02.11.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಸಂಗಮಯುಗ ಅದೃಷ್ಟವಂತರಾಗುವ ಯುಗವಾಗಿದೆ, ಇದರಲ್ಲಿ ನೀವು ಎಷ್ಟು ಬೇಕೋ ಅಷ್ಟು ಭಾಗ್ಯದ
ನಕ್ಷತ್ರವನ್ನು ಬೆಳಗಿಸಿಕೊಳ್ಳಬಹುದು”
ಪ್ರಶ್ನೆ:
ತಮ್ಮ
ಪುರುಷಾರ್ಥವನ್ನು ತೀವ್ರ ಮಾಡಿಕೊಳ್ಳುವ ಸಹಜ ಸಾಧನೆ ಯಾವುದು?
ಉತ್ತರ:
ಫಾಲೋ ಫಾದರ್
ಮಾಡುತ್ತಾ ಹೋದಾಗ ಪುರುಷಾರ್ಥವು ತೀವ್ರವಾಗಿಬಿಡುತ್ತದೆ. ತಂದೆಯನ್ನೇ ನೋಡಿ, ತಾಯಿಯಂತೂ
ಗುಪ್ತವಾಗಿದ್ದಾರೆ. ಫಾಲೋಫಾದರ್ ಮಾಡುವುದರಿಂದ ತಂದೆಯ ಸಮಾನ ಶ್ರೇಷ್ಠರಾಗುತ್ತೀರಿ ಆದುದರಿಂದ
ಯಥಾರ್ಥವಾಗಿ ಫಾಲೋ ಮಾಡುತ್ತಾ ಹೋಗಿ.
ಪ್ರಶ್ನೆ:
ತಂದೆಯು ಯಾವ
ಮಕ್ಕಳನ್ನು ತಿಳುವಳಿಕೆಯಿಲ್ಲದವರೆಂದು ತಿಳಿಯುತ್ತಾರೆ?
ಉತ್ತರ:
ಯಾರಿಗೆ ತಂದೆಯು ಸಿಕ್ಕಿರುವ ಖುಷಿಯಿರುವುದಿಲ್ಲವೋ ಅವರು ಬುದ್ಧುಗಳಾದರಲ್ಲವೆ, ಇಂತಹ ತಂದೆ ಯಾರು
ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಅಂತಹವರ ಮಕ್ಕಳಾದ ನಂತರವೂ ಸಹ ಖುಷಿಯಿಲ್ಲವೆಂದರೆ
ತಿಳುವಳಿಕೆಯಿಲ್ಲದವರೆಂದು ಹೇಳಲಾಗುತ್ತದೆಯಲ್ಲವೆ.
ಓಂ ಶಾಂತಿ.
ಮಧುರಾತಿ ಮಧುರ ನೀವು ಮಕ್ಕಳು ಅದೃಷ್ಟ ನಕ್ಷತ್ರಗಳಾಗಿದ್ದೀರಿ. ನಿಮಗೆ ತಿಳಿದಿದೆ, ನಾವು
ಶಾಂತಿಧಾಮವನ್ನೂ ನೆನಪು ಮಾಡುತ್ತೇವೆ, ತಂದೆಯನ್ನೂ ಸಹ ನೆನಪು ಮಾಡುತ್ತೇವೆ. ತಂದೆಯನ್ನು ನೆನಪು
ಮಾಡುವುದರಿಂದ ನಾವು ಪವಿತ್ರರಾಗಿ ಮನೆಗೆ ಹೋಗುತ್ತೇವೆ. ಇಲ್ಲಿ ಕುಳಿತು ಈ ಚಿಂತನೆ
ಮಾಡುತ್ತೀರಲ್ಲವೆ. ತಂದೆಯು ಬೇರೆ ಯಾವ ಕಷ್ಟವನ್ನೂ ಕೊಡುವುದಿಲ್ಲ. ಜೀವನ್ಮುಕ್ತಿಯನ್ನಂತೂ ಯಾರೂ
ತಿಳಿದುಕೊಂಡಿಲ್ಲ. ಅವರೆಲ್ಲರೂ ಮುಕ್ತಿಗಾಗಿ ಪುರುಷಾರ್ಥ ಮಾಡುತ್ತಾರೆ ಆದರೆ ಮುಕ್ತಿಯ ಅರ್ಥವನ್ನೂ
ಸಹ ತಿಳಿದುಕೊಂಡಿಲ್ಲ. ಕೆಲವರು ನಾವು ಬ್ರಹ್ಮ್ನಲ್ಲಿ ಲೀನವಾಗುತ್ತೇವೆ ಮತ್ತು ಜನ್ಮದಲ್ಲಿ
ಬರುವುದಿಲ್ಲವೆಂದು ಹೇಳುತ್ತಾರೆ. ನಾವು ಈ ಚಕ್ರದಲ್ಲಿ ಬರಲೇಬೇಕೆಂದು ಅವರಿಗೆ ತಿಳಿದಿಲ್ಲ. ಈಗ
ನೀವು ಮಕ್ಕಳು ಈ ಮಾತುಗಳನ್ನು ತಿಳಿದುಕೊಂಡಿದ್ದೀರಿ. ನೀವು ಮಕ್ಕಳಿಗೆ ತಿಳಿದಿದೆ - ನಾವು
ಸ್ವದರ್ಶನಚಕ್ರಧಾರಿ, ಅದೃಷ್ಟ ನಕ್ಷತ್ರಗಳಾಗಿದ್ದೇವೆ. ಅದೃಷ್ಟವಂತರಿಗೆ ಲಕ್ಕಿ ಎಂದು
ಹೇಳಲಾಗುತ್ತದೆ. ಈಗ ನೀವು ಮಕ್ಕಳನ್ನು ಅದೃಷ್ಟವಂತರನ್ನಾಗಿ ತಂದೆಯೇ ಮಾಡುತ್ತಾರೆ. ತಂದೆಯು
ಹೇಗಿದ್ದಾರೆಯೋ ಹಾಗೆಯೇ ಮಕ್ಕಳಿರುತ್ತಾರೆ. ಕೆಲವರ ತಂದೆ ಶ್ರೀಮಂತರಾಗಿರುತ್ತಾರೆ, ಕೆಲವರ ತಂದೆ
ಬಡವರಾಗಿರುತ್ತಾರೆ. ನೀವು ಮಕ್ಕಳಿಗೆ ತಿಳಿದಿದೆ - ನಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ,
ಯಾರೆಷ್ಟು ಲಕ್ಕಿಯಾಗಬೇಕೋ ಅಷ್ಟು ಆಗಬಹುದು, ಎಷ್ಟು ಶ್ರೀಮಂತರಾಗಬೇಕೋ ಅಷ್ಟು ಆಗಬಹುದು. ತಂದೆಯು
ತಿಳಿಸುತ್ತಾರೆ - ಏನು ಬೇಕೋ ಅದನ್ನು ಪುರುಷಾರ್ಥದಿಂದ ತೆಗೆದುಕೊಳ್ಳಿ. ಎಲ್ಲವೂ ಪುರುಷಾರ್ಥದ ಮೇಲೆ
ಆಧಾರಿತವಾಗಿದೆ. ಪುರುಷಾರ್ಥ ಮಾಡಿ ಎಷ್ಟು ಶ್ರೇಷ್ಠಪದವಿಯನ್ನು ಪಡೆಯಬಹುದೋ ಅಷ್ಟು ಪಡೆಯಬೇಕು.
ಲಕ್ಷ್ಮಿ-ನಾರಾಯಣರದು ಶ್ರೇಷ್ಠಾತಿಶ್ರೇಷ್ಠ ಪದವಿಯಾಗಿದೆ. ಅಗತ್ಯವಾಗಿ ನೆನಪಿನ ಚಾರ್ಟನ್ನು ಇಡಬೇಕು
ಏಕೆಂದರೆ ತಮೋಪ್ರಧಾನರಿಂದ ಸತೋಪ್ರಧಾನರಂತೂ ಅವಶ್ಯವಾಗಿ ಆಗಲೇಬೇಕಾಗಿದೆ. ಬುದ್ದುಗಳಾಗಿ ಹಾಗೆಯೇ
ಕುಳಿತುಕೊಳ್ಳಬಾರದು. ತಂದೆಯು ತಿಳಿಸಿದ್ದಾರೆ - ಹಳೆಯ ಪ್ರಪಂಚವು ಈಗ ಹೊಸಪ್ರಪಂಚವಾಗಲಿದೆ. ತಂದೆಯು
ಹೊಸ ಪ್ರಪಂಚ, ಸತೋಪ್ರಧಾನ ಪ್ರಪಂಚದಲ್ಲಿ ಕರೆದೊಯ್ಯಲು ಬರುತ್ತಾರೆ. ಅವರು ಬೇಹದ್ದಿನ ತಂದೆಯು
ಬೇಹದ್ದಿನ ಸುಖವನ್ನು ಕೊಡುವಂತಹವರಾಗಿದ್ದಾರೆ. ಸತೋಪ್ರಧಾನರಾಗುವುದರಿಂದಲೇ ನೀವು ಬೇಹದ್ದಿನ
ಸುಖವನ್ನು ಪಡೆಯುತ್ತೀರೆಂದು ತಂದೆಯು ತಿಳಿಸುತ್ತಾರೆ. ಸತೋ ಆದಿರೆಂದರೆ ಕಡಿಮೆ ಸುಖ ಸಿಗುತ್ತದೆ.
ರಜೋ ಆದರೆ ಇನ್ನೂ ಕಡಿಮೆ ಸುಖವು ಸಿಗುತ್ತದೆ. ಎಲ್ಲದರ ಲೆಕ್ಕವನ್ನು ತಂದೆಯು ತಿಳಿಸುತ್ತಿದ್ದಾರೆ.
ಅಪಾರವಾದ ಧನ, ಅಪಾರವಾದ ಸುಖ ನಿಮಗೆ ಸಿಗುತ್ತದೆ. ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಲು
ನೆನಪಿನ ವಿನಃ ಬೇರೆ ಯಾವುದೇ ಉಪಾಯವಿಲ್ಲ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರಿ, ಇದರಿಂದ
ದೈವೀಗುಣಗಳು ತಾನೇತಾನಾಗಿ ಬರುತ್ತವೆ. ಸತೋಪ್ರಧಾನರಾಗಬೇಕೆಂದರೆ ಅಗತ್ಯವಾಗಿ ದೈವೀಗುಣಗಳು
ಬೇಕಾಗಿವೆ. ತಮ್ಮನ್ನು ತಾವೇ ಪರಿಶೀಲನೆ ಮಾಡಿಕೊಳ್ಳಬೇಕು. ತಮ್ಮ ಪುರುಷಾರ್ಥದಿಂದ ಎಷ್ಟು
ಶ್ರೇಷ್ಠಪದವಿ ಬೇಕೋ ಅಷ್ಟು ಶ್ರೇಷ್ಠಪದವಿಯನ್ನು ಪಡೆಯಬಹುದು. ಓದಿಸುವಂತಹ ತಂದೆಯಂತೂ
ಕುಳಿತಿದ್ದಾರೆ. ತಂದೆಯು ತಿಳಿಸುತ್ತಾರೆ - ಕಲ್ಪ-ಕಲ್ಪ ನಿಮಗೆ ಹೀಗೆಯೇ ತಿಳಿಸುತ್ತೇನೆ. ಎರಡೇ
ಅಕ್ಷರಗಳಿವೆ - ಮನ್ಮನಾಭವ, ಮಧ್ಯಾಜೀಭವ. ಬೇಹದ್ದಿನ ತಂದೆಯನ್ನು ತಿಳಿದುಕೊಳ್ಳುತ್ತೀರಿ, ಈ
ಬೇಹದ್ದಿನ ತಂದೆಯೇ ಬೇಹದ್ದಿನ ಜ್ಞಾನವನ್ನು ಕೊಡುವವರಾಗಿದ್ದಾರೆ. ಪತಿತರಿಂದ ಪಾವನ ಮಾಡುವಂತಹ
ಮಾರ್ಗವನ್ನು ಆ ಬೇಹದ್ದಿನ ತಂದೆಯೇ ತಿಳಿಸುತ್ತಾರೆ. ತಂದೆಯೇನನ್ನು ತಿಳಿಸುತ್ತಾರೆಯೋ ಅದು
ಹೊಸಮಾತೇನಲ್ಲ. ಗೀತೆಯಲ್ಲಿ ಬರೆಯಲ್ಪಟ್ಟಿರುವುದೂ ಸಹ ಹಿಟ್ಟಿನಲ್ಲಿ ಉಪ್ಪಿನಷ್ಟು ಸತ್ಯತೆಯಿದೆ.
ನಿಮ್ಮನ್ನು ಆತ್ಮನೆಂದು ತಿಳಿದು ದೇಹದ ಎಲ್ಲಾ ಧರ್ಮವನ್ನು ಮರೆಯಿರಿ. ನೀವು ಆರಂಭದಲ್ಲಿ
ಅಶರೀರಿಯಾಗಿದ್ದವರು ಈಗ ಅನೇಕ ಮಿತ್ರಸಂಬಂಧಿಗಳ ಬಂಧನದಲ್ಲಿ ಬಂದಿದ್ದೀರಿ. ಎಲ್ಲರೂ
ತಮೋಪ್ರಧಾನರಾಗಿದ್ದಾರೆ, ಈಗ ಸತೋಪ್ರಧಾನರಾಗಬೇಕು. ಈಗ ತಮೋಪ್ರಧಾನದಿಂದ ಸತೋಪ್ರಧಾನರಾಗುತ್ತೇವೆ
ಎಂದು ನಿಮಗೆ ತಿಳಿದಿದೆ. ನಂತರ ಮಿತ್ರಸಂಬಂಧಿಗಳೆಲ್ಲರೂ ಪವಿತ್ರರಾಗುತ್ತಾರೆ. ಯಾರು ಕಲ್ಪದ ಹಿಂದೆ
ಎಷ್ಟು ಸತೋಪ್ರಧಾನರಾಗಿದ್ದರೋ ಅಷ್ಟೇ ಪುನಃ ಆಗುತ್ತಾರೆ. ಅವರ ಪುರುಷಾರ್ಥವೇ ಅದೇ ರೀತಿಯಿರುತ್ತದೆ,
ಈಗ ಯಾರನ್ನು ಫಾಲೋ ಮಾಡಬೇಕಾಗಿದೆ? ಫಾಲೋ ಫಾದರ್ ಎಂಬ ಗಾಯನವಿದೆ. ಹೇಗೆ ಇವರು (ಬ್ರಹ್ಮಾ)
ತಂದೆಯನ್ನು ನೆನಪು ಮಾಡುತ್ತಾರೆ, ಪುರುಷಾರ್ಥ ಮಾಡುತ್ತಾರೆಯೋ ಇವರನ್ನು ಫಾಲೋ ಮಾಡಿ. ಪುರುಷಾರ್ಥ
ಮಾಡಿಸುವಂತಹವರು ತಂದೆಯಾಗಿದ್ದಾರೆ. ಅವರೇನು (ಶಿವತಂದೆ) ಪುರುಷಾರ್ಥ ಮಾಡುವುದಿಲ್ಲ, ಆದರೆ
ಮಾಡಿಸುತ್ತಾರೆ ನಂತರ ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಫಾಲೋ ಫಾದರ್ ಮಾಡಿ. ತಾಯಿ-ತಂದೆ
ಗುಪ್ತವಾಗಿದ್ದಾರಲ್ಲವೆ. ತಾಯಿಯು ಗುಪ್ತವಾಗಿದ್ದಾರೆ, ತಂದೆಯನ್ನು ನೋಡಬಹುದು. ಇದನ್ನು ಬಹಳ
ಚೆನ್ನಾಗಿ ತಿಳಿದುಕೊಳ್ಳುವುದಾಗಿದೆ. ಹೀಗೆ ಶ್ರೇಷ್ಠಪದವಿಯನ್ನು ಪಡೆಯಬೇಕೆಂದರೆ ತಂದೆಯನ್ನು ಬಹಳ
ಚೆನ್ನಾಗಿ ನೆನಪು ಮಾಡಿ. ಹೇಗೆ ಈ (ಬ್ರಹ್ಮಾ) ತಂದೆಯು ನೆನಪು ಮಾಡುತ್ತಾರೆ. ಈ ತಂದೆಯು
ಎಲ್ಲರಿಗಿಂತಲೂ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ ನಂತರ ಇವರ ಅನೇಕ ಜನ್ಮಗಳ ಅಂತ್ಯದಲ್ಲಿಯೂ
ಅಂತ್ಯದಲ್ಲಿ ನಾನು ಪ್ರವೇಶ ಮಾಡಿದ್ದೇನೆ. ಇದನ್ನು ಚೆನ್ನಾಗಿ ನೆನಪು ಮಾಡಿಕೊಳ್ಳಿ, ಮರೆಯಬೇಡಿ.
ಬಹಳಷ್ಟು ಮಂದಿಗೆ ಮಾಯೆಯು ಮರೆಸುತ್ತದೆ. ನಾವು ನರನಿಂದ ನಾರಾಯಣರಾಗುತ್ತೇವೆಂದು ನೀವು ಹೇಳುತ್ತೀರಿ,
ಹೇಗೆ ನೀವಾಗುತ್ತೀರೆಂದು ತಂದೆಯು ಉಪಾಯ ತಿಳಿಸುತ್ತಾರೆ. ಇದೂ ಸಹ ತಿಳಿದಿದೆ, ಎಲ್ಲರೂ ಒಂದೇ ರೀತಿ
ಯಥಾರ್ಥವಾಗಿ ಫಾಲೋ ಮಾಡುವುದಿಲ್ಲ. ತಂದೆಯು ಫಾಲೋ ಫಾದರ್ ಮಾಡುವ ಗುರಿಯನ್ನು ತಿಳಿಸುತ್ತಾರೆ.
ಇಂದಿನದ್ದೇ ಗಾಯನವಾಗಿದೆ. ತಂದೆಯೂ ಸಹ ನೀವು ಮಕ್ಕಳಿಗೆ ಜ್ಞಾನ ಕೊಡುತ್ತಾರೆ. ಸನ್ಯಾಸಿಗಳು
ತಮ್ಮನ್ನು ಅನುಯಾಯಿಗಳೆಂದು ಹೇಳಿಕೊಳ್ಳುತ್ತಾರೆ ಆದರೆ ಅದಂತೂ ತಪ್ಪಾಗಿದೆ, ಫಾಲೋ ಮಾಡುವುದೇ ಇಲ್ಲ.
ಅವರು ಬ್ರಹ್ಮ್ಜ್ಞಾನಿ, ತತ್ವಜ್ಞಾನಿಗಳಾಗಿದ್ದಾರೆ. ಅವರಿಗೆ ಈಶ್ವರ ಜ್ಞಾನವನ್ನು ಕೊಡುವುದಿಲ್ಲ.
ತತ್ವ ಅಥವಾ ಬಹ್ಮ್ಜ್ಞಾನಿಗಳೆಂದು ಹೇಳಿಕೊಳ್ಳುತ್ತಾರೆ ಆದರೆ ತತ್ವ ಅಥವಾ ಬ್ರಹ್ಮ್ ಅವರಿಗೆ ಜ್ಞಾನ
ಕೊಡುವುದಿಲ್ಲ. ಅದೆಲ್ಲವೂ ಶಾಸ್ತ್ರಗಳ ಜ್ಞಾನವಾಗಿದೆ. ಇಲ್ಲಿ ನಿಮಗೆ ತಂದೆಯು ಜ್ಞಾನವನ್ನು
ಕೊಡುತ್ತಾರೆ, ಅವರಿಗೆ ಜ್ಞಾನಸಾಗರನೆಂದೂ ಕರೆಯಲಾಗುತ್ತದೆ. ಇದನ್ನು ಚೆನ್ನಾಗಿ ನೋಟ್ ಮಾಡಿಕೊಳ್ಳಿ.
ನೀವು ಮರೆತುಹೋಗುತ್ತೀರಿ, ಇದು ಮನಸ್ಸಿನ ಒಳಗಡೆ ಬಹಳ ಚೆನ್ನಾಗಿ ಧಾರಣೆ ಮಾಡುವ ಮಾತುಗಳಾಗಿವೆ.
ತಂದೆಯು ಪ್ರತಿನಿತ್ಯ ಹೇಳುತ್ತಿರುತ್ತಾರೆ - ಮಧುರಾತಿ ಮಧುರ ಮಕ್ಕಳೇ, ತಮ್ಮನ್ನು ಆತ್ಮವೆಂದು
ತಿಳಿದು ತಂದೆಯನ್ನು ನೆನಪು ಮಾಡಿ, ಈಗ ಮನೆಗೆ ಹಿಂತಿರುಗಬೇಕಾಗಿದೆ, ಪತಿತರಂತೂ ಹಿಂತಿರುಗಿ ಮನೆಗೆ
ಹೋಗಲು ಸಾಧ್ಯವಿಲ್ಲ. ಪವಿತ್ರರಂತೂ ಯೋಗಬಲದಿಂದ ಆಗಬೇಕಾಗಿದೆ, ಅಥವಾ ಶಿಕ್ಷೆಯನ್ನನುಭವಿಸಿ ಆಗಬೇಕು.
ಎಲ್ಲರ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. ನೀವಾತ್ಮಗಳು ಮೂಲತಃ
ಪರಮಧಾಮದಲ್ಲಿದ್ದವರು ನಂತರ ಇಲ್ಲಿ ಸುಖ-ದುಃಖದ ಪಾತ್ರವನ್ನು ಮಾಡಿದ್ದೀರಿ. ಸುಖದ ಪಾತ್ರವನ್ನು
ರಾಮರಾಜ್ಯದಲ್ಲಿ, ದುಃಖದ ಪಾತ್ರವನ್ನು ರಾವಣರಾಜ್ಯದಲ್ಲಿ. ರಾಮರಾಜ್ಯವನ್ನು ಸ್ವರ್ಗವೆಂದು
ಕರೆಯಲಾಗುವುದು, ಅಲ್ಲಿ ಸಂಪೂರ್ಣ ಸುಖವಿದೆ. ಸ್ವರ್ಗವಾಸಿ ಹಾಗೂ ನರಕವಾಸಿಗಳೆಂದು ಗಾಯನವಿದೆ,
ಇದನ್ನು ಚೆನ್ನಾಗಿ ಧಾರಣೆ ಮಾಡಬೇಕಾಗಿದೆ. ಯಾವಾಗ ರಜೋದಲ್ಲಿ ದ್ವಾಪರದಲ್ಲಿದ್ದಾಗಲೂ ನಿಮಗೆ
ಖುಷಿಯಿತ್ತು, ನೀವು ಅಷ್ಟೊಂದು ದುಃಖಿ, ವಿಕಾರಿಗಳಾಗಿರಲಿಲ್ಲ, ಇಲ್ಲಂತೂ ಎಷ್ಟೊಂದು ದುಃಖಿ,
ವಿಕಾರಿಗಳಾಗಿದ್ದೀರಿ. ನೀವು ನಿಮ್ಮ ದೊಡ್ಡವರನ್ನು ನೋಡಿ ಎಷ್ಟೊಂದು ವಿಕಾರಿ ಕುಡಿತದ
ಚಟದಲ್ಲಿದ್ದಾರೆ. ಮಧ್ಯಪಾನವು ಬಹಳ ಕೆಟ್ಟವಸ್ತುವಾಗಿದೆ. ಸತ್ಯಯುಗದಲ್ಲಿ ಶುದ್ಧಾತ್ಮಗಳಷ್ಟೇ
ಇರುತ್ತಾರೆ ನಂತರ ಕೆಳಗೆ ಇಳಿಯುತ್ತಾ-ಇಳಿಯುತ್ತಾ ಸಂಪೂರ್ಣ ಅಪವಿತ್ರರಾಗುತ್ತಾರೆ ಆದ್ದರಿಂದ
ಇದನ್ನು ಘೋರ ನರಕವೆಂದು ಕರೆಯಲಾಗುವುದು. ಮಧ್ಯಪಾನವು ಇಂತಹ ವಸ್ತುವಾಗಿದೆ, ಅದರಿಂದ ಜಗಳ-ಕೊಲೆ,
ನಷ್ಟ ಮಾಡುವುದರಲ್ಲಿ ತಡಮಾಡುವುದಿಲ್ಲ. ಈ ಸಮಯದಲ್ಲಿ ಮನುಷ್ಯರ ಬುದ್ಧಿಯು ಭ್ರಷ್ಟವಾಗಿದೆ, ಮಾಯೆಯು
ಬಹಳ ಭಯಂಕರವಾಗಿದೆ. ತಂದೆಯು ಸರ್ವಶಕ್ತಿವಂತ, ಸುಖ ಕೊಡುವವರಾಗಿದ್ದಾರೆ. ಹಾಗೆಯೇ ಮಾಯೆಯೂ ಸಹ ಬಹಳ
ದುಃಖವನ್ನು ಕೊಡುವಂತಹದ್ದಾಗಿದೆ. ಕಲಿಯುಗದಲ್ಲಿ ಮನುಷ್ಯರ ಜೀವನ ಹೇಗಾಗಿಬಿಟ್ಟಿದೆ! ಒಮ್ಮೆಯೇ
ನಿಸ್ಸಾರವಾಗಿದೆ, ಸ್ವಲ್ಪವನ್ನೂ ತಿಳಿದುಕೊಳ್ಳುವುದಿಲ್ಲ. ಕಲ್ಲುಬುದ್ದಿಯವರಂತೆ ಇದ್ದಾರೆ. ಇದೂ
ಸಹ ನಾಟಕವಾಗಿದೆಯಲ್ಲವೆ. ಯಾರ ಅದೃಷ್ಟದಲ್ಲಿ ಇಲ್ಲವೆಂದರೆ ಬುದ್ಧಿಯು ಹಾಗೆಯೇ ಆಗಿಬಿಡುತ್ತದೆ.
ತಂದೆಯಂತೂ ಬಹಳ ಸಹಜವಾದಂತಹ ಜ್ಞಾನವನ್ನು ಕೊಡುತ್ತಾರೆ. ಮಕ್ಕಳೇ, ಮಕ್ಕಳೇ, ಎಂದು ಹೇಳುತ್ತಾ
ತಿಳಿಸುತ್ತಾರೆ. ಮಾತೆಯರೂ ಸಹ ಹೇಳುತ್ತಾರೆ - ನಮಗೆ 5 ಜನ ಲೌಕಿಕ ಮಕ್ಕಳು, ಒಬ್ಬರು ಪಾರಲೌಕಿಕ
ಮಗನಿದ್ದಾರೆ. ಅವರು ನಮ್ಮನ್ನು ಸುಖಧಾಮದಲ್ಲಿ ಕರೆದೊಯ್ಯಲು ಬಂದಿದ್ದಾರೆ. ತಂದೆಯೂ ಸಹ
ತಿಳಿದುಕೊಳ್ಳುತ್ತಾರೆ, ಯಾರು ನನ್ನನ್ನು ಮಗನೆಂದು ತಿಳಿದುಕೊಳ್ಳುತ್ತಾರೆ ಅವರು
ಜಾದೂಗಾರರಾದರಲ್ಲವೆ. ತಂದೆಯೂ ಜಾದೂಗಾರನೆಂದಮೇಲೆ ಮಕ್ಕಳೂ ಜಾದೂಗಾರರಾಗಿಬಿಟ್ಟರು. ತಂದೆಯು ನಮ್ಮ
ಮಗನೂ ಆಗಿದ್ದಾರೆಂದು ಹೇಳುತ್ತಾರೆ ಆದುದರಿಂದ ತಂದೆಯನ್ನು ಫಾಲೋ ಮಾಡಿ ಹೀಗೆ ಆಗಬೇಕಾಗಿದೆ.
ಸ್ವರ್ಗದಲ್ಲಿ ಇವರ ರಾಜ್ಯವಿತ್ತಲ್ಲವೆ! ಶಾಸ್ತ್ರಗಳಲ್ಲಿ ಈ ಮಾತುಗಳಿಲ್ಲ. ಭಕ್ತಿಮಾರ್ಗದ
ಶಾಸ್ತ್ರಗಳೂ ಸಹ ಡ್ರಾಮಾದಲ್ಲಿ ನೊಂದಾಯಿಸಲ್ಪಟ್ಟಿದೆ. ನಂತರವೂ ಆಗುತ್ತದೆ. ಇದನ್ನೂ ಸಹ ತಂದೆಯು
ತಿಳಿಸುತ್ತಾರೆ - ಓದಿಸಲು ಶಿಕ್ಷಕನು ಬೇಕಲ್ಲವೆ. ನಂತರ ಶಿಕ್ಷಕನ ಅವಶ್ಯಕತೆಯಿರುವುದಿಲ್ಲ. ಈ
ಪುಸ್ತಕ ಮೊದಲಾದುವುಗಳು ಸತ್ಯಯುಗದಲ್ಲಿರುವುದಿಲ್ಲ.
ತಂದೆಯು ತಿಳಿಸುತ್ತಾರೆ - ನೀವು ಆತ್ಮನೆಂದು ತಿಳಿದಿದ್ದೀರಲ್ಲವೆ. ಆತ್ಮಗಳಿಗೆ ತಂದೆಯು
ಅಗತ್ಯವಾಗಿರಬೇಕು. ಯಾವಾಗ ಯಾರಾದರೂ ಬರುತ್ತಾರೆಂದಾಗ ಎಲ್ಲರೂ ಹೇಳುತ್ತಾರೆ - ಹಿಂದೂ-ಮುಸ್ಲೀಂ
ಸಹೋದರರು ಆದರೆ ಅರ್ಥವನ್ನೇನೂ ತಿಳಿದುಕೊಂಡಿಲ್ಲ. ಬಾಯಿ-ಬಾಯಿಯ ಅರ್ಥವನ್ನು ತಿಳಿದುಕೊಳ್ಳಬೇಕಲ್ಲವೆ.
ಅಗತ್ಯವಾಗಿ ಅವರೆಲ್ಲರಿಗೂ ತಂದೆಯಿರಬೇಕು. ಇಂತಹ ಚಿಕ್ಕಮಾತನ್ನೂ ಸಹ ತಿಳಿದುಕೊಂಡಿಲ್ಲ.
ಭಗವಾನುವಾಚ - ಇದು ಅನೇಕ ಜನ್ಮಗಳ ಅಂತಿಮ ಜನ್ಮವಾಗಿದೆ. ಅರ್ಥವಂತೂ ಎಷ್ಟೊಂದು ಸ್ಪಷ್ಟವಾಗಿದೆ,
ಇದನ್ನು ಯಾರೂ ಸಹ ತಿರಸ್ಕರಿಸುವುದಿಲ್ಲ. ತಂದೆಯಂತೂ ಮಾರ್ಗವನ್ನು ತೋರಿಸುತ್ತಾರೆ. ನಂಬರ್ವನ್
ಇದ್ದಂತಹವರೇ ಲಾಸ್ಟ್ ನಂಬರ್ ಆಗುತ್ತಾರೆ. ಪಾವನರಾಗಿದ್ದವರೇ ಪತಿತರಾಗುತ್ತಾರೆ. ನೀವೂ ಸಹ
ತಿಳಿದುಕೊಂಡಿದ್ದೀರಿ - ನಾವು ಪಾವನರಾಗಿದ್ದವರು ಪುನಃ ಪಾವನರಾಗುತ್ತೇವೆ. ತಂದೆಯನ್ನು ನೆನಪು
ಮಾಡುವುದರಿಂದಲೇ ಪಾವನರಾಗುತ್ತೇವೆ. ಇದು ರಾವಣರಾಜ್ಯವಾಗಿದೆ, ಶಿವಾಲಯವನ್ನು ರಾಮರಾಜ್ಯವೆಂದು
ಹೇಳಲಾಗುವುದು. ಸೀತಾರಾಮನು ತ್ರೇತಾಯುಗದಲ್ಲಿ ರಾಜ್ಯ ಮಾಡಿದನು, ಇದೂ ಸಹ ತಿಳಿದುಕೊಳ್ಳುವಂತಹ
ಮಾತುಗಳಾಗಿವೆ, ಅಲ್ಲಿ 2 ಕಲೆಗಳು ಕಡಿಮೆಯಿರುವವರು ಎಂದು ಹೇಳಲಾಗುವುದು. ಸತ್ಯಯುಗವು
ಶ್ರೇಷ್ಠವಾಗಿದೆ, ಅದನ್ನು ನೆನಪು ಮಾಡುತ್ತಾರೆ. ತ್ರೇತಾ ಹಾಗೂ ದ್ವಾಪರವನ್ನು ಅಷ್ಟೊಂದು ನೆನಪು
ಮಾಡುವುದಿಲ್ಲ. ಸತ್ಯಯುಗ ಹೊಸಪ್ರಪಂಚ ಮತ್ತು ಕಲಿಯುಗವು ಹಳೆಯ ಪ್ರಪಂಚವಾಗಿದೆ. ಶೇ. 100 ಭಾಗದಷ್ಟು
ಸುಖ, ಹಾಗೂ ಶೇ. 100ರಷ್ಟು ದುಃಖ. ಆ ತ್ರೇತಾ ಹಾಗೂ ದ್ವಾಪರಯುಗವು ಅರ್ಧಸುಖ ಮತ್ತು
ಅರ್ಧದುಃಖವಾಗಿದೆ ಆದ್ದರಿಂದ ಮುಖ್ಯವಾಗಿ ಸತ್ಯಯುಗ ಹಾಗೂ ಕಲಿಯುಗವಾಗಿದೆ ಎಂದು ಹೇಳಲಾಗುವುದು.
ತಂದೆಯು ಸತ್ಯಯುಗದ ಸ್ಥಾಪನೆ ಮಾಡುತ್ತಾರೆ. ಅದಕ್ಕಾಗಿ ಪುರುಷಾರ್ಥ ಮಾಡುವುದೇ ನಿಮ್ಮ ಕೆಲಸವಾಗಿದೆ.
ನೀವು ಸತ್ಯಯುಗದ ನಿವಾಸಿಯಾಗುತ್ತೀರೋ ಅಥವಾ ತ್ರೇತಾದ ನಿವಾಸಿಯಾಗುತ್ತೀರೋ? ದ್ವಾಪರದಲ್ಲಿ ಮತ್ತೆ
ಕೆಳಗಡೆ ಇಳಿಯುತ್ತೀರಿ ಆದರೂ ಸಹ ಅವರು ದೇವಿ-ದೇವತಾಧರ್ಮದವರಾಗಿರುತ್ತಾರೆ. ಆದರೆ ಪತಿತರಾಗಿರುವ
ಕಾರಣ ತಮ್ಮನ್ನು ದೇವಿ-ದೇವತೆಗಳೆಂದು ಹೇಳಿಕೊಳ್ಳುವುದಿಲ್ಲ. ತಂದೆಯು ಮಧುರಾತಿ ಮಧುರ ಮಕ್ಕಳಿಗೆ
ಪ್ರತಿನಿತ್ಯ ತಿಳಿಸುತ್ತಾರೆ. ಮನ್ಮನಾಭವ - ಮುಖ್ಯವಾದ ಮಾತಾಗಿದೆ. ನೀವೇ ನಂಬರ್ವನ್ ಆಗುತ್ತೀರಿ,
84 ಜನ್ಮದ ಚಕ್ರವನ್ನು ಸುತ್ತಿಕೊಂಡು ಅಂತ್ಯದಲ್ಲಿ ಬರುತ್ತೀರಿ ನಂತರ ನಂಬರ್ವನ್ನಲ್ಲಿ ಹೋಗುತ್ತೀರಿ
ಆದುದರಿಂದ ಈಗ ಬೇಹದ್ದಿನ ತಂದೆಯನ್ನು ನೆನಪು ಮಾಡಬೇಕು. ಅವರು ಬೇಹದ್ದಿನ ತಂದೆಯಾಗಿದ್ದಾರೆ.
ಪುರುಷೋತ್ತಮ ಸಂಗಮಯುಗದಲ್ಲಿ ಬೇಹದ್ದಿನ ತಂದೆಯು ಬಂದು 21 ಜನ್ಮಗಳ ಸ್ವರ್ಗದ ಸುಖವನ್ನು ನಿಮಗೆ
ಕೊಡುತ್ತಾರೆ. ನಿಮ್ಮ ವಂಶವು ಮುಗಿದತಕ್ಷಣ ತಮಗೆ ತಾವೇ ಶರೀರ ಬಿಡುತ್ತೀರಿ. ಯೋಗಬಲವಿದೆಯಲ್ಲವೆ.
ನಿಯಮವೇ ಈ ರೀತಿ ರಚಿಸಲ್ಪಟ್ಟಿದೆ, ಇದಕ್ಕೆ ಯೋಗಬಲವೆಂದು ಕರೆಯಲಾಗುವುದು. ಅಲ್ಲಿ ಜ್ಞಾನದ
ಮಾತುಗಳಿರುವುದಿಲ್ಲ, ತಾನೇ ತಾನಾಗಿ ವೃದ್ಧರಾಗುತ್ತೀರಿ. ಅಲ್ಲಿ ಯಾವುದೇ ರೋಗ
ಮೊದಲಾದುವುಗಳಿರುವುದಿಲ್ಲ. ಅಂಗವಿಕಲರು ಅಥವಾ ವಕ್ರವಾಗಿರುವುದಿಲ್ಲ, ಸದಾ
ಆರೋಗ್ಯವಂತರಾಗಿರುತ್ತಾರೆ. ಅಲ್ಲಿ ದುಃಖದ ಹೆಸರೂ, ಚಿಹ್ನೆಯೂ ಇರುವುದಿಲ್ಲ ನಂತರ ಸ್ವಲ್ಪ-ಸ್ವಲ್ಪ
ಕಲೆಗಳು ಕಡಿಮೆಯಾಗುತ್ತದೆ. ಈಗ ಮಕ್ಕಳು ಬೇಹದ್ದಿನ ತಂದೆಯಿಂದ ಶ್ರೇಷ್ಠ ಆಸ್ತಿಯನ್ನು ಪಡೆಯುವಂತಹ
ಪುರುಷಾರ್ಥ ಮಾಡಬೇಕಾಗಿದೆ. ಪಾಸ್-ವಿತ್-ಆನರ್ ಆಗಬೇಕಾಗಿದೆ. ಎಲ್ಲರೂ ಶ್ರೇಷ್ಠಪದವಿಯನ್ನಂತೂ
ಪಡೆಯಲು ಸಾಧ್ಯವಾಗುವುದಿಲ್ಲ. ಯಾರು ಸೇವೆಯನ್ನೇ ಮಾಡುವುದಿಲ್ಲವೋ ಅವರು ಎಂತಹ ಪದವಿಯನ್ನು
ಪಡೆಯುತ್ತಾರೆ? ಸಂಗ್ರಹಾಲಯದಲ್ಲಿಯೂ ಸಹ ಮಕ್ಕಳು ಎಷ್ಟೊಂದು ಸೇವೆಯನ್ನು ಮಾಡುತ್ತಾರೆ.
ಆಮಂತ್ರಣವಿಲ್ಲದೇ ಅಲ್ಲಿಗೆ ಜನರು ಬರುತ್ತಾರೆ. ಇದನ್ನು ವಿಹಂಗ ಮಾರ್ಗದ ಸೇವೆಯೆಂದು ಕರೆಯಲಾಗುವುದು.
ಇದರಿಂದ ಮತ್ತ್ಯಾವ ವಿಹಂಗಮಾರ್ಗದ ಸೇವೆಯು ತಯಾರಾಗುತ್ತದೆಯೆಂದು ತಿಳಿಯದು. 2 ಅಥವಾ 4
ಮುಖ್ಯಚಿತ್ರಗಳು ಜೊತೆಯಲ್ಲಿರಲಿ. ದೊಡ್ಡ-ದೊಡ್ಡ ತ್ರಿಮೂರ್ತಿ ಚಿತ್ರ, ಏಣಿಚಿತ್ರ, ಇವು
ಪ್ರತಿಯೊಂದು ಸ್ಥಾನದಲ್ಲಿ ಬಹಳ ದೊಡ್ಡ-ದೊಡ್ಡದಾಗಿರಲಿ. ಯಾವಾಗ ಮಕ್ಕಳು ಬುದ್ಧಿವಂತರಾಗುತ್ತಾರೆಯೋ
ಆಗ ಸೇವೆಯು ಆಗುತ್ತದೆಯಲ್ಲವೆ. ಸೇವೆಯಂತೂ ಆಗಬೇಕಲ್ಲವೆ! ಹಳ್ಳಿಯಲ್ಲಿಯೂ ಸೇವೆಯನ್ನು ಮಾಡಬೇಕು.
ಒಂದುವೇಳೆ ಮಾತೆಯರಿಗೆ ಓದು-ಬರಹ ಗೊತ್ತಿಲ್ಲದಿದ್ದರೂ ತಂದೆಯ ಪರಿಚಯವನ್ನು ಕೊಡುವುದು ಬಹಳ
ಸಹಜವಾಗುತ್ತದೆ. ಮೊದಲೆಲ್ಲಾ ಹೆಣ್ಣುಮಕ್ಕಳು ಓದುತ್ತಿರಲಿಲ್ಲ. ಮುಸಲ್ಮಾನರ ರಾಜ್ಯದಲ್ಲಿ ಕೇವಲ
ಕಣ್ಣನ್ನು ಮಾತ್ರ ತೆರೆದು ಹೊರಗೆ ಹೋಗುತ್ತಿದ್ದರು. ಈ ತಂದೆಯಂತೂ ಅನುಭವಿಯಾಗಿದ್ದಾರೆ. ತಂದೆಯು
ತಿಳಿಸುತ್ತಾರೆ - ನಾನು ಎಲ್ಲವನ್ನೂ ತಿಳಿದುಕೊಂಡಿದ್ದೇನೆ. ನಾನಂತೂ ಮೇಲಿರುತ್ತೇನೆ. ಈ ಎಲ್ಲಾ
ಮಾತುಗಳನ್ನು ಈ ಬ್ರಹ್ಮನೇ ನಿಮಗೆ ತಿಳಿಸುತ್ತಾರೆ. ಇವರು ಅನುಭವಿಯಾಗಿದ್ದಾರೆ. ನಾನಂತೂ
ಮನ್ಮಾನಭವದ ಮಾತುಗಳನ್ನೇ ತಿಳಿಸುತ್ತೇನೆ ಹಾಗೂ ಸೃಷ್ಟಿಚಕ್ರದ ರಹಸ್ಯವನ್ನೇ ತಿಳಿಸುತ್ತೇನೆ. ಈ
ಬ್ರಹ್ಮಾ ಇದನ್ನು ತಿಳಿದುಕೊಂಡಿಲ್ಲ. ಅವರು ತಮ್ಮ ಅನುಭವವನ್ನು ಬೇರೆಯಾಗಿ ತಿಳಿಸಿಕೊಡುತ್ತಾರೆ,
ನಾನು ಈ ಮಾತುಗಳಲ್ಲಿ ಹೋಗುವುದಿಲ್ಲ. ನಿಮಗೆ ಮಾರ್ಗ ತೋರಿಸುವುದೇ ನನ್ನ ಪಾತ್ರವಾಗಿದೆ, ನಾನು ತಂದೆ,
ಶಿಕ್ಷಕ, ಗುರುವಾಗಿದ್ದೇನೆ. ಶಿಕ್ಷಕನಾಗಿ ನಿಮಗೆ ಓದಿಸುತ್ತೇನೆ ಆದರೆ ಇಲ್ಲಿ ನಿಮಗೆ ಕೃಪೆ
ಮುಂತಾದುವುಗಳ ಮಾತಿಲ್ಲ. ಓದಿಸುತ್ತೇನೆ ನಂತರ ಜೊತೆಯಲ್ಲಿ ಕರೆದೊಯ್ಯುವವನಾಗಿದ್ದೇನೆ. ಈ
ವಿದ್ಯೆಯಿಂದ ಸದ್ಗತಿಯಾಗುತ್ತದೆ. ಎಲ್ಲರನ್ನು ಕರೆದೊಯ್ಯುವುದಕ್ಕೋಸ್ಕರವೇ ನಾನು ಬಂದಿದ್ದೇನೆ.
ಶಿವನ ಒಡ್ಡೋಲಗ ಅಥವಾ ಮೆರವಣಿಗೆಯೆಂದು ಗಾಯನವಿದೆ, ಶಂಕರನ ಮೆರವಣಿಗೆಯೆಂದು ಹೇಳುವುದಿಲ್ಲ. ಎಲ್ಲಾ
ಆತ್ಮಗಳು ಮಧುಮಗನ (ಶಿವನ) ಹಿಂದೆ ಹೋಗುತ್ತವೆ. ಇವರೆಲ್ಲರೂ ಭಕ್ತರಾಗಿದ್ದಾರೆ, ನಾನು
ಭಗವಂತನಾಗಿದ್ದೇನೆ. ನೀವು ನನ್ನನ್ನು ಪಾವನ ಮಾಡಿ, ಜೊತೆಯಲ್ಲಿ ಕರೆದೊಯ್ಯುವ ಸಲುವಾಗಿಯೇ
ಕರೆದಿದ್ದೀರಿ. ಆದುದರಿಂದ ನಾನು ನೀವು ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ಯುತ್ತೇನೆ,
ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಜೊತೆಯಲ್ಲಿ ಕರೆದೊಯ್ಯಲೇಬೇಕಾಗಿದೆ.
ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ - ಮನ್ಮನಾಭವ. ತಂದೆಯನ್ನು ನೆನಪು ಮಾಡಿದಾಗ ಆಸ್ತಿಯ ನೆನಪು
ಬರುತ್ತದೆ, ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆಯಲ್ಲವೆ! ಅದಕ್ಕಾಗಿ ಇಂತಹ ಪುರುಷಾರ್ಥ ಮಾಡಬೇಕು.
ನೀವು ಮಕ್ಕಳಿಗೆ ಯಾವುದೇ ಕಷ್ಟವನ್ನು ಕೊಡುವುದಿಲ್ಲ. ನೀವು ಬಹಳ ದುಃಖವನ್ನು ನೋಡಿದ್ದೀರೆಂದು ನಾನು
ತಿಳಿದಿದ್ದೇನೆ. ಈಗ ನಿಮಗೆ ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಭಕ್ತಿಯಲ್ಲಿ ಅಲ್ಪಾಯಸ್ಸೂ ಸಹ
ಇರುತ್ತದೆ. ಅಕಾಲ ಮೃತ್ಯು ಆಗುತ್ತಿರುತ್ತದೆ. ಎಷ್ಟೊಂದು ದುಃಖಿಗಳಾಗಿ ಕೂಗುತ್ತಿರುತ್ತಾರೆ,
ಎಷ್ಟೊಂದು ದುಃಖವನ್ನು ಹೊರುತ್ತಾರೆ. ಬುದ್ಧಿಯು ಕೆಟ್ಟುಹೋಗುತ್ತದೆ. ಈಗ ತಂದೆಯು ತಿಳಿಸುತ್ತಾರೆ
- ಈಗ ನನ್ನನ್ನು ನೆನಪು ಮಾಡಿ. ಸ್ವರ್ಗದ ಮಾಲೀಕರಾಗಬೇಕೆಂದರೆ ದೈವೀಗುಣಗಳನ್ನು ಧಾರಣೆ ಮಾಡಬೇಕು.
ಶ್ರೇಷ್ಠಪದವಿಗಾಗಿ ಸದಾ ಪುರುಷಾರ್ಥವನ್ನು ಮಾಡಲಾಗುತ್ತದೆ. ಈ ಲಕ್ಷ್ಮಿ-ನಾರಾಯಣರಂತೆ ಆಗಬೇಕು.
ತಂದೆಯು ಹೇಳುತ್ತಾರೆ - ಸೂರ್ಯವಂಶಿ, ಚಂದ್ರವಂಶಿಯ ಎರಡು ಧರ್ಮಗಳನ್ನು ನಾನು ಸ್ಥಾಪನೆ ಮಾಡುತ್ತೇನೆ.
ಅವರು (ಚಂದ್ರವಂಶಿ) ಅನುತ್ತೀರ್ಣರಾಗುವಕಾರಣ ಕ್ಷತ್ರಿಯರೆಂದು ಅವರನ್ನು ಕರೆಯಲಾಗುವುದು. ಯುದ್ಧದ
ಮೈದಾನವಾಗಿದೆಯಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸುಖಧಾಮದ
ಆಸ್ತಿಯ ಪೂರ್ಣ ಅಧಿಕಾರವನ್ನು ತೆಗೆದುಕೊಳ್ಳುವ ಸಲುವಾಗಿ ಸಂಗಮಯುಗದಲ್ಲಿ ಆತ್ಮಿಕ ಜಾದೂಗಾರರಾಗಿ
ತಂದೆಯನ್ನು ತಮ್ಮ ಮಗನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಸಂಪೂರ್ಣ ಬಲಿಹಾರಿಯಾಗಬೇಕು.
2.
ಸ್ವದರ್ಶನಚಕ್ರಧಾರಿಯಾಗಿ ಸ್ವಯಂನ್ನು ಅದೃಷ್ಟ ನಕ್ಷತ್ರವನ್ನಾಗಿ ಮಾಡಿಕೊಳ್ಳಬೇಕು. ವಿಹಂಗಮಾರ್ಗದ
ಸೇವೆಗೆ ನಿಮಿತ್ತರಾಗಿ ಶ್ರೇಷ್ಠಪದವಿಯನ್ನು ತೆಗೆದುಕೊಳ್ಳಬೇಕು. ಹಳ್ಳಿ-ಹಳ್ಳಿಯಲ್ಲಿಯೂ ಸೇವೆ
ಮಾಡಬೇಕು, ಜೊತೆಜೊತೆಗೆ ನೆನಪಿನ ಚಾರ್ಟನ್ನೂ ಇಡಬೇಕು.
ವರದಾನ:
ದೃಢ ಸಂಕಲ್ಪದ
ಬೆಂಕಿಕಡ್ಡಿಯಿಂದ ಆತ್ಮಿಕ ಬಾಂಬ್ನ ಪಟಾಕಿಗಳನ್ನು ಸುಡುವಂತಹವರು ಸದಾ ವಿಜಯಿ ಭವ
ಇತ್ತೀಚಿನ ದಿನಗಳಲ್ಲಿ
ಪಟಾಕಿಯಲ್ಲಿ ಬಾಂಬ್ಸ್ ತಯಾರಿಸುತ್ತಾರೆ ಆದರೆ ತಾವು ದೃಡ ಸಂಕಲ್ಪವೆಂಬ ಬೆಂಕಿ ಕಡ್ಡಿಯಿಂದ ಆತ್ಮಿಕ
ಬಾಂಬ್ನ ಪಟಾಕಿಯನ್ನು ಸುಡಿ ಯಾವುದರಿಂದ ಹಳೆಯದೆಲ್ಲವೂ ಸಮಾಪ್ತಿಯಾಗಿಬಿಡಬೇಕು. ಆ ಜನರು ಪಟಾಕಿಯ
ಮೇಲೆ ಹಣವನ್ನು ಖರ್ಚು ಮಾಡಿ ಕಳೆದುಕೊಳ್ಳುತ್ತಾರೆ ಮತ್ತು ನೀವು ಸಂಪಾದನೆ ಜಮಾ ಮಾಡಿಕೊಳ್ಳುವಿರಿ.
ಅದು ಬಾಣ,ಬಿರುಸುಗಳ ಆಟ ಆದರೆ ನಿಮ್ಮದು ಹಾರುವ ಕಲೆಯ ಆಟವಾಗಿದೆ. ಇದರಲ್ಲಿ ನೀವು
ವಿಜಯಿಗಳಾಗಿಬಿಡುವಿರಿ. ಆದ್ದರಿಂದ ಡಬಲ್ ಲಾಭ ಪಡೆಯಿರಿ, ಸುಟ್ಟು ಸಹ ಹಾಕುವುದು, ಸಂಪಾದನೆ ಸಹ
ಮಾಡಿಕೊಳ್ಳುವುದು- ಈ ವಿಧಿಯನ್ನು ನಿಮ್ಮದಾಗಿಸಿಕೊಳ್ಳಿ.
ಸ್ಲೋಗನ್:
ಯಾವುದಾದರೂ
ವಿಶೇಷ ಕಾರ್ಯದಲ್ಲಿ ಸಹಾಯಕರಾಗುವುದೇ ಆಶೀರ್ವಾದದ ಲಿಫ್ಟ್ ತೆಗೆದುಕೊಳ್ಳುವುದು.