02.09.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ನಿಮಗೆ ಇಂತಹ ಶ್ರೇಷ್ಠ ಕರ್ಮವನ್ನು ಕಲಿಸಲು ಬಂದಿದ್ದಾರೆ ಯಾವುದರಿಂದ ನೀವು 21 ಜನ್ಮಗಳ
ರಾಜ್ಯಭಾಗ್ಯವನ್ನು ಪಡೆಯುವಿರಿ, ಅಟಲ-ಅಖಂಡ ರಾಜ್ಯದ ಮಾಲೀಕರಾಗುವಿರಿ”
ಪ್ರಶ್ನೆ:
ಗೃಹಸ್ಥಿಗಳು
ಮತ್ತು ಸನ್ಯಾಸಿಗಳ ಯಾವ ಒಂದು ಸಿದ್ಧಾಂತದಲ್ಲಿ ಬಹಳ ಅಂತರವಿದೆ?
ಉತ್ತರ:
ಗೃಹಸ್ಥಿಗಳ
ಸಿದ್ಧಾಂತವಾಗಿದೆ - ಭಗವಂತನು ಅವಶ್ಯವಾಗಿ ಯಾವುದಾದರೊಂದು ರೂಪದಲ್ಲಿ ಬರುವರು ಮತ್ತು ಸನ್ಯಾಸಿಗಳ
ಸಿದ್ಧಾಂತವಾಗಿದೆ – ಬ್ರಹ್ಮ ತತ್ವವನ್ನು ನೆನಪು ಮಾಡುತ್ತಾ-ಮಾಡುತ್ತಾ ಅದರಲ್ಲಿ ಲೀನವಾಗಿ
ಬಿಡುತ್ತೇವೆ. ಈಗ ತಂದೆಯು ತಿಳಿಸುತ್ತಾರೆ – ಬ್ರಹ್ಮ ತತ್ವದಲ್ಲಿ ಯಾರೂ ಲೀನವಾಗುವುದಿಲ್ಲ, ಆತ್ಮವು
ಅಮರನಾಗಿದೆ ಅಂದಮೇಲೆ ಅದು ಹೇಗೆ ಲೀನವಾಗುತ್ತದೆ! ಭಗವಂತನು ಒಂದುವೇಳೆ ಬರುತ್ತಾರೆಂದರೆ ಅವಶ್ಯವಾಗಿ
ಶಿಕ್ಷಕನಾಗಿ ಶಿಕ್ಷಣ ಕೊಡುವರು, ಪ್ರೇರಣೆಯಿಂದ ಜ್ಞಾನ ಕೊಡುವುದಿಲ್ಲ ಅಲ್ಲವೆ.
ಗೀತೆ:
ನಿಮ್ಮನ್ನು
ಪಡೆದ ನಾನು ಜಗತ್ತನ್ನೇ ಪಡೆದೆನು..........
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಈ ಗೀತೆಯನ್ನು ಕೇಳಿದಿರಿ, ಆತ್ಮಿಕ ಮಕ್ಕಳೇ ಹೇಳುತ್ತಾರೆ - ಬಾಬಾ
ಎಂದು. ಮಕ್ಕಳಿಗೆ ತಿಳಿದಿದೆ, ಈ ಬೇಹದ್ದಿನ ತಂದೆಯು ಬೇಹದ್ದಿನ ಸುಖ ಕೊಡುವವರಾಗಿದ್ದಾರೆ ಅರ್ಥಾತ್
ಅವರು ಎಲ್ಲರ ತಂದೆಯಾಗಿದ್ದಾರೆ. ಅವರನ್ನು ಎಲ್ಲಾ ಬೇಹದ್ದಿನ ಆತ್ಮರು ನೆನಪು ಮಾಡುತ್ತಾರೆ.
ಯಾವುದಾದರೊಂದು ಪ್ರಕಾರದಿಂದ ನೆನಪು ಮಾಡುತ್ತಾರೆ ಆದರೆ ಆ ಪರಮಪಿತ ಪರಮಾತ್ಮನಿಂದ ನಾವು ರಾಜ್ಯ
ಭಾಗ್ಯವನ್ನು ತೆಗೆದುಕೊಳ್ಳಬೇಕೆಂಬುದು ಅವರಿಗೆ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ - ತಂದೆಯು
ನಮಗೆ ಯಾವ ಸತ್ಯಯುಗೀ ವಿಶ್ವದ ರಾಜ್ಯಭಾಗ್ಯವನ್ನು ಕೊಡುವರೋ ಅದು ಅಟಲ, ಅಖಂಡ, ಅಡೋಲವಾಗಿದೆ. ಆ
ನಮ್ಮ ರಾಜ್ಯವು 21 ಜನ್ಮಗಳವರೆಗೆ ಸ್ಥಿರವಾಗಿರುತ್ತದೆ. ಇಡೀ ವಿಶ್ವದಲ್ಲಿ ನಮ್ಮ ರಾಜ್ಯವಿರುತ್ತದೆ.
ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ, ಲೂಟಿ ಮಾಡಲು ಸಾಧ್ಯವಿಲ್ಲ. ನಮ್ಮದು ಅಡೋಲ
ರಾಜ್ಯವಾಗಿದೆ ಏಕೆಂದರೆ ಅಲ್ಲಿ ಒಂದೇ ಧರ್ಮವಿರುತ್ತದೆ, ದ್ವೈತವಿರುವುದಿಲ್ಲ ಅದು ಅದ್ವೈತ
ರಾಜ್ಯವಾಗಿದೆ. ಮಕ್ಕಳು ಗೀತೆಯನ್ನು ಕೇಳಿದಾಗ ತಮ್ಮ ರಾಜಧಾನಿಯ ನಶೆಯು ಬುದ್ಧಿಯಲ್ಲಿ ಬರಬೇಕು.
ಇಂತಿಂತಹ ಗೀತೆಗಳು ಮನೆಯಲ್ಲಿರಬೇಕು ಯಾವುದರಿಂದ ತಂದೆ ಮತ್ತು ಆಸ್ತಿಯು ಕೂಡಲೇ ನೆನಪಿಗೆ ಬರುತ್ತದೆ.
ತಂದೆಯ ನೆನಪಿನ ಮಸ್ತಿಯ ಗೀತೆಗಳಿರಬೇಕು. ನಿಮ್ಮದೆಲ್ಲವೂ ಗುಪ್ತವಾಗಿದೆ, ದೊಡ್ಡ ವ್ಯಕ್ತಿಗಳಂತೂ
ಬಹಳ ಆಡಂಬರವಾಗಿರುತ್ತಾರೆ. ನಿಮಗೆ ಯಾವುದೇ ವೈಭವವಿಲ್ಲ, ನೀವು ನೋಡುತ್ತೀರಿ - ಯಾರಲ್ಲಿ ತಂದೆಯು
ಪ್ರವೇಶ ಮಾಡಿದ್ದಾರೆಯೋ ಅವರಲ್ಲಿಯೂ ಸಹ ಯಾವುದೇ ಆಡಂಬರದ ಮಾತಿಲ್ಲ. ಉಡುಪುಗಳೂ ಅವೇ ಆಗಿವೆ, ನೀವು
ಬುದ್ಧಿಯಿಂದ ಮಾತ್ರವೇ ತಿಳಿದುಕೊಳ್ಳುತ್ತೀರಿ - ನಮಗೆ ರಾಜ್ಯಭಾಗ್ಯವನ್ನು ಕೊಡಲು ತಂದೆಯು ಇವರಲ್ಲಿ
ಪ್ರವೇಶ ಮಾಡಿದ್ದಾರೆ. ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ, ಇಡೀ ಸೃಷ್ಟಿಯಲ್ಲಿ ಈ ಸಮಯದಲ್ಲಿ
ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರೂ ದೇಹಾಭಿಮಾನದಲ್ಲಿ ಅಸತ್ಯ ಕರ್ಮಗಳನ್ನು ಮಾಡುತ್ತಾರೆ
ಆದ್ದರಿಂದ ಬುದ್ಧಿಹೀನರೆಂದು ಹೇಳಲಾಗುತ್ತದೆ. ಎಲ್ಲರ ಬುದ್ಧಿಗೆ ಬೀಗ ಹಾಕಲ್ಪಟ್ಟಿದೆ. ನೀವು
ಎಷ್ಟೊಂದು ಬುದ್ಧಿವಂತರು ವಿಶ್ವದ ಮಾಲೀಕರಾಗಿದ್ದೀರಿ, ಈಗ ಮಾಯೆಯು ಬುದ್ಧಿಹೀನರನ್ನಾಗಿ ಮಾಡಿ
ಬಿಟ್ಟಿದೆ. ಏನೂ ಕೆಲಸಕ್ಕೆ ಬರುವುದಿಲ್ಲ. ತಂದೆಯ ಬಳಿ ಹೋಗುವುದಕ್ಕಾಗಿ ಯಜ್ಞ, ತಪಗಳನ್ನು ಬಹಳ
ಮಾಡುತ್ತಾರೆ ಆದರೆ ಸಿಗುವುದೇನೂ ಇಲ್ಲ, ಹಾಗೆಯೇ ಅಲೆಯುತ್ತಿರುತ್ತಾರೆ. ಪರಮಾತ್ಮನನ್ನು ಯಾರೂ
ತಿಳಿದುಕೊಳ್ಳುವುದಿಲ್ಲ, ಸರ್ವವ್ಯಾಪಿಯೆಂದು ಹೇಳುತ್ತಾರೆ. ಇದು ಎಷ್ಟು ದೊಡ್ಡ ತಪ್ಪಾಗಿದೆ! ಪಿತ
ಶಬ್ಧವು ಬರುವುದಿಲ್ಲ, ಭಲೆ ಕೆಲವರು ಹೇಳಲೂಬಹುದು ಆದರೆ ಹೇಳಿಕೆಗೆ ಮಾತ್ರ. ಒಂದುವೇಳೆ ಅವರನ್ನು
ಪರಮಪಿತನೆಂದು ತಿಳಿಯುವುದೇ ಆದರೆ ಬುದ್ಧಿಯು ಮಿಂಚುವುದು, ತಂದೆಯು ಸ್ವರ್ಗದ ಆಸ್ತಿಯನ್ನು
ಕೊಡುತ್ತಾರೆ. ಅವರು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ನಾವೇಕೆ ಕಲಿಯುಗೀ ನರಕದಲ್ಲಿದ್ದೇವೆ!
ನಾವೀಗ ಮುಕ್ತಿ-ಜೀವನ್ಮುಕ್ತಿಯನ್ನು ಹೇಗೆ ಪಡೆಯಬಹುದು ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ.
ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ, ತಂದೆಯು ಸ್ಮೃತಿ ತರಿಸಿದ್ದಾರೆ - ಯಾವಾಗ ಹೊಸ ಪ್ರಪಂಚ, ಹೊಸ
ಭಾರತವಿತ್ತೋ ಆಗ ನಮ್ಮ ರಾಜ್ಯವಿತ್ತು. ಒಂದೇ ಮತ, ಒಂದೇ ಭಾಷೆ, ಒಬ್ಬರೇ ಮಹಾರಾಜ-ಮಹಾರಾಣಿಯಿದ್ದರು.
ಸತ್ಯಯುಗದಲ್ಲಿ ಮಹಾರಾಜ-ಮಹಾರಾಣಿ, ತ್ರೇತಾಯುಗದಲ್ಲಿ ರಾಜ-ರಾಣಿ ಎಂದು ಹೇಳಲಾಗುತ್ತದೆ ಮತ್ತೆ
ದ್ವಾಪರದಲ್ಲಿ ವಾಮಮಾರ್ಗವು ಆರಂಭವಾಗುತ್ತದೆ ನಂತರ ಪ್ರತಿಯೊಬ್ಬರ ಕರ್ಮಗಳ ಮೇಲೆ ಆಧಾರಿತವಾಗಿದೆ.
ಕರ್ಮಗಳನುಸಾರ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಈಗ ತಂದೆಯು
ತಿಳಿಸುತ್ತಾರೆ - ನಾನು ನಿಮಗೆ ಇಂತಹ ಕರ್ಮವನ್ನು ಕಲಿಸುತ್ತೇನೆ ಯಾವುದರಿಂದ 21 ಜನ್ಮಗಳವರೆಗೆ
ರಾಜ್ಯವನ್ನೇ ಪಡೆಯುತ್ತಾ ಇರುತ್ತೀರಿ. ಭಲೆ ಅಲ್ಲಿಯೂ ಲೌಕಿಕ ತಂದೆಯು ಸಿಗುತ್ತಾರೆ ಆದರೆ ಅಲ್ಲಿ ಈ
ರಾಜ್ಯಭಾಗ್ಯವು ಬೇಹದ್ದಿನ ತಂದೆಯಿಂದ ಸಿಕ್ಕಿದೆ ಎಂಬ ಜ್ಞಾನವಿರುವುದಿಲ್ಲ ಮತ್ತೆ ದ್ವಾಪರದಿಂದ
ರಾವಣ ರಾಜ್ಯವು ಆರಂಭವಾಗುವ ಕಾರಣ ವಿಕಾರಿ ಸಂಬಂಧಗಳಾಗುತ್ತವೆ ನಂತರ ಎಂತೆಂತಹ ಕರ್ಮವೋ ಅಂತಹ ಫಲ
ಸಿಗುತ್ತದೆ. ದೇವತೆಗಳು ವಾಮ ಮಾರ್ಗದಲ್ಲಿ ಇಳಿಯುತ್ತಾರೆ ನಂತರ ಸತ್ಯಯುಗದ್ದೆಲ್ಲವೂ
ಸಮಾಪ್ತಿಯಾಗುತ್ತದೆ. ನಂತರ ಕರ್ಮಗಳನುಸಾರ ಜನ್ಮ ಪಡೆಯುತ್ತಾರೆ. ಭಾರತದಲ್ಲಿ ಪೂಜ್ಯ ರಾಜರೂ ಇದ್ದರು
ಮತ್ತು ಪೂಜಾರಿ ರಾಜರೂ ಇದ್ದರು. ಸತ್ಯಯುಗದಲ್ಲಿ ರಾಜ-ರಾಣಿ ಮತ್ತು ಪ್ರಜೆಗಳೆಲ್ಲರೂ
ಪೂಜ್ಯರಾಗಿರುತ್ತಾರೆ ನಂತರ ದ್ವಾಪರದಲ್ಲಿ ಭಕ್ತಿಯು ಆರಂಭವಾಗುತ್ತದೆ. ಆಗಿನಿಂದ ಯಥಾ ರಾಜ-ರಾಣಿ
ತಥಾ ಪ್ರಜಾ ಎಲ್ಲರೂ ಪೂಜಾರಿಗಳಾಗುತ್ತಾರೆ. ದೊಡ್ಡರಾಜರು ಯಾರು ಸೂರ್ಯವಂಶಿಯಾಗಿದ್ದರೋ ಅವರೇ
ಪೂಜಾರಿಗಳಾಗಿ ಬಿಡುತ್ತಾರೆ ನಂತರ ವೈಶ್ಯ ವಂಶಿಯರಾಗುತ್ತಾರೆ. ನೀವೀಗ ನಿರ್ವಿಕಾರಿಗಳಾಗುತ್ತೀರಿ,
ಅದರ ಪ್ರಾಲಬ್ಧವು ಮತ್ತೆ 21 ಜನ್ಮಗಳವರೆಗೆ ನಡೆಯುತ್ತದೆ ನಂತರ ಭಕ್ತಿಮಾರ್ಗವು ಆರಂಭವಾಗುತ್ತದೆ,
ಯಾವ-ಯಾವ ಪೂಜ್ಯ ದೇವಿ-ದೇವತೆಗಳು ಇದ್ದು ಹೋಗಿದ್ದಾರೆಯೋ ಅವರ ಮಂದಿರಗಳನ್ನು ಕಟ್ಟಿಸಿ ಅವರಿಗೆ
ಪೂಜೆ ಮಾಡುತ್ತಾರೆ, ಇದು ಕೇವಲ ಭಾರತದಲ್ಲಿಯೇ ನಡೆಯುತ್ತದೆ. ಈ 84 ಜನ್ಮಗಳ ಯಾವ ಕಥೆಯನ್ನು ತಂದೆಯೇ
ತಿಳಿಸುತ್ತಾರೆಯೋ ಇದೂ ಸಹ ಭಾರತವಾಸಿಗಳಿಗಾಗಿ. ಅನ್ಯ ಧರ್ಮದವರು ಬರುವುದೇ ಕೊನೆಯಲ್ಲಿ, ನಂತರ
ವೃದ್ಧಿಯಾಗುತ್ತಾ-ಆಗುತ್ತಾ ಅನೇಕರಾಗುತ್ತಾರೆ. ದೇವಿ-ದೇವತೆಗಳ ವಿಭಿನ್ನ ರೀತಿ ಪದ್ಧತಿಗಳಿತ್ತು,
ಅದು ಭಾರತದ ಗುರುಗಳಲ್ಲಿಲ್ಲ. ಅರ್ಧ ಕಲ್ಪದ ನಂತರ ರಾವಣ ರಾಜ್ಯವು ಆರಂಭವಾಗುವುದರಿಂದ ಎಲ್ಲಾ ರೀತಿ
ನೀತಿಗಳೇ ಬದಲಾಗಿ ಬಿಡುತ್ತದೆ. ನಂತರ ಪೂಜ್ಯರಿಂದ ಪೂಜಾರಿಗಳಾಗಿ ಬಿಡುತ್ತಾರೆ. ಮೊದಲು ಒಬ್ಬ
ಶಿವನಿಗೆ ಅವ್ಯಭಿಚಾರಿ ಪೂಜೆ ಮಾಡುತ್ತಾರೆ, ಅವರ ಮಂದಿರವನ್ನು ಕಟ್ಟಿಸುತ್ತಾರೆ ನಂತರ
ಲಕ್ಷ್ಮೀ-ನಾರಾಯಣರ ಮಂದಿರವನ್ನು ಕಟ್ಟಿಸುತ್ತಾರೆ. ಒಬ್ಬರು ಲಕ್ಷ್ಮೀ-ನಾರಾಯಣನ ಮಂದಿರ ಕಟ್ಟಿಸಿದರೆ
ಸಾಕು ಅನ್ಯರೂ ಕಟ್ಟಿಸುತ್ತಾರೆ ಮತ್ತೆ ರಾಮ-ಸೀತೆಯ ಮಂದಿರವನ್ನು ಕಟ್ಟಲು ತೊಡಗುತ್ತಾರೆ. ನಂತರ
ಕಲಿಯುಗದಲ್ಲಿ ನೋಡಿ, ಗಣೇಶ, ಹನುಮಂತ, ಚಂಡಿಕಾ ದೇವಿ... ಮೊದಲಾದ ಅನೇಕ ದೇವಿಯರ ಚಿತ್ರಗಳನ್ನು
ಮಾಡಿಸುತ್ತಾ ಇರುತ್ತಾರೆ. ಭಕ್ತಿ ಮಾರ್ಗಕ್ಕಾಗಿ ಸಾಮಗ್ರಿಯೂ ಬೇಕಲ್ಲವೆ. ಹೇಗೆ ಬೀಜವು ಎಷ್ಟು
ಚಿಕ್ಕದಾಗಿರುತ್ತದೆ, ವೃಕ್ಷವು ಎಷ್ಟು ದೊಡ್ಡದಾಗುತ್ತದೆ, ಹಾಗೆಯೇ ಭಕ್ತಿಯ ವಿಸ್ತಾರವಾಗಿ
ಬಿಡುತ್ತದೆ. ಅನೇಕಾನೇಕ ಶಾಸ್ತ್ರಗಳನ್ನು ಮಾಡುತ್ತಾ ಹೋಗುತ್ತಾರೆ. ಈಗ ತಂದೆಯು ತಿಳಿಸುತ್ತಾರೆ -
ಈ ಭಕ್ತಿ ಮಾರ್ಗದ ಸಾಮಗ್ರಿಗಳೆಲ್ಲವೂ ಸಮಾಪ್ತಿಯಾಗುವುದು, ಈಗ ತಂದೆಯಾದ ನನ್ನನ್ನು ನೆನಪು ಮಾಡಿರಿ,
ಭಕ್ತಿಯ ಪ್ರಭಾವವು ಬಹಳ ಇದೆಯಲ್ಲವೆ. ಎಷ್ಟು ಆಕರ್ಷಣೆಯಿದೆ! ನೃತ್ಯ-ತಮಾಷೆ, ಗಾಯನ-ಕೀರ್ತನೆ
ಇತ್ಯಾದಿಗಳಿಗೆ ಎಷ್ಟೊಂದು ಖರ್ಚು ಮಾಡುತ್ತಾರೆ. ಈಗ ತಂದೆಯು ಹೇಳುತ್ತಾರೆ, ನಾನು ತಂದೆ ಮತ್ತು
ಆಸ್ತಿಯನ್ನು ನೆನಪು ಮಾಡಿರಿ, ಆದಿ ಸನಾತನ ಧರ್ಮವನ್ನು ನೆನಪು ಮಾಡಿರಿ. ನೀವು
ಜನ್ಮ-ಜನ್ಮಾಂತರದಿಂದ ಅನೇಕ ಪ್ರಕಾರದ ಭಕ್ತಿ ಮಾಡುತ್ತಾ ಬಂದಿದ್ದೀರಿ, ಗೃಹಸ್ಥ ಧರ್ಮದವರೇ
ಭಕ್ತಿಯನ್ನು ಆರಂಭಿಸುತ್ತಾರೆ. ಸನ್ಯಾಸಿಗಳಂತೂ ಭಕ್ತಿ ಮಾಡುವಂತಿಲ್ಲ. ಯಜ್ಞ, ತಪ, ದಾನ, ಪುಣ್ಯ,
ತೀರ್ಥ ಯಾತ್ರೆಗಳನ್ನು ಮಾಡುವುದು ಗೃಹಸ್ಥಿಗಳ ಕೆಲಸವಾಗಿದೆಯೋ ಹೊರತು ಸನ್ಯಾಸಿಗಳದಲ್ಲ. ಅವರು
ನಿವೃತ್ತಿ ಮಾರ್ಗದವರು ಆಗಿದ್ದಾರೆ. ಅವರಿಗಾಗಿ ನಿಯಮವಾಗಿದೆ - ಗೃಹಸ್ಥವನ್ನು ಬಿಟ್ಟು ಹೋಗಿ
ಕಾಡಿನಲ್ಲಿರುವುದು ಮತ್ತು ಬ್ರಹ್ಮ ತತ್ವವನ್ನು ನೆನಪು ಮಾಡುವುದು. ಅವರು ತತ್ವಜ್ಞಾನಿ, ಬ್ರಹ್ಮ
ಜ್ಞಾನಿಗಳಾಗಿದ್ದಾರೆ. ತತ್ವ ಅಥವಾ ಬ್ರಹ್ಮನಿಗೆ ಈಶ್ವರನೆಂದು ಹೇಳುತ್ತಾರೆ. ಹೇಗೆ ಭಾರತವಾಸಿಗಳು
ಮೂಲತಃ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಾರೆ ಆದರೆ ಹಿಂದೂ ಸ್ಥಾನದಲ್ಲಿರುವ ಕಾರಣ
ತಮ್ಮನ್ನು ಹಿಂದೂಗಳೆಂದು ತಿಳಿದುಕೊಂಡಿದ್ದಾರೆ. ಹಾಗೆಯೇ ಸನ್ಯಾಸಿಗಳೂ ಸಹ ಆತ್ಮರು ಇರುವ
ಸ್ಥಾನವಾದ ತತ್ವವನ್ನೇ ಪರಮಾತ್ಮನೆಂದು ತಿಳಿಯುತ್ತಾರೆ. ತತ್ವವನ್ನೇ ನೆನಪು ಮಾಡುತ್ತಾರೆ.
ವಾಸ್ತವದಲ್ಲಿ ಸನ್ಯಾಸಿಗಳು ಸತೋಪ್ರಧಾನರಿದ್ದಾಗ ಹೋಗಿ ಕಾಡಿನಲ್ಲಿ ಶಾಂತಿಯಲ್ಲಿರುತ್ತಾರೆ. ಅವರು
ಬ್ರಹ್ಮದಲ್ಲಿ ಹೋಗಿ ಲೀನವಾಗಬೇಕಾಗಿಲ್ಲ. ತಂದೆಯು ಹೇಳುತ್ತಾರೆ - ಅವರದು ಮಿಥ್ಯ ಜ್ಞಾನವಾಗಿದೆ,
ಯಾರೂ ಹೋಗಿ ಲೀನವಾಗಲು ಸಾಧ್ಯವಿಲ್ಲ. ಆತ್ಮವು ಅವಿನಾಶಿಯಲ್ಲವೆ ಅಂದಮೇಲೆ ಅದು ಲೀನವಾಗಲು ಹೇಗೆ
ಸಾಧ್ಯ? ಭಕ್ತಿಮಾರ್ಗದಲ್ಲಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾ ಇರುತ್ತಾರೆ. ಭಗವಂತನು
ಯಾವುದಾದರೊಂದು ರೂಪದಲ್ಲಿ ಬಂದು ಮಿಲನ ಮಾಡುವರು ಎಂದು ಹೇಳುತ್ತಾರೆ. ಈಗ ಯಾವುದು ಸರಿ?
ಬ್ರಹ್ಮತತ್ವದೊಂದಿಗೆ ಯೋಗವನ್ನಿಟ್ಟು ಬ್ರಹ್ಮದಲ್ಲಿ ಲೀನವಾಗುತ್ತೇವೆಂದು ಸನ್ಯಾಸಿಗಳು ಹೇಳುತ್ತಾರೆ.
ಭಗವಂತನೇ ಯಾವುದಾದರೊಂದು ರೂಪದಲ್ಲಿ ಬರುವರು, ಪತಿತರನ್ನು ಪಾವನ ಮಾಡುವರೆಂದು ಗೃಹಸ್ಥಿಗಳು
ಹೇಳುತ್ತಾರೆ. ಮೇಲಿನಿಂದ ಪ್ರೇರಣೆಯ ಮೂಲಕವೇ ಕಲಿಸುವುದಿಲ್ಲ, ಶಿಕ್ಷಕರು ಮನೆಯಲ್ಲಿ ಕುಳಿತು
ಪ್ರೇರಣೆ ನೀಡುವರೇ? ಪ್ರೇರಣೆ ಎಂಬ ಶಬ್ಧವೇ ಇಲ್ಲ, ಪ್ರೇರಣೆಯಿಂದ ಯಾವುದೇ ಕೆಲಸವಾಗುವುದಿಲ್ಲ. ಭಲೆ
ಶಂಕರನ ಪ್ರೇರಣೆಯಿಂದ ವಿನಾಶವೆಂದು ಹೇಳಲಾಗುತ್ತದೆ ಆದರೆ ಇದು ಡ್ರಾಮದ ಪೂರ್ವ ನಿಶ್ಚಿತವಾಗಿದೆ.
ಅವರು ಈ ಅಣ್ವಸ್ತ್ರಗಳನ್ನು ತಯಾರಿಸಲೇಬೇಕಾಗಿದೆ, ಪ್ರೇರಣೆಯ ಮಾತಿಲ್ಲ. ಭಗವಂತನ ಪ್ರೇರಣೆಯಿಂದ
ಎಲ್ಲವೂ ಆಗುತ್ತದೆ ಎಂದು ಮನುಷ್ಯರು ಹೇಳುತ್ತಾರೆ ಅಥವಾ ಶಂಕರನು ಕಣ್ಣುತೆರೆದ ಕೂಡಲೇ ಎಲ್ಲವೂ
ಪ್ರಳಯವಾಯಿತು ಎಂದು ಹೇಳುತ್ತಾರೆ. ಇದೆಲ್ಲವೂ ಕಥೆಗಳಾಗಿವೆ, ಅರ್ಥವೇನನ್ನೂ ತಿಳಿದುಕೊಂಡಿಲ್ಲ.
ಯಾರದೇ ಮಂದಿರಕ್ಕೆ ಹೋದರೆ ಅಚ್ಯುತಂ, ಕೇಶವಂ.... ಎಂದು ಹೇಳುತ್ತಾರೆ, ಅರ್ಥವೇನನ್ನೂ
ತಿಳಿದುಕೊಳ್ಳುವುದಿಲ್ಲ. ಯಾರೂ ಸಹ ತಮ್ಮ ಹಿರಿಯರ ಮಹಿಮೆಯನ್ನು ತಿಳಿದುಕೊಂಡಿಲ್ಲ. ಧರ್ಮ
ಸ್ಥಾಪಕರಿಗೆ ಗುರುಗಳೆಂದು ಹೇಳಿಬಿಡುತ್ತಾರೆ. ವಾಸ್ತವದಲ್ಲಿ ಇವರಿಗೆ ಗುರುಗಳೆಂದು ಹೇಳುವುದು
ತಪ್ಪಾಗಿದೆ. ಕ್ರೈಸ್ಟ್ ಯಾವುದೇ ಗುರುವಲ್ಲ, ಅವರು ಕೇವಲ ಧರ್ಮ ಸ್ಥಾಪನೆ ಮಾಡುತ್ತಾರೆ. ಯಾರು
ಸದ್ಗತಿ ಮಾಡುವರೋ ಅವರಿಗೇ ಗುರುವೆಂದು ಹೇಳಲಾಗುತ್ತದೆ. ಇವರಂತೂ ಕೇವಲ ಧರ್ಮ ಸ್ಥಾಪನೆ ಮಾಡಲು
ಬರುತ್ತಾರೆ, ಅವರ ಹಿಂದೆ ಅವರ ವಂಶಾವಳಿ ಬರುತ್ತದೆ. ಯಾರದೇ ಸದ್ಗತಿ ಮಾಡುವುದಿಲ್ಲ ಅಂದಮೇಲೆ
ಅವರಿಗೆ ಗುರುವೆಂದು ಹೇಗೆ ಹೇಳುವಿರಿ? ಗುರು ಒಬ್ಬರೇ ಆಗಿದ್ದಾರೆ, ಅವರಿಗೇ ಸರ್ವರ
ಸದ್ಗತಿದಾತನೆಂದು ಹೇಳಲಾಗುತ್ತದೆ. ಭಗವಂತ ತಂದೆಯೇ ಬಂದು ಸರ್ವರ ಸದ್ಗತಿ ಮಾಡುತ್ತಾರೆ.
ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ಅವರ ನೆನಪು ಎಂದೂ ಯಾರಿಂದಲೂ ಬಿಡಿಸಲು ಸಾಧ್ಯವಿಲ್ಲ.
ಮನುಷ್ಯರು ಹೇ ಭಗವಂತ, ಹೇ ಈಶ್ವರ ಎಂದು ಹೇಳಿ ಒಬ್ಬ ಭಗವಂತನನ್ನೇ ನೆನಪು ಮಾಡುತ್ತಾರೆ ಏಕೆಂದರೆ
ಅವರು ಸರ್ವರ ಸದ್ಗತಿದಾತ ಆಗಿದ್ದಾರೆ. ತಂದೆಯು ತಿಳಿಸುತ್ತಾರೆ - ಇದೆಲ್ಲವೂ ರಚನೆಯಾಗಿದೆ, ರಚಯಿತ
ತಂದೆಯು ನಾನೇ ಆಗಿದ್ದೇನೆ. ಎಲ್ಲರಿಗೆ ಸುಖವನ್ನು ಕೊಡುವಂತಹ, ಆಸ್ತಿಯನ್ನು ಕೊಡುವಂತಹ ತಂದೆಯು
ಒಬ್ಬರೇ ಆಗಿದ್ದಾರೆ. ಸಹೋದರ-ಸಹೋದರನಿಗೆ ಆಸ್ತಿ ಕೊಡಲು ಸಾಧ್ಯವಿಲ್ಲ. ಆಸ್ತಿಯು ಯಾವಾಗಲೂ
ತಂದೆಯಿಂದ ಸಿಗುತ್ತದೆ, ನಾನು ಎಲ್ಲಾ ಬೇಹದ್ದಿನ ಮಕ್ಕಳಿಗೆ ಬೇಹದ್ದಿನ ಆಸ್ತಿಯನ್ನು ಕೊಡುತ್ತೇನೆ,
ಆದ್ದರಿಂದಲೇ ಹೇ ಪರಮಾತ್ಮ ಕ್ಷಮೆ ಮಾಡಿ ಎಂದು ನನ್ನನ್ನೇ ನೆನಪು ಮಾಡುತ್ತಾರೆ, ಏನನ್ನೂ
ತಿಳಿದುಕೊಳ್ಳುವುದಿಲ್ಲ.
ತಂದೆಯು ತಿಳಿಸುತ್ತಾರೆ - ಇವರು ಕೂಗುವುದರಿಂದ ನಾನು ಬರುವುದಿಲ್ಲ, ಇದು ಡ್ರಾಮಾದಲ್ಲಿ
ನಿಶ್ಚಿತವಾಗಿದೆ. ಡ್ರಾಮಾದಲ್ಲಿ ನಾನು ಬರುವುದೂ ನಿಗಧಿಯಾಗಿದೆ. ಅನೇಕ ಧರ್ಮಗಳ ವಿನಾಶ, ಒಂದು
ಧರ್ಮದ ಸ್ಥಾಪನೆ ಹಾಗೂ ಕಲಿಯುಗದ ವಿನಾಶ ಮತ್ತು ಸತ್ಯಯುಗದ ಸ್ಥಾಪನೆ ಮಾಡಲಾಗುತ್ತದೆ. ನಾನು ನನ್ನ
ಸಮಯದಲ್ಲಿ ಬರುತ್ತೇನೆ, ಈ ಭಕ್ತಿಮಾರ್ಗವೂ ಡ್ರಾಮಾದಲ್ಲಿ ಪಾತ್ರವಿದೆ. ಯಾವಾಗ ಭಕ್ತಿಮಾರ್ಗದ
ಪಾತ್ರವು ಪೂರ್ಣವಾಗುವುದೋ ಆಗ ನಾನು ಬರುತ್ತೇನೆ. ಕಲ್ಪದ ಮೊದಲೂ ಸಹ ಬಾಬಾ, ನಾವು ಬ್ರಹ್ಮಾನ
ತನುವಿನಲ್ಲಿ ಬಂದಿದ್ದೀರಿ, ಈ ಜ್ಞಾನವು ಈಗ ಸಿಗುತ್ತದೆ ಮತ್ತೆಂದೂ ಸಿಗುವುದಿಲ್ಲ. ಇದು ಜ್ಞಾನ,
ಅದು ಭಕ್ತಿಯಾಗಿದೆ. ಜ್ಞಾನದ ಪ್ರಾಲಬ್ಧವು ಏರುವ ಕಲೆಯಾಗಿದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂದು
ಹೇಳಲಾಗುತ್ತದೆ. ಜನಕನಿಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಕ್ಕಿತ್ತಲ್ಲವೆ. ಈ ಶಬ್ಧಗಳೂ ಇವೆ,
ರಾಧೆಯು ಹೋಗಿ ಅನುರಾಧೆ ಆಗುತ್ತಾಳೆ, ಜನಕನು ಹೋಗಿ ಮತ್ತೆ ಸೀತೆಯ ತಂದೆ ಅನುಜನಕನಾಗುತ್ತಾನೆ. ಈ
ಜ್ಞಾನದಿಂದ ಒಂದೊಂದು ಉದಾಹರಣೆ ಕೊಟ್ಟು ಇಟ್ಟಿದ್ದಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಜನಕನು
ಸೆಕೆಂಡಿನಲ್ಲಿ ಜೀವನ್ಮುಕ್ತಿ ಪಡೆದನೆಂದು ಹೇಳುತ್ತಾರೆ, ಕೇವಲ ಒಬ್ಬ ಜನಕನೇ ಜೀವನ್ಮುಕ್ತಿಯನ್ನು
ಪಡೆದನೇ? ಜೀವನ್ಮುಕ್ತಿಯನ್ನು ಎಲ್ಲರೂ ಪಡೆಯುತ್ತಾರಲ್ಲವೆ. ಇಡೀ ವಿಶ್ವವೇ ಪಡೆಯುತ್ತದೆ. ಸದ್ಗತಿ
ಅಥವಾ ಜೀವನ್ಮುಕ್ತಿ ಒಂದೇ ಮಾತಾಗಿದೆ. ಜೀವನ್ಮುಕ್ತಿ ಅರ್ಥಾತ್ ಜೀವನವನ್ನು ಈ ರಾವಣರಾಜ್ಯದಿಂದ
ಮುಕ್ತಗೊಳಿಸುತ್ತಾರೆ. ತಂದೆಗೆ ಗೊತ್ತಿದೆ, ಮಕ್ಕಳದು ಎಷ್ಟೊಂದು ದುರ್ಗತಿಯಾಗಿ ಬಿಟ್ಟಿದೆ,
ಸಂಪೂರ್ಣ ದುಃಖಿಯಾಗಿದ್ದಾರೆ, ಅವರದು ಪುನಃ ಸದ್ಗತಿಯಾಗಬೇಕಾಗಿದೆ. ಮೊದಲು ಮುಕ್ತಿಯಲ್ಲಿ ಹೋಗಿ
ನಂತರ ಜೀವನ್ಮುಕ್ತಿಯಲ್ಲಿ ಬರುತ್ತೀರಿ. ಶಾಂತಿಧಾಮದಿಂದ ಸುಖಧಾಮದಲ್ಲಿ ಬರುತ್ತೀರಿ, ಈ ಚಕ್ರದ
ರಹಸ್ಯವನ್ನು ತಂದೆಯು ತಿಳಿಸಿದ್ದಾರೆ. ಹೇಳುತ್ತಾರೆ - ಈ ಸಮಯದಲ್ಲಿ ಇಡೀ ಸೃಷ್ಟಿಯ ವೃಕ್ಷವು ಜಡ
ಜಡೀಭೂತ, ತಮೋಪ್ರಧಾನವಾಗಿ ಬಿಟ್ಟಿದೆ, ಆದ್ದರಿಂದ ಯಾರೂ ತಮ್ಮನ್ನು ಆದಿ ಸನಾತನ ದೇವಿ-ದೇವತಾ
ಧರ್ಮದವರೆಂದು ತಿಳಿದುಕೊಳ್ಳುವುದಿಲ್ಲ. ಆದಿಸನಾತನ ದೇವಿ-ದೇವತಾ ಧರ್ಮದವರಿದ್ದರು ಏಕೆಂದರೆ
ದೇವತೆಗಳು ಪವಿತ್ರರಾಗಿದ್ದರು. ನಾವು ಅಪವಿತ್ರ, ಪತಿತರು ನಮ್ಮನ್ನು ಹೇಗೆ ದೇವತೆಗಳೆಂದು
ಕರೆಸಿಕೊಳ್ಳುವುದು! ಆದ್ದರಿಂದಲೇ ಈ ವಿಕಾರಗಳನ್ನು ಬಿಡುತ್ತಾ ಹೋಗಿ ಎಂದು ಹೇಳಲಾಗುತ್ತದೆ. ಈ
ವಿಕಾರಗಳು ಅರ್ಧ ಕಲ್ಪದಿಂದ ಉಳಿದುಕೊಂಡಿದೆ. ಇದೊಂದು ಜನ್ಮದಲ್ಲಿ ಇವುಗಳನ್ನು ಬಿಡುವುದಕ್ಕೆ
ಪರಿಶ್ರಮವೆನಿಸುತ್ತದೆ. ಪರಿಶ್ರಮವಿಲ್ಲದೆ ವಿಶ್ವದ ಮಾಲೀಕರಾಗುವರೇ? ತಂದೆಯನ್ನು ನೆನಪು ಮಾಡಿದಾಗಲೇ
ನೀವು ತಮಗೆ ರಾಜ್ಯ ತಿಲಕವನ್ನು ಇಟ್ಟುಕೊಳ್ಳುತ್ತೀರಿ ಅರ್ಥಾತ್ ರಾಜ್ಯಾಧಿಕಾರಿಗಳು ಆಗುತ್ತೀರಿ.
ಎಷ್ಟು ಚೆನ್ನಾಗಿ ನೆನಪು ಮಾಡುತ್ತೀರೋ, ಶ್ರೀಮತದಂತೆ ನಡೆಯುತ್ತೀರೋ ಅಷ್ಟು ನೀವು ರಾಜಾಧಿ
ರಾಜರಾಗುತ್ತೀರಿ. ಓದಿಸುವ ಶಿಕ್ಷಕರು ಓದಿಸಲು ಬಂದಿದ್ದಾರೆ. ಇದು ಮನುಷ್ಯರಿಂದ ದೇವತೆಗಳಾಗುವ
ಪಾಠಶಾಲೆಯಾಗಿದೆ. ತಂದೆಯು ನರನಿಂದ ನಾರಾಯಣನನ್ನಾಗಿ ಮಾಡುವ ಕಥೆಯನ್ನು ತಿಳಿಸುತ್ತಾರೆ. ಈ ಕಥೆಯು
ಎಷ್ಟು ಪ್ರಸಿದ್ಧವಾಗಿದೆ, ಇದಕ್ಕೆ ಅಮರ ಕಥೆ, ಸತ್ಯ ನಾರಾಯಣನ ಕಥೆ, ಮೂರನೇ ನೇತ್ರದ ಕಥೆಯೆಂದೂ
ಹೇಳುತ್ತಾರೆ. ನೋಡಿ, ಹಾಡು ಎಷ್ಟು ಚೆನ್ನಾಗಿದೆ! ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ
ಮಾಡುತ್ತಾರೆ ಯಾವ ಮಾಲೀಕತ್ವವನ್ನು ಯಾರೂ ಲೂಟಿ ಮಾಡಲು ಸಾಧ್ಯವಿಲ್ಲ, ಯಾವುದೇ ಭೂಕಂಪ
ಇತ್ಯಾದಿಗಳಾಗುವುದಿಲ್ಲ. ಅಲ್ಲಿ ಯಾವುದೇ ವಿಘ್ನದ ಮಾತೇ ಇಲ್ಲ. ಇಂತಹ ಅಟಲ, ಅಖಂಡ, ಪವಿತ್ರತೆ,
ಸುಖ-ಶಾಂತಿಯ ರಾಜ್ಯವನ್ನು ಪಡೆಯುತ್ತಿದ್ದೀರಿ. ಕಲ್ಪದ ಹಿಂದಿನ ತರಹ ಪ್ರತೀ 5000 ವರ್ಷಗಳ ನಂತರ
ಭಾರತವು ಸ್ವರ್ಗವಾಗುತ್ತದೆ, ನೀವು ತಿಳಿದುಕೊಂಡಿದ್ದೀರಿ - ನಾವೇ ದೇವತೆಗಳಾಗಿದ್ದೆವು, ನಂತರ 84
ಜನ್ಮಗಳನ್ನು ತೆಗೆದುಕೊಳ್ಳುತ್ತಾ -ತೆಗೆದುಕೊಳ್ಳುತ್ತಾ ಬಂದು ಹೀಗೆ ಸಾಧಾರಣರಾಗುತ್ತೇವೆ. ಪುನಃ
ನಾವೇ ದೇವತೆಗಳಾಗುತ್ತೇವೆ, ಇದಕ್ಕೆ ಸ್ವದರ್ಶನ ಚಕ್ರಧಾರಿಗಳು ಎಂದು ಹೇಳಲಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮಗೆ ತಾವು
ರಾಜ್ಯ ತಿಲಕವನ್ನು ಇಟ್ಟುಕೊಳ್ಳುವುದಕ್ಕಾಗಿ ನೆನಪಿನ ಪರಿಶ್ರಮ ಪಡಬೇಕಾಗಿದೆ. ಎಲ್ಲಾ ವಿಕಾರಗಳನ್ನು
ಬಿಡಬೇಕಾಗಿದೆ.
2. ಬ್ರಹ್ಮಾ ತಂದೆಯ
ಸಮಾನ ಸಾಧಾರಣ ಮತ್ತು ಗುಪ್ತವಾಗಿರಬೇಕಾಗಿದೆ. ಹೊರಗಿನ ಆಡಂಬರ ಇತ್ಯಾದಿಗಳನ್ನು ಮಾಡಬಾರದು. ತಮ್ಮ
ಭವಿಷ್ಯ ರಾಜ್ಯಭಾಗ್ಯದ ನಶೆಯಲ್ಲಿ ಇರಬೇಕಾಗಿದೆ.
ವರದಾನ:
ತಮ್ಮ ಚಂಚಲ
ವೃತ್ತಿಯನ್ನು ಪರಿವರ್ತನೆಗೊಳಿಸುತ್ತಾ ಸತೋಪ್ರಧಾನ ವಾಯುಮಂಡಲವನ್ನಾಗಿ ತಯಾರು ಮಾಡುವಂತಹ
ಜವಾಬ್ದಾರ ಶ್ರೇಷ್ಠ ಆತ್ಮ ಭವ.
ಯಾವ ಮಕ್ಕಳು ತನ್ನ ಚಂಚಲ
ವೃತ್ತಿಗಳನ್ನು ಪರಿವರ್ತನೆ ಮಾಡಿ ಬಿಡುತ್ತಾರೆಯೋ, ಅವರೇ ಸತೋಪ್ರಧಾನ ವಾಯುಮಂಡಲವನ್ನಾಗಿ ತಯಾರು
ಮಾಡಬಹುದು. ಏಕೆಂದರೆ ವೃತ್ತಿಯಿಂದ ವಾಯುಮಂಡಲವಾಗುತ್ತದೆ. ಯಾವಾಗ ವೃತ್ತಿಯಲ್ಲಿ ಇಷ್ಟು ದೊಡ್ಡ
ಕಾರ್ಯದ ಸ್ಮೃತಿಯಿರುವುದಿಲ್ಲವೋ ಆಗಲೇ ವೃತ್ತಿಯು ಚಂಚಲವಾಗುತ್ತದೆ. ಒಂದುವೇಳೆ ಬಹಳ ಚಂಚಲವಿರುವ
ಮಗುವು ಬ್ಯುಸಿಯಾಗಿದ್ದರೂ, ತನ್ನ ಚಂಚಲತೆಯನ್ನು ಬಿಡುವುದಿಲ್ಲವೆಂದರೆ, ಅದು ಅವರನ್ನು ಬಂಧಿಸಿ
ಬಿಡುತ್ತದೆ. ಇದೇ ರೀತಿಯಲ್ಲಿ ಒಂದುವೇಳೆ ಜ್ಞಾನ-ಯೋಗದಲ್ಲಿ ಬ್ಯುಸಿಯಾಗಿದ್ದರೂ ವೃತ್ತಿಯು ಚಂಚಲ
ಆಗುತ್ತದೆಯೆಂದರೆ, ಒಬ್ಬ ತಂದೆಯ ಜೊತೆ ಸರ್ವ ಸಂಬಂಧಗಳ ಬಂಧದಲ್ಲಿ ವೃತ್ತಿಯನ್ನು ಬಂಧಿಸಿ
ಬಿಡುತ್ತೀರೆಂದರೆ, ಆ ಚಂಚಲತೆಯು ಸಹಜವಾಗಿಯೇ ಸಮಾಪ್ತಿ ಆಗಿ ಬಿಡುತ್ತದೆ.
ಸ್ಲೋಗನ್:
ಹುಡುಗಾಟಿಕೆಯ
ಪ್ರಕಂಪನಗಳನ್ನು ಸಮಾಪ್ತಿ ಮಾಡುವ ಸಾಧನವಾಗಿದೆ - ಬೇಹದ್ದಿನ ವೈರಾಗ್ಯ.
ಅವ್ಯಕ್ತ ಸೂಚನೆ:- ಈಗ
ತಮ್ಮ ದಾತಾ ಸ್ವರೂಪವನ್ನು ಪ್ರತ್ಯಕ್ಷ ಮಾಡಿಕೊಳ್ಳಿ.
ದಾತಾತನದ ಸಂಸ್ಕಾರ
ಇಮರ್ಜ್ ಮಾಡಿಕೊಂಡು ಮನಸಾ ಮೂಲಕ ಪುಣ್ಯದ ಖಾತೆಯನ್ನು ಜಮಾ ಮಾಡಿ, ವಾಣಿಯ ಮೂಲಕ ಬಲಹೀನ ಆತ್ಮ ರಿಗೆ
ಖುಷಿಯ, ತೊಂದರೆಯಲ್ಲಿರುವವರಿಗೆ ನಶೆಯ ಸ್ಮೃತಿ ಹಾಗೂ ಹೃದಯ ವಿಧಿರ್ಣ ಆಗಿರುವ ಆತ್ಮ ರಿಗೆ ಉಮಂಗ
ಉತ್ಸಾಹದಲ್ಲಿ ಕರೆ ತನ್ನಿ. ಸಂಬಂಧ ಸಂಪರ್ಕದಿಂದ ಆತ್ಮಗಳಿಗೆ ನಮ್ಮ ಶ್ರೇಷ್ಠ ಸಂಘದ ರಂಗನ್ನು
ಅನುಭವ ಮಾಡಿಸಿ ಆಗ ಪುಣ್ಯದ ಖಾತೆ ಜಮಾ ಆಗುವುದು.