02.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಇಲ್ಲಿ ನೀವು ನೆನಪಿನಲ್ಲಿದ್ದು ಪಾಪವನ್ನು ಭಸ್ಮ ಮಾಡಿಕೊಳ್ಳಲು ಬಂದಿದ್ದೀರಿ ಆದ್ದರಿಂದ ಬುದ್ಧಿಯೋಗವು ನಿಷ್ಫಲವಾಗಿ ಹೋಗಬಾರದು, ಈ ಮಾತಿನ ಬಗ್ಗೆ ಪೂರ್ಣ ಗಮನವನ್ನಿಡಬೇಕಾಗಿದೆ”

ಪ್ರಶ್ನೆ:
ಯಾವ ಸೂಕ್ಷ್ಮವಿಕಾರವೂ ಸಹ ಅಂತಿಮದಲ್ಲಿ ವಿಘ್ನರೂಪವನ್ನು ಉಂಟುಮಾಡುತ್ತದೆ?

ಉತ್ತರ:
ಒಂದುವೇಳೆ ಸೂಕ್ಷ್ಮದಲ್ಲಿಯೂ ಸಹ ಅತಿಯಾಸೆ ಅಥವಾ ಲೋಭದ ವಿಕಾರವಿದ್ದರೆ ಯಾವುದೇ ಪದಾರ್ಥವನ್ನು ಲೋಭದ ಕಾರಣ ಸಂಗ್ರಹಮಾಡಿ ತಮ್ಮ ಬಳಿ ಇಟ್ಟುಕೊಂಡಿದ್ದರೆ ಅಂತಿಮದಲ್ಲಿ ಅದೇ ವಿಘ್ನ ರೂಪವಾಗಿ ನೆನಪಿಗೆ ಬರುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ-ತಮ್ಮಬಳಿ ಏನನ್ನೂ ಇಟ್ಟುಕೊಳ್ಳಬೇಡಿ. ನೀವು ಎಲ್ಲಾ ಸಂಕಲ್ಪಗಳನ್ನು ಬದಿಗೊತ್ತಿ ತಂದೆಯ ನೆನಪಿನಲ್ಲಿರುವ ಹವ್ಯಾಸವನ್ನಿಟ್ಟುಕೊಳ್ಳಬೇಕಾಗಿದೆ. ಆತ್ಮಾಭಿಮಾನಿಗಳಾಗುವ ಅಭ್ಯಾಸ ಮಾಡಬೇಕು.

ಓಂ ಶಾಂತಿ.
ಮಕ್ಕಳಿಗೆ ಪ್ರತಿನಿತ್ಯವೂ ನೆನಪಿಗೆ ತರಿಸುತ್ತಾರೆ- ಆತ್ಮಾಭಿಮಾನಿಗಳಾಗಿ ಎಂದು ಏಕೆಂದರೆ ಬುದ್ಧಿಯು ಅಲ್ಲಿ-ಇಲ್ಲಿ ಓಡುತ್ತದೆ, ಅಜ್ಞಾನಕಾಲದಲ್ಲಿಯೂ ಸಹ ಕಥೆ-ಪುರಾಣಗಳನ್ನು ಕೇಳುವಾಗ ಬುದ್ಧಿಯು ಹೊರಗೆ ಅಲೆದಾಡುತ್ತದೆ ಇಲ್ಲಿಯೂ ಅಲೆದಾಡುತ್ತದೆ ಆದ್ದರಿಂದ ಪ್ರತಿನಿತ್ಯವೂ ತಂದೆಯು ತಿಳಿಸುತ್ತಾರೆ- ಆತ್ಮಾಭಿಮಾನಿಗಳಾಗಿ. ಅಲ್ಲಂತೂ ಅವರು ತಿಳಿಸುತ್ತಾರೆ- ನಾವು ಏನನ್ನು ಹೇಳುತ್ತೇವೆಯೋ ಅದರ ಮೇಲೆ ಗಮನಕೊಡಿ, ಧಾರಣೆ ಮಾಡಿ. ಶಾಸ್ತ್ರಗಳನ್ನೇನು ತಿಳಿಸುತ್ತಾರೆಯೋ ಆ ವಚನಗಳ ಮೇಲೆ ಗಮನ ಕೊಡಿ ಎಂದು ಹೇಳುತ್ತಾರೆ ಇಲ್ಲಂತೂ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ- ನೀವೆಲ್ಲಾ ವಿದ್ಯಾರ್ಥಿಗಳು ಅತ್ಮಾಭಿಮಾನಿಗಳಾಗಿ ಕುಳಿತುಕೊಳ್ಳಿ, ಶಿವತಂದೆಯು ಓದಿಸುವುದಕ್ಕಾಗಿ ಬರುತ್ತಾರೆ. ನಮಗೆ ಶಿವತಂದೆಯು ಓದಿಸಲು ಬರುತ್ತಾರೆಂದು ತಿಳಿಯುವಂತಹ ಯಾವುದೇ ಕಾಲೇಜುಗಳಿರುವುದಿಲ್ಲ. ಪುರುಷೋತ್ತಮ ಸಂಗಮಯುಗದಲ್ಲಿ ಇಂತಹ ಶಾಲೆಯು ಇರಲೇಬೇಕು. ವಿದ್ಯಾರ್ಥಿಗಳು ಕುಳಿತಿದ್ದೀರಿ ಮತ್ತು ಪರಮಪಿತ ಪರಮಾತ್ಮನು ನಮಗೆ ಓದಿಸಲು ಬರುತ್ತಾರೆಂದು ತಿಳಿಯುತ್ತೀರಿ. ಮೊಟ್ಟಮೊದಲ ಮಾತನ್ನು ತಿಳಿಸುತ್ತಾರೆ- ಮಕ್ಕಳೇ, ಪಾವನರಾಗಬೇಕೆಂದರೆ ನನ್ನೊಬ್ಬನನ್ನೇ ನೆನಪು ಮಾಡಿ ಆದರೆ ಮಾಯೆಯು ಪದೇ-ಪದೇ ಮರೆಸುತ್ತದೆ ಆದ್ದರಿಂದ ತಂದೆಯು ಎಚ್ಚರಿಕೆ ನೀಡುತ್ತಾರೆ. ಯಾರಿಗೆ ತಿಳಿಸಬೇಕೆಂದರೂ ಸಹ ಮೊಟ್ಟಮೊದಲ ಮಾತನ್ನು ತಿಳಿಸಿ- ಭಗವಂತ ಯಾರು? ಭಗವಂತ ಯಾರು ಪತಿತ-ಪಾವನ, ದುಃಖಹರ್ತ-ಸುಖಕರ್ತನಾಗಿದ್ದಾರೆಯೋ ಅವರು ಎಲ್ಲಿದ್ದಾರೆ? ಅವರನ್ನು ನೆನಪಂತೂ ಎಲ್ಲರೂ ಮಾಡುತ್ತಾರೆ, ಯಾವುದೇ ಆಪತ್ತುಗಳು ಬಂದಾಗ ಹೇ ಭಗವಂತ ದಯೆತೋರಿಸಿ ಎಂದು ಹೇಳುತ್ತಾರೆ. ಯಾರನ್ನಾದರೂ ರಕ್ಷಣೆ ಮಾಡಬೇಕಾದರೂ ಸಹ ಹೇ ಭಗವಂತ, ಓ ಗಾಡ್ ಫಾದರ್ ನಮ್ಮನ್ನು ದುಃಖದಿಂದ ಮುಕ್ತಮಾಡಿ ಎಂದು ಹೇಳುತ್ತಾರೆ. ದುಃಖವಂತೂ ಎಲ್ಲರಿಗೂ ಇದೆ, ಇದಂತೂ ಪಕ್ಕಾ ತಿಳುವಳಿಕೆಯಿದೆ. ಸತ್ಯಯುಗಕ್ಕೆ ಸುಖಧಾಮವೆಂದು, ಕಲಿಯುಗಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ. ಇದನ್ನು ಮಕ್ಕಳು ತಿಳಿದುಕೊಂಡಿದ್ದೀರಿ ಆದರೂ ಸಹ ಮಾಯೆಯು ಮರೆಸಿಬಿಡುತ್ತದೆ. ಈ ನೆನಪಿನಲ್ಲಿ ಕುಳ್ಳರಿಸುವ ಪದ್ಧತಿಯೂ ಸಹ ನಾಟಕದಲ್ಲಿ ಏಕೆಂದರೆ ಇಂತಹವರು ಅನೇಕರಿದ್ದಾರೆ, ಇಡೀ ದಿನ ನೆನಪೇ ಮಾಡುವುದಿಲ್ಲ, ಒಂದು ನಿಮಿಷವೂ ನೆನಪು ಮಾಡುವುದಿಲ್ಲ ಆದ್ದರಿಂದ ನೆನಪು ತರಿಸುವುದಕ್ಕಾಗಿ ಇಲ್ಲಿ ಕುಳ್ಳರಿಸುತ್ತೀರಿ. ನೆನಪು ಮಾಡುವ ಯುಕ್ತಿಗಳನ್ನು ತಿಳಿಸುತ್ತಾರೆ ಏಕೆಂದರೆ ಅದರಿಂದ ಪಕ್ಕಾ ಆಗಲೆಂದು. ತಂದೆಯ ನೆನಪಿನಿಂದಲೇ ನಾವು ಸತೋಪ್ರಧಾನರಾಗಬೇಕಾಗಿದೆ. ತಂದೆಯು ಸತೋಪ್ರಧಾನರಾಗುವ ಬಹಳ ಸುಂದರವಾದ ಯುಕ್ತಿಗಳನ್ನು ತಿಳಿಸಿದ್ದಾರೆ. ಪತಿತ-ಪಾವನನಂತೂ ಒಬ್ಬರೇ ಆಗಿದ್ದಾರೆ, ಅವರು ಬಂದು ಯುಕ್ತಿಯನ್ನು ತಿಳಿಸುತ್ತಾರೆ- ಇಲ್ಲಿ ಯಾವಾಗ ತಂದೆಯ ಜೊತೆ ಯೋಗವಿರುವುದೋ ಆಗ ಮಕ್ಕಳು ಶಾಂತಿಯಲ್ಲಿ ಕುಳಿತಿರುತ್ತೀರಿ. ಒಂದುವೇಳೆ ಬುದ್ಧಿಯೋಗವು ಅಲ್ಲಿ-ಇಲ್ಲಿ ಹೋಯಿತೆಂದರೆ ಶಾಂತಿಯಲ್ಲಿಲ್ಲ, ಅಂದರೆ ಅಶಾಂತರಾಗಿದ್ದಾರೆಂದರ್ಥ. ಎಷ್ಟು ಸಮಯ ಬುದ್ಧಿಯೋಗವು ಅಲ್ಲಿ-ಇಲ್ಲಿ ಹೋಯಿತೋ ಅಷ್ಟು ನಿಷ್ಫಲವಾಯಿತು ಏಕೆಂದರೆ ಪಾಪವಂತೂ ನಾಶವಾಗುವುದಿಲ್ಲ. ಪಾಪವು ಹೇಗೆ ನಾಶವಾಗುತ್ತದೆಯೆಂದು ಪ್ರಪಂಚದವರಿಗೇನು ಗೊತ್ತಿದೆ. ಇವು ಬಹಳ ಆಳವಾದ ಮಾತುಗಳಾಗಿವೆ. ತಂದೆಯು ತಿಳಿಸಿದ್ದಾರೆ- ನನ್ನ ನೆನಪಿನಲ್ಲಿ ಕುಳಿತುಕೊಳ್ಳಿ ಆಗ ಎಲ್ಲಿಯವರೆಗೆ ನೆನಪಿನ ತಂದೆಯು ಜೋಡಿಸಲ್ಪಟ್ಟಿರುವುದೋ ಅಷ್ಟೂ ಸಮಯ ಸಫಲವಾಗುತ್ತದೆ. ಸ್ವಲ್ಪವೂ ಬುದ್ಧಿಯೂ ಅಲ್ಲಿ-ಇಲ್ಲಿ ಹೋಯಿತೆಂದರೆ ಆ ಸಮಯವು ವ್ಯರ್ಥವಾಯಿತು, ನಿಷ್ಫಲವಾಯಿತು, ತಂದೆಯ ಆದೇಶವಿದೆಯಲ್ಲವೆ- ಮಕ್ಕಳೇ, ನನ್ನನ್ನು ನೆನಪು ಮಾಡಿ. ಒಂದುವೇಳೆ ನೆನಪು ಮಾಡದಿದ್ದರೆ ನಿಷ್ಫಲವಾಯಿತು, ಇದರಿಂದೇನಾಗುವುದು? ನೀವು ಬೇಗನೆ ಸತೋಪ್ರಧಾನರಾಗುವುದಿಲ್ಲ, ಮತ್ತೆ ಇದು ಹವ್ಯಾಸವಾಗಿಬಿಡುವುದು. ಇದು ಆಗುತ್ತಲೇ ಇರುತ್ತದೆ. ಆತ್ಮವು ಈ ಜನ್ಮದ ಪಾಪವನ್ನಂತೂ ತಿಳಿದುಕೊಂಡಿದೆ. ಭಲೆ ನಮಗೆ ನೆನಪಿಲ್ಲವೆಂದು ಕೆಲವರು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ 3-4 ವರ್ಷಗಳಿಂದ ಹಿಡಿದು ಎಲ್ಲಾ ಮಾತುಗಳು ನೆನಪಿರುತ್ತವೆ. ಎಷ್ಟು ಪಾಪಗಳು ನಂತರದಲ್ಲಾಗುತ್ತವೆಯೋ ಅಷ್ಟು ಪ್ರಾರಂಭದಲ್ಲಾಗುವುದಿಲ್ಲ. ದಿನ-ಪ್ರತಿದಿನ ದೃಷ್ಟಿಯು ಕೆಡುತ್ತಾಹೋಗುವುದು. ತ್ರೇತಾಯುಗದಲ್ಲಿ ಎರಡು ಕಲೆಗಳು ಕಡಿಮೆಯಾಗುತ್ತವೆ. ಚಂದ್ರಮನ ಎರಡು ಕಲೆಗಳು ಎಷ್ಟರಲ್ಲಿ ಕಡಿಮೆಯಾಗುತ್ತಾ ಹೋಗುತ್ತವೆ. ಮತ್ತೆ 16 ಕಲಾಸಂಪೂರ್ಣ ಎಂದು ಚಂದ್ರಮನಿಗೇ ಹೇಳಲಾಗುತ್ತದೆ, ಸೂರ್ಯನಿಗಲ್ಲ. ಚಂದ್ರಮನದು ಒಂದು ತಿಂಗಳ ಮಾತಾಗಿದೆ. ಇದು ಮತ್ತೆ ಕಲ್ಪದ ಮಾತಾಗಿದೆ. ದಿನ-ಪ್ರತಿದಿನ ಕೆಳಗಿಳಿಯುತ್ತಾ ಹೋಗುತ್ತದೆ. ಮತ್ತೆ ನೆನಪಿನ ಯಾತ್ರೆಯಿಂದ ಮೇಲೇರಬಹುದು ನಂತರ ನೆನಪು ಮಾಡಬೇಕು. ಮೇಲೇರಬೇಕೆಂಬ ಅವಶ್ಯಕತೆಯೂ ಇರುವುದಿಲ್ಲ. ಸತ್ಯಯುಗದ ನಂತರ ಮತ್ತೆ ಇಳಿಯಬೇಕಾಗಿದೆ. ಸತ್ಯಯುಗದಲ್ಲಿಯೂ ಸಹ ನೆನಪು ಮಾಡುವಂತಿದ್ದರೆ ಕೆಳಗಿಳಿಯುವುದೇ ಇರುತ್ತಿರಲಿಲ್ಲ. ನಾಟಕದನುಸಾರ ಇಳಿಯಲೇಬೇಕೆಂದಾಗ ನೆನಪು ಮಾಡುವುದಿಲ್ಲ. ಅವಶ್ಯವಾಗಿ ಇಳಿಯಲೂಬೇಕಾಗಿದೆ ಮತ್ತೆ ನೆನಪು ಮಾಡುವ ಉಪಾಯವನ್ನು ತಂದೆಯೇ ತಿಳಿಸುತ್ತಾರೆ ಏಕೆಂದರೆ ಮೇಲೆ ಹೋಗಬೇಕಾಗಿದೆ. ಸಂಗಮಯುಗದಲ್ಲಿಯೇ ತಂದೆಯು ಬಂದು ಈಗ ಏರುವಕಲೆಯು ಪ್ರಾರಂಭವಾಗುತ್ತದೆಯೆಂದು ತಿಳಿಸುತ್ತಾರೆ. ನಾವು ಪುನಃ ನಮ್ಮ ಸುಖಧಾಮದಲ್ಲಿ ಹೋಗಬೇಕಾಗಿದೆ. ತಂದೆಯು ತಿಳಿಸುತ್ತಾರೆ ಈಗ ಸುಖಧಾಮದಲ್ಲಿ ಹೋಗಬೇಕೆಂದರೆ ನನ್ನನ್ನು ನೆನಪು ಮಾಡಿ, ನೆನಪಿನಿಂದಲೇ ನೀವು ಆತ್ಮಗಳು ಸತೋಪ್ರಧಾನರಾಗಿಬಿಡುವಿರಿ.

ನೀವು ಪ್ರಪಂಚದವರಿಗಿಂತ ಭಿನ್ನವಾಗಿದ್ದೀರಿ, ವೈಕುಂಠವು ಪ್ರಪಂಚಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ವೈಕುಂಠವಿತ್ತು, ಈಗ ಇಲ್ಲ. ಕಲ್ಪದ ಆಯಸ್ಸನ್ನು ಬಹಳ ಧೀರ್ಘ ಮಾಡಿರುವಕಾರಣ ಮರೆತುಹೋಗಿದೆ. ನೀವು ಮಕ್ಕಳಿಗಂತೂ ವೈಕುಂಠವು ಬಹಳ ಸಮೀಪದಲ್ಲಿ ಕಾಣುತ್ತದೆ. ಇನ್ನು ಸ್ವಲ್ಪ ಸಮಯವೇ ಇದೆ. ನೆನಪಿನ ಯಾತ್ರೆಯಲ್ಲಿಯೇ ಕೊರತೆಯಿರುವಕಾರಣ ಇನ್ನೂ ಸಮಯವಿದೆ ಎಂದು ತಿಳಿಯುತ್ತಾರೆ. ನೆನಪಿನ ಯಾತ್ರೆಯು ಎಷ್ಟಿರಬೇಕೋ ಅಷ್ಟು ಇಲ್ಲ. ನೀವು ನಾಟಕದನುಸಾರ ಸಂದೇಶವನ್ನು ತಲುಪಿಸುತ್ತೀರಿ. ಯಾರಿಗೂ ಸಂದೇಶ ಕೊಡುವುದಿಲ್ಲವೆಂದರೆ ಸರ್ವೀಸ್ ಮಾಡುವುದಿಲ್ಲ ಎಂದರ್ಥ. ಇಡೀ ಪ್ರಪಂಚದಲ್ಲಿ ಸಂದೇಶವನ್ನು ತಲುಪಿಸಬೇಕು. ಅಂದರೆ ತಂದೆಯು ಹೇಳುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ ಎಂದು, ಗೀತೆಯನ್ನು ಓದುವವರು ತಿಳಿದುಕೊಂಡಿರುತ್ತಾರೆ, ಒಂದೇ ಗೀತಾಶಾಸ್ತ್ರವಾಗಿದೆ. ಇದರಲ್ಲಿ ಈ ಮಹಾವಾಕ್ಯಗಳಿವೆ ಆದರೆ ಇದರಲ್ಲಿ ಕೃಷ್ಣಭಗವಾನುವಾಚ ಎಂದು ಬರೆದಿರುವುದರಿಂದ ಯಾರನ್ನು ನೆನಪು ಮಾಡುವುದು! ಭಲೆ ಶಿವನ ಭಕ್ತಿ ಮಾಡುತ್ತಾರೆ ಆದರೆ ಶ್ರೀಮತದಂತೆ ನಡೆಯಲು ಯಥಾರ್ಥ ಜ್ಞಾನವಿಲ್ಲ, ಈ ಸಮಯದಲ್ಲಿ ನಿಮಗೆ ಈಶ್ವರೀಯ ಮತವು ಸಿಗುತ್ತದೆ. ಇದಕ್ಕೆ ಮೊದಲು ಮಾನವಮತವಿತ್ತು, ಎರಡರಲ್ಲಿಯೂ ರಾತ್ರಿ-ಹಗಲಿನ ಅಂತರವಿದೆ. ಈಶ್ವರ ಸರ್ವವ್ಯಾಪಿ ಎಂದು ಮಾನವಮತವು ಹೇಳುತ್ತದೆ. ಸರ್ವವ್ಯಾಪಿಯಲ್ಲ ಎಂದು ಈಶ್ವರಮತವು ಹೇಳುತ್ತದೆ. ತಂದೆಯು ತಿಳಿಸುತ್ತಾರೆ- ನಾನು ಸ್ವರ್ಗದ ಸ್ಥಾಪನೆ ಮಾಡಲು ಬಂದಿದ್ದೇನೆಂದರೆ ಅವಶ್ಯವಾಗಿ ಇದು ನರಕವಾಗಿದೆ. ಇಲ್ಲಿ ಪಂಚವಿಕಾರಗಳು ಎಲ್ಲರಲ್ಲಿಯೂ ಪ್ರವೇಶವಾಗುವ ವಿಕಾರಿ ಪ್ರಪಂಚವಾಗಿದೆ. ಆದ್ದರಿಂದಲೇ ನಿರ್ವಿಕಾರಿಯನ್ನಾಗಿ ಮಾಡಲು ನಾನು ಬರುತ್ತೇನೆ. ಯಾರು ಈಶ್ವರನ ಮಕ್ಕಳಾದರು ಅವರಬಳಿ ವಿಕಾರವಂತೂ ಇರಲು ಸಾಧ್ಯವಿಲ್ಲ. ರಾವಣನಿಗೆ 10 ತಲೆಗಳಿರುವಂತೆ ತೋರಿಸುತ್ತಾರೆ, ರಾವಣನ ಸೃಷ್ಟಿಯು ನಿರ್ವಿಕಾರಿಯಾಗಿದೆ ಎಂದು ಎಂದೂ ಯಾರೂ ಹೇಳುವುದಿಲ್ಲ. ನಿಮಗೆ ಗೊತ್ತಿದೆ- ಈಗ ರಾವಣರಾಜ್ಯವಾಗಿದೆ, ಎಲ್ಲರಲ್ಲಿಯೂ ಪಂಚವಿಕಾರಗಳಿವೆ. ಸತ್ಯಯುಗದಲ್ಲಿ ರಾಮರಾಜ್ಯವಿರುತ್ತದೆ, ಯಾವುದೇ ವಿಕಾರವಿರುವುದಿಲ್ಲ. ಈ ಸಮಯದಲ್ಲಿ ಮನುಷ್ಯರು ಎಷ್ಟೊಂದು ದುಃಖಿಯಾಗಿದ್ದಾರೆ, ಶರೀರಕ್ಕೆ ಎಷ್ಟೊಂದು ದುಃಖವಾಗುತ್ತದೆ ಆದ್ದರಿಂದ ಇದು ದುಃಖಧಾಮವಾಗಿದೆ, ಸುಖಧಾಮದಲ್ಲಂತೂ ಶಾರೀರಿಕ ದುಃಖವೂ ಇರುವುದಿಲ್ಲ, ಇಲ್ಲಂತೂ ಎಷ್ಟೊಂದು ಆಸ್ಪತ್ರೆಗಳು ತುಂಬಿವೆ. ಇದಕ್ಕೆ ಸ್ವರ್ಗವೆಂದು ಹೇಳುವುದೂ ಸಹ ತಪ್ಪಾಗಿದೆ ಆದ್ದರಿಂದ ಅರಿತುಕೊಂಡು ಅನ್ಯರಿಗೂ ತಿಳಿಸಬೇಕಾಗಿದೆ. ಆ ವಿದ್ಯೆಯು ಯಾರಿಗೂ ತಿಳಿಸುವುದಕ್ಕಾಗಿ ಅಲ್ಲ. ಪರೀಕ್ಷೆಯನ್ನು ತೇರ್ಗಡೆ ಮಾಡಿದರೆಂದರೆ ನೌಕರಿಗೆಸೇರುತ್ತಾರೆ. ಇಲ್ಲಂತೂ ನೀವು ಎಲ್ಲರಿಗೆ ಸಂದೇಶ ಕೊಡಬೇಕಾಗಿದೆ. ಕೇವಲ ಒಬ್ಬ ತಂದೆಯೇ ಕೊಡುತ್ತಾರೆಯೇ? ಯಾರು ಬಹಳ ಬುದ್ಧಿವಂತರಿರುವರೋ ಅವರಿಗೆ ಶಿಕ್ಷಕರೆಂದು ಹೇಳಲಾಗುತ್ತದೆ. ಯಾರು ಬುದ್ಧಿವಂತರಲ್ಲವೋ ಅವರಿಗೆ ವಿದ್ಯಾರ್ಥಿಗಳೆಂದು ಹೇಳಲಾಗುತ್ತದೆ. ನೀವು ಎಲ್ಲರಿಗೆ ಸಂದೇಶವನ್ನು ಕೊಡಬೇಕಾಗಿದೆ. ಅವರನ್ನು ಪ್ರಶ್ನೆ ಮಾಡಬೇಕಾಗಿದೆ- ಭಗವಂತನನ್ನು ತಿಳಿದುಕೊಂಡಿದ್ದೀರಾ? ಅವರಂತೂ ಎಲ್ಲರ ತಂದೆಯಾಗಿದ್ದಾರೆ ಅಂದಾಗ ಮೂಲಮಾತು ತಂದೆಯ ಪರಿಚಯವನ್ನು ಕೊಡುವುದಾಗಿದೆ ಏಕೆಂದರೆ ಅವರು ಯಾರಿಗೂ ಗೊತ್ತಿಲ್ಲ. ಶ್ರೇಷ್ಠಾತಿಶ್ರೇಷ್ಠ ತಂದೆಯು ಇಡೀ ವಿಶ್ವವನ್ನು ಪಾವನ ಮಾಡುವವರಾಗಿದ್ದಾರೆ. ಇಡೀ ವಿಶ್ವವು ಪಾವನವಾಗಿತ್ತು, ಆಗ ಭಾರತವೇ ಇತ್ತು, ಮತ್ತ್ಯಾವುದೇ ಧರ್ಮದವರು ನಾವು ಹೊಸಪ್ರಪಂಚದಲ್ಲಿ ಬಂದಿದ್ದೆವೆಂದು ಹೇಳಲು ಸಾಧ್ಯವಿಲ್ಲ. ಅವರಂತೂ ನಮಗಿಂತಲೂ ಮುಂಚೆ ಯಾರೋ ಇದ್ದುಹೋಗಿದ್ದಾರೆಂದು ತಿಳಿಯುತ್ತಾರೆ. ಅವರಿಗಿಂತಲೂ ಮುಂಚೆ ಅವಶ್ಯವಾಗಿ ಯಾರೋ ಇದ್ದರು. ತಂದೆಯು ತಿಳಿಸುತ್ತಾರೆ- ನಾನು ಈ ಬ್ರಹ್ಮಾರವರ ತನುವಿನಲ್ಲಿ ಪ್ರವೇಶ ಮಾಡುತ್ತೇನೆ, ಬ್ರಹ್ಮಾರವರ ತನುವಿನಲ್ಲಿ ಬರುತ್ತಾರೆಂದು ಯಾರೂ ನಂಬುವುದಿಲ್ಲ. ಅರೆ! ಬ್ರಾಹ್ಮಣರಂತೂ ಅವಶ್ಯವಾಗಿ ಬೇಕು. ಬ್ರಾಹ್ಮಣರು ಎಲ್ಲಿಂದ ಬರುತ್ತಾರೆ? ಅವಶ್ಯವಾಗಿ ಬ್ರಹ್ಮಾರವರಿಂದಲೇ ಬರುತ್ತಾರಲ್ಲವೆ. ಒಳ್ಳೆಯದು. ಬ್ರಹ್ಮಾರವರ ತಂದೆಯೆಂದು ಎಂದಾದರೂ ಕೇಳಿದ್ದೀರಾ? ಅವರು ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಆಗಿದ್ದಾರೆ. ಅವರ ಸಾಕಾರತಂದೆಯು ಯಾರೂ ಇಲ್ಲ. ಬ್ರಹ್ಮಾರವರ ಸಾಕಾರಿ ತಂದೆ ಯಾರು? ಯಾರೂ ತಿಳಿಸಲು ಸಾಧ್ಯವಿಲ್ಲ. ಬ್ರಹ್ಮಾರವರ ಗಾಯನವಿದೆ, ಪ್ರಜಾಪಿತನ ಗಾಯನವೂ ಇದೆ. ಹೇಗೆ ನಿರಾಕಾರ ಶಿವತಂದೆಯೆಂದು ಹೇಳುತ್ತಾರೆ, ಅವರ ತಂದೆಯನ್ನು ತಿಳಿಸಿ. ಮತ್ತು ಸಾಕಾರ ಪ್ರಜಾಪಿತ ಬ್ರಹ್ಮಾರವರ ತಂದೆಯನ್ನು ತಿಳಿಸಿ. ಶಿವತಂದೆಯಂತೂ ದತ್ತು ಮಾಡಿಕೊಂಡಿಲ್ಲ. ಇವರು ದತ್ತು ಮಾಡಲ್ಪಟ್ಟಿದ್ದಾರೆ. ಇವರನ್ನು ಶಿವತಂದೆಯು ದತ್ತು ಮಾಡಿಕೊಂಡಿದ್ದಾರೆಂದು ಹೇಳುತ್ತಾರೆ. ವಿಷ್ಣುವನ್ನು ಶಿವತಂದೆಯು ದತ್ತು ಮಾಡಿಕೊಂಡಿದ್ದಾರೆಂದು ಹೇಳುವುದಿಲ್ಲ. ಇದಂತೂ ನಿಮಗೆ ಗೊತ್ತಿದೆ. ಬ್ರಹ್ಮಾರವರೇ ವಿಷ್ಣುವಾಗುತ್ತಾರೆ. ದತ್ತು ಆಗಲಿಲ್ಲ. ಶಂಕರನಿಗಾಗಿಯೇ ಹೇಳಿದ್ದಾರೆ ಆದರೆ ಅವರ ಯಾವುದೇ ಪಾತ್ರವಿಲ್ಲ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ, ಇದು 84 ಜನ್ಮಗಳ ಚಕ್ರವಾಗಿದೆ ಮತ್ತು ಶಂಕರನೆಲ್ಲಿಂದ ಬಂದರು? ಅವರ ರಚನೆ ಎಲ್ಲಿದೆ? ತಂದೆಗಂತೂ ರಚನೆಯಿದೆ. ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ ಮತ್ತು ಬ್ರಹ್ಮಾರವರ ರಚನೆ ಎಲ್ಲಾ ಮನುಷ್ಯರಾಗಿದ್ದಾರೆ. ಶಂಕರನ ರಚನೆ ಎಲ್ಲಿದೆ? ಶಂಕರನಿಂದ ಯಾವುದೇ ಮನುಷ್ಯ ಪ್ರಪಂಚವು ರಚನೆಯಾಗುವುದಿಲ್ಲ. ತಂದೆಯು ಬಂದು ಇವೆಲ್ಲಾ ಮಾತುಗಳನ್ನು ತಿಳಿಸಿಕೊಡುತ್ತಾರೆ ಆದರೂ ಸಹ ಮಕ್ಕಳು ಪದೇ-ಪದೇ ಮರೆತುಹೋಗುತ್ತಾರೆ. ಪ್ರತಿಯೊಬ್ಬರ ಬುದ್ಧಿಯು ನಂಬರ್ವಾರ್ ಇದೆಯಲ್ಲವೆ. ಎಷ್ಟು ಬುದ್ಧಿಯಿರುವುದೋ ಅಷ್ಟು ಶಿಕ್ಷಕರ ವಿದ್ಯೆಯನ್ನು ಧಾರಣೆ ಮಾಡಲು ಸಾಧ್ಯ. ಇದು ಬೇಹದ್ದಿನ ವಿದ್ಯೆಯಾಗಿದೆ. ವಿದ್ಯೆಯನುಸಾರವೇ ನಂಬರ್ವಾರ್ ಪದವಿಯನ್ನು ಪಡೆಯುತ್ತೀರಿ. ಭಲೆ ಮನುಷ್ಯರಿಂದ ದೇವತೆಗಳಾಗುವ ವಿದ್ಯೆಯು ಒಂದೇ ಆಗಿದೆ. ಆದರೆ ರಾಜಧಾನಿಯು ಸ್ಥಾಪನೆಯಾಗುತ್ತಿದೆಯಲ್ಲವೆ. ಇದೂ ಸಹ ನಿಶ್ಚಯ ಬುದ್ಧಿಯಲ್ಲಿ ಬರಬೇಕಾಗಿದೆ. ನಾವು ಯಾವ ಪದವಿಯನ್ನು ಪಡೆಯುತ್ತೇವೆ? ರಾಜರಾಗುವುದಂತೂ ಪರಿಶ್ರಮದ ಕೆಲಸವಾಗಿದೆ. ರಾಜರ ಬಳಿ ದಾಸ-ದಾಸಿಯರು ಬೇಕು. ದಾಸ-ದಾಸಿಯರು ಯಾರಾಗುತ್ತಾರೆಂಬುದನ್ನೂ ನೀವು ತಿಳಿದುಕೊಳ್ಳಬಹುದು. ನಂಬರ್ವಾರ್ ಪುರುಷಾರ್ಥದನುಸಾರ ಪ್ರತಿಯೊಬ್ಬರಿಗೆ ದಾಸಿಯರು ಸಿಗುತ್ತಾರೆ. ಅಂದಮೇಲೆ ಜನ್ಮ-ಜನ್ಮಾಂತರ ದಾಸ-ದಾಸಿಯರಾಗುವಂತಹ ಪುರುಷಾರ್ಥ ಮಾಡಬಾರದು. ಶ್ರೇಷ್ಠಪದವಿಯನ್ನೇ ಪಡೆಯುವ ಪುರುಷಾರ್ಥ ಮಾಡಬೇಕು.

ಅಂದಮೇಲೆ ಸತ್ಯವಾದ ಶಾಂತಿಯು ತಂದೆಯ ನೆನಪಿನಲ್ಲಿದೆ, ಬುದ್ಧಿಯು ಸ್ವಲ್ಪ ಆಕಡೆ-ಈಕಡೆ ಹೋಯಿತೆಂದರೆ ಸಮಯವು ವ್ಯರ್ಥವಾಗುವುದು, ಸಂಪಾದನೆಯು ಕಡಿಮೆಯಾಗುವುದು, ಸತೋಪ್ರಧಾನರಾಗಲು ಸಾಧ್ಯವಿಲ್ಲ. ತಂದೆಯು ಇದನ್ನೂ ತಿಳಿಸಿಕೊಟ್ಟಿದ್ದಾರೆ. ಕೈಗಳಿಂದ ಕೆಲಸ ಮಾಡುತ್ತಾ ಇರಿ, ಮನಸ್ಸಿನಿಂದ ತಂದೆಯನ್ನು ನೆನಪು ಮಾಡಿ. ಶರೀರವನ್ನು ಆರೋಗ್ಯವಂತವಾಗಿ ಇಟ್ಟುಕೊಳ್ಳಲು ಭಲೆ ಓಡಾಡುವುದನ್ನು, ತಿರುಗಾಡುವುದನ್ನು ಮಾಡಿ ಆದರೆ ಬುದ್ಧಿಯಲ್ಲಿ ತಂದೆಯ ನೆನಪಿರಲಿ. ಒಂದುವೇಳೆ ಯಾರಾದರೂ ಜೊತೆಯಲ್ಲಿದ್ದರೆ ಅಲ್ಲಸಲ್ಲದ ಮಾತುಗಳನ್ನಾಡಬಾರದು. ಇದಂತೂ ಪ್ರತಿಯೊಬ್ಬರ ಮನಸ್ಸಾಕ್ಷಿ ಹೇಳುತ್ತದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಇಂತಹ ಸ್ಥಿತಿಯಲ್ಲಿ ಇದ್ದು ತಿರುಗಾಡಿ. ಹೇಗೆ ಪಾದ್ರಿಗಳು ಸಂಪೂರ್ಣ ಶಾಂತಿಯಲ್ಲಿ ಹೋಗುತ್ತಾರೆ ನೀವಂತೂ ಜ್ಞಾನದ ಮಾತಂತೂ ಇದೇ ಸಮಯ ಮಾತನಾಡುವುದಿಲ್ಲ, ನಾಲಿಗೆಯನ್ನು ಶಾಂತಿಯಲ್ಲಿ ಶಿವತಂದೆಯ ನೆನಪಿನ ರೇಸ್ ಮಾಡಬೇಕು. ಹೇಗೆ ಭೋಜನದ ಸಮಯದಲ್ಲಿ ತಂದೆಯು ತಿಳಿಸುತ್ತಾರೆ- ನೆನಪಿನಲ್ಲಿದ್ದು ಸ್ವೀಕಾರ ಮಾಡಿ, ತಮ್ಮ ಚಾರ್ಟನ್ನು ಇಡಿ. ಬ್ರಹ್ಮಾ ತಂದೆಯು ತಮ್ಮ ಅನುಭವವನ್ನು ತಿಳಿಸುತ್ತಾರೆ- ನಾನು ಮರೆತುಹೋಗುತ್ತೇನೆ. ನೆನಪಿನಲ್ಲಿದ್ದು ಸ್ವೀಕಾರ ಮಾಡಬೇಕೆಂದು ಪ್ರಯತ್ನಪಡುತ್ತೇನೆ, ಬಾಬಾ ನಾನು ಸಂಪೂರ್ಣ ಸಮಯ ನೆನಪಿನಲ್ಲಿರುತ್ತೇನೆ. ತಾವು ನನ್ನ ಕೆಮ್ಮನ್ನು ನಿಲ್ಲಿಸಿ, ಮಧುಮೇಹವನ್ನು ಕಡಿಮೆ ಮಾಡಿ ಎಂದು ತಂದೆಗೆ ಹೇಳುತ್ತೇನೆ. ತನ್ನ ಜೊತೆ ಯಾವ ಪರಿಶ್ರಮಪಡುತ್ತೇನೆಯೋ ಅದನ್ನು ತಿಳಿಸುತ್ತೇನೆ. ಆದರೆ ನಾನೇ ಮರೆತುಹೋಗುತ್ತೇನೆ. ಅಂದಮೇಲೆ ಕೆಮ್ಮು ಹೇಗೆ ಕಡಿಮೆಯಾಗುತ್ತದೆ! ತಂದೆಯ ಜೊತೆ ಯಾವ ಮಾತುಗಳನ್ನಾಡುತ್ತೇನೆಯೋ ಅದನ್ನು ಸತ್ಯವಾಗಿ ತಿಳಿಸುತ್ತೇನೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಮಕ್ಕಳು ತಂದೆಗೆ ತಿಳಿಸುವುದಿಲ್ಲ, ಸಂಕೋಚವಾಗುತ್ತದೆ. ಕಸ ಗುಡಿಸುವಾಗ, ಭೋಜನವನ್ನು ತಯಾರಿಸುವಾಗಲೂ ಸಹ ಶಿವತಂದೆಯ ನೆನಪಿನಲ್ಲಿ ತಯಾರಿಸಿದರೆ ಅದರಲ್ಲಿ ಶಕ್ತಿಯಿರುತ್ತದೆ. ಇದೂ ಸಹ ಯುಕ್ತಿ ಬೇಕು. ಇದರಲ್ಲಿ ನಿಮ್ಮದೇ ಕಲ್ಯಾಣವಾಗುವುದು ಮತ್ತೆ ನೀವು ನೆನಪಿನಲ್ಲಿ ಕುಳಿತುಕೊಂಡಾಗ ಅನ್ಯರಿಗೂ ಆಕರ್ಷಣೆಯಾಗುವುದು, ಪರಸ್ಪರ ಆಕರ್ಷಣೆಯಾಗುತ್ತದೆಯಲ್ಲವೆ. ಎಷ್ಟು ನೀವು ಹೆಚ್ಚಿನ ನೆನಪಿನಲ್ಲಿರುತ್ತೀರೋ ಅಷ್ಟು ಶಾಂತವಾಗಿಬಿಡುವುದು. ಡ್ರಾಮಾನುಸಾರ ಒಬ್ಬರಿಗೆ ಇನ್ನೊಬ್ಬರ ಮೇಲೆ ಪ್ರಭಾವವು ಬೀರುತ್ತದೆ. ನೆನಪಿನ ಯಾತ್ರೆಯಂತೂ ಬಹಳ ಕಲ್ಯಾಣಕಾರಿಯಾಗಿದೆ, ಇದರಲ್ಲಿ ಸುಳ್ಳುಹೇಳುವ ಅವಶ್ಯಕತೆಯಿಲ್ಲ. ಸತ್ಯತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಸತ್ಯವಾಗಿ ನಡೆದುಕೊಳ್ಳಬೇಕು. ಮಕ್ಕಳಿಗಂತೂ ಎಲ್ಲವೂ ಸಿಗುತ್ತದೆ, ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆಯೆಂದಮೇಲೆ ಲೋಭಕ್ಕೆ ವಶರಾಗಿ 10-20 ಜೊತೆ ಸೀರೆಯನ್ನು ಏಕೆ ಸಂಗ್ರಹ ಮಾಡುತ್ತೀರಿ? ಒಂದುವೇಳೆ ಬಹಳಷ್ಟು ವಸ್ತುಗಳನ್ನು ಸಂಗ್ರಹಣೆ ಮಾಡುತ್ತಾ ಇದ್ದರೆ ಸಾಯುವ ಸಮಯದಲ್ಲಿಯೂ ನೆನಪು ಬಂದುಬಿಡುವುದು ಆದ್ದರಿಂದ ಒಂದು ಉದಾಹರಣೆಯನ್ನು ತಿಳಿಸುತ್ತಾರೆ- ಸ್ತ್ರೀಯು ಅವರಿಗೆ ಹೇಳಿದರು- ಈ ಕೋಲನ್ನೂ ಸಹ ಬಿಟ್ಟುಬಿಡಿ ಇಲ್ಲವೆಂದರೆ ಇದೂ ಸಹ ನೆನಪಿಗೆ ಬರುತ್ತದೆ. ಏನೂ ನೆನಪಿರಬಾರದು ಇಲ್ಲವೆಂದರೆ ತಮಗಾಗಿಯೇ ಕಷ್ಟವನ್ನು ತಂದುಕೊಳ್ಳುತ್ತೀರಿ, ಸುಳ್ಳು ಹೇಳುವುದರಿಂದ ಒಂದಕ್ಕೆ ನೂರರಷ್ಟು ಪಾಪವಾಗುತ್ತದೆ. ಶಿವತಂದೆಯ ಭಂಡಾರವು ಸದಾ ತುಂಬಿರುತ್ತದೆ ಅಂದಮೇಲೆ ಹೆಚ್ಚಿನದಾಗಿ ಇಟ್ಟುಕೊಳ್ಳುವ ಅವಶ್ಯಕತೆಯಾದರೂ ಏನು? ಯಾರದಾದರೂ ಕಳ್ಳತನವಾದರೆ ಅವರಿಗೆ ಎಲ್ಲವನ್ನೂ ಕೊಡಲಾಗುತ್ತದೆ ಅಂದಮೇಲೆ ನೀವು ಮಕ್ಕಳಿಗೆ ತಂದೆಯಿಂದ ರಾಜ್ಯಭಾಗ್ಯವೇ ಸಿಗುತ್ತದೆಯೆಂದಾಗ ಈ ವಸ್ತ್ರಗಳು ಸಿಗುವುದಿಲ್ಲವೆ? ಕೇವಲ ವ್ಯರ್ಥವಾಗಿ ಖರ್ಚು ಮಾಡಬಾರದು ಏಕೆಂದರೆ ಸ್ವರ್ಗದ ಸ್ಥಾಪನೆಯಲ್ಲಿ ಅಬಲೆಯರೇ ಸಹಯೋಗ ನೀಡುತ್ತಾರೆ. ಅಂತಹವರ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಬಾರದು. ಅವರು ನಿಮ್ಮ ಪಾಲನೆ ಮಾಡುತ್ತಾರೆಂದರೆ ಅವರ ಪಾಲನೆ ಮಾಡುವುದು ನಿಮ್ಮ ಕರ್ತವ್ಯವಾಗಿದೆ ಇಲ್ಲವೆಂದರೆ ನಿಮ್ಮ ತಲೆಯ ಮೇಲೆ ಒಂದಕ್ಕೆ ನೂರರಷ್ಟು ಪಾಪವು ಏರುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ನೆನಪಿನಲ್ಲಿ ಕುಳಿತುಕೊಳ್ಳುವ ಸಮಯದಲ್ಲಿ ಬುದ್ಧಿಯು ಸ್ವಲ್ಪವೂ ಆಕಡೆ-ಈಕಡೆ ಅಲೆದಾಡಬಾರದು. ಸದಾ ಸಂಪಾದನೆಯು ಜಮಾ ಆಗುತ್ತಿರಲಿ. ನೆನಪು ಈ ರೀತಿಯಿರಲಿ- ಅಲ್ಲಿ ಸಂಪೂರ್ಣ ಶಾಂತಿಯಾಗಿಬಿಡಲಿ.

2. ಶರೀರವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ನಡೆಯಲು-ತಿರುಗಾಡಲು ಹೋಗುತ್ತೀರೆಂದರೆ ಪರಸ್ಪರ ಪರಚಿಂತನೆ ಮಾಡಬಾರದು. ನಾಲಿಗೆಯನ್ನು ಶಾಂತಿಯಲ್ಲಿಟ್ಟುಕೊಂಡು ತಂದೆಯನ್ನು ನೆನಪು ಮಾಡುವ ರೇಸ್ ಮಾಡಬೇಕಾಗಿದೆ. ಭೋಜನವನ್ನೂ ತಂದೆಯ ನೆನಪಿನಲ್ಲಿ ಸೇವಿಸಬೇಕಾಗಿದೆ.

ವರದಾನ:
ನಿಶ್ಚಯಬುದ್ದಿಯವರಾಗಿ ಬಲಹೀನ ಸಂಕಲ್ಪಗಳ ಬಲೆಗಳನ್ನು ಸಮಾಪ್ತಿ ಮಾಡಿಸುವಂತಹ ಸಫಲತಾ ಸಂಪನ್ನ ಭವ.

ಇಲ್ಲಿಯವರೆಗೂ ಬಹಳಷ್ಟು ಮಕ್ಕಳು ಬಲಹೀನ ಸಂಕಲ್ಪಗಳನ್ನು ಸ್ವಯಂ ಹೊರಗೆ ತೋರುತ್ತಾರೆ-ಆಗುವುದೋ?, ಇಲ್ಲವೋ?, ಏನಾಗುವುದೋ? ಎಂದು ಯೋಚಿಸುತ್ತಾರೆ ಇಂತಹ ಬಲಹೀನ ಸಂಕಲ್ಪಗಳೇ ಗೋಡೆಯಾಗಿಬಿಡುತ್ತದೆ ಮತ್ತು ಸಫಲತೆ ಆ ಗೋಡೆಯೊಳಗೆ ಮುಚ್ಚಿ ಕೊಂಡು ಬಿಡುತ್ತದೆ. ಮಾಯೆ ಬಲಹೀನ ಸಂಕಲ್ಪಗಳ ಬಲೆ ಹರಡಿಬಿಡುತ್ತದೆ, ಅದೇ ಬಲೆಯಲ್ಲಿ ಸಿಕ್ಕಿಕೊಂಡು ಬಿಡುತ್ತಾರೆ ಆದ್ದರಿಂದ ನಾನು ನಿಶ್ಚಯಬುದ್ದಿ ವಿಜಯಿಯಾಗಿದ್ದೇನೆ, ಸಫಲತೆ ನನ್ನ ಜನ್ಮಸಿದ್ಧ ಅಧಿಕಾರವಾಗಿದೆ - ಈ ಸ್ಮೃತಿಯಿಂದ ಬಲಹೀನ ಸಂಕಲ್ಪಗಳನ್ನು ಸಮಾಪ್ತಿ ಮಾಡಿ.

ಸ್ಲೋಗನ್:
ಮೂರನೇ ಜ್ವಾಲಾಮುಖಿ ನೇತ್ರ ತೆರೆದಿದ್ದಾಗ ಮಾಯೆ ಶಕ್ತಿಹೀನವಾಗಿಬಿಡುತ್ತದೆ.