03.02.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ – ಆತ್ಮ
ರೂಪಿ ಜ್ಯೋತಿಯಲ್ಲಿ ಜ್ಞಾನ-ಯೋಗದ ಎಣ್ಣೆಯನ್ನು ಹಾಕಿ ಆಗ ಜ್ಯೋತಿಯು ಬೆಳಗುತ್ತಿರುವುದು, ಜ್ಞಾನ
ಮತ್ತು ಯೋಗದ ಅಂತರವನ್ನು ಬಹಳ ಚೆನ್ನಾಗಿ ಅರಿತುಕೊಳ್ಳಬೇಕಾಗಿದೆ”
ಪ್ರಶ್ನೆ:
ತಂದೆಯ ಕಾರ್ಯವು
ಪ್ರೇರಣೆಯಿಂದ ನಡೆಯಲು ಸಾಧ್ಯವಿಲ್ಲ, ಅವರು ಇಲ್ಲಿಯೇ ಬರಬೇಕಾಗುತ್ತದೆ ಏಕೆ?
ಉತ್ತರ:
ಏಕೆಂದರೆ
ಮನುಷ್ಯರ ಬುದ್ಧಿಯು ಸಂಪೂರ್ಣ ತಮೋಪ್ರಧಾನವಾಗಿದೆ, ತಮೋಪ್ರಧಾನ ಬುದ್ಧಿಗೆ ಪ್ರೇರಣೆಯನ್ನು
ಗ್ರಹಿಸುವ ಶಕ್ತಿಯಿಲ್ಲ. ತಂದೆಯೇ ಬರುತ್ತಾರೆ ಆದ್ದರಿಂದಲೇ ಆಕಾಶ ಸಿಂಹಾಸನವನ್ನು ಬಿಟ್ಟುಬಾ ಎಂದು
ಹೇಳಲಾಗುತ್ತದೆ.
ಗೀತೆ:
ಆಕಾಶ
ಸಿಂಹಾಸನವನ್ನು ಬಿಟ್ಟು ಬಾ.........
ಓಂ ಶಾಂತಿ.
ಭಕ್ತರು ಈ ಗೀತೆಯನ್ನು ರಚಿಸಿದ್ದಾರೆ, ಇದರ ಅರ್ಥವು ಎಷ್ಟು ಚೆನ್ನಾಗಿದೆ! ಆಕಾಶ ಸಿಂಹಾಸನವನ್ನು
ಬಿಟ್ಟು ಬಾ ಎಂದು ಹೇಳುತ್ತಾರೆ. ಆಕಾಶವಂತೂ ಇದಾಗಿದೆ, ಇದು ಇರುವ ಸ್ಥಾನವಾಗಿದೆ. ಆಕಾಶದಿಂದ
ಯಾವುದೇ ವಸ್ತುವು ಬರುವುದಿಲ್ಲ, ಆಕಾಶ ಸಿಂಹಾಸನವೆಂದು ಹೇಳುತ್ತಾರೆ. ಆಕಾಶ ತತ್ವದಲ್ಲಿ
ನೀವಿರುತ್ತೀರಿ, ತಂದೆಯು ಮಹಾತತ್ವದಲ್ಲಿರುತ್ತಾರೆ. ಅದಕ್ಕೆ ಬ್ರಹ್ಮ್ ಅಥವಾ ಮಹಾತತ್ವವೆಂದು
ಹೇಳುತ್ತಾರೆ, ಎಲ್ಲಿ ಆತ್ಮಗಳು ನಿವಾಸ ಮಾಡುತ್ತೀರಿ, ತಂದೆಯು ಅವಶ್ಯವಾಗಿ ಅಲ್ಲಿಂದಲೇ ಬರುತ್ತಾರೆ.
ಯಾರಾದರೂ ಬಂದೇ ಬರುವರಲ್ಲವೆ! ಬಂದು ನಮ್ಮ ಜ್ಯೋತಿಯನ್ನು ಜಾಗೃತಮಾಡಿ ಎಂದು ಹೇಳುತ್ತಾರೆ. ಗಾಯನವೂ
ಇದೆ - ಒಂದನೆಪ್ರಕಾರದವರು ಅಂಧರ ಮಕ್ಕಳು ಅಂಧರಾಗಿದ್ದಾರೆ ಇನ್ನೊಬ್ಬರು ಒಳ್ಳೆಯವರ ಮಕ್ಕಳು
ಒಳ್ಳೆಯವರಾಗಿದ್ದಾರೆ. ಧೃತರಾಷ್ಟ್ರ ಮತ್ತು ಯುಧಿಷ್ಠರನ ಹೆಸರನ್ನು ತೋರಿಸುತ್ತಾರೆ. ಈಗ ಇವರಂತೂ
ರಾವಣನ ಸಂತಾನರಾಗಿದ್ದಾರೆ, ಮಾಯಾರೂಪಿ ರಾವಣನಿದ್ದಾನಲ್ಲವೆ. ಎಲ್ಲರದು ರಾವಣಬುದ್ಧಿಯಾಗಿದೆ, ಈಗ
ನೀವು ಈಶ್ವರೀಯ ಬುದ್ಧಿಯವರಾಗಿದ್ದೀರಿ. ತಂದೆಯು ನಿಮ್ಮ ಬುದ್ಧಿಯ ಬೀಗವನ್ನು ತೆರೆಯುತ್ತಿದ್ದಾರೆ,
ರಾವಣ ಬೀಗವನ್ನು ಹಾಕಿಬಿಡುತ್ತಾನೆ. ಯಾರಾದರೂ ಯಾವುದೇ ಮಾತನ್ನು ಅರಿತುಕೊಳ್ಳದಿದ್ದರೆ ಇವರು
ಕಲ್ಲುಬುದ್ಧಿಯವರೆಂದು ಹೇಳುತ್ತಾರೆ. ತಂದೆಯು ಬಂದು ಜ್ಯೋತಿಯನ್ನು ಜಾಗೃತಗೊಳಿಸುತ್ತಾರೆ.
ಪ್ರೇರಣೆಯಿಂದ ಕೆಲಸವಾಗುವುದಿಲ್ಲ. ಯಾವ ಆತ್ಮವು ಸತೋಪ್ರಧಾನವಾಗಿತ್ತು ಅದರ ಶಕ್ತಿಯು ಈಗ
ಕಡಿಮೆಯಾಗಿಬಿಟ್ಟಿದೆ. ಒಮ್ಮೆಲೆ ಕತ್ತಲಾಗಿಬಿಟ್ಟಿದೆ. ಯಾರಾದರೂ ಮರಣಹೊಂದಿದಾಗ ಅವರ ಪಕ್ಕದಲ್ಲಿ
ಜ್ಯೋತಿಯನ್ನು ಇಡುತ್ತಾರೆ. ಜ್ಯೋತಿಯನ್ನು ಏಕೆ ಇಡುತ್ತಾರೆ. ಜ್ಯೋತಿಯು ನಂದಿಹೋಗಿರುವುದರಿಂದ
ಅಂಧಕಾರವಾಗದಿರಲಿ ಎಂದು ಜ್ಯೋತಿಯನ್ನು ಬೆಳಗಿಸುತ್ತಾರೆ. ಈಗ ಇಲ್ಲಿಯ ಜ್ಯೋತಿಯು ಬೆಳಗುವುದರಿಂದ
ಸತ್ಯಯುಗದಲ್ಲಿ ಹೇಗೆ ಬೆಳಕಾಗುವುದು? ಏನನ್ನೂ ತಿಳಿದುಕೊಂಡಿಲ್ಲ. ಈಗ ನೀವು ಸೂಕ್ಷ್ಮ
ಬುದ್ಧಿಯವರಾಗುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಸ್ವಚ್ಛಬುದ್ಧಿಯವರನ್ನಾಗಿ
ಮಾಡುತ್ತೇನೆ, ಜ್ಞಾನವೆಂಬ ಎಣ್ಣೆಯನ್ನು ಹಾಕುತ್ತೇನೆ. ಇದು ಸಹ ತಿಳಿಸುವ ಮಾತಾಗಿದೆ. ಜ್ಞಾನ ಮತ್ತು
ಯೋಗ ಎರಡೂ ಬೇರೆ-ಬೇರೆ ವಸ್ತುಗಳಾಗಿವೆ. ಯೋಗಕ್ಕೆ ಜ್ಞಾನವೆಂದು ಹೇಳುವುದಿಲ್ಲ. ಭಗವಂತನೇ ಬಂದು
ನನ್ನನ್ನು ನೆನಪು ಮಾಡಿ ಎಂದು ಜ್ಞಾನವನ್ನು ಕೊಟ್ಟರೆಂದು ತಿಳಿಯುತ್ತಾರೆ ಆದರೆ ಇದಕ್ಕೆ
ಜ್ಞಾನವೆಂದು ಹೇಳುವುದಿಲ್ಲ. ಇಲ್ಲಂತೂ ತಂದೆ ಮತ್ತು ಮಕ್ಕಳಿದ್ದೀರಿ, ಮಕ್ಕಳಿಗೆ ತಿಳಿದಿದೆ - ಇವರು
ನಮ್ಮ ತಂದೆಯಾಗಿದ್ದಾರೆ, ಇದರಲ್ಲಿ ಜ್ಞಾನದ ಮಾತೆಂದು ಹೇಳುವುದಿಲ್ಲ. ಜ್ಞಾನವು ವಿಸ್ತಾರವಾಗಿದೆ.
ಇದು ಕೇವಲ ನೆನಪಾಗಿದೆ. ನನ್ನನ್ನು ನೆನಪು ಮಾಡಿ ಸಾಕು ಎಂದು ತಂದೆಯು ತಿಳಿಸುತ್ತಾರೆ. ಇದಂತೂ
ಸಾಮಾನ್ಯ ಮಾತಾಗಿದೆ. ಇದಕ್ಕೆ ಜ್ಞಾನವೆಂದು ಹೇಳುವುದಿಲ್ಲ. ಮಗುವು ಜನ್ಮಪಡೆಯಿತೆಂದರೆ ಅವಶ್ಯವಾಗಿ
ತಂದೆಯನ್ನು ನೆನಪು ಮಾಡುತ್ತದೆಯಲ್ಲವೆ. ಜ್ಞಾನದ ವಿಸ್ತಾರವಿದೆ, ನನ್ನನ್ನು ನೆನಪು ಮಾಡಿ ಎಂದು
ತಂದೆಯು ತಿಳಿಸುತ್ತಾರೆ. ಇದು ಜ್ಞಾನವಾಗಲಿಲ್ಲ! ಇದು ನೆನಪಾಗಿದೆ ನೀವು ಸ್ವಯಂ
ತಿಳಿದುಕೊಂಡಿದ್ದೀರಿ - ನಾವಾತ್ಮಗಳಾಗಿದ್ದೇವೆ, ನಮ್ಮ ತಂದೆಯು ಪರಮ ಆತ್ಮ ಅಂದರೆ
ಪರಮಾತ್ಮನಾಗಿದ್ದಾರೆ. ಇದಕ್ಕೆ ಜ್ಞಾನವೆಂದು ಹೇಳುತ್ತಾರೆಯೇ? ತಂದೆಯನ್ನು ಕರೆಯುತ್ತಾರೆ,
ಜ್ಞಾನವಂತೂ ಜ್ಞಾನವಾಗಿದೆ. ಕೆಲವರು ಎಂ.ಎ., ಓದುತ್ತಾರೆ, ಕೆಲವರು ಬಿ.ಎ., ಓದುತ್ತಾರೆ, ಎಷ್ಟೊಂದು
ಪುಸ್ತಕಗಳನ್ನು ಓದಬೇಕಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ನೀವು ನನ್ನ ಮಕ್ಕಳಾಗಿದ್ದೀರಿ,
ನಾನು ನಿಮ್ಮ ತಂದೆಯಾಗಿದ್ದೇನೆ. ನನ್ನೊಂದಿಗೆ ಯೋಗವನ್ನಿಡಿ. ಇದಕ್ಕೆ ಜ್ಞಾನವೆಂದು ಹೇಳುವುದಿಲ್ಲ.
ನೀವು ಮಕ್ಕಳಂತೂ ಆಗಿಯೇ ಇದ್ದೀರಿ, ನೀವಾತ್ಮಗಳು ಎಂದೂ ವಿನಾಶವನ್ನು ಹೊಂದುವುದಿಲ್ಲ. ಯಾರಾದರೂ
ಮರಣ ಹೊಂದಿದರೆ ಅವರ ಆತ್ಮವನ್ನು ಕರೆಸುತ್ತಾರೆ, ಶರೀರವಂತೂ ಸಮಾಪ್ತಿಯಾಯಿತು ಅಂದಮೇಲೆ ಆತ್ಮವು
ಭೋಜನವನ್ನು ಹೇಗೆ ಸ್ವೀಕರಿಸುವುದು? ಭೋಜನವನ್ನು ಬ್ರಾಹ್ಮಣರೇ ಸ್ವೀಕರಿಸುತ್ತಾರೆ. ಇದೆಲ್ಲವೂ
ಭಕ್ತಿಮಾರ್ಗದ ಪದ್ಧತಿಗಳಾಗಿವೆ. ನಾವು ಹೇಳುವುದರಿಂದ ಭಕ್ತಿಮಾರ್ಗವು ನಿಂತುಹೋಗುತ್ತದೆಯೆಂದಲ್ಲ.
ಅದಂತೂ ನಡೆಯುತ್ತಲೇ ಬರುತ್ತದೆ. ಆತ್ಮವು ಒಂದು ಶರೀರವನ್ನು ಬಿಟ್ಟುಹೋಗಿ ಇನ್ನೊಂದನ್ನು
ತೆಗೆದುಕೊಳ್ಳುತ್ತದೆ.
ಮಕ್ಕಳ ಬುದ್ಧಿಯಲ್ಲಿ
ಜ್ಞಾನ ಮತ್ತು ಯೋಗದ ಅಂತರವು ಸ್ಪಷ್ಟವಾಗಿರಬೇಕು. ತಂದೆಯು ನನ್ನನ್ನು ನೆನಪು ಮಾಡಿ ಎಂದು ಏನು
ತಿಳಿಸುತ್ತಾರೆಯೋ ಇದು ಜ್ಞಾನವಲ್ಲ, ತಂದೆಯು ನೆನಪು ಮಾಡಲು ಸಲಹೆ ನೀಡುತ್ತಾರೆ, ಇದಕ್ಕೆ ಯೋಗವೆಂದು
ಕರೆಯಲಾಗುತ್ತದೆ. ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದರ ತಿಳುವಳಿಕೆಯು ಜ್ಞಾನವಾಗಿದೆ. ಯೋಗ
ಅರ್ಥಾತ್ ನೆನಪು. ನೆನಪು ಮಾಡುವುದು ಮಕ್ಕಳ ಕರ್ತವ್ಯವಾಗಿದೆ, ಅವರು ಲೌಕಿಕ, ಇವರು ಪಾರಲೌಕಿಕ
ತಂದೆಯಾಗಿದ್ದಾರೆ. ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ ಅಂದಾಗ ಜ್ಞಾನವೇ
ಬೇರೆಯಾಯಿತು, ತಂದೆಯನ್ನು ನೆನಪು ಮಾಡಿ ಎಂದು ಹೇಳಬೇಕಾಗುತ್ತದೆಯೇ! ಮಗು ಜನ್ಮ ಪಡೆದತಕ್ಷಣವೇ
ಲೌಕಿಕ ತಂದೆಯ ನೆನಪಿರುತ್ತದೆ ಆದರೆ ಇಲ್ಲಿ ತಂದೆಯ ನೆನಪನ್ನು ತರಿಸಬೇಕಾಗುತ್ತದೆ. ಇದರಲ್ಲಿಯೇ
ಪರಿಶ್ರಮವಾಗುತ್ತದೆ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುವುದು ಬಹಳ
ಪರಿಶ್ರಮದ ಕೆಲಸವಾಗಿದೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಮಕ್ಕಳು ಯೋಗದಲ್ಲಿ
ಸ್ಥಿರವಾಗಿರುವುದಿಲ್ಲ. ಬಾಬಾ, ನಿಮ್ಮ ನೆನಪು ಮರೆತುಹೋಗುತ್ತದೆ ಎಂದು ಮಕ್ಕಳು ಹೇಳುತ್ತಾರೆ,
ಜ್ಞಾನವು ಮರೆತುಹೋಗುತ್ತದೆ ಎಂದು ಹೇಳುವುದಿಲ್ಲ. ಜ್ಞಾನವು ಬಹಳ ಸಹಜವಾಗಿದೆ. ನೆನಪಿಗೆ
ಜ್ಞಾನವೆಂದು ಹೇಳಲಾಗುವುದಿಲ್ಲ. ಇದರಲ್ಲಿ ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ. ಭಲೆ ಜ್ಞಾನದಲ್ಲಿ
ಯಾರಾದರೂ ಬಹಳ ತೀಕ್ಷ್ಣವಾಗಿರುತ್ತಾರೆ, ಬಹಳ ಚೆನ್ನಾಗಿ ಮುರುಳಿಯನ್ನು ನುಡಿಸುತ್ತಾರೆ ಆದರೆ ಎಷ್ಟು
ಸಮಯ ನೆನಪು ಮಾಡುತ್ತೀರೆಂದು ನೆನಪಿನ ಚಾರ್ಟನ್ನು ತೆಗೆಯಿರಿ ಎಂದು ತಂದೆ ಪ್ರಶ್ನಿಸುತ್ತಾರೆ.
ತಂದೆಯನ್ನು ನೆನಪು ಮಾಡುವ ಚಾರ್ಟ್ ಯಥಾರ್ಥರೀತಿಯಲ್ಲಿ ಬರೆದು ತೋರಿಸಿ. ನೆನಪಿನದೇ ಮುಖ್ಯಮಾತಾಗಿದೆ.
ಪತಿತ-ಪಾವನ ಬನ್ನಿ ಎಂದು ಪತಿತರೇ ಕರೆಯುತ್ತಾರೆ. ಮುಖ್ಯವಾದುದು ಪಾವನರಾಗುವ ಮಾತಾಗಿದೆ,
ಇದರಲ್ಲಿಯೇ ಮಾಯೆಯ ವಿಘ್ನಗಳು ಬರುತ್ತವೆ. ಶಿವಭಗವಾನುವಾಚ - ನೆನಪಿನಲ್ಲಿಯೇ ಎಲ್ಲರೂ
ಅಪರಿಪಕ್ವವಾಗಿದ್ದಾರೆ, ಒಳ್ಳೊಳ್ಳೆಯ ಮಕ್ಕಳು ಯಾರು ಮುರುಳಿಯನ್ನು ಬಹಳ ಚೆನ್ನಾಗಿ ಹೇಳುತ್ತಾರೆ
ಆದರೆ ನೆನಪಿನಲ್ಲಿ ಬಹಳ ಬಲಹೀನರಾಗಿದ್ದಾರೆ. ಯೋಗದಿಂದಲೇ ವಿಕರ್ಮಗಳು ವಿನಾಶವಾಗುತ್ತವೆ.
ಯೋಗದಿಂದಲೇ ಕರ್ಮೇಂದ್ರಿಯಗಳು ಸಂಪೂರ್ಣ ಶಾಂತವಾಗುತ್ತದೆ. ಒಬ್ಬ ತಂದೆಯ ವಿನಃ ಮತ್ತ್ಯಾರೂ ನೆನಪಿಗೆ
ಬರಬಾರದು, ಯಾರ ದೇಹವೂ ನೆನಪಿಗೆ ಬರಬಾರದು. ಆತ್ಮಕ್ಕೆ ಗೊತ್ತಿದೆ, ಇಡೀ ಪ್ರಪಂಚವು
ಸಮಾಪ್ತಿಯಾಗಲಿದೆ, ಈಗ ನಾವು ನಮ್ಮ ಮನೆಗೆ ಹೋಗುತ್ತೇವೆ, ಮತ್ತೆ ರಾಜಧಾನಿಯಲ್ಲಿ ಬರುತ್ತೇವೆ - ಇದು
ಸದಾ ಬುದ್ಧಿಯಲ್ಲಿರಬೇಕು. ತಂದೆಯಿಂದ ಯಾವ ಜ್ಞಾನವು ಸಿಗುತ್ತದೆಯೋ ಅದು ಆತ್ಮದಲ್ಲಿಯೇ ಇರಬೇಕು.
ತಂದೆಯು ಯೋಗೇಶ್ವರನಾಗಿದ್ದಾರೆ, ಅವರು ನೆನಪು ಮಾಡುವುದನ್ನು ಕಲಿಸುತ್ತಾರೆ. ವಾಸ್ತವದಲ್ಲಿ
ಈಶ್ವರನಿಗೆ ಯೋಗೇಶ್ವರನೆಂದು ಹೇಳುವುದಿಲ್ಲ, ನೀವು ಯೋಗೇಶ್ವರನಾಗಿದ್ದೀರಿ. ನನ್ನನ್ನು ನೆನಪು ಮಾಡಿ
ಎಂದು ಈಶ್ವರ ತಂದೆಯು ಹೇಳುತ್ತಾರೆ. ಈ ನೆನಪನ್ನು ಕಲಿಸುವವರು ಈಶ್ವರ ತಂದೆಯಾಗಿದ್ದಾರೆ. ಆ
ನಿರಾಕಾರ ತಂದೆಯು ಶರೀರದ ಮೂಲಕ ತಿಳಿಸುತ್ತಾರೆ. ಮಕ್ಕಳೂ ಸಹ ಶರೀರದ ಮೂಲಕ ಕೇಳಿಸಿಕೊಳ್ಳುತ್ತಾರೆ.
ಕೆಲವರಂತೂ ಯೋಗದಲ್ಲಿ ಬಹಳ ಬಲಹೀನರಾಗಿದ್ದಾರೆ. ನೆನಪು ಮಾಡುವುದೇ ಇಲ್ಲ. ಯಾವುದೆಲ್ಲಾ
ಜನ್ಮ-ಜನ್ಮಾಂತರದ ಪಾಪವಿದೆಯೋ ಎಲ್ಲದರ ಶಿಕ್ಷೆಯನ್ನನುಭವಿಸುತ್ತಾರೆ. ಇಲ್ಲಿ ಬಂದು ಯಾರು ಪಾಪ
ಮಾಡುವರೋ ಅವರು ಇಲ್ಲಿ ಇನ್ನೂ ನೂರುಪಟ್ಟು ಶಿಕ್ಷೆಯನ್ನನುಭವಿಸುತ್ತಾರೆ. ಜ್ಞಾನವನ್ನಂತೂ ಬಹಳ
ಹೇಳುತ್ತಾರೆ ಆದರೆ ಯೋಗವನ್ನೇ ಮಾಡುವುದಿಲ್ಲ, ಆ ಕಾರಣದಿಂದ ಪಾಪಗಳು ಭಸ್ಮವಾಗುವುದಿಲ್ಲ,
ಅಪರಿಪಕ್ವವಾಗಿಯೇ ಉಳಿದುಬಿಡುತ್ತಾರೆ ಆದ್ದರಿಂದ ಸತ್ಯ-ಸತ್ಯ ಮಾಲೆಯು ಅಷ್ಟರತ್ನಗಳದ್ದಾಗಿದೆ.
ನವರತ್ನಗಳೆಂದು ಗಾಯನವಿದೆ, 108 ರತ್ನಗಳೆಂದು ಎಂದಾದರೂ ಕೇಳಿದ್ದೀರಾ? 108 ರತ್ನಗಳ ಯಾವುದೇ
ವಸ್ತುವನ್ನು ಮಾಡುವುದಿಲ್ಲ, ಅನೇಕರು ಈ ಮಾತುಗಳನ್ನು ಸಂಪೂರ್ಣವಾಗಿ ಅರಿತುಕೊಂಡಿಲ್ಲ. ನೆನಪಿಗೆ
ಜ್ಞಾನವೆಂದು ಹೇಳುವುದಿಲ್ಲ. ಸೃಷ್ಟಿಚಕ್ರಕ್ಕೆ ಜ್ಞಾನವೆಂದು ಹೇಳಲಾಗುತ್ತದೆ. ಶಾಸ್ತ್ರಗಳಲ್ಲಿ
ಜ್ಞಾನವಿಲ್ಲ, ಆ ಶಾಸ್ತ್ರಗಳು ಭಕ್ತಿಮಾರ್ಗದ್ದಾಗಿದೆ. ಈ ಶಾಸ್ತ್ರಗಳಿಂದ ನಾನು ಸಿಗುವುದಿಲ್ಲ,
ನಾನು ಸಾಧು-ಸಂತರು ಮೊದಲಾದವರೆಲ್ಲರ ಉದ್ಧಾರ ಮಾಡಲು ಬರುತ್ತೇನೆ ಎಂದು ಸ್ವಯಂ ತಂದೆಯೇ
ತಿಳಿಸುತ್ತಾರೆ. ಬಹ್ಮ್ನಲ್ಲಿ ಲೀನವಾಗುತ್ತೇವೆಂದು ಸನ್ಯಾಸಿಗಳು ತಿಳಿಯುತ್ತಾರೆ ಮತ್ತು ಆತ್ಮವು
ನೀರಿನ ಗುಳ್ಳೆಯೆಂದು ಉದಾಹರಣೆಯನ್ನು ಕೊಡುತ್ತಾರೆ. ಹೇಗೆ ಅದು ನೀರಿನ ಮೇಲೆ ಈಗೀಗ ಇರುತ್ತದೆ
ಮತ್ತು ಈಗೀಗ ಹೊಡೆದು ಲೀನವಾಗುತ್ತದೆ ಆದರೆ ಈಗ ನೀವು ಈ ರೀತಿ ಹೇಳುವುದಿಲ್ಲ ಏಕೆಂದರೆ ನಾವಾತ್ಮಗಳು
ತಂದೆಯ ಮಕ್ಕಳಾಗಿದ್ದೇವೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. “ನನ್ನೊಬ್ಬನನ್ನೇ
ನೆನಪು ಮಾಡಿ” ಎಂಬ ಶಬ್ಧವನ್ನು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ.
ನಾವಾತ್ಮಗಳಾಗಿದ್ದೇವೆಂದು ಭಲೆ ಹೇಳುತ್ತಾರೆ ಆದರೆ ಆತ್ಮವೆಂದರೇನು, ಪರಮಾತ್ಮ ಯಾರು ಎಂಬ ಜ್ಞಾನವು
ಇಲ್ಲವೇ ಇಲ್ಲ. ಇದನ್ನು ತಂದೆಯೇ ಬಂದು ತಿಳಿಸುತ್ತಾರೆ. ಈಗ ನಿಮಗೆ ತಿಳಿದಿದೆ, ನಾವಾತ್ಮಗಳ ಮನೆಯು
ಅದಾಗಿದೆ, ಅಲ್ಲಿ ಇಡೀ ವಂಶಾವಳಿಯೇ ಇದೆ. ಪ್ರತಿಯೊಂದು ಆತ್ಮಕ್ಕೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ,
ಸುಖವನ್ನು ಯಾರು ಕೊಡುತ್ತಾರೆ, ದುಃಖವನ್ನು ಯಾರು ಕೊಡುತ್ತಾರೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ.
ಭಕ್ತಿಯು ರಾತ್ರಿಯಾಗಿದೆ,
ಜ್ಞಾನವು ದಿನವಾಗಿದೆ. 63 ಜನ್ಮಗಳು ನೀವು ಅಲೆದಾಡುತ್ತೀರಿ. ಮತ್ತೆ ನಾನು ಜ್ಞಾನವನ್ನು
ಕೊಡುತ್ತೇನೆಂದರೆ ಎಷ್ಟು ಸಮಯ ಹಿಡಿಸುತ್ತದೆ? ಒಂದು ಸೆಕೆಂಡ್. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು
ಗಾಯನವಿದೆ. ಇವರು ನಿಮ್ಮ ತಂದೆಯಾಗಿದ್ದಾರಲ್ಲವೆ. ಅವರೇ ಪತಿತ-ಪಾವನನಾಗಿದ್ದಾರೆ. ಅವರನ್ನು ನೆನಪು
ಮಾಡುವುದರಿಂದ ನೀವು ಪಾವನರಾಗಿಬಿಡುತ್ತೀರಿ. ಸತ್ಯಯುಗ, ತ್ರೇತಾ, ದ್ವಾಪರ, ಕಲಿಯುಗ - ಇದು
ಚಕ್ರವಾಗಿದೆ. ಹೆಸರುಗಳು ಗೊತ್ತಿದೆ ಆದರೆ ಕಲ್ಲುಬುದ್ಧಿಯಾಗಿರುವ ಕಾರಣ ಸಮಯದ ಅರಿವು ಯಾರಿಗೂ
ಇಲ್ಲ. ಘೋರ ಕಲಿಯುಗವೆಂಬುದನ್ನು ತಿಳಿಯುತ್ತಾರೆ. ಒಂದುವೇಳೆ ಕಲಿಯುಗವು ಇನ್ನೂ ನಡೆಯುವಂತಿದ್ದರೆ
ಮತ್ತಷ್ಟು ಘೋರ ಅಂಧಕಾರವಾಗುವುದು ಆದ್ದರಿಂದಲೇ ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದರು, ಎಲ್ಲವೂ
ವಿನಾಶವಾಯಿತೆಂದು ಗಾಯನವಿದೆ. ಸ್ವಲ್ಪ ಜ್ಞಾನವನ್ನು ಕೇಳಿದರೂ ಸಹ ಪ್ರಜೆಗಳಾಗಿಬಿಡುತ್ತಾರೆ, ಈ
ಲಕ್ಷ್ಮೀ-ನಾರಾಯಣರೆಲ್ಲಿ! ಪ್ರಜೆಗಳೆಲ್ಲಿ! ಓದಿಸುವವರು ಒಬ್ಬರೇ ತಂದೆಯಾಗಿದ್ದಾರೆ.
ಪ್ರತಿಯೊಬ್ಬರದೂ ತಮ್ಮ-ತಮ್ಮ ಅದೃಷ್ಟವಾಗಿರುತ್ತದೆ. ಕೆಲವರಂತೂ ವಿದ್ಯಾರ್ಥಿವೇತನವನ್ನು
ಪಡೆಯುತ್ತಾರೆ. ಇನ್ನೂ ಕೆಲವರು ಅನುತ್ತೀರ್ಣರಾಗಿಬಿಡುತ್ತಾರೆ. ರಾಮನಿಗೆ ಬಾಣದ ಗುರುತನ್ನು ಏಕೆ
ತೋರಿಸುತ್ತಾರೆ? ಏಕೆಂದರೆ ಅನುತ್ತೀರ್ಣರಾದರು. ಇದೂ ಸಹ ಗೀತಾಪಾಠಶಾಲೆಯಾಗಿದೆ, ನಾನಾತ್ಮ
ಬಿಂದುವಾಗಿದ್ದೇನೆ, ತಂದೆಯೂ ಬಿಂದುವಾಗಿದ್ದಾರೆ - ಈ ರೀತಿ ಅವರನ್ನು ನೆನಪು ಮಾಡಬೇಕಾಗಿದೆ. ಯಾರು
ಈ ಮಾತನ್ನು ಅರಿತುಕೊಳ್ಳುವುದೇ ಇಲ್ಲವೋ ಅವರೇನು ಪದವಿ ಪಡೆಯುತ್ತಾರೆ? ನೆನಪಿನಲ್ಲಿರದೇ ಇರುವ
ಕಾರಣ ಬಹಳಷ್ಟು ನಷ್ಟವುಂಟಾಗುತ್ತದೆ. ನೆನಪಿನ ಬಲವು ಬಹಳ ಚಮತ್ಕಾರ ಮಾಡುತ್ತದೆ, ಕರ್ಮೇಂದ್ರಿಯಗಳು
ಸಂಪೂರ್ಣ ಶಾಂತ, ಶೀತಲವಾಗಿಬಿಡುತ್ತವೆ. ಜ್ಞಾನದಿಂದ ಶಾಂತವಾಗುವುದಿಲ್ಲ, ಯೋಗದ ಬಲದಿಂದ
ಶಾಂತವಾಗುತ್ತವೆ. ಭಗವಂತನೇ ಬಂದು ಗೀತಾಜ್ಞಾನವನ್ನು ತಿಳಿಸಿ ಎಂದು ಭಾರತವಾಸಿಗಳು ಕರೆಯುತ್ತಾರೆ
ಅಂದಮೇಲೆ ಈಗ ಯಾರು ಬರುವರು? ಕೃಷ್ಣನ ಆತ್ಮವಂತೂ ಇಲ್ಲಿಯೇ ಇದೆ. ಅವರನ್ನು ಕರೆಯಲು ಯಾವುದೇ
ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆಯೇ? ಒಂದುವೇಳೆ ನಾವು ಕ್ರಿಸ್ತನ ಆತ್ಮವನ್ನು ನೆನಪು
ಮಾಡುತ್ತೇವೆಂದು ಯಾರಾದರೂ ಹೇಳಿದರೆ ಕ್ರಿಸ್ತನ ಆತ್ಮವಂತೂ ಇಲ್ಲಿಯೇ ಇದೆ. ಕ್ರಿಸ್ತನ ಆತ್ಮವೂ
ಇಲ್ಲಿಯೇ ಇದೆ, ಹಿಂತಿರುಗಿ ಹೋಗಲು ಸಾಧ್ಯವಿಲ್ಲವೆಂದು ಅವರಿಗೇನು ಗೊತ್ತು? ಲಕ್ಷ್ಮೀ-ನಾರಾಯಣರು
ಮೊಟ್ಟ ಮೊದಲಿಗೆ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗಿದೆ ಅಂದಮೇಲೆ ಹಿಂತಿರುಗಿ ಹೋಗಲು
ಹೇಗೆ ಸಾಧ್ಯ. ಅದೆಲ್ಲವೂ ಲೆಕ್ಕವಿದೆಯಲ್ಲವೆ. ಮನುಷ್ಯರು ಏನೆಲ್ಲವನ್ನೂ ಹೇಳುತ್ತಾರೆಯೋ ಅದೆಲ್ಲವೂ
ಸುಳ್ಳಾಗಿದೆ. ಅರ್ಧಕಲ್ಪ ಸತ್ಯಖಂಡ, ಅರ್ಧಕಲ್ಪ ಅಸತ್ಯಖಂಡವಾಗಿದೆ. ಈಗಂತೂ ಪ್ರತಿಯೊಬ್ಬರಿಗೂ
ತಿಳಿಸಬೇಕು - ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ ಮತ್ತೆ ಭಾರತವಾಸಿಗಳೇ
ಸ್ವರ್ಗವಾಸಿಗಳಾಗುತ್ತಾರೆ. ಮನುಷ್ಯರು ಎಷ್ಟೊಂದು ವೇದ-ಶಾಸ್ತ್ರ, ಉಪನಿಷತ್ತು ಇತ್ಯಾದಿ…
ಓದುತ್ತಾರೆ ಅಂದಮೇಲೆ ಇದರಿಂದ ಅವರು ಮುಕ್ತಿಯನ್ನು ಪಡೆಯುತ್ತಾರೆಯೇ? ಕೆಳಗಂತೂ ಇಳಿಯಲೇ ಬೇಕಾಗಿದೆ.
ಪ್ರತಿಯೊಂದು ವಸ್ತುವೂ ಸತೋ, ರಜೋ, ತಮೋದಲ್ಲಿ ಬರುತ್ತದೆ. ಹೊಸಪ್ರಪಂಚವೆಂದು ಯಾವುದಕ್ಕೆ
ಹೇಳಲಾಗುತ್ತದೆ ಎಂಬ ಜ್ಞಾನವೂ ಸಹ ಯಾರಿಗೂ ಇಲ್ಲ. ಇದನ್ನು ತಂದೆಯೇ ಸನ್ಮುಖದಲ್ಲಿ
ತಿಳಿಸಿಕೊಡುತ್ತಾರೆ. ದೇವಿ-ದೇವತಾಧರ್ಮವು ಯಾವಾಗ ಯಾರು ಸ್ಥಾಪನೆ ಮಾಡಿದರು ಎಂಬುದು
ಭಾರತವಾಸಿಗಳಿಗೆ ತಿಳಿದೇ ಇಲ್ಲ ಆದ್ದರಿಂದಲೇ ತಂದೆಯು ತಿಳಿಸಿದರು - ಜ್ಞಾನದಲ್ಲಿ ಬಲವು ಎಷ್ಟೇ
ಚೆನ್ನಾಗಿರಬಹುದು ಆದರೆ ಯೋಗದಲ್ಲಿ ಕೆಲವು ಮಕ್ಕಳು ಅನುತ್ತೀರ್ಣರಾಗಿಬಿಡುತ್ತಾರೆ.
ಯೋಗವಿಲ್ಲವೆಂದರೆ ವಿಕರ್ಮಗಳು ವಿನಾಶವಾಗುವುದಿಲ್ಲ, ಶ್ರೇಷ್ಠಪದವಿಯನ್ನು ಪಡೆಯುವುದಿಲ್ಲ. ಯಾರು
ಯೋಗದಲ್ಲಿ ಮಸ್ತರಾಗಿರುತ್ತಾರೆಯೋ ಅವರೇ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಅವರ ಕರ್ಮೇಂದ್ರಿಯಗಳು
ಸಂಪೂರ್ಣ ಶೀತಲವಾಗಿರುತ್ತವೆ, ದೇಹಸಹಿತ ಎಲ್ಲವನ್ನೂ ಮರೆತು ದೇಹೀ-ಅಭಿಮಾನಿಗಳಾಗಿಬಿಡುತ್ತಾರೆ.
ನಾವಾತ್ಮಗಳು ಅಶರೀರಿಯಾಗಿದ್ದೇವೆ, ಈಗ ಮನೆಗೆ ಹೋಗುತ್ತೇವೆ. ಏಳುತ್ತಾ-ಕುಳಿತುಕೊಳ್ಳುತ್ತಾ ಈ ರೀತಿ
ತಿಳಿದುಕೊಳ್ಳಿ - ಈಗ ಈ ಶರೀರವನ್ನು ಬಿಡಬೇಕಾಗಿದೆ, ನಾವು ಪಾತ್ರವನ್ನಭಿಯಿಸಿದೆವು, ಈಗ ಹಿಂತಿರುಗಿ
ಮನೆಗೆ ಹೋಗುತ್ತೇವೆ. ಜ್ಞಾನವಂತೂ ಸಿಕ್ಕಿದೆ, ಹೇಗೆ ತಂದೆಯಲ್ಲಿಯೇ ಜ್ಞಾನವಿದೆ, ಅವರಂತೂ ಯಾರನ್ನೂ
ನೆನಪು ಮಾಡಬೇಕಾಗಿಲ್ಲ. ನೀವು ಮಕ್ಕಳೇ ನೆನಪು ಮಾಡಬೇಕಾಗಿದೆ. ತಂದೆಗೆ ಜ್ಞಾನಸಾಗರನೆಂದು
ಹೇಳಲಾಗುತ್ತದೆ, ಯೋಗದ ಸಾಗರನೆಂದು ಹೇಳುವುದಿಲ್ಲ. ಚಕ್ರದ ಜ್ಞಾನವನ್ನು ತಿಳಿಸುತ್ತಾರೆ ಮತ್ತು
ತಮ್ಮ ಪರಿಚಯವನ್ನು ತಿಳಿಸುತ್ತಾರೆ. ನೆನಪಿಗೆ ಜ್ಞಾನವೆಂದು ಹೇಳಲಾಗುವುದಿಲ್ಲ, ನೆನಪಂತೂ ಮಕ್ಕಳಿಗೆ
ತಾನಾಗಿಯೇ ಬಂದುಬಿಡುತ್ತದೆ. ನೆನಪನ್ನಂತೂ ಮಾಡಲೇಬೇಕಾಗಿದೆ, ಇಲ್ಲವೆಂದರೆ ಆಸ್ತಿ ಹೇಗೆ ಸಿಗುವುದು?
ತಂದೆಯಿದ್ದಾರೆಂದಮೇಲೆ ಆಸ್ತಿಯು ಅವಶ್ಯವಾಗಿ ಸಿಗುತ್ತದೆ. ಉಳಿದದ್ದು ಜ್ಞಾನವಾಗಿದೆ. ನಾವು 84
ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆ, ತಮೋಪ್ರಧಾನರಿಂದ ಸತೋಪ್ರಧಾನ, ಸತೋಪ್ರಧಾನರಿಂದ
ತಮೋಪ್ರಧಾನರು ಹೇಗಾಗುತ್ತೇವೆಂದು ತಂದೆಯು ತಿಳಿಸುತ್ತಾರೆ. ಈಗ ತಂದೆಯ ನೆನಪಿನಿಂದಲೇ
ಸತೋಪ್ರಧಾನರಾಗಬೇಕಾಗಿದೆ, ನೀವು ಆತ್ಮಿಕ ಮಕ್ಕಳು ಆತ್ಮಿಕ ತಂದೆಯ ಬಳಿ ಬಂದಿದ್ದೀರಿ. ಅವರಿಗೆ
ಶರೀರದ ಆಧಾರವಂತೂ ಬೇಕಲ್ಲವೆ? ಆದ್ದರಿಂದ ನಾನು ವೃದ್ಧನ ತನುವಿನಲ್ಲಿ ಪ್ರವೇಶ ಮಾಡುತ್ತೇನೆಂದು
ಹೇಳುತ್ತಾರೆ. ಈಗ ಇವರದು ವಾನಪ್ರಸ್ಥ ಸ್ಥಿತಿಯಾಗಿದೆ, ತಂದೆಯು ಯಾವಾಗ ಬರುತ್ತಾರೆ ಆಗಲೇ ಇಡೀ
ಸೃಷ್ಟಿಯ ಕಲ್ಯಾಣವಾಗುತ್ತದೆ. ಇದು ಭಾಗ್ಯಶಾಲಿ ರಥವಾಗಿದೆ, ಇದರಿಂದ ಎಷ್ಟೊಂದು ಸೇವೆಯಾಗುತ್ತದೆ!
ಅಂದಾಗ ಈ ಶರೀರದ ಪರಿವೆಯನ್ನು ಬಿಡಲು ನೆನಪು ಮಾಡಬೇಕು. ಇದರಲ್ಲಿ ಜ್ಞಾನದ ಮಾತಿಲ್ಲ, ಹೆಚ್ಚಿನದಾಗಿ
ನೆನಪನ್ನು ಕಲಿಸಬೇಕಾಗಿದೆ. ಜ್ಞಾನವು ಬಹಳ ಸಹಜವಾಗಿದೆ, ಚಿಕ್ಕಮಕ್ಕಳೂ ಸಹ ತಿಳಿಸಿಕೊಡಬಹುದು ಆದರೆ
ನೆನಪಿನಲ್ಲಿಯೇ ಪರಿಶ್ರಮವಿದೆ. ಒಬ್ಬರದೇ ನೆನಪಿರಲಿ, ಇದಕ್ಕೆ ಅವ್ಯಭಿಚಾರಿ ನೆನಪೆಂದು
ಹೇಳಲಾಗುತ್ತದೆ. ಅನ್ಯರ ಶರೀರವನ್ನು ನೆನಪು ಮಾಡುವುದು ವ್ಯಭಿಚಾರಿ ನೆನಪಾಗಿದೆ. ನೆನಪಿನಿಂದ
ಎಲ್ಲವನ್ನೂ ಮರೆತು ಅಶರೀರಿಯಾಗಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿಹೋಗಿ
ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನೆನಪಿನ
ಬಲದಿಂದ ತಮ್ಮ ಕರ್ಮೇಂದ್ರಿಯಗಳನ್ನು ಶಾಂತ, ಶೀತಲವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಪೂರ್ಣವಾಗಿ
ತೇರ್ಗಡೆಯಾಗಲು ಯಥಾರ್ಥ ರೀತಿಯಿಂದ ತಂದೆಯನ್ನು ನೆನಪು ಮಾಡಿ ಪಾವನರಾಗಬೇಕಾಗಿದೆ.
2.
ಏಳುತ್ತಾ-ಕುಳಿತುಕೊಳ್ಳುತ್ತಾ ಬುದ್ಧಿಯಲ್ಲಿರಲಿ - ಈಗ ನಾವು ಈ ಹಳೆಯ ಶರೀರವನ್ನು ಬಿಟ್ಟು
ಹಿಂತಿರುಗಿ ಮನೆಗೆ ಹೋಗುತ್ತೇವೆ. ಹೇಗೆ ತಂದೆಯಲ್ಲಿ ಎಲ್ಲದರ ಜ್ಞಾನವಿದೆ, ಅದೇ ರೀತಿ ಮಾ||
ಜ್ಞಾನಸಾಗರರಾಗಬೇಕಾಗಿದೆ.
ವರದಾನ:
ಕಂಬೈಂಡ್
ಸ್ವರೂಪದ ಸ್ಮೃತಿಯ ಮುಖಾಂತರ ಶ್ರೇಷ್ಠ ಸ್ಥಿತಿಯ ಸೀಟ್ ಮೇಲೆ ಸೆಟ್ ಆಗಿರುವಂತಹವರೆ ಸದಾ ಸಂಪನ್ನ
ಭವ
ಸಂಗಮಯುಗದಲ್ಲಿ ಶಿವ
ಶಕ್ತಿಯ ಕಂಬೈಂಡ್ ಸ್ವರೂಪದ ಸ್ಮೃತಿಯಲ್ಲಿರುವುದರಿಂದ ಎಲ್ಲಾ ಅಸಂಭವ ಕಾರ್ಯ ಸಂಭವವಾಗಿಬಿಡುತ್ತದೆ.
ಇದೇ ಸರ್ವ ಶ್ರೇಷ್ಠ ಸ್ವರೂಪವಾಗಿದೆ. ಈ ಸ್ವರೂಪದಲ್ಲಿ ಸ್ಥಿತರಾಗುವುದರಿಂದ ಸಂಪನ್ನ ಭವದ ವರದಾನ
ಸಿಕ್ಕಿಬಿಡುತ್ತದೆ. ಬಾಪ್ದಾದಾ ಎಲ್ಲಾ ಮಕ್ಕಳಿಗೆ ಸದಾ ಸುಖದಾಯಿ ಸ್ಥಿತಿಯ ಸೀಟ್ ಕೊಡುತ್ತಾರೆ. ಸದಾ
ಇದೇ ಸೀಟ್ ಮೇಲೆ ಸೆಟ್ ಆಗಿದ್ದರೆ ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ ತೂಗಡುತ್ತಿರುವಿರಿ ಕೇವಲ
ವಿಸ್ಮøತಿಯ ಸಂಸ್ಕಾರ ಸಮಾಪ್ತಿ ಮಾಡಿ.
ಸ್ಲೋಗನ್:
ಶಕ್ತಿಶಾಲಿ
ವೃತ್ತಿಯ ಮುಖಾಂತರ ಆತ್ಮಗಳನ್ನು ಯೋಗ್ಯ ಮತ್ತು ಯೋಗಿ ಮಾಡಿರಿ.
ಅವ್ಯಕ್ತ ಸೂಚನೆ:
ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ
ಸಮಾವೇಶಿಸಿಕೊಳ್ಳುವ
ಶಕ್ತಿಯಿದ್ದಾಗ ಏಕಮತದ ವಾತಾವರಣವಾಗುತ್ತದೆ. ಭಿನ್ನತೆಯನ್ನು ಸಮಾವೇಶಿಸಿಕೊಳ್ಳಿ ಆಗ ಪರಸ್ಪರದಲ್ಲಿ
ಏಕತೆಯಿಂದ ಸಮೀಪ ಬರುವಿರಿ ಮತ್ತು ಸರ್ವರ ಮುಂದೆ ದೃಷ್ಟಾಂತ ರೂಪರಾಗುವಿರಿ. ಬ್ರಾಹ್ಮಣ ಪರಿವಾರದ
ವಿಶೇಷತೆಯಾಗಿದೆ – ಅನೇಕತೆವಿದ್ದರು ಒಂದಾಗಿರುವುದು. ಈ ಏಕತೆಯ ವೈಬ್ರೇಷನ್ ಇಡೀ ವಿಶ್ವದಲ್ಲಿ ಒಂದೇ
ಧರ್ಮ, ಒಂದೇ ರಾಜ್ಯದ ಸ್ಥಾಪನೆ ಮಾಡುತ್ತದೆ ಇದಕ್ಕಾಗಿ ವಿಶೇಷ ಗಮನ ಕೊಟ್ಟು ಭಿನ್ನತೆಯನ್ನು ಅಳಿಸಿ
ಏಕತೆಯನ್ನು ತರಬೇಕಾಗಿದೆ.