02.08.26    Avyakt Bapdada     Kannada Murli    17.02.2011     Om Shanti     Madhuban


“ಮನಸಾ ಸೇವೆಯ ಮೂಲಕ ಆತ್ಮಗಳಿಗೆ ಹನಿ (ಅಂಚಲಿ) ಯನ್ನು ಕೊಡುವ ಸೇವೆ ಮಾಡುತ್ತಾ ಬಹಳ ಕಾಲದಿಂದ ತೀವ್ರ ಪುರುಷಾರ್ಥ ಮಾಡಿ ಎವರ್ರೆಡಿ ಆಗಿದ್ದರೆ ಮಾಲೆಯಲ್ಲಿ ಮಣಿ ಆಗಿಬಿಡುತ್ತೀರಿ”


ಈ ದಿನ ಸ್ನೇಹ ಸಾಗರ ತನ್ನ ಸ್ನೇಹಿ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ನನ್ನ ಬಾಬಾ ಬಂದುಬಿಡು ಎಂದು ಮಕ್ಕಳು ನೆನಪು ಮಾಡಿದರು ಅಂದಾಗ ಬಾಬಾ ಹೇಳುತ್ತಾರೆ - ನನ್ನ ಸ್ನೇಹಿ ಮಕ್ಕಳೇ, ಸ್ನೇಹದಲ್ಲಿ ಆ ರೀತಿ ಆಕರ್ಷಣೆ ಇದೆ ಯಾವುದು ಪ್ರತಿಯೊಬ್ಬ ಮಗು ತಂದೆಯನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ತಂದೆ ಪ್ರತಿಯೊಬ್ಬ ಮಗುವನ್ನು ನನ್ನ ಮಗು ಎಂದು ಹೇಳಿ ತನ್ನಲ್ಲಿ ಸಮಾವೇಶ ಮಾಡಿಕೊಂಡಿದ್ದಾರೆ. ಕಮಾಲ್ ಆಗಿದೆ, ಮಕ್ಕಳು ನನ್ನ ಬಾಬಾ ಎಂದು ಹೇಳಿದರೆ ನನ್ನದು ಎಂಬ ಶಬ್ದದಲ್ಲಿ ಇಷ್ಟು ಸ್ನೇಹ ತುಂಬಿದೆ ಯಾವುದರಿಂದ ತಂದೆಯೂ ಸಹ ನನ್ನ ಮಕ್ಕಳು ಎಂದು ಹೇಳುತ್ತಾರೆ, ಸ್ನೇಹ ಹೇಗಿದ್ದವರನ್ನು ಹೇಗೆ ಮಾಡಿ ಬಿಡುತ್ತದೆ. ಪ್ರತಿಯೊಬ್ಬ ಮಗುವಿನ ಮಸ್ತಕದಲ್ಲಿ ಈ ದಿನ ಸ್ನೇಹದ ಅಲೆಗಳು ಬರುತ್ತಿದೆ. ಇದನ್ನು ನೋಡಿ ಬಾಪ್ದಾದಾರವರು ಹರ್ಷಿತರಾಗುತ್ತಿದ್ದಾರೆ. ಸ್ನೇಹವೇ ಹೃದಯವನ್ನು ತನ್ನದನ್ನಾಗಿ ಮಾಡಿಕೊಳ್ಳುವ ಸಾಧನೆಯಾಗಿದೆ. ಅಂದಾಗ ಪ್ರತಿಯೊಬ್ಬ ಮಗುವಿನಲ್ಲಿ ಈ ದಿನ ಸ್ನೇಹದ ಅಲೆಗಳು ಬರುವುದನ್ನು ನೋಡಿ-ನೋಡಿ ಬಾಪ್ದಾದಾರವರೂ ಖುಷಿ ಆಗುತ್ತಿದ್ದಾರೆ.

ಈಗೀಗ 5 ನಿಮಿಷಕ್ಕಾಗಿ ಒಂದು ಡ್ರಿಲ್ನ್ನು ಬಾಪ್ದಾದಾ ಎಲ್ಲರಿಗೆ ಮಾಡಿಸುತ್ತಿದ್ದಾರೆ. ತನ್ನ ಮನಸಾ ಶಕ್ತಿಯಿಂದ ಸೃಷ್ಟಿಯಲ್ಲಿ ಯಾರೆಲ್ಲಾ ತಮ್ಮ ಭಕ್ತರು ಅಥವಾ ಅನೇಕ ದುಃಖಿ, ಅಶಾಂತ ಆತ್ಮಗಳು ತಮ್ಮನ್ನು ನೆನಪು ಮಾಡುತ್ತಿದ್ದಾರೆ, ಹೇ, ನನ್ನ ಪೂರ್ವಜರೇ ನಮಗೆ ಸ್ವಲ್ಪ ಸಮಯಕ್ಕಾದರೂ ಶಾಂತಿಯನ್ನು ಕೊಡಿ, ಸ್ವಲ್ಪವಾದರೂ ಸುಖದ ಹನಿಯನ್ನು ಕೊಡಿ, ಅಂತಹ ಆತ್ಮಗಳನ್ನು ರಕ್ಷಣೆ ಮಾಡಿ, ಇಲ್ಲಿ ಕುಳಿತಿದ್ದರೂ ಇಮರ್ಜ್ ಮಾಡಿಕೊಳ್ಳಿ, ಕೂಗು ಕೇಳಿಸುತ್ತಿದೆಯೇ! ರಕ್ಷಣೆ ಮಾಡಿ, ರಕ್ಷಣೆ ಮಾಡಿ ಎಂದು ಕೂಗುತ್ತಿದ್ದಾರೆ. ಅಂದಾಗ ಅಂತಹ ಆತ್ಮಗಳಿಗೆ ತಮ್ಮ ಮನಸಾ ಶಕ್ತಿಯ ಮೂಲಕ ಸುಖ-ಶಾಂತಿಯ ಕಿರಣಗಳನ್ನು ತಲುಪಿಸಿ. ಈ ಮನಸಾ ಸೇವೆ ಇಡೀ ದಿನದಲ್ಲಿ ಪದೇ-ಪದೇ ಮಾಡುತ್ತಿರಿ ಏಕೆಂದರೆ ತಂದೆಯ ಜೊತೆ ತಾವು ಮಕ್ಕಳೂ ಸಹ ವಿಶ್ವ ಸೇವಕರಾಗಿದ್ದೀರಿ. ಇಡೀ ದಿನ ವಾಣಿಯ ಮೂಲಕ ಹೇಗೆ ಸೇವೆಗೆ ನಿಮಿತ್ತರಾಗುತ್ತೀರಾ, ಅದೇ ರೀತಿ ಮಧ್ಯ-ಮಧ್ಯದಲ್ಲಿ ಮನಸಾ ಸೇವೆಯ ಅಭ್ಯಾಸ ಮಾಡುತ್ತಿರಿ. ಇದರಲ್ಲಿ ತಮಗೆ ತಮ್ಮ ಲಾಭವೂ ಇದೆ ಏಕೆಂದರೆ ಒಂದುವೇಳೆ ತಮ್ಮ ಮನಸ್ಸು ಸದಾ ಸೇವೆಯಲ್ಲಿ ಬಿಜಿಯಾಗಿದ್ದರೆ ತಮ್ಮ ಹತ್ತಿರ ಮಾಯೆ ಮಧ್ಯ-ಮಧ್ಯದಲ್ಲಿ ಕೆಲಸಕ್ಕೆ ಬಾರದೆ ಸಂಕಲ್ಪಗಳು ಅಥವಾ ವ್ಯರ್ಥ ಸಂಕಲ್ಪಗಳು ಮಾಡುತ್ತದೆ, ಅದರಿಂದ ಬಚಾವ್ ಆಗುತ್ತೀರಿ. ಪರಿಶ್ರಮ ಮಾಡಬೇಕಾಗಿಲ್ಲ. ಈಗ ಬಾಪ್ದಾದಾ ಹೇಗಿದ್ದೀರಾ? ಎಂದು ಕೇಳುತ್ತಾರೆ ಅಂದಾಗ ಯಾವ ಉತ್ತರವನ್ನು ಕೊಡುತ್ತೀರಿ? ಪುರುಷಾರ್ಥ ಇದೆ ಆದರೆ ಕೆಲವೊಮ್ಮೆ...! ಸದಾ ಕಾಲದ ಪುರುಷಾರ್ಥ ನಡೆಯುತ್ತಿಲ್ಲ. ಅಂದಾಗ ಬಾಪ್ದಾದಾ ಈಗ ಎಲ್ಲಾ ಮಕ್ಕಳ ಈ ರಿಕಾರ್ಡ್ನ್ನು ನೋಡಲು ಬಯಸುತ್ತಾರೆ - ಈ ಕೆಲವೊಮ್ಮೆ ಎಂಬ ಶಬ್ದ ಸಮಾಪ್ತಿ ಆಗಿಬಿಡಲಿ. ಈ ರೀತಿ ಆಗಲು ಸಾಧ್ಯತೆ ಇದೆಯೇ? ಕೆಲವೊಮ್ಮೆ ಎನ್ನುವುದು ಸಮಾಪ್ತಿ ಆಗುತ್ತದೆಯೇ? ಸಮಯದಲ್ಲಿ ತಯಾರಾಗಿ ಬಿಡುತ್ತೀರಾ? ಆಗುತ್ತಿದ್ದೀರಾ, ಆಗಲೇ ಬೇಕು... ಇದಕ್ಕೆ ಬದಲಾಗಿ ಈಗ ಎವರ್ರೆಡಿ ಆಗಲು ಸಾಧ್ಯವೇ? ಏಕೆ? ಎವರ್ರೆಡಿ ಆಗುವ ಅಭ್ಯಾಸ ಮಾಯಾಜೀತ್-ಮನ್ಜೀತ-ಜಗತ್ಜೀತ ಈ ಸಂಸ್ಕಾರವನ್ನು ಬಹಳ ಕಾಲದಿಂದ ಮಾಡಿಕೊಂಡಾಗ ಅಂತ್ಯ ಸಮಯವೂ ಸಹ ಬಹಳ ಕಾಲದ ಅಭ್ಯಾಸ ವಿಜಯಿಯನ್ನಾಗಿ ಮಾಡಿ ತಮ್ಮನ್ನು ವಿಶೇಷವಾಗಿ ಮಾಲೆಯಲ್ಲಿ ಮಣಿಯನ್ನಾಗಿ ಮಾಡುತ್ತದೆ. ಪಾಸ್ವಿತ್ ಆನರನ್ನಾಗಿ ಮಾಡುತ್ತದೆ. ಅಂದಾಗ ಹೇಳಿ ಈ ಸಾಹಸವಿದೆಯಲ್ಲವೇ! ಪಾಸ್ವಿತ್ ಆನರ್ ಆಗಲೇಬೇಕಲ್ಲವೇ? ಯಾರು ದ್ವಾಪರದಿಂದ ಇದುವರೆಗೆ ಪೂಜ್ಯರಾಗುತ್ತಾರೆ ಅರ್ಥಾತ್ ಮಾಲೆಯಲ್ಲಿ ಮಣಿಗಳಾಗುತ್ತಾರೆ ಅಂದಾಗ ತಮ್ಮನ್ನು ಮಾಲೆಯಲ್ಲಿ ಮಣಿಯನ್ನಾಗಿ ಮಾಡಿಕೊಳ್ಳುವ ಶುದ್ಧ ಸಂಕಲ್ಪವಿದೆಯಲ್ಲವೇ!

ಬಾಪ್ದಾದಾರವರೂ ಸಹ ಪ್ರತಿದಿನ ಅಮೃತವೇಳೆ ತನ್ನ ಮಾಲೆಯ ಮಣಿಗಳನ್ನು ನೋಡುತ್ತಾರೆ ಮತ್ತು ವಿಶೇಷ ಮಿಲನ ಮಾಡುತ್ತಾರೆ ಅಂದಾಗ ತಾವೆಲ್ಲರೂ ತಮ್ಮನ್ನು ತಾವು ಮಾಲೆಯ ಮಣಿಗಳು ಎಂದು ತಿಳಿಯುತ್ತೀರಾ? ಬೇರೆ ಮಾಲೆ 16,000ರದ್ದೂ ಸಹ ಇದೆ ಆದರೆ ಎರಡನೇ ಮಾಲೆಯಾಗಿದೆ. ವಿಶೇಷ ಮಾಲೆ ಯಾವುದು ಗಾಯನ, ಪೂಜೆಗೆ ಯೋಗ್ಯವಾಗುತ್ತದೆ ಅದು ಮೊದಲನೇ ಮಾಲೆಯಾಗಿದೆ. ಅಂದಾಗ ಈ ದಿನ ಬಾಪ್ದಾದಾ ಆ ಮಣಿಗಳನ್ನು ನೋಡುತ್ತಿದ್ದಾರೆ ಏಕೆಂದರೆ ಬ್ರಹ್ಮಾ ತಂದೆಯ ಜೊತೆ ವಿಶೇಷ ರಾಜ್ಯಾಧಿಕಾರಿ ಜೊತೆಗಾರರು ಅವರೇ ಆಗುತ್ತಾರೆ. ಈ ದಿನ ಬ್ರಹ್ಮಾತಂದೆ ತನ್ನ ಈಗಿನ ತೀವ್ರ ಪುರುಷಾರ್ಥಿ ಮತ್ತು ಭವಿಷ್ಯದ ರಾಜ್ಯಾಧಿಕಾರಿ, ಸಿಂಹಾಸನದ ಮೇಲೆ ಅಂತೂ ಇಬ್ಬರೇ ಕುಳಿತುಕೊಳ್ಳುತ್ತಾರೆ ಆದರೆ ರಾಜ್ಯದ ಜೊತೆಗಾರರದ್ದು ಮೊದಲನೇ ಮಾಲೆಯಾಗಿದೆ. ಅಂದಾಗ ತಮ್ಮನ್ನು ತಾವು ಚೆಕ್ ಮಾಡಿಕೊಂಡಿದ್ದೀರಾ. ಬಾಪ್ದಾದಾರವರ ಜೊತೆಯಂತೂ ಹೋಗುತ್ತೀರಿ ಏಕೆಂದರೆ ಈಗ ತಮ್ಮೆಲ್ಲರದೂ ರಿಟರ್ನ್ ಜರ್ನಿ ಆಗಿದೆ. ಯಾವಾಗ ಹೋಗಲೇಬೇಕು ಆಗ ತಂದೆಯ ಜೊತೆ ಹೋಗಬೇಕು, ಒಂಟಿಯಾಗಿ ಹೋಗಬಾರದು. ಅಂದಾಗ ಜೊತೆಯಲ್ಲಿ ಹೋಗುವವರು ಸಮೀಪದ ಮಣಿಗಳು ಯಾರಾಗುತ್ತೀರಿ? ಯಾರು ಬಹಳ ಕಾಲದ ತೀವ್ರ ಪುರುಷಾರ್ಥಿ ಆಗುತ್ತಾರೆ ಅವರೇ ಸಮೀಪಕ್ಕೆ ಹೋಗುತ್ತಾರೆ. ಪುರುಷಾರ್ಥಿ ಅಲ್ಲ, ಕೆಲವೊಮ್ಮೆ ಮಾಡುವವರಲ್ಲ. ಬಹಳ ಕಾಲದ ತಂದೆಯ ಸಮಾನ ಆಗಿರುವವರೇ ರಾಜ್ಯಾಧಿಕಾರಿ ಆಗಿಬಿಡುತ್ತಾರೆ ಅಂದಾಗ ಏನು ತಿಳಿದುಕೊಂಡಿದ್ದೀರಾ? ತೀವ್ರ ಪುರುಷಾರ್ಥಿ ಆಗಿದ್ದೀರಾ? ಯಾರು ನಾನು ಪುರುಷಾರ್ಥದ ಸಾಲಿನಲ್ಲಿ ಇದ್ದೇನೆ ಎಂದು ತಿಳಿಯುತ್ತೀರೋ ಅವರು ಕೈ ಎತ್ತಿ. ತೀವ್ರ ಪುರುಷಾರ್ಥಿ ಉದ್ದವಾಗಿ ಕೈಯನ್ನು ಎತ್ತಿ, ಚಿಕ್ಕದಾಗಿ ಎತ್ತುತ್ತೀರಿ. ಒಳ್ಳೆಯದು ಬಹಳ ಎತ್ತುತ್ತಿದ್ದಾರೆ, ಉದ್ದವಾಗಿ ಕೈ ಎತ್ತಿ, ಚಿಕ್ಕದಾಗಿ ಅಲ್ಲ. ಒಳ್ಳೆಯದು.

ಬಾಪ್ದಾದಾರವರಂತೂ ಪ್ರತಿದಿನ ಮಕ್ಕಳ ಚಾರ್ಟ್ನ್ನು ನೋಡುತ್ತಾರೆ. ಮೆಜಾರಿಟಿ ತೀವ್ರ ಪುರುಷಾರ್ಥಿಗಳೂ ಇದ್ದಾರೆ ಆದರೆ ಕೆಲವೊಮ್ಮೆ ಎಂಬ ಶಬ್ದವನ್ನು ಜೊತೆಯಲ್ಲಿ ಸೇರಿಸಿ ಬಿಡುತ್ತೀರಿ. ಆದರೆ ತಂದೆ ಏಕೆ ಹೇಳುತ್ತಿದ್ದಾರೆ? ಅಟೆನ್ಷನ್ ಪ್ಲೀಸ್, ಸೂಕ್ಷ್ಮ ಸಂಕಲ್ಪದಲ್ಲೂ ಏರುಪೇರಿಲ್ಲ. ಅಚಲ-ಅಡೋಲ-ಶುದ್ಧ ಸಂಕಲ್ಪದಾರಿ ಬಹಳ ಸಮಯದಿಂದ ಆಗಲೇಬೇಕು. ಕೆಲವು ಮಕ್ಕಳು ಬಹಳ ಮಧುರ-ಮಧುರ ಆತ್ಮಿಕ ವಾರ್ತಾಲಾಪವನ್ನು ಮಾಡುತ್ತಾರೆ, ಬಾಬಾ ನಾವು ತಯಾರಾಗಿಯೇ ಬಿಡುತ್ತೇವೆ ಎಂದು ಹೇಳುತ್ತಾರೆ. ಏಕೆಂದರೆ ಸಮಯ ಎಷ್ಟು ಸಮೀಪ ಬರುತ್ತದೋ, ಪರಿಸ್ಥಿಗಳು ಬಂದಾಗ, ಏರುಪೇರು ಆದಾಗ ವೈರಾಗ್ಯ ಸ್ವತಃವಾಗಿಯೇ ಬಂದು ಬಿಡುತ್ತದೆ. ಆದರೆ ತಮ್ಮ ಟೀಚರ್ ಯಾರಾಗಿದ್ದಾರೆ? ಸಮಯ ಅಥವಾ ತಂದೆ ಯಾರು ತಮ್ಮ ಟೀಚರ್ ಆಗಿದ್ದಾರೆ? ಸಮಯವಂತೂ ತಮ್ಮ ರಚನೆಯಾಗಿದೆ. ಅಂದಾಗ ತಂದೆ ಈಗ ಸೂಚನೆ ಕೊಡುತ್ತಿದ್ದಾರೆ - ಬಹಳ ಸಮಯದ ತೀವ್ರ ಪುರುಷಾರ್ಥ ಅಂತ್ಯದಲ್ಲಿ ಪಾಸ್ವಿತ್ ಆನರನ್ನಾಗಿ ಮಾಡಿ ಬಿಡುತ್ತದೆ. ಪಾಸ್ ಅಂತೂ ಎಲ್ಲರೂ ಆಗುತ್ತಾರೆ ಆದರೆ ಪಾಸ್ವಿತ್ ಆನರ್ ಆಗುವವರು ಬಹಳ ಸಮಯದಿಂದ ನಿರಂತರವಾಗಿ ತೀವ್ರ ಪುರುಷಾರ್ಥ ಮಾಡುವ ಅವಶ್ಯಕವಾಗಿದೆ. ಆದ್ದರಿಂದ ಈ ದಿನದ ತಾರೀಖು ನೋಟ್ ಮಾಡಿಕೊಳ್ಳಿ. ಒಂದುವೇಳೆ ಈಗಲೂ ಕೆಲವೊಮ್ಮೆ ಏನಾದರೂ ಆಗಿ ಬಿಟ್ಟರೆ, ಮಾಡಿಯೇ ಮಾಡುತ್ತೇವೆ ಎಂಬ ಶಬ್ದ ಮುಂದೆ ಹೋಗುತ್ತದೆ. ತಂದೆಯ ಪ್ರೀತಿಯಂತೂ ಸದಾ ಇರುತ್ತದೆ. ಕೊನೆಯ ಮಣಿಯ ಮೇಲೂ ತಂದೆಯ ಪ್ರೀತಿ ಇದೆ. ಏಕೆ? ಹೃದಯದಿಂದ ನನ್ನ ಬಾಬಾ ಎಂದು ಹೇಳಿದ್ದೀರಿ, ಈ ದಿನದ ದೊಡ್ಡ-ದೊಡ್ಡ ಆತ್ಮಗಳು ನನ್ನ ಬಾಬಾ ಎಂದು ಹೇಳುವುದಿಲ್ಲ, ಆದರೆ ನನ್ನ ಬಾಬಾ ಎಂದು ಒಪ್ಪುತ್ತಾರೆ ಆದ್ದರಿಂದ ತಂದೆಯ ಪ್ರೀತಿ ಅವರ ಮೇಲೂ ಇರುತ್ತದೆ. ಮಕ್ಕಳ ಮೇಲೆ ಪ್ರೀತಿ ತಂದೆಗೆ ಸದಾ ಇರುತ್ತದೆ, ಕೊನೆವರೆಗೂ ಇರುತ್ತದೆ, ಕೊನೆಯವರ ಮೇಲೂ ಇರುತ್ತದೆ. ಸ್ನೇಹವೇ ತಮ್ಮನ್ನು ತಂದೆಯವರನ್ನಾಗಿ ಮಾಡಿದೆ. ಬಾಪ್ದಾದಾರವರೂ ಇದನ್ನೂ ಸಹ ತಿಳಿಸಿದ್ದಾರೆ - ಸ್ನೇಹ ಮೆಜಾರಿಟಿ ಮಕ್ಕಳ ಮೇಲೆ ಇದೆ ಮತ್ತು ಇರುತ್ತದೆ. ಆದರೆ ಕೇವಲ ಸ್ನೇಹ ಅಲ್ಲ, ಶಕ್ತಿಯೂ ಸಹ ಬೇಕಾಗಿದೆ. ತೀವ್ರ ಪುರುಷಾರ್ಥವೂ ಬೇಕಾಗಿದೆ. ಆದ್ದರಿಂದ ಈಗಂತೂ ಶಿವರಾತ್ರಿ ಬಂದು ಬಿಟ್ಟಿದೆ, ತಂದೆಯ ಅವತರಣೆಯ ಜೊತೆಗೆ ಮಕ್ಕಳದೂ ಸಹ ಅವತರಣೆಯೂ ಆಗಿದೆ. ಈ ಶಿವರಾತ್ರಿಯಂದು ಪ್ರತಿಯೊಬ್ಬ ಮಗು ತನ್ನನ್ನು ಸಾಧಾರಣ ಪುರುಷಾರ್ಥಕ್ಕೆ ಬದಲಾಗಿ ತೀವ್ರ ಪುರುಷಾರ್ಥಿ ಆಗುವ ಸಂಕಲ್ಪ ಮಾಡಲಿ ಎಂದು ಬಾಪ್ದಾದಾರವರು ಬಯಸುತ್ತಾರೆ. ಆಗಲು ಸಾಧ್ಯವೇ? ಶಿವರಾತ್ರಿಯೆಂದು ದೃಢ ಸಂಕಲ್ಪ ತಮ್ಮೊಂದಿಗೆ ತಾವೇ ಮಾಡಿ. ಬರೆಯುವುದಲ್ಲ, ಕ್ಲಾಸಿನಲ್ಲಿ ಹೇಳುವ ಅವಶ್ಯಕತೆ ಇಲ್ಲ, ಆದರೆ ತಂದೆಯ ಜೊತೆ ಹೃದಯದಲ್ಲಿ ಶಿವರಾತ್ರಿಯಂದು ನಾವು ಕೆಲವೊಮ್ಮೆ ಎಂಬ ಶಬ್ದವನ್ನು ನಮ್ಮ ಪುರುಷಾರ್ಥದ ಡಿಕ್ಷನರಿಯಿಂದ ತೆಗೆದು ಬಿಡುತ್ತೇವೆ ಎಂದು ಸಂಕಲ್ಪ ಮಾಡಲಿ. ಮಾಡಲು ಸಾಧ್ಯವೇ? ಯಾರು ಇದೇನು ದೊಡ್ಡ ಮಾತೇನಲ್ಲ, ಯೋಚನೆ ಮಾಡಿದ್ದೇವೆ ಮತ್ತು ಆಗಿ ಬಿಟ್ಟಿದೆ, ಸಾಹಸ ಇಟ್ಟುಕೊಳ್ಳುವವರು ಕೈ ಎತ್ತಿ. ಒಳ್ಳೆಯದು. ಖುಷಿ ಪಡೆಸಿದಿರಿ.

ಬಾಪ್ದಾದಾರವರಿಗಂತೂ ಮಕ್ಕಳ ಮೇಲೆ ವಿಶ್ವಾಸ ಇದೆಯಲ್ಲವೇ. ಅಂದಾಗ ಈಗಿನಿಂದಲೇ ಪದಮದಷ್ಟು ಅಂತಹ ಮಕ್ಕಳಿಗೆ ಶುಭಾಶಯಗಳನ್ನು ನೀಡುತ್ತಿದ್ದಾರೆ. ವಾಹ್! ಮಕ್ಕಳೇ ವಾಹ್! ಸಾಹಸವುಳ್ಳವರಾಗಿದ್ದೀರಾ. ತಮ್ಮ ಸಾಹಸ ಮತ್ತು ತಂದೆಯ ಸಹಯೋಗವಂತೂ ಇದ್ದೇ ಇರುತ್ತದೆ. ಈಗ ಒಂದು ಕೆಲಸ ಮಾಡಬೇಕು. ತಮ್ಮ ಮನಸ್ಸನ್ನು ಬಿಜಿಯಾಗಿ ಇಟ್ಟುಕೊಳ್ಳಲು ಹೇಗೆ ತಂದೆ ಮೊದಲು ಹೇಳಿದ್ದಾರೆ ಸೆಕೆಂಡಿನಲ್ಲಿ ಸ್ಟಾಪ್, ಬಿಂದು ಆಗಿದ್ದೇನೆ, ಬಿಂದು ಹಾಕಬೇಕು ಮತ್ತು ಎಲ್ಲರನ್ನು ಬಿಂದು ರೂಪದಲ್ಲಿ ನೋಡಬೇಕು. ಯಾವಾಗ ಬಿಂದುವನ್ನೇ ನೋಡುತ್ತೀರಿ ಮತ್ಯಾವುದೇ ಸಂಕಲ್ಪ ನಡೆಯುವುದಿಲ್ಲ. ಮನಸಾ ಸೇವೆಯ ಅಟೆನ್ಷನ್ ಇಟ್ಟುಕೊಳ್ಳಬೇಕು. ಇಷ್ಟು ದುಃಖಿ ಆತ್ಮಗಳು, ಕೂಗುತ್ತಿದ್ದಾರೆ, ಅವರಿಗೆ ಕಿರಣಗಳು ಕೊಡುವ ಸೇವೆಯಲ್ಲೂ ಸಹ ಹೆಚ್ಚು ಮನಸ್ಸನ್ನು ಇಡಬೇಕಾಗುತ್ತದೆ. ಮನಸಾ ಸೇವೆ ಬಹಳ ಶ್ರೇಷ್ಠ ಸೇವೆಯಾಗಿದೆ. ದುಃಖಿಗಳಿಗೂ ಸಹ ಲಾಭವಿದೆ ಮತ್ತು ತಮಗೂ ಸಹ ತಮ್ಮ ಲಾಭವಿದೆ. ಡಬಲ್ ಲಾಭವಿದೆ. ಹೇಗೆ ವಾಣಿಯಿಂದ ಸೇವೆ ಮಾಡುತ್ತೀರಿ ಮತ್ತು ಸೇವೆ ವೃದ್ಧಿ ಆಗುತ್ತಾ ಹೋಗುತ್ತದೆ, ಹೃದಯದಿಂದ ಮಾಡುತ್ತೀರಿ, ಸಂಖ್ಯೆಯೂ ಹೆಚ್ಚಾಗುತ್ತಾ ಹೋಗುತ್ತದೆ, ಸೇವಾಕೇಂದ್ರಗಳೂ ಹೆಚ್ಚಾಗುತ್ತಾ ಹೋಗುತ್ತವೆ, ವಾಚಾ ಸೇವೆ ಮೆಜಾರಿಟಿ ಚೆನ್ನಾಗಿದೆ. ಎಲ್ಲರದೂ ಅಲ್ಲ ಆದರೆ ಮೆಜಾರಿಟಿ ಚೆನ್ನಾಗಿದೆ. ಅದೇ ರೀತಿ ಈಗ ಮನಸ್ಸಿನಿಂದ ವಿಶೇಷವಾಗಿ ಆತ್ಮಗಳಿಗೆ ಹನಿಯನ್ನು ಕೊಡುವ ಸೇವೆಯೂ ಸಹ ಮಾಡುತ್ತಿರಿ. ಮನಸ್ಸನ್ನು ಫ್ರೀಯಾಗಿ ಬಿಡಬೇಡಿ. ಯಾವುದಾದರೂ ಸೇವೆಯಲ್ಲಿ ಮನಸ್ಸಿನ ಮೂಲಕ ಶಕ್ತಿಗಳನ್ನು ಕೊಡುವ, ಮುಖದಿಂದ ವಾಣಿಯ ಸೇವೆ, ಕರ್ಮದಲ್ಲಿ ಗುಣಗಳಿಂದ ಸೇವೆ, ಸಂಬಂಧ-ಸಂಪರ್ಕದಲ್ಲಿ ಖುಷಿ ಕೊಡುವ ಸೇವೆ, ಈ ಭಿನ್ನ-ಭಿನ್ನ ಸೇವೆಗಳಲ್ಲಿ ಮನಸ್ಸನ್ನು ಬಿಜಿಯಾಗಿಟ್ಟುಕೊಳ್ಳಿ ಏಕೆಂದರೆ ಇಡೀ ವಿಶ್ವದಲ್ಲಿ ಸಾಹುಕಾರ (ರಿಚೆಸ್ಟ್) ಆತ್ಮಗಳು ಯಾರಿದ್ದಾರೆ? ತಾವೇ ಅಲ್ಲವೇ! ಎಷ್ಟು ಖಜಾನೆಗಳು ಸಿಕ್ಕಿದೆ? ಪ್ರತಿಯೊಂದು ಖಜಾನೆಯಿಂದ ಸೇವೆ ಮಾಡಿ. ಖಜಾನೆಯನ್ನು ಎಷ್ಟು ಸೇವೆಯಲ್ಲಿ ತೊಡಗಿಸುತ್ತೀರಿ ಅಷ್ಟು ಖಜಾನೆಗಳು ಹೆಚ್ಚಾಗುತ್ತಾ ಹೋಗುತ್ತವೆ ಆದ್ದರಿಂದ ಈಗ ಹೇಗೆ ಸ್ವಯಂ ಸೇವೆಗೆ ಅಟೆನ್ಷನ್ ಕೊಡುತ್ತೀರಿ ಅದೇ ರೀತಿ ತಮ್ಮದೇ ದುಃಖಿ ಆತ್ಮಗಳು, ತಮ್ಮ ಭಕ್ತರಿಗೆ ಮನಸ್ಸಿನ ಮೂಲಕ ಕಿರಣಗಳನ್ನು ಕೊಡುವ ಸೇವೆಯಲ್ಲಿ ಅಟೆನ್ಷನ್ ಕೊಟ್ಟು ಇಡೀ ದಿನದಲ್ಲಿ ಮಾಡಿ, ಬಹಳ ಕೂಗುತ್ತಾರೆ, ತಮಗೆ ಕೇಳಿಸುವುದಿಲ್ಲವೇ. ಮೆಜಾರಿಟಿ ಪ್ರತಿಯೊಂದು ಮನೆಯಲ್ಲಿ ಯಾವುದಾದರೂ ದುಃಖದ ಕಾರಣವಿದೆ. ಇಂತಹ ದುಃಖಿಗಳಿಗೆ ಸುಖ ಕೊಡುವವರು ಯಾರಾಗಿದ್ದಾರೆ? ಅವರು ಯಾರಾಗಿದ್ದಾರೆ? ತಾವೇ ಆಗಿದ್ದೀರಿ. ಅಂದಾಗ ಮನಸಾ ಸೇವೆಯನ್ನು ಇಡೀ ದಿನದಲ್ಲಿ ಚೆಕ್ ಮಾಡಿಕೊಳ್ಳಿ - ಎಷ್ಟು ಸಮಯ ಹೇಗೆ ಸ್ವಯಂನ ಪ್ರತಿ ಕೊಡುತ್ತೀರಾ, ಅದೇ ರೀತಿ ಮನಸಾ ಸೇವೆಯ ಪ್ರತಿ ಎಷ್ಟು ಸಮಯ ಕೊಟ್ಟಿದ್ದೀರಿ? ದಯಾಹೃದಯಿ ಆಗಿದ್ದೀರಲ್ಲವೇ? ಅಂದಾಗ ದುಃಖಿಗಳ ಮೇಲೆ ದಯೆ ತೋರಿಸಿ. ತಮ್ಮ ಹಾಡೂ ಸಹ ಇದೆಯಲ್ಲವೇ ಓ ತಂದೆ-ತಾಯಿ ದುಃಖಿಗಳ ಮೇಲೆ ದಯೆ ತೋರಿಸಿ...ಎಂಬ ಹಾಡಿದೆಯಲ್ಲವೇ. ಬಾಪ್ದಾದಾರವರಿಗೆ ಬಹಳ ಕೂಗು ಕೇಳಿಸುತ್ತದೆ. ತಮಗೆ ಕಡಿಮೆ ಕೇಳಿಸುತ್ತದೆ ಆದರೆ ಈಗ ಕೇಳಿ. ಅವರು ಎಲ್ಲಿಗೆ ಹೋಗುತ್ತಾರೆ. ತಮ್ಮದೇ ಸಹೋದರ-ಸಹೋದರಿಯಾಗಿದ್ದಾರೆ. ತಮ್ಮ ಲಾಭವನ್ನು ತೆಗೆದುಕೊಳ್ಳಿ, ಮನಸ್ಸನ್ನು ಬಿಜಿಯಾಗಿಟ್ಟುಕೊಳ್ಳಿ ಮತ್ತು ದುಃಖಿಗಳ ದುಃಖವನ್ನು ದೂರ ಮಾಡಿ. ಕೂಗುತ್ತಾರೆ, ಹೃದಯ ಕೂಗುತ್ತದೆ. ಬಾಪ್ದಾದಾರವರಂತೂ ಕೇಳುತ್ತಾರೆ, ಅಂದಾಗ ಓ ನನ್ನ ಮುದ್ದಾದ ಮಕ್ಕಳೇ ಎಂದು ಮಕ್ಕಳನ್ನು ನೆನಪು ಮಾಡುತ್ತಾರೆ. ಈಗ ದಯಾಹೃದಯವನ್ನು ಧಾರಣೆ ಮಾಡಿ. ತಾವು ಬ್ರಾಹ್ಮಣರಲ್ಲೂ ಸಹ ಒಬ್ಬರಿಗೊಬ್ಬರು ಸಹಯೋಗಿ ಆಗಿ. ಎಂತಹದ್ದೇ ಸಂಸ್ಕಾರ ಇರಲಿ ಆದರೆ ತಮ್ಮ ಕಾರ್ಯ ಯಾವುದು? ಸಂಸ್ಕಾರದಿಂದ ಮೋಸ ಹೋಗುವುದೋ ಅಥವಾ ಅವರನ್ನು ಸಂಸ್ಕಾರದ ಜಂಜಾಟದಿಂದ ಬಿಡುಗಡೆ ಮಾಡುವುದೋ. ತಮ್ಮದೂ ಸಹ ಟೈಟಲ್ ಇದೆಯಲ್ಲವೇ, ದುಃಖ ಹರ್ತ-ಸುಖ ಕರ್ತ ಎಂಬ ಟೈಟಲ್ ಇದೆಯಲ್ಲವೇ. ತಂದೆಯ ಜೊತೆಗಾರರಲ್ಲವೇ. ತಂದೆಯ ಜೊತೆಗಾರರು ಯಾವ ಸಂಕಲ್ಪವನ್ನು ಮಾಡಿದ್ದೀರಿ? ಈ ವಿಶ್ವವನ್ನು ನೋಡಿ ಈ ವಿಶ್ವವನ್ನು ದುಃಖ-ಅಶಾಂತಿಯಿಂದ ಬದಲಾವಣೆ ಮಾಡಿ ಸುಖ-ಶಾಂತಿಯ ಸ್ಥಾಪನೆ ಮಾಡಲೇಬೇಕು. ಮಾಡಬೇಕಲ್ಲವೇ! ಕೈ ಎತ್ತಿ ಮಾಡಬೇಕೇ, ಮಾಡಬೇಕೇ? ಅಥವಾ ಕೇವಲ ನೋಡುವುದೋ, ಸ್ಥಾಪನೆ ಆಗುತ್ತಿದೆ ಆದರೆ ಈಗ ಬದಲಾವಣೆ ಆಗಬೇಕು. ಬ್ರಾಹ್ಮಣ ಆತ್ಮರಾಗಲಿ, ನೋಡುತ್ತಿರಬೇಡಿ, ಮಾಡುತ್ತಿದ್ದಾರೆ ಆದರೆ ಅವರಿಗೂ ಸಹ ವಾಣಿ ಮತ್ತು ಮನಸಾ ಸೇವೆಯ ಮೂಲಕ ಪರಿವರ್ತನೆ ಮಾಡಿ, ಮಾಡಬಾರದು. ಬಾಪ್ದಾದಾ ಕೇಳುತ್ತಿರುತ್ತಾರೆ, ಬಾಪ್ದಾದಾರವರಿಗೆ ಮಾತು ಕೊಟ್ಟು ಬಿಟ್ಟಿದ್ದೀರಿ. ಮಾತು ಕೊಟ್ಟ ನಂತರ ಸ್ವಯಂ ತಂದೆಯ ಡೈರೆಕ್ಷನ್ ಮೇಲೆ ನಡೆಯಿರಿ, ಜವಾಬ್ದಾರಿ ಬಾಪ್ದಾದಾ ಆಗಿದ್ದಾರೆ, ಅವರ ಜೊತೆಗಾರರು ನಿಮಿತ್ತ ಆಗಿರುವ ಮಕ್ಕಳಾಗಿದ್ದಾರೆ. ಸದಾ ತಮ್ಮ ಮನಸ್ಸನ್ನು ವ್ಯರ್ಥ ಸಂಕಲ್ಪಗಳಿಗೆ ಬದಲಾಗಿ ಈಗ ದುಃಖಿ ಆತ್ಮಗಳಿಗೆ ಬ್ರಾಹ್ಮಣರಾಗಿರಲಿ ಯಾರೇ ಆಗಿರಲಿ, ಡಿಸ್ಟರ್ಬ್ ಆಗಿರುವ (ತೊಂದರೆಯಲ್ಲಿರುವ) ಆತ್ಮರಿಗೆ ಸಹಯೋಗ ಕೊಡಿ, ಸಹಯೋಗಿ ಆಗಿ. ಒಳ್ಳೆಯದು.

ಹೊಸ-ಹೊಸ ಮಕ್ಕಳು ಯಾರು ಮೊದಲನೇ ಬಾರಿ ಬಂದಿದ್ದೀರಿ, ಅವರು ಒಂದು ಸೆಕೆಂಡಿನಲ್ಲಿ 10 ನಿಮಿಷದ ಕೆಲಸ ಮಾಡಬೇಕು. ಸಮಯವನ್ನು ಸ್ವಲ್ಪವೂ ವ್ಯರ್ಥ ಮಾಡಬಾರದು, ಗಮನ ಕೊಡಬೇಕು. ತಮ್ಮ ಪುರುಷಾರ್ಥ ತೀವ್ರ ಮಾಡಿ ಎಷ್ಟು ಮುಂದುವರೆಯ ಬಯಸುವಿರಿ ಅಷ್ಟು ಮುಂದುವರೆಯ ಬಹುದು. ನಿಮ್ಮೆಲ್ಲರಿಗೂ ಎಲ್ಲಾ ಬ್ರಾಹ್ಮಣರ ಕಡೆಯಿಂದ, ತಂದೆಯ ಕಡೆಯಿಂದ ಶುಭ ಭಾವನೆ, ಶುಭ ಕಾಮನೆಯಿದೆ. ಒಳ್ಳೆಯದು. (ಎಲ್ಲಾ ಮಧುಬನದವರು ಎದ್ದೇಳಿ)

ಮಧುಬನದವರು ಒಂದುವೇಳೆ ಇಲ್ಲವೆಂದರೆ ತಮ್ಮ ಅತಿಥಿ ಸತ್ಕಾರ ಯಾರು ಮಾಡುವವರು. ಆರಾಮವಾಗಿ ಬರುತ್ತೀರಿ, ತಿನ್ನುತ್ತೀರಿ, ಕುಡಿಯುತ್ತೀರಿ, ರಿಫ್ರೆಷ್ ಆಗುತ್ತೀರಿ ಅಂದಾಗ ಮಧುಬನದವರಿಗೆ ಚಪ್ಪಾಳೆ ಹೊಡೆಯಿರಿ. ಬಾಪ್ದಾದಾರವರಿಗೆ ಗೊತ್ತಿದೆ - ಸ್ಥಾನ ಕಡಿಮೆ ಇರುವ ಕಾರಣ ಮಧುಬನದವರಿಗೆ ಸ್ವಲ್ಪ ದೂರ ಕುಳಿತು ಕೇಳಬೇಕಾಗುತ್ತದೆ. ಇದೂ ಸಹ ಮಧುಬನದವರ ಸೇವೆಯಾಗಿದೆ. ಅನ್ಯರಿಗೆ ಸುಖ ಕೊಡುವುದು, ಸುಖದಾತರಾಗಿದ್ದೀರಲ್ಲವೇ. ಅಂದಾಗ ಮಧುಬನದವರ ಕೆಲಸವಾಗಿದೆ ಸುಖ ತೆಗೆದುಕೊಳ್ಳುವುದು ಮತ್ತು ಸುಖ ಕೊಡುವುದು. ಏಕೆಂದರೆ ಯಾರೆಲ್ಲಾ ಬರುತ್ತಾರೆ ಅವರ ಅನುಭವದಿಂದ ತಾವು ಅನುಭವ ತಿಳಿಸುತ್ತೀರಿ ಆ ಅನುಭವದಿಂದ ಒಬ್ಬರಿಗೊಬ್ಬರಿಗೆ ಲಾಭ ಆಗುತ್ತದೆ. ಕೆಲವೊಂದು ಲಾಭಗಳು ಆಗುತ್ತದೆ ಆದರೆ ಸಮಯ ಕಡಿಮೆ ಇರುವ ಕಾರಣ ತಿಳಿಸುವುದು ಕಡಿಮೆ. ಆದರೆ ಮಧುಬನದವರ ಟೈಟಲ್ ಏನಾಗಿತ್ತು? ಸುಖ ಕೊಡುವುದು ಮತ್ತು ಸುಖ ತೆಗೆದುಕೊಳ್ಳುವುದು. ಸುಖದಾತನ ಮಕ್ಕಳು ಫಾಲೋ ಫಾದರ್ ಮಾಡುವವರಾಗಿದ್ದಾರೆ. ಒಳ್ಳೆಯದು.

ಈ ಬಾರಿ ಯಾರು ಬಂದಿದ್ದೀರಿ ಅವರಲ್ಲಿ ಯಾರು ಪ್ರತಿದಿನ ಮುರಳಿ ಕೇಳುತ್ತಾರೆ, ಯಾರಾದರೂ ಮುರಳಿ ಕೇಳದೆ ಇರುವವರಿದ್ದೀರಾ ಕೈ ಎತ್ತಿ. ಯಾರೂ ಇಲ್ಲ. ಒಳ್ಳೆಯದು. ಯಾರು ಮುರಳಿ ಓದುವುದಿಲ್ಲ, ಕೇಳುವುದಿಲ್ಲ ಅವರು ಎದ್ದು ನಿಲ್ಲಿ. ಕೆಲವರೇ ಇದ್ದಾರೆ. ಪರವಾಗಿಲ್ಲ. ಆದರೆ ಈಗ ಯಾವ ಸಮಯ ಸಿಕ್ಕಿದೆ ಅದರಲ್ಲಿ ತಂದೆಯ ಮಹಾವಾಕ್ಯಗಳನ್ನು, ಪರಮಧಾಮದಿಂದ ಬಾಪ್ದಾದಾರವರು ಬರುತ್ತಾರೆ, ಸೂಕ್ಷ್ಮವತನದಿಂದ ಬ್ರಹ್ಮಾಬಾಬಾ ಬರುತ್ತಾರೆ, ಮತ್ತು ಬಂದು ಮಹಾವಾಕ್ಯಗಳನ್ನು ಉಚ್ಛಾರಣೆ ಮಾಡುತ್ತಾರೆ ಆದ್ದರಿಂದ ಮುರಳಿ ಎಂದೂ ಸಹ ಒಂದು ದಿನವೂ ಮಿಸ್ ಮಾಡಬಾರದು. ತಮ್ಮ ಬಾಪ್ದಾದಾರವರ ಹೃದಯ ಸಿಂಹಾಸನ ಬಿಟ್ಟು ಹೋಗುತ್ತದೆ. ಆದ್ದರಿಂದ ಯಾರೆಲ್ಲಾ ಮುರಳಿಯನ್ನು ತಪ್ಪಿಸುತ್ತಾರೆ ಅವರು ಮೂರು ಸಿಂಹಾಸನಕ್ಕೆ ಮಾಲೀಕರಲ್ಲ ಎಂದು ತಿಳಿದುಕೊಳ್ಳಬೇಕು, ಎರಡು ಸಿಂಹಾಸನಕ್ಕೆ ಮಾಲೀಕರೂ ಯಥಾ ಶಕ್ತಿಯನುಸಾರವಾಗಿ ಆಗುತ್ತಾರೆ, ಆದ್ದರಿಂದ ಮುರಳಿ, ಮುರಳಿ, ಮುರಳಿ. ಏಕೆಂದರೆ ಮುರಳಿಯಲ್ಲಿ ಪ್ರತಿದಿನ ಡೈರೆಕ್ಷನ್ಸ್ ಇರುತ್ತದೆ. ನಾಲ್ಕೂ ಸಬ್ಜೆಕ್ಟ್ಗಳ ಡೈರೆಕ್ಷನ್ ಇರುತ್ತದೆ ಅಂದಾಗ ಪ್ರತಿದಿನದ ಡೈರೆಕ್ಷನ್ ತೆಗೆದುಕೊಳ್ಳಬೇಕಲ್ಲವೇ. ಯಾರೆಲ್ಲಾ ತಪ್ಪಿಸುತ್ತೀರಿ, ಕಾರಣದಿಂದಾಗಲಿ, ಅಕಾರಣದಿಂದಾಗಲಿ ಅವರು ಹೇಗೆ ಮುರಳಿ ಕೇಳುವುದು ಎಂದು ತಮ್ಮ ಪ್ರೋಗ್ರಾಮ್ ಮಾಡಿಕೊಳ್ಳಬೇಕು. ಯಾವುದಾದರೂ ನಿವಾರಣೆಯನ್ನು ಯೋಚಿಸಿ. ಈಗಿನ ಸಮಯದಲ್ಲಿ ವಿಜ್ಞಾನದ ಸಾಧನಗಳು ತಮಗಾಗಿ ಇದೆ. ಬ್ರಹ್ಮಾ ತಂದೆಯಲ್ಲಿ ಪ್ರವೇಶತೆಯ 100 ವರ್ಷದ ಮೊದಲು ಈ ವಿಜ್ಞಾನ ಬಂದಿದೆ, ತಮಗೂ ಕೆಲಸಕ್ಕೆ ಬರುತ್ತದೆ ಆದ್ದರಿಂದ ಅದನ್ನು ಉಪಯೋಗಿಸಿ, ಲಾಭವನ್ನು ತೆಗೆದುಕೊಳ್ಳಿ. ಒಳ್ಳೆಯದು ಎದುರಿನಲ್ಲಿ ಕುಳಿತಿರುವವರು ಮತ್ತು ಎಲ್ಲಾದರೂ ಕೇಳುತ್ತಿರುವ ಮಕ್ಕಳಿಗೆ ಬಾಪ್ದಾದಾರವರ ಹೃದಯ ತುಂಬಿ ಪ್ರೀತಿಯಿಂದ ನೆನಪು-ಪ್ರೀತಿ ಹಾಗೂ ನಮಸ್ತೆ.

ಸೇವೆಯ ಸರದಿ ಯು.ಪಿ. ಬನಾರಸ್ದ್ದಾಗಿದೆ – ಯು.ಪಿ.ಯಿಂದ ಬ್ರಹ್ಮಾ ತಂದೆಯ, ಜಗದಂಬಾರವರ ಬಹಳ ಪ್ರೀತಿಯಿದೆ. ಎಷ್ಟು ಬಾರಿ ಬ್ರಹ್ಮಾ ತಂದೆ ಯು.ಪಿಯಲ್ಲಿ ಬಂದಿದ್ದಾರೆ ಅಷ್ಟು ಬಾರಿ ಬಾಂಬೆಯಲ್ಲಿಯೂ ಬಂದಿದ್ದಾರೆ, ಆದರೆ ಯು.ಪಿ.ಯಲ್ಲಿಯೂ ಬಂದಿದ್ದಾರೆ. ಯಾವ ಸ್ಥಾನದಲ್ಲಿ ಬ್ರಹ್ಮಾ ತಂದೆಯ ಹೆಜ್ಜೆಯಿಡುವರೋ ಆ ಸ್ಥಾನ ಎಷ್ಟು ಭಾಗ್ಯಶಾಲಿಯಾಗಿದೆ. ಲಖನೌ ಮತ್ತು ಕಾನಪುರ್ ಎರಡು ಈ ಭಾಗ್ಯದ ಅಧಿಕಾರಿಗಳಾಗಿವೆ. ಬಾಂಬೆಯದ್ದಾಗಿದೆ ಆದರೆ ಈಗ ಯು.ಪಿ.ಯ ಸರದಿಯಾಗಿದೆ. ಡೈರೆಕ್ಟ ತಂದೆ-ತಾಯಿಯ ಶಿಕ್ಷಣಗಳ ಹನಿಗಳು ಯು.ಪಿಯಲ್ಲಿ ಬಿದ್ದಿವೆ. ಈಗ ಯು.ಪಿ.ಯು ಮುಂದೆ ಏನು ಮಾಡಬೇಕು? ವಾಣಿಯ ಮೂಲಕ ಮೇಳಗಳಲ್ಲಿ ಸೇವೆಯಂತು ಮಾಡುತ್ತೀರಿ ಆದರೆ ಈಗ ಸಮಯಾನುಸಾರ ಬಾಪ್ದಾದಾ ಹೇಳುತ್ತ ಬಂದಿದ್ದಾರೆ ಮೊದಲಿನ ವಾರಸುದಾರರು ಮತ್ತು ಪ್ರಸಿದ್ಧ ಮೈಕ್, ಪ್ರಸಿದ್ಧದ ಅರ್ಥ ಆಗಿದೆ ಅವರ ಹೇಳುವ ಪ್ರಭಾವ ಕೇಳುವವರ ಮೇಲೆ ಬೀಳುವಂತದ್ದಾಗಿದೆ, ಇಂತಹ ಮೈಕ್ ತಯಾರಿ ಮಾಡಿ. ಇಂತಹ ವಾರಸುದಾರರ ಗುಂಪು ಪ್ರತಿ ಸೆಂಟರ್ನಲ್ಲಿರಲಿ. ಯು.ಪಿ.ನಲ್ಲಿ ಎಷ್ಟೊಂದು ಸೆಂಟರ್ಗಳಿವೆ, ಬಹಳಷ್ಟಿವೆಯಲ್ಲವೇ. ಅಂದಾಗ ಇಷ್ಟು ಸೇವಾಕೇಂದ್ರಗಳನ್ನು ತೆರೆಯಬೇಕು. ಲೆಕ್ಕ ಮಾಡಿ ಎಷ್ಟೊಂದು ಸೆಂಟರ್ಗಳಿವೆ ಮತ್ತು ಎಷ್ಟು ವಾರಸುದಾರರಾಗಿದ್ದಾರೆ? ಮತ್ತು ಎಷ್ಟು ಆಗಬೇಕು ಅಷ್ಟು ಆಗಿದ್ದಾರೆಯೇ ಅಥವಾ ಇಲ್ಲ? ಒಂದುವೇಳೆ ಆಗಬೇಕೆಂದರೆ ಸಮಯದ ಮೇಲೆ ಯಾವುದೇ ಭರವಸೆಯುಲ್ಲ, ಬೇಗ ಬೇಗ ವಾರಸುದಾರರು ಮತ್ತು ಮೈಕ್ನ್ನು ತಯಾರಿ ಮಾಡಿರಿ, ಯಾರ ಧ್ವನಿಯಿಂದ ಅನೇಕ ಆತ್ಮರ ಭಾಗ್ಯದ ರೇಖೆ ತೆರೆದುಬಿಡಲಿ ಏಕೆಂದರೆ ನೀವಂತು ಬಹಳಷ್ಟು ಸೇವೆಯನ್ನು ಮಾಡಿದಿರಿ, ಯಾರು ಹಳಬರಿದ್ದಾರೆ ಅವರಂತು ಬಹಳ ಸೇವೆಯನ್ನು ಮಾಡಿದ್ದಾರೆ. ಈಗ ಸೇವೆಯನ್ನು ಮಾಡಿಸಿರಿ. ಮಾಡುವರು ತಯಾರಿ ಮಾಡಿರಿ. ಮಾಡಬಹುದಲ್ಲವೇ! ಟೀಚರ್ಸ್ ಕೈ ಎತ್ತಿರಿ. ಒಳ್ಳೆಯದು. ಟೀಚರ್ಸ್ ಬಹಳಷ್ಟಿದ್ದೀರಿ. ಇಷ್ಟೇ ತಯಾರಿ ಮಾಡಿದ್ದೀರಿ. ಪ್ರತಿಯೊಂದು ಸೆಂಟರ್ ಚಿಕ್ಕದಿರಬಹುದು, ಅಥವಾ ದೊಡ್ಡದಿರಬಹುದು, ಸೆಂಟರ್ನ ಲಿಸ್ಟ್ನಲ್ಲಿದ್ದೀರಿ, ಅವಶ್ಯವಾಗಿ ಪ್ರೂಫ್ (ಪುರಾವೆ) ಕೊಡಬೇಕು ಏಕೆಂದರೆ ಸಮಯದ ಯಾವುದೇ ಭರವಸೆಯಿಲ್ಲ. ಯಾವಾಗಾದರೂ ಏನಾದರೂ ಆಗಬಹುದು ಅದಕ್ಕಾಗಿ ಬಾಪ್ದಾದಾ ಎಲ್ಲಾ ಜೋನ್ಗೆ, ಯಾರೆಲ್ಲಾ ಬಂದಿದ್ದಾರೆ, ಬಂದಿಲ್ಲವೋ ಎಲ್ಲಾ ಜೋನ್ನವರಿಗೆ ಇದೇ ಹೇಳುತ್ತಾರೆ ಈಗ ಮುಂದುವರೆಯಿರಿ. ಕ್ಲಾಸ್ಗಳು ನಡೆಯುತ್ತಿರುತ್ತವೆ, ಸಂಖ್ಯೆಯು ಹೆಚ್ಚಾಗುತ್ತಿರುತ್ತದೆ ಆದರೆ ಈಗ ನಿಮಿತ್ತರಾಗುವವರು ಮಾಡಿ ಮತ್ತು ಮಾಡುವುದಕ್ಕಾಗಿ ಬಾಪ್ದಾದಾರವರು ನೋಡಿದ್ದಾರೆ, ಪ್ರತಿ ಜೋನ್ನಲ್ಲಿ ಇಂತಹ ಆತ್ಮರಿರಲಿ ಯಾರು ನಿಮಿತ್ತರಾಗಬಹುದು. ಯು.ಪಿ ದವರು ಒಂದಂತು ಭಕ್ತರ ಕಲ್ಯಾಣವನ್ನು ಮಾಡಿರಿ, ಭಕ್ತರು ಎಂದು ಹೇಳಿಕೊಳ್ಳುವರು ಬಹಳ ಕಡಿಮೆಯಿದ್ದಾರೆ, ಆದರೆ ಭಕ್ತಿಯೂ ಇದೆ. ಅವರಿಗೆ ಭಕ್ತಿಯ ಫಲವನ್ನು ಕೊಡಿಸಿ. ಬಹಳ ಪರಿಶ್ರಮ ಮಡುತ್ತೀರಿ. ಬಾಪ್ದಾದಾರವರು ನೋಡಿದರು ಪ್ರತಿಯೊಬ್ಬರು ತಮ್ಮ ಪುರುಷಾರ್ಥದಲ್ಲಿ ಮುಂದುವರೆಯುತ್ತಿದ್ದಾರೆ ಆದರೆ ಈಗಲೂ ಮುಂದುವರೆಯಲು ಮಾರ್ಜಿನ್ ಇದೆ. ಮಾಡುತ್ತಿದ್ದೀರಿ, ಈ ರೀತಿಯಲ್ಲ, ಮಾಡುತ್ತಿಲ್ಲ. ಮಾಡುತ್ತಿದ್ದೀರಿ ಆದರೆ ಸ್ವಲ್ಪ ಇನ್ನೂ ತೀವ್ರತೆಯನ್ನು ಹೆಚ್ಚಿಸಿರಿ. ಒಳ್ಳೆಯವರಾಗಿದ್ದೀರಿ ಮತ್ತು ಒಳ್ಳೆಯ ಸೇವೆ ಮಾಡುತ್ತೀರಿ. ಎಲ್ಲಾ ದಾದಿಯರು ಸಹ ನಿಮಗೆ ಶುಭಾಷಯಗಳನ್ನು ಕೊಡುತ್ತಾರೆ. ಪಾಂಡವರು ಎಷ್ಟೊಂದು ಜನ ಬಂದಿದ್ದಾರೆ. ಪಾಂಡವರು ಕಡಿಮೆಯೇನಿಲ್ಲ. ಕೆಲ ಸೇವೆಗಳನ್ನು ಪಾಂಡವರೇ ಮಾಡಬಹುದು ಅದಕ್ಕೆ ಪಾಂಡವರಿಗೂ ಬಾಪ್ದಾದಾ ಮತ್ತು ಸರ್ವ ಮಧುಬನ ನಿವಾಸಿಯರು ಶುಭಾಷಯಗಳನ್ನು ಕೊಡುತ್ತಿದ್ದಾರೆ. ಒಳ್ಳೇಯದು.

ವರದಾನ:
ಬುದ್ಧಿಯೆಂಬ ಕಾಲು ಮರ್ಯಾದೆಯ ಗೆರೆಯೊಳಗೆ ಇಡುವಂತಹ ಸರ್ವಪ್ರಾಪ್ತಿ ಸಂಪನ್ನ ಶಕ್ತಿಶಾಲಿ ಭವ.

ಯಾವ ಮಕ್ಕಳ ಬುದ್ಧಿಯೆಂಬ ಕಾಲು, ಮರ್ಯಾದೆಯ ಗೆರೆಯಿಂದ ಸ್ವಲ್ಪವೂ ಹೊರಗೆ ಹೋಗುವುದಿಲ್ಲ, ಅವರು ಲಕ್ಕಿ ಮತ್ತು ಲವಲಿ ಆಗಿ ಬಿಡುತ್ತಾರೆ (ಭಾಗ್ಯಶಾಲಿ ಮತ್ತು ಪ್ರಿಯರು). ಅವರಿಗೆಂದಿಗೂ ವಿಘ್ನ ಅಥವಾ ಬಿರುಗಾಳಿ, ಬೇಸರ, ಆಲಸ್ಯವು ಬರಲು ಸಾಧ್ಯವಿಲ್ಲ. ಒಂದುವೇಳೆ ಬರುತ್ತದೆಯೆಂದರೆ ತಿಳಿದುಕೊಳ್ಳಿರಿ - ಅವಶ್ಯವಾಗಿ ಬುದ್ಧಿಯೆಂಬ ಕಾಲು ಮರ್ಯಾದೆಯ ಗೆರೆಯಿಂದ ಹೊರಗೆ ಹೋಗಿದೆ. ಗೆರೆಯಿಂದ ಹೊರಗಿಡುವುದು ಅರ್ಥಾತ್ ಫಕೀರ(ಭಿಕಾರಿ) ಆಗುವುದಾಗಿದೆ ಆದ್ದರಿಂದ ಎಂದಿಗೂ ಫಕೀರ ಅಂದರೆ ಬೇಡುವವರಲ್ಲ, ಸರ್ವಪ್ರಾಪ್ತಿ ಸಂಪನ್ನ ಶಕ್ತಿಶಾಲಿ ಆಗಿರಿ.

ಸ್ಲೋಗನ್:
ಯಾರು ಸದಾ ಭಿನ್ನ ಹಾಗೂ ತಂದೆಯ ಪ್ರಿಯರಾಗಿದ್ದಾರೆಯೋ ಅವರು ಸುರಕ್ಷಿತವಾಗಿ ಇರುತ್ತಾರೆ.

ಅವ್ಯಕ್ತ ಸೂಚನೆಗಳು:- ಅಪವಿತ್ರತೆಯ ಬೀಜವನ್ನು ಸಮಾಪ್ತಿ ಮಾಡಿ ಸಂಪೂರ್ಣ ಸ್ವಚ್ಛ ( ಪವಿತ್ರ ) ಆಗಿರಿ.

ದೃಢತೆ ಸಫಲತೆಯ ಚಾವಿ ಆಗಿದೆ. ಸಫಲತೆ ನೀವು ಮಕ್ಕಳ ಜನ್ಮಸಿದ್ಧ ಅಧಿಕಾರವಾಗಿದೆ, ಹಾಗಾಗಿ ದೃಢತೆಯನ್ನು ಉಪಯೋಗಿಸಿರಿ, ಹುಡುಗಾಟಿಕೆಯಲ್ಲಿ ಬರಬೇಡಿ, ಆಗಿ ಬಿಡುವುದು, ಮಾಡಿ ಬಿಡುತ್ತೇವೆ... ಈ ರೀತಿ ಯೋಚಿಸಬೇಡಿ. ದೃಢ ಸಂಕಲ್ಪದ ಮನಸ್ಸಿನಿಂದ ವ್ಯರ್ಥ ಸಂಕಲ್ಪವನ್ನು ಸಮಾಪ್ತಿ ಮಾಡಿ ವಿಜಯಿ ಆಗಿ.