02.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ಹೇಗೆ
ನಿಮಗೆ ಈಶ್ವರ ಸರ್ವವ್ಯಾಪಿಯಲ್ಲ, ಅವರು ನಮ್ಮ ತಂದೆಯಾಗಿದ್ದಾರೆ ಎಂದು ನಿಶ್ಚಯವಿದೆ ಹಾಗೆಯೇ
ಅನ್ಯರಿಗೂ ಇದನ್ನು ತಿಳಿಸಿ ನಿಶ್ಚಯ ಮಾಡಿಸಿ ಮತ್ತೆ ಅವರಿಂದ ಅಭಿಪ್ರಾಯವನ್ನು ತೆಗೆದುಕೊಳ್ಳಿ”
ಪ್ರಶ್ನೆ:
ತಂದೆಯು ತನ್ನ
ಮಕ್ಕಳೊಂದಿಗೆ ಯಾವ ಮಾತನ್ನು ಕೇಳುತ್ತಾರೆ, ಅದನ್ನು ಬೇರೆ ಯಾರೂ ಕೇಳಲು ಸಾಧ್ಯವಿಲ್ಲ?
ಉತ್ತರ:
ತಂದೆಯು
ಮಕ್ಕಳೊಂದಿಗೆ ಮಿಲನ ಮಾಡುವಾಗ ಮಕ್ಕಳೇ, ಮೊದಲು ನೀವು ಎಂದಾದರೂ ಮಿಲನ ಮಾಡಿದ್ದೀರಾ? ಎಂದು
ಕೇಳುತ್ತಾರೆ. ಯಾವ ಮಕ್ಕಳಿಗೆ ಇದು ತಿಳಿದಿರುತ್ತದೆಯೋ ಅವರು ತಕ್ಷಣ ಹೇಳುತ್ತಾರೆ- ಹೌದು, ಬಾಬಾ
ನಾವು 5000 ವರ್ಷಗಳ ಮೊದಲು ನಾವು ತಮ್ಮೊಂದಿಗೆ ಮಿಲನ ಮಾಡಿದ್ದೇವು ಎಂದು. ಯಾರಿಗೆ ಗೊತ್ತಿಲ್ಲವೋ
ಅವರು ತಬ್ಬಿಬ್ಬಾಗುತ್ತಾರೆ. ಇಂತಹ ಪ್ರಶ್ನೆಯನ್ನು ಕೇಳುವ ಬುದ್ಧಿ ಬೇರೆ ಯಾರಿಗೂ ಬರುವುದೂ ಇಲ್ಲ.
ತಂದೆಯು ನಿಮಗೆ ಇಡೀ ಕಲ್ಪದ ರಹಸ್ಯವನ್ನು ತಿಳಿಸುತ್ತಾರೆ.
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ಬೇಹದ್ದಿನ ತಂದೆಯು ತಿಳಿಸುತ್ತಾರೆ- ಇಲ್ಲಿ ನೀವು ತಂದೆಯ
ಸಮ್ಮುಖದಲ್ಲಿ ಕುಳಿತಿದ್ದೀರಿ. ಈ ವಿಚಾರದಿಂದಲೇ ಮನೆಯಿಂದ ಹೊರಡುತ್ತೀರಿ- ನಾವು ಶಿವತಂದೆಯ ಬಳಿಗೆ
ಹೋಗುತ್ತೇವೆ, ಯಾರು ಬ್ರಹ್ಮಾರವರ ರಥದಲ್ಲಿ ಬಂದು ನಮಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಿದ್ದಾರೆ.
ನಾವು ಸ್ವರ್ಗದಲ್ಲಿದ್ದೇವು. ನಂತರ 84 ಜನ್ಮಗಳ ಚಕ್ರವನ್ನು ಸುತ್ತಿ ಈಗ ನರಕದಲ್ಲಿದ್ದೇವೆ.
ಮತ್ತ್ಯಾವುದೇ ಸತ್ಸಂಗದಲ್ಲಿ ಯಾರ ಬುದ್ಧಿಯಲ್ಲಿಯೂ ಈ ಮಾತುಗಳಿರುವುದಿಲ್ಲ. ನಿಮಗೆ ಗೊತ್ತಿದೆ-
ನಾವು ಶಿವತಂದೆಯ ಬಳಿ ಹೋಗುತ್ತೇವೆ, ಅವರು ಈ ರಥದಲ್ಲಿ ಬಂದು ಓದಿಸುತ್ತಾರೆ. ಅವರು ನಾವಾತ್ಮರನ್ನು
ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಬೇಹದ್ದಿನ ತಂದೆಯಿಂದ ಅವಶ್ಯವಾಗಿ ಬೇಹದ್ದಿನ ಆಸ್ತಿಯು
ಸಿಗಬೇಕಾಗಿದೆ. ಇದನ್ನಂತೂ ತಂದೆಯು ತಿಳಿಸಿದ್ದಾರೆ ನಾನು ಸರ್ವವ್ಯಾಪಿಯಲ್ಲ, ಪಂಚವಿಕಾರಗಳು
ಸರ್ವವ್ಯಾಪಕವಾಗಿದೆ. ನಿಮ್ಮಲ್ಲಿಯೂ ಪಂಚವಿಕಾರಗಳಿವೆ. ಆದ್ದರಿಂದ ಮಹಾನ್ ದುಃಖಿಗಳಾಗಿದ್ದೀರಿ. ಈಗ
ಈಶ್ವರನು ಸರ್ವವ್ಯಾಪಿಯಲ್ಲ ಎಂಬ ಅಭಿಪ್ರಾಯವನ್ನು ಅವಶ್ಯವಾಗಿ ಬರೆಸಬೇಕಾಗಿದೆ. ನೀವು ಮಕ್ಕಳಿಗಂತೂ
ಸರಿಯಾದ ನಿಶ್ಚಯವಿದೆ- ಈಶ್ವರ ತಂದೆಯು ಸರ್ವವ್ಯಾಪಿಯಲ್ಲ. ತಂದೆಯು ಪಾರಲೌಕಿಕ ತಂದೆ, ಪರಮಶಿಕ್ಷಕ,
ಪರಮ ಸದ್ಗುರುವಾಗಿದ್ದಾರೆ. ಬೇಹದ್ದಿನ ಸದ್ಗತಿದಾತನಾಗಿದ್ದಾರೆ, ಅವರೇ ಶಾಂತಿಯನ್ನು
ನೀಡುವವರಾಗಿದ್ದಾರೆ. ಮತ್ತ್ಯಾವುದೇ ಸ್ಥಾನಗಳಲ್ಲಿ ಏನು ಸಿಗಬೇಕೆಂಬ ವಿಚಾರವನ್ನೂ ಯಾರೂ
ಮಾಡುವುದಿಲ್ಲ. ಕೇವಲ ಕನರಸವಾದ ರಾಮಾಯಣ, ಗೀತೆ ಇತ್ಯಾದಿಗಳನ್ನು ಹೋಗಿ ಕೇಳುತ್ತಾರೆ. ಬುದ್ಧಿಯಲ್ಲಿ
ಅರ್ಥವೇನೂ ಇಲ್ಲ. ಮೊದಲು ನಾವು ಪರಮಾತ್ಮ ಸರ್ವವ್ಯಾಪಿ ಎಂದು ಹೇಳುತ್ತಿದ್ದೇವು. ಈಗ ತಂದೆಯು
ತಿಳಿಸುತ್ತಾರೆ- ಇದಂತೂ ಸುಳ್ಳಾಗಿದೆ. ಬಹಳ ನಿಂದನೆಯ ಮಾತಾಗಿದೆ. ಆದ್ದರಿಂದ ಈ ಅಭಿಪ್ರಾಯ (ಅನಿಸಿಕೆ)ವು
ಬಹಳ ಅವಶ್ಯಕ. ವರ್ತಮಾನ ಸಮಯದಲ್ಲಂತೂ ಯಾರಿಂದ ನೀವು ಉದ್ಘಾಟನೆ ಇತ್ಯಾದಿಯನ್ನು ಮಾಡಿಸುತ್ತೀರೋ ಆಗ
ಅವರು ಬ್ರಹ್ಮಕುಮಾರಿಯರು ಬಹಳ ಒಳ್ಳೆಯ ಕೆಲಸ ಮಾಡುತ್ತಾರೆ. ಬಹಳ ಚೆನ್ನಾಗಿ ತಿಳಿಸುತ್ತಾರೆ.
ಈಶ್ವರನನ್ನು ಪ್ರಾಪ್ತಿ ಮಾಡಿಕೊಳ್ಳುವ ಮಾರ್ಗವನ್ನು ತಿಳಿಸುತ್ತಾರೆಂದು ಬರೆಯುತ್ತಾರೆ. ಇದರಿಂದ
ಕೇವಲ ಮನುಷ್ಯರ ಮನಸ್ಸಿನ ಮೇಲೆ ಬಹಳ ಒಳ್ಳೆಯ ಪ್ರಭಾವ ಬೀರುತ್ತದೆ. ಆದರೆ ಈಶ್ವರನು
ಸರ್ವವ್ಯಾಪಿಯಾಗಿದ್ದಾರೆಂದು ಏನು ಮನುಷ್ಯರು ಹೇಳುತ್ತಾರೆ. ಇದು ಬಹಳ ತಪ್ಪಾಗಿದೆಯೆಂಬ
ಅನಿಸಿಕೆಯನ್ನು ಯಾರೂ ಬರೆದುಕೊಡುವುದಿಲ್ಲ. ಈಶ್ವರನಂತೂ ತಂದೆ, ಶಿಕ್ಷಕ, ಗುರುವಾಗಿದ್ದಾರೆ. ಮೊದಲ
ಮುಖ್ಯಮಾತೇ ಇದಾಗಿದೆ. ಎರಡನೇಯದಾಗಿ ಇವರು ತಿಳಿಸುವುದರಿಂದ ಗೀತೆಯ ಭಗವಂತನು ಕೃಷ್ಣನಲ್ಲಿ ಎಂದು
ನಮಗೆ ಅರ್ಥವಾಯಿತು. ಭಗವಂತನು ಯಾವುದೇ ಮನುಷ್ಯ ಅಥವಾ ದೇವತೆಗೆ ಹೇಳುವುದಿಲ್ಲ. ಭಗವಂತ ಒಬ್ಬರೇ
ಆಗಿದ್ದಾರೆ. ಅವರು ತಂದೆಯಾಗಿದ್ದಾರೆ. ಆ ತಂದೆಯಿಂದಲೇ ಸುಖ, ಶಾಂತಿಯ ಆಸ್ತಿಯು ಸಿಗುತ್ತದೆಯೆಂಬ
ಅಭಿಪ್ರಾಯವನ್ನು ಬರೆಸಿಕೊಳ್ಳಬೇಕು. ಈಗ ನೀವು ಯಾವ ಅನಿಸಿಕೆಯನ್ನು ಬರೆಸಿಕೊಳ್ಳುತ್ತಿದ್ದೀರೋ
ಅದೇನೂ ಪ್ರಯೋಜನವಿಲ್ಲ. ಇಲ್ಲಿ ಬಹಳ ಒಳ್ಳೆಯ ಶಿಕ್ಷಣವನ್ನು ಕೊಡುತ್ತಾರೆ ಎಂಬುದನ್ನಷ್ಟೇ
ಬರೆಯುತ್ತಾರೆ ಆದರೆ ಮುಖ್ಯಮಾತು ಯಾವುದರಲ್ಲಿ ನಿಮ್ಮ ವಿಜಯವಾಗಬೇಕಾಗಿದೆಯೋ ಅದನ್ನೂ ಬರೆಸಿಕೊಳ್ಳಿ.
ಈ ಬ್ರಹ್ಮಾಕುಮಾರಿಯರು ಈಶ್ವರ ಸರ್ವವ್ಯಾಪ್ತಿಯಲ್ಲ ಎಂದು ಸತ್ಯವನ್ನು ಹೇಳುತ್ತಾರೆ. ಅವರಂತೂ
ತಂದೆಯಾಗಿದ್ದಾರೆ. ಅವರೇ ಗೀತೆಯ ಭಗವಂತನಾಗಿದ್ದಾರೆ, ತಂದೆಯು ಬಂದು ಭಕ್ತಿಮಾರ್ಗದಿಂದ ಬಿಡಿಸಿ
ಜ್ಞಾನವನ್ನು ಕೊಡುತ್ತಾರೆ. ಪತಿತ-ಪಾವನ ನೀರಿನ ಗಂಗೆಯಲ್ಲ ಆದರೆ ಒಬ್ಬ ತಂದೆಯಾಗಿದ್ದಾರೆ ಎಂಬ
ಅಭಿಪ್ರಾಯವು ಬಹಳ ಅವಶ್ಯಕವಾಗಿದೆ. ಯಾವಾಗ ಈ ರೀತಿಯ ಅಭಿಪ್ರಾಯವನ್ನು ಬರೆಯುವರೋ ಆಗಲೇ ನಿಮ್ಮ
ವಿಜಯವಾಗುತ್ತದೆ. ಇನ್ನೂ ಸಮಯವಿದೆ, ಈಗ ನಿಮ್ಮ ಯಾವ ಸರ್ವೀಸ್ ನಡೆಯುತ್ತದೆ. ಇಷ್ಟೊಂದು
ಖರ್ಚಾಗುತ್ತದೆ. ಇದನ್ನು ನೀವು ಮಕ್ಕಳೇ ಪರಸ್ಪರ ಸಹಯೋಗ ನೀಡುತ್ತೀರಿ. ಹೊರಗಿನವರಿಗಂತೂ ಏನೂ
ತಿಳಿದೇ ಇಲ್ಲ. ನೀವೇ ನಿಮ್ಮ ತನು-ಮನ-ಧನದಿಂದ ಖರ್ಚು ಮಾಡಿ ತಮಗಾಗಿ ರಾಜಧಾನಿಯನ್ನು ಸ್ಥಾಪನೆ
ಮಾಡುತ್ತೀರಿ. ಯಾರು ಮಾಡುವವರೋ ಅವರು ಪಡೆಯುವರು. ಯಾರು ಮಾಡುವುದಿಲ್ಲವೋ ಅವರು ಪಡೆಯುವುದಿಲ್ಲ.
ಕಲ್ಪ-ಕಲ್ಪವೂ ನೀವೇ ಪಡೆಯುತ್ತೀರಿ. ನೀವೇ ನಿಶ್ಚಯಬುದ್ಧಿಯವರಾಗುತ್ತೀರಿ. ನಿಮಗೆ ತಿಳಿದಿದೆ-ಬಾಬಾ
ತಂದೆಯೂ, ಶಿಕ್ಷಕನೂ ಆಗಿದ್ದಾರೆ ಗೀತಾಜ್ಞಾನವನ್ನೂ ಯಥಾರ್ಥವಾಗಿ ತಿಳಿಸುತ್ತಾರೆ.
ಭಕ್ತಿಮಾರ್ಗದಲ್ಲಿ ಭಲೇ ಗೀತೆಯನ್ನು ಕೇಳುತ್ತಾ ಬಂದಿರಿ ಆದರೆ ರಾಜ್ಯವನ್ನು ಪ್ರಾಪ್ತಿ
ಮಾಡಿಕೊಂಡಿರಾ? ಈಶ್ವರನ ಮತದ ಬದಲಾಗಿ ಆಸುರೀ ಮತವಾಯಿತು. ನಡುವಳಿಕೆಯು ಹಾಳಾಗುತ್ತಾ
ಪತಿತರಾಗಿಬಿಟ್ಟಿರಿ. ಕುಂಭಮೇಳದಲ್ಲಿ ಇಷ್ಟೊಂದು ಕೋಟ್ಯಾಂತರ ಲೆಕ್ಕದಲ್ಲಿ ಹೋಗುತ್ತಾರೆ. ಎಲ್ಲಿ
ನೀರು ಕಂಡರೆ ಅಲ್ಲಿಗೆ ಹೋಗುತ್ತಾರೆ. ನೀರಿನಿಂದಲೇ ಪಾವನರಾಗುತ್ತೇವೆಂದು ತಿಳಿಯುತ್ತಾರೆ. ಈಗ
ನೀರಂತೂ ಎಲ್ಲೆಲ್ಲಿಂದಲೋ ನದಿಗಳಿಂದ ಬರುತ್ತಿರುತ್ತದೆ. ಇದರಿಂದ ಯಾರಾದರೂ ಪಾವನರಾಗಲು ಸಾಧ್ಯವೇ!
ನೀರಿನಲ್ಲಿ ಸ್ನಾನ ಮಾಡುವುದರಿಂದ ನಾವು ಪತಿತರಿಂದ ಪಾವನರಾಗಿ ದೇವತೆಗಳಾಗಿಬಿಡುತ್ತೇವೆಯೇ! ಈಗ
ನೀವು ತಿಳಿದುಕೊಂಡಿದ್ದೀರಿ ಇದರಿಂದ ಯಾರೂ ಪಾವನರಾಗಲು ಸಾಧ್ಯವಿಲ್ಲ. ಇದು ತಪ್ಪಾಗಿದೆ ಅಂದಾಗ ಈ
ಮೂರು ಮಾತುಗಳ ಅಭಿಪ್ರಾಯವನ್ನು ದೊಡ್ಡ ವ್ಯಕ್ತಿಗಳಿಂದ ಬರೆಸಿಕೊಳ್ಳಬೇಕು. ಈಗ ಕೇವಲ ಸಂಸ್ಥೆಯು
ಚೆನ್ನಾಗಿದೆ ಎಂದಷ್ಟೇ ಹೇಳುತ್ತಾರೆ. ಆದರೆ ಮುಂದೆ ಅನೇಕರಲ್ಲಿ ಈ ಬ್ರಹ್ಮಾಕುಮಾರಿಯರಲ್ಲಿ
ಚಮತ್ಕಾರವಿದೆ, ಮನೆ-ಮಠವನ್ನು ಬಿಡಿಸುತ್ತಾರೆ ಎಂಬ ಯಾವ ಭ್ರಾಂತಿಗಳು ತುಂಬಿದೆಯೋ ಅದೆಲ್ಲಾ
ವಿಚಾರಗಳು ದೂರವಾಗಿಬಿಡುತ್ತದೆ ಏಕೆಂದರೆ ಬಹಳಷ್ಟು ತಂದೆಯ ಸಂದೇಶ ಹರಡಿದೆಯಲ್ಲವೆ. ವಿದೇಶದವರೆಗೂ
ಸಹ ಈ ಸುದ್ಧಿಯು ಹೋಗಿತ್ತು- ಇವರಿಗೆ (ಬ್ರಹ್ಮಾ) 16,108 ರಾಣಿಯರು ಬೇಕು ಅದರಲ್ಲಿ 400 ಜನ
ಸಿಕ್ಕಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು ಏಕೆಂದರೆ ಆ ಸಮಯದಲ್ಲಿ ಸತ್ಸಂಗದಲ್ಲಿ 400 ಜನ
ಬರುತ್ತಿದ್ದರು. ಅನೇಕರು ವಿರೋಧ ಮಾಡಿದರು. ಪಿಕೆಟಿಂಗ್ ಇತ್ಯಾದಿಯನ್ನು ಮಾಡುತ್ತಿದ್ದರು ಆದರೆ
ತಂದೆಯ ಮುಂದೆ ಯಾರದೇನೂ ನಡೆಯುವುದಿಲ್ಲ. ಈ ಜಾದುಗಾರನು ಎಲ್ಲಿಂದ ಬಂದರೆಂದು ಎಲ್ಲರೂ
ಹೇಳುತ್ತಿದ್ದರು. ನಂತರ ಈ ಅದ್ಭುತವನ್ನು ನೋಡಿ, ಬಾಬಾರವರು ಕರಾಚಿಯಲ್ಲಿದ್ದರು. ಆಗ ಇಡೀ ಗುಂಪು
ಪರಸ್ಪರ ಸೇರಿ ಮನೆಯಿಂದ ಓಡಿಬಂದರು. ಕೆಲವರಿಗಂತೂ ನಾವು ವಿಚಾರವನ್ನೂ ಮಾಡಲಿಲ್ಲ. ನಂತರ ತಕ್ಷಣ
ಭಂಗಲೆಯನ್ನು ತೆಗೆದುಕೊಂಡರು ಅಂದಾಗ ಇದು ಹೇಗೆ ಜಾದುವಿನ ಮಾತಾಯಿತಲ್ಲವೆ! ಈಗಲೂ ಸಹ ಇವರು
ಜಾದೂಗಾರಿಣಿ ಆಗಿದ್ದಾರೆ. ಬ್ರಹ್ಮಕುಮಾರಿಯರ ಬಳಿ ಹೋಗುತ್ತೀರೆಂದರೆ ಮತ್ತೆ ಹಿಂತಿರುಗಿ
ಬರುವುದಿಲ್ಲ. ಇವರು ಸ್ತ್ರೀ-ಪುರುಷರನ್ನು ಸಹೋದರ-ಸಹೋದರಿಯರನ್ನಾಗಿ ಮಾಡಿಬಿಡುತ್ತಾರೆಂದು ಹೇಳುವರು.
ಇದರಿಂದ ಅನೇಕರು ಬರುವುದಿಲ್ಲ. ಈಗ ನಿಮ್ಮ ಪ್ರದರ್ಶನಿ ಇತ್ಯಾದಿಯನ್ನು ನೋಡಿ ಅವರ ಬುದ್ಧಿಯಲ್ಲಿ
ಯಾವ ಮಾತುಗಳು ಕುಳಿತಿವೆಯೋ ಅವು ದೂರವಾಗುತ್ತದೆ. ಆದರೆ ತಂದೆಯು ಯಾವ ಅಭಿಪ್ರಾಯವನ್ನು ಇಚ್ಛಿಸುವರೋ
ಅದನ್ನು ಬರೆಯುವುದಿಲ್ಲ. ತಂದೆಗೆ ಈ ಅಭಿಪ್ರಾಯವು ಬೇಕು- ಗೀತೆಯ ಭಗವಂತನು ಕೃಷ್ಣನಲ್ಲ ಎಂಬುದನ್ನು
ಬರೆಯಬೇಕು. ಇಡೀ ಪ್ರಪಂಚವು ಕೃಷ್ಣ ಭಗವಾನುವಾಚ ಎಂದು ತಿಳಿಯುತ್ತಾರೆ. ಆದರೆ ಕೃಷ್ಣನು ಪೂರ್ಣ 84
ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ಶಿವತಂದೆಯು ಪುನರ್ಜನ್ಮ ರಹಿತನಾಗಿದ್ದಾರೆ. ಅದರಲ್ಲಿ ಅನೇಕರ
ಅಭಿಪ್ರಾಯವು ಬೇಕು. ಗೀತೆಯನ್ನು ಕೇಳುವವರು ಅನೇಕರಿದ್ದಾರೆ. ನಂತರ ಗೀತೆಯ ಭಗವಂತನು ಪರಮಪಿತ
ಪರಮಾತ್ಮ ಶಿವನಾಗಿದ್ದಾರೆ. ಅವರೇ ತಂದೆ ಶಿಕ್ಷಕ ಸರ್ವರ ಸದ್ಗತಿದಾತನಾಗಿದ್ದಾರೆ. ಕೇವಲ ಅವರಿಂದಲೇ
ಶಾಂತಿ ಮತ್ತು ಸುಖದ ಆಸ್ತಿಯು ಸಿಗುತ್ತದೆಯೆಂದು ಪತ್ರಿಕೆಯಲ್ಲಿ ಬರುವುದನ್ನು ನೋಡುತ್ತಾರೆ.
ಉಳಿದಂತೆ ಈಗ ನೀವು ಸಂದೇಶವನ್ನು ಕೊಡಲು ಪರಿಶ್ರಮಪಡುತ್ತೀರಿ. ಉದ್ಘಾಟನೆ ಮಾಡಿಸುತ್ತೀರಿ. ಇದರಿಂದ
ಕೇವಲ ಮನುಷ್ಯರ ಭ್ರಾಂತಿಯು ದೂರವಾಗುತ್ತದೆ. ಒಳ್ಳೆಯ ತಿಳುವಳಿಕೆ ಸಿಗುತ್ತದೆ. ಆದರೆ ತಂದೆಯು ಯಾವ
ಅಭಿಪ್ರಾಯ ಬರೆಯುವುದನ್ನು ಇಚ್ಛಿಸುತ್ತಾರೆಯೋ ಆ ಮುಖ್ಯ ಅಭಿಪ್ರಾಯವು ಇದಾಗಿದೆ. ಈಗಂತೂ ಕೇವಲ ಈ
ಸಂಸ್ಥೆಯು ಬಹಳ ಚೆನ್ನಾಗಿದೆಯೆಂದಷ್ಟೆ ಅಭಿಪ್ರಾಯವನ್ನು ಕೊಡುವರು. ಇದರಿಂದ ಏನಾಗುವುದು! ಹಾ ಮುಂದೆ
ಹೋದಂತೆ ಯಾವಾಗ ವಿನಾಶ ಮತ್ತು ಸ್ಥಾಪನೆಯು ಸಮೀಪಕ್ಕೆ ಬರುವುದೋ ಆಗ ನಿಮಗೆ ಈ ಅಭಿಪ್ರಾಯವು
ಸಿಗುತ್ತದೆ. ಪೂರ್ಣ ಅರಿತುಕೊಂಡು ಬರೆಯುತ್ತಾರೆ. ಈಗ ನಿಮ್ಮ ಬಳಿ ಬರತೊಡಗಿದ್ದಾರಲ್ಲವೆ. ಈಗ ನಿಮಗೆ
ಜ್ಞಾನ ಸಿಕ್ಕಿದೆ- ಒಬ್ಬ ತಂದೆಯ ಮಕ್ಕಳು ನಾವೆಲ್ಲರೂ ಪರಸ್ಪರ ಸಹೋದರರಾಗಿದ್ದೇವೆ. ಇದನ್ನು
ಅನ್ಯರಿಗೆ ತಿಳಿಸುವುದು ಬಹಳ ಸಹಜವಾಗಿದೆ. ಎಲ್ಲಾ ಆತ್ಮಗಳ ತಂದೆಯು ಒಬ್ಬರೇ ಪಾರಲೌಕಿಕ
ತಂದೆಯಾಗಿದ್ದಾರೆ. ಅದರಿಂದ ಅವಶ್ಯವಾಗಿ ಬೇಹದ್ದಿನ ಪದವಿಯೇ ಸಿಗಬೇಕು. ಅದು ನಿಮಗೆ 5000 ವರ್ಷಗಳ
ಹಿಂದೆ ಸಿಕ್ಕಿತ್ತು. ಅವರು ಕಲಿಯುಗದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ನೀವು
5000 ವರ್ಷಗಳೆಂದು ಹೇಳುತ್ತೀರಿ ಎಷ್ಟೊಂದು ಅಂತರವಿದೆ!
ತಂದೆಯು ತಿಳಿಸುತ್ತಾರೆ-
5000 ವರ್ಷಗಳ ಹಿಂದೆ ವಿಶ್ವದಲ್ಲಿ ಶಾಂತಿಯಿತ್ತು. ಈ ಗುರಿ-ಧ್ಯೇಯವು ಸಮ್ಮುಖದಲ್ಲಿ ನಿಂತಿದೆ.
ಇವರ (ಲಕ್ಷ್ಮೀ-ನಾರಾಯಣ) ರಾಜ್ಯದಲ್ಲಿ ವಿಶ್ವದಲ್ಲಿ ಶಾಂತಿಯಿತ್ತು, ಅಂತಹ ರಾಜಧಾನಿಯನ್ನು ನಾವು
ಮತ್ತೆ ಸ್ಥಾಪನೆ ಮಾಡುತ್ತಿದ್ದೇವೆ. ಇಡೀ ವಿಶ್ವದಲ್ಲಿ ಸುಖ-ಶಾಂತಿಯಿತ್ತು, ದುಃಖದ ಯಾವುದೇ
ಹೆಸರಿರಲಿಲ್ಲ. ಈಗಂತೂ ಅಪಾರ ದುಃಖವಿದೆ, ನಾವು ನಮ್ಮದೇ ತನು-ಮನ-ಧನದಿಂದ ಗುಪ್ತರೀತಿಯಲ್ಲಿ ಈ
ಸುಖ-ಶಾಂತಿಯ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ತಂದೆಯೂ ಗುಪ್ತವಾಗಿದ್ದಾರೆ. ಜ್ಞಾನವು
ಗುಪ್ತವಾಗಿದೆ. ನಿಮ್ಮ ಪುರುಷಾರ್ಥವೂ ಗುಪ್ತವಾಗಿದೆ. ಆದ್ದರಿಂದ ತಂದೆಯು ಗೀತೆ-ಕವಿತೆ
ಇತ್ಯಾದಿಗಳನ್ನು ಇಷ್ಟಪಡುವುದಿಲ್ಲ. ಅವು ಭಕ್ತಿಮಾರ್ಗವಾಗಿದೆ. ಇಲ್ಲಂತೂ ಮೌನವಾಗಿರಬೇಕಾಗಿದೆ.
ಶಾಂತಿಯಿಂದ ನಡೆದಾಡುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಬೇಕು. ಬುದ್ಧಿಯಲ್ಲಿ
ಸೃಷ್ಠಿಚಕ್ರವನ್ನು ತಿರುಗಿಸಬೇಕು. ಈಗ ನಮ್ಮದು ಹಳೆಯ ಪ್ರಪಂಚದಲ್ಲಿ ಅಂತಿಮ ಜನ್ಮವಾಗಿದೆ. ಮತ್ತೆ
ನಾವು ಹೊಸಪ್ರಪಂಚದಲ್ಲಿ ಮೊದಲ ಜನ್ಮ ತೆಗೆದುಕೊಳ್ಳುತ್ತೇವೆ ಅಂದಾಗ ಆತ್ಮವು ಅವಶ್ಯವಾಗಿ
ಪವಿತ್ರವಾಗಲೇಬೇಕು. ಈಗಂತೂ ಎಲ್ಲಾ ಆತ್ಮಗಳು ಪವಿತ್ರರಾಗಿದ್ದಾರೆ. ನೀವು ಆತ್ಮವನ್ನು
ಪವಿತ್ರವನ್ನಾಗಿ ಮಾಡಿಕೊಳ್ಳಲು ತಂದೆಯೊಂದಿಗೆ ಬುದ್ಧಿಯೋಗವನ್ನು ಇಡುತ್ತೀರಿ. ಸ್ವಯಂ ತಂದೆಯೇ
ತಿಳಿಸುತ್ತಾರೆ- ಮಕ್ಕಳೇ, ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಡಿ. ತಂದೆಯು ಹೊಸ ಪ್ರಪಂಚವನ್ನು
ತಯಾರು ಮಾಡುತ್ತಿದ್ದಾರೆ. ಅವರನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತದೆ. ಅರೆ! ಯಾವ
ತಂದೆಯು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆಯೋ ಅಂತಹ ತಂದೆಯನ್ನು ನೀವು ಹೇಗೆ
ಮರೆತುಹೋಗುತ್ತೀರಿ. ಆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಈ ಅಂತಿಮ ಜನ್ಮದಲ್ಲಿ ಕೇವಲ ಪವಿತ್ರರಾಗಿ,
ಈಗ ಈ ಮೃತ್ಯುಲೋಕದ ವಿನಾಶವು ಸಮ್ಮುಖದಲ್ಲಿ ನಿಂತಿದೆ. ಈ ವಿನಾಶವು ಇಲ್ಲಿಗೆ 5000 ವರ್ಷಗಳ
ಹಿಂದೆಯೂ ಆಗಿತ್ತು. ಇದು ಸ್ಮೃತಿಯಲ್ಲಿ ಬರುತ್ತದೆಯಲ್ಲವೆ. ತಮ್ಮ ರಾಜ್ಯವಿದ್ದಾಗ ಮತ್ತ್ಯಾವುದೇ
ಧರ್ಮವಿರಲಿಲ್ಲ. ತಂದೆಯ ಬಳಿ ಯಾರೇ ಬರುತ್ತಾರೆಂದರೆ ಅವರೊಂದಿಗೆ ಕೇಳುತ್ತೇನೆ- ಮೊದಲು ಎಂದಾದರೂ
ಮಿಲನ ಮಾಡಿದ್ದೀರಾ? ಯಾರು ತಿಳಿದುಕೊಂಡಿರುತ್ತಾರೆಯೋ ಅವರು ಹೌದು, 5000 ವರ್ಷಗಳ ಮೊದಲು ಮಿಲನ
ಮಾಡಿದ್ದೇವೆಂದು ತಕ್ಷಣ ಹೇಳಿಬಿಡುತ್ತಾರೆ. ಕೆಲವರು ಹೊಸಬರು ಬರುತ್ತಾರೆಂದರೆ ಅವರು ಈ ಮಾತನ್ನು
ಕೇಳಿ ತಬ್ಬಿಬ್ಬಾಗುತ್ತಾರೆ. ಆಗ ಬ್ರಾಹ್ಮಿಣಿಯು ಇವರಿಗೆ ತಿಳಿಸಿಲ್ಲವೆಂದು ತಿಳಿಯುತ್ತಾರೆ. ನಂತರ
ಆಲೋಚಿಸಿ ಆಗ ಸ್ಮೃತಿಗೆ ಬರುತ್ತದೆ ಎಂದು ಹೇಳುತ್ತಾರೆ. ಈ ಮಾತನ್ನು ಮತ್ತ್ಯಾರೂ ಕೇಳಲು
ಸಾಧ್ಯವಿಲ್ಲ. ಕೇಳುವಂತಹ ಬುದ್ಧಿಯು ಯಾರಿಗೂ ಬರುವುದಿಲ್ಲ. ಈ ಮಾತುಗಳು ಅವರಿಗೇನು ಗೊತ್ತು? ಯಾರು
ನಿಮ್ಮ ಕುಲದವರಾಗಿದ್ದಾರೆಯೋ ಅವರು ಮುಂದೆಹೋದಂತೆ ನಿಮ್ಮ ಬಳಿ ಬಂದು ಕೇಳುತ್ತಾರೆ. ಪ್ರಪಂಚವು
ಅವಶ್ಯವಾಗಿ ಬದಲಾಗಲಿದೆ. ಚಕ್ರದ ರಹಸ್ಯವನ್ನಂತೂ ತಿಳಿಸಲಾಗಿದೆ. ಈಗ ಹೊಸಪ್ರಪಂಚದಲ್ಲಿ
ಹೋಗಬೇಕಾಗಿದೆ. ಈ ಹಳೆಯ ಪ್ರಪಂಚವನ್ನು ಮರೆತುಹೋಗಿ ತಂದೆಯು ಹೊಸ ಪ್ರಪಂಚವನ್ನು
ನಿರ್ಮಿಸುತ್ತಾರೆಂದರೆ ಬುದ್ದಿಯು ಅದರ ಕಡೆಗೆ ಹೊರಟು ಹೋಗುತ್ತದೆ. ಮತ್ತೆ ಹಳೆಯ ಮನೆಯಲ್ಲಿ
ಮಮತ್ವವಿರುವುದಿಲ್ಲ. ಹಾಗೆಯೇ ಇದು ಬೇಹದ್ದಿನ ಮಾತಾಗಿದೆ. ತಂದೆಯು ಹೊಸಪ್ರಪಂಚ, ಸ್ವರ್ಗವನ್ನು
ಸ್ಥಾಪನೆ ಮಾಡುತ್ತಿದ್ದಾರೆ. ಆದ್ದರಿಂದ ಈಗ ಈ ಹಳೆಯ ಪ್ರಪಂಚವನ್ನು ನೋಡುತ್ತಿದ್ದರೂ ನೋಡದಂತಿರಿ.
ಮಮತ್ವವು ಹೊಸ ಪ್ರಪಂಚದಲ್ಲಿರಲಿ, ಈ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿರಲಿ, ಅವರಂತೂ ಹಠಯೋಗದಿಂದ
ಹದ್ದಿನ ಸನ್ಯಾಸ ಮಾಡಿ ಹೋಗಿ ಕಾಡಿನಲ್ಲಿ ಕುಳಿತುಕೊಳ್ಳುತ್ತಾರೆ. ನಿಮ್ಮದು ಹಳೆಯ ಪ್ರಪಂಚದೊಂದಿಗೆ
ವೈರಾಗ್ಯವಿದೆ, ಇದರಲ್ಲಿ ಅಪಾರ ದುಃಖವಿದೆ. ಹೊಸ ಸತ್ಯಯುಗಿ ಪ್ರಪಂಚದಲ್ಲಿ ಅಪಾರ ಸುಖವಿರುತ್ತದೆ.
ಅಂದಮೇಲೆ ಅವಶ್ಯವಾಗಿ ಅದನ್ನು ನೆನಪು ಮಾಡಿ. ಇಲ್ಲಿ ಎಲ್ಲರೂ ದುಃಖ ಕೊಡುವವರಾಗಿದ್ದಾರೆ.
ತಂದೆ-ತಾಯಿ ಮೊದಲಾದವರೆಲ್ಲರೂ ವಿಕಾರದಲ್ಲಿ ಬೀಳಿಸುತ್ತಾರೆ ತಂದೆಯು ತಿಳಿಸುತ್ತಾರೆ- ಕಾಮ
ಮಹಾಶತ್ರುವಾಗಿದೆ. ಅದನ್ನು ಜಯಿಸುವುದರಿಂದಲೇ ನೀವು ಜಗತ್ಜೀತರಾಗುತ್ತೀರಿ. ಈ ರಾಜಯೋಗವನ್ನು
ತಂದೆಯೇ ಕಲಿಸುತ್ತಾರೆ. ಇದರಿಂದ ನಾವು ಈ ಪದವಿಯನ್ನು ಪಡೆಯುತ್ತೇವೆ. ಹೇಳಿ, ನಮಗೆ ಸ್ವಪ್ನದಲ್ಲಿ
ಭಗವಂತನು ಹೇಳುತ್ತಾರೆ- ಪಾವನರಾದರೆ ಸ್ವರ್ಗದ ರಾಜ್ಯಭಾಗ್ಯವು ಸಿಗುವುದು. ಆದ್ದರಿಂದ ಈಗ ನಾನು ಈ
ಒಂದು ಜನ್ಮ ಅಪವಿತ್ರರಾಗಿ ತನ್ನ ರಾಜ್ಯಭಾಗ್ಯವನ್ನು ಕಳೆದುಕೊಳ್ಳಬೇಕೆ! ಈ ಪವಿತ್ರತೆಯ ಮೇಲೆಯೇ
ಜಗಳವಾಗುತ್ತದೆ. ಈ ದುಶ್ಯಾಸನನು ನನ್ನನ್ನು ಅಪವಿತ್ರಳನ್ನಾಗಿ ಮಾಡುತ್ತಾನೆ ಎಂದು ದ್ರೌಪದಿಯು
ಕರೆದಳು. ದ್ರೌಪದಿಗೆ ಕೃಷ್ಣನನು 21 ಸೀರೆಗಳನ್ನು ಕೊಡುತ್ತಾರೆಂದು ಈ ಆಟ(ದೃಶ್ಯ)ವನ್ನು
ತೋರಿಸುತ್ತಾರೆ. ಈಗ ತಂದೆಯು ಕುಳಿತು ತಿಳಿಸುತ್ತಾರೆ- ಎಷ್ಟೊಂದು ದುರ್ಗತಿಯಾಗಿದೆ. ಅಪಾರ
ದುಃಖವಿದೆ. ಸತ್ಯಯುಗದಲ್ಲಿ ಅಪಾರ ಸುಖವಿತ್ತು, ಈಗ ನಾನು ಅನೇಕ ಧರ್ಮಗಳ ವಿನಾಶ ಮತ್ತು ಒಂದು
ಸದ್ಧರ್ಮದ ಸ್ಥಾಪನೆ ಮಾಡಲು ನಾನು ಬಂದಿದ್ದೇನೆ. ನಿಮಗೆ ರಾಜ್ಯಭಾಗ್ಯವನ್ನು ಕೊಟ್ಟು ನಾನು
ವಾನಪ್ರಸ್ಥದಲ್ಲಿ ಹೊರಟುಹೋಗುತ್ತೇನೆ. ನಂತರ ಅರ್ಧಕಲ್ಪ ನನ್ನ ಅವಶ್ಯಕತೆಯೇ ಇರುವುದಿಲ್ಲ.
ಅರ್ಧಕಲ್ಪದವರೆಗೆ ನೀವು ಎಂದೂ ನೆನಪೂ ಸಹ ಮಾಡುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ-
ನಿಮ್ಮ ಬಗ್ಗೆ ಎಲ್ಲರ ಮನಸ್ಸಿನಲ್ಲಿ ಯಾವ ವಿರುದ್ಧ ವೈಬ್ರೇಷನ್ ಇದೆಯೋ ಅದು ಹೊರಟುಹೋಗಿ ಎಲ್ಲವೂ
ಸರಿ ಹೋಗುತ್ತಿದೆ. ಉಳಿದಂತೆ ಮುಖ್ಯ ಮಾತು ಈಶ್ವರ ಸರ್ವವ್ಯಾಪಿಯಲ್ಲ ಅವರು ಬಂದು ರಾಜಯೋಗವನ್ನು
ಕಲಿಸಿದ್ದಾರೆ. ಪತಿತ-ಪಾವನನೂ ಆ ತಂದೆಯಾಗಿದ್ದಾರೆ. ನೀರಿನ ನದಿಗಳು ಪಾವನ ಮಾಡಲು ಸಾಧ್ಯವೇ?
ನೀರಂತೂ ಎಲ್ಲಾ ಕಡೆಯೂ ಇರುತ್ತದೆ ಎಂಬ ಅಭಿಪ್ರಾಯವನ್ನು ಅವರಿಂದ ಬರೆಸಿಕೊಳ್ಳಿ ಮತ್ತು ಬೇಹದ್ದಿನ
ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿಯಿರಿ. ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು
ಬಿಡಿ, ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ಅವರು
ಆತ್ಮವು ನಿರ್ಲೇಪವೆಂದು ಹೇಳಿಬಿಡುತ್ತಾರೆ. ಆತ್ಮವೇ ಪರಮಾತ್ಮ ಎನ್ನವುದು ಭಕ್ತಿಮಾರ್ಗದ
ಮಾತುಗಳಾಗಿವೆ. ಬಾಬಾ, ಹೇಗೆ ನೆನಪು ಮಾಡುವುದು ಎಂದು ಮಕ್ಕಳು ಕೇಳುತ್ತಾರೆ. ಅರೆ! ತಮ್ಮನ್ನು
ಆತ್ಮವೆಂದಂತೂ ತಿಳಿಯುತ್ತೀರಲ್ಲವೆ. ಆತ್ಮವು ಎಷ್ಟು ಚಿಕ್ಕಬಿಂದುವಾಗಿದೆ ಅಂದಮೇಲೆ ಅವರ ತಂದೆಯು
ಇಷ್ಟು ಸೂಕ್ಷ್ಮವಾಗಿರುವವರು ಅವರು ಪುನರ್ಜನ್ಮದಲ್ಲಿ ಬರುವುದಿಲ್ಲ. ಇದು ಬುದ್ಧಿಯಲ್ಲಿ ಜ್ಞಾನವಿದೆ
ಅಂದಮೇಲೆ ತಂದೆಯ ನೆನಪು ಏಕೆ ಬರುವುದಿಲ್ಲ! ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ.
ಒಳ್ಳೆಯದು. ಭಲೇ ತಂದೆಯದು ದೊಡ್ಡರೂಪವೆಂದೇ ತಿಳಿಯಿರಿ ಆದರೆ ಒಬ್ಬ ತಂದೆಯನ್ನೇ ನೆನಪು ಮಾಡಿ ಆಗ
ನಿಮ್ಮ ಪಾಪಗಳು ಭಸ್ಮವಾಗುತ್ತವೆ ಮತ್ತ್ಯಾವುದೇ ಉಪಾಯವಿಲ್ಲ. ಯಾರು ಅರಿತುಕೊಳ್ಳುತ್ತಾರೆಯೋ ಅವರು
ಹೇಳುತ್ತಾರೆ- ಬಾಬಾ, ತಮ್ಮ ನೆನಪಿನಿಂದ ನಾವು ಪಾವನರಾಗಿ ಪಾವನಪ್ರಪಂಚ, ವಿಶ್ವದ ಮಾಲೀಕರಾಗುತ್ತೇವೆ
ಅಂದಾಗ ನಾವೇಕೆ ನೆನಪು ಮಾಡುವುದಿಲ್ಲ! ಒಬ್ಬರು ಇನ್ನೊಬ್ಬರಿಗೆ ನೆನಪು ತರಿಸಬೇಕು. ಅದರಿಂದ ಪಾಪಗಳು
ಭಸ್ಮವಾಗುತ್ತವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿಹೋಗಿ
ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಹೇಗೆ ತಂದೆ
ಮತ್ತು ಜ್ಞಾನವು ಗುಪ್ತವಾಗಿದೆಯೋ ಹಾಗೆಯೇ ಪುರುಷಾರ್ಥವನ್ನೂ ಗುಪ್ತವಾಗಿ ಮಾಡಬೇಕಾಗಿದೆ.
ಗೀತೆ-ಕವಿತೆ ಇತ್ಯಾದಿಗಳ ಬದಲು ಸುಮ್ಮನಿರುವುದು ಒಳ್ಳೆಯದು. ಶಾಂತಿಯಲ್ಲಿ
ತಿರುಗಾಡುತ್ತಾ-ನಡೆದಾಡುತ್ತಾ ತಂದೆಯನ್ನು ನೆನಪು ಮಾಡಬೇಕು.
2. ಹಳೆಯ ಪ್ರಪಂಚವು
ಬದಲಾಗುತ್ತಿದೆ. ಆದ್ದರಿಂದ ಇದರೊಂದಿಗಿನ ಮಹತ್ವವನ್ನು ತೆಗೆದುಹಾಕಬೇಕಾಗಿದೆ. ಇದನ್ನು ನೋಡಿಯೂ
ನೋಡದಂತಿರಬೇಕಾಗಿದೆ. ಬುದ್ಧಿಯನ್ನು ಹೊಸಪ್ರಪಂಚದೊಂದಿಗೆ ಜೋಡಿಸಬೇಕಾಗಿದೆ.
ವರದಾನ:
ಬ್ರಾಹ್ಮಣ
ಜನ್ಮದ ವಿಶೇಷತೆಯನ್ನು ಸ್ವಾಭಾವಿಕ ಸ್ವಭಾವನ್ನಾಗಿ ಮಾಡಿಕೊಂಡಿರುವಂತಹ ಸಹಜ ಪುರುಷಾರ್ಥಿ ಭವ.
ಬ್ರಾಹಣ ಜನ್ಮವು ವಿಶೇಷ,
ಬ್ರಾಹ್ಮಣ ಧರ್ಮ ಮತ್ತು ಕರ್ಮವೂ ವಿಶೇಷ, ಅರ್ಥಾತ್ ಸರ್ವ ಶ್ರೇಷ್ಠವಾಗಿದೆ. ಏಕೆಂದರೆ ಬ್ರಾಹ್ಮಣ
ಕರ್ಮದಲ್ಲಿ ಸಾಕಾರ ಬ್ರಹ್ಮಾ ಬಾಬಾರವರನ್ನು ಫಾಲೋ ಮಾಡುತ್ತಾರೆ. ಆದ್ದರಿಂದ ಬ್ರಾಹಣರ ಸ್ವಭಾವವೇ
ವಿಶೇಷ ಸ್ವಭಾವವಾಗಿದೆ, ಸಾಧಾರಣ ಅಥವಾ ಮಾಯಾವಿ ಸ್ವಭಾವ ಬ್ರಾಹ್ಮಣರ ಸ್ವಭಾವ ಅಲ್ಲ. ಕೇವಲ ಇದೇ
ಸ್ಮೃತಿ ಸ್ವರೂಪದಲ್ಲಿರಿ, ನಾನು ವಿಶೇಷ ಆತ್ಮನಾಗಿದ್ದೇನೆ, ಈ ಸ್ವಭಾವ ಯಾವಾಗ ಸ್ವಾಭಾವಿಕ
ಸ್ವಭಾವವಾಗಿ ಬಿಡುವುದು ಆಗ ತಂದೆ ಸಮಾನ ಆಗುವುದು ಸಹಜವಾಗಿ ಅನುಭವ ಮಾಡುವಿರಿ. ಸ್ಮೃತಿ
ಸ್ವರೂಪದಿಂದಲೇ ಸಮರ್ಥಿ ಸ್ವರೂಪ ಆಗಿ ಬಿಡುವುದು, ಇದೇ ಸಹಜ ಪುರುಷಾರ್ಥವಾಗಿದೆ.
ಸ್ಲೋಗನ್:
ಪವಿತ್ರತೆ ಮತ್ತು
ಶಾಂತಿಯ ಬೆಳಕು ನಾಲ್ಕೂ ಕಡೆ ಹರಡುವವರೇ ಲೈಟ್ ಹೌಸ್ ಆಗಿದ್ದಾರೆ.