೀನರಿ ಇದೆ ಅಲ್ಲವೇ. ನಿಮ್ಮಂತಹ ಕಂಪ್ಯೂಟರ್ ಇಲ್ಲ, ನಿಮ್ಮ ಕಂಪ್ಯೂಟರ್ ಅಂತೂ ಬೈಗುಳವನ್ನು ಸಹ ಕೊಡುತ್ತದೆ. ಆದರೆ ಬಾಪ್ದಾದಾರವರ ಬಳಿ ಚೆಕಿಂಗ್ ಮಷಿನರಿ ಬಹಳ ಫಾಸ್ಟ್ ಇದೆ. ಬಾಪ್ದಾದಾರವರು ನೋಡಿದರು ಬಹುತೇಕರ ವ್ಯರ್ಥ ಇಡೀ ದಿನದಲ್ಲಿ ಮಧ್ಯ ಮಧ್ಯದಲ್ಲಿ ನಡೆಯುತ್ತದೆ. ಏನಾಗುತ್ತದೆ ಎಂದರೆ ವ್ಯರ್ಥ ಸಂಕಲ್ಪಗಳ ತೂಕ ಭಾರಿ ಯಾಗಿರುತ್ತದೆ ಹಾಗೂ ಬೆಸ್ಟ್ ಥಾಟ್ಸ್ ನ (ಸಮರ್ಥ ಸಂಕಲ್ಪಗಳು) ತೂಕ ಕಡಿಮೆ ಇರುತ್ತದೆ. ಅಂದಮೇಲೆ ಈ ಮಧ್ಯಮಧ್ಯದಲ್ಲಿ ಯಾವ ವ್ಯರ್ಥ ಸಂಕಲ್ಪಗಳು ನಡೆಯುತ್ತದೆ ಅದು ಬುದ್ಧಿಯನ್ನು ಭಾರಿ ಮಾಡಿಬಿಡುತ್ತದೆ. ಪುರುಷಾರ್ಥವನ್ನು ಭಾರಿ ಮಾಡಿಬಿಡುತ್ತದೆ, ಬೋಜ ಆಗಿದೆ ಅಲ್ಲವೇ ಅದು ತನ್ನ ಕಡೆ ಸೆಳೆಯುತ್ತದೆ ಆದ್ದರಿಂದ ಶುಭ ಸಂಕಲ್ಪ ಯಾವುದು ಸ್ವ ಉನ್ನತಿಯ ಲಿಫ್ಟ್ ಆಗಿದೆ, ಮೆಟ್ಟಿಲಲ್ಲ ಆದರೆ ಲಿಫ್ಟ್ ಆಗಿದೆ ಅದು ಕಡಿಮೆ ಆಗಿರುವ ಕಾರಣ, ಪರಿಶ್ರಮದ ಮೆಟ್ಟಿಲು ಹತ್ತಬೇಕಾಗಿ ಬರುತ್ತದೆ. ಕೇವಲ ಎರಡು ಶಬ್ಧವನ್ನು ನೆನಪಿಟ್ಟುಕೊಳ್ಳಿ- ವ್ಯರ್ಥವನ್ನು ಸಮಾಪ್ತಿ ಮಾಡುವುದಕ್ಕಾಗಿ ಅಮೃತ ವೇಳೆಯಿಂದ ಹಿಡಿದು ರಾತ್ರಿಯವರೆಗೂ ಎರಡು ಸಂಕಲ್ಪದಲ್ಲಿ, ಮಾತಿನಲ್ಲಿ ಹಾಗೂ ಕರ್ಮದಲ್ಲಿ, ಕಾರ್ಯದಲ್ಲಿ ತೊಡಗಿಸಿ. ಪ್ರಾಕ್ಟಿಕಲ್ನಲ್ಲಿ ತನ್ನಿ. ಆ ಎರಡು ಶಬ್ಧಗಳಾಗಿದೆ- ಸ್ವಮಾನ ಹಾಗೂ ಸನ್ಮಾನ. ಸ್ವಮಾನದಲ್ಲಿ ಇರಬೇಕು ಹಾಗೂ ಸನ್ಮಾನವನ್ನು ಕೊಡಬೇಕು ಯಾರೇ ಹೇಗೆ ಇರಲಿ, ನಾವು ಸನ್ಮಾನ ಕೊಡಬೇಕು. ಸನ್ಮಾನ ಕೊಡಬೇಕು, ಸ್ವಮಾನದಲ್ಲಿ ಸ್ಥಿತರಾಗಬೇಕು. ಎರಡರ ಬ್ಯಾಲೆನ್ಸ್ ಬೇಕಾಗಿದೆ. ಕೆಲವೊಮ್ಮೆ ಸ್ವಮಾನದಲ್ಲಿ ಜಾಸ್ತಿ ಇರುತ್ತೀರಿ ಕೆಲವೊಮ್ಮೆ ಸನ್ಮಾನ ಕೊಡುವುದರಲ್ಲಿ ಕಡಿಮೆಯಾಗಿ ಬಿಡುತ್ತದೆ. ಅನ್ಯರು ಸನ್ಮಾನ ಕೊಟ್ಟರೆ ನಾನು ಸನ್ಮಾನ ಕೊಡುತ್ತೇನೆ,. ಹೀಗಲ್ಲ. ನಾನು ದಾತ ಆಗಬೇಕು. ಶಿವಶಕ್ತಿ ಪಾಂಡವ ಸೇನೆ ದಾತನ ಮಕ್ಕಳು ದಾತ ಆಗಿದ್ದಾರೆ. ಅವರು ಕೊಟ್ಟರೆ ನಾನು ಕೊಡುತ್ತೇನೆ, ಇದಂತೂ ವ್ಯಾಪಾರ ಆಯಿತು, ದಾತ ಆಗಿಲ್ಲ. ಅಂದಮೇಲೆ ತಾವು ಬಿಸಿನೆಸ್ ಮ್ಯಾನ್(ವ್ಯಾಪಾರ ಗಾರ) ಆಗಿದ್ದೀರಾ ಅಥವಾ ದಾತ ಆಗಿದ್ದೀರಾ? ದಾತ ಎಂದೂ ಸಹ ಪಡೆಯುವವರಾಗಿರುವುದಿಲ್ಲ. ತಮ್ಮ ವೃತ್ತಿ ಹಾಗೂ ದೃಷ್ಟಿಯಲ್ಲಿ ಇದೆ ಲಕ್ಷ್ಯವನ್ನು ಇಟ್ಟುಕೊಳ್ಳಿ. ನಾನು ಸದಾ ಪ್ರತಿಯೊಬ್ಬರ ಪ್ರತಿ ಅರ್ಥತ್, ಸರ್ವರ ಪ್ರತಿ ಬಲೇ ಅಜ್ಞಾನಿ ಆಗಿರಲಿ, ಅಥವಾ ಜ್ಞಾನಿ ಆಗಿರಲಿ, ಅಜ್ಞಾನಿಯರ ಪ್ರತಿ ಅಂತೂ ಶುಭ ಭಾವನೆಯನ್ನು ಇಡುತ್ತೀರಿ ಆದರೆ ಜ್ಞಾನಿತು ಆತ್ಮರ ಪ್ರತಿ ಪರಸ್ಪರರಲ್ಲಿ ಪ್ರತಿ ಸಮಯ ಶುಭ ಭಾವನೆ, ಶುಭಕಾಮನೆ ಇರಲಿ. ಇಂತಹ ವೃತ್ತಿ ಆಗಲಿ, ಇಂತಹ ದೃಷ್ಟಿ ಆಗಲಿ. ಹೇಗೆ ದೃಷ್ಟಿಯಲ್ಲಿ ಸ್ಥೂಲ ಬಿಂದು ಇದೆ. ಎಂದಾದರೂ ಬಿಂದಿ ಮಾಯವಾಗುತ್ತದೆಯೇ! ಒಂದುವೇಳೆ ಕಣ್ಣುಗಳಿಂದ ಬಿಂದು ಮಾಯವಾದರೆ ಏನಾಗುವುದು? ನೋಡಲು ಸಾಧ್ಯವೇ? ಅಂದಮೇಲೆ ಹೇಗೆ ಕಣ್ಣುಗಳಲ್ಲಿ ಬಿಂದಿ ಇದೆ, ಅದೇ ರೀತಿ ಆತ್ಮ ಹಾಗೂ ತಂದೆ ಬಿಂದು ನಯನಗಳಲ್ಲಿ ಸಮಾವೇಶವಾಗಿರಲಿ. ಹೇಗೆ ನೋಡುವ ಬಿಂದಿ ಎಂದೂ ಸಹ ಮಾಯ ವಾಗುವುದಿಲ್ಲ, ಅದೇ ರೀತಿ ಆತ್ಮ ಹಾಗೂ ತಂದೆಯ ಸ್ಮೃತಿಯ ಬಿಂದಿ ವೃತ್ತಿಯಿಂದ, ದೃಷ್ಟಿಯಿಂದ ಮಾಯವಾಗದಿರಲಿ. ಫಾಲೋ ಫಾದರ್ ಮಾಡಬೇಕಲ್ಲವೇ! ಅಂದ ಮೇಲೆ ಹೇಗೆ ತಂದೆಯ ದೃಷ್ಟಿ ಹಾಗೂ ವೃತ್ತಿಯಲ್ಲಿ ಪ್ರತಿಯೊಂದು ಮಗುವಿಗಾಗಿ ಸ್ವಮಾನವಿದೆ, ಸನ್ಮಾನ ಇದೆ ಅದೇ ರೀತಿ ತಮ್ಮ ದೃಷ್ಟಿ ವೃತ್ತಿಯಲ್ಲಿ ಸ್ವಮಾನ, ಸನ್ಮಾನ ಇರಲಿ. ಸನ್ಮಾನ ಕೊಡುವುದರಿಂದ ಮನಸ್ಸಿನಲ್ಲಿ ಏನು ಬರುತ್ತದೆ- ಇವರು ಬದಲಾಗಲಿ, ಇದನ್ನು ಮಾಡದಿರಲಿ, ಇವರು ಹೀಗೆ ಆಗಲಿ, ಇದು ಶಿಕ್ಷಣದಿಂದ ಆಗುವುದಿಲ್ಲ ಆದರೆ ಸನ್ಮಾನ ಕೊಡುವುದರಿಂದ ಮನಸ್ಸಿನಲ್ಲಿ ಯಾವ ಸಂಕಲ್ಪ ಇರುತ್ತದೆ, ಹೀಗೆ ಆಗಲಿ, ಇವರು ಬದಲಾಗಲಿ, ಇವರು ಹೀಗೆ ಮಾಡಲಿ, ಅವರು ಹಾಗೆ ಮಾಡಲು ಶುರು ಮಾಡುತ್ತಾರೆ. ವೃತ್ತಿಯಿಂದ ಬದಲಾಗುತ್ತಾರೆ, ಮಾತುಗಳಿಂದ ಬದಲಾಗುವುದಿಲ್ಲ. ಅಂದ ಮೇಲೆ ಏನು ಮಾಡುವಿರಿ? ಸ್ವಮಾನ ಹಾಗೂ ಸನ್ಮಾನ, ಎರಡೂ ನೆನಪಿರುತ್ತದೆ ಅಲ್ಲವೇ ಅಥವಾ ಕೇವಲ ಸ್ವಮಾನ ನೆನಪಿರುತ್ತದೆಯೇ? ಸನ್ಮಾನ ಕೊಡುವುದು ಎಂದರೆ ಸನ್ಮಾನ ಪಡೆದುಕೊಳ್ಳುವುದು. ಯಾರಿಗೆ ಮಾನ್ಯತೆಯನ್ನು ಕೊಡುವುದು ಎಂದರೆ ಸ್ವಯಂ ಮಾನನೀಯರಾಗುವುದು. ಆತ್ಮಿಕ ಪ್ರೀತಿಯ ಚಿನ್ಹೆಯಾಗಿದೆ- ಅನ್ಯರ ಕೊರತೆಯನ್ನು ತಮ್ಮ ಶುಭ ಭಾವನೆ ಶುಭಕಾಮನೆಯಿಂದ ಪರಿವರ್ತನೆ ಮಾಡುವುದು. ಬಾಪ್ದಾದರವರು ಹಿಂದೆ ಸಂದೇಶವನ್ನು ಸಹ ಕಳುಹಿಸಿದ್ದರು- ವರ್ತಮಾನ ಸಮಯ ತಮ್ಮ ಸ್ವರೂಪ ತಯಾರು ಮಾಡಿಕೊಳ್ಳಿ, ದಯಾಹೈದಯಿ ಆಗಿ. ಲಾಸ್ಟ್ ಜನ್ಮದಲ್ಲಿಯೂ ಸಹ ತಮ್ಮ ಜಡ ಚಿತ್ರ ದಯಾಹೈದಯಿ ಆಗಿ ಭಕ್ತರ ಮೇಲೆ ದಯೆ ಮಾಡುತ್ತಿದೆ. ಯಾವಾಗ ಚಿತ್ರ ಇಷ್ಟು ದಯಾ ಹೃದಯ ಆಗಿದೆ ಅಂದ ಮೇಲೆ ಚೈತನ್ಯದಲ್ಲಿ ಹೇಗಿರಬಹುದು? ಚೈತನ್ಯವಂತು ದಯೆಯ ಗಣಿಯಾಗಿದೆ. ದಯೆಯ ಗಣಿ ಆಗಿಬಿಡಿ. ಏನೇ ಬರಲಿ ದಯೆ ಇದೆ. ಇದು ಪ್ರೀತಿಯ ಚಿನ್ಹೆಯಾಗಿದೆ. ಮಾಡಬೇಕಲ್ಲವೇ? ಅಥವಾ ಕೇವಲ ಕೇಳಬೇಕೆ? ಮಾಡಲೇ ಬೇಕು, ಆಗಲೇಬೇಕು. ಅಂದ ಮೇಲೆ ಬಾಪ್ದಾದಾ ಏನನ್ನು ಬಯಸುತ್ತಾರೆ, ಇದರ ಉತ್ತರವನ್ನು ಕೊಡುತ್ತಿದ್ದಾರೆ. ಪ್ರಶ್ನೆ ಮಾಡುತ್ತಿರಲ್ಲವೇ, ಅಂದ ಮೇಲೆ ಬಾಪ್ದಾದಾರವರು ಉತ್ತರಿಸುತ್ತಿದ್ದಾರೆ.

ವರ್ತಮಾನ ಸಮಯ ಸೇವೆಯಲ್ಲಿ ವೃದ್ಧಿ, ಚೆನ್ನಾಗಿ ನಡೆಯುತ್ತಿದೆ, ಭಾರತದಲ್ಲಿ ಆಗಿರಲಿ, ವಿದೇಶದಲ್ಲಾಗಿರಲಿ ಆದರೆ ಬಾಪ್ದಾದಾರವರು ಬಯಸುತ್ತಾರೆ- ಇಂತಹ ಯಾವುದೇ ಒಂದು ಆತ್ಮನನ್ನು ನಿಮಿತ್ತವನ್ನಾಗಿ ಮಾಡಿ ಯಾರು ವಿಶೇಷ ಕಾರ್ಯ ಮಾಡಿ ತೋರಿಸಬೇಕು. ಈ ರೀತಿ ಯಾರಾದರೂ ಸಹ ಯೋಗಿ ಆಗಲಿ ಯಾರು ಇಲ್ಲಿಯವರೆಗೂ ಮಾಡಲು ಬಯಸುತ್ತಾರೆ, ಅವರು ಮಾಡಿ ತೋರಿಸಲಿ. ಕಾರ್ಯಕ್ರಮಗಳಂತೂ ಬಹಳ ಮಾಡಿದ್ದೀರಿ, ಎಲ್ಲೆಲ್ಲಿ ಕಾರ್ಯಕ್ರಮಗಳನ್ನು ಮಾಡಿದ್ದೀರಿ ಆ ಎಲ್ಲಾ ಕಾರ್ಯಕ್ರಮಗಳ ಎಲ್ಲಾ ಕಡೆಯವರಿಗೆ ಬಾಪ್ದಾದರವರು ಶುಭಾಶಯಗಳು ಕೊಡುತ್ತಿದ್ದಾರೆ. ಈಗ ಯಾವುದಾದರೂ ಬೇರೆ ನವೀನತೆಯನ್ನು ತೋರಿಸಿ. ಯಾರು ತಮ್ಮ ಕಡೆಯಿಂದ ತಮ್ಮ ಸಮಾನ ಬಾಬಾರವರ ಪ್ರತ್ಯಕ್ಷತೆಯನ್ನು ಮಾಡಲಿ. ಪರಮಾತ್ಮನ ವಿದ್ಯೆಯಾಗಿದೆ, ಇದು ಮುಖದಿಂದ ಹೊರಬರಲಿ. ಬಾಬಾ ಎನ್ನುವ ಶಬ್ದ ಹೃದಯದಿಂದ ಹೊರಬರಲಿ. ಸಹಯೋಗಿ ಆಗುತ್ತೀರಿ, ಆದರೆ ಈಗ ಒಂದು ಮಾತು ಯಾವುದು ಉಳಿದುಕೊಂಡು ಬಿಟ್ಟಿದೆ - ಇವರು ಒಬ್ಬರಾಗಿದ್ದಾರೆ, ಇವರೇ ಒಬ್ಬರಾಗಿದ್ದಾರೆ, ಇವರೇ ಒಬ್ಬರಾಗಿದ್ದಾರೆ... ಈ ಶಬ್ದ ಮೊಳಗಲಿ. ಬ್ರಹ್ಮಕುಮಾರಿಯರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ, ಮಾಡಬಲ್ಲರು, ಇಲ್ಲಿಯವರೆಗಂತು ಬಂದಿದ್ದಾರೆ ಆದರೆ, ಇವರೇ ಒಬ್ಬರಾಗಿದ್ದಾರೆ ಹಾಗೂ ಪರಮಾತ್ಮನ ಜ್ಞಾನವಾಗಿದೆ. ತಂದೆಯನ್ನು ಪ್ರತ್ಯಕ್ಷ ಮಾಡುವವರು ಯಾವುದೇ ಭಯವಿಲ್ಲದೆ ಹೇಳಲಿ. ತಾವು ಹೇಳುತ್ತೀರಿ ಪರಮಾತ್ಮ ಕಾರ್ಯ ಮಾಡಿಸಿಕೊಳ್ಳುತ್ತಿದ್ದಾರೆ, ಪರಮಾತ್ಮನ ಕಾರ್ಯವಾಗಿದೆ ಆದರೆ ಅವರು ಹೇಳಲಿ- ಯಾವ ಪರಮಾತ್ಮ ತಂದೆಯನ್ನು ಎಲ್ಲರೂ ಕರೆಯುತ್ತಿದ್ದಾರೆ, ಆ ಜ್ಞಾನವಿದೆ. ಈಗ ಈ ಅನುಭವವನ್ನು ಮಾಡಿಸಿ. ಹೇಗೆ ನಿಮ್ಮ ಹೃದಯದಲ್ಲಿ ಪ್ರತಿ ಸಮಯ ಏನಿರುತ್ತದೆ? ಬಾಬಾ, ಬಾಬಾ, ಬಾಬಾ... ಇಂತಹ ಯಾವುದಾದರೂ ಒಂದು ಗ್ರೂಪ್ ಹೊರಬರಲಿ. ಒಳ್ಳೆಯದು, ಮಾಡಬಲ್ಲಿರಿ, ಇಲ್ಲಿಯವರೆಗಂತು ಚೆನ್ನಾಗಿದೆ. ಪರಿವರ್ತನೆ ಆಗಿದೆ. ಆದರೆ ಅಂತಿಮ ಪರಿವರ್ತನೆಯಾಗಿದೆ- ಒಬ್ಬರೇ ಆಗಿದ್ದಾರೆ, ಒಬ್ಬರೇ ಆಗಿದ್ದಾರೆ, ಒಬ್ಬರೇ ಆಗಿದ್ದಾರೆ. ಇದು ಆಗ ಆಗುತ್ತದೆ ಯಾವಾಗ ಬ್ರಾಹ್ಮಣ ಪರಿವಾರ ಏಕರಸ ಸ್ಥಿತಿಯವರು ಆಗಿಬಿಡುವರು. ಈಗ ಸ್ಥಿತಿ ಬದಲಾವಣೆ ಆಗುತ್ತಾ ಇರುತ್ತದೆ. ಏಕರಸ ಸ್ಥಿತಿ ಒಬ್ಬರನ್ನು ಪ್ರತ್ಯಕ್ಷ ಮಾಡಿಸುತ್ತದೆ. ಸರಿ ಅಲ್ಲವೇ! ಅಂದ ಮೇಲೆ ಡಬಲ್ ಫಾರಿನರ್ಸ್ ಉದಾಹರಣೆಯಾಗಿ. ಸನ್ಮಾನ ಕೊಡುವುದರಲ್ಲಿ, ಸ್ವಮಾನದಲ್ಲಿ ಇರುವುದರಲ್ಲಿ ಉದಾಹರಣೆಯಾಗಿ, ನಂಬರ್ ತೆಗೆದುಕೊಳ್ಳಿ. ನಾಲ್ಕಾರು ಕಡೆ ಹೇಗೆ ಮೋಹಜಿತ ಪರಿವಾರದ ಉದಾಹರಣೆಯನ್ನು ಕೊಡುತ್ತಾರೆ, ಎಲ್ಲಿ ಪ್ಯೂನ್ ಸಹ, ನೌಕರ ಸಹ ಎಲ್ಲರೂ ಮೋಹಜಿತ ಆಗಿದ್ದಾರೆ. ಅದೇ ರೀತಿ ಅಮೇರಿಕಾಗೆ ಹೋಗಿ, ಆಸ್ಟ್ರೇಲಿಯಾಗೆ ಹೋಗಿ, ಪ್ರತಿಯೊಂದು ದೇಶದಲ್ಲಿ ಏಕರಸ, ಏಕಮತ, ಸಮಾನದಲ್ಲಿ ಇರುವಂತಹವರು, ಸನ್ಮಾನ ಕೊಡುವಂತಹವರು, ಇದರಲ್ಲಿ ಅಂಕಗಳನ್ನು ಪಡೆದುಕೊಳ್ಳಿ. ಪಡೆಯಲು ಸಾಧ್ಯವೇ?

ನಾಲ್ಕಾರು ಕಡೆಯ ಬಾಬಾರವರ ನಯನಗಳಲ್ಲಿ ಸಮಾವೇಶವಾಗಿರುವ, ನಯನಗಳ ಕಣ್ಮಣಿ ಮಕ್ಕಳಿಗೆ ಸದಾ ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿರುವ ಮಕ್ಕಳಿಗೆ, ಸದಾ ಭಾಗ್ಯದ ನಕ್ಷತ್ರ ಹೊಳೆಯುತ್ತಿರುವ ಭಾಗ್ಯವಂತ ಮಕ್ಕಳಿಗೆ, ಸದಾ ಸ್ವಮಾನ ಹಾಗೂ ಸನ್ಮಾನ ಜೊತೆಯಲ್ಲಿ ಇಟ್ಟುಕೊಳ್ಳುವ ಮಕ್ಕಳಿಗೆ, ಸದಾ ಪುರುಷಾರ್ಥದ ತೀವ್ರಗತಿ ಮಾಡುವಂತಹ ಮಕ್ಕಳಿಗೆ ಬಾಪ್ ದಾದಾರವರ ನೆನಪು ಪ್ರೀತಿ, ಆಶೀರ್ವಾದ ಹಾಗೂ ನಮಸ್ತೆ.

ವರದಾನ:
ಸತ್ಯ ಜೊತೆಗಾರನ ಜೊತೆ ತೆಗೆದುಕೊಳ್ಳುವಂತಹ, ಸರ್ವರಿಂದ ನ್ಯಾರಾ, ಪ್ಯಾರಾ ನಿರ್ಮೋಹಿ ಭವ.

ಪ್ರತಿದಿನ ಅಮೃತವೇಳೆ ಸರ್ವ ಸಂಬಂಧಗಳ ಸುಖ ಬಾಪ್ದಾದಾರವರಿಂದ ಪಡೆದು ಬೇರೆಯವರಿಗೆ ದಾನ ಮಾಡಿ. ಸರ್ವ ಸುಖದ ಅಧಿಕಾರಿಯಾಗಿ ಅನ್ಯರಿಗೂ ಮಾಡಿಸಿ. ಯಾವುದೇ ಕಾರ್ಯದಲ್ಲೂ ಸಾಕಾರ ಜೊತೆಗಾರನ ನೆನಪು ಬರಬಾರದು. ಮೊದಲು ತಂದೆಯ ನೆನಪು ಬರಬೇಕು ಏಕೆಂದರೆ ಸತ್ಯ ಮಿತ್ರ ತಂದೆಯಾಗಿದ್ದಾರೆ. ಸತ್ಯ ಜೊತೆಗಾರನ ಜೊತೆ ತೆಗೆದುಕೊಂಡಾಗ ಸಹಜವಾಗಿ ಸರ್ವರಿಂದ ನ್ಯಾರಾ ಮತ್ತು ಪ್ಯಾರಾ ಆಗುವಿರಿ. ಯಾರು ಸರ್ವ ಸಂಬಂಧಗಳಿಂದ ಪ್ರತಿ ಕಾರ್ಯದಲ್ಲಿ ಒಬ್ಬ ತಂದೆಯನ್ನು ನೆನಪು ಮಾಡುತ್ತಾರೆ ಅವರು ಸಹಜವಾಗಿ ನಿರ್ಮೋಹಿಗಳಾಗುವರು. ಅವರಿಗೆ ಯಾವುದೇ ಕಡೆ ಸೆಳೆತ ಅರ್ಥಾತ್ ಬಾಗುವಿಕೆಯಿರುವುದಿಲ್ಲ ಆದ್ದರಿಂದ ಮಾಯೆಯಿಂದ ಸೋಲಾಗಲು ಸಾಧ್ಯವಿಲ್ಲ.

ಸ್ಲೋಗನ್:
ಮಾಯೆಯನ್ನು ನೋಡಲು ಅಥವಾ ತಿಳಿಯುವುದಕ್ಕಾಗಿ ತ್ರಿಕಾಲದರ್ಶಿ ಮತ್ತು ತ್ರಿನೇತ್ರಿಯಾಗಿ, ಆಗ ವಿಜಯಿಯಾಗುವಿರಿ.

ಅವ್ಯಕ್ತ ಸೂಚನೆ; ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಸತ್ಯತೆಯ ಚಿಹ್ನೆಯಾಗಿದೆ ಸಭ್ಯತೆ. ಒಂದುವೇಳೆ ತಾವು ಸತ್ಯವಾಗಿದ್ದೀರಿ, ನಿಮ್ಮಲ್ಲಿ ಸತ್ಯತೆಯ ಶಕ್ತಿ ಇದೆ ಎಂದ ಮೇಲೆ ಎಂದು ಸಹ ಸಭ್ಯತೆಯನ್ನು ಬಿಡಬೇಡಿ, ಸತ್ಯತೆಯನ್ನು ಸಿದ್ಧ ಮಾಡಿ ಆದರೆ ಸಭ್ಯತಾ ಪೂರ್ವಕವಾಗಿ. ಒಂದುವೇಳೆ ಸಭ್ಯತೆಯನ್ನು ಬಿಟ್ಟು ಅಸಭ್ಯತೆಯಲ್ಲಿ ಬಂದು ಸತ್ಯತೆಯನ್ನು ಸಿದ್ಧ ಮಾಡಲು ಬಯಸುತ್ತೀರಿ ಎಂದರೆ ಅದು ಸತ್ಯ ಸಿದ್ಧವಾಗುವುದಿಲ್ಲ. ಅಸಭ್ಯತೆಯ ಚಿಹ್ನೆಯಾಗಿದೆ ಹಠ ಹಾಗೂ ಸಭ್ಯತೆಯ ಚಿಹ್ನೆಯಾಗಿದೆ ನಿರ್ಮಾಣ. ಸತ್ಯವನ್ನು ಸಿದ್ಧ ಮಾಡುವವರು ಸದಾ ಸ್ವಯಂ ನಿರ್ಮಾಣ ಆಗಿ ಸಭ್ಯತಾ ಪೂರ್ವಕ ವ್ಯವಹಾರ ಮಾಡುವರು.