02.06.24    Avyakt Bapdada     Kannada Murli    18.01.20     Om Shanti     Madhuban


ಬ್ರಹ್ಮಾ ತಂದೆಯ ಸಮಾನ ತ್ಯಾಗ, ತಪಸ್ಸು ಹಾಗೂ ಸೇವೆಯ ಪ್ರಕಂಪನಗಳನ್ನು ವಿಶ್ವದಲ್ಲಿ ಹರಡಿ


ಇಂದು ಸಮರ್ಥ ಬಾಪ್ದಾದಾರವರು ತಮ್ಮ ಸಮರ್ಥ ಮಕ್ಕಳನ್ನು ನೋಡುತ್ತಿದ್ದರು. ಇಂದಿನ ದಿನ ಸ್ಮೃತಿ ದಿವಸ ಹಾಗೂ ಸಮರ್ಥಿ ದಿವಸವಾಗಿದೆ. ಇಂದಿನ ದಿನ ಮಕ್ಕಳಿಗೆ ಸರ್ವ ಶಕ್ತಿಗಳನ್ನು ವಿಲ್ ಮಾಡಿ ಕೊಡುವಂತಹ ದಿವಸವಾಗಿದೆ. ಪ್ರಪಂಚದಲ್ಲಿ ಅನೇಕ ಪ್ರಕಾರದ ವಿಲ್ ಇರುತ್ತದೆ ಆದರೆ ಬ್ರಹ್ಮಾ ತಂದೆಯು ತಂದೆಯಿಂದ ಪ್ರಾಪ್ತವಾಗಿರುವಂತಹ ಸರ್ವ ಶಕ್ತಿಗಳನ್ನು ಮಕ್ಕಳಿಗೆ ವಿಲ್ ಮಾಡಿದರು. ಇಂತಹ ಅಲೌಕಿಕ ವಿಲ್ (ಅರ್ಪಣೆ) ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ತಂದೆಯು ಬ್ರಹ್ಮಾ ತಂದೆಯನ್ನು ಸಾಕಾರದಲ್ಲಿ ನಿಮಿತರನ್ನಾಗಿ ಮಾಡಿದರು ಹಾಗೂ ಬ್ರಹ್ಮಾ ತಂದೆಯು ಮಕ್ಕಳಿಗೆ ‘ನಿಮಿತ್ತ ಭಾವದ' ವರದಾನವನ್ನು ಕೊಟ್ಟು ವಿಲ್ ಮಾಡಿದರು. ಈ ವಿಲ್ ಮಕ್ಕಳಲ್ಲಿ ಸಹಜವಾಗಿ ಶಕ್ತಿಗಳ ಅನುಭೂತಿಯನ್ನು ಮಾಡಿಸುತ್ತಾ ಇರುತ್ತದೆ. ಒಂದಾಗಿದೆ ತಮ್ಮ ಪುರುಷಾರ್ಥದ ಶಕ್ತಿಗಳು ಹಾಗೂ ಇದಾಗಿದೆ ಪರಮಾತ್ಮ- ವಿಲ್ ಮೂಲಕ ಶಕ್ತಿಗಳ ಪ್ರಾಪ್ತಿ. ಇದು ಪ್ರಭುವಿನ ಕೊಡುಗೆಯಾಗಿದೆ, ಪ್ರಭುವಿನ ವರದಾನವಾಗಿದೆ. ಈ ಪ್ರಭು ವರದಾನವೇ ನಡೆಸುತ್ತಿದೆ. ವರದಾನದಲ್ಲಿ ಪುರುಷಾರ್ಥದ ಪರಿಶ್ರಮವಲ್ಲ ಆದರೆ ಸಹಜ ಹಾಗೂ ಸ್ವತಹ ನಿಮಿತ್ತರನ್ನಾಗಿ ಮಾಡಿ ನಡೆಸುತ್ತಾ ಇರುತ್ತದೆ. ಸಮ್ಮುಖದಲ್ಲಿ ಸ್ವಲ್ಪ ಉಳಿದುಕೊಂಡಿದ್ದಾರೆ ಆದರೆ ಬಾಪ್ದಾದಾರವರ ಮೂಲಕ, ವಿಶೇಷ ಬ್ರಹ್ಮಾ ತಂದೆಯ ಮೂಲಕ ವಿಶೇಷ ಮಕ್ಕಳಿಗೆ ಈ ವಿಲ್ ಪವರ್ ಪ್ರಾಪ್ತಿಯಾಗಿದೆ ಹಾಗೂ ಬಾಪ್ದಾದಾರವರು ಸಹ ನೋಡಿದರು- ಯಾವ ಮಕ್ಕಳಿಗೆ ಬಾಪ್ದಾದಾರವರು ವಿಲ್ ಮಾಡಿದರು ಆ ಎಲ್ಲಾ ಮಕ್ಕಳು (ಆದಿರತ್ನಗಳು ಹಾಗೂ ಸೇವೆಯ ನಿಮಿತ್ತ ಮಕ್ಕಳು) ಪ್ರಾಪ್ತಿಯಾದ ಶಕ್ತಿಗಳನ್ನು ಚೆನ್ನಾಗಿ ಕಾರ್ಯದಲ್ಲಿ ತೊಡಗಿಸಿದರು. ಹಾಗೂ ಆ ವಿಲ್ನ ಕಾರಣ ಇಂದು ಈ ಬ್ರಾಹ್ಮಣ ಪರಿವಾರ ದಿನ ಪ್ರತಿ ದಿನ ವೃದ್ಧಿಯಾಗುತ್ತಲೇ ಹೋಗುತ್ತದೆ. ಮಕ್ಕಳ ವಿಶೇಷತೆಯ ಕಾರಣ ವೃದ್ಧಿಯಾಗಬೇಕಾಗಿತ್ತು ಹಾಗೂ ಆಗುತ್ತಲೇ ಇದೆ.

ಬಾಪ್ದಾದಾರವರು ನೋಡಿದರೂ- ನಿಮಿತ್ತರಾಗಿರುವ ಹಾಗೂ ಜೊತೆ ಕೊಡುವಂತಹ ಎರಡು ಪ್ರಕಾರದ ಮಕ್ಕಳಲ್ಲಿ ಎರಡು ವಿಶೇಷತೆಗಳು ಬಹಳ ಚೆನ್ನಾಗಿದೆ. ಮೊದಲನೇಯ ವಿಶೇಷತೆ- ಸ್ಥಾಪನೆಯ ಆದಿರತ್ನರಾಗಿರಲಿ, ಅಥವಾ ಸೇವೆಯ ರತ್ನ ಆಗಿರಲಿ ಇಬ್ಬರಲ್ಲೂ ಸಂಘಟನೆಯ ಒಗ್ಗಟ್ಟು ಬಹಳ ಬಹಳ ಚೆನ್ನಾಗಿತ್ತು. ಯಾರಲ್ಲಿಯೂ ಸಹ ಏಕೆ, ಏನು, ಹೇಗೆ... ಇಂತಹ ಸಂಕಲ್ಪ ಮಾತ್ರವೂ ಸಹ ಇರಲಿಲ್ಲ. ಎರಡನೆಯ ವಿಶೇಷತೆ- ಒಬ್ಬರು ಹೇಳಿದರು ಇನ್ನೊಬ್ಬರು ಅದನ್ನು ಒಪ್ಪಿಕೊಂಡರು. ಇದು ಹೆಚ್ಚು ಶಕ್ತಿಯ ವಿಲ್ ನ ವಾಯುಮಂಡಲದಲ್ಲಿ ವಿಶೇಷತೆ ಇತ್ತು. ಆದ್ದರಿಂದ ಸರ್ವ ನಿಮಿತ್ತರಾಗಿರುವಂತಹ ಆತ್ಮಗಳಿಗೆ ಬಾಬಾ-ಬಾಬಾರವರೆ ಕಾಣಿಸುತ್ತಾ ಇದ್ದರು.

ಬಾಬಾರವರು ಇಂತಹ ಸಮಯದಲ್ಲಿ ನಿಮಿತ್ತರಾಗಿರುವಂತಹ ಮಕ್ಕಳಿಗೆ ಹೃದಯದಿಂದ ಪ್ರೀತಿ ಕೊಡುತ್ತಿದ್ದಾರೆ. ತಂದೆಯ ಚಮತ್ಕಾರವಂತೂ ಇದೆ ಆದರೆ ಮಕ್ಕಳ ಚಮತ್ಕಾರವೂ ಸಹ ಕಡಿಮೆ ಏನಿಲ್ಲ. ಹಾಗೂ ಆ ಸಮಯದ ಸಂಘಟನೆ, ಒಗ್ಗಟ್ಟು- ನಾವೆಲ್ಲರೂ ಒಂದಾಗಿದ್ದೇವೆ, ಇದೆ ಇಂದೂ ಸಹ ಸೇವೆಯನ್ನು ವೃದ್ಧಿ ಮಾಡುತ್ತಿದೆ. ಹೇಳಿ? ನಿಮಿತ್ತರಾಗಿರುವಂತಹ ಆತ್ಮಗಳ ಫೌಂಡೇಶನ್ ಪಕ್ಕಾ ಇತ್ತಲ್ಲವೇ. ಮಕ್ಕಳು ನಾಲ್ಕಾರು ಕಡೆಯಿಂದ ಪ್ರೀತಿಯ ಮಾಲೆಗಳನ್ನು ತೊಡಿಸಿದರು ಹಾಗೂ ತಂದೆ ಮಕ್ಕಳ ಚಮತ್ಕಾರದ ಗುಣ ಗಾಯನ ಮಾಡಿದರು. ಇಷ್ಟು ಸಮಯ ನಡೆಯುತ್ತೇವೆ, ಎಂದು ಯೋಚಿಸಿದ್ದಿರೇ? ಎಷ್ಟು ಸಮಯವಾಯಿತು? ಎಲ್ಲರ ಮುಖದಿಂದ, ಹೃದಯದಿಂದ ಇದೆ ಹೊರಬರುತ್ತದೆ, ಈಗ ಹೊರಡಬೇಕು, ಈಗ ಹೊರಡಬೇಕು... ಆದರೆ ಬಾಪ್ದಾದಾರವರು ತಿಳಿದಿದ್ದರು- ಇನ್ನೂ ಅವ್ಯಕ್ತ ರೂಪದ ಸೇವೆ ನಡೆಯಬೇಕು. ಸಾಕಾರದಲ್ಲಿ ಇಷ್ಟು ದೊಡ್ಡ ಹಾಲ್ ತಯಾರಿಸಿದ್ದಿರಾ? ಬಾಬಾರವರ ಅತಿ ಪ್ರಿಯ ಡಬಲ್ ವಿದೇಶಿಯರು ಬಂದಿದ್ದಾರೆಯೇ? ವಿಶೇಷವಾಗಿ ಡಬಲ್ ವಿದೇಶಿಯರ ಅವ್ಯಕ್ತ ಪಾಲನೆಯ ಮೂಲಕ ಜನ್ಮವಾಗಲೇ ಬೇಕಾಗಿತ್ತು, ಇಷ್ಟೆಲ್ಲಾ ಮಕ್ಕಳು ಬರಲೇಬೇಕಾಗಿತ್ತು. ಆದ್ದರಿಂದ ಬ್ರಹ್ಮಾ ತಂದೆಯು ತನ್ನ ಸಾಕಾರ ಶರೀರವನ್ನು ಬಿಡಬೇಕಾಗಿ ಬಂತು. ಡಬಲ್ ವಿದೇಶಿಯರಿಗೆ ನಶೆ ಇದೆಯೇ- ನಾವು ಅವ್ಯಕ್ತ ಪಾಲನೆಯ ಪಾತ್ರರಾಗಿದ್ದೇವೆ?

ಬ್ರಹ್ಮಾ ತಂದೆಯ ತ್ಯಾಗ ಡ್ರಾಮದಲ್ಲಿ ವಿಶೇಷವಾಗಿ ನೋಂದಣಿ ಆಗಿದೆ. ಆದಿಯಿಂದ ಬ್ರಹ್ಮಾ ತಂದೆಯ ತ್ಯಾಗ ಹಾಗೂ ನೀವು ಮಕ್ಕಳ ಭಾಗ್ಯ ನೋಂದಣಿಯಾಗಿದೆ. ಎಲ್ಲರಿಗಿಂತ ಮೊದಲನೇ ನಂಬರಿನ ತ್ಯಾಗದ ಉದಾಹರಣೆ, ಬ್ರಹ್ಮಾ ತಂದೆಯಾದರು. ಎಲ್ಲವೂ ಪ್ರಾಪ್ತಿಯಾಗಿದ್ದರೂ ಸಹ ತ್ಯಾಗ ಮಾಡುವುದು- ಇದಕ್ಕೆ ತ್ಯಾಗ ಎಂದು ಹೇಳಲಾಗುವುದು. ಸಮಯ ಅನುಸಾರ, ಸಮಸ್ಯೆಗಳ ಅನುಸಾರ ತ್ಯಾಗ- ಶ್ರೇಷ್ಠ ತ್ಯಾಗವಲ್ಲ. ಆದಿಯಿಂದ ನೋಡಿ ತನು, ಮನ, ಧನ, ಸಂಬಂಧ, ಸರ್ವಪ್ರಾಪ್ತಿಗಳು ಇದ್ದರೂ ಸಹ ತ್ಯಾಗ ಮಾಡಿದರು. ಶರೀರವನ್ನು ತ್ಯಾಗ ಮಾಡಿದರು, ಎಲ್ಲಾ ಸಾಧನೆಗಳು ಇದ್ದರೂ ಸಹ ಸ್ವಯಂ ಹಳೆಯದರಲ್ಲಿಯೇ ಇದ್ದರು. ಸಾಧನಗಳ ಆರಂಭವಾಗಿಬಿಟ್ಟಿತ್ತು. ಎಲ್ಲಾ ಇದ್ದರೂ ಸಹ ಸಾಧನೆಯಲ್ಲಿ ನಿರಂತರವಾಗಿದ್ದರು. ಈ ಬ್ರಹ್ಮಾ ತಂದೆಯ ತಪಸ್ಸು ನೀವೆಲ್ಲ ಮಕ್ಕಳ ಭಾಗ್ಯವನ್ನು ಮಾಡಿ ಹೋಯಿತು. ಡ್ರಾಮಾ ಅನುಸಾರ ಇಂತಹ ತ್ಯಾಗದ ಉದಾಹರಣೆ ರೂಪದಲ್ಲಿ ಬ್ರಹ್ಮಾರವರೆ ಆದರೂ ಹಾಗೂ ಇದೇ ತ್ಯಾಗದಿಂದ ಸಂಕಲ್ಪ ಶಕ್ತಿಯ ಸೇವೆಯ ವಿಶೇಷ ಪಾತ್ರವನ್ನು ಮಾಡಿದರು. ಯಾವುದರಿಂದ ಹೊಸ ಹೊಸ ಮಕ್ಕಳು ಸಂಕಲ್ಪ ಶಕ್ತಿಯಿಂದ ತೀವ್ರ ವೇಗದ ವೃದ್ಧಿಯ ಪ್ರಾಪ್ತಿ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ತಿಳಿಯಿತೆ ಬ್ರಹ್ಮಾನ ತ್ಯಾಗದ ಕಥೆ.

ಬ್ರಹ್ಮನ ತಪಸ್ಸಿನ ಫಲ ನೀವು ಮಕ್ಕಳಿಗೆ ಸಿಗುತ್ತಿದೆ. ತಪಸ್ಸಿನ ಪ್ರಭಾವ ಈ ಮಧುಬನ ಭೂಮಿಯಲ್ಲಿ ಸಮಾವೇಶವಾಗಿದೆ. ಜೊತೆಯಲ್ಲಿ ಮಕ್ಕಳು ಇದ್ದಾರೆ, ಮಕ್ಕಳ ತಪಸ್ಸು ಸಹ ಇದೆ ಆದರೆ ನಿಮಿತ್ತ ಅಂತೂ ಬ್ರಹ್ಮಾ ತಂದೆ ಎಂದೇ ಹೇಳುತ್ತೇವೆ. ಯಾರೆಲ್ಲಾ ಮಧುಬನ ತಪಸ್ವಿ ಭೂಮಿಯಲ್ಲಿ ಬರುತ್ತಾರೆ ಆಗ ಬ್ರಾಹ್ಮಣ ಮಕ್ಕಳು ಸಹ ಅನುಭವ ಮಾಡುತ್ತಾರೆ- ಇಲ್ಲಿನ ವಾಯುಮಂಡಲ, ಇಲ್ಲಿನ ಪ್ರಕಂಪನಗಳು ಸಹಜ ಯೋಗಿಯನ್ನಾಗಿ ಮಾಡಿಬಿಡುತ್ತದೆ. ಯೋಗವನ್ನು ಜೋಡಿಸುವ ಪರಿಶ್ರಮವಿಲ್ಲ, ಸಹಜವಾಗಿಯೇ ಯೋಗ ಜೋಡಣೆಯಾಗುತ್ತದೆ ಮತ್ತು ಬೇರೆ ಯಾವುದೇ ಆತ್ಮಗಳು ಬರುತ್ತಾರೆ ಎಂದರೆ, ಅವರು ಏನಾದರೂ ಒಂದು ಅನುಭವವನ್ನು ಮಾಡಿಯೇ ಹೋಗುತ್ತಾರೆ. ಜ್ಞಾನವನ್ನು ತಿಳಿಯದೆ ಇದ್ದರೂ ಸಹ ಅಲೌಕಿಕ ಪ್ರೀತಿ ಹಾಗೂ ಶಾಂತಿಯ ಅನುಭವ ಮಾಡಿ ಹೋಗುತ್ತಾರೆ. ಯಾವುದಾದರೂ ಒಂದು ಪರಿವರ್ತನೆಯ ಸಂಕಲ್ಪವನ್ನು ಮಾಡಿ ಹೋಗುತ್ತಾರೆ. ಇದಾಗಿದೆ ಬ್ರಹ್ಮಾ ಹಾಗೂ ಬ್ರಾಹ್ಮಣ ಮಕ್ಕಳ ತಪಸ್ಸಿನ ಪ್ರಭಾವ. ಜೊತೆಯಲ್ಲಿ ಸೇವೆಯ ವಿಧಿ- ಭಿನ್ನ ಭಿನ್ನ ಪ್ರಕಾರದ ಸೇವೆಗಳು ಮಕ್ಕಳಿಂದ ಪ್ರಾಕ್ಟಿಕಲ್ನಲ್ಲಿ ಮಾಡಿಸಿ ತೋರಿಸಿದರು. ಅದೇ ವಿಧಿಯನ್ನು ಈಗ ವಿಸ್ತಾರದಲ್ಲಿ ತರುತ್ತಿರುವಿರಿ. ಹಾಗಾದರೆ ಹೇಗೆ ಬ್ರಹ್ಮಾ ತಂದೆಯ, ತ್ಯಾಗ, ತಪಸ್ಸು, ಸೇವೆಯ ಫಲ ನೀವು ಮಕ್ಕಳಿಗೆ ಸಿಗುತ್ತಿದೆ. ಇದೇ ರೀತಿ ಪ್ರತಿಯೊಂದು ಮಗು ತಮ್ಮ ತ್ಯಾಗ, ತಪಸ್ಸು ಹಾಗೂ ಸೇವೆಯ ಪ್ರಕಂಪನಗಳನ್ನು ವಿಶ್ವದಲ್ಲಿ ಹರಡಬೇಕು. ಹೇಗೆ ವಿಜ್ಞಾನದ ಬಲ ತನ್ನ ಪ್ರಭಾವವನ್ನು ಪ್ರತ್ಯಕ್ಷ ರೂಪದಲ್ಲಿ ತೋರಿಸುತ್ತಿದೆ ಅದೇ ರೀತಿ ವಿಜ್ಞಾನದ ರಚೈತ ಶಾಂತಿಯ ಬಲವಾಗಿದೆ. ಶಾಂತಿಯ ಬಲವನ್ನು ಈಗ ಪ್ರತ್ಯಕ್ಷವಾಗಿ ತೋರಿಸುವ ಸಮಯವಾಗಿದೆ. ಶಾಂತಿಯ ಬಲದ ಪ್ರಕಂಪನಗಳು ತೀವ್ರಗತಿಯಿಂದ ಹರಡುವ ಸಾಧನವಾಗಿದೆ- ಮನಸ್ಸು ಬುದ್ಧಿಯ ಏಕಾಗ್ರತೆ. ಈ ಏಕಾಗ್ರತೆಯ ಅಭ್ಯಾಸವನ್ನು ಹೆಚ್ಚಿಸಬೇಕು. ಏಕಾಗ್ರತೆಯ ಶಕ್ತಿಯಿಂದಲೇ ವಾಯುಮಂಡಲವನ್ನು ತಯಾರಿಸಲು ಸಾಧ್ಯ. ಏರುಪೇರಿನ ಕಾರಣ ಶಕ್ತಿಶಾಲಿ ಪ್ರಕಂಪನಗಳನ್ನು ಹರಡಲು ಸಾಧ್ಯವಿಲ್ಲ.

ಬಾಪ್ದಾದಾರವರು ಇಂದು ನೋಡುತ್ತಿದ್ದರು - ಏಕಾಗ್ರತೆಯ ಶಕ್ತಿ ಈಗ ಹೆಚ್ಚು ಬೇಕಾಗಿದೆ. ಎಲ್ಲಾ ಮಕ್ಕಳದು ಒಂದೇ ದೃಢ ಸಂಕಲ್ಪವಿರಲಿ- ಈಗ ತಮ್ಮ ಸಹೋದರ ಸಹೋದರಿಯರ ದುಃಖದ ಘಟನೆಗಳು ಪರಿವರ್ತನೆಯಾಗಿ ಬಿಡಲಿ. ಹೃದಯದಿಂದ ದಯೆ ಇಮರ್ಜ್ ಆಗಲಿ. ಸೈನ್ಸ್(ವಿಜ್ಞಾನ) ನ ಶಕ್ತಿ ಏರುಪೇರನ್ನು ತರಬಹುದು ಎಂದ ಮೇಲೆ ಇಷ್ಟೆಲ್ಲ ಬ್ರಾಹ್ಮಣರ ಶಾಂತಿಯ ಶಕ್ತಿ, ದಯಾ ಹೃದಯದ ಭಾವನೆಯ ಮೂಲಕ ಹಾಗೂ ಸಂಕಲ್ಪದ ಮೂಲಕ ಏರುಪೇರನ್ನು ಪರಿವರ್ತನೆ ಮಾಡಲು ಸಾಧ್ಯವಿಲ್ಲವೇ! ಮಾಡಲೇಬೇಕು ಎಂದ ಮೇಲೆ, ಆಗಲೇಬೇಕು ಎಂದ ಮೇಲೆ ವಿಶೇಷವಾಗಿ ಈ ಮಾತಿನ ಮೇಲೆ ಗಮನ ಹರಿಸಿ. ಈಗ ನೀವು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ನ ಮಕ್ಕಳಾಗಿದ್ದೀರಿ, ಎಲ್ಲರೂ ನಿಮ್ಮ ವಂಶಜರಾಗಿದ್ದಾರೆ, ರೆಂಬೆ-ಕೊಂಬೆಗಳಾಗಿದ್ದಾರೆ, ಪರಿವಾರದವರಾಗಿದ್ದಾರೆ, ನೀವು ಸಹ ಭಕ್ತರ ಇಷ್ಟ ದೇವರಾಗಿದ್ದೀರಿ! ಅವರು ಕರೆಯುತ್ತಿದ್ದಾರೆ- ಹೇ ಇಷ್ಟದೇವ, ನೀವು ಕೇವಲ ಕೇಳಿಸಿಕೊಳ್ಳುತ್ತಿದ್ದೀರಿ, ಅವರಿಗೆ ಪ್ರತಿಕ್ರಿಯೆ ನೀಡುತ್ತಿಲ್ಲವೇ? ಬಾಪ್ದಾದಾರವರು ಹೇಳುತ್ತಾರೆ ಹೇ ಭಕ್ತರ ಇಷ್ಟ ದೇವ ಈಗ ಕೂಗನ್ನು ಕೇಳಿಸಿಕೊಳ್ಳಿ, ಪ್ರತಿಕ್ರಿಯೆ ಕೊಡಿ, ಕೇವಲ ಕೇಳಿಸಿಕೊಳ್ಳುವುದಲ್ಲ. ಏನೆಂದು ಪ್ರತಿಕ್ರಿಯೆ ಕೊಡುವಿರಿ? ಪರಿವರ್ತನೆಯ ವಾಯುಮಂಡಲವನ್ನು ತಯಾರಿಸಿ. ನಿಮ್ಮ ಪ್ರತಿಕ್ರಿಯೆ ಅವರಿಗೆ ಸಿಗುತ್ತಿಲ್ಲ ಆದ್ದರಿಂದ ಅವರು ಸಹ ಹುಡುಗಾಟಕೆಯಲ್ಲಿ ಬಂದುಬಿಡುತ್ತಾರೆ. ಕೂಗಾಡುತ್ತಾರೆ ನಂತರ ಮತ್ತೆ ಸುಮ್ಮನಾಗಿ ಬಿಡುತ್ತಾರೆ.

ಬ್ರಹ್ಮಾ ತಂದೆಯ ಪ್ರತಿಯೊಂದು ಕಾರ್ಯದ ಉತ್ಸಾಹವನ್ನು ನೋಡಿದ್ದೀರಿ. ಯಾವ ರೀತಿ ಆರಂಭದಲ್ಲಿ ಉಮಂಗವಿತ್ತು- ಚಾವಿ ಬೇಕು! ಈಗಲೂ ಸಹ ಬ್ರಹ್ಮಾ ತಂದೆ ಶಿವ ತಂದೆಗೆ ಹೇಳುತ್ತಾರೆ- ಈಗ ಮನೆಯ ಬಾಗಿಲಿನ ಚಾವಿಯನ್ನು ಕೊಡಿ. ಆದರೆ ಜೊತೆಯಲ್ಲಿ ಹೋಗುವವರು ಸಹ ತಯಾರಾಗಬೇಕಲ್ಲವೇ. ಒಬ್ಬರೇ ಏನು ಮಾಡುವರು! ಎಲ್ಲರೂ ಜೊತೆಯಲ್ಲಿ ಹೋಗಬೇಕಲ್ಲವೇ ಅಥವಾ ಹಿಂದೆ ಹಿಂದೆ ಹೋಗಬೇಕೆ? ಜೊತೆಯಲ್ಲಿ ಹೋಗಬೇಕಲ್ಲವೇ? ಬ್ರಹ್ಮಾ ತಂದೆ ಹೇಳುತ್ತಾರೆ- ಮಕ್ಕಳನ್ನು ಕೇಳಿ, ಒಂದುವೇಳೆ ಚಾವಿಯನ್ನು ಕೊಟ್ಟರೆ ತಾವು ಎವರ್-ರೆಡಿ (ಸದಾ-ಸಿದ್ಧ) ಆಗಿದ್ದೀರಾ? ಎವರ್-ರೆಡಿ ಆಗಿದ್ದೀರಾ ಅಥವಾ ರೆಡಿಯಾಗಿದ್ದೀರಾ(ಸಿದ್ಧ), ಕೇವಲ ಸಿದ್ಧ ಅಲ್ಲ, ಸದಾ ಸಿದ್ಧ. ತ್ಯಾಗ ತಪಸ್ಸು ಸೇವೆ 3 ಪೇಪರ್ಗಳು ತಯಾರಾಗಿದೆಯೇ? ಬ್ರಹ್ಮಾ ತಂದೆ ಮುಗುಳ್ನಗುತ್ತಾರೆ- ಪ್ರೀತಿಯ ಕಣ್ಣೀರನ್ನು ಬಹಳ ಸುರಿಸುತ್ತಾರೆ ಹಾಗೂ ಬ್ರಹ್ಮಾ ತಂದೆ ಆ ಕಣ್ಣೀರನ್ನು ಮುತ್ತಿನ ಸಮಾನ ಹೃದಯದಲ್ಲಿ ಸಮಾವೇಶವನ್ನು ಸಹ ಮಾಡಿಕೊಳ್ಳುತ್ತಾರೆ ಆದರೆ ಒಂದು ಸಂಕಲ್ಪ ಅವಶ್ಯವಾಗಿ ನಡೆಯುತ್ತದೆ- ಎಲ್ಲರೂ ಯಾವಾಗ ಸದಾ ಸಿದ್ಧರಾಗುತ್ತಾರೆ! ದಿನಾಂಕವನ್ನು ಕೊಡಬೇಕು. ನೀವಂತೂ ಹೇಳುತ್ತೀರಿ ನಾವಂತೂ ಎವರ್ ರೆಡಿಯಾಗಿದ್ದೇವೆ, ಆದರೆ ನಿಮ್ಮ ಜೊತೆಗಾರರು ಯಾರಿದ್ದಾರೆ ಅವರನ್ನು ಸಹ ತಯಾರು ಮಾಡಿ ಅಥವಾ ಅವರನ್ನು ಬಿಟ್ಟು ನೀವು ಹೊರಟು ಹೋಗುತ್ತೀರಾ? ನೀವು ಹೇಳುವಿರಿ ಬ್ರಹ್ಮಾ ತಂದೆಯು ಸಹ ಹೊರಟು ಹೋದರು ಅಲ್ಲವೇ! ಆದರೆ ಅವರಿಗಂತು ಈ ರಚನೆಯನ್ನು ರಚಿಸಬೇಕಾಗಿತ್ತು? ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕಲ್ಲವೇ ಒಬ್ಬರೇ ಹೋಗುವರೇ? ಎಂದ ಮೇಲೆ ಎಲ್ಲರೂ ಸದಾ ಸಿದ್ಧರಾಗಿದ್ದೀರಾ ಅಥವಾ ಆಗಿಬಿಡುವಿರಾ? ಹೇಳಿ. ಕಡಿಮೆ ಎಂದರೆ ಕಡಿಮೆ 9 ಲಕ್ಷವಂತ ಜೊತೆಯಲ್ಲಿ ಹೋಗಬೇಕು. ಇಲ್ಲವಾದರೆ ಯಾರ ಮೇಲೆ ರಾಜ್ಯ ಮಾಡುವಿರಿ? ತಮ್ಮ ಮೇಲೆ ರಾಜ್ಯ ಮಾಡುತ್ತೀರಾ ? ಎಂದ ಮೇಲೆ ಬ್ರಹ್ಮಾ ತಂದೆಗೆ ಎಲ್ಲಾ ಮಕ್ಕಳ ಪ್ರತಿ ಇದೇ ಶುಭಕಾಮನೆಗಳಿದೆ- ಎವರ್ ರೆಡಿಯಾಗಿ ಹಾಗೂ ಎವರ್ ರೆಡಿಯನ್ನಾಗಿ ಮಾಡಿ.

ಇಂದು ವತನದಲ್ಲಿಯೂ ಸಹ ಎಲ್ಲಾ ವಿಶೇಷ ಆದಿರತ್ನ ಹಾಗೂ ಸೇವೆಯ ಆದಿರತ್ನಗಳು ಇಮರ್ಜ್ ಆಗಿದ್ದರು. ಅಡ್ವಾನ್ಸ್ ಪಾರ್ಟಿ ಅವರು ಹೇಳುತ್ತಾರೆ ನಾವಂತೂ ತಯಾರಾಗಿದ್ದೇವೆ. ಯಾವ ಮಾತಿಗಾಗಿ ತಯಾರಾಗಿದ್ದಾರೆ? ಅವರು ಹೇಳುತ್ತಾರೆ ಈ ಪ್ರತ್ಯಕ್ಷತೆಯ ನಗಾರಿಯನ್ನು ಬಾರಿಸಿದರೆ ನಾವೆಲ್ಲರೂ ಪ್ರತ್ಯಕ್ಷರಾಗಿ ಹೊಸ ಸೃಷ್ಟಿಯ ರಚನೆಯ ನಿಮಿತ್ತಾಗುತ್ತೇವೆ. ನಾವಂತೂ ಆಹ್ವಾನ ಮಾಡುತ್ತಿದ್ದೇವೆ- ಹೊಸ ಸೃಷ್ಟಿಯ ರಚನೆ ಮಾಡುವವರು ಬರಲಿ. ಈಗ ಎಲ್ಲಾ ಕೆಲಸವು ನಿಮ್ಮ ಮೇಲಿದೆ. ನಗಾರಿಯನ್ನು ಹೊಡೆಯಿರಿ. ಬಂದುಬಿಟ್ಟರು, ಬಂದುಬಿಟ್ಟರು... ಇದರ ನಗಾರಿಯನ್ನು ಹೊಡೆಯಿರಿ. ನಗಾರಿಯನ್ನು ಬಾರಿಸಲು ಬರುತ್ತದೆಯೇ? ಬಾರಿಸಬೇಕಲ್ಲವೇ! ಈಗ ಬ್ರಹ್ಮಾ ತಂದೆ ಹೇಳುತ್ತಾರೆ ದಿನಾಂಕವನ್ನು ನಿಗದಿಪಡಿಸಿ. ನೀವು ಸಹ ಹೇಳುತ್ತೀರಲ್ಲವೇ ದಿನಾಂಕದ ಹೊರತು ಕೆಲಸವಾಗುವುದಿಲ್ಲ. ಹಾಗಾದರೆ ಇದರ ದಿನಾಂಕವನ್ನು ಸಹ ನಿಗದಿಸಿ. ದಿನಾಂಕವನ್ನು ನಿಗದಿಸಲು ಸಾಧ್ಯವೇ? ತಂದೆಯಂತು ಹೇಳುತ್ತಾರೆ ನೀವು ನಿಗದಿಸಿ. ತಂದೆಯಂತು ಹೇಳುತ್ತಾರೆ ಇಂದೇ ನಿಗದಿಪಡಿಸಿ. ಸಮ್ಮೇಳನದ ದಿನಾಂಕವನ್ನು ನಿಗದಿ ಪಡಿಸುತ್ತೀರಿ ಹಾಗೂ ಇದರ ಸಮ್ಮೇಳನವನ್ನು ಸಹ ಮಾಡಿ! ವಿದೇಶದವರು ಏನು ಹೇಳುತ್ತೀರಿ, ದಿನಾಂಕ ನಿಗದಿಪಡಿಸಲು ಈಗ ಸಾಧ್ಯವೇ? ದಿನಾಂಕ ಫಿಕ್ಸ್ ಮಾಡುತ್ತೀರಾ? ಸರಿಯೇ ಇಲ್ಲವೇ! ಒಳ್ಳೆಯದು ದಾದಿ ಜಾನಕಿಜಿಯವರ ಜೊತೆ ತೀರ್ಮಾನ ಮಾಡಿ, ಮಾಡಿ. ಒಳ್ಳೆಯದು.

ದೇಶವಿದೇಶದ ನಾಲ್ಕಾರು ಕಡೆಯ, ಬಾಪ್ದಾದಾರವರ ಅತಿ ಸಮೀಪ, ಅತಿಪ್ರಿಯ ಹಾಗೂ ಭಿನ್ನ, ಬಾಪ್ದಾದಾರವರು ನೋಡುತ್ತಿದ್ದಾರೆ- ಎಲ್ಲಾ ಮಕ್ಕಳು ಪ್ರೀತಿಯಲ್ಲಿ ಮಗ್ನರಾಗಿ ನವಲೀನ ಸ್ವರೂಪದಲ್ಲಿ ಕುಳಿತಿದ್ದಾರೆ. ಕೇಳಿಸಿಕೊಳ್ಳುತ್ತಿದ್ದಾರೆ ಹಾಗೂ ಮಿಲನದ ಉಯ್ಯಾಲೆಯಲ್ಲಿ ತೂಗುತ್ತಿದ್ದಾರೆ. ದೂರವಿಲ್ಲ ಆದರೆ ನಯನಗಳ ಸಮ್ಮುಖದಲ್ಲಿಯೂ ಅಲ್ಲ ಆದರೆ ಸಮಾವೇಶವಾಗಿದ್ದಾರೆ. ಇಂತಹ ಸಮ್ಮುಖ ಮಿಲನ ಆಚರಿಸುವಂತಹ ಹಾಗೂ ಅವ್ಯಕ್ತ ರೂಪದಲ್ಲಿ ಲವಲೀನ ಮಕ್ಕಳಿಗೆ, ಸದಾ ತಂದೆಯ ಸಮಾನ ತ್ಯಾಗ, ತಪಸ್ಸು ಹಾಗೂ ಸೇವೆಯ ಪುರಾವೆಯನ್ನು ತೋರಿಸುವಂತಹ ಸುಪುತ್ರ ಮಕ್ಕಳಿಗೆ, ಸದಾ ಏಕಾಗ್ರತೆಯ ಶಕ್ತಿಯ ಮೂಲಕ ವಿಶ್ವದ ಪರಿವರ್ತನೆ ಮಾಡುವಂತಹ ವಿಶ್ವ ಪರಿವರ್ತಕ ಮಕ್ಕಳಿಗೆ, ಸದಾ ತಂದೆಯ ಸಮಾನ ತೀವ್ರ ಪುರುಷಾರ್ಥದ ಮೂಲಕ ಹಾರುವಂತಹ ಡಬಲ್ ಲೈಟ್ ಮಕ್ಕಳಿಗೆ ಬಹಳ ಬಹಳ ನೆನಪು ಪ್ರೀತಿ ಹಾಗೂ ನಮಸ್ತೆ.

ರಾಜಸ್ಥಾನದ ಸೇವಾಧಾರಿ:- ಬಹಳ ಒಳ್ಳೆಯ ಸೇವೆಯ ಚಾನ್ಸ್ ರಾಜಸ್ಥಾನದವರಿಗೆ ಸಿಕ್ಕಿದೆ. ರಾಜಸ್ಥಾನದ ಹೇಗೆ ಹೆಸರು ರಾಜಸ್ಥಾನ ಎಂದಿದೆ, ಎಂದ ಮೇಲೆ ರಾಜಸ್ಥಾನದಿಂದ ರಾಜ ಕ್ವಾಲಿಟಿಯವರು ಬರುತ್ತಾರೆ. ಪ್ರಜೆ ಅಲ್ಲ ರಾಜ ಮನೆತನದ ರಾಜರನ್ನು ಹೊರತನ್ನಿ. ಹೇಗೆ ಹೆಸರು ರಾಜಸ್ಥಾನ ಎಂದಿದೆ, ಅಂತಹವರನ್ನೇ ಹೊರತನ್ನಿ, ಎಂತಹ ಹೆಸರು ಅಂತಹ ಕ್ವಾಲಿಟಿಯವರು. ಇನ್ನೂ ಯಾರಾದರೂ ಅಡಗಿಕೊಂಡಿರುವ ರಾಜರು ಇದ್ದಾರೆಯೇ ಅಥವಾ ಇನ್ನೂ ಸಹ ಮೋಡಗಳ ಹಿಂದೆ ಇದ್ದಾರೆ? ಹೇಗೆ ವ್ಯಾಪಾರಿಗಳು ಇರುತ್ತಾರೆ, ಅವರ ಸೇವೆಯ ಮೇಲೆ ವಿಶೇಷ ಗಮನ ಕೊಡಿ. ಈ ಮಂತ್ರಿಗಳು ಹಾಗೂ ಸೆಕ್ರೆಟರಿಗಳಂತೂ ಬದಲಾಗುತ್ತಾ ಇರುತ್ತಾರೆ ಆದರೆ ವ್ಯಾಪಾರಿಗಳು ತಂದೆಯೊಂದಿಗೂ ಸಹ ವ್ಯಾಪಾರವನ್ನು ಮಾಡುವುದರಲ್ಲಿ ಮುಂದುವರೆಯಬಹುದು. ಮತ್ತು ವ್ಯಾಪಾರಸ್ಥರ ಸೇವೆ ಮಾಡುವುದರಿಂದ ಅವರ ಪರಿವಾರದ ಮಾತೆಯರು ಸಹಜವಾಗಿ ಬಂದುಬಿಡಬಹುದು. ಮಾತೆಯರೊಬ್ಬರೇ ನಡೆಯಲು ಸಾಧ್ಯವಿಲ್ಲ ಆದರೆ ಒಂದು ವೇಳೆ ಮನೆಯ ಸ್ತಂಭ ಬಂದುಬಿಡುತ್ತದೆ ಎಂದರೆ ಪರಿವಾರ ಸ್ವತಹವಾಗಿಯೇ ನಿಧಾನವಾಗಿ ವೃದ್ಧಿಯಾಗುತ್ತಾ ಹೋಗುತ್ತದೆ ಆದ್ದರಿಂದ ರಾಜಸ್ಥಾನದವರಿಗೆ ರಾಜ ಕ್ವಾಲಿಟಿಯವರನ್ನು ತರಬೇಕು. ಅಂತಹವರು ಯಾರು ಇಲ್ಲ, ಎಂದು ಹೇಳಬೇಡಿ. ಸ್ವಲ್ಪ ಹುಡುಕಬೇಕಾಗುತ್ತದೆ ಆದರೆ ಇದ್ದಾರೆ. ಸ್ವಲ್ಪ ಅವರಿಗಾಗಿ ಸಮಯ ಕೊಡಬೇಕಾಗುತ್ತದೆ. ವ್ಯಸ್ತರಾಗಿರುತ್ತಾರೆ ಅಲ್ಲವೇ! ಯಾವುದಾದರೂ ಇಂತಹ ವಿಧಿಯನ್ನು ಮಾಡಬೇಕಾಗುತ್ತದೆ ಯಾವುದರಿಂದ ಅವರು ಸಮೀಪ ಬರಬೇಕು. ಬಾಕಿ ಚೆನ್ನಾಗಿದ್ದಾರೆ, ಸೇವೆಯ ಚಾನ್ಸ್ ತೆಗೆದುಕೊಂಡಿದ್ದೀರಿ, ಪ್ರತಿಯೊಂದು ಜೋನಿನವರು ತೆಗೆದುಕೊಳ್ಳುತ್ತೀರಿ ಇದು ಸಮೀಪ ಬರುವ ಹಾಗೂ ಆಶೀರ್ವಾದಗಳನ್ನು ಪಡೆದುಕೊಳ್ಳುವ ಸಾಧನವಾಗಿದೆ. ನಿಮ್ಮನ್ನು ಎಲ್ಲರೂ ನೋಡಲಿ ಅಥವಾ ನೋಡದೆ ಇರಲಿ, ತಿಳಿಯಲಿ ಅಥವಾ ತಿಳಿಯದಿರಲಿ, ಆದರೆ ಎಷ್ಟು ಚೆನ್ನಾಗಿ ಸೇವೆ ಮಾಡುತ್ತೀರಿ, ಇದರಿಂದ ಸ್ವತಹವಾಗಿಯೇ ಆಶೀರ್ವಾದಗಳು ಸಿಗುತ್ತದೆ ಹಾಗೂ ಆ ಆಶೀರ್ವಾದಗಳು ಬಹಳ ಬೇಗ ತಲುಪುತ್ತದೆ. ಹೃದಯದ ಆಶೀರ್ವಾದಗಳಾಗಿವೆ ಅಲ್ಲವೇ! ಎಂದ ಮೇಲೆ ಹೃದಯಕ್ಕೆ ಬೇಗ ತಲುಪುತ್ತದೆ. ಬಾಪ್ದಾದಾರವರು ಹೇಳುತ್ತಾರೆ ಎಲ್ಲಕ್ಕಿಂತ ಸಹಜ ಪುರುಷಾರ್ಥವಾಗಿದೆ- ಆಶೀರ್ವಾದಗಳನ್ನು ಕೊಡಿ ಹಾಗೂ ಆಶೀರ್ವಾದಗಳನ್ನು ಪಡೆದುಕೊಳ್ಳಿ. ಆಶೀರ್ವಾದಗಳಿಂದ ಎಲ್ಲಾ ಖಾತೆ ತುಂಬಿ ಹೋಗುತ್ತದೆ ಎಂದರೆ ಸಂಪನ್ನ ಖಾತೆಯಲ್ಲಿ ಮಾಯೆಯೂ ಸಹ ಡಿಸ್ಟರ್ಬ್(ತೊಂದರೆ) ಮಾಡುವುದಿಲ್ಲ. ಜಮಾದ ಬಲ ಸಿಗುತ್ತದೆ. ಸಂತುಷ್ಟರಾಗಿರಿ ಹಾಗೂ ಎಲ್ಲರನ್ನೂ ಸಂತುಷ್ಟರನ್ನಾಗಿ ಮಾಡಿ. ಪ್ರತಿಯೊಬ್ಬರ ಸ್ವಭಾವದ ರಹಸ್ಯವನ್ನು ತಿಳಿದುಕೊಂಡು ಸಂತುಷ್ಟರನ್ನಾಗಿ ಮಾಡಿ. ಇವರಂತೂ ಕೋಪ ಮಾಡಿಕೊಳ್ಳುತ್ತಾರೆ ಎಂದು ಹೇಳಬೇಡಿ. ನೀವು ಸ್ವಯಂ ರಹಸ್ಯವನ್ನು ತಿಳಿದುಕೊಂಡು ಬಿಡಿ. ಅವರ ನಾಡಿಯನ್ನು ತಿಳಿದುಕೊಂಡು ಬಿಡಿ ನಂತರ ಆಶೀರ್ವಾದದ ಔಷಧಿಯನ್ನು ಕೊಡಿ. ಆಗ ಸಹಜವಾಗಿಬಿಡುವುದು. ಸರಿಯೇ ರಾಜಸ್ಥಾನದವರು! ರಾಜಸ್ಥಾನದ ಶಿಕ್ಷಕಿಯರು ನಿಂತುಕೊಳ್ಳಿ. ಸೇವೆಯ ಶುಭಾಶಯಗಳು. ಸಹಜ ಪುರುಷಾರ್ಥ ಮಾಡಿ, ಆಶೀರ್ವಾದಗಳನ್ನು ಕೊಡುತ್ತಾ ಹೋಗಿ. ಪಡೆದುಕೊಳ್ಳುವ ಸಂಕಲ್ಪವನ್ನು ಮಾಡಬೇಡಿ, ಕೊಡುತ್ತಾ ಹೋದರೆ ಸಿಗುತ್ತಾ ಹೋಗುತ್ತದೆ. ಕೊಡುವುದೇ ತೆಗೆದುಕೊಳ್ಳುವುದಾಗಿದೆ. ಸರಿಯೇ! ಈ ರೀತಿ ಆಗಿದೆ ಅಲ್ಲವೇ! ದಾತನ ಮಕ್ಕಳಾಗಿದ್ದೀರಲ್ಲವೇ! ಯಾರಾದರೂ ಕೊಟ್ಟರೆ ಕೊಡುತ್ತೇವೆ, ಅಲ್ಲ. ದಾತ ಆಗಿ ಕೊಡುತ್ತಾ ಹೋದರೆ ಸ್ವತಹವಾಗಿಯೇ ಸಿಗುತ್ತದೆ. ಒಳ್ಳೆಯದು.

ಯಾರು ಈ ಕಲ್ಪದಲ್ಲಿ ಮೊದಲ ಬಾರಿ ಬಂದಿದ್ದೀರಿ ಅವರು ಕೈ ಎತ್ತಿ. ಅರ್ಧ ಹೊಸಬರು ಬಂದಿದ್ದಾರೆ, ಅರ್ಧ ಮೊದಲಿದ್ದವರು ಬಂದಿದ್ದಾರೆ. ಒಳ್ಳೆಯದು. ಹಿಂದಿನವರು ಕೋಣೆಯಲ್ಲಿ ಕುಳಿತುಕೊಂಡು ಸಹ ಎಲ್ಲರೂ ಸಹಜ ಯೋಗಿ ಆಗಿದ್ದೀರಾ? ಸಹಜ ಯೋಗಿ ಆಗಿದ್ದರೆ ಒಂದು ಕೈಯನ್ನು ಎತ್ತಿ. ಒಳ್ಳೆಯದು.

ಬೀಳ್ಕೊಡುಗೆಯ ಸಮಯ: (ಬಾಪ್ದಾದಾರವರಿಗೆ ರಥಯಾತ್ರೆಯ ಸಮಾಚಾರವನ್ನು ತಿಳಿಸಿದರು) ನಾಲ್ಕಾರು ಕಡೆಯ ಯಾತ್ರೆಗಳ ಸಮಾಚಾರ ಸಮಯ ಪ್ರತಿ ಸಮಯ ಬಾಪ್ದಾದಾರವರ ಬಳಿ ಬರುತ್ತಾ ಇರುತ್ತದೆ. ಒಳ್ಳೆಯದು ಎಲ್ಲರೂ ಉಮಂಗ ಉತ್ಸಾಹದಿಂದ ಸೇವೆಯ ಪಾತ್ರವನ್ನು ಅಭಿನಯಿಸುತ್ತಿದ್ದೀರಿ. ಭಕ್ತರಿಗೆ ಆಶೀರ್ವಾದಗಳು ಸಿಗುತ್ತಿದೆ ಹಾಗೂ ಯಾವ ಭಕ್ತರ ಭಕ್ತಿ ಪೂರ್ತಿಯಾಯಿತು, ಅವರಿಗೆ ತಂದೆಯ ಪರಿಚಯ ಸಿಕ್ಕಿಬಿಡುವುದು ಹಾಗೂ ಪರಿಚಯ ಸಿಕ್ಕವರು ಯಾರು ಮಕ್ಕಳಾಗಬೇಕಾಗಿದೆಯೋ ಅವರು ಸಹ ಕಾಣಿಸುತ್ತಾ ಇರುತ್ತಾರೆ. ಉಳಿದಿರುವ ಸೇವೆ ಚೆನ್ನಾಗಿ ನಡೆಯುತ್ತಿದೆ ಹಾಗೂ ಏನೆಲ್ಲಾ ಸಾಧನ ತಯಾರಿಸಿದ್ದೀರಿ ಆ ಸಾಧನ ಚೆನ್ನಾಗಿ ಎಲ್ಲರಿಗೂ ಆಕರ್ಷಣೆ ಮಾಡುತ್ತಿದೆ. ಈಗ ಫಲಿತಾಂಶದಲ್ಲಿ ಯಾರು ಯಾರು ಯಾವ ಕೆಟಗರಿ(ವರ್ಗ) ದಲ್ಲಿ ಬರುತ್ತಾರೆ ಅದು ತಿಳಿದುಬಿಡುತ್ತದೆ ಆದರೆ ಭಕ್ತರಿಗೂ ಸಹ ನಿಮ್ಮೆಲ್ಲರ ದೃಷ್ಟಿ ಸಿಕ್ಕಿದೆ, ಪರಿಚಯ ಸಿಕ್ಕಿದೆ- ಇದು ಸಹ ಒಳ್ಳೆಯ ಸಾಧನವಾಗಿದೆ. ಈಗ ಮುಂದುವರೆದು ಇವರ ಸೇವೆಯನ್ನು ಮಾಡಿ ಮುಂದುವರೆಸುತ್ತಾ ಇರಬೇಕು. ಯಾರೆಲ್ಲ ರಥ ಯಾತ್ರೆಯಲ್ಲಿ ಸೇವೆ ಮಾಡುತ್ತಿದ್ದಾರೆ, ಅವಿಶ್ರಾತರಾಗಿ ಸೇವೆ ಮಾಡುತ್ತಿದ್ದಾರೆ, ಅವರೆಲ್ಲರಿಗೂ ನೆನಪು ಪ್ರೀತಿ. ಬಾಪ್ದಾದಾರವರು ಎಲ್ಲರನ್ನು ನೋಡುತ್ತಾ ಇರುತ್ತಾರೆ ಹಾಗೂ ಸಫಲತೆಯಂತೂ ಜನ್ಮಸಿದ್ಧ ಅಧಿಕಾರವಾಗಿದೆ. ಒಳ್ಳೆಯದು.

ಮರಿಷಿಯಸ್ನಲ್ಲಿ ನಮ್ಮ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ನ್ಯಾಷನಲ್ ಯೂನಿಟಿ ಅವಾರ್ಡ್ ಪ್ರಧಾನ ಮಂತ್ರಿಯ ಮೂಲಕ ಸಿಕ್ಕಿದೆ:- ಮರೀಶಿಯಸ್ ನಲ್ಲಿ ವಿ.ಐ.ಪಿ ಯ ಕನೆಕ್ಷನ್ ಚೆನ್ನಾಗಿದೆ ಹಾಗೂ ಪ್ರಭಾವವು ಸಹ ಚೆನ್ನಾಗಿದೆ ಆದ್ದರಿಂದ ಗುಪ್ತ ಸೇವೆಯ ಫಲ ಸಿಗುತ್ತದೆ ಆದ್ದರಿಂದ ಎಲ್ಲರಿಗೂ ವಿಶೇಷ ಶುಭಾಶಯಗಳು. ಒಳ್ಳೆಯದು. ಓಂ ಶಾಂತಿ.

ವರದಾನ:
ಶ್ವಾಸ-ಶ್ವಾಸದಲ್ಲಿ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಮೂಲಕ ಬ್ಲೆಸಿಂಗ್ (ಆಶೀರ್ವಾದ) ಪ್ರಾಪ್ತಿಮಾಡಿಕೊಳ್ಳುವಂತಹ ಸದಾ ಪ್ರಸನ್ನಚಿತ್ತ ಭವ.

ಹೇಗೆ ನೆನಪಿನ ಸಂಬಂಧ ಸದಾ ಜೋಡಿಸಲ್ಪಟಿರಲು ಗಮನ ಇಡುವಿರಿ ಅದೇ ರೀತಿ ಸೇವೆಯಲ್ಲಿಯೂ ಸದಾ ಸಂಬಂಧ ಜೋಡಿಸಲ್ಪಟ್ಟಿರಬೇಕು. ಶ್ವಾಸ-ಶ್ವಾಸದಲ್ಲಿ ನೆನಪು ಮತ್ತು ಶ್ವಾಸ-ಶ್ವಾಸದಲ್ಲಿ ಸೇವೆ-ಇದಕ್ಕೆ ಹೇಳಲಾಗುತ್ತದೆ ಬ್ಯಾಲೆನ್ಸ್, ಈ ಬ್ಯಾಲೆನ್ಸ್ ನಿಂದ ಸದಾ ಬ್ಲೆಸಿಂಗ್ನ ಅನುಭವ ಮಾಡುತ್ತಿರುವಿರಿ ಮತ್ತು ಆಶೀರ್ವಾದದಿಂದ ಪಾಲನೆ ಪಡೆಯುತ್ತಿದ್ದೇವೆ ಎಂದು ಹೃದಯದಿಂದ ಬರುತ್ತದೆ. ಪರಿಶ್ರಮದಿಂದ, ಯುದ್ಧದಿಂದ ಬಿಡಿಸಿಕೊಳ್ಳುವಿರಿ. ಏನು? ಏಕೆ? ಹೇಗೆ? ಈ ಪ್ರಶ್ನೆಗಳಿಂದ ಮುಕ್ತರಾಗಿ ಸದಾ ಪ್ರಸನ್ನಚಿತ್ತರಾಗಿರುವಿರಿ. ನಂತರ ಸಫಲತಾ ಜನ್ಮಸಿದ್ಧ ಅಧಿಕಾರದ ರೂಪದಲ್ಲಿ ಅನುಭವವಾಗುವುದು.

ಸ್ಲೋಗನ್:
ತಂದೆಯಿಂದ ಬಹುಮಾನ ಪಡೆಯಬೇಕಾದರೆ ಸ್ವಯಂನಿಂದ ಮತ್ತು ಜೊತೆಗಾರರಿಂದ ನಿರ್ವಿಘ್ನರಾಗಿರುವ ಸರ್ಟಿಫಿಕೆಟ್ ಜೊತೆಯಿರಬೇಕು.