02.12.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ತಮ್ಮ ದೀಪದ ಸಂಭಾಲನೆಯನ್ನು ತಾವೇ ಮಾಡಿಕೊಳ್ಳಬೇಕಾಗಿದೆ, ಬಿರುಗಾಳಿಗಳಿಂದ ಪಾರಾಗಲು ಜ್ಞಾನ-ಯೋಗದ
ಎಣ್ಣೆಯು ಅವಶ್ಯವಾಗಿ ಬೇಕು”
ಪ್ರಶ್ನೆ:
ಯಾವ
ಪುರುಷಾರ್ಥವು ಗುಪ್ತತಂದೆಯಿಂದ ಗುಪ್ತ ಆಸ್ತಿಯನ್ನು ಕೊಡಿಸುತ್ತದೆ?
ಉತ್ತರ:
ಅಂತರ್ಮುಖಿ
ಅರ್ಥಾತ್ ಮೌನವಾಗಿದ್ದು ತಂದೆಯನ್ನು ನೆನಪು ಮಾಡಿ, ಅದರಿಂದ ಗುಪ್ತ ಆಸ್ತಿಯು ಸಿಗುವುದು.
ನೆನಪಿನಲ್ಲಿರುತ್ತಾ ಶರೀರಬಿಟ್ಟರೆ ಬಹಳ ಒಳ್ಳೆಯದು. ಇದರಲ್ಲಿ ಯಾವುದೇ ತೊಂದರೆಯಿಲ್ಲ. ನೆನಪಿನ
ಜೊತೆಜೊತೆಗೆ ಜ್ಞಾನ-ಯೋಗದ ಸೇವೆಯನ್ನು ಮಾಡಬೇಕಾಗಿದೆ. ಒಂದುವೇಳೆ ಮಾಡಲು ಆಗದಿದ್ದರೆ ಕರ್ಮಣಾಸೇವೆ
ಮಾಡಿ. ಅನ್ಯರಿಗೆ ಸುಖ ಕೊಡುತ್ತೀರೆಂದರೆ ಆಶೀರ್ವಾದವು ಸಿಗುವುದು. ಚಲನೆ ಮತ್ತು ಮಾತು-ವ್ಯವಹಾರವು
ಬಹಳ ಸಾತ್ವಿಕವಾಗಿರಬೇಕು.
ಗೀತೆ:
ನಿರ್ಬಲರೊಂದಿಗೆ
ಬಲಶಾಲಿಯ ಯುದ್ಧ......................
ಓಂ ಶಾಂತಿ.
ತಂದೆಯು ತಿಳಿಸುತ್ತಾರೆ - ಇಂತಹ ಗೀತೆಯನ್ನು ಕೇಳಿದಾಗ ಪ್ರತಿಯೊಬ್ಬರೂ ತಮ್ಮ ಮೇಲೆ ತಾವೇ
ವಿಚಾರಸಾಗರ ಮಥನ ಮಾಡಬೇಕಾಗಿದೆ. ಇದಂತೂ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಮನುಷ್ಯರು
ಶರೀರಬಿಟ್ಟಾಗ 12 ದಿನಗಳವರೆಗೆ ದೀಪವನ್ನು ಬೆಳಗಿಸುತ್ತಾರೆ. ಮತ್ತೆ ನೀವು ಸಾಯುವುದಕ್ಕಾಗಿ ತಯಾರಿ
ಮಾಡಿಕೊಳ್ಳುತ್ತಿದ್ದೀರಿ ಹಾಗೂ ಪುರುಷಾರ್ಥ ಮಾಡಿ ತಮ್ಮ ಜ್ಯೋತಿಯನ್ನು ತಾವೇ
ಬೆಳಗಿಸಿಕೊಳ್ಳುತ್ತಿದ್ದೀರಿ. ಪುರುಷಾರ್ಥವನ್ನು ಮಾಲೆಯಲ್ಲಿ ಬರುವವರೇ ಮಾಡುತ್ತಾರೆ, ಪ್ರಜೆಗಳು ಈ
ಮಾಲೆಯಲ್ಲಿ ಬರುವುದಿಲ್ಲ. ನಾವು ವಿಜಯಮಾಲೆಯಲ್ಲಿ ಮೊದಲಿಗೆ ಹೋಗಬೇಕೆಂಬ ಪುರುಷಾರ್ಥ ಮಾಡಬೇಕು.
ಮಾಯಾಬೆಕ್ಕು ಬಿರುಗಾಳಿಗಳನ್ನು ತಂದು ದೀಪವು ನಂದಿಸಿ ವಿಕರ್ಮ ಮಾಡಿಸುವಂತಾಗಬಾರದು. ಈಗ ಇದರಲ್ಲಿ
ಜ್ಞಾನ ಮತ್ತು ಯೋಗ ಎರಡೂ ಬಲ ಬೇಕು. ಯೋಗದ ಜೊತೆ ಜ್ಞಾನವು ಅವಶ್ಯಕ. ಪ್ರತಿಯೊಬ್ಬರೂ ತಮ್ಮ ದೀಪದ
ಸಂಭಾಲನೆ ಮಾಡಬೇಕಾಗಿದೆ. ಅಂತ್ಯದವರೆಗೆ ಪುರುಷಾರ್ಥವು ನಡೆಯಲೇಬೇಕಾಗಿದೆ. ಸ್ಪರ್ಧೆಯು
ನಡೆಯುತ್ತದೆಯೆಂದರೆ ಎಲ್ಲಿಯೂ ಜ್ಯೋತಿಯು ಕಡಿಮೆಯಾಗದಿರಲಿ, ನಂದಿಹೋಗದಂತೆ ಬಹಳ ಸಂಭಾಲನೆ ಮಾಡಬೇಕು
ಆದ್ದರಿಂದ ಯೋಗ ಮತ್ತು ಜ್ಞಾನದ ಎಣ್ಣೆಯನ್ನು ಪ್ರತಿನಿತ್ಯವೂ ಹಾಕಬೇಕಾಗುತ್ತದೆ. ಯೋಗಬಲದ
ಶಕ್ತಿಯಿಲ್ಲದಿದ್ದರೆ ನೀವು ಓಟವನ್ನು ಓಡಲು ಸಾಧ್ಯವಿಲ್ಲ ಹಿಂದುಳಿಯುತ್ತೀರಿ. ಶಾಲೆಯಲ್ಲಿ
ಸಬ್ಜೆಕ್ಟ್ಗಳಿರುತ್ತವೆ. ನಾವು ಸಬ್ಜೆಕ್ಟ್ಗಳಲ್ಲಿ ತೀಕ್ಷ್ಣವಾಗಿಲ್ಲ ಎಂದು ನೋಡುತ್ತಾರೆ ಆಗ ಮುಂದೆ
ಹೋಗುವ ಪ್ರಯತ್ನಪಡುತ್ತಾರೆ. ಇಲ್ಲಿಯೂ ಹಾಗೆಯೇ ಸ್ಥೂಲಸೇವೆಯ ಸಬ್ಜೆಕ್ಟ್ ಬಹಳ ಒಳ್ಳೆಯದಾಗಿದೆ,
ಅನೇಕರ ಆಶೀರ್ವಾದವು ಸಿಗುತ್ತದೆ. ಕೆಲವು ಮಕ್ಕಳು ಜ್ಞಾನದ ಸರ್ವೀಸ್ ಮಾಡುತ್ತಾರೆ, ದಿನ-ಪ್ರತಿದಿನ
ಸರ್ವೀಸಿನ ವೃದ್ಧಿಯಾಗುತ್ತಾ ಹೋಗುತ್ತದೆ. ಒಬ್ಬ ಮಾಲೀಕನಿಗೆ 6-8 ಅಂಗಡಿಗಳಿರುತ್ತವೆ, ಎಲ್ಲವೂ
ಒಂದೇ ರೀತಿ ನಡೆಯುವುದಿಲ್ಲ. ಕೆಲವು ಅಂಗಡಿಗಳಲ್ಲಿ ಕಡಿಮೆ ವ್ಯಾಪಾರ, ಇನ್ನೂ ಕೆಲವು ಅಂಗಡಿಗಳಲ್ಲಿ
ಹೆಚ್ಚಿನ ವ್ಯಾಪಾರವಾಗುತ್ತದೆ. ನಿಮ್ಮದೂ ಸಹ ಒಂದುದಿನ ಇಂತಹ ಸಮಯವು ಬರಲಿದೆ - ರಾತ್ರಿಯಲ್ಲಿಯೂ
ಸಹ ಬಿಡುವು ಸಿಗುವುದಿಲ್ಲ. ಜ್ಞಾನಸಾಗರ ತಂದೆಯು ಬಂದಿದ್ದಾರೆ, ಅವಿನಾಶಿ ಜ್ಞಾನರತ್ನಗಳಿಂದ
ಜೋಳಿಗೆಯನ್ನು ತುಂಬುತ್ತಾರೆಂದು ಕೊನೆಗೊಂದು ದಿನ ಎಲ್ಲರಿಗೂ ತಿಳಿಯುತ್ತದೆ. ಆಗ ಬಹಳ ಮಂದಿ ಮಕ್ಕಳು
ಬರುತ್ತಾರೆ, ಮಾತೇ ಕೇಳಬೇಡಿ! ಇಲ್ಲಿ ಇಂತಹ ವಸ್ತು ಬಹಳ ಕಡಿಮೆ ಬೆಲೆಯಲ್ಲಿ ಸಿಗುತ್ತದೆಯೆಂದು
ಒಬ್ಬರು ಇನ್ನೊಬ್ಬರಿಗೆ ತಿಳಿಸುತ್ತಾರಲ್ಲವೆ. ನೀವು ಮಕ್ಕಳೂ ಸಹ ತಿಳಿಸುತ್ತೀರಿ - ಈ ರಾಜಯೋಗದ
ಶಿಕ್ಷಣವು ಬಹಳ ಸಹಜವಾಗಿದೆ. ಎಲ್ಲರಿಗೆ ಈ ಜ್ಞಾನರತ್ನಗಳ ಬಗ್ಗೆ ತಿಳಿಯುತ್ತಾಹೋದಂತೆ ಅನೇಕರು
ಬರುತ್ತಿರುತ್ತಾರೆ. ನೀವು ಈ ಜ್ಞಾನ ಮತ್ತು ಯೋಗದ ಸೇವೆ ಮಾಡುತ್ತೀರಿ. ಯಾರು ಈ ಜ್ಞಾನ-ಯೋಗದ
ಸೇವೆಯನ್ನು ಮಾಡಲಾಗುವುದಿಲ್ಲವೋ ಅವರಿಗೆ ಕರ್ಮಣಾಸೇವೆಗೂ ಅಂಕಗಳಿವೆ, ಎಲ್ಲರ ಆಶೀರ್ವಾದವು
ಸಿಗುತ್ತದೆ. ಒಬ್ಬರು ಇನ್ನೊಬ್ಬರಿಗೆ ಸುಖ ಕೊಡಲಾಗುತ್ತದೆ. ಇದಂತೂ ಬಹಳ-ಬಹಳ ಸಸ್ತಾಗಣಿಯಾಗಿದೆ.
ಇದು ಅವಿನಾಶಿ ಜ್ಞಾನರತ್ನಗಳ ಗಣಿಯಾಗಿದೆ. ಅಷ್ಟರತ್ನಗಳ ಮಾಲೆಯಲ್ಲಿ ಮಾಡುತ್ತಾರಲ್ಲವೆ, ಅದನ್ನು
ಪೂಜಿಸುತ್ತಾರೆ ಆದರೆ ಇದು ಯಾರ ಮಾಲೆಯಾಗಿದೆ ಎಂದು ಯಾರಿಗೂ ತಿಳಿದಿಲ್ಲ.
ನಾವೇ ಹೇಗೆ ಪೂಜ್ಯರಿಂದ
ಪೂಜಾರಿಗಳಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಇದು ಬಹಳ ಅದ್ಭುತವಾದ ಜ್ಞಾನವಾಗಿದೆ.
ಇದನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಈಗ ನೀವು ಭಾಗ್ಯಶಾಲಿ ನಕ್ಷತ್ರ ಮಕ್ಕಳಿಗೆ
ನಿಶ್ಚಯವಿದೆ - ನಾವು ಸ್ವರ್ಗದ ಮಾಲೀಕರಾಗಿದ್ದೆವು, ಈಗ ನರಕದ ಮಾಲೀಕರಾಗಿಬಿಟ್ಟಿದ್ದೇವೆ.
ಸ್ವರ್ಗದ ಮಾಲೀಕರಾಗಿದ್ದಾಗ ಪುನರ್ಜನ್ಮವನ್ನು ಅಲ್ಲಿಯೇ ತೆಗೆದುಕೊಳ್ಳುತ್ತೇವೆ. ಈಗ ಮತ್ತೆ ನಾವು
ಸ್ವರ್ಗದ ಮಾಲೀಕರಾಗುತ್ತಿದ್ದೇವೆ. ನೀವು ಬ್ರಾಹ್ಮಣರಿಗೇ ಈ ಸಂಗಮಯುಗವು ತಿಳಿದಿದೆ. ಇನ್ನೊಂದು ಕಡೆ
ಇಡೀ ಪ್ರಪಂಚವು ಕಲಿಯುಗದಲ್ಲಿದೆ. ಯುಗವಂತೂ ಬೇರೆ-ಬೇರೆಯಲ್ಲವೆ (ಕಲಿಯುಗ-ಸಂಗಮಯುಗ).
ಸತ್ಯಯುಗದಲ್ಲಿದ್ದಾಗ ಪುನರ್ಜನ್ಮವನ್ನೂ ಸತ್ಯಯುಗದಲ್ಲಿಯೇ ತೆಗೆದುಕೊಳ್ಳುತ್ತೀರಿ. ಈಗ ನೀವು
ಸಂಗಮಯುಗದಲ್ಲಿದ್ದೀರಿ. ಈಗ ಯಾರಾದರೂ ಶರೀರಬಿಡುತ್ತಾರೆಂದರೆ ಸಂಸ್ಕಾರಗಳನುಸಾರ ಮತ್ತೆ ಇಲ್ಲಿಯೇ
ಬಂದು ಜನ್ಮವನ್ನು ತೆಗೆದುಕೊಳ್ಳುತ್ತಾರೆ. ನೀವು ಸಂಗಮಯುಗದ ಬ್ರಾಹ್ಮಣರಾಗಿದ್ದೀರಿ, ಅವರು
ಕಲಿಯುಗದ ಶೂದ್ರರಾಗುತ್ತಾರೆ. ಈ ಜ್ಞಾನವೂ ಸಹ ನಿಮಗೆ ಸಂಗಮಯುಗದಲ್ಲಿಯೇ ಸಿಗುತ್ತದೆ. ನೀವು
ಬ್ರಹ್ಮಾಕುಮಾರ-ಕುಮಾರಿಯರು ಜ್ಞಾನಗಂಗೆಯರು ಪ್ರತ್ಯಕ್ಷರೂಪದಲ್ಲಿ ಈಗ ಸಂಗಮಯುಗದಲ್ಲಿದ್ದೀರಿ. ಈಗ
ನೀವು ಸ್ಪರ್ಧೆ ಮಾಡಬೇಕಾಗಿದೆ. ಅಂಗಡಿಯನ್ನು ಸಂಭಾಲನೆ ಮಾಡಬೇಕಾಗಿದೆ. ಜ್ಞಾನ-ಯೋಗದ
ಧಾರಣೆಯಿಲ್ಲದಿದ್ದರೆ ಅಂಗಡಿಯನ್ನು ಸಂಭಾಲನೆ ಮಾಡಲು ಆಗುವುದಿಲ್ಲ. ಸೇವೆಯ ಪ್ರತಿಫಲವನ್ನಂತೂ
ತಂದೆಯು ಕೊಡುತ್ತಾರೆ, ಯಜ್ಞವನ್ನು ರಚಿಸಿದಾಗ ಭಿನ್ನ-ಭಿನ್ನ ಪ್ರಕಾರದ ಬ್ರಾಹ್ಮಣರು ಬರುತ್ತಾರೆ
ಮತ್ತೆ ಅವರಲ್ಲಿ ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ ದಕ್ಷಿಣೆಯು ಸಿಗುತ್ತದೆ. ಈಗ ಪರಮಪಿತ
ಪರಮಾತ್ಮನು ಈ ಜ್ಞಾನಯಜ್ಞವನ್ನು ರಚಿಸಿದ್ದಾರೆ. ನಾವು ಬ್ರಾಹ್ಮಣರಾಗಿದ್ದೇವೆ, ಮನುಷ್ಯರನ್ನು
ದೇವತೆಗಳನ್ನಾಗಿ ಮಾಡುವುದೇ ನಮ್ಮ ವ್ಯವಹಾರವಾಗಿದೆ. ನಾವು ಈ ಯಜ್ಞದಿಂದ ಮನುಷ್ಯರಿಂದ
ದೇವತೆಗಳಾಗುತ್ತಿದ್ದೇವೆ ಎಂದು ಹೇಳುವಂತಹ ಯಜ್ಞವು ಮತ್ತ್ಯಾವುದೂ ಇರುವುದಿಲ್ಲ. ಇದಕ್ಕೆ
ರುದ್ರಜ್ಞಾನಯಜ್ಞ ಅಥವಾ ಪಾಠಶಾಲೆಯೆಂದೂ ಕರೆಯಲಾಗುತ್ತದೆ. ಜ್ಞಾನ ಮತ್ತು ಯೋಗದಿಂದ ಪ್ರತಿಯೊಬ್ಬ
ಮಗುವೂ ದೇವಿ-ದೇವತಾಪದವಿಯನ್ನು ಪಡೆಯಬಹುದಾಗಿದೆ. ನೀವು ಪರಮಧಾಮದಿಂದ ತಂದೆಯ ಜೊತೆ ಬಂದಿದ್ದೀರೆಂದು
ತಂದೆಯು ಸಲಹೆ ಕೊಡುತ್ತಾರೆ. ನೀವು ಹೇಳುತ್ತೀರಿ - ನಾವು ಪರಮಧಾಮ ನಿವಾಸಿಗಳಾಗಿದ್ದೇವೆ. ಈ
ಸಮಯದಲ್ಲಿ ತಂದೆಯ ಮತದಿಂದ ನಾವು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದೇವೆ. ಯಾರು ಸ್ಥಾಪನೆ ಮಾಡುವರೋ
ಅವರೇ ಮಾಲೀಕರಾಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಈ ಪ್ರಪಂಚದಲ್ಲಿ ನಾವು ಬಹಳ
ಭಾಗ್ಯಶಾಲಿಗಳಾಗಿದ್ದೇವೆ, ಜ್ಞಾನಸೂರ್ಯ-ಜ್ಞಾನಚಂದ್ರಮ ಮತ್ತು ನಾವು ಜ್ಞಾನ ನಕ್ಷತ್ರಗಳಾಗಿದ್ದೇವೆ.
ಹೀಗೆ ಮಾಡುವವರು ಜ್ಞಾನಸಾಗರನಾಗಿದ್ದಾರೆ. ಆ ಸೂರ್ಯ, ಚಂದ್ರ, ನಕ್ಷತ್ರಗಳು ಸ್ಥೂಲದಲ್ಲಿವೆ. ಅದರ
ಜೊತೆ ನಮ್ಮ ಹೋಲಿಕೆಯಿದೆ ಅಂದಾಗ ನಾವು ಜ್ಞಾನಸೂರ್ಯ, ಜ್ಞಾನಚಂದ್ರಮ ಮತ್ತು
ಜ್ಞಾನನಕ್ಷತ್ರಗಳಾಗಿದ್ದೇವೆ. ಈ ರೀತಿ ಮಾಡುವವರು ತಂದೆಯಾಗಿದ್ದಾರೆ. ನಮ್ಮನ್ನು ಈ ರೀತಿ ಮಾಡುವವರು
ಜ್ಞಾನಸಾಗರನಾಗಿದ್ದಾರೆ. ಹೆಸರಂತೂ ಬರುತ್ತದೆಯಲ್ಲವೆ. ಜ್ಞಾನಸೂರ್ಯ ಅಥವಾ ಜ್ಞಾನಸಾಗರನಿಗೆ ನಾವು
ಮಕ್ಕಳಾಗಿದ್ದೇವೆ, ಅವರು ಇಲ್ಲಿನ ನಿವಾಸಿಯಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು
ತನ್ನ ಸಮಾನ ಮಾಡಿಕೊಳ್ಳಲು ಬರುತ್ತೇನೆ. ಜ್ಞಾನಸೂರ್ಯ, ಜ್ಞಾನನಕ್ಷತ್ರಗಳು ಇಲ್ಲಿಯೇ ಆಗಬೇಕಾಗಿದೆ.
ನಿಮಗೆ ತಿಳಿದಿದೆ - ನಾವು ಅವಶ್ಯವಾಗಿ ಭವಿಷ್ಯದಲ್ಲಿ ಇಲ್ಲಿಯೇ ಸ್ವರ್ಗದ ಮಾಲೀಕರಾಗುತ್ತೇವೆ.
ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ನಾವು ಮಾಯೆಯ ಮೇಲೆ ಜಯಗಳಿಸುವ ಯೋಧರಾಗಿದ್ದೇವೆ. ಆ
ಋಷಿಮುನಿಗಳಂತೂ ಮನಸ್ಸನ್ನು ವಶಪಡಿಸಿಕೊಳ್ಳಲು ಎಷ್ಟೊಂದು ಹಠಯೋಗವನ್ನು ಮಾಡುತ್ತಾರೆ. ನೀವಂತೂ
ಹಠಯೋಗ ಇತ್ಯಾದಿಗಳನ್ನು ಮಾಡಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಏನೂ
ಕಷ್ಟಪಡಬೇಕಾಗಿಲ್ಲ, ಕೇವಲ ಇಷ್ಟನ್ನೇ ತಿಳಿಸುತ್ತೇನೆ, ನೀವು ನನ್ನ ಬಳಿ ಬರಬೇಕಾಗಿದೆ ಆದ್ದರಿಂದ
ನನ್ನನ್ನು ನೆನಪು ಮಾಡಿ. ನಾನು ನೀವು ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ. ಈ ಮಾತನ್ನು
ಮತ್ತ್ಯಾವುದೇ ಮನುಷ್ಯರು ಹೇಳಲು ಸಾಧ್ಯವಿಲ್ಲ. ಭಲೆ ತಮ್ಮನ್ನು ಈಶ್ವರನೆಂದು ಹೇಳಿಕೊಳ್ಳಬಹುದು
ಆದರೆ ತಮ್ಮನ್ನು ಮಾರ್ಗದರ್ಶಕನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನಾನು
ಮುಖ್ಯಮಾರ್ಗದರ್ಶಕ ಕಾಲರಕಾಲನಾಗಿದ್ದೇನೆ. ಒಂದು ಸತ್ಯವಾನ್ ಸಾವಿತ್ರಿಯ ಕಥೆಯೂ ಇದೆಯಲ್ಲವೆ.
ಅವರಿಗೆ ದೈಹಿಕ ಪ್ರೀತಿಯಿರುವ ಕಾರಣ ದುಃಖವಾಗುತ್ತಿತ್ತು. ನೀವಂತೂ ಖುಷಿಯಾಗುತ್ತೀರಿ, ನಾನು ನೀವು
ಆತ್ಮರನ್ನು ತೆಗೆದುಕೊಂಡು ಹೋಗುತ್ತೇನೆ, ನೀವೆಂದೂ ದುಃಖಿಯಾಗುವುದಿಲ್ಲ ಏಕೆಂದರೆ ನಿಮ್ಮ ತಂದೆಯು
ಮಧುರಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾರೆಂದು ನಿಮಗೆ ತಿಳಿದಿದೆ. ಆ ಮಧುರಮನೆಗೆ ಮುಕ್ತಿಧಾಮ,
ನಿರ್ವಾಣಧಾಮ ಎಂದು ಕರೆಯಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಎಲ್ಲಾ ಕಾಲರಕಾಲನಾಗಿದ್ದೇನೆ,
ಅವರು ಒಂದು ಆತ್ಮವನ್ನು ಕರೆದುಕೊಂಡು ಹೋಗುತ್ತಾರೆ ಆದರೆ ನಾನು ಎಷ್ಟು ದೊಡ್ಡ ಕಾಲನಾಗಿದ್ದೇನೆ.
5000 ವರ್ಷಗಳ ಹಿಂದೆಯೂ ಸಹ ನಾನು ಮಾರ್ಗದರ್ಶಕನಾಗಿ ಎಲ್ಲರನ್ನೂ ಕರೆದುಕೊಂಡು ಹೋಗಿದ್ದೆನು,
ಪ್ರಿಯತಮನು ಪ್ರಿಯತಮೆಯರನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆಂದಮೇಲೆ ಅವರನ್ನು ನೆನಪು
ಮಾಡಬೇಕಾಗಿದೆ.
ನೀವು
ತಿಳಿದುಕೊಂಡಿದ್ದೀರಿ - ಈಗ ನಾವು ಓದುತ್ತಿದ್ದೇವೆ, ಮತ್ತೆ ಇಲ್ಲಿಯೇ ಬರುತ್ತೇವೆ. ಮೊದಲು
ಮಧುರಮನೆಗೆ ಹೋಗಿ ನಂತರ ಕೆಳಗೆ ಬರುತ್ತೇವೆ. ನೀವು ಮಕ್ಕಳು ಸ್ವರ್ಗದ ನಕ್ಷತ್ರಗಳಾದಿರಿ, ಮೊದಲು
ನರಕದ ನಕ್ಷತ್ರಗಳಾಗಿದ್ದಿರಿ. ನಂಬರ್ವಾರ್ ಪುರುಷಾರ್ಥದನುಸಾರ ಭಾಗ್ಯದ ನಕ್ಷತ್ರಗಳಾಗಿದ್ದಿರಿ.
ನಿಮಗೆ ತಂದೆಯ ಆಸ್ತಿಯು ಸಿಗುತ್ತದೆ. ಈ ಗಣಿಯು ಬಹಳ ಶಕ್ತಿಶಾಲಿಯಾಗಿದೆ ಮತ್ತು ಇದು ಒಮ್ಮೆ
ಮಾತ್ರವೇ ಸಿಗುತ್ತದೆ. ಆ ಗಣಿಗಳಂತೂ ಬಹಳಷ್ಟು ಬರುತ್ತಿರುತ್ತವೆ. ಈ ಅವಿನಾಶಿ ಜ್ಞಾನರತ್ನಗಳ ಗಣಿಯು
ಒಂದೇಬಾರಿ ಸಿಗುತ್ತದೆ. ಆ ಗ್ರಂಥಗಳು ಬಹಳಷ್ಟಿವೆ ಆದರೆ ಅವುಗಳಿಗೆ ರತ್ನಗಳೆಂದು ಹೇಳುವುದಿಲ್ಲ.
ತಂದೆಗೆ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಅವಿನಾಶಿ ಜ್ಞಾನರತ್ನಗಳ ನಿರಾಕಾರಿ ಗಣಿಯಾಗಿದ್ದಾರೆ.
ಈ ರತ್ನಗಳಿಂದ ನಮ್ಮ ಜೋಳಿಗೆಯನ್ನು ತುಂಬುತ್ತಾರೆ. ಅಂದಾಗ ನೀವು ಮಕ್ಕಳಿಗೆ ಖುಷಿಯಾಗಬೇಕು.
ಪ್ರತಿಯೊಬ್ಬರಿಗೆ ನಶೆಯೂ ಇರಬೇಕು. ಅಂಗಡಿಯಲ್ಲಿ ಹೆಚ್ಚಿನ ವ್ಯಾಪಾರವಾಗುತ್ತಿದ್ದರೆ ಅದು ಬಹಳ
ಪ್ರಸಿದ್ಧವೂ ಆಗುತ್ತದೆ. ಇಲ್ಲಿ ಪ್ರಜೆಗಳನ್ನೂ ಮಾಡುತ್ತಿದ್ದೀರಿ ಮತ್ತು ವಾರಸುಧಾರರನ್ನೂ ತಯಾರು
ಮಾಡುತ್ತಿದ್ದೀರಿ. ಇಲ್ಲಿಂದ ಜ್ಞಾನರತ್ನಗಳ ಜೋಳಿಗೆಯನ್ನು ತುಂಬಿಕೊಂಡು ಹೋಗಿ ಮತ್ತೆ ದಾನ
ಮಾಡಬೇಕಾಗಿದೆ. ಪರಮಪಿತ ಪರಮಾತ್ಮನೇ ಜ್ಞಾನಸಾಗರನಾಗಿದ್ದಾರೆ. ಅವರು ಜ್ಞಾನರತ್ನಗಳಿಂದ
ಜೋಳಿಗೆಯನ್ನು ತುಂಬುತ್ತಾರೆ ಆದರೆ ರತ್ನಗಳ ತಟ್ಟೆಗಳನ್ನು ತುಂಬಿ ದೇವತೆಗಳಿಗೆ ಕೊಡುತ್ತಾರೆಂದು
ತೋರಿಸಿರುವ ಆ ಸಮುದ್ರವಲ್ಲ. ಆ ಸಾಗರದಿಂದ ರತ್ನಗಳು ಸಿಗುವುದಿಲ್ಲ, ಇದು ಜ್ಞಾನರತ್ನಗಳ ಮಾತಾಗಿದೆ.
ನಾಟಕದನುಸಾರ ನಿಮಗೆ ರತ್ನಗಳ ಗಣಿಗಳೂ ಸಿಗುತ್ತವೆ. ಸತ್ಯಯುಗದಲ್ಲಿ ನಿಮಗೆ ಯಥೇಚ್ಛವಾಗಿ
ವಜ್ರರತ್ನಗಳಿರುತ್ತವೆ. ಇದರಿಂದ ನಂತರ ಭಕ್ತಿಮಾರ್ಗದಲ್ಲಿ ನೀವು ಮಂದಿರಗಳನ್ನು ಕಟ್ಟಿಸುತ್ತೀರಿ.
ಭೂಕಂಪವಾಗುವುದರಿಂದ ಎಲ್ಲವೂ ಕೆಳಗಡೆ ಹೊರಟುಹೋಗುತ್ತದೆ. ಸತ್ಯಯುಗದಲ್ಲಿ ಮಹಲುಗಳಂತೂ ಕೇವಲ ಒಂದೇ
ಇರುವುದಿಲ್ಲ, ಬಹಳಷ್ಟು ನಿರ್ಮಾಣವಾಗುತ್ತವೆ. ಇಲ್ಲಿಯೂ ಸಹ ರಾಜರ ಪೈಪೋಟಿಯು ಬಹಳಷ್ಟಿದೆ. ನೀವು
ಮಕ್ಕಳು ತಿಳಿದುಕೊಂಡಿದ್ದೀರಿ - ಕಲ್ಪದ ಹಿಂದೆ ಹೇಗೆ ಮನೆಗಳನ್ನು ಕಟ್ಟಿಸಿದ್ದಿರೋ ಅದೇ ರೀತಿ ಈಗಲೂ
ಕಟ್ಟಿಸುತ್ತೀರಿ. ಸತ್ಯಯುಗದಲ್ಲಂತೂ ಬಹಳ ಸಹಜವಾಗಿ ಮನೆಗಳು ನಿರ್ಮಾಣವಾಗುತ್ತದೆ. ವಿಜ್ಞಾನವು
ಬಹಳಷ್ಟು ಕೆಲಸಕ್ಕೆ ಬರುತ್ತದೆ ಆದರೆ ಅಲ್ಲಿ ವಿಜ್ಞಾನವೆಂಬ ಅಕ್ಷರವಿರುವುದಿಲ್ಲ. ಸೈನ್ಸ್
ಎಂಬುದಕ್ಕೆ ಹಿಂದಿಭಾಷೆಯಲ್ಲಿ ವಿಜ್ಞಾನವೆಂದು ಹೇಳುತ್ತಾರೆ. ಇತ್ತೀಚೆಗೆ ವಿಜ್ಞಾನಭವನವೆಂದೂ
ಹೆಸರನ್ನಿಟ್ಟಿದ್ದಾರೆ. ವಿಜ್ಞಾನ ಎಂಬ ಶಬ್ಧವು ಜ್ಞಾನದ ಜೊತೆ ಹೋಲುತ್ತದೆ. ಜ್ಞಾನ ಮತ್ತು ಯೋಗಕ್ಕೆ
ವಿಜ್ಞಾನವೆಂದು ಹೇಳುತ್ತಾರೆ. ಜ್ಞಾನದಿಂದ ರತ್ನಗಳು ಸಿಗುತ್ತದೆ, ಯೋಗದಿಂದ ನಾವು ಸದಾ
ಆರೋಗ್ಯವಂತರಾಗುತ್ತೇವೆ. ಇದು ಜ್ಞಾನ ಮತ್ತು ಯೋಗದ ನಾಲೆಡ್ಜ್ ಆಗಿದೆ. ಇದರಿಂದ ವೈಕುಂಠದ
ದೊಡ್ಡ-ದೊಡ್ಡ ಭವನಗಳಾಗುತ್ತವೆ. ನಾವೀಗ ಈ ಪೂರ್ಣಜ್ಞಾನವನ್ನು ಅರಿತುಕೊಂಡಿದ್ದೇವೆ. ನಾವು
ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನಿಮಗೆ ಈ
ದೇಹದೊಂದಿಗೆ ಯಾವುದೇ ಮಮತ್ವವಿಲ್ಲ. ನಾವಾತ್ಮಗಳು ಈ ಶರೀರವನ್ನು ಬಿಟ್ಟು ಸ್ವರ್ಗದಲ್ಲಿ ಹೋಗಿ ಹೊಸ
ಶರೀರವನ್ನು ತೆಗೆದುಕೊಳ್ಳುತ್ತೇವೆ. ಈ ಹಳೆಯ ಶರೀರವನ್ನು ಬಿಟ್ಟು ಹೊಸದನ್ನು
ತೆಗೆದುಕೊಳ್ಳುತ್ತೇವೆಂದು ಸತ್ಯಯುಗದಲ್ಲಿಯೂ ತಿಳಿದುಕೊಳ್ಳುತ್ತಾರೆ. ಅಲ್ಲಿ ಯಾವುದೇ ದುಃಖ ಅಥವಾ
ಶೋಕವಿರುವುದಿಲ್ಲ. ಹೊಸಶರೀರವನ್ನು ತೆಗೆದುಕೊಳ್ಳುವುದು ಒಳ್ಳೆಯದೇ ಆಗಿದೆ. ಕಲ್ಪದ ಹಿಂದೆ
ಏನಾಗಿದ್ದೆವೋ ಅದೇ ರೀತಿ ಪುನಃ ತಂದೆಯು ನಮ್ಮನ್ನು ಮಾಡುತ್ತಿದ್ದಾರೆ. ನಾವು ಮನುಷ್ಯರಿಂದ
ದೇವತೆಗಳಾಗುತ್ತಿದ್ದೇವೆ. ಅವಶ್ಯವಾಗಿ ಕಲ್ಪದ ಮೊದಲೂ ಸಹ ಅನೇಕಧರ್ಮಗಳಿತ್ತು. ಗೀತೆಯಲ್ಲಿ
ಇದ್ಯಾವುದೂ ಇಲ್ಲ. ಬ್ರಹ್ಮಾರವರ ಮೂಲಕ ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆಯಾಗುತ್ತದೆ ಎಂದು
ಗಾಯನವಿದೆ. ಅನೇಕಧರ್ಮಗಳ ವಿನಾಶವು ಹೇಗಾಗುತ್ತದೆ ಎಂಬುದನ್ನು ನೀವು ತಿಳಿಸುತ್ತೀರಿ. ಈಗ
ಸ್ಥಾಪನೆಯಾಗುತ್ತಿದೆ. ಯಾವಾಗ ದೇವಿ-ದೇವತಾಧರ್ಮದ ಪ್ರಾಯಃಲೋಪವಾಗಿತ್ತೋ ಆಗಲೇ ತಂದೆಯು ಬಂದಿದ್ದರು.
ಅಂದಮೇಲೆ ಪರಂಪರೆಯಿಂದ ಹೇಗೆ ನಡೆದಿರುತ್ತದೆ! ಇವು ಬಹಳ ಸಹಜ ಮಾತುಗಳಾಗಿವೆ ಮತ್ತು ಯಾವುದರ
ವಿನಾಶವಾಯಿತು? ಅನೇಕಧರ್ಮಗಳ ವಿನಾಶ ಮತ್ತು ಈಗ ಅನೇಕ ಧರ್ಮಗಳಿದೆಯಲ್ಲವೆ. ಈಗ ಸಮಯವು ಅಂತ್ಯವಾಗಿದೆ
ಆದ್ದರಿಂದ ಇಡೀ ಜ್ಞಾನವು ಬುದ್ಧಿಯಲ್ಲಿರಬೇಕು. ಎಲ್ಲವನ್ನೂ ಶಿವತಂದೆಯೇ ತಿಳಿಸುತ್ತಾರೆಂದಲ್ಲ,
ಇದರಲ್ಲಿ ಬ್ರಹ್ಮನದೂ ಪಾತ್ರವಿದೆ. ಕೃಷ್ಣನ ಮತವೆಂದು ಹೇಳುವುದಿಲ್ಲ. ಅಲ್ಲಂತೂ ಎಲ್ಲರೂ
ಶ್ರೇಷ್ಠರಾಗಿರುತ್ತಾರೆ, ಅವರಿಗೆ ಮತದ ಅವಶ್ಯಕತೆಯೇ ಇಲ್ಲ. ಇಲ್ಲಿ ಬ್ರಹ್ಮಾರವರಿಂದಲೂ ಮತವು
ಸಿಗುತ್ತದೆ ಆದರೆ ಸತ್ಯಯುಗದಲ್ಲಿ ಯಥಾರಾಜ-ರಾಣಿ ತಥಾಪ್ರಜಾ ಎಲ್ಲರದೂ ಶ್ರೇಷ್ಠಮತವಿರುತ್ತದೆ.
ಅವಶ್ಯವಾಗಿ ಯಾರಾದರೂ ಕೊಟ್ಟಿರಬೇಕಲ್ಲವೆ. ದೇವತೆಗಳು ಶ್ರೀಮತದವರಾಗಿದ್ದಾರೆ, ಶ್ರೀಮತದಿಂದಲೇ
ಸ್ವರ್ಗವಾಗುತ್ತದೆ. ಅಸುರೀಮತದಿಂದ ನರಕವಾಗಿದೆ. ಶ್ರೀಮತವು ತಂದೆಯದಾಗಿದೆ, ಇವೆಲ್ಲಾ ಮಾತುಗಳು
ಸಹಜವಾಗಿ ತಿಳಿದುಕೊಳ್ಳುವಂತಹವಾಗಿವೆ. ಇವೆಲ್ಲವೂ ಶಿವತಂದೆಯ ಅಂಗಡಿಗಳಾಗಿವೆ. ನಡೆಸುವವರು ನಾವು
ಮಕ್ಕಳಾಗಿದ್ದೇವೆ. ಅಂಗಡಿಯನ್ನು ಯಾರು ನಡೆಸುವರೋ ಅವರ ಹೆಸರು ಪ್ರಸಿದ್ಧವಾಗುತ್ತದೆ. ಆ
ವ್ಯಾಪಾರದಲ್ಲಿ ನಡೆಯುವ ಹಾಗೆ ಚಾಚೂತಪ್ಪದೆ ಇಲ್ಲಿಯೂ ನಡೆಯುತ್ತದೆ ಆದರೆ ಈ ವ್ಯಾಪಾರವನ್ನು ಕೆಲವರೇ
ವಿರಳ ಮಾಡುವರು. ಎಲ್ಲರೂ ವ್ಯಾಪಾರ ಮಾಡಬೇಕಾಗಿದೆ. ಚಿಕ್ಕಮಕ್ಕಳೂ ಸಹ ಜ್ಞಾನ ಮತ್ತು ಯೋಗದ
ವ್ಯಾಪಾರ ಮಾಡಬೇಕು. ಶಾಂತಿಧಾಮ ಮತ್ತು ಸುಖಧಾಮ - ಇಷ್ಟೇ ಬುದ್ಧಿಯಲ್ಲಿ ನೆನಪು ಮಾಡಬೇಕಾಗಿದೆ.
ಮನುಷ್ಯರು ರಾಮ-ರಾಮ ಎಂದು ಹೇಳುತ್ತಾರೆ ಆದರೆ ಇಲ್ಲಿ ಏನೂ ಮಾತನಾಡುವಂತಿಲ್ಲ. ಮೌನವಾಗಿದ್ದು ನೆನಪು
ಮಾಡಬೇಕಾಗಿದೆ. ಶಿವಪುರಿ-ವಿಷ್ಣುಪುರಿ ಬಹಳ ಸಹಜಮಾತಾಗಿದೆ. ಮಧುರಮನೆ, ಮಧುರರಾಜಧಾನಿಯ ನೆನಪಿದೆ.
ಹೇಗೆ ಅವರು ಸ್ಥೂಲಮಂತ್ರವನ್ನು ಕೊಡುತ್ತಾರೆ ಆದರೆ ಇದು ಸೂಕ್ಷ್ಮಮಂತ್ರವಾಗಿದೆ, ಅತೀ ಸೂಕ್ಷ್ಮ
ನೆನಪಾಗಿದೆ. ಕೇವಲ ಇದನ್ನು ನೆನಪು ಮಾಡುವುದರಿಂದ ನಾವು ಸ್ವರ್ಗದ ಮಾಲೀಕರಾಗುತ್ತೇವೆ. ಏನೂ
ಜಪಿಸುವಂತಿಲ್ಲ ಕೇವಲ ನೆನಪು ಮಾಡಬೇಕಾಗಿದೆ. ಇಲ್ಲಿ ಏನನ್ನೂ ಮಾತನಾಡುವುದೂ ಬೇಕಾಗಿಲ್ಲ.
ಶಾಂತಿಯಲ್ಲಿರುವುದರಿಂದ, ಅಂತರ್ಮುಖಿಯಾಗಿರುವುದರಿಂದ ನಾವು ಗುಪ್ತತಂದೆಯಿಂದ ಗುಪ್ತಆಸ್ತಿಯನ್ನು
ಪಡೆಯುತ್ತೇವೆ. ಇವರದೇ ನೆನಪಿನಲ್ಲಿರುತ್ತಾ ಶರೀರಬಿಟ್ಟರೆ ಬಹಳ ಒಳ್ಳೆಯದು. ಯಾವುದೇ ಕಷ್ಟವಿಲ್ಲ.
ಯಾರಿಗೆ ನೆನಪು ಸ್ಥಿರವಾಗಿರುವುದಿಲ್ಲವೋ ಅವರು ತಮ್ಮ ಅಭ್ಯಾಸ ಮಾಡಿ ಮತ್ತು ಎಲ್ಲರಿಗೂ ಹೇಳಿ,
ತಂದೆಯು ತಿಳಿಸಿದ್ದಾರೆ - ನನ್ನನ್ನು ನೆನಪು ಮಾಡಿದರೆ ಅಂತಿಮಗತಿ ಸೋ ಗತಿಯಾಗುವುದು. ನೆನಪಿನಿಂದ
ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನಾನು ಸ್ವರ್ಗದಲ್ಲಿ ಕಳುಹಿಸುತ್ತೇನೆ. ಶಿವತಂದೆಯೊಂದಿಗೆ
ಬುದ್ಧಿಯೋಗವನ್ನಿಡುವುದು ಬಹಳ ಸಹಜವಾಗಿದೆ ಆದರೆ ವ್ರತವನ್ನೂ ಸಹ ಇಲ್ಲಿಯೇ ಇಟ್ಟುಕೊಳ್ಳಬೇಕಾಗಿದೆ.
ಸತೋಪ್ರಧಾನರಾಗುತ್ತೀರೆಂದರೆ ನಿಮ್ಮ ಚಲನೆಯೂ ಸಾತ್ವಿಕ, ಮಾತನಾಡುವುದೂ ಸಾತ್ವಿಕ ಎಲ್ಲವೂ
ಸಾತ್ವಿಕವಾಗಿರಬೇಕು. ಇದು ತಮ್ಮಜೊತೆ ಮಾತನಾಡಿಕೊಳ್ಳುವುದಾಗಿದೆ. ಜೊತೆಗಾರರೊಂದಿಗೂ ಪ್ರೀತಿಯಿಂದ
ಮಾತನಾಡಬೇಕಾಗಿದೆ. ಮಧುರವಾಗಿ ಮಾತನಾಡಿ ಎಂದು ಗೀತೆಯಲ್ಲಿಯೂ ಇದೆಯಲ್ಲವೆ.
ನೀವು
ರೂಪಭಸಂತರಾಗಿದ್ದೀರಿ. ಆತ್ಮವು ರೂಪವಾಗುತ್ತದೆ. ಜ್ಞಾನಸಾಗರನು ತಂದೆಯಾಗಿದ್ದಾರೆ ಆದ್ದರಿಂದ ಅವರೇ
ಬಂದು ಜ್ಞಾನವನ್ನು ತಿಳಿಸುತ್ತಾರೆ. ನಾನು ಒಂದೇಬಾರಿ ಬಂದು ಶರೀರಧಾರಣೆ ಮಾಡುತ್ತೇನೆಂದು
ಹೇಳುತ್ತಾರೆ. ಇದು ಕಡಿಮೆ ಚಮತ್ಕಾರವೇ! ತಂದೆಯೂ ಸಹ ರೂಪಭಸಂತರಾಗಿದ್ದಾರೆ ಆದರೆ
ನಿರಾಕಾರನಾದ್ದರಿಂದ ಮಾತನಾಡಲು ಸಾಧ್ಯವಿಲ್ಲ. ಆದುದರಿಂದ ಶರೀರವನ್ನು ತೆಗೆದುಕೊಂಡಿದ್ದಾರೆ. ಆದರೆ
ಅವರು ನಮ್ಮ ಹಾಗೆ ಪುನರ್ಜನ್ಮದಲ್ಲಿ ಬರುವುದಿಲ್ಲ, ನಾವಾತ್ಮಗಳು ಪುನರ್ಜನ್ಮದಲ್ಲಿ ಬರುತ್ತೇವೆ.
ನೀವು ಮಕ್ಕಳು ತಂದೆಗೆ
ಬಲಿಹಾರಿಯಾಗುತ್ತೀರಿ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮಮತ್ವವನ್ನಿಟ್ಟುಕೊಳ್ಳಬೇಡಿ.
ಏನನ್ನೂ ತನ್ನದೆಂದು ತಿಳಿಯಬೇಡಿ, ಮಮತ್ವವನ್ನು ಕಳೆಯುವುದಕ್ಕಾಗಿಯೇ ತಂದೆಯು ಯುಕ್ತಿಯನ್ನು
ರಚಿಸುತ್ತಾರೆ. ಹೆಜ್ಜೆ-ಹೆಜ್ಜೆಯಲ್ಲಿ ತಂದೆಯನ್ನು ಕೇಳಬೇಕಾಗುತ್ತದೆ. ಮಾಯೆಯು ಇಷ್ಟು
ಶಕ್ತಿಶಾಲಿಯಾಗಿದೆ, ಅದು ಒಮ್ಮೆಲೆ ಏಟುಕೊಡುತ್ತದೆ. ಪೂರ್ಣ ಮಲ್ಲಯುದ್ಧವಾಗಿದೆ, ಅನೇಕರು
ಪೆಟ್ಟುತಿಂದಮೇಲೂ ಸಹ ಎದ್ದುನಿಲ್ಲುತ್ತಾರೆ. ಕೆಲವರು ಬರೆಯುತ್ತಾರೆ - ಬಾಬಾ, ಮಾಯೆಯು
ಪೆಟ್ಟುಕೊಟ್ಟಿತು, ಮುಖವನ್ನು ಕಪ್ಪು ಮಾಡಿಬಿಟ್ಟಿತು. ಅವರು ಹೇಗೆ ನಾಲ್ಕು ಅಂತಸ್ತಿನಿಂದ
ಬಿದ್ದರೆಂದರ್ಥ. ಕ್ರೋಧವು ಬಂದಿತೆಂದರೆ ಮೂರನೆಯ ಅಂತಸ್ತಿನಿಂದ ಬಿದ್ದರೆಂದರ್ಥ. ಇವು ಬಹಳ
ತಿಳಿದುಕೊಳ್ಳುವ ಮಾತುಗಳಾಗಿವೆ. ಈಗ ನೋಡಿ, ಮಕ್ಕಳು ಕ್ಯಾಸೆಟ್ಗಾಗಿ ಎಷ್ಟೊಂದು ಕೇಳುತ್ತಿರುತ್ತಾರೆ.
ಬಾಬಾ, ನಮಗೆ ಮುರುಳಿಯ ಕ್ಯಾಸೆಟ್ನ್ನು ಕಳುಹಿಸಿಕೊಡಿ, ನಾವು ನಿಯಮಿತವಾಗಿ ಮುರುಳಿಯನ್ನು ಕೇಳಬೇಕು
ಎಂದು. ಇದೂ ಸಹ ಪ್ರಬಂಧವಾಗುತ್ತಿದೆ. ಅನೇಕರು ಕೇಳುತ್ತಾರೆ - ಇದರಿಂದ ಅನೇಕರ ಕಪಾಟುಗಳು
ತೆರೆಯುತ್ತವೆ, ಅನೇಕರ ಕಲ್ಯಾಣವಾಗುವುದು. ಮನುಷ್ಯರು ಕಾಲೇಜನ್ನು ತೆರೆಯುತ್ತಾರೆಂದರೆ ಅವರಿಗೆ
ಇನ್ನೊಂದು ಜನ್ಮದಲ್ಲಿ ಹೆಚ್ಚಿನ ವಿದ್ಯೆಯು ಸಿಗುತ್ತದೆ. ತಂದೆಯೂ ಸಹ ತಿಳಿಸುತ್ತಾರೆ - ನೀವು ಟೇಪ್
ರೆಕಾರ್ಡ್ನ್ನು ಖರೀದಿ ಮಾಡಿ ಅದರಿಂದ ಅನೇಕರ ಕಲ್ಯಾಣವಾಗುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಸತೋಪ್ರಧಾನರಾಗಲು ಬಹಳ-ಬಹಳ ವ್ರತವನ್ನಿಟ್ಟು ನಡೆಯಬೇಕಾಗಿದೆ. ತಮ್ಮ ಆಹಾರ-ಪಾನೀಯ, ಮಾತು-ನಡವಳಿಕೆ
ಎಲ್ಲವೂ ಸಾತ್ವಿಕವಾಗಿಟ್ಟುಕೊಳ್ಳಬೇಕು. ತಂದೆಯ ಸಮಾನ ರೂಪಭಸಂತರಾಗಬೇಕಾಗಿದೆ.
2. ಅವಿನಾಶಿ
ಜ್ಞಾನರತ್ನಗಳ ನಿರಾಕಾರಿ ಗಣಿಯಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ಅಪಾರ ಖುಷಿಯಿರಬೇಕು ಮತ್ತು
ಅನೇಕರಿಗೆ ಈ ಜ್ಞಾನರತ್ನಗಳ ದಾನ ಮಾಡಬೇಕು.
ವರದಾನ:
ನಷ್ಟಮೋಹ ಆಗಿ
ದುಃಖ ಅಶಾಂತಿಯ ಹೆಸರೂ ಗುರುತನ್ನೂ ಸಮಾಪ್ತಿ ಮಾಡುವಂತಹ ಸ್ಮೃತಿ ಸ್ವರೂಪ ಭವ.
ಯಾರು ಸದಾ ಒಬ್ಬರದೇ
ಸ್ಮೃತಿಯಲ್ಲಿರುತ್ತಾರೆ, ಅವರ ಸ್ಥಿತಿ ಏಕರಸವಾಗಿ ಬಿಡುವುದು. ಏಕರಸ ಸ್ಥಿತಿಯ ಅರ್ಥವಾಗಿದೆ ಒಬ್ಬರ
ಮೂಲಕ ಸರ್ವ ಸಂಬಂಧ, ಸರ್ವ ಪ್ರಾಪ್ತಿಗಳ ರಸದ ಅನುಭವ ಮಾಡುವುದು. ಯಾರು ತಂದೆಯನ್ನು ಸರ್ವ
ಸಂಬಂಧಗಳಿಂದ ತಮ್ಮವರನ್ನಾಗಿ ಮಾಡಿಕೊಂಡು ಸ್ಮೃತಿ ಸ್ವರೂಪರಾಗಿರುತ್ತಾರೆ ಅವರು ಸಹಜವಾಗಿ ನಷ್ಟಮೋಹ
ಆಗಿ ಬಿಡುವರು. ಯಾರು ನಷ್ಟಮೋಹ ಆಗಿದ್ದಾರೆ ಅವರಿಗೆ ಎಂದೂ ಸಂಪಾದಿಸುವಲ್ಲಿ, ಹಣ ಸಂಭಾಲನೆ
ಮಾಡುವಲ್ಲಿ, ಯಾರೇ ಖಾಯಿಲೆ ಬಿದ್ದಲ್ಲಿ...... ದುಃಖದ ಅಲೆ ಬರಲು ಸಾಧ್ಯವಿಲ್ಲ. ನಷ್ಟಮೋಹ ಅರ್ಥಾತ್
ದುಃಖ ಅಶಾಂತಿಯ ಹೆಸರು ಗುರುತೂ ಇರುವುದಿಲ್ಲ, ಸದಾ ನಿಶ್ಚಿಂತ.
ಸ್ಲೋಗನ್:
ಕ್ಷಮಾಶೀಲರು
ಅವರೇ ಆಗಿದ್ದಾರೆ ಯಾರು ದಯಾಹೃದಯಿಯಾಗಿ ಸರ್ವರಿಗೆ ಆಶೀರ್ವಾದವನ್ನು ಕೊಡುತ್ತಿರುತ್ತಾರೆ