02.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ಹಳೆಯ, ಪತಿತ ಪ್ರಪಂಚದೊಂದಿಗೆ ನಿಮ್ಮ ಬೇಹದ್ದಿನ ವೈರಾಗ್ಯವನ್ನಿಟ್ಟುಕೊಳ್ಳಿ ಏಕೆಂದರೆ ನೀವು
ಪಾವನರಾಗಬೇಕಾಗಿದೆ, ನಿಮ್ಮ ಏರುವ ಕಲೆಯಿಂದ ಎಲ್ಲರ ಕಲ್ಯಾಣವಾಗುತ್ತದೆ”
ಪ್ರಶ್ನೆ:
ಆತ್ಮವು ತನಗೆ
ತಾನೇ ಶತ್ರು, ತನಗೆ ತಾನೇ ಮಿತ್ರ ಎಂದು ಹೇಳಲಾಗುತ್ತದೆ, ಅಂದಾಗ ಸತ್ಯ ಮಿತ್ರತ್ವ ಯಾವುದಾಗಿದೆ?
ಉತ್ತರ:
ಒಬ್ಬ ತಂದೆಯ
ಶ್ರೀಮತದಂತೆ ಸದಾ ನಡೆಯುತ್ತಿರುವುದೇ ಸತ್ಯ ಮಿತ್ರತ್ವವಾಗಿದೆ. ಒಬ್ಬ ತಂದೆಯನ್ನು ನೆನಪು ಮಾಡಿ
ಪಾವನರಾಗುವುದು ಮತ್ತು ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯುವುದೇ ಸತ್ಯಮಿತೃತ್ವವಾಗಿದೆ. ಈ
ಮಿತೃತ್ವ ಮಾಡಿಕೊಳ್ಳುವ ಯುಕ್ತಿಯನ್ನು ತಂದೆಯೇ ತಿಳಿಸುತ್ತಾರೆ. ಸಂಗಮಯುಗದಲ್ಲಿಯೇ ಆತ್ಮವು ತನಗೆ
ತಾನು ಮಿತ್ರನಾಗುತ್ತಾನೆ.
ಗೀತೆ:
ನೀನು
ರಾತ್ರಿಯನ್ನು ನಿದ್ರಿಸುತ್ತಾ ಕಳೆದೆ, ಹಗಲನ್ನು ತಿನ್ನುತ್ತಾ ಕಳೆದೆ......................
ಓಂ ಶಾಂತಿ.
ವಾಸ್ತವದಲ್ಲಿ ಈ ಗೀತೆಯು ಭಕ್ತಿಮಾರ್ಗದ್ದಾಗಿದೆ. ಇಡೀ ಪ್ರಪಂಚದಲ್ಲಿ ಯಾವ ಗೀತೆಗಳನ್ನು
ಹಾಡುತ್ತಾರೆ ಮತ್ತು ಶಾಸ್ತ್ರಗಳನ್ನು ಓದುತ್ತಾರೆ, ತೀರ್ಥಸ್ಥಾನಗಳಿಗೆ ಹೋಗುತ್ತಾರೆ, ಅವೆಲ್ಲವೂ
ಭಕ್ತಿಮಾರ್ಗದ್ದಾಗಿದೆ. ಯಾವುದಕ್ಕೆ ಭಕ್ತಿಮಾರ್ಗ ಮತ್ತು ಯಾವುದಕ್ಕೆ ಜ್ಞಾನಮಾರ್ಗವೆಂದು
ಹೇಳಲಾಗುತ್ತದೆ ಎಂಬುದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ವೇದಶಾಸ್ತ್ರ, ಉಪನಿಷತ್ತು
ಮೊದಲಾದುವುಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಅರ್ಧಕಲ್ಪ ಭಕ್ತಿಯು ನಡೆಯುತ್ತದೆ, ಮತ್ತು
ಅರ್ಧಕಲ್ಪ ಜ್ಞಾನದ ಪ್ರಾಲಬ್ಧವು ನಡೆಯುತ್ತದೆ. ಭಕ್ತಿಮಾಡುತ್ತಾ-ಮಾಡುತ್ತಾ ಕೆಳಗಿಳಿಯಲೇಬೇಕಾಗಿದೆ.
84 ಪುನರ್ಜನ್ಮಗಳನ್ನು ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತಾರೆ ಮತ್ತೆ ಒಂದು ಜನ್ಮದಲ್ಲಿಯೇ
ನಿಮ್ಮದು ಏರುವ ಕಲೆಯಾಗುತ್ತದೆ. ಇದಕ್ಕೆ ಜ್ಞಾನಮಾರ್ಗವೆಂದು ಹೇಳಲಾಗುತ್ತದೆ. ಜ್ಞಾನಕ್ಕಾಗಿ ಒಂದು
ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂದು ಗಾಯನವಿದೆ. ರಾವಣರಾಜ್ಯ ಯಾವುದು ದ್ವಾಪರದಿಂದ
ನಡೆದುಬರುತ್ತದೆಯೋ ಅದು ಸಮಾಪ್ತಿಯಾಗಿ ಮತ್ತೆ ರಾಮರಾಜ್ಯವು ಸ್ಥಾಪನೆಯಾಗುತ್ತದೆ. ನಾಟಕದಲ್ಲಿ
ಯಾವಾಗ ನಿಮ್ಮ 84 ಜನ್ಮಗಳು ಪೂರ್ಣವಾಗುತ್ತವೆಯೋ ಆಗ ಏರುವಕಲೆಯಿಂದ ಎಲ್ಲರ ಉನ್ನತಿಯಾಗುತ್ತದೆ. ಈ
ಶಬ್ಧವು ಶಾಸ್ತ್ರಗಳಲ್ಲಿ ಕೆಲವೊಂದು ಕಡೆಯಿದೆ. ಏರುವಕಲೆಯಿಂದ ಸರ್ವರ ಉದ್ಧಾರ. ಸರ್ವರ ಸದ್ಗತಿ
ಮಾಡುವವರು ಒಬ್ಬರೇ ತಂದೆಯಾಗಿದ್ದಾರಲ್ಲವೆ. ಸನ್ಯಾಸಿ-ಉದಾಸಿಗಳು ಅನೇಕ ಪ್ರಕಾರದವರಿದ್ದಾರೆ. ಅನೇಕ
ಮತ-ಮತಾಂತರಗಳಿವೆ. ಹೇಗೆ ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ
ಮತ್ತೆ ಈಗ ಕಲ್ಪದ ಆಯಸ್ಸು 10 ಸಾವಿರ ವರ್ಷಗಳೆಂದು ಶಂಕರಾಚಾರ್ಯರ ಮತವು ಹೇಳುತ್ತದೆ ಅಂದರೆ
ಎಷ್ಟೊಂದು ಅಂತರವಾಗಿಬಿಡುತ್ತದೆ! ಇನ್ನೂ ಕೆಲವರು ಬಂದು ಇಷ್ಟು ಸಾವಿರ ವರ್ಷಗಳೆಂದು ಹೇಳುತ್ತಾರೆ
ಅಂದಾಗ ಕಲಿಯುಗದಲ್ಲಿ ಅನೇಕ ಮನುಷ್ಯರು, ಅನೇಕ ಮತಗಳು, ಅನೇಕ ಧರ್ಮಗಳಿವೆ. ಸತ್ಯಯುಗದಲ್ಲಿ ಒಂದೇ
ಮತವಿರುತ್ತದೆ. ತಂದೆಯು ಕುಳಿತು ನೀವು ಮಕ್ಕಳಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು
ತಿಳಿಸುತ್ತಾರೆ. ಇದನ್ನು ತಿಳಿಸುವುದರಲ್ಲಿ ಎಷ್ಟೊಂದು ಸಮಯ ಹಿಡಿಸುತ್ತದೆ. ಕೊನೆಯವರೆಗೂ
ತಿಳಿಸುತ್ತಲೇ ಇರುತ್ತಾರೆ. ಮೊದಲೇ ಏಕೆ ತಿಳಿಸಲಿಲ್ಲ ಎಂದು ಹೇಳುವಂತಿಲ್ಲ. ಶಾಲೆಯಲ್ಲಿ ವಿದ್ಯೆಯು
ನಂಬರ್ವಾರ್ ಇರುತ್ತದೆ. ಚಿಕ್ಕಮಕ್ಕಳಿಗೆ ಕರ್ಮೇಂದ್ರಿಯಗಳು ಚಿಕ್ಕದಾಗಿರುವುದರಿಂದ ಅವರಿಗೆ
ಸ್ವಲ್ಪವೇ ಕಲಿಸಲಾಗುತ್ತದೆ. ಮತ್ತೆ ಹೇಗೇಗೆ ಕರ್ಮೇಂದ್ರಿಯಗಳು ಬೆಳವಣಿಗೆಯಾಗುತ್ತಾ ಹೋಗುವುದೋ
ಹಾಗೆಯೇ ಬುದ್ಧಿಯ ಬೀಗವು ತೆರೆಯುತ್ತಾ ಹೋಗುತ್ತದೆ. ವಿದ್ಯೆಯನ್ನು ಧಾರಣೆ ಮಾಡುತ್ತಾ ಹೋಗುತ್ತಾರೆ.
ಚಿಕ್ಕಮಕ್ಕಳ ಬುದ್ಧಿಯಲ್ಲಿ ಏನೂ ಧಾರಣೆಯಾಗುವುದಿಲ್ಲ. ಅವರು ದೊಡ್ಡವರಾಗುತ್ತಾ ಹೋದಾಗ ವೈದ್ಯರು,
ವಕೀಲರು ಆಗುತ್ತಾರೆ. ಇಲ್ಲಿಯೂ ಹಾಗೆಯೆ. ಕೆಲವರ ಬುದ್ಧಿಯಲ್ಲಿ ಬಹಳ ಚೆನ್ನಾಗಿ ಧಾರಣೆಯಾಗುತ್ತದೆ.
ತಂದೆಯು ತಿಳಿಸುತ್ತಾರೆ - ನಾನು ಪತಿತರಿಂದ ಪಾವನರನ್ನಾಗಿ ಮಾಡಲು ಬಂದಿದ್ದೇನೆ ಆದ್ದರಿಂದ ಈಗ
ಪತಿತ ಪ್ರಪಂಚದೊಂದಿಗೆ ವೈರಾಗ್ಯವಿರಬೇಕು. ಆತ್ಮವು ಪಾವನವಾದ ಮೇಲೆ ಪತಿತ ಪ್ರಪಂಚದಲ್ಲಿರಲು
ಸಾಧ್ಯವಿಲ್ಲ. ಪತಿತ ಪ್ರಪಂಚದಲ್ಲಿ ಆತ್ಮವೂ ಪತಿತವಾಗಿದೆ, ಮನುಷ್ಯರೂ ಪತಿತರಾಗಿದ್ದಾರೆ, ಪಾವನ
ಪ್ರಪಂಚದಲ್ಲಿ ಮನುಷ್ಯರು ಪಾವನರಾಗಿರುತ್ತಾರೆ, ಪತಿತ ಪ್ರಪಂಚದಲ್ಲಿ ಮನುಷ್ಯರು ಪತಿತರಾಗಿದ್ದಾರೆ.
ಇದು ರಾವಣರಾಜ್ಯವಾಗಿದೆ. ರಾಜ-ರಾಣಿ ಹೇಗೋ ಹಾಗೆಯೇ ಪ್ರಜೆಗಳು. ಈ ಪೂರ್ತಿಜ್ಞಾನವು ಬುದ್ಧಿಯಿಂದ
ತಿಳಿದುಕೊಳ್ಳುವಂತಹದ್ದಾಗಿದೆ. ಈ ಸಮಯದಲ್ಲಿ ಎಲ್ಲರದೂ ವಿಪರೀತ ಬುದ್ಧಿಯಾಗಿದೆ, ನೀವು ಮಕ್ಕಳು
ತಂದೆಯನ್ನು ನೆನಪು ಮಾಡುತ್ತೀರಿ. ಹೃದಯದಲ್ಲಿ ತಂದೆಯ ಪ್ರತಿ ಪ್ರೀತಿಯಿದೆ, ಗೌರವವಿದೆ ಏಕೆಂದರೆ
ತಂದೆಯನ್ನು ಅರಿತುಕೊಂಡಿದ್ದೀರಿ. ಇಲ್ಲಿ ನೀವು ಸನ್ಮುಖದಲ್ಲಿದ್ದೀರಿ, ಶಿವತಂದೆಯಿಂದ
ಕೇಳುತ್ತಿದ್ದೀರಿ, ಅವರು ಮನುಷ್ಯ ಸೃಷ್ಟಿಯ ಬೀಜರೂಪ, ಜ್ಞಾನಸಾಗರ, ಪ್ರೇಮಸಾಗರ,
ಆನಂದಸಾಗರನಾಗಿದ್ದಾರೆ. ಗೀತಾಜ್ಞಾನದಾತ ಪರಮಪಿತ ತ್ರಿಮೂರ್ತಿ ಶಿವಪರಮಾತ್ಮವಾಚವಾಗಿದೆ.
ತ್ರಿಮೂರ್ತಿ ಶಬ್ಧವನ್ನು ಅವಶ್ಯವಾಗಿ ಬರೆಯಬೇಕು ಏಕೆಂದರೆ ತ್ರಿಮೂರ್ತಿಯ ಗಾಯನವಿದೆಯಲ್ಲವೆ.
ಬ್ರಹ್ಮಾರವರ ಮೂಲಕ ಸ್ಥಾಪನೆಯೆಂದರೆ ಅವಶ್ಯವಾಗಿ ಬ್ರಹ್ಮಾರವರ ಮೂಲಕವೇ ಜ್ಞಾನವನ್ನು ತಿಳಿಸುತ್ತಾರೆ.
ಕೃಷ್ಣನಂತೂ ಶಿವಭಗವಾನುವಾಚವೆಂದು ಹೇಳುವುದಿಲ್ಲ, ಪ್ರೇರಣೆಯಿಂದ ಏನೂ ನಡೆಯುವುದಿಲ್ಲ. ಅವರಲ್ಲಿ
ಶಿವತಂದೆಯ ಪ್ರವೇಶತೆಯಾಗಲು ಸಾಧ್ಯವಿಲ್ಲ. ಶಿವತಂದೆಯಂತೂ ಪರದೇಶದಲ್ಲಿ ಬರುತ್ತಾರೆ, ಸತ್ಯಯುಗವಂತೂ
ಕೃಷ್ಣನ ದೇಶವಾಗಿದೆಯಲ್ಲವೆ ಅಂದಾಗ ಇಬ್ಬರ ಮಹಿಮೆಯು ಬೇರೆ-ಬೇರೆಯಾಗಿದೆ. ಮುಖ್ಯಮಾತೇ ಇದಾಗಿದೆ.
ಸತ್ಯಯುಗದಲ್ಲಿ
ಗೀತೆಯನ್ನು ಯಾರೂ ಓದುವುದಿಲ್ಲ. ಭಕ್ತಿಮಾರ್ಗದಲ್ಲಂತೂ ಜನ್ಮ-ಜನ್ಮಾಂತರ ಓದುತ್ತಾರೆ.
ಜ್ಞಾನಮಾರ್ಗದಲ್ಲಿ ಅದು ಇರಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ ಜ್ಞಾನದ ಮಾತುಗಳಿರುವುದಿಲ್ಲ. ಈಗ
ರಚಯಿತ ತಂದೆಯೇ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಮನುಷ್ಯರು ರಚಯಿತನಾಗಲು
ಸಾಧ್ಯವಿಲ್ಲ. ನಾನು ರಚಯಿತನಾಗಿದ್ದೇನೆಂದು ಮನುಷ್ಯರು ಹೇಳುವುದಕ್ಕೂ ಸಾಧ್ಯವಿಲ್ಲ. ಸ್ವಯಂ ತಂದೆಯೇ
ತಿಳಿಸುತ್ತಾರೆ - ನಾನು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದೇನೆ, ನಾನು ಜ್ಞಾನಸಾಗರ, ಪ್ರೇಮದ ಸಾಗರ,
ಸರ್ವರ ಸದ್ಗತಿದಾತನಾಗಿದ್ದೇನೆ. ಕೃಷ್ಣನ ಮಹಿಮೆಯೇ ಬೇರೆಯಾಗಿದೆ. ಅಂದಾಗ ಈ ಅಂತರವನ್ನು ಪೂರ್ಣವಾಗಿ
ಬರೆಯಬೇಕು, ಇದರಿಂದ ಗೀತಾಜ್ಞಾನದಾತನು ಕೃಷ್ಣನಲ್ಲ ಎಂಬುದನ್ನು ಮನುಷ್ಯರು ಓದಿದ ತಕ್ಷಣವೇ
ಅರ್ಥವಾಗಲಿ. ಈ ಮಾತನ್ನು ಅವರು ಸ್ವೀಕಾರ ಮಾಡಿದರೆಂದರೆ ನೀವು ವಿಜಯ ಪಡೆದಿರಿ ಎಂದರ್ಥ. ಮನುಷ್ಯರು
ಕೃಷ್ಣನ ಹಿಂದೆ ಎಷ್ಟೊಂದು ಹುಚ್ಚರಾಗುತ್ತಾರೆ. ಹೇಗೆ ಶಿವನ ಭಕ್ತರು ಶಿವನಿಗೆ ತಲೆಯನ್ನು ಕತ್ತರಿಸಿ
ಕೊಡುವುದಕ್ಕೂ ತಯಾರಾಗಿಬಿಡುತ್ತಾರೆ, ನಾವು ಶಿವನ ಬಳಿ ಹೋಗಬೇಕೆಂದು ತಿಳಿಯುತ್ತಾರೆ. ಹಾಗೆಯೇ ನಾವು
ಕೃಷ್ಣನ ಬಳಿ ಹೋಗಿಬಿಡಬೇಕೆಂದು ಕೃಷ್ಣನ ಭಕ್ತರು ತಿಳಿಯುತ್ತಾರೆ. ಆದರೆ ಕೃಷ್ಣನ ಬಳಿ ಹೋಗಲು
ಸಾಧ್ಯವಿಲ್ಲ. ಕೃಷ್ಣನ ಬಳಿ ಬಲಿಯಾಗುವ ಮಾತೇ ಇಲ್ಲ. ದೇವಿಯರಿಗೆ ಬಲಿ ಕೊಡುತ್ತಾರೆ,
ದೇವತೆಗಳಿಗೆಂದೂ ಬಲಿ ಕೊಡುವುದಿಲ್ಲ. ನೀವು ದೇವಿಯರಾಗಿದ್ದೀರಲ್ಲವೆ. ನೀವು ಶಿವತಂದೆಗೆ
ಮಕ್ಕಳಾಗಿದ್ದೀರಿ, ಆದ್ದರಿಂದ ಶಿವತಂದೆಗೇ ಬಲಿಹಾರಿಯಾಗುತ್ತೀರಿ. ಇದನ್ನು ಶಾಸ್ತ್ರಗಳಲ್ಲಿ
ಹಿಂಸಾತ್ಮಕ ಮಾತುಗಳನ್ನಾಗಿ ತೋರಿಸಿಬಿಟ್ಟಿದ್ದಾರೆ. ನೀವಂತೂ ಶಿವತಂದೆಯ ಮಕ್ಕಳಾಗಿದ್ದೀರಿ.
ತನು-ಮನ-ಧನವನ್ನು ಅರ್ಪಣೆ ಮಾಡುತ್ತೀರಿ ಮತ್ತ್ಯಾವುದೇ ಮಾತಿಲ್ಲ. ಆದ್ದರಿಂದ ಶಿವ ಮತ್ತು
ದೇವಿಯರಿಗೆ ಬಲಿ ಕೊಡುತ್ತಾರೆ. ಈಗ ಸರ್ಕಾರವು ಶಿವಕಾಶಿಯಲ್ಲಿ ಬಲಿಕೊಡುವುದನ್ನು
ನಿಲ್ಲಿಸಿಬಿಟ್ಟಿದೆ. ಈಗ ಆ ಖಡ್ಗವೇ ಇಲ್ಲ. ಭಕ್ತಿಮಾರ್ಗದಲ್ಲಿ ಅಪಘಾತ ಮಾಡಿಕೊಳ್ಳುತ್ತಾರೆ. ಇದು
ಸಹ ತನಗೆ ತಾನೇ ಶತ್ರುವಾಗುವ ಉಪಾಯವಾಗಿದೆ. ಮಿತ್ರತ್ವವನ್ನು ಬೆಳೆಸಿಕೊಳ್ಳುವ ಉಪಾಯವು ಒಂದೇ ಆಗಿದೆ,
ಅದನ್ನು ತಂದೆಯು ತಿಳಿಸುತ್ತಾರೆ - ಪಾವನರಾಗಿ, ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಿರಿ, ಒಬ್ಬ
ತಂದೆಯ ಶ್ರೀಮತದಂತೆ ನಡೆಯುತ್ತಾ ಇರಿ. ಇದೇ ಮಿತ್ರತ್ವವಾಗಿದೆ. ಭಕ್ತಿಮಾರ್ಗದಲ್ಲಿ ಜೀವಾತ್ಮ ತನಗೆ
ತಾನೇ ಶತ್ರುವಾಗುತ್ತಾನೆ. ಮತ್ತೆ ತಂದೆಯು ಬಂದು ಜ್ಞಾನವನ್ನು ಕೊಡುವುದರಿಂದ ಜೀವಾತ್ಮವು ತನಗೆ
ತಾನೇ ಮಿತ್ರನಾಗುತ್ತಾನೆ. ಆತ್ಮವು ಪವಿತ್ರವಾಗಿ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತದೆ.
ಸಂಗಮಯುಗದಲ್ಲಿ ತಂದೆಯು ಬಂದು ಪ್ರತಿಯೊಬ್ಬ ಆತ್ಮನನ್ನು ಮಿತ್ರನನ್ನಾಗಿ ಮಾಡಿಕೊಳ್ಳುತ್ತಾರೆ.
ಆತ್ಮವು ತನಗೆ ತಾನೇ ಮಿತ್ರನಾಗುತ್ತದೆ, ತಂದೆಯ ಶ್ರೀಮತವು ಸಿಗುವುದರಿಂದ ನಾವು ತಂದೆಯ ಮತದನುಸಾರವೇ
ನಡೆಯುತ್ತೇವೆ. ತನ್ನ ಮತದ ಮೇಲೆ ಅರ್ಧಕಲ್ಪ ನಡೆದೆವು, ಈಗ ಶ್ರೀಮತದನುಸಾರ ಸದ್ಗತಿಯನ್ನು
ಪಡೆಯಬೇಕೆಂದು ತಿಳಿದುಕೊಳ್ಳುತ್ತದೆ. ಇದರಲ್ಲಿ ತನ್ನಮತವು ನಡೆಯುವುದಿಲ್ಲ. ತಂದೆಯು ಕೇವಲ ಮತ
ಕೊಡುತ್ತಾರೆ ನೀವು ದೇವತೆಗಳಾಗಲು ಬಂದಿದ್ದೀರಲ್ಲವೆ. ಇಲ್ಲಿ ಒಳ್ಳೆಯ ಕರ್ಮ ಮಾಡುತ್ತೀರೆಂದರೆ
ಇನ್ನೊಂದು ಜನ್ಮದಲ್ಲಿ ಅಮರಲೋಕದಲ್ಲಿ ಒಳ್ಳೆಯ ಫಲವು ಸಿಗುವುದು. ಇದಂತೂ ಮೃತ್ಯುಲೋಕವಾಗಿದೆ, ಈ
ರಹಸ್ಯವನ್ನು ನೀವು ಮಕ್ಕಳೇ ಅರಿತುಕೊಂಡಿದ್ದೀರಿ ಅದರಲ್ಲಿಯೂ ನಂಬರ್ವಾರ್.
ಕೆಲವರ ಬುದ್ಧಿಯಲ್ಲಿ
ಬಹಳ ಚೆನ್ನಾಗಿ ಧಾರಣೆಯಾಗುತ್ತದೆ. ಇನ್ನೂ ಕೆಲವರು ಧಾರಣೆ ಮಾಡುವುದೇ ಇಲ್ಲ ಅಂದಮೇಲೆ ಇದರಲ್ಲಿ
ಶಿಕ್ಷಕರೇನು ಮಾಡಬಲ್ಲರು. ಶಿಕ್ಷಕರೊಂದಿಗೆ ಕೃಪೆ ಅಥವಾ ಆಶೀರ್ವಾದ ಬೇಡುತ್ತಾರೆಯೇ! ಶಿಕ್ಷಕರಂತೂ
ಓದಿಸಿ ತಮ್ಮ ಮನೆಗೆ ಹೋಗುತ್ತಾರೆ. ಶಾಲೆಯಲ್ಲಿ ಮೊಟ್ಟಮೊದಲಿಗೆ ಭಗವಂತನ ಸ್ಮರಣೆ ಮಾಡುತ್ತಾರೆ -
ಹೇ ಭಗವಂತನೇ, ನನ್ನನ್ನು ತೇರ್ಗಡೆ ಮಾಡಿಸು ಆಗ ನಾನು ನಿಮಗೆ ನೈವೇದ್ಯವನ್ನಿಡುತ್ತೇನೆ ಎಂದು. ಆದರೆ
ಆಶೀರ್ವಾದ ಮಾಡಿ ಎಂದು ಶಿಕ್ಷಕರಿಗೆ ಹೇಳುವುದಿಲ್ಲ. ಈ ಸಮಯದಲ್ಲಿ ಪರಮಾತ್ಮನು ನಮ್ಮ ತಂದೆಯೂ
ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ತಂದೆಯ ಆಶೀರ್ವಾದವಂತೂ ಇದ್ದೇ ಇದೆ. ತಂದೆಗೆ ಮಗನು ಬಂದರೆ
ಹಣ ಕೊಡಬೇಕೆಂದು ಬಯಸುತ್ತಾರೆ ಅಂದಮೇಲೆ ಇದು ಆಶೀರ್ವಾದವಾಯಿತಲ್ಲವೆ. ಇದೊಂದು ನಿಯಮವಾಗಿದೆ.
ಮಕ್ಕಳಿಗೆ ತಂದೆಯಿಂದ ಆಸ್ತಿಯು ಸಿಗುತ್ತದೆ, ಈಗಂತೂ ಎಲ್ಲರೂ ತಮೋಪ್ರಧಾನರಾಗುತ್ತಲೇ ಹೋಗುತ್ತಾರೆ.
ತಂದೆಯು ಹೇಗೋ ಮಕ್ಕಳೂ ಹಾಗೆಯೇ. ದಿನ-ಪ್ರತಿದಿನ ಪ್ರತಿಯೊಂದು ವಸ್ತುವು ತಮೋಪ್ರಧಾನ ಸ್ಥಿತಿಯನ್ನು
ತಲುಪುತ್ತಾ ಹೋಗುತ್ತದೆ, ತತ್ವಗಳೂ ತಮೋಪ್ರಧಾನವಾಗುತ್ತಲೇ ಹೋಗುತ್ತದೆ. ಇದು ದುಃಖಧಾಮವಾಗಿದೆ.
ಒಂದುವೇಳೆ ಈ ಸೃಷ್ಟಿಯು ಇನ್ನೂ 40 ಸಾವಿರ ವರ್ಷಗಳು ಇದ್ದಿದ್ದೇ ಆದರೆ ಇದರ ಗತಿ ಏನಾಗಿಬಿಡುವುದು!
ಮನುಷ್ಯರ ಬುದ್ಧಿಯು ಸಂಪೂರ್ಣ ತಮೋಪ್ರಧಾನ ವಾಗಿಬಿಟ್ಟಿದೆ.
ಈಗ ನೀವು ಮಕ್ಕಳ
ಬುದ್ಧಿಯಲ್ಲಿ ತಂದೆಯ ಜೊತೆ ಬುದ್ಧಿಯೋಗವನ್ನಿಟ್ಟುಕೊಳ್ಳುವ ಕಾರಣ ತಿಳುವಳಿಕೆಯು ಬಂದುಬಿಟ್ಟಿದೆ.
ತಂದೆಯು ತಿಳಿಸುತ್ತಾರೆ - ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು ಪ್ರಕಾಶತೆಯು ಹೆಚ್ಚುತ್ತಾ
ಹೋಗುತ್ತದೆ. ನೆನಪಿನಿಂದ ಆತ್ಮವು ಪವಿತ್ರವಾಗುತ್ತದೆ, ಪ್ರಕಾಶತೆಯು ಹೆಚ್ಚುತ್ತಾ ಹೋಗುತ್ತದೆ.
ನೆನಪೇ ಮಾಡುವುದಿಲ್ಲವೆಂದರೆ ಪ್ರಕಾಶವು ಸಿಗುವುದಿಲ್ಲ. ನೆನಪಿನಿಂದಲೇ ಪ್ರಕಾಶವು ವೃದ್ಧಿಯಾಗುವುದು.
ನೆನಪು ಮಾಡಲಿಲ್ಲ ಮತ್ತು ಯಾವುದೇ ವಿಕರ್ಮ ಮಾಡಿದಿರೆಂದರೆ ಆತ್ಮದಲ್ಲಿನ ಪ್ರಕಾಶವು
ಕಡಿಮೆಯಾಗಿಬಿಡುವುದು. ನೀವು ಸತೋಪ್ರಧಾನರಾಗುವ ಪುರುಷಾರ್ಥ ಮಾಡುತ್ತೀರಿ. ಇವು ಬಹಳ
ತಿಳಿದುಕೊಳ್ಳುವ ಮಾತುಗಳಾಗಿವೆ. ನೆನಪಿನಿಂದಲೇ ನಿಮ್ಮ ಆತ್ಮವು ಪವಿತ್ರವಾಗುತ್ತಾ ಹೋಗುವುದು. ನೀವು
ಇದನ್ನು ಬರೆಯಬಹುದು - ಈ ರಚಯಿತ ಮತ್ತು ರಚನೆಯ ಜ್ಞಾನವನ್ನು ಶ್ರೀಕೃಷ್ಣನು ಕೊಡಲು ಸಾಧ್ಯವಿಲ್ಲ.
ಶ್ರೀಕೃಷ್ಣನ ಪದವಿಯು ಇಲ್ಲಿನ ಪ್ರಾಲಬ್ಧವಾಗಿದೆ. ಇದನ್ನೂ ಸಹ ಬರೆಯಬೇಕು - 84ನೇ ಅಂತಿಮ
ಜನ್ಮದಲ್ಲಿ ಕೃಷ್ಣನ ಆತ್ಮವು ಪುನಃ ಜ್ಞಾನವನ್ನು ತೆಗೆದುಕೊಳ್ಳುತ್ತಿದೆ. ಮತ್ತೆ ಇವರೇ ಮೊದಲನೇ
ನಂಬರಿನಲ್ಲಿ ಹೋಗುತ್ತಾರೆ ಸತ್ಯಯುಗದಲ್ಲಿ ಮೊಟ್ಟಮೊದಲಿಗೆ ಬರುತ್ತಾರೆ. ತಂದೆಯು ಇದನ್ನೂ
ತಿಳಿಸಿದ್ದಾರೆ - ಸತ್ಯಯುಗದಲ್ಲಿ 9 ಲಕ್ಷ ಮಾತ್ರವೇ ಇರುತ್ತಾರೆ. ಮತ್ತೆ ಅದರಿಂದ ವೃದ್ಧಿಯೂ
ಆಗುತ್ತದೆಯಲ್ಲದೆ. ದಾಸ-ದಾಸಿಯರು ಬಹಳಷ್ಟು ಮಂದಿ ಇರುತ್ತಾರಲ್ಲವೆ, ಯಾರು ಪೂರ್ಣ 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾರೆ, 84 ಜನ್ಮಗಳನ್ನೇ ಎಣಿಸಲಾಗುತ್ತದೆ. ಯಾರು ಚೆನ್ನಾಗಿ ಪರೀಕ್ಷೆಯನ್ನು
ತೇರ್ಗಡೆ ಮಾಡುವರೋ ಅವರು ಮೊಟ್ಟಮೊದಲಿಗೆ ಬರುತ್ತಾರೆ. ಎಷ್ಟು ತಡವಾಗಿ ಬರುವರೋ ಅಷ್ಟು ಮನೆಯು
ಹಳೆಯದಾಗುತ್ತದೆಯೆಂದೇ ಹೇಳಲಾಗುತ್ತದೆಯಲ್ಲವೆ. ಹೊಸಮನೆಯು ದಿನ-ಪ್ರತಿದಿನ ಕಳೆಯುತ್ತಾ ಹೋದಂತೆ
ಆಯಸ್ಸು ಕಡಿಮೆಯಾಗುತ್ತಾ ಹೋಗುವುದು. ಸತ್ಯಯುಗದಲ್ಲಂತೂ ಚಿನ್ನದ ಮಹಲುಗಳಾಗುತ್ತವೆ. ಅವಂತೂ
ಹಳೆಯದಾಗಲು ಸಾಧ್ಯವಿಲ್ಲ. ಚಿನ್ನವು ಸದಾ ಹೊಳೆಯುತ್ತಲೇ ಇರುವುದು. ಆದರೂ ಸಹ ಅದನ್ನು ಅವಶ್ಯವಾಗಿ
ಸ್ವಚ್ಛಗೊಳಿಸಬೇಕಾಗುತ್ತದೆ. ಭಲೆ ಒಡವೆಗಳನ್ನೂ ಸಹ ಸತ್ಯಚಿನ್ನದಿಂದ ಮಾಡಿಸಿದರೂ ಸಹ ಕೊನೆಗೊಂದು
ದಿನ ಅದರ ಹೊಳಪು ಕಡಿಮೆಯಾಗುತ್ತದೆ ಮತ್ತೆ ಅದನ್ನು ಪಾಲಿಷ್ ಮಾಡಿಸಬೇಕಾಗುವುದು. ನೀವು ಮಕ್ಕಳಿಗೆ
ಸದಾ ಇದೇ ಖುಷಿಯಿರಬೇಕು - ನಾವು ಹೊಸಪ್ರಪಂಚದಲ್ಲಿ ಹೋಗುತ್ತೇವೆ, ಈ ನರಕದಲ್ಲಿ ಇದು
ಅಂತಿಮಜನ್ಮವಾಗಿದೆ. ಈ ಕಣ್ಣುಗಳಿಂದ ಏನನ್ನು ನೋಡುತ್ತೇವೆಯೋ ಇದು ಹಳೆಯ ಪ್ರಪಂಚ, ಹಳೆಯ
ಶರೀರವಾಗಿದೆ. ಈಗ ನಾವು ಸತ್ಯಯುಗ, ಹೊಸ ಪ್ರಪಂಚದಲ್ಲಿ ಹೊಸಶರೀರವನ್ನು ತೆಗೆದುಕೊಳ್ಳಬೇಕಾಗಿದೆ
ಎಂಬುದು ತಿಳಿದಿದೆ. ಪಂಚತತ್ವಗಳು ಅಲ್ಲಿ ಹೊಸದಾಗುತ್ತವೆ. ಹೀಗೆ ವಿಚಾರಸಾಗರ ಮಂಥನ
ನಡೆಯುತ್ತಿರಬೇಕು. ಇದು ವಿದ್ಯೆಯಾಗಿದೆಯಲ್ಲವೆ. ನಿಮ್ಮ ಈ ವಿದ್ಯೆಯು ಅಂತ್ಯದವರೆಗೂ ನಡೆಯುವುದು.
ವಿದ್ಯೆಯು ನಿಂತುಬಿಟ್ಟರೆ ವಿನಾಶವಾಗುವುದು. ಆದ್ದರಿಂದ ತಮ್ಮನ್ನು ವಿದ್ಯಾರ್ಥಿಯೆಂದು ತಿಳಿದು ಈ
ಖುಷಿಯಲ್ಲಿರಬೇಕು - ಭಗವಂತನೇ ನಮಗೆ ಓದಿಸುತ್ತಾರೆ. ಈ ಖುಷಿಯೇನೂ ಕಡಿಮೆಯಲ್ಲ ಆದರೆ ಜೊತೆಜೊತೆಗೆ
ಮಾಯೆಯೂ ಸಹ ಉಲ್ಟಾಕೆಲಸವನ್ನು ಮಾಡಿಸಿಬಿಡುತ್ತದೆ. 5-6 ವರ್ಷಗಳವರೆಗೆ ಪವಿತ್ರರಾಗಿರುತ್ತಾರೆ
ಮತ್ತೆ ಮಾಯೆಯು ಬೀಳಿಸಿಬಿಡುತ್ತದೆ. ಒಂದುಬಾರಿ ಬಿದ್ದರೆ ಮತ್ತೆ ಆ ಸ್ಥಿತಿಯು ಬರಲು ಸಾಧ್ಯವಿಲ್ಲ.
ನಾವು ಬಿದ್ದೆವೆಂದರೆ ಆ ತಿರಸ್ಕಾರವು ಬರುತ್ತದೆ. ಈಗ ನೀವು ಮಕ್ಕಳಿಗೆ ಎಲ್ಲಾ
ಸ್ಮೃತಿಯನ್ನಿಟ್ಟುಕೊಳ್ಳಬೇಕಾಗಿದೆ. ಈ ಜನ್ಮದಲ್ಲಿ ಯಾವ ಪಾಪವನ್ನು ಮಾಡಿದ್ದೇವೆಯೆಂದು ಪ್ರತಿಯೊಂದು
ಆತ್ಮನಿಗೆ ತಮ್ಮ ಜೀವನದ ಬಗ್ಗೆ ನೆನಪಿರುತ್ತದೆಯಲ್ಲವೆ. ಕೆಲವರು ಮಂದಬುದ್ಧಿಯವರು, ಇನ್ನೂ ಕೆಲವರು
ವಿಶಾಲಬುದ್ಧಿಯವರಾಗಿರುತ್ತಾರೆ. ಬಾಲ್ಯದ ಚರಿತ್ರೆಯ ನೆನಪಂತೂ ಇರುತ್ತದೆಯಲ್ಲವೆ. ಈ ಬ್ರಹ್ಮಾರವರೂ
ಸಹ ಬಾಲ್ಯದ ಚರಿತ್ರೆಯನ್ನು ತಿಳಿಸುತ್ತಾರಲ್ಲವೆ. ಇವರಿಗೆ ಆ ಮನೆ ಇತ್ಯಾದಿಯೂ ನೆನಪಿದೆ ಆದರೆ
ಈಗಂತೂ ಅಲ್ಲಿಯೂ ಹೊಸಮನೆಗಳಾಗಿಬಿಟ್ಟಿದೆ. 6ನೇ ವರ್ಷದಿಂದ ಹಿಡಿದು ತಮ್ಮ ಜೀವನದ ಕಥೆಯು
ನೆನಪಿರುತ್ತದೆ. ಒಂದುವೇಳೆ ಮರೆತರೆ ಅವರಿಗೆ ಮಂಧ ಬುದ್ಧಿಯವರೆಂದು ಹೇಳಲಾಗುತ್ತದೆ. ತಂದೆಯು
ತಿಳಿಸುತ್ತಾರೆ - ತಮ್ಮ ಜೀವನಕಥೆಯನ್ನು ಬರೆಯಿರಿ, ಜೀವನದ ಮಾತಲ್ಲವೆ. ಜೀವನದಲ್ಲಿ ಎಷ್ಟು
ಚಮತ್ಕಾರವಿತ್ತು ಎಂಬುದು ತಿಳಿಯುತ್ತದೆ. ಗಾಂಧಿ, ನೆಹರು ಮೊದಲಾದವರ ಎಷ್ಟು ದೊಡ್ಡ-ದೊಡ್ಡ
ಗ್ರಂಥಗಳನ್ನು ಬರೆಯುತ್ತಾರೆ. ಜೀವನವಂತೂ ವಾಸ್ತವದಲ್ಲಿ ನಿಮ್ಮದು ಬಹಳ ಅಮೂಲ್ಯವಾಗಿದೆ. ಇದು
ಅದ್ಭುತವಾದ ಜೀವನವಾಗಿದೆ. ಇದು ಬಹಳ ಅತ್ಯಮೂಲ್ಯ ಜೀವನವಾಗಿದೆ. ಇದಕ್ಕೆ ಮೌಲ್ಯವನ್ನು ಕಟ್ಟಲು
ಸಾಧ್ಯವಿಲ್ಲ. ಈ ಸಮಯದಲ್ಲಿ ನೀವೇ ಸೇವೆ ಮಾಡುತ್ತೀರಿ, ಈ ಲಕ್ಷ್ಮೀ-ನಾರಾಯಣರು ಸಹ ಏನೂ ಸೇವೆ
ಮಾಡುವುದಿಲ್ಲ. ನಿಮ್ಮ ಜೀವನವು ಬಹಳ ಅಮೂಲ್ಯವಾಗಿದೆ, ಯಾವಾಗ ನೀವು ಅನ್ಯರ ಜೀವನವನ್ನು ಪರಿವರ್ತನೆ
ಮಾಡುವ ಸೇವೆ ಮಾಡಿದಾಗ. ಯಾರು ಒಳ್ಳೆಯ ಸೇವೆ ಮಾಡುವರೋ ಅವರು ಗಾಯನ ಯೋಗ್ಯರಾಗುತ್ತಾರೆ. ವೈಷ್ಣವ
ದೇವಿಯ ಮಂದಿರವೂ ಇದೆಯಲ್ಲವೆ. ಈಗ ನೀವು ಸತ್ಯ-ಸತ್ಯ ವೈಷ್ಣವರಾಗುತ್ತೀರಿ. ವೈಷ್ಣವ ಎಂದರೆ
ಪವಿತ್ರರಾಗಿರುವವರು. ಈಗ ನಿಮ್ಮ ಆಹಾರಪದಾರ್ಥವೂ ಪವಿತ್ರವಾಗಿದೆ. ಮೊಟ್ಟಮೊದಲನೇ ವಿಕಾರ (ಕಾಮ)
ದಲ್ಲಂತೂ ನೀವು ವೈಷ್ಣವರಾಗಿದ್ದೀರಿ ಅರ್ಥಾತ್ ಮುಕ್ತರಾಗಿದ್ದೀರಿ. ಜಗದಂಬೆಯ ಮಕ್ಕಳು ಇವರೆಲ್ಲರೂ
ಬ್ರಹ್ಮಕುಮಾರ-ಕುಮಾರಿಯರಾಗಿದ್ದಾರಲ್ಲವೆ. ಬ್ರಹ್ಮಾ ಮತ್ತು ಸರಸ್ವತಿ ಮತ್ತು ಮಕ್ಕಳು ಅವರ
ಸಂತಾನರಾಗಿದ್ದಾರೆ. ನಂಬರ್ವಾರ್ ದೇವಿಯರೂ ಇದ್ದಾರೆ, ಅವರ ಪೂಜೆಯೂ ನಡೆಯುತ್ತದೆ ಆದರೆ ಇಷ್ಟೊಂದು
ಭುಜಗಳನ್ನು ತೋರಿಸಿರುವುದೆಲ್ಲವೂ ವ್ಯರ್ಥವಾಗಿದೆ. ನೀವು ಅನೇಕರನ್ನು ತಮ್ಮ ಸಮಾನರನ್ನಾಗಿ
ಮಾಡುತ್ತೀರಿ ಆದ್ದರಿಂದ ಭುಜಗಳನ್ನು ತೋರಿಸಿದ್ದಾರೆ. ಬ್ರಹ್ಮನನ್ನು ನೂರುಭುಜಧಾರಿ, ಸಾವಿರ
ಭುಜಧಾರಿಯನ್ನಾಗಿ ತೋರಿಸುತ್ತಾರೆ. ಇವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಮತ್ತೆ ತಂದೆಯು
ತಿಳಿಸುತ್ತಾರೆ - ನೀವು ದೈವೀಗುಣಗಳನ್ನೂ ಧಾರಣೆ ಮಾಡಬೇಕಾಗಿದೆ, ಯಾರಿಗೂ ದುಃಖವನ್ನು ಕೊಡಬೇಡಿ,
ಯಾರಿಗೂ ಉಲ್ಟಾ-ಸುಲ್ಟಾ ಮಾರ್ಗವನ್ನು ತಿಳಿಸಿ ಸತ್ಯನಾಶ ಮಾಡಿಕೊಳ್ಳಬೇಡಿ. ಒಂದೇ ಮುಖ್ಯ ಮಾತನ್ನು
ತಿಳಿಸಬೇಕು - ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಗಾಯನ ಹಾಗೂ
ಪೂಜೆಗೆ ಯೋಗ್ಯರಾಗಲು ಪಕ್ಕಾ ವೈಷ್ಣವರಾಗಬೇಕಾಗಿದೆ. ಆಹಾರಪಾನೀಯಗಳ ಶುದ್ಧತೆಯ ಜೊತೆಜೊತೆಗೆ
ಪವಿತ್ರರಾಗಿರಬೇಕಾಗಿದೆ. ಈ ಅತ್ಯಮೂಲ್ಯ ಜೀವನದಲ್ಲಿ ಸೇವೆ ಮಾಡಿ ಅನೇಕರ ಜೀವನವನ್ನು
ಶ್ರೇಷ್ಠಗೊಳಿಸಬೇಕಾಗಿದೆ.
2. ತಂದೆಯ ಜೊತೆ ಈ ರೀತಿ
ಬುದ್ಧಿಯೋಗವಿರಬೇಕು ಅದರಿಂದ ಆತ್ಮದ ಪ್ರಕಾಶತೆಯು ಹೆಚ್ಚುತ್ತಾ ಹೋಗಲಿ. ಯಾವುದೇ ವಿಕರ್ಮ ಮಾಡಿ
ಪ್ರಕಾಶತೆಯನ್ನು ಕಡಿಮೆ ಮಾಡಿಕೊಳ್ಳಬಾರದು. ತನ್ನ ಜೊತೆ ಮಿತ್ರತ್ವವನ್ನಿಟ್ಟುಕೊಳ್ಳಬೇಕಾಗಿದೆ.
ವರದಾನ:
ಸ್ವ-ಸ್ಥಿತಿಯ
ಸೀಟ್ ಮೇಲೆ ಸ್ಥಿತರಾಗಿರುತ್ತಾ ಪರಿಸ್ಥಿತಿಗಳ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳುವಂತಹ ಮಾಸ್ಟರ್
ರಚಯಿತ ಭವ.
ಯಾವುದೇ ಪರಿಸ್ಥಿತಿ,
ಪ್ರಕೃತಿ ಮುಖಾಂತರ ಬರುತ್ತದೆ ಆದ್ದರಿಂದ ಪರಿಸ್ಥಿತಿ ರಚನೆಯಾಗಿದೆ ಮತ್ತು ಸ್ವ-ಸ್ಥಿತಿ ಉಳ್ಳವರು
ರಚೈತ ಆಗಿದ್ದಾರೆ. ಮಾಸ್ಟರ್ ರಚತಾ ಮತ್ತು ಮಾಸ್ಟರ್ ಸರ್ವಶಕ್ತಿವಾನ್ ಎಂದೂ ಸಹ ಸೋಲನ್ನು
ಅನುಭವಿಸುವುದು ಅಸಂಭವವಾಗಿದೆ. ಒಂದುವೇಳೆ ಯಾರಾದರೂ ತಮ್ಮ ಸೀಟ್ ಅನ್ನು ಬಿಟ್ಟರೆ
ಸೋಲಾಗಿಬಿಡುತ್ತದೆ. ಸೀಟ್ ಬಿಡುವುದು ಅರ್ಥಾತ್ ಶಕ್ತಿಹೀನರಾಗುವುದು. ಸೀಟ್ನ ಆಧಾರದ ಮೇಲೆ
ಶಕ್ತಿಗಳು ಸ್ವತಃವಾಗಿ ಬರುತ್ತದೆ. ಯಾರು ಸೀಟ್ನಿಂದ ಕಳಗೆ ಇಳಿಯುತ್ತಾರೆ ಅವರಿಗೆ ಮಾಯೆಯ ಧೂಳು
ಅಂಟಿಬಿಡುತ್ತದೆ. ಬಾಪ್ದಾದಾರವರ ಪ್ರೀತಿಯ, ಮರ್ಜೀವ ಜನ್ಮಧಾರಿ ಬ್ರಾಹ್ಮಣರು ಎಂದೂ ದೇಹಾಭಿಮಾನದ
ಮಣ್ಣಿನಲ್ಲಿ ಆಟವಾಡಲು ಸಾಧ್ಯವಿಲ್ಲ.
ಸ್ಲೋಗನ್:
ಧೃಡತೆ - ಕಠಿಣ
ಸಂಸ್ಕಾರಗಳನ್ನೂ ಸಹ ಮೇಣದ ತರಹ ಕರಗಿಸಿಬಿಡುತ್ತದೆ.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
ಹೇಗೆ ಜ್ಞಾನ
ಸ್ವರೂಪರಾಗಿದ್ದೀರಿ ಹಾಗೆಯೇ ಸ್ನೇಹ ಸ್ವರೂಪರಾಗಿರಿ, ಜ್ಞಾನ ಮತ್ತು ಸ್ನೇಹ ಎರಡು ಕಂಬೈಂಡ್ ಆಗಿರಲಿ
ಏಕೆಂದರೆ ಜ್ಞಾನ ಬೀಜವಾಗಿದೆ, ನೀರು ಸ್ನೇಹವಾಗಿದೆ. ಒಂದುವೇಳೆ ಬೀಜಕ್ಕೆ ನೀರು
ಸಿಗುವುದಿಲ್ಲವೆಂದರೆ ಹಣ್ಣು ಕೊಡುವುದಿಲ್ಲ. ಜ್ಞಾನದ ಜೊತೆಯಲ್ಲಿ ಹೃದಯದ ಸ್ನೇಹವಿದ್ದರೆ
ಪ್ರಾಪ್ತಿಯ ಫಲ ಸಿಗುವುದು.