03.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮ್ಮ
ಈ ಹೊಸ ವೃಕ್ಷವು ಬಹಳ ಮಧುರವಾಗಿದೆ, ಈ ಮಧುರ ವೃಕ್ಷಕ್ಕೇ ಕೀಟಗಳು ಬೀಳುತ್ತವೆ, ಕೀಟಗಳನ್ನು
ಸಮಾಪ್ತಿ ಮಾಡುವ ಕೀಟನಾಶಕವು ಮನ್ಮನಾಭವವಾಗಿದೆ”
ಪ್ರಶ್ನೆ:
ಪಾಸ್-ವಿತ್-ಆನರ್
ಆಗುವಂತಹ ವಿದ್ಯಾರ್ಥಿಗಳ ಚಿಹ್ನೆಗಳೇನು?
ಉತ್ತರ:
ಅವರು ಕೇವಲ ಒಂದು
ಸಬ್ಜೆಕ್ಟ್ ನಲ್ಲಿಯೇ ಅಲ್ಲ, ಎಲ್ಲಾ ಸಬ್ಜೆಕ್ಟ್ ಗಳ ಮೇಲೆ ಸಂಪೂರ್ಣ ಗಮನವಿಡುತ್ತಾರೆ.
ಸ್ಥೂಲಸೇವೆಯ ವಿಷಯವು ಒಳ್ಳೆಯದೇ ಆಗಿದೆ. ಅನೇಕರಿಗೆ ಸುಖ ಸಿಗುತ್ತದೆ. ಇದರಿಂದಲೇ ಅಂಕಗಳು ಜಮಾ
ಆಗುತ್ತವೆ ಆದರೆ ಜೊತೆಜೊತೆಗೆ ಜ್ಞಾನವೂ ಬೇಕು ಮತ್ತು ನಡವಳಿಕೆಯೂ ಬೇಕು, ದೈವೀಗುಣಗಳ ಮೇಲೆ
ಪೂರ್ಣಗಮನವಿರಲಿ. ಜ್ಞಾನ-ಯೋಗವು ಸಂಪೂರ್ಣವಾಗಿದ್ದಾಗಲೇ ಪಾಸ್-ವಿತ್-ಆನರ್ (ಗೌರವಾನ್ವಿತವಾಗಿ
ತೇರ್ಗಡೆ) ಆಗಲು ಸಾಧ್ಯ.
ಗೀತೆ:
ಅವರು ನಮ್ಮನ್ನು
ಅಗಲುವುದಿಲ್ಲ.............
ಓಂ ಶಾಂತಿ.
ಮಕ್ಕಳು ಏನು ಕೇಳಿದಿರಿ? ಮಕ್ಕಳಿಗೆ ಯಾರೊಂದಿಗೆ ಮನಸ್ಸಾಗಿದೆ? ಮಾರ್ಗದರ್ಶಕನೊಂದಿಗೆ.
ಮಾರ್ಗದರ್ಶಕನು ಏನೇನು ತೋರಿಸುತ್ತಾರೆ? ಸ್ವರ್ಗಕ್ಕೆ ಹೋಗುವ ಬಾಗಿಲನ್ನು ತೋರಿಸುತ್ತಾರೆ.
ಮಕ್ಕಳಿಗೆ ಹೆಸರನ್ನು ಕೊಟ್ಟಿದ್ದಾರೆ - ಗೇಟ್ ವೇ ಟು ಹೆವೆನ್. ಸ್ವರ್ಗದ ಬಾಗಿಲು ಯಾವಾಗ
ತೆರೆಯುತ್ತದೆ? ಈಗಂತೂ ನರಕವಾಗಿದೆಯಲ್ಲವೆ. ಸ್ವರ್ಗದ ಬಾಗಿಲನ್ನು ಯಾರು ತೆರೆಯುತ್ತಾರೆ ಮತ್ತು
ಯಾವಾಗ? ಇದನ್ನು ನೀವು ಮಕ್ಕಳೇ ಅರಿತುಕೊಂಡಿದ್ದೀರಿ. ನಿಮಗೆ ಸದಾ ಖುಷಿಯಿರುತ್ತದೆ - ಸ್ವರ್ಗದಲ್ಲಿ
ಹೋಗುವ ಮಾರ್ಗವನ್ನು ನೀವು ತಿಳಿದುಕೊಂಡಿದ್ದೀರಿ. ಮೇಳ, ಪ್ರದರ್ಶನಿಯ ಮೂಲಕ ನೀವು ಇದನ್ನು
ತೋರಿಸುತ್ತೀರಿ. ಮೂಲತಃ ಮನುಷ್ಯರು ಸ್ವರ್ಗದ ದ್ವಾರಕ್ಕೆ ಹೇಗೆ ಹೋಗಬಹುದೆಂಬುದನ್ನು ನೀವು
ತೋರಿಸುತ್ತೀರಿ. ನೀವು ಬಹಳಷ್ಟು ಚಿತ್ರಗಳನ್ನು ಮಾಡಿದ್ದೀರಿ. ತಂದೆಯು ಹೇಳುತ್ತಾರೆ - ಇವೆಲ್ಲಾ
ಚಿತ್ರಗಳಲ್ಲಿ ಇಂತಹ ಯಾವ ಚಿತ್ರವಿದೆ, ಯಾವುದರಿಂದ ಇದು ಸ್ವರ್ಗದಲ್ಲಿ ಹೋಗುವ ದ್ವಾರವಾಗಿದೆ ಎಂದು
ನಾವು ಯಾರಿಗೆ ಬೇಕಾದರೂ ತಿಳಿಸುವಂತಿರಬೇಕು. ಗೋಲದ (ಸೃಷ್ಟಿಚಕ್ರ) ಚಿತ್ರದಲ್ಲಿ ಸ್ವರ್ಗದಲ್ಲಿ
ಹೋಗುವ ದ್ವಾರವು ಸಿದ್ಧವಾಗುತ್ತದೆ. ಇದೇ ಸರಿಯಾಗಿದೆ. ಮೇಲೆ ನರಕದ ಬಾಗಿಲಿದೆ. ಈಕಡೆ ಸ್ವರ್ಗದ
ದ್ವಾರವಿದೆ. ಸಂಪೂರ್ಣ ಸ್ಪಷ್ಟವಾಗಿದೆ. ಇಲ್ಲಿಂದ ಎಲ್ಲಾ ಆತ್ಮಗಳು ಶಾಂತಿಧಾಮಕ್ಕೆ ಓಡುತ್ತಾರೆ.
ಮತ್ತೆ ಸ್ವರ್ಗದಲ್ಲಿ ಬರುತ್ತಾರೆ. ಇದು ದ್ವಾರವಾಗಿದೆ, ಇಡೀ ಚಕ್ರಕ್ಕೂ ದ್ವಾರವೆಂದು
ಹೇಳುವುದಿಲ್ಲ. ಮೇಲೆ ಎಲ್ಲಿ ಸಂಗಮವೆಂದು ತೋರಿಸಿದ್ದಾರೆಯೋ ಅದು ಪೂರ್ಣದ್ವಾರವಾಗಿದೆ. ಅದರಿಂದ
ಆತ್ಮಗಳು ಹೊರಗೆ ಹೋಗುತ್ತಾರೆ ಮತ್ತೆ ಹೊಸ ಪ್ರಪಂಚದಲ್ಲಿ ಬರುತ್ತಾರೆ. ಉಳಿದೆಲ್ಲಾ ಆತ್ಮಗಳು
ಶಾಂತಿಧಾಮದಲ್ಲಿರುತ್ತಾರೆ. ಇದು ನರಕ, ಇದು ಸ್ವರ್ಗವೆಂದು ಅದರಲ್ಲಿ ಮುಳ್ಳು ತೋರಿಸುತ್ತದೆ.
ಎಲ್ಲದಕ್ಕಿಂದ ಒಳ್ಳೆಯ ಬಹಳ ಸುಂದರವಾಗಿ ತಿಳಿಸಿಕೊಡುವ ಚಿತ್ರವು ಇದಾಗಿದೆ. ಗೇಟ್ ವೇ ಟು ಹೆವೆನ್
ಇದು ಸಂಪೂರ್ಣ ಸ್ಪಷ್ಟವಾಗಿದೆ. ಇದು ಬುದ್ಧಿಯಿಂದ ತಿಳಿದುಕೊಳ್ಳುವ ಮಾತಾಗಿದೆಯಲ್ಲವೆ. ಅನೇಕ
ಧರ್ಮಗಳ ವಿನಾಶ ಮತ್ತು ಒಂದುಧರ್ಮದ ಸ್ಥಾಪನೆಯಾಗುತ್ತಿದೆ. ನೀವು ತಿಳಿದುಕೊಂಡಿದ್ದೀರಿ - ನಾವು
ಸುಖಧಾಮದಲ್ಲಿ ಹೋಗುತ್ತೇವೆ ಆಗ ಉಳಿದವರೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ದ್ವಾರವಂತೂ ಬಹಳ
ಸ್ಪಷ್ಟವಾಗಿದೆ. ಈ ಗೋಲವೇ ಮುಖ್ಯಚಿತ್ರವಾಗಿದೆ. ಇದರಲ್ಲಿ ನರಕದ ದ್ವಾರ, ಸ್ವರ್ಗದ ದ್ವಾರವನ್ನು
ಸ್ಪಷ್ಟವಾಗಿ ತೋರಿಸಲಾಗಿದೆ. ಸ್ವರ್ಗದ ದ್ವಾರದಲ್ಲಿ ಕಲ್ಪದ ಹಿಂದೆ ಯಾರು ಹೋಗಿದ್ದರೋ ಅವರೇ
ಹೋಗುತ್ತಾರೆ, ಉಳಿದವರೆಲ್ಲರೂ ಶಾಂತಿಯ ದ್ವಾರದಲ್ಲಿ ಹೋಗುತ್ತಾರೆ. ನರಕದ ದ್ವಾರವು ಮುಚ್ಚಲ್ಪಟ್ಟು
ಶಾಂತಿ ಮತ್ತು ಸುಖದ ದ್ವಾರವು ತೆರೆಯುತ್ತದೆ. ಎಲ್ಲದಕ್ಕಿಂತ ಒಳ್ಳೆಯ ಚಿತ್ರವು ಇದಾಗಿದೆ. ತಂದೆಯು
ಯಾವಾಗಲೂ ಹೇಳುತ್ತಾರೆ - ತ್ರಿಮೂರ್ತಿ, ಗೋಲ ಮತ್ತು ಈ ಚಕ್ರದ ಚಿತ್ರವು ಬಹಳ ಚೆನ್ನಾಗಿವೆ. ಯಾರೇ
ಬಂದರೂ ಅವರಿಗೆ ಮೊದಲು ಈ ಚಿತ್ರದ ಮೇಲೆ ತೋರಿಸಿ - ಇದು ಸ್ವರ್ಗದಲ್ಲಿ ಹೋಗುವ ಮಾರ್ಗವಾಗಿದೆ, ಇದು
ನರಕ, ಇದು ಸ್ವರ್ಗ. ಈಗ ನರಕದ ವಿನಾಶವಾಗುತ್ತದೆ, ಮುಕ್ತಿಯ ದ್ವಾರವು ತೆರೆಯುತ್ತದೆ. ಈ ಸಮಯದಲ್ಲಿ
ನಾವು ಸ್ವರ್ಗಕ್ಕೆ ಹೋಗುತ್ತೇವೆ ಉಳಿದವರೆಲ್ಲರೂ ಶಾಂತಿಧಾಮದಲ್ಲಿ ಹೋಗುತ್ತಾರೆ. ಎಷ್ಟು ಸಹಜವಾಗಿದೆ!
ಎಲ್ಲರೂ ಸ್ವರ್ಗದ ದ್ವಾರದಲ್ಲಿ ಹೋಗುವುದಿಲ್ಲ. ಅಲ್ಲಂತೂ ಈ ದೇವಿ-ದೇವತೆಗಳ ರಾಜ್ಯವೇ ಇತ್ತು,
ನಿಮ್ಮ ಬುದ್ಧಿಯಲ್ಲಿದೆ, ನಾವು ಸ್ವರ್ಗದ ದ್ವಾರದಲ್ಲಿ ಹೋಗಲು ಈಗ ಯೋಗ್ಯರಾಗಿದ್ದೇವೆ. ಎಷ್ಟು
ಓದುತ್ತೀರಿ, ಬರೆಯುತ್ತೀರೋ ಅಷ್ಟು ನವಾಬರಾಗುತ್ತೀರಿ. ಓಡಾಡಿ-ತಿರುಗಾಡಿಕೊಂಡಿದ್ದರೆ
ಹಾಳಾಗುತ್ತೀರಿ. ಎಲ್ಲದಕ್ಕಿಂತ ಒಳ್ಳೆಯದು ಈ ಗೋಲದ ಚಿತ್ರವಾಗಿದೆ. ಬುದ್ಧಿಯಿಂದ
ತಿಳಿದುಕೊಳ್ಳಬಹುದು - ಒಂದುಬಾರಿ ಈ ಚಿತ್ರವನ್ನು ನೋಡಿದರೆ ಮತ್ತೆ ಬುದ್ಧಿಗೆ ಕೆಲಸ ಕೊಡಬೇಕಾಗಿದೆ.
ನೀವು ಮಕ್ಕಳಿಗೆ ಇಡೀ ದಿನ ಈ ವಿಚಾರಗಳು ನಡೆಯಬೇಕು - ಇಂತಹ ಯಾವ ಮುಖ್ಯಚಿತ್ರವಿರಬೇಕು ಅದರಿಂದ
ನಾವು ಅನ್ಯರಿಗೆ ಬಹಳ ಚೆನ್ನಾಗಿ ತಿಳಿಸಿಕೊಡುವಂತಿರಬೇಕು. ಗೇಟ್ ವೇ ಟು ಹೆವೆನ್ - ಈ ಆಂಗ್ಲಶಬ್ಧವು
ಬಹಳ ಚೆನ್ನಾಗಿದೆ. ಈಗಂತೂ ಅನೇಕ ಭಾಷೆಗಳಾಗಿಬಿಟ್ಟಿದೆ. ಹಿಂದಿ ಶಬ್ಧವು ಹಿಂದೂಸ್ಥಾನ ಎಂಬುದರಿಂದ
ಬಂದಿದೆ. ಹಿಂದೂಸ್ಥಾನ ಶಬ್ಧವು ಸರಿಯಿಲ್ಲ. ಇದರ ಮೂಲಹೆಸರು ಭಾರತವೆಂದಾಗಿದೆ. ಭಾರತಖಂಡವೆಂದು
ಹೇಳುತ್ತಾರೆ. ಈ ಗಲ್ಲಿಗಳ ಹೆಸರು ಬದಲಾಗುತ್ತದೆ ಆದರೆ ಖಂಡಗಳ ಹೆಸರು ಬದಲಾಗುತ್ತದೆಯೇ ? ಮಹಾಭಾರತ
ಎಂಬ ಶಬ್ಧವಿದೆಯಲ್ಲವೆ. ಎಲ್ಲದರಲ್ಲಿಯೂ ಭಾರತವೇ ನೆನಪು ಬರುತ್ತದೆ. ಭಾರತ ನನ್ನ ದೇಶವೆಂದು
ಹಾಡುತ್ತಾರೆ. ಹಿಂದೂ ಧರ್ಮವೆಂದು ಹೇಳಿರುವುದರಿಂದ ಭಾಷೆಯನ್ನು ಹಿಂದಿ ಎಂದು ಇಟ್ಟುಬಿಟ್ಟಿದ್ದಾರೆ.
ಇದು ಸರಿಯಿಲ್ಲ. ಸತ್ಯಯುಗದಲ್ಲಿ ಎಲ್ಲವೂ ಸತ್ಯವಾಗಿರುತ್ತದೆ. ಸತ್ಯವನ್ನು ಧರಿಸುವುದು, ಸತ್ಯವನ್ನು
ತಿನ್ನುವುದು ,ಸತ್ಯವನ್ನು ಹೇಳುವುದು, ಎಲ್ಲವೂ ಸತ್ಯವಾಗಿರುತ್ತದೆ, ಇಲ್ಲಿ ಎಲ್ಲವೂ
ಅಸತ್ಯವಾಗಿರುತ್ತದೆ. ಈಗ ಈ ಗೇಟ್ ವೇ ಟು ಹೆವೆನ್ ಶಬ್ಧವು ಬಹಳ ಚೆನ್ನಾಗಿದೆ. ನಡೆಯಿರಿ ನಾವು
ನಿಮಗೆ ಸ್ವರ್ಗಕ್ಕೆ ಹೋಗುವ ದ್ವಾರವನ್ನು ತಿಳಿಸುತ್ತೇವೆ. ಈಗಂತೂ ಎಷ್ಟೊಂದು ಭಾಷೆಗಳಾಗಿಬಿಟ್ಟಿದೆ!
ತಂದೆಯು ನೀವು ಮಕ್ಕಳಿಗೆ ಸದ್ಗತಿಯ ಶ್ರೇಷ್ಠಮತವನ್ನು ಕೊಡುತ್ತಾರೆ. ತಂದೆಯ ಮತಕ್ಕಾಗಿಯೇ ಗಾಯನವಿದೆ
- ಭಗವಂತನ ಗತಿ ಮತ್ತು ಮತವು ಭಿನ್ನವಾಗಿದೆ ಎಂದು. ತಂದೆಯು ಮಕ್ಕಳಿಗೆ ಎಷ್ಟು ಸಹಜವಾದ ಮತವನ್ನು
ಕೊಡುತ್ತಾರೆ. ಭಗವಂತನ ಶ್ರೀಮತದನುಸಾರವೇ ನೀವು ನಡೆಯಬೇಕಾಗಿದೆ. ವೈದ್ಯರ ಮತದಂತೆ ನಡೆದು
ವೈದ್ಯರಾಗುತ್ತಾರೆ. ಭಗವಂತನ ಮತದಂತೆ ಭಗವಾನ್-ಭಗವತಿಯಾಗುತ್ತಾರೆ. ಇದು ಭಗವಾನುವಾಚವಾಗಿದೆ
ಆದ್ದರಿಂದ ತಂದೆಯು ತಿಳಿಸಿದ್ದಾರೆ - ಮೊದಲಿಗೆ ಭಗವಂತನೆಂದು ಯಾರಿಗೆ ಹೇಳಲಾಗುತ್ತದೆ ಎಂಬ ಮಾತನ್ನು
ಸಿದ್ಧಮಾಡಿ. ಸ್ವರ್ಗದ ಮಾಲೀಕರು ಅವಶ್ಯವಾಗಿ ಭಗವಾನ್-ಭಗವತಿಯೇ (ಲಕ್ಷ್ಮೀ-ನಾರಾಯಣ) ಆದರು.
ಬ್ರಹ್ಮ್ ತತ್ವದಲ್ಲಂತೂ ಏನೂ ಇಲ್ಲ. ಇಲ್ಲಿಯೇ ಸ್ವರ್ಗ, ಇಲ್ಲಿಯೇ ನರಕವಾಗುತ್ತದೆ.
ಸ್ವರ್ಗ-ನರಕವೆರಡೂ ಭಿನ್ನವಾಗಿದೆ. ಮನುಷ್ಯರ ಬುದ್ಧಿಯು ಸಂಪೂರ್ಣ ತಮೋಪ್ರಧಾನವಾಗಿಬಿಟ್ಟಿದೆ,
ಏನನ್ನೂ ತಿಳಿದುಕೊಂಡಿಲ್ಲ. ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳಿಬಿಟ್ಟಿದ್ದಾರೆ.
ಕಲಿಯುಗಕ್ಕೆ ಇನ್ನೂ 40 ಸಾವಿರ ವರ್ಷಗಳಿದೆಯೆಂದು ಹೇಳಿಬಿಟ್ಟಿದ್ದಾರೆ. ಸಂಪೂರ್ಣ ಘೋರ
ಅಂಧಕಾರದಲ್ಲಿದ್ದಾರೆ.
ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ತಂದೆಯು ನಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗಲು ಇಷ್ಟು
ಗುಣವಂತರನ್ನಾಗಿ ಮಾಡುತ್ತಾರೆ. ಮುಖ್ಯವಾಗಿ ಇದೇ ಚಿಂತೆಯನ್ನಿಟ್ಟುಕೊಳ್ಳಬೇಕು - ನಾವು ಹೇಗೆ
ಸತೋಪ್ರಧಾನರಾಗುವುದು? ತಂದೆಯು ತಿಳಿಸಿದ್ದಾರೆ - ನನ್ನೊಬ್ಬನನ್ನೇ ನೆನಪು ಮಾಡಿ,
ನಡೆದಾಡುತ್ತಾ-ತಿರುಗಾಡುತ್ತಾ ಕೆಲಸ-ಕಾರ್ಯಗಳನ್ನು ಮಾಡುತ್ತಲೂ ಬುದ್ಧಿಯಲ್ಲಿ ಇದು ನೆನಪಿರಲಿ.
ಪ್ರಿಯತಮ-ಪ್ರಿಯತಮೆಯರು ಕರ್ಮವನ್ನೂ ಮಾಡುತ್ತಾರಲ್ಲವೆ. ಭಕ್ತಿಯಲ್ಲಿಯೂ ಕೆಲಸಕಾರ್ಯಗಳನ್ನು
ಮಾಡುತ್ತಾರೆ ಆದರೆ ಬುದ್ಧಿಯಲ್ಲಿ ಅವರ ನೆನಪಿರುತ್ತದೆ. ನೆನಪು ಮಾಡುವುದಕ್ಕಾಗಿ ಮಾಲೆಯನ್ನು
ಜಪಿಸುತ್ತಾರೆ. ತಂದೆಯು ಸಹ ಪದೇ-ಪದೇ ತಿಳಿಸುತ್ತಾರೆ - ತಂದೆಯಾದ ನನ್ನನ್ನು ನೆನಪು ಮಾಡಿ. ಆದರೆ
ಸರ್ವವ್ಯಾಪಿಯೆಂದು ಹೇಳಿಬಿಡುತ್ತೀರೆಂದರೆ ಮತ್ತೆ ಯಾರನ್ನು ನೆನಪು ಮಾಡುತ್ತೀರಿ? ನೀವು ಎಷ್ಟೊಂದು
ನಾಸ್ತಿಕರಾಗಿಬಿಟ್ಟಿದ್ದೀರಿ! ತಂದೆಯನ್ನೇ ಅರಿತುಕೊಂಡಿಲ್ಲ! ಓ ಭಗವಂತನೇ ಎಂದು ಹೇಳುತ್ತೀರಿ ಆದರೆ
ಅವರು ಯಾರೆಂಬುದನ್ನೇ ತಿಳಿದುಕೊಂಡಿಲ್ಲ. ಓ ಗಾಡ್ ಫಾದರ್ ಎಂದು ಆತ್ಮವೇ ಹೇಳುತ್ತದೆ ಆದರೆ
ಆತ್ಮವೆಂದರೇನು, ಆತ್ಮವು ಬೇರೆಯಾಗಿದೆ, ಅವರಿಗೆ ಪರಮ ಆತ್ಮ ಅರ್ಥಾತ್ ಸುಪ್ರೀಂ ಎಂದು ಹೇಳುತ್ತಾರೆ.
ಶ್ರೇಷ್ಠಾತಿಶ್ರೇಷ್ಠ ಸುಪ್ರೀಮ್ ಸೋಲ್ ಪರಮಾತ್ಮನಾಗಿದ್ದಾರೆ. ಆತ್ಮದ ಜ್ಞಾನವಿರುವಂತಹ ಮನುಷ್ಯರು
ಒಬ್ಬರೂ ಇಲ್ಲ. ನಾನು ಆತ್ಮನಾಗಿದ್ದೇನೆ, ಇದು ನನ್ನ ಶರೀರವಾಗಿದೆ, ಎರಡು ವಸ್ತುಗಳಿದೆಯಲ್ಲವೆ. ಈ
ಶರೀರವು ಪಂಚತತ್ವಗಳಿಂದಾಗಿದೆ, ಆತ್ಮವಂತೂ ಒಂದು ಅವಿನಾಶಿ ಬಿಂದುವಾಗಿದೆ. ಅದು ಯಾವುದರಿಂದ
ಆಗಿರಬಹುದು! ಇಷ್ಟು ಚಿಕ್ಕಬಿಂದುವಾಗಿದೆ. ಸಾಧು-ಸಂತ ಮೊದಲಾದವರ್ಯಾರೂ ಇದನ್ನು ತಿಳಿದುಕೊಂಡಿಲ್ಲ.
ಈ ಬ್ರಹ್ಮಾರವರಂತೂ ಬಹಳ ಮಂದಿ ಗುರುಗಳನ್ನು ಮಾಡಿಕೊಂಡರು ಆದರೆ ಯಾರೂ ಸಹ ಇದನ್ನು ತಿಳಿಸಲಿಲ್ಲ -
ಆತ್ಮವೆಂದರೇನು, ಪರಮಪಿತ ಪರಮಾತ್ಮ ಯಾರು? ಕೇವಲ ಪರಮಾತ್ಮನನ್ನು ತಿಳಿದುಕೊಂಡಿಲ್ಲವೆಂದಲ್ಲ.
ಆತ್ಮವನ್ನೂ ಸಹ ತಿಳಿದುಕೊಂಡಿಲ್ಲ. ಆತ್ಮವನ್ನು ಅರಿತುಕೊಂಡರೆ ಪರಮಾತ್ಮನನ್ನುತಕ್ಷಣ
ಅರಿತುಕೊಳ್ಳುವರು. ಮಗುವು ತನ್ನನ್ನು ಅರಿತುಕೊಂಡು ತನ್ನ ತಂದೆಯನ್ನು ಅರಿತುಕೊಳ್ಳದಿದ್ದರೆ
ನಡೆಯುವುದಾದರು ಹೇಗೆ? ನೀವಂತೂ ಈಗ ಆತ್ಮವೆಂದರೇನು? ಅದು ಎಲ್ಲಿರುತ್ತದೆ ಎಂಬುದೆಲ್ಲವನ್ನೂ
ತಿಳಿದುಕೊಂಡಿದ್ದೀರಿ. ವೈದ್ಯರು ಸಹ ಇಷ್ಟನ್ನು ಮಾತ್ರ ತಿಳಿದುಕೊಳ್ಳುತ್ತಾರೆ - ಅದು
ಸೂಕ್ಷ್ಮವಾಗಿದೆ, ಅದನ್ನು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಮತ್ತೆ ಗಾಜಿನಲ್ಲಿಯೇ ಅದನ್ನು
ಬಂಧಿಸಿಡುವುದರಿಂದ ನೋಡಲು ಸಾಧ್ಯವೇ? ಪ್ರಪಂಚದಲ್ಲಿ ನಿಮ್ಮ ಜ್ಞಾನವು ಯಾರಿಗೂ ಇಲ್ಲ. ನೀವು
ತಿಳಿದುಕೊಂಡಿದ್ದೀರಿ - ಆತ್ಮವು ಬಿಂದುವಾಗಿದೆ, ಪರಮಾತ್ಮನೂ ಬಿಂದುವಾಗಿದ್ದಾರೆ ಆದರೆ ನಾವಾತ್ಮಗಳು
ಪತಿತರಿಂದ ಪಾವನ, ಪಾವನರಿಂದ ಪತಿತರಾಗುತ್ತೇವೆ. ಸತ್ಯಯುಗದಲ್ಲಿ ಪತಿತ ಆತ್ಮರಿರುವುದಿಲ್ಲ,
ಅಲ್ಲಿಂದ ಎಲ್ಲರೂ ಪಾವನರೇ ಬರುತ್ತಾರೆ ನಂತರ ಪತಿತರಾಗುತ್ತಾರೆ. ತಂದೆಯು ಬಂದು ಪುನಃ ಪಾವನರನ್ನಾಗಿ
ಮಾಡುತ್ತಾರೆ. ಇದು ಬಹಳ ಸಹಜಕ್ಕಿಂತ ಸಹಜಮಾತಾಗಿದೆ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮಗಳು
84 ಜನ್ಮಗಳ ಚಕ್ರವನ್ನು ಸುತ್ತಿ ಈಗ ತಮೋಪ್ರಧಾನರಾಗಿಬಿಟ್ಟಿದ್ದೇವೆ. ನಾವೇ 84 ಜನ್ಮಗಳನ್ನು
ಪಡೆದುಕೊಳ್ಳುತ್ತೇವೆ. ಇದು ಒಬ್ಬರ ಮಾತಲ್ಲ. ನಾನು ಇವರಿಗೆ (ಬ್ರಹ್ಮಾ) ತಿಳಿಸುತ್ತೇನೆ, ನೀವು
ಕೇಳಿಸಿಕೊಳ್ಳುತ್ತೀರಿ. ನಾನು ಇವರಲ್ಲಿ ಪ್ರವೇಶ ಮಾಡಿ ತಿಳಿಸಿಕೊಡುತ್ತೇನೆ. ಇದು ರಥವಾಗಿದೆ,
ತಂದೆಯು ತಿಳಿಸಿದ್ದಾರೆ - ಗೇಟ್ ವೇ ಟು ಹೆವೆನ್ ಎಂದು ಹೆಸರಿಡಬೇಕು. ಇದರಲ್ಲಿಯೂ ತಿಳಿಸಬೇಕು -
ಸತ್ಯಯುಗದಲ್ಲಿ ಯಾವ ದೇವಿ-ದೇವತಾಧರ್ಮವಿತ್ತೋ ಅದು ಪ್ರಾಯಲೋಪವಾಗಿದೆ. ಯಾರಿಗೂ ತಿಳಿದಿಲ್ಲ.
ಕ್ರಿಶ್ಚಿಯನ್ನರೂ ಸಹ ಮೊದಲು ಸತೋಪ್ರಧಾನರಾಗಿದ್ದರು ನಂತರ ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ತಮೋಪ್ರಧಾನರಾಗುತ್ತಾರೆ. ವೃಕ್ಷವು ಅವಶ್ಯವಾಗಿ
ಹಳೆಯದಾಗುತ್ತದೆ. ಇದು ವಿಭಿನ್ನ ಧರ್ಮಗಳ ವೃಕ್ಷವಾಗಿದೆ, ವೃಕ್ಷದ ಲೆಕ್ಕದಿಂದ ಮತ್ತೆಲ್ಲಾ
ಧರ್ಮದವರು ಕೊನೆಯಲ್ಲಿಯೇ ಬರುತ್ತಾರೆ. ಈ ನಾಟಕವು ಮಾಡಲ್ಪಟ್ಟಿದೆ. ಯಾರಿಗಾದರು ಆಕಸ್ಮಿಕವಾಗಿ
ಸತ್ಯಯುಗದಲ್ಲಿ ಬರುವ ಅವಕಾಶವು ಸಿಕ್ಕಿಬಿಟ್ಟಿತೆಂದಲ್ಲ. ಇದು ಅನಾದಿ ಆಟವು ಮಾಡಲ್ಪಟ್ಟಿದೆ.
ಸತ್ಯಯುಗದಲ್ಲಿ ಒಂದೇ ಆದಿಸನಾತನ ಪ್ರಾಚೀನ ದೇವಿ-ದೇವತಾಧರ್ಮವಿತ್ತು, ಈಗ ನೀವು ಮಕ್ಕಳ
ಬುದ್ಧಿಯಲ್ಲಿದೆ - ನಾವು ಸ್ವರ್ಗದಲ್ಲಿ ಹೋಗುತ್ತಿದ್ದೇವೆ. ನಾವು ತಮೋಪ್ರಧಾನರಾಗಿದ್ದೇವೆ ಅಂದಮೇಲೆ
ಮನೆಗೆ ಹೇಗೆ ಹೋಗುತ್ತೇವೆ, ಸ್ವರ್ಗಕ್ಕೆ ಹೇಗೆ ಹೋಗುತ್ತೇವೆಂದು ಆತ್ಮವು ಕೇಳುತ್ತದೆ ಅದಕ್ಕಾಗಿ
ತಂದೆಯು ಸತೋಪ್ರಧಾನರಾಗುವ ಯುಕ್ತಿಯನ್ನು ತಿಳಿಸಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನನ್ನೇ
ಪತಿತ-ಪಾವನನೆಂದು ಹೇಳುತ್ತಾರೆ. ಈಗ ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ.
ಭಗವಾನುವಾಚವು ಬರೆಯಲ್ಪಟ್ಟಿದೆ. ಕ್ರಿಸ್ತನಿಗೆ 3000 ವರ್ಷಗಳ ಹಿಂದೆ ಭಾರತವು ಸ್ವರ್ಗವಾಗಿತ್ತು
ಎಂಬುದನ್ನು ಎಲ್ಲರೂ ಹೇಳುತ್ತಿರುತ್ತಾರೆ ಆದರೆ ಹೇಗಾಯಿತು ಮತ್ತು ಎಲ್ಲಿ ಹೋಯಿತು ಎಂಬುದನ್ನು ಯಾರೂ
ತಿಳಿದುಕೊಂಡಿಲ್ಲ. ನೀವಂತೂ ಬಹಳ ಚೆನ್ನಾಗಿ ಅರಿತುಕೊಂಡಿದ್ದೀರಿ - ಮೊದಲು ಇವೆಲ್ಲಾ ಮಾತುಗಳು
ತಿಳಿದಿರಲಿಲ್ಲ. ಆತ್ಮವೇ ಒಳ್ಳೆಯದು ಮತ್ತು ಕೆಟ್ಟದ್ದು ಆಗುತ್ತದೆ ಎಂಬುದು ಪ್ರಪಂಚದಲ್ಲಿ ಯಾರಿಗೂ
ತಿಳಿದಿಲ್ಲ. ಎಲ್ಲಾ ಆತ್ಮಗಳು ಮಕ್ಕಳಾಗಿದ್ದಾರೆ, ತಂದೆಯನ್ನು ನೆನಪು ಮಾಡುತ್ತಾರೆ. ತಂದೆಯು
ಎಲ್ಲರ ಪ್ರಿಯತಮನಾಗಿದ್ದಾರೆ. ಎಲ್ಲರೂ ಪ್ರಿಯತಮೆಯರಾಗಿದ್ದಾರೆ. ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಆ ಪ್ರಿಯತಮನು ಬಂದಿದ್ದಾರೆ, ಬಹಳ ಮಧುರ ಪ್ರಿಯತಮನಾಗಿದ್ದಾರೆ. ಇಲ್ಲದೇ
ಹೋದರೆ ಎಲ್ಲರೂ ಅವರನ್ನು ಏಕೆ ನೆನಪು ಮಾಡುತ್ತಾರೆ? ಬಾಯಿಂದ ಪರಮಾತ್ಮನ ಹೆಸರು ಬರದೇ ಇರುವಂತಹ
ಮನುಷ್ಯರು ಯಾರೂ ಇಲ್ಲ. ಕೇವಲ ಅವರನ್ನು ಅರಿತುಕೊಂಡಿಲ್ಲ. ನಿಮಗೆ ತಿಳಿದಿದೆ - ಆತ್ಮವು
ಅಶರೀರಿಯಾಗಿದೆ, ಆತ್ಮಗಳಿಗೂ ಪೂಜೆಯು ನಡೆಯುತ್ತದೆಯಲ್ಲವೆ. ನಾವೇ ಪೂಜ್ಯರಾಗಿದ್ದೆವು ಮತ್ತೆ
ನಮ್ಮದೇ ಆತ್ಮಕ್ಕೆ ಪೂಜಿಸತೊಡಗಿದೆವು. ಭಲೆ ಹಿಂದಿನ ಜನ್ಮದಲ್ಲಿ ಬ್ರಾಹ್ಮಣ ಕುಲದಲ್ಲಿ ಜನ್ಮ
ತೆಗೆದುಕೊಂಡಿರಲೂಬಹುದು. ಶ್ರೀನಾಥನಿಗೆ ನೈವೇದ್ಯವನ್ನಿಡುತ್ತಾರೆ ಆದರೆ ತಿನ್ನುವುದಂತೂ ಪೂಜಾರಿಗಳೆ.
ಇದೆಲ್ಲವೂ ಭಕ್ತಿಮಾರ್ಗವಾಗಿದೆ.
ನೀವು ಮಕ್ಕಳು
ತಿಳಿಸಬೇಕಾಗಿದೆ - ಸ್ವರ್ಗದ ಬಾಗಿಲನ್ನು ತೆರೆಯುವವರು ತಂದೆಯಾಗಿದ್ದಾರೆ ಆದರೆ ಹೇಗೆ
ತೆರೆಯುವುದೆಂಬುದನ್ನು ತಿಳಿಸುವುದು ಹೇಗೆ? ಭಗವಾನುವಾಚ ಇದೆಯೆಂದರೆ ಅವಶ್ಯವಾಗಿ ಭಗವಂತನು ಶರೀರದ
ಮೂಲಕ ಮಾತನಾಡಿರಬೇಕಲ್ಲವೆ. ಆತ್ಮವೇ ಶರೀರದ ಮೂಲಕ ಮಾತನಾಡುತ್ತದೆ, ಕೇಳುತ್ತದೆ. ಬೀಜ ಮತ್ತು
ವೃಕ್ಷವಾಗಿದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇದು ಹೊಸ ವೃಕ್ಷವಾಗಿದೆ, ನಿಧಾನ-ನಿಧಾನವಾಗಿ
ವೃದ್ಧಿಹೊಂದುತ್ತದೆ. ನಿಮ್ಮ ಈ ಹೊಸವೃಕ್ಷಕ್ಕೆ ಬಹಳ ಕೀಟಗಳು ಬೀಳುತ್ತದೆ ಏಕೆಂದರೆ ಈ ಹೊಸ ವೃಕ್ಷವು
ಬಹಳ ಮಧುರವಾಗಿದೆ. ಮಧುರ ವೃಕ್ಷಕ್ಕೇ ಕೀಟಗಳು ಅಥವಾ ಏನಾದರೊಂದು ತಗಲುತ್ತವೆ ಮತ್ತೆ ಅದಕ್ಕೆ
ಕೀಟನಾಶಕವನ್ನು ಸಿಂಪಡಿಸುತ್ತಾರೆ. ತಂದೆಯು ಸಹ ಮನ್ಮನಾಭವದ ಒಳ್ಳೆಯ ಕೀಟನಾಶಕವನ್ನು ಕೊಟ್ಟಿದ್ದಾರೆ.
ಮನ್ಮನಾಭವ ಆಗದೇ ಇರುವುದರಿಂದ ಕೀಟಗಳು ತಿಂದುಬಿಡುತ್ತದೆ. ಕೀಟಗಳು ಹಿಡಿದಿರುವ ವಸ್ತುವು ಯಾವ
ಕೆಲಸಕ್ಕೆ ಬರುತ್ತದೆ! ಅದನ್ನು ಎಸೆಯುತ್ತಾರೆ. ಶ್ರೇಷ್ಠಪದವಿಯಲ್ಲಿ, ಕನಿಷ್ಟಪದವಿಯಲ್ಲಿ?
ವ್ಯತ್ಯಾಸವಿದೆಯಲ್ಲವೆ. ಮಧುರಮಕ್ಕಳಿಗೆ ತಿಳಿಸುತ್ತಿರುತ್ತಾರೆ - ಮಕ್ಕಳೇ, ಬಹಳ ಮಧುರಾತಿ
ಮಧುರರಾಗಿ. ಯಾರೊಂದಿಗೂ ಉಪ್ಪುನೀರಾಗಬೇಡಿ, ಕ್ಷೀರಖಂಡವಾಗಿರಿ. ಸತ್ಯಯುಗದಲ್ಲಿ ಹುಲಿ-ಮೇಕೆಯೂ ಸಹ
ಕ್ಷೀರಖಂಡವಾಗಿರುತ್ತದೆ. ಅಂದಮೇಲೆ ಮಕ್ಕಳೂ ಸಹ ಕ್ಷೀರಖಂಡವಾಗಬೇಕು ಆದರೆ ಯಾರ ಅದೃಷ್ಟದಲ್ಲಿಲ್ಲವೋ
ಅವರು ಪುರುಷಾರ್ಥವನ್ನೇನು ಮಾಡುತ್ತಾರೆ! ಅನುತ್ತೀರ್ಣರಾಗಿಬಿಡುತ್ತಾರೆ. ಶಿಕ್ಷಕರಂತೂ ಶ್ರೇಷ್ಠ
ಅದೃಷ್ಟವನ್ನು ರೂಪಿಸಲು ಓದಿಸುತ್ತಾರೆ. ಎಲ್ಲರಿಗೂ ಓದಿಸುತ್ತಾರೆ, ಅಂತರವನ್ನು ನೀವು ನೋಡುತ್ತೀರಿ.
ವಿದ್ಯಾರ್ಥಿಗಳು ತರಗತಿಯಲ್ಲಿ ಯಾರು ಯಾವ ಸಬ್ಜೆಕ್ಟ್ನಲ್ಲಿ ಬುದ್ಧಿವಂತರಿದ್ದಾರೆಂದು
ತಿಳಿದುಕೊಳ್ಳಬಹುದು. ಇಲ್ಲಿಯೂ ಹಾಗೆಯೇ ಸ್ಥೂಲಸೇವೆಯ ಸಬ್ಜೆಕ್ಟ್ ಇದೆಯಲ್ಲವೆ. ಹೇಗೆ ಭಂಡಾರಿಯ
ಸೇವೆಯಿಂದ ಅನೇಕರಿಗೆ ಸುಖ ಸಿಗುತ್ತದೆ. ಎಲ್ಲರೂ ಎಷ್ಟೊಂದು ನೆನಪು ಮಾಡುತ್ತಾರೆ. ಇದಂತೂ
ಸರಿಯಾಗಿದೆ. ಈ ಸಬ್ಜೆಕ್ಟ್ ನಿಂದಲೂ ಅಂಕಗಳು ಸಿಗುತ್ತವೆ ಆದರೆ ಪಾಸ್-ವಿತ್-ಆನರ್ ಆಗಲು ಕೇವಲ ಒಂದು
ಸಬ್ಜೆಕ್ಟ್ ನಲ್ಲಿಯೇ ಅಲ್ಲ, ಎಲ್ಲಾ ಸಬ್ಜೆಕ್ಟ್ ನಲ್ಲಿ ಪೂರ್ಣಗಮನ ಕೊಡಬೇಕಾಗಿದೆ. ಜ್ಞಾನವೂ ಬೇಕು,
ನಡವಳಿಕೆಯೂ ಬೇಕು, ದೈವೀ ಗುಣಗಳೂ ಇರಬೇಕು. ಗಮನವಿಡುವುದು ಒಳ್ಳೆಯದಾಗಿದೆ. ಯಾರೇ ಭಂಡಾರಿಯ ಬಳಿ
ಬಂದರೂ ಸಹ ಅವರಿಗೆ ಹೇಳಿ - ಮನ್ಮನಾಭವ. ಶಿವತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು
ವಿನಾಶವಾಗುತ್ತದೆ ಮತ್ತು ನೀವು ಸ್ವರ್ಗದ ಮಾಲೀಕರಾಗಿಬಿಡುತ್ತೀರಿ. ತಂದೆಯನ್ನು ನೆನಪು ಮಾಡುತ್ತಾ
ಅನ್ಯರಿಗೂ ಪರಿಚಯವನ್ನು ಕೊಡುತ್ತಾ ಇರಿ. ಜ್ಞಾನ ಮತ್ತು ಯೋಗವಿರಬೇಕು. ಬಹಳ ಸಹಜವಾಗಿದೆ.
ಮುಖ್ಯವಾದ ಮಾತೇ ಇದಾಗಿದೆ. ಅಂಧರಿಗೆ ಊರುಗೋಲಾಗಬೇಕು. ಪ್ರದರ್ಶನಿಯಲ್ಲಿಯೂ ಯಾರನ್ನಾದರೂ
ಕರೆದುಕೊಂಡು ಹೋಗಿ, ನಾವು ತಮಗೆ ಸ್ವರ್ಗದ ದ್ವಾರವನ್ನು ತೋರಿಸುತ್ತೇವೆಂದು ಹೇಳಿ. ಇದು ನರಕವಾಗಿದೆ,
ಇದು ಸ್ವರ್ಗವಾಗಿದೆ, ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ. ಪವಿತ್ರರಾಗಿ ಆಗ ನೀವು
ಪವಿತ್ರ ಪ್ರಪಂಚದ ಮಾಲೀಕರಾಗಿಬಿಡುತ್ತೀರಿ. ಮನ್ಮನಾಭವ. ಚಾಚೂತಪ್ಪದೆ ನಿಮಗೆ ಗೀತೆಯನ್ನು
ತಿಳಿಸುತ್ತೇವೆ ಆದ್ದರಿಂದ ತಂದೆಯು ಚಿತ್ರವನ್ನು ಮಾಡಿಸಿದ್ದಾರೆ - ಗೀತೆಯ ಭಗವಂತ ಯಾರು? ಸ್ವರ್ಗದ
ಬಾಗಿಲನ್ನು ಯಾರು ತೆರೆಯುತ್ತಾರೆ? ಶಿವತಂದೆಯು ತೆರೆಯುತ್ತಾರೆ. ಕೃಷ್ಣನೂ ಸಹ ಆ ದ್ವಾರದಲ್ಲಿ
ನಡೆಯುತ್ತಾನೆ. ಆದರೆ ಅವರು ಕೃಷ್ಣನ ಹೆಸರನ್ನಿಟ್ಟುಬಿಟ್ಟಿದ್ದಾರೆ. ಮುಖ್ಯವಾದವು ಇವೆರಡು
ಚಿತ್ರಗಳಾಗಿವೆ, ಉಳಿದೆಲ್ಲವೂ ಸಾಮಾನ್ಯ ಚಿತ್ರಗಳಾಗಿವೆ. ಮಕ್ಕಳು ಬಹಳ ಮಧುರರಾಗಬೇಕಾಗಿದೆ.
ಪ್ರೀತಿಯಿಂದ ಮಾತನಾಡಬೇಕಾಗಿದೆ. ಮನಸಾ-ವಾಚಾ-ಕರ್ಮಣಾ ಎಲ್ಲರಿಗೆ ಸುಖ ಕೊಡಬೇಕಾಗಿದೆ. ನೋಡಿ,
ಭಂಡಾರಿಯು (ಭೋಲಿದಾದಿ) ಎಲ್ಲರನ್ನೂ ಖುಷಿಪಡಿಸುತ್ತಾರೆ. ಆದ್ದರಿಂದ ಅವರಿಗಾಗಿ ಎಲ್ಲರೂ
ಉಡುಗೊರೆಯನ್ನು ತೆಗೆದುಕೊಂಡು ಬರುತ್ತಾರೆ. ಇದೂ ಸಹ ಸಬ್ಜೆಕ್ಟ್ ಆಗಿದೆಯಲ್ಲವೆ. ಉಡುಗೊರೆಯನ್ನು
ತೆಗೆದುಕೊಂಡು ಬಂದು ಕೊಡುತ್ತಾರೆ ಇದಕ್ಕೆ ಅವರು ನಾನು ನಿಮ್ಮಿಂದ ಏಕೆ ತೆಗೆದುಕೊಳ್ಳಲಿ ಮತ್ತೆ
ನಿಮ್ಮದೇ ನೆನಪಿರುವುದೆಂದು ಹೇಳುತ್ತಾರೆ. ಶಿವತಂದೆಯ ಭಂಡಾರದಿಂದ ತೆಗೆದುಕೊಂಡರೆ ನಮಗೆ ಶಿವತಂದೆಯ
ನೆನಪೇ ಇರುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ
ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳಲು ಪರಸ್ಪರ ಬಹಳ-ಬಹಳ ಕ್ಷೀರಖಂಡ, ಮಧುರರಾಗಿರಬೇಕಾಗಿದೆ.
ಎಂದೂ ಉಪ್ಪುನೀರಾಗಬಾರದು. ಎಲ್ಲಾ ವಿಷಯಗಳ ಮೇಲೆ ಪೂರ್ಣಗಮನವನ್ನಿಡಬೇಕಾಗಿದೆ.
2. ಸದ್ಗತಿಗಾಗಿ ತಂದೆಯ
ಯಾವ ಶ್ರೇಷ್ಠಮತವು ಸಿಕ್ಕಿದೆಯೋ ಅದರಂತೆ ನಡೆಯಬೇಕು ಮತ್ತು ಎಲ್ಲರಿಗೆ ಶ್ರೇಷ್ಠಮತವನ್ನೇ
ತಿಳಿಸಬೇಕಾಗಿದೆ. ಸ್ವರ್ಗದಲ್ಲಿ ಹೋಗುವ ಮಾರ್ಗವನ್ನು ತೋರಿಸಬೇಕಾಗಿದೆ.
ವರದಾನ:
ಪ್ರತಿ
ಆತ್ಮಗಳಿಗೆ ಸಾಹಸ, ಉಲ್ಲಾಸ ಕೊಡಿಸುವಂತಹ, ದಯಾ ಹೃದಯಿ, ವಿಶ್ವಕಲ್ಯಾಣಕಾರಿ ಭವ
ಎಂದೂ ಸಹ ಬ್ರಾಹ್ಮಣ
ಪರಿವಾರದಲ್ಲಿ ಯಾವುದೇ ಬಲಹೀನ ಆತ್ಮಗಳಿಗೆ, ನೀವು ಬಲಹೀನರಾಗಿರುವಿರಿ - ಎಂದು ಹೇಳಬೇಡಿ. ತಾವು
ದಯಾಹೃದಯಿಗಳು ವಿಶ್ವಕಲ್ಯಾಣಕಾರಿ ಮಕ್ಕಳ ಬಾಯಿಂದ ಸದಾ ಎಲ್ಲಾ ಆತ್ಮಗಳ ಪ್ರತಿ ಶುಭವಾದ ಮಾತುಗಳೇ
ಹೊರಡಬೇಕಾಗಿದೆ, ಭರವಸಾಹೀನರನ್ನಾಗಿ ಮಾಡುವಂತಹವರಲ್ಲ. ಯಾರು ಎಷ್ಟೇ ಬಲಹೀನರಾಗಿರಬಹುದು, ಅವರಿಗೆ
ಸೂಚನೆ ಅಥವಾ ಶಿಕ್ಷಣವನ್ನು ಕೂಡಬೇಕಾದರೆ ಮೊದಲು ಸಮರ್ಥರಾಗಿ ನಂತರ ಶಿಕ್ಷಣ ಕೂಡಿ. ಮೊದಲು ಧರಣಿಯ
ಮೇಲೆ ಸಾಹಸ ಮತ್ತು ಉತ್ಸಾಹದ ನೇಗಿಲನ್ನು ಓಡಿಸಿ ನಂತರ ಬೀಜವನ್ನು ಬಿತ್ತಿ ಆಗ ಸಹಜವಾಗಿ ಎಲ್ಲಾ
ಬೀಜದಿಂದ ಫಲ ಸಿಗುತ್ತದೆ. ಇದರಿಂದ ವಿಶ್ವಕಲ್ಯಾಣದ ಸೇವೆ ತೀವ್ರಗತಿಯಿಂದ ಆಗುತ್ತದೆ.
ಸ್ಲೋಗನ್:
ತಂದೆಯ
ಆರ್ಶೀವಾದ ತೆಗೆದುಕೊಳ್ಳುತ್ತಾ ಸದಾ ತುಂಬಿರುವಂತಹ ಅನುಭವ ಮಾಡಿ.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
ಸದಾ ಪ್ರತಿ ಕರ್ಮ
ಮಾಡುತ್ತಾ ತಮ್ಮನ್ನು ಕರ್ಮಯೋಗಿ ಆತ್ಮನೆಂದು ಅನುಭವ ಮಾಡಿ. ಯಾವುದೇ ಕರ್ಮ ಮಾಡುತ್ತಾ ನೆನಪು
ಮರೆಯಲು ಸಾಧ್ಯವಿಲ್ಲ. ಕರ್ಮ ಮತ್ತು ಯೋಗ – ಎರಡು ಕಂಬೈಂಡ್ ಆಗಿರಲಿ. ಹೇಗೆ ಯಾವುದೇ
ಜೊಡಣೆಯಾಗಿರುವ ವಸ್ತುವನ್ನು ಬೇರ್ಪಡಿಸಲು ಸಾಧ್ಯವಿಲ್ಲ, ಆ ರೀತಿ ಕರ್ಮಯೋಗಿಯಾಗಿರಿ.