03.03.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ಬೇಹದ್ದಿನ ನಾಟಕವನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿ ಆಗ ಅಪಾರ ಖುಷಿಯಿರುವುದು, ಈ ನಾಟಕದಲ್ಲಿ ಯಾರು ಅನನ್ಯ ಮತ್ತು ಒಳ್ಳೆಯ ಪುರುಷಾರ್ಥಿಯಾಗಿದ್ದಾರೆಯೋ ಅವರ ಪೂಜೆಯೂ ಅಧಿಕವಾಗಿ ಆಗುತ್ತದೆ”

ಪ್ರಶ್ನೆ:
ಯಾವ ಸ್ಮೃತಿಯು ಪ್ರಪಂಚದ ಎಲ್ಲಾ ದುಃಖಗಳಿಂದ ಮುಕ್ತರನ್ನಾಗಿ ಮಾಡುತ್ತದೆ, ಹರ್ಷಿತರಾಗಿರುವ ಯುಕ್ತಿಯೇನಾಗಿದೆ?

ಉತ್ತರ:
ಸದಾ ಸ್ಮೃತಿಯಿರಲಿ - ಈಗ ನಾವು ಭವಿಷ್ಯ ಹೊಸಪ್ರಪಂಚದಲ್ಲಿ ಹೋಗುತ್ತಿದ್ದೇವೆ, ಭವಿಷ್ಯದ ಖುಷಿಯಲ್ಲಿರಿ ಆಗ ದುಃಖವು ಮರೆತುಹೋಗುತ್ತದೆ, ವಿಘ್ನಗಳ ಪ್ರಪಂಚದಲ್ಲಿ ವಿಘ್ನಗಳಂತೂ ಬರುತ್ತದೆ ಆದರೆ ಈ ಪ್ರಪಂಚದಲ್ಲಿ ನಾವು ಇನ್ನು ಕೆಲವೇ ದಿನಗಳು ಇಲ್ಲಿರುತ್ತೇವೆ ಎಂಬ ಸ್ಮೃತಿಯಿದ್ದಾಗ ಹರ್ಷಿತರಾಗಿರುತ್ತೀರಿ.

ಗೀತೆ:
ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ............

ಓಂ ಶಾಂತಿ.
ಈ ಗೀತೆಯು ಬಹಳ ಚೆನ್ನಾಗಿದೆ, ಗೀತೆಯನ್ನು ಕೇಳಿದೊಡನೆಯೇ ಮೇಲಿನಿಂದ ಹಿಡಿದು 84 ಜನ್ಮಗಳ ರಹಸ್ಯವು ಬುದ್ಧಿಯಲ್ಲಿ ಬಂದುಬಿಡುತ್ತದೆ, ಇದನ್ನೂ ಸಹ ಮಕ್ಕಳಿಗೆ ತಿಳಿಸಿದ್ದೇನೆ, ನೀವು ಮೇಲಿನಿಂದ ಬರುವಾಗ ಸೂಕ್ಷ್ಮವತನದ ಮುಖಾಂತರ ಬರುವುದಿಲ್ಲ ಆದರೆ ಈಗ ಸೂಕ್ಷ್ಮವತನದ ಮುಖಾಂತರ ಹೋಗಬೇಕಾಗಿದೆ. ತಂದೆಯು ಸೂಕ್ಷ್ಮವತನವನ್ನು ಈಗಲೇ ತೋರಿಸುತ್ತಾರೆ. ಸತ್ಯಯುಗ-ತ್ರೇತಾಯುಗದಲ್ಲಿ ಈ ಜ್ಞಾನದ ಮಾತೂ ಇರುವುದಿಲ್ಲ, ಈ ಚಿತ್ರಗಳೂ ಇರುವುದಿಲ್ಲ. ಭಕ್ತಿಮಾರ್ಗದಲ್ಲಿ ಬಹಳಷ್ಟು ಚಿತ್ರಗಳಿವೆ, ದೇವಿಯರ ಪೂಜೆಯು ಬಹಳಷ್ಟು ನಡೆಯುತ್ತದೆ. ದುರ್ಗಾ, ಕಾಳಿ, ಸರಸ್ವತಿ ಎಲ್ಲವೂ ಒಂದೇ ಆಗಿದೆ ಆದರೆ ಎಷ್ಟೊಂದು ಹೆಸರುಗಳನ್ನಿಟ್ಟುಬಿಟ್ಟಿದ್ದಾರೆ. ಯಾರು ಒಳ್ಳೆಯ ಪುರುಷಾರ್ಥ ಮಾಡುವರೋ, ಅನನ್ಯರಾಗಿರುವರೋ ಅವರ ಪೂಜೆಯೂ ಹೆಚ್ಚಿನದಾಗಿ ಆಗುವುದು. ನೀವು ತಿಳಿದುಕೊಂಡಿದ್ದೀರಿ - ನಾವೇ ಪೂಜ್ಯರಿಂದ ಪೂಜಾರಿಗಳಾಗುತ್ತೇವೆ. ತಂದೆಯ ಮತ್ತು ನಮ್ಮ ಪೂಜೆಯನ್ನೂ ಮಾಡಿಕೊಳ್ಳುತ್ತೇವೆ. ಇವರೂ (ಬ್ರಹ್ಮಾ) ಸಹ ನಾರಾಯಣನ ಪೂಜೆ ಮಾಡುತ್ತಿದ್ದರಲ್ಲವೆ. ಇದು ಬಹಳ ವಿಚಿತ್ರವಾದ ಆಟವಾಗಿದೆ, ಹೇಗೆ ನಾಟಕವನ್ನು ನೋಡಿದಾಗ ಖುಷಿಯಾಗುತ್ತದೆಯೋ ಹಾಗೆಯೇ ಇದೂ ಸಹ ಬೇಹದ್ದಿನ ನಾಟಕವಾಗಿದೆ, ಇದನ್ನು ಯಾರೂ ತಿಳಿದುಕೊಂಡಿಲ್ಲ. ನಿಮ್ಮ ಬುದ್ಧಿಯಲ್ಲಿ ಈಗ ಪೂರ್ತಿ ಡ್ರಾಮಾದ ರಹಸ್ಯವಿದೆ ಈ ಪ್ರಪಂಚದಲ್ಲಿ ಎಷ್ಟೊಂದು ದುಃಖವಿದೆ. ನಿಮಗೆ ತಿಳಿದಿದೆ - ಇನ್ನು ಸ್ವಲ್ಪಸಮಯವು ಮಾತ್ರವಿದೆ, ನಾವು ಹೊಸಪ್ರಪಂಚದಲ್ಲಿ ಹೋಗುತ್ತಿದ್ದೇವೆ. ಭವಿಷ್ಯದ ಖುಷಿಯಿದ್ದಾಗ ಅದು ಈ ದುಃಖವನ್ನೂ ಸಹ ಮರೆಸಿಬಿಡುತ್ತದೆ. ಬಾಬಾ, ಬಹಳ ವಿಘ್ನಗಳು ಬರುತ್ತವೆ, ನಷ್ಟವುಂಟಾಗುತ್ತಿದೆ ಎಂದು ಕರೆಯುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಏನೇ ವಿಘ್ನಗಳು ಬರಲಿ, ಇಂದು ಲಕ್ಷಾಧಿಪತಿಯಾಗಿದ್ದರೂ ಸಹ ನಾಳೆ ಭಿಕ್ಷಾಧಿಪತಿಯಾಗಿಬಿಡಬಹುದು ಆದರೆ ನೀವಂತೂ ಭವಿಷ್ಯದ ಖುಷಿಯಲ್ಲಿರಬೇಕಲ್ಲವೆ. ಇದಂತೂ ರಾವಣನ ಆಸುರೀ ಪ್ರಪಂಚವಾಗಿದೆ, ನಡೆಯುತ್ತಾ-ನಡೆಯುತ್ತಾ ಯಾವುದಾದರೊಂದು ವಿಘ್ನಗಳು ಬಂದೇ ಬರುತ್ತವೆ. ಈ ಪ್ರಪಂಚದಲ್ಲಿ ಇನ್ನು ಕೆಲವು ದಿನಗಳು ಮಾತ್ರವಿದೆ ನಂತರ ನಾವು ಅಪಾರ ಸುಖದಲ್ಲಿ ಹೋಗುತ್ತೇವೆ. ಈ ತಂದೆಯೂ (ಬ್ರಹ್ಮಾ) ಸಹ ಹೇಳುತ್ತಾರಲ್ಲವೆ - ನೆನ್ನೆಯ ದಿನ ಕಪ್ಪಾಗಿ (ಪತಿತ) ದ್ದೆನು, ಹಳ್ಳಿಯ ಬಾಲಕನಾಗಿದ್ದೆನು, ಈಗ ತಂದೆಯು ನನಗೆ ಜ್ಞಾನವನ್ನು ನೀಡಿ ಸುಂದರನನ್ನಾಗಿ ಮಾಡುತ್ತಿದ್ದಾರೆ. ನಿಮಗೂ ಸಹ ತಿಳಿದಿದೆ - ತಂದೆಯು ಬೀಜರೂಪನಾಗಿದ್ದಾರೆ, ಸತ್ಯ-ಚೈತನ್ಯನಾಗಿದ್ದಾರೆ. ಅವರಿಗೆ ಪರಮ ಆತ್ಮನೆಂದು ಕರೆಯಲಾಗುತ್ತದೆ, ಅವರು ಅತೀ ಮೇಲೆ ಶ್ರೇಷ್ಠಾತಿಶ್ರೇಷ್ಠ ಧಾಮದ ನಿವಾಸಿಯಾಗಿದ್ದಾರೆ. ಅವರು ಪುನರ್ಜನ್ಮದಲ್ಲಿ ಬರುವುದಿಲ್ಲ. ನಾವೆಲ್ಲರೂ ಜನನ-ಮರಣದಲ್ಲಿ ಬರುತ್ತೇವೆ, ಅವರು ಬರುವುದಿಲ್ಲ, ಅವರದು ನಿಶ್ಚಿತವಾಗಿದೆ, ಅವರಿಗಂತೂ ಅಂತ್ಯದಲ್ಲಿ ಬಂದು ಎಲ್ಲರ ಸದ್ಗತಿ ಮಾಡಬೇಕಾಗಿದೆ. ನೀವು ಭಕ್ತಿಮಾರ್ಗದಲ್ಲಿ ಜನ್ಮ-ಜನ್ಮಾಂತರದಿಂದಲೂ ಹಾಡುತ್ತಾ ಬಂದಿದ್ದೀರಿ - ಬಾಬಾ, ತಾವು ಬಂದರೆ ನಾವು ತಮಗೆ ಬಲಿಹಾರಿಯಾಗುತ್ತೇವೆ. ನನ್ನವರು ಒಬ್ಬ ತಂದೆಯ ವಿನಃ ಬೇರೆ ಯಾರೂ ಇಲ್ಲ. ನಾವು ತಂದೆಯ ಜೊತೆಯಲ್ಲಿಯೇ ಹೋಗುತ್ತೇವೆ, ಇದು ದುಃಖದ ಪ್ರಪಂಚವಾಗಿದೆ. ಈ ಭಾರತವು ಎಷ್ಟು ಬಡದೇಶವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಭಾರತವನ್ನೇ ಸಾಹುಕಾರವನ್ನಾಗಿ ಮಾಡುತ್ತೇನೆ ಮತ್ತೆ ರಾವಣನು ನರಕವನ್ನಾಗಿ ಮಾಡುತ್ತಾನೆ. ಈಗ ನೀವು ಮಕ್ಕಳು ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ. ಎಲ್ಲರೂ ಇಲ್ಲಿ ಕುಳಿತುಬಿಡುವಂತಿಲ್ಲ. ಗೃಹಸ್ಥ ವ್ಯವಹಾರದಲ್ಲಿಯೇ ಇರಿ. ಭಲೆ ಬಣ್ಣದ ವಸ್ತ್ರಗಳನ್ನೂ ಧರಿಸಿ, ಅದನ್ನು ಬಿಟ್ಟು ಶ್ವೇತವಸ್ತ್ರಗಳನ್ನೇ ಧರಿಸಿ ಎಂದು ನಿಮಗೆ ಯಾರು ಹೇಳುತ್ತಾರೆ! ತಂದೆಯು ಎಂದೂ ಯಾರಿಗೂ ಈ ರೀತಿ ಹೇಳಿಲ್ಲ. ಯಾವಾಗ ನಿಮಗೆ ಇದು ಇಷ್ಟವಾಗುವುದಿಲ್ಲವೋ ಆಗ ಶ್ವೇತವಸ್ತ್ರಗಳನ್ನು ಧರಿಸಿ. ಭಲೆ ಇಲ್ಲಿ ನೀವು ಶ್ವೇತವಸ್ತ್ರಗಳನ್ನು ಧರಿಸಿರುತ್ತೀರಿ ಆದರೆ ಬಣ್ಣದ ವಸ್ತ್ರಗಳನ್ನು ಧರಿಸುವವರೂ ಸಹ ಆ ಉಡುಪಿನಲ್ಲಿಯೂ ಅನೇಕರ ಕಲ್ಯಾಣ ಮಾಡಬಲ್ಲಿರಿ. ಮಾತೆಯರು ತಮ್ಮ ಪತಿಗೂ ಸಹ ತಿಳಿಸಬಹುದು - ಭಗವಾನುವಾಚವಿದೆ, ಪವಿತ್ರರಾಗಬೇಕಾಗಿದೆ. ದೇವತೆಗಳು ಪವಿತ್ರರಾಗಿದ್ದಾರೆ ಆದ್ದರಿಂದಲೇ ಅವರಿಗೆ ತಲೆಬಾಗುತ್ತೇವೆ. ಪವಿತ್ರರಾಗುವುದಂತೂ ಒಳ್ಳೆಯದೇ ಅಲ್ಲವೆ! ಈಗ ನೀವು ತಿಳಿದುಕೊಂಡಿದ್ದೀರಿ - ಇದು ಸೃಷ್ಟಿಯ ಅಂತ್ಯವಾಗಿದೆ, ಹೆಚ್ಚಿನ ಹಣವನ್ನಿಟ್ಟುಕೊಂಡು ಏನು ಮಾಡುತ್ತೀರಿ! ಇತ್ತೀಚೆಗಂತೂ ಎಷ್ಟೊಂದು ಕಳ್ಳತನಗಳಾಗುತ್ತವೆ, ಲಂಚಕೋರತನವು ಎಷ್ಟೊಂದಿದೆ. ಕೆಲವರದು ಮಣ್ಣುಪಾಲಾಯಿತು, ಕೆಲವರದು........... ಯಾರು ಮಾಲೀಕನ ಹೆಸರಿನಲ್ಲಿ ಖರ್ಚು ಮಾಡಿದರೋ ಅವರದು ಸಫಲವಾಯಿತು ಎಂಬ ಗಾಯನವು ಈ ಸಮಯದ್ದಾಗಿದೆ. ಆ ಮಾಲೀಕನು ಈಗ ಸನ್ಮುಖದಲ್ಲಿದ್ದಾರೆ, ಬುದ್ಧಿವಂತ ಮಕ್ಕಳು ತಮ್ಮದೆಲ್ಲವನ್ನೂ ಮಾಲೀಕನ ಹೆಸರಿನಲ್ಲಿ ಸಫಲ ಮಾಡುತ್ತಾರೆ.

ಮನುಷ್ಯರೆಲ್ಲರೂ ಪತಿತರು ಪತಿತರಿಗೇ ದಾನ ಮಾಡುತ್ತಾರೆ, ಇಲ್ಲಂತೂ ಪುಣ್ಯಾತ್ಮರಿಂದ ದಾನವನ್ನು ತೆಗೆದುಕೊಳ್ಳಬೇಕಾಗಿದೆ. ಬ್ರಾಹ್ಮಣರ ವಿನಃ ಮತ್ತ್ಯಾರೊಂದಿಗೂ ಸಂಬಂಧವಿಲ್ಲ. ನೀವು ಪುಣ್ಯಾತ್ಮರಾಗಿದ್ದೀರಿ, ನೀವು ಪುಣ್ಯದ ಕಾರ್ಯವನ್ನೇ ಮಾಡುತ್ತೀರಿ. ಈ ಮನೆಯನ್ನು ಕಟ್ಟಿಸಿದರೂ ಸಹ ಅದರಲ್ಲಿ ನೀವೇ ಇರುತ್ತೀರಿ. ಯಾವುದೇ ಪಾಪದ ಮಾತಿಲ್ಲ. ಏನೆಲ್ಲಾ ಹಣವಿದೆಯೋ ಅದನ್ನು ಭಾರತವನ್ನು ಸ್ವರ್ಗವನ್ನಾಗಿ ಮಾಡಲು ಖರ್ಚು ಮಾಡುತ್ತಿರುತ್ತೀರಿ. ತಮ್ಮ ಹೊಟ್ಟೆಗೂ ಸಹ ಬಟ್ಟೆಯನ್ನು ಕಟ್ಟಿ ಹೇಳುತ್ತಾರೆ - ಬಾಬಾ, ನಮ್ಮ ಒಂದು ಇಟ್ಟಿಗೆಯನ್ನಾದರೂ ಇದರಲ್ಲಿ ತೊಡಗಿಸಿ ಅದರಿಂದ ನಮಗೆ ಸ್ವರ್ಗದಲ್ಲಿ ಮಹಲು ಸಿಕ್ಕಿಬಿಡುತ್ತದೆ. ಎಷ್ಟು ಬುದ್ಧಿವಂತ ಮಕ್ಕಳಿದ್ದಾರೆ, ಕಲ್ಲುಗಳಿಗೆ ಬದಲಾಗಿ ಅಲ್ಲಿ ಚಿನ್ನವು ಸಿಗುತ್ತದೆ, ಇನ್ನು ಸ್ವಲ್ಪವೇ ಸಮಯವಿದೆ. ನೀವು ಎಷ್ಟೊಂದು ಸೇವೆ ಮಾಡುತ್ತೀರಿ, ಪ್ರದರ್ಶನಿ-ಮೇಳಗಳು ಹೆಚ್ಚುತ್ತಾಹೋಗುತ್ತವೆ. ಕೇವಲ ಹೆಣ್ಣುಮಕ್ಕಳು (ಕನ್ಯೆಯರು) ತೀಕ್ಷ್ಣವಾಗಬೇಕು. ಆದರೆ ಬೇಹದ್ದಿನ ತಂದೆಗೆ ಬಲಿಹಾರಿಯಾಗುವುದೇ ಇಲ್ಲ, ಮೋಹವು ಬಿಟ್ಟುಹೋಗುವುದೇ ಇಲ್ಲ. ನಾನು ನಿಮ್ಮನ್ನು ಸ್ವರ್ಗದಲ್ಲಿ ಕಳುಹಿಸಿದ್ದೆನು, ಈಗ ಮತ್ತೆ ನಿಮ್ಮನ್ನು ಸ್ವರ್ಗಕ್ಕಾಗಿ ತಯಾರು ಮಾಡುತ್ತಿದ್ದೇನೆ. ಒಂದುವೇಳೆ ಶ್ರೀಮತದಂತೆ ನಡೆದಿದ್ದೇ ಆದರೆ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ, ಈ ಮಾತುಗಳನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮೂಲವತನ, ಸೂಕ್ಷ್ಮವತನ ಮತ್ತು ಸ್ಥೂಲವತನ, ಇಡೀ ಸೃಷ್ಟಿಚಕ್ರವೇ ನಿಮ್ಮ ಬುದ್ಧಿಯಲ್ಲಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ ಸ್ವದರ್ಶನಚಕ್ರಧಾರಿಗಳಾಗಿ, ಅನ್ಯರಿಗೂ ತಿಳಿಸುತ್ತಾ ಇರಿ. ಈ ವ್ಯವಹಾರವನ್ನು ನೋಡಿ ಹೇಗಿದೆ! ತಾವೇ ಧನವಂತರು, ಸ್ವರ್ಗದ ಮಾಲೀಕರಾಗಬೇಕಾಗಿದೆ, ಅನ್ಯರನ್ನೂ ಮಾಡಬೇಕಾಗಿದೆ. ಯಾರಿಗೆ ಹೇಗೆ ಮಾರ್ಗವನ್ನು ತಿಳಿಸುವುದು ಎಂಬುದೇ ಬುದ್ಧಿಯಲ್ಲಿರಬೇಕು. ನಾಟಕದನುಸಾರ ಏನು ಕಳೆದುಹೋಯಿತೋ ಅದು ಡ್ರಾಮ. ಕ್ಷಣ-ಪ್ರತಿಕ್ಷಣ ಏನಾಗುವುದೋ ಅದನ್ನು ನಾವು ಸಾಕ್ಷಿಯಾಗಿ ನೋಡುತ್ತೇವೆ. ಮಕ್ಕಳಿಗೆ ತಂದೆಯು ದಿವ್ಯದೃಷ್ಟಿಯಿಂದ ಸಾಕ್ಷಾತ್ಕಾರವನ್ನೂ ಮಾಡಿಸುತ್ತಾರೆ. ಮುಂದೆ ಹೋದಂತೆ ನೀವು ಬಹಳಷ್ಟು ಸಾಕ್ಷಾತ್ಕಾರಗಳನ್ನು ನೋಡುತ್ತೀರಿ. ಮನುಷ್ಯರು ದುಃಖದಲ್ಲಿ ತ್ರಾಹಿ ತ್ರಾಹಿ (ಅಯ್ಯೊ, ಅಯ್ಯೊ) ಎನ್ನುತ್ತಿರುತ್ತಾರೆ ಆದರೆ ನೀವು ಖುಷಿಯಲ್ಲಿ ಚಪ್ಪಾಳೆ ತಟ್ಟುತ್ತಿರುತ್ತೀರಿ. ನಾವು ಮನುಷ್ಯರಿಂದ ದೇವತೆಗಳಾಗುತ್ತೇವೆಂದರೆ ಅವಶ್ಯವಾಗಿ ಹೊಸಪ್ರಪಂಚವು ಬೇಕಲ್ಲವೆ ಅದಕ್ಕಾಗಿಯೇ ಈ ವಿನಾಶವು ನಿಂತಿದೆ. ಇದು ಒಳ್ಳೆಯದೇ ಅಲ್ಲವೆ. ಪರಸ್ಪರ ಹೊಡೆದಾಡಬಾರದು, ಶಾಂತಿಯು ಸ್ಥಾಪನೆಯಾದರೆ ಸಾಕು ಎಂದು ಮನುಷ್ಯರು ತಿಳಿಯುತ್ತಾರೆ ಆದರೆ ಇದಂತೂ ನಾಟಕದಲ್ಲಿ ನಿಗಧಿಯಾಗಿದೆ. ಎರಡು ಕೋತಿಗಳು ಪರಸ್ಪರ ಕಾದಾಡಿದವು, ಬೆಣ್ಣೆಯನ್ನು ನಡುವೆ ಮೂರನೆಯವರಿಗೆ ಸಿಕ್ಕಿತು ಅಂದಾಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಮತ್ತು ಎಲ್ಲರಿಗೂ ಮಾರ್ಗವನ್ನು ತಿಳಿಸಿ. ಸಾಧಾರಣವಾಗಿಯೇ ಇರಬೇಕು, ತಿನ್ನುವುದೂ ಸಾಧಾರಣವಾಗಿರಬೇಕು. ಕೆಲಕೆಲವೊಮ್ಮೆ ಖಾತರಿಯನ್ನೂ ಮಾಡಬೇಕಾಗುತ್ತದೆ.ಯಾವ ಭಂಢಾರದಿಂದ ತಿಂದರೋ ಹೇಳುತ್ತಾರೆ ಬಾಬಾ, ಈ ಭಂಡಾರವು ತಮ್ಮದೆಂದು ಹೇಳುತ್ತಾರೆ ಅದಕ್ಕೆ ತಂದೆಯು ಹೇಳುತ್ತಾರೆ - ನಿಮಿತ್ತರಾಗಿ ಸಂಭಾಲನೆ ಮಾಡಿ. ಬಾಬಾ, ಇದೆಲ್ಲವನ್ನು ತಾವೇ ನೀಡಿದ್ದೀರಿ ಭಕ್ತಿಮಾರ್ಗದಲ್ಲಿ ಕೇವಲ ನಾಮಮಾತ್ರ ಹೇಳುತ್ತಿದ್ದಿರಿ, ಈಗ ನಾನು ನಿಮಗೆ ತಿಳಿಸುತ್ತೇನೆ - ಟ್ರಸ್ಟಿಯಾಗಿ, ಈಗ ನಾನು ಸನ್ಮುಖದಲ್ಲಿದ್ದೇನೆ. ನಾನೂ ಸಹ ಟ್ರಸ್ಟಿಯಾಗಿ ನಿಮ್ಮನ್ನೂ ಟ್ರಸ್ಟಿಯನ್ನಾಗಿ ಮಾಡುತ್ತೇನೆ. ಏನೇ ಮಾಡಿದರೂ ಸಹ ಕೇಳಿ ಮಾಡಿ, ತಂದೆಯು ಪ್ರತಿಯೊಂದು ಮಾತಿನಲ್ಲಿ ಸಲಹೆ ನೀಡುತ್ತಿರುತ್ತಾರೆ. ಬಾಬಾ, ಮನೆಯನ್ನು ಕಟ್ಟಿಸುವುದೇ ಅಥವಾ ಇದನ್ನು ಮಾಡುವುದೇ ಎಂದು ಕೇಳಿದಾಗ ತಂದೆಯು ತಿಳಿಸುತ್ತಾರೆ - ಭಲೆ ಮಾಡಿ, ಆದರೆ ಪಾಪಾತ್ಮರಿಗೆ ಕೊಡಬಾರದು. ಒಂದುವೇಳೆ ಮಗಳು ಜ್ಞಾನದಲ್ಲಿ ನಡೆಯುವುದಿಲ್ಲ, ವಿವಾಹ ಮಾಡಿಕೊಳ್ಳಲು ಇಚ್ಛಿಸುತ್ತಾಳೆಂದರೆ ಏನು ಮಾಡಲು ತಾನೆ ಸಾಧ್ಯ! ನೀನೇಕೆ ಅಪವಿತ್ರಳಾಗುತ್ತೀಯಾ ಎಂದು ತಂದೆಯು ತಿಳಿಸುತ್ತಾರೆ ಅದರೆ ಅವರ ಅದೃಷ್ಟದಲ್ಲಿಲ್ಲವೆಂದರೆ ಪತಿತರೇ ಆಗಿಬಿಡುತ್ತಾರೆ. ಇಂತಹ ಅನೇಕ ಪ್ರಕಾರದ ಘಟನೆಗಳು ಆಗುತ್ತಿರುತ್ತವೆ. ಪವಿತ್ರರಾಗಿದ್ದರೂ ಸಹ ಮಾಯೆಯ ಪೆಟ್ಟು ಬೀಳುತ್ತದೆ, ಹಾಳಾಗಿಬಿಡುತ್ತಾರೆ. ಮಾಯೆಯು ಬಹಳ ಪ್ರಬಲವಾಗಿದೆ. ಅಂತಹವರೂ ಸಹ ಕಾಮಕ್ಕೆ ವಶರಾಗಿಬಿಡುತ್ತಾರೆ. ಇದಕ್ಕೆ ನಾಟಕದ ಪೂರ್ವನಿಶ್ಚಿತವೆಂದು ಹೇಳಲಾಗುತ್ತದೆ. ಈ ಕ್ಷಣದವರೆಗೆ ಏನೆಲ್ಲವೂ ನಡೆಯಿತೋ ಅದು ಕಲ್ಪದ ಹಿಂದೆಯೂ ನಡೆದಿತ್ತು, ನತಿಂಗ್ ನ್ಯೂ (ಹೊಸದೇನಲ್ಲ). ಒಳ್ಳೆಯ ಕೆಲಸ ಮಾಡುವುದರಲ್ಲಿ ವಿಘ್ನಗಳನ್ನು ಹಾಕುತ್ತಾರೆ. ಇದು ಹೊಸಮಾತಲ್ಲ, ನಾವಂತೂ ತನು-ಮನ-ಧನದಿಂದ ಭಾರತವನ್ನು ಅವಶ್ಯವಾಗಿ ಸ್ವರ್ಗವನ್ನಾಗಿ ಮಾಡಬೇಕಾಗಿದೆ. ಎಲ್ಲವನ್ನೂ ತಂದೆಗೆ ಸ್ವಾಹಾ ಮಾಡುತ್ತೇವೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಶ್ರೀಮತದಂತೆ ಈ ಭಾರತದ ಆತ್ಮೀಯ ಸೇವೆ ಮಾಡುತ್ತಿದ್ದೇವೆ. ನಾವು ನಮ್ಮ ರಾಜ್ಯವನ್ನು ಪುನಃ ಸ್ಥಾಪನೆ ಮಾಡುತ್ತಿದ್ದೇವೆಂದು ನಿಮ್ಮ ಬುದ್ಧಿಯಲ್ಲಿದೆ. ತಂದೆಯು ತಿಳಿಸುತ್ತಾರೆ - ಈ ಆತ್ಮೀಯ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವನ್ನು ಮೂರು ಹೆಜ್ಜೆಗಳಷ್ಟು ಪೃಥ್ವಿಯಲ್ಲಿ ತೆರೆಯಿರಿ, ಇದರಿಂದ ಮನುಷ್ಯರು ಸದಾ ಆರೋಗ್ಯವಂತರು, ಐಶ್ವರ್ಯವಂತರಾಗಲಿ. ಆದರೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನೂ ಸಹ ಯಾರೂ ಕೊಡುವುದಿಲ್ಲ. ಈ ಬ್ರಹ್ಮಾಕುಮಾರ-ಕುಮಾರಿಯರು ಜಾದು ಮಾಡುತ್ತಾರೆ, ಸಹೋದರ-ಸಹೋದರಿಯನ್ನಾಗಿ ಮಾಡುತ್ತಾರೆಂದು ಹೇಳುತ್ತಾರೆ. ನಿಮಗಾಗಿ ನಾಟಕದಲ್ಲಿ ಬಹಳ ಒಳ್ಳೆಯ ಯುಕ್ತಿಯನ್ನಿಡಲಾಗಿದೆ. ಸಹೋದರ-ಸಹೋದರಿಯರು ಎಂದೂ ಕುದೃಷ್ಟಿಯನ್ನಿಡಲು ಸಾಧ್ಯವಿಲ್ಲ. ಈಗಿನ ಸಮಯದಲ್ಲಂತೂ ಪ್ರಪಂಚದಲ್ಲಿ ಎಷ್ಟೊಂದು ಕೊಳಕಿದೆ, ಅದರ ಮಾತನ್ನೇ ಕೇಳಬೇಡಿ, ಅಂದಾಗ ಹೇಗೆ ತಂದೆಗೆ ದಯೆ ಬರುತ್ತದೆಯೋ ಹಾಗೆಯೇ ನೀವು ಮಕ್ಕಳಿಗೂ ದಯೆ ಬರಬೇಕು. ಹೇಗೆ ತಂದೆಯು ನರಕವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದಾರೆಯೋ ಹಾಗೆಯೇ ನೀವು ದಯಾಹೃದಯಿ ಮಕ್ಕಳು ತಂದೆಗೆ ಸಹಯೋಗಿಗಳಾಗಬೇಕಾಗಿದೆ. ಹಣವಿದ್ದರೆ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವನ್ನು ತೆರೆಯುತ್ತಾ ಹೋಗಿ, ಇದರಲ್ಲಿ ಹೆಚ್ಚಿನ ಖರ್ಚಿನ ಮಾತಿಲ್ಲ. ಕೇವಲ ಚಿತ್ರಗಳನ್ನು ಇಡಿ, ಯಾರು ಕಲ್ಪದ ಹಿಂದೆ ಜ್ಞಾನವನ್ನು ಪಡೆದಿದ್ದಾರೋ ಅವರ ಬುದ್ಧಿಯ ಬೀಗವು ತೆರೆಯುತ್ತಾ ಹೋಗುವುದು. ಅವರು ಬರುತ್ತಿರುತ್ತಾರೆ. ಎಷ್ಟೊಂದು ಮಂದಿ ಮಕ್ಕಳು ದೂರ-ದೂರದಿಂದ ಓದುವುದಕ್ಕಾಗಿ ಬರುತ್ತಾರೆ. ತಂದೆಯು ಇಂತಹವರನ್ನು ನೋಡಿದ್ದಾರೆ, ರಾತ್ರಿಯಲ್ಲಿ ಒಂದು ಹಳ್ಳಿಯಿಂದ ಬರುತ್ತಾರೆ, ಮುಂಜಾನೆ ಸೇವಾಕೇಂದ್ರದಲ್ಲಿ ಬಂದು ಜೋಳಿಗೆಯನ್ನು ತುಂಬಿಸಿಕೊಂಡು ಹೋಗುತ್ತಾರೆ. ಜೋಳಿಗೆಯು ಸೋರಿ ಹೋಗುವಂತಿರಬಾರದು. ಅಂತಹವರೇನು ಪದವಿಯನ್ನು ಪಡೆಯುತ್ತಾರೆ? ನೀವು ಮಕ್ಕಳಿಗಂತೂ ಬಹಳ ಖುಷಿಯಿರಬೇಕು - ಬೇಹದ್ದಿನ ತಂದೆಯು ನಮಗೆ ಬೇಹದ್ದಿನ ಆಸ್ತಿಯನ್ನು ಕೊಡಲು ಓದಿಸುತ್ತಾರೆ, ಎಷ್ಟು ಸಹಜ ಜ್ಞಾನವಾಗಿದೆ, ತಂದೆಯು ತಿಳಿಸುತ್ತಾರೆ - ಯಾರು ಸಂಪೂರ್ಣ ಕಲ್ಲುಬುದ್ಧಿಯವರಾಗಿದ್ದಾರೆಯೋ ಅವರನ್ನು ಪಾರಸಬುದ್ಧಿಯವರನ್ನಾಗಿ ಮಾಡಬೇಕಾಗಿದೆ. ತಂದೆಗಂತೂ ಬಹಳ ಖುಷಿಯಿರುತ್ತದೆ, ಇವರು ಗುಪ್ತವಾಗಿದ್ದಾರಲ್ಲವೆ. ಜ್ಞಾನವೂ ಗುಪ್ತವಾಗಿದೆ, ಮಮ್ಮಾ-ಬಾಬಾರವರೇ ಈ ಲಕ್ಷ್ಮೀ-ನಾರಾಯಣರಾಗುತ್ತಾರೆಂದರೆ ನಾವು ಕಡಿಮೆಯಾಗುತ್ತೇವೆಯೇ! ನಾವೂ ಸಹ ಸೇವೆ ಮಾಡುತ್ತೇವೆಂಬ ನಶೆಯಿರಬೇಕು. ನಾವು ನಮ್ಮ ರಾಜಧಾನಿಯನ್ನು ಯೋಗಬಲದಿಂದ ಸ್ಥಾಪನೆ ಮಾಡುತ್ತಿದ್ದೇವೆ, ಈಗ ನಾವು ಸ್ವರ್ಗದ ಮಾಲೀಕರಾಗುತ್ತಿದ್ದೇವೆ. ಮತ್ತೆ ಅಲ್ಲಿ ಈ ಜ್ಞಾನವಿರುವುದಿಲ್ಲ. ಈ ಜ್ಞಾನವು ಈ ಸಮಯಕ್ಕಾಗಿಯೇ ಇದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿವಂತರಾಗಿ ತಮ್ಮ ಸರ್ವಸ್ವವನ್ನು ಮಾಲೀಕನ ಹೆಸರಿನಲ್ಲಿ ಸಫಲ ಮಾಡಿಕೊಳ್ಳಬೇಕಾಗಿದೆ. ಪತಿತರಿಗೆ ದಾನ ಮಾಡಬಾರದು. ಬ್ರಾಹ್ಮಣರ ವಿನಃ ಮತ್ತ್ಯರೊಂದಿಗೂ ಸಂಬಂಧವನ್ನಿಟ್ಟುಕೊಳ್ಳಬಾರದು.

2.ಬುದ್ಧಿರೂಪಿ ಜೋಳಿಗೆಯಲ್ಲಿ ಜ್ಞಾನವು ಸೋರಿಹೋಗುವಂತಹ ಯಾವುದೇ ರಂಧ್ರವಿರಬಾರದು. ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡುವುದಕ್ಕಾಗಿ ಓದಿಸುತ್ತಿದ್ದಾರೆ, ಈ ಗುಪ್ತಖುಷಿಯಲ್ಲಿರಬೇಕಾಗಿದೆ. ತಂದೆಯ ಸಮಾನ ದಯಾಹೃದಯಿಗಳಾಗಬೇಕಾಗಿದೆ.

ವರದಾನ:
ಸಂಪನ್ನತೆಯ ಮೂಲಕ ಸಂತುಷ್ಠತೆಯ ಅನುಭವ ಮಾಡುವಂತಹ ಸದಾ ಹರ್ಷಿತ, ವಿಜಯೀ ಭವ.

ಯಾರು ಸರ್ವ ಖಜಾನೆಗಳಿಂದ ಸಂಪನ್ನರಾಗಿರುತ್ತಾರೆ ಅವರೇ ಸದಾ ಸಂತುಷ್ಠರಾಗಿರುತ್ತಾರೆ. ಸಂತುಷ್ಠತೆ ಅರ್ಥಾತ್ ಸಂಪನ್ನತೆ. ಹೇಗೆ ತಂದೆ ಸಂಪನ್ನರಾಗಿದ್ದಾರೆ ಆದ್ದರಿಂದ ಮಹಿಮೆಯಲ್ಲಿ ಸಾಗರ ಎನ್ನುವ ಶಬ್ಧ ಹೇಳುತ್ತಾರೆ. ಹಾಗೆ ನೀವು ಮಕ್ಕಳೂ ಸಹ ಮಾಸ್ಟರ್ ಸಾಗರ ಅರ್ಥಾತ್ ಸಂಪನ್ನರಾದಾಗ ಸದಾ ಖುಶಿಯಲ್ಲಿ ನಾಟ್ಯವಾಡುತ್ತಿರುವಿರಿ. ಒಳಗೆ ಖುಶಿಯ ವಿನಃ ಬೇರೆ ಏನೂ ಬರಲು ಸಾಧ್ಯವಿಲ್ಲ. ಸ್ವಯಂ ಸಂಪನ್ನರಾಗಿರುವ ಕಾರಣ ಯಾರಿಂದಲೂ ಬೇಸರವಾಗುವುದಿಲ್ಲ. ಯಾವುದೇ ಪ್ರಕಾರದ ತಳಮಳ ಅಥವಾ ವಿಘ್ನ ಒಂದು ಆಟವೆಂಬ ಅನುಭವವಾಗುವುದು, ಸಮಸ್ಯೆ ಮನೋರಂಜನೆಯ ಸಾಧನವಾಗಿಬಿಡುತ್ತದೆ. ನಿಶ್ಚಯಬುದ್ಧಿಯಾಗಿರುವ ಕಾರಣ ಸದಾ ಹರ್ಷಿತ ಮತ್ತು ವಿಜಯಿಯಾಗುವಿರಿ.

ಸ್ಲೋಗನ್:
ನಾಜೂಕಾದ ಪರಿಸ್ಥಿತಿಗಳಿಂದ ಗಾಬರಿಯಾಗಬೇಡಿ, ಅವುಗಳಿಂದ ಪಾಠ ಕಲಿತು ಸ್ವಯಂ ನಿಮ್ಮನ್ನು ಪರಿಪಕ್ವಮಾಡಿಕೊಳ್ಳಿ.

ಮಾತೇಶ್ವರೀ ಜೀಯವರ ಅಮೂಲ್ಯ ಮಹಾವಾಕ್ಯ “ಪರಮಾತ್ಮ ಗುರು, ಟೀಚರ್, ತಂದೆಯ ರೂಪದಲ್ಲಿ ಬಿನ್ನ-ಬಿನ್ನ ಸಂಬಂಧಗಳ ಆಸ್ತಿ ಕೊಡುತ್ತಾರೆ”

ನೋಡಿ, ಪರಮಾತ್ಮ ಮೂರು ರೂಪ ಧಾರಣೆ ಮಾಡಿ ಆಸ್ತಿಯನ್ನು ಕೊಡುತ್ತಾರೆ. ಅವರು ನಮ್ಮ ತಂದೆಯೂ ಆಗಿದ್ದಾರೆ, ಟೀಚರ್ ಸಹ ಆಗಿದ್ದಾರೆ ಹಾಗು ಗುರುವೂ ಸಹ ಆಗಿದ್ದಾರೆ. ಈಗ ತಂದೆಯ ಜೊತೆ ತಂದೆಯ ಸಂಬಂಧವಿದೆ, ಟೀಚರ್ ಜೊತೆ ಟೀಚರ್ನ ಸಂಬಂಧ ಇದೆ, ಗುರುವಿನ ಜೊತೆ ಗುರುತನದ ಸಂಬಂಧ ಇದೆ. ಒಂದುವೇಳೆ ತಂದೆಯ ಜೊತೆ ವಿಚ್ಛೇದನ ಪಡೆದರೆ ಆಸ್ತಿ ಹೇಗೆ ಸಿಗುವುದು? ಯಾವಾಗ ಪಾಸ್ ಆಗಿ ಟೀಚರ್ ಮೂಲಕ ಸರ್ಟಿಫಿಕೆಟ್ ಪಡೆಯುವಿರಿ ಆಗ ಟೀಚರ್ನ ಜೊತೆ ಸಿಗುವುದು. ಒಂದುವೇಳೆ ತಂದೆಯ ನಂಬಿಕಸ್ತರು, ಆಜ್ಞಾಕಾರಿ ಮಕ್ಕಳಾಗಿ ಅವರ ಸೂಚನೆಯಂತೆ ನಡೆಯದೆ ಹೋದರೆ ಭವಿಷ್ಯದ ಪ್ರಾಲಭ್ಧ ಆಗುವುದಿಲ್ಲ. ನಂತರ ಪೂರ್ಣ ಸದ್ಗತಿಯನ್ನು ಸಹ ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಿಲ್ಲ, ಆಗ ತಂದೆಯಿಂದಲೂ ಪವಿತ್ರತೆಯ ಆಸ್ತಿ ಪಡೆಯಲಾಗುವುದಿಲ್ಲ. ಪರಮತ್ಮನ ಪ್ರತಿಜ್ಞೆಯಾಗಿದೆ ಒಂದುವೇಳೆ ನೀವು ತೀವ್ರ ಪುರುಷಾರ್ಥ ಮಾಡಿದ್ದೇ ಆದರೆ ನಿಮಗೆ 100 ರಷ್ಟು ಲಾಭ ಕೊಡುತ್ತೇನೆ. ಕೇವಲ ಹೇಳಲು ಅಷ್ಟೆ ಅಲ್ಲ, ಅವರ ಜೊತೆ ಸಂಬಂಧವೂ ಸಹ ಅಷ್ಟೇ ಆಳವಾಗಿರಬೇಕು. ಅರ್ಜುನನಿಗೂ ಸಹ ಆಜ್ಞೆ ಮಾಡಲಾಗಿತ್ತು ಎಲ್ಲರನ್ನೂ ಸಂಹಾರ ಮಾಡು, ನಿರಂತರ ನನ್ನನ್ನು ನೆನಪು ಮಾಡು. ಪರಮಾತ್ಮನು ಸಮರ್ಥನಾಗಿದ್ದಾನೆ, ಸರ್ವ ಶಕ್ತಿವಾನ್ ಆಗಿದ್ದಾನೆ, ಅವರು ತಮ್ಮ ಭರವಸೆಯನ್ನು ಅವಶ್ಯವಾಗಿ ನಿಭಾಯಿಸುತ್ತಾರೆ, ಆದರೆ ಮಕ್ಕಳೂ ಸಹ ತಂದೆಯ ಜೊತೆ ಗೂಡಿದರೆ, ಯಾವಾಗ ಎಲ್ಲರಿಂದ ಬುದ್ಧಿಯೋಗ ಮುರಿದು ಒಬ್ಬ ಪರಮಾತ್ಮನ ಜೊತೆ ಜೋಡಿಸುವಿರಿ ಆಗಲೇ ಅವನಿಂದ ಸಂಪೂರ್ಣ ಆಸ್ತಿ ಸಿಗುವುದು.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೂಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಆವೇಶದಲ್ಲಿ ಬಂದು ಒಂದುವೇಳೆ ಯಾವುದೇ ಸತ್ಯವನ್ನು ಸಿದ್ಧ ಮಾಡಲು ಹೋಗುತ್ತೀರಿ ಎಂದರೆ ಅವಶ್ಯವಾಗಿ ಅದರಲ್ಲಿ ಯಾವುದಾದರೂ ಒಂದು ಅಸತ್ಯತೆ ಸಮಾವೇಶವಾಗಿರುತ್ತದೆ. ಕೆಲವು ಮಕ್ಕಳ ಭಾಷೆಯಾಗಿದೆ- ನಾನು ಸಂಪೂರ್ಣವಾಗಿ ಸತ್ಯ ಹೇಳುತ್ತಿದ್ದೇನೆ, 100% ಸತ್ಯ ಹೇಳುತ್ತೇನೆ, ಆದರೆ ಸತ್ಯವನ್ನು ಸಿದ್ಧ ಮಾಡುವ ಅವಶ್ಯಕತೆ ಇರುವುದಿಲ್ಲ. ಸತ್ಯ ಇಂತಹ ಸೂರ್ಯವಾಗಿದೆ ಅದು ಮರೆಯಾಗಲು ಸಾಧ್ಯವಿಲ್ಲ, ಎಷ್ಟೇ ಗೋಡೆಗಳು ಯಾರೆ ಇಡಲಿ ಆದರೆ ಸತ್ಯತೆಯ ಪ್ರಕಾಶ ಎಂದು ಸಹ ಮರೆಯಾಗಲು ಸಾಧ್ಯವಿಲ್ಲ. ಸಭ್ಯತೆಯೊಂದಿಗೆ ಮಾತನಾಡಿ, ಸಭ್ಯತೆಯ ಚಲನೆ ಇರಲಿ, ಇದರಿಂದಲೇ ಸಫಲತೆಯಾಗುತ್ತದೆ.